ಸ್ವಂತ ಮನೆ ಹೊಂದುವ ಕನಸು ಹೊತ್ತವರಿಗೆ ಇಲ್ಲಿದೆ ಸಿಹಿ ಸುದ್ದಿ

ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ. ಇದೀಗ ರಾಜ್ಯ ಸರ್ಕಾರ ಇದನ್ನು ಸಾಕಾರಗೊಳಿಸಲು ಮುಂದಾಗುವ ಮೂಲಕ ಸಿಹಿ ಸುದ್ದಿ ನೀಡಿದೆ.

ಹೌದು, ಮುಂದಿನ ಎರಡು ವರ್ಷದೊಳಗೆ 10 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ವಸತಿರಹಿತರಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಅಲ್ಲದೆ ಗ್ರಾಮೀಣ ಭಾಗದ ಜನರಿಗಾಗಿ 1.24 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿರುವ ಸಚಿವರು, ಜೊತೆಗೆ ರಾಜ್ಯದ 200 ಕೊಳಗೇರಿಗಳಲ್ಲಿ 70,000 ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

15 ಸಾವಿರ ರೂ. ಪರಿಹಾರ ಪಡೆಯುವ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದರು. ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿದೆ.

ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರಿಗೆ ಗರಿಷ್ಠ 15 ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಇದನ್ನು ಪಡೆಯಲು ರೈತರು ಜೂನ್ 16ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಸ್ವಯಂ ದೃಢೀಕೃತ ಘೋಷಣಾ ಪತ್ರ ಅಗತ್ಯವಾಗಿರುತ್ತದೆ.

ಅನಾನಸ್, ಪಪ್ಪಾಯ, ಅಂಜೂರ, ಕಲ್ಲಂಗಡಿ, ಬಾಳೆ, ಕರಬೂಜ, ಬೂದಗುಂಬಳ, ಎಲೆಕೋಸು, ಹೂಕೋಸು, ಹಸಿರು ಮೆಣಸಿನಕಾಯಿ, ಟೊಮೇಟೊ ಬೆಳೆಗಳಿಗೆ ಈ ಪ್ಯಾಕೇಜು ನೀಡಲಾಗುತ್ತದೆ ಎಂದು ಶಿವಮೊಗ್ಗ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಯೋಗೇಶ್ ತಿಳಿಸಿದ್ದಾರೆ.ರಾಜ್ಯ ಸರ್ಕಾರ ಗರಿಷ್ಠ ಒಂದು ಹೆಕ್ಟೇರ್ ಗೆ ಪರಿಹಾರ ನೀಡುತ್ತಿದ್ದು, ಹೆಚ್ಚಿನ ಮಾಹಿತಿಗೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

04 ಜೂನ್,2020 ಗುರುವಾರ ಇಂದಿನ ರಾಶಿ ಫಲ

ಮೇಷ

ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾದಿತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ.

ವೃಷಭ

ಹೊಸ ಉದ್ಯಮದ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿವೆ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ ಅನುಭವಿಸುವಿರಿ.

ಮಿಥುನ

ತರಕಾರಿ, ಹಣ್ಣುಗಳ ವ್ಯಾಪಾರಿಗಳಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಿಗಳಿಗೆ ಹಿನ್ನೆಡೆ.

ಕಟಕ

ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತಸ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯ ವೃದ್ಧಿಯಾಗಲಿದೆ.

ಸಿಂಹ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರೆ ಹೊಗಬೇಕಾದಿತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ.

ಕನ್ಯಾ

ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.

ತುಲಾ

ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರದ ಪ್ರಯಾಣ ಮಾಡಬೇಕಾದೀತು. ಪತ್ನಿ ವರ್ಗದವರಿಂದ ಸಹಾಯ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆಗಳು ನಿವಾರಣೆಯಾಗಲಿವೆ.

ವೃಶ್ಚಿಕ

ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ. ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದಿತು. ಉತ್ತಮ ಆದಾಯವನ್ನು ಹೊಂದುವಿರಿ. ಪುಸ್ತಕ, ಗ್ರಂಥಗಳ ಖರೀದಿ ವೆಚ್ಚವನ್ನು ಭರಿಸಬೇಕಾದೀತು.

ಧನು

ಸತ್ಪುರುಷರ ಸಂದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಮಕರ

ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ.

ಕುಂಭ

ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾದೀತು. ನೆರೆಯವರೊಂದಿಗೆ ಸ್ನೇಹ–ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಪ್ರಯಾಣದಿಂದಾಗಿ ದೇಹಾಯಾಸ.

ಮೀನ

ಜಮೀನಿನ ಕೆಲಸ–ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ.

ಹಿಂದೂ ಧರ್ಮದಿಂದಲೇ ಸಿಕ್ಕ ಕೊರೋನಾ ಔಷಧ? ಎಂದ ಬ್ರಿಟನ್ ವಿಜ್ಞಾನಿಗಳು

ಭಾರತೀಯ ಸಂಸ್ಕೃತಿಯಲ್ಲಿ ಯಾವುದು ಪ್ರಾಚೀನ ಕಾಲದಿಂದಲೂ ಹೇಳಿದ್ದರೋ ಅದು ಈಗ ಪಾಶ್ಚಾತ್ಯ ವಿಜ್ಞಾನಿಗಳು ಸಂಶೋಧನೆ ಮಾಡಿ ಮಾನ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದ ಅವರು ಎಷ್ಟು ಹಿಂದುಳಿದಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಹೌದು ಪಾಶ್ಚಾತ್ಯರನ್ನು ಅನುಸರಿಸುವ ಭಾರತೀಯರು ತಮ್ಮನ್ನು ಹೇಗೆ ಹಿಂದುಳಿದವರು ಎಂದು ತಿಳಿದಿದ್ದಾರೆ ಎಂಬುದು ಕೂಡ ಈಗ ಗಮನಕ್ಕೆ ಬರುತ್ತದೆ.ಕೊರೋನಾಗೆ ಸಂಬಂಧಿಸಿದಂತೆ ಆಯುಷ್ ಸಚಿವಾಲಯವು ನೀಡಿದ ಹಲವಾರು ಸಲಹೆಗಳಲ್ಲಿ ಬಿಸಿನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಸೇರಿದೆ. ಬಾಯಿ ಮುಕ್ಕಳಿಸುವ ಅಭ್ಯಾಸವು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನದಿಂದಲೂ ಇದೆ. ಈಗ ಬ್ರಿಟನ್‌ನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ‘ಬಿಸಿನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಿದರೆ ಕರೋನಾ ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆಯಾಗುವುದು ಎಂದಿದ್ದಾರೆ.ಇಷ್ಟೇ ಅಲ್ಲದೆ ಹೀಗೆ ಬಿಸಿ ನೀರು ಹಾಗೂ ಉಪ್ಪನ್ನು ಸೇರುಸಿ ಬಾಯಿ ಮುಕ್ಕಳಿಸುವುದರಿಂದ ಕೊರೊನಾ ಸಾಂಕ್ರಾಮಿಕ ರೋಗದ ಕಾಲಾವಧಿಯನ್ನು ಕಡಿಮೆ ಮಾಡುತ್ತದೆ’ ಎಂಬುದು ಗಮನಕ್ಕೆ ಬಂದಿದೆ. ಈ ವಿಜ್ಞಾನಿಗಳು ಕೊರೋನಾ ಪೀಡಿತ 12 ರೋಗಿಗಳ ಮೇಲೆ 12 ದಿನಗಳ ಕಾಲ ಈ ಪ್ರಯೋಗವನ್ನು ಮಾಡಿದ್ದಾರೆ. ಈ ರೋಗಿಗಳಿಗೆ 12 ದಿನಗಳ ಕಾಲ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಲು ಹೇಳಲಾಗಿತ್ತು.

ಸತತ 12 ದಿನಗಳ ನಂತರ ಅವರ ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡಾಗ ಅದರಲ್ಲಿ ಕರೋನಾ ಸೋಂಕಿನ ಲಕ್ಷಣಗಳು ತೀರಾ ಕಡಿಮೆ ಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಸಂಶೋಧನೆಯನ್ನು ‘ಜರ್ನಲ್ ಆಫ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ, ಕೇವಲ ಎರಡೂವರೆ ದಿನಗಳಲ್ಲಿ ಕರೋನಾ ಸೋಂಕಿನ ಪರಿಣಾಮಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.

ಆದ್ದರಿಂದ ಕೊರೋನಾ ಸೋಂಕನ್ನು ಅಲ್ಪಾವಧಿಯಲ್ಲಿಯೇ ಕಡಿಮೆ ಮಾಡಲು ಕೊನೆಗೂ ನಮ್ಮ ಪೂರ್ವಜರು ಹೇಳುತ್ತಿದ್ದ ಅಂಶಗಳೇ ನಿಜವಾಯ್ತು ಎನ್ನಬಹುದು. ಹೌದು ಹಳೆಯ ಕಾಲದ ಅಥವಾ ವಯಸ್ಸಾದ ಅಜ್ಜ ಅಜ್ಜಿಯರು ಬೆಳಿಗ್ಗೆ ಎದ್ದು ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿ ಚಹಾ ಕುಡಿಯುತ್ತಿದ್ದರು ಆದರೆ ಈಗಿನ ಕಾಲದ ಜನ ಮಲಗಿದ ಹಾಸಿಗೆಯಲ್ಲಿಯೇ ಹಲ್ಲುಜ್ಜದೆ ಬೆಡ್ ಕಾಫಿ ಕೇಳುತ್ತಾರೆ.

ಇಷ್ಟೇ ಅಲ್ಲದೇ ನಮ್ಮ ಪೂರ್ವಜರು ಗೋಮಾತೆಯ ಮೂತ್ರವನ್ನು ಸೇವಿಸುತ್ತಿದ್ದರು ಹಾಗೂ ಅದರಿಂದ ಮುಖ ತೊಳಿಯುತ್ತಿದ್ದರು. ಗೋಮುತ್ರ ಕೂಡ ಉಪ್ಪಾಗಿದ್ದು ಮಾನವನ ದೇಹಕ್ಕೆ ಉಪಯುಕ್ತವಾಗಿದ್ದು ಯಾವುದೇ ರೋಗ ಬಾರದಂತೆ ಸಹಾಯ ಮಾಡುತ್ತದೆ ಹೀಗಾಗಿ ಇನ್ನಾದರೂ ನಮ್ಮ ಸನಾತನ ಧರ್ಮ ಅರ್ಥ ಮಾಡಿಕೊಂಡು ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸೋಣ, ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ಬಿಡೋಣ.

ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 3 : ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು , ರಾಜ್ಯದ ಗಡಿಯಲ್ಲಿರುವ ಸ್ವೀಕಾರ (BRC - BORDER RECEIVE CENTER) ಕೇಂದ್ರದಲ್ಲಿ ಸೂಚಿಸುವ , ತಮ್ಮ ಜಿಲ್ಲೆಯಲ್ಲಿನ, ಸ್ವೀಕಾರ ಕೇಂದ್ರ (DRC - DISTRICT RECEIVE CENTER) ಗೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ವಾರಂಟೈನ್ ಗೆ ಒಳಪಡಬೇಕು, ಮಹಾರಾಷ್ಠçದಿಂದ ಆಗಮಿಸುವವರು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು, ಇತರೆ ರಾಜ್ಯದಿಂದ ಆಗಮಿಸುವವರು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು. ರೈಲಿನಲ್ಲಿ ಬರುವವರಿಗೆ ಅವರು ಇಳಿಯುವ ರೈಲ್ವೆ ನಿಲ್ದಾಣದಲ್ಲಿನ, ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೊಂದಾಯಿಸಬೇಕು. ನೊಂದಾಯಿಸಿದ ಸ್ಥಳಕ್ಕೆ ತೆರಳದೇ ಮಾರ್ಗಮಧ್ಯೆ ತಪ್ಪಿಸಿಕೊಂಡಲ್ಲಿ ಅಂತಹವರ ವಿರುದ್ದ ಕೂಡಲೇ ಎಫ್.ಐ.ಆರ್ ದಾಖಲಿಸಿ , ಕ್ರ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸೂಚಿಸಿದ ಜಿಲ್ಲಾಧಿಕಾರಿಗಳು, ಕ್ವಾರಂಟೈನ್ ಕೇಂದ್ರಗಳಿಗೆ ತಮ್ಮದೇ ವೆಚ್ಚದಲ್ಲಿ ತೆರಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ನೊಂದಣಿಯಾದ ಎಲ್ಲರಿಗೂ ಸೀಲ್ ಹಾಕಿ, ಸಂಬoದಪಟ್ಟ ತಾಲೂಕಿನ ಗ್ರಾಮಗಳಿಗೆ ಕಳುಹಿಸಬೇಕು, ಗ್ರಾಮಗಳಿಗೆ ಆಗಮಿಸುವ ಹೊರರಾಜ್ಯದ ಜನತೆಗೆ ಗ್ರಾಮದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು , ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ತೆರಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತ್ ಗಳಲ್ಲಿನ ಕ್ವಾರಂಟೈನ್ ಕೇಂಧ್ರಗಳಿಗೆ ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೊರರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುವOತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಇನ್ಮುಂದೆ ಕಂಟೇನ್ಮೆಂಟ್ ಜೋನ್ ಇರಲ್ಲ, ಸೋಂಕಿತನ ಮನೆಯೇ ಸೀಲ್ ಡೌನ್

ಮಂಗಳೂರು: ಇನ್ಮುಂದೆ ಕೊರೋನಾ ಸೋಂಕಿತನ ಮನೆಯನ್ನೇ ಸೀಲ್ ಡೌನ್ ಮಾಡಲಾಗುವುದು. ಮನೆಯಲ್ಲಿರುವ ವ್ಯಕ್ತಿಗೆ ಕೊರೋನಾ ಸೋಂಕು ಇದ್ದರೆ ಮನೆ ಸೀಲ್ ಡೌನ್ ಮಾಡಲಾಗುವುದು.

ಇನ್ನು ಮುಂದೆ ಕಂಟೇನ್ಮೆಂಟ್ ಜೋನ್ ಇರುವುದಿಲ್ಲ. ಮನೆಯಲ್ಲಿರುವ ವ್ಯಕ್ತಿಗೆ ಸೋಂಕು ತಗಲಿದರೆ ಮನೆಯನ್ನು ಸೀಲ್ ಡೌನ್ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.ಕೇವಲ ಮನೆಯನ್ನು ಮಾತ್ರ 14 ದಿನ ಸೀಲ್ ಡೌನ್ ಮಾಡಲಾಗುವುದು. ಮಹಾರಾಷ್ಟ್ರದಿಂದ ಬಂದ ಎಲ್ಲರಿಗೂ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಮುಂದೆ ಲಕ್ಷಣ ಇದ್ದವರಿಗೆ ಮಾತ್ರ ಕೊರೋನಾ ಟೆಸ್ಟ್ ಮಾಡಲಾಗುವುದು. ಮಹಾರಾಷ್ಟ್ರ ದಿಂದ ಬಂದವರು ಮನೆಯಲ್ಲಿ ಕ್ವಾರಂಟೈನ್ ಇರಬೇಕು. ಅವರವರ ಮನೆಯಲ್ಲಿ ಕ್ವಾರಂಟೈನ್ ಆಗಬೇಕಿದೆ ಎಂದು ಹೇಳಿದ್ದಾರೆ.

ಹೊರ ದೇಶ, ಹೊರ ರಾಜ್ಯಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಿ ಮನೆ ಸೀಲ್ ಡೌನ್ ಮಾಡಿ : ಶಾಸಕ ಕೆ. ರಘುಪತಿ ಭಟ್ ಸಲಹೆ

ಹೊರ ದೇಶ, ಹೊರ ರಾಜ್ಯಗಳಿಂದ ಬರುವವರು ನಮ್ಮವರು. ಅವರು ಬರಲೇ ಬೇಕು. ಆದರೆ ಜಿಲ್ಲೆಯಲ್ಲಿ ಈಗಿರುವ ಪರಿಸ್ಥಿತಿಗೆ ಇಲ್ಲಿನ ಜನತೆ ಭಯ ಭೀತರಾಗಿದ್ದು, ಅವರ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಬಂದವರು ಅವರ ಮನೆಯಲ್ಲಿ ಇರುವಂತೆ ಸೂಚಿಸಿ ಮನೆಯನ್ನು ಸೀಲ್ ಡೌನ್ ಮಾಡುವುದು ಸೂಕ್ತ ಎಂಬ ಸಲಹೆಯನ್ನು ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವರಾದ ಡಾll ಸುಧಾಕರ್ ರವರು ಇಂದು ದಿ.03-06-2020 ಉಡುಪಿಗೆ ಭೇಟಿ ನೀಡಿ ಕೋವಿಡ್ -19 ಸಂಬಂಧ ಜಿಲ್ಲೆಯ ಜನ ಪ್ರತಿನಿಧಿಗಳು, ಜಿಲ್ಲಾಡಳಿತದ ಜತೆ ಉಡುಪಿ ಜಿಲ್ಲಾ ಪಂಚಾಯತ್ ಡಾll ವಿ.ಎಸ್. ಆಚಾರ್ಯ ಸಭಾ ಭವನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಹೊರ ದೇಶ, ಹೊರ ರಾಜ್ಯಗಳಿಂದ ಇನ್ನೂ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಬರುವವರಿದ್ದು, ಅವರಿಗೆ ಸರ್ಕಾರಿ ಕ್ವಾರಂಟೈನ್ ಮಾಡುವುದು ಕಷ್ಟ ಸಾಧ್ಯ. ಆದ್ದರಿಂದ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡಿ ಕೇವಲ ಅವರ ಮನೆ ಮಾತ್ರ 7 ದಿನ ಸೀಲ್ ಡೌನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಮಾಡಿ. ಇಡಿ ಏರಿಯಾವನ್ನು ಸೀಲ್ ಡೌನ್ ಮಾಡಿದರೆ ಇತರರಿಗೆ ತೊಂದರೆಯಾಗುತ್ತದೆ ಎಂದ ಅವರು ಊರಿನ ರಕ್ಷಣೆಯ ನಿಟ್ಟಿನಲ್ಲಿ ಅವರ ಮನೆಯವರು ಹೊರಬಾರದ ಹಾಗೆ ನೋಡಿಕೊಳ್ಳಬೇಕು. ಮನೆಗೆ ಬೇಕಾದ ದಿನಸಿ ಸಾಮಾನುಗಳನ್ನು ತಂದು ಕೊಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಜಿಲ್ಲೆಯ ಎಲ್ಲಾ ಶಾಸಕರು ಧ್ವನಿಗೂಡಿಸಿದರು. ವೈದ್ಯಕೀಯ ಶಿಕ್ಷಣ ಸಚಿವರಾದ ಡಾll ಸುಧಾಕರ್ ಮಾತನಾಡಿ ಸರ್ಕಾರಿ ಕ್ವಾರಂಟೈನ್ ಮಾಡುವಾಗ ಶೌಚಾಲಯ, ಸ್ನಾನ ಗೃಹದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಸಲಹೆ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್, ಕುಂದಾಪುರ ಶಾಸಕರಾದ ಶ್ರೀನಿವಾಸ್ ಶೆಟ್ಟಿ, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋಟ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಹಾಗೂ ಜಿಲ್ಲಾ ಮಟ್ಟದ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ, ದ.ಕ. ಜಿಲ್ಲೆಯಿಂದ ರಾತ್ರಿ ಬಸ್‌ ಸಂಚಾರ ಆರಂಭ

ಉಡುಪಿ/ಮಂಗಳೂರು: ಉಡುಪಿ, ದ.ಕ. ಜಿಲ್ಲೆಯಿಂದ ದೂರದ ಊರುಗಳಿಗೆ ಸೀಮಿತವಾಗಿ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್‌ಗಳ ರಾತ್ರಿ ಸಂಚಾರ ಆರಂಭವಾಗಿದೆ.

ಕೆಎಸ್ಸಾರ್ಟಿಸಿ ಉಡುಪಿ, ಮಂಗಳೂರು, ಪುತ್ತೂರು ವಿಭಾಗದಿಂದ ರಾತ್ರಿ 9ರ ವರೆಗೆ ಬಸ್‌ ಸಂಚಾರ ನಡೆಸಲಿದೆ. ಸದ್ಯ ಬೆಂಗಳೂರಿಗೆ ಮಾತ್ರ ಕೊನೆಯ ಬಸ್‌ ರಾತ್ರಿ 9ಕ್ಕೆ ಸಂಚರಿಸಲಿದೆ.

ಉಡುಪಿ, ಮಂಗಳೂರು ವಿಭಾಗದಿಂದ ಬಾಗಲಕೋಟೆ, ಹುಬ್ಬಳ್ಳಿ, ಬಳ್ಳಾರಿ, ರಾಯ ಚೂರು, ಬೆಳಗಾವಿ ಸಹಿತ ದೂರದ ಊರಿಗೆ ರಾತ್ರಿ 8ರ ವರೆಗೂ ಬಸ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸಹಿತ ದೂರದ ಊರಿಗೆ ತೆರಳುವ ಖಾಸಗಿ ಬಸ್‌ ಸಂಚಾರವೂ ಆರಂಭಗೊಂಡಿದೆ. ಸ್ಲೀಪರ್‌ ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಭಾರತದಲ್ಲಿ ಕೊರೋನಾದಿಂದಾಗಿ ಶೇಕಡಾ 50 ಕ್ಕಿಂತ ಹೆಚ್ಚು 50 ವರ್ಷದ ಮೇಲ್ಪಟ್ಟವರೇ ಬಲಿ

ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಪ್ರಾಯವಾದವರಿಗೆ ಕೊರೊನಾ ವೈರಸ್ ಬೇಗನೇ ತಗುಲುವ ಸಾಧ್ಯತೆಯಿದ್ದು, ಸಾವು ಸಂಭವಿಸುವ ಅಪಾಯ ಜಾಸ್ತಿಯಾಗಿದೆ. ಇದನ್ನು ಸರಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸಾರುತ್ತಿದೆ
ಭಾರತದ ಜನಸಂಖ್ಯೆಯ ಶೇಕಡಾ 10ರಷ್ಟಿರುವ ವೃದ್ಧರು, ದೇಶದ ಒಟ್ಟು ಕೋವಿಡ್ 19 ಸಾವುಗಳ ಪೈಕಿ ಶೇಕಡಾ 50ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ ಎಂಬ ಮಾಹಿತಿಯನ್ನು ಒದಗಿಸಿದೆ. 
ಇದರ ಜೊತೆಗೆ ಶೇಕಡಾ 73ರಷ್ಟು ಸಾವಿನ ಪ್ರಕರಣಗಳು ಆರೋಗ್ಯ ತೊಂದರೆ ಇರುವವರನ್ನು ಸೇರಿದೆ. ಹಾಗಿದ್ದರೂ ಇತರೆ ದೇಶಗಳಿಗೆ ಹೋಲಿಸಿದಾಗ ಕೋವಿಡ್ ಸಾವಿನ ಸಂಖ್ಯೆ ನಿಯಂತ್ರಿಸಲು ಭಾರತ ಯಶಸ್ವಿಯಾಗಿದೆ ಎಂದು ಸರಕಾರ ಸರಕಾರ ಸಮರ್ಥಿಸಿಕೊಂಡಿದೆ. 

ಭಾರತ ಜನಸಂಖ್ಯೆಯ ಶೇಕಡಾ 8ರಷ್ಟು ಹೊಂದಿರುವ 60ರಿಂದ 74 ವರ್ಷದ ಜನರು, ಕೋವಿಡ್ 19 ಸಾವುಗಳಲ್ಲಿ ಶೇಕಡಾ 38ರಷ್ಟಿದೆ. ಶೇಕಡಾ 2ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ 74 ವರ್ಷಕ್ಕೂ ಮೇಲ್ಪಟ್ಟ ಜನರು, ಕೋವಿಡ್ ಒಟ್ಟು ಸಾವುಗಳಲ್ಲಿ ಶೇಕಡಾ 12ರಷ್ಟಿದ್ದಾರೆ ಎಂದು ಸರಕಾರ ವರದಿಯು ತಿಳಿಸಿದೆ. 

ಜಾಗತಿಕ ಸಾವಿನ ಪ್ರಮಾಣವು ಶೇಕಡಾ 6.13ರಷ್ಟಾಗಿದೆ. ಇನ್ನೊಂದೆಡೆ ಭಾರತದಲ್ಲಿ ಸಾವಿನ ಪ್ರಮಾಣವು ಶೇಕಡಾ 2.82ರಷ್ಟಾಗಿದೆ. ಇದು ಜಾಗತಿಕ ರಾಷ್ಟ್ರಗಳನ್ನು ಹೋಲಿಸಿದರೆ ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದರು. ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ ಶೇಕಡಾ 0.41ರಷ್ಟಾಗಿದ್ದು, ಜಾಗತಿಕವಾಗಿ 4.9ರಷ್ಟಾಗಿದೆ ಎಂಬುದನ್ನು ಲಾವ್ ಅಗರ್ವಾಲ್ ಸೇರಿಸಿದರು. 

ರೈತರು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಜನತೆಗೆ ಭರ್ಜರಿ ‘ಗುಡ್ ನ್ಯೂಸ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಬಡತನ ರೇಖೇಗಿಂತ ಕೆಳಗೆ ಇರುವ ರೈತರು, ಜಮೀನು, ಜಾಬ್‍ಕಾರ್ಡ ಹಾಗೂ ಬ್ಯಾಂಕ್ ಖಾತೆ ಹೊಂದಿರುವ ರೈತರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ.ದಿನಕ್ಕೆ 275 ರೂ. ರಂತೆ ಗಂಡು ಮತ್ತು ಹೆಣ್ಣು ಕೂಲಿಕಾರ್ಮಿಕರಿಗೆ ಸಮಾನ ವೇತನ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಗರಿಷ್ಠ 100 ದಿನಗಳವರೆಗೆ ಉದ್ಯೋಗ ಒದಗಿಸಬಹುದಾಗಿರುತ್ತದೆ. ಬರಪೀಡಿತ ತಾಲ್ಲೂಕುಗಳಲ್ಲಿ ಗರಿಷ್ಠ 150 ದಿನಗಳವರೆಗೆ ಉದ್ಯೋಗ ಒದಗಿಸಬಹುದಾಗಿರುತ್ತದೆ. ರೈತರು ತಮ್ಮ ಸ್ವಂತ ಜಮೀನಿನಲ್ಲಿ ದುಡಿಮೆ ಮಾಡಿ ಹೊಸ ತೋಟ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ ಸರ್ಕಾರದಿಂದ ಕೂಲಿ ವೇತನ ಪಡೆಯಲು ಉತ್ತಮ ಅವಕಾಶವಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಟ ಅಭಿವೃದ್ಧಿ ಪಡಿಸಿದ ಫಲಾನುಭವಿಗಳಿಗೆ (ಫಲಾನುಭವಿ ಇಚ್ಚಿಸಿದ್ದಲ್ಲಿ) ಹನಿ ನೀರಾವರಿ ಸೌಲಭ್ಯವನ್ನು ಒದಗಿಸಲು ಪ್ರಥಮ ಆದ್ಯತೆ ನೀಡಲಾಗುವುದು.

ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ: ಮಾವು, ಸಪೋಟ, ದಾಳಿಂಬೆ, ಸೀಬೆ, ಸಿಟ್ರಸ್ (ನಿಂಬೆ), ಹುಣಸೆ, ನೇರಳೆ, ಸೀತಾಫಲ, ಬಾರೆ, ನಲ್ಲಿ, ನುಗ್ಗೆ, ಹಲಸು, ಗುಲಾಬಿ, ಮಲ್ಲಿಗೆ, ಗೋಡಂಬಿ, ಕರೆಬೇವು, ತೆಂಗು ಮತ್ತು ವೀಳ್ಯದೆಲೆ ಪ್ರದೇಶ ವಿಸ್ತರಣೆ ಕಾಮಗಾರಿಗಳ ಅಭಿವೃದ್ಧಿಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ.

ತೋಟಗಾರಿಕೆ ಬೆಳೆಗಳ ಪುನಃಶ್ಚೇತನ ಕಾರ್ಯಕ್ರಮ:ಮಾವು, ಸಪೋಟ, ತೆಂಗು ಮತ್ತು ಗೋಡಂಬಿ ಪುನಃಶ್ಚೇತನ ಕಾಮಗಾರಿಗಳ ಅಭಿವೃದ್ಧಿಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೌಷ್ಠಿಕ ತೋಟಗಳ ನಿರ್ಮಾಣ:ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆ/ವಸತಿ ಶಾಲೆ/ವಸತಿ ನಿಲಯ/ಅನುದಾನಿತ ವಸತಿ ನಿಲಯಗಳ ಆವರಣದಲ್ಲಿ ಪೋಷಕಾಂಶ ತೋಟ ಅಭಿವೃದ್ಧಿಪಡಿಸಿ ಶಾಲೆಗಳ ಮಧ್ಯಾಹ್ನದ ಬಿಸಿ ಊಟ ಅಥವಾ ವಸತಿ ನಿಲಯಗಳ ಅವಶ್ಯಕತೆ ಸ್ವಲ್ಪ ಮಟ್ಟಿಗೆ ನೀಗಿಸಲು ಸಹಾಯವಾಗುತ್ತದೆ.

ಈರುಳ್ಳಿ ಶೇಖರಣಾ ಘಟಕಗಳ ಅಭಿವೃದ್ಧಿ: ಈ ಯೋಜನೆಯಡಿ 10 ಟನ್ ಸಾಮಥ್ರ್ಯದ ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣಕ್ಕಾಗಿ ಯೋಜನೆಯಿಂದ 35,000 ರೂ. ಹಾಗೂ 23,606 ರೂ. ಸಹಾಯಧನದೊಂದಿಗೆ ಅನುಷ್ಠಾನಿಸಲು ಅವಕಾಶ ನೀಡಲಾಗಿದೆ.

ಮಣ್ಣು, ನೀರು ಸಂರಕ್ಷಣಾ / ಕೊಳವೆ ಬಾವಿ ಮರುಪೂರಣ ಘಟಕ: ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಳವೆ ಬಾವಿ ಮರುಪೂರಣ ಘಟಕ ಸ್ಥಾಪನೆಗೆ 19,000 ರೂ. ಸಹಾಯಧನ ನೀಡಲಾಗುತ್ತದೆ.

Design a site like this with WordPress.com
Get started