ಇಂದಿನ ಔಷಧೀಯ ಸಸ್ಯ ಪರಿಚಯ: ಅಜವಾನ

ಯವಾನಿ (ಓಮು ಕಾಳು) ಬ್ರಹ್ಮದರ್ಭ ಉಗ್ರಬಂಧ ಅಗ್ನಿವರ್ಧಕ ಅಜಮೋದಾ ಅಜಮೂಲ ತೀವ್ರಗಂಧ ವಾತಾರಿ ಶೂಲಹಂತ್ರಿ ವಾಮು ಓಮಮು ಓಮಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಭಾರತೀಯ ಆಯುರ್ವೇದ

ಯುನಾನಿ ಹಾಗೂ ನಾಟಿ ವೈದ್ಯ ಪದ್ಧತಿಯಲ್ಲಿ ಓಮುಕಾಳು ಔಷಧೀಯನ್ನಾಗಿ,ಪುರಾತನ ಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ.
ಉತ್ತರ ಭಾರತದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಯಥೇಚ್ಛವಾಗಿ ಬೆಳೆಯುತ್ತಾರೆ.1ರಿಂದ 2 ಅಡಿ ಬೆಳೆಯುವ ಇದು ಫಲವತ್ತಾದ ಭೂಮಿಯಲ್ಲಿ 3 ಅಡಿವರಿಗೂ ಬೆಳೆಯುತ್ತೆ.
50 ಗ್ರಾಂ ಒಮುಕಾಳನ್ನು ಹುರಿದು ಚೂರ್ಣ ಮಾಡಿಕೊಂಡು,100 ಗ್ರಾಂ ಬೆಲ್ಲವನ್ನು ತೆಗೆದುಕೊಂಡು, ಎರಡನ್ನು ಚೆನ್ನಾಗಿ ಮಿಶ್ರಣಮಾಡಿ, ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು,ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸಂಜೆ ಊಟಕ್ಕೆ ಮುಂಚೆ 1/2 ಚಮಚ ಬಾಯಲ್ಲಿ ಹಾಕಿಕೊಂಡು ಚಪ್ಪರಿಸಿ ನುಂಗಿದರೆ, ದದ್ದುಗಳು(ಪೈತಕ) ವಾಸಿಯಾಗುತ್ತೆ.ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.
ಓಮುಕಾಳು 30 ಗ್ರಾಂ(ಹುರಿದು ಚೂರ್ಣ ಮಾಡಿಕೊಳ್ಳಬೇಕು)ಅದಕ್ಕೆ 30 ಗ್ರಾಂ ಸೈoಧವ ಲವಣ ಸೇರಿಸಿ, ಎರಡನ್ನು ಚೆನ್ನಾಗಿ ಕಲಸಿಟ್ಟುಕೊಂಡು ಮದ್ಯಾನ, ರಾತ್ರಿ ಊಟಕ್ಕೆ ಮುಂಚೆ 1/2 ಚಮಚ ಚಪ್ಪರಸಿ ತಿಂದು ಊಟ ಮಾಡಿದರೆ ಹಸಿವು ಹೆಚ್ಚಾಗಿ, ದೇಹ ಆರೋಗ್ಯ ಸುಧಾರಿಸುತ್ತೆ.
ಅಜೀರ್ಣವಾದಾಗ 1/4 ಚಮಚ ಓಮುಕಾಳು ಚೂರ್ಣ 3 ಕಾಳು ಮೆಣಸು ಒಂದು ಕಲ್ಲುಪ್ಪು ಬಾಯಲ್ಲಿ ಹಾಕಿಕೊಂಡು ಜಗೆದು ನುಂಗಿ 1/2 ಲೋಟ ಬಿಸಿನೀರು ಕುಡಿದರೆ ಎಂತಹ ಅಜೀರ್ಣ ಸಮಸ್ಯೆ ಇದ್ದರೂ ಗುಣವಾಗುತ್ತೆ.
1/2 ಚಮಚ ಓಮುಕಾಳು ಚೂರ್ಣ(ಹುರಿದದ್ದು) 1/2 ಚಮಚ ಅರಸಿಣ ಚೂರ್ಣವನ್ನು ಸ್ವಲ್ಪ ನೀರು ಹಾಕಿ ಕಲಸಿ ಮೊಳಕೆಗೆ (ಫೈಲ್ಸ್) ದಿನಕ್ಕೆ ಎರಡು ಬಾರಿ ಲೇಪಿಸುತ್ತಾ ಬಂದಲ್ಲಿ ಬೇಗ ಗುಣವಾಗುತ್ತೆ.
ಯುವಕ-ಯುವತಿಯರಲ್ಲಿ ಮೊಡವೆ ಸಮಸ್ಯೆ ವಿಪರೀತ.ಹುರಿದ ಓಮುಕಾಳು ಚೂರ್ಣ 1/2 ಚಮಚಕ್ಕೆ 1/2 ಚಮಚ ಮೊಸರು ಹಾಕಿ ಚೆನ್ನಾಗಿ ಪೇಸ್ಟ್ ನಂತೆ ಕಲಸಿ, ರಾತ್ರಿ ಮಲಗುವ ಮುನ್ನ, ಮುಖವನ್ನು ಉಗರು ಬೆಚ್ಚಗಿನ ನೀರಲ್ಲಿ ತೊಳೆದು,ತಯಾರಿಸಿಕೊಂಡ ಪೇಸ್ಟ್ ನ್ನು ಮೊಡವೆಗಳಿಗೆ ಲೇಪನ ಮಾಡಿ, ಬೆಳಿಗ್ಗೆ(ಸೋಪು ಉಪಯೋಗಿಸದೆ)ಶುದ್ಧವಾದ ಕಡಲೆ ಹಿಟ್ಟಿನಿಂದ ಮುಖ ತೊಳೆದುಕೊಳ್ಳಬೇಕು ಮೊಡವೆಗಳು ಶೀಘ್ರ ವಾಸಿಯಾಗುತ್ತೆ.
ಓಮುಕಾಳು ಚೂರ್ಣ 1/2 ಚಮಚ ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಅತಿಸಾರ ಭೇದಿ ನಿಲ್ಲುತ್ತೆ.ಕಫ ಹೊಟ್ಟೆನೋವು ಅಜೀರ್ಣ ಸಮಸ್ಯೆಗಳು ದೂರವಾಗುತೆ.
ಓಮುಕಾಳು ಕಷಾಯವನ್ನು ಸೇವಿಸುತ್ತಾ ಬಂದರೆ ಹೃದ್ರೋಗ ವಿಷಾದೋಷ ಮೂತ್ರದಲ್ಲಿ ಹುರಿ ಶಮನವಾಗುತ್ತೆ.
ಮಕ್ಕಳ ಪಾಲಿಗಂತೂ ಸಂಜೀವಿನಿ ಈ ಓಮುಕಾಳು.ಪ್ರತಿಯೊಂದು ಮನೆಯಲ್ಲೂ ಇರಲೇ ಬೇಕಾದ ವಸ್ತು ಓಮುಕಾಳು.ಹೆಣ್ಣು ತಾಯಿಯಾದ ಮೇಲೆ ತನ್ನ ಮಗುವಿನ ಆರೋಗ್ಯ ಕಾಪಾಡಿಕೊಳ್ಳಲು ಬೇಕೇಬೇಕು ಓಮುಕಾಳು….! ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ವಂದನೆಗಳು

Leave a comment

Design a site like this with WordPress.com
Get started