Design a site like this with WordPress.com
Get started

100 ಕೋಟಿ ಕೋವಿಡ್ ಲಸಿಕೆ ವಿತರಿಸಿ ಭಾರತ ವಿಶ್ವ ದಾಖಲೆಗೈದಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಬಿಜೆಪಿ ವತಿಯಿಂದ ಕೋರೋನಾ ವಾರಿಯರ್ಸ್ ಗೆ ಸನ್ಮಾನ – ಶಾಸಕ ರಘುಪತಿ ಭಟ್ ಭಾಗಿ

*ದೇಶದಾದ್ಯಂತ 100 ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್ ವಿತರಣೆಗೈದು ಭಾರತ ವಿಶ್ವ ದಾಖಲೆಗೈದಿರುವ ಹಿನ್ನೆಲೆಯಲ್ಲಿ ಇಂದು ದಿನಾಂಕ 26-10-2021 ರಂದು ಗ್ರಾಮಾಂತರ ಬಿಜೆಪಿ ವತಿಯಿಂದ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಕೋರೋನ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಈ ಸಾಧನೆಗೆ ಶ್ರಮಿಸಿದ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.* *ಈ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿದರು.*Continue reading “100 ಕೋಟಿ ಕೋವಿಡ್ ಲಸಿಕೆ ವಿತರಿಸಿ ಭಾರತ ವಿಶ್ವ ದಾಖಲೆಗೈದಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಬಿಜೆಪಿ ವತಿಯಿಂದ ಕೋರೋನಾ ವಾರಿಯರ್ಸ್ ಗೆ ಸನ್ಮಾನ – ಶಾಸಕ ರಘುಪತಿ ಭಟ್ ಭಾಗಿ”

ಅಲೆವೂರು ಕರ್ವಾಲು ಹೀಗೊಂದು ಕನ್ನಡ ಶಾಲೆ ಉಳಿಸಿ ಅಭಿಯಾನ

ಕನ್ನಡ ಶಾಲೆಗಳು ನಿಧಾನವಾಗಿ ಹೇಗೆ ಅಂತ್ಯಗೊಳ್ಳುತ್ತಿವೆ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ‌ ಇದಕ್ಕೆ ಸೆಡ್ಡು ಹೊಡೆದು ನಮ್ಮ ಊರಿನ ಶಾಲೆ ಮುಚ್ಚಬಾರದು ಅದು ನಮ್ಮೂರ ಹೆಮ್ಮೆ‌ ಎಂದು ಕಳೆದ ಐದು ವರ್ಷಗಳಿಂದ ಶಾಲಾ ದತ್ತು ಸ್ವೀಕಾರ‌ ಎನ್ನುವ ಕಾರ್ಯಕ್ರಮ‌ ನಡೆಸಿ ಮುಚ್ಚುವ ಹಂತದಲ್ಲಿದ್ದ ಅಲೆವೂರು ಕರ್ವಾಲಿನ ಸರಕಾರಿ ಕನ್ನಡ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಅಲೆವೂರು ಕರ್ವಾಲಿನ ಹೆಮ್ಮೆಯ ಸಂಸ್ಥೆ ಶ್ರೀ ವಿಷ್ಣು ಸ್ನೇಹ ಬಳಗ ಇದೀಗ ಮತ್ತೊಂದು ನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದೇ *ನಮ್ಮೂರ ಶಾಲಾContinue reading “ಅಲೆವೂರು ಕರ್ವಾಲು ಹೀಗೊಂದು ಕನ್ನಡ ಶಾಲೆ ಉಳಿಸಿ ಅಭಿಯಾನ”

ಕಾಪು ಮಂಡಲ – ಪದಾಧಿಕಾರಿಗಳ ಸಭೆ

ಕಾಪು: ಬಿಜೆಪಿ ಕಚೇರಿಯಲ್ಲಿ ಮಂಡಲ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಮೋರ್ಚ ಪದಾಧಿಕಾರಿಗಳು, ಮಹಾಶಕ್ತಿಕೇಂದ್ರ ಹಾಗೂ ಶಕ್ತಿಕೇಂದ್ರ ಪದಾಧಿಕಾರಿಗಳ ಸಭೆ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪದಾಧಿಕಾರಿಗಳಿಗೆ ಪಕ್ಷ ನೂತನವಾಗಿ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ ಎಲ್ಲ ಬೂತ್ ಗಳಲ್ಲಿಯೂ ಕಾರ್ಯಕ್ರಮ ನಡೆಯುವಂತಹ ಶಕ್ತಿಕೇಂದ್ರ ಮಹಾಶಕ್ತಿಕೇಂದ್ರ ಪದಾಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದರು. ಕಾಪು ಕ್ಷೇತ್ರ ಶಾಸಕರಾದ ಲಾಲಾಜಿಯವರು, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಪದಾಧಿಕಾರಿಗಳ ಜವಾಬ್ದಾರಿಗಳನ್ನು ನೆನಪಿಸಿದರು.Continue reading “ಕಾಪು ಮಂಡಲ – ಪದಾಧಿಕಾರಿಗಳ ಸಭೆ”