ಜುಲೈ 18 ,2020; ಶನಿವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶನಿವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:17 ರಿಂದ 10:53
ಗುಳಿಕಕಾಲ: ಬೆಳಗ್ಗೆ 6:06 ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:41

ಮೇಷ

ರಾಜಕೀಯಕ್ಕೆ ಸೇರುವಂತೆ ಒತ್ತಡ. ವೈಯಕ್ತಿಕ ಬದುಕಿನಲ್ಲಿ ಸ್ವಲ್ಪಮಟ್ಟಿನ ಏರುಪೇರು ಕಂಡಬಂದರೂ ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹದ ನುಡಿಗಳಿಂದಾಗಿ ಉತ್ಸಾಹ ಮೂಡಲಿದೆ.

ವೃಷಭ

ಸ್ವಯಂ ಉದ್ಯೋಗದಲ್ಲಿ ಹೊಸತನ ಮೂಡಿ ಬರಲಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಹೊಸ ವಸ್ತುಗಳ ಖರೀದಿಗೆ ಸೂಕ್ತ ಕಾಲ. ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಸಂಸಾರದಲ್ಲಿ ಸಂತೃಪ್ತಿ.

ಮಿಥುನ

ನೂತನ ಉದ್ಯಮದಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಕೌಟುಂಬಿಕ ಸಮಸ್ಯೆಗಳು ದೂರವಾಗಿ ನೆಮ್ಮದಿ. ಕೃಷಿಕರಿಗೆ ಕೆಲಸ–ಕಾರ್ಯಗಳಿಗೆ ಅನುಕೂಲಗಳು ಕೂಡಿಬರಲಿವೆ.

ಕಟಕ

ಉನ್ನತ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ದೊರೆತು ಉತ್ಸಾಹ ಇಮ್ಮಡಿಗೊಳ್ಳಲಿದೆ. ಮನೆಯಲ್ಲಿ ಸಂತೋಷದ ವಾತಾವರಣ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ.

ಸಿಂಹ

ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭ. ವಿದ್ಯಾರ್ಥಿಗಳಿಗೆ ಅತಿಯಾದ ಶ್ರಮ ಬಯಸುವ ದಿನವಾಗಲಿದೆ. ತಾಯಿಯ ಮಾತುಗಳ ಮೇಲೆ ವಿಶ್ವಾಸವಿರಲಿ. ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆ.

ಕನ್ಯಾ

ಧಾನ್ಯ ದಿನಸಿ ವ್ಯಾಪಾರಿಗಳಿಗೆ ವ್ಯಪಾರದಲ್ಲಿ ಅನಾನುಕೂಲ. ಅಪರೂಪದ ವ್ಯಕ್ತಿಗಳ ಆಗಮನದಿಂದ ಮನೆಯಲ್ಲಿ ಸಂತಸ. ಆತ್ಮೀಯರೊಂದಿಗೆ ಸಂತೋಷ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ.

ತುಲಾ

ಇತರರ ಅಭಿವೃದ್ಧಿಯು ನಿಮ್ಮ ನಿದ್ದೆಗೆಡಿಸುವ ಸಾಧ್ಯತೆ. ಧನ ಧಾನ್ಯಗಳ ಸಂಗ್ರಹದಲ್ಲಿ ಹಿನ್ನಡೆ. ಕ್ರೀಡಾಪಟುಗಳಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ದೊರಕುವುದು. ಆಸ್ತಿ ಖರೀದಿ ವಿಚಾರದಲ್ಲಿ ಚಿಂತನೆ ನಡೆಸಲಿದ್ದೀರಿ.

ವೃಶ್ಚಿಕ

ಮಹಿಳಾ ಉದ್ಯೋಗಿಗಳಿಗೆ ಪದೋನ್ನತಿಯ ಸಾಧ್ಯತೆ. ವಿವಾಹದ ಮಾತುಕತೆ ನಡೆಸುವ ಸಾಧ್ಯತೆ. ಹಣ್ಣು ಮತ್ತು ತರಕಾರಿ, ದಿನಸಿ ಪದಾರ್ಥಗಳ ವ್ಯಾಪಾರದಿಂದ ಲಾಭ. ಅಮೂಲ್ಯ ವಸ್ತುಗಳು ಪ್ರಾಪ್ತವಾಗುವ ಸಾಧ್ಯತೆ.

ಧನು

ಓದಿನಲ್ಲಿ ಏಕಾಗ್ರತೆ ಅವಶ್ಯ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ವಿಚಾರವೊಂದರ ಬಗ್ಗೆ ಚಿಂತನೆ ನಡೆಸುವಿರಿ. ಸ್ನೇಹಿತರೊಂದಿಗೆ ದೇವತಾ ದರ್ಶನ ಭಾಗ್ಯ. ಆರ್ಥಿಕ ಸಬಲತೆ ಕಂಡುಬರುವುದು.

ಮಕರ

ಹಿರಿಯರ ಸಲಹೆಗಳಿಗೆ ಗೌರವವಿರಲಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಕೃಷಿಕರಿಗೆ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ. ಅನಾವಶ್ಯಕ ಸುತ್ತಾಟದಿಂದಾಗಿ ಮನಸ್ಸಿನ ನೆಮ್ಮದಿ ಹಾಳಾಗುವ ಸಾಧ್ಯತೆ.

ಕುಂಭ

ಕೌಟುಂಬಿಕ ಭಿನ್ನಾಭಿಪ್ರಾಯಗಳು ದೂರವಾಗುವವು. ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ. ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ. ದೈನಂದಿನ ಕಾರ್ಯಗಳಲ್ಲಿ ಉತ್ಸುಕತೆ ಮೂಡಲಿದೆ.

ಮೀನ

ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಕಂಡರೂ ಸಾಮಾಜಿಕ ಕಳಂಕದ ಭೀತಿ ಇದೆ. ಸಂದೇಹಾಸ್ಪದ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಧಾನ್ಯ ವ್ಯಾಪಾರದಲ್ಲಿ ಉತ್ತಮ ಪ್ರಗತಿ.

ಇಂದಿನ ಔಷಧೀಯ ಸಸ್ಯ ಪರಿಚಯ: ಬೂದುಗುಂಬಳ

ಕುಷ್ಮಾಂಡ ಕರಕಾರಕ, ಪುಷ್ಪಫಲ, ಬಿಳಿಕುಂಬಳ, ಬೂದುಗುಂಬಳ, ಬೂದುಕುಂಬಳ, ವೆಳ್ ಪುಸನಿಕಾಯಿ, ಕಲ್ಯಾಣಿ ಪೂಸನಿ, ಬೂದಡಿ ಗುಮ್ಮಡಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ

ಬೂದುಕುಂಬಳಕಾಯಿಯನ್ನು ಅನೇಕ ದೇಶಗಳಲ್ಲಿ ಬೆಳೆಯುತ್ತಾರೆ.ಅದರಲ್ಲೂ ನಮ್ಮ ದೇಶದಲ್ಲಿ ವಿಶೇಷವಾಗಿ ಹೊಲ ಗದ್ದೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಇದರ ಮತ್ತೊಂದು ವಿಶೇಷವೆಂದರೆ ಬೀಜ ಬಿದ್ದಕಡೆ ಮೊಳಕೆಯೊಡೆದು ಗಿಡವಾಗಿ ಕಾಯಿ ಬಿಡುತ್ತೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೂದುಗುಂಬಳಕ್ಕೆ ಬಹಳ ಪೂಜನೀಯಸ್ಥಾನ ನೀಡಲಾಗಿದ್ದು, ಹೋಮ, ನೂತನ ಗೃಹಪ್ರವೇಶ, ಶಂಕುಸ್ಥಾಪನೆ, ಯಂತ್ರೋಪಕರಣ ಕಾರ್ಯಾರಂಭದಲ್ಲಿ ಇದು ಇರಲೇಬೇಕು.ಇದನ್ನು ಆಹಾರದಲ್ಲಿ ತರಕಾರಿಯಾಗಿ ಬಳಸುವುದಲ್ಲದೇ, ಇದರಲ್ಲಿ ಅತ್ಯದ್ಭುತವಾದ ಔಷಧೀಯ ಗುಣಗಳು ತುಂಬಿದೆ.ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು, ವಿಟಮಿನ್ಗಳು, ಖನಿಜಾಂಶ ಪದಾರ್ಥಗಳಿದ್ದು, ಇದರ ಸೇವನೆಯಿಂದ ಅನೇಕ ವ್ಯಾಧಿಗಳು ಗುಣವಾಗುತ್ತೆ.
ಬೂದುಗುಂಬಳವನ್ನು ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ.
ಬೂದುಗುಂಬಳದ ಜ್ಯುಸ್, ನಿಯಮಿತವಾಗಿ ದಿನವು ಬೆಳಿಗ್ಗೆ ಸಂಜೆ ಊಟಕ್ಕೆ ಮುಂಚೆ 50ml ನಂತೆ ಕುಡಿಯುವುದರಿಂದ ಅನೇಕ ರೀತಿಯ ಹೃದಯ ಸಮಸ್ಯೆಗಳು ದೂರವಾಗಿ, ಹೃದಯ ಬಲಗೊಂಡು, ಸುಗುಮವಾಗಿ ಕಾರ್ಯ ನಿರ್ವಹಿಸುತ್ತದೆ.ಎಂತಹ ಹೃದಯ ಸಮಸ್ಯೆಗಳಿದ್ದರೂ ದೂರವಾಗುತ್ತೆ ರಕ್ತಹೀನತೆಯಿಂದ ದೇಹವನ್ನು ಕಾಪಾಡುತ್ತೆ.
ಬೂದುಗುಂಬಳದಲ್ಲಿ ನಾರಿನಾಂಶ ಅಧಿಕವಾಗಿದ್ಫು, ಪಲ್ಯ, ಸಾಂಬಾರ್, ಕೋಸಂಬರಿ, ಜ್ಯೂಸ್ ಮಾಡಿ ಸೇವಿಸುತ್ತಿದ್ದರೆ, ಮಲಬದ್ಧತೆಯಿಂದ ಮುಕ್ತಿ ಸಿಗುತ್ತೆ. ಕಣ್ಣಿನ ಸಮಸ್ಯೆಗಳು ದೂರವಾಗುತ್ತೆ.
ಸ್ತ್ರೀಯರ ಅನೇಕ ಸಮಸ್ಯೆಗಳಿಗೆ ಬೂದುಗುಂಬಳ ರಾಮಬಾಣದಂತೆ ಕೆಲಸಮಾಡುತ್ತೆ. ಶ್ವೇತ ಪ್ರದರ, ಋತಸ್ರಾವ ಸಮಸ್ಯೆಗಳಿಗೆ ಇದು ದಿವೌಷಧಿ. ಸೌತೆಕಾಯಿಯಂತೆ ಹಸಿಯಾಗಿ ಅಥವಾ ಕೋಸಂಬರಿ ಮಾಡಿಕೊಂಡ ಸವಿಸಬಹುದು.
ಬೂದುಗುಂಬಳ ದಿನವು ನಿಯಮಿತವಾಗಿ ಸೇವಿಸುವುದರಿಂದ ಮೆದಳು ಆರೋಗ್ಯದಿಂದಕೂಡಿ, ಸುಗುಮವಾಗಿ ಕಾರ್ಯನಿರ್ವಹಿಸುತ್ತದೆ.
ಮಕ್ಕಳಿಗೆ ಇದನ್ನು ಪಲ್ಯ ಅಥವಾ ಜ್ಯುಸ್ ಮಾಡಿ ಆಹಾರದ ಜೊತೆಗೆ ಕೊಡುವುದರಿಂದ, ಬುದ್ಧಿ ಚುರುಕಾಗಿ, ದೇಹ ಬೆಳವಣಿಗೆಗೆ ಸಹಕಾರಿಯಾಗಿ ಆರೋಗ್ಯ ಕಾಪಾಡುತ್ತೆ.
ವಾಂತಿ ಹಾಗು ತಲೆ ಸುತ್ತುವಿಕೆ ಇದ್ದಾಗ, ಬೂದುಗುಂಬಳದ ಜ್ಯುಸ್ ಕುಡಿದರೆ, ಶೀಘ್ರ ಶಮನವಾಗುತ್ತೆ.
ಬೂದುಗುಂಬಳ ಬೀಜದ ಚೂರ್ಣವನ್ನು ಕೊಬ್ಬರಿ ನೀರಿನಲ್ಲಿ ಕಲಸಿ ಕುಡಿದರೆ, ಹೊಟ್ಟೆಯಲ್ಲಿನ ಜಂತುಹುಳು, ಇತರೆ ಸೂಕ್ಷ್ಮ ವಿಷಕ್ರಿಮಿಗಳು ಸತ್ತು ಮಲ ಮೂತ್ರದಲ್ಲಿ ಹೊರಬರುತ್ತವೆ.
ಬೀಜಗಳನ್ನು ನೆರಳಲ್ಲಿ ಒಣಗಿಸಿ,ಕುಟ್ಟಿ ಪುಡಿಮಾಡಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, ಹಾಲು ಅಥವಾ ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ದೇಹಕ್ಕೆ ಅಪಾರ ಶಕ್ತಿಬಂದು, ನರಮಂಡಲ, ಮಾಂಸಖಂಡಗಳು ಬಲಗೊಳ್ಳುತ್ತವೆ.
ಬೂದುಗುಂಬಳ ನಿಯಮಿತ ಸೇವನೆಯಿಂದ ಮೈಯಲ್ಲಿನ ಉಷ್ಣತೆ ಕಡಿಮೆಯಾಗಿ, ಅಸಿಡಿಟಿ, ಗ್ಯಾಸ್ಟ್ರಿಕ್, ಅಲ್ಸರ್ ಸಮಸ್ಯೆಗಳು ದೂರವಾಗುತ್ತೆ.
ಬೂದುಗುಂಬಳದ ರಸವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತೆ.
ಸಿಪ್ಪೆಯನ್ನು ನುಣ್ಣಗೆ ಅರೆದು, ಮೊಸರು ಅಥವಾ ಹಾಲಿನಲ್ಲಿ ಕಲಸಿ ಮುಖಕ್ಕೆ ಲೇಪನ ಮಾಡಿ 1/2 ಗಂಟೆಯ ನಂತರ ಉಗರು ಬೆಚ್ಚಗಿನ ನೀರಲ್ಲಿ ತೊಳೆದರೆ, ಮುಖದ ಚರ್ಮವು ಕಾಂತಿಯಿಂದ ಹೊಳೆಯುತ್ತೆ.
ಬೂದುಗುಂಬಳ ಸೇವಿಸುವುದರಿಂದ, ಮಲದಲ್ಲಿ ರಕ್ತ ಸುರಿಯುವುದು, ಮೂತ್ರಪಿಂಡ ಸಮಸ್ಯೆಗಳು ಗುಣವಾಗುತ್ತೆ.ದೇಹದಲ್ಲಿನ ರಕ್ತನಾಳಗಳು ಶುದ್ಧಿಯಾಗಿ,ರಕ್ತಸಂಚಾರ ಸುಗುಮಗೊಳ್ಳುತ್ತೆ. ದೇಹದಲ್ಲಿನ ಕಲ್ಮಶಗಳು ಹೊರಬರುತ್ತವೆ.ಅನೇಕ ಚರ್ಮ ಸಮಸ್ಯೆಗಳು ದೂರವಾಗುತ್ತವೆ.ದೇಹದಲ್ಲಿನ ಮೂಳೆಗಳು ಬಲಿಷ್ಠಗೊಳ್ಳುತ್ತವೆ.ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತವೆ.
ದಿನವು ಬೂದುಗುಂಬಳದ ರಸವನ್ನು ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು ಕುಡಿಯುವುದರಿಂದ ಮಧುಮೇಹ ಅತೋಟಿಗೆ ಬರುತ್ತೆ. ಬೂದುಗುಂಬಳ ಅತ್ಯದ್ಭುತ ಆಹಾರ ಗೆಳೆಯರೆ ವಂದನೆಗಳು

ಜುಲೈ 17, 2020; ಶುಕ್ರವಾರ: ಇಂದಿನ ನಿಮ್ಮ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶುಕ್ರವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:53 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:17
ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17

ಮೇಷ

ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಹಣಕಾಸಿನ ಅನುಕೂಲತೆಯಿಂದಾಗಿ ಉತ್ತಮ ಫಲ ಒದಗಿ ಬರಲಿದೆ. ಸಮಾಜದೊಂದಿಗೆ ಬಾಂಧವ್ಯ ವೃದ್ಧಿ. ಆತ್ಮವಿಶ್ವಾಸದಿಂದ ವ್ಯವಹರಿಸಿ ಜಯ ಸಾಧನೆ ನಿಮ್ಮದಾಗಲಿದೆ.

ವೃಷಭ

ಸುಸಂಸ್ಕೃತರ ಸಹವಾಸದಿಂದಾಗಿ ಮಾನಸಿಕ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆಗೆ ಅನಿರೀಕ್ಷಿತರ ಆಗಮನ ಸಾಧ್ಯತೆ. ವಿವೇಚನೆಯ ನಡವಳಿಕೆಯಿಂದಾಗಿ ಎದುರಾದ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

ಮಿಥುನ

ಇತರರ ಕೆಲಸಗಳ ಯಶಸ್ಸಿಗಾಗಿ ಉತ್ತಮ ಸಲಹೆ ನೀಡುವ ಅವಕಾಶ. ವಹಿವಾಟಿನಲ್ಲಿ ಉತ್ತಮ ಫಲಿತಾಂಶ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ ಉಂಟಾದೀತು.

ಕಟಕ

ಬಹುದಿನಗಳ ಸಮಸ್ಯೆಗಳು ಬಗೆಹರಿಯಲಿವೆ. ಉನ್ನತ ಸಂಸ್ಕಾರಯುತ ನಡೆ. ಗೆಳೆಯರಿಂದ ಪ್ರಶಂಸಾತ್ಮಕ ಮಾತುಗಳನ್ನು ಕೇಳಲಿದ್ದೀರಿ. ಸಂಗಾತಿಯಿಂದ ಉತ್ತಮ ಸಹಕಾರ ದೊರೆಯಲಿದೆ.

ಸಿಂಹ

ವೈಯಕ್ತಿಕ ವ್ಯವಹಾರಗಳ ಶೀಘ್ರ ಇತ್ಯರ್ಥಕ್ಕಾಗಿ ನಡೆಸುವ ಹೋರಾಟದಲ್ಲಿ ಪ್ರಗತಿ. ಪಟ್ಟು ಬಿಡದೆ ಇತರರಿಂದ ಕಾರ್ಯ ಸಾಧಿಸುವ ಛಲ. ಮನೆಯವರ ಆರೋಗ್ಯದ ಬಗ್ಗೆ ಗಮನವಿರಲಿ.

ಕನ್ಯಾ

ವಾಹನ ಖರೀದಿಯನ್ನು ದಿನದ ಮಟ್ಟಿಗೆ ಮುಂದೂಡುವುದೇ ಸೂಕ್ತ. ಬಂಧುಗಳಿಂದ ಕೆಲಸ–ಕಾರ್ಯಗಳಿಗೆ ಸಹಾಯ. ಕಾರ್ಯ ನಿರ್ವಹಣೆಯಿಂದಾಗಿ ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನೌಕರಿಯಲ್ಲಿರುವವರಿಗೆ ಭಡ್ತಿ ಸಾಧ್ಯತೆ.

ತುಲಾ

ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಆದಾಯ ದೊರೆತು ಆರ್ಥಿಕ ಸೌಖ್ಯ. ಪಾಲುಗಾರಿಕೆ ವ್ಯವಹಾರದಿಂದಾಗಿ ಅಧಿಕ ಲಾಭದ ನಿರೀಕ್ಷೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಿರಿಯರಿಂದ ಬಂದ ಸಲಹೆ ನಿರ್ಲಕ್ಷಿಸಬೇಡಿ.

ವೃಶ್ಚಿಕ

ಎದುರಾಳಿಗಳ ಕಾರ್ಯತಂತ್ರ ವಿಫಲವಾಗಿ ಸಂತಸ. ಶುಭಸಮಾರಂಭಗಳಿಗೆ ಆರ್ಥಿಕ ಸಹಾಯ ನೀಡಲಿದ್ದೀರಿ. ಘನತೆಗೆ ತಕ್ಕ ನಡೆಯಿಂದಾಗಿ ಸಾಮಾಜಿಕ ಮನ್ನಣೆ. ಉನ್ನತ ಶಿಕ್ಷಣದ ಕುರಿತು ದುಗುಡ.

ಧನು

ಹಣಕಾಸಿನ ಅನುಕೂಲ ವಿವಿಧ ಮೂಲಗಳಿಂದ ಹರಿದುಬರುವ ಸಾಧ್ಯತೆ. ಅತಿಯಾದ ಆಸೆಯಿಂದ ದೂರ ಉಳಿಯುವ ಸಂಕಲ್ಪ ಮಾಡಿ. ದೂರ ಪ್ರಯಾಣದಿಂದಾಗಿ ವಿಪರೀತ ಆಯಾಸ. ಆರೋಗ್ಯದಲ್ಲಿ ವ್ಯತ್ಯಯ.

ಮಕರ

ಹಮ್ಮಿಕೊಂಡ ಕೆಲಸ–ಕಾರ್ಯಗಳು ಸುರಕ್ಷಿತವಾಗಿ ನೆರವೇರುವವು. ದೃಢ ಸಂಕಲ್ಪದ ಸಾಮರಸ್ಯ. ಸಾಂಸಾರಿಕ ನೆಮ್ಮದಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಬಾಧಿತ ಮುನ್ನಡೆಯಿಂದಾಗಿ ನೆಮ್ಮದಿ.

ಕುಂಭ

ಉದ್ಯೋಗ ಕ್ಷೇತ್ರದಲ್ಲಿ ಸಾಮರಸ್ಯದಿಂದಾಗಿ ಉತ್ಸಾಹ. ಅನುಮಾನಕ್ಕೆಡೆ ಇಲ್ಲದ ಬದಲಾವಣೆಗಳು ಕಂಡುಬರುವವು. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆ. ಕೃಷಿಕಾರ್ಯಗಳಲ್ಲಿ ಉತ್ಸುಕತೆ.

ಮೀನ

ವಿದ್ಯುತ್ ಉಪಕರಣಗಳ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಕೊರತೆ. ವಂಚಕರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಾಣ್ಮೆಯ ನಡೆ. ದೂರಾಲೋಚನೆಯಿಂದಾಗಿ ಹಿತ ಮಿತದ ಮಾತುಗಾರಿಕೆ.

ಇಂದಿನ ಔಷಧೀಯ ವೃಕ್ಷದ ಪರಿಚಯ: ಬೇಲದ ಹಣ್ಣಿನ ಮರ

ಬೆಳವಳ,ದಧಿಫಲ,ಬಿಳಿನ್,ವಿಳಾಫಲಂ,ವಿಳಾಮರಂ, ಕಪೌಷ್ಟಿಕ ಪಿತ್ಥಮು, ಬೇಲದ ಮರ,ವುಡ್ ಆಪೆಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ವೃಕ್ಷವು ಅರಣ್ಯಗಳಲ್ಲಿ ನೈಸರ್ಗಿಕವಾಗಿ ಬೆಳೆದರೆ, ರೈತರು ಹೊಲ,ತೋಟ,ಗದ್ದೆಗಳ ಬದಿಗಳ ಮೇಲೆ ಬೆಳೆಸುತ್ತಾರೆ.ಹಳ್ಳಿಗಳಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆಸಿರುತ್ತಾರೆ.ಇದನ್ನು ಅನೇಕ ಕಡೆ ಹಣ್ಣಿಗಾಗಿ ಸಹಾ ಬೆಳೆಸುತ್ತಿದ್ದಾರೆ.ಈ ವೃಕ್ಷವು ಸುಮಾರು 25 ರಿಂದ 50 ಅಡಿವರಿಗೂ ಬೆಳೆಯುತ್ತೆ.
ಬೇಲದ ಹಣ್ಣು ಗಣಪತಿಗೆ ತುಂಬಾ ಪ್ರಿಯವಾದ ಹಣ್ಣು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಆನೆಗಳಂತೂ ತುಂಬಾ ಇಷ್ಟ ಪಟ್ಟು ಸೇವಿಸುತ್ತವೆ.ಈ ಹಣ್ಣಿನಲ್ಲಿ ಔಷಧಿಗಳ ಭಂಡಾರವೇ ಇದೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.
ಬೇಲದ ಹಣ್ಣಿನಲ್ಲಿ ಅನೇಕ ಪೌಷ್ಟಿಕಾಂಶಗಳ ಕಣಜ ತುಂಬಿವೆ.ಅಧಿಕವಾದ ಕ್ಯಾಲರಿ,ಪ್ರೊಟೀನ್,ಕೆರೋಟಿನ್
ಪಾಸ್ಪರಸ್,ಕ್ಯಾಲ್ಸಿಯಂ,ಕಬ್ಬಿಣಾಂಶ,ಸಿಟ್ರಿಕ್ ಆಮ್ಲ ಸಹಿತ ಅನೇಕ ರೀತಿಯ ಪೌಷ್ಟಿಕ ಪದಾರ್ಥಗಳು ಸಮೃದ್ಧಿಯಾಗಿ ತುಂಬಿವೆ.
ಬೇಲದ ಹಣ್ಣಿನ ಜ್ಯುಸ್ ಸೇವಿಸಿದರೆ ಜೀರ್ಣಕ್ರಿಯೆ ಸುಗುಮವಾಗಿ, ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಶಮನವಾಗುತ್ತೆ,ಹೊಟ್ಟೆಯಲ್ಲಿನ
ಜಂತು ಹುಳುಗಳು ಸತ್ತು ಹೊರ ಬರುತ್ತವೆ.
ಸ್ತ್ರೀಯರು ಬೇಲದ ಹಣ್ಣಿನ ತಿರಳು ಸೇವಿಸಿದರೆ ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಪಾಡುತ್ತೆ.ಸ್ತ್ರೀಯರಲ್ಲಿ ಏರ್ಪಡುವ ಆರ್ಮೋನ್ ಸಮಸ್ಯೆಗಳು ಸಹ ದೂರವಾಗುತ್ತವೆ.
ಬೇಲದ ಹಣ್ಣನ್ನು ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಸೇವಿಸಿದರೆ ಅಧಿಕ ದಾಹದ ಸಮಸ್ಯೆ ದೂರವಾಗುತ್ತೆ.ಬಾಯಿ ಹುಣ್ಣು, ಬಾಯಿ ದುರ್ವಾಸನೆಯಿಂದ ಮುಕ್ತಿ ಸಿಗುತ್ತೆ.ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಗಳು ತಗ್ಗಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತೆ.
ಬೇಲದ ಹಣ್ಣಿನ ರಸಕ್ಕೆ ಬೆಲ್ಲ ಸೇರಿಸಿ ಸೇವಿಸಿದರೆ ಪುರುಷರಲ್ಲಿ ವೀರ್ಯಾಣುವೃದ್ಧಿಯಾಗುತ್ತೆ. ದೇಹದಲ್ಲಿನಲ್ಲಿನ ನಿಶಕ್ತಿ, ನರಗಳ ದೌರ್ಬಲ್ಯ ದೂರವಾಗಿ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.
ಬೇಲದ ಹಣ್ಣಿನ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲು ಕರಗಿ ಮೂತ್ರದಲ್ಲಿ ಹೊರ ಬರುತ್ತೆ.
ಬೇಲದ ಹಣ್ಣಲ್ಲದೇ, ಎಲೆ ಹೂ ಕಾಯಿ ತೊಗಟೆ ಬೇರು ಸಹಾ ಔಷಧೀಯ ಗುಣಗಳಿಂದ ಕೂಡಿದ್ದು, ಇವುಗಳ ಸೇವನೆಯಿಂದ ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆ ಸಮಸ್ಯೆ ದೂರವಾಗುತ್ತೆ.
ಎಲೆಗಳ ರಸವನ್ನು ಹೊಟ್ಟೆಗೆ ತೆಗೆದುಕೊಂಡರೆ ಅತಿಸಾರ ಭೇದಿ ನಿಲ್ಲುತ್ತೆ.
ಗಂಡಸರಲ್ಲಿ ವೃಷಣದಲ್ಲಿ ಊತ(ಬಾಹು) ಬಂದಾಗ ಇದರ ಎಲೆಗಳನ್ನು ಹರಳೆಣ್ಣೆಯಲ್ಲಿ ಅರೆದು ಲೇಪನ ಮಾಡಿದರೆ ನೋವು ಕಡಿಮೆಯಾಗಿ ಊತ ತಗ್ಗುತ್ತೆ.
ಬೇಲದ ಹಣ್ಣು ನಿಯಮಿತ ಸೇವನೆಯಿಂದ ವೃದಾಪ್ಯವನ್ನು ಮುಂದೂಡಬಹುದು.
ಈ ಹಣ್ಣಿನಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ, ಇದನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತೆ.
ಇದರ ತೊಗಟೆಯನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ 1 ಚಮಚ ಚೂರ್ಣಕ್ಕೆ 1 ಚಮಚ ಜೇನುತುಪ್ಪದೊಡನೆ ರಂಗಳಿಸಿ ನೆಕ್ಕಿದರೆ ಪಿತ್ತ ಶಮನವಾಗುತ್ತೆ.
ಇದರ ಪಂಚಾಂಗವನ್ನು ತಂದು ಚೂರ್ಣ ಮಾಡಿ ದಿನವು 10 ಗ್ರಾಂ ಚೂರ್ಣವನ್ನು ಜೇನುತುಪ್ಪ ಅಥವಾ ಕಲ್ಲು ಸಕ್ಕರೆಯೊಂದಿಗೆ ಬೆಳಿಗ್ಗೆ ಸಂಜೆ ಸೇವಿಸಿದರೆ,ಪಿತ್ತ ಅತಿಸಾರ ಭೇದಿ,ಅಜೀರ್ಣ,ಬಾಯಲ್ಲಿ ಪಿತ್ತದ ನೀರು ಬರುತ್ತಿದ್ದರೆ,ಪಿತ್ತದ ನೀರಿನ ವಾಂತಿಯಾಗುತ್ತಿದ್ದರೆ, ಬಾಯಿ ಹುಣ್ಣು,ಹೊಟ್ಟೆಯಲ್ಲಿನ ಬಾದೆ ಗುಣವಾಗುತ್ತೆ.
ಶರಬತ್ತು ಮಾಡುವ ವಿಧಾನ:-
1.ಬೇಲದ ಹಣ್ಣಿನ ತಿರಳು
2.ಅರ್ಧ ತೆಂಗಿನಕಾಯಿಯ ಹಾಲು
3.ಚಿಟಿಕೆ ಉಪ್ಪು
4.ಚಿಟಿಕೆ ಕರಿ ಮೆಣಸಿನ ಪುಡಿ
5.ಸಕ್ಕರೆ ಅಥವಾ ಬೆಲ್ಲ 2-3 ಚಮಚ
6.1 ಏಲಕ್ಕಿ ಕಾಯಿ ಪುಡಿ
ಹಣ್ಣಿನ ತಿರಳು ತೆಂಗಿನ ಹಾಲು ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ಅರೆದು, ಅದಕ್ಕೆ ಏಲಕ್ಕಿ, ಮೆಣಸಿನ ಪುಡಿ ಉಪ್ಪು ಸೇರಿಸಿ, ಚೆನ್ನಾಗಿ ಕಲಸಿದರೆ ತುಂಬಾ ರುಚಿಯಾದ, ಆರೋಗ್ಯ ಕಾಪಾಡುವ ಬೇಲದ ಜ್ಯುಸ್ ರೆಡಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ ವಂದನೆಗಳು

ಉಡುಪಿ ಜಿಲ್ಲಾಸ್ಪತ್ರೆ ಸೀಲ್ ಡೌನ್: ವೈದ್ಯರು ,ನರ್ಸ್ ಸೇರಿ 14 ಮಂದಿಗೆ ವೈರಲ್ ಕೊರೋನಾ ಸೋಂಕು

ಉಡುಪಿ: ಅಜ್ಜರಕಾಡು ಸರಕಾರಿ ಆಸ್ಪತ್ರೆಗೂ ಕೊರೊನಾ ಬಾಧೆ ಪ್ರಾರಂಭವಾಗಿದ್ದು, ವೈದ್ಯರು, ರೋಗಿಗಳು ಸೇರಿದಂತೆ ಒಟ್ಟು 14 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 

ಗ್ಯಾಂಗ್ರಿನ್‌‌ ಸಮಸ್ಯೆಯಿಂದ ದಾಖಲಾಗಿದ್ದ ರೋಗಿಯಿಂದ ಕೊರೊನಾ ಹರಡಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲ ಮಾದರಿ ಪರೀಕ್ಷೆಯ ಬಳಿಕ ರೋಗಿಗೆ ಕೊರೊನಾ ದೃಢಪಟ್ಟಿದ್ದು, ಈತನ ವಾರ್ಡ್‌‌ನಲ್ಲಿದ್ದ 9 ರೋಗಿಗಳಿಗೂ ಕೊರೊನಾ ಸೋಂಕು ತಗುಲಿದೆ.

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್‌‌‌ ಸೇರಿದಂತೆ ವಾರ್ಡ್‌‌ನಲ್ಲಿ ಸ್ವಚ್ಛತಾ ಕೆಲಸ ಮಾಡಿದ ಸಿಬ್ಬಂದಿ ಹಾಗೂ ಕುಕ್‌ಗೂ ಕೊರೊನಾ ದೃಢಪಟ್ಟಿದ್ದು, ಓರ್ವ ಕೊರೊನಾ ಸೋಂಕಿತ ವೈದ್ಯರು ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ, ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಸದ್ಯ ಗೃಹ ದಿಗ್ಭಂಧನ ಮಾಡಲಾಗಿದ್ದು, ಸೋಂಕಿತರ ವಾರ್ಡ್‌ ಸೇರಿದಂತೆ ಶಸ್ತ್ರಚಿಕಿತ್ಸೆ ಮಾಡಿದ ಕೊಠಡಿಯನ್ನು ಕೂಡಾ ಸೀಲ್‌‌ಡೌನ್‌ ಮಾಡಲಾಗಿದೆ. ಇನ್ನು ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಎರಡು ದಿನಗಳ ನಂತರವೇ ಆಸ್ಪತ್ರೆ ತೆರೆಯಲಿದೆ.

ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ
ಸದ್ಯ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ. ಅಲ್ಲದೇ, ಶಂಕಿತ ಕೊರೊನಾ ರೋಗಿಗಳಿರುವ ಪ್ರತ್ಯೇಕಿತ ವಾರ್ಡ್‌‌ಗಳು ಮಾತ್ರವೇ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ. ಸದ್ಯಕ್ಕೆ ಒಳರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಿಲ್ಲ. ಅಲ್ಲದೇ ಆಸ್ಪತ್ರೆಯಲ್ಲಿ ಹೊರರೋಗಿಯ ವಿಭಾಗವೂ ಕೂಡಾ ಸೇವೆಗೆ ಲಭ್ಯವಿರುದಿಲ್ಲ. ಎರಡು ದಿನಗಳ ಬಳಿಕ ಜಿಲ್ಲಾಸ್ಪತ್ರೆಯು ಸೇವೆಗೆ ಲಭ್ಯವಿದೆ ಎಂದು ತಿಳಿದುಬಂದಿದೆ.

ಸದ್ಯ ಆಸ್ಪತ್ರೆಯಲ್ಲಿ 90 ಒಳರೋಗಿಗಳಿದ್ದಾರೆ

ಜುಲೈ 16, 2020; ಗುರುವಾರ: ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಡ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಗುರುವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:41
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಮಯ 10:31

ಮೇಷ

ನಿಗದಿತ ಸಮಯದಲ್ಲಿ ಕೆಲಸ–ಕಾರ್ಯಗಳು ನೆರವೇರಿ ನೆಮ್ಮದಿ. ತ್ಯಾಗ ಮನೋಭಾವದಿಂದಾಗಿ ಅನೇಕರಿಗೆ ಸಾಂತ್ವನ, ನೆಮ್ಮದಿ ನೀಡುವಿರಿ. ಸಾರ್ವಜನಿಕ ಪುರಸ್ಕಾರಕ್ಕೆ ಪಾತ್ರರಾಗುವ ಸಾಧ್ಯತೆ.

ವೃಷಭ

ಒದಗಿ ಬಂದ ಭಯದಿಂದ ಮುಕ್ತಿ ಹೊಂದಿ ಮಾನಸಿಕ ನಿರಾಳತೆ. ವೈಯಕ್ತಿಕ ಸಂಬಂಧಗಳಲ್ಲಿ ಬದಲಾವಣೆ. ಪ್ರಯಾಣ ಸಾಧ್ಯತೆ. ಕುಟುಂಬ ವರ್ಗದವರಿಂದ ಶುಭ ಸಮಾಚಾರಗಳು ಕೇಳಿಬರಲಿವೆ. ದೇವರ ದರ್ಶನ ಭಾಗ್ಯ.

ಮಿಥುನ

ಕಾರ್ಯದಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಯಶಸ್ಸು. ಇತರರ ಹಸ್ತಕ್ಷೇಪವನ್ನು ವಿರೋಧಿಸಿ ಕೆಂಗಣ್ಣಿಗೆ ತುತ್ತಾಗುವ ಸಾಧ್ಯತೆ. ಪರಿಸ್ಥಿತಿ ನಿಭಾಯಿಸಲು ಗಟ್ಟಿ ನಿರ್ಧಾರ ಅವಶ್ಯ. ಮೇಲಧಿಕಾರಿಗಳ ಸಹಕಾರ ದೊರಕಲಿದೆ.

ಕಟಕ

ಗೊಂದಲಗಳಿಗೆ ಸುಲಭ ಪರಿಹಾರ ದೊರಕಲಿದೆ. ಸಾಮಾಜಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ತೊಡಕುಂಟಾಗುವ ಸಾಧ್ಯತೆ. ಸ್ನೇಹಿತರ ಸಕಾಲಿಕ ನೆರವಿನಿಂದಾಗಿ ಚಿಂತೆಗಳು ದೂರವಾಗಲಿವೆ.

ಸಿಂಹ

ಆತ್ಮೀಯರ ಸಲಹೆಗಳನ್ನು ತಿರಸ್ಕರಿಸಬೇಡಿ. ಮುಂದಿನ ಯೋಜನೆಗಳ ನಿರೂಪಣೆಯ ಸಾಧ್ಯತೆ. ಕಾರ್ಯಕಲಾಪಗಳಿಗೆ ಉತ್ತಮ ಸಹಕಾರ ದೊರಕುವುದು. ವಿದ್ಯಾರ್ಥಿಗಳಿಗೆ ಪ್ರಯತ್ನದಲ್ಲಿ ಯಶಸ್ಸು.

ಕನ್ಯಾ

ಬೇರೆಯವರಿಂದ ಮೋಸ ಹೋಗುವ ಸಾಧ್ಯತೆ ಇದೆ. ಎಚ್ಚರದಿಂದಿರಿ. ನಿಮ್ಮ ಔದಾರ್ಯದ ದುರುಪಯೋಗವಾಗದಂತೆ ನೋಡಿಕೊಳ್ಳಿ. ಕುಶಲಕರ್ಮಿಗಳಿಗೆ ಅವಕಾಶಗಳು ಹರಿದುಬರಲಿವೆ.

ತುಲಾ

ಅತ್ಯಾಕಾಂಕ್ಷೆಯ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳುವಿರಿ. ವೃತ್ತಿಯಲ್ಲಿ ಯಶಸ್ಸು ದೊರೆತು ಜೀವನಮಟ್ಟದಲ್ಲಿ ಸುಧಾರಣೆ. ನಿರುದ್ಯೋಗಿಗಳಿಗೆ ಶುಭ ಸಮಾಚಾರ.

ವೃಶ್ಚಿಕ

ಧೈರ್ಯದಿಂದ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಕುಟುಂಬ ಸಮೇತ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ದಿಟ್ಟ ನಿಲುವಿನಿಂದಾಗಿ ಮನೆಯಲ್ಲಿ ಸಮಾಧಾನದ ವಾತಾವರಣ. ಬಂಧುಗಳ ಭೇಟಿ.

ಧನು

ಪರಸ್ಪರ ಸಂಶಯಗಳು ದೂರವಾಗಿ ಮನಸ್ಸು ಹಗುರವಾಗುವುದು. ಧೈರ್ಯದ ನಡೆಯಿಂದ ಅಗತ್ಯ ಕೆಲಸ–ಕಾರ್ಯಗಳು ಕೈಗೂಡುವವು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಅಡ್ಡಿ ಆತಂಕ ಉಂಟಾಗಬಹುದು.

ಮಕರ

ಕೂಲಂಕಷ ಚರ್ಚೆಯ ನಂತರ ಯಾವುದೇ ನಿರ್ಧಾರ ಕೈಗೊಳ್ಳುವುದು ಉತ್ತಮ. ಕೆಲವು ಅನಿರೀಕ್ಷಿತ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಸ್ನಾಯು ಸಂಬಂಧಿ ನೋವುಗಳನ್ನು ಅನುಭವಿಸುವ ಸಾಧ್ಯತೆ.

ಕುಂಭ

ಉನ್ನತ ಭಾವನೆಯಿಂದಾಗಿ ಯೋಜನೆಗಳಲ್ಲಿ ಯಶಸ್ಸು. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಕುರುಡು ಅಭಿಮಾನಗಳು ದೂರವಾಗಿ ನಿಷ್ಕಲ್ಮಷ ಪ್ರೀತಿ ವಿಶ್ವಾಸ ಗಳಿಸುವಿರಿ. ಕುಲದೇವತಾ ದರ್ಶನದಿಂದ ನೆಮ್ಮದಿ.

ಮೀನ

ಮನಸ್ಸಿನ ನೋವುಗಳೆಲ್ಲವೂ ದೂರವಾಗಿ ನೆಮ್ಮದಿ. ಇತರರ ಕಷ್ಟ ಸುಖಗಳಲ್ಲಿ ಭಾಗಿಯಾಗುವಿರಿ. ಕಾರ್ಯ ಯೋಜನೆಗೆ ಪೂರಕವಾದ ವಿಷಯಗಳು ಸಂಗ್ರಹಗೊಂಡು ಯಶಸ್ಸಿನತ್ತ ಹೆಜ್ಜೆ ಹಾಕುವಿರಿ.

ಇಂದಿನ ಔಷಧೀಯ ಸಸ್ಯ ಪರಿಚಯ: ಸೊಗದೇಬೇರು

ಅನಂತಮೂಲ್(ಸುಗಂಧಿನಿ) ಅನಂತಮೂಲ ಸುಗಂಧಿಬೇರು(ಬಳ್ಳಿ) ಸೊಗದೇ ಬೇರು ನಾಮದಬೇರು ಸುಗಂಧಿಪಾಲ್ ನರುನೀಡಿ ನರುನಿಂಡಿ ಕೃಷ್ಣವಳ್ಳಿ ನನ್ನಾರಿ ನರ್ಕಲಮೂಲಂ ನೆರುನೆಟ್ಟಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅನಂತಮೂಲ ಎಂಬ ಹೆಸರಿನ ಬೇರು ಹೆಸರಿಗೆ ತಕ್ಕಂತೆ ಅಗಣಿತ ಔಷಧೀಯ ಗುಣಗಳನ್ನು ತನ್ನ ಒಡಲೆಲ್ಲ ತುಂಬಿಕೊಂಡಿದೆ.ಇದರ ಔಷಧೀಯ ಗುಣಗಳಿಂದಲೇ ಇದನ್ನು ತಮಿಳ್ ನಲ್ಲಿ"ಮೂಲಿಕೈ ಅರಸನ್" ಎಂದು ಕರೆಯುತ್ತಾರೆ. ಈ ಬೇರು ಔಷಧೀಯ ಗುಣಗಳಲ್ಲದೆ, ತುಂಬಾ ಸುವಾಸನೆಯಿಂದ ಕೂಡಿದ್ದು ಸುಗಂಧಿನಿ ಎಂತಲೂ ಕರೆಯುತ್ತಾರೆ.ಇದರಲ್ಲಿ ಎರಡು ಪ್ರಭೇದಗಳಿವೆ. ಸೊಗದೇ ಬೇರಿನ ಕಷಾಯ(ಷರಬತ್ತು) ಅನೇಕ ವ್ಯಾಧಿಗಳನ್ನು ಗುಣಪಡಿಸಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.ಈ ಬೇರಿನ ಕಷಾಯ ತುಂಬಾ ಸುವಾಸನೆಯಿಂದ ಕೂಡಿದ್ದು, ಶಕ್ತಿದಾಯಕ ಹಾಗೂ ಆರೋಗ್ಯದಾಯಕ ಪಾನೀಯ.ಬೇಸಿಗೆ ಕಾಲಕಂತು ಹೇಳಿ ಮಾಡಿಸಿದಂತಹ ಪಾನೀಯ. ಈ ಕಷಾಯ ಸೇವನೆಯಿಂದ ಮೈಯಲ್ಲಿನ ಉಷ್ಣತೆಯನ್ನು ಕಡಿಮೆ ಮಾಡುವುದಲ್ಲದೆ, ಹಸಿವನ್ನು ವೃದ್ಧಿಸುತ್ತೆ.ಮೈಯಲ್ಲಿನ ರಕ್ತವೆಲ್ಲ ಶುದ್ಧಿಯಾಗುತ್ತೆ. ಈ ಕಷಾಯ ಸೇವಿಸುವುದರಿಂದ ಕೀಲುನೋವು, ಜ್ವರ, ಚರ್ಮ ವ್ಯಾಧಿಗಳು, ಕೆಮ್ಮು, ಕಫ, ಪಿತ್ತ, ಮೂರ್ಛೆ,ಜಠರಕ್ಕೆ ಸಂಬಂಧಿಸಿದ ರೋಗಗಳು, ಶಮನವಾಗುತ್ತೆ.ಇದೇ ಕಷಾಯ ಹಲ್ಲು ನೋವಿದ್ದಾಗ ಬಾಯಗೆ ಹಾಕಿಕೊಂಡು ಕುಪ್ಪಿಳಿಸುತ್ತಿದ್ದರೆ ಎಂತಹ ಹಲ್ಲುನೋವು ಗುಣವಾಗುತ್ತೆ. ಗರ್ಭಿಣಿಯರು ಪ್ರಸವ ವೇಳೆ ಈ ಕಷಾಯ ಕುಡಿದರೆ ಯಾವುದೇ ತೊಂದರೆಗಳಿಲ್ಲದೆ ಸುಖ ಪ್ರಸವವಾಗುತ್ತೆ, ಮಗುವು ಆರೋಗ್ಯವಾಗಿರುತ್ತೆ. ಅಂತಾ ಬಲ್ಲವರು ಹಳ್ಳಿಗಳಲ್ಲಿ ಹೇಳುತ್ತಾರೆ. ಇದರ ಬೇರು ನಾಟಿ ಹಸುವಿನ ಗಂಜಲದಲ್ಲಿ ಅರೆದು ಲೇಪನ ಮಾಡಿದರೆ ದದ್ದು ನವೆ ಗಜ್ಜಿ ತಾಮರ ಶೀಘ್ರವಾಗಿ ಗುಣವಾಗುತ್ತೆ. ಈ ಕಷಾಯ ಸೇವಿಸುತ್ತಾ ಬಂದರೆ ಗಂಡಸರಲ್ಲಿ ವೀರ್ಯಾಣು ವೃದ್ಧಿಯಾಗಿ ನಪುಂಷಕತ್ವ ದೂರವಾಗುತ್ತೆ.ಇದೇ ಕಷಾಯ ಸೇವನೆಯಿಂದ ಹೆಂಗಸರಲ್ಲಿನ ಅತಿಯಾದ ಋತಶ್ರಾವ ನಿಯಂತ್ರಿಸುತ್ತದೆ. ಪೂರ್ವಿಕರು ಹಾವು ಚೇಳು ಹೆಜ್ಜೇನು ವಿಷ ನಿವಾರಣೆ ಮಾಡಲು ಉಪಯೋಗಿಸುತ್ತಿದ್ದರು. ಕಷಾಯ ಮಾಡುವ ವಿಧಾನ:- ಒಂದು ಮಡಿಕೆಯಲ್ಲಿ 50 ಗ್ರಾಂ ಬೇರನ್ನು ಹಾಕಿ, 1/2 ಲೀಟರ್ ನೀರನ್ನು ಹಾಕಿ, ಒಲೆಯ ಮೇಲಿಟ್ಟು ಮಂದ ಹುರಿಯಲ್ಲಿ ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಾದಾಗ 30ml ಕಷಾಯಕ್ಕೆ 1 ಚಮಚ ಕೆಂಪು ಕಲ್ಲು ಸಕ್ಕರೆ ಅಥವಾ1ಚಮಚ ಜೇನುತುಪ್ಪ ನಾಲ್ಕೈದು ತೊಟ್ಟು ನಿಂಬೆಹಣ್ಣಿನ ಸೇರಿಸಿ ಸೇವಿಸಬೇಕು.ಬೇಕಾದ್ರೆ 1/4 ಚಮಚ ಕಾಮಕಸ್ತೂರಿ ಬೀಜ ಅಥವಾ ಹೊಲ ತುಳಸಿ ಬೀಜವನ್ನು ಸಹಾ ಸೇರಿಸಿ ಸೇವಿಸಬಹುದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು

ಜುಲೈ 15,2020; ಬುಧವಾರ: ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಬುಧವಾರ, ಭರಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16

ಮೇಷ

ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕಂಡುಬರುತ್ತಿದೆ. ಆಸ್ತಿ ಖರೀದಿ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸ ಕುರಿತು ಚಿಂತನೆ ನಡೆಸಲಿದ್ದೀರಿ. ವಿದೇಶಿ ವ್ಯಾಪಾರದ ಬಗ್ಗೆ ಮರುಚಿಂತನೆ ನಡೆಸುವುದು ಉತ್ತಮ.

ವೃಷಭ

ಯೋಜನೆಯೊಂದರ ಪೂರ್ಣತೆಗಾಗಿ ನಿಮ್ಮ ಸಂಪೂರ್ಣ ಶಕ್ತಿಯುಕ್ತಿಗಳನ್ನು ವ್ಯಯಿಸಲಿದ್ದೀರಿ. ಯೋಜನೆಯಲ್ಲಿನ ಸುಧಾರಣೆಗೆ ಅನ್ಯರ ಸಹಕಾರವೂ ದೊರಕಲಿದೆ. ಕಠಿಣ ಕಾರ್ಯವೊಂದನ್ನು ಮಾಡಲಿದ್ದೀರಿ.

ಮಿಥುನ

ಬೇದಭಾವಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ದಿಟ್ಟ ನಡೆಯನ್ನು ಅನುಸರಿಸಲಿದ್ದೀರಿ. ಹೊಸ ನೀತಿಯಿಂದಾಗಿ ವಿಶಿಷ್ಟ ಕಾರ್ಯವೊಂದನ್ನು ಕೈಗೆತ್ತಿಕೊಳ್ಳುವಿರಿ. ಉತ್ತಮ ಯೋಜನೆಗಳನ್ನು ರೂಪಿಸಲಿದ್ದೀರಿ.

ಕಟಕ

ವಿವಿಧ ಮೂಲಗಳಿಂದ ಹಣಕಾಸಿನ ಅನುಕೂಲ ಒದಗಿ ಬರಲಿದೆ. ಕೆಲಸ–ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯುವವು. ಉದ್ಯೋಗಸ್ಥರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು.

ಸಿಂಹ

ಸ್ನೇಹಿತರ ಸಹಕಾರವನ್ನು ಸಂಪೂರ್ಣ ಬಳಸಿಕೊಂಡು ಲಾಭವನ್ನು ಹೊಂದಲಿದ್ದೀರಿ. ಆಸ್ತಿ ಖರೀದಿ ವಿಚಾರವಾಗಿ ಮಾತುಕತೆಯಲ್ಲಿ ಭಾಗಿಯಾಗುವ ಲಕ್ಷಣಗಳು ಕಾಣುತ್ತಿವೆ.

ಕನ್ಯಾ

ನಿಮ್ಮ ಬಗೆಗಿನ ಅನುಮಾನಗಳು ದೂರವಾಗಲಿವೆ. ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿರಿ. ಆಶ್ಚರ್ಯಕರ ಸಂಗತಿಯೊಂದು ಘಟಿಸಲಿದೆ. ಆರೋಗ್ಯದಲ್ಲಿ ಸುಧಾರಣೆ.

ತುಲಾ

ಕೆಲಸ–ಕಾರ್ಯಗಳು ಸುಗಮವಾಗಿ ಸಾಗಲಿವೆ. ಸಂಬಂಧಿಕರಿಂದ ನಿಮ್ಮ ದರ್ಪದ ನಡೆಗಳಿಗೆ ಕಡಿವಾಣ ಬೀಳುವ ಸಾಧ್ಯತೆ. ಕನಸಿನ ಲೋಕದಿಂದ ಹೊರಬಂದು ವ್ಯವಹರಿಸುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ

ಎಲ್ಲಾ ರೀತಿಯ ಅನುಕೂಲತೆಗಳು ದೊರಕಿ ಮಾನಸಿಕ ಸಮಾಧಾನ ಹೊಂದುವಿರಿ. ಧಾರ್ಮಿಕ ಕೆಲಸ–ಕಾರ್ಯಗಳೆಡೆಗೆ ಮನಸ್ಸನ್ನು ಕೇಂದ್ರೀಕರಿಸಲಿದ್ದೀರಿ. ಕೌಟುಂಬಿಕ ಸಮಸ್ಯೆಗಳೆಲ್ಲವೂ ದೂರವಾಗಲಿವೆ.

ಧನು

ಸಂಬಂಧಿಕರಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವ ಸಲುವಾಗಿ ಶ್ರಮ ವಹಿಸಲಿದ್ದೀರಿ. ಅನುನಯದ ನಡೆಯಿಂದಾಗಿ ಕಾರ್ಯಸಿದ್ಧಿ. ಹೊಸ ವಿಷಯದ ಬಗೆಗೆ ಆಪ್ತರೊಡನೆ ಚಿಂತನೆ ನಡೆಸಲಿದ್ದೀರಿ.

ಮಕರ

ನಿಮ್ಮ ಪ್ರಯತ್ನದೊಂದಿಗೆ ಇತರರ ಸಹಾಯವೂ ದೊರಕುವುದರಿಂದಾಗಿ ಕೆಲಸ–ಕಾರ್ಯಗಳು ಚುರುಕುಗೊಳ್ಳಲಿವೆ. ಕಾರ್ಯನಿರ್ವಹಣೆ ವಿಷಯದಲ್ಲಿ ದೃಢನಿರ್ಧಾರವನ್ನು ತಳೆಯಲಿದ್ದೀರಿ.

ಕುಂಭ

ಸಣ್ಣ ವಿಷಯದ ಬಗೆಗೂ ಹೆಚ್ಚಿನ ಗಮನ ವಹಿಸಿ ಕಾರ್ಯ ನಿರ್ವಹಿಸುವಿರಿ. ಮನೆಯವರೊಂದಿಗಿನ ತಾರತಮ್ಯವು ದೂರವಾಗಿ ಸಂತಸ ಮೂಡಿಬರಲಿದೆ. ಬುದ್ಧಿವಂತಿಕೆಯಿಂದ ಕೆಲಸ ನಿಭಾಯಿಸಲಿದ್ದೀರಿ.

ಮೀನ

ಕೈಗೊಂಡ ಕೆಲಸ–ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಪೂರ್ಣಗೊಳ್ಳಲಿದೆ. ಮಾನಸಿಕ ಚಿಂತೆಗಳು ದೂರವಾಗಿ ಆತ್ಮವಿಶ್ವಾಸವನ್ನು ಹೊಂದುವಿರಿ. ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ.

ಇಂದಿನ ಔಷಧೀಯ ಸಸ್ಯ ಪರಿಚಯ: ಕಾಡುಬದನೆ

ದುಃಸ್ಫರ್ಶ (ಕಂಟಕಾರಿ) ಬಹುಕಂಟಿ,ಹಿರಣ್ಯಪುಷ್ಠಿ, ಲಘು ಪಂಚಮೂಲ,ನಿಧಿಗಧಿಕಾ, ಕ್ಷುದ್ರಕಂಟಿ,ಕಾಟೀರಿಂಗಣಿ, ಮುಳ್ಳುಸುಂಡೆ, ಕಾಡು ಬದನೆ,ಮುಲ್ಲು ವಂಕಾಯಿ, ಕಾಟು ಕತ್ತರಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ. ಹೊಲಗಳ ಬದಿಗಳ ಮೇಲೆ, ಪಾಳು ಭೂಮಿ, ರಸ್ತೆಗಳ ಪಕ್ಕ, ಬಯಲು ಪ್ರದೇಶಗಳಲ್ಲಿ, ಮುಳ್ಳುಕಂಟಿ ಕಾಡುಗಳಲ್ಲಿ, ಬೇಲಿಸಾಲುಗಳಲ್ಲಿ ಸ್ವಾಭಾವಿಕವಾಗಿ 3 ರಿಂದ 6 ಅಡಿ ಎತ್ತರ, ಪೊದೆಯಂತೆ ಬೆಳೆಯುವ ಕಂಟಕಾರಿ, ಗಿಡಪೂರ್ತಿ ಮುಳ್ಳುಗಳಿಂದ ಕೂಡಿದ್ದು, ಬದನೆ ಹೂಗಳನ್ನು ಹೋಲುವ ಐದು ದಳಗಳ ತಿಳಿ ನೇರಳೆ ಬಣ್ಣದ ಹೂವುಗಳು, ಹಳದಿ, ಕೇಸರಿ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳಿಂದ ಕೂಡಿರುವ ಅಸಾಧಾರಣ ಔಷಧೀಯ ಗುಣಗಳನ್ನು ಒಡಲಲ್ಲಿ ತುಂಬಿಕೊಂಡಿರುವ ಗಿಡ.ಇದರಲ್ಲಿ ಅನೇಕ ಪ್ರಭೇದಗಳಿದ್ದು, ಸಮಾನ ಔಷಧೀಯ ಗುಣಗಳಿರುವುದಾಗಿ, ಆಯುರ್ವೇದದಲ್ಲಿ ಗುರ್ತಿಸುತ್ತಾರೆ. ಕಂಟಕಾರಿಯಲ್ಲಿ ತಯಾರಿಸಿರುವ ಕಂಟಕಾರಿ ಘ್ರುತ, ಕಂಟಕಾರಿ ಲೇಹ, ಕಂಟಕಾರಿ ಕಲ್ಪ, ಈಗೆ ಅನೇಕ ರೀತಿಯ ಕಷಾಯಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.ಕೆಮ್ಮು, ದಮ್ಮು, ಅಸ್ತಮಾ, ಗಂಟಲು ಊತಗಳ ಚಿಕಿತ್ಸೆಗೆ ಪರಿಣಾಮಕಾರಿಯಾದ ಔಷಧೀಯವಾಗಿ ಕಂಟಕಾರಿ ಬಳಕೆಯಾಗುತ್ತದೆ. ಆಡುಸೋಗೆ ಚಿಗರು, ತುಳಸಿ, ಹಿಪ್ಪಲಿ, ಶುಂಠಿ, ಕಾಳು ಮೆಣಸು,ಚಿಟಿಕೆ ಅರಸಿಣ, ಕಂಟಕಾರಿ ಬೇರನ್ನು, ಒಂದು ತಾಮ್ರ ಅಥವಾ ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ 250ml ನೀರು ಹಾಕಿ, ಒಲೆಯ ಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಸೋಸಿಕೊಂಡ ಕಷಾಯ ಕೆಮ್ಮು, ದಮ್ಮು, ಕಫ ನಿವಾರಣೆಗೆ ಪರಿಣಾಮಕಾರಿ ದಿವೌಷಧಿ.ಈ ಕಷಾಯ ಜೇನುತುಪ್ಪದೊಡನೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ಕಂಟಕಾರಿ ಹಣ್ಣುಗಳನ್ನು ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿ ಮಾಡಿಟ್ಟುಕೊಂಡು, ಪುಡಿಯನ್ನು ಕೆಂಡದ ಮೇಲೆ ಹಾಕಿದಾಗ ಬರುವ ಹೊಗೆಯನ್ನು ಸ್ವಲ್ಪ ಹೊತ್ತು ಬಾಯಿ ತುಂಬಿಕೊಳ್ಳುವುದರಿಂದ ಹುಳಕು ಹಲ್ಲು ಗುಣವಾಗುತ್ತೆ.ಇದು ಹುಳುಕು ಹಲ್ಲಿನ ಚಿಕಿತ್ಸೆಗೆ ಇರುವ ಜನಪ್ರಿಯ ಔಷಧೀಯ ಪದ್ಧತಿ. ಕಂಟಕಾರಿ ಹಣ್ಣುಗಳನ್ನು ತಂದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು, 1 ಲೋಟ ಹಾಲಿಗೆ, 1 ಚಮಚ ಚೂರ್ಣ, 1 ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲುಸಕ್ಕರೆ ಕಲಸಿ ಕ್ರಮ ತಪ್ಪದೆ,ಊಟಕ್ಕೆ ಅರ್ಧಗಂಟೆ ಮೊದಲು ಸೇವಿಸುತ್ತಿದ್ದರೆ ಕಾಮೋತ್ತೇಜಕವಾಗಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಬಿಳಿ ಹೂವುಗಳು ಬಿಡುವ ಕಂಟಕಾರಿ ಗಿಡದ ಹೂವುಗಳನ್ನು ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ವಿಶೇಷವಾಗಿ ಸ್ತ್ರೀಯರ ಗರ್ಭಾಶಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಔಷಧಿಯಾಗಿ ಆಯುರ್ವೇದದಲ್ಲಿ ವೈದ್ಯರು ಉಪಯೋಗಿಸುತ್ತಾರೆ.

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮೊಣಕಾಲು ನೋವು,ಬಾವು ಇದ್ದಾಗ,ಕಂಟಕಾರಿ ತಾಜಾ ಹಣ್ಣುಗಳನ್ನು ತಂದು, ತಿರಳನ್ನು ಹಿಚುಕಿ, ಲೇಪನ ಮಾಡುತ್ತಿದ್ದರೆ ಶೀಘ್ರ ಬಾವು, ನೋವು ಶಮನವಾಗುತ್ತೆ.
ಮಕ್ಕಳಿಗೆ ಕೆಮ್ಮು ಇದ್ದಾಗ, ಇದರ ಚೂರ್ಣವನ್ನು ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿಸುವುದರಿಂದ ಬೇಗ ಗುಣವಾವುತ್ತೆ.
ಗಂಟಲು ನೋವಿದ್ದಾಗ, ಕಂಟಕಾರಿ ಎಲೆಗಳ ರಸವನ್ನು ಹೊರ ಲೇಪನ ಮಾಡುವುದರಿಂದ ಶೀಘ್ರ ನೋವು ನಿವಾರಣೆಯಾಗುತ್ತೆ.
ಕಂಟಕಾರಿ ಸಮೂಲದ ಕಷಾಯ 30ml ನಂತೆ, ಬೆಳಿಗ್ಗೆ ಸಂಜೆ ಸೇವಿಸುತ್ತಿದ್ದರೆ, ಮಂಡಿನೋವು, ಕೀಲು ನೋವು, ಬೆನ್ನುನೋವು ಶೀಘ್ರ ಗುಣವಾಗುತ್ತೆ. ಅಸ್ತಮಾ ಸಹ ಅತೋಟಿಗೆ ಬರುತ್ತೆ.ಜೀರ್ಣಕ್ರಿಯೆ ಸುಗುಮವಾಗಿ, ಕರುಳಿನ ಸಮಸ್ಯೆಗಳು ದೂರವಾಗುತ್ತೆ.
250ml ಕಂಟಕಾರಿ ಎಲೆಯ ರಸಕ್ಕೆ, 250ml ಎಳ್ಳೆಣ್ಣೆ ಸೇರಿಸಿ, ಒಂದು ತಾಮ್ರದ ಪಾತ್ರೆಯಲ್ಲಿ ಹಾಕಿ, ಒಲೆಯಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ನೀರಿನಾಂಶ ಹಿಂಗಿ, ಎಣ್ಣೆ ಮಾತ್ರ ಉಳಿದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, ಒಂದು ಗಾಜಿನ ಸೀಸೆಯಲ್ಲಿ ಭದ್ರಪಡಿಸಿಟ್ಟುಕೊಂಡು, ಕೀಲುನೋವು, ಮಂಡಿನೋವು, ಮೈಕೈನೋವು, ತಲೆನೋವು ಇದ್ದಾಗ ಲೇಪನ ಮಾಡುತ್ತಿದ್ದರೆ, ನೋವು, ಊತ ಬೇಗನೆ ಗುಣವಾಗುತ್ತೆ.
ಮಳೆಗಾಲ ಹಾಗು ಚಳಿಗಾಲಕ್ಕೆ ಶೀತ, ಕೆಮ್ಮು, ದಮ್ಮು, ಜ್ವರ, ಗಂಟಲು ನಸನಸ, ಗಂಟಲು ಊತ ನಿವಾರಣೆಗೆ ಕಂಟಕಾರಿ ಕಷಾಯ ಹೇಳಿ ಮಾಡಿಸಿದಂತಹ ದಿವೌಷಧಿ.
ಮೊದಲೇ ಬಿಸಿಬಿಸಿ ಕಂಟಕಾರಿ ಕಷಾಯವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ, ಜನರನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿಯಿಂದಲೂ ರಕ್ಷಣೆ ಪಡೆಯಬಹುದಾಗಿದೆ.
ಕಂಟಕಾರಿಯ ಔಷಧೀಯ ಗುಣಗಳು ಅಪಾರ. ಗೆಳೆಯರೆ ವಂದನೆಗಳು ನಾಳೆ ಇನ್ನೊಂದು ಗಿಡಮೂಲಿಕೆಯ ಬಗ್ಗೆ ತಿಳಿಯೋಣ

ಜುಲೈ 14, 2020; ಮಂಗಳವಾರ: ಇಂದಿನ ರಾಶಿಫಲ

ಮೇಷ

ಅದೃಷ್ಟದ ಶುಭವಾರ್ತೆಯನ್ನು ಕೇಳಲಿದ್ದೀರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹತ್ತಿ, ಅರಳೆ ಬಟ್ಟೆ ವ್ಯಾಪಾರಿಗಳಿಗೆ ಆದಾಯದಲ್ಲಿ ಹೆಚ್ಚಳ. ಸಾರಿಗೆ ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ.

ವೃಷಭ

ಸುಖ, ಸಂತೋಷ ಮನೋಲ್ಲಾಸದಿಂದಿರುವಿರಿ. ಮನೆಯಲ್ಲಿ ಶುಭಸಂಭ್ರಮ ಮನೆಮಾಡಲಿದೆ. ಮಿಶ್ರಲೋಹ, ಕಬ್ಬಿಣ ಮುಂತಾದ ಲೋಹದ ವ್ಯಾಪಾರಿಗಳಿಗೆ ವ್ಯವಹಾರ ಉತ್ತಮಗೊಂಡು ಅಧಿಕ ಲಾಭ.

ಮಿಥುನ

ದೂರದ ಪ್ರವಾಸವನ್ನು ಮುಂದೂಡಲಿದ್ದೀರಿ. ಕ್ಷೇತ್ರದರ್ಶನದ ಭಾಗ್ಯ ನಿಮ್ಮ ಪಾಲಿಗಿದೆ. ಹಿರಿಯ ಅಧಿಕಾರಿಗಳ ಸಹಮತದೊಂದಿಗೆ ಕೆಲಸ–ಕಾರ್ಯಗಳು ಸುಗಮ. ರಸಗೊಬ್ಬರ ವಿತರಕರಿಗೆ ವ್ಯವಹಾರದಲ್ಲಿ ಉತ್ಸಾಹ.

ಕಟಕ

ಕಚೇರಿ ಕೆಲಸಗಳಲ್ಲಿ ಯಶಸ್ಸು. ವ್ಯವಹಾರದಲ್ಲಿ ಔನ್ನತ್ಯ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಪ್ರತಿಷ್ಠೆಯಿಂದಾಗಿ ವಿರೋಧವನ್ನು ಎದುರಿಸಬೇಕಾದೀತು. ಹೋಟೆಲ್ ಮಾಲಿಕರಿಗೆ ಕೆಲಸಗಾರರ ದೆಸೆಯಿಂದ ನಷ್ಟ.

ಸಿಂಹ

ಉದ್ಯೋಗ ವ್ಯವಹಾರಗಳಲ್ಲಿ ಸಂತಸ. ವೃತ್ತಿಯಲ್ಲಿ ಉತ್ತಮ ಸುದ್ದಿಯನ್ನು ಕೇಳಲಿದ್ದೀರಿ. ಲೇವಾದೇವಿ ವ್ಯವಹಾರದಲ್ಲಿ ಹಣದ ಕೊರತೆ ಕಂಡಬರಲಿದೆ. ಸ್ತ್ರೀಯರಿಗೆ ವಿವಾಹ ನಿಶ್ಚಯ ಸಂಭವ.

ಕನ್ಯಾ

ಉದ್ಯೋಗ ವ್ಯವಹಾರಗಳು ಸುಗಮವಾಗಲಿವೆ. ದ್ರವ್ಯಾನುಕೂಲತೆ ಕಂಡುಬರುವುದು. ಬುದ್ಧಿವಂತಿಕೆಯ ವ್ಯವಹಾರದಿಂದಾಗಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಣ ಹೂಡಿಕೆಯಲ್ಲಿ ಎಚ್ಚರ ವಹಿಸುವುದು ಸೂಕ್ತ.

ತುಲಾ

ರಾಜಕೀಯ ವ್ಯಕ್ತಿಗಳಿಗೆ ಗುಪ್ತ ಧನಲಾಭವಾಗುವ ಸಾಧ್ಯತೆ. ತಂತ್ರಜ್ಞರಿಗೆ ರಕ್ಷಣಾಧಿಕಾರಿಗಳು, ವೈದ್ಯರುಗಳಿಗೂ ಸಾಮಾಜಿಕ ಪುರಸ್ಕಾರ ಸನ್ಮಾನಗಳು ಎದುರುಗೊಳ್ಳಲಿವೆ. ಕಲಾವಿದರುಗಳಿಗೆ ಧನ ಲಾಭ.

ವೃಶ್ಚಿಕ

ವಿನಾಕಾರಣ ಕಾನೂನು ಕಟ್ಟಳೆಗಳನ್ನು ಎದುರಿಸಬೇಕಾದೀತು. ಹಣದ ಕೊರತೆ ಕಂಡುಬರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ವಿರೋಧ. ದೇಹಾಲಸ್ಯ ಕಂಡುಬರಲಿದೆ. ದ್ರವ್ಯ ಹಾನಿಯ ಸಾಧ್ಯತೆ ಕಂಡುಬರುತ್ತಿದೆ.

ಧನು

ಉದ್ಯೋಗ ವ್ಯವಹಾರಗಳು ವೃದ್ಧಿ ಮತ್ತು ಧನಲಾಭ. ಸ್ತ್ರೀಯರಿಗೆ ಪುತ್ರ ಸಂತಾನ ಭಾಗ್ಯ ಸಾಧ್ಯತೆ. ಬುದ್ಧಿ ಚಾತುರ್ಯದಿಂದ ಕಾರ್ಯಗಳಲ್ಲಿ ಯಶಸ್ಸು. ಷೇರು ವ್ಯವಹಾರದಿಂದಾಗಿ ಅಧಿಕ ಲಾಭದ ಸಾಧ್ಯತೆ.

ಮಕರ

ವಸ್ತುಗಳ ಸಗಟು ವ್ಯವಹಾರಗಳು ವಿಫಲವಾಗುವ ಸಾಧ್ಯತೆ. ಮಿತ್ರ ಹಾಗೂ ಪಾಲುಗಾರಿಕೆ ವ್ಯವಹಾರದಲ್ಲಿ ಅಪನಂಬಿಕೆ ಅಪವಾದ ಎದುರಾದೀತು. ಪ್ರಯಾಣದಲ್ಲಿ ಕಲಹ. ಶುಭ ಕಾರ್ಯಗಳಲ್ಲಿ ವ್ಯತ್ಯಯ ಕಂಡಬರಲಿದೆ.

ಕುಂಭ

ಉತ್ಸವ ಸಮಾರಂಭಗಳಲ್ಲಿ ಭಾಗಿಯಾಗಲಿದ್ದೀರಿ. ಪ್ರಿಯ ವ್ಯಕ್ತಿಗಳಿಂದ ಒಳ್ಳೆಯ ಸುದ್ದಿಯೊಂದನ್ನು ಕೇಳಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣ. ಸಂಗಾತಿಯ ನಡವಳಿಕೆಯಿಂದಾಗಿ ಬೇಸರ ಉಂಟಾದೀತು.

ಮೀನ

ಕೈಗಾರಿಕೆ ಹಾಗೂ ಉದ್ದಿಮೆದಾರಿಗೆ ಉದ್ಯೋಗದಲ್ಲಿ ಉತ್ಕೃಷ್ಟತೆಯ ಕಾಲ. ದ್ರವ್ಯ ಮತ್ತು ಕನಕಾಭರಣ ಗಳನ್ನು ಹೊಂದುವ ಸಾಧ್ಯತೆ ಕಂಡುಬರುತ್ತಿದೆ. ಎಣ್ಣೆ, ತೈಲ, ತುಪ್ಪ ಮುಂತಾದವುಗಳ ವ್ಯಾಪಾರಸ್ಥರಿಗೆ ನಷ್ಟ.

Design a site like this with WordPress.com
Get started