ಇಂದಿನ ಔಷಧೀಯ ಸಸ್ಯ ಪರಿಚಯ: ಜೇಕಿನ ಗೆಡ್ಡೆ, ಕೊನ್ನಾರಿ ಗೆಡ್ಡೆ

Cyperus rotundus,family_ cyperaceae,, ತುಂಗೆ ಗಡ್ಡೆ,ಮೇಸ್ತ,ಮಸ್ತ, ಮೋತಾ, ನಾಗರ್ ಮೋತ,ಆಯುರ್ವೇದದಲ್ಲಿ ಇದರ ಉಪಯೋಗ ಜ್ವರ,ಮತ್ತು ಉದರ ಸಂಬಂಧಿ ರೋಗಗಳಲ್ಲಿ ಉಂಟು, ಇದರ ಗೆಡ್ಡೆ ಸುಗಂಧಿತ ತೈಲ,ಕೇಶ ತೈಲ ಗಳಲ್ಲಿ ಉಪಯೋಗಿಸುತ್ತಾರೆ, ಇದಕ್ಕೆ ಜ್ವರ ನಿವಾರಕ ಗುಣವಿದೆ ಎಂದಮೇಲೆ ಮಾಮೂಲಾಗಿ, ಆಂಟಿ ಫಂಗುಲ್,ಆಂಟಿ ವೈರಲ್ ಆಗಿ ಕೆಲಸ ಮಾಡುತ್ತದೆ, ಇಲ್ಲಿ ನಮ್ಮ ಗ್ರೂಪ್ ನಲ್ಲಿ ಚರ್ಚೆ ಇದರ ವಿಧಗಳ ಬಗ್ಗೆ ನಡೆಯುತ್ತಿದೆ,, ಇದರಲ್ಲಿ ಮೂರು ವಿಧ 1)ಭದ್ರ ಮುಷ್ಟಿ,2)ವಜ್ರ ಮುಷ್ಟಿ 3)ನಾಗ ಮುಷ್ಟಿ,,ಭದ್ರ ಮುಷ್ಟಿ ಮತ್ತು ನಾಗ ಮುಷ್ಟಿಯನ್ನು ಜ್ವರ ಮತ್ತು ಉದರ ಸಂಬಂಧಿ ರೋಗಗಳಲ್ಲಿ ಉಪಯೋಗಿ ಸುತ್ತಾರೆ ನಾಗ ಮುಷ್ಟಿ ತೈಲ , ಕೇಶ ತೈಲ,ನೋವಿನ ಎಣ್ಣೆಯಲ್ಲಿ ಉಪಯೋಗಿಸುತ್ತಾರೆ, ಇನ್ನೂ ಇವನ್ನು ಗ್ರಂಥಿ ಗೆ ಅಂಗಡಿಯಲ್ಲಿ ಒಟ್ಟಾಗಿ ಮಾರುತ್ತಾರೆ ವಿನಃ ಬೇರೆ ಬೇರೆ ಮಾರುವುದು ಕಡಿಮೆ ಎಲ್ಲದರ ಉಪಯೋಗವೂ ಒಂದೇ,ಇವನ್ನು ತಿಳಿಯುವ ವಿಧಾನ ನಮ್ಮ ತಂದೆಯವರು ಹೇಳಿದಂತೆ ಭದ್ರ ಮುಷ್ಟಿ ಗುಂಡಗೆ ಗಾತ್ರದಲ್ಲಿ ಸಣ್ಣದು, ವಜ್ರ ಮುಷ್ಟಿ ಗೋಲಿಗಿಂತಾ ದೊಡ್ಡದು ಹರಿಶಿನ ಗೆಡ್ಡೆಯನ್ನು ಹೋಲುತ್ತದೆ ಇನ್ನೂ ನಾಗ ಮುಷ್ಟಿ ಅಂಕುಡೊಂಕು ಕಡ್ಡಿಯ ಅಥವ ಮಾಮೂಲು ಬೇರಿನ ಆಕಾರ ಇನ್ನೂ ಅನುಮಾನಗಳು ಇದ್ದರೆ ಕಾಮೆಂಟ್ ನಲ್ಲಿ ಕೆಲ ಬಹುದು,,

ಮಾಹಿತಿ: ತರುಣ್ ತಾಮಸ

ಜುಲೈ 24,2020;ಶುಕ್ರವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಧ್ಯಾಹ್ನ 2:35 ನಂತರ ಪಂಚಮಿ ತಿಥಿ,
ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ
ಸಂಜೆ 4:02 ಉತ್ತರ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15

ಮೇಷ

ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ಮನೆಯವರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಅಗತ್ಯ.

ವೃಷಭ

ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದಾಗಿ ನೆಮ್ಮದಿ. ವೃಥಾ ವೈಮನಸ್ಸು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದು, ಕೆಲಸ–ಕಾರ್ಯಗಳಲ್ಲಿ ಉತ್ಸಾಹ.

ಮಿಥುನ

ಕಣ್ಣು ಅಥವಾ ತಲೆನೋವಿನಿಂದ ಬಳಲುವ ಸಾಧ್ಯತೆ. ಅತಿಯಾದ ವಾದ–ವಿವಾದದಿಂದಾಗಿ ವೈರತ್ವ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಜಾಗೃತೆ ವಹಿಸಿ. ಅನಾವಶ್ಯಕ ದಂಡ ತೆರಬೇಕಾದಿತು.

ಕಟಕ

ಮನೆಯಲ್ಲಿ ಶುಭಕಾರ್ಯಗಳು ನೆರವೇರುವ ಸಾಧ್ಯತೆ. ನೌಕರಿಯಲ್ಲಿ ಬದಲಾವಣೆ ಕಂಡುಬರುವುದು. ಆರ್ಥಿಕ ಅನುಕೂಲತೆ ಉತ್ತಮಗೊಳ್ಳುವುದು. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ. ಬಂಧುಗಳ ಸಮಾಗಮದ ನಿರೀಕ್ಷೆ.

ಸಿಂಹ

ನಿಮ್ಮ ನಿರ್ಣಯಗಳು ಫಲ ನೀಡುವವು. ಆದಾಯದಲ್ಲಿ ಹೆಚ್ಚಳ ಕಂಡುಬಂದು ಪರಿಸ್ಥಿತಿ ಸುಧಾರಿಸುವುದು. ವಾಹನ ಖರೀದಿ ಭಾಗ್ಯ ನಿಮ್ಮದಾಗಲಿದೆ. ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ.

ಕನ್ಯಾ

ನಿಮ್ಮ ಕೆಲಸ–ಕಾರ್ಯಗಳು ಮಂದಗತಿಯಲ್ಲೂ ಪ್ರಗತಿ. ಉದರ ಸಂಬಂಧಿ ಸಣ್ಣಪುಟ್ಟ ತೊಂದರೆಗಳು ಕಂಡುಬರಬಹುದು. ಹೊಸ ಕಾರ್ಯಯೋಜನೆ ಪ್ರಾರಂಭಿಸದಿರುವುದೇ ಒಳ್ಳೆಯದು.

ತುಲಾ

ಸಂಕಷ್ಟಗಳು ಕಡಿಮೆಯಾಗಿ ಕೆಲಸ-ಕಾರ್ಯಗಳು ಸುಗಮ ಚಾಲನೆ ಪಡೆದುಕೊಳ್ಳುವವು. ಸಿಟ್ಟು ಸೆಡವುಗಳಿಂದಾಗಿ ತೊಂದರೆಗಳು ತಲೆದೋರಬಹುದು. ಅನಿರೀಕ್ಷಿತ ಅನವಶ್ಯಕ ಖರ್ಚು ಸಂಭವಿಸುವವು.

ವೃಶ್ಚಿಕ

ಆರ್ಥಿಕ ಉನ್ನತಿ ಕಂಡುಬರುವುದು. ಶತ್ರುಗಳ ವಿರುದ್ಧ ಜಯದ ಸವಾರಿ ಮಾಡುವ ಯೋಗ ಕೂಡಿದೆ. ಬಹುದಿನಗಳ ಸಮಸ್ಯೆಯಿಂದ ಪರಿಹಾರ ದೊರೆತು ನೆಮ್ಮದಿ. ಬಂಧುಗಳ ಆಗಮನವನ್ನು ನಿರೀಕ್ಷಿಸಿ.

ಧನು

ಅನವಶ್ಯಕ ಖರ್ಚು ತಲೆದೋರಬಹುದು. ಬಂಧುಗಳ ಭೇಟಿಯ ಸಾಧ್ಯತೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ. ಆಹಾರದಲ್ಲಿನ ವ್ಯತ್ಯದಿಂದಾಗಿ ಅಜೀರ್ಣ ಸಂಬಂಧಿ ರೋಗಗಳು ಕಂಡುಬರಬಹುದು. ಸಂಗಾತಿಯಿಂದ ಸಹಕಾರ.

ಮಕರ

ಬರಬೇಕಾದ ಹಣ ಹಿಂದಿರುಗಿ ಬರುವ ಸಾಧ್ಯತೆ. ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಂತಾನಭಾಗ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ. ನಿಂತುಹೋದ ಯೋಜನೆಗಳು ಪುನರಾರಂಭಗೊಳ್ಳುವವು.

ಕುಂಭ

ಆರ್ಥಿಕ ಅನುಕೂಲ ನಿಮ್ಮನ್ನರಸಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವೆಚ್ಚವನ್ನೂ ಮಾಡುವಿರಿ. ನಿಮ್ಮ ಉತ್ತಮ ನಡುವಳಿಕೆಯಿಂದಾಗಿ ಗೌರವಾದರಗಳು ಲಭ್ಯವಾಗುವವು.

ಮೀನ

ನೌಕರರು ಮತ್ತು ಸ್ವಂತ ಉದ್ಯೋಗಿಗಳು ತಪ್ಪು ನಡೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದ್ಯೋಗ ಅಥವಾ ವಾಸದ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಉತ್ತಮ ಸ್ಥಾನ ದೊರಕುವುದು.

ಇಂದಿನ ಔಷಧೀಯ ಸಸ್ಯದ ಪರಿಚಯ: ತಂಗಡೀಗಿಡ

ಆವರ್ತಿಕಿ, ಆವರಿಕೆ, ತಂಗಡಿಗಿಡ, ಹೊ’ನ್ನಂಬರಿ, ತಂಗಡಿಚೆಟ್ಟು, ಆ’ವರಮ್ ಪೂ, ಚರ್ಮರಂಗ, ಮಾಯಹರಿ, ಆ’ವರ್ತಿಕಾ ಎಂಬಾ ಹೆಸರುಗಳಿಂದ ಕರೆಯುತ್ತಾರೆ.
ಕಾಡುಗಳಲ್ಲಿ, ಬೆಟ್ಟಗುಡ್ಡ ಪ್ರ’ದೇಶಗಳಲ್ಲಿ, ಪಾಳು ಭೂಮಿ, ರಸ್ತೆಗಳ ಪಕ್ಕ ಎಲ್ಲೆಂದರಲ್ಲಿ ಸ್ವಾಭಾವಿಕವಾಗಿ 3 ರಿಂದ 6 ಅಡಿ ಎ’ತ್ತರವಾಗಿ ಪೊದೆಯಂತೆ ಬೆಳೆಯುತ್ತದೆ. ತಂಗಡಿಯಲ್ಲಿ, ತಂಗಡಿ, ನೆ^ಲತಂಗಡಿ, ಮರತಂಗಡಿ, ಸೀ’ಮೆತಂಗಡಿ, ಕಾಡು ತಂಗಡಿ ಎಂಬ ಹತ್ತಾರು ಪ್ರಭೇದಗಳಿದ್ದುರು, ಅ’ವುಗಳಲ್ಲೂ ಔಷಧೀಯ ಗುಣಗಳಿದ್ದರು, ಔಷಧೀಯವಾಗಿ ಉಪ’ಯೋಗಿಸುವುದು ಈ ಕೆಳಗಿನ ಚಿ’ತ್ರದಲ್ಲಿರುವ ತಂಗಡಿ ಗಿಡವನ್ನೆ. ತಂಗಡಿ ಎಲ್ಲೆಂದರಲ್ಲಿ ಬೆಳೆಯುವ ಗಿ’ಡವೆಂದು ಜನರಲ್ಲಿ ತಾತ್ಸಾ’ರವಿದ್ದರೂ, ತಂಗಡಿ ಅಪಾರ ಪ್ರಮಾಣದ ಔಷ’ಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.
ತೆಲಾಂ’ಗಣ ಸರ್ಕಾರ ಐದು ವರ್ಷಗಳ ಹಿಂದೆ “ರಾಜ್ಯಪುಷ್ಫ” ಎಂದು ಘೋ’ಷಣೆ ಮಾಡಿದೆ. ತೆಲಾಂಗಣದ ಜನರಲ್ಲಿ ತಂಗಡಿಗಿಡ ಎಷ್ಟು ಪವಿತ್ರ ಹಾಗು ಪ್ರಾ’ಮುಖ್ಯತೆ ಪಡಿದಿದೆ ಎಂದರೆ “ಬ’ದುಕಮ್ಮ ಪಂಡುಗ” ಹಬ್ಬವೆ ಸಾಕ್ಷಿ.ಈ ಹೂ’ವುಗಳು ಇಲ್ಲದೆ ಹಬ್ಬವೆ ಇಲ್ಲಾ….!
ತಾಜಾ ತಂಗಡಿ ಹೂ’ವುಗಳನ್ನು ತಂದು, ನುಣ್ಣಗೆ ಅರೆದು, ಅದಕ್ಕೆ 2 ಚಮಚ ಗಟ್ಟಿಯಾದ ಮೊಸರು, ಚಿಟಿಕೆ ಅ’ರಸಿಣ ಸೇರಿಸಿ, ಚೆನ್ನಾಗಿ ಮಿ’ಶ್ರಣಮಾಡಿ, ಮುಖಕ್ಕೆ ಲೇ’ಪನಮಾಡಿ, ಅರ್ಧ ಗಂಟೆ ಬಿಟ್ಟು ಮು’ಖವನ್ನು ಉಗರು ಬೆಚ್ಚಗಿನ ನೀರಲ್ಲಿ ತೊ’ಳೆದುಕೊಂಡರೆ, ಮೊಡವೆ, ಕಪ್ಪುಕಲೆಗಳು, ಮಚ್ಚೆಗಳು ಮಾ’ಯವಾಗಿ, ಮುಖದ ಚರ್ಮ ಮೃ’ದುವಾಗಿ ಅದ್ಭುತವಾದ ಕಾಂತಿಯಿಂದ ಹೊ’ಳೆಯುತ್ತದೆ.
100ಗ್ರಾಂ ತಂ’ಗಡಿ ಹೂ’ವುಗಳನ್ನು ತಂದು ಶು’ಭ್ರಗೊಳಿಸಿ, 250ml ಶುದ್ಧ ಕೊ’ಬ್ಬರಿ ಎಣ್ಣೆಯಲ್ಲಿ ಹಾಕಿ, ಒಲೆ’ಯಮೇಲಿಟ್ಟು ಚೆನ್ನಾಗಿ ಕುದಿಸಿ, ಉಗರು ಬೆ’ಚ್ಚಗಾದಾಗ, ತಲೆಕೂದಲಿನ ಬುಡಕ್ಕೆ ಮ’ಸಾಜ್ ಮಾಡಿಕೊಂಡರೆ, ತ’ಲೆಯಲ್ಲಿನ ಹೊಟ್ಟು (d’andruff) ನವೆ ಮಾಯವಾಗುತ್ತೆ. ತಲೆ’ಕೂದಲು ಕಪ್ಪುಗೆ ಸೊಂ’ಪಾಗಿ ಬೆಳೆಯುತ್ತೆ.
ದೇಹದಲ್ಲಿ ಮೂ’ಳೆಮುರಿತವಾದಾಗ, ತಂಗಡಿ ಎಲೆಗಳನ್ನು ತಂದು ಅದಕ್ಕೆ ಕೋ’ಳಿಮೊಟ್ಟೆಯ ಬಿ’ಳಿಯಭಾಗ ಸೇರಿಸಿ, ನುಣ್ಣಗೆ ಅರೆದು ಮೂಳೆ ಮುರಿದಕಡೆ ಲೇ’ಪನಮಾಡಿ, ಹತ್ತಿಬಟ್ಟೆಯಿಂದ ಕಟ್ಟು’ಕಟ್ಟಿದರೆ, ನೋವು, ಊತ ನಿ’ವಾರಣೆಯಾಗಿ ಮುರಿದ ಮೂಳೆ ಬೇಗನೆ ಕೂ’ಡಿಕೊಳ್ಳುತ್ತೆ.
ದಿನವು ಬೆಳಿಗ್ಗೆ ಖಾಲಿ ಹೊ’ಟ್ಟೆಯಲ್ಲಿ, ಹತ್ತರಿಂದ ಹ’ದಿನೈದು ಹೂವಿನ ದಳಗಳನ್ನು ಬಾಯಲ್ಲಿ ಹಾಕಿ’ಕೊಂಡು ಜಗಿದು ತಿನ್ನುತ್ತಾ ಬಂದರೆ ಮಧುಮೇಹಿಗಳ ರ’ಕ್ತದಲ್ಲಿನ ಸಕ್ಕರೆ ಪ್ರಮಾಣ (b’lood sugar) ಕಡಿಮೆಯಾಗುವು’ದಲ್ಲದೆ, ಹ’ತೋಟಿಯಲ್ಲಿರುತ್ತೆ.ಬಹುಮೂತ್ರ ರೋಗವು ಸಹ ಹ’ತೋಟಿಗೆ ಬರುತ್ತೆ.ಮಲಬದ್ಧತೆ ಸಹ ದೂರವಾಗುತ್ತೆ.
ತಂಗಡಿ ಮೊಗ್ಗು, ಬೀಜ ತೆ’ಗೆದ ಬೆಟ್ಟದ ನೆ’ಲ್ಲಿಕಾಯಿ, ನೇರಳೆ ಬೀಜ, ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ, ವ’ಸ್ತ್ರಗಾಲಿತ ಚೂರ್ಣ ಮಾ’ಡಿಟ್ಟುಕೊಂಡು, ದಿನವು ಬೆಳಿಗ್ಗೆ ಸಂಜೆ ಉಗರು ಬೆಚ್ಚಗಿನ ನೀರಲ್ಲಿ 1 ಚ’ಮಚ ಕಲಸಿ ಕುಡಿ’ಯುತ್ತಿದ್ದರೆ, ಮಧುಮೇಹ ಹತೋಟಿಗೆ ಬರುತ್ತೆ.
ತಂಗಡಿ ಹೂವಿನ ಜೊ’ತೆಗೆ ಬೆಳ್ಳುಳ್ಳಿ ಸೇರಿಸಿ ದಿನವು ಜಗಿದು ತಿನ್ನುತ್ತಿದ್ದರೆ ಪು’ರುಷರಲ್ಲಿ ವೀರ್ಯಾಣು ವೃದ್ಧಿಯಾಗಿ, ನ’ಪುಂಸಕತ್ವ ದೂ’ರವಾಗುತ್ತೆ. ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ ಸಾಯುತ್ತವೆ.
10-12 ತಂಗಡಿ ಮೊ’ಗ್ಗುಗಳನ್ನು ಚೆನ್ನಾಗಿ ನುಣ್ಣಗೆ ಅರೆದು, ಅದಕ್ಕೆ ಚಿಟಿಕೆ ಅ’ತಿಮಧುರ ಚೂರ್ಣ ಸೇರಿಸಿ, ನು’ಣ್ಣಗೆ ಅರೆದು, ಗುಳಿಗೆಗಳನ್ನು ಮಾಡಿ, ನೆ’ರಳಲ್ಲಿ ಒಣಗಿಸಿ, ದಿನವು ಬೆಳಿಗ್ಗೆ ಸಂಜೆ ಒಂ’ದೊಂದು ಮಾತ್ರೆ ನುಂಗಿ, ಅದರ ಮೇಲೆ ಒಂದು ‘ಲೋಟ ಹಸುವಿನ ಹಾಲು ಕು’ಡಿಯುತ್ತಾ ಬಂದರೇ ಧಾತು ವೃದ್ಧಿಯಾಗಿ ದೇಹಕ್ಕೆ ಅ’ಪಾರ ಶಕ್ತಿಬರುತ್ತೆ.
ಮಕ್ಕಳಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿ’ಸಿಕೊಂಡಾಗ, ಮಜ್ಜಿಗೆಯಲ್ಲಿ ಕಾಂಡದ ತೊ’ಗಟೆ ಅಥವಾ ಬೇರಿನ ಗಂಧ ತೇಯ್ದು, ಕಿ’ಬ್ಬೊಟ್ಟೆಯ ಸುತ್ತ ಲೇಪನ ಮಾ’ಡಿದರೆ ಶೀಘ್ರ ಶಮನವಾಗುತ್ತೆ.
ಒಂದು ಪಾ’ತ್ರೆಯಲ್ಲಿ 250ml ನೀರು ಹಾಕಿ, 10-15 ತಂಗಡಿ ಹೂ’ವುಗಳು, ಚಿಟಿಕೆ ಜೀರಿಗೆ ಐದಾರು ಕಾ’ಳುಮೆಣಸು, ಚಿಟಿಕೆ ಉಪ್ಪು ಹಾಕಿ, ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 50ml ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಕೆಮ್ಮು ದಮ್ಮು ಕಫ, ನೆಗಡಿ, ಗಂಟಲು ನೋವು ನಿವಾರಣೆಯಾಗುತ್ತೆ. ಕಷಾಯ ಸೇವನೆಯಿಂದ ದೇಹ ತಂಪಾಗುತ್ತೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತೆ.ಇದು ತುಂಬಾ ಅದ್ಭುತವಾದ ಪಾನೀಯ.
ತಂಗಡಿ ಚಿಗರು ಎಲೆಗಳು ತಂದು, ಅದಕ್ಕೆ ಚಿಟಿಕೆ ಅರಸಿಣ, ಉಪ್ಪು ಸೇರಿಸಿ ನುಣ್ಣಗೆ ಅರೆದು, ಗಾಯ, ಬಾವು, ವ್ರಣದ ಮೇಲೆ ಲೇಪನ ಮಾಡಿದರೆ, ಶೀಘ್ರ ಗುಣವಾಗುತ್ತೆ. ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಹೊಟ್ಟೆಯಲ್ಲಿನ ಜಂತುಹುಳುಗಳು ಸಾಯುತ್ತವೆ. ಮೂತ್ರಕೋಶ ವ್ಯಾಧಿಗಳು, ಮೂತ್ರದಲ್ಲಿನ ಹುರಿ, ನೋವು ವಾಸಿಯಾಗುತ್ತೆ.
ತಂಗಡಿ ಬೀಜ, ನೇರಳೆ ಬೀಜ, ಮೆಂತ್ಯಕಾಳು ಸಮನಾಗಿ ತೆಗೆದುಕೊಂಡು, ನೆರಳಲ್ಲಿ ಒಣಗಿಸಿ ಪುಡಿಮಾಡಿ, ವಸ್ತ್ರಗಾಲಿತ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು 1 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಕುಡಿಯುತ್ತಿದ್ದರೆ ಮಧುಮೇಹ ಅತೋಟಿಯಲ್ಲಿರುತ್ತೆ.
ತಂಗಡಿ ಹೂವುಗಳಲ್ಲಿ ರಸವನ್ನು ತೆಗೆದು, 2 ಚಮಚ ರಸಕ್ಕೆ1 ಚಮಚ ಕೆಂಪು ಕಲ್ಲುಸಕ್ಕರೆ ಕಲಸಿ ಸೇವಿಸಿದರೆ, ಉಷ್ಣತೆಯಿಂದ ಕೂಡಿರುವ ದೇಹವನ್ನು ತಂಪಾಗಿಸಿ, ಆಲಸ್ಯ ದೂರಮಾಡುತ್ತೆ.ಅತಿ ಮೂತ್ರ ಸಹ ಹತೋಟಿಗೆ ಬರುತ್ತೆ.
ಜೇನುಹುಳು, ಚೇಳು ಕಚ್ಚಿದ ಕಡೆ ಇದರ ಎಲೆಗಳ ರಸವನ್ನು ಲೇಪಿಸಿದ್ರೆ, ವಿಷ ನಿವಾರಣೆಯಾಗುತ್ತೆ.
ಪಾದದಲ್ಲಿ ಬಿರಕು ಬಿಟ್ಟಾಗ, ತಂಗಡಿ ಎಲೆಗಳನ್ನು ಮಜ್ಜಿಗೆಯಲ್ಲಿ ನುಣ್ಣಗೆ ಅರೆದು ಲೇಪನ ಮಾಡಿದರೆ ಬೇಗನೆ ಕೂಡಿಕೊಂಡು ನೋವು ನಿವಾರಣೆಯಾಗುತ್ತೆ.
ಐದಾರು ತಂಗಡಿ ಚಿಗರು ನುಣ್ಣಗೆ ಅರೆದು, ಮೊಸರಲ್ಲಿ ಕಲಸಿ ಬೆಳಿಗ್ಗೆ ಸಂಜೆ ಸೇವಿಸಿದರೆ ಅತಿಸಾರಭೇದಿ ಬೇಗನೆ ಗುಣವಾಗುತ್ತೆ.
ತಂಗಡಿ ಹೂವುಗಳನ್ನು ಶೇಖರಿಸಿ ಅದಕ್ಕೆ ಸಕ್ಕರೆ, ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ, ಉರಿಮೂತ್ರ ರೋಗ ನಿವಾರಣೆಯಾಗುತ್ತೆ.
ತಂಗಡಿ ಅಪಾರ ಔಷಧೀಯ ಗುಣಗಳುಳ್ಳ ಗಣಿ ನಾಳೆ ಇನ್ನೊಂದು ಔಷಧೀಯ ಸಸ್ಯದ ಪರಿಚಯ ಮಾಡಿಕೊಳ್ಳೋಣ ಗೆಳೆಯರೇ

ಉಡುಪಿಯಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು: ಡಾ.ಶಶಿಕಿರಣ್ ‌ಎಚ್ಚರಿಕೆ.

ಉಡುಪಿ: ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರ ರೋಗ ಲಕ್ಷಣ ಇರುವವರರಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಮುದಾಯ ಮಟ್ಟದಲ್ಲಿ ಸೋಂಕು ಹರಡಿರುವ ಭೀತಿ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಡಾ.ಟಿಎಂಎ ಪೈ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶಶಿಕಿರಣ್ ಉಮಾಕಾಂತ್.

ಜುಲೈ 23, 2020; ಗುರುವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಸಂಜೆ 5:04 ನಂತರ ಚತುರ್ಥಿ,
ಗುರುವಾರ, ಮಖ ನಕ್ಷತ್ರ,
ಸಂಜೆ 5:08 ಪೂರ್ವಫಾಲ್ಗುಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:07 ರಿಂದ 7:42

ಮೇಷ

ವಾಹನ ಖರೀದಿಯ ಅವಕಾಶಗಳು ಕಂಡುಬರುತ್ತಿವೆ. ಸ್ವಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಸಕಾಲ. ಸಣ್ಣ ವ್ಯಾಪಾರ, ಗುಡಿ ಕೈಗಾರಿಕೆಗಳಿಂದ ಲಾಭ. ದೊಡ್ಡ ಉದ್ಯಮಕ್ಕೆ ಯೋಜನೆಗಳು ಹೊಂದಾಣಿಕೆಯಾಗುವವು.

ವೃಷಭ

ಆದಾಯಕ್ಕೂ ಮೀರಿದ ಖರ್ಚು ತಲೆದೋರಬಹುದು. ಭೂ ಸಂಬಂಧಿ ತಗಾದೆಗಳು ಪ್ರಾರಂಭವಾಗುವ ಸಾಧ್ಯತೆ. ಅಡ್ಡಿ ಆತಂಕಗಳ ನಡುವೆಯೂ ಶುಭಕಾರ್ಯಗಳು ಕೈಗೂಡುವವು. ಕೆಟ್ಟ ಮಾತುಗಳಿಂದ ಧೃತಿಗೆಡಬೇಡಿ.

ಮಿಥುನ

ಧನಾಗಮನ. ವೃತ್ತಿರಂಗದಲ್ಲಿ ಅಧಿಕ ಒತ್ತಡದಿಂದಾಗಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ. ದಾಂಪತ್ಯದಲ್ಲಿ ಅನಗತ್ಯ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿ.

ಕಟಕ

ದಾಯಾದಿಗಳು ಶತ್ರುಗಳಾಗಿ ಕಾಡುವ ಸಾಧ್ಯತೆ. ವ್ಯಾಪಾರದಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ. ಸಂಗಾತಿಯ ಹಿತೋಕ್ತಿಯನ್ನು ಕಡೆಗಣಿಸದಿರಿ. ಮಾತೃವರ್ಗದವರಿಂದ ಆರ್ಥಿಕ ಸಹಾಯ ಒದಗಿ ಬರುವುದು. ‌

ಸಿಂಹ

ದೂರ ಪ್ರಯಾಣದಿಂದ ಅನುಕೂಲ. ವ್ಯಾಪಾರ ವ್ಯವಹಾರಗಳ ಬಗ್ಗೆ ಜಾಗ್ರತೆ ಇರಲಿ. ಹಿರಿಯರೊಂದಿಗೆ ವಾದ–ವಿವಾದಗಳು ಬೇಡ. ವಿಳಂಬವಾದ ಸರ್ಕಾರಿ ಕೆಲಸ–ಕಾರ್ಯಗಳು ಪರಿಪೂರ್ಣಗೊಳ್ಳುವವು.

ಕನ್ಯಾ

ದೇವತಾ ಕಾರ್ಯಗಳಿಗೆ ಹಣ ವಿನಿಯೋಗಿಸುವ ಸಾಧ್ಯತೆ. ತಾಳ್ಮೆ ಸಮಾಧಾನದಿಂದ ಸಾಂಸಾರಿಕ ನೆಮ್ಮದಿ ಕಾಯ್ದುಕೊಳ್ಳಿ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯತ್ತ ಸಾಗಲಿವೆ.

ತುಲಾ

ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಒತ್ತಡದ ಸ್ಥಿತಿ. ವಿದ್ಯಾರ್ಥಿಗಳ ಕೆಲಸ–ಕಾರ್ಯಗಳಲ್ಲಿ ಅತಿಯಾದ ಪರಿಶ್ರಮ. ಆರೋಗ್ಯದಲ್ಲಿ ವ್ಯತ್ಯಯದ ಸಾಧ್ಯತೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರಕುವುದು.

ವೃಶ್ಚಿಕ

ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರುವ ಸಾಧ್ಯತೆ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ. ನೀರಿನ ಸಂಬಂಧದ ತಗಾದೆಗಳು ಪ್ರಾರಂಭವಾಗಬಹುದು. ಅಧಿಕಾರಿಗಳನ್ನು ಎದುರಿಸಬೇಕಾದ ಸಂಭವವಿದೆ.

ಧನು

ವಿದ್ಯಾರ್ಥಿಗಳ ಪ್ರಗತಿಯಲ್ಲಿ ಸಂತಸ ಮೂಡುವುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಘರ್ಷಣೆಯಾಗಬಹುದು. ಪುಟ್ಟ ಮಕ್ಕಳ ಮಧ್ಯಪ್ರವೇಶದಿಂದ ಎಲ್ಲವೂ ನಿರಾಳ. ಪ್ರೀತಿಪಾತ್ರರೊಂದಿಗಿನ ಅಭಿಲಾಷೆಗಳು ನೆರವೇರುವ ಸಾಧ್ಯತೆ.

ಮಕರ

ಶೀತದಿಂದಾಗಿ ಮೂಗು, ಗಂಟಲಿಗೆ ಸಂಬಂಧಿಸಿದ ವ್ಯಾಧಿಗಳು ಬಾಧಿಸುವ ಸಾಧ್ಯತೆ. ಕಾರ್ಮಿಕ ವರ್ಗದವರಿಗೆ ನಿರಾಶೆ. ಸಾರ್ವಜನಿಕ ಕೆಲಸಗಳಲ್ಲಿ ಪ್ರಗತಿಯ ಜೊತೆಗೆ ಅಪವಾದ ಎದುರಿಸಬೇಕಾದೀತು.

ಕುಂಭ

ನಿರೀಕ್ಷಿತ ಕಾರ್ಯಗಳು ಕೈಗೂಡಿದ ಸಂತೋಷ. ನಿರುದ್ಯೋಗಿಗಳಿಗೆ ವಿದೇಶಗಳಲ್ಲಿ ಉದ್ಯೋಗ ದೊರಕುವ ಸಾಧ್ಯತೆ. ವಿದೇಶ ಪ್ರಯಾಣ. ಧನಾಗಮನದಿಂದ ಆರ್ಥಿಕ ಸುಸ್ಥಿತಿ. ಕಲಾವಿದರಿಗೆ ವಿಫುಲ ಅವಕಾಶ.

ಮೀನ

ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಉದ್ಯೋಗಾಂಕ್ಷಿಗಳಿಗೆ ಉದ್ಯೋಗದ ನಿಮಿತ್ತ ತಿರುಗಾಡಬೇಕಾದೀತು. ದೇವತಾ ದರ್ಶನ ಭಾಗ್ಯ. ಸಾಂಸಾರಿಕ ಕಿರಿಕಿರಿಯ ಅನುಭವ. ಹಿರಿಯರ ಮಾತುಗಳನ್ನು ಗೌರವಿಸಿ.

ಇಂದಿನ ಔಷಧೀಯ ಸಸ್ಯ ಪರಿಚಯ: ಕೋಕಿಲಾಕ್ಷ

ಕೋಕಿಲಾಕ್ಷ ಕೋಕಿಲಾಕ್ಷಿ, ಕೊಳವಳಿಕೆ, ಗೊರ್ಮಿಟಿ,

ನೀರ್ ಗುಬ್ಲಿ, ಕೊಳವಂಕ, ನೀರ್ ಮುಳ್ಳಿ, ವನಶೃಂಗಾರಮು,ನೀಟಿ ಗೊಬ್ಬಿ, ಕುಲಿಖಾರ, ತಲ್ಮಖಾನ, ಉಂಡಗಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ಗಿಡವು ತೇವಾಂಶ ಇರುವ ಕಡೆ ಹೆಚ್ಚಾಗಿ ಬೆಳೆಯುತ್ತೆ.ಕೆರೆ ಕುಂಟೆಗಳ ಸುತ್ತಲೂ, ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆಗಳ ಬದಿಗಳ ಮೇಲೆ 2 ರಿಂದ 3 ಅಡಿ ಬೆಳೆಯುವ ಮುಳ್ಳಿನ ಗಿಡವಾಗಿದ್ದು, ಸಮೂಲ ಸಹಿತ ಅಪಾರ ಔಷಧಿ ಗುಣಗಳನ್ನು ಹೊಂದಿದೆ.
ಅನೇಕ ಪ್ರಾಂತ್ಯಗಳಲ್ಲಿ ಕೊಳವಳಿಕೆ ಗಿಡದ ಸೊಪ್ಪಿನಿಂದ ಪಲ್ಯ, ಸಾಂಬಾರ್ ಮಾಡಿ ತಿನ್ನುತ್ತಾರೆ.
ಇದು ಸೇವಿಸಲು ತುಂಬಾ ರುಚಿಕರವಾಗಿದ್ದು,ದೇಹದ ಆರೋಗ್ಯವನ್ನು ಕಾಪಾಡುತ್ತೆ
ಕೊಳವಳಿಕೆ ಗಿಡದ ಒಂದು ಹಿಡಿ ಸೊಪ್ಪನ್ನು, ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ 250ml ನೀರನ್ನು ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ಎರಡು ಭಾಗ ಮಾಡಿ, ಬೆಳಿಗ್ಗೆ ಸಂಜೆ 50ml ಗೆ 1 ಚಮಚ ಜೇನುತುಪ್ಪ ಕಲಸಿ ಕುಡಿದರೆ, ಜ್ವರ, ಕೆಮ್ಮು, ಕಫ,ವಾತ, ಪಿತ್ತ ಇನ್ನು ಮುಂತಾದ ವ್ಯಾಧಿಗಳು ಗುಣವಾಗುತ್ತೆ.
ಕೊಳವಳಿಕೆ ಬೀಜ 50ಗ್ರಾಂ, 50 ಗ್ರಾಂ ಸಿಪ್ಪೆ ಸುಲಿದ ಬಾದಾಮಿ ಬೀಜ, 50 ಗ್ರಾಂ ಗಸಿಗಸೆ,ಚೆನ್ನಾಗಿ ನುಣ್ಣಿಗೆ ಚೂರ್ಣ ಮಾಡಿಟ್ಟುಕೊಂಡು, ದಿನವು ಬೆಳಿಗ್ಗೆ ಸಂಜೆ 1 ಲೋಟ ಹಸುವಿನ ಹಾಲಿಗೆ 1ಚಮಚ ಚೂರ್ಣ 1ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ ಕಲಸಿ ಕುಡಿಯುತ್ತಿದ್ದರೆ, ಗಂಡಸರಲ್ಲಿ ವೀರ್ಯಾಣು ವೃದ್ಧಿಯಾಗುತ್ತೆ.ನಪುಂಷಕತ್ವ ದೂರವಾಗಿ ಕಾಮವಾಂಛೆ ಹೆಚ್ಚುತ್ತೆ.
10 ಗ್ರಾಂ ಕೊಳವಳಿಕೆ ಬೀಜ, 10 ಗ್ರಾಂ ಬಾದಾಮಿ, 10 ಗ್ರಾಂ ಗಸಗಸೆ ನೀರಿನಲ್ಲಿ ನೆನೆಸಿಟ್ಟು ( ಬಾದಾಮಿ ಸಿಪ್ಪೆ ಸುಲಿದು) ಚೆನ್ನಾಗಿ ನುಣ್ಣಗೆ ಅರೆದು,ಒಂದು ಲೋಟ ಹಸುವಿನ ಹಾಲಿನಲ್ಲಿ ಚೆನ್ನಾಗಿ ಕುದಿಸಿ,ಉಗರು
ಬೆಚ್ಚಗಾದಾಗ ಕುಡಿಯುತ್ತಾ ಬಂದರೆ,ನರದೌರ್ಬಲ್ಯ ದೂರವಾಗಿ, ದೇಹಕ್ಕೆ ಪುಷ್ಠಿ ದೊರೆಯುತ್ತದೆ, ಧಾತು ವೃದ್ಧಿಯಾಗುತ್ತೆ.(ಬೇಕಾದ್ರೆ ಜೇನುತುಪ್ಪ ಕಲಸಿಕೊಳ್ಳಿ)
ಬೇರನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1/2 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ ನೀರಿನಲ್ಲಿ ದಿನವು ಕಲಸಿ ಸೇವಿಸುತ್ತಾ ಬಂದರೆ ಶ್ವಾಸಕೋಶ ವ್ಯಾಧಿಗಳು ಗುಣವಾಗುತ್ತೆ.ಹಳದಿ ಕಾಮಾಲೆ (ಜಾಂಡಿಸ್ )
ಸಹಾ ವಾಸಿಯಾಗುತ್ತೆ.
ಈ ಗಿಡವನ್ನು ಸಮೂಲ ಸಹಿತ ತಂದು ಕಷಾಯ ಮಾಡಿ ದಿನವು ಬೆಳಿಗ್ಗೆ ಸಂಜೆ 30ml ನಂತೆ ಸೇವಿಸಿದರೆ
ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿ, ಮಧುಮೇಹ ಅತೋಟಿಗೆ ಬರುತ್ತೆ.
ಆಮಶಂಕೆ ಬೇಧಿಗೆ 1/2 ಚಮಚ ಕೊಳವಳಿಕೆ ಬೀಜದ ಚೂರ್ಣ 1 ಲೋಟ ಮಜ್ಜಿಗೆಯಲ್ಲಿ ಕಲಸಿ ಬೆಳಿಗ್ಗೆ ಸಂಜೆ ಮೂರ್ನಾಲ್ಕು ದಿನ ಕುಡಿದರೆ ವಾಸಿಯಾಗುತ್ತೆ.
ಈ ಗಿಡದಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ನಿಪುಣರು ಹೇಳಿದ್ದಾರೆ.
ಆದರೂ….! ಆಯುರ್ವೇದ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ. ಗೆಳೆಯರೆ ವಂದನೆಗಳು

.

ಬಿ.ಎಸ್. ಯಡಿಯೂರಪ್ಪರವರು ಸೂಚಿಸಿದ ಐವರು ಅಭ್ಯರ್ಥಿಗಳು MLC ಗಳಾಗಿ ಆಯ್ಕೆ

ವಿಧಾನ ಪರಿಷತ್ ಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐವರ ಹೆಸರನ್ನು ಶಿಫಾರಸು ಮಾಡಿದ್ದು ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ನೆರವಾಗಿದ್ದ ಮಾಜಿ ಸಂಸದ ಹೆಚ್. ವಿಶ್ವನಾಥ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಅವಕಾಶ ಸಿಕ್ಕಿದೆ. ಅದೇ ರೀತಿ ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ದಿ ಮತ್ತು ತಳವಾರ್ ಸಾಬಣ್ಣ ಅವರ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ ಕಳುಹಿಸಿದ್ದ ಹೆಸರುಗಳ ಬದಲಿಗೆ ಅಭ್ಯರ್ಥಿಗಳನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಹಠಹಿಡಿದು ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಈಗ ಸಿ.ಪಿ. ಯೋಗೇಶ್ವರ್ ಮತ್ತು ಭಾರತಿ ಶೆಟ್ಟಿ ಹಾಗೂ ಹೆಚ್. ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುವಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರವಹಿಸಿದ್ದಾರೆ. ವಿಶ್ವನಾಥ್ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿದರೂ ಪರಾಭವಗೊಂಡಿದ್ದಾರೆ. ಈಗಾಗಲೇ ಕುರುಬ ಸಮುದಾಯಕ್ಕೆ ಸೇರಿದ ಎಂಟಿಬಿ ನಾಗರಾಜ್, ಆರ್. ಶಂಕರ್ ಅವರಿಗೆ ಅವಕಾಶ ನೀಡಿದ್ದು, ಮತ್ತೆ ಕುರುಬ ಸಮುದಾಯಕ್ಕೆ ಅವಕಾಶ ನೀಡುವ ಬಗ್ಗೆ ವರಿಷ್ಠರು ಆಕ್ಷೇಪವೆತ್ತಿದ್ದು, ಇದಕ್ಕೆ ಒಪ್ಪದ ಸಿಎಂ ಮಾತು ಕೊಟ್ಟಂತೆ ವಿಶ್ವನಾಥ್ ಅವರಿಗೆ ಅವಕಾಶ ಕೊಡಿಸಿದ್ದಾರೆ.

ಅದೇ ರೀತಿ ಭಾರತಿ ಶೆಟ್ಟಿ ಅವರಿಗೆ ಈ ಹಿಂದೆಯೇ ಅವಕಾಶ ನೀಡಲಾಗಿದೆ. ಅವರ ಬದಲಿಗೆ ಬೇರೆ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ವರಿಷ್ಠರು ಸೂಚಿಸಿದ್ದರೆನ್ನಲಾಗಿದೆ. ಆದರೆ, ಯಡಿಯೂರಪ್ಪ ಪಟ್ಟುಹಿಡಿದು ಸಿ.ಪಿ. ಯೋಗೇಶ್ವರ್, ಭಾರತಿ ಶೆಟ್ಟಿ ಮತ್ತು ಹೆಚ್. ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸ್ಥಾನ ಕೊಡಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ವರಿಷ್ಠರು ಆಯ್ಕೆ ಬಗ್ಗೆ ಆಕ್ಷೇಪಿಸಿದ್ದರೂ ಪಟ್ಟು ಹಿಡಿದು ಸರ್ಕಾರ ರಚಿಸುವಲ್ಲಿ ನೆರವಾದವರಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿದೆ

18 ಕೋಟಿ ಭಾರತೀಯರಿಗೆ ಈಗಾಗಲೇ ಕೊರೋನಾ ಬಂದು ಗುಣಮುಖವಾಗಿದೆ ಇದು ಅಶ್ಚರ್ಯವೆನಿಸಿದರೂ ಸತ್ಯ..

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 11 ಲಕ್ಷ ಗಡಿ ದಾಟಿರುವಂತೆಯೇ ಇತ್ತ ಅಧ್ಯಯನವೊಂದು ಈಗಾಗಲೇ 18 ಕೋಟಿ ಭಾರತೀಯರಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲು ಮಾಡಿದೆ. ಹೌದು. ಖ್ಯಾತ ಖಾಸಗಿ ಪರೀಕ್ಷಾ ಲ್ಯಾಬ್ ಸಂಸ್ಥೆ ಥೈರೋಕೇರ್ ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ನಡೆಸಿದ ಅಧ್ಯಯನದಲ್ಲಿ ದೇಶದ ಸುಮಾರು 18 ಕೋಟಿ ಭಾರತೀಯರಲ್ಲಿ ಈಗಾಗಲೇ ಕೊರೋನಾ ವೈರಸ್ ಬಂದು ಹೋಗಿದೆ ಎಂದು ಹೇಳಿದೆ. ಕೊರೋನಾ ವೈರಸ್ ಸೈಲೆಂಟ್ ಆಗಿ ಎಲ್ಲರನ್ನೂ ಆವರಿಸುತ್ತಿದ್ದು, ವೇಗವಾಗಿ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತಿದೆ ಎಂದು ವರದಿ ಹೇಳಿದೆ.ಭಾರತದಲ್ಲಿ ಕೊರೋನಾ ಸೋಂಕಿತರ ಹೆಚ್ಚಳದ ಬೆನ್ನಲ್ಲೇ ಐಸಿಎಂಆರ್ ಎರಡು ರೀತಿಯ ಕೋವಿಡ್ ಟೆಸ್ಟ್ ಗೆ ಅನುಮತಿ ನೀಡಿದೆ. ಅಲ್ಲದೆ ಪಟ್ಟಿ ಮಾಡಿದ ಕೆಲ ಖಾಸಗಿ ಲ್ಯಾಬ್ ಗಳೂ ಕೂಡ ಕೊರೋನಾ ಪರೀಕ್ಷೆ ಮಾಡಲು ಆರಂಭಿಸಿವೆ. ಈ ಪೈಕಿ ಥೈರೋಕೇರ್ ಲ್ಯಾಬ್ ಕೂಡ ಒಂದಾಗಿದ್ದು. ಈ ಥೈರೋಕೇರ್ ಸಂಸ್ಥೆ ದೇಶದ ವಿವಿಧ ಮೂಲೆಗಳಿಂದ ಸುಮಾರು 60 ಸಾವಿರ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದೆ. ಈ ರೀತಿ ಪರೀಕ್ಷೆಗಳಪಡಿಸಿದ ದತ್ತಾಂಶಗಳನ್ನು ಥೈರೋಕೇರ್ ಸಂಸ್ಥೆ ಅಧ್ಯಯನ ಮಾಡಿದ್ದು, ಅದರಂತೆ ದೇಶದ ಸುಮಾರು ಶೇ.15ರಷ್ಟು ಮಂದಿಗೆ ಈಗಾಗಲೇ ಕೊರೋನಾ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲಿಗೆ ತಂದಿದೆ.

ದೇಶದ ಶೇ. 90ರಷ್ಟು ಮಂದಿ ಇನ್ನೂ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿಲ್ಲ. ಕೇವಲ ಶೇ.9ರಷ್ಟು ಮಂದಿ ಮಾತ್ರ ಸೋಂಕಿಗೆ ತುತ್ತಾಗಿದ್ದಾರೆ. ಆದರೆ ದೇಶದಲ್ಲಿ ಶೇ.10 ರಿಂದ 30ರಷ್ಟು ಮಂದಿಯಲ್ಲಿ ಆಂಟಿಬಾಡಿ ರಚನೆಯಾಗಿದೆ. ಅಂದರೆ ಇಷ್ಟು ಮಂದಿಯಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂದು ಅರ್ಥ. ಪ್ರಸ್ತುತ ನಾವು ದೇಶದ ವಿವಿಧೆಡೆ ಸುಮಾರು 60 ಸಾವಿರ ಮಂದಿಯ ಆಂಟಿಬಾಡಿ ಟೆಸ್ಟ್ ಮಾಡಿದ್ದೇವೆ.  ಈ ಪ್ರಮಾಣವನ್ನು ಗಮನಿಸಿದರೆ ದೇಶದ 18 ಕೋಟಿ ಜನರು ತಮಗೆ ಗೊತ್ತಿಲ್ಲದೇ ಕೊರೋನಾ ವೈರಸ್ ಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಅಂತೆಯೇ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಬಹಳಷ್ಟು ಜನ ಇಷ್ಟು ಕಡಿಮೆ ಪ್ರಮಾಣದ ಟೆಸ್ಟ್ ಮೂಲಕ ನಿಖರ ಉತ್ತರ ಪಡೆಯುವುದು ಕಷ್ಟ ಎಂದು ಅಧ್ಯಯನ ಹೇಳಿದೆ.

ಜುಲೈ 22,2020; ಬುಧವಾರ: ಇಂದಿಶ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವಸಂತ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಬುಧವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:18

ಮೇಷ

ಉದ್ಯೋಗದ ವಿಷಯದಲ್ಲಿ ಭಾಗ್ಯೋದಯದ ವಾರ್ತೆಯನ್ನು ಕೇಳಲಿದ್ದೀರಿ. ಮಿತ್ರರ ಔದಾರ್ಯವು ದೊರಕುವುದು. ಆರ್ಥಿಕ ಅಭಿವೃದ್ಧಿ ಕಾಣುವಿರಿ. ಬಂಧುಗಳೊಂದಿಗೆ ಅತಿಯಾದ ಜಿಗುಟುತನದಿಂದಾಗಿ ವಿರಸ.

ವೃಷಭ

ವ್ಯವಹಾರದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ. ಹತ್ತಿ, ಬಟ್ಟೆ ವ್ಯಾಪಾರದಿಂದ ಅಧಿಕ ಲಾಭವನ್ನು ಹೊಂದುವಿರಿ. ಗುತ್ತಿಗೆ ಕೆಲಸ ನಿರ್ವಹಣೆಗಾಗಿ ಯಂತ್ರೋಪಕರಣಗಳನ್ನು ಖರೀದಿಸುವ ಸಾಧ್ಯತೆ.

ಮಿಥುನ

ಗಣಿಗಾರಿಕೆ, ಕಲ್ಲು ಕೆಲಸಗಾರರಿಗೆ ಬೇಡಿಕೆ ಹೆಚ್ಚಿ ಉತ್ತಮ ಆದಾಯ ದೊರಕಲಿದೆ. ಸರ್ಕಾರದಿಂದ ಬರಬೇಕಾದ ಸಹಾಯಧನ ದೊರಕುವ ಸಾಧ್ಯತೆ. ಬಹುದಿನಗಳ ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಕೊನೆಗೊಳ್ಳುವುದು.

ಕಟಕ

ಉದ್ಯೋಗದಲ್ಲಿ ಪ್ರಗತಿ. ಬಟ್ಟೆ, ಶೃಂಗಾರ ಸಾಮಗ್ರಿಗಳ ವ್ಯಾಪಾರಸ್ಥರು, ಪ್ರಸಾದನ ಕಲಾವಿದರುಗಳಿಗೆ ಹೆಚ್ಚಿನ ಆದಾಯ. ಮಹಿಳಾ ರಾಜಕಾರಣಿಗಳಿಗೆ ಗೌರವ ಪ್ರತಿಷ್ಠೆಗಳು ಪ್ರಾಪ್ತವಾಗುವವು.

ಸಿಂಹ

ಭೂಮಿ ಖರಿದಿ ಸಾಧ್ಯತೆ ಕಂಡುಬರುತ್ತಿದೆ. ಪತ್ರ ವ್ಯವಹಾರ ನಡೆಸುವಾಗ ಯೋಚಿಸಿ ಮುಂದುವರಿಯುವುದು ಉತ್ತಮ. ನಾನಾ ಮೂಲಗಳಿಂದ ಸಂಪದಭಿವೃದ್ಧಿಯನ್ನು ಕಾಣಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕನ್ಯಾ

ಸ್ಟೀಲ್, ಕಬ್ಬಿಣ ಮುಂತಾದ ಲೋಹಗಳ ವ್ಯಾಪಾರಸ್ಥರು ವಿಶೇಷ ಲಾಭ ಹೊಂದಲಿದ್ದೀರಿ. ವಿಶೇಷ ಕೆಲಸದ ನಿಮಿತ್ತ ದೂರದ ಪ್ರಯಾಣ ಸಾಧ್ಯತೆ. ಮಂಗಳ ಕಾರ್ಯಗಳ ಸಲುವಾಗಿ ಮಾತುಕತೆ ನಡೆಸಲಿದ್ದೀರಿ.

ತುಲಾ

ವಿದ್ಯಾರ್ಥಿಗಳಿಗೆ ಅತಿಯಾದ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ. ತಾಳ್ಮೆ ಮತ್ತು ಬುದ್ಧಿಮತ್ತೆಯಿಂದಾಗಿ ಯಶಸ್ಸನ್ನು ಹೊಂದುವಿರಿ. ಆಹಾರಧಾನ್ಯಗಳ ವ್ಯಾಪಾರಿಗಳಿಗೆ ಉತ್ತಮ ಆದಾಯ.

ವೃಶ್ಚಿಕ

ಕ್ರೀಡೆ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಉಪಾಧ್ಯಾಯರು, ಉಪನ್ಯಾಸಕರುಗಳಿಗೆ ಸನ್ಮಾನ, ಗೌರವಗಳು ಪ್ರಾಪ್ತವಾಗಲಿದೆ. ಅಲಂಕಾರಿಕ ವಸ್ತುಗಳ ಖರೀದಿ ಸಾಧ್ಯತೆ.

ಧನು

ಸ್ಥಿರಾಸ್ತಿಯನ್ನು ಖರೀದಿ ಮಾಡುವ ಸಾಧ್ಯತೆ. ವಿದ್ಯುತ್, ಬೆಂಕಿ ಮುಂತಾದವುಗಳ ಜೊತೆ ಕೆಲಸ ಮಾಡುವವರು ಅತ್ಯಂತ ಜಾಗರೂಕರಾಗಿರುವುದು ಒಳಿತು. ವಿವಿಧ ಮೂಲಗಳಿಂದ ಆದಾಯವು ಹರಿದುಬರಲಿದೆ.

ಮಕರ

ವೈದ್ಯ ವೃತ್ತಿಯಲ್ಲಿರುವವರಿಗೆ, ವಾಣಿಜ್ಯ ಬೆಳೆಗಳ ದಲ್ಲಾಳಿಗಳಿಗೆ ಉತ್ತಮ ಆದಾಯ. ಅರಣ್ಯಾಧಿಕಾರಿಗಳಿಗೆ ಅನಿರೀಕ್ಷಿತ ವರಮಾನ ದೊರಕಲಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ಮೆಟ್ಟಿಲು ದೊರಕುವುದು.

ಕುಂಭ

ಉದ್ಯೋಗದಲ್ಲಿ ಯಶಸ್ಸು ಮತ್ತು ಖ್ಯಾತಿ ದೊರಕುವುದು. ಮಕ್ಕಳಿಗೆ ಅದೃಷ್ಟ ಒದಗಿ ಬರುವುದು. ಷೇರುಪೇಟೆ ವಹಿವಾಟುದಾರರಿಗೆ ವ್ಯವಹಾರದಲ್ಲಿ ಹೆಚ್ಚಳವಾಗುವ ಸಾಧ್ಯತೆ.

ಮೀನ

ದೊಡ್ಡ ದೊಡ್ಡ ಸಾಹಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಖರೀದಿ ವ್ಯವಹಾರದಲ್ಲಿ ತೊಡಕುಂಟಾಗಿ ದುಂದು ವೆಚ್ಚವನ್ನು ಭರಿಸಬೇಕಾದೀತು. ಮನೆಯವರೊಂದಿಗೆ ವಿರಸವುಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ಇಂದಿನ ಔಷಧೀಯ ಸಸ್ಯ ಪರಿಚಯ: ಹಾಲುಕುಡಿ ಬಳ್ಳಿ

ದುಗ್ಧಿಕಾ (ಹಾಲು ಬಳ್ಳಿ )ಕೆಂಪು ನೆನೆ ಅಕ್ಕಿಗಿಡ, ಬಿಳಿ ನೆನೆಅಕ್ಕಿಗಿಡ, ದೊಡ್ಡ ಹಾಲುಕುಡಿ, ಸಣ್ಣ ಹಾಲುಕುಡಿ,ಅಚ್ಚೆಗಿಡ,ರೆಡ್ಡಿವಾರು ನಾನಬಾಲ, ಪಾಲುಕಾಡ, ನಾಗಾರ್ಜುನಿ, ನಾನಪಾಲ ಪಚ್ಚಪೋಟ್ಲಾಕು, ಅಮ್ಮನ್ ಪಚ್ಚೆರಸಿ, ನೀಲಪಾಳೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಸ್ಯವು ತೋಟ, ಹೊಲ, ಸಾಗುವಳಿ ಭೂಮಿ, ರಸ್ತೆಗಳ ಪಕ್ಕ, ಪಾಳು ಭೂಮಿ, ನೀರು ಹರಿಯುವ ಕಾಲುವೆಗಳ ಪಕ್ಕ,ತೇವಾಂಶ ಹೆಚ್ಚು ಇರುವ ಕಡೆ ಕಳೆಯಂತೆ ಬೆಳೆಯುತ್ತೆ.ಇದರಲ್ಲಿ ಕೆಂಪು ಹಾಗು ಬಿಳಿಯ ಬಣ್ಣದ ಎರಡು ಪ್ರಭೇದಗಳಿದ್ದು, 1/2 -1 ಅಡಿ ನೆಲದಲ್ಲಿ ಹಬ್ಬಿ ಬೆಳೆಯುತ್ತವೆ.

ದೇಹದಲ್ಲಿ ಉಷ್ಣತೆ ಹೆಚ್ಚಿಗಿದ್ದಾಗ ಹಾಲುಬಳ್ಳಿಯ ಎಲೆಗಳನ್ನು ತಂದು ಶುಭ್ರಗೊಳಿಸಿ, ಜೊತೆಗೆ ನಾಟಿ ಈರುಳ್ಳಿ, ಬೆಳ್ಳುಳ್ಳಿ ತಕ್ಕಷ್ಟು ಉಪ್ಪು ಸೇರಿಸಿ ಚೆಟ್ನಿ ಮಾಡಿ ಸೇವಿಸಿದರೆ, ದೇಹದಲ್ಲಿನ ಉಷ್ಣತೆ ಅತಿ ಶೀಘ್ರದಲ್ಲಿ ಕಡಿಮೆಯಾಗುತ್ತೆ.
ಹಾಲುಬಳ್ಳಿಯ ಎಲೆಗಳ ಜೊತೆಗೆ ಹೆಸರುಕಾಳು, ಸೇರಿಸಿ ನಾಟಿ ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಬಾಯಿಹುಣ್ಣು ಹಾಗು ಹೊಟ್ಟೆಯಲ್ಲಿನ ಹುಣ್ಣು ( ಅಲ್ಸರ್) ವಾಸಿಯಾಗುತ್ತೆ.ಈ ಗಿಡದ
ಹಾಲನ್ನು ಬಾಯಿ ಹುಣ್ಣಿಗೆ ಎರಡು ಮೂರು ದಿನ ಲೇಪನ ಮಾಡುತ್ತಾ ಬಂದರೆ ಬೇಗನೆ ಗುಣವಾಗುತ್ತೆ.
ಬಾಣಂತಿಯರಲ್ಲಿ ಮೊಲೆಹಾಲು ಕಡಿಮೆ ಇದ್ದಾಗ ಹಾಲುಬಳ್ಳಿಯ ಹೂವುಗಳನ್ನು ತಂದು ಶುಭ್ರಗೊಳಿಸಿ, ನುಣ್ಣಿಗೆ ಅರೆದು 1 ಲೋಟ ಹಸುವಿನ ಹಾಲಿನಲ್ಲಿ
ಕಲಸಿ ಬೆಳಿಗ್ಗೆ ಊಟಕ್ಕೆ ಮುಂಚೆ ಕುಡಿಯುತ್ತಾ ಬಂದರೆ ತಾಯಂದಿರಲ್ಲಿ ಎದೆ ಹಾಲು ಹೆಚ್ಚುತ್ತೆ.
ಹಾಲುಬಳ್ಳಿ ಎಲೆಗಳ ಜೊತೆಯಲ್ಲಿ 3-4 ಬೇವಿನ ಎಲೆಗಳು, 5-6 ಕಾಳು ಮೆಣಸು ನುಣ್ಣಿಗೆ ಅರೆದು 1 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಬೆಳಿಗ್ಗೆ ಊಟಕ್ಕೆ 1/2 ಗಂಟೆ ಮೊದಲು ಕುಡಿದರೆ ದೇಹದಲ್ಲಿ ರಕ್ತಶುದ್ಧಿಯಾಗುತ್ತೆ.
ಹಾಲುಬಳ್ಳಿಯ ಎಲೆಗಳನ್ನು ತಂದು, ಶುಭ್ರಗೊಳಿಸಿ ಅದಕ್ಕೆ ಚಿಟಿಕೆ ಉಪ್ಪು, ಚಿಟಿಕೆ ಅರಸಿಣ ಪುಡಿ, ಚಿಟಿಕೆ ಕಾಳು ಮೆಣಸಿನಪುಡಿ ಸೇರಿಸಿ 200ml ನೀರಿಗೆ ಹಾಕಿ ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರುಬೆಚ್ಚಗಾದಾಗ ಸೋಸಿ, ಬೆಳಿಗ್ಗೆ ಸಂಜೆ 50ml ನಂತೆ ಸೇವಿಸಿದರೆ, ಜ್ವರ, ನೆಗಡಿ, ಕೆಮ್ಮು ವಾಸಿಯಾಗುತ್ತೆ.
ಹಾಲುಬಳ್ಳಿಯ 2ಚಮಚ ರಸಕ್ಕೆ ಚಿಟಿಕೆ ಕಾಳು ಮೆಣಸಿನಪುಡಿ ಸೇರಿಸಿ, ಸ್ತ್ರೀಯರು ಋತಸ್ರಾವವಾದ ಮೂರು ದಿನ ಬೆಳಿಗ್ಗೆ ಸಂಜೆ ಸೇವಿಸಿ, ಸಪ್ಪೆ ಊಟ ತಿಂದರೆ ಗರ್ಭಾಶಯ ದೋಷಗಳು ದೂರವಾಗಿ ಸಂತಾನ ಪ್ರಾಪ್ತಿಯಾಗಲು ಅನುಕೂಲವಾಗುತ್ತೆ.ಇದು ಸಂತಾನ ಭಾಗ್ಯ ಪಡೆಯಲು ದಿವೌಷಧಿ.
ಹಾಲುಬಳ್ಳಿಯನ್ನು ಸಮೂಲ ಸಹಿತ ನೆರಳಲ್ಲಿ ಒಣಗಿಸಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು,
1 ಚಮಚ ಚೂರ್ಣಕ್ಕೆ 1 ಚಮಚ ಕೆಂಪು ಕಲ್ಲು ಸಕ್ಕರೆ ಸೇರಿಸಿ 1/2 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಊಟಕ್ಕೆ 1/2 ಗಂಟೆಯ ಮೊದಲು ಕುಡಿದು, ಮೇಲೆ 1 ಲೋಟ ಹಾಲು ಕುಡಿಯುತ್ತಾ ಬಂದರೆ ಲೈಂಗಿಕ ಸಮಸ್ಯೆಗಳು ದೂರವಾಗಿ, ಶೃಂಗಾರದಲ್ಲಿ ಆಸಕ್ತಿ ಹೆಚ್ಚುತ್ತೆ.ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ
ಹೆಚ್ಚಿ, ನಪುಂಷಕತ್ವ ದೂರವಾಗುತ್ತೆ.ಆರೋಗ್ಯ ಸುಧಾರಣೆಯಾಗಿ, ಆಯಸ್ಸು ವೃದ್ಧಿಸುತ್ತೆ. ಸ್ತ್ರೀಯರು ಇದೇ ರೀತಿ ತೆಗೆದುಕೊಂಡರೆ, ಋತಸ್ರಾವ ದೋಷಗಳು, ಗರ್ಭಾಶಯ ಸಮಸ್ಯೆಗಳು ಸಂಪೂರ್ಣ ದೂರವಾಗುತ್ತವೆ.
2 ಚಮಚ ಹಾಲುಬಳ್ಳಿಯ ಬೇರಿನ ಕಷಾಯಕ್ಕೆ,1 ಚಮಚ ನಿಂಬೆಹಣ್ಣಿನ ರಸ, 2 ಚಮಚ ಜೇನುತುಪ್ಪ ಕಲಸಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತೆ.
ಹಾಲುಬಳ್ಳಿಯನ್ನು ಮುರಿದಾಗ ಬರುವ ಹಾಲನ್ನು 1-2 ಹನಿ ಕಣ್ಣಿಗೆ ಬಿಟ್ಟುಕೊಂಡರೆ, ಕಣ್ಣಿನ ಪೊರೆರೋಗ, ದೃಷ್ಟಿದೋಷ, ದೃಷ್ಠಿ ಹಾಳುಮಾಡುವ ಕಣ್ಣಿನ ಹೂ ರೋಗ ವಾಸಿಯಾಗಿ, ಕಣ್ಣಿನ ದೃಷ್ಠಿ ಸುಗುಮವಾಗಿ ಕಾಣುತ್ತೆ. (ಕಣ್ಣಿಗೆ ಹಾಲನ್ನು ಆಯುರ್ವೇದ ವೈದ್ಯರ ಸಲಹೆ ಪಡೆದುಕೊಂಡು ಹಾಕಬೇಕು)
ಮಧುಮೇಹಿಗಳ ಪಾಲಿಗೆ ಹಾಲುಬಳ್ಳಿ (ಅಮೃತ) ಅತ್ಯದ್ಭುತ ದಿವೌಷಧ. ಸಮೂಲದ ವಸ್ತ್ರಗಾಲಿತ ಚೂರ್ಣವನ್ನು ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು, ಉಗರು ಬೆಚ್ಚಗಿನ 1/2 ಲೋಟ ನೀರಿಗೆ ಬೆರಸಿ ಕುಡಿಯುತ್ತಾ ಬಂದರೆ ಸಕ್ಕರೆ ಕಾಯಿಲೆ ಖಚಿತವಾಗಿ ಅತೋಟಿಗೆ ಬರುತ್ತೆ.
ಹಾಲುಬಳ್ಳಿ ಮುರಿದಾಗ ಬರುವ ಹಾಲನ್ನು, ಬಾವು, ಗಡ್ಡೆ,ಹುಣ್ಣು, ಗಾಯಕ್ಕೆ ಲೇಪನ ಮಾಡುತ್ತಿದ್ದರೆ ಬೇಗನೆ ಗುಣವಾಗುತ್ತೆ.
ಪುಲಿಪುರಿಗಳಿಗೆ ಹಾಲುಬಳ್ಳಿಯ ಹಾಲನ್ನು ಲೇಪನ ಮಾಡುತ್ತಿದ್ದರೆ, ಬೇಗನೆ ಮಾಯವಾಗುತ್ತವೆ.
3 ಚಮಚ ಹಾಲುಬಳ್ಳಿಯ ಎಲೆಗಳ ರಸಕ್ಕೆ ಸಮನಾಗಿ 3 ಚಮಚ ತುಳಸಿ ರಸ, ಅದಕ್ಕೆ 1 ಚಮಚ ಶ್ರೀಗಂಧದ ಚೂರ್ಣ, 2 ಚಮಚ ಮೊಸರು ಕಲಸಿ ಮುಖಕ್ಕೆ ಲೇಪನ ಮಾಡಿ 1/2 ಗಂಟೆಯ ನಂತರ ಉಗರು ಬೆಚ್ಚಗಿನ ನೀರಲ್ಲಿ ತೊಳೆದು ಕೊಂಡರೆ ಮೊಡವೆ, ಮಚ್ಚೆಗಳು ದೂರವಾಗಿ, ಮುಖದ ಚರ್ಮ ಮೃದುವಾಗಿ ಕಾಂತಿಯಿಂದ ಹೊಳೆಯುತ್ತೆ.ಇದೇ ರೀತಿ ದೇಹಕ್ಕೆಲ್ಲ ಲೇಪನ ಮಾಡಿ ಸ್ನಾನ ಮಾಡಿದರೆ, ಚರ್ಮ ವ್ಯಾಧಿಗಳು ದೂರವಾಗಿ, ದೇಹವು ಆರೋಗ್ಯದಿಂದ ಸದೃಢವಾಗುತ್ತೆ. ಈ ಮೂಲಿಕೆಯ ಉಪಯೋಗಗಳು ಅಪಾರವಾದದ್ದು.ಇದು ನೂರಾರು ವ್ಯಾಧಿಗಳಿಗೆ ರಾಮಬಾಣ.

ಗೆಳೆಯರೆ ವಂದನೆಗಳು

Design a site like this with WordPress.com
Get started