ಇಂದಿನ ಔಷಧೀಯ ಸಸ್ಯ ಪರಿಚಯ : ನೆಗ್ಗಿಲುಮುಳ್ಳಿನ ಗಿಡ

ತ್ರಿಕಂಟಕ ಗೊಕ್ಷುರ, ಸಣ್ಣ ನೆಗ್ಗಿಲು, ಆನೆ ನೆಗ್ಗಿಲು, ನೆರಂಜಿಮುಳ್ಳು, ಶದಂಷ್ಠ, ಸ್ವಾದಕಂಟಕ, ಗೋಕಂಟಕ, ಕಂಠತಿಕ್ತಕ, ಪಲ್ಲೇರು ಮುಕ್ಕ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹೊಲ, ತೋಟಗಳ ಬದಿಗಳ ಮೇಲೆ, ಪಾಳು ಭೂಮಿ, ಬೀಳು ಭೂಮಿ, ಹಾದಿಬೀದಿಗಳ ಪಕ್ಕ ಕಳೆಯಂತೆ, ನೆಲದ ಮೇಲೆ ಹಬ್ಬಿ ಬೆಳೆಯುತ್ತೆ.ಸಣ್ಣ ನೆಗ್ಗಿಳಿನ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತೆ, ಆನೆ ನೆಗ್ಗಿಲು ದೊಡ್ಡದಾದ ಕಾಯಿ, ಉದ್ದ ಹಾಗು ಕಠೋರ ಮುಳ್ಳಿನಿಂದ ಕೂಡಿದ್ದು, ಎಲೆಗಳು ಅಗಲವಾಗಿದ್ದು, ಪಾಲಕ್ ಸೊಪ್ಪಿನ ಎಲೆಗಳನ್ನು ಹೋಲುತ್ತೆ.ಸಣ್ಣ ನೆಗ್ಗಿಲಿನ ಹೂವುಗಳು ಹಳದಿ ಬಣ್ಣದಿಂದ ಕೂಡಿರುತ್ತವೆ.ಎರಡೂ ಗಿಡದ ಕಾಯಿಗಳು ವಕ್ರಾಕಾರವಾಗಿ, ಚೂಪಾದ ಮುಳ್ಳುಗಳಿಂದ ಕೂಡಿದ್ದು, ಕಾಯಿ ಬಲಿತ ಮೇಲೆ ಮುಳ್ಳುಗಳು ಕಠಿಣವಾಗಿರುತ್ತವೆ. ನೆಗ್ಗಿಲು ಗಿಡವು ಏಕವಾರ್ಷಿಕ ಸಸ್ಯವಾಗಿದ್ದು, ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಸಸ್ಯವಾಗಿದ್ದು, ಜನರ ದೃಷ್ಟಿಯಲ್ಲಿ ಸಾಧಾರಣ ಮುಳ್ಳಿನ ಗಿಡವಾಗಿರುವ ನೆಗ್ಗಿಲು ಗಿಡವನ್ನು ಆಯುರ್ವೇದ ಪಂಡಿತರು, ವೈದ್ಯರು, ಪೂರ್ವಿಕರು, ಇದನ್ನು ಅಪಾರ ಶಕ್ತಿಯುಳ್ಳ ದಿವೌಷಧ ಸಸ್ಯವೆಂದು ಪರಿಗಣಿಸಿದ್ದಾರೆ.ಮೂತ್ರಪಿಂಡ ರೋಗಿಗಳಿಗೆ ಇದನ್ನು ಸಂಜೀವಿನಿ ಎಂದು ಪರಿಗಣಿಸಿದ್ದಾರೆ. ಆನೆ ನೆಗ್ಗಿಲು, ಸಣ್ಣ ನೆಗ್ಗಿಲು ಎಂಬ ಎರಡು ಪ್ರಭೇದಗಳಿದ್ದು, ಎರಡೂ ಔಷಧೀಯ ಗುಣಗಳಿಂದ ಕೂಡಿದ್ದು, ಪುರಾತನ ಕಾಲದಿಂದಲೂ, ಆಯುರ್ವೇದ, ಸಿದ್ಧ, ಹಿಂದೂ ಯುನಾನಿ, ಪಾರಂಪರಿಕ ಔಷಧಿ ಪದ್ಧತಿಯಲ್ಲಿ ಬಳಸುತ್ತಾ ಬಂದಿದ್ದಾರೆ. ಯಾವುದಕ್ಕೂ ಹೆದರದ ಆನೆ, ನೆಗ್ಗಿಲು ಮುಳ್ಳಿಗೆ ಹೆದರುತ್ತೆ ಎಂದು ಬಲ್ಲವರು ಹೇಳುತ್ತಾರೆ. ಕಿಡ್ನಿಯಲ್ಲಿನ ಕಲ್ಲು ಕರಗಿಸಲು, ಹೃದ್ರೋಗಕ್ಕೆ ದಿವೌಷಧ ಹಾಗು ವೀರ್ಯವರ್ಧಕವು ಹೌದು.ಮೂತ್ರಾಶಯ, ಮೂತ್ರಪಿಂಡ ಶುದ್ಧಿ ಮಾಡುವ ಗುಣವುಳ್ಳುದಾಗಿದ್ದು, ಎಲ್ಲಾ ರೀತಿಯ ಮೂತ್ರಪಿಂಡ, ಮೂತ್ರ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಸಣ್ಣನೆಗ್ಗಿಲು ಗಿಡದ ಪಂಚಾಂಗ ಕಷಾಯವನ್ನು, ದಿನವು ಬೆಳಿಗ್ಗೆ-ಸಂಜೆ 50ml ನಂತೆ ಕ್ರಮಬದ್ಧವಾಗಿ ಸೇವಿಸುತ್ತಿದ್ದರೆ, ಮೂತ್ರ ವಿಸರ್ಜನೆ ಹೆಚ್ಚಾಗಿ, ಮೂತ್ರಪಿಂಡದಲ್ಲಿನ ಕಲ್ಲು ಕರಗಿ, ಮೂತ್ರದಲ್ಲಿ ಹೊರ ಬರುವುದಲ್ಲದೆ, ಬಾವು, ನೋವು ಕಡಿಮೆಯಾಗುತ್ತದೆ. ಹಸಿ ಶುಂಠಿ ನೆಗ್ಗಿಲು ಮುಳ್ಳಿನಿಂದ ತಯಾರಿಸಿದ ಕಷಾಯ ಸೇವಿಸಿದರೆ ಮಂಡಿ ಹಾಗು ಕೀಲುಗಳಲ್ಲಿ ಉಂಟಾಗುವ ಬಾವು, ನೋವು ಶೀಘ್ರ ಶಮನವಾಗುತ್ತೆ. ನೆಗ್ಗಿಲು ಗಿಡದ ಪಂಚಾಂಗ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ನಿಯಮಿತವಾಗಿ ಸೇವಿಸುತ್ತಿದ್ದರೆ ಲೈಂಗಿಕ ಸಮಸ್ಯೆಗಳು ನಿವಾರಣೆಯಾಗಿ, ಕಾಮ ವಾಂಛೆ (ಸಾಮರ್ಥ್ಯ) ಹೆಚ್ಚಿಸುತ್ತೆ. ಜೊತೆಗೆ ಶರೀರಿಕ ಬಲವನ್ನು ಹೆಚ್ಚಿಸುತ್ತೆ.ಲೈಂಗಿಕ ಅಂಗಗಳನ್ನು ಉತ್ತೇಜಿಸುತ್ತೆ. ಜನನೇಂದ್ರಿಯವನ್ನು ಶಕ್ತಿವಂತಗೆ ಮಾಡುತ್ತೆ.ದೇಹದ ನರಮಂಡಲಕ್ಕೆ ಶಕ್ತಿ ತುಂಬುತ್ತೆ.ಅಂತರಗತ ನೋವನ್ನು ನಿವಾರಣೆ ಮಾಡುತ್ತೆ. ಇದು ವಯಾಗ್ರಗಿಂತ ಪರಿಣಾಮಕಾರಿ ಔಷಧ ಹಾಗು ಇದರ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಚಿಟಿಕೆ ನೆಗ್ಗಿಲುಕಾಯಿ ಚೂರ್ಣ, ಚಿಟಿಕೆ ಕಾಮಕಸ್ತೂರಿ ಬೀಜದ ಚೂರ್ಣ, 1 ಚಮಚ ಅಶ್ವಗಂಧ ಚೂರ್ಣ ಒಂದು ಲೋಟ ಹಸುವಿನ ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ, ಸೋಸಿಕೊಂಡು, ಮಲಗುವ ಸಮಯದಲ್ಲಿ ಕುಡಿದರೆ ಗಂಡಸರಲ್ಲಿ ಲೈಂಗಿಕ ಬಲಹೀನತೆ ದೂರವಾಗುತ್ತೆ (15-20 ದಿನ ಸೇವಿಸಬೇಕು) ನೆಗ್ಗಿಲು ಗಿಡದ ಕಾಂಡದಲ್ಲಿನ ತೊಗಟೆಯಿಂದ ಕಷಾಯ ಮಾಡಿಕೊಂಡು 30ml ನಂತೆ ಬೆಳಿಗ್ಗೆ ಸಂಜೆ ಕುಡಿದರೆ, ಪಿತ್ತದಿಂದ ಬರುವ ತಲೆನೋವು ಶಮನವಾಗುತ್ತೆ. ಸಣ್ಣ ನೆಗ್ಗಿಲು ಗಿಡದ ಹೂವುಗಳನ್ನು ನೆರಳಲ್ಲಿ ಒಣಗಿಸಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, 3-4 ಒಣ ದ್ರಾಕ್ಷಿಯ ಜೊತೆಗೆ 2-3 ಗ್ರಾಂ ಚೂರ್ಣವನ್ನು ಕಲಸಿ ದಿನಕ್ಕೆ ಎರಡು ಬಾರಿ ಕ್ರಮಬದ್ಧವಾಗಿ 10-15 ದಿನಗಳ ಕಾಲ ಸೇವಿಸಿದರೆ, ದೇಹದಲ್ಲಿನ ಆಯಾಸ ತಗ್ಗುತ್ತೆ. ಸಣ್ಣ ನೆಗ್ಗಿಲು ಸಮೂಲ ಸಹಿತ ತಂದು ಚೆನ್ನಾಗಿ ಜಜ್ಜಿ, ರಸವನ್ನು ತೆಗೆದು,1 ಲೋಟ ಮೇಕೆ ಹಾಲಿನಲ್ಲಿ ಕಲಸಿಟ್ಟು, ಮೂರು ಗಂಟೆಯ ನಂತರ ಅದಕ್ಕೆ ಸ್ವಲ್ಪ ನೀರು ಕಲಸಿ, ಬಟ್ಟೆಯಲ್ಲಿ ಸೋಸಿಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗಿ, ನಪುಂಷಕತ್ವ ದೂರವಾಗುತ್ತೆ. 2 ಲೋಟ ನೀರಿಗೆ 2 ಚಮಚ ನೆಗ್ಗಿಲು ಸಮೂಲದ ರಸವನ್ನು ಕಲಸಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, 1ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು 50ml ಗೆ 1 ಚಮಚ ಕೆಂಪು ಕಲ್ಲುಸಕ್ಕರೆ ಕಲಸಿ ಬೆಳಿಗ್ಗೆ ಸಂಜೆ ಕುಡಿದರೆ, ಆಯಾಸ, ಹೃದ್ರೋಗ ನಿವಾರಣೆಯಾಗುತ್ತೆ. ಕಲ್ಲುಸಕ್ಕರೆ ಕಲಸದೆ ಹಾಗೆ ಕುಡಿದರೆ ಮಧುಮೇಹ ಅತೋಟಿಗೆ ಬರುತ್ತೆ.ಹೃದಯದಲ್ಲಿ ನೀರು ಸೇರುವುದು, ಕೊಬ್ಬು ಶೇಖರಣೆ, ಇನ್ನು ಮುಂತಾದ ಸಮಸ್ಯೆಗಳು ದೂರವಾಗಿ ಹೃದಯಕ್ಕೆ ಶಕ್ತಿ ಬರುತ್ತೆ. ಒಣ ಶುಂಠಿ ಹಾಗು ನೆಗ್ಗಿಲು ಕಾಯಿಗಳನ್ನು ಬೇರೆಬೇರೆ ಕುಟ್ಟಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ಎರಡೂ ಚೂರ್ಣಗಳನ್ನು 20 ಗ್ರಾಂ ನಂತೆಕಲಸಿಟ್ಟುಕೊಂಡು, 200ml ನೀರಿಗೆ 1 ಚಮಚ ಚೂರ್ಣ ಕಲಸಿ, ಒಲೆಯಮೇಲಿಟ್ಟು, ಮಂದದ ಉರಿಯಲ್ಲಿ ಚೆನ್ನಾಗಿ ಕುದಿಸಿ, 50ml ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದರೆ, ಮೂತ್ರತಡೆ, ಮೂತ್ರಪಿಂಡದ ನೋವು, ಬಾವು, ಮೂತ್ರಪಿಂಡದಲ್ಲಿನ ಕಲ್ಲು ಕರಗಿ, ಮೂತ್ರ ಸರಾಗವಾಗಿ ಹೋಗುತ್ತೆ.ಇದಕ್ಕೆಲ್ಲ ರಾಮಬಾಣದಂತೆ ಕೆಲಸ ಮಾಡುತ್ತೆ. ಎರಡು ಲೋಟ ನೀರಿಗೆ 1 ಚಮಚ ನೆಗ್ಗಿಲುಕಾಯಿ ಚೂರ್ಣ, 1 ಚಮಚ ಧನಿಯಾ ಚೂರ್ಣ ಹಾಕಿ, ಒಲೆಯ ಮೇಲಿಟ್ಟು, ಚೆನ್ನಾಗಿ ಕುದಿಸಿ 50ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 1 ಚಮಚ ಕಲ್ಲುಸಕ್ಕರೆ ಅಥವಾ ಜೇನುತುಪ್ಪ ಕಲಸಿ ಸೇವಿಸಿದರೆ, ಹೃದ್ರೋಗ, ಅಧಿಕ ರಕ್ತದೊತ್ತಡ, ಪಿತ್ತ, ತಲೆನೋವು ನಿವಾರಣೆಯಾಗುತ್ತೆ.

ನೆಗ್ಗಿಲಿನ ಉಪಯೋಗಗಳು ಅಪಾರವಾದದ್ದು. ಗೆಳೆಯರೆ ವಂದನೆಗಳು ಪಾರ್ಥಸಾರಥಿ ಕ್ಷತ್ರಿಯ

ಜುಲೈ 09,2020; ಗುರುವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ಥಿ,
ಬೆಳಗ್ಗೆ 10:12 ನಂತರ ಪಂಚಮಿ ತಿಥಿ,
ಗುರುವಾರ, ಶತಭಿಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40

ಮೇಷ

ಆತ್ಮೀಯತೆಯಿಂದಾಗಿ ಶುಭ ಸಂದರ್ಭಗಳು ನಿರ್ಮಾಣವಾಗಲಿವೆ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು.

ವೃಷಭ

ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು.

ಮಿಥುನ

ಆತ್ಮಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳು ನಿವಾರಣೆಯಾಗಲಿವೆ. ನಿಷ್ಕಲ್ಮಷ ಭಾವನೆಯಿಂದ ಸಮಾಧಾನ. ಸ್ನೇಹಿತರಿಂದ ಪ್ರಶಂಸೆ, ಸಂಗಾತಿಯಿಂದ ಉತ್ತಮ ಸಹಕಾರ.

ಕಟಕ

ಬೇರೆಯವರ ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕಾದೀತು. ಅಡ್ಡಿ ಆತಂಕಗಳಿಲ್ಲದ ಜೀವನದಿಂದಾಗಿ ಉಲ್ಲಾಸ ಮೂಡುವುದು. ಸ್ನೇಹಿತರಿಂದಾಗಿ ಸಂತೋಷದ ವಾತಾವರಣ.

ಸಿಂಹ

ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು ದೊರೆಯಲಿವೆ. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.

ಕನ್ಯಾ

ಭಿನ್ನಾಭಿಪ್ರಾಯದಿಂದಾಗಿ ನಿಂತುಹೋದ ಕಾರ್ಯಗಳು ಒಮ್ಮತದಿಂದ ಸಾಧಿಸಲ್ಪಡುವವು. ಮದುವೆ ಮುಂತಾದ ಮಂಗಲಕಾರ್ಯಗಳ ನಿಶ್ಚಯ ಸಾಧ್ಯತೆ. ಕೆಲಸ–ಕಾರ್ಯಗಳಲ್ಲಿ ಹುಮ್ಮಸ್ಸು.

ತುಲಾ

ನಿಮ್ಮ ನಿಲುವಿನಲ್ಲಿ ಆಕಸ್ಮಿಕ ತಿರುವು ಕಂಡು ಬರುವುದು. ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಿ ನಿರಾಳ ಭಾವ. ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಕಾಣುವಿರಿ.

ವೃಶ್ಚಿಕ

ಕೆಲಸ–ಕಾರ್ಯಗಳಲ್ಲಿ ಉತ್ತಮ ಪ್ರಗತಿ. ನಿಕಟವರ್ತಿಗಳಿಂದ ಅನುಕೂಲಕರ ಸಹಾಯ. ಆತ್ಮಸ್ಥೈರ್ಯ ಮೂಡುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಗಣ್ಯರ ಭೇಟಿ ಸಂಭವ.

ಧನು

ಕುಟುಂಬದಲ್ಲಿ ಹೊಂದಾಣಿಕೆಯಿಂದ ಬೆಂಬಲ ಗಳಿಸುವಿರಿ. ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭದ ನಿರೀಕ್ಷೆ. ಸಂಘರ್ಷದಿಂದ ದೂರವಿರಲಿದ್ದೀರಿ. ಗೆಳೆಯರಿಂದ ನೆಮ್ಮದಿ.

ಮಕರ

ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪ್ರಯಾಣದ ಸಾಧ್ಯತೆ ಕಂಡುಬರುವುದು. ಆಶ್ಚರ್ಯಕರ ರೀತಿಯಲ್ಲಿ ಕೆಲಸ–ಕಾರ್ಯಗಳು ಕೂಡಿಬರುವವು.

ಕುಂಭ

ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಚ್ಚರಿಯ ಸುದ್ದಿಯನ್ನು ಕೇಳುವ ಸಾಧ್ಯತೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ. ಸಾಮಾಜಿಕ ಮನ್ನಣೆ ನಿಮ್ಮದಾಗಲಿದೆ.

ಮೀನ

ಸ್ನೇಹಿತರೊಂದಿಗೆ ವಿಷಯಗಳ ವಿನಿಮಯದಿಂದಾಗಿ ವಾತಾವರಣ ತಿಳಿಗೊಂಡು ಮನಸ್ಸಿಗೆ ನೆಮ್ಮದಿ. ವಿಶೇಷ ಭೋಜನ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯಿಂದ ಸಹಕಾರ.

ಇಂದಿನ ಔಷಧೀಯ ಸಸ್ಯ ಪರಿಚಯ: ಅಜವಾನ

ಯವಾನಿ (ಓಮು ಕಾಳು) ಬ್ರಹ್ಮದರ್ಭ ಉಗ್ರಬಂಧ ಅಗ್ನಿವರ್ಧಕ ಅಜಮೋದಾ ಅಜಮೂಲ ತೀವ್ರಗಂಧ ವಾತಾರಿ ಶೂಲಹಂತ್ರಿ ವಾಮು ಓಮಮು ಓಮಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಭಾರತೀಯ ಆಯುರ್ವೇದ

ಯುನಾನಿ ಹಾಗೂ ನಾಟಿ ವೈದ್ಯ ಪದ್ಧತಿಯಲ್ಲಿ ಓಮುಕಾಳು ಔಷಧೀಯನ್ನಾಗಿ,ಪುರಾತನ ಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ.
ಉತ್ತರ ಭಾರತದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಯಥೇಚ್ಛವಾಗಿ ಬೆಳೆಯುತ್ತಾರೆ.1ರಿಂದ 2 ಅಡಿ ಬೆಳೆಯುವ ಇದು ಫಲವತ್ತಾದ ಭೂಮಿಯಲ್ಲಿ 3 ಅಡಿವರಿಗೂ ಬೆಳೆಯುತ್ತೆ.
50 ಗ್ರಾಂ ಒಮುಕಾಳನ್ನು ಹುರಿದು ಚೂರ್ಣ ಮಾಡಿಕೊಂಡು,100 ಗ್ರಾಂ ಬೆಲ್ಲವನ್ನು ತೆಗೆದುಕೊಂಡು, ಎರಡನ್ನು ಚೆನ್ನಾಗಿ ಮಿಶ್ರಣಮಾಡಿ, ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು,ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸಂಜೆ ಊಟಕ್ಕೆ ಮುಂಚೆ 1/2 ಚಮಚ ಬಾಯಲ್ಲಿ ಹಾಕಿಕೊಂಡು ಚಪ್ಪರಿಸಿ ನುಂಗಿದರೆ, ದದ್ದುಗಳು(ಪೈತಕ) ವಾಸಿಯಾಗುತ್ತೆ.ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.
ಓಮುಕಾಳು 30 ಗ್ರಾಂ(ಹುರಿದು ಚೂರ್ಣ ಮಾಡಿಕೊಳ್ಳಬೇಕು)ಅದಕ್ಕೆ 30 ಗ್ರಾಂ ಸೈoಧವ ಲವಣ ಸೇರಿಸಿ, ಎರಡನ್ನು ಚೆನ್ನಾಗಿ ಕಲಸಿಟ್ಟುಕೊಂಡು ಮದ್ಯಾನ, ರಾತ್ರಿ ಊಟಕ್ಕೆ ಮುಂಚೆ 1/2 ಚಮಚ ಚಪ್ಪರಸಿ ತಿಂದು ಊಟ ಮಾಡಿದರೆ ಹಸಿವು ಹೆಚ್ಚಾಗಿ, ದೇಹ ಆರೋಗ್ಯ ಸುಧಾರಿಸುತ್ತೆ.
ಅಜೀರ್ಣವಾದಾಗ 1/4 ಚಮಚ ಓಮುಕಾಳು ಚೂರ್ಣ 3 ಕಾಳು ಮೆಣಸು ಒಂದು ಕಲ್ಲುಪ್ಪು ಬಾಯಲ್ಲಿ ಹಾಕಿಕೊಂಡು ಜಗೆದು ನುಂಗಿ 1/2 ಲೋಟ ಬಿಸಿನೀರು ಕುಡಿದರೆ ಎಂತಹ ಅಜೀರ್ಣ ಸಮಸ್ಯೆ ಇದ್ದರೂ ಗುಣವಾಗುತ್ತೆ.
1/2 ಚಮಚ ಓಮುಕಾಳು ಚೂರ್ಣ(ಹುರಿದದ್ದು) 1/2 ಚಮಚ ಅರಸಿಣ ಚೂರ್ಣವನ್ನು ಸ್ವಲ್ಪ ನೀರು ಹಾಕಿ ಕಲಸಿ ಮೊಳಕೆಗೆ (ಫೈಲ್ಸ್) ದಿನಕ್ಕೆ ಎರಡು ಬಾರಿ ಲೇಪಿಸುತ್ತಾ ಬಂದಲ್ಲಿ ಬೇಗ ಗುಣವಾಗುತ್ತೆ.
ಯುವಕ-ಯುವತಿಯರಲ್ಲಿ ಮೊಡವೆ ಸಮಸ್ಯೆ ವಿಪರೀತ.ಹುರಿದ ಓಮುಕಾಳು ಚೂರ್ಣ 1/2 ಚಮಚಕ್ಕೆ 1/2 ಚಮಚ ಮೊಸರು ಹಾಕಿ ಚೆನ್ನಾಗಿ ಪೇಸ್ಟ್ ನಂತೆ ಕಲಸಿ, ರಾತ್ರಿ ಮಲಗುವ ಮುನ್ನ, ಮುಖವನ್ನು ಉಗರು ಬೆಚ್ಚಗಿನ ನೀರಲ್ಲಿ ತೊಳೆದು,ತಯಾರಿಸಿಕೊಂಡ ಪೇಸ್ಟ್ ನ್ನು ಮೊಡವೆಗಳಿಗೆ ಲೇಪನ ಮಾಡಿ, ಬೆಳಿಗ್ಗೆ(ಸೋಪು ಉಪಯೋಗಿಸದೆ)ಶುದ್ಧವಾದ ಕಡಲೆ ಹಿಟ್ಟಿನಿಂದ ಮುಖ ತೊಳೆದುಕೊಳ್ಳಬೇಕು ಮೊಡವೆಗಳು ಶೀಘ್ರ ವಾಸಿಯಾಗುತ್ತೆ.
ಓಮುಕಾಳು ಚೂರ್ಣ 1/2 ಚಮಚ ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಅತಿಸಾರ ಭೇದಿ ನಿಲ್ಲುತ್ತೆ.ಕಫ ಹೊಟ್ಟೆನೋವು ಅಜೀರ್ಣ ಸಮಸ್ಯೆಗಳು ದೂರವಾಗುತೆ.
ಓಮುಕಾಳು ಕಷಾಯವನ್ನು ಸೇವಿಸುತ್ತಾ ಬಂದರೆ ಹೃದ್ರೋಗ ವಿಷಾದೋಷ ಮೂತ್ರದಲ್ಲಿ ಹುರಿ ಶಮನವಾಗುತ್ತೆ.
ಮಕ್ಕಳ ಪಾಲಿಗಂತೂ ಸಂಜೀವಿನಿ ಈ ಓಮುಕಾಳು.ಪ್ರತಿಯೊಂದು ಮನೆಯಲ್ಲೂ ಇರಲೇ ಬೇಕಾದ ವಸ್ತು ಓಮುಕಾಳು.ಹೆಣ್ಣು ತಾಯಿಯಾದ ಮೇಲೆ ತನ್ನ ಮಗುವಿನ ಆರೋಗ್ಯ ಕಾಪಾಡಿಕೊಳ್ಳಲು ಬೇಕೇಬೇಕು ಓಮುಕಾಳು….! ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ವಂದನೆಗಳು

ಜುಲೈ 08,2020 ; ಬುಧವಾರ: ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬುಧವಾರ, ಧನಿಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16

ಮೇಷ

ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಯಶಸ್ಸು. ಸಹೋದರರಿಂದ ಸಹಾಯ, ಸಹಕಾರಗಳು ದೊರೆತು ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗುವಿರಿ. ಸಾಲ ಮರುಪಾವತಿಯಿಂದ ನೆಮ್ಮದಿ.

ವೃಷಭ

ಗೃಹನಿರ್ಮಾಣ ಕಾರ್ಯ ವಿಳಂಬವಾಗುವ ಸಾಧ್ಯತೆ. ಮಿತ್ರರಿಂದ ಆರ್ಥಿಕ ಸಹಾಯ ದೊರೆಯುವ ಲಕ್ಷಣಗಳು ಕಂಡು ಬರುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಸಂಭವ.

ಮಿಥುನ

ವೃತ್ತಿ ಸಮಸ್ಯೆಗಳಿಂದ ಮುಕ್ತರಾಗುವಿರಿ. ಪ್ರಯತ್ನಿಸುತ್ತಿರುವ ಕಾರ್ಯಗಳಿಂದ ಶುಭಫಲ ದೊರೆಯಲಿದೆ. ವಿಶೇಷ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಹೊಸ ವ್ಯಾಪಾರದಲ್ಲಿ ಯಶಸ್ಸು.

ಕಟಕ

ಬಂಧುಗಳಲ್ಲಿನ ಭಿನ್ನಾಭಿಪ್ರಾಯ ಪರಿಹಾರವಾಗುವ ಸಾಧ್ಯತೆ. ವಿವೇಚನೆಯಿಂದ ಕಷ್ಟಗಳು ಪರಿಹಾರವಾಗಲಿವೆ. ಸಾಮಾಜಿಕ ಗೌರವಾದರಗಳು ಲಭಿಸಲಿವೆ. ವಸ್ತ್ರಾಭರಣಗಳನ್ನು ಖರೀದಿಸಲಿದ್ದೀರಿ.

ಸಿಂಹ

ಹೊಸ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ರಾಜಕೀಯದಲ್ಲಿರುವವರಿಗೆ ಯಶಸ್ಸು. ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗಿ ಸಂತಸ. ನ್ಯಾಯಾಲಯದಲ್ಲಿನ ಕಟ್ಟಳೆಗಳಲ್ಲಿ ಯಶಸ್ಸನ್ನು ಗಳಿಸುವ ಸಾಧ್ಯತೆ.

ಕನ್ಯಾ

ದೈನಂದಿನ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿಬರಲಿದೆ. ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ವಿವಿಧ ಮೂಲಗಳಿಂದ ಹಣಕಾಸಿನ ಅನುಕೂಲವಾಗಲಿದೆ.

ತುಲಾ

ವ್ಯವಹಾರ ಕುಶಲತೆಯಿಂದ ಧನ ಲಾಭವಾಗಲಿದೆ. ಯಂತ್ರೋಪಕರಣಗಳ ಖರೀದಿಗಾಗಿ ಹೆಚ್ಚಿನ ವಿನಿಯೋಗ ಮಾಡಬೇಕಾದೀತು. ಆತ್ಮೀಯ ವ್ಯಕ್ತಿಯೊಬ್ಬರ ಭೇಟಿಯ ಸಾಧ್ಯತೆ.

ವೃಶ್ಚಿಕ

ವ್ಯಾಪಾರ, ವ್ಯಹಾರದಲ್ಲಿ ಹಿರಿಯರ ಸಹಕಾರದಿಂದಾಗಿ ಯಶಸ್ಸು. ಸಾಮಾಜಿಕ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಬಹುಕಾಲದ ಆಶೋತ್ತರಗಳು ಈಡೇರಿ ಮಾನಸಿಕ ನೆಮ್ಮದಿಯನ್ನು ನೀಡಲಿವೆ.

ಧನು

ನಿಮ್ಮ ಆಸ್ತಿ ವಿವಾದಗಳು ಪರಿಹಾರವಾಗಲಿವೆ. ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದು. ಮಾತಿನಿಂದ ಗೌರವಾದರಗಳನ್ನು ಪಡೆಯಲಿದ್ದೀರಿ. ಬರವಣಿಗೆಯಿಂದ ಕೀರ್ತಿಯನ್ನು ಪಡೆಯುವಿರಿ.

ಮಕರ

ಹಿರಿಯರ ಮಾತುಗಳನ್ನು ತಿರಸ್ಕರಿಸದೆ ಗೌರವಿಸುವುದರಿಂದ ಉತ್ತಮ ಫಲ ದೊರೆಯಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ನಿರೀಕ್ಷಿತ ವಲಯಗಳಿಂದ ಧನಾಗಮನ ಆಸ್ತಿಯ ಉನ್ನತೀಕರಣವಾಗಲಿದೆ.

ಕುಂಭ

ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯನ್ನು ಕಂಡುಕೊಳ್ಳುವಿರಿ. ಆಧ್ಯಾತ್ಮಿಕ ವಿಷಯದಲ್ಲಿ ಪ್ರಗತಿ. ಪಿತ್ರಾರ್ಜಿತ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆ ಕಂಡುಬರುತ್ತಿದೆ. ಸಂಸಾರದಲ್ಲಿ ನೆಮ್ಮದಿ ಮೂಡಿಬರಲಿದೆ.

ಮೀನ

ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಗೆಳೆಯರ ಸಕಾಲಿಕ ನೆರವಿನಿಂದಾಗಿ ಎದುರಾಗಲಿದ್ದ ನಷ್ಟದಿಂದ ಪಾರಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ.

ಇಂದಿನ ಔಷಧೀಯ ಸಸ್ಯದ ಪರಿಚಯ: ಮಧುನಾಶಿನಿ

ಮೇಷಶೃಂಗೀ (ಮಧುನಾಶಿನಿ) ಮಧುನಾಸಿನಿ,ಕಡಸಿಗೆ ಸೊಪ್ಪು, ಪೊಡಪತ್ರಿ, ಪುಟ್ಟಭದ್ರ, ಗುಣಮಾರ,ಅಜಶೃಂಗಿ, ಸರ್ಪದಾರಿಷ್ಟಿಕಂ, ಗ್ರಿಹಿದ್ರುಮ, ಸಿರಿಕುರುಂಜಾಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ,ಕೆರೆಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ಬೀಳು ಭೂಮಿ, ಹೊಲಗಳ ಬೇಲಿಗಳ ಮೇಲೆ ಗಿಡ ಮರಗಳಿಗೆ ಬಳ್ಳಿಯಂತೆ ಹಬ್ಬಿ ಬೆಳೆಯುತ್ತೆ. ಮಧುನಾಶಿನಿ ಗಿಡದ ಎಲೆ, ಹೂವು,ಕಾಯಿ, ಕಾಂಡ, ಬೇರು ಸಹಿತ ಎಲ್ಲವು ಔಷಧೀಯ ಗುಣಗಳಿಂದ ಕೂಡಿದೆ.ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಈ ಗಿಡವನ್ನು ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ.ಇದು ಮಧುಮೇಹ ಅತೋಟಿಗೆ ತರಲು ರಾಮಬಾಣದಂತೆ ಕೆಲಸ ಮಾಡುತ್ತೆ. ಮಧುನಾಶಿನಿಯ ಎರಡು ಮೂರು ಎಲೆಗಳನ್ನು ಜಗೆದು ಉಗಳಿ ನಂತರ ಬಾಯಿಗೆ ಬೆಲ್ಲ, ಸಕ್ಕರೆ, ಇತರೆ ಯಾವುದೇ ಸಿಹಿ ಪದಾರ್ಥಗಳನ್ನು ಹಾಕಿಕೊಂಡರೂ 1-2 ಗಂಟೆ ಸಿಹಿ ರುಚಿ ಗೊತ್ತಾಗುವುದಿಲ್ಲ.ಅಷ್ಟೊಂದು ಶಕ್ತಿ ದಾಯಕ ಈ ಸಸ್ಯ.ಇದನ್ನು "sweet destroyer" ಎಂತಲೂ ಕರೆಯುತ್ತಾರೆ. ಮಧುನಾಶಿನಿ ಎಲೆಗಳನ್ನು ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವಸ್ತ್ರಗಾಲಿತ ಚೂರ್ಣ ಮಾಡಿಟ್ಟುಕೊಂಡು,ಉಗರು ಬೆಚ್ಚಗಿನ 1/ 2 ಲೋಟ ನೀರಿಗೆ 1 ಚಮಚ ಚೂರ್ಣ ಕಲಸಿ, ಊಟಕ್ಕೆ 1/2 ಗಂಟೆ ಮೊದಲು ಕುಡಿಯಬೇಕು.ಬೆಳಿಗ್ಗೆ-ಸಂಜೆ ತೆಗೆದುಕೊಳ್ಳುತ್ತಾ ಬಂದರೆ ಮಧುಮೇಹ ಶೀಘ್ರ ನಿಯಂತ್ರಣಕ್ಕೆ ಬರುತ್ತೆ. ಮಧುನಾಶಿನಿ ಗಿಡದ ಎಲೆಗಳ ಚೂರ್ಣ 100 ಗ್ರಾಂ, ನೇರಳೆ ಬೀಜದ ಚೂರ್ಣ 100 ಗ್ರಾಂ,ಮೆಂತ್ಯದ ಕಾಳು ಚೂರ್ಣ 100 ಗ್ರಾಂ, ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಾಜಿನ ಸೀಸೆಯಲ್ಲಿ ಭದ್ರ ಪಡಿಸಿಟ್ಟುಕೊಂಡು, ಊಟಕ್ಕೆ 1/2 ಗಂಟೆ ಮೊದಲು 1/2 ರಿಂದ 1 ಚಮಚ ಚೂರ್ಣವನ್ನು 1/2 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಕುಡಿಯುತ್ತಿದ್ದರೆ, ಮಧುಮೇಹ ಅತೋಟಿಗೆ ಬರುತ್ತೆ. ಮಧುನಾಶಿನಿ ಎಲೆಗಳು ಅಥವಾ ಬೇರಿನಿಂದ ಕಷಾಯ ಮಾಡಿ ಸೇವಿಸಿದರು ಮಧುಮೇಹ ನಿಯಂತ್ರಣಕ್ಕೆ ಬರುತ್ತೆ. ಮಧುನಾಶಿನಿ ಎಲೆಗಳ ಅಥವಾ ಬೇರಿನ ಚೂರ್ಣ 1ಚಮಚಕ್ಕೆ 1 ಚಮಚ ಚಮಚ ಜೇನುತುಪ್ಪ ರಂಗಳಿಸಿ ನೆಕ್ಕಿದರೆ, ಜ್ವರ, ಕೆಮ್ಮು, ಕಫ ವಾಸಿಯಾಗುತ್ತೆ.(ಈಗೆ ಮೂರ್ನಾಲ್ಕು ದಿನ ಮಾಡಬೇಕು) ಇದರ ಮೂರ್ನಾಲ್ಕು ಎಲೆಗಳ ಜೊತೆಗೆ ನಾಲ್ಕು ಕಾಳು ಮೆಣಸು ಸೇರಿಸಿ ಜಗೆದು ತಿಂದರೆ,ಚೇಳು, ಜೇನು, ಕ್ರಿಮಿಗಳು ಕಚ್ಚಿದ ವಿಷ ನಿವಾರಣೆಯಾಗುತ್ತೆ. ಎಲೆಗಳಿಗೆ ಚಿಟಿಕೆ ಅರಸಿಣ ಸೇರಿಸಿ ಅರೆದು ಹುಣ್ಣು, ಬಾವು, ಗಾಯದ ಮೇಲೆ ಲೇಪನ ಮಾಡುವುದರಿಂದ

ನೋವು ಶಮನವಾಗಿ,ಬೇಗ ವಾಸಿಯಾಗುತ್ತೆ.
ಮಧುನಾಶಿನಿ ಎಲೆಗಳನ್ನು ಹೆಸರುಬೇಳೆ ಜೊತೆಗೆ ಬೇಯಿಸಿ ಅರೆದು ಅದಕ್ಕೆ ಹಸುವಿನ ತುಪ್ಪ ಸೇರಿಸಿ ತಿಂದರೆ ಬಾಯಿ, ಕರಳು, ಜಠರದ ಹುಣ್ಣು ಗುಣವಾಗುತ್ತೆ.ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ.
ಇದರ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ವಾಸಿಯಾಗಿ, ಬಾಯಿ ದುರ್ವಾಸನೆ ದೂರವಾಗುತ್ತೆ.
ಒಂದು ಚಮಚ ಮಧುನಾಶಿನಿ ಚೂರ್ಣಕ್ಕೆ ಒಂದು ಚಮಚ ಅತಿಮಧುರ ಚೂರ್ಣ ಚಿಟಿಕೆ ಅರಸಿಣ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರೆ ಜ್ವರ, ನೆಗಡಿ, ಕೆಮ್ಮು, ಗಂಟಲ ನೋವು ಗುಣವಾಗುತ್ತೆ.ಮಧುನಾಶನಿಯ ಔಷಧೀಯ ಗುಣಗಳು ಅಪಾರ ಗೆಳೆಯರೆ ವಂದನೆಗಳು

ಜುಲೈ 07, 2020; ಮಂಗಳವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:40 ರಿಂದ 5:16
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:52

ಮೇಷ

ಗೃಹನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ ವಿಶೇಷ ಲಾಭ. ಮಕ್ಕಳ ವಿದ್ಯಾಭ್ಯಾಸ ಹಾಗೂ ನಡವಳಿಕೆ ವಿಚಾರದಲ್ಲಿ ವಿಶೇಷ ಗಮನ ಅಗತ್ಯ. ನಿರುದ್ಯೋಗಿಗಳಿಗೆ ಹೊಸ ಆದಾಯ ಮೂಲಗಳು ಕಂಡುಬರಲಿವೆ.

ವೃಷಭ

ಉದ್ಯೋಗದ ವಿಷಯದಲ್ಲಿ ಒದಗಿ ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಕಾರ್ಯಸಾಧನೆಯಾಗಲಿದೆ. ಪತ್ರಕರ್ತರು, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಾಶಸ್ತ್ಯ.

ಮಿಥುನ

ಬಟ್ಟೆ ವ್ಯಾಪಾರದಲ್ಲಿ ಉತ್ತಮ ಲಾಭ. ಮಾನಸಿಕ ದುಗುಡಗಳು ಎದುರಾಗುವ ಸಾಧ್ಯತೆ. ಮನಶಾಂತಿಗಾಗಿ ದೇವಾಲಯ ಭೇಟಿ ನೀಡುವ ಸಾಧ್ಯತೆ. ವ್ಯವಹಾರ ಪರಿವರ್ತನೆಗೆ ಹೊಸ ಮಾರ್ಗ ಗೋಚರ.

ಕಟಕ

ಸಕ್ರಿಯ ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ ಹೊರಬೇಕಾದ ಅವಕಾಶ. ಜೀವನದಲ್ಲಿನ ನಿರುತ್ಸಾಹ ದೂರವಾಗುವುದಲ್ಲದೇ ಒದಗಿ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಿರಿ.

ಸಿಂಹ

ಬರಹಗಾರರು ಮತ್ತು ಮುದ್ರಣ ಕ್ಷೇತ್ರದಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳ. ಹೊಸ ವ್ಯಕ್ತಿಗಳ ಪರಿಚಯದೊಂದಿಗೆ ಹೊಸ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದೀರಿ. ಕೆಲಸಕಾರ್ಯಗಳಲ್ಲಿ ಯಶಸ್ಸು.

ಕನ್ಯಾ

ವಿವಾಹಾಕಾಂಕ್ಷಿಗಳಿಗೆ ಶುಭದಿನ. ನಿಮ್ಮ ಅನಿಸಿಕೆಗಳ ಬಗ್ಗೆ ಗಮನ ವಹಿಸಿದಲ್ಲಿ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಿದ್ದೀರಿ. ನಾರು, ಹತ್ತಿ, ಬಟ್ಟೆ ಮುಂತಾದ ವ್ಯಾಪಾರದಲ್ಲಿ ತೊಡಗಿದವರಿಗೆ ಉತ್ತಮ ಆದಾಯ.

ತುಲಾ

ಸಹೋದ್ಯೋಗಿಗಳೊಡನೆ ನೇರ ಮಾತುಕತೆಯಿಂದಾಗಿ ವೈಮನಸ್ಸು ದೂರವಾಗಿ ಮಾನಸಿಕ ನೆಮ್ಮದಿ. ಮಿತ್ರರ, ಹಿತೈಷಿಗಳ ಸಹಕಾರದಿಂದಾಗಿ ಆಸ್ತಿಗಳ ಬಗೆಗಿನ ವಿವಾದಗಳು ಭಿನ್ನಾಭಿಪ್ರಾಯಗಳು ಪರಿಹಾರವಾಗಲಿವೆ.

ವೃಶ್ಚಿಕ

ಬಂಧುಗಳ ಸಹಕಾರದಿಂದ ಎಲ್ಲಾ ಕೆಲಸಗಳು ಸರಾಗವಾಗಿ ಮುಂದುವರಿಯಲಿವೆ. ರಾಜಕೀಯ ವ್ಯಕ್ತಿಗಳ ಒತ್ತಡದ ತಂತ್ರಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ. ತೀರ್ಮಾನ ಕೈಗೊಳ್ಳುವಾಗ ಮತ್ತೊಮ್ಮೆ ಯೋಚಿಸಿ ನಿರ್ಣಯಿಸಿ.

ಧನು

ಕಾರ್ಯಕ್ಷೇತ್ರವನ್ನು ಬದಲಾಯಿಸುವ ಸಾಧ್ಯತೆ. ನೆರೆಹೊರೆಯವರೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗಿ ನೆಮ್ಮದಿ ಮೂಡಲಿದೆ. ಕೆಲಸ–ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ.

ಮಕರ

ನೌಕರಸ್ಥರು ಕಾರ್ಯದಕ್ಷತೆಯನ್ನು ಪ್ರದರ್ಶಿಸಿ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ದೈನಂದಿನ ಕೆಲಸಗಳಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ.

ಕುಂಭ

ಗೃಹ ನಿರ್ಮಾಣದ ವಿಚಾರದಲ್ಲಿ ಚಿಂತನೆ ನಡೆಸಲಿದ್ದೀರಿ. ಗೃಹಾಲಂಕಾರ ವಸ್ತುಗಳು ಮತ್ತು ಚಿನ್ನಾಭರಣಗಳ ಖರೀದಿ ಮಾಡುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು.

ಮೀನ

ಹೊಸ ಯೋಜನೆಯೊಂದಕ್ಕೆ ಕೈ ಹಾಕಲಿದ್ದೀರಿ. ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳುವುದು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಡಕು ಕಂಡು ಬರುವುದು.

ಇಂದಿನ ಔಷಧೀಯ ಸಸ್ಯದ ಪರಿಚಯ :ಜಂಬೂ ನೇರಳೆ

ಜಂಬೂ ನೇರಳೆ,ನಾಯಿ ನೇರಳೆ, ಅಲ್ಲ ನೇರಡು,
ಕಾಕಿನೇರಡು,ನಾವಲ್ಫಳಂ,ಜಂಬುಲ್,ಜಂಬುಲೊನ್,ಜಂಬೂ,ಬ್ಲಾಕ್ ಪ್ಲಮ್,ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅರಣ್ಯ,ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ನಾಯಿ ನೇರಳೆ ವೃಕ್ಷಗಳನ್ನು ರಸ್ತೆ ಪಕ್ಕಾ ಸಾಲು ಮಾರಗಳಂತೆ ಬೆಳೆಸಿರುತ್ತಾರೆ.ಹೊಲ ಗದ್ದೆಗಳ ಬದಿಗಳ ಮೇಲೆ
ರೈತರು ಬಹು ಉಪಯೋಗಿ ನೇರಳೆ ವೃಕ್ಷಗಳನ್ನು
ಬೆಳೆಸಿರುತ್ತಾರೆ.ಸುಮಾರು 20 ರಿಂದ 40 ಅಡಿವರಿಗೂ ನಾಯಿ ನೇರಳೆ ವೃಕ್ಷಗಳು ಬೆಳೆಯುತ್ತವೆ.ಇದರ ಎಲೆ ಹೂ ತೊಗಟೆ ಕಾಯಿ ಹಣ್ಣು,ಎಲ್ಲವೂ ಔಷಧಿಯಾಗಿ ಸಾವಿರಾರು ವರ್ಷಗಳಿಂದಲೂ ಪೂರ್ವಿಕರು ಆಯುರ್ವೇದ, ಹಿಂದೂ ಯುನಾನಿ,ಪಾರಂಪರಿಕ ವೈದ್ಯ ಪದ್ದತಿಯಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ.
ನೇರಳೆಯಲ್ಲಿ ಅನೇಕ ಪ್ರಭೇದಗಳಿದ್ದು,ಜಂಬೂ ನೇರಳೆ ಹಾಗೂ ನಾಯಿ ನೇರಳೆ ಹೆಚ್ಚಾಗಿ ಕಾಣತ್ತವೆ.
II ಗಜಾನನಂ ಭೂತ ಗಣಾದಿ ಸೇವಿತಂ ಕಪಿತ್ಥ ಜಂಬೂಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ II
ನೇರಳೆ ಹಣ್ಣಿನ ಆಕಾರ ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದಲ್ಲಿ,ನೋಡಲು ತುಂಬಾ ಆಕರ್ಷಕವಾಗಿ ಇರುತ್ತದೆ.ಇದರ ಬೆಲೆಯೂ ಬಹಳ ಕಡಿಮೆ,ಹಳ್ಳಿಗಳಲ್ಲಿ ಪುಕ್ಕಟೆಯಾಗಿಯೇ ದೊರೆಯುತ್ತದೆ. ಆದ್ದರಿಂದ ಬಡವರಿಗೆ ಸುಲಭವಾಗಿ ದೊರೆಯುತ್ತದೆ.ಇದರ ಪೌಷ್ಟಿಕತೆಯ ದೃಷ್ಟಿಯಿಂದ ಹಾಗೂ ಔಷಧೀಯ ಗುಣಗಳಿಂದ ಇದು ಅತ್ಯುತ್ತಮವಾದ ಹಣ್ಣು.ನೇರಳೆ ಹಣ್ಣು ಒಗರು,ಸಿಹಿ ಮಿಶ್ರಿತವಾಗಿದ್ದು, ಮಕ್ಕಳು,ಹಿರಿಯರೆನ್ನದೆ ಇಷ್ಟಪಟ್ಟು ತಿನ್ನುತ್ತಾರೆ.ಪಕ್ಷಿಗಳಿಗಂತೂ ಈ ಹಣ್ಣು ತುಂಬಾನೆ ಇಷ್ಟ,ಅಳಿಲು ಇನ್ನು ಮುಂತಾದ ಪ್ರಾಣಿಗಳು ಸಹ ಬಹಳ ಖುಷಿಯಿಂದ ಸೇವಿಸುತ್ತವೆ.ಭಾರತದಲ್ಲಿ ಸಾವಿರಾರು ವರ್ಷಗಳಿಂದ ಇದನ್ನು ತಿನ್ನುವುದಕ್ಕಾಗಿಯೂ,ಔಷಧಕ್ಕಾಗಿಯೂ ಉಪಯೋಗಿಸುತ್ತಾ ಬಂದಿದ್ದಾರೆ.ಆಂಗ್ಲ ಭಾಷೆಯಲ್ಲಿ ಇದನ್ನು ಭಾರತೀಯ ತೋಟಗಳ “ಗುಲಾಬಿಯ ಸೇಬು”(Rose apple) ಎನ್ನುತ್ತಾರೆ.ಇದು ಮಧುಮೇಹಕ್ಕೆ ದಿವ್ಯ ಔಷಧಿಯಂತೆ ಕೆಲಸ ಮಾಡುವುದರಿಂದ, ಬೇಡಿಕೆ ಹೆಚ್ಚಾಗಿದ್ದು,ರೈತರು ವಾಣಿಜ್ಯ ಬೆಳೆಯಾಗಿ ಬೆಳೆದು,ವ್ಯಾಪಾರಿಗಳು ಮಾರಾಟ ಮಾಡಿ,ಅತಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.
ಆಯುರ್ವೇದ,ಯುನಾನಿ,ಪಾರಂಪರಿಕ ಔಷಧಿ ತಯಾರಿಕೆಯಲ್ಲೇ ಅಲ್ಲದೆ, ವೈನ್,ವೆನಿಗರ್,ಜಾಮ್ ತಯಾರಿಕೆಯಲ್ಲೂ ಹೆಚ್ಚಾಗಿ ಬಳಸುತ್ತಿದ್ದಾರೆ.
ಇದರಲ್ಲಿ ಕ್ಯಾಲ್ಸಿಯಂ,ಪೊಟಾಸಿಯಂ,ಕಬ್ಬಿಣ,ಹಾಗೂ ವಿಟಮಿನ್ “C” ಸಮೃದ್ಧವಾಗಿದ್ದು,ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.ಮೂಳೆಗಳು ಬಲಿಷ್ಠಗೊಳ್ಳುತ್ತವೆ.ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಾಮಾಣ ಹೆಚ್ಚುತ್ತೆ.
ನೇರಳೆ ಹಣ್ಣು ಸೇವನೆಯಿಂದ ಮಧುಮೇಹ ಅತೋಟಿಗೆ ಬರುತ್ತೆ,ಇದು ಸಕ್ಕರೆ ಕಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತೆ.
ನೇರಳೆ ಹಣ್ಣಿನ ಬೀಜಗಳನ್ನು ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ಸಕ್ಕರೆ ಕಾಯಿಲೆ ಇದ್ದವರು,ದಿನವು 1 ಚಮಚ 1 ಲೋಟ ಬಿಸಿನೀರಿನಲ್ಲಿ
ಕಲಸಿ, ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು ಸೇವಿಸುತ್ತಿದ್ದರೆ ಅತೋಟಿಗೆ ಬರುತ್ತೆ.ಇದು ಮಧುಮೇಹಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ.
ಇದರಲ್ಲಿ ಪೊಟ್ಯಾಸಿಯಂ ಅಧಿಕ ಪ್ರಾಮಾಣದಲ್ಲಿ ಇರುವುದರಿಂದ,ಹೃದ್ರೋಗ ದೂರ ಮಾಡಿ,ಹೃದಯಕ್ಕೆ ಹೆಚ್ಚಿನ ಬಲ ನೀಡುತ್ತೆ.
ನೇರಳೆ ಹಣ್ಣು ಸೇವಿಸುವುದರಿಂದ, ಆಕಸ್ಮಿಕವಾಗಿ ಹೊಟ್ಟೆಗೆ ಸೇರಿರುವ ಕೂದಲು,ಉಗರು,ಲೋಹದ ಚೂರು,ಕಲ್ಲು ಕರಗಿ ಮಲ ಮೂತ್ರದಲ್ಲಿ ಹೊರಗಡೆ ಬರುತ್ತೆ.
ತೊಗಟೆಯ ಕಷಾಯ ಮಾಡಿ ಬಾಯಿ ಮುಕ್ಕಳಿಸುತ್ತಿದ್ದರೆ,ಬಾಯಿ ಹುಣ್ಣು, ಬಾಯಿ ದುರ್ವಾಸನೆ,ಹಲ್ಲು ನೋವು ದೂರವಾಗುತ್ತೆ.
ದ್ವಾರಕಾಯಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು ಬೆಳಿಗ್ಗೆ ಸಂಜೆ 5 ರಿಂದ 10 ಗ್ರಾಂ ಬಿಸಿ ನೀರಿನಲ್ಲಿ ಸೇವಿಸಿದರೆ,ಅತಿಸಾರ ಭೇದಿ,ಆಮಶಂಕೆ ಭೇದಿ ಗುಣವಾಗುತ್ತೆ.
ದಿನವು 2 ಚಮಚ ದಂತೆ ಬೆಳಿಗ್ಗೆ ಸಂಜೆ ಇದರ ಎಲೆಯ ರಸ ಸೇವಿಸುತ್ತಿದ್ದರೆ,ಪೈಲ್ಸ್ ವಾಸಿಯಾಗುತ್ತೆ.
ಚಿಗುರಿನ ಕಷಾಯ ಮಾಡಿ,ಮಜ್ಜಿಗೆಯಲ್ಲಿ ಬೆರಸಿ ಸೇವಿಸುತ್ತಾ ಬಂದರೆ,ಅಕಾಲ ಗರ್ಭಸ್ರಾವ ನಿಲ್ಲುತ್ತೆ, ರಕ್ತ ಪ್ರದರ,ಶ್ವೇತ ಪ್ರದರ ಸಹಾ ವಾಸಿಯಾಗುತ್ತೆ.
ಇದು ಬಹು ಉಪಯೋಗಿ ವೃಕ್ಷ.ಇದರ ಬಗ್ಗೆ ಸಂಪೂರ್ಣವಾಗಿ ತಿಳಿಸಲು ಸ್ಥಳ,ಕಾಲಾವಕಾಶದ ಕೊರತೆಯಿಂದ ಎಲ್ಲವನ್ನು ಇಲ್ಲಿ ಪರಿಚಯಿಸಲು ಆಗಲಿಲ್ಲ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು

ಜುಲೈ 06, 2020; ಸೋಮವಾರ :ಇಂದಿನ ರಾಶಿಭವಿಷ್ಯ

ಸೋಮವಾರ, ಜುಲೈ 06, 2020;
ಸ್ವಸ್ತಿಶ್ರೀ ಶಾರ್ವರಿ ನಾಮ ಸಂವತ್ಸರೇ, ಉತ್ತರಾಯನೇ, ಗ್ರೀಷ್ಮಾ ಋಥೌ, ಆಶಾಢ ಮಾಸೇ, ಕೃಷ್ಣ ಪಕ್ಷ, ಇಂದುವಾಸರೆ, ಪ್ರತಿಪಾದ ತಿಥೌ, ಉತ್ತರಾ ಆಷಾಢ ನಕ್ಷತ್ರ, ವೈಧೃತಿ ಯೋಗ, ಕೌಲವ / ತೈತುಲಾ ಕರಣ

ಮೇಷ

ನಿಮ್ಮ ಭಾಷಣವನ್ನು ನೀವು ಬಹಳ ಚಿಂತನಶೀಲವಾಗಿ ಬಳಸಬೇಕಾಗುತ್ತದೆ ಮತ್ತು ನೀವು ಸಮಯಕ್ಕೆ ಪೂರೈಸಲು ಸಾಧ್ಯವಿಲ್ಲದ ಯಾವುದೇ ಭರವಸೆಯನ್ನು ಮಾಡಬೇಡಿ.

ವೃಷಭ

ನಿಮ್ಮ ಹಣದ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿ . ಇದರಿಂದ ನೀವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಬಹುದು. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಪ್ರಬಲವಾಗಿದೆ.

ಮಿಥುನ

ಮಕ್ಕಳಿಗೆ ಈ ದಿನ ಹೆಚ್ಚು ಅನುಕೂಲಕರವಾಗಿಲ್ಲ ಆದ್ದರಿಂದ ಕಾಲ ಕಾಲಕ್ಕೆ ಅವರ ಬಗ್ಗೆ ಕಾಳಜಿ ವಹಿಸಿ ಮತ್ತು ಅವರನ್ನು ಪ್ರೋತ್ಸಾಹಿಸಿ. ಕೌಟುಂಬಿಕ ಜೀವನ ಸಾಕಷ್ಟು ಉತ್ತಮವಾಗಿರುತ್ತದೆ ಮತ್ತು ನೀವು ಗೌರವ ಮತ್ತು ಸಮೃದ್ಧಿಯನ್ನು ಪಡೆಯುವಿರಿ.

ಕರ್ಕಾಟಕ

ಆರ್ಥಿಕ ದೃಷ್ಟಿಕೋನದಿಂದ ಈ ದಿನ ಸ್ವಲ್ಪ ದುರ್ಬಲವಾಗಿ ಉಳಿಯಬಹುದು. ಆದ್ದರಿಂದ ನಿಮ್ಮ ಹಣದ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿ .

ಸಿಂಹ

ಇದರಿಂದ ನೀವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಬಹುದು. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಪ್ರಬಲವಾಗಿದೆ.

ಕನ್ಯಾ

ನೀವು ವೃತ್ತಿಜೀವನದ ದೃಷ್ಟಿಕೋನದಿಂದ , ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ದಿನದ ಉತ್ತರಾರ್ಧದಲ್ಲಿ, ಕೆಲಸದ ಪ್ರದೇಶದ ಪರಿಸ್ಥಿತಿಗಳು ನಿಮ್ಮ ಪರವಾಗಿ ಬರುತ್ತವೆ ಮತ್ತು ನೀವು ಪ್ರಗತಿ ಹೊಂದುತ್ತೀರಿ.

ತುಲಾ

ವಿದೇಶಿ ವಿಶ್ವವಿದ್ಯಾಲಯದಲ್ಲೂ ಪ್ರವೇಶ ಪಡೆಯಬಹುದು. ನಿಮ್ಮ ಆರ್ಥಿಕ ಭಾಗವು ಕೆಲವು ತುಂಬಿರುತ್ತದೆ ಮತ್ತು ಜಾಗರೂಕತೆಯಿಂದ ನಡೆಯಬೇಕು. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. 

ವೃಶ್ಚಿಕ

ಮಕ್ಕಳಿಗೆ ಸಮಯ ಸಾಮಾನ್ಯವಾಗಿರುತ್ತದೆ. ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ದಿನದ ಮೊದಲಾರ್ಧವು ಕುಟುಂಬ ಜೀವನಕ್ಕೆ ಅನುಕೂಲಕರವಾಗಿಲ್ಲ ಮತ್ತು ಪೋಷಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ,

ಧನು

ಪ್ರೀತಿಯ ಜೀವನಕ್ಕಾಗಿ ಈ ದಿನ ಅನುಕೂಲಕರವಾಗಲಿದೆ ಮತ್ತು ನಿಮ್ಮ ಪ್ರೀತಿಯ ಜೀವನವು ಇನ್ನಷ್ಟು ಆಳವಾಗುತ್ತದೆ. ವೈವಾಹಿಕ ಜನರಿಗೆ ದಿನದ ಆರಂಭವು ಉತ್ತಮವಾಗಿಲ್ಲ, ಅವರು ಜೀವನ ಸಂಗಾತಿಯ ಕೋಪವನ್ನು ಅನುಭವಿಸಬೇಕಾಗಬಹುದು.

ಮಕರ

ನೀವು ಕೆಲಸ ಮತ್ತು ವಿಶ್ರಾಂತಿಯ ನಡುವೆ ಸಮತೋಲನವನ್ನು ಸಾಬೀತುಪಡಿಸುವ ಅಗತ್ಯವಿದೆ ಏಕೆಂದರೆ ನೀವು ದೈಹಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಕುಂಭ

ಈ ದಿನ ವೃತ್ತಿಜೀವನಕ್ಕೆ ಹೊಸ ಎತ್ತರವನ್ನು ನೀಡಲಿದೆ. ಆದ್ದರಿಂದ, ಈ ದಿನಕ್ಕೆ ಸಂಪೂರ್ಣ ಸ್ವಾಗತ ನೀಡಿ ಮತ್ತು ಪ್ರತಿಯೊಂದು ಅವಕಾಶವನ್ನೂ ಲಾಭ ಮಾಡಿಕೊಳ್ಳಲು ಪ್ರಯತ್ನಿಸಿ.

ಮೀನ

ನೀವು ದೇವರಿಂದ ಆರ್ಥಿಕವಾಗಿ ಬೆಳೆಯುವ ಅವಕಾಶವನ್ನು ಪಡೆಯಲಿದ್ದೀರಿ ಮತ್ತು ಪ್ರತಿಯೊಬ್ಬರೂ ವಿದೇಶಿ ಸಂಪರ್ಕಗಳಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ದಿನವೂ ನಿಮಗೆ ಹಠಾತ್ ಹಣ ಸಿಗಬಹುದು. ಸಂಬಂಧಿಕರು ಮತ್ತು ಸಹೋದ್ಯೋಗಿಗಳ ಸಹಕಾರವೂ ಸಿಗುತ್ತದೆ.

ಇಂದಿನ ಔಷಧೀಯ ಸಸ್ಯದ ಪರಿಚಯ : ಸರ್ಪಗಂಧಿ

ಸರ್ಪಗಂಧಿ
ಚಂದ್ರಿಕಾ ಸರ್ಪಾಕ್ಷಿ ಪಾತಾಳಗರುಡ ಚಂದ್ರಭಾಗ ಚೋಟಾಚಂದ್ ಸರ್ಪಗಂಧ್ ಸರ್ಪಗಂಧ ಶಿವನನಾಭಿ ಗಿಡ ಸೂತ್ರನವಿ ಪಾತಾಳಗಂಧಿ ಚುರನ್ನ ವಿಲ್ಪೋರಿ ಚವನ್ ಪೋಡಿ ಪಾತಾಳಗುಣಿ ಪಾತಾಳ ಗರುಡಿ ಹರ್ಕಾಯ ಹರ್ಕಿ ಎಂಬ ಹೆಸರುಗಳಿಂದ ಕರೆಯುತ್ತಾರೆ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳದು,ವಿಪುಲವಾಗಿ ದೊರೆಯುತ್ತಿದ್ದ ಔಷಧೀಯ ಸಸ್ಯ ಸರ್ಪಗಂಧಿ.ಬಿಹಾರ ಅಸ್ಸಾo ಶ್ರೀಲಂಕಾ ಇನ್ನು ಮುಂತಾದ ದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದು, ವಿಪುಲವಾಗಿ ದೊರೆಯುತ್ತಿದ್ದ ಈ ಸಸ್ಯ ಬೇಡಿಕೆ ಹೆಚ್ಚಾದಂತೆ ಅವನತಿ ಅಂಚಿಗೆ ಬಂದು ನಿಂತಿದೆ.ಆಯುರ್ವೇದ ಯುನಾನಿ ಔಷಧಿ ತಯಾರಿಕಾ ಘಟಕಗಳಿಂದ ಹೆಚ್ಚಿನ ಬೇಡಿಕೆ ಇರುವುದರಿಂದ,ಇದನ್ನು ವಾಣಿಜ್ಯ ಬೆಳೆಯಾಗಿಯೂ ಬೆಳೆದು, ರೈತರು ಒಳ್ಳೆಯ ಲಾಭ ಗಳಿಸುತ್ತಿದ್ದಾರೆ.
ಇದರ ಬೇರು ರಕ್ತದೊತ್ತಡ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವುದಲ್ಲದೇ, ಸುಖನಿದ್ರೆ ನೀಡಬಲ್ಲದು.ಹೃದ್ರೋಗ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗಳಲ್ಲದೆ,ಇಸಬು ಗಜಕರ್ಣ ಹುಳಕಡ್ಡಿ ಇನ್ನು ಮುಂತಾದ ಚರ್ಮ ವ್ಯಾಧಿಗಳ ನಿವಾರೇಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತೆ.
ಆಯುರ್ವೇದದಲ್ಲಿ ಈ ಸಸ್ಯವನ್ನು ಮೂಲಿಕೆಗಳ “ರಾಜ” ಎಂದು ಕರೆದರೆ….!ಅಶ್ವಗಂಧಿ ಸಸ್ಯವನ್ನು “ರಾಣಿ” ಎಂದು ಕರೆಯುತ್ತಾರೆ….!
ಇದರ ಬೇರುಗಳಲ್ಲಿ ಉಪಯುಕ್ತವಾದ ಆಲ್ಕಲೈನ್ ಗಳಾದ ಎಜಮೊಲಿನ್, ಎಜಮೊಲಿನಾನ್, ಎಜಾಮೊಲಿಸಿನ್, ಸರ್ಪನ್ ಟೈನ್ ಗಳಿವೆ.ಇದಲ್ಲದೆ ಜಾಲತ ಆಮ್ಲ ಮತ್ತು ಆಲ್ಕೋಹಾಲ್ ಗಳು ವಿಪುಲವಾಗಿವೆ.ಈ ಎಲ್ಲಾ ಗುಣಗಳಿಂದ ಸಹಜವಾಗಿಯೇ ರಕ್ತದೊತ್ತಡದಂತಹ ವ್ಯಾಧಿಗಳು ಸರ್ಪಗಂಧಿಯ ಉಪಯೋಗದಿಂದ ಹಿಡಿತಕ್ಕೆ ಬರುತ್ತವೆ. ಇದರ ಬೇರಿನಲ್ಲಿ ಸರ್ಪದ ವಿಷ ನಿವಾರಿಸುವ ಗುಣ ಇರುವುದರಿಂದ ಸರ್ಪಗಂಧ ಎಂದು ಹೆಸರು ಬಂದಿದೆ.ಇದರಲ್ಲಿ ಅಗಾಧವಾದ ಔಷಧೀಯ ಗುಣಗಳು ತುಂಬಿದೆ.
ಮಾನವರ ದೇಹದಲ್ಲಿನ ನರಗಳ ಬಲಹೀನತೆಯನ್ನು ತಗ್ಗಿಸುದಲ್ಲದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೃದು ತೊಗಟೆಯ ಈ ಗಿಡವು 3 ರಿಂದ 4 ಅಡಿ ಎತ್ತರಕ್ಕೆ ಬೆಳೆದು, ಸಣ್ಣದಾದ ಗೊಂಚಲು ಗೊಂಚಲು ಹೂವುಗಳು ಬಿಡುತ್ತೆ.ಕೆಂಪು ಹಾಗೂ ಬಿಳಿಯ ಬಣ್ಣದ ಹೂವುಗಳು, ಆನಂತರ ಕಾಯಿಗಳಾಗಿ, ಕಪ್ಪು ಬಣ್ಣದ ಹಣ್ಣುಗಾಗುತ್ತೆ.ಈ ಗಿಡದ ಹಣ್ಣುಗಳನ್ನು ಪಕ್ಷಿಗಳು ತುಂಬಾ ಇಷ್ಟ ಪಟ್ಟು ತಿನ್ನುತ್ತವೆ.
ಸೂಚನೆ:- ಸರ್ಪಗಂಧವನ್ನು ಆಯುರ್ವೇದ ಪಂಡಿತರು ನಾಟಿ ವೈದ್ಯರು ಯುನಾನಿ ವೈದ್ಯರ ಸಲಹೆ ಸೂಚನೆಗಳಿಲ್ಲದೆ ನೇರವಾಗಿ ಉಪಯೋಗಿಸಬಾರದು.ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಪ್ರಜ್ಞೆ ತಪ್ಪುವ ಸಂಭವ ಇದ್ದು, ಪ್ರಾಣಕ್ಕೆ ಕುತ್ತು ಬರುತ್ತೆ ಎಚ್ಚರ…!!! ಅದರಲ್ಲೂ ಉಬ್ಬಸ, ಜೀರ್ಣಕೋಶ ವ್ಯಾಧಿಗಳು ಇರತಕ್ಕಂತವರು ಇದನ್ನು ತೆಗೆದುಕೊಳ್ಳಲೇಬಾರದು.ಇದು ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ. ಯಾವುದಕ್ಕೂ ಪಂಡಿತರ ಸಲಹೆ ಸೂಚನೆಗಳನ್ನು ಪರಿಪಾಲಿಸಿ ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ವಂದನೆಗಳು

ಅತಿಯಾದ ಸ್ಯಾ’ನಿಟೈಸರ್ ಬಳಕೆ ಆ’ರೋಗ್ಯಕ್ಕೆ ಮಾರಕ!!!

ಸ್ಯಾ’ನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾ’ನಿಟೈಸರ್ ಬಳ’ಸುತ್ತಿದ್ದೀರೆ ಎಚ್ಚರ..!

ಇಂದು ಎಲ್ಲೆಂದರಲ್ಲಿ ಅ’ತೀಯಾಗಿ ಸ್ಯಾ’ನಿಟೈಸರ್ ಬಳಕೆಯನ್ನು ನೋ’ಡುತ್ತಿದ್ದೇವೆ. ಈ ಸ್ಯಾ’ನಿಟೈಸರ್ ಬಳಕೆ ಹೇ’ಗಿರಬೇಕು ಮತ್ತು ಇ’ದರಿಂದ ಏನೆಲ್ಲಾ ತೊಂ’ದರೆಗಳು ಉಂ’ಟಾಗಬುದು ಎನ್ನುವುದನ್ನು ತಿಳಿಸುವ ಪ್ರಯತ್ನ

ಕೊ’ರೊನಾ ಸೋಂಕು ದೇಶದಲ್ಲಿ ಪ್ರ’ತ್ಯಕ್ಷವಾದ ದಿನದಿಂದ ಈ ಸ್ಯಾ’ನಿಟೈಸರ್ ಪ್ರಖ್ಯಾತಿಯನ್ನು ಪಡೆದಿದೆ. ಇ’ಲ್ಲದಿದ್ದರೆ ಎಷ್ಟೋ ಜನರಿಗೆ ಈ ಸ್ಯಾ’ನಿಟೈಸರ್ ಅಂ’ದರೇನು ಎಂದೇ ತಿ’ಳಿದಿರಲಿಲ್ಲ. ಆದರೆ ಇಂದು ಬ’ಹಳಷ್ಟು ಮ’ನೆಗಳಲ್ಲಿ ಅಗತ್ಯ ವಸ್ತುವಾಗಿದೆ. ಇನ್ನು ಹೆ’ಚ್ಚಾಗಿ ಆಫೀಸ್, ಆಸ್ಪತ್ರೆ, ಶಾ’ಪಿಂಗ್ ಮಾಲ್ ಗಳಿಗೆ ಹೋದರೆ ಮೊದಲು ಸ್ಯಾ’ನಿಟೈಸರ್ ಹಚ್ಕೊಂಡು ಒಳಗೆ ಹೋ’ಗಬೇಕಾಗಿದೆ. ಹೀಗಿರುವ ದಿನದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಪದೇಪದೇ ಸ್ಯಾ’ನಿಟೈಸರ್ ಹಾ’ಕ್ಕೊಂಡು ಕೈ ಉಜ್ಜಿ ಕೊಳ್ಳುವುದು ಅ’ಭ್ಯಾಸ ಮಾ’ಡಿಕೊಂಡಿದ್ದಾರೆ. ಆದರೆ ಈ ಸ್ಯಾ’ನಿಟೈಸರ್ ಬಳಕೆ ಯಾವ ತರಹ ಇರಬೇಕು, ಅದರಿಂದ ನಮ್ಮ ಜೀವಕ್ಕೆ ಏ’ನಾದರೂ ಹಾ’ನಿಗಲಿವೆಯೇ ತಿಳಿಯೋಣ..

  • ನಾವು ಬಳಸುವ ಆಲ್ಕೋ’ಹಾಲ್ ಮಿಶ್ರಿತ ಸ್ಯಾನಿಟೈಸರ್ ಶೇಕಡಾ 60 ರಿಂದ 70 ಪ್ರ’ತಿಶತದಷ್ಟು ಬ್ಯಾ’ಕ್ಟೀರಿಯಾ ಮತ್ತು ವೈರಸ್ ಗಳನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿವೆ.
  • ಈ ಸ್ಯಾ’ನಿಟೈಸರ್ ನಲ್ಲಿ ಆ’ಲ್ಕೋಹಾಲ್ ಅಂಶ ಜಾಸ್ತಿ ಇರುತ್ತದೆ, ಕೈ ತೊ’ಳೆಯೋಕೆ ನೀರು ಮತ್ತು ಸೋ’ಪು ಇಲ್ಲದೇ ಇದ್ದಾಗ ಮಾತ್ರ ಇದನ್ನು ಬ’ಳಸುವುದು ಉತ್ತಮ. ನೀವು ಎ’ಲ್ಲಿಗಾದರೂ ಪ್ರ’ಯಾಣಿಸುವಾಗ ಬಸ್ ಗಳಲ್ಲಿ ಬ’ಳಸಬಹುದು ಅಥವಾ ಕೈ ತೊ’ಳೆಯೋಕೆ ಸಿಂಕ್ ವರೆಗೂ ನ’ಡೆದುಕೊಂಡು ಹೋಗಲು ಸಾ’ಧ್ಯವಾಗದೇ ಇರುವಂತ ಸಂದರ್ಭ ಅಂದರೆ ಆರೋಗ್ಯ ಸ’ಮಸ್ಯೆಯಿಂದ ಬ’ಳಲುತ್ತಿದ್ದರೆ ಅ’ನಿವಾರ್ಯವಾಗಿ ಆಗ ಈ ಸ್ಯಾ’ನಿಟೈಸರ್ ಬಳಸಿ.
  • ಸ್ಯಾ’ನಿಟೈಸರ್ ಅನ್ನು ಕೈಗೆ ಹಾ’ಕ್ಕೊಂಡು ಕನಿಷ್ಠ 20 ಸೆ’ಕೆಂಡ್ ಗಳಾದರೂ ಉ’ಜ್ಜಬೇಕು. ಇಲ್ಲದಿದ್ದರೆ ಆ’ಲ್ಕೋಹಾಲ್ ಅಂಶ ಕೈಯಲ್ಲಿ ಉ’ಳಿದುಬಿಡುತ್ತದೆ. ಈ ಸ’ಮಯದಲ್ಲಿ ಕಣ್ಣಿಗೆ ಮುಖಕ್ಕೆ ಸ್ಯಾ’ನಿಟೈಸರ್ ಬಿದ್ದರೆ ತಕ್ಷಣ ಶು’ದ್ಧವಾದ ನೀರಲ್ಲಿ ತೊ’ಳೆದುಕೊಳ್ಳಿ. ಮ’ನೆಯಲ್ಲಿ ಸೋಪು ಸಾಕಷ್ಟು ನೀರು ಇದ್ದರೆ ಸ್ಯಾ’ನಿಟೈಸರ್ ಪದೇ ಪದೇ ಬ’ಳಸೋಕೆ ಹೋಗಬೇಡಿ.
  • ಪದೇ ಪದೇ ಕೈಗಳಿಗೆ ಸ್ಯಾ’ನಿಟೈಸರ್ ಹಾ’ಕಿಕೊಳ್ಳುವುದರಿಂದ ನಮ್ಮ ಕೈಗಳು ಕೂಡ ಒರಟಾಗುತ್ತದೆ.
  • ಸ್ಯಾ’ನಿಟೈಸರ್ ಹ’ಚ್ಕೊಂಡು ತಕ್ಷಣ ಅದನ್ನು ನೀ’ಟಾಗಿ ಉಜ್ಜಿ ಕೊಳ್ಳದೇ ಕಣ್ಣು ಮೂಗು ಮುಟ್ಟಿ ಕೇ’ಳುವುದರಿಂದಲೂ ಅಪಾಯ ಆಗುತ್ತೆ ಹು’ಷಾರಾಗಿರಿ.
  • ಮಕ್ಕಳಿಗೆ ಸಾ’ಧ್ಯವಾದಷ್ಟು ಸ್ಯಾ’ನಿಟೈಸರ್ ಬಳಕೆ ಕಡಿಮೆ ಪ್ರ’ಮಾಣದಲ್ಲಿದ್ದರೆ ಒಳ್ಳೆಯದು. ಮಕ್ಕಳು ಸ್ಯಾ’ನಿಟೇಷನ್ ಹಚ್ಚಿಕೊಂಡು ಸ’ರಿಯಾಗಿ ಉ’ಜ್ಜದೆ ಬಾಯಿ ಕಣ್ಣು ಮೂಗು ಎಲ್ಲವನ್ನೂ ಮುಟ್ಟಿ ಕೊ’ಳ್ಳಬಹುದು ಅಥವಾ ಅದೇ ಕೈ’ಗಳಿಂದ ಏನಾದ್ರೂ ಆಹಾರವನ್ನು ತಿನ್ನಬಹುದು. ಇ’ದರಿಂದ ಅವರ ಆರೋಗ್ಯಕ್ಕೆ ಹಾನಿ ಉಂ’ಟಾಗುತ್ತದೆ.
  • ಊಟ ಮಾ’ಡುವ ಮುಂಚೆ ಕೈಗೆ ಸ್ಯಾ’ನಿಟೈಸರ್ ಹಚ್ಚಿಕೊಳ್ಳ’ಬೇಡಿ ಇದು ತುಂ’ಬಾನೇ ಅ’ಪಾಯಕಾರಿ ಮುಖ್ಯವಾಗಿ ಮಕ್ಕಳು ಊ’ಟಕ್ಕೆ ಮೊದಲು ಹಚ್ಚಿ ಕೊಳ್ಳದಂತೆ ನೋಡಿಕೊಳ್ಳಿ.
  • ಅ’ನಿವಾರ್ಯ ಪ’ರಿಸ್ಥಿತಿಯಲ್ಲಿ ಮಾತ್ರ ಸ್ಯಾ’ನಿಟೈಸರ್ ಬಳಕೆ ಮಾಡಿ.
  • ಸ್ಯಾ’ನಿಟೈಸರ್ ಹಚ್ಚಿಕೊಂಡ 15 ನಿಮಿಷಗಳಲ್ಲಿ ಯಾವುದೇ ಕಾರಣಕ್ಕೂ ಕೈ ‘ತೊಳೆಯದೇ ಊಟ ಮಾ’ಡಬೇಡಿ. ಇದು ನಿಮಗೆ ಅ’ಪಾಯವನ್ನು ಉಂ’ಟುಮಾಡಬಹುದು.
  • ಸ್ಯಾ’ನಿಟೈಸರ್ ಬಾಟಲ್ ಚಿಕ್ಕ ಮಕ್ಕಳ ಕೈಗೆ ಸಿ’ಗುವಂತೆ ಇಡಬೇಡಿ. ಒಂ’ದು ವೇಳೆ ಇದನ್ನು ಕು’ಡಿದರೆ ತಕ್ಷಣ ಯಾವುದೇ ,ಮನೆಯ ಉ’ಪಚಾರ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ. ಕೊಂ’ಡೊಯ್ಯುವಾಗ ಕುಡಿದ ಸ್ಯಾ’ನಿಟೈಸರ್ ಬಾ’ಟಲಿಯನ್ನು ತಪ್ಪದೇ ಕೊಂಡೊಯ್ಯಿರಿ.

ಸ್ಯಾ’ನಿಟೈಸರ್ ಅಗತ್ಯ ಸಮಯಗಳಲ್ಲಿ ಬಳಕೆ ಮಾಡಿ. ಸು’ಲಭವಾಗಿ ನೀರು ಮತ್ತು ಸೋಪು ಲಭ್ಯವಿದ್ದು, ಕೈ ತೊಳೆದುಕೊಳ್ಳಲು ಸಾಧ್ಯವಿದ್ದರೆ ಸ್ಯಾ’ನಿಟೈಸರ್ ಗಿಂತ ಸಾಬೂನು ಉತ್ತಮ ವೈರಸ್ ಮತ್ತು ಬ್ಯಾ’ಕ್ಟೀರಿಯಾ ನಿವಾರಕವಾಗಿದೆ. ಅಲ್ಲದೆ ಸ್ಯಾ’ನಿಟೈಸರ್ ಗಿಂತ ಕಡಿಮೆ ಹಾ’ನಿಕಾರಕವಾಗಿದೆ.

Design a site like this with WordPress.com
Get started