ಮೇ 20, ಗುರುವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪ್ಲವ ಸಂ|ರದ ವೃಷಭ ಮಾಸ‌ ದಿನ 6 ಸಲುವ ವೈಶಾಖ ಶುದ್ಧ ಅಷ್ಟಮಿ 15|| ಗಳಿಗೆ ದಿನ ವಿಶೇಷ :ನಿತ್ಯ ನಕ್ಷತ್ರ :ಮಖಾ 24|| ಗಳಿಗೆ ಮಹಾ ನಕ್ಷತ್ರ :ಕೃತ್ತಿಕಾ ಋತು :ವಸಂತ ರಾಹುಕಾಲ :1.30-3.00 ಗಂಟೆ ಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.48 ಗಂಟೆ ಸೂರ್ಯೋದಯ :6.06 ಗಂಟೆ

ಮೇಷ

ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಮನೆಯವರ ಸಲಹೆಗೆ ಮನ್ನಣೆ ನೀಡಿ. ಕುಲದೇವತಾ ಪ್ರಾರ್ಥನೆ ಒಳಿತನ್ನುಂಟು ಮಾಡುವುದು.

ವೃಷಭ

ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ನೌಕರಿಗೆ ರಾಜೀನಾಮೆಯಂತಹ ಪರಿಸ್ಥಿತಿ ತಲೆದೋರಬಹುದು. ದುಡುಕದೇ ಧೈರ್ಯವಾಗಿ ಮುನ್ನುಗ್ಗಿ. ಯಶಸ್ಸು ನಿಮ್ಮದಾಗಲಿದೆ.

ಮಿಥುನ

ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಗುರುವಿನ ಆರಾಧನೆಯಿಂದ ಉತ್ತಮ ಫಲ ದೊರೆಯುವುದು.

ಕಟಕ

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು.

ಸಿಂಹ

ಪ್ರೀತಿ, ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ.

ಕನ್ಯಾ

ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ.

ತುಲಾ

ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲೈಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತಾನುಭವ. ಸ್ನೇಹಿತರ ಬಂಧುವರ್ಗದವರ ಅನಿರೀಕ್ಷಿತ ಭೇಟಿಯ ಸಾಧ್ಯತೆ.

ವೃಶ್ಚಿಕ

ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನ ಶೀಲರಿಗೆ ಯಶಸ್ಸಿನ ಗರಿ.

ಧನು

ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಮುದಗೊಳಿಸುವಿರಿ. ನಿಮ್ಮ ನಿರ್ಧಾರಗಳು ಸಮರ್ಪಕವಾಗಿದ್ದು ಬಹುಜನರ ಪ್ರಶಂಸೆಗೆ ಪಾತ್ರವಾಗುವುದು. ಯಶಸ್ಸಿನ ಅಮಲು ಉಚಿತವಲ್ಲ.

ಮಕರ

ಸಂಕೋಚ ಸ್ವಭಾವದಿಂದ ಹೊರ ಬಂದು ಕಾರ್ಯ ಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ತಗಾದೆಯ ಸಾಧ್ಯತೆ.

ಕುಂಭ

ಒಂಟಿತನದಿಂದ ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ. ಜೀವನಕ್ಕೊಂದು ಹೊಸ ತಿರುವು ಬರುವ ನಿರೀಕ್ಷೆ.

ಮೀನ

ನೀವು ಯೋಜಿಸಿದ ಮಹತ್ತರ ಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಉತ್ತಮ ಸಲಹೆ ಸಹಕಾರಗಳು ದೊರೆತು ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಗಣಪತಿಯ ಧ್ಯಾನ ಮಾಡಿ.

ಯಾವ ಕಾಯಿಲೆಗೆ ಯಾವ ಮನೆ ಔಷಧಿ

ಯಾವ ಕಾಯಿಲೆಗೆ ಯಾವ ಮನೆ ಔಷಧಿ : ೧. ಯಾವ ತೊಂದರೆಗೆ ಯಾವ ಮನೆ ಔಷಧಿ ೧.

ಮೊಡವೆ:ಮೊಡವೆ ಆಗಿರುವ ಭಾಗವನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಬೇವಿನ ಎಲೆಗಳ ಜೊತೆಗೆ ಅರಿಶಿನದ ಪುಡಿಯನ್ನು ಸೇರಿಸಿ ನುಣ್ಣಗೆ ಅರಿಯಬೇಕು. ನುಣ್ಣಗೆ ಅರಿದ ಪೇಸ್ಟನ್ನು ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಹಚ್ಚಬೇಕು. ಮಾರನೆಯ ದಿನ ಉತ್ತಮ ಮೈ ಸೋಪನ್ನು ಉಪಯೋಗಿಸಿ ಬಿಸಿ ನೀರಿನಿಂದ ಮುಖವನ್ನು ತೊಳೆದುಕೊಂಡು ಶುಭ್ರವಾದ ಒಣಗಿದ ವಸ್ತ್ರದಿಂದ ಒರೆಸಿಕೊಳ್ಳಬೇಕು. ಮೊಡವೆಗಳಿಂದ ತೊಂದರೆಪಡುತ್ತಿರತಕ್ಕವರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಮತ್ತು ಸಿಹಿ ತಿಂಡಿಯನ್ನು ಅತಿಯಾಗಿ ತಿನ್ನಬಾರದು. ಪ್ರತಿದಿನದ ಊಟದಲ್ಲಿ ಯತೇಚ್ಛವಾಗಿ ಹಸಿರು ಸೊಪ್ಪು, ತರಕಾರಿಗಳು , ಹಣ್ಣು-ಹಂಪಲುಗಳನ್ನು ಸೇವಿಸಬೇಕು.

೨. ಕುರು:
ಸಣ್ಣಪುಟ್ಟ ಕುರುಗಳಿಗೆ-ಲವಂಗಗಳನ್ನು ನೀರಿನೊಂದಿಗೆ ಸೇರಿಸಿ ಅರೆದು, ಪೇಸ್ಟ್‌ ಮಾಡಿಕೊಂಡು ಹಚ್ಚಿದಲ್ಲಿ ಉಪಶಮನ ಉಂಟಾಗುತ್ತದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ಸ್ನಾನದ ನೀರಿನೊಂದಿಗೆ ಮಿಶ್ರಮಾಡಿ ಸ್ನಾನವನ್ನು ಮಾಡುವುದರಿಂದ ಸಣ್ಣಪುಟ್ಟ ಕುರುಗಳು ಏಳುವುದಿಲ್ಲ.

೩. ಬ್ರಾಂಕ್ಯೆಟಿಸ್‌ ಮತ್ತು ಬ್ರಾಂಕೈಲ್‌ ಆಸ್ತಮ: ಬಿಸಿ ಹಾಲಿಗೆ ಒಂದು ಟೀ ಚಮಚದಷ್ಟು ಒಳ್ಳೆಯ ಅರಿಶಿನದ ಪುಡಿಯನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಕುಡಿಯಬೇಕು.

೪ . ನೆಗಡಿ- ಮೂಗು ಮುಚ್ಚಿಕೊಂಡಿದ್ದರೆ ಕೆಂಡದ ಮೇಲೆ ಅರಿಶಿನದ ಪುಡಿಯನ್ನು ಉದುರಿಸಿ, ಮೂಗಿನಿಂದ ವಾಸನೆಯನ್ನು ತೆಗೆದುಕೊಳ್ಳಬೇಕು.

೫. ಮಲಬದ್ಧತೆ:
ಮಲಬದ್ಧತೆ ನಿವಾರಣೆಯಾಗಬೇಕಾದರೆ, ಪ್ರತಿ ದಿನ ನೀವು ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಬೇಕು. ತಾಜಾ ಇರುವ ಹಸಿರು ತರಕಾರಿಗಳು, ಹಣ್ಣು-ಹಂಪಲುಗಳನ್ನು ನಾರು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮಲಗುವ ಮುನ್ನ ಎರಡು ಅಥವಾ ನಾಲ್ಕು ಟೀ ಚಮಚ ಗುಲ್ಕನ್ ತಿಂದು, ದೊಡ್ಡ ಲೋಟದಲ್ಲಿ ಬಿಸಿ ಹಾಲನ್ನು ಕುಡಿಯಬೇಕು.

೬. ಪಾದದ ಆಣಿ:
ಶಸ್ತ್ರವೈದ್ಯರಿಂದ ಪಾದದ ಆಣಿ (ಕಾರ್ನ್ಸ್)ಗಳನ್ನು ತೆಗೆಸಿಬಿಡಬೇಕು. ಅನಂತರ, ರಾತ್ರಿ ಮಲಗುವಾಗ ನಿಂಬೆಹಣ್ಣಿನ ಶರಬತ್ತನ್ನು ಕುಡಿದು, ಅದರ ಸಿಪ್ಪೆಯನ್ನು ಆಣಿಯ ಭಾಗದಲ್ಲಿಟ್ಟು-ಬ್ಯಾಂಡೇಜನ್ನು ಕಟ್ಟಬೇಕು.

೭. ಕೆಮ್ಮು: ತುಳಸಿ ಎಲೆಗಳನ್ನು ಶುದ್ಧವಾದ ನೀರಿನಿಂದ ತೊಳೆದು, ಅನಂತರ, ಆ ಎಲೆಗಳಿಂದ ರಸವನ್ನು ತೆಗೆದು ಅದಕ್ಕೆ ಒಂದೆರಡು ಚಮಚ ಜೇನುತುಪ್ಪವನ್ನು ಸೇರಿಸಿ, ಬೆಳಗ್ಗೆ-ಮಧ್ಯಾಹ್ನ ಮತ್ತು ರಾತ್ರಿ ಕ್ರಮವಾಗಿ ಐದು ದಿವಸಗಳ ಕಾಲ ಸೇವಿಸಿದರೆ, ಕೆಮ್ಮು ಉಪಶಮನವಾಗುತ್ತದೆ.

೮. ಶರೀರ ಬಲಕ್ಕೆ: ಬಾಳೇ ಹಣ್ಣು ರಸಬಾಳೇ ಅಥವಾ ಪಚ್ಚಬಾಳೇ ಅಥವಾ ಯಾಲಕ್ಕಿ ಬಾಳೇ ಹಣ್ಣನ್ನು ಊಟವಾದ ನಂತರ ಪ್ರತಿ ದಿವಸವು ತಪ್ಪದೆ ೪೦ ದಿನಗಳ ಕಾಲ ಸೇವಿಸಿದರೆ ಶರೀರದಲ್ಲಿ ಒಳ್ಳೆಯ ಬಲ ಉಂಟಾಗುತ್ತದೆ.

೯. ಬಾಯಿಯ ದುರ್ವಾಸನೆ: ಪ್ರತಿದಿನ ಭೋಜನವಾದ ನಂತರ ಲವಂಗವನ್ನು ಚಪ್ಪರಿಸುತ್ತಿದ್ದರೆ, ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಉಪ್ಪು ಮತ್ತು ಲವಂಗ ಎರಡನ್ನು ಸೇರಿಸಿ ಚಪ್ಪರಿಸುತ್ತಿದ್ದರೆ ಆಯಾಸ ನಿವಾರಣೆಯಾಗುವುದಲ್ಲದೆ, ಬಾಯಿಯ ದುರ್ವಾಸನೆಯು ನಿವಾರಣೆಯಾಗುತ್ತದೆ.

೧೦. ಕೀಲುನೋವು: ಕೀಲುನೋವು ನಿವಾರಣೆಗೆ, ಕೊಬ್ಬರಿ ಎಣ್ಣೆಯಲ್ಲಿ ಹಿಂಗುವಿನ ಪುಡಿಯನ್ನು ಚೆನ್ನಾಗಿ ಕಲಸಿ, ಕೀಲುನೋವು ಇರುವ ಭಾಗದಲ್ಲಿ ಉಜ್ಜುವುದರಿಂದ ನೋವು ಕಡಿಮೆಯಾಗುತ್ತದೆ.

೧೧. ಸಾಮಾನ್ಯವಾದ ಜಾಂಡೀಸ್‌ ಅಥವಾ ಅರಿಶಿನ ಕಾಮಾಲೆ ಕಣ್ಣುಗಳು ಮತ್ತು ಶರೀರ ಹಳದಿ ಬಣ್ಣಕ್ಕೆ ತಿರುಗುತ್ತದೆ.: ೨೦ ಗ್ರಾಮ್‌ ನಿಂಬೆಹಣ್ಣಿನ ರಸವನ್ನು ಶುದ್ಧವಾದ ನೀರಿನಲ್ಲಿ ಅಥವಾ ಬಿಸಿನೀರಿನಲ್ಲಿ ಕಲಿಸಿ, ಸ್ವಲ್ಪ ಸಕ್ಕರೆಯನ್ನು ಸೇರಿಸಿ ದಿನಕ್ಕೆ ಕನಿಷ್ಠ ಆರು ಬಾರಿಯಾದರೂ ಕುಡಿಯುತ್ತಿದ್ದರೆ, ಜಾಂಡೀಸ್‌ನ ತೊಡಕು ಕಮ್ಮಿಯಾಗುತ್ತದೆ.

೧೨. ಗಂಟಲು ತೊಂದರೆ: ಜೇನುತುಪ್ಪ ಮತ್ತು ನಿಂಬೇಹಣ್ಣಿನ ರಸವನ್ನು ಸಮವಾಗಿ ಸೇರಿಸಿ ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಸೇವಿಸಿದರೆ, ಗಂಟಲಿನ ಕರ್ಕಶ ಧ್ವನಿ ಹೊರಟುಹೋಗುತ್ತದೆ.

೧೩. ಕಫ ಕರಗಲು ಮತ್ತು ಕರುಳಿನ ಕ್ರಿಮಿ ನಾಶಕ್ಕೆ:ಪರಂಗಿ ಹಣ್ಣಿನ ರಸ, ಕರುಳಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ, ಕಫವನ್ನು ಕರಗಿಸುತ್ತದೆ. ಶೀತ ಕಾಲದಲ್ಲಿ ಬಾದಾಮಿ ಹಾಲಿಗೆ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಶರೀರ ಉತ್ತೇಜಕವಾಗಿರುತ್ತದೆ.

೧೪. ಉಳುಕು ನಿವಾರಣೆ ಉಳುಕಿನಿಂದಾಗಿ ತೀವ್ರವಾದ ನೋವು ಮತ್ತು ಉರಿಯೂತವಿರುತ್ತದೆ. ಮೊಟ್ಟ ಮೊದಲು, ತೊಂದರೆಗೆ ಒಳಗಾಗಿರುವ ಭಾಗವನ್ನು ಚಲಿಸಬಾರದು. ಅಡುಗೆ ಉಪ್ಪನ್ನು ಸೇರಿಸಿದ, ಬಿಸಿ ನೀರಿನಲ್ಲಿ ಉಳುಕಿರುವ ಭಾಗವನ್ನು ಸ್ವಲ್ಪ ಹೊತ್ತು ಇರಿಸಿಕೊಳ್ಳುವುದರಿಂದ ನೋವನ್ನು ಕಡಿಮೆ ಮಾಡುತ್ತದೆ. ಉಳುಕು ಇರುವ ಭಾಗಕ್ಕೆ ಆಗಿಂದಾಗ್ಯೆ ಬಿಸಿ ನೀರಿನ ಕಾಪುಟವನ್ನು ಕೊಡುವುದರಿಂದ ಉಪಶಮನ ಉಂಟಾಗುತ್ತದೆ.

೧೫. ಜಾಂಡೀಸ್‌ (ಅರಿಶಿನ ಕಾಮಾಲೆ) ಲಿವರ್ ಮೇಲೆ ಹೆಚ್ಚು ಘನ ಆಹಾರದ ಒತ್ತಡವನ್ನು ಹೇರಬಾರದು. ಕೊಬ್ಬಿನ ಪದಾರ್ಥಗಳಿಂದ ಮುಕ್ತವಾದ ದ್ರವ ಪದಾರ್ಥಗಳನ್ನು ನೀಡಬೇಕು. ಶುದ್ಧವಾದ ಜಾಗದಲ್ಲಿ ಸ್ವಚ್ಛವಾಗಿ ತಯಾರಿಸಿದ ಕಬ್ಬಿನ ರಸವನ್ನು ಕುಡಿಯಲು ಕೊಡಬಹುದು. ಉತ್ತಮವಾದ ಮೊಸರಿಗೆ, ಸಕ್ಕರೆಯನ್ನು ಸೇರಿಸಿ, ಕೊಡುವುದರಿಂದ, ಲಿವರ್ ಗೆ ತಂಪು ಉಂಟಾಗುತ್ತದೆ.

೧೬ . ಮಲಬದ್ಧತೆ ನಿವಾರಣೆಗೆ ಜೇನುತುಪ್ಪ “ಹನಿ ಈಜ್‌ ಎ ಫ್ರೆಂಡ್‌ ಆಫ್‌ ಸ್ಟಮಕ್‌” ಎಂದು ಇಂಗ್ಲಿಷಿನಲ್ಲಿ ಗಾದೆಯಿದೆ. ಜೇನು ಔಷಧಗಳ ಔಷಧವಾಗಿದೆ. ರೋಗಿಗಳಿಗೆ, ನಿಶ್ಚಕ್ತರಿಗೆ, ಆರೋಗ್ಯವಂತರಿಗೆಲ್ಲ ಪುಷ್ಟಿಕರವಾದ ಆಹಾರ ಜೇನುತುಪ್ಪ. ಜೇನುತುಪ್ಪಕ್ಕೆ ಸರಾಗವಾಗಿ, ಮಲ ವಿಸರ್ಜನೆಯನ್ನುಂಟುಮಾಡುವ ಶಕ್ತಿಯಿದೆ. ಆದುದರಿಂದ, ಮಲಬದ್ಧತೆ ಇರತಕ್ಕವರು ಬೆಳಗಿನ ಹೊತ್ತು, ಖಾಲಿ ಹೊಟ್ಟೆಯಲ್ಲಿ ದೊಡ್ಡ ಲೋಟದ ಬಿಸಿನೀರಿಗೆ ಎರಡು ಅಥವಾ ಮೂರು ಟೀ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಒಳ್ಳೆಯದು.

೧೭. ಅಸ್ತಮ ತೊಂದರೆ ಇರತಕ್ಕವರಿಗೆ ಜೇನುತುಪ್ಪ ಅಮೃತ ಸಮಾನ. ಪ್ರತಿ ದಿನ ಎರಡು ಬಾರಿ ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ಕಲಿಸಿ , ಕುಡಿಯುವುದರಿಂದ ಅಸ್ತಮಾ ತೊಂದರೆ ಉಪಶಮನಗೊಳ್ಳುತ್ತದೆ.

೧೮. ಆರೋಗ್ಯಕ್ಕಾಗಿಶುಂಠಿ ಯನ್ನು ಪ್ರತಿ ದಿನ ಆಹಾರದಲ್ಲಿ ಬಳಸುವುದರಿಂದ ಜೀರ್ಣಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಅಜೀರ್ಣ, ಗ್ಯಾಸ್‌ಟ್ರಬಲ್‌ನ್ನು ನಿವಾರಿಸುತ್ತದೆ.

೧೯. ಹೊಟ್ಟೆ ನೋವು ಶುಂಠಿ ರಸಕ್ಕೆ ಜೀರಿಗೆ ಪುಡಿಯನ್ನು ಸೇರಿಸಿ ಪ್ರತಿದಿನ ೨ ರಿಂದ ೩ ಬಾರಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

೨೦. ಕೆಮ್ಮು ಶುಂಠಿ ರಸಕ್ಕೆ ಚಿಟಿಕೆಯಷ್ಟು ಅಡುಗೆ ಉಪ್ಪನ್ನು ಸೇರಿಸಿ, ದಿನ ೩ ಬಾರಿ, ನಾಲ್ಕೈದು ದಿನ ಸೇವಿಸಿದರೆ ಕೆಮ್ಮುಕಡಿಮೆಯಾಗುತ್ತದೆ.

೨೧ . ದದ್ದು ಶುಂಠಿರಸ, ತುಳಸಿರಸ ಮತ್ತು ಅರಿಶಿನಪುಡಿಯನ್ನು ಮಿಶ್ರಮಾಡಿ, ಮೈಗೆ ಹಚ್ಚಿ ಕೊಂಡರೆ ದದ್ದುಗಳು ಕಡಿಮೆಯಾಗುತ್ತವೆ.

೨೨. ಕೆಮ್ಮು ಬಿಸಿನೀರಿಗೆ ಸ್ವಲ್ಪ ನಿಂಬೇಹಣ್ಣಿನ ರಸವನ್ನು ಹಿಂಡಿ ಎರಡು ಟೀ ಚಮಚ ದಷ್ಟು ಜೇನು ತುಪ್ಪವನ್ನು ಅದಕ್ಕೆ ಸೇರಿಸಿ ಪ್ರತಿದಿನ (ಒಂದು ವಾರದ ಕಾಲವಾದರೆ ಸೇವಿಸಬೇಕು ) ಎರಡು ಸಾರಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

೨೩. ಕಣ್ಣುರಿ / ಹೊಟ್ಟೆ ನೋವು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೆ ಮೊದಲು ಎಂಟು ಹತ್ತು ಬಿಳಿ ದಾಸವಾಳದ ಹೂವನ್ನು ಶುದ್ಧವಾದ ನೀರಿನಲ್ಲಿ ತೊಳೆದು ತಿಂದರೆ ಕಣ್ಣುರಿ, ಹೊಟ್ಟೆನೋವು ಬರುವುದಿಲ್ಲ.

೨೪. ಮುಟ್ಟಿನ ಹೊಟ್ಟೆ ನೋವು ಮುಟ್ಟಾದಾಗ ಹೊಟ್ಟೆ ನೋವು ಬಂದರೆ ತಂಪಾದ ಪದಾರ್ಥಗಳಾದ ಮೊಸರನ್ನ ಅಥವಾ ಅವಲಕ್ಕಿ ಮೊಸರು ತಿಂದರೆ ಹೊಟ್ಟೆನೋವು ಕಮ್ಮಿಯಾಗುತ್ತದೆ.

೨೫. ಉಷ್ಣದ ಕೆಮ್ಮು ಉಷ್ಣದ ಕೆಮ್ಮು ಬಂದಾಗ ಹುಳಿ ಇಲ್ಲದ ಮಜ್ಜಿಗೆ ಅನ್ನದ ಜೊತೆಗೆ ಹಸಿ ಈರುಳ್ಳಿಯನ್ನು ತಿಂದರೆ ಕೆಮ್ಮು ಕಡಿಮೆಯಾಗುತ್ತದೆ.

೨೭. ನೆಗಡಿ ನೆಗಡಿ ಇದ್ದಾಗ ಹುರಿಗಡಲೆಯನ್ನು ತಿಂದು, ಬಿಸಿ ಕಾಫಿ ಕುಡಿದರೆ ನೆಗಡಿಯ ತೊಂದರೆ ಸ್ವಲ್ಪ ಉಪಶಮನ.

೨೮. ಮೊಡವೆ ಅರಿಶಿಣವನ್ನು ನಿಂಬೇಹಣ್ಣಿನ ರಸದೊಂದಿಗೆ ಅರೆದು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ಮೊಡವೆಗಳು ಕಡಿಮೆಯಾಗಲು ಸಹಾಯಕವಾಗುತ್ತದೆ.

೨೯. ತಲೆಕೂದಲಿನ ಆರೋಗ್ಯಕ್ಕೆ ಕೊಬ್ಬರಿ ಎಣ್ಣೆಗೆ , ಮೆಂತ್ಯೆಯನ್ನು ಹಾಕಿಟ್ಟು ತಲೆಗೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.

೩೦. ಸಾಮಾನ್ಯ ನಿಶ್ಯಕ್ತಿ ದಿನ ಬಿಟ್ಟುದಿನ, ಹಾಲಿನ ಜೊತೆಗೆ ಸ್ವಲ್ಪ ಕ್ಯಾರೆಟ್‌ ಜ್ಯೂಸನ್ನು ಸೇರಿಸಿ, ಸೇವಿಸುವುದರಿಂದ, ಶರೀರ, ಮಿದುಳು, ನರಗಳು ಮತ್ತು ಕಣ್ಣಿನ ದೃಷ್ಟಿಗೆ ಶಕ್ತಿ ಉಂಟಾಗುತ್ತದೆ.

೩೧ . ಸಂಧಿವಾತ (ರುಮಾಟಿಸಮ್‌) ಜೇನು ತುಪ್ಪದೊಡನೆ, ಬೆಳ್ಳುಳ್ಳಿ ರಸವನ್ನು ಸೇರಿಸಿ ಪ್ರತಿದಿನ ಸೇವಿಸುವುದರಿಮದ ಸಂಧಿವಾತ ಕಡಿಮೆಯಾಗಲು ಸಹಾಯಕವಾಗುತ್ತದೆ. ಬಿಸಿಮಾಡಿದ ಸ್ವಲ್ಪ ಕೊಬ್ಬರಿ ಎಣ್ಣೆಗೆ, ಬೆಳ್ಳುಳ್ಳಿ ರಸವನ್ನು ಸೇರಿಸಿ, ಸಂಧಿವಾತ ವಿರುವ ಜಾಗದಲ್ಲಿ ತಿಕ್ಕುವುದರಿಂದ ನೋವು ಕಡಿಮೆಯಾಗುತ್ತದೆ.

೩೨. ಕುರು ಮತ್ತು ಮೊಡವೆ ಕುರು ಮತ್ತು ಮೊಡವೆಗಳಿಗೆ ಕ್ರಮವಾಗಿ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ನಿವಾರಣೆಯಾಗಲು ನೆರವಾಗುತ್ತದೆ.

೩೩. ಅರ್ಧ ತಲೆನೋವು ಬೆಳ್ಳುಳ್ಳಿಯನ್ನು ಜಜ್ಜಿ ಅರ್ಧ ತಲೆನೋವು ಇರುವ ಜಾಗದಲ್ಲಿ ತಿಕ್ಕುವುದರಿಂದ ನೋವು ಕಡಿಮೆಯಾಗುತ್ತದೆ. ವಿ.ಸೂ:- ತಲೆನೋವು ಪದೇ ಪದೇ ಬರುತ್ತಿದ್ದರೆ ವೈದ್ಯರಲ್ಲಿ ತೋರಿಸುವುದನ್ನು ಮರೆಯ ಬಾರದು.

೩೪. ಜೀರ್ಣವಾಗಲು ಸ್ವಲ್ಪಜೀರಿಗೆಯನ್ನು ಚೆನ್ನಾಗಿ ಪುಡಿಮಾಡಿ ಬೆಲ್ಲ ಕಲಸಿದ ನೀರಿಗೆ ಹಾಕಿ ಊಟವಾದ ನಂತರ ಕುಡಿದರೆ ಆಹಾರ ಜೀರ್ಣವಾಗುವುದಲ್ಲದೆ, ಹೂಸನ್ನು ಹೊರಹಾಕಿ, ಅರುಚಿಯನ್ನು ನಿವಾರಿಸುತ್ತದೆ.

೩೫. ಎದೆ ಹಾಲು ಉತ್ಪತ್ತಿಗೆ ತಾಯಂದಿರಲ್ಲಿ ಸಾಕಷ್ಟು ಎದೆಹಾಲು ಉತ್ಪತ್ತಿಯಾಗದಿದ್ದರೆ ಜೀರಿಗೆಯನ್ನು ಚೆನ್ನಾಗಿ ಪುಡಿಮಾಡಿ ಸಿಹಿಹಾಲಿಗೆ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಸೇವಿಸುತ್ತಿದ್ದರೆ ಹೆಚ್ಚಾಗಿ ಎದೆ ಹಾಲು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.

೩೬. ಹುಳಿ ತೇಗು ಕಡಿಮೆಯಾಗಲು ಶುಂಠಿ, ಜೀರಿಗೆ ಮತ್ತು ಬೇವಿನಸೊಪ್ಪಿನ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಅರಿದು, ಪ್ರಾತಃಕಾಲ ಸಿಹಿನೀರಿನ ಜೊತೆ ಸ್ವಲ್ಪ ದಿವಸ ಸೇವಿಸಿದರೆ, ಹುಳಿ ತೇಗು ಕಡಿಮೆಯಾಗುತ್ತದೆ.

೩೭. ಮಲಬದ್ಧತೆ ನಿವಾರಣೆಗೆ ಪ್ರತಿ ದಿನ ರಾತ್ರಿ ಊಟ ಮಾಡಿದನಂತರ ಜೇನುತುಪ್ಪ (೨ ರಿಂದ ೪ ಟೀ ಚಮಚೆಯಷ್ಟು ಮಾತ್ರ) ದೊಂದಿಗೆ ಕರಿಬೇವನ್ನು ಸೇವಿಸಿದರೆ, ಸಲೀಸಾಗಿ ಮಲವಿಸರ್ಜನೆಯಾಗುತ್ತದೆ.

೩೮. ಕೀಲುನೋವು ನಿವಾರಣೆಗೆ ಶರೀರದಲ್ಲಿ ಯೂರಿಕ್‌ ಆಮ್ಲ ಹೆಚ್ಚಾಗಿ ಉಂಟಾಗುವ ಕೀಲುನೋವಿಗೆ ಸೌತೆಕಾಯಿ ಹಾಗೂ ಕ್ಯಾರೆಟ್‌ ರಸ ಎರಡನ್ನು ಮಿಶ್ರ ಮಾಡಿ ಕೆಲವು ದಿನ ಸೇವಿಸಿದರೆ, ಕೀಲುನೋವು ಕಡಿಮೆಯಾಗುತ್ತದೆ.

೩೯. ಕಂಠಸ್ವರ ಚೆನ್ನಾಗಿರಲು ಆಗಿಂದಾಗ್ಗೆ ದಾಳಿಂಬೆ ರಸವನ್ನು ಸೇವಿಸುವುದರಿಂದ ಕಂಠಸ್ವರ ಚೆನ್ನಾಗಿರುತ್ತದೆ.

೪೦. ಮೂತ್ರ ಕೋಶದಲ್ಲಿನ ಕಲ್ಲು ಕರಗಲು ಮೂಲಂಗಿ ರಸವನ್ನು ಊಟವಾದ ನಂತರ ಪ್ರತಿ ದಿನ ಸೇವಿಸುತ್ತಿದದರೆ, ಮೂತ್ರ ಕೋಶದಲ್ಲಿನ ಕಲ್ಲು ಕರಗಲು ಸಹಾಯ ಮಾಡುತ್ತದೆ.

೪೧. ಚೆನ್ನಾಗಿ ನಿದ್ರೆ ಬರಲು ಪ್ರತಿ ದಿನ ಬೆಳಿಗ್ಗೆ ಉಪಾಹಾರವನ್ನು ಸೇವಿಸಿದ ನಂತರ, ರಾತ್ರಿ ಊಟ ಮಾಡಿದ ನಂತರ ನಿಂಬೆಹಣ್ಣಿನ ಶರಬತ್ತನ್ನು ಸೇವಿಸುವುದರಿಂದ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ. ಅಥವಾ, ರಾತ್ರಿ ಊಟ ಮಾಡಿದನಂತರ ಗಸಗಸೆ ಪಾಯಸವನ್ನು ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಅಥವಾ, ಬಕೆಟ್‌ನಲ್ಲಿ ಬಿಸಿನೀರು ಹಾಕಿ ೧೫ ನಿಮಿಷಗಳ ಕಾಲ ಆ ನೀರಿನಲ್ಲಿ ಪಾದಗಳನ್ನು ಇಟ್ಟುಕೊಂಡು, ಅನಂತರ ಟವೆಲ್‌ನಲ್ಲಿ ಒರೆಸಿಕೊಂಡು, ವಿಶ್ರಾಂತಿ ಪಡೆದರೆ ಚೆನ್ನಾಗಿ ನಿದ್ರೆ ಬರುತ್ತದೆ.

೪೨. ಮಕ್ಕಳಲ್ಲಿ ಅತಿಸಾರ ಭೇದಿಯನ್ನು ನಿಯಂತ್ರಿಸಲು ಬೇಳೆಕಟ್ಟು, ಅನ್ನದ ಗಂಜಿ, ಸಿಹಿ ಗಂಜಿ, ಮಜ್ಜಿಗೆ, ಲಸ್ಸಿ (ಸಿಹಿ ಮಜ್ಜಿಗೆ) ಮೊದಲಾದ ಮನೆಯಲ್ಲೇ ದೊರೆಯಬಹುದಾದ ಪಾನೀಯಗಳಲ್ಲಿ ಯಾವುದಾದರು ಒಂದನ್ನು ಮಕ್ಕಳಲ್ಲಿ ಭೇದಿಯಾಗುತ್ತಿದ್ದರೆ, ಪ್ರತಿ ಅರ್ಧ ಗಂಟೆ ಗೊಮ್ಮೆ ಕೊಡುತ್ತಿದ್ದರೆ, ಮಕ್ಕಳಲ್ಲಿ ಸುಸ್ತು ಉಂಟಾಗುವುದಿಲ್ಲ, ನಿಶ್ಚಕ್ತಿ ಉಂಟಾಗುವುದಿಲ್ಲ. ಅಲ್ಲದೆ, ಭೇದಿಯು ನಿಯಂತ್ರಣಕ್ಕೆ ಬರುತ್ತದೆ.

೪೩. ಸಾಧಾರಣವಾದ ಬಾಯಿಹುಣ್ಣು ನಿವಾರಣೆಗೆ ಹುಳಿ ಮಜ್ಜಿಗೆಯನ್ನು ಪ್ರತಿದಿನ ನಾಲ್ಕೈದು ಬಾರಿ ಕನಿಷ್ಠ ೭ ದಿನಗಳ ಕಾಲ, ಬಾಯಿ ಮುಕ್ಕಳಿಸಿದರೆ, ಸಾಧಾರಣವಾದ ಬಾಯಿಹುಣ್ಣು ನಿವಾರಣೆಯಾಗುತ್ತದೆ.

೪೪. ಮೂತ್ರ ಪಿಂಡದಲ್ಲಿ ಕಲ್ಲು: ವಿಟಮಿನ್‌ ಬಿ೬ರ ಪಾತ್ರ: ಮೂತ್ರಪಿಂಡದಲ್ಲಿ ಕಲ್ಲು ರೂಪಗೊಳ್ಳುವುದನ್ನು ತಡೆಗಟ್ಟಲು, ಆಕ್ಸಲಿಕ್‌ ಆಸೀಡ್‌ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಲ್ಲದೆ, ಆಕ್ಸಲಿಕ್‌ ಆಸಿಡ್‌ ಇರುವ ಟೀ, ಚಾಕೋಲೆಟ್‌, ಬೀಟ್‌ರೂಟ್‌, ಟೊಮ್ಯಾಟೊ ಮೊದಲಾದುವನ್ನು ಸೇವಿಸಬಾರದು. ವಿಟಮಿನ್‌ ಬಿ6 ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ವೈದ್ಯರ ಸಲಹೆಯ ಮೇರೆಗೆ ವಿಟಮಿನ್‌ ಬಿ6 ರ ಮಾತ್ರೆಗಳನ್ನು ಸೇವಿಸಬಹುದು.

೪೫. ಚಟುವಟಿಕೆ ಮತ್ತು ಮೂತ್ರ ಪಿಂಡದಲ್ಲಿ ಕಲ್ಲು ಚಟುವಟಿಕೆಯಿಂದ ಇರದ ವ್ಯಕ್ತಿಗಳಲ್ಲಿ ರಕ್ತದಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಸಂಗ್ರಹಕೊಳ್ಳುತ್ತದೆಂದು ಡಾ|| ನೀಬರ್ಗ್ ತಿಳಿಸಿರುತ್ತಾನೆ. ಚಟುವಟಿಕೆಯಿಂದಾಗಿ, ಕ್ಯಾಲ್ಸಿಯಂ (ಸುಣ್ಣದಂಶ) ಮೂಳೆಗಳಿಗೆ ಹಿಂತಿರುಗಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಕ್ಯಾಲ್ಸಿಯಂ ಕಲ್ಲುಗಳು ರೂಪಗೊಂಡಿದ್ದರೆ, ಪ್ರತಿ ದಿನ ಕುಳಿತಲ್ಲೇ ಕೂಡದೆ ವಾಕ್‌ ಮಾಡಿ, ಸ್ವಲ್ಪ ಹೊತ್ತು ಲಘು ವ್ಯಾಯಾಮವನ್ನು ಮಾಡಿರಿ. ದ್ವಿಚಕ್ರ ವಾಹನದಲ್ಲಿ(Cycling) ಓಡಾಡಿರಿ. ಚಟುವಟಿಕೆ ಕೂಡ ಶರೀರಕ್ಕೆ ಸೂಕ್ತವಾದ ಚಿಕಿತ್ಸೆಯಾಗಿರುತ್ತದೆ.

೪೬. ಸಾಧಾರಣವಾದ ಜ್ವರ ನಿವಾರಣೆಗೆ ಸಾಧಾರಣವಾದ ಜ್ವರ ಕಡಿಮೆಯಾಗಲು, ನಿಂಬೇಹಣ್ಣಿನ ರಸವನ್ನು ಸಿಹಿ ನೀರಿನಲ್ಲಿ ಸಮಪ್ರಮಾಣದಲ್ಲಿ ಸೇರಿಸಿ, ಪ್ರತಿ ದಿನ ೩ ಬಾರಿ ನಾಲ್ಕೈದು ದಿನ ಸೇವಿಸಿದರೆ ಸಾಧಾರಣವಾದ ಜ್ವರ ನಿವಾರಣೆಯಾಗುತ್ತದೆ.

೪೭. ಮೂತ್ರ ಪಿಂಡದಲ್ಲಿ ಕಲ್ಲು ಕರಗಲು ಬಾಳೇದಿಂಡಿನ ರಸವನ್ನು ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಒಂದು ಲೋಟದಷ್ಟು ಒಂದು ತಿಂಗಳ ಕಾಲ ಸೇವಿಸಿರಿ. ಪ್ರತಿ ದಿನ ೩ ರಿಂದ ೪ ಲೀಟರ್ಗೂ ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಿರಿ. ಬೇಸಿಗೆ ಕಾಲದಲ್ಲಿ ಯತೇಚ್ಛವಾಗಿ ನೀರನ್ನು ಕುಡಿಯಿರಿ.

೪೮. ಮೂತ್ರಪಿಂಡದಲ್ಲಿ ಕಲ್ಲುಗಳು ರೂಪಗೊಳ್ಳುವುದನ್ನು ತಡೆಗಟ್ಟಲು ನಿಮ್ಮಲ್ಲಿ ಯಾವ ವಿಧವಾದ ಕಲ್ಲುರೂಪಗೊಂಡಿದ್ದರೂ, ವಿಟಮಿನ್‌ ‘ಎ’ ಸೇವನೆ ಅಗತ್ಯ. ಏಕೆಂದರೆ, ಇದರಿಂದ ಮೂತ್ರದ್ವಾರದ ಆಕಾರ ಚೆನ್ನಾಗಿರಲು ಸಹಾಯಕವಾಗುತ್ತದೆ. ಅಲ್ಲದೆ, ವಿಟಮಿನ್‌ ‘ಎ’ ಯಿಂದ ಭವಿಷ್ಯತ್ತಿನಲ್ಲಿ ಕಲ್ಲುಗಳು ರೂಪಗೊಳ್ಳುವುದು ತಡೆಗಟ್ಟಲ್ಪಡುತ್ತದೆ. ಆದುದರಿಂದ, ವಿಟಮಿನ್‌ ‘ಎ’ ಹೆಚ್ಚಾಗಿರುವ ಪರಂಗಿ ಹಣ್ಣು, ಮಾವಿನ ಹಣ್ಣು, ಕ್ಯಾರೆಟ್ಟನ್ನು ಸೇವಿಸುತ್ತಿರಬೇಕು. ಆದರೆ, ವಿಟಮಿನ್‌ ಎ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆಯದೆ ಸೇವಿಸಬಾರದು.

೪೯. ಬೆನ್ನು ನೋವು ನಿವಾರಣೆಗೆ ಐಸ್‌ ಮಸಾಜ್‌ ಬೆನ್ನಿನ ಯಾವ ಭಾಗದಲ್ಲಿ ನೋವಿದೆಯೋ, ಆ ಭಾಗದಲ್ಲಿ ಐಸ್‌ನಿಂದ ೭ ರಿಂದ ೮ ನಿಮಿಷಗಳ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಈ ಐಸ್‌ ಮಸಾಜ್‌ನ್ನು ೨ ರಿಂದ ೩ ದಿನಗಳ ಕಾಲ ಮಾಡಬೇಕು. ವಿ.ಸೂ: ಮೂಳೆ ಮುರಿದಿರುವ ಭಾಗದಲ್ಲಿ ಯಾವುದೇ ಕಾರಣಕ್ಕೂ ಮಸಾಜ್‌ ಮಾಡಬೇಡಿರಿ. ರೋಗಿಗೆ ತೊಂದರೆಯಾಗುತ್ತದೆ.

೫೦. ಬಿಸಿ ಕಾಪುಟ ಮತ್ತು ಐಸ್‌ ಮಸಾಜ್‌ ಬೆನ್ನಿನ ಯಾವ ಭಾಗದಲ್ಲಿ ನೋವಿದೆಯೋ ಆ ಭಾಗದಲ್ಲಿ ಬಿಸಿ ಕಾಪುಟ ಅಥವಾ ಉಪ್ಪಿನ ಕಾಪುಟವನ್ನು ಕೊಟ್ಟನಂತರ, ಐಸ್‌ನಿಂದ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

೫೧. ಬಿಕ್ಕಳಿಕೆ ನಿವಾರಣೆಗೆ ದೀರ್ಘವಾದ ಉಸಿರನ್ನು ಎಳೆದುಕೊಂಡು, ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಉಸಿರನ್ನು ಹಾಗೇ ಇರಿಸಿಕೊಳ್ಳಲು ಪ್ರಯತ್ನಿಸಿರಿ. ತಣ್ಣೀರನ್ನು ಕುಡಿಯಿರಿ ಅಥವಾ ತಣ್ಣೀರಿನಿಂದ ಕೆಲವು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿರಿ.

೫೨. ವಮನವನ್ನು ತಡೆಗಟ್ಟಿಕೊಳ್ಳಲು ಲವಂಗ ಅಥವಾ ಏಲಕ್ಕಿಯನ್ನು ಸ್ವಲ್ಪ ಹೊತ್ತು ಚೀಪಿರಿ. ಬಸ್‌ ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಮನ ಪ್ರವೃತ್ತಿ ಉಂಟಾದರೆ, ಅರ್ಧ ಹೋಳು ನಿಂಬೆಹಣ್ಣಿಗೆ ಸ್ವಲ್ಪ ಅಡಿಗೆ ಉಪ್ಪನ್ನು ಹಾಕಿಕೊಂಡು ನೆಕ್ಕಿರಿ.

೫೩. ಕರುಳು ನುಳಿತ ಅಥವಾ ಹೊಟ್ಟೆನೋವು ನಿವಾರಣೆಗೆ ತಾಜಾ ಈರುಳ್ಳಿ ಜೊತೆಗೆ ಸ್ವಲ್ಪ ಅಡುಗೆ ಉಪ್ಪನ್ನು ಸೇರಿಸಿ ತಿಂದರೆ ಕರುಳಿನ ನುಲಿತ ಅಥವಾ ಹೊಟ್ಟೆನೋವು ಕಡಿಮೆಯಾಗುತ್ತದೆ.

೫೪. ಪಾದಗಳ ಬಿರುಕು ನಿವಾರಣೆಗೆ ಒಂದು ಟೀ ಚಮಚ ಕ್ಯಾಸ್ಟರ್ ಆಯಿಲ್‌ಗೆ, ಒಂದು ಟೀ ಚಮಚೆಯಷ್ಟು ಅರಿಶಿನದ ಪುಡಿಯನ್ನು ಮಿಶ್ರಮಾಡಿ, ಪಾದದ ಬಿರುಕಿನ ಜಾಗದಲ್ಲಿ ಹಚ್ಚಿ, ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಇದನ್ನು ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಕೆಲವು ದಿನಗಳ ಕಾಲ ಮಾಡಬೇಕು.

೫೬. ಬೇಸಿಗೆ ಕಾಲದಲ್ಲಿ ಉಂಟಾಗುವ ಮೈತುರಿಕೆ ಅಥವಾ ನವೆಯ ನಿವಾರಣೆಗೆ ಬಿಸಿಲಿನ ಬೇಗೆಯಿಂದ ತುರಿಕೆ ಅಥವಾ ನವೆಯಿದ್ದರೆ, ಇಡೀ ಶರೀರವನ್ನು ಮೊಸರಿನಿಂದ ಉಜ್ಜಿ ಇಪ್ಪತ್ತು ನಿಮಿಷಗಳ ನಂತರ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿರಿ. ಇದನ್ನು ಕೆಲವು ದಿನಗಳ ಕಾಲ ಪುನರಾವರ್ತನೆ ಮಾಡಬೇಕು.

೫೬. ಸ್ಥಳೀಯ ಉರಿಯೂತ, ಜ್ವರ ಮತ್ತು ಚರ್ಮದ ತೊಂದರೆಗಳ ನಿವಾರಣೆಗೆ ಶ್ರೀಗಂಧವನ್ನು ನೀರಿನೊಂದಿಗೆ ಅರಿದು (ತೇಯ್ದು) ಮೈಯಲ್ಲಿ ಉರಿಯೂತವಿರುವ ಜಾಗಕ್ಕೆ, ಕೆಲವು ದಿವಸ ಹಚ್ಚುತ್ತಾ ಬಂದರೆ ಉರಿಯೂತ ಕಡಿಮೆಯಾಗುತ್ತದೆ. ಸಾಧಾರಣ ಜ್ವರವಿದ್ದಾಗ ಶ್ರೀಗಂಧವನ್ನು ನೀರಿನೊಂದಿಗೆ ಅರೆದು (ತೇಯ್ದು) ಹಣೆಗೆ ಹಚ್ಚಿದರೆ, ಜ್ವರ ಕಡಿಮೆಯಾಗಲು ಸಹಾಯಕವಾಗುತ್ತದೆ. ಮೈ ಚರ್ಮದಲ್ಲಿ (ನವೆ-ತುರಿಕೆ) ತೊಂದರೆ ಇರುವ ಜಾಗದಲ್ಲಿ ಶ್ರೀಗಂಧವನ್ನು ನೀರಿನೊಂದಿಗೆ ಅರೆದು, ಹಚ್ಚುತ್ತಾ ಬಂದರೆ ತೊಂದರೆ ಕಡಿಮೆಯಾಗುತ್ತದೆ.

೫೭. ಅರ್ಧ ತಲೆನೋವು ನಿವಾರಣೆಗೆ ಸಬ್ಬಸಿಗೆ ಸೊಪ್ಪಿನ ಜ್ಯೂಸ್‌ ಅರ್ಧ ತಲೆನೋವು ಇರತಕ್ಕವರು, ಬೆಳಗ್ಗೆ ಉಪಾಹಾರದ ನಂತರ, ರಾತ್ರಿ ಊಟ ಮಾಡಿದ ನಂತರ, ಸಬ್ಬಸಿಗೆ ಸೊಪ್ಪಿನ ಜ್ಯೂಸ್‌ನ್ನು ಪ್ರತಿ ದಿನ ೨ ಲೋಟದಷ್ಟು ಕುಡಿಯುವುದರಿಂದ ನಿವಾರಣೆಯಾಗುತ್ತದೆ (ಜ್ಯೂಸನ್ನು ಕೆಲವು ದಿನಗಳು ಕುಡಿಯಬೇಕು).

೫೮. ಲೈಂಗಿಕ ನಿಶ್ಯಕ್ತಿ, ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ, ಮೂತ್ರಪಿಂಡ, ಲಿವರ್ ಮತ್ತು ಪ್ರಾಸ್ಟೇಟ್‌ ತೊಂದರೆಯ ನಿವಾರಣೆಗೆ ಬೀಟ್‌ರೂಟ್‌ ರಸದ ಜೊತೆಗೆ, ಕ್ಯಾರೆಟ್‌ ಮತ್ತು ಸೌತೆಕಾಯಿ ರಸವನ್ನು ಮಿಶ್ರ ಮಾಡಿ, ಬೆಳಗ್ಗೆ ಟಿಫನ್‌ನಂತರ, ರಾತ್ರಿ ಭೋಜನದ ನಂತರ ಒಂದೊಂದು ಲೋಟದಷ್ಟು ಕುಡಿಯುವುದರಿಂದ ಲೈಂಗಿಕ ನಿಶ್ಶಕ್ತಿ ನಿವಾರಣೆಯಾಗುತ್ತದೆ. ಅಲ್ಲದೆ, ಮೂತ್ರ ಪಿಂಡದ ಕಲ್ಲು ಕರಗಲು ಸಹಾಯ ಮಾಡುತ್ತದೆ. ಮೂತ್ರಪಿಂಡ, ಲಿವರ್ ಮತ್ತು ಪ್ರಾಸ್ಟೇಟ್‌ ತೊಂದರೆಗಳ ನಿವಾರಣೆಗೂ ಸಹಾಯ ಮಾಡುತ್ತದೆ.

೫೯. ಬೇಗನೆ ವಯಸ್ಸಾಗುವುದನ್ನು ತಡೆಗಟ್ಟಲು ಪರಂಗಿ ಹಣ್ಣಿನ ಜ್ಯೂಸ್‌ ಅನೇಕ ತಜ್ಞರ ಪ್ರಕಾರ ಪರಂಗಿ ಹಣ್ಣಿನಲ್ಲಿ ಪ್ರೊಟಿಯೋಲಿಟಿಕಂ ಎಂಜೈಮ್‌ಗಳು ಯತೇಚ್ಛವಾಗಿರುವುದರಿಂದ, ಪಾಪೈನ್‌ ಎಂಬ ಮುಖ್ಯವಾದ ಎಂಜೈಮ್‌ ಇರುವುದರಿಂದ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಪರಂಗಿ ಹಣ್ಣಿನಲ್ಲಿ ವಿಟಮಿನ್‌ ಎ ಮತ್ತು ಸಿ ಯತೇಚ್ಛವಾಗಿದೆ. ಪ್ರತಿ ದಿನ ಪರಂಗಿ ಹಣ್ಣಿನ ಹೋಳನ್ನಾಗಲಿ ಅಥವಾ ಪರಂಗಿ ಹಣ್ಣಿನ ಜ್ಯೂಸನ್ನಾಗಲಿ ಕುಡಿದರೆ, ಬೇಗನೆ ವಯಸ್ಸಾಗುವುದನ್ನು ತಡೆಗಟ್ಟುತ್ತದೆಂದು, ಒಳ್ಳೆಯ ಆರೋಗ್ಯ ಉಂಟಾಗಲು ಸಹಾಯ ಮಾಡುತ್ತದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

೬೦. ಕೀಲುನೋವು ಕಡಿಮೆಯಾಗಲು ಕೀಲುನೋವು ಇರತಕ್ಕವರು ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಹರಳೆಣ್ಣೆಯನ್ನು ಮಿಶ್ರಮಾಡಿ, ನೋವು ಇರುವ ಜಾಗದಲ್ಲಿ ತಿಕ್ಕಿದರೆ, ನೋವು ಕಡಿಮೆಯಾಗುತ್ತದೆ.

೬೧. ಲೈಂಗಿಕ ಸಾಮರ್ಥ್ಯದ ವೃದ್ಧಿಗೆ ಕೆಲವು ಖರ್ಜೂರದ ಹಣ್ಣುಗಳನ್ನು ಒಂದು ರಾತ್ರಿ ಮೇಕೆ ಹಾಲಿನಲ್ಲಿ ನೆನಸಿಟ್ಟು ಮಾರನೆಯ ದಿನ ಬೆಳಿಗ್ಗೆ ಆ ಖರ್ಜೂರದ ಹಣ್ಣುಗಳನ್ನು ಮೆತ್ತಗೆ ಅರೆದು, ಅದೇ ಹಾಲಿನಲ್ಲಿ ಕಲೆಸಿ. ಪ್ರತಿದಿನ ಸೇವಿಸುತ್ತಿದ್ದರೆ ದೇಹಕ್ಕೆ ಅಗತ್ಯವಾದ ಕಬ್ಬಿಣ, ಕ್ಯಾಲ್ಸಿಯಂ (ಸುಣ್ಣದಂಶ), ಫಾಸ್ಟರಸ್‌ ಲಭ್ಯವಾಗುತ್ತದೆ, ಆರೋಗ್ಯವು ಸುಧಾರಿಸುತ್ತದೆ. ಲೈಂಗಿಕ ಅಥವಾ ಕಾಮ ಸಾಮರ್ಥ್ಯವು ವೃದ್ಧಿಗೊಳ್ಳುತ್ತದೆ.

೬೨. ಹೈಪರ್ ಅಸಿಡಿಟಿ ನಿವಾರಣೆಗೆ ಹೈಪರ್ ಆಸಿಡಿಟಿಯಿಂದ ತೊಂದರೆಪಡುತ್ತಿರುವವರು, ಬಾಳೆಹಣ್ಣನ್ನು ಹಾಲಿನಲ್ಲಿ ಕಲೆಸಿ ಪ್ರತಿ ದಿನ ೨ ರಿಂದ ೩ ಬಾರಿ ಸೇವಿಸಿದರೆ ಹೈಪರ್ ಆಸಿಡಿಟಿ ಕಡಿಮೆಯಾಗುತ್ತದೆ.

೬೩. ನೆಗಡಿ ಶೀತದ ನಿವಾರಣೆಗೆ ಬಿಲ್ವಪತ್ರೆ (ಎಲೆಗಳ ರಸ) ರಸವನ್ನು ಜೇನುತುಪ್ಪದೊಡನೆ ಸೇರಿಸಿ ಪ್ರತಿದಿನ ೨-೩ ಸಾರಿ ಒಂದು ವಾರದ ಕಾಲ ಸೇವಿಸಿ, ವಿಶ್ರಾಂತಿ ಪಡೆದರೆ ನೆಗಡಿ ಶೀತ ನಿವಾರಣೆಯಾಗುತ್ತದೆ.

೬೪. ಕೆಮ್ಮು-ಆಯಾಸ ನಿವಾರಣೆಗೆ ಕೆಮ್ಮು-ಆಯಾಸ ಇರತಕ್ಕವರು, ಕಿತ್ತಳೆ ಹಣ್ಣಿನ ರಸಕ್ಕೆ ಒಂದು ಚಿಟಿಕೆ ಅಡುಗೆ ಉಪ್ಪು ಎರಡು ಟೀ ಚಮಚೆಯಷ್ಟು ಜೇನುತುಪ್ಪವನ್ನು ಮಿಶ್ರಮಾಡಿ ಪ್ರತಿ ದಿನ ೨ ರಿಂದ ೩ ಸಾರಿ ಒಂದು ವಾರದ ಕಾಲ ಸೇವಿಸದರೆ, ಸಾಧಾರಣವಾದ ಕೆಮ್ಮು ಹಾಗೂ ಆಯಾಸ ನಿವಾರಣೆಯಾಗುತ್ತದೆ.

೬೫. ಮಾನಸಿಕ ಪ್ರಶಾಂತತೆಗೆ ಮಾವಿನ ಹಣ್ಣಿನ ರಸದ ಜೊತೆಗೆ ಸ್ವಲ್ಪ ಜೇನುತುಪ್ಪ ಸ್ವಲ್ಪ ಹಾಲನ್ನು ಮಿಶ್ರಮಾಡಿ, ಪ್ರತಿದಿನ ಸೇವಿಸುತ್ತಿದ್ದರೆ ಮಾನಸಿಕ ಪ್ರಶಾಂತತೆ ಉಂಟಾಗುವುದಲ್ಲದೆ, ನಿಶ್ಶಕ್ತಿಯೂ ನಿವಾರಣೆಯಾಗುತ್ತದೆ.

೬೬. ಮೂತ್ರಪಿಂಡದಲ್ಲಿ ಕಲ್ಲುಗಳ ನಿವಾರಣೆಗೆ ಮೂತ್ರಪಿಂಡದಲ್ಲಿ ಕಲ್ಲು(ಗಳು) ಇರುವವರು ಒಂದು ಲೋಟ ಮಾವಿನ ಹಣ್ಣಿನ ರಸಕ್ಕೆ ಅರ್ಧ ಲೋಟದಷ್ಟು ಕ್ಯಾರೆಟ್‌ ರಸವನ್ನು ಮಿಶ್ರಮಾಡಿ ಪ್ರತಿ ದಿನ ೨ ರಿಂದ ೩ ಸಾರಿ ಮೂರು ತಿಂಗಳ ಕಾಲ ಸೇವಿಸಿದರೆ ಮೂತ್ರ ಪಿಂಡದಲ್ಲಿರುವ ಸಣ್ಣಗಾತ್ರದ ಕಲ್ಲುಗಳು ಕರಗಲು ಸಹಾಯಕವಾಗುತ್ತದೆ.

೬೭. ಪಿತ್ತ ಗಂದೆಗಳ ನಿವಾರಣೆಗಾಗಿ ಪಿತ್ತದಿಂದ ಗಂದೆಗಳಾಗಿ ಮೈ ಕಡಿತವಿದ್ದರೆ ಹಾಗಲಕಾಯಿ ಎಲೆಗಳನ್ನು ಮೊಸರಿನಲ್ಲಿ ಅರೆದು, ಅದನ್ನು ಇಡೀ ಶರೀರಕ್ಕೆ ಲೇಪಿಸಿಕೊಂಡು ಒಂದು ಗಂಟೆಯ ನಂತರ ಸ್ನಾನವನ್ನು ಮಾಡಿದರೆ ಪಿತ್ತದ ಗಂದೆಗಳು ನಿವಾರಣೆಯಾಗುತ್ತದೆ.

೬೮. ಗಾಯದಲ್ಲಿ ಕೀವು ಉಂಟಾಗುವುದನ್ನು ತಡೆಗಟ್ಟಲು ಸ್ವಲ್ಪ ವೀಳೆಯದೆಲೆ ರಸವನ್ನು ಗಾಯದ ಮೇಲೆ ಲೇಪಿಸುವುದರಿಂದ, ಗಾಯದಲ್ಲಿ ಕೀವು ಉಂಟಾಗುವುದನ್ನು ತಡೆಗಟ್ಟಿಕೊಳ್ಳಬಹುದು.

೬೯. ಬಾಯಿಯ ದುರ್ವಾಸನೆ ಕಡಿಮೆಯಾಗಲು ೧. ಊಟ ಮಾಡಿದ ನಂತರ ಲವಂಗವನ್ನು ಚಪ್ಪರಿಸುತ್ತಿದ್ದರೆ, ಬಾಯಿ ವಾಸನೆ ಕಡಿಮೆಯಾಗುತ್ತದೆ. ಅಥವಾ, ೨. ಅಡುಗೆ ಉಪ್ಪು ಮತ್ತು ಲವಂಗ ಎರಡನ್ನು ಚಪ್ಪರಿಸುತ್ತಿದ್ದರೆ ಆಯಾಸ ಕಡಿಮೆಯಾಗುವುದಲ್ಲದೆ, ಬಾಯಿಯ ವಾಸನೆಯು ಕಡಿಮೆಯಾಗುತ್ತದೆ .

೭೦. ನರಗಳ ನಿಶ್ಶಕ್ತಿ ನಿವಾರಣೆಗೆ ದ್ರಾಕ್ಷಿರಸಕ್ಕೆ, ಜೇನುತುಪ್ಪ ಸ್ವಲ್ಪ ಮಿಶ್ರ ಮಾಡಿ ಸೇವಿಸುತ್ತಿದ್ದರೆ, ನರಗಳ ಬಲಹೀನತೆ ಕಡಿಮೆಯಾಗುತ್ತದೆ.

೭೧. ತಲೆನೋವು ಅಥವಾ ಮೂಗು ಕಟ್ಟಿರುವುದು ನಿವಾರಣೆಯಾಗಲು ಬಿಸಿನೀರಿನ ಬಕೆಟ್‌ನಲ್ಲಿ ನಿಮ್ಮ ಪಾದಗಳನ್ನು ಹತ್ತು ನಿಮಿಷಗಳ ಕಾಲ ಇಟ್ಟುಕೊಳ್ಳುವುದರಿಂದ ನಿಮ್ಮ ತಲೆ ನೋವು ಮತ್ತು ಮೂಗು ಕಟ್ಟಿರುವುದು ನಿವಾರಣೆಯಾಗಲು ಸಹಾಯಕವಾಗುತ್ತದೆ.

೭೨. ಉದ್ವೇಗ (ಟೆನ್‌ಷನ್‌)ದ ತಲೆನೋವು ನಿವಾರಣೆಗೆವ್ಯಾಯಾಮ ನಿಮ್ಲಲ್ಲಿ ತಲೆನೋವು ತೀವ್ರವಾಗಿಲ್ಲದಿದ್ದರೆ, ಉದ್ವೇಗದ ತಲೆನೋವು ನಿವಾರಣೆಗೆ ೧೫ ರಿಂದ ೨೦ ನಿಮಿಷಗಳ ಕಾಲ ಪ್ರಶಾಂತವಾದ ಜಾಗದಲ್ಲಿ ಲಘು ವ್ಯಾಯಾಮ ಮಾಡಿ, ವಿಶ್ರಾಂತಿಯನ್ನು ಪಡೆಯುವುದರಿಂದ ನೋವು ನಿವಾರಣೆಯಾಗುತ್ತದೆ. ಆದರೆ, ಅರ್ಧ ತಲೆನೋವು (ಮೈಗ್ರೇನ್‌) ಇದ್ದಾಗ ವ್ಯಾಯಾಮವನ್ನು ಮಾಡದಿರುವುದು ಉತ್ತಮ. ಬೆನ್ನ ಮೇಲೆ ಮಲಗಿ ವಿಶ್ರಾಂತಿಯನ್ನು ಪಡೆಯುವುದರಿಂದ, ತಲೆನೋವು ಕಡಿಮೆಯಾಗಲು ಸಹಾಯಕವಾಗುತ್ತದೆ.

೭೩. ಮೂಲವ್ಯಾಧಿ ಕಡಿಮೆಯಾಗಲು ಬೇವಿನ ಸೊಪ್ಪನ್ನು ಸ್ವಲ್ಪ ಅರಿದು, ಗುದದ್ವಾರದಲ್ಲಿ ಕಟ್ಟುತ್ತಿದ್ದರೆ , ನೋವು ಕಡಿಮೆಯಾಗುತ್ತದೆ.

೭೪. ಕೀಲುರಿತದ ನಿವಾರಣೆಗೆ ಬೇವಿನ ಸೊಪ್ಪಿನ ರಸಕ್ಕೆ, ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ, ಕೀಲುರಿತದ ಜಾಗದಲ್ಲಿ ಉಜ್ಜಿದರೆ, ನೋವು ಅಥವಾ ಉರಿತ ಕಮ್ಮಿಯಾಗುತ್ತದೆ.

೭೫. ಅಜೀರ್ಣದ ನಿವಾರಣೆಗೆ ಬೆಲ್ಲದೊಂದಿಗೆ, ಶುಂಠಿ ಚೂರನ್ನು ಸೇರಿಸಿ, ಊಟಕ್ಕೆ ಮೊದಲು ತಿಂದರೆ, ಅಜೀರ್ಣ ಉಂಟಾಗುವುದಿಲ್ಲ.

೭೬. ಕೀಲುನೋವು ನಿವಾರಣೆಗೆ ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಕೀಲುನೋವು ಇರುವ ಜಾಗದಲ್ಲಿ ಉಜ್ಜಿದರೆ, ನೋವು ಕಡಿಮೆಯಾಗುತ್ತದೆ.

೭೭. ತಲೆನೋವು ನಿವಾರಣೆಗೆ ನಿಂಬೆಹಣ್ಣಿನ ರಸಕ್ಕೆ, ಸ್ವಲ್ಪ ಅಡುಗೆ ಉಪ್ಪನ್ನು ಸೇರಿಸಿ ನೋವು ಇರುವ ಜಾಗದಲ್ಲಿ ತಿಕ್ಕಿದರೆ, ತಲೆನೋವು ಕಡಿಮೆಯಾಗುತ್ತದೆ. ಅಥವಾ ನಿಂಬೆಹಣ್ಣಿನ ಶರಬತ್ತನ್ನು ಕುಡಿದು, ನಿಂಬೇಹಣ್ಣಿನ ಸಿಪ್ಪೆಯಿಂದ ಹಣೆಯನ್ನು ಉಜ್ಜಿದರೆ, ತಲೆನೋವು ನಿವಾರಣೆಯಾಗುತ್ತದೆ. ಅಥವಾ. ತಲೆನೋವಿದ್ದಾಗ, ತುಳಸಿ ಎಲೆಯನ್ನು ತೊಳೆದು ಚೆನ್ನಾಗಿ ಅಗಿದು ಅದರ ರಸವನ್ನು ನುಂಗಿ, ವಿಶ್ರಾಂತಿಯನ್ನು ಪಡೆದರೆ ನೋವು ಹೊರಟುಹೋಗುತ್ತದೆ.

೭೮. ಮೂತ್ರಪಿಂಡದಲ್ಲಿನ ಕಲ್ಲು ಕರಗಲು ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ತಲಾ ಒಂದು ಲೋಟ ಬೀಟ್‌ರೂಟ್‌ ಜ್ಯೂಸ್‌ನ್ನು ಒಂದು ತಿಂಗಳ ಕಾಲ ಸೇವಿಸುವುದರಿಂದ , ಮೂತ್ರ ಪಿಂಡದಲ್ಲಿನ ಸಣ್ಣಗಾತ್ರದ ಕಲ್ಲು ಕರಗಲು ಸಹಾಯಕವಾಗುತ್ತದೆ.

೭೯. ಗಂಟಲ ನೋವು ನಿವಾರಣೆಗೆ ಒಂದು ಲೋಟ ಬಿಸಿನೀರಿಗೆ ಸ್ವಲ್ಪ ನಿಂಬೇಹಣ್ಣಿನ ರಸವನ್ನು ೨ ರಿಂದ ೩ ಚಮಚದಷ್ಟು ಜೇನುತುಪ್ಪವನ್ನು ಮಿಶ್ರಮಾಡಿ, ಪ್ರತಿ ದಿನ ರಾತ್ರಿ, ಒಂದು ವಾರದ ಕಾಲ ಸೇವಿಸಿದರೆ, ಸಾಮಾನ್ಯವಾದ ಗಂಟಲುರಿ ಅಥವಾ ಗಂಟಲ ನೋವು ನಿವಾರಣೆಯಾಗುತ್ತದೆ.

೮೦. ಕಣ್ಣುಗಳ ಕೆಳಗಡೆ ಇರುವ ಕಪ್ಪು ಛಾಯೆಯ ನಿವಾರಣೆಗಾಗಿ ತಾಜಾ ಇರುವ ಮೆಂತ್ಯದ ಸೊಪ್ಪನ್ನು ನೀರನ್ನು ಹಾಕಿ, ಅರೆದು, ಪ್ರತಿ ದಿನ ಕಣ್ಣುಗಳ ಕೆಳಭಾಗದಲ್ಲಿರುವ ಕಪ್ಪು ಛಾಯೆ ಇರುವ ಜಾಗದಲ್ಲಿ ಹಚ್ಚುತ್ತಾ ಇದ್ದರೆ, ಕಪ್ಪು ಛಾಯೆ ಹೋಗಲು ಸಹಾಯಕವಾಗುತ್ತದೆ.

೮೧. ನೆಗಡಿ ನಿವಾರಣೆಗೆ ಒಂದು ಲೋಟ ಬಿಸಿನೀರಿಗೆ, ಒಂದು ಚಮಚೆಯಷ್ಟು ಜೇನುತುಪ್ಪ ಮತ್ತು ಮೂರು ಡ್ರಾಪ್ಸ್‌ ನೀಲಗಿರಿ ತೈಲವನ್ನು ಮಿಶ್ರ ಮಾಡಿ, ಐದು ದಿವಸ ಸೇವಿಸಿದರೆ, ನೆಗಡಿ ನಿವಾರಣೆಯಾಗುತ್ತದೆ. ನೆಗಡಿ ಇದ್ದಾಗ, ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯಬೇಕು.

೮೨. ಅಸ್ತಮ ಮತ್ತು ಕೆಮ್ಮಲು ಕಡಿಮೆಯಾಗಲು ಸಮ ಪ್ರಮಾಣದಲ್ಲಿ ಮೆಣಸು, ಖರ್ಜೂರ, ಒಣಗಿದ ಕಪ್ಪು ದ್ರಾಕ್ಷಿ, ಸಕ್ಕರೆ, ತುಪ್ಪ ಮತ್ತು ಜೇನುತುಪ್ಪವನ್ನು ಸೇರಿಸಿ ಮಾಡಿದ ಪೇಸ್ಟನ್ನು ಸೇವಿಸಿದರೆ ಅಸ್ತಮ ಮತ್ತು ಕೆಮ್ಮು ಕಡಿಮೆಯಾಗುತ್ತದೆಂದು ಆಯುರ್ವೇದ ಪಂಡಿತರಾದ ಜೆ.ಎಫ್‌. ದಸ್ತೂರ್ ರವರು ತಮ್ಮ ಗ್ರಂಥದಲ್ಲಿ ತಿಳಿಸಿದ್ದಾರೆ.

೮೩. ಅಸ್ತಮ – ಕೆಮ್ಮಿನ ನಿವಾರಣೆಗೆ ಒಂದು ಭಾಗ ಜೇನುತುಪ್ಪ, ಒಂದು ಭಾಗ ನಿಂಬೇಹಣ್ಣಿನ ರಸ, ಒಂದು ಭಾಗ ಜಿನ್‌ ಅಥವಾ ರಮ್‌ನ್ನು ಮಿಶ್ರ ಮಾಡಿಟ್ಟುಕೊಂಡು, ಎರಡು ಅಥವಾ ಮೂರು ಗಂಟೆಗೊಮ್ಮೆ ಒಂದು ಟೀ ಚಮಚೆಯಷ್ಟು ತೆಗೆದುಕೊಂಡರೆ ಅಸ್ತಮ ದವರಲ್ಲಿ ಕೆಮ್ಮು ನಿವಾರಣೆಯಾಗುತ್ತದೆಂದು ಶ್ರೀ ಡೇವಿಡ್‌ ವರ್ನರ್ ತಿಳಿಸಿದ್ದಾರೆ.

೮೪. ಆಸ್ತಮದವರಲ್ಲಿ ಕಫ ತೆಳುವಾಗಲು ಕಫವನ್ನು ತೆಳುವಾಗಿ ಮಾಡಿ ಹೊರಹಾಕಲು ನೀರು ಸಹಾಯ ಮಾಡುತ್ತದೆ. ಆದುದರಿಂದ, ಕಾಯಿಸಿ ಆರಿಸಿದ ನೀರನ್ನು ಯತೇಚ್ಛವಾಗಿ ಆಸ್ತಮ ರೋಗಿಗಳು ಕುಡಿಯಬೇಕು.

೮೫. ಅಸ್ತಮ ಉಪಶಮನಕ್ಕೆ ಬೆಳ್ಳುಳ್ಳಿಯನ್ನು ಔಷಧಿಯ ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸಿದರೆ ಅಸ್ತಮಾ ಉಪಶಮನಗೊಳ್ಳುತ್ತದೆಂದು, ಕೆಮ್ಮು ಕಡಿಮೆಯಾಗಲು ಸಹಯ ಮಾಡುತ್ತದೆಂದು ‘ವಿ ಲೇಜ್‌ ಫಿಜಿಷಿಯನ್‌’ ಎಂಬ ಪುಸ್ತಕದಲ್ಲಿ ತಿಳಿಸಿದೆ.

೮೬. ಬೆನ್ನು ನೋವಿಗೆ ಬಿಸಿ ಕಾಪುಟ ಚಿಕಿತ್ಸೆ ಪ್ರಜ್ಞಾ ಪೂರ್ವಕವಾಗಿ ಬಿಸಿಯ ಕಾಪುಟವನ್ನು ನೋವಿರುವ ಬೆನ್ನಿನ ಭಾಗದಲ್ಲಿ ಕೊಡುವುದರಿಂದ ನೋವು ಕಡಿಮೆಯಾಗುತ್ತದೆ. ಅಥವಾ ಪ್ರತಿದಿನ ಬಿಸಿನೀರಿನ ಸ್ನಾನವನ್ನು ಮಾಡುತ್ತಾ, ನೋವಿರುವ ಜಾಗದಲ್ಲಿ ಕೈಯಿಂದ ಉಜ್ಜಿಕೊಳ್ಳುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.

೮೭. ಬೆನ್ನು ನೋವಿಗೆ-ಚಲನಾ ಚಿಕಿತ್ಸೆ ನಡೆಯುವುದು (ವಾಕಿಂಗ್‌) ಸಾಮಾನ್ಯವಾಗಿ ಒಳ್ಳೆಯ ವ್ಯಾಯಾಮ. ಬೆನ್ನು ನೋವು ಇದ್ದಾಗ ನಡೆದಾಡಲು ಪ್ರೋತ್ಸಾಹಿಸಿ, ವಿಶ್ರಾಂತಿ ಪಡೆಯಲು ತಿಳಿಸಬೇಕು . ನಡೆಯುವ ದೂರವನ್ನು ಕ್ರಮವಾಗಿ ಹೆಚ್ಚಿಸುತ್ತಾ ಹೋಗಬೇಕು, ವಾಕಿಂಗ್‌ ಮಾಡುವ ಮುನ್ನ ಕಷ್ಟಕರವಾದ ವ್ಯಾಯಾಮ ಅಥವಾ ಯೋಗಾಸನಗಳನ್ನು ಮಾಡಬಾರದು.

೮೮. ತಲೆನೋವು ಕಡಿಮೆಯಾಗಲು ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರ ಪೇಸ್ಟಿನಿಂದ ಕಾಲಿನ ಪಾದಗಳನ್ನು ಚೆನ್ನಾಗಿ ತಿಕ್ಕಿ, ವಿಶ್ರಾಂತಿಯನ್ನು ಪಡೆಯುವುದರಿಂದ, ತಲೆನೋವು ಕಡಿಮೆಯಗುತ್ತದೆಂದು ಆಯುರ್ವೇದ ಪಂಡಿತರಾದ ಕೆ.ವಿ.ಜೆ. ಗಣಪತಿಸಿಂಗ್‌ ವರ್ಮಾ ತಿಳಿಸಿದ್ದಾರೆ.

೮೯. ಆಯಾಸ ನಿವಾರಣೆಗೆ ಪ್ರತಿ ದಿನ ಕಿತ್ತಳೆಹಣ್ಣಿನ ಜ್ಯೂಸ್‌ ಅಥವಾ ನಿಂಬೇಹಣ್ಣಿನ ಜ್ಯೂಸನ್ನು ಐಸ್‌ಹಾಕದೆ ಸೇವಿಸುವುದರಿಂದ ಆಯಾಸ ನಿವಾರಣೆಯಾಗುತ್ತದೆ.

೯೦. ಪೈನಾಪಲ್‌ (ಅನಾನಸ್‌) ಜ್ಯೂಸ್‌ ಕೀಲುನೋವು ಕಡಿಮೆಯಾಗಲು ಪ್ರತಿ ದಿನ ಪೈನಾಪಲ್‌ ಜ್ಯೂಸನ್ನು (ಐಸ್‌ ಹಾಕದೆ ಕುಡಿಯಬೇಕು) ಸೇವಿಸುವುದರಿಂದ ಕೀಲುಗಳ ಊತ ಕಡಿಮೆಯಾಗುತ್ತದೆ. (ಜ್ಯೂಸ್‌ಗೆ ಸಕ್ಕರೆ ಹೆಚ್ಚಾಗಿ ಹಾಕಬಾರದು.) ಜ್ಯೂಸ್‌ಗೆ ಬದಲು ಅನಾನಸ್‌ ಚೂರುಗಳನ್ನು ತಿಂದರೆ ಒಳ್ಳೆಯದು.

೯೧. ಕೀಲುನೋವು ನಿವಾರಣೆಗೆ ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಅರಿಸಿನ ಮತ್ತು ಸ್ವಲ್ಪ ಸುಣ್ಣವನ್ನು ಮಿಶ್ರಮಾಡಿ ಪೇಸ್ಟ್‌ ಮಾಡಿಕೊಂಡು, ಕೀಲುನೋವು ಇರುವ ಜಾಗದಲ್ಲಿ ಪೋಲ್ಟೀಸ್ ನ್ನು ಹಾಕುವುದರಿಂದ ನೋವು ಕಡಿಮೆಯಾಗುತ್ತದೆ.

೯೨. ಕೀಲುನೋವಿಗೆ ಮಸಾಜ್‌ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಕರ್ಪೂರವನ್ನು ಮಿಶ್ರಮಾಡಿ, ಅದರಿಂದ ಕೀಲುನೋವು ಇರುವ ಜಾಗದಲ್ಲಿ ಮಸಾಜ್‌ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

೯೩. ಮಾಂಸಖಂಡಗಳ ಉಳುಕು ನಿವಾರಣೆಗೆ ಉಳುಕು ಇರುವ ಮಾಂಸಖಂಡಗಳ ಜಾಗದಲ್ಲಿ ನೀಲಗಿರಿ ತೈಲವನ್ನು ತಿಕ್ಕುವುದರಿಂದ ಉಳುಕು ನಿವಾರಣೆಯಾಗುತ್ತದೆ.

೯೪. ಕರುಳಿನ ಗ್ಯಾಸ್‌ ನಿವಾರಣೆಗೆ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಎರಡು ಎಸಳನ್ನು ಸೇವಿಸುತ್ತಿದ್ದರೆ ಕರುಳಿನ ಗ್ಯಾಸ್‌ ನಿವಾರಣೆಯಾಗುತ್ತದೆ.

೯೫. ನರಗಳ ನಿಶ್ಶಕ್ತಿ ನಿವಾರಣೆಗೆ ವೀಳೆಯದೆಲೆ ರಸಕ್ಕೆ ಒಂದು ಟೀ ಚಮಚೆಯಷ್ಟು ಜೇನುತುಪ್ಪವನ್ನು ಸೇರಿಸಿ ಪ್ರತಿ ದಿನ ಸೇವಿಸುತ್ತಿದ್ದರೆ , ನರಗಳ ನಿಶ್ಶಕ್ತಿ ನಿವಾರಣೆಯಾಗುತ್ತದೆ.

೯೬. ಜೀರ್ಣಶಕ್ತಿ ಅಭಿವೃದ್ಧಿಗೊಳ್ಳಲು ಹುಳಿ ಇಲ್ಲದ ಮಜ್ಜಿಗೆಯನ್ನು ಪ್ರತಿದಿನ ಸೇವಿಸುತ್ತಿದ್ದರೆ ಜೀರ್ಣಶಕ್ತಿ ಅಭಿವೃದ್ಧಿಗೊಳ್ಳುತ್ತದೆ.

೯೭. ಮುಖದಲ್ಲಿನ ಫಂಗಸ್‌ ನಿವಾರಣೆಗೆ ಈರುಳ್ಳಿ ರಸ ಮತ್ತು ವೀಳೆಯದೆಲೆ ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ, ಮುಖದ ಫಂಗಸ್‌ ಜಾಗದಲ್ಲಿ ಹಚ್ಚುತ್ತಿದ್ದರೆ ಫಂಗಸ್‌ ನಿವಾರಣೆಯಾಗುತ್ತದೆ.

೯೮. ಒಣಕೆಮ್ಮು ನಿವಾರಣೆಗೆ ದಿನಕ್ಕೆ ಎರಡು ಬಾರಿ ಒಂದು ಟೀ ಚಮಚೆಯಷ್ಟು ಜೇನುತುಪ್ಪವನ್ನು ಒಂದು ವಾರದ ಕಾಲ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗುತ್ತದೆ.

೯೯. ಅಜೀರ್ಣ ನಿವಾರಣೆಗೆ ಪುದೀನ, ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಮಾಡಿ ಪ್ರತಿದಿನ ಸೇವಿಸುತ್ತಿದ್ದರೆ ಅಜೀರ್ಣ ನಿವಾರಣೆಯಾಗುತ್ತದೆ.

೧೦೦. ಮಕ್ಕಳಲ್ಲಿ ಜ್ವರ ನಿವಾರಣೆಗೆ ಮಕ್ಕಳಲ್ಲಿ ಜ್ವರವಿದ್ದಾಗ ಬೀಟ್‌ರೂಟ್‌ ರಸವನ್ನು ಪ್ರತಿ ದಿನ ಮೂರು ಬಾರಿ ಅಲ್ಪ ಪ್ರಮಾಣದಲ್ಲಿ ನಾಲ್ಕೈದು ದಿನಗಳ ಕಾಲ ಕೊಡುವುದರಿಂದ ಜ್ವರ ಕಡಿಮೆಯಾಗಲು ಸಹಾಯಕವಾಗುತ್ತದೆ.

೧೦೧. ಬಿದ್ದ ನೋವು ನಿವಾರಣೆಗೆ ಪಪ್ಪಾಯಿ ಅಥವಾ ಪರಂಗಿ ಗಿಡದ ಎಲೆಯನ್ನು ಚೆನ್ನಾಗಿ ಅರೆದು, ಬಿದ್ದು ಗಾಯವಾಗಿರುವ ಜಾಗದಲ್ಲಿ ಹಚ್ಚುವುದರಿಂದ, ನೋವು ನಿವಾರಣೆಯಾಗುತ್ತದೆ.

೧೦೨. ಕುರು ನಿವಾರಣೆಗೆ ನಿಂಬೇಹಣ್ಣಿನ ರಸದಲ್ಲಿ ಶಂಕವನ್ನು ತೇಯ್ದು ಹಚ್ಚುತ್ತಿದ್ದರೆ, ಕುರು ಒಡೆದು ನಿವಾರಣೆಯಾಗಲು ಸಹಾಯಕವಾಗುತ್ತದೆ.

೧೦೩.ಸುಟ್ಟಗಾಯಗಳನಿವಾರಣೆಗೆಕುಂಬಳಕಾಯಿಯ ಎಲೆಗಳನ್ನು ಚೆನ್ನಾಗಿ ಬಿಸಿ ನೀರಲ್ಲಿ ತೊಳೆದು ಅವುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಸುಟ್ಟ ಗಾಯದ ಮೇಲೆ ಹಚ್ಚುತ್ತಿದ್ದರೆ ಗಾಯ ವಾಸಿಯಾಗುತ್ತದೆ.

೧೦೪. ಹಲ್ಲುನೋವು ನಿವಾರಣೆಗೆ ಲವಂಗದ ಎಣ್ಣೆಯಲ್ಲಿ ಅದ್ದಿದ ಶುದ್ಧವಾದ ಹತ್ತಿಯ ಸಣ್ಣ ಉಂಡೆಯನ್ನು ಹಲ್ಲು ನೋವು ಇರುವ ಜಾಗದಲ್ಲಿ ಅದುಮಿಟ್ಟರೆ, ಹಲ್ಲು ನೋವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಲವಂಗವನ್ನು ಅಗಿಯುವುದರಿಂದ ಹಲ್ಲು ನೋವು ಕಡಿಮೆಯಾಗುವುದಿಲ್ಲ.

೧೦೫. ಕಿವಿಯ ಊತ ಕಡಿಮೆಯಾಗಲು ಒಂದು ಅಥವಾ ಎರಡು ತೊಟ್ಟುಬೇವಿನ ಎಣ್ಣೆಯನ್ನು ಕಿವಿಯೊಳಗಡೆ ಹಾಕಿದರೆ, ಕಿವಿಯ ಊತ ಕಡಿಮೆಯಾಗುತ್ತದೆ.

೧೦೬. ಸುಟ್ಟ ಗಾಯಗಳಿಗೆ ತಣ್ಣೀರಿನ ಚಿಕಿತ್ಸೆ ಸುಟ್ಟಗಾಯಗಳ ಮೇಲೆ ತಡಮಾಡದೆ ಶುದ್ಧವಾದ ತಣ್ಣೀರನ್ನು ಸುರಿಯುತ್ತಿರಬೇಕು. ಅಥವಾ ಸುಟ್ಟ ಭಾಗವನ್ನು ತಣ್ಣೀರಿನಲ್ಲಿ ಅದ್ದಿರಬೇಕು. ೧೦ ರಿಂದ ೨೦ ನಿಮಿಷಗಳಾದರು ತಣ್ಣಗೆ ಮಾಡಬೇಕು. ಅನಂತರ ವೈದ್ಯರಿಗೆ ತೋರಿಸುವುದನ್ನು ಮರೆಯಬಾರದು. ಆದರೆ ಬಿಸಿ ನೀರು/ಸಾರು/ಸಾಂಬಾರು ಬಿದ್ದರೆ ಅದರ ಮೇಲೆ ಜೇನುತುಪ್ಪ ಸವರಿದರೆ ಗುಳ್ಳೆಗಳು/ಬೊಬ್ಬೆ ಬರುವುದಿಲ್ಲ. ನಂತರ ಸುಟ್ಟ ಗಾಯಗಳಿಗೆ ಶುದ್ಧ ಮೀನೆಣ್ಣೆ ಹಚ್ಚುತ್ತ ಬಂದರೆ ಬೇಗ ವಾಸಿಯಾಗುವುದಲ್ಲದೆ, ಕಲೆಗಳು ಉಳಿಯುವುದಿಲ್ಲ.

೧೦೭. ಪೈಲ್ಸ್‌ ಇದ್ದಾಗ ಹಾಗಲಕಾಯಿ ಎಲೆಯ ರಸ ತಾಜಾ ಇರುವ ಹಾಗಲಕಾಯಿಯ ಎಲೆಯ ರಸವನ್ನು ಮೂರು ಚಮಚದಷ್ಟು ತೆಗೆದುಕೊಂಡು ಒಂದು ಲೋಟ ಮಜ್ಜಿಗೆಗೆ ಮಿಶ್ರಮಾಡಿ ಪ್ರತಿದಿನ ಒಂದು ತಿಂಗಳ ಕಾಲ ಬೆಳಗ್ಗೆ ಮತ್ತು ರಾತ್ರಿ ಸೇವಿಸುತ್ತಿದ್ದರೆ ಪೈಲ್ಸ್‌ (ಮೂಲವ್ಯಾಧಿ) ತೊಂದರೆ ಕಡಿಮೆಯಾಗಲು ಸಹಾಯಕವಾಗುತ್ತದೆ.

೧೦೮. ಶೀತ-ನೆಗಡಿಗೆ ತುಳಸಿ ರಸ ಶೀತ-ನೆಗಡಿ ಇದ್ದಾಗ ಶುದ್ಧ ನೀರಿನಲ್ಲಿ ತೊಳೆದ ತುಳಸಿ ಎಲೆಯನ್ನು ಅಗಿದು ಅದರ ರಸವನ್ನು ನುಂಗಬೇಕು. ಈ ರೀತಿ ಒಂದು ವಾರದ ಕಾಲ ಮಾಡಿದರೆ , ಶೀತ-ನೆಗಡಿ ನಿಯಂತ್ರಣದಲ್ಲಿರಲು ಸಹಾಯಕವಾಗುತ್ತದೆ.

೧೦೯. ಚಿಕ್ಕಮಕ್ಕಳಲ್ಲಿ ಜಂತು ಹುಳುವಿನ ಬಾಧೆ ನಿವಾರಣೆಗೆ ಅರ್ಧ ಲೋಟ ಬಿಸಿನೀರಿಗೆ ಒಂದು ಟೀ ಚಮಚೆಯಷ್ಟು ಬೆಳ್ಳುಳ್ಳಿ ರಸವನ್ನು ಮಿಶ್ರ ಮಾಡಿ, ದಿನಕ್ಕೆ ಎರಡು ಬಾರಿ ೩ ದಿನಗಳ ಕಾಲ ಚಿಕ್ಕಮಕ್ಕಳಿಗೆ ನೀಡಿದರೆ, ಹೊಟ್ಟೆಯಲ್ಲಿರುವ ಜಂತು ಹುಳುಗಳಿಂದ ಉಂಟಾಗುವ ಬಾಧೆ ನಿವಾರಣೆಯಾಗುತ್ತದೆ.

೧೧೦. ಎದೆ ಹಾಲಿನ ಗುಣಮಟ್ಟ ಹೆಚ್ಚಲು ಎದೆ ಹಾಲಿನ ಗುಣಮಟ್ಟ ಹೆಚ್ಚಲು, ತಾಯಂದಿರು ಪ್ರತಿ ದಿನ ಒಂದು ಕ್ಯಾರೆಟ್‌ನ್ನಾಗಲಿ ಅಥವಾ ಒಂದು ಲೋಟ ಕ್ಯಾರೆಟ್‌ ಜ್ಯೂಸನ್ನಾಗಲಿ ಸೇವಿಸುತ್ತಿದ್ದರೆ. ಎದೆ ಹಾಲಿನ ಗುಣಮಟ್ಟ ಹೆಚ್ಚಾಗಲು ಮತ್ತು ಮಗುವಿನ ಕಣ್ಣುಗಳು ಆರೋಗ್ಯವಾಗಿರಲು ಸಹಾಯಕವಾಗುತ್ತದೆ.

ಪುಸ್ತಕ: ಯಾವ ಕಾಯಿಲೆಗೆ ಯಾವ ಮನೆ ಔಷಧಿ
ಲೇಖಕರು: ಎನ್. ವಿಶ್ವರೂಪಾಚಾರ್

ರಾಜ್ಯದ ಜನತೆಗೆ ಸಿಎಂ ಬಿಎಸ್ ವೈ ಭರ್ಜರಿ ಗುಡ್ ನ್ಯೂಸ್ : 1,250 ಕೋಟಿ ರೂ. ಪರಿಹಾರ ಘೋಷಣೆ! ಯಾರಿಗೆ ಎಷ್ಟು ಪರಿಹಾರ? ಇಲ್ಲಿದೆ ಫುಲ್ ಡಿಟೇಲ್ಸ್

ಬೆಂಗಳೂರು : ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ 1,250 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಕುರಿತಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಹಿರಿಯ ಸಚಿವರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, 1250 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಹೂವು ಬೆಳಗಾರರಿಗೆ ಪ್ರತಿ ಹೆಕ್ಟರ್ ಹೂ ಹಾನಿಗೆ 10 ಸಾವಿರ ಸಹಾಯಧನ, ಹಣ್ಣು ಮತ್ತು ತರಕಾರಿ ಬೆಳಗಾರರಿಗೆ ಒಂದು ಹೆಕ್ಟರ್ ಗೆ 10 ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.null

ಯಾರಿಗೆ ಎಷ್ಟು ಪರಿಹಾರ? ಇಲ್ಲಿದೆ ಫುಲ್ ಡಿಟೇಲ್ಸ್

ಆಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ. ಸಹಾಯಧನ

ಕಟ್ಟಡ ಕಾರ್ಮಿರಕಿಗೆ 3 ಸಾವಿರ ರೂ.

ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ.

ರಸ್ತೆ ಬದಿ ವ್ಯಾಪಾರ ಮಾಡೋರಿಗೆ -2 ಸಾವಿರ ರೂ.

ಕಲಾವಿದರು, ಕಲಾತಂಡಗಳಿಗೆ ತಲಾ ಮೂರು ಸಾವಿರ ರೂ.

ಗರೀಬ್ ಕಲ್ಯಾಣ ಯೋಜನೆಯಡಿ ಪಡಿತ ಚೀಟಿದಾರರ ಕುಟುಂಬದ ಪ್ರತಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ

ಬಿಬಿಎಂಪಿ ವ್ಯಾಪ್ತಿ ನಗರ ಪ್ರದೇಶದಲ್ಲಿ ಉಚಿತ ಊಟ

ಕೊರೊನಾ ರೋಗಿಗಳಿಗೆ ಸರ್ಕಾರಿ ಅಸ್ಪತ್ರೆಗಳಲಿ ಉಚಿತ ಚಿಕಿತ್ಸೆ

ಕೋವಿಡ್ ನಿರ್ವಹಣೆಗೆ ಗ್ರಾಮಪಂಚಾಯಿತಿಗಳಿಗೆ ಹಣ

ಸಾಲ ಮರುಪಾವತಿ ಕಂತು 3 ತಿಂಗಳು ಮುಂದೂಡಿಕೆ  ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಮೇ 19, ಬುಧವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ,
ಬುಧವಾರ, ಸಪ್ತಮಿ , ಆಶ್ಲೇಷ ನಕ್ಷತ್ರ
ಧ್ರುವ ಯೋಗ , ವಣಿಜ ಕರಣ
ರಾಹುಕಾಲ:12.19 ರಿಂದ 1.53
ಗುಳಿಕಕಾಲ :10.44 ರಿಂದ 12.19
ಯಮಗಂಡಕಾಲ:7.34 ರಿಂದ 9.09
ಮೇಷ: ಅಧಿಕ ಖರ್ಚು, ಶತ್ರು ಕಾಟ, ಮೋಸದ ತಂತ್ರಕ್ಕೆ ಬಲಿಯಾಗುವಿರಿ, ಭೂ ವಿಚಾರದಲ್ಲಿ ಲಾಭ.

ಮೇಷ

ಕುಟುಂಬ ಸದಸ್ಯರಲ್ಲಿನ ಭಿನ್ನಮತದಿಂದಾಗಿ ಬೇಸರದ ವಾತಾವರಣ. ಹಿರಿಯರ, ಹಿತೈಷಿಗಳ ಮಧ್ಯಪ್ರವೇಶದಿಂದಾಗಿ ಎಲ್ಲವೂ ನಿರ್ಧಾರಕ್ಕೆ ಬರಲಿದೆ. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿಂಜರಿಕೆ ಕಂಡುಬರಲಿದೆ.

ವೃಷಭ

ಸಂಯಮದಿಂದ ಕಾರ್ಯ ಪ್ರವೃತರಾಗಿ. ಸಾಂಸಾರಿಕವಾಗಿ ತಲೆದೋರಿರುವ ಏರಿಳಿತಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಗುರುಹಿರಿಯರ ಸಕಾಲಿಕ ನೆರವಿನಿಂದ ಸಂತಸದ ಕ್ಷಣಗಳು ನಿಮ್ಮದಾಗುವವು.

ಮಿಥುನ

ನಿಮ್ಮ ಮುಂದಾಳುತನದ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುವುದು. ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ. ಯಶಸ್ಸಿನ ಅಮಲಿನಲ್ಲಿ ಸಂಸಾರದ ಬಗ್ಗೆ ಅವಗಣನೆ ಸಲ್ಲ.

ಕಟಕ

ನಿಮ್ಮ ಬಹುದಿನದ ಕೆಲಸ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಮುಗಿದು ಮನಸ್ಸಿಗೆ ನೆಮ್ಮದಿ ನೀಡಲಿದೆ. ಆರ್ಥಿಕ ರಂಗದಲ್ಲಿಯೂ ಉತ್ತಮ ಪ್ರಗತಿಯನ್ನು ಹೊಂದಿ ನೆಮ್ಮದಿ. ಮನೆಯಲ್ಲಿ ಹಬ್ಬದ ವಾತಾವರಣ.

ಸಿಂಹ

ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಯೋಜಿತ ಕ್ರಮದಂತೆ ಸುಗಮವಾಗಿ ಕೈಗೂಡುವುದು. ಮನಸ್ಸಿಗೆ ನೆಮ್ಮದಿ ದೊರೆತು ನಿರಾಳರಾಗುವಿರಿ. ಸಂಗಾತಿಯೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಸುಯೋಗ.

ಕನ್ಯಾ

ನಿಮ್ಮ ಧಾರ್ಮಿಕ ನಡೆಯ ಬಗ್ಗೆ ಇತರರಲ್ಲಿ ಅಚ್ಚರಿ ಮೂಡುವುದು. ಹೊಸ ವಿಚಾರವೊಂದು ಮನದಲ್ಲಿ ಮೂಡಿ ಚಿಂತನೆಗೆ ಹಚ್ಚಲಿದೆ. ಸಮತೋಲನ ದೃಷ್ಟಿಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

ತುಲಾ

ಪರಿಸ್ಥಿತಿ ನಿಮಗೆ ವಿರೋಧವಾಗಿರುವುದರ ಜೊತೆಗೆ ಮಕ್ಕಳ ನಡೆ ನುಡಿಗಳಿಗೆ ನೀವು ತಲೆ ತಗ್ಗಿಸುವ ಸಂದರ್ಭ ಒದಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ. ಕುಲದೇವತಾ ಆರಾಧನೆ ಮಾಡ.

ವೃಶ್ಚಿಕ

ನಿಮ್ಮ ಕೆಲಸ ಕಾರ್ಯಗಳು ಎಂದಿನಂತೆ ಸುಗಮವಾಗಿ ಸಾಗುತ್ತಿರುವಾಗ ಅನ್ಯರ ಅನಪೇಕ್ಷಿತ ಹಸ್ತಕ್ಷೇಪದಿಂದ ಮಾನಸಿಕ ಕಿರಿಕಿರಿ. ಸಂಯಮದಿಂದ ಹಸ್ತಕ್ಷೇಪವನ್ನು ಕಡೆಗಣಿಸುವುದು ಉತ್ತಮ. ಆರ್ಥಿಕ ರಂಗದಲ್ಲಿ ಪ್ರಗತಿ.

ಧನು

ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಆಯ್ಕೆ ದೊರೆಯುವುದು. ಕ್ಷಿಪ್ರ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದಿನದಾಂತ್ಯಕ್ಕೆ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ.

ಮಕರ

ಬಾಹ್ಯ ಸೌಂದರ್ಯದ ಸೆಳೆತದಿಂದಾಗಿ ಸಂಕಟಗಳು ಎದುರಾಗುವ ಸಾಧ್ಯತೆ. ಮನೋವೃತ್ತಿಯ ಮೇಲೆ ಹಿಡಿತ ಸಾಧಿಸಿ ದಿನನಿತ್ಯದ ಕಾರ್ಯಗಳಲ್ಲಿ ಗಮನ ವಹಿಸುವುದು ಉತ್ತಮ. ಸಂಗಾತಿ ಮಾತಿಗೆ ಮನ್ನಣೆ ನೀಡಿ.

ಕುಂಭ

ಕಾವ್ಯ, ಕವನಗಳ ಬರವಣಿಗೆ ವಿಚಾರಗಳಲ್ಲಿ ಆಸಕ್ತಿ ಮೂಡುವುದು. ನಿಮ್ಮ ಮೇಲಿನ ಎಲ್ಲ ಆಪಾದನೆಗಳಿಂದ ಮುಕ್ತಿ ಪಡೆದು ಅಭಿಮಾನಕ್ಕೆ ಪಾತ್ರರಾಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮೀನ

ಕೆಲಸ ಕಾರ್ಯಗಳಲ್ಲಿ ಹೊಸತನ, ಉತ್ಸಾಹಗಳು ಮೂಡಿಬರಲಿವೆ. ವೈದ್ಯಕೀಯ ವಲಯದಲ್ಲಿರುವವರಿಗೆ ವಿಶೇಷ ಧನಪ್ರಾಪ್ತಿ. ಹೊಸ ಹೊಸ ಸ್ನೇಹಿತರಿಂದ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿವಳಿಕೆ. ಸಾಮಾಜಿಕ ಗೌರವ.

ಮೇ 18, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ.
ವೃದ್ಧಿ ಯೋಗ, ತೈತಲೆ ಕರಣ
ರಾಹುಕಾಲ:3.30 ರಿಂದ 5.05
ಮಂಗಳವಾರ, ಷಷ್ಠಿ , ಪುಷ್ಯ ನಕ್ಷತ್ರ
ಗುಳಿಕಕಾಲ :12.19 ರಿಂದ 1.55
ಯಮಗಂಡಕಾಲ :9.09 ರಿಂದ 10.44

ಮೇಷ

ಆರೋಗ್ಯದಲ್ಲಿನ ವ್ಯತ್ಯಯದಿಂದಾಗಿ ದುಗುಡಕ್ಕೆ ಒಳಗಾಗುವ ಸಾಧ್ಯತೆ. ಇತರರೊಂದಿಗಿನ ಮಾತಿನ ಮೇಲೆ ಹಿಡಿತವಿರಲಿ. ನಿಷ್ಕಲ್ಮಷ ಮನಸ್ಸಿನಿಂದ ವ್ಯವಹರಿಸಿದಲ್ಲಿ ಜನಮನ್ನಣೆಗೆ ಪಾತ್ರರಾಗುವಿರಿ. ಗಣೇಶನ ಆರಾಧನೆ ಮಾಡಿ.

ವೃಷಭ

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಹಮ್ಮಿಕೊಂಡಿರುವ ಕೆಲಸ ಕಾರ್ಯಗಳು ಅಡೆತಡೆಗಳ ನಡುವೆಯೂ ಬಂಧುಗಳ ಸಹಕಾರದಿಂದಾಗಿ ಯಶಸ್ವಿಯಾಗಲಿದೆ. ದೂರದ ಬಂಧುಗಳ ಆಗಮನ ಸಾಧ್ಯತೆ.

ಮಿಥುನ

ಮಹಿಳಾ ರಾಜಕಾರಣಿಗಳು ಶ್ರೇಯಸ್ಸನ್ನು ನಿರೀಕ್ಷಿಸಬಹುದು. ಉತ್ತಮ ಹುದ್ದೆ ದೊರಕುವ ಸಾಧ್ಯತೆ. ವಿರೋಧಿಗಳ ಪಿತೂರಿಯ ಬಗ್ಗೆ ಎಚ್ಚರಿಕೆ ಅಗತ್ಯ. ಲೇವಾದೇವಿ-ಹಣಕಾಸು ವ್ಯವಹಾರಗಳಲ್ಲಿರುವವರಿಗೆ ಪ್ರಗತಿ.

ಕಟಕ

ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು ಪ್ರಶಸ್ತಿ ಪುರಸ್ಕಾರಗಳು ನಿಮ್ಮದಾಗಲಿವೆ. ಉತ್ತಮ ಅವಕಾಶಗಳು ಒದಗಿ ಬರಲಿದೆ. ಆಹಾರ ದೋಷದಿಂದಾಗಿ ಉದರ ನೋವಿನ ಸಮಸ್ಯೆ ತಲೆದೋರಬಹುದು.

ಸಿಂಹ

ವಿವಾಹಾಕಾಂಕ್ಷಿಗಳು ವಿವಾಹದ ನಿಮಿತ್ತ ಮಾತುಕತೆ ನಡೆಸಲಿದ್ದೀರಿ. ಹಿರಿಯರಿಂದ ಎಲ್ಲ ಅನುಕೂಲತೆಗಳು ಒದಗಿಬರಲಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ದೊರೆತು ಆತ್ಮವಿಶ್ವಾಸಕ್ಕೆ ನಾಂದಿಯಾಗಲಿದೆ.

ಕನ್ಯಾ

ದೂರ ಪ್ರಯಾಣದ ಅನುಭವ ಸುಖಕರವಾಗಿರುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಉದ್ವೇಗಕ್ಕೊಳಗಾಗದೆ ಶಾಂತ ಮನಸ್ಸಿನಿಂದ ಎಲ್ಲದಕ್ಕೂ ಪರಿಹಾರ ದೊರಕಲಿದೆ.

ತುಲಾ

ನಿಮ್ಮ ದೃಢ ಸಂಕಲ್ಪದಿಂದ ಯಶಸ್ಸನ್ನು ಸಾಧಿಸುವಿರಿ. ವಾಹನ ಖರೀದಿಯ ಸಾಧ್ಯತೆ. ಹೊಸ ಮನೆಯೊಂದರ ನಿರ್ಮಾಣದ ಬಗ್ಗೆ ಚಿಂತನೆ ನಡೆಸುವಿರಿ. ತಡವಾಗಿಯಾದರೂ ಜನಮನ್ನಣೆಗೆ ಪಾತ್ರರಾಗುವಿರಿ.

ವೃಶ್ಚಿಕ

ಎಲ್ಲ ವರ್ಗದವರಿಂದಲೂ ಪ್ರಶಂಸೆಯ ಜೊತೆಗೆ ಗೌರವಾದರಗಳನ್ನು ಗಳಿಸಲಿದ್ದೀರಿ. ಕೌಟುಂಬಿಕ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಧನು

ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರ. ಹೊಸದಾಗಿ ಸೇರಿದ ನೌಕರರಿಗೆ ಹಿರಿಯ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ. ಕೆಲಸ ಕಾರ್ಯಗಳಲ್ಲಿ ಅಸಡ್ಡೆ ತೋರುವುದು ಸಲ್ಲ.

ಮಕರ

ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಲಾಭದ ಜೊತೆಗೆ ಹೊಸ ಉದ್ಯಮದ ವಿಚಾರವಾಗಿ ಚಿಂತನೆ ನಡೆಸಲಿದ್ದೀರಿ. ಅನುಕರಣೀಯ ನಡವಳಿಕೆಯಿಂದಾಗಿ ಜನ ಮನ ಗೆಲ್ಲಲು ಯಶಸ್ವಿಯಾಗುವಿರಿ.

ಕುಂಭ

ಹಣಕಾಸಿನ ವ್ಯವಹಾರದಲ್ಲಿ ಹಾನಿಯ ಸಾಧ್ಯತೆ ಇದ್ದು ದಿನದ ಮಟ್ಟಿಗೆ ವ್ಯವಹಾರವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉತ್ತಮ ಮಾರ್ಗದರ್ಶನ ದೊರೆತು ಉತ್ತಮ ಫಲಿತಾಂಶ.

ಮೀನ

ಎಂಜಿನಿಯರ್ ಮತ್ತು ಗೃಹ, ವಸ್ತ್ರ ವಿನ್ಯಾಸಕಾರರಿಗೆ ವ್ಯವಹಾರದಲ್ಲಿ ಹೆಚ್ಚಿನ ಅನುಕೂಲದ ನಿರೀಕ್ಷೆ. ಗೃಹಾಲಂಕಾರ ವಸ್ತುಗಳ ಖರೀದಿ ಸಾಧ್ಯತೆ. ಅನಗತ್ಯ ವೆಚ್ಚದ ಮೇಲೆ ಹಿಡಿತವಿರಲಿ.

ಮೇ 17, ಸೋಮವಾರ ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪ್ಲವ ಸಂ|ರದ ವೃಷಭ ಮಾಸ‌ ದಿನ 3 ಸಲುವ ವೈಶಾಖ ಶುದ್ಧ ಪಂಚಮಿ 13|| ಗಳಿಗೆದಿನ ವಿಶೇಷ :ಶ್ರೀ ಶಂಕರ ಜಯಂತಿ, ಕನ್ನರ್ಪಾಡಿ, ಕಾರ್ಕಳ, ಪಡುಬಿದ್ರಿ, ಗುರುಪುರ ರಥ ನಿತ್ಯ ನಕ್ಷತ್ರ :ಆರ್ದ್ರಾ 18 ಗಳಿಗೆ ಮಹಾ ನಕ್ಷತ್ರ :ಕೃತ್ತಿಕಾ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.48 ಗಂಟೆ ಸೂರ್ಯೋದಯ :6.06 ಗಂಟೆ

ಮೇಷ

ಆರ್ಥಿಕ ಹಿನ್ನಡೆಯ ನಡುವೆಯೂ ಮನೆಯಲ್ಲಿನ ಬಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ.

ವೃಷಭ

ಬಹುದಿನಗಳಿಂದ ಬಾಕಿ ಇರುವ ಹಣವು ಹಿಂದಿರುಗಿ ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು. ಸಹಧರ್ಮಿಣಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ.

ಮಿಥುನ

ಸಹೋದ್ಯೋಗಿಗಳಿಂದ ಸಕಾರಾತ್ಮಕ ಸಹಾಯ ದೊರಕಲಿದೆ. ಸಮಾಜದಲ್ಲಿ ನಿಮ್ಮ ಪರಿಶ್ರಮದ ಫಲವನ್ನು ಬೇರೆಯವರು ಸವಿಯುವ ಸಾಧ್ಯತೆ. ದೇವರ ಆರಾಧನೆ ಮಾಡಿ.

ಕಟಕ

ಆರ್ಥಿಕ ಸಮತೋಲನ ಕಂಡುಬರುವುದು. ನಿಮ್ಮ ಮೇಲಿನ ಆಪಾದನೆಗಳಿಂದ ಮುಕ್ತರಾಗಿ ಗೌರವಕ್ಕೆ ಪಾತ್ರರಾಗಲಿದ್ದೀರಿ. ದೇವೀ ಸನ್ನಿಧಿಯಲ್ಲಿ ತುಪ್ಪದ ದೀಪ ಹಚ್ಚಿ.

ಸಿಂಹ

ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ವೈದ್ಯ ವೃತ್ತಿಯಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳ. ಅತಿಯಾದ ಮಾತಿನಿಂದಾಗಿ ವೃಥಾ ವೈಮನಸ್ಸು. ಶಾರದೆಯ ಆರಾಧನೆ ಯಶಸ್ಸನ್ನು ನೀಡುವುದು.

ಕನ್ಯಾ

ವಿಪರೀತ ಕಾರ್ಯಬಾಹುಳ್ಯದಿಂದಾಗಿ ಬೇಸರ. ಸಮಾಧಾನದಿಂದ ವರ್ತಿಸುವುದು ಉತ್ತಮ. ಚುರುಕಿನ ಕಾರ್ಯ ಕ್ಷಮತೆಯಿಂದ ಕೆಲಸ ಪೂರೈಸಿ ಮನಸ್ಸಿಗೆ ನಿರಾಳವಾಗಿ ನೆಮ್ಮದಿ ದೊರಕಲಿದೆ.

ತುಲಾ

ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ. ತಜ್ಞರಿಂದ ಸೂಕ್ತ ಸಲಹೆ, ಸಹಾಯ ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಸುಖಾನುಭವ. ಯೋಜನೆಗಳು ಫಲಪ್ರದವಾಗುವವು.

ವೃಶ್ಚಿಕ

ಬೇರೆಯವರ ವ್ಯವಹಾರದಿಂದ ಮೋಸಹೋಗುವ ಸಾಧ್ಯತೆ‌. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಸಮಾಧಾನದಿಂದ ಮುಂದುವರೆಯುವುದು ಸೂಕ್ತ.

ಧನು

ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸಮಯವಾಗಿದೆ. ನಿಮ್ಮ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದು ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಮಕರ

ವಾಹನ, ಆಸ್ತಿ ಖರೀದಿಯ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ದೊರೆಯಲಿದೆ. ಬಹುದಿನಗಳ ಬಯಕೆ ಈಡೇರುವ ಸಾಧ್ಯತೆ. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ದೂರದ ಪ್ರಯಾಣದ ಸಾಧ್ಯತೆ.

ಕುಂಭ

ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಲಿದೆ. ಅಲಂಕಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕುಟುಂಬಕ್ಕೊಂದು ವಿಶೇಷ ಗೌರವ ತಂದುಕೊಡಲಿದ್ದಾರೆ.

ಮೀನ

ಕುಟುಂಬದವರೊಡನೆ ಧಾರ್ಮಿಕ ಕ್ಷೇತ್ರ ದರ್ಶನ ಲಭ್ಯವಾಗಲಿದೆ. ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗುವ ಕಾಲ. ಗೃಹ ನಿರ್ಮಾಣ ಯೋಜನೆ ಸಿದ್ಧವಾಗುವ ಸಾಧ್ಯತೆ.

ಮೇ 16, ಭಾನುವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪ್ಲವ ಸಂ|ರದ ವೃಷಭ ಮಾಸ‌ ದಿನ 2 ಸಲುವ ವೈಶಾಖ ಶುದ್ಧ ಚೌತಿ 9||| ಗಳಿಗೆ ದಿನ ವಿಶೇಷ :ಶ್ರೀ ರಾಮಾನುಜ ಜಯಂತಿ ನಿತ್ಯ ನಕ್ಷತ್ರ :ಆರ್ದ್ರಾ 12||| ಗಳಿಗೆ ಮಹಾ ನಕ್ಷತ್ರ :ಕೃತ್ತಿಕಾ ಋತು :ವಸಂತ ರಾಹುಕಾಲ :4.30-6.00 ಗಂಟೆ ಗುಳಿಕ ಕಾಲ :3.00-4.30 ಗಂಟೆ ಸೂರ್ಯಾಸ್ತ :6.47 ಗಂಟೆ ಸೂರ್ಯೋದಯ :6.06 ಗಂಟೆ

ಮೇಷ

ವೃತ್ತಿ ಬದುಕಿನಲ್ಲಿ ಬದಲಾವಣೆ ಬಯಸುವವರಿಗೆ ಅತ್ಯಂತ ಪ್ರಶಸ್ತವಾದ ಸಮಯ. ಅನಿರೀಕ್ಷಿತ ಅವಕಾಶಗಳು ಒದಗಿಬರುವ ಸಾಧ್ಯತೆ ಕಂಡುಬರುತ್ತಿದೆ.

ವೃಷಭ

ನಿಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಅಭೂತಪೂರ್ವ ಸ್ಪರ್ಧೆಗಳನ್ನು ಎದುರಿಸುವಿರಿ. ಉನ್ನತಿ ನಿಮ್ಮ ಪಾಲಿಗೆ ಒದಗಿಬರಲಿದೆ. ಉತ್ತಮ ಕಾಲ ಸನ್ನಿಹಿತವಾಗಿದೆ.

ಮಿಥುನ

ನಿಮ್ಮ ಕಾರ್ಯಾನುಭವ ಮತ್ತು ಕ್ಷಮತೆಯಿಂದಾಗಿ ಉತ್ತಮ ಅವಕಾಶಗಳು ಒದಗಿಬರುವುದು. ಸಾಧಕ ಬಾಧಕಗಳನ್ನು ತೂಗಿ ನೋಡುವುದು ಉತ್ತಮ. ಮಗನಿಂದ ಶುಭ ವಾರ್ತೆ ಕೇಳುವಿರಿ.

ಕಟಕ

ನಿಮ್ಮ ಒಳ್ಳೆಯ ಕನಸುಗಳಿಗೆ ರೆಕ್ಕೆ ಪುಕ್ಕಗಳು ಮೂಡುವ ಸಾಧ್ಯತೆ ಕಂಡು ಬರುತ್ತಿದೆ. ಮನೆ ನಿರ್ಮಾಣ, ಆಸ್ತಿ ಖರೀದಿ ಮುಂದಾದವುಗಳು ಕೂಡಿಬರುವ ಸಾಧ್ಯತೆ. ಗಣಪತಿಯ ಆರಾಧನೆ ಉತ್ತಮ.

ಸಿಂಹ

ನಿಮ್ಮ ನಡೆ ನುಡಿಗಳಿಂದ ಉತ್ತಮ ಗೌರವ ಸಂಪಾದಿಸುವಿರಿ. ಬೇರೆಯವರ ಸಲಹೆಗಳನ್ನು ಕಡೆಗಣಿಸದಿರುವುದು ಒಳ್ಳೆಯದು. ಉತ್ತಮ ಯೋಜನೆಗಳನ್ನು ಕೈಗೊಳ್ಳಲು ಸಕಾಲ.

ಕನ್ಯಾ

ಕೆಲಸ ಕಾರ್ಯಗಳಲ್ಲಿ ಆತುರತೆ ಬೇಡ. ಸಮಾಧಾನದಿಂದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಸ್ಥಿರ ಸಂಪನ್ಮೂಲಗಳನ್ನು ಕಂಡುಕೊಳ್ಳುವಿರಿ. ಗುರುವಿನ ಆರಾಧನೆ ಶ್ರೇಯಸ್ಕರ

ತುಲಾ

ಹಿಂದಿನ ಉದ್ಯೋಗದಾತರಿಂದ ಅನಿರೀಕ್ಷಿತ ಕರೆಯ ಸಂಭವ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಂಬಂಧವನ್ನು ಹೊಂದುವಿರಿ. ದಿನದ ಅಂತ್ಯದಲ್ಲಿ ಸಹೋದ್ಯೋಗಿಗಳೊಂದಿಗೆ ಔತಣ ಕೂಟದ ಸಂಭವ.

ವೃಶ್ಚಿಕ

ಒತ್ತಡದ ಜೀವನದಿಂದ ಹೊರ ಬಂದು ಉತ್ಸಾಹದಿಂದ ಇರುವಿರಿ. ಸ್ನೇಹಿತರ ಅನಿರೀಕ್ಷಿತ ಆಗಮನದಿಂದ ಮನಸ್ಸಿಗೆ ನೆಮ್ಮದಿ. ಮನೆಯಲ್ಲಿ ಹಿತಕರ ವಾತಾವರಣ ನೆಲೆಸುವುದು.

ಧನು

ಅತ್ಯಪೂರ್ವ ಕ್ಷಣವೊಂದು ನಿಮಗೆ ಒದಗಿ ಬರಲಿದೆ. ಕುಟುಂಬದ ಸದಸ್ಯರೊಂದಿಗೆ ಅಪರೂಪದ ಹಿಂದಿನ ಕ್ಷಣಗಳನ್ನು ನೆನಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕ್ಷೇತ್ರ ದರ್ಶನದ ಭಾಗ್ಯ.

ಮಕರ

ವಿಪರೀತ ಕೆಲಸದ ನಡುವೆಯೂ ಮಾನಸಿಕ ಸ್ಥಿಮಿತ ನಿಮ್ಮದಾಗಲಿದೆ. ಸಹವರ್ತಿಗಳಲ್ಲಿ ಉತ್ಸಾಹ, ಹುರುಪು ತುಂಬುವಿರಿ. ದಿನದಂತ್ಯದಲ್ಲಿ ವಿಪರೀತ ದಣಿವು ಅರಿವಿಗೆ ಬರಲಿದೆ.

ಕುಂಭ

ಸಂಗಾತಿಯ ಸಮೀಪವೇ ಇದ್ದು ಮನದ ಆಸೆಯನ್ನು ಪೂರೈಸಿ. ನಿಮ್ಮ ಇಷ್ಟಕ್ಕೆ ಉತ್ತಮ ಸಹಕಾರ ದೊರೆಯಲಿದೆ. ನೆಮ್ಮದಿಯ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಗಾಗಿ ಪಕ್ಷಿಗಳಿಗೆ ಕಾಳುಗಳನ್ನು ನೀಡಿ.

ಮೀನ

ಕಾರ್ಯಕ್ಷೇತ್ರದಲ್ಲಿ ಹಿರಿಯ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಂದ ಉತ್ತಮ ಸಹಕಾರ ದೊರೆಯಲಿದೆ. ಹಿರಿಯರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ನಿಮ್ಮದಾಗಲಿದೆ.

ಮೇ 15,ಶನವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ ,ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ ,”ತೃತಿಯ/ಚತುರ್ಥಿ”
ಶನಿವಾರ, “ಮೃಗಶಿರ ನಕ್ಷತ್ರ /ಆರಿದ್ರಾ ನಕ್ಷತ್ರ”
ರಾಹುಕಾಲ 09: 10 ರಿಂದ 10:45
ಗುಳಿಕಕಾಲ 05:59 ರಿಂದ 07:35
ಯಮಗಂಡಕಾಲ 01:55 3:30

ಮೇಷ

ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ.

ವೃಷಭ

ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ರಕ್ತ ಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಮಕ್ಕಳ ನಡವಳಿಕೆಗಳ ಬಗ್ಗೆ ಗಮನವಿರಲಿ.

ಮಿಥುನ

ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯಲಿವೆ. ಹಗಲುಗನಸು ಕಾಣುವುದು ಬೇಡ. ಆಲಸ್ಯದಿಂದ ದೂರವಿರಿ. ಉತ್ತಮ ಯೋಜನೆಯನ್ನು ರೂಪಿಸಿ. ದೀನರಿಗೆ ಸಹಾಯ ಹಸ್ತ ನೀಡಿ.

ಕಟಕ

ಬಹುದಿನಗಳ ವೃತಿಯಲ್ಲಿನ ಉದ್ವಿಘ್ನತೆ ದೂರವಾಗಲಿದೆ. ಸಂಗಾತಿಯೊಂದಿಗೆ ವಿಶ್ರಾಂತ ಸ್ಥಳಕ್ಕೆ ತೆರಳಲಿದ್ದೀರಿ. ನಿವೃತ್ತರಿಗೆ ಪುಣ್ಯ ಕ್ಷೇತ್ರ ದರ್ಶನ ಸಾಧ್ಯತೆ. ಉನ್ನತ ಸ್ಥಾನ ಲಭ್ಯವಾಗುವ ಸಾಧ್ಯತೆ.

ಸಿಂಹ

ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ.

ಕನ್ಯಾ

ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚನೆ ಬೇಡ. ಆತುರದ ನಿರ್ಧಾರ ಸಲ್ಲದು. ಆಂಜನೇಯನ ದರ್ಶನ ಮಾಡಿ.

ತುಲಾ

ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಜಂಜಾಟ ಪರಿಸ್ಥಿತಿಯು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಈ ದಿನವನ್ನು ಖುಷಿಯಾಗಿ ಕಳೆಯಲು ಸ್ನೇಹಿತರು ಜೊತೆಯಲ್ಲಿರುತ್ತಾರೆ.

ವೃಶ್ಚಿಕ

ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಒಳಿತನ್ನು ಕೊಡಲಿದೆ. ಕೆಲಸದ ಒತ್ತಡದ ನಡುವೆಯೂ ಖುಷಿಯ ಅನುಭವ ನಿಮ್ಮ ಪಾಲಿಗೆ. ಕಿರಿಯರ ಮೇಲೆ ಜಾಗ್ರತೆ ಇರಲಿ. ಪ್ರಯಾಣದಲ್ಲಿ ಸುಖಾನುಭವ.

ಧನು

ಹಳೆಯ ಸ್ನೇಹಿತರಿಂದ ಮತ್ತು ಉದ್ಯಮಿಗಳಿಂದ ನೆರವು ದೊರೆಯಲಿದೆ. ಆಪ್ತ ಬಂಧುಗಳಿಂದ ಉಪಯುಕ್ತ ಸಲಹೆ ದೊರೆಯಲಿದೆ. ಆರೋಗ್ಯದಲ್ಲಿ ಪ್ರಗತಿ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.

ಮಕರ

ಉದ್ಯೋಗದಲ್ಲಿ ಪ್ರಗತಿ. ಕ್ರೀಡಾಸ್ಪರ್ಧಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಕಳೆದುಕೊಂಡ ಸಂಪತ್ತು ಪುನಃ ಸಿಗಲಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ. ಮಕ್ಕಳಿಂದ ನೆಮ್ಮದಿ ಮೂಡಿಬರಲಿದೆ.

ಕುಂಭ

ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ರಾಜಕೀಯದಲ್ಲಿ ಅತಂತ್ರ ಸ್ಥಿತಿ. ಮಾನಸಿಕ ಚಂಚಲತೆ ಕಂಡುಬರುವುದು.

ಮೀನ

ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವಿದ್ಯಾರ್ಥಿಗಳಿಗೆ ಸಂತಸದ ದಿನ. ಆರ್ಥಿಕ ದೃಢೀಕರಣಕ್ಕಾಗಿ ಹೊಸ ರೂಪ ರೇಷೆಯನ್ನು ನೆರವೇರಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಮೇ 14, ಶುಕ್ರವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:
ಪ್ಲವ ನಾಮ ಸಂವತ್ಸರ ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತೃತಿಯ,
ಶುಕ್ರವಾರ, ‘ಮೃಗಶಿರಾ ನಕ್ಷತ್ರ’.
ರಾಹುಕಾಲ: 10 45 ರಿಂದ 12 20
ಗುಳಿಕಕಾಲ: 7:35 ರಿಂದ 9: 10
ಯಮಗಂಡಕಾಲ: 3.30 ರಿಂದ 05:05

ಮೇಷ

ಹಳೆಯ ಸ್ನೇಹಿತರಿಂದ ಮತ್ತು ಉದ್ಯಮಿಗಳಿಂದ ನೆರವು. ಆಪ್ತ ಬಂಧುಗಳಿಂದ ಉಪಯುಕ್ತ ಸಲಹೆ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.

ವೃಷಭ

ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯಲಿವೆ. ಹಗಲುಗನಸು ಕಾಣುವುದು ಬೇಡ. ಆಲಸ್ಯದಿಂದ ದೂರವಿರಿ. ಉತ್ತಮ ಯೋಜನೆಯನ್ನು ರೂಪಿಸಿ. ದೀನರಿಗೆ ಸಹಾಯ ಹಸ್ತ ನೀಡಿ. ‌

ಮಿಥುನ

ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಒಳಿತನ್ನು ಕೊಡಲಿದೆ. ಕೆಲಸದ ಒತ್ತಡದ ನಡುವೆಯೂ ಖುಷಿಯ ಅನುಭವ ನಿಮ್ಮ ಪಾಲಿಗೆ. ಕಿರಿಯರ ಮೇಲೆ ಜಾಗ್ರತೆ ಇರಲಿ. ಪ್ರಯಾಣದಲ್ಲಿ ಸುಖಾನುಭವವನ್ನು ಹೊಂದಲಿದ್ದೀರಿ.

ಕಟಕ

ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವಿದ್ಯಾರ್ಥಿಗಳಿಗೆ ಸಂತಸದ ದಿನವಾಗಲಿದೆ. ಆರ್ಥಿಕ ದೃಢೀಕರಣಕ್ಕಾಗಿ ಹೊಸ ರೂಪ ರೇಷೆಯನ್ನು ನೆರವೇರಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಸಿಂಹ

ಉದ್ಯೋಗದಲ್ಲಿ ಪ್ರಗತಿ. ಕ್ರೀಡಾಸ್ಪರ್ಧಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಕಳೆದುಕೊಂಡ ಸಂಪತ್ತು ಪುನಃ ಸಿಗಲಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ. ಮಕ್ಕಳಿಂದ ನೆಮ್ಮದಿ ಮೂಡಿಬರಲಿದೆ.

ಕನ್ಯಾ

ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಿಸುವಲ್ಲಿ ಸಫಲರಾಗುತ್ತೀರಿ. ರಕ್ತ ಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ಮಕ್ಕಳ ನಡವಳಿಕೆಗಳ ಬಗ್ಗೆ ಗಮನವಿರಲಿ.

ತುಲಾ

ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ.

ವೃಶ್ಚಿಕ

ಬಹುದಿನಗಳ ವೃತ್ತಿಯಲ್ಲಿನ ಉದ್ವಿಘ್ನತೆ ದೂರವಾಗಲಿದೆ. ಸಂಗಾತಿಯೊಂದಿಗೆ ವಿಶ್ರಾಂತ ಸ್ಥಳಕ್ಕೆ ತೆರಳಲಿದ್ದೀರಿ. ಉನ್ನತ ಸ್ಥಾನ ಲಭ್ಯವಾಗುವ ಸಾಧ್ಯತೆ. ದಿನದ ಕೊನೆಯಲ್ಲಿ ಶುಭ ಸೂಚನೆ.

ಧನು

ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ರಾಜಕೀಯದಲ್ಲಿ ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾದೀತು. ಮಾನಸಿಕ ಚಂಚಲತೆ.

ಮಕರ

ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಜಂಜಾಟ ಪರಿಸ್ಥಿತಿ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಧೃತಿಗೆಡಬೇಕಾದ ಅಗತ್ಯವಿಲ್ಲ. ಈ ದಿನವನ್ನು ಖುಷಿಯಾಗಿ ಕಳೆಯಲು ಸ್ನೇಹಿತರು ಜೊತೆಯಲ್ಲಿರುತ್ತಾರೆ.

ಕುಂಭ

ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚನೆ ಬೇಡ. ಆತುರದ ನಿರ್ಧಾರ ಸಲ್ಲದು. ಆಂಜನೇಯನ ದರ್ಶನ ಮಾಡಿ.

ಮೀನ

ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ.

ಅಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”

ಲೇಖನ : ಶ್ರೀಕಾಂತ್ ಶೆಟ್ಟಿ

ಆ ಚಿಲ್ಲರೆ 35 ಎಕರೆ ಜಾಗಕ್ಕಾಗಿ ಪ್ರಪಂಚದ ಮೂರು ಪ್ರಬಲ ಮತಗಳು ಕಳೆದ ಮೂರು ಸಾವಿರ ವರ್ಷಗಳಿಂದ ಬಡಿದಾಡುತ್ತಿವೆ. ಅಯೋಧ್ಯ ಕಾಶಿ ಮಥುರಾ ಮೊದಲಾದ 500 ವರ್ಷದ ಕೆಳಗೆ ಮುಸಲ್ಮಾನರ ದಾಳಿಗೆ ತುತ್ತಾಗಿ ಹಿಂದುಗಳ ಕೈ ತಪ್ಪಿಹೋದ ತೀರ್ಥಕ್ಷೇತ್ರಗಳನ್ನು ಹಿಂದುಗಳಿಗೆ ಮರಳಿ ಕೊಡಿ ಎಂದುಕೇಳಿಕೊಂಡಾಗ , ಅದಕ್ಕೆ ಯಾಕ್ರೀ ಗಲಾಟೆ ಮಾಡುತ್ತಿದ್ದೀರಾ ಅಲ್ಲೊಂದು ಆಸ್ಪತ್ರೆನೋ . ಶಾಲೆನೋ ಕಟ್ಟಿ. ಸುಮ್ಮನೆ ಯಾಕೆ ಘರ್ಷಣೆ? ಎಂದು ಮಹಾ ಮಾನವತಾವಾದಿಗಳಂತೆ ಸೋಗು ಹಾಕುವ ಬುದ್ದಿಜೀವಿಗಳು ಜೆರುಸಲೆಮ್ಮಿನ ಮಾತೆತ್ತಿದರೆ ಸಾಕು ನಾಲಿಗೆ ಸತ್ತವರಂತೆ ಸುಮ್ಮನಾಗಿಬಿಡುತ್ತಾರೆ . ಜೆರುಸಲೇಮ್ ಎಂಬ ನಗರದೊಳಗಿರುವ ಆ ಪುಟ್ಟ ಪ್ರದೇಶಕ್ಕಾಗಿ ಯಹೂದಿಗಳು ಕ್ರೈಸ್ತರು ಮತ್ತು ಮುಸಲ್ಮಾನರು ಕಳೆದ ಎರಡು ಸಾವಿರ ವರ್ಷಗಳಿಂದ ಬಡಿದಾಡುತ್ತಾ ಬಂದಿದ್ದಾರೆ. ಇದಕ್ಕಾಗಿ 41 ಭಾರಿ ಪ್ರಮಾಣದ ಯುದ್ಧಗಳಾಗಿವೆ. ಲೆಕ್ಕವಿಲ್ಲದಷ್ಟು ಘರ್ಷಣೆ ನಡೆದು ಲಕ್ಷಾಂತರ ಜನ ಸತ್ತಿದ್ದಾರೆ. ಜೆರೂಸಲೇಮಿನ ಮಣ್ಣು ಹೀರಿಕೊಂಡ ರಕ್ತದಲ್ಲಿ ಯಹೂದಿ ಬುಡಕಟ್ಟುಗಳುಬ್ಯಾಬಿಲೋನಿಯನ್ನರು ಬೆಜಂಟೈನರು, ರೋಮನ್ ಕ್ರೈಸ್ತರು ಆಟೋಮನ್ನರು ಹೀಗೆ ಹತ್ತಾರು ಪಂಗಡಗಳ ಪಾಲಿದೆ.
ಆದರೆ ಜೆರುಸಲಂ ಎಂಬ ಪವಿತ್ರ ಭೂಮಿಯ ರಕ್ತದಾಹ ಇನ್ನೂ ತಣಿದಿಲ್ಲ
ಅಷ್ಟಕ್ಕೂ ಈ ಜಗತ್ತಿನ ಅತ್ಯಂತ ವಿವಾದಗ್ರಸ್ತ ಭೂಮಿಯ ಇತಿಹಾಸವೇನು ತಿಳಿದುಕೊಳ್ಳುವ ಸಣ್ಣ ಪ್ರಯತ್ನ ಮಾಡೋಣ.
ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸೆಮಿಟಿಕ್ ಮತಗಳ ( ಯಹೂದಿ ಕ್ರೈಸ್ತ ಮತ್ತು ಇಸ್ಲಾಂ) ಆದ್ಯ ಪ್ರವಾದಿ ಅಬ್ರಹಮ್ ನಿಂದ ಯಹೂದಿ ಮತ ಸ್ಥಾಪನೆಯಾಯಿತು. ಅಬ್ರಾಮನಿಗೆ ದೇವರ ಸಾಕ್ಷಾತ್ಕಾರವಾಗಿದ್ದು ಇದೇ ಜೆರುಸಲೆಮ್ಮಿನ ಗುಡ್ಡದಮೇಲೆ.. ಇದೇ ಗುಡ್ಡದ ಮಣ್ಣಿನಿಂದ ದೇವರು ಪ್ರಪಂಚದ ಮೊತ್ತಮೊದಲ ಮಾನವನಾದ ಆದಮನನ್ನು ಸೃಷ್ಟಿ ಮಾಡಿದ ಎನ್ನುವ ನಂಬಿಕೆ ಯಹೂದಿಗಳಲ್ಲಿ ಇದೆ. ಯಹೂದಿ ಮತಸ್ಥಾಪಕ ಅಬ್ರಹಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಇಸ್ಮಾಯಿಲ್ ಮತ್ತೊಬ್ಬ ಇಸಾಕ್. ಇಸಾಕ್ ಅಬ್ರಹಮನ ಅತ್ಯಂತ ಪ್ರೀತಿಯ ಮಗ. ಒಂದು ದಿನ ಅಬ್ರಹಾಮನಿಗೆ ದೇವರು ಕಾಣಿಸಿಕೊಂಡು ಇಸಾಕನನ್ನು ತನಗೆ ಬಲಿ ಕೊಡಬೇಕು ಎಂದು ಕೇಳಿದ. ದೇವರ ಬಗ್ಗೆ ಅಪಾರ ಭಕ್ತಿ ಪ್ರೀತಿಯಿಂದ ಅಬ್ರಾಹಂ ತನ್ನ ಮಗನನ್ನು ಬಲಿ ಕೊಡಲು ಜೆರೂಸಲೇಮಿನ ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಅಬ್ರಹಮನ ತ್ಯಾಗವನ್ನು ಕಂಡ ದೇವರು ಇಸಾಕನ ಬದಲಿಗೆ ಒಂದು ಮೇಕೆಯನ್ನು ಬಲಿ ಪಡೆದು ಇಸಾಕನಿಗೆ ಜೀವದಾನ ನೀಡಿದ. ಈ ಘಟನೆ ನಡೆದಿದ್ದು ಕೂಡ ಜೆರೂಸಲೇಮಿನ ಪವಿತ್ರ ಭೂಮಿಯಲ್ಲಿ. ಯಹೂದಿಗಳು ಈ ನೆಲಕ್ಕೆ ಹರ್ ಹವಾಯಿಯತ್ ಎಂದು ಕರೆಯುತ್ತಾರೆ.

ಅಬ್ರಹಮ್ ಮೊದಲು ವಾಸವಾಗಿದ್ದು ಮೆಸಪಟೊಮಿಯದಲ್ಲಿ. ಆದರೆ ಆತನಿಗೆ ಭಗವದ್ ಸಾಕ್ಷಾತ್ಕಾರ ವಾಗಿದ್ದು ಮಾತ್ರ ಜೆರುಸಲೆಂ ಎಂಬ ಬರಡು ಬೆಂಗಾಡಿನ ಗುಡ್ಡದಮೇಲೆ. ಹಿಬ್ರೂ ಬೈಬಲ್ಲಿನ ಬುಕ್ ಅಫ್ ಜೆನೆಸಿಸ್ ನಲ್ಲಿ ದೇವರು ಮತ್ತು ಅಬ್ರಹಾಂ ನಡುವಿನ ಸಂಭಾಷಣೆಯ ವಿವರ ಸಿಗುತ್ತದೆ. ದೇವರ ಆದೇಶದಂತೆ ಅಬ್ರಹಮ್ ಜೆರುಸಲೇಮಿಗೆ ಬಂದು ಅದರ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಾರೆ. ಅವರ ಮೊಮ್ಮಗ ಅಂದರೆ ಇಸಾಕನ ಮಗ ಜಾಕೋಬ್ ಮಹಾನ್ ಪರಾಕ್ರಮಿ. ಆತ ದೇವದೂತರೊಡನೆ ಹೋರಾಟ ಮಾಡಿದ ಎಂಬ ದಂತಕಥೆಗಳು ಇವೆ. ಈತನ ಧೈರ್ಯ ಮತ್ತು ಪರಾಕ್ರಮವನ್ನು ಕಂಡು ಆತನಿಗೆ ಇಸ್ರೇಲ್ ಎಂಬ ಬಿರುದನ್ನು ದೇವದೂತರು ನೀಡುತ್ತಾರೆ. ಇವನು ತನ್ನ ಬಾಹುಬಲದಿಂದ ಒಂದು ದೇಶವನ್ನು ಕಟ್ಟಿದ. ಆ ದೇಶದ ಹೆಸರು ಇಸ್ರೇಲ್. ಮುಂದೆ ಜಕೋಬನ 12 ಮಕ್ಕಳು ಮುಂದೆ 12 ಯಹೂದಿ ಬುಡಕಟ್ಟುಗಳಾಗಿ ಬೆಳೆದು. ಇಸ್ರೇಲಿನ ತುಂಬಾ ಹರಡಿಕೊಂಡರು. ಯಹೂದಿಗಳ ಸಮೃದ್ಧವಾದ ಇಸ್ರೇಲ್ ಹುಟ್ಟಿದ್ದು ಹೀಗೆ.

ಯಹೂದಿಗಳ ಪ್ರಸಿದ್ಧ ಅರಸನಾದ ಕಿಂಗ್ ಸೋಲೋಮನ್ ಜೆರೂಸಲೇಮಿನ ಗುಡ್ಡದ ಪವಿತ್ರ ಭೂಮಿಯಲ್ಲಿ ಒಂದು ಭವ್ಯ ದೇವಾಲಯವನ್ನು ನಿರ್ಮಿಸಿದ. ಅಲ್ಲಿಂದ ಮುಂದೆ ಈ ಗುಡ್ಡಕ್ಕೆ ಟೆಂಪಲ್ ಮೌಂಟ್ ಎಂಬ ಇನ್ನೊಂದು ಹೆಸರು ಸೇರ್ಪಡೆಯಾಯಿತು.

ಈ ದೇಗುಲ ಕಟ್ಟಲ್ಪಟ್ಟಿದ್ದು 3000 ವರ್ಷಗಳ ಹಿಂದೆ. ಇದನ್ನು ಜೆರುಸಲೆಮ್ಮಿನ ಇತಿಹಾಸದಲ್ಲಿ ಮೊದಲ ದೇವಾಲಯ ಅಥವಾ ಫಸ್ಟ್ ಟೆಂಪಲ್ ಎಂದು ಕರೆಯುತ್ತಾರೆ. ನಾಗರಿಕತೆಗಳ ನಡುವೆ ಸಂಘರ್ಷ ಉತ್ತುಂಗದಲ್ಲಿದ್ದ ಕಾಲಘಟ್ಟವದು. ಬ್ಯಾಬಿಲೋನಿಯನ್ನರು ಯಹೂದಿಗಳ ಮೇಲೆ ದಾಳಿ ಮಾಡಿ ಜೆರುಸಲೇಮನ್ನು ವಶಪಡಿಸಿಕೊಂಡು ಅಲ್ಲಿದ್ದ ದೇವಾಲಯದ ಅಪಾರ ಸಂಪತ್ತನ್ನು ಲೂಟಿ ಮಾಡಿ ದೇವಾಲಯವನ್ನು ನೆಲಸಮ ಮಾಡಿದರು. ಇದು ಯಹೂದಿಗಳ ಮೇಲೆ ನಡೆದ ಮೊದಲ ಆಕ್ರಮಣ.

ಆದರೆ ಯಹೂದಿಗಳು ವಿರಮಿಸಲಿಲ್ಲ ಸತತವಾದ ಹೋರಾಟದ ಬಳಿಕ ತಮ್ಮ ಪವಿತ್ರ ಭೂಮಿಯನ್ನು ಮತ್ತೆ ವಶಪಡಿಸಿಕೊಂಡು 500 ವರ್ಷಗಳ ತರುವಾಯ ಅಂದರೆ ಇಂದಿನಿಂದ ಸುಮಾರು ಎರಡುವರೆ ಸಾವಿರ ವರ್ಷದ ಹಿಂದೆ ಮತ್ತೆ ತಮ್ಮ ದೇವಾಲಯವನ್ನು ಜೆರೂಸಲೇಮಿನ ಅದೇ ಸ್ಥಳದಲ್ಲಿ ಕಟ್ಟಿದರು. ಇದನ್ನು ಸೆಕೆಂಡ್ ಟೆಂಪಲ್ ಎನ್ನುತ್ತಾರೆ.

ಇದಾದ ಆರುನೂರು ವರ್ಷಗಳ ಬಳಿಕ ಜೆರುಸಲೆಮ್ ನಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ ನಡೆಯಿತು. ಯಹೂದಿ ಚಿಂತನೆಗಳನ್ನು ದಿಕ್ಕರಿಸಿ ನಾನೇ ದೇವರ ಮಗ ಎಂದು ಯೇಸುಕ್ರಿಸ್ತರು ಮತಪ್ರಚಾರ ಆರಂಭಿಸಿದರು. ಇದು ಯಹೂದಿಗಳ ಕಣ್ಣು ಕೆಂಪಾಗಿಸಿತು. ಸಾಮಾನ್ಯವಾಗಿ ಹೊಸಮತ ಒಂದರ ಉಗಮದ ಸಮಯದಲ್ಲಿ ಎದುರಾಗುವ ಪ್ರತಿರೋಧಗಳನ್ನು ಯೇಸುಕ್ರಿಸ್ತರು ಕೂಡ ಎದುರಿಸಬೇಕಾಯಿತು. ಯೇಸು ಕ್ರಿಸ್ತರನ್ನು ಇದೇ ಜರೂಸಲಮ್ ನ ಗುಡ್ಡದಮೇಲೆ ಯಹೂದಿಗಳು ಶಿಲುಬೆಗೇರಿಸಿದರು. ಆ ಮೂಲಕ ಯಹೂದಿಗಳಿಗೆ ಒಬ್ಬ ಪ್ರಬಲ ಶತ್ರು ಪಂಗಡ ಹುಟ್ಟಿಕೊಂಡಿತು. ಅದೇ ಕ್ರಿಶ್ಚಿಯನಿಟಿ

ರಾಜ್ಯಾಧಿಕಾರ ಸಿಗುವವರೆಗೆ ಕಾದುಕುಳಿತಿದ್ದ ಕ್ರೈಸ್ತಮತ ಅವಲಂಬಿಗಳು ರೋಮನ್ ಸಾಮ್ರಾಜ್ಯ ತಮ್ಮ ಕೈವಶ ಆಗುತ್ತಿದ್ದಂತೆ ಯಹೂದಿಗಳ ಮೇಲೆ ಮುರಕೊಂಡು ಬಿದ್ದರು. ಕ್ರಿಸ್ತಶಕ 70ರಲ್ಲಿ ರೋಮನ್ನರು ಯಹೂದಿಗಳ ವಿರುದ್ಧ ಪ್ರತೀಕಾರ ತೀರಿಸಿ ಅವರ ಪವಿತ್ರ ಬೆಟ್ಟದ ಮೇಲಿದ್ದ ಎರಡನೇ ದೇವಾಲಯವನ್ನು ಕೂಡ ಮುರಿದು ಹಾಕಿದರು. ಆದರೆ ಆ ಎರಡನೇ ದೇಗುಲ ಪಶ್ಚಿಮ ಭಾಗದ ಒಂದು ಗೋಡೆ ಮಾತ್ರ ಉಳಿದುಕೊಂಡಿತು. ಅದು ಇವತ್ತಿನವರೆಗೂ ಅಸ್ತಿತ್ವದಲ್ಲಿದೆ. ವೆಸ್ಟರ್ನ್ ವಾಲ್ ಎಂದು ಕರೆಯಲ್ಪಡುವ ಆ ಗೋಡೆ ಇಂದಿಗೂ ಜಗತ್ತಿನ ಮೂಲೆ ಮೂಲೆಯಲ್ಲಿರುವ ಯಹೂದಿಗಳಿಗೆ ಅತ್ಯಂತ ಪರಮಪವಿತ್ರ ಸ್ಥಳ.
ಜೆರೂಸಲೇಮಿನ ಲ್ಲಿದ್ದಾಗ ಎರಡನೇ ದೇವಾಲಯದ ಒಳಗೆ ಕೇವಲ ರಬ್ಬಿ ಗಳು ಮಾತ್ರ ತೆರಳುತ್ತಿದ್ದರಂತೆ. ಸಾಮಾನ್ಯ ಯಹೂದಿಗಳಿಗೂ ಈ ದೇವಾಲಯದ ಒಳಗೆ ಪ್ರವೇಶ ಇರಲಿಲ್ಲ. ಹೀಗಾಗಿ ಸಂಪ್ರದಾಯಸ್ಥ ಯಹೂದಿಗಳು ಇವತ್ತಿಗೂ ಕೂಡ ಗೋಡೆಗೆ ದೂರದಿಂದಲೇ ನಮಸ್ಕರಿಸುತ್ತಾರೆ. ತಪ್ಪಿಯೂ ಗೋಡೆ ಆಚೆಗಿರುವ ಭೂಮಿಯ ಮೇಲೆ ಕಾಲಿಡುವುದಿಲ್ಲ. ಅಷ್ಟೊಂದು ಗಾಢವಾದ ಧಾರ್ಮಿಕ ನಂಬಿಕೆ ಯಹೂದ್ಯರಲ್ಲಿ ಇದೆ.
ಚಕ್ರವರ್ತಿ ಹ್ಯಾಡ್ರಿಯನ್ ಕಾಲದಲ್ಲಿ ಯಹೂದಿಗಳು ಜೆರುಸಲೇಮಿಗೆ ಬೇಕಾಗಿ ಮತ್ತೊಂದು ನಿರ್ಣಾಯಕ ಯುದ್ಧ ಮಾಡಿದರು. ಇದರಿಂದ ಕುಪಿತಗೊಂಡ ಹ್ಯಾಡ್ರಿಯನ್ ಆ ದೇಶಕ್ಕೆ ಇದ್ದ ಇಸ್ರೇಲ್ ಎಂಬ ಹೆಸರನ್ನೇ ಅಳಿಸಿಹಾಕಿ ಯಹೂದಿಗಳ ಪರಮ ವೈರಿಗಳಾದ ಸಿರಿಯನ್ನರು ಮತ್ತು ಪೆಲಿಸ್ತಿಯನ್ನರಿಗೆ ಅಲ್ಲಿ ಪರಮಾಧಿಕಾರವನ್ನು ಕೊಟ್ಟು ಆ ದೇಶದ ಹೆಸರನ್ನೇ ಸಿರಿಯ ಮತ್ತು ಪ್ಯಾಲೇಸ್ತೀನ್ ಎಂದು ಮರುನಾಮಕರಣ ಮಾಡಿದ. ಮತ್ತು ಜೆರುಸಲೇಮನ್ನು ಅದರ ರಾಜಧಾನಿಯನ್ನಾಗಿ ಘೋಷಣೆ ಮಾಡಿದ.
ಇಷ್ಟಕ್ಕೆ ಅವನ ಯಹೂದಿಗಳ ಮೇಲಿನ ದ್ವೇಷ ತಣ್ಣಗಾಗಲಿಲ್ಲ. ಅಲ್ಲಿದ್ದ ಒಂದೊಂದು ಯಹೂದಿ ಮಗುವನ್ನು ಕೂಡ ಎತ್ತಿ ಆಚೆಗೆ ಎಸೆಯುವವರೆಗೂ ಅವನ ಸೈನ್ಯ ವಿರಮಿಸಲಿಲ್ಲ. ಯಹೂದಿಗಳು ತಮ್ಮ ಮಾತೃಭೂಮಿಯನ್ನು ಬಿಟ್ಟು ಜಗತ್ತಿನ ಮೂಲೆ ಮೂಲೆಗೆ ಹಂಚಿ ಹರಡಿ ಹೋಗುವಂತಾಯಿತು. ಈ ಸಮಯದಲ್ಲಿ ಇಲ್ಲಿಗೆ ಬಂದವರು ಪ್ರವಾದಿ ಮಹಮ್ಮದ್ ಪೈಗಂಬರ್.

ಕುರಾನಿನ ಪ್ರಕಾರ ಕ್ರಿಸ್ತ ಶಕ 621 ರಲ್ಲಿ ಮೋಹಮ್ಮದ್ ಬುರಾಕ್ ಎಂಬ ಹಾರುವ ಕುದುರೆಯ ಮೇಲೆ ಕುಳಿತು ಮೆಕ್ಕಾದಿಂದ ಜೆರುಸಲೇಮಿಗೆ ಬಂದರಂತೆ. ಅಲ್ಲಿಂದ ಅವರು ಮತ್ತೆ ಅದೇ ಕುದುರೆಯ ಮೇಲೆ ಕುಳಿತು ಒಂದೇ ನೆಗೆತಕ್ಕೆ ನೇರವಾಗಿ ಸ್ವರ್ಗಕ್ಕೆ ಜಿಗಿದು ಅಲ್ಲಿ ದೇವರ ಜೊತೆ ಒಂದಷ್ಟು ಮಾತುಕತೆ ಮಾಡಿ ಮತ್ತೆ ಬಂದು ಜೆರೂಸಲೇಮಿನಲ್ಲಿ ಇಳಿದರು ಎನ್ನುವುದು ಮುಸಲ್ಮಾನರ ನಂಬಿಕೆ. ಗಮನಿಸಿ ಇದೆಲ್ಲಾ ಆಗಿರೋದು ಆರನೇ ಶತಮಾನದಲ್ಲಿ!

ಮೊದಲೇ ಅನೇಕ ಜನರ ರಕ್ತಪಾತ ದಿಂದ ಸಾಮಾಜಿಕ ಶಾಂತಿಯನ್ನು ಕದಡಿ ಹಾಕಿದ್ದ ಜೆರೂಸಲೇಮಿನ ವಿವಾದಗ್ರಸ್ತ ಭೂಮಿಯಲ್ಲಿ ಬಂದು ಮಹಮ್ಮದ್ ಪೈಗಂಬರ್ ಅವರು ಕುದುರೆ ಇಳಿಸಿದ್ದು, ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಅವರ ಹಾರುವ ಕುದುರೆ ಒಂದೆರಡು ಕಿಲೋಮೀಟರ್ ಆಚೆಗೆ ಎಲ್ಲಾದರೂ ಇಳಿದಿದ್ದರೆ ಧರ್ಮ-ಧರ್ಮಗಳ ನಡುವಿನ ಬಡಿದಾಟ ರಕ್ತಪಾತ ಅಮಾಯಕ ಮಕ್ಕಳ ಕಗ್ಗೊಲೆಗಳು ತಪ್ಪುತ್ತಿದ್ದವು .

ಮುಸಲ್ಮಾನರು ಈ ಪ್ರದೇಶವನ್ನು ಹರ್ ಅಲ್ ಆಮ್ ಶರೀಫ್ ಎಂದು ಕರೆಯುತ್ತಾರೆ. ಕ್ರಿಸ್ತಶಕ 632 ರಲ್ಲಿ ಪೈಗಂಬರ್ ತೀರಿಕೊಂಡರು. ಇದಾದ ನಾಲ್ಕೇ ವರ್ಷದಲ್ಲಿ ಉಮೈಯತ್ ಖಲೀಫಾ ನೇತೃತ್ವದಲ್ಲಿ ಜೆರೂಸಲೇಮಿನ ಮೇಲೆ ದಾಳಿ ನಡೆಯಿತು. ಆಗ ಜೆರುಸಲೇಂ ಬೆಜೆಂಟಾಯಿನ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ರೋಮನ್ ಕ್ರೈಸ್ತರ ಕೈಯಲ್ಲಿದ್ದ ಜೆರೂಸಲೇಮಿನ ಪವಿತ್ರ ಭೂಮಿ ಮುಸಲ್ಮಾನರ ವಶವಾಯಿತು. ಅಲ್ಲಿ ಅದಾಗಲೇ ಕ್ರೈಸ್ತರು ಒಂದು ಭವ್ಯವಾದ ಚರ್ಚ್ ಕಟ್ಟಿದ್ದರು. ಪುನರುತ್ಥಾನದ ದಿನ ಏಸು ಇಲ್ಲಿಂದಲೇ ಮತ್ತೆ ಎದ್ದು ಬರುತ್ತಾನೆ ಎಂಬ ಗಾಢ ನಂಬಿಕೆ ಕ್ರೈಸ್ತರದಾಗಿತ್ತು. ಜೆರುಸಲೇಮನ್ನು ಕೈವಶ ಮಾಡಿಕೊಂಡ ಖಲಿಫಾ ಅಲ್ಲೊಂದು ಮಸೀದಿ ಕಟ್ಟಿ ಅದಕ್ಕೆ ಅಲ್ ಅಕ್ಸ ಮಸೀದಿ ಎಂದು ಹೆಸರಿಟ್ಟ. ಯಾವ ಕಲ್ಲಿನ ಮೇಲಿಂದ ಪೈಗಂಬರ್ ಅವರ ಕುದುರೆ ಆಕಾಶಕ್ಕೆ ಉಡಾವಣೆ ಮಾಡಿತ್ತೋ ಆ ಕಲ್ಲು ಇದ್ದ ಜಾಗದಲ್ಲಿ ಡೊಮ್ ಆಫ್ ದಿ ರಾಕ್ ಎಂಬ ಮತ್ತೊಂದು ಮಸೀದಿ ಕಟ್ಟಿ ಅದರ ಗೋಪುರಕ್ಕೆ ಚಿನ್ನದ ತಗಡು ಮುಚ್ಚಿಸಿದರು.

ಒಂದು ವಾದದ ಪ್ರಕಾರ ಇಸ್ರೇಲಿಗರ ಮೊದಲ ದೇವಾಲಯ ಇದ್ದ ಜಾಗದಲ್ಲೇ ಉದ್ದೇಶಪೂರ್ವಕವಾಗಿ ಮುಸಲ್ಮಾನರು ಈ ಮಸೀದಿಯನ್ನು ಕಟ್ಟಿದ್ದಾರೆ ಎಂದು ಮಧ್ಯಪ್ರಾಚ್ಯದ ಇತಿಹಾಸಕಾರರು ಹೇಳುತ್ತಾರೆ

ಇತ್ತ ಕ್ರೈಸ್ತರು ಜೆರುಸಲೇಮನ್ನು ಕಳೆದುಕೊಂಡರು. ಕೈಯಲ್ಲಿ ಕತ್ತಿಯನ್ನು ಝಳಪಿಸುತ್ತಾ ಮೆದುಳಿನೊಳಗೆ ಮತಾಂಧತೆಯನ್ನು ತುಂಬಿಕೊಂಡು ದೀನ್ ದೀನ್ ಎಂದು ವಿಕಾರ ಸದ್ದು ಮಾಡುತ್ತಾ ನಾಲ್ಕು ದಿಕ್ಕಿಗೆ ಇಸ್ಲಾಮಿನ ಕತ್ತಿ ಕುದುರೆಗಳನ್ನು ಕೊಂಡು ಹೋದ ಖಲಿಫಾಗಳ ಮುಂದೆ ಕ್ರೈಸ್ತರು ಪತರುಗುಟ್ಟಿದ್ದರು. ಇನ್ನೂ ಶತ್ರುಗಳನ್ನು ಪ್ರೀತಿಸಿ ಎನ್ನುತ್ತಾ ಬ್ರೆಡ್ಡನ್ನು ಹಂಚಿದರೆ ನಮ್ಮ ಮತಕ್ಕೆ ಉಳಿಗಾಲ ಇಲ್ಲ ಎಂದರಿತು, ಹತ್ತಾರು ರಾಜ್ಯಗಳಲ್ಲಿ ಹಂಚಿಹೋಗಿದ್ದ ಕ್ರೈಸ್ತರನ್ನು ಒಂದು ಮಾಡಿ ಇಸ್ಲಾಮಿನ ದಾಳಿಯ ವಿರುದ್ಧ ಸಂಘಟಿತ ಹೋರಾಟಕ್ಕೆ ಕ್ರೈಸ್ತರ ಪರಮೋಚ್ಚ ಗುರುಗಳು ಕರೆ ನೀಡಿದರು. ಆ ಪವಿತ್ರ ಯುದ್ಧಕ್ಕೆ ಅವರು ಇಟ್ಟ ಹೆಸರು ಕ್ರುಸೇಡ್.
ಜುಲೈ 1099ರಲ್ಲಿ ಕ್ರೈಸ್ತರು ಭಾರಿ ಯುದ್ಧಮಾಡಿ ಮುಸಲ್ಮಾನರಿಂದ ಜೆರುಸಲೇಮನ್ನು ಮರು ವಶಪಡಿಸಿಕೊಂಡು ಗೆಲುವಿನ ನಗೆ ಬೀರಿದರು.

ಆದರೆ ಕರ್ಮಟ ಅರಬ್ಬರು ತಮ್ಮ ಮೂರನೇ ಅತಿ ಪವಿತ್ರ ಕ್ಷೇತ್ರವನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ಟಾರೆ? ಜೆರುಸಲೆಮ್ ನಲ್ಲಿ ಕ್ರೈಸ್ತರ ಆಡಳಿತ ದುರ್ಬಲವಾಗುವವರೆಗೆ ಕಾದು 88 ವರ್ಷದ ಬಳಿಕ 1187ರಲ್ಲಿ ಮುಸಲ್ಮಾನರು ಜೆರುಸಲೇಮನ್ನು ಭಾರಿ ರಕ್ತಪಾತ ನಡೆಸಿ ಮರಳಿ ಗೆದ್ದರು. ಆವತ್ತೇ ಇಲ್ಲಿನ ಮಸೀದಿಗಳ ಮೇಲ್ವಿಚಾರಣಾ ನೋಡಲು ವಕ್ಫ್ ಸಮಿತಿ ನೇಮಕವಾಯಿತು. ಜೆರೂಸಲೇಮಿನ ಪವಿತ್ರ ಭೂಮಿಗೆ ಮುಸಲ್ಮಾನೇತರರಿಗೆ ಪ್ರವೇಶ ನಿರ್ಬಂಧಿಸಿದ್ದರು.
ಆದರೆ ಏಳು ಕಡಲಿನ ಆಚೆ ಹರಿದು ಹಂಚಿಹೋಗಿದ್ದ ಯಹೂದಿಗಳು ಮಾತ್ರ ನನ್ನ ಮುಂದಿನ ವರ್ಷದ ಸಬ್ಬತ್ ಆಚರಣೆಯನ್ನು ಜೆರೂಸಲೇಮಿನ ಪವಿತ್ರ ಗೋಡೆಯ ಮುಂದೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ತಮ್ಮ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತಲೇ ಬಂದಿದ್ದರು.

ಒಮ್ಮೆ ಗುರೂಜಿ ಅವರಲ್ಲಿ ಯಾರೊ ಒಬ್ಬರು ಪಾಕಿಸ್ತಾನ ಮರಳಿ ಭಾರತಕ್ಕೆ ಸೇರಬಹುದೇ ಎಂದು ಕೇಳಿದಾಗ ಯಾವತ್ತಿನ ವರೆಗೆ ನಮ್ಮ ಸಪ್ತ ಮೋಕ್ಷದಾಯಕ ತೀರ್ಥಗಳ ಸಂಕಲ್ಪದಲ್ಲಿ ಸಿಂಧುವಿನ ಸ್ಮರಣೆ ಇರುತ್ತದೆಯೊ ಆವತ್ತಿನವರೆಗೆ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದರು.

ನಮ್ಮ ಪೂರ್ವಜರ ನೆಲವಾಗಿರುವ ಇಸ್ರೇಲನ್ನು ಮರಳಿ ಪಡೆಯಬೇಕು ಜರೂಸಲಮ್ ಮೇಲೆ ನಮ್ಮ ಪವಿತ್ರ ಕ್ಷೇತ್ರ ಮತ್ತೆ ನಿರ್ಮಾಣವಾಗಬೇಕು ಎಂಬ ಯಹೂದಿಗಳ ಕನಸು ನಿತ್ಯತೆಯ ಗರ್ಭದಲ್ಲಿ ಬ್ರೂಣವಾಗಿ ಬಲಿಯ ತೊಡಗಿತು. ಭಾರತ ಒಂದನ್ನು ಹೊರತುಪಡಿಸಿ ಬೇರೆ ಎಲ್ಲಾ ದೇಶಗಳಲ್ಲಿ ಚಿತ್ರಹಿಂಸೆ,ಅವಮಾನ ಕಗ್ಗೊಲೆ ಅತ್ಯಾಚಾರ ಲೂಟಿ ಜನಾಂಗಿಯ ಅಸ್ಪೃಶ್ಯತೆಯನ್ನು ಅನುಭವಿಸಿ ಕೊನೆಗೊಮ್ಮೆ ಹಿಟ್ಲರನ ವಿಷಾನಿಲದ ಚೇಂಬರಿನೊಳಗೆ ಹೊಕ್ಕು 60ಲಕ್ಷ ತನ್ನವರ ಹೆಣವನ್ನು ದಾಟಿ ಯಹೂದಿ ಜೀವಂತವಾಗಿ ಹೊರಬಂದ. ಹಾಗೆ ಬಂದವನೇ ಗಟ್ಟಿಯಾಗಿ ಬೇರು ಬಿಟ್ಟಿದ್ದು ತನ್ನ ತನ್ನ ಪೂರ್ವಜರ ತ್ಯಾಗ ಬಲಿದಾನಗಳಿಗೆ ಸಾಕ್ಷಿಯಾದ ಇಸ್ರೇಲಿನ ನೆಲದಲ್ಲಿ.

19ನೇ ಶತಮಾನದ ಆರಂಭದಲ್ಲಿ ಜಗತ್ತಿನ ವಿವಿಧ ಮೂಲೆಗಳಲ್ಲಿದ್ದ ಯಹೂದಿಗಳು ತಮ್ಮದೇ ಆದ ದೇಶ ನಿರ್ಮಿಸುವ ಉದ್ದೇಶದಿಂದ ತಮ್ಮ ಮಾತೃಭೂಮಿಗೆ ಮರಳ ತೊಡಗಿದರು. ಪ್ಯಾಲಿಸ್ತಿನ್ ಎಂದು ಕರೆಯಲ್ಪಡುತ್ತಾ ಅರಬ್ಬರ ಕಪಿಮುಷ್ಟಿಯಲ್ಲಿದ್ದ ತಮ್ಮ ಪೂರ್ವಜರ ನೆಲಕ್ಕೆ ಬಂದು ಅಲ್ಲಿ ಸ್ಥಳವನ್ನು ಖರೀದಿ ಮಾಡಿ ಕಾನೂನುಬದ್ಧವಾಗಿ ವಾಸ ಮಾಡತೊಡಗಿದರು. ಎರಡನೇ ವಿಶ್ವ ಯುದ್ಧದಲ್ಲಿ ಟರ್ಕಿಯನ್ನು ಬಗ್ಗುಬಡಿದ ಬ್ರಿಟಿಷರು ಅದರ ವಶದಲ್ಲಿದ್ದ ಪ್ಯಾಲೇಸ್ತೀನಿ ಭೂಮಿಯನ್ನು ಎರಡು ವಿಭಾಗಗಳಾಗಿ ಹಂಚಿದರು. ಅರಬರಿಗೆ ಫೆಲೆಸ್ತೀನ್ ಮತ್ತು ಜಗತ್ತಿನ ಬೇರೆಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ಹುಟ್ಟೂರಿಗೆ ಮರಳಿದ ಯಹೂದಿಗಳಿಗೆ ಇಸ್ರೇಲ್. ಇದು ಆಗಿದ್ದು 1948ರಲ್ಲಿ.

ಮುಸಲ್ಮಾನರ ಪ್ರಬಲ ವಿರೋಧದ ನಡುವೆಯೂ ಇಸ್ರೇಲ್ ಅವರ ಎದೆಯ ಮೇಲೆ ತಲೆಯೆತ್ತಿ ನಿಂತಿತು. 4 ಸುತ್ತಲಿನಿಂದ ಮುಸಲ್ಮಾನ ದೇಶಗಳು ಮಧ್ಯದಲ್ಲಿ ಒಂದು ಇಸ್ರೇಲ್ ಎಂಬ ಯಹೂದಿ ದೇಶ. ಈ ಅನಿರೀಕ್ಷಿತ ಬೆಳವಣಿಗೆಯಿಂದ ದಿಕ್ಕೆಟ್ಟ ಶೇಕುಗಳು ಮೇಕೆ ಗಡ್ಡ ನೇವರಿಸುತ್ತಾ ಕೈಕೈ ಹಿಸುಕಿಕೊಂಡರು

ಸಂಯುಕ್ತ ರಾಷ್ಟ್ರ ಮಂಡಳಿಯ ಮುಂದೆ ಇಸ್ರೇಲಿಗರು ತಮಗೆ ರಾಜಧಾನಿಯಾಗಿ ಜೆರುಸಲೇಮನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಯಹೂದಿಗಳಿಗೆ ನೆಲೆ ಒದಗಿಸಿಕೊಟ್ಟ ಬಗ್ಗೆ ಅಪಾರ ಸಿಟ್ಟು ಹೊಂದಿದ್ದ ಅರಬ್ಬರು ಜೆರುಸಲೇಮನ್ನು ಕೂಡ ಕಳೆದುಕೊಂಡರೆ ಇನ್ನಷ್ಟು ಕುಪಿತರಾಗುತ್ತಾರೆ ಎಂದರಿತ ಬ್ರಿಟಿಷರು ಅದನ್ನು ಇಸ್ರೇಲಿಗೂ ನೀಡಲಿಲ್ಲ ಅರಬ್ಬರ ಪ್ಯಾಲೆಸ್ತೇನಿಗೂ ನೀಡಲಿಲ್ಲ. ಅದನ್ನು ಸಂಯುಕ್ತ ರಾಷ್ಟ್ರ ಮಂಡಳಿಯ ವಶಕ್ಕೆ ಒಪ್ಪಿಸಿದರು.

ಇದಾದ ಸ್ವಲ್ಪ ಸಮಯಗಳ ಕಾಲ ಜೆರೂಸಲೇಮಿನಲ್ಲಿ ಶಾಂತಿ ಇತ್ತು. ಆದರೆ ಪ್ಯಾಲೇಸ್ತೀನಿ ತುರ್ಕರ ತುರಿಕೆ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ
67ರಲ್ಲಿ ಜೆರುಸಲೇಮನ್ನು ವಶಪಡಿಸಲು ಪ್ಯಾಲೆಸ್ಟೈನ್ ಅರಬ್ ದೇಶಗಳ ಬೆಂಬಲದೊಂದಿಗೆ ಮುನ್ನುಗ್ಗಿತು. ಇದರ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಹೊಂದಿದ್ದ ಇಸ್ರೇಲ್. ಜಾಗತಿಕ ಯುದ್ಧ ಇತಿಹಾಸದಲ್ಲೇ ಅತ್ಯಂತ ವ್ಯೂಹಾತ್ಮಕ ಯುದ್ಧ ಎಂದು ಕರೆಯಲ್ಪಡುವ ಆರು ದಿನದ ಸಮರಕ್ಕೆ ಮುನ್ನುಡಿ ಬರೆಯಿತು. ಒಂಟಿ ದೇಶ ಎಂದು ಬಗೆದು ಹಿಂಡುಹಿಂಡಾಗಿ ಮುತ್ತಿದ ಅರಬ್ಬರು ಇಸ್ರೇಲಿಗಳ ಮಾರಣಾಂತಿಕ ಹೊಡೆತಕ್ಕೆ ಅಂಡು ಸುಟ್ಟ ನಾಯಿಯಂತೆ ಮೂಲೆ ಸೇರಿದರು . ಅಲ್ಲಿಯವರೆಗೂ ಮಾನವೀಯತೆ ಕಾನೂನು ಎಂದು ಜೆರುಸಲೇಮನ್ನು ವಶಪಡಿಸದೇ ಬಿಟ್ಟಿದ್ದ ಯಹೂದಿಗಳು ಜೆರುಸಲೇಮನ್ನು ತಮ್ಮ ವಶಕ್ಕೆ ಪಡೆದುಕೊಂಡು ಬಿಟ್ಟರು. ಕಾಲು ಕೆರೆದು ಜಗಳಕ್ಕೆ ಹೋಗಿ ಮುಖಮೂತಿ ನೋಡದೆ ಏಟು ತಿಂದ ಅರಬ್ಬರು ಇಸ್ರೇಲಿಗೆ ಶರಣಾಗಿ ಮಾತುಕತೆಯ ಮೇಜಿನ ಮೇಲೆ ಕೂತರು. ಅಲ್ಲಿಯವರೆಗೂ ಟೆಂಪಲ್ ಆಫ್ ಮೌಂಟ್ ಮೇಲೆ ವಕ್ಫ್ ಹಿಡಿತವಿತ್ತು. ಇಸ್ರೇಲ್ ಉದಾರತೆಯನ್ನು ತೋರಿ ಇದರಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಇಸ್ರೇಲ್ ಮುಸಲ್ಮಾನರ ಜೊತೆ ಒಂದು ಸೌಹಾರ್ದಯುತವಾದ ಒಪ್ಪಂದವನ್ನು ಮಾಡಿಕೊಂಡಿತು. ಟೆಂಪಲ್ ಮೌಂಟ್ ಜವಾಬ್ದಾರಿಯನ್ನು ಜಾರ್ಡನ್ ದೇಶಕ್ಕೆ ನೀಡುವುದು. ಮತ್ತು ಯಹೂದಿಗಳಿಗೆ ಅಲ್ಲಿ ಪ್ರಾರ್ಥನೆಗೆ ಅವಕಾಶ ಒದಗಿಸುವುದು ಈ ಒಪ್ಪಂದದ ಮುಖ್ಯ ಅಂಶವಾಗಿತ್ತು.

ಆದರೆ ಈ ಒಪ್ಪಂದದ ಬಗ್ಗೆ ಕಟ್ಟರ್ ಮುಸಲ್ಮಾನರು ಮತ್ತು ಕಟ್ಟರ್ ಯಹೂದಿಗಳಿಗೆ ಸಮಾಧಾನವಿರಲಿಲ್ಲ ಕಟ್ಟರ್ ಮುಸಲ್ಮಾನರು ಅಲ್ ಅಕ್ಸಾ ಮಸೀದಿ ಆವರಣಕ್ಕೆ ಮುಸಲ್ಮಾನೇತರರು ಕಾಲು ಇಡುವುದನ್ನು ಯಾವ ಕಾರಣಕ್ಕೂ ಸಹಿಸುತ್ತಿರಲಿಲ್ಲ. ಇತ್ತ ಒಪ್ಪಂದದಲ್ಲಿ ಯಹೂದಿಗಳಿಗೆ ಕೇವಲ ಪ್ರವಾಸಿಗರಾಗಿ ಬಂದು ಹೋಗಲು ಮಾತ್ರ ಅನುಮತಿ ಇತ್ತು ಪೂಜೆ ಮಾಡುವ ಹಕ್ಕು ಇರಲಿಲ್ಲ. ಇದು ಯಹೂದಿ ಕಟ್ಟರ್ ವಾದಿಗಳನ್ನು ಕೆರಳಿಸಿತು. ಜೆರುಸಲೇಮನ್ನು ತಮ್ಮ ಬಾಹುಬಲದಿಂದ ಗೆದ್ದ ಮೇಲೆ ಅದನ್ನು ಪೂರ್ಣವಾಗಿಇಸ್ರೇಲ್ ವಶಕ್ಕೆ ಪಡೆದುಕೊಳ್ಳದೆ ಮುಸಲ್ಮಾನರ ಜೊತೆ ಒಪ್ಪಂದ ಮಾಡಿದ್ದಾದರೂ ಯಾಕೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.

ಅಂದಿನಿಂದ ಇಂದಿನವರೆಗೂ ಜೆರುಸಲೆಂ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಜ್ವಾಲಾಮುಖಿಯ ಪರ್ವತವಾಗಿ ಉಳಿದಿದೆ. ಆಗೊಮ್ಮೆ-ಈಗೊಮ್ಮೆ ಮತಾಂಧತೆಯ ಲಾವಾ ರಸವನ್ನು ಕಾರಿ ಇದು ಒಂದಷ್ಟು ಜನರ ಬಲಿ ಪಡೆದುಕೊಳ್ಳುತ್ತಲೇ ಇದೆ

1982ರಲ್ಲಿ ಅಲೆನ್ ಗುಡ್ಮನ್ ಎಂಬ ಯಹೂದಿ ಸೈನಿಕ ಡೋಮ್ ಆಫ್ ರಾಕ್ ಮಸೀದಿಯ ಒಳಗೆ ನುಗ್ಗಿ ಗುಂಡು ಹಾರಿಸಿ ಕೆಲವರನ್ನು ಕೊಂದುಹಾಕಿದ. ಇದಕ್ಕೆ ಮಸೀದಿ ಒಳಗಿಂದ ಯಹೂದಿಗಳು ಪ್ರಾರ್ಥನೆ ಮಾಡುವ ಸ್ಥಳಕ್ಕೆ ಕಲ್ಲು ಹೊಡೆದಿದ್ದು ಕಾರಣವಾಗಿತ್ತು. ಇಸ್ಲಾಮಿಕ್ ಮತಾಂಧರಿಗೆ ಕಲ್ಲು ಹೊಡೆಯುವ ಚಟ ಕಾಶ್ಮೀರದಲ್ಲಿ ಮಾತ್ರ ಇರುವುದು ಎಂದು ಭಾವಿಸಬೇಡಿ. ಜೆರೂಸಲೇಮಿನ ಆವರಣದಲ್ಲಿಯೂ ಇವರ ಕಲ್ಲುಗಳು ಆಗೊಮ್ಮೆ-ಈಗೊಮ್ಮೆ ತಟಪಟನೆ ಬಂದು ಬೀಳುತ್ತವೆ.

ಆದರೆ ಯಹೂದಿಗಳು ಮಾತ್ರ ಕಲ್ಲು ಹೊಡೆಸಿಕೊಂಡು ಸುಮ್ಮನೆ ಕೂರುವುದಿಲ್ಲ. ಕಲ್ಲಿಗೆ ಗುಂಡಿನ ಮೂಲಕ ಉತ್ತರ ನೀಡುವುದು ಇಸ್ರೇಲಿಗರ ಜಾಯಮಾನ.

2000ನೇ ಇಸವಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅರಬ್ಬರು ಜೆರುಸಲೆಮ್ ಗಾಗಿ ಲಾಬಿ ಮಾಡಲು ಮುಂದಾದಾಗ ಇಸ್ರೇಲ್ ತನ್ನ ಮಾಜಿ ಪ್ರಧಾನಿ ಯನ್ನು ಅಲ್ಲಿಗೆ ಕಳುಹಿಸಿ ತನ್ನ ಹಕ್ಕನ್ನು ಪ್ರತಿಪಾದಿಸಿತ್ತು.

2014 ರಲ್ಲಿ ಜೆರುಸೆಲೆಂ ಯಹೂದಿಗಳ ಪುಣ್ಯಭೂಮಿ ಎಂದು ಹೇಳಿಕೆ ಕೊಟ್ಟ ಯಹೂದಿ ಮುಖಂಡನೊಬ್ಬ ನನ್ನು ಪ್ಯಾಲೇಸ್ತೀನಿ ಉಗ್ರರು ಕೊಲ್ಲಲು ವಿಫಲ ಯತ್ನ ನಡೆಸಿದರು. ಇದು ಸಾಕಷ್ಟು ದೊಂಬಿ ಗಲಾಟೆಗೆ ಕಾರಣವಾಯಿತು . ಈ ಘಟನೆಯ ಬಳಿಕ ಮುಸಲ್ಮಾನರನ್ನು ಟೆಂಪಲ್ ಮೌಂಟಿ ನಿಂದ ದೂರ ಇಡಲಾಯಿತು.

ಇದಿಷ್ಟು ಹಳೆಯ ಕಥೆ ಸದ್ಯ ಜೆರುಸಲೆಮ್ ನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಸ್ವಲ್ಪ ತಿಳಿಯೋಣ

ಜೆರೂಸಲೇಮಿನ ಪೂರ್ವಭಾಗದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಶೇಕ್ ಜರ್ರಾ ಎಂಬ ಪ್ರದೇಶವಿದೆ. ಇಲ್ಲಿ ಯಹೂದಿಗಳ ಟ್ರಸ್ಟ್ ಒಂದರ ಮಾಲೀಕತ್ವದಲ್ಲಿರುವ ಆರು ಮನೆಗಳಲ್ಲಿ ಪ್ಯಾಲೇಸ್ತೀನಿ ಮುಸಲ್ಮಾನ ಕುಟುಂಬಗಳು ವಾಸವಿದ್ದವು. ಇವರನ್ನು ಮನೆ ಬಿಟ್ಟು ಕೊಡುವಂತೆ ಯಹೂದಿ ಟ್ರಸ್ಟ್ ಕೇಳಿಕೊಂಡಾಗ ಇವರು ಬಿಟ್ಟುಕೊಡಲಿಲ್ಲ. ಬದಲಾಗಿ ಮುಸಲ್ಮಾನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮನ್ನು ಇಲ್ಲಿಂದ ಜನಾಂಗೀಯವಾಗಿ ನಿರ್ಣಾಮ ಮಾಡಲು ಸಂಚು ರೂಪಿಸಿದ್ದಾರೆ ಎಂದು ಮಾನವ ಹಕ್ಕು ದಮನದ ಕಥೆಕಟ್ಟಿ ಅಂತರಾಷ್ಟ್ರೀಯ ಇಸ್ಲಾಮಿಕ್ ವಲಯವನ್ನು ಸೆಳೆಯುವ ಕೆಲಸ ಮಾಡಿದರು.ಈ ಆರು ಕುಟುಂಬಗಳಿಗೆ ಪ್ಯಾಲೇಸ್ತೀನ್ ಬೆಂಬಲವನ್ನು ಕೊಟ್ಟು ಮನೆ ಖಾಲಿ ಮಾಡಬೇಡಿ ಏನಾಗುತ್ತದೆ ನೋಡೋಣ ಎಂದಿತು. ಯಹೂದಿಗಳ ಟ್ರಸ್ಟ್ ನ್ಯಾಯಾಲಯದ ಮೊರೆ ಹೋಯಿತು. ಅಲ್ಲಿ ಯಹೂದಿಗಳಿಗೆ ಜಯ ಸಿಕ್ಕಿತ್ತು. ಆದರೆ ಈ ಮೊಂಡು ಮತಾಂಧ ಪ್ಯಾಲೇಸ್ತೀನಿಯರು ಮನೆ ಖಾಲಿ ಮಾಡುವ ಬದಲು ದೊಂಬಿ ಗಲಾಟೆಗಳನ್ನು ಎಬ್ಬಿಸಿದರು. ಶೇಕ್ ಜರಾ ಬೀದಿಯಲ್ಲಿ ಅಕ್ರಮ ಕೂಟ ಸೇರಿಕೊಂಡು ನಮಾಜ್ ಮಾಡುವುದು, ರಸ್ತೆಯಲ್ಲಿ ಇಫ್ತಾರ್ ಆಚರಿಸಿ ಇಸ್ರೇಲ್ ವಿರುದ್ಧ ಘೋಷಣೆ ಕೂಗುವುದು ಇಸ್ರೇಲಿ ಫೋರ್ಸ್ ಗಳ ಮೇಲೆ ಕಲ್ಲು ತೂರಾಟ ಮಾಡುವುದು ಮೊದಲಾದ ಹುಚ್ಚಾಟಕ್ಕೆ ಇಳಿದರು. ಈ ರೀತಿಯ ಹುಚ್ಚಾಟಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಕೊಟ್ಟು ಅನುಭವ ಇದ್ದ ಇಸ್ರೇಲ್ ಫೋರ್ಸ್ ಇವರ ವರ್ತನೆಗಳು ಇನ್ನೂ ಸ್ವಲ್ಪ ಅತಿರೇಕಕ್ಕೆ ಹೋಗಲಿ ಎಂದು ಕಾಯುತ್ತಿದ್ದರು.

ಮೊನ್ನೆ ಮೇ 10ರಂದು ಇಸ್ರೇಲಿಗರು ಜೆರುಸಲೆಮ್ ಡೇ ಆಚರಿಸಲು ಜೆರುಸಲೇಮಿಗೆ ಬಂದಿದ್ದ ಸಮಯದಲ್ಲಿ ಅನಿರೀಕ್ಷಿತವಾಗಿ ಮಸೀದಿಯ ಒಳಭಾಗದಿಂದ ಬಾರಿ ಕಲ್ಲುತೂರಾಟ ನಡೆಯಿತು. ಕೂಡಲೇ ಕಾರ್ಯಾಚರಣೆಗೆ ಇಳಿದ ಇಸ್ರೇಲಿ ಫೋರ್ಸ್ ಮಸೀದಿಯ ಒಳನುಗ್ಗಿ ಕಿಡಿಗೇಡಿಗಳ ನಡು ಮುರಿಯುವಂತೆ ಬಾರಿಸಿ, ದರದರನೆ ಹೊರಗೆಳೆದು ಮತ್ತೆ ಯಾವತ್ತೂ ಕಲ್ಲು ಮುಟ್ಟದಂತೆ ಗಂಟು ಗಂಟನ್ನು ಗುದ್ದಿದ್ದಾರೆ.
ಮುಸ್ಲಿಂ ಗೂಂಡಾಗಳ ಕಲ್ಲೇಟಿಗೆ 9 ಜನ ಯಹೂದಿಗಳಿಗೆ ಪೆಟ್ಟಾಗಿದ್ದರೆ, ಸುಮಾರು 300 ರಷ್ಟು ಪ್ಯಾಲಿಸ್ತೀನಿ ಗೂಂಡಾಗಳನ್ನು ಇಸ್ರೇಲಿ ಪೊಲೀಸ್ ಫೋರ್ಸ್ ಆಸ್ಪತ್ರೆಯ ಬೆಡ್ಡಲ್ಲಿ ಮಲಗಿಸಿ ಬಂದಿದೆ.

ಈ ಹಿಂಸಾಚಾರದ ಬೆನ್ನಿಗೆ ಪ್ಯಾಲೆಸ್ತೀನ್ ಇಸ್ರೇಲ್ ವಿರುದ್ಧ ಹೋರಾಟಕ್ಕೆ ಕರೆ ನೀಡಿತು. ಮೇ ಹತ್ತರ ರಾತ್ರಿ ಇಸ್ರೇಲಿಗೆ ಮಗ್ಗುಲ ಮುಳ್ಳಾಗಿರುವ ಗಾಜಾಪಟ್ಟಿಯ ಹಮಾಸ್ ಉಗ್ರರು ಸುಮಾರು 150 ರಾಕೆಟುಗಳನ್ನು ಇಸ್ರೇಲ್ ಮೇಲೆ ಸಿಡಿಸಿದರು. ಅಲ್ಲಿಗೆ ಅಧಿಕೃತ ಯುದ್ಧ ಘೋಷಣೆಯಾಯಿತು.
ಹಮಾಸ್ ಉಗ್ರರ ಎದೆ ಸೀಳಲು ಹೊರಟುನಿಂತ ಇಸ್ರೇಲಿ ಪಡೆ ತನ್ನ ಈ ಕಾರ್ಯಾಚರಣೆಗೆ ಕೊಟ್ಟ ಹೆಸರು “ಆಪರೇಷನ್ ಗಾರ್ಡಿಯನ್ ಆಫ್ ದಿ ವಾಲ್”
ಮೇ 11ರ ಬೆಳಿಗ್ಗೆ ಇಸ್ರೇಲಿನ ಯುದ್ಧ ವಿಮಾನಗಳು ಗಾಜಾಪಟ್ಟಿಯ ಮೇಲೆ ದಾಳಿ ಸಾರಿದವು. ಒಟ್ಟು 130 ಏರ್ ಸ್ಟ್ರೈಕ್ ನಡೆದಿದೆ. ಇನ್ನೂ ಒಂದೆರಡು ದಿನ ಯುದ್ಧ ಮುಂದುವರೆದರೆ ಇಡಿಯ ಗಾಜಾ ಪಟ್ಟಿ ಹರಿದುಹೋದ ಹಜಾಮನ ಪೈಜಾಮದ ಹಾಗೆ ಜರಡಿಯೆದ್ದು ಹೋಗಲಿದೆ. ನಮ್ಮ ದೇಶವೂ ಸೇರಿದಂತೆ ಅನೇಕ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರಾಣಿಯಂತೆ ಬಳಸಿ ಎದುರಾಳಿಯ ಮೇಲೆ ದಾಳಿಮಾಡುವ ಉಗ್ರರ ನಪಂಸಕ ಪ್ರವೃತ್ತಿ, ಹಮಾಸ್ ಜಿಹಾದಿಗಳಿಗೂ ಇದೆ. ಆದರೆ ಇಸ್ರೇಲ್ ಇದನ್ನೆಲ್ಲ ಕೇರ್ ಮಾಡಲ್ಲ. ಉಗ್ರ ಯಾರ ಹಿಂದೆ ಅವಿತಿದ್ದಾನೆ ಎನ್ನುವುದು ನಂತರದ ವಿಚಾರ. ಉಗ್ರಗಾಮಿಯ ಬುಡ ಬೀಜವೂ ಉಳಿಯದಂತೆ ಹೊಸಕಿ ಹಾಕಬೇಕೆನ್ನುವುದೇ ಅವರ ಮೊದಲ ಆದ್ಯತೆ. ಅದರಲ್ಲಿ ಅಮಾಯಕರು ಸತ್ತರೆ, ಉಗ್ರರ ಜೊತೆ ನಿಲ್ಲುವ ಮೊದಲು ಅಮಾಯಕರು ಯೋಚಿಸಬೇಕಿತ್ತು ಎನ್ನುತ್ತದೆ ಇಸ್ರೇಲ್.
ಹಮಾಸ್ ಉಗ್ರರಿಗೆ ಈ ಬಾರಿ ಹಬ್ಬ ಆಚರಿಸಲು ಸುಡುಮದ್ದಿನ ಕೊಡುಗೆಯನ್ನು ಇಸ್ರೇಲ್ ದಯಪಾಲಿಸಿದೆ. ಈ ಸಿಡಿಯುವ ಕ್ಷಿಪಣಿಯ ಕಣ್ಣು ಕೋರೈಸುವ ಬೆಳಕಿನಲ್ಲಾದರೂ ಉಗ್ರವಾದಿಗಳಿಗೆ ಜ್ಞಾನೋದಯವಾಗುತ್ತದೆಯೋ ಕಾದುನೋಡಬೇಕು.

ಮಹಿಳೆಯರನ್ನು ಮಕ್ಕಳನ್ನು ಸೇನೆಯ ಮುಂದೆ ಬಿಟ್ಟು ಅವರ ಮುಕುಳಿ ಹಿಂದೆ ಅವಿತುಕೊಳ್ಳುವ ಪ್ಯಾಲೇಸ್ತೀನಿ ಉಗ್ರರಿಗೆ ನೈತಿಕ ಬೆಂಬಲ ನೀಡುವ ಅನೇಕ ಅಂತರಾಷ್ಟ್ರೀಯ ಸಂಘಟನೆಗಳಿವೆ. ಪ್ಯಾಲೇಸ್ತೀನಿ ಮಕ್ಕಳ ಕೈಗೆ ಬಾವುಟ ಕೊಟ್ಟು ಇಸ್ರೇಲಿ ಸೈನಿಕರ ಮುಂದೆ ಬೀಸಲು ಹೇಳಿ ಅದರ ಫೋಟೋ ತೆಗೆಯುವುದು, ಬುರ್ಖಾಧಾರಿ ಮಹಿಳೆಯೊಬ್ಬಳು ಮುಖ ಕಿವುಚಿಕೊಂಡು ಘೋಷಣೆ ಕೂಗುವ ಚಿತ್ರವನ್ನು ವೈರಲ್ ಮಾಡುವುದು, ಶೆಲ್ಲುಗಳು ಸಿಡಿಯುವ ಯುದ್ಧಭೂಮಿಯಲ್ಲಿ ಮಗುವನ್ನು ನಿಲ್ಲಿಸಿ ಅದು ಅಳುವ ಚಿತ್ರವನ್ನು ಪತ್ರಿಕೆಗಳಲ್ಲಿ ಮುದ್ರಿಸುವುದು, ಮುರುಕಲು ಮನೆಯೊಳಗಡೆ ಮುಸ್ಲಿಮ ವೃದ್ಧರನ್ನು ಕೂರಿಸಿ ಫೋಟೋ ಹೊಡೆಯುವುದು,ಹೀಗೆ ನಾನಾ ರೀತಿಯಲ್ಲಿ ಇಸ್ರೇಲ್ ವಿರುದ್ಧ narrative ಹುಟ್ಟಿಸಿ ಬಿಡುವ ಕೆಲಸ ನಡೆಯುತ್ತಿದೆ.ಪ್ಯಾಲೆಸ್ತೇನಿನಲ್ಲಿರುವ ಕೆಲ ಕ್ರೈಸ್ತ ಸಂಘಟನೆಗಳು ಕೂಡ ಇಸ್ರೇಲ್ ವಿರುದ್ಧ ಕಾರ್ಯಾಚರಿಸುತ್ತಿವೆ. ಇಸ್ರೇಲಿಗರ ಅಸ್ತಿತ್ವದ ಹೋರಾಟವನ್ನು ಮರೆಮಾಚಿ ಅವರನ್ನು ರಾಕ್ಷಸರಂತೆ ಬಿಂಬಿಸಿ ಪ್ಯಾಲೇಸ್ತೀನಿ ಭಯೋತ್ಪಾದಕರನ್ನು ತಲೆಯ ಮೇಲೆ ಹೊತ್ತು ಮೆರೆಯುವವರ ಸಂಖ್ಯೆ ಭಾರತದಲ್ಲಿಯೂ ಕಡಿಮೆ ಇಲ್ಲ. ಇವತ್ತು ಇಸ್ರೇಲಿಗೆ ಆದ ಸ್ಥಿತಿಯೇ ಮುಂದೊಂದು ದಿನ ಭಾರತಕ್ಕೂ ಕಾದಿದೆ.

ಕೊನೆಯ ಮಾತು ಭಾರತಕ್ಕೆ ಮುಂದೆ ಎದುರಾಗಲಿರುವ ಈ ಸಾಮ್ರಾಜ್ಯಶಾಹಿ ಮತಾಂಧರ ಸಮಸ್ಯೆಗೆ ಹೋರಾಟ ಹೇಗೆ ರೂಪಿಸಬೇಕು ಮತ್ತು ಹಿಂದೂ ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಗಂಭೀರ ಪ್ರಶ್ನೆಗೆ ಇಸ್ರೇಲ್ ಟೂಲ್ ಕಿಟ್ ನಲ್ಲಿ ಉತ್ತರ ಅಡಗಿದೆ.

ಜೈ ಮಹಾಕಾಲ್

Design a site like this with WordPress.com
Get started