ಇಂದಿನ ಮರದ ಪರಿಚಯ : ಸ್ವರ್ಣವರ್ಷಣಿ


ಸುವರ್ಣಿಕಾ ಸುವರ್ಣಭೂಷಣಿ ಸ್ವರ್ಣಮಂಜರಿ ರಾಜವೃಕ್ಷ ಅರ್ಗವಧ ರೇಲ ಚೆಟ್ಟು ಹೇಮಪುಷ್ಪ ಸರಕೊಂಡ್ರೆ ಪೆರಿಕೊಂಡ್ರೆ ಸುವರ್ಣಕಂ ಕೊಡೈಮುಡಿ ಸರವಳಿಗೈ ಸರಕೋನೈ ಅಮಲ್ತಾಸ್ ಬ್ಯಾಟೆಮರ ಕೊಂಡೆಮರ ಕಾಡು ಕೊಂಡೆಮರ ಕಕ್ಕೆಮರ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ಹೊಲಗಳ ಬದಿಗಳ ಮೇಲೆ, ರಸ್ತೆಗಳ ಪಕ್ಜದಲ್ಲಿ ನೈಸರ್ಗಿಕವಾಗಿ, 20 ರಿಂದ 30 ಅಡಿ ಬೆಳೆದರೆ, ಫಲವತ್ತಾದ ಭೂಮಿಯಲ್ಲಿ 50 ಅಡಿವರೆಗೂ ಬೆಳೆಯುತ್ತೆ. ಇದರ ಪುಷ್ಫಮಂಜರಿ ನೋಡಲು ಕಣ್ಣಿಗೆ ತುಂಬಾ ಮುದ ನೀಡುತ್ತೆ.
ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಫವು ಅಲ್ಲದೇ ನಮ್ಮ ದೇಶದಲ್ಲಿನ ಕೇರಳ ರಾಜ್ಯವು ರಾಜ್ಯ ಪುಷ್ಫವೆಂದು ಘೋಷಣೆ ಮಾಡಿದೆ.
ಇದರ ಎಲೆ ಹೂ ಹಣ್ಣು ತೊಗಟೆ ಬೇರು ಸಹಿತ, ಎಲ್ಲವನ್ನು ಆಯುರ್ವೇದ,ಯುನಾನಿ,ಸಿದ್ಧ ಔಷಧಿ ಪದ್ಧತಿಯಲ್ಲಿ ಔಷಧಿಯಾಗಿ ಬಳಸುತ್ತಾರೆ.
ಹಿಂದೂ ಸಂಪ್ರದಾಯದಲ್ಲಿ ಕಕ್ಕೆ ಮರದ ಪುಷ್ಫಗಳು, ಮಹಾ ಶಿವನಿಗೆ ಅತ್ಯಂತ ಪ್ರಿಯವಾದ ಪುಷ್ಫಾಗಳಲ್ಲೊಂದು ಎಂದು ಪರಿಗಣಿಸಲಾಗಿದ್ದು, ವಿಶೇಷ ಪೂಜಾ ಸಮಯದಲ್ಲಿ, ಕಕ್ಕೆ ಮರದ ಪುಷ್ಫಗಳಿಂದ ಶಿವನನ್ನು ಅಲಂಕರಿಸುತ್ತಾರೆ.
ಕಕ್ಕೆ ಮರದ ಕಾಯಿಯ ಅಂಟನ್ನು ತೆಗೆದು, ಒಂದು ಲೋಟ ನೀರಿನಲ್ಲಿ, ರಾತ್ರಿ ನೆನಸಿಟ್ಟು, ಬೆಳಿಗ್ಗೆ ಎದ್ದು ಸೋಸಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದರೆ “ಮಲಬದ್ಧತೆಗೆ” ರಾಮಬಾಣದಂತೆ ಕೆಲಸ ಮಾಡುತ್ತೆ.
ಕಕ್ಕೆಬೇರಿನ ತೊಗಟೆ50ಗ್ರಾಂ,ಒಂದು ತುಂಡು ಹಸಿ ಶುಂಠಿ ಒಂದು ಮಡಿಕೆಯಲ್ಲಿ ಹಾಕಿ, ಅದಕ್ಕೆ ನೀರನ್ನು ಹಾಕಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಕೆಳಗಿಳಿಸಿ.
ಉಗರು ಬೆಚ್ಚಗಾದಾಗ ಸೋಸಿ, ಅದಕ್ಕೆ ಜೇನುತುಪ್ಪ
ಸೇರಿಸಿ, ಸೇವಿಸುತ್ತಾ ಬಂದರೆ ಎಂತಹ ಚರ್ಮವ್ಯಾಧಿ
ಇದ್ದರು ಗುಣವಾಗುತ್ತೆ.
ಕಿವಿ ಹುಣ್ಣಿಗೆ, ಕಕ್ಕೆ ಮರದ ತೊಗಟೆ ತಂದು, ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ಕಿವಿಗೆ ಮೂರ್ನಾಲ್ಕು ತೊಟ್ಟು ಹಾಕುತ್ತಾ ಬಂದರೆ, ಕಿವಿ ಹುಣ್ಣು ವಾಸಿಯಾಗುತ್ತೆ.
ಕಕ್ಕೆ ಮರದ ಚಿಗರು ಎಲೆಗಳ ಪಲ್ಯ, ಹೂವುಗಳಿಂದ ಚಟ್ನಿ ಮಾಡಿ ಸೇವಿಸಿದರೆ ತುಂಬಾ ರುಚಿಕರವಾಗಿರುವುದಲ್ಲದೆ,ಇದು ಜಠರ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತೆ.
ಕಕ್ಕೆ ಮರದ ಹೂವುಗಳಿಂದ ಗುಲ್ಕನ್ ತಯಾರಿಸಿ ಸೇವಿಸುತ್ತಿದ್ದರೆ, ಜಠರ ಸಮಸ್ಯೆಗಳು ದೂರವಾಗುತ್ತೆ.
ಕಫ, ವಾತ, ಪಿತ್ತ ರೋಗಗಳು ಶಮನವಾಗುತ್ತೆ, ಹಾಗೂ ಇದು ಶ್ವಾಸಕೋಶ ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತೆ.
ಕಕ್ಕೆ ಮರದ ಹೂವುಗಳನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ
1ಚಮಚ ಚೂರ್ಣವನ್ನು, ಬಿಸಿ ನೀರು ಅಥವಾ ಜೇನುತುಪ್ಪದಲ್ಲಿ ತೆಗೆದುಕೊಂಡರೆ, ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜೊತೆಗೆ ಜಠರದ ಕಾರ್ಯಕ್ಷಮತೆ ಹೆಚ್ಚುತ್ತೆ.
ಕಕ್ಕೆ ಮರದ ತೊಗಟೆಯಲ್ಲಿ ಗಂಧ ತೇಯ್ದು, ಮುಖದ ಮೇಲಿನ ಕಪ್ಪು ಮಚ್ಚೆಗಳು ಹಾಗೂ ಮೊಡವೆಗಳಿಗೆ ಲೇಪಿಸುತ್ತಾ ಬಂದಲ್ಲಿ, ಮೊಡವೆ ಮಚ್ಚೆಗಳಿಂದ ಮುಕ್ತಿ ಪಡೆಯುವದರ ಜೊತೆಗೆ ಮುಖದ ಸೌಂದರ್ಯ ಹೆಚ್ಚುತ್ತೆ….!
ಕಕ್ಕೇಕಾಯಿ ಬೀಜದ ಚೂರ್ಣವನ್ನು ಬೆಳಿಗ್ಗೆ ಸಂಜೆ 10 ಗ್ರಾಂ ನಂತೆ 1 ಚಮಚ ಕಲ್ಲು ಸಕ್ಕರೆ ಜೊತೆಗೆ ಸೇವಿಸುವುದರಿಂದ, ಲೈಂಗಿಕ ಸಮಸ್ಯೆಗಳು,ಧಾತು
ಸಮಸ್ಯೆಗಳು ದೂರವಾಗಿ, ದೇಹಕ್ಕೆ ಪುಷ್ಠಿಯನ್ನು ಒದಗಿಸುತ್ತೆ.
ಬಾವು ವ್ರಣ ಇರುವ ಕಡೆ ಇದರ ಎಲೆಗಳನ್ನು ಅರೆದು ಲೇಪಿಸಿದರೆ ಶೀಘ್ರ ಗುಣವಾಗುತ್ತೆ. ಸೂಚನೆ:- ಕಕ್ಕೆ ಮರದ ಎಲೆ ಹೂ ಕಾಯಿ ತೊಗಟೆ ಬೇರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಭೇದಿಯಾಗುವ ಸಾಧ್ಯತೆ ಇದ್ದು, ಆಯುರ್ವೇದ ವೈದ್ಯರ ಸಲಹೆ ಪಡೆದು ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷ ಪರಿಚಯ ಮಾಡಿಕೊಳ್ಳೋಣ. ವಂದನೆಗಳು

ಜೂನ್22, 2020; ಸೋಮವಾರ ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಸೋಮವಾರ, ಆರಿದ್ರಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:37 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 2:01 ರಿಂದ 12:25
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:49

ಮೇಷ: ಸ್ನೇಹಿತರಿಂದ ಸಹಾಯ, ಹಣಕಾಸು ವಿಚಾರದಲ್ಲಿ ಎಚ್ಚರ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿ ಖರೀದಿ ಯೋಗ.

ವೃಷಭ: ಮಹಿಳೆಯರಿಗೆ ಶುಭ ದಿನ, ಸಾಲಗಳಿಂದ ದೂರು ಉಳಿಯುವುದು ಉತ್ತಮ, ಕೆಲಸದಲ್ಲಿ ಅಧಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ.

ಮಿಥುನ: ಶ್ರಮಕ್ಕೆ ತಕ್ಕ ಫಲ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ಹಿತ ಶತ್ರುಗಳಲ್ಲಿ ತೊಂದರೆ.

ಕಟಕ: ಗುರು ಹಿರಿಯರ ಭೇಟಿ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ಭವಿಷ್ಯದ ಆಲೋಚನೆ, ಆದಾಯ ಕಡಿಮೆ, ಅಧಿಕವಾದ ಖರ್ಚು.

ಸಿಂಹ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ಹಣಕಾಸು ನಷ್ಟ, ನಂಬಿಕಸ್ಥರಿಂದ ಮೋಸ, ಮಕ್ಕಳಿಂದ ನೆಮ್ಮದಿ ಲಭಿಸುವುದು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಪರರಿಂದ ಸಹಾಯ, ಮನಸ್ಸಿನಲ್ಲಿ ಗೊಂದಲ, ವಿದೇಶ ಪ್ರಯಾಣ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ.

ತುಲಾ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಅಲ್ಪ ಕಾರ್ಯ ಸಿದ್ಧಿ, ನೀವಾಡುವ ಮಾತಿನಿಂದ ಅನರ್ಥ, ನಾನಾ ರೀತಿಯ ತೊಂದರೆ, ವೃಥಾ ತಿರುಗಾಟ.

ವೃಶ್ಚಿಕ: ಸ್ತ್ರೀಯರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ, ಕೃಷಿಕರಿಗೆ ಲಾಭ, ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ.

ಧನಸ್ಸು: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ವಿವಾಹ ಯೋಗ, ಸ್ವಗೃಹ ವಾಸ.

ಮಕರ: ನೀಚ ಜನರಿಂದ ದೂರವಿರಿ, ದ್ರವ್ಯ ಲಾಭ, ಬಂಧುಗಳಲ್ಲಿ ಮನಃಸ್ತಾಪ, ಆರೋಗ್ಯ ವೃದ್ಧಿ, ಹಿರಿಯರಿಂದ ಹಿತವಚನ.

ಕುಂಭ: ಪ್ರಿಯ ಜನರ ಭೇಟಿ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆಯಿಂದ ಮುಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ.

ಮೀನ: ಇಷ್ಟಾರ್ಥ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಅಧಿಕವಾದ ಕೋಪ, ಮಕ್ಕಳಿಂದ ಸಹಾಯ, ಮಾತಿನಲ್ಲಿ ಹಿಡಿತವಿರಲಿ.

ಚೀನೀ ವೈರಸ್ ಗೆ ಭಾರತದಲ್ಲಿ ತಯಾರಾಯಿತು ಔಷಧ

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದ ನಂತರ, ಔಷಧ ಸಂಸ್ಥೆ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಸೌಮ್ಯ ಮತ್ತು ಮಧ್ಯಮ COVID-19 ರೋಗಿಗಳ ಚಿಕಿತ್ಸೆಗಾಗಿ ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔ ಷಧಿ ಫವಿಪಿರಾವೀರ್ ಅನ್ನು ಬಿಡುಗಡೆ ಮಾಡಿದೆ. . ಪ್ರತಿ ಟ್ಯಾಬ್ಲೆಟ್‌ಗೆ ₹ 103 ದರ, ಪ್ರಿಸ್ಕ್ರಿಪ್ಷನ್ ಆಧಾರಿತ  ಷಧವು 200 ಮಿಗ್ರಾಂ ಟ್ಯಾಬ್ಲೆಟ್‌ನಂತೆ 34 ಟ್ಯಾಬ್ಲೆಟ್‌ಗಳ ಸ್ಟ್ರಿಪ್‌ಗೆ ₹ 3,500 ಎಂಆರ್‌ಪಿ ಯಲ್ಲಿ ಲಭ್ಯವಿರುತ್ತದೆ ಅಂತ ಕಂಪನಿ ತಿಳಿಸಿದೆ. ಫಾವಿಪಿರವಿರ್ ಶಿಫಾರಸು ಮಾಡಿದ ಡೋಸ್ ದಿನಕ್ಕೆ ಎರಡು ಬಾರಿ 1,800 ಮಿಗ್ರಾಂ, ನಂತರ ದಿನಕ್ಕೆ 800 ಮಿಗ್ರಾಂ ಎರಡು ಬಾರಿ 14 ನೇ ದಿನ. 14 ಇದು ಪ್ರಿಸ್ಕ್ರಿಪ್ಷನ್ ಆಧಾರಿತವಾಗಿ ನೀಡಬಹುದಾಗಿದೆ.  ಆಸ್ಪತ್ರೆಗಳು ಮತ್ತು ಚಿಲ್ಲರೆ ಚಾನೆಲ್ ಮೂಲಕ ಔ ಷಧಿ ಲಭ್ಯವಿರುತ್ತದೆ ಎಂದು ಗ್ಲೆನ್ಮಾರ್ಕ್ ಹೇಳಿದರು.ಮ್ಯಾಕ್ಸ್ ಹೆಲ್ತ್‌ಕೇರ್‌ನ ಆಂತರಿಕ ಔಷಧ ವಿಭಾಗದ ಸಹಾಯಕ ನಿರ್ದೇಶಕ ಡಾ. ರೊಮೆಲ್ ಟಿಕೂ ಅವರು ಹೇಳುವ ಪ್ರಕಾರಮುಂದಿನ ಎರಡು ತಿಂಗಳಲ್ಲಿ ಔ ಷಧದ ಪರಿಣಾಮಕಾರಿತ್ವದ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ ಇರುತ್ತದೆ.  ಇದನ್ನು ಆರಂಭಿಕ ಹಂತದಲ್ಲಿ ನೀಡಬೇಕಾಗಿದೆ ಮತ್ತು ಇದು ಟ್ಯಾಬ್ಲೆಟ್ ರೂಪದಲ್ಲಿ ನೀಡಬಹುದಾದ ಸಂಭಾವ್ಯ ಗೇಮ್ ಚೇಂಜರ್ ಆಗಿದ್ದು ಅದನ್ನು ನಿರ್ವಹಿಸಲು ಸುಲಭವಾಗಿದೆ ಮತ್ತು ತುಲನಾತ್ಮಕವಾಗಿ ಅಗ್ಗವಾಗಿದೆ ಅಂತ ಅವರು ಹೇಳಿದ್ದಾರೆ. ಕೋವಿವೈರಸ್ ರೋಗಿಗಳಿಗೆ ಮಧುಮೇಹ ಮತ್ತು ಹೃದಯ ಕಾಯಿಲೆಯಂತಹ ಸೌಮ್ಯದಿಂದ ಮಧ್ಯಮ COVID-19 ರೋಗಲಕ್ಷಣಗಳನ್ನು ಹೊಂದಿರುವ ಫರೋವಿವೈರರ್ ರೋಗಿಗಳಿಗೆ ಬಳಸಬಹುದು ಎಂದು ಗ್ಲೆನ್ಮಾರ್ಕ್ ಹೇಳಿದ್ದಾರೆ. ಇದು ನಾಲ್ಕು ದಿನಗಳಲ್ಲಿ ವೈರಲ್ ಲೋಡ್ ಅನ್ನು ಶೀಘ್ರವಾಗಿ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ರೋಗಲಕ್ಷಣ ಮತ್ತು  ಸುಧಾರಣೆಯನ್ನು ನೀಡುತ್ತದೆ. ಫಾವಿಪಿರವಿರ್ ಸೌಮ್ಯದಿಂದ ಮಧ್ಯಮ COVID-19 ಪ್ರಕರಣಗಳಲ್ಲಿ ಶೇಕಡಾ 88 ರಷ್ಟು ವೈದ್ಯಕೀಯ ಸುಧಾರಣೆಯನ್ನು ತೋರಿಸಿದೆ ಎಂದು ಔಷಧ ತಯಾರಕರು ತಿಳಿಸಿದ್ದಾರೆ.ಫಾವಿಪಿರವಿರ್ ಬಲವಾದ ಕ್ಲಿನಿಕಲ್ ಸಾಕ್ಷ್ಯಗಳಿಂದ ಬೆಂಬಲಿತವಾಗಿದೆ, ಇದು ಸೌಮ್ಯ ಮತ್ತು ಮಧ್ಯಮ ಕೋವಿಡ್ -19 ರೋಗಿಗಳಲ್ಲಿ ಉತ್ತೇಜಕ ಫಲಿತಾಂಶಗಳನ್ನು ತೋರಿಸುತ್ತದೆ. ಇದು 20-90 ಮತ್ತು ವಯೋಮಾನದವರಲ್ಲಿ ಕ್ಲಿನಿಕಲ್ ಸುಧಾರಣೆಯೊಂದಿಗೆ ವಿಶಾಲ ಸ್ಪೆಕ್ಟ್ರಮ್ ಆರ್ಎನ್ಎ ವೈರಸ್ ವ್ಯಾಪ್ತಿಯನ್ನು ನೀಡುತ್ತದೆ\ಕೋವಿಡ್ -19 ರೋಗಿಗಳಿಗೆ ಫಾವಿಪಿರಾವಿರ್ ಆಂಟಿವೈರಲ್ ಮಾತ್ರೆಗಳ ಹಂತ -3 ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಔಷಧ ನಿಯಂತ್ರಕದ ಅನುಮೋದನೆ ಪಡೆದ ಭಾರತದ ಮೊದಲ ಕಂಪನಿ ಗ್ಲೆನ್ಮಾರ್ಕ್.ಫಾವಿಪಿರಾವಿರ್ ಎಂಬುದು ಫ್ಯೂಜಿಫಿಲ್ಮ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾದ ಜಪಾನ್‌ನ ಫ್ಯೂಜಿಫಿಲ್ಮ್ ಟೊಯಾಮಾ ಕೆಮಿಕಲ್‌ನ ಅವಿಗನ್‌ನ ಸಾಮಾನ್ಯ ಆವೃತ್ತಿಯಾಗಿದೆ.ಪ್ರತಿ ರೋಗಿಗೆ ಕನಿಷ್ಠ ಎರಡು ಪಟ್ಟಿಗಳನ್ನು ಪರಿಗಣಿಸಿ, ಗ್ಲೆನ್‌ಮಾರ್ಕ್ ಮೊದಲ ತಿಂಗಳಲ್ಲಿ ಸುಮಾರು 82,500 ರೋಗಿಗಳಿಗೆ ಫ್ಯಾಬಿಫ್ಲೂ ಒದಗಿಸಲು ಸಾಧ್ಯವಾಗುತ್ತದೆ.

ರಾಜ್ಯದಲ್ಲಿಂದು ಕೊರೋನಾ ಸೋಂಕಿನ ಮ್ಯಾರಥಾನ್:9000ದ ಗಡಿ ದಾಟಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂದು ಒಂದೇ ದಿನ  ಮತ್ತೆ 453 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ. 

ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರು ಮತ್ತು ಬೀದರ್ ನಲ್ಲಿ ಎರಡು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 137ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.null

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶನಿವಾರ ಸಂಜೆ 5 ಗಂಟೆಯಿಂದ ರವಿವಾರ ಸಂಜೆ 5 ಗಂಟೆವರೆಗೆ ಐದು ಸಾವು, 453 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಇಂದು ಒಂದೇ ದಿನ ಮೂರು ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯ 62 ವರ್ಷದ ಪುರುಷ, 55 ವರ್ಷದ ಪುರುಷ ಮತ್ತು 53 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆಯಲ್ಲಿ 70 ಮತ್ತು 46 ವರ್ಷದ ಪುರುಷರಿಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 196, ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು 18, ಗದಗ 18, ಧಾರವಾಡ 15, ಬಾಗಲಕೋಟೆ 14, ಬೀದರ್ 13, ದಾವಣಗೆರೆ 8, ಉತ್ತರ ಕನ್ನಡ 8, ಕೋಲಾರ 8, ದಕ್ಷಿಣ ಕನ್ನಡ 7, ಮಂಡ್ಯ 5, ಹಾಸನ 5, ತುಮಕೂರು 4, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಹಾವೇರಿಯಲ್ಲಿ ತಲಾ 3, ರಾಮನಗರ, ಶಿವಮೊಗ್ಗ ಮತ್ತು ರಾಮನಗರದಲ್ಲಿ ತಲಾ 2, ಚಿಕ್ಕಮಗಳೂರಿನಲ್ಲಿ 1 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 9,150 ಕೊರೋನ ಸೋಂಕಿತರ ಪೈಕಿ 5,618 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 225 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 137 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,391 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದಿನ ಮರದ ಪರಿಚಯ :ಲಕ್ಕಿಗಿಡ

ನಿರ್ಗುಂಡೀ ಲಕ್ಕಿಗಿಡ ನೆಕ್ಕಲಿ ಬಿಳಿಲಕ್ಕಿ ಕರಿಲಕ್ಕಿ ಕರ್ತರೀ ಲಕ್ಕಿ ಕಾಡುಲಕ್ಕಿ ನೋಚಿ ನಿಸುಂಡ ಚೆಂಡುವರಂ ನೋಸಿ ತೆಲ್ಲ ವಾವಿಲಿ ನಲ್ಲ ವಾವಿಲಿ ಸಿಂಧುವರಮು ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯ ಪ್ರದೇಶದಲ್ಲಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ,ಬೀಳು ಭೂಮಿಯಲ್ಲಿ, ರಸ್ತೆಗಳ ಪಕ್ಕಾ, ಕೆರೆಕಟ್ಟೆಗಳ ಮೇಲೆ ಬೆಳೆಯುತ್ತೆ.ಇದು ಪೊದೆಯಂತೆ ಬೆಳೆಯುವು ದರಿಂದ ಅನೇಕ ಕಡೆ ಬೇಲಿ ಗಿಡವಾಗಿಯೂ ಬೆಳೆಸುತ್ತಾರೆ.ಫಲವತ್ತಾದ ಭೂಮಿಯಲ್ಲಿ 10 ರಿಂದ 15ಅಡಿ ಮರವಾಗಿಯೂ ಬೆಳೆಯುತ್ತದೆ.
ಇವುಗಳ ಪೈಕಿ ಶ್ರೇಷ್ಠವಾದ ಕರಿ ಲಕ್ಕಿಯನ್ನು ಹೋಮ ಯಜ್ಞ ಯಾಗಾದಿಗಳನ್ನು ಮಾಡುವಾಗ
ವಿಶೇಷವಾಗಿ ಬಳಸುತ್ತಾರೆ. ಈ ಗಿಡದ ಎಲ್ಲಾ ಭಾಗಗಳನ್ನೂ ತುಪ್ಪದೊಡನೆ ಹೋಮಾಗ್ನಿಗೆ ಅರ್ಪಿಸಿದಾಗ, ಅದರಲ್ಲಿರುವ ಸಕಲ ವಿಧವಾದ ಔಷಧೀಯ ಗುಣಗಳೂ ಸಮರ್ಪಕವಾಗಿ ಹೊರ ಹೊಮ್ಮುತ್ತವೆ.ಮುಖ್ಯವಾಗಿ ಸುತ್ತಲ ಪರಿಸರದಲ್ಲಿ
ಇರಬಹುದಾದ ವಿಷಕ್ರಿಮಿಗಳನ್ನು ಹಾಗೂ ರೋಗಕಾರಕ ವೈರಸ್ ಗಳನ್ನು ಲಕ್ಕಿಯ ಅಂಶ ಬೆರತ್ತಿರುವ ಹೋಮ ಧೂಮವು ನಾಶಪಡಿಸುತ್ತದೆ.
ಅಷ್ಟೇ ಅಲ್ಲದೆ,ಇಂತಹ ಅಪಾಯಕಾರಿ ಸೂಕ್ಷ್ಮಾಣುಗಳುಉದ್ಭವಿಸದಂತೆ ತಡೆಯುತ್ತದೆ.
ಬಾಣಂತಿಯರ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಸಂರಕ್ಷಣೆಯನ್ನೂ ಈ ಲಕ್ಕಿ ಸೊಪ್ಪು ಮಾಡಬಲ್ಲದು….! ಲಕ್ಕಿ ಸೊಪ್ಪನ್ನು ಬಾಣಂತಿ ಕೋಣೆಯ ಬಾಗಿಲಿನ ಮೇಲ್ಭಾಗದ ಇಕ್ಕೆಲಗಳಲ್ಲಿ ಕುಚ್ಚಿನಂತೆ ಕಟ್ಟುವುದರಿಂದ, ನಂಜು ರೋಗ,ಹೃದಯರೋಗ, ಚರ್ಮ ವ್ಯಾಧಿ,ಕಿವಿ ಪೋಟು,ಕೈಕಾಲು ತಣ್ಣಗಾಗುವಿಕೆ, ಹಾಸಿಗೆಯಲ್ಲಿ ಮಲ ಮೂತ್ರ ವಿಸರ್ಜನೆ ಮುಂತಾದ ತೊಂದರೆಗಳಿಂದ ಬಾಣಂತಿ
ಪಾರಾಗುವಳು.ಹಳ್ಳಿಗಳಲ್ಲಿ ಈಗಲೂ ಬಾಣಂತಿ
ಕೋಣೆಯ ಬಾಗಿಲಿಗೆ ಲಕ್ಕಿ ಸೊಪ್ಪಿನ ಜೊತೆಗೆ ಅಂಕೋಲೆ ಸೊಪ್ಪು ಹಾಗೂ ಬೇವಿನ ಸೊಪ್ಪನ್ನು
ಕಟ್ಟುವರು.ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮನೆ ಮುಂದೆ ಲಕ್ಕಿ ಸೊಪ್ಪಿನ ಗುಡಿಸಲು ನಿರ್ಮಿಸಿ ಒಂದುವಾರ ಅದರಲ್ಲಿ ಮಲಗಿಸಿ
ಕಾವಲು ಕಾಯುತ್ತಾರೆ….! ಭೂತ ಪ್ರೇತಗಳಿಂದ
ತೊಂದರೆ,ಅನಗತ್ಯವಾದ ಭಯ,ದುಸ್ವಪ್ನ,ನಿದ್ರೆಯಲ್ಲಿ ಮಾತಾಡುವುದು ಇತ್ಯಾದಿ ತೊಂದ್ರೆಗಳಿಂದ ರಕ್ಷಿಸಿ
ಕೊಳ್ಳುವ ಉದ್ದೇಶ ಹಾಗೂ ಯಾವುದೇ ರೀತಿಯ
ಇನ್ಫೆಕ್ಷನ್ ಆಗದಂತೆ ತಡೆಯುವುದು….!
ಲಕ್ಕಿ ಗಿಡದ ಬೇರನ್ನು ತಂದು ನೆರಳಲ್ಲಿ ಒಣಗಿಸಿ,
ಬೇರಿನ ತೊಗಟೆಯನ್ನು ತೆಗೆದು ಚೂರ್ಣ ಮಾಡಿಟ್ಟುಕೊಂಡು ದಿನವು 1 ಚಮಚ ಚೂರ್ಣಕ್ಕೆ
ಸ್ವಲ್ಪ ಎಳ್ಳೆಣ್ಣೆ ಸೇರಿಸಿ ಮೂರು ಬಾರಿ ಸೇವಿಸಿದರೆ,
ನಡು ನೋವು,ಕೀಲು ನೋವು,ಕೀಲುವಾತ
ಗುಣವಾಗುತ್ತೆ.
ಒಂದು ಕಪ್ಪು ಲಕ್ಕಿ ಎಲೆಗಳನ್ನು ಕುಟ್ಟಿ ರಸ ತೆಗೆದು
250ml ಎಳ್ಳೆಣ್ಣೆಯಲ್ಲಿ ಹಾಕಿ, ಒಲೆಯ ಮೇಲಿಟ್ಟು
ಮಂದದುರಿಯಲ್ಲಿ ನೀರಿನ ಅಂಶ ಹಿಂಗುವುವರಿಗೂ
ಚೆನ್ನಾಗಿ ಕುದಿಸಿ,ಒಂದು ಬಾಟ್ಲಿಯಲ್ಲಿ ಶೇಖರಿಸಿಟ್ಟು,
ತುರುಕೆ,ದದ್ದು,ತಾಮರ,ಗಜ್ಜಿಗೆ ಲೇಪಿಸಿದರೆ ಶೀಘ್ರ
ಗುಣವಾಗುತ್ತೆ.
ವಾತ ನೋವುಗಳಿಗೆ ಲಕ್ಕಿ ಅದ್ಭುತವಾದ ಔಷಧೀಯ ಸಸ್ಯ.ಇದರ ಕಷಾಯ ಮಾಡಿ ಸೇವಿಸಿದರೆಕಫ,ನೆಗಡಿ,ಕೆಮ್ಮು,ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಧಿಗಳು ವಾಸಿಯಾಗುತ್ತೆ.ತಲೆಕೂದಲಿಗೆ,ಕಣ್ಣಿಗೆ,ಆಮವಾತಕ್ಕೆ,ಕೈಕಾಲು ಊತಾರೋಗಕ್ಕೆ,ಹೊಟ್ಟೆಯಲ್ಲಿನ ಹುಳುಗಳು ಸಾಯಲು,
ಹುಣ್ಣು ವಾಸಿಯಾಗಲು ತುಂಬಾ ಪ್ರಯೋಜನ
ಕಾರಿಯಾಗಿ ಕೆಲಸ ಮಾಡುತ್ತೆ.
ಮೂರ್ಛೆ ರೋಗ ಇರುವುವರಿಗೆ ನಾಲ್ಕೈದು ತೊಟ್ಟು ಲಕ್ಕಿ ಎಲೆಗಳ ರಸವನ್ನು ಮೂಗಿನಲ್ಲಿ
ಹಿಂಡಿದರೆ ಒಳ್ಳೆ ಫಲಿತಾಂಶ ಸಿಗುತ್ತೆ.ಲಕ್ಕಿ ಗಿಡ
ಮನೆಯ ಪಕ್ಕಾ ಇದ್ದರೆ, ಮನೆಯಲ್ಲಿ ಒಬ್ಬ ವೈದ್ಯ
ಇದ್ದಂತೆ.
ಅಜೀರ್ಣ ಸಮಸ್ಯೆ ಇದ್ದಾಗ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಲಕ್ಕಿಗಿಡದ ಎಲೆ, ಎರಡು ಕಾಳುಮೆಣಸು, ಚಿಟಿಕೆ ಜೀರಿಗೆ, ಒಂದು ಕಲ್ಲು ಉಪ್ಪು ಬಾಯಿಗೆ ಹಾಕಿಕೊಂಡು ಜಗಿದು ನುಂಗಿದರೆ ಎಂತಹ ಅಜೀರ್ಣ ಸಮಸ್ಯೆಇದ್ದರೂ ಶೀಘ್ರ ಶಮನವಾಗುತೆ. ಗೆಳೆಯರೆ ನಾಳೆ ಮತ್ತೊಂದು ವೃಕ್ಷ ವನ್ನು ಪರಿಚಯ ಮಾಡಿಕೊಳ್ಳೋಣ.ವಂದನೆಗಳು

ಅರೇಕಾ ಟೀ ಕಂಡುಹಿಡಿದ ಯುವ ಉದ್ಯಮಿ ನಿವೇದನ್ ನೆಂಪೆಯವರಿಂದ ಅರೇಕಾ ಸ್ಯಾನಿಟೈಸರ್ ಸಂಶೋಧನೆ

ಶಿವಮೊಗ್ಗ: ಕೊರೋನಾ ವೈರಸ್ ಪ್ರಪಂಚದಾದ್ಯಂತ ಹರಡಿರುವ ಮಧ್ಯೆ, ಅನೇಕ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸುವ ಮೂಲಕ ಲಕ್ಷಾಂತರ ಸಂಪಾದಿಸುತ್ತಿವೆ, ಆದರೆ ಇದೀಗ ಯುವ ಉದ್ಯಮಿ ನಿವೇದನ್ ನೆಂಪೆಯವರು ನೈಸರ್ಗಿಕವಾಗಿ ಅಡಿಕೆಯಿಂದ ಸ್ಯಾನಿಟೈಜರ್‌ಗಳನ್ನು ತಯಾರಿಸುವ ಹೊಸ ಪ್ರಯತ್ನ ನಡೆಸಿದ್ದಾರೆ.

ಮಾಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ರೈತರು ಅಡಿಕೆ ಬೆಳೆಯುತ್ತಿದ್ದಾರೆ, ಇದನ್ನು ಮುಖ್ಯವಾಗಿ ಗುಟ್ಕಾ ಉತ್ಪಾದಿಸಲು ಬಳಸಲಾಗುತ್ತಿತ್ತು. ನಿವೇದನ್ ನಂಪೆ, ಅರೇಕಾ ಟೀ ಮತ್ತು ಸುಗಂಧ ದ್ರವ್ಯಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದರು. ಈಗ ಅವರು ಅರೇಕಾ ಸ್ಯಾನಿಟೈಜರ್‌ಗಳನ್ನು ತಯಾರಿಸಿದ್ದು ಮಾರುಕಟ್ಟೆಗೆ ಪರಿಚಯಿಸುವ ಯತ್ನದಲ್ಲಿದ್ದಾರೆ.

ಯೋಗ ಬೇರೆ ಯಾವುದೇ ವ್ಯಾಯಾಮ ಪ್ರಾಕಾರಗಳಿಗಿಂತ ಭಿನ್ನ ಏಕೆ?

ಜೂನ್ 21 ರ ಇಂದಿನ ದಿನ 6 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಇಡೀ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ನಮ್ಮ ಭಾರತದಲ್ಲಿ ಯೋಗಕ್ಕೆ ಅದರದೇ ಆದ ವೈಶಿಷ್ಟ್ಯವಿದೆ. ಯೋಗ ಎಂಬ ಪದ ಹುಟ್ಟಿಕೊಂಡಿದ್ದೇ ನಮ್ಮ ಭಾರತ ದೇಶದಿಂದ ಎಂದು ಹೇಳಲು ಸಾಕಷ್ಟು ಹೆಮ್ಮೆಯಾಗುತ್ತದೆ.

ಇಂದು ಹಲವಾರು ದೇಶಗಳು ತಾವು ಎಷ್ಟೇ ಎತ್ತರಕ್ಕೆ ಬೆಳೆದು ನಿಂತಿದ್ದರೂ, ನಮ್ಮ ದೇಶದ ಯೋಗ ಪದ್ಧತಿಯನ್ನು ಅವರ ಆರೋಗ್ಯ ಸುಧಾರಣೆಯಲ್ಲಿ ಅನುಸರಿಸುತ್ತವೆ ಎಂದರೆ ನಿಜಕ್ಕೂ ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ.

ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕರೋನಾ ಸಂಕಷ್ಟವಿರುವ ಈ ಕಾಲದಲ್ಲಿ, ಸಾಧ್ಯವಾದಷ್ಟು ಮನೆಯಲ್ಲಿಯೇ ಯೋಗ ಮಾಡಲು ಮತ್ತು ನಾವು ಮಾಡುವ ಯೋಗಾಭ್ಯಾಸವನ್ನು ಮೂರು ನಿಮಿಷಗಳ ಕಾಲ ಸೆರೆಹಿಡಿದು ಅದನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಜಾರಿ ಪಡಿಸಿರುವ ಅಂತರಾಷ್ಟ್ರೀಯ ವಿಡಿಯೋ ಬ್ಲಾಗ್ ನಲ್ಲಿ ಅಂದರೆ ‘ My Life My Yoga ‘ ಎಂಬ ಸ್ಪರ್ಧೆಯಲ್ಲಿ ಅಪ್ಲೋಡ್ ಮಾಡಲು ತಮ್ಮ ‘ ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ದೇಶದ ನಾಗರೀಕರಿಗೆ ವಿನಂತಿ ಮಾಡಿದ್ದಾರೆ.

ಈ ಲೇಖನದಲ್ಲಿ ಅಂತರಾಷ್ಟ್ರೀಯ ಯೋಗ ದಿನವಾದ ಇಂದು ವ್ಯಾಯಾಮಕ್ಕಿಂತ ಯೋಗ ಹೇಗೆ ಭಿನ್ನ ಮತ್ತು ನಮ್ಮ ಜೀವನದಲ್ಲಿ ನಾವು ಯೋಗಾಭ್ಯಾಸವನ್ನು ಏಕೆ ಅಳವಡಿಸಿಕೊಳ್ಳಬೇಕು ಎಂಬ ವಿಚಾರಗಳನ್ನು ತಿಳಿಸಲು ಬಯಸುತ್ತೇವೆ.

1 ನಮ್ಮ ದೇಹ ಮತ್ತು ಮನಸ್ಸಿಗೆ ಪ್ರಫುಲ್ಲತೆ ಸಿಗುತ್ತದೆ : –

ಯೋಗ ಮುಖ್ಯವಾಗಿ ನಮ್ಮ ಮನಸ್ಸಿನ ಧ್ಯಾನಕ್ಕೆ ಸಂಬಂಧಪಟ್ಟ ವಿಚಾರ ಆಗಿರುವುದರಿಂದ ನಮ್ಮ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಯಾವುದೇ ಹೊರಗಿನ ಅಡೆತಡೆಗಳಿಲ್ಲದೆ ವಿವಿಧ ಯೋಗಾಸನ ಭಂಗಿಗಳನ್ನು ಮಾಡಲು ಮುಂದಾಗುವುದರಿಂದ ದೇಹದಲ್ಲಿ ನಕಾರಾತ್ಮಕತೆ ದೂರವಾಗಿ ಸಕಾರಾತ್ಮಕ ಶಕ್ತಿ ಹರಿಯಲು ಪ್ರಾರಂಭವಾಗುತ್ತದೆ.

ಪ್ರತಿದಿನದ ನಮ್ಮ ಜೀವನದ ಜಂಜಾಟದಲ್ಲಿ ಸಿಲುಕಿ ಒದ್ದಾಡಿ ನಮ್ಮ ಮಾನಸಿಕ ಸ್ಥಿಮಿತವನ್ನು ಅದಾಗಲೇ ಕಳೆದುಕೊಂಡಿರುತ್ತೇವೆ. ದೇಹಕ್ಕೆ ಗಾಯವಾದರೆ ಯಾವುದಾದರೂ ಔಷಧಿ ತೆಗೆದುಕೊಂಡು ವಾಸಿ ಮಾಡಿಕೊಳ್ಳಬಹುದು.

ಅದರ ಬದಲು ಮನಸ್ಸಿಗೆ ಪ್ರತಿದಿನ ಆಗುವ ಇಂತಹ ಸಣ್ಣ ಸಣ್ಣ ಗಾಯಗಳು ಮಾನಸಿಕವಾಗಿ ನಮ್ಮನ್ನು ಕುಗ್ಗಿಸುವುದು ಮಾತ್ರವಲ್ಲದೆ ದೈಹಿಕವಾಗಿ ಸಹ ನಮ್ಮನ್ನು ಬೆಂಡಾಗುವಂತೆ ಮಾಡುತ್ತವೆ.

ಹಾಗಾಗಿ ಧ್ಯಾನ ನಮ್ಮ ಮನಸ್ಸಿನ ಚಂಚಲತೆಗೆ, ಮಾನಸಿಕ ಒತ್ತಡಕ್ಕೆ ಮತ್ತು ಆತಂಕಕ್ಕೆ ದಿವ್ಯೌಷಧ ಎಂದು ಹೇಳಬಹುದು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಅರ್ಧ ಅಥವಾ ಒಂದು ಗಂಟೆ ಧ್ಯಾನ ಮಾಡಿ ಯೋಗ ಮಾಡುವ ಅಭ್ಯಾಸವನ್ನು ರೂಡಿ ಮಾಡಿಕೊಳ್ಳುವುದರಿಂದ ನಮ್ಮ ದೇಹ ಮತ್ತು ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿರುತ್ತದೆ. ಆದರೆ ವ್ಯಾಯಾಮ ಕೇವಲ ನಮ್ಮ ದೈಹಿಕ ಸದೃಢತೆಗೆ ಮತ್ತು ಆರೋಗ್ಯದ ಕಡೆಗೆ ಮಾತ್ರ ಪ್ರಯೋಜನ ಉಂಟುಮಾಡುತ್ತದೆ.

2. ಯೋಗ ನಮ್ಮ ಸಂಪೂರ್ಣ ಹೊಣೆ ವಹಿಸಿಕೊಳ್ಳುತ್ತದೆ : –

ಸಾಧಾರಣವಾಗಿ ಹೇಳಬೇಕೆಂದರೆ ಯೋಗಾಭ್ಯಾಸದಲ್ಲಿ ಕೇವಲ ಒಂದು ಅಥವಾ ಎರಡು ಭಂಗಿಗಳು ಕೂಡಿರುವುದಿಲ್ಲ. ಹಲವಾರು ಭಂಗಿಗಳ ಯೋಗಾಸನಗಳನ್ನು ಒಂದಾದ ಮೇಲೆ ಒಂದರಂತೆ ಮಾಡುವುದರಿಂದ ನಮ್ಮ ದೇಹದ ಎಲ್ಲಾ ಪ್ರಕ್ರಿಯೆಗಳು ಸಮತೋಲನಗೊಳ್ಳುತ್ತವೆ.

ಮೊಟ್ಟಮೊದಲಿಗೆ ನಮ್ಮ ಉಸಿರಾಟದ ಪ್ರಕ್ರಿಯೆಯಿಂದ ಶುರುವಾಗಿ ಜೀರ್ಣ ಪ್ರಕ್ರಿಯೆ, ರಕ್ತ ಸಂಚಾರ, ಹಾರ್ಮೋನುಗಳ ಉತ್ಪಾದನೆ, ಮೂತ್ರಪಿಂಡಗಳ ಕಾರ್ಯಕ್ಷಮತೆ, ಮೂಳೆಗಳ ಆರೋಗ್ಯ ಹೀಗೆ ನಮ್ಮ ದೇಹಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಿಚಾರದ ಮೇಲೂ ಯೋಗಾಭ್ಯಾಸ ಪ್ರಭಾವ ಬೀರುತ್ತದೆ.

ಮುಖ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಬೆವರು ಹಾಗೂ ಮೂತ್ರದ ಮುಖಾಂತರ ಹೊರಬರುತ್ತವೆ. ರಕ್ತದ ಒತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಯೋಗಾಭ್ಯಾಸದಿಂದ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಲಭ್ಯವಾಗುತ್ತವೆ.

ಆದರೆ ವ್ಯಾಯಾಮದ ಅಭ್ಯಾಸ ರೂಡಿ ಮಾಡಿಕೊಳ್ಳುವುದರಿಂದ ನಮ್ಮ ಹೃದಯದ ಆರೋಗ್ಯ ಉತ್ತಮಗೊಂಡು ಮಾಂಸಖಂಡಗಳು ಬಲಗೊಳ್ಳುತ್ತವೆ ಅಷ್ಟೇ.null

3. ಮಾನಸಿಕವಾಗಿ ಸದೃಢವಾಗಲು ಸಹಾಯ ಮಾಡುತ್ತದೆ : –

ಮೊದಲೇ ಹೇಳಿದಂತೆ ಯೋಗ ಮತ್ತು ಧ್ಯಾನ ಎರಡಕ್ಕೂ ಅವಿನಾಭಾವ ಮತ್ತು ನೇರವಾದ ಸಂಬಂಧವಿದೆ.

ಮಾನಸಿಕವಾಗಿ ನಮ್ಮನ್ನು ಬಲಗೊಳಿಸುವ ಹಲವಾರು ಆಯಾಮಗಳ ಯೋಗಾಭ್ಯಾಸ ಮತ್ತು ಧ್ಯಾನ, ಎಂತಹ ಕಷ್ಟಕರವಾದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬ ಛಲವನ್ನು ನಮ್ಮಲ್ಲಿ ತುಂಬುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಯಾವುದಾದರೂ ವಿಚಾರದ ಬಗ್ಗೆ ನಮ್ಮ ನಿಲುವು ಏನು ಎಂಬುದನ್ನು ತಿಳಿಸಲು ಕಷ್ಟಪಡುತ್ತೇವೆ.

ಆದರೆ ಆನಂತರ ಇಷ್ಟು ಸಣ್ಣ ವಿಚಾರಕ್ಕೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತೇವೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಹಲವಾರು ಸಂದರ್ಭಗಳನ್ನು ಯೋಗ ಮಾಡುವುದರಿಂದ ಮತ್ತು ಧ್ಯಾನಾಭ್ಯಾಸ ರೂಡಿ ಮಾಡಿಕೊಳ್ಳುವುದರಿಂದ ದಿಟ್ಟವಾಗಿ ಎದುರಿಸಬಹುದು. ವ್ಯಾಯಾಮದಿಂದ ಮಾನಸಿಕವಾಗಿ ಅಷ್ಟೇನೂ ಪ್ರಯೋಜನವಾಗುವುದಿಲ್ಲ.

ಇತರರ ಮಧ್ಯೆ ನಾವು ವ್ಯಾಯಾಮ ಮಾಡಲು ಮುಂದಾಗುವುದರಿಂದ ಅವರಷ್ಟೇ ಸರಿಸಮಾನವಾಗಿ ಅಭ್ಯಾಸ ಮಾಡಬೇಕಾದ ಅಗತ್ಯತೆ ಇರುತ್ತದೆ. ಜೊತೆಗೆ ಮನಸ್ಸಿನಲ್ಲಿ ಎಲ್ಲಿ ನಮ್ಮ ದೇಹಕ್ಕೆ ಬಹಳ ಬೇಗನೆ ಆಯಾಸ ಉಂಟಾಗುವುದೋ ಎಂಬ ಒಂದು ಸಣ್ಣ ಅಳುಕು ಭಾವನೆ ಇದ್ದೇ ಇರುತ್ತದೆ.

4. ನಮ್ಮ ಮೇಲೆ ನಮ್ಮನ್ನು ಕೇಂದ್ರೀಕರಿಸುತ್ತದೆ :

ಯೋಗಕ್ಕೂ ವ್ಯಾಯಾಮಕ್ಕೂ ಇರುವ ಬಹಳ ದೊಡ್ಡ ವ್ಯತ್ಯಾಸ ಇದು ಎಂದು ಹೇಳಬಹುದು. ಸಾಮಾನ್ಯವಾಗಿ ನಾವು ಯೋಗವನ್ನು ಪ್ರಶಾಂತವಾದ ವಾತಾವರಣದಲ್ಲಿ ಬೇರೆಯವರ ಅಡಚಣೆಯಿಲ್ಲದೆ ಅಭ್ಯಾಸ ಮಾಡಲು ಮುಂದಾಗುತ್ತೇವೆ. ಆದರೆ ವ್ಯಾಯಾಮ ಹಾಗಲ್ಲ. ವ್ಯಾಯಾಮ ಶಾಲೆಗೆ ಹೋದ ಕ್ಷಣ ನಮಗಿಂತ ಮುಂಚೆಯೇ ಬಹಳಷ್ಟು ಜನರು ಬಂದು ಅಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ.

ಅವರ ಮಧ್ಯೆ ನಾವು ಕೂಡ ಅವರ ಜೊತೆಯಲ್ಲೇ ಅಭ್ಯಾಸ ಮಾಡಬೇಕಾಗುತ್ತದೆ. ಒಬ್ಬರಿಗೊಬ್ಬರು ಮಾತನಾಡಬೇಕಾಗುತ್ತದೆ, ಒಬ್ಬರನ್ನೊಬ್ಬರು ನೋಡಬೇಕಾಗುತ್ತದೆ, ಜೊತೆಗೆ ಆಗಾಗ ದಣಿವಾರಿಸಿಕೊಳ್ಳಬೇಕಾಗುತ್ತದೆ. ಯೋಗಾಭ್ಯಾಸದಲ್ಲಿ ಇಂತಹ ಯಾವ ಅಡೆತಡೆಗಳು ಇಲ್ಲದಿರುವುದರಿಂದ ಮತ್ತು ನಾವೊಬ್ಬರೇ ಅಭ್ಯಾಸ ಮಾಡುವುದರಿಂದ ನಮ್ಮ ಬಗ್ಗೆ ನಾವು ಹೆಚ್ಚು ಗಮನ ವಹಿಸಲು ಸಹಾಯ ಆಗುತ್ತದೆ.

5. ಯೋಗ ನಿಮ್ಮ ದೇಹವನ್ನು ಭಾಗಿಸುತ್ತದೆ : –

ಯೋಗಾಭ್ಯಾಸದ ಭಂಗಿಗಳೇ ಹಾಗೆ. ಪ್ರತಿಯೊಂದು ಭಂಗಿಯಲ್ಲಿಯೂ ಸಾಮಾನ್ಯವಾಗಿ ನಮ್ಮ ದೇಹದ ಎಲ್ಲ ಅಂಗಾಂಗಗಳು ಅಭ್ಯಾಸಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಯೋಗದಿಂದ ಏಕಕಾಲಕ್ಕೆ ಎಲ್ಲ ಅಂಗಗಳಿಗೂ ಸದೃಢತೆ ಸಿಕ್ಕಂತಾಗುತ್ತದೆ. ಆದರೆ ವ್ಯಾಯಾಮ ಶಾಲೆಯಲ್ಲಿ ವ್ಯಾಯಮ ತಜ್ಞರು ದಿನಕ್ಕೊಂದು ದೇಹದ ಅಂಗಾಂಗದ ಮೇಲೆ ಕೇಂದ್ರೀಕರಿಸಲು ಹೇಳಿ ಅದಕ್ಕೆ ಸಂಬಂಧಪಟ್ಟ ವ್ಯಾಯಾಮದ ಅಭ್ಯಾಸವನ್ನು ಮಾತ್ರ ಮಾಡಲು ಸೂಚಿಸುತ್ತಾರೆ. ಹೀಗಾಗಿ ವ್ಯಾಯಾಮದ ವಿಚಾರದಲ್ಲಿ ಇಡೀ ದೇಹದ ಸದೃಢತೆಗೆ ಒಂದು ವಾರವೇ ಬೇಕಾಗುತ್ತದೆ.

6 ಯೋಗ ತುಂಬಾ ಪರಿಣಾಮಕಾರಿ : –

ಯೋಗಾಸನದಲ್ಲಿ ನಾವು ಯಾವುದೇ ಇತರ ಉಪಕರಣಗಳನ್ನು ಉಪಯೋಗಿಸುವುದಿಲ್ಲ. ಇಲ್ಲಿ ನಮ್ಮ ದೇಹದ ಅಂಗಾಂಗಗಳೇ ಒಂದೊಂದು ಉಪಕರಣಗಳು.

ಅವುಗಳನ್ನು ಸರಿಯಾದ ರೀತಿಯಲ್ಲಿ ಯೋಗದ ಆಸನಕ್ಕೆ ಅನುಸಾರವಾಗಿ ಬಾಗಿಸಲು ಪ್ರಯತ್ನಪಡುತ್ತೇವೆ. ಹೀಗಾಗಿ ನಮ್ಮ ದೇಹದ ಯಾವ ಅಂಗ ಪ್ರಸ್ತುತ ಯಾವ ಸ್ಥಿತಿಯಲ್ಲಿದೆ ಎಂಬುದು ನಮಗೆ ಸುಲಭವಾಗಿ ತಿಳಿಯುತ್ತದೆ.

ಇದರಿಂದ ಮಾನಸಿಕವಾಗಿ ಸಹ ನಾವು ಅಭಿವೃದ್ಧಿಯಾಗುತ್ತೇವೆ. ಆದರೆ ವ್ಯಾಯಾಮದಲ್ಲಿ ಹಾಗಲ್ಲ. ನಮ್ಮ ಗಮನ ಏನಿದ್ದರೂ ನಾವು ಬಳಸುವ ಉಪಕರಣಗಳ ಮೇಲೆಯೇ ಇರುತ್ತದೆ.

ಇದರಿಂದ ಮಾನಸಿಕವಾಗಿ ನಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ವ್ಯಾಯಮ ಕೇವಲ ದೇಹಕ್ಕೆ ಸಂಬಂಧಪಟ್ಟ ವಿಚಾರ ಆಗಿರುತ್ತದೆ. ಆದರೆ ಯೋಗಾಭ್ಯಾಸ ನಮ್ಮ ದೇಹ ಮತ್ತು ನಮ್ಮ ಮನಸ್ಸು ಎರಡನ್ನೂ ಏಕಕಾಲದಲ್ಲಿ ಸಮತೋಲನಗೊಳಿಸುವ ತಂತ್ರ ಹೊಂದಿದೆ.

7. ಯೋಗಕ್ಕೆ ನಿರ್ದಿಷ್ಟ ಸ್ಥಳವಿಲ್ಲ : –

ಯೋಗಾಭ್ಯಾಸವನ್ನು ಯೋಗ ಶಾಲೆಯಲ್ಲಿ ಮಾತ್ರ ಮಾಡಬೇಕು ಎಂದೇನಿಲ್ಲ. ಕೇವಲ ಪ್ರಶಾಂತವಾದ ವಾತಾವರಣ ಒಂದಿದ್ದರೆ ಸಾಕು. ಎಲ್ಲೆಂದರಲ್ಲಿ ಯಾವಾಗ ಬೇಕಾದರೆ ಆಗ ಯೋಗದ ಭಂಗಿಗಳನ್ನು ಶುರು ಮಾಡಬಹುದು. ಆದರೆ ವ್ಯಾಯಮ ಹಾಗಲ್ಲ.

ವ್ಯಾಯಾಮದ ಅಭ್ಯಾಸ ಮಾಡಲು ನಾವು ವ್ಯಾಯಾಮ ಶಾಲೆಗೆ ಹೋಗಬೇಕು. ಇಲ್ಲವೆಂದರೆ ಮನೆಯಲ್ಲಿಯೇ ವ್ಯಾಯಾಮದ ಉಪಕರಣಗಳನ್ನು ತಂದಿಟ್ಟುಕೊಂಡು ಅಭ್ಯಾಸ ಮಾಡಲು ಮುಂದಾಗಬೇಕು. ಯೋಗ ಶಾಂತಿಯಿಂದ ಕೊಡಿದರೆ ವ್ಯಾಯಾಮ ಶಬ್ದಗಳಿಂದ ತುಂಬಿರುತ್ತವೆ.

8. ಯೋಗ ಪ್ರಶಾಂತತೆಯ ಪ್ರತೀಕ : –

ಮೇಲೆ ಹೇಳಿದಂತೆ ನಾವು ಯೋಗ ಅಭ್ಯಾಸ ಮಾಡಲು ಯಾವುದೇ ಉಪಕರಣಗಳನ್ನು ಬಳಸುವುದಿಲ್ಲ. ಪ್ರಶಾಂತವಾದ ವಾತಾವರಣದಲ್ಲಿ ಒಂದು ಯೋಗದ ಚಾಪೆ ಇದ್ದರೆ ಸಾಕಾಗುತ್ತದೆ. ಆರಾಮವಾಗಿ ಹುಲ್ಲುಹಾಸಿನ ಮೇಲೆ ಸಹ ಯೋಗಾಭ್ಯಾಸ ಮಾಡಬಹುದು.

ಆದರೆ ವ್ಯಾಯಾಮದಲ್ಲಿ ನಮ್ಮ ದೇಹದ ಸದೃಢತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ದೇಹವನ್ನು ಬಲಪಡಿಸುವ ಅಥವಾ ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ಉಪಕರಣಗಳನ್ನು ಎತ್ತಿ ಇಳಿಸಿ ಅಭ್ಯಾಸ ಮಾಡಬೇಕಾಗುತ್ತದೆ. ಇದರಿಂದ ಮೊದಮೊದಲು ಅಭ್ಯಾಸ ಮಾಡುತ್ತಿರುವವರಿಗೆ ಗಾಯವಾಗುವ ಸಂಭವ ಹೆಚ್ಚಿರುತ್ತದೆ.

9. ಯೋಗ ನೋವುನಿವಾರಕ : –

ಯೋಗಾಭ್ಯಾಸದ ಭಂಗಿಗಳನ್ನು ಪ್ರತಿನಿತ್ಯವೂ ಅಭ್ಯಾಸ ಮಾಡುವುದರಿಂದ ನಮ್ಮ ದೇಹದ ಮಾಂಸಖಂಡಗಳ ನೋವು ದೂರಾಗುತ್ತದೆ ಎಂದು ಹೇಳುತ್ತಾರೆ.

ಏಕೆಂದರೆ ನಾವೆಲ್ಲ ಗಮನಿಸಿರುವ ಹಾಗೆ ಯೋಗಾಭ್ಯಾಸದ ಎಲ್ಲಾ ಭಾಗಗಳಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಗಳನ್ನು ವಿಸ್ತರಿಸಲು ಪ್ರಯತ್ನಪಡುತ್ತೇವೆ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

ಹಾಗಾಗಿ ಯಾವುದೇ ಬಗೆಯ ದೀರ್ಘಕಾಲದ ನೋವುಗಳು ಮಾಯವಾಗುತ್ತವೆ. ಆದರೆ ವ್ಯಾಯಾಮದಲ್ಲಿ ಮೊದಲೇ ಇರುವ ನೋವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿರಂತರವಾದ ವ್ಯಾಯಾಮ ಅಭ್ಯಾಸದಿಂದ ಸುಧಾರಿಸಿಕೊಳ್ಳಲು ದೇಹಕ್ಕೆ ಸಾಕಷ್ಟು ವಿಶ್ರಾಂತಿ ಬೇಕಾಗುತ್ತದೆ.

10. ಯೋಗದಿಂದ ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳುತ್ತದೆ : –

ಸಾಮಾನ್ಯವಾಗಿ ಯೋಗಾಭ್ಯಾಸ ಮಾಡಬೇಕಾದರೆ ದೀರ್ಘವಾಗಿ ಉಸಿರು ತೆಗೆದುಕೊಂಡು ಉಸಿರು ಬಿಡಲು ಮುಂದಾಗುತ್ತೇವೆ. ಈ ರೀತಿ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ.

ಮುಖ್ಯವಾಗಿ ನಮ್ಮ ಉಸಿರಾಟದ ವ್ಯವಸ್ಥೆ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದ ಉಸಿರಾಟದಲ್ಲಿ ನಮ್ಮ ಮಾನಸಿಕ ಆರೋಗ್ಯ ಕೂಡ ಉತ್ತಮವಾಗುತ್ತದೆ. ಇದರಿಂದ ದೇಹದ ಆಯಾಸ ದೂರಗೊಂಡು ಕ್ರಮೇಣವಾಗಿ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ. ಆದರೆ ವ್ಯಾಯಾಮದ ಅಭ್ಯಾಸ ಮಾಡಿದ ನಂತರ ಏದುಸಿರು ಬಿಡಬೇಕಾಗುತ್ತದೆ.

11. ಯೋಗ ನಮ್ಮನ್ನು ಶಾಂತಗೊಳಿಸುತ್ತದೆ : –

ಯೋಗಾಭ್ಯಾಸವನ್ನು ಪ್ರಶಾಂತವಾದ ವಾತಾವರಣದಲ್ಲಿ ನಾವೂ ಕೂಡ ಶಾಂತವಾಗಿ ಅಭ್ಯಾಸ ಮಾಡುವುದರಿಂದ, ನಮ್ಮ ಮನಸ್ಸಿಗೆ ಸಾಕಷ್ಟು ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ.

ಯೋಗ ಅಭ್ಯಾಸ ಮಾಡಿದ ನಂತರ ನಮ್ಮ ಮಾನಸಿಕ ಸ್ಥಿತಿ ಮೊದಲಿಗಿಂತ ಸಾಕಷ್ಟು ಉತ್ತಮವಾಗಿ ಬದಲಾಗಿರುತ್ತದೆ. ಜೊತೆಗೆ ವ್ಯಾಯಾಮಕ್ಕೆ ಹೋಲಿಸಿದರೆ ಯೋಗ ಅಭ್ಯಾಸ ಮಾಡಲು ತುಂಬಾ ಸುಲಭ.

ವ್ಯಾಯಾಮದಂತೆ ಹಲ್ಲು ಕಿರಿದು ಕಷ್ಟಪಟ್ಟು ಭಾರ ಎತ್ತುವ ಪ್ರಮೇಯ ಯೋಗದಲ್ಲಿ ಇರುವುದಿಲ್ಲ.

12. ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ : –

ಯೋಗ ತಜ್ಞರು ನಮ್ಮ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಣ್ಣು ಮುಚ್ಚಿ ಧ್ಯಾನ ಮಾಡುವಂತಹ ಯಾವುದಾದರೂ ಒಂದು ಭಂಗಿಯನ್ನು ಪ್ರತಿದಿನ ಕಡ್ಡಾಯವಾಗಿ ಸೂಚಿಸುತ್ತಾರೆ.

ಇದು ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಸಲುವಾಗಿಯೇ ಇರುತ್ತದೆ. ಆದರೆ ವ್ಯಾಯಾಮದಲ್ಲಿ ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಂತಹ ಯಾವುದೇ ಭಂಗಿ ಇಲ್ಲ.

ಇತ್ತೀಚಿನ ವ್ಯಾಯಮ ಶಾಲೆಯಲ್ಲಿ ನಾವು ಗಮನಿಸಿರುವ ಹಾಗೆ ಜೋರು ಸಂಗೀತ ಮತ್ತು ಗಾಢವಾದ ಬೆಳಕು ಇರುವುದರಿಂದ ಮಾನಸಿಕವಾಗಿ ಇದರಿಂದ ಯಾವುದೇ ಲಾಭಗಳು ಉಂಟಾಗುವುದಿಲ್ಲ.

13. ಯೋಗಾಭ್ಯಾಸ ಮಾಡಲು ವಯಸ್ಸಿನ ಅಂತರವಿಲ್ಲ : –

ಯೋಗಾಭ್ಯಾಸ ಭಂಗಿಗಳನ್ನು ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಕೂಡ ಸುಲಭವಾಗಿ ಮಾಡಬಹುದು.

ಅದರಲ್ಲೂ ಮುಖ್ಯವಾಗಿ ಆರೋಗ್ಯ ತಜ್ಞರು ಹೆಚ್ಚಾಗಿ ಚಿಕ್ಕ ಮಕ್ಕಳು ಮತ್ತು ವಯೋವೃದ್ಧರು ಯೋಗಾಭ್ಯಾಸ ಮಾಡಲೇಬೇಕೆಂದು ಸೂಚಿಸುತ್ತಾರೆ. ಆದರೆ ವ್ಯಾಯಮ ಹಾಗಲ್ಲ.

ಕೇವಲ ಯುವಜನತೆ ಮಾತ್ರ ವ್ಯಾಯಾಮದ ಅಭ್ಯಾಸ ಮಾಡಬಹುದು. ಪುಟ್ಟ ಮಕ್ಕಳು ಹಾಗೂ ವಯಸ್ಸಾದವರು ವ್ಯಾಯಾಮದ ಉಪಕರಣಗಳನ್ನು ಮುಟ್ಟಲು ಹೆದರುತ್ತಾರೆ.

14. ಯೋಗದಿಂದ ನಮ್ಮ ಏಕಾಗ್ರತೆ ಹೆಚ್ಚಾಗುತ್ತದೆ : –

ಯೋಗದ ಅಭ್ಯಾಸದಲ್ಲಿ ಮುಖ್ಯವಾಗಿ ನಮ್ಮ ಉಸಿರಾಟ ನಮ್ಮ ದೇಹದ ಪ್ರಸ್ತುತ ಆಕೃತಿ ಮತ್ತು ಮುಂದಿನ ಭಂಗಿಯ ಬಗ್ಗೆ ಮಾತ್ರ ನಾವು ಯೋಚಿಸಲು ಸಮಯವಿರುತ್ತದೆ.

ಹಾಗಾಗಿ ನಮ್ಮ ತಲೆಯಲ್ಲಿ ಯೋಗಾಭ್ಯಾಸ ಮಾಡುವಾಗ ಬೇರೆ ಯಾವುದೇ ಆಲೋಚನೆಗಳು ಸುಳಿಯುವುದಿಲ್ಲ. ಆದರೆ ವ್ಯಾಯಾಮ ಶಾಲೆಯಲ್ಲಿ ಇಂತಹ ಅನುಕೂಲ ಹುಡುಕಿದರೂ ಸಿಗುವುದಿಲ್ಲ.

ಎಲ್ಲಾ ಕಡೆ ಕನ್ನಡಿಗಳನ್ನು ಹಾಕಿರುವುದರಿಂದ ನಮ್ಮ ಗಮನ ನಮಗಿಂತ ಹೆಚ್ಚಾಗಿ ಬೇರೆಯವರ ಮೇಲೆಯೇ ಇರುತ್ತದೆ ಜೊತೆಗೆ ಗೋಡೆಯಲ್ಲಿ ನೇತುಹಾಕಿರುವ ದೂರದರ್ಶನದ ಮೇಲೆ ಹಾಯ್ದು ಹೋಗುತ್ತದೆ.

15. ಯೋಗಕ್ಕೆ ಯೋಗಿಗಳ ಜೀವನವೇ ಸಾಕ್ಷಿ : –

ನಾವು ಯೋಗಿಗಳನ್ನು ಹಾಗೂ ಸಾಧುಸಂತರನ್ನು ಬಹಳ ವಿರಳವಾಗಿ ನಮ್ಮ ಸಮಾಜದಲ್ಲಿ ಕಾಣುತ್ತೇವೆ. ಅಂದರೆ ಎಲ್ಲೋ ಕೆಲವರು ಮಾತ್ರ ಯೋಗಿ ಎಂಬ ಪಟ್ಟ ಪಡೆದಿರುತ್ತಾರೆ.

ಹಲವಾರು ವರ್ಷಗಳ ಧ್ಯಾನ ಮತ್ತು ಯೋಗಾಭ್ಯಾಸದ ಫಲವಾಗಿ ಯೋಗಿಗಳು ನಮ್ಮೆಲ್ಲರಿಗಿಂತ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಸದಾ ಹಸನ್ಮುಖಿಯಾಗಿ ಜೀವನದಲ್ಲಿ ಹೆಚ್ಚು ಸುಖ-ಸಂತೋಷವನ್ನು ಪಡೆದಿರುತ್ತಾರೆ. ಆದರೆ ವ್ಯಾಯಾಮ ಮಾಡುವವರಿಗೆ ಇಂತಹ ಅವಕಾಶ ಸಿಗುವುದಿಲ್ಲ.

ಕೆಲವರಿಗಂತೂ ಸಂತೋಷಕ್ಕಿಂತ ಹೆಚ್ಚು ಕೋಪವೇ ಜಾಸ್ತಿ. ತಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಅವರು ವ್ಯಾಯಾಮ ಮಾಡಿದರೂ ಸಹ ಧ್ಯಾನ ಮತ್ತು ಯೋಗಾಭ್ಯಾಸ ಮಾಡಲೇಬೇಕಾಗುತ್ತದೆ.

ಜೂನ್ 21, 2020;ಆದಿತ್ಯವಾರ: ಇಂದಿನ ರಾಶಿ ಫಲ

ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಭಾನುವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಸಂಜೆ 5:13 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01
ದಿನ ವಿಶೇಷ: ಸೂಯಗ್ರಹಣ

ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ನಿಂದನೆ, ಶತ್ರುಗಳ ಬಾಧೆ, ನಂಬಿಕಸ್ಥರಿಂದ ದ್ರೋಹ, ಮಹಿಳೆಯರಿಗೆ ತೊಂದರೆ, ಶೀತ ಸಂಬಂಧಿತ ರೋಗ.

ವೃಷಭ: ಹಿರಿಯರಿಂದ ಬೆಂಬಲ, ಹಣಕಾಸು ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ.

ಮಿಥುನ: ಮಾನಸಿಕ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಹಿನ್ನಡೆ, ಕೆಟ್ಟ ದೃಷ್ಠಿ ಬೀಳುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯರ್ಥ ತಿರುಗಾಟ, ಅತಿಯಾದ ಭಯ, ಸ್ಥಳ ಬದಲಾವಣೆ.

ಕಟಕ: ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಸಾಧಾರಣ ಲಾಭ, ಆರೋಗ್ಯದಲ್ಲಿ ಸಮಸ್ಯೆ, ಋಣ ಬಾಧೆ, ಯತ್ನ ಕಾರ್ಯದಲ್ಲಿ ವಿಘ್ನ, ಮಿತ್ರರಲ್ಲಿ ದ್ವೇಷ, ಸಾಲ ಬಾಧೆ, ಶತ್ರುಬಾಧೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಸಂತಸದ ವಾತಾವರಣ, ಆತ್ಮೀಯರಿಂದ ಸಹಾಯ ಲಭಿಸುವುದು, ಪರಿಶ್ರಮಕ್ಕೆ ತಕ್ಕ ಪಲ, ವಿವಾದಗಳಿಗೆ ಅಸ್ಪಾದಕೊಡಬೇಡಿ, ವ್ಯವಹಾರದಲ್ಲಿ ಉತ್ತಮ.

ಕನ್ಯಾ: ಪ್ರೀತಿ ಪಾತ್ರರ ಭೇಟಿ, ಅಧಿಕವಾದ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸಣ್ಣ ಮಾತಿನಿಂದ ಕಲಹ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ.

ತುಲಾ: ದುಂದು ವೆಚ್ಚಗಳಿಗೆ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಕೃಷಿಯಲ್ಲಿ ಲಾಭ, ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭ್ಯ, ಜಮೀನು ವಿವಾದ ಇತ್ಯರ್ಥ, ಮನಸ್ಸಿಗೆ ಕಿರಿಕಿರಿ.

ವೃಶ್ಚಿಕ: ಹೊಸ ಅವಕಾಶಗಳು ಕೈ ತಪ್ಪುವುದು, ಬಂಧು ಮಿತ್ರಿಂದ ಅಪನಿಂದನೆ, ಸಾಧಾರಣ ಪ್ರಗತಿ, ಆದಾಯಕ್ಕಿಂತ ಖರ್ಚು ಹೆಚ್ಚು, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ಅಮೂಲ್ಯ ವಸ್ತುಗಳ ಖರೀದಿಗೆ ಹಣವ್ಯಯ.

ಧನಸ್ಸು: ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿಪರೀತ ಹಣವ್ಯಯ, ಮಾತಿನ ಮೇಲೆ ಹಿಡಿತ ಅಗತ್ಯ, ಎಲ್ಲರ ಮನಸ್ಸು ಗೆಲ್ಲುವಿರಿ, ಆಲಸ್ಯ ಮನೋಭಾವ.

ಮಕರ: ಹಿತ ಶತ್ರುಗಳ ಬಾಧೆ, ಆರೋಗ್ಯದಲ್ಲಿ ಚೇತರಿಕೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಸ್ನೇಹಿತರಿಂದ ಉತ್ತಮ ಸಲಹೆ, ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ವ್ಯಥೆ.

ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಚೋರ ಭಯ, ಆಕಸ್ಮಿಕ ನಷ್ಟ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ವಿದ್ಯಾರ್ಥಿಗಳಿಗೆ ಅನುಕೂಲ, ಶತ್ರುಗಳ ಬಾಧೆ, ತಾಳ್ಮೆ ಅತ್ಯಗತ್ಯ.

ಮೀನ: ಪರರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಮಿತ್ರರಲ್ಲಿ ದ್ವೇಷ, ವ್ಯಾಸಂಗಕ್ಕೆ ತೊಂದರೆ.

ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಜ್ವರ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ:ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 20 : ಜಿಲ್ಲೆಯಲ್ಲಿ ಈಗಾಗಲೇ ಮಹಾರಾಷ್ಟç ಹಾಗೂ ಇತರ ಸ್ಥಳಗಳಿಂದ ಆಗಮಿಸಿದ ಅನೇಕರಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು ಎಲ್ಲರನ್ನೂ ಚಿಕಿತ್ಸೆಗೊಳಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 13 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಕೋವಿಡ್ 19 ಲಕ್ಷಣಗಳಿರುವ ಯಾವುದೇ ವ್ಯಕ್ತಿಯನ್ನು ಪರೀಕ್ಷಿಸಿ ಸೋಂಕು ಇದ್ದಲ್ಲಿ ತಕ್ಷಣವೇ ಗುರುತಿಸಿ ಚಿಕಿತ್ಸೆಗೊಳಪಡಿಸುವುದು ಮೂಖ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸರ್ವೆಲೈನ್ಸ್ ಚುರುಕುಗೊಳಿಸಿದ್ದು ಯಾವುದೇ ಸಂಶಯಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಖಿನ್ನ ವ್ಯಕ್ತಿಗಳನ್ನು ಗುರುತಿಸಿ ಸೋಂಕು ತಗಲದಂತೆ ನೋಡಿಕೊಳ್ಳಲು ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ತಂಡ ರಚಿಸಲಾಗಿದೆ. ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳನ್ನು ವೈದ್ಯಕೀಯವಾಗಿ ಪರೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಈಗಾಗಲೇ 10 ಜ್ವರ ತಪಾಸಣೆ ಕ್ಲಿನಿಕ್ ಗಳನ್ನು, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಸರ್ಕಾರಿ ಆಸ್ಪತ್ರೆ ಕುಂದಾಪುರ, ಸಮುದಾಯ ಆರೋಗ್ಯ ಕೇಂದ್ರ ಕೋಟ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಜಿಲ್ಲಾ ಆಸ್ವತ್ರೆ ಉಡುಪಿ,ಕೆ.ಎಂ.ಸಿ ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಮತ್ತು ತಾಲೂಕು ಆಸ್ಪತ್ರೆ ಕಾರ್ಕಳ ಇಲ್ಲಿ ಸ್ಥಾಪಿಸಲಾಗಿದೆ. ಜ್ವರ ತಪಾಸಣೆ ಕ್ಲಿನಿಕ್ ಗಳಲ್ಲಿ ಕೋವಿಡ್ 19 ಸಂಶಯಾತ್ಮಕ ಪ್ರಕರಣಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಗಂಟಲು ಮಾದರಿ ಸಂಗ್ರಹಿಸುವ ಹಾಗೂ ಕೋವಿಡ್ ಅಲ್ಲದ ಇತರ ಜ್ವರ ಪ್ರಕರಣಗಳನ್ನು ಯೋಗ್ಯವಾಗಿ ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ದೊಡ್ಡ ಖಾಸಗಿ ಆಸ್ವತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಪ್ರತ್ಯೇಕ ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಇದರಿಂದ ಉಳಿದ ರೋಗಿಗಳಿಗೆ ಮತ್ತು ಆಸ್ವತ್ರೆ ಸಿಬ್ಬಂದಿಗಳಿಗೆ ಸೋಂಕು ಹರಡುವುದು ತಪ್ಪಿಸಬಹುದಾಗಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಒಳ ಪ್ರದೇಶಗಳಿಂದ ಬರುವ ರೋಗಿಗಳಿಗಾಗಿ ಪ್ರತ್ಯೇಕ ತಪಾಸಣೆ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ದಾಪುರದಲ್ಲಿ ಜ್ವರ ತಪಾಸಣ ಕೇಂದ್ರ ಸ್ಥಾಪಿಸಲು ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲಿ ಆರಂಭಗೊಳ್ಳಲಿದೆ.

ಕೋವಿಡ್-19 ಸೋಂಕು ಜನಸಾಮಾನ್ಯರಲ್ಲಿ ಯಾರಿಗೂ ಸಹ ಹರಡಬಹುದಾಗಿದ್ದು, ಶೀಘ್ರ ಪತ್ತೆ/ ತ್ವರಿತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗಬಹುದಾಗಿದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಯಾವುದೇ ಜ್ವರ /ಕೆಮ್ಮು/ಉಸಿರಾಟದ ತೊಂದರೆ ಮುಂತಾದ ಕೋವಿಡ್ ಲಕ್ಷಣಗಳು ಬಂದಲ್ಲಿ ಹತ್ತಿರದ ಜ್ಬರ ತಪಾಸಣಾ ಕೇಂದ್ರಕ್ಕೆ ಹೋಗಿ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸದಾಪುಷ್ಪ ಅಥವಾ ಕಾಶಿ ಕಣಗಿಲೆ :ಔಷಧೀಯ ಗುಣಗಳು

ಕೆಂಪುಕಾಶಿಕಣಗಿಲೆ ಗಿಡ ಒಂತರಾ #ದಿವ್ಯಔಷದ ಎನ್ನಬಹುದು. ಈ ಹೂವನ್ನು ನಿತ್ಯ ಮಲ್ಲಿಗೆ ಅಥವಾ ಬಟ್ಟಲ ಹೂ ಎಂದೂ ಸಹಾ ಕರೆಯಲಾಗುತ್ತದೆ. ಹಿಂದಿಯಲ್ಲಿ ಸದಾ ಬಾಹಾರ್ ಎಂತಲೂ ಇಂಗ್ಲಿಷ್ನಲ್ಲಿ ಮಡವಾಸ್ಕರ ಪೇರಿವಿಂಕಲ್ ಎಂದೂ ಕರೆಯಲಾಗುತ್ತದೆ.

ಈ ಹೂವಿನ ಗಿಡ ವಿಶೇಷವಾದ ಔಷಧೀಯ ಗುಣಗಳನ್ನು ಹೊಂದಿದೆ ಈ ಗಿಡದ ಎಲೆಗಳು ಹೂ ಬೇರು ಎಲ್ಲವೂ ಔಷಧೀಯೇ, ಇವು ಇವು ಕ್ಯಾನ್ಸರ್ ಮಧುಮೇಹ ರೋಗಗಳಿಗೆ ಮುಕ್ತಿ ಸಿಗುವಂತೆ ಮಾಡುತ್ತದೆ ಅಲಂಕಾರಿಕ ಸಸ್ಯವಾಗಿ ಬೇಳಸಲ್ಪಡುವ ಈ ಹೂವಿನಲ್ಲಿ ಎರಡು ವಿಧಗಳಿವೆ ಒಂದು ಜಾತಿಯ ಗಿಡ ಬಿಳಿ ಹೂವು ಬಿಡುತ್ತೆ ಇನ್ನೊಂದು ನಸು ಗೆಂಪು ಹೂವನ್ನು ಬಿಡುತ್ತದೆ. ಇನ್ನು ಇದು ಕ್ಯಾನ್ಸರ್ ಗೆ ಸೂಕ್ತ ನಿವರಣೆಯನ್ನು ಒದಗಿಸಬಲ್ಲದು ಅಷ್ಟೆ ಅಲ್ಲದೆ ಮಧುಮೇಹವನ್ನು ನಿಯಂತ್ರಣ ಮಾಡುತ್ತೆ ಮಹಿಳೆಯರಿಗೆ ಮುಖ್ಯವಾಗಿ ಕಾಡುವ ಋತು ಸಮಸ್ಯೆಗೆ ಇದು ಸೂಕ್ತ ಮನೆ ಮದ್ದು ಇನ್ನು ದೇಹದ ಅಧಿಕ ರಕ್ತದೊತ್ತಡ ಮೂಗು ಮತ್ತು ಬಾಯಿಯಲ್ಲಿ ರಕ್ತ ಸ್ರಾವ ಆಗುವುದು
ಬಾಯಿಯಲ್ಲಿ ಇರುವ ಹುಣ್ಣು
ಯಾವುದೇ ರೀತಿಯ ಹುಳುಗಳ ಕಡಿತ ಡಿಪ್ರೆಶನ್ ಆತಂಕ ಮತ್ತು ಗಾಯಗಳು ಹುಣ್ಣುಗಳು ಹೀಗೆ ಅನೇಕ ಆರೋಗ್ಯಕರ ಸಮಸ್ಯೆಗಳಿಗೆ ಇದು ಸೂಕ್ತ ಮನೆ ಮದ್ದು. ಹಾಗಾಗಿ ನೀವು ನಿತ್ಯವೂ ಕೆಂಪು ಕಾಶಿ ಕಣಗಿಲೆ ಹೂವನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Design a site like this with WordPress.com
Get started