ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ . ಇಸ್ರೇಲ್ ಅಂದರೆ ಶಕ್ತಿ. ಜಗತ್ತು ಪೂಜಿಸುವುದು ಶಕ್ತಿಯನ್ನ !!

ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ . ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು. ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು . ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್ ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು . ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹುಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ . ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ . ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ . ಇಸ್ರೇಲ್ ಸುತ್ತಾ ಲೆಬನಾನ್ , ಸಿರಿಯಾ , ಸೌದಿ ಅರೇಬಿಯಾ , ಪ್ಯಾಲೇಸ್ತೀನ್, ಜೋರ್ಡನ್ , ಈಜಿಪ್ಟ್ ದೇಶಗಳನ್ನ ಹೊಂದಿದೆ . ಇವೆಲ್ಲಾ ಮುಸ್ಲಿಂ ದೇಶಗಳು . ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ . ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್ ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ . ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ . ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ . ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದಿತು . ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು . ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನೆಡೆಸುತ್ತಾ ಇರುತ್ತಾರೆ . ಜೋರಾಗಿ ಸೈರನ್ ಕೂಗುತ್ತದೆ . ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ . ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ . ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ .ನಿಮ್ಮ ಪಕ್ಕದಲ್ಲಿ ಬೀಚ್ ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ . ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್ ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ . ಮುಂದಿನ ಕತೆ , ಇಸ್ರೇಲಿಗಳು ನೀಡುವ ಖಡಕ್ ಉತ್ತರ ಜಗತ್ತಿಗೆ ತಿಳಿದಿದೆ . ಇಷ್ಟೆ ಆಗಿದ್ದರೆ ಇಸ್ರೇಲ್ ವಿಶೇಷ ಅನ್ನಿಸುತ್ತಾ ಇರಲಿಲ್ಲ ಜಗತ್ತಿಗೆ ಒಂದು ದಾರಿಯಾದರೆ ಇಸ್ರೇಲಿಗಳು ಮಾತ್ರ ತಮ್ಮದೆ ದಾರಿಯಲ್ಲಿ ತಮ್ಮದೆ ವೇಗದಲ್ಲಿ ಸಾಗುತ್ತಾರೆ . ಏನದು ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್ ಹಾಕೋಣ ಬನ್ನಿ .

ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದ ತಿಳಿಯಬಹದು .

ಮೊದಲನೆ ಮಹಾಯುದ್ಧಕ್ಕೆ ಮುಂಚೆ :

ಯಹೂದಿಗಳು ಅತ್ಯಂತ ಸಣ್ಣ ಜನಾಂಗ . ಇವರ ಉಳಿವಿಗಾಗಿ ವಿದೇಶಗಳಿಂದ ಕಳಿಸುತ್ತಿದ್ದ ದೇಣಿಗೆ ಹಣದಿಂದ ಇಸ್ರೇಲಿ ಯಹೂದಿಗಳು ಜೀವನ ಸಾಗುತಿತ್ತು . ಇಸ್ರೇಲ್ ಇನ್ನೂ ಹುಟ್ಟಿರಲಿಲ್ಲ , ಹೇಳಿಕೊಳ್ಳುವಂತ ಯಾವುದೇ ರೀತಿಯ ಹೂಡಿಕೆ ಇವರಿಂದ ಬಂದಿರಲಿಲ್ಲ . ೧೯ ನೇ ಶತಮಾನದಲ್ಲಿ ರೋತ್ಸ್ ಚೈಲ್ಡ್ ವೈನ್ ತಯಾರಿಕೆಯಲ್ಲಿ ಮತ್ತು ರೈಲು ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಹಣ ಹೂಡಿಕೆ ಮಾಡುತ್ತದೆ . ಆದರೆ ಅದರಿಂದ ಹೆಚ್ಚಿನ ಯಶಸ್ಸು ಹಣವನ್ನ ಗಳಿಸುವುದಿಲ್ಲ . ಹೀಗಾಗಿ ಪ್ರಥಮ ಮಹಾಯುದ್ಧಕ್ಕೆ ಮುಂಚೆ ಇಸ್ರೇಲ್ ಮತ್ತು ಯಹೂದಿಗಳು ಎನ್ನುವ ಪದಗಳು ಇನ್ನೂ ಶೈಶವಾಸ್ಥೆಯಲ್ಲಿದ್ದವು .

ಎರಡನೆ ಮಹಾಯುದ್ಧದ ನಂತರ :

ಎರಡನೆ ಮಹಾಯುದ್ಧ ಮುಗಿದು ನಂತರ ೧೪ ಮೇ ೧೯೪೮ ರಲ್ಲಿ ಇಸ್ರೇಲ್ ಉದಯಿಸುತ್ತದೆ . ಇದೊಂದು ಸಂಕ್ರಮಣ ಕಾಲಘಟ್ಟ . ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿಹೋಗಿದ್ದ ಯಹೂದಿಗಳು ತಮ್ಮ ನೆಲಕ್ಕೆ ಹಿಂತಿರುಗಲು ಪ್ರಾರಂಭಿಸುತ್ತಾರೆ . ಹೀಗಿದ್ದೂ ಇವರ ಸಂಖ್ಯೆ ಲಕ್ಷ ಮೀರುವುದಿಲ್ಲ . ನಿಧಾನವಾಗಿ ಕಾರ್ಖಾನೆಗಳು , ಯೂನಿವರ್ಸಿಟಿ ಕಟ್ಟಲು ಶುರು ಮಾಡುತ್ತಾರೆ . ಮುಂದುವರಿದ ದೇಶಗಳ ಮುಂದೆ ಸಪ್ಪೆ ಎನಿಸುವಷ್ಟು ಆರ್ಥಿಕ ಸ್ಥಿತಿ ಇವರದಾಗಿತ್ತು .

ಎಪ್ಪತ್ತರ ದಶಕದಿಂದ ತೊಂಬತ್ತರ ದಶಕ ದಲ್ಲಿ ಇಸ್ರೇಲ್ :

ಆರು ಲಕ್ಷವಿದ್ದ ತನ್ನ ಜನಸಂಖ್ಯೆಯನ್ನ ೪೦ ಲಕ್ಷಕ್ಕೆ ಏರಿಸಿಕೊಂಡಿದ್ದು ಇಸ್ರೇಲ್ ನ ಮಹಾಸಾಧನೆ . ಇವರ ಆರ್ಥಿಕತೆ ಬೆಳೆದು ಈಸ್ಟ್ರೇನ್ ಯೂರೋಪಿಯನ್ ದೇಶಗಳ ಆರ್ಥಿಕತೆಯ ಮಟ್ಟಕ್ಕೆ ಬಂದು ಮುಟ್ಟುತ್ತದೆ . ಆದರೂ ಟೆಲಿಫೋನ್ , ಕಾರು ಜನ ಸಾಮಾನ್ಯನಿಗೆ ಎಟುಕುತ್ತಿರಲಿಲ್ಲ . ಜನರ ತಲಾದಾಯ ಯೂರೋಪಿನ ಅಥವಾ ಅಮೇರಿಕಾ ಜನರ ತಲಾಯಾದ ಅರ್ಧದಷ್ಟಿತ್ತು . ಅಂದಿನ ದಿನಗಲ್ಲಿ ಇಸ್ರೇಲ್ ವಜ್ರದ ವ್ಯಾಪಾರದಿಂದ ತನ್ನ ಹಣವನ್ನ ಗಳಿಸುತಿತ್ತು .

ತೊಂಬತ್ತರಿಂದ ಎರಡು ಸಾವಿರದ ಹದಿನೈದು :

ಈ ವೇಳೆಯಲ್ಲಿ ಇಸ್ರೇಲ್ ನಾಟಕೀಯ ಬೆಳವಣಿಗೆ ಕಾಣುತ್ತದೆ . ಜಗತ್ತಿನ ಅತ್ಯಂತ ಉನ್ನತ ತಂತ್ರಜ್ಞಾನ ಇವರಿಂದ ಸೃಷ್ಟಿಯಾಗುತ್ತೆ . ತನ್ನ ಸುತ್ತಲೂ ವೈರಿಗಳೇ ತುಂಬಿದ್ದಾರೆ ಆಕಸ್ಮಾತ್ ಅವರು ತಮ್ಮ ಸರಹದ್ದು ಮುಚ್ಚಿ ನೀರು ಆಹಾರ ನಿಲ್ಲಿಸಿಬಿಟ್ಟರೆ ಎನ್ನುವ ಭಯವನ್ನ ಮೆಟ್ಟಿ ನಿಂತು ಬೇರೆ ದೇಶಗಳಿಗೆ ಆಹಾರ ಎಕ್ಸ್ಪೋರ್ಟ್ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ . ನಲವತ್ತು ಲಕ್ಷವಿದ್ದ ತಮ್ಮ ಜನ ಸಂಖ್ಯೆಯನ್ನ ಎಪ್ಪತೈದು ಲಕ್ಷದ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ . ಇಂದಿಗೆ (೨೦೧೭)ಇಸ್ರೇಲ್ ಜನಸಂಖ್ಯೆ ೮೩ ಲಕ್ಷ . ಇವರ ತಲಾದಾಯ ಅನೇಕ ಯೂರೋಪಿಯನ್ ದೇಶಗಳನ್ನ ಹಿಂದಿಕ್ಕಿದೆ . ತಂತ್ರಜ್ಞಾನ ಪ್ರತಿಯೊಬ್ಬ ಪ್ರಜೆಯನ್ನ ತಲುಪಿದೆ . ಕಾರು , ಫೋನ್ ಅಷ್ಟೆಯೇಕೆ ಪ್ರತಿಯೊಬ್ಬ ನಾಗರಿಕನೂ ವಿದೇಶಿ ಪ್ರಯಾಣವನ್ನು ಕೂಡ ಮಾಡಬಲ್ಲಷ್ಟು ಸ್ಥಿತಿವಂತನಾಗಿದ್ದಾನೆ . ಮೂಲ ಸೌಕರ್ಯ ಜಗತ್ತಿನ ಮುಂದುವರೆದ ದೇಶಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ . ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯ ಇಲ್ಲಿ ತಲೆ ಎತ್ತಿ ನಿಂತಿದೆ . ಟೆಲ್ ಅವಿವ್ ಜಗತ್ತಿನ ಅತ್ಯುತ್ತಮ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ . ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದದ್ದು ಪಡೆಯುವ ಲಾಬಿ ಮಾಡುವ ಹಂತಕ್ಕೆ ಇಸ್ರೇಲಿ ಯಹೂದಿಗಳು ಬೆಳೆದಿದ್ದಾರೆ . ಜಗತ್ತಿನ ಯಾವುದೇ ಮೂಲೆಯಲ್ಲಿ ಯಹೂದಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮುಂಚೆ ಹತ್ತು ಬಾರಿ ಯೋಚಿಸಬೇಕು ಅಷ್ಟರಮಟ್ಟಿಗೆ ತನ್ನ ಶತ್ರುವಿನಲ್ಲಿ ಭಯ ಬಿತ್ತುವಲ್ಲಿ ಇಸ್ರೇಲಿಗಳು ಯಶಸ್ವಿಯಾಗಿದ್ದಾರೆ .

ಇಸ್ರೇಲಿಗಳ ಹೊಸ ಪರ್ವಾರಂಭ :

ಜಗತ್ತಿನಲ್ಲಿ ೧೯೬ ದೇಶಗಳಿವೆ ಅದರಲ್ಲಿ ೫೦ ಮುಸ್ಲಿಂ ದೇಶಗಳು ೭ ಮುಸ್ಲಿಂ ಬಾಹುಳ್ಯವಿರುವ ದೇಶಗಳು ಹೀಗಾಗಿ ೫೭ ದೇಶಗಳನ್ನ ಮುಸ್ಲಿಂ ದೇಶಗಳು ಎಂದು ವಿಂಗಡಿಸಬಹುದು . ಜಗತ್ತಿನ ಜನಸಂಖ್ಯೆ ೭ (೭೦೦ಕೋಟಿ )ಬಿಲಿಯನ್ ಅದರಲ್ಲಿ ೧. ೮ (೧೮೦ಕೋಟಿ ) ಬಿಲಿಯನ್ ಜನಸಂಖ್ಯೆ ಮುಸ್ಲಿಮರು . ಅಂದರೆ ಜಗತ್ತಿನ ಜನಸಂಖ್ಯೆಯ ೨೫ ಪ್ರತಿಶತ ಈ ಜನಾಂಗದ ಜನರಿದ್ದಾರೆ . ಒಟ್ಟು ಮುಸ್ಲಿಂ ದೇಶಗಳ ಜಿಡಿಪಿ ಎರಡು ಟ್ರಿಲಿಯನ್ ಡಾಲರ್ . ಜಗತ್ತಿನ ಒಟ್ಟು ಜಿಡಿಪಿ ೭೨ ಟ್ರಿಲಿಯನ್ . ಇಸ್ರೇಲ್ ಜನಸಂಖ್ಯೆ ಕೇವಲ ೮೩ ಲಕ್ಷ ಇವರ ಜಿಡಿಪಿ ೩೦೦ ಬಿಲಿಯನ್ ಡಾಲರ್. ಇಸ್ರೇಲ್ ಬೆಳವಣಿಗೆಯ ವೇಗ ಗಮನಿಸಿದರೆ ಇದು ಐನೂರು ಬಿಲಿಯನ್ ಡಾಲರ್ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ . ಅಂದರೆ ೫೭ ದೇಶಗಳ ಒಟ್ಟು ಮೌಲ್ಯದ ಕಾಲು ಭಾಗ ಕೇವಲ ೮೩ ಲಕ್ಷ ಜನಸಂಖ್ಯೆಯ ಇಸ್ರೇಲ್ ಒಂದು ದೇಶ ಹೊಂದಲಿದೆ ಎಂದರೆ ಇಸ್ರೇಲ್ ಅದೆಷ್ಟು ಪವರ್ ಫುಲ್ ಜಗತ್ತಿನ ಬೇರೆಲ್ಲಾ ದೇಶಗಳು ಇಸ್ರೇಲ್ ಎಂದಾಕ್ಷಣ ಅದೇಕೆ ಆ ಮಟ್ಟಿನ ಗೌರವ ಕೊಡುತ್ತವೆ ಎನ್ನುವ ಅರಿವಾದಿತು . ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನ ಆಕ್ರಮಿಸಿದೆ . ಅಮೇರಿಕಾ ದ ಸಂಸತ್ತು , ಅಮೆರಿಕಾದ ಮೀಡಿಯಾ ಹೌಸ್ , ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ . ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ ೯೦ ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ . ಹೀಗಾಗಿ ಅಮೇರಿಕಾದಲ್ಲಿ ‘ you can criticize God, but you can’t criticize Israel…’ ಎನ್ನುವ ಮಾತಿದೆ .

ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ ಮೂಲವಾಗಿ ಜರ್ಮನಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಲ್ಲಿ ಬಹಳ ಹಿಡಿತ ಹೊಂದಿದೆ . ಆರ್ಥಿಕ ವಲಯದಲ್ಲಿ ರೋತ್ಸ್ ಚೈಲ್ಡ್ ಎನ್ನುವುದು ಎಷ್ಟು ಪ್ರಭಲ ಸಂಸ್ಥೆಎಂದರೆ ಜಗತ್ತಿನ ಹಿರಿಯಣ್ಣ ಅಮೇರಿಕಾ ದ ಪ್ರೆಸಿಡೆಂಟ್ ಯಾರಾಗ ಬೇಕು ಎನ್ನುವುದನ್ನ ಕೂಡ ನಿರ್ಧರಿಸುವಷ್ಟು , ಬಹುತೇಕ ಎಲ್ಲಾ ಮುಖ್ಯ ದೇಶಗಳ ಸೆಂಟ್ರಲ್ ಬ್ಯಾಂಕ್ ನಲ್ಲಿ ಇವರು ಪರೋಕ್ಷ ಅಥವಾ ಅಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ ಎನ್ನುವುದು ಆರ್ಥಿಕವಲಯದಲ್ಲಿ ಆಗಾಗ್ಗೆ ಪಿಸುಗುಡುವ ವಿಷಯ . ಬೆಂಕಿಯಿಲ್ಲದೆ ಖಾಲಿ ಹೊಗೆ ಹೇಗೆ ತಾನೇ ಬಂದಿತು ? ಹೀಗಾಗಿ ಅಮೇರಿಕಾ ಒಂದೇ ಅಲ್ಲದೆ ಜಗತ್ತಿನ ಮುಖ್ಯ ದೇಶಗಳ ಹಣಕಾಸು ಆಟವನ್ನ ನಿಯಂತ್ರಿಸುವುದು ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ .

ಜಗತ್ತನ್ನ ಆಳಲು ಬೇಕಿರುವುದು ಆರ್ಥಿಕ ಸಬಲತೆ ಮಾತ್ರವಲ್ಲ ಅದರ ಜೊತೆಗೆ ತಂತ್ರಜ್ಞಾನದ ನಿಪುಣತೆ ತನ್ನ ಜನಾಂಗದ ಮೇಲೆ ,ತನ್ನ ಬದ್ಧತೆಯ ಮೇಲೆ ಅತೀವ ಕಾಳಜಿ ನಂಬಿಕೆ ಮತ್ತು ವಿಶ್ವಾಸ . ಕೋಟಿ ಮೀರಿದ ಈ ಜನಾಂಗ ಮುಂಬರುವ ದಿನಗಳಲ್ಲಿ ಇಡಿ ವಿಶ್ವದ ಮೇಲೆ ಹಿಡಿತ ಹೊಂದಿದರೆ ಅದು ಆಶ್ಚರ್ಯ ಪಡುವ ವಿಷಯವಂತೂ ಅಲ್ಲ . ಇಸ್ರೇಲಿಗಳ ಯಹೂದಿಗಳ ಬದ್ಧತೆ , ಕಟ್ಟು ನಿಟ್ಟಿಗೆ ಉದಾಹರಣೆ ನೀಡಲೇಬೇಕು . ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಮಿಲಿಟರಿ ಸೇವೆ ಸಲ್ಲಿಸಲೇಬೇಕು . ಇಲ್ಲಿ ಹೆಣ್ಣು ಗಂಡು ಎನ್ನವ ಬೇಧವಿಲ್ಲ . ಇಸ್ರೇಲಿಗಳ ಮಗು ಜಗತ್ತಿನ ಯಾವುದೇ ಭಾಗದಲ್ಲಿ ಜನಿಸಲಿ ಆ ಮಗುವನ್ನ ಇಸ್ರೇಲಿ ಎಂದೇ ಪರಿಗಣಿಸಲಾಗುತ್ತದೆ . ಮತ್ತು ಆ ಮಗು ಕೂಡ ಮಿಲಿಟರಿ ಸೇವೆ ಮಾಡಲೇಬೇಕು . ವಿದೇಶದಲ್ಲಿ ನೆಲೆಸಿರುವ ಇಂತಹ ಮಕ್ಕಳು ೧೭ ನೇ ವಯಸ್ಸಿಗೆ ತಲುಪಿದಾಗ ತಾವಿರುವ ದೇಶದ ಇಸ್ರೇಲ್ ಎಂಬೆಸಿಗೆ ಹೋಗಿ ನೊಂದಾಯಿಸಿಕೊಳ್ಳಬೇಕು . ಆಗ ಮಾತ್ರ ಇದರಿಂದ ವಿನಾಯತಿ ಸಿಗುತ್ತದೆ . ಯುದ್ಧ ಅಥವಾ ಸಾಮಾನ್ಯವಲ್ಲದ ಸನ್ನಿವೇಶದಲ್ಲಿ ಪ್ರತಿ ಪ್ರಜೆಯೂ ಸೈನಿಕನಾಗಿ ಬದಲಾವಣೆ ಹೊಂದುವ ವ್ಯವಸ್ಥೆ ಅದನ್ನ ಕಟ್ಟುನಿಟ್ಟಿನಿಂದ ಪಾಲಿಸುವ ಜನ ನಾಳೆ ಜಗತ್ತನ್ನ ಆಳಲು ಏಕೆ ಸಾಧ್ಯವಿಲ್ಲ . ?

ಇಸ್ರೇಲ್ ಯುವ ಜನತೆ ತನ್ನ ಹಿಂದಿನ ತಲೆಮಾರಿಗಿಂತ ಹೆಚ್ಚು ಧಾರ್ಮಿಕತೆ ಕಡೆ ಒಲವು ತೋರುತ್ತಿದೆ . ತಂತ್ರಜ್ಞಾನ ನಭದೆತ್ತರಕ್ಕೆ ಚಿಮ್ಮುತ್ತಿರುವ ಅದರ ಹರಿಕಾರರು ಆಗಿರುವ ಯಹೂದಿಗಳು ಮಾತ್ರ ತಮ್ಮ ಮೂಲ ನಂಬಿಕೆಗಳಿಗೆ ಹೆಚ್ಚು ಹೆಚ್ಚು ನಿಷ್ಠರಾಗುತ್ತಿದ್ದಾರೆ . ಯಹೂದಿಯಲ್ಲದ ಇತರರೊಡನೆ ಮದುವೆಯಂತಹ ಸಂಬಂಧಗಳನ್ನ ಅರವತ್ತೈದು ಪ್ರತಿಶತ ಇಸ್ರೇಲಿಗಳು ಒಪ್ಪುವುದಿಲ್ಲ ಎನ್ನುವುದು ಇಂತಹ ಮಾತಿಗೆ ಪುಷ್ಟಿ ನೀಡುತ್ತದೆ . ಜಗತ್ತು ಬೇರೆ ನಾವೇ ಬೇರೆ ಎನ್ನುವ ಭಾವನೆ ಬಂದರೆ ಅಲ್ಲಿಗೆ ಎಂತಹ ಸಾಧನೆಯೂ ಶೂನ್ಯ . ಇಸ್ರೇಲ್ ಕೇವಲ ಧಾರ್ಮಿಕತೆಗೆ ಕಟ್ಟು ಬೀಳದೆ ಇರಲಿ .ಮುಂಬರುವ ದಿನಗಲ್ಲಿ ಇವರಿಂದ ವಿಶ್ವ ಶಾಂತಿ ಸ್ಥಾಪನೆಯಾಗಲಿ ಎನ್ನುವುದಷ್ಟೆ ಆಶಯ . ಇದೇನೆ ಇರಲಿ ಯಹೂದಿಗಳ ಯಶೋಗಾಥೆ ಸದ್ಯಕ್ಕೆ ನಮಗಂತೂ ಸ್ಪೂರ್ತಿದಾಯಕ. ಸ್ವಾವಲಂಬನೆ , ಸ್ವಾಭಿಮಾನ , ಪರಿಶ್ರಮ ಅವರಿಂದ ಒಂಚೂರು ನಾವು ಎರವಲು ಪಡೆದರೆ ಯಶೋಗಾಥೆಯಲ್ಲಿ ಯಹೂದಿಗಳಿಗೂ ನಾವು ಸೆಡ್ಡು ಹೊಡೆಯಬಹದು . ನಾವು ಅದಕ್ಕೆ ಸಿದ್ಧರಿದ್ದೇವೆಯೇ ??

ಲೇಖನ – #ರಂಗಸ್ವಾಮಿ_ಮೂಕನಹಳ್ಳಿ

ಮೇ 13, ಗುರುವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ,
ಗುರುವಾರ, ರೋಹಿಣಿ ನಕ್ಷತ್ರ
ರಾಹುಕಾಲ 1.55 ರಿಂದ 3:30
ಗುಳಿಕಕಾಲ 9: 10 ರಿಂದ 10:45
ಯಮಗಂಡಕಾಲ 06:00ರಿಂದ 7.35

ಮೇಷ

ಕುಲಕಸುಬುದಾರರಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ. ಪಾರಂಪರಿಕವಾಗಿ ನಡೆದು ಬಂದ ವ್ಯವಹಾರವನ್ನು ಕೈ ಬಿಡುವುದು ಬೇಡ. ಚಲನಚಿತ್ರರಂಗದವರಿಗೆ ಉತ್ತಮ ಅವಕಾಶ.

ವೃಷಭ

ಕೈಗಾರಿಕೋದ್ಯಮಿಗಳಿಗೆ ಪ್ರಗತಿ ಸಾಧ್ಯತೆ. ಹೊಸ ಉದ್ಯಮದಲ್ಲಿ ಯಶಸ್ಸು. ಮನೆಯಲ್ಲಿ ಬಹಳ ದಿನಗಳ ನಂತರ ನಗುವನ್ನು ಕಾಣಲಿದ್ದೀರಿ. ಬಂಧುಗಳ ಆಗಮನದ ಜೊತೆಗೆ ವ್ಯವಹಾರ ಸಂಬಂಧಗಳ ಬಗ್ಗೆ ಚರ್ಚೆ.

ಮಿಥುನ

ಶೀಘ್ರದಲ್ಲಿ ಉದ್ಯೋಗದಲ್ಲಿ ಉನ್ನತಿ ಸಾಧಿಸುವಿರಿ. ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರಲಿದೆ. ಆರ್ಥಿಕ ಅಭಿವೃದ್ಧಿ. ವೃಥಾ ಆರೋಪಗಳ ಬಗ್ಗೆ ಗಮನ ಬೇಡ.

ಕಟಕ

ಉದ್ಯೋಗ ಕ್ಷೇತ್ರದಲ್ಲಿ ಅತಿಯಾದ ಒತ್ತಡ ಕಾಣಿಸಿದರೂ ಸ್ನೇಹಿತರ ಸಹಕಾರದಿಂದ ನಿರಾಳ. ಮಕ್ಕಳ ಯೋಗಕ್ಷೇಮದ ಬಗ್ಗೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಎದುರಾಗುವ ಸಂಕಷ್ಟಗಳು ಗೆಲುವಿನ ಸೋಪಾನವಾಗಲಿದೆ.

ಸಿಂಹ

ಬಹುದಿನಗಳ ದುಡಿಮೆಯ ನಡುವೆ ವಿಶ್ರಾಂತಿಯ ಅಗತ್ಯತೆ. ಒತ್ತಡದಿಂದ ಹೊರಬರುವ ಸಾಧ್ಯತೆ. ನೌಕಾಯಾನಿಗಳಿಗೆ ಒಳ್ಳೆಯ ಸಮಯ. ದೇವತಾ ದರ್ಶನ ಭಾಗ್ಯ.

ಕನ್ಯಾ

ಕಠಿಣ ಪರಿಶ್ರಮದ ಫಲದಿಂದ ಉತ್ತಮ ಸಫಲತೆಯನ್ನು ಪಡೆಯಲಿದ್ದೀರಿ. ಯೋಜನೆಯನ್ನು ರೂಪಿಸುವ ಮುನ್ನ ಪುನಃ ಅವಲೋಕನ ಅಗತ್ಯ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ.

ತುಲಾ

ನಿಮ್ಮ ಕೆಲಸವನ್ನು ಬೇರೆಯವರೊಂದಿಗೆ ಮಾಡುವುದು ಉತ್ತಮ. ಆರ್ಥಿಕ ಪ್ರಗತಿಯತ್ತ ದಾಪುಗಾಲು. ಬೇರೆಯವರ ಮಾತುಗಳ ವಿಚಾರದಲ್ಲಿ ತಲೆ ಕಡಿಸಿಕೊಳ್ಳದಿರಿ. ಉನ್ನತ ವಿಚಾರಗಳತ್ತ ಒಲವು ತೋರಲಿದ್ದೀರಿ.

ವೃಶ್ಚಿಕ

ಆದಾಯದ ಹೊಸ ದಾರಿ ಗೋಚರಿಸಲಿದೆ. ಹಾಗಂತ ಅತಿಯಾದ ಖರ್ಚನ್ನು ನಿಯಂತ್ರಣದಲ್ಲಿಡುವುದು ಒಳ್ಳೆಯದು. ಯಂತ್ರಾಗಾರದಲ್ಲಿ ಅಗ್ನಿ ಭಯ ಸಾಧ್ಯತೆ. ದೇವತಾ ಆರಾಧನೆಯಿಂದ ನೆಮ್ಮದಿ.

ಧನು

ಸಾಂಸಾರಿಕ ನೆಮ್ಮದಿಯೊಂದಿಗೆ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ಮಾನಸಿಕ ನೋವನ್ನು ಇತರರಲ್ಲಿ ಹಂಚಿಕೊಳ್ಳಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅನ್ಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಯೋಗ.

ಮಕರ

ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ ದೊರೆತು ಉತ್ತಮ ಅವಕಾಶ ನಿಮ್ಮದಾಗಲಿದೆ. ರಾಜಕೀಯ ಮುಖಂಡರುಗಳಿಗೆ ಮುಖಭಂಗ ಸಾಧ್ಯತೆ. ಪತ್ರಿಕೋದ್ಯಮದವರಿಗೆ ವಿಫಲತೆ ಕಂಡುಬರುತ್ತಿದೆ.

ಕುಂಭ

ಯಾವುದೋ ಧನಾಗಮನದ ನಿರೀಕ್ಷೆಯಲ್ಲಿದ್ದ ಮೂಲದಿಂದ ಹಣಕಾಸಿನ ಅನುಕೂಲ ದೊರೆಯುವ ಸಾಧ್ಯತೆ. ಆತಂಕದ ಕ್ಷಣಗಳು ದೂರವಾಗುವ ಸಾಧ್ಯತೆ ಗೋಚರವಾಗುತ್ತಿದೆ. ಬಂಧುಗಳ ಸಹಾಯ ನಿಮಗಿದೆ.

ಮೀನ

ಹಣಕಾಸಿನ ಅನುಕೂಲದ ನಿರೀಕ್ಷೆಯಲ್ಲಿರುವ ನಿಮಗೆ ಶೀಘ್ರಗತಿಯಲ್ಲಿ ಕೈಗೂಡಲಿದೆ. ಬಂಧುಗಳಿಂದ ಸಹಕಾರ. ಮಕ್ಕಳ ಪ್ರಗತಿಯಿಂದ ನೆಮ್ಮದಿ. ಹೆಂಡತಿಗೆ ಅನಾರೋಗ್ಯದ ಸಾಧ್ಯತೆ. ದೂರಪ್ರಯಾಣ ತರವಲ್ಲ.

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಉಳುಮೆಗೆ ಶಾಸಕ ರಘುಪತಿ ಭಟ್ ಚಾಲನೆ – ತೋಡುಗಳ ಹೂಳೆತ್ತುವಿಕೆ ವೀಕ್ಷಣೆ.

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಸಂಬಂಧ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನಲ್ಲಿ ಗ್ರಾಮಸ್ಥರು, ಭೂ ಮಾಲಕರು ಮತ್ತು ಸ್ಥಳೀಯ ಪ್ರಮುಖರೊಂದಿಗೆ ಶಾಸಕ ಕೆ.ರಘುಪತಿ ಭಟ್ ಭೂಮಿ ಪೂಜೆ ನೆರವೇರಿಸಿ ಹಡಿಲು ಕೃಷಿ ಭೂಮಿಯ ಉಳುಮೆಗೆ ಚಾಲನೆ ನೀಡಿದರು.

ಬಳಿಕ ಹಡಿಲು ಭೂಮಿಯ ಸುತ್ತಮುತ್ತಲಿನ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಗದ್ದೆಗಳ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ತೋಡುಗಳನ್ನು ಪುನಶ್ಚೇತನಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ದಿನಕರ ಬಾಬು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಕಪ್ಪೆಟ್ಟು, ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಕೇದಾರೋತ್ಥಾನ ಟ್ರಸ್ಟ್(ರಿ.) ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಗೌರವ ಸಲಹೆಗಾರ ರಾಜೇಂದ್ರ ಪಂದುಬೆಟ್ಟು, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಸುನಿಲ್ ಕುಮಾರ್, ಹರೀಶ್ ಆಚಾರ್ಯ, ಮಹೇಂದ್ರ ಕೋಟ್ಯಾನ್, ವಿನೋದ್ ಪೂಜಾರಿ, ಸುರೇಶ್ ಶೆಟ್ಟಿ, ಶರತ್ ಶೆಟ್ಟಿ, ಭುವನೇಂದ್ರ, ಗ್ರಾ.ಪಂ. ಸದಸ್ಯ ಹರೀಶ್ ಪಾಲನ್ ಕಪ್ಪೆಟ್ಟು, ಮಾಜಿ ಗ್ರಾ.ಪಂ. ಸದಸ್ಯೆ ದಯಾಶಿನಿ ಪಂದುಬೆಟ್ಟು, ಸ್ಥಳೀಯರಾದ ಶಿವಾಜಿ ಸನಿಲ್, ರಾಧಾಕೃಷ್ಣ, ಗಣೇಶ್ ಪೂಜಾರಿ ಕಪ್ಪೆಟ್ಟು, ಡೇನಿಸ್ ಕ್ವಾರ್ಡ್ರಸ್ ಕಿದಿಯೂರು, ಗಿರೀಶ್ ಅಮೀನ್, ರಾಜೇಶ್ ಪೂಜಾರಿ, ಕೀರ್ತನ, ವಿಠಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಕೃಷಿಕರು, ಊರಿನ ಹಿರಿಯರು, ಭೂ ಮಾಲಕರು ಹಾಗೂ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಕೈಜೋಡಿಸಿರುವ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಶಾಸಕ ಕೆ.ರಘುಪತಿ ಭಟ್ ಅವರು ಕೃತಜ್ಞತೆಗಳನ್ನು ಸಲ್ಲಿಸಿ, ಹಡಿಲು ಭೂಮಿ ಕೃಷಿಯ ಸಂಪೂರ್ಣ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿದರು.

ಮೇ 12, ಬುಧವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ,
ಬುಧವಾರ, ಪಾಡ್ಯ ತಿಥಿ , ಕೃತಿಕಾ ನಕ್ಷತ್ರ
ರಾಹುಕಾಲ:12.19 ರಿಂದ 1.54
ಗುಳಿಕಕಾಲ :10.44 ರಿಂದ 12.19
ಯಮಗಂಡಕಾಲ:7.34 ರಿಂದ 9.09

ಮೇಷ

ಈ ದಿನದ ಪ್ರಗತಿ ಅಷ್ಟೊಂದು ಉತ್ತಮವಲ್ಲದಿದ್ದರೂ ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ. ಪತ್ನಿ ಬಂಧುವರ್ಗದವರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ.

ವೃಷಭ

ಗುರುಹಿರಿಯರಿಂದ ಪ್ರಶಂಸೆ ಗಳಿಸುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಆಕಸ್ಮಿಕ ಧನಲಾಭ. ಪ್ರೀತಿ ಪಾತ್ರದವರಿಂದ ಸ್ವಲ್ಪಮಟ್ಟಿನ ಕಿರಿಕಿರಿ ಅನುಭವಿಸುವಿರಿ. ಶಿವನ ಅನುಗ್ರಹದಿಂದ ಅನುಕೂಲ.

ಮಿಥುನ

ವಾಹನ ಖರೀದಿ ಯೋಗ. ಆರೋಗ್ಯದಲ್ಲಿ ಸುಧಾರಣೆ. ಕೃಷಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಶಿವನ ಆರಾಧನೆಯಿಂದ ಹೆಚ್ಚಿನ ಅನುಕೂಲ ದೊರೆಯಲಿದೆ.

ಕಟಕ

ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಲಾಭ. ಭೂ ವ್ಯವಹಾರಕ್ಕೆ ಅಷ್ಟೊಂದು ಒಳ್ಳೆಯ ದಿನವಲ್ಲ. ಅದರಿಂದ ದೂರವಿರುವುದೇ ಒಳ್ಳೆಯದು. ದಿನಾಂತ್ಯದಲ್ಲಿ ಮನೆಯಲ್ಲಿ ಸಂತೋಷಕರ ವಾತಾವರಣ ಮೂಡಲಿದೆ.

ಸಿಂಹ

ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನ. ವಿವಾಹಾಕಾಂಕ್ಷಿಗಳಿಗೆ ಆಶಾಕಿರಣವೊಂದು ಗೋಚರಿಸಲಿದೆ. ನಿರುದ್ಯೋಗಿಗಳು ಜೀವನದಲ್ಲಿ ತಿರುವು ಪಡೆಯುವ ಸಾಧ್ಯತೆ. ಕುಲದೇವತಾ ಆರಾಧನೆಯಿಂದ ಯಶಸ್ಸು.

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ದಿನ. ಬಿಡುವಿನ ದಿನದಲ್ಲಿಯೂ ಹೆಚ್ಚಿನ ಕಾರ್ಯಭಾರ ನಡೆಸಬೇಕಾದೀತು. ಮೇಲಧಿಕಾರಿಗಳಿಂದ ಪ್ರಶಂಸೆ. ಮಹಿಳಾ ಕಾರ್ಮಿಕರಿಗೆ ಬಿಡುವಿನ ದಿನವಾಗಲಿದೆ.

ತುಲಾ

ವಿರೋಧಿಗಳ ವಿಷಯದಲ್ಲಿ ಎಚ್ಚರದಿಂದಿರಿ. ಆರೋಗ್ಯದಲ್ಲಿ ವ್ಯತ್ಯಯ ಕಂಡಬರಲಿದೆ. ಪ್ರತಿಸ್ಪರ್ಧಿಗಳ ಸವಾಲು ಎದರುರಿಸಬೇಕಾದೀತು. ಮನೆಯವರ ಸಹಕಾರದಿಂದಾಗಿ ಎಲ್ಲವೂ ಸುಗಮವಾಗಿ ನಡೆಯಲಿದೆ.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರಕಿ ಸಂಭ್ರಮ. ತೈಲೋದ್ಯಮದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ. ವಸ್ತ್ರ ವಿನ್ಯಾಸಕಾರರಿಗೆ ಅಧಿಕ ಮನ್ನಣೆ. ನೇಕಾರರಿಗೆ ಉತ್ತಮ ಲಾಭ. ಹಿರಿಯರ ಆರೋಗ್ಯದ ಮೇಲೆ ನಿಗಾ ಇರಲಿ.

ಧನು

ಖರ್ಚಿನ ಮೇಲೆ ಹಿಡಿತವಿರಲಿ. ಆದಾಯದಲ್ಲಿ ಕುಂಠಿತ ಸಾಧ್ಯತೆ. ಅನಾವಶ್ಯಕ ವಿಷಯಗಳಿಂದ ಮನಸ್ಸಿಗೆ ಕಿರಿಕಿರಿಯುಂಟಾಗಿ ವ್ಯತಿರಿಕ್ತ ಪರಿಣಾಮ ಎದುರಿಸುವಿರಿ. ಪತ್ನಿಯ ಸಕಾಲ ನೆರವಿನಿಂದ ಹಿತಾನುಭವ.

ಮಕರ

ಸರ್ಕಾರಿ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಕುಲದೇವತಾರಾಧನೆಯಿಂದ ಮಾನಸಿಕ ನೆಮ್ಮದಿ. ಸಾಮಾಜಿಕ ಸ್ಥಾನಮಾನಗಳು ದೊರಕುವ ಸಾಧ್ಯತೆ. ಕಲಾವಿದರಿಗೆ ಅನುಕೂಲಕರ ದಿನ. ಧಾನ್ಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

ಕುಂಭ

ವ್ಯವಹಾರದಲ್ಲಿ ನಿಗಾ ವಹಿಸಲಿದ್ದೀರಿ. ಹಿರಿಯರೊಂದಿಗೆ ಮನಸ್ತಾಪ. ಇಷ್ಟ ಮಿತ್ರರ ಆಗಮನದಿಂದ ಪರಿಸ್ಥಿತಿ ತಿಳಿಯಾಗಲಿದೆ. ದಿನದಾಂತ್ಯದಲ್ಲಿ ಯಶಸ್ಸು. ದೇವತಾರಾಧನೆಯಿಂದ ಮನಸ್ಸಿಗೆ ಉಲ್ಲಾಸ.

ಮೀನ

ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ. ತೈಲ ವಸ್ತುಗಳ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಗುರು ಆರಾಧನೆಯಿಂದ ಹೆಚ್ಚಿನ ಯಶಸ್ಸು. ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ.

ಮೇ 11, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಕೃಷ್ಣ ಪಕ್ಷ.
ವಾರ: ಮಂಗಳವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಭರಣಿ, ಯೋಗ: ಸೌಭಾಗ್ಯ
ಕರಣ: ಚತುಷ್ಪದ
ರಾಹುಕಾಲ:3.29 ರಿಂದ 5.04
ಗುಳಿಕಕಾಲ :12.19 ರಿಂದ 1.54
ಯಮಗಂಡಕಾಲ :9.09 ರಿಂದ 10.44

ಮೇಷ

ಮನೆಯಲ್ಲಿನ ರಂಪಾಟಗಳು ಜಾಸ್ತಿಯಾಗುವ ಸಾಧ್ಯತೆ. ಅನಿರೀಕ್ಷಿತ ಬೆಳವಣಿಗೆಯಿಂದ ಮಾನಸಿಕ ನೆಮ್ಮದಿ. ಸರ್ಕಾರಿ ನೌಕರರಿಗೆ ಪ್ರಶಂಸೆಯ ದಿನ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದ ದಿನ.

ವೃಷಭ

ಯಂತ್ರಾಗಾರಗಳಲ್ಲಿ ಅಗ್ನಿಯಿಂದ ಎಚ್ಚರ ಅಗತ್ಯ. ಅನಿರೀಕ್ಷಿತವಾದ ತಲೆನೋವಿಗೆ ಧೃತಿಗೆಡಬೇಕಾಗಿಲ್ಲ. ವೈದ್ಯರಿಗೆ ಕಾಲುನೋವಿನ ಸಾಧ್ಯತೆ. ಮಹಿಳಾ ಉದ್ಯಮಿಗಳಿಗೆ ಸಂತೃಪ್ತಿ.

ಮಿಥುನ

ಅದೃಷ್ಟದ ದಿನಕ್ಕಾಗಿ ಕಾಯುತ್ತಿರುವ ನಿಮಗೆ ಭಗವಂತನ ದಯೆ ಇದೆ. ನಿರೀಕ್ಷಿತ ಮಟ್ಟಕ್ಕೆ ನಿಮಗೆ ಗೆಲುವು ಕಟ್ಟಿಟ್ಟ ಬುತ್ತಿ. ಹಣಕಾಸಿನ ವ್ಯವಹಾರದಲ್ಲಿ ತೃಪ್ತಿದಾಯಕ ಬದುಕು. ಬಂಗಾರ ಖರೀದಿ ಮಾಡಲಿದ್ದೀರಿ.

ಕಟಕ

ದೂರದ ಬಂಧುಗಳ ಆಗಮನದಿಂದ ತೀರ್ಥಯಾತ್ರೆ ಬಗ್ಗೆ ನಿಷ್ಕರ್ಷೆ. ರತ್ನ ವ್ಯಾಪಾರಿಗಳಿಗೆ ಅನುಕೂಲ. ಗುಡಿ ಕೈಗಾರಿಕೆ ನಡೆಸುವವರಿಗೆ ಪ್ರಗತಿ. ಮನಸ್ಸಿಗೆ ಸಂತೋಷದಾಯಕ ದಿನ.

ಸಿಂಹ

ಅಧಿಕಾರಿಗಳ ಸಹಕಾರದಿಂದ ಕಾರ್ಯದಲ್ಲಿ ಪ್ರಗತಿ. ಮನಸ್ಸಿಗೆ ಸಂಬಂಧಪಟ್ಟ ವ್ಯವಹಾರ ನಡೆಸುವುದು ಉಚಿತವಲ್ಲ. ಹಿರಿಯರ ಆಶೀರ್ವಾದ ದೊರೆಯಲಿದೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಪ್ರಗತಿ.

ಕನ್ಯಾ

ಮನಸ್ಸಿಗೆ ಸಂಬಂಧಪಟ್ಟರೂ ದೇಹಾರೋಗ್ಯದ ಬಗ್ಗೆ ಆಲಸ್ಯ ಬೇಡ. ವಾಹನ ವ್ಯಾಪಾರದಲ್ಲಿ ಪ್ರಗತಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ. ವನ್ಯ ಸಂಪತ್ತಿಗೆ ಅಧಿಕವಾದ ಪರಿಶ್ರಮ ಅಗತ್ಯ.

ತುಲಾ

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಹಣಕಾಸಿನ ಬಗ್ಗೆ ಚಿಂತಿಸುವುದು ಬೇಡ. ಸ್ತ್ರೀಯರಿಗೆ ಮನಸ್ಸಿನ ಮೇಲೆ ನಿಯಂತ್ರಣವಿರಲಿ. ಗೊಂದಲಮಯ ಬದುಕಿನಿಂದ ಮುಕ್ತಿ.

ವೃಶ್ಚಿಕ

ಹಣ ಹೊಂದಿಸಲು ಬೇರೆಯವರ ಸಹಾಯವನ್ನು ಯಾಚಿಸಲಿದ್ದೀರಿ. ಔಷಧ ಸೇವನೆಯಲ್ಲಿ ಮುಂಜಾಗೃತೆ ಅಗತ್ಯ. ಮನಸ್ಸಿಗೆ ಸಂಬಂಧಿಸಿದ ವಿಷಯವನ್ನು ಬೇರೆಯವರಲ್ಲಿ ನಿವೇದಿಸಿಕೊಳ್ಳಿ.

ಧನು

ಹಿರಿಯ ಅಧಿಕಾರಿಗಳ ಭೇಟಿಯಿಂದ ಮುಂದೂಡಲ್ಪಡುತ್ತಿರುವ ಕಾರ್ಯಗಳು ಶೀಘ್ರದಲ್ಲಿ ನೆರವೇರಲಿವೆ. ಕುಶಲಕರ್ಮಿಗಳಿಗೆ ಅನುಕೂಲ. ಬಂಧುಗಳ ಆರ್ಥಿಕ ಸಹಾಯದಿಂದ ದೃಢತೆ.

ಮಕರ

ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ. ಹಳೆಯ ವೈಷಮ್ಯ ಗರಿಗೆದರುವ ಸಾಧ್ಯತೆ. ವಿದ್ಯಾರ್ಥಿಗಳು ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಉತ್ತಮ. ವಿಪರೀತವಾದ ಖರ್ಚು. ರಕ್ಷಣಾಧಿಕಾರಿಗಳಿಗೆ ಎಚ್ಚರಿಕೆಯ ಕಾಲ.

ಕುಂಭ

ಮಾನಸಿಕ ಸ್ಥೈರ್ಯ ಸದೃಢವಾಗಿ ಲಾಭದಾಯಕವಾದ ಬದುಕು. ಕೌಟುಂಬಿಕ ಬಿಕ್ಕಟ್ಟಿನ ಕುರಿತು ಚರ್ಚೆ, ಸಂಗಾತಿಯಿಂದ ಸಮಾಧಾನದ ಜೊತೆಗೆ ನೆರವು ದೊರೆಯಲಿದೆ.

ಮೀನ

ಮನಸ್ಸಿಗೆ ಅನುಕೂಲವಾದ ಅನೇಕ ವಿಷಯಗಳಲ್ಲಿ ಸಾಫಲ್ಯತೆ ಪಡೆಯಲಿದ್ದೀರಿ. ವ್ಯತಿರಿಕ್ತವಾದ ವ್ಯವಹಾರದಲ್ಲಿ ತೊಡಗುವುದು ಬೇಡ. ಸಹೋದರರಿಂದ ಕಾರ್ಯಕ್ಕೆ ಅನುವು

ಮೇ 10, ಸೋಮವಾರ ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 27 ಸಲುವ ಚೈತ್ರ ಬಹುಳ ಚತುರ್ದಶಿ 39|| ಗಳಿಗೆ ದಿನ ವಿಶೇಷ :ನಿತ್ಯ ನಕ್ಷತ್ರ :ಅಶ್ವಿ‌ನಿ 35||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.46 ಗಂಟೆ ಸೂರ್ಯೋದಯ :6.08 ಗಂಟೆ

ಮೇಷ

ಅಪೇಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ನಡೆಸಲಿದ್ದೀರಿ. ನೇರ ಹಾಗೂ ದಿಟ್ಟ ನಡವಳಿಕೆ ಅವಶ್ಯ. ಹೊಸ ಹೊಸ ಮಾರ್ಗಗಳ ಮೂಲಕ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ.

ವೃಷಭ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಒತ್ತಡ ಎದುರಿಸಬೇಕಾದೀತು. ಮಿತ್ರರ ಸಹಕಾರ ದೊರೆತು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಫಲಗಳನ್ನು ಪಡೆಯುವಿರಿ. ದಿನವಿಡೀ ಒತ್ತಡಗಳು ಕಾಣಿಸಿಕೊಳ್ಳುವವು.

ಮಿಥುನ

ವಿದ್ಯಾರ್ಥಿಗಳಿಗೆ, ತಾಂತ್ರಿಕ ತರಬೇತಿ ಪಡೆಯುತ್ತಿರುವವರಿಗೆ ಅತ್ಯಂತ ಮಹತ್ವದ ಕಾಲ. ಕಚೇರಿ ಕೆಲಸಗಳಲ್ಲಿ ಹೆಚ್ಚಿನ ನೈಪುಣ್ಯತೆ ಗಳಿಸುವ ಅವಕಾಶ. ವಾಸ್ತವವನ್ನು ಅರಿತು ನಡೆಯುವುದು ಉತ್ತಮ.

ಕಟಕ

ಸೃಜನಶೀಲ ಕಾರ್ಯಗಳಲ್ಲಿ ಮಗ್ನರಾಗಿ ಯಶಸ್ಸು ಗಳಿಸುವಿರಿ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅನುಕೂಲ. ನಿಮ್ಮ ಕ್ಷಮತೆಯಿಂದ ಒತ್ತಡಗಳು ದೂರವಾಗಲಿವೆ. ಉನ್ನತ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.

ಸಿಂಹ

ದೊಡ್ಡ ದೊಡ್ಡ ಯೋಜನೆಗಳನ್ನು ಯೋಚಿಸುವಿರಿ. ಸಾಕಾರಗೊಳಿಸುವಲ್ಲಿ ನಿಮ್ಮ ನಿರ್ಲಕ್ಷ ಸಲ್ಲದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಫಲಿತಾಂಶಗಳ ಬಗ್ಗೆ ಚಿಂತಿಸದೇ ಪ್ರಯತ್ನಶೀಲರಾಗಿ. ಯಶಸ್ಸು ಖಂಡಿತ.

ಕನ್ಯಾ

ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತನೆ ನಡೆಸುವಿರಿ. ನಿವೃತ್ತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ಮಕ್ಕಳ ನಡೆಯ ಬಗ್ಗೆ ಗಮನ ಅಗತ್ಯ. ದೇವತಾ ಆರಾಧನೆಯಿಂದ ಯಶಸ್ಸು.

ತುಲಾ

ಬರುವ ಎಲ್ಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ. ಸನ್ನಿಹಿತವಾದ ಬದಲಾವಣೆಗಳಿಗೆ ನಿಮ್ಮನ್ನು ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವುದು ಅತ್ಯವಶ್ಯ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ.

ವೃಶ್ಚಿಕ

ಬಯಕೆಗಳು ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಕಷ್ಟವಾಗಬಹುದು. ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ದುಡುಕಿನ ನಡೆ ಕೆಡುಕು. ಗುರುವಿನ ಆರಾಧನೆ ಮಾಡಿ.

ಧನು

ಅವಸರದಿಂದ ಅವಘಡಗಳನ್ನು ತಂದುಕೊಳ್ಳುವ ಸಾಧ್ಯತೆ. ವ್ಯವಧಾನವಿರಲಿ. ವಾರಾಂತ್ಯದ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ವಾಹನ ಚಲಾವಣೆಯಲ್ಲಿ ಜಾಗೃತೆ ಇರಲಿ.

ಮಕರ

ಸೋಲು ಗೆಲುವಿನ ಬಗೆಗೆ ಚಿಂತಿಸಬೇಡಿ. ಮುಂದಿನ ದಿನಗಳು ಉತ್ತಮವಿದೆ. ಅವಿವಾಹಿತರಿಗೆ ಉತ್ತಮ ಅವಕಾಶ. ಪ್ರೇಮಿಗಳ ವಿಚಾರದಲ್ಲಿ ಹಿರಿಯರ ಸಮ್ಮತಿ ದೊರಕುವುದು. ಬಂಧುಬಾಂಧವರ ಸಹಕಾರ.

ಕುಂಭ

ಏಕಕಾಲದಲ್ಲಿ ಅನೇಕ ಕಾರ್ಯಗಳಲ್ಲಿ ಮಗ್ನರಾಗಲು ಯೋಚಿಸಬೇಡಿ. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ಧೃತಿಗೆಡದೆ ಬಂದ ಸವಾಲುಗಳನ್ನು ಎದುರಿಸಿ.

ಮೀನ

ಕಾರ್ಯ ವೈಫಲ್ಯಗಳನ್ನು ಕಂಡರೂ ದೃತಿಗೆಡಬೇಕಾಗಿಲ್ಲ. ಕಾರಣಗಳನ್ನು ಹುಡುಕಿ ಮುನ್ನಡೆದಲ್ಲಿ ಯಶಸ್ಸು. ಆತುರದ ನಿರ್ಧಾರದಿಂದ ಅವಘಡ. ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಉತ್ತಮ.

ಲೋಕ ಕ್ಷೇಮಕ್ಕಾಗಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆ

ಉಡುಪಿ ಕ್ಷೇತ್ರದ ಸದ್ಭಕ್ತರೆಲ್ಲಾ ಸೇರಿ ಕೊರೋನಾ ಮುಕ್ತ ಭಾರತ, ಸುಖೀ ಸಮೃದ್ಧ ಸುಭಿಕ್ಷ ಶಾಂತಿಪೂರ್ಣ ನೆಮ್ಮದಿಯ ಭಾರತ ಮತ್ತು ಲೋಕ ಕ್ಷೇಮಕ್ಕಾಗಿ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಯವರಿಗೆ ಕೊರೋನಾ ಸಂಕಷ್ಟದ ಹೋರಾಟದಲ್ಲಿ ಅದ್ಭುತ ಯಶಸ್ಸು ಸಿಗಲೆಂದು ಪ್ರಾರ್ಥಿಸಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆಯನ್ನು ಸಲ್ಲಿಸಿದರು.

ಪೂಜ್ಯ ಪಲಿಮಾರು ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ನೆರವೇರಿತು. ಶಾಸಕ ಶ್ರೀ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಮೊದಲಾದವರು ಉಪಸ್ಥಿತರಿದ್ದರು.

ವೇದಮೂರ್ತಿ ರಾಮಕೃಷ್ಣ ತಂತ್ರಿ ಕುಕ್ಕಿಕಟ್ಟೆ ಮತ್ತು ದೇವಳದ ಅರ್ಚಕರು, ಸಿಬ್ಬಂದಿ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಇವರ ಸಂಯೋಜನೆ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.

ಕೊರೋನಾ ಸೋಂಕು ಲಕ್ಷಣ ಇದ್ದವರಿಗೆ ಟೆಸ್ಟ್ ವೇಳೆಯೇ ಔಷಧ ನೀಡುವಂತೆ ಆದೇಶ ಜಾರಿಗೊಳಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕೊರೋನಾ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಆರ್‌ಟಿ-ಪಿಸಿಆರ್‌ ಸೋಂಕು ಪರೀಕ್ಷೆಗೆ ಒಳಪಟ್ಟ ಸಮಯದಿಂದಲೇ ಕೆಲವು ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕೊರೊನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.30ಕ್ಕೂ ಅಧಿಕವಿದೆ. ಪರೀಕ್ಷೆಗೊಳಪಡುವ ಪ್ರತಿ ಮೂವರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ಹೀಗಾಗಿ, ಕೊರೊನಾ ಸೋಂಕು ನಿಯಂತ್ರಣ ತಜ್ಞರ ಸಮಿತಿ ಶಿಫಾರಸ್ಸಿನ ಮೇರೆಗೆ ಸೋಂಕು ಪರೀಕ್ಷೆಗೆ ಬಂದವರ ಪೈಕಿ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ಥಳದಲ್ಲಿಯೇ ಕೆಲ ಮಾತ್ರೆ ನೀಡಬೇಕು.

ನಂತರ ಸೋಂಕು ದೃಢಪಟ್ಟರೆ ರಾಜ್ಯ ಸರ್ಕಾರದ ಚಿಕಿತ್ಸಾ ಮಾರ್ಗಸೂಚಿಯನ್ನು ಪಾಲಿಸಿ ಪೂರ್ಣ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ತಮ್ಮ ವೈದ್ಯರ ಸಲಹೆಯೊಂದಿಗೆ ಮಾತ್ರೆ ಚೀಟಿಯನ್ನು ನೀಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಮಾತ್ರೆಗಳ ವಿವರ: (ಮೂರು ದಿನ)

ಇವೆರ್ಮೆಕ್ಟಿನ್‌ 12 ಎಂಜಿ – ದಿನಕ್ಕೆ ಒಂದು (ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ)
ವಿಟಿಮಿನ್‌ ಸಿ 500 ಎಂಜಿ – ದಿನಕ್ಕೆ 3 (ಬೆಳಗ್ಗೆ, ಮಧ್ಯಾಹ್ನ, ರಾತ್ರಿ)
ಜಿಂಕ್‌ 50 ಎಂಜಿ – ದಿನಕ್ಕೆ ಒಂದು (ಮಧ್ಯಾಹ್ನ)

ಖಾಸಗಿ ಆಸ್ಪತ್ರೆಗಳು ರೂಪಾಯಿ 100 ಕ್ಕಿಂತ ಅಧಿಕ ಲಸಿಕಾ ಸೇವಾ ಶುಲ್ಕ ಪಡೆವಂತಿಲ್ಲ

ಕೋವಿಡ್‌ ಲಸಿಕೆ ನೀಡುವ ಖಾಸಗಿ ಆರೋಗ್ಯ ಸಂಸ್ಥೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ 100 ರು. ಮಾತ್ರ ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚು ವಿಧಿಸುವ ಸಂಸ್ಥೆಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆ ಹೊರಡಿಸಿದ್ದಾರೆ

ಮೇ 07, ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತಋತು,
ಚೈತ್ರ-ಮಾಸ, ಕೃಷ್ಣಪಕ್ಷ,
ಏಕಾದಶಿ, ಶುಕ್ರವಾರ,
ಪೂರ್ವ ಭಾದ್ರಪದ ನಕ್ಷತ್ರ (ಹಗಲು 12:26) ನಂತರ “ಉತ್ತರ ಭಾದ್ರಪದ ನಕ್ಷತ್ರ”.
ರಾಹುಕಾಲ 10:45ರಿಂದ 12:19
ಗುಳಿಕಕಾಲ 7:30 ರಿಂದ 9 :10
ಯಮಗಂಡಕಾಲ 3: 29ರಿಂದ 05:04

ಮೇಷ

ವೈವಾಹಿಕ ಜೀವನದಲ್ಲಿ ಭಾಗ್ಯೋದಯವನ್ನು ಕಾಣಲಿದ್ದೀರಿ. ರಾಜಕೀಯದಲ್ಲಿರುವವರಿಗೆ ಬರಸಿಡಿಲಿನ ಸುದ್ದಿಯೊಂದು ಬಂದೆರಗಲಿದೆ. ಬಂಧುಗಳಿಂದ ಸಹಾಯ. ಸ್ಥಿರಾಸ್ತಿ ಖರೀದಿಗೆ ಮನಸ್ಸು ಮಾಡಲಿದ್ದೀರಿ.

ವೃಷಭ

ಅನಿವಾರ್ಯ ಬದಲಾವಣೆಗಳಿಗೆ ಒಳಗಾಗಿ ಇದ್ದುದನ್ನು ಕಳೆದುಕೊಳ್ಳಬೇಡಿ. ಹಿರಿಯರ ಮಾರ್ಗದರ್ಶನ ಅಲಕ್ಷಿಸದೆ ಇರುವುದು ಒಳ್ಳೆಯದು. ಹೊಸ ಕಾರ್ಯಯೋಜನೆಯಿಂದ ದೂರವಿರಿ.

ಮಿಥುನ

ನಿಮ್ಮ ಪಾಲಿನ ಶ್ರದ್ಧೆಯು ಅನುಕೂಲಕರವಾಗಿ ಪರಿಣಮಿಸಲಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಕಾರ್ಯಪ್ರವೃತ್ತರಾಗುವಿರಿ. ‌ರಾಜಕೀಯದಲ್ಲಿ ತೊಡಗಿಕೊಂಡ ಯುವತಿಯರಿಗೆ ಯಶಸ್ಸು.

ಕಟಕ

ಸ್ಫೂರ್ತಿ ತುಂಬಿದ ಜೀವನದೊಂದಿಗೆ ಉತ್ತಮ ನೆಲೆ ಕಾಣಲಿದ್ದೀರಿ. ಧಾರಾಳವಾಗಿ ಹಣದ ಹರಿವು ನಿಮ್ಮೆಡೆಗೆ ಹರಿದು ಬರಲಿದೆ. ಉತ್ತಮವಾದ ಕುಟುಂಬ ಬಾಂಧವ್ಯದಲ್ಲಿ ವೃದ್ಧಿಯನ್ನು ಕಾಣುವಿರಿ.

ಸಿಂಹ

ಸಾಂಸಾರಿಕ ಸೌಖ್ಯಕ್ಕಾಗಿ ಹೊಸ ಪ್ರಯತ್ನ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಬಂದೆರಗುವ ಸಾಧ್ಯತೆ. ಹೊಸ ಆದಾಯ ಮೂಲದ ಅನ್ವೇಷಣೆ ಮಾಡಲಿದ್ದೀರಿ. ಬಂಧುಗಳಿಂದ ಸಹಾಯ. ಮನಸ್ಸಿನ ದುಗಡ ನಿವಾರಣೆಯಾಗಲಿದೆ.

ಕನ್ಯಾ

ಕರಕುಶಲ ಕಾರ್ಮಿಕರಿಗೆ ಮನ್ನಣೆ ಸಿಗಲಿದ್ದು, ಸರ್ಕಾರದಿಂದ ಹೆಚ್ಚಿನ ಸಹಾಯ ಸಹಕಾರ ನಿರೀಕ್ಷಿಸಬಹುದು. ಎಲ್ಲ ಕಾರ್ಯಗಳಲ್ಲಿಯೂ ತಲ್ಲೀನತೆಯಿಂದ ಸರಿ ಹೊಂದುವ ಸಾಧ್ಯತೆಗಳು ಕಂಡುಬರುತ್ತಿವೆ.

ತುಲಾ

ಆರ್ಥಿಕ ಅನುಕೂಲತೆಯೊಂದಿಗೆ ಸಾಮಾಜಿಕ ಗೌರವ ದೊರಕಲಿದೆ. ಮಾಡಿದ ಕೆಲಸ–ಕಾರ್ಯಗಳಲ್ಲಿ ಮನ್ನಣೆ ದೊರೆಯುತ್ತದೆ. ಹೊಸ ಕಾರ್ಯ ರೂಪಿಸುವಲ್ಲಿ ಮುಂಚಿತ ಯೋಚನೆ ಸಫಲವಾಗಲಿದ್ದು ಯಶಸ್ಸಿನತ್ತ ಪಯಣ.

ವೃಶ್ಚಿಕ

ಆರ್ಥಿಕ ಕ್ರೋಢಿಕರಣದ ಜೊತೆಗೆ ಮಂಗಳಕಾರ್ಯಗಳು ನಿಶ್ಚಯವಾಗುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಜನೆ ನಿರೂಪಿಸಲಿದ್ದೀರಿ. ದೂರ ದೂರಿನ ಪ್ರಯಾಣ ಬೇಡ. ವಾಹನ ಚಲಾವಣೆಯಲ್ಲಿ ಜಾಗೃತೆ.

ಧನು

ಮಿತ್ರರ ಸಹಕಾರದಿಂದಾಗಿ ರಾಜಕೀಯ ವ್ಯವಹಾರದಲ್ಲಿ ಸುಗಮತೆ. ಆರ್ಥಿಕ ದೃಢೀಕರಣದಿಂದಾಗಿ ಕಾರ್ಯಾನುಕೂಲ. ಮನೆಯಲ್ಲಿ ಹಬ್ಬದ ವಾತಾವರಣ. ಮನೆಯವರ ಅಹವಾಲನ್ನು ಗಮನಿಸುವುದು ಒಳಿತು.

ಮಕರ

ಹೊಸ ಉದ್ಯಮವೊಂದರಿಂದ ಆದಾಯದ ಸಾಧ್ಯತೆ ಇರಲಿದ್ದು ಉತ್ತಮ ಆಶಾಭಾವನೆ ಮುಂದುವರಿಯಲಿದೆ. ವೈದ್ಯರ ನೆರವಿನಿಂದಾಗಿ ಆರೋಗ್ಯದಲ್ಲಿ ಸ್ಥಿರತೆ. ಆರ್ಥಿಕ ಅಭಿವೃದ್ಧಿ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ.

ಕುಂಭ

ವಿದ್ಯಾರ್ಥಿಗಳಿಗೆ ಪ್ರಗತಿಪರ ಚಿಂತನೆಯಿಂದ ಉತ್ತಮ ಯಶಸ್ಸು. ವೈದ್ಯರಿಗೆ ಪ್ರಶಂಸೆ. ಬಂಧುಗಳ ಕಿರಿಕಿರಿಯಿಂದ ಬೇಸರವಾದರೂ ದೇವರ ಕೃಪೆ ನಿಮ್ಮ ಪಾಲಿಗೆ ಒದಗಿ ಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಮಾನಸಿಕ ತುಮುಲ.

ಮೀನ

ಆಲಸ್ಯ ಉದಾಸೀನತೆ ತೊಡೆದುಹಾಕಿ ಕಾರ್ಯದಲ್ಲಿ ಮಗ್ನರಾಗಿರಿ. ಅನಗತ್ಯ ಕೋಪದಿಂದ ನಷ್ಟದ ಸಾಧ್ಯತೆ. ದೈಹಿಕವಾಗಿ ಸಣ್ಣಪುಟ್ಟ ನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ಈಶ್ವರನ ಆರಾಧನೆಯಿಂದ ಶ್ರೇಯಸ್ಸು.

ಪ.ಬಂಗಾಲ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಶೋಭಾ ಕರಂದ್ಲಾಜೆ

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಸಂಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೂಂಡಾಗಿರಿ, ದಾಂಧಲೆ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ ಬರೆದಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಪ.ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯ ಟಿ.ಎಂ.ಸಿ. ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರ, ಗೂಂಡಾಗಿರಿ ಪ್ರತಿಭಟಿಸಿ, ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇಪ್ಪತೈದು ವರ್ಷಗಳ ಪರ್ಯಂತ ಒಂದೇ ಮುಖ್ಯಮಂತ್ರಿಯನ್ನು ಮುಂದುವರಿಸಿಕೊಂಡು ಬಂದು ಕಮ್ಯುನಿಷ್ಟ್ ರಾಜ್ಯವೆನಿಸಿಕೊಂಡಿದ್ದರೂ ಪ್ರಸಕ್ತ ಬೆರಳೆಣಿಕೆಯ ಶಾಸಕರ ಗೆಲುವಿಗೆ ಪರದಾಡುವ ದುಸ್ಥಿತಿ ಕಮ್ಯುನಿಷ್ಟ್ ಪಕ್ಷಕ್ಕೆ ಬಂದೊದಗಿದೆ. ಅದೇ ರೀತಿಯ ದುರ್ಗತಿ ಪ.ಬಂಗಾಲದ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಬಂದೊದಗಲಿದೆ. ಆದುದರಿಂದ ಹಿಂಸೆ, ಗೂಂಡಾಗಿರಿಯನ್ನು ತ್ಯಜಿಸಿ ಎಂದು ಆಗ್ರಹಿಸಿದ ಅವರು ದೇಶದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆಯ ಮೂಲಕ ಪ. ಬಂಗಾಲದ ಬಿಜೆಪಿ ಕಾರ್ಯಕರ್ತರ ಜೊತೆ ನಾವೆಲ್ಲರೂ ಇದ್ದೇವೆ, ತ್ರಣ ಮೂಲ ಕಾಂಗ್ರೆಸ್ ನ ಗೂಂಡಾಗಿರಿಯನ್ನು ಮೆಟ್ಟಿ ನಿಲ್ಲುವ ಕಾಲ ಸನ್ನಿಹಿತವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ.ಬಂಗಾಲದ ಮಮತಾ ಬ್ಯಾನರ್ಜಿ ಸಂವಿಧಾನ ವಿರೋಧಿ ನಡೆ ಖಂಡನೀಯ. ಅವರ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹಿಂಸಾಚಾರ, ಗೂಂಡಾಗಿರಿಗೆ ತಕ್ಕ ಉತ್ತರವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶಕ್ತವಾಗಿದೆ. ಇಡೀ ದೇಶ ಇಂತಹ ವಿಧ್ವಂಸಕ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಿಜಿಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜಾ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ ಪ್ರಭು, ಪ್ರಮುಖರಾದ ಜಿಲ್ಲೇಶ್ ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಉಪಸ್ಥಿತರಿದ್ದರು.

Design a site like this with WordPress.com
Get started