
3 -5-2021 ಸೋಮವಾರ ಪ್ಲವ ಸಂ|ರದ ಮೇಷ ಮಾಸ ದಿನ 20 ಸಲುವ ಚೈತ್ರ ಬಹುಳ ಸಪ್ತಮಿ 19 ಗಳಿಗೆ ದಿನ ವಿಶೇಷ :ವಿಶ್ವ ಅಸ್ತಮಾ ದಿನ ಬ್ರಹ್ಮಾವರ ರಥ ನಿತ್ಯ ನಕ್ಷತ್ರ :ಉತ್ತರಾಷಾಢಾ 5||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.10 ಗಂಟೆ
ಮೇಷ
ಯಂತ್ರೋಪಕರಣಗಳ ಖರೀದಿ ಸಾಧ್ಯತೆ. ವಾಹನಗಳ ವ್ಯವಹಾರದಿಂದಾಗಿ ಉತ್ತಮ ಲಾಭ. ಕುಟುಂಬ ಸಮೇತ ಪ್ರಯಾಣ ನಡೆಸುವ ಸಾಧ್ಯತೆ ಕಂಡುಬರುವುದು. ಪ್ರಿಯ ವ್ಯಕ್ತಿಗಳ ದರ್ಶನದಿಂದ ಸಂತಸ ಮೂಡಲಿದೆ.
ವೃಷಭ
ತಾಂತ್ರಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ಸ್ವಲ್ಪಮಟ್ಟಿನ ಬಿಡುವು. ಹೊಸ ಉದ್ಯಮ ಸ್ಥಾಪನೆ ವಿಚಾರವಾಗಿ ಪರಿಣತರ ಸಲಹೆ ಪಡೆಯಲಿದ್ದೀರಿ. ಹಿರಿಯರ ಸಲಹೆ ಸಹಕಾರದಿಂದಾಗಿ ವ್ಯವಹಾರದಲ್ಲಿ ಸುಧಾರಣೆ.
ಮಿಥುನ
ವಿವಾಹಾಕಾಂಕ್ಷಿಗಳಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಸಹೋದರಿಯರಿಂದ ಸಂತೋಷದ ವಿಷಯಗಳು ಕೇಳಿಬರಲಿವೆ. ಮನೆಯಲ್ಲಿ ಸಂತಸ.
ಕಟಕ
ಯಂತ್ರೋಪಕರಣಗಳ ವ್ಯವಹಾರದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದ್ದು ದಿನದ ಮಟ್ಟಿಗೆ ವ್ಯವಹಾರಕ್ಕೆ ಕೈಹಾಕದಿರುವುದು ಉತ್ತಮ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಬಂಧುಗಳ ಆಗಮನ.
ಸಿಂಹ
ರಾಜಕೀಯ ವ್ಯಕ್ತಿಗಳಿಗೆ ವಿಶೇಷವಾಗಿ ಮಹಿಳಾ ರಾಜಕಾರಣಿಗಳಿಗೆ ಉತ್ತಮಕಾಲವಾಗಿದ್ದು ಉನ್ನತ ಹುದ್ದೆಯನ್ನು ಏರುವ ಸಾಧ್ಯತೆಗಳು ಕಂಡುಬರುತ್ತಿದೆ. ಸ್ವಯಂ ಉದ್ಯೋಗಿಗಳಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ.
ಕನ್ಯಾ
ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಅನಿರೀಕ್ಷಿತ ಬಿಡುವಿನಿಂದಾಗಿ ಆಲಸ್ಯ. ತರಕಾರಿ, ಹೂವು ಹಣ್ಣು ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಇಳಿಕೆ. ಪ್ರಯಾಣದಲ್ಲಿ ಹಿತಾನುಭವ. ದೇವತಾದರ್ಶನ ಭಾಗ್ಯ.
ತುಲಾ
ಸ್ವಯಂ ಉದ್ಯೋಗ ನಡೆಸುತ್ತಿರುವವರಿಗೆ ಉತ್ತಮ ವ್ಯವಹಾರ. ಸಂಬಂಧಿಕರ ನೆರವಿಗಾಗಿ ಧಾವಿಸಬೇಕಾದ ಅನಿವಾರ್ಯತೆ ಉಂಟಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ
ಕ್ರೀಡಾಪಟುಗಳಿಗೆ ಸ್ಪರ್ಧೆಗಳಲ್ಲಿ ಹಿನ್ನಡೆ. ಸಂಶೋಧಕರು, ವಿಜ್ಞಾನಿಗಳಿಗೆ ಉದ್ಯೋಗದಲ್ಲಿ ಪ್ರಗತಿಯೊಂದಿಗೆ ಪದೋನ್ನತಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯ. ಮಾನಸಿಕ ಕಿರಿಕಿರಿ.
ಧನು
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆ ನಡೆಸುವವರಿಗೆ ವ್ಯವಹಾರದಲ್ಲಿ ಹೆಚ್ಚಳ. ಚಿನ್ನ, ಬೆಳ್ಳಿ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಕೊರತೆ ತಲೆದೋರಲಿದೆ. ಸಂಸಾರಿಕ ನೆಮ್ಮದಿ ದೊರಕಲಿದೆ.
ಮಕರ
ಹೊಸದಾಗಿ ಪ್ರಾರಂಭಿಸಿರುವ ಉದ್ಯಮದಲ್ಲಿ ಪ್ರಗತಿ. ಮಹಿಳೆಯರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ ದೊರಕುವ ಸಾಧ್ಯತೆ. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧಿ ಮಾತುಕತೆಗಳು ನಡೆಯಲಿವೆ.
ಕುಂಭ
ಆದಾಯ ತರುವ ಹೊಸ ಯಂತ್ರವೊಂದನ್ನು ಖರೀದಿಸಲಿದ್ದೀರಿ. ರೈತಾಪಿ ವರ್ಗದವರಿಗೆ ಆಶಾದಾಯಕ ವಾತಾವರಣ. ಗೆಡ್ಡೆ ಗೆಣಸುಗಳ ಬೆಳೆಗಾರರಿಗೆ ಹೆಚ್ಚಿನ ಆದಾಯ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಮೀನ
ಸರ್ಕಾರದಿಂದ ಆಗಬೇಕಾದ ಕೆಲಸಗಳು ವಿಳಂಬವಾಗುವ ಸಾಧ್ಯತೆ. ದಿನನಿತ್ಯದ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗಲಿದೆ. ನಿರೀಕ್ಷಿತ ಆದಾಯ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಯ.