ಪ.ಬಂಗಾಲ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಶೋಭಾ ಕರಂದ್ಲಾಜೆ

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಸಂಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೂಂಡಾಗಿರಿ, ದಾಂಧಲೆ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ ಬರೆದಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಪ.ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯ ಟಿ.ಎಂ.ಸಿ. ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರ, ಗೂಂಡಾಗಿರಿ ಪ್ರತಿಭಟಿಸಿ, ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇಪ್ಪತೈದು ವರ್ಷಗಳ ಪರ್ಯಂತ ಒಂದೇ ಮುಖ್ಯಮಂತ್ರಿಯನ್ನು ಮುಂದುವರಿಸಿಕೊಂಡು ಬಂದು ಕಮ್ಯುನಿಷ್ಟ್ ರಾಜ್ಯವೆನಿಸಿಕೊಂಡಿದ್ದರೂ ಪ್ರಸಕ್ತ ಬೆರಳೆಣಿಕೆಯ ಶಾಸಕರ ಗೆಲುವಿಗೆ ಪರದಾಡುವ ದುಸ್ಥಿತಿ ಕಮ್ಯುನಿಷ್ಟ್ ಪಕ್ಷಕ್ಕೆ ಬಂದೊದಗಿದೆ. ಅದೇ ರೀತಿಯ ದುರ್ಗತಿ ಪ.ಬಂಗಾಲದ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಬಂದೊದಗಲಿದೆ. ಆದುದರಿಂದ ಹಿಂಸೆ, ಗೂಂಡಾಗಿರಿಯನ್ನು ತ್ಯಜಿಸಿ ಎಂದು ಆಗ್ರಹಿಸಿದ ಅವರು ದೇಶದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆಯ ಮೂಲಕ ಪ. ಬಂಗಾಲದ ಬಿಜೆಪಿ ಕಾರ್ಯಕರ್ತರ ಜೊತೆ ನಾವೆಲ್ಲರೂ ಇದ್ದೇವೆ, ತ್ರಣ ಮೂಲ ಕಾಂಗ್ರೆಸ್ ನ ಗೂಂಡಾಗಿರಿಯನ್ನು ಮೆಟ್ಟಿ ನಿಲ್ಲುವ ಕಾಲ ಸನ್ನಿಹಿತವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ.ಬಂಗಾಲದ ಮಮತಾ ಬ್ಯಾನರ್ಜಿ ಸಂವಿಧಾನ ವಿರೋಧಿ ನಡೆ ಖಂಡನೀಯ. ಅವರ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹಿಂಸಾಚಾರ, ಗೂಂಡಾಗಿರಿಗೆ ತಕ್ಕ ಉತ್ತರವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶಕ್ತವಾಗಿದೆ. ಇಡೀ ದೇಶ ಇಂತಹ ವಿಧ್ವಂಸಕ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜಿಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜಾ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ ಪ್ರಭು, ಪ್ರಮುಖರಾದ ಜಿಲ್ಲೇಶ್ ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಉಪಸ್ಥಿತರಿದ್ದರು.

ಅಂಬಲಪಾಡಿ: ಹಡಿಲು ಭೂಮಿ ಕೃಷಿಗೆ ಕೆ.ರಾಘವೇಂದ್ರ ಕಿಣಿ ಚಾಲನೆ

ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್(ರಿ.) ಉಡುಪಿ ಇದರ ಆಶ್ರಯದಲ್ಲಿ ಸಾವಯುವ ಕೃಷಿ ಉತ್ಪನ್ನ ಬೆಳೆಸುವ ನಿಟ್ಟಿನಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ವಾರ್ಡಿನ ಸುಮಾರು 25 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಕೇದಾರೋತ್ಥಾನ ಟ್ರಸ್ಟಿನ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಕೇಂದ್ರದ ಬಳಿ ಸುರೇಶ್ ಶೆಟ್ಟಿಯವರ ಗದ್ದೆಗೆ ಹಾಲೆರೆಯುವ ಮೂಲಕ ಚಾಲನೆ ನೀಡಿದರು

ಅಂಬಲಪಾಡಿ ಬಂಕೇರ್ಕಟ್ಟ ಪ್ರದೇಶದಲ್ಲಿ ಸುಮಾರು 10 ಎಕ್ರೆ ಹಡಿಲು ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆಯನ್ನು ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಕಪ್ಪೆಟ್ಟು, ಗ್ರಾ.ಪಂ. ಉಪಾಧ್ಯಕ್ಷ, ಗ್ರಾಮೋತ್ಥಾನ ಸಮಿತಿಯ ಗೌರವ ಸಲಹೆಗಾರ ಸೋಮನಾಥ್ ಬಿ.ಕೆ., ಗ್ರಾ.ಪಂ. ಪಿ.ಡಿ.ಒ. ವಸಂತಿ, ಗ್ರಾಮೋತ್ಥಾನ ಸಮಿತಿಯ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಗೌರವ ಸಲಹೆಗಾರರಾದ ರಾಜೇಂದ್ರ ಪಂದುಬೆಟ್ಟು, ಕೇಳು ನಾರಾಯಣ, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಸುನಿಲ್ ಕುಮಾರ್, ಹರೀಶ್ ಆಚಾರ್ಯ, ದಯಾಶಿನಿ ಪಂದುಬೆಟ್ಟು, ಬಿಲ್ಲವ ಸೇವಾ ಸಂಘ, ಶ್ರೀ ವಿಠೋಬ ಭಜನಾ ಮಂದಿರದ ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ, ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಕಾರ್ಯದರ್ಶಿ ಭಾರತ್ ರಾಜ್ ಕೆ.ಎನ್., ಹಡಿಲು ಗದ್ದೆಗಳ ಮಾಲೀಕರು ಹಾಗೂ ಕೃಷಿಕರಾದ ಸುರೇಶ್ ಶೆಟ್ಟಿ, ಶರತ್ ಶೆಟ್ಟಿ, ನಾರಾಯಣ ಪೂಜಾರಿ, ಓಬು ಪೂಜಾರಿ, ಸುಧಾಕರ ಪೂಜಾರಿ, ಡೇನಿಸ್ ಕ್ವಾಡ್ರಸ್, ಕೀರ್ತನ್ ಶೆಟ್ಟಿ, ಗಣೀಶ್ ಶೆಟ್ಟಿ, ಸುನೀತಾ ಶೆಟ್ಟಿ, ವಿಠ್ಠಲ ಹಾಗೂ ಸ್ಥಳೀಯರಾದ ರಾಧಾಕೃಷ್ಣ, ಕೇಶವ ಶ್ರೀಯಾನ್, ವಿನೋದ್ ಪೂಜಾರಿ, ನಾಗರಾಜ್ ಕರ್ಕೇರ, ಗಣೀಶ್ ಪೂಜಾರಿ, ಕೀರ್ತನಾ, ರಂಜಿತಾ, ನಂದ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಮೇ 05, ಬುಧವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಬುಧವಾರ, 05.05.2021

ಸಂವತ್ಸರ: ಪ್ಲವ ಆಯನ: ಉತ್ತರಾಯಣಮಾ.ನಿ.: ಶ್ರೀ ಪದ್ಮ-ವಿಷ್ಣು || ಋತು: ವಸಂತ ಮಾಸ: ಚೈತ್ರ ಪಕ್ಷ: ಕೃಷ್ಣ ನಕ್ಷತ್ರ: ಧನಿಷ್ಠಾ (ಹ 12.52) ಸೂರ್ಯಾಸ್ತ: ಸಂ 6.48 ತಿಥಿ: ನವಮಿ (ಸಾ 5.01)ವಾಸರ: ಸೌಮ್ಯ (ಬುಧ) ಯೋಗ: ಬ್ರಹ್ಮ ಕರಣ: ಗರಜೆ ರಾಹುಕಾಲ: ಮ 12.00-1.30 ಸೂರ್ಯೋದಯ: ಬೆ 6.00

ಮೇಷ

ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗಾವಕಾಶ ದೊರಕಲಿದೆ. ವಿದೇಶಿ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ತಿರುವು. ಅತಿಯಾದ ಆಯಾಸ. ವೈದ್ಯರ ಸಲಹೆ ಪಡೆಯಬೇಕಾದೀತು.

ವೃಷಭ

ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ನೌಕರ ವರ್ಗಕ್ಕೆ ಕೆಲಸಗಳಿಂದ ವಿರಾಮ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು.

ಮಿಥುನ

ದೇವತಾನುಗ್ರಹದಿಂದ ಶುಭಕಾರ್ಯಗಳು ನಿಮ್ಮ ಮನದಿಚ್ಛೆಯಂತೆ ನೆರವೇರುವುದರಿಂದ ನೆಮ್ಮದಿ. ಧೈರ್ಯ ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲದಿಂದಾಗಿ ಕಾರ್ಯಾನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.

ಕಟಕ

ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಸಂಗಾತಿಯ ಕೋಪ ಎದುರಿಸಬೇಕಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ.

ಸಿಂಹ

ನ್ಯಾಯಾಲಯದಲ್ಲಿನ ಕಟ್ಟಲೆಗಳಿಗೆ ಚಾಲನೆ ದೊರಕಲಿದೆ. ರೈತರಿಗೆ ಉತ್ತಮವಾದ ದಿನ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ. ಸಾಹಿತಿ, ಬುದ್ಧಿ ಜೀವಿಗಳಿಗೆ ಗೌರವ ಪ್ರಾಪ್ತವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಕನ್ಯಾ

ಕೆಲಸ ಕಾರ್ಯಗಳಲ್ಲಿ ಅನುಕೂಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಿಶ್ವಾಸದಿಂದ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಲಾಭ. ಮಾನಸಿಕ ನೆಮ್ಮದಿ.

ತುಲಾ

ಸಾರಾಸಾರ ವಿವೇಚನೆಯಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಿರಿಯರ ಆರೋಗ್ಯ ಹದಗೆಡುವ ಸಾಧ್ಯತೆ. ವಿಶೇಷ ಭೋಜನ ಕೂಟದಲ್ಲಿ ಭಾಗಿಯಾಗುವ ಸಾಧ್ಯತೆ.

ವೃಶ್ಚಿಕ

ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ. ಅವಶ್ಯಕತೆಗಿಂತ ಹೆಚ್ಚಾಗಿ ಹಣಕಾಸಿನ ನೆರವು ದೊರೆಯಲಿದೆ. ಶೀಘ್ರದಲ್ಲೇ ಸಂತೋಷಕರ ಸುದ್ದಿಯೊಂದನ್ನು ಆಲಿಸಲಿದ್ದೀರಿ.

ಧನು

ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಸಂತಸ. ಶಾರೀರಿಕ ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸದಲ್ಲಿ ಪ್ರಗತಿ. ದೂರದ ಪ್ರಯಾಣ ಬೇಡ.

ಮಕರ

ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆ. ಸಾಮಾಜಿಕ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತಸ. ಮಕ್ಕಳಿಂದ ಆರ್ಥಿಕ ಸಹಕಾರ ದೊರೆಯುವ ಸಾಧ್ಯತೆ.

ಕುಂಭ

ಗೃಹನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮವಾದ ಕಾಲ. ಮನಸ್ಸಿಟ್ಟು ಕೆಲಸವನ್ನು ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಭೂ ಖರೀದಿ ವ್ಯವಹಾರಕ್ಕೆ ಸಕಾಲ. ಆರೋಗ್ಯದ ಬಗ್ಗೆ ಗಮನವಿರಲಿ.

ಮೀನ

ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನುಕೂಲ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ. ರಾಜಕೀಯದಲ್ಲಿ ಸೂಕ್ತ ಸ್ಥಾನ ದೊರಕುವ ಸಾಧ್ಯತೆ.

ಮೇ 03, ಸೋಮವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

3 -5-2021 ಸೋಮವಾರ ಪ್ಲವ ಸಂ|ರದ ಮೇಷ ಮಾಸ‌ ದಿನ 20 ಸಲುವ ಚೈತ್ರ ಬಹುಳ ಸಪ್ತಮಿ 19 ಗಳಿಗೆ ದಿನ ವಿಶೇಷ :ವಿಶ್ವ ಅಸ್ತಮಾ ದಿನ ಬ್ರಹ್ಮಾವರ ರಥ ನಿತ್ಯ ನಕ್ಷತ್ರ :ಉತ್ತರಾಷಾಢಾ 5||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.10 ಗಂಟೆ

ಮೇಷ

ಯಂತ್ರೋಪಕರಣಗಳ ಖರೀದಿ ಸಾಧ್ಯತೆ. ವಾಹನಗಳ ವ್ಯವಹಾರದಿಂದಾಗಿ ಉತ್ತಮ ಲಾಭ. ಕುಟುಂಬ ಸಮೇತ ಪ್ರಯಾಣ ನಡೆಸುವ ಸಾಧ್ಯತೆ ಕಂಡುಬರುವುದು. ಪ್ರಿಯ ವ್ಯಕ್ತಿಗಳ ದರ್ಶನದಿಂದ ಸಂತಸ ಮೂಡಲಿದೆ.

ವೃಷಭ

ತಾಂತ್ರಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ಸ್ವಲ್ಪಮಟ್ಟಿನ ಬಿಡುವು. ಹೊಸ ಉದ್ಯಮ ಸ್ಥಾಪನೆ ವಿಚಾರವಾಗಿ ಪರಿಣತರ ಸಲಹೆ ಪಡೆಯಲಿದ್ದೀರಿ. ಹಿರಿಯರ ಸಲಹೆ ಸಹಕಾರದಿಂದಾಗಿ ವ್ಯವಹಾರದಲ್ಲಿ ಸುಧಾರಣೆ.

ಮಿಥುನ

ವಿವಾಹಾಕಾಂಕ್ಷಿಗಳಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಸಹೋದರಿಯರಿಂದ ಸಂತೋಷದ ವಿಷಯಗಳು ಕೇಳಿಬರಲಿವೆ. ಮನೆಯಲ್ಲಿ ಸಂತಸ.

ಕಟಕ

ಯಂತ್ರೋಪಕರಣಗಳ ವ್ಯವಹಾರದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದ್ದು ದಿನದ ಮಟ್ಟಿಗೆ ವ್ಯವಹಾರಕ್ಕೆ ಕೈಹಾಕದಿರುವುದು ಉತ್ತಮ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಬಂಧುಗಳ ಆಗಮನ.

ಸಿಂಹ

ರಾಜಕೀಯ ವ್ಯಕ್ತಿಗಳಿಗೆ ವಿಶೇಷವಾಗಿ ಮಹಿಳಾ ರಾಜಕಾರಣಿಗಳಿಗೆ ಉತ್ತಮಕಾಲವಾಗಿದ್ದು ಉನ್ನತ ಹುದ್ದೆಯನ್ನು ಏರುವ ಸಾಧ್ಯತೆಗಳು ಕಂಡುಬರುತ್ತಿದೆ. ಸ್ವಯಂ ಉದ್ಯೋಗಿಗಳಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ.

ಕನ್ಯಾ

ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಅನಿರೀಕ್ಷಿತ ಬಿಡುವಿನಿಂದಾಗಿ ಆಲಸ್ಯ. ತರಕಾರಿ, ಹೂವು ಹಣ್ಣು ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಇಳಿಕೆ. ಪ್ರಯಾಣದಲ್ಲಿ ಹಿತಾನುಭವ. ದೇವತಾದರ್ಶನ ಭಾಗ್ಯ.

ತುಲಾ

ಸ್ವಯಂ ಉದ್ಯೋಗ ನಡೆಸುತ್ತಿರುವವರಿಗೆ ಉತ್ತಮ ವ್ಯವಹಾರ. ಸಂಬಂಧಿಕರ ನೆರವಿಗಾಗಿ ಧಾವಿಸಬೇಕಾದ ಅನಿವಾರ್ಯತೆ ಉಂಟಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಶ್ಚಿಕ

ಕ್ರೀಡಾಪಟುಗಳಿಗೆ ಸ್ಪರ್ಧೆಗಳಲ್ಲಿ ಹಿನ್ನಡೆ. ಸಂಶೋಧಕರು, ವಿಜ್ಞಾನಿಗಳಿಗೆ ಉದ್ಯೋಗದಲ್ಲಿ ಪ್ರಗತಿಯೊಂದಿಗೆ ಪದೋನ್ನತಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯ. ಮಾನಸಿಕ ಕಿರಿಕಿರಿ.

ಧನು

ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆ ನಡೆಸುವವರಿಗೆ ವ್ಯವಹಾರದಲ್ಲಿ ಹೆಚ್ಚಳ. ಚಿನ್ನ, ಬೆಳ್ಳಿ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಕೊರತೆ ತಲೆದೋರಲಿದೆ. ಸಂಸಾರಿಕ ನೆಮ್ಮದಿ ದೊರಕಲಿದೆ.

ಮಕರ

ಹೊಸದಾಗಿ ಪ್ರಾರಂಭಿಸಿರುವ ಉದ್ಯಮದಲ್ಲಿ ಪ್ರಗತಿ. ಮಹಿಳೆಯರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ ದೊರಕುವ ಸಾಧ್ಯತೆ. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧಿ ಮಾತುಕತೆಗಳು ನಡೆಯಲಿವೆ.

ಕುಂಭ

ಆದಾಯ ತರುವ ಹೊಸ ಯಂತ್ರವೊಂದನ್ನು ಖರೀದಿಸಲಿದ್ದೀರಿ. ರೈತಾಪಿ ವರ್ಗದವರಿಗೆ ಆಶಾದಾಯಕ ವಾತಾವರಣ. ಗೆಡ್ಡೆ ಗೆಣಸುಗಳ ಬೆಳೆಗಾರರಿಗೆ ಹೆಚ್ಚಿನ ಆದಾಯ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಮೀನ

ಸರ್ಕಾರದಿಂದ ಆಗಬೇಕಾದ ಕೆಲಸಗಳು ವಿಳಂಬವಾಗುವ ಸಾಧ್ಯತೆ. ದಿನನಿತ್ಯದ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗಲಿದೆ. ನಿರೀಕ್ಷಿತ ಆದಾಯ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಯ.

ಮೇ 02, ಭಾನುವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

2 -5-2021 ಭಾನುವಾರ ಪ್ಲವ ಸಂ|ರದ ಮೇಷ ಮಾಸ‌ ದಿನ 19 ಸಲುವ ಚೈತ್ರ ಬಹುಳ ದಿನ ವಿಶೇಷ :-ನಿತ್ಯ ನಕ್ಷತ್ರ :ಪೂರ್ವಾಷಾಢಾ 21 ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :4.30-6.00 ಗಂಟೆ ಗುಳಿಕ ಕಾಲ :3.00-4.30 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.10 ಗಂಟೆ

ಮೇಷ

ಸಹೋದ್ಯೋಗಿಗಳಿಂದ ಸಹಕಾರ ಪಡೆದು ಉತ್ತಮ ಕಾರ್ಯ ನಿರ್ವಹಿಸಲಿದ್ದೀರಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಆಲಿಸುವಿರಿ. ನೀರಿನಲ್ಲಿ ಕೆಲಸ ಮಾಡುವವರಿಗೆ ಗಂಡಾಂತರ ಸಾಧ್ಯತೆ.

ವೃಷಭ

ವಾತಾವರಣದಲ್ಲಿನ ವ್ಯತ್ಯಯದಿಂದಾಗಿ ಉಬ್ಬಸ, ಕೆಮ್ಮು ಮುಂತಾದ ಶ್ವಾಸ ಸಂಬಂಧಿ ಪೀಡನೆಗೆ ತುತ್ತಾಗಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಬಿಡುವಿಲ್ಲದ ಕಾರ್ಯಕ್ರಮ. ಕೂಲಿ ಕಾರ್ಮಿಕರುಗಳಿಗೆ ಬಿಡುವಿನ ಅನುಭವ.

ಮಿಥುನ

ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದರಿಂದಾಗಿ ಮನೆಯಲ್ಲಿ ನೆಮ್ಮದಿ. ವಾಹನ ಖರೀದಿ ಮಾಡುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಂದಾಗಿ ಗೌರವ ಪ್ರಾಪ್ತಿ. ಕಾರ್ಮಿಕ ವರ್ಗದವರಿಗೆ ಅನುಕೂಲ.

ಕಟಕ

ಆಹಾರ ಪದಾರ್ಥಗಳ ವ್ಯವಹಾರದಲ್ಲಿ ಅತ್ಯಧಿಕ ಲಾಭ ನಿರೀಕ್ಷೆ. ಹಣ್ಣು ತರಕಾರಿ, ಹೂವು ವ್ಯಾಪಾರಸ್ಥರಿಗೆ ವ್ಯವಹಾರ ಕುಸಿತ. ಮಿಂಚು ಅಥವಾ ವಿದ್ಯುಚ್ಛಕ್ತಿಯ ವಿಷಯದಲ್ಲಿ ಜಾಗರೂಕರಾಗಿರುವುದು ಉತ್ತಮ.

ಸಿಂಹ

ತೊಗರಿ, ಉದ್ದು ಮುಂತಾದ ದ್ವಿದಳ ಧಾನ್ಯಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದ ನಿರೀಕ್ಷೆ. ರೈತಾಪಿ ವರ್ಗದವರಿಗೆ ಆತಂಕದ ಕ್ಷಣಗಳು. ಗಡ್ಡೆ ಗೆಣಸು ಬೆಳೆಗಾರರಿಗೆ ನಷ್ಟ. ಕಲಾವಿದರಿಗೆ ಉತ್ತಮ ಅವಕಾಶ.

ಕನ್ಯಾ

ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮನೆಯಲ್ಲಿ ಮನಸ್ತಾಪ‌. ಸಂಯಮದಿಂದ ವ್ಯವಹರಿಸುವುದರಿಂದಾಗಿ ತೊಂದರೆಗಳು ನಿವಾರಣೆ. ಹೊಸದೊಂದು ಯೋಜನೆಯನ್ನು ಸ್ಥಾಪಿಸುವ ಕುರಿತು ಚಿಂತನೆ.

ತುಲಾ

ಸರ್ಕಾರಿ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ. ಮೇಲಾಧಿಕಾರಿಗಳಿಂದ ಒತ್ತಡ ಎದುರಿಸಬೇಕಾದ ಪರಿಸ್ಥಿತಿ. ಕೃಷಿಯಲ್ಲಿ ತೊಡಗಿಕೊಂಡವರಿಗೆ ಆತಂಕದ ಕ್ಷಣಗಳು. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

ವೃಶ್ಚಿಕ

ಕುಶಲಕರ್ಮಿಗಳು, ವೈದ್ಯರುಗಳಿಗೆ ಆದಾಯದಲ್ಲಿ ಗಣನೀಯ ಹೆಚ್ಚಳ. ಔಷಧ ವ್ಯಾಪಾರದಲ್ಲಿ ಪ್ರಗತಿ. ವಿವಾಹ ಸಂಬಂಧಗಳ ವಿಚಾರದಲ್ಲಿ ಅನಿರೀಕ್ಷಿತ ಬೆಳವಣಿಗೆ. ಮಿತ್ರರ ನಡವಳಿಕೆಯಿಂದ ಕುತ್ತುಂಟಾಗುವ ಸಾಧ್ಯತೆ.

ಧನು

ನಿರಂತರ ಕೆಲಸಗಳಿಂದಾಗಿ ದೇಹಾಲಾಸ್ಯ. ಆರೋಗ್ಯದ ನಿಮಿತ್ತ ಧನ ವ್ಯಯ. ಮಕ್ಕಳ ಆಗಮನದಿಂದಾಗಿ ಮನೆಯಲ್ಲಿ ಉಲ್ಲಾಸ. ಸಾಮಾಜಿಕ ಕಾರ್ಯಕರ್ತರಿಗೆ ಯಶಸ್ಸು.

ಮಕರ

ವ್ಯವಹಾರದಲ್ಲಿ ಅನಿರೀಕ್ಷಿತ ತೊಂದರೆ. ಸಂಗಾತಿಯ ಕಡೆಯಿಂದ ಬಂದ ಸಲಹೆಗಳನ್ನು ಪುರಸ್ಕರಿಸುವುದರಿಂದ ಕಾರ್ಯಾನುಕೂಲ. ಮಕ್ಕಳ ವಿವಾಹ ನಿಮಿತ್ತ ವ್ಯವಹರಿಸಲಿದ್ದೀರಿ.

ಕುಂಭ

ತಂತ್ರಜ್ಞರಿಗೆ ಬಿಡುವಿಲ್ಲದ ಕೆಲಸದಿಂದಾಗಿ ಉತ್ತಮ ಆದಾಯ. ಯಂತ್ರೋಪಕರಣಗಳ ವ್ಯವಹಾರದಿಂದ ಅಧಿಕ ಲಾಭ. ಭೂಮಿ ಅಥವಾ ನಿವೇಶನ ಖರೀದಿ ವಿಚಾರವಾಗಿ ಮಾತುಕತೆ.

ಮೀನ

ವಾಹನ ಚಾಲನೆ ಅಥವಾ ಪ್ರಯಾಣದಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳ್ಳೆಯದು. ವ್ಯವಹಾರದಲ್ಲಿ ಅನುಕೂಲಕರ ವಾತಾವರಣ. ಭೂ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಕುಶಲಕರ್ಮಿಗಳಿಗೆ ಉತ್ತಮ ಅವಕಾಶ.

ಮೇ 01, ಶನಿವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ದಿನಾಂಕ :Saturday, 01 May 2021 ಪ್ಲವ ಸಂ|ರದ ಮೇಷ ಮಾಸ‌ ದಿನ 18 ಸಲುವ ಚೈತ್ರ ಬಹುಳ ಪಂಚಮಿ 26|| ಗಳಿಗೆ ದಿನ ವಿಶೇಷ :ಕಾರ್ಮಿಕರ ದಿನ, ನೀಲಾವರ ರಥ ನಿತ್ಯ ನಕ್ಷತ್ರ :ಮೂಲಾ 10| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :9.00-10.30 ಗಂಟೆ ಗುಳಿಕ ಕಾಲ :6.00-7.30 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.11 ಗಂಟೆ

ಮೇಷ

ಮಕ್ಕಳೊಂದಿಗೆ ವಾದ, ವಿವಾದ ಮಾಡದಿರುವುದು ಉತ್ತಮ. ವಾಹನ ಚಾಲನೆ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಬಂಧುಗಳೊಂದಿಗಿನ ಭಿನ್ನಾಭಿಪ್ರಾಯ ದೂರಾಗಿ ಬಾಂಧವ್ಯ ವೃದ್ಧಿಯಾಗಲಿದೆ.

ವೃಷಭ

ತಾಳ್ಮೆಯಿಂದ ಕಾರ್ಯಸಿದ್ಧಿ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಹಿಳೆಯರು ಮಾತನಾಡುವುದಕ್ಕಿಂತ ಮೌನ ವಹಿಸುವುದು ಕ್ಷೇಮ.

ಮಿಥುನ

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈ ಹಾಕದಿರುವುದು ಉತ್ತಮ. ಬಂಧು ಮಿತ್ರರೊಂದಿಗೆ ಶುಭಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ದೈನಂದಿನ ವ್ಯವಹಾರಗಳಲ್ಲಿ ಸಂತಸ.

ಕಟಕ

ಸಾಂಸಾರಿಕ ಜೀವನದಲ್ಲಿ ಸಂತೃಪ್ತಿ. ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ. ಅತಿಯಾದ ಕೋಪ ಬೇಡ.

ಸಿಂಹ

ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನ ಖರೀದಿ ಮಾಡಲಿದ್ದೀರಿ.

ಕನ್ಯಾ

ಬಹುಕಾಲದ ಬಯಕೆಗಳು ಈಡೇರಲಿವೆ. ಋಣ ಪರಿಹಾರದಿಂದಾಗಿ ಸಂತೃಪ್ತಿ. ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸದೇ ಗುಪ್ತವಾಗಿರಿಸುವುದು ಕ್ಷೇಮ. ವಸ್ತ್ರ ವ್ಯಾಪಾರಗಳಿಗೆ ಹೆಚ್ಚಿನ ಆದಾಯ ತರಲಿದೆ.

ತುಲಾ

ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರೋತ್ಸಾಹದೊಂದಿಗೆ ಪ್ರಶಂಸೆ. ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ. ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಿ ಹೊಸ ಬದುಕಿಗೆ ನಾಂದಿಯಾಗಲಿದೆ.

ವೃಶ್ಚಿಕ

ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಗೃಹ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಮಹಿಳೆಯರಿಗೆ ಸಾಮಾಜಿಕ ಗೌರವಾದರಗಳು ದೊರಕಲಿವೆ. ರಾಜಕೀಯದಲ್ಲಿ ಯಶಸ್ಸಿನ ಹೆಜ್ಜೆ ತುಳಿಯಲಿದ್ದೀರಿ.

ಧನು

ದೂರಾಲೋಚನೆಯಿಂದ ಮಾಡಿದ ಕಾರ್ಯಗಳಲ್ಲಿ ಯಶಸ್ಸು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ದೂರಪ್ರಯಾಣ ಮಾಡದಿರುವುದು ಒಳಿತು.

ಮಕರ

ಸಾಮಾಜಿಕ ಕಾರ್ಯಗಳಲ್ಲಿ ತುರುಸಿನಿಂದ ತೊಡಗಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆ ಅವಶ್ಯ. ಮಕ್ಕಳ ಆರೋಗ್ಯದ ಕಡೆ ತುಸು ಗಮನ ವಹಿಸಿ. ಮಾನಸಿಕ ನೆಮ್ಮದಿಗಾಗಿ ದೇವರ ದರ್ಶನ ಮಾಡಿ.

ಕುಂಭ

ಆರ್ಥಿಕ ಅನುಕೂಲತೆ. ಮಕ್ಕಳಿಂದ ನೆಮ್ಮದಿ. ವಿದೇಶ ಪ್ರಯಾಣ ಯೋಗ. ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಮೂಡಿಬರಲಿದೆ. ಮಿತ್ರರ ಸಹಾಯ ಸಹಕಾರಗಳಿಂದಾಗಿ ವ್ಯವಹಾರಗಳು ಸುಧಾರಿಸಲಿವೆ.

ಮೀನ

ದೈನಂದಿನ ಕಾರ್ಯಗಳಲ್ಲಿ ಆಸಕ್ತಿ. ಆಸ್ತಿ ವಿಷಯದಲ್ಲಿ ಕಲಹ ಎದುರಾಗುವ ಸಾಧ್ಯತೆ. ನೌಕರಿಯಲ್ಲಿರುವವರಿಗೆ ವರ್ಗಾವಣೆಯಿಂದ ಸ್ಥಾನಪಲ್ಲಟವಾಗುವ ಸಾಧ್ಯತೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡಲಿದ್ದೀರಿ.

ಎಪ್ರಿಲ್ 30, ಶುಕ್ರವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

30 -4-2021 ಶುಕ್ರವಾರ ಪ್ಲವ ಸಂ|ರದ ಮೇಷ ಮಾಸ‌ ದಿನ 17 ಸಲುವ ಚೈತ್ರ ಬಹುಳ ಚೌತಿ 32|||ಗಳಿಗೆ ದಿನ ವಿಶೇಷ :ಸಂಕಷ್ಠಹರ ಚತುರ್ಥಿ (ಚ.ಉ.ಗಂ.10.21)ನಿತ್ಯ ನಕ್ಷತ್ರ :ಜೇಷ್ಠಾ 15|ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.11 ಗಂಟೆ

ಮೇಷ

ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು.

ವೃಷಭ

ಕುಟುಂಬದಲ್ಲಿ ಹೊಂದಾಣಿಕೆಯಿಂದ ಬೆಂಬಲ ಗಳಿಸುವಿರಿ. ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭದ ನಿರೀಕ್ಷೆ. ಸಂಘರ್ಷದಿಂದ ದೂರವಿರಿ. ಗೆಳೆಯರಿಂದ ನೆಮ್ಮದಿ.

ಮಿಥುನ

ಕೆಲಸ–ಕಾರ್ಯಗಳಲ್ಲಿ ಉತ್ತಮ ಪ್ರಗತಿ. ನಿಕಟವರ್ತಿಗಳಿಂದ ಅನುಕೂಲಕರ ಸಹಾಯ. ಆತ್ಮಸ್ಥೈರ್ಯ ಮೂಡುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಗಣ್ಯರ ಭೇಟಿ ಸಂಭವ.

ಕಟಕ

ಭಿನ್ನಾಭಿಪ್ರಾಯದಿಂದಾಗಿ ನಿಂತುಹೋದ ಕಾರ್ಯಗಳು ಒಮ್ಮತದಿಂದ ಸಾಧಿಸಲ್ಪಡುವವು. ಮದುವೆ ಮುಂತಾದ ಮಂಗಳಕಾರ್ಯಗಳ ನಿಶ್ಚಯ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು.

ಸಿಂಹ

ನಿಮ್ಮ ನಿಲುವಿನಲ್ಲಿ ಆಕಸ್ಮಿಕ ತಿರುವು ಕಂಡುಬರುವುದು. ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಿ ನಿರಾಳ ಭಾವ. ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಕಾಣುವಿರಿ.

ಕನ್ಯಾ

ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಚ್ಚರಿಯ ಸುದ್ದಿಯನ್ನು ಕೇಳುವ ಸಾಧ್ಯತೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ. ಸಾಮಾಜಿಕ ಮನ್ನಣೆ ನಿಮ್ಮದಾಗಲಿದೆ.

ತುಲಾ

ಬೇರೆಯವರ ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕಾದೀತು. ಅಡ್ಡಿ ಆತಂಕಗಳಿಲ್ಲದ ಜೀವನದಿಂದಾಗಿ ಉಲ್ಲಾಸ ಮೂಡುವುದು. ಸ್ನೇಹಿತರಿಂದಾಗಿ ಸಂತೋಷದ ವಾತಾವರಣ.

ವೃಶ್ಚಿಕ

ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪ್ರಯಾಣದ ಸಾಧ್ಯತೆ ಕಂಡುಬರುವುದು. ಆಶ್ಚರ್ಯಕರ ರೀತಿಯಲ್ಲಿ ಕೆಲಸ ಕಾರ್ಯಗಳು ಕೂಡಿಬರುವವು.

ಧನು

ಸ್ನೇಹಿತರೊಂದಿಗೆ ವಿಷಯಗಳ ವಿನಿಮಯದಿಂದಾಗಿ ವಾತಾವರಣ ತಿಳಿಗೊಂಡು ಮನಸ್ಸಿಗೆ ನೆಮ್ಮದಿ. ವಿಶೇಷ ಭೋಜನಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯಿಂದ ಸಹಕಾರ.

ಮಕರ

ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.

ಕುಂಭ

ಆತ್ಮಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳು ನಿವಾರಣೆಯಾಗುವವು. ನಿಷ್ಕಲ್ಮಷ ಭಾವನೆಯಿಂದ ಸಮಾಧಾನ. ಸ್ನೇಹಿತರಿಂದ ಪ್ರಶಂಸೆ, ಸಂಗಾತಿಯಿಂದ ಉತ್ತಮ ಸಹಕಾರ.

ಮೀನ

ಆತ್ಮೀಯತೆಯಿಂದಾಗಿ ಶುಭ ಸಂದರ್ಭ ನಿರ್ಮಾಣ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ, ಮಾಜಿ ನಗರಸಭಾ ಸದಸ್ಯ ತೋನ್ಸೆ ದೇವದಾಸ್ ಪೈ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸಂತಾಪ

ಉಡುಪಿ ಕಲ್ಸಂಕದ ಭಾರತ್ ಪ್ರೆಸ್ ಮಾಲಿಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ತೋನ್ಸೆ ದೇವದಾಸ್ ಪೈ ಇಂದು (ಎ.29) ಮಧ್ಯಾಹ್ನ 3.15ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು.

ತೋನ್ಸೆ ದೇವದಾಸ್ ಪೈ ಉಡುಪಿ ನಗರಸಭೆಗೆ ಜನಸಂಘದಿಂದ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾದ ನಗರಸಭಾ ಸದಸ್ಯರು. ಅಪ್ರತಿಮ ದೈವ ಭಕ್ತರಾಗಿದ್ದ ಅವರು ಉಡುಪಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಾರಂಭಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾತ್ರವಲ್ಲದೆ ಮೊದಲ ವರ್ಷದ ಗಣೇಶೋತ್ಸವವನ್ನು ಭಾರತ್ ಪ್ರೆಸ್ಸಿನ ಮಾಳಿಗೆಯಲ್ಲೇ ಆಚರಿಸಿದ್ದು ಇತಿಹಾಸ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಹಳೆ ಪತ್ರಿಕೆಯು ಅವರ ಮುದ್ರಣಾಲಯದಲ್ಲೂ ಮುದ್ರಿತವಾಗುತ್ತಿತ್ತು. ಪೈಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆವಾಸ ಅನುಭವಿಸಿದ್ದರು.

ತಮ್ಮದೇ ತೋನ್ಸೆ ಕುಟುಂಬದ ಟ್ರಸ್ಟ್ ಸ್ಥಾಪಿಸಿ, ಕಳೆದ 20 ವರ್ಷಗಳಿಂದ ಪ್ರತೀ ತಿಂಗಳು ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾ ಬಂದಿದ್ದು ಆ ಮೂಲಕ ತೋನ್ಸೆ ಪೈ ಕುಟುಂಬವನ್ನು ಒಗ್ಗೂಡಿಸಲು ಶ್ರಮಿಸಿದ್ದರು. ಭಜನಾ ಪ್ರಿಯರಾಗಿದ್ದ ಅವರು ತನ್ನ ಕುಟುಂಬದ ಸದಸ್ಯರನ್ನೊಳಗೊಂಡ ಭಜನಾ ತಂಡದೊಂದಿಗೆ ಭಜನಾ ಸೇವೆಯಲ್ಲಿ ಭಾಗವಹಿಸುತ್ತಿದ್ದರು. ಕಲ್ಯಾಣಪುರ, ಭದ್ರಗಿರಿ, ಬಸ್ರೂರಿನಲ್ಲಿ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ತೋನ್ಸೆ ದೇವದಾಸ ಪೈ ಯವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಸಂತಾಪ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ‘ಸೇವಾ ಹೀ ಸಂಘಟನ್’ ಅಭಿಯಾನ-2ರ ಪರಿಣಾಮಕಾರಿ ಅನುಷ್ಠಾನ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಿರ್ದೇಶನದಂತೆ ಸೇವಾ ಹೀ ಸಂಘಟನ್ ಅಭಿಯಾನ-2 ನ್ನು ಉಡುಪಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕೋವಿಡ್-2.0 ಸಹಾಯವಾಣಿ ಜನತೆಯ ಕೋವಿಡ್ ಸಂಬಂಧಿತ ಸಂಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಎ.27 ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಗೊಂಡಿರುವ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿ ದಿನದ 24 ಗಂಟೆಯೂ ಕೋವಿಡ್ ಸೋಂಕಿತರಿಗೆ ಅಗತ್ಯ ನೆರವು ನೀಡುವಲ್ಲಿ ತುರ್ತು ಸೇವೆ ಸಲ್ಲಿಸಲಿದೆ. ಬಿಜೆಪಿ ಜಿಲ್ಲಾ ಪ್ರಮುಖರನ್ನೊಳಗೊಂಡ ಸಹಾಯವಾಣಿ ತಂಡವನ್ನು ರಚಿಸಲಾಗಿದೆ. ಕೇಂದ್ರ ಸರಕಾರದ ನಿಯಮಾವಳಿಯಂತೆ ಸಂಬಂಧಪಟ್ಟ ನಾಗರಿಕರಿಗೆ ಕೋವಿಡ್ ಲಸಿಕೆ ಪಡೆಯಲು ಸಹಕರಿಸುವುದು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆದು ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದು ಇವೇ ಮುಂತಾದ ತುರ್ತು ಸೇವೆಗಳನ್ನು ಒದಗಿಸುವಲ್ಲಿ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿ ಶ್ರಮಿಸಲಿದೆ ಎಂದು ಕುಯಿಲಾಡಿ ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ ರಾಜ್ಯ ಬಿಜೆಪಿಯ ಸೂಚನೆಯಂತೆ ಕಳೆದ ವರ್ಷವೂ ಕೋವಿಡ್-19 ರ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಸೇವಾ ಹೀ ಸಂಘಟನ್ ಅಭಿಯಾನದಡಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಜನಪರ ಸೇವೆ ಸಲ್ಲಿಸುವಲ್ಲಿ ಯಶಸ್ಸನ್ನು ಕಂಡಿದೆ. ಅದೇ ರೀತಿ ಕೊರೋನಾ 2ನೇ ಅಲೆಯ ಇಂದಿನ ಸಂಕಷ್ಟದ ದಿನಗಳಲ್ಲಿಯೂ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿ ನೊಂದ ನಾಗರಿಕರಿಗೆ ತುರ್ತು ಸಹಾಯ, ಸಹಕಾರದೊಂದಿಗೆ ಸಾರ್ಥಕ ಸೇವೆ ಸಲ್ಲಿಸುವಂತಾಗಲಿ ಎಂದರು.

ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳು, ಆಕ್ಸಿಜನ್, ವೆಂಟಿಲೇಟರ್, ಅಂಬುಲೆನ್ಸ್, ಕೋವಿಡ್ ಲಸಿಕೆ ಹಾಗೂ ಆಸ್ಪತ್ರೆಗಳ ಪ್ರಮುಖರ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವುದು, ಲಸಿಕೆ ಪಡೆಯುವಲ್ಲಿ ಸಹಕರಿಸುವುದು, ರಕ್ತದಾನ ಶಿಭಿರ ಆಯೋಜನೆ ಇವೇ ಮುಂತಾದ ವಿಷಯಗಳ ಬಗ್ಗೆ ವಿಸ್ತ್ರತ ವಿಚಾರ ವಿನಿಮಯ ನಡೆಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರ್ರಾಡಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್‍ರಾಜ್ ಶಾಂತಿನಿಕೇತನ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ ಆತ್ರಾಡಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ ಪ್ರಭು, ಜಿಲ್ಲಾ ಅಭಿವೃದ್ಧಿ ಮಾಹಿತಿ ಪ್ರಕೋಷ್ಠದ ಸಂಚಾಲಕ ವಿನೋದ್ ನಾಯಕ್, ಬಿಜೆಪಿ ಉಡುಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಉಪಸ್ಥಿತರಿದ್ದರು

ಎಪ್ರಿಲ್ 29, ಗುರುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 16 ಸಲುವ ಚೈತ್ರ ಬಹುಳ ತದಿಗೆ 40| ಗಳಿಗೆ ದಿನ ವಿಶೇಷ :ವಿಶ್ವ ನೃತ್ಯ ದಿನ ಮಟ್ಟು ರಥ ನಿತ್ಯ ನಕ್ಷತ್ರ :ಅನುರಾಧಾ 21 ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :1.30-3.00 ಗಂಟೆ ಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.12 ಗಂಟೆ

ಮೇಷ

ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಚ್ಚರಿಯ ಸುದ್ದಿಯನ್ನು ಕೇಳುವ ಸಾಧ್ಯತೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ. ಸಾಮಾಜಿಕ ಮನ್ನಣೆ ನಿಮ್ಮದಾಗಲಿದೆ.

ವೃಷಭ

ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪ್ರಯಾಣದ ಸಾಧ್ಯತೆ ಕಂಡುಬರುವುದು. ಆಶ್ಚರ್ಯಕರ ರೀತಿಯಲ್ಲಿ ಕೆಲಸ–ಕಾರ್ಯಗಳು ಕೂಡಿಬರುವವು.

ಮಿಥುನ

ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.

ಕಟಕ

ಕುಟುಂಬದಲ್ಲಿ ಹೊಂದಾಣಿಕೆಯಿಂದ ಬೆಂಬಲ ಗಳಿಸುವಿರಿ. ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭದ ನಿರೀಕ್ಷೆ. ಸಂಘರ್ಷದಿಂದ ದೂರ. ಗೆಳೆಯರಿಂದ ನೆಮ್ಮದಿ.

ಸಿಂಹ

ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸುಮುರುಸು. ಸತ್ಯ ದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು.

ಕನ್ಯಾ

ಸ್ನೇಹಿತರೊಂದಿಗೆ ವಿಷಯಗಳ ವಿನಿಮಯದಿಂದಾಗಿ ವಾತಾವರಣ ತಿಳಿಗೊಂಡು ಮನಸ್ಸಿಗೆ ನೆಮ್ಮದಿ. ವಿಶೇಷ ಭೋಜನಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯಿಂದ ಸಹಕಾರ.

ತುಲಾ

ಆತ್ಮೀಯತೆಯಿಂದಾಗಿ ಶುಭ ಸಂದರ್ಭ ನಿರ್ಮಾಣ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು.

ವೃಶ್ಚಿಕ

ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ. ನಿಕಟವರ್ತಿಗಳಿಂದ ಅನುಕೂಲಕರ ಸಹಾಯ. ಆತ್ಮಸ್ಥೈರ್ಯ ಮೂಡುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಗಣ್ಯರ ಭೇಟಿ ಸಂಭವ.

ಧನು

ಭಿನ್ನಾಭಿಪ್ರಾಯದಿಂದಾಗಿ ನಿಂತು ಹೋದ ಕಾರ್ಯಗಳು ಒಮ್ಮತದಿಂದ ಸಾಧಿಸಲ್ಪಡುವವು. ಮದುವೆ ಮುಂತಾದ ಮಂಗಲ ಕಾರ್ಯಗಳ ನಿಶ್ಚಯ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು.

ಮಕರ

ಆತ್ಮಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳು ನಿವಾರಣೆಯಾಗುವವು. ನಿಷ್ಕಲ್ಮಷ ಭಾವನೆಯಿಂದ ಸಮಾಧಾನ. ಸ್ನೇಹಿತರಿಂದ ಪ್ರಶಂಸೆ, ಸಂಗಾತಿಯಿಂದ ಉತ್ತಮ ಸಹಕಾರ.

ಕುಂಭ

ಬೇರೆಯವರ ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕಾದೀತು. ಅಡ್ಡಿ ಆತಂಕಗಳಿಲ್ಲದ ಜೀವನದಿಂದಾಗಿ ಉಲ್ಲಾಸ ಮೂಡುವುದು. ಸ್ನೇಹಿತರಿಂದಾಗಿ ಸಂತೋಷದ ವಾತಾವರಣ.

ಮೀನ

ನಿಮ್ಮ ನಿಲುವಿನಲ್ಲಿ ಆಕಸ್ಮಿಕ ತಿರುವು ಕಂಡುಬರುವುದು. ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಿ ನಿರಾಳ ಭಾವ. ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಕಾಣುವಿರಿ.

Design a site like this with WordPress.com
Get started