ಪಕ್ಷದ ಬೆಳವಣಿಗೆಯಲ್ಲಿ ವಿಸ್ತಾರಕರ ಕಾರ್ಯ ವ್ಯಾಪ್ತಿ, ಜವಾಬ್ದಾರಿ ಮಹತ್ವಪೂರ್ಣ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ‘ಸಶಕ್ತ ಬೂತ್ ಸದೃಢ ಪಕ್ಷ ಸಂಘಟನೆ’ ಪರಿಕಲ್ಪನೆಯಡಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪ್ರತೀ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖರು ಮತ್ತು ವಿವಿಧ ಸ್ತರದ ಪದಾಧಿಕಾರಿಗಳು ವಿಸ್ತಾರಕರಾಗಿ ಸೇವೆ ಸಲ್ಲಿಸಲಿದ್ದಾರೆ. ಪಕ್ಷದ ಬೆಳವಣಿಗೆಯಲ್ಲಿ ವಿಸ್ತಾರಕರ ಕಾರ್ಯ ವ್ಯಾಪ್ತಿ ಮತ್ತು ಜವಾಬ್ದಾರಿ ಅತ್ಯಂತ ಮಹತ್ವಪೂರ್ಣ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಫೆ.16ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಬೈಂದೂರು ಮತ್ತು ಕುಂದಾಪುರ ಮಂಡಲಗಳ ವ್ಯಾಪ್ತಿಯ ವಿಸ್ತಾರಕರ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ನಿರ್ದೇಶನದಂತೆ ಪಕ್ಷದ ಸಂಘಟನಾತ್ಮಕ ವಿಚಾರದಲ್ಲಿ ವಿಸ್ತಾರಕ ಯೋಜನೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುವುದು. ಪ್ರತೀ ಶಕ್ತಿಕೇಂದ್ರದಲ್ಲಿ 3 ದಿನಗಳ ನಿವಾಸಿ ಪ್ರವಾಸದೊಂದಿಗೆ ಬೂತ್ ಸಶಕ್ತೀಕರಣ, ಬೂತ್ ಅಧ್ಯಕ್ಷರ ನಾಮ ಫಲಕ, ಪೇಜ್ ಪ್ರಮುಖ್, ಪಂಚರತ್ನ ಸಮಿತಿ, ಬೂತ್ ಸಮಿತಿಯನ್ನು ಗಮನಿಸಿ ಸಕ್ರಿಯಗೊಳಿಸುವುದು ಇವೇ ಮುಂತಾದ ನಿಗದಿತ ಕಾರ್ಯ ಚಟುವಟಿಕೆಗಳ ಮೂಲಕ ವಿಸ್ತಾರಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ವರದಿ ಸಲ್ಲಿಸಲಿದ್ದಾರೆ.

ಆಯಾಯ ಶಕ್ತಿಕೇಂದ್ರಕ್ಕೆ ಸಂಬಂಧಪಟ್ಟಿರುವ ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು, ಸಂಚಾಲಕರು, ಸಹ ಸಂಚಾಲಕರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸಮಿತಿ ಸದಸ್ಯರು ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳ ಸಹಕಾರದೊಂದಿಗೆ ಪಕ್ಷದ ಸಂಘಟನಾತ್ಮಕ ಕೆಲಸ ಕಾರ್ಯಗಳನ್ನು ನಿಗದಿತ ಕಾಲ ಮಿತಿಯೊಳಗೆ ಬದ್ಧತೆಯಿಂದ ಕಾರ್ಯಗತಗೊಳಿಸುವ ಗುರುತರವಾದ ಹೊಣೆ ವಿಸ್ತಾರಕರ ಮೇಲಿದೆ ಎಂದು ಕುಯಿಲಾಡಿ ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ ವಿಸ್ತಾರಕರ ಕಾರ್ಯ ವ್ಯಾಪ್ತಿ ಮತ್ತು ಜವಾಬ್ದಾರಿಗಳ ವಿಸ್ತೃತ ಮಾಹಿತಿ ನೀಡಿದರು.
ಬಿಜೆಪಿ ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಬೈಂದೂರು ಮಂಡಲ ಪ್ರಭಾರಿ ಕಿಶೋರ್ ಕುಮಾರ್ ಕುಂದಾಪುರ, ಬೈಂದೂರು ಮತ್ತು ಕುಂದಾಪುರ ಮಂಡಲಗಳ ವಿಸ್ತಾರಕರು ಹಾಗೂ ಮಂಡಲಗಳ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಬಿಜೆಪಿ ಬೈಂದೂರು ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಕುಂದಾಪುರ ಮಂಡಲಾಧ್ಯಕ್ಷ ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ

ಉಡುಪಿ: ಶ್ರೀ ಬ್ರಹ್ಮಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 2021-24ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಆಮೀನ್ ಕಲ್ಮಾಡಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ, ಗೌರವಾಧ್ಯಕ್ಷರು: ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷರು: ಶಶಿಧರ ಎಂ. ಅಮೀನ್ ವಡಬಾಂಡೇಶ್ವರ ಮತ್ತು ಗೋಪಾಲ್ ಸಿ. ಬಂಗೇರ ಪಂದುಬೆಟ್ಟು, ಪ್ರಧಾನ ಕಾರ್ಯದರ್ಶಿ: ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ: ಬಾಲಕೃಷ್ಣ ಕೊಡವೂರು, ಸಂಘಟನಾ ಕಾರ್ಯದರ್ಶಿ: ಎ.ಶಿವಕುಮಾರ್ ಅಂಬಲಪಾಡಿ, ಜತೆ ಕಾರ್ಯದರ್ಶಿ: ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಜತೆ ಕೋಶಾಧಿಕಾರಿ: ವಿನಯ್ ಕುಮಾರ್ ಕಲ್ಮಾಡಿ, ಆಡಳಿತ ಸಮಿತಿಯ ಸದಸ್ಯರುಗಳಾಗಿ ಶೇಖರ್ ಪೂಜಾರಿ ಕಲ್ಮಾಡಿ, ಮಧ್ವನಗರ ಶಂಕರ ಪೂಜಾರಿ, ವಿನಯ್ ಕುಮಾರ್ ಪಡುಕರೆ, ಹರೀಶ್ ಎಂ.ಕೆ., ನವೀನ್ ಡಿ. ಪೂಜಾರಿ, ರತ್ನಾಕರ ಅಮೀನ್, ಜಯಕರ ಪೂಜಾರಿ ಕೊಡವೂರು, ಭಾಸ್ಕರ್ ಜೆ. ಕರ್ಕೇರ ಗರ್ಡೆ ಇವರು ಆಯ್ಕೆಯಾಗಿದ್ದಾರೆ.

ಹಿಜಾಬ್ ವಿವಾದಕ್ಕೆ ತಾಲಿಬಾನ್ ನಂಟು; ಉಡುಪಿಯಲ್ಲಿ ಹಿಜಾಬ್ ವಿವಾದ ಸೃಷ್ಠಿಸಿರುವ ಮತಾಂಧರನ್ನು ಬಂಧಿಸಿ ಐಎನ್ಎ ಮೂಲಕ ತುರ್ತು ವಿಚಾರಣೆಗೆ ಒಳಪಡಿಸುವಂತೆ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹ

ಉಡುಪಿ: ಅಂತಾರಾಷ್ಟ್ರೀಯ ಮತಾಂಧ ಶಕ್ತಿಗಳ ದೇಶ ವಿರೋಧಿ ಸಂಚಿನ ಭಾಗವಾಗಿ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲವೇ ಮುಸ್ಲಿಂ ವಿದ್ಯಾರ್ಥಿನಿಯರು ಸೃಷ್ಟಿಸಿರುವ ಹಿಜಾಬ್ ವಿವಾಧ ಇಂದು ರಾಜ್ಯಾದ್ಯಂತ ಉಗ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದೀಗ ಹಿಜಾಬ್ ಪ್ರಕರಣದಲ್ಲಿ ತಾಲಿಬಾನ್ ನಂಟು ಬೆಸೆದಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಬೇಡಿಕೆಯೊಂದಿಗೆ ವಿವಾಧವನ್ನು ಹುಟ್ಟುಹಾಕಲು ಮೂಲ ಕಾರಣರಾಗಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಮತ್ತು ಅವರಿಗೆ ಕುಮ್ಮಕ್ಕು ನೀಡಿರುವ ದೇಶ ವಿರೋಧಿ ಸಂಘಟನೆಯಾದ ಸಿಎಫ್ಐ ಪದಾಧಿಕಾರಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳದ (ಐಎನ್ಎ) ಮೂಲಕ ತುರ್ತು ತನಿಖೆಯನ್ನು ನಡೆಸಬೇಕು ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಮಧ್ಯೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಕರ್ನಾಟಕ ಉಚ್ಛ ನ್ಯಾಯಾಲಯವು ವಿಚಾರಣೆ ಪೂರ್ಣಗೊಳ್ಳುವವರೆಗೆ ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿಗಳು ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಪ್ರವೇಶಿಸುವಂತಿಲ್ಲ ಎಂದಿರುವ ಮಧ್ಯಾಂತರ ಆದೇಶವನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ ಅದರಂತೆ ನಡೆದುಕೊಳ್ಳಬೇಕಾಗಿದೆ.

ಹಿಜಾಬ್ ವಿವಾಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದ ವಿವಿಧ ಘಟನೆಗಳಲ್ಲಿ ಮಂಡ್ಯದ ಮತಾಂಧ ಮುಸ್ಲಿಂ ವಿದ್ಯಾರ್ಥಿನಿಯೋರ್ವಳ ಅನಪೇಕ್ಷಿತ ವರ್ತನೆಗೆ ದೇಶದೊಳಗಿನ ದೇಶ ವಿರೋಧಿ ಶಕ್ತಿಗಳು ಮತ್ತು ವಿಧ್ವಂಸಕ ಕೃತ್ಯಕ್ಕೆ ಹೆಸರುವಾಸಿಯಾಗಿರುವ ವಿಚಿದ್ರಕಾರಿ ಮತಾಂಧ ಸಂಘಟನೆ ತಾಲಿಬಾನ್ ಕೂಡಾ ಪ್ರೋತ್ಸಾಹ ನೀಡಿ ಟ್ವೀಟ್ ಮೂಲಕ ಬೆಂಬಲವನ್ನು ಘೋಷಿಸಿರುವುದು ಈ ಹಿಜಾಬ್ ವಿವಾಧ ಸೃಷ್ಠಿಸಿದ ಇಡೀ ಮತಾಂಧ ಗುಂಪಿನ ಮುಖವಾಡವನ್ನು ಬಯಲು ಮಾಡಿದೆ.

ಈ ಎಲ್ಲ ಸಂಗತಿಗಳ ಮೂಲಕ ಉಡುಪಿಯಲ್ಲಿ ಹೊತ್ತಿಕೊಂಡು ರಾಜ್ಯವ್ಯಾಪಿ ಹಬ್ಬಿರುವ ಹಿಜಾಬ್ ವಿವಾಧದ ಕಿಡಿಯ ಹಿಂದೆ ಸಿಎಫ್ಐ ನಂತಹ ದೇಶ ವಿರೋಧಿ ಮತಾಂಧ ಸಂಘಟನೆಗಳ ಮತ್ತು ಅಂತಾರಾಷ್ಟ್ರೀಯ ಮೂಲಭೂತವಾದಿ ದುಷ್ಟ ಶಕ್ತಿಗಳ ಸಂಚಿರುವುದು ಜಗಜ್ಜಾಹೀರಾಗಿದೆ. ಇಂತಹ ದ್ವೇಷ ಹರಡುವ, ವಿಧ್ವಂಸಕ ದುಷ್ಟ ಶಕ್ತಿಗಳ ದೇಶ ವಿರೋಧಿ ಕುಕೃತ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತು ರಾಜ್ಯ ಗೃಹ ಇಲಾಖೆ ತಕ್ಷಣ ಜಾಗೃತವಾಗಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿ ಹಿಜಾಬ್ ವಿವಾಧದ ಸಂಚನ್ನು ಬಯಲುಗೊಳಿಸುವ ಮೂಲಕ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಕಾನೂನಾತ್ಮಕ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ ದೂರದೃಷ್ಟಿಯ ಅಭಿವೃದ್ಧಿಪರ ಆತ್ಮನಿರ್ಭರ ಬಜೆಟ್: ಉಡುಪಿ ಜಿಲ್ಲಾ ಬಿಜೆಪಿ

ಉಡುಪಿ: ಕೇಂದ್ರ ಬಜೆಟ್ 2022ರ ವಿಶ್ಲೇಷಣೆಯನ್ನು ಕುರಿತು ಫೆ.12ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ನಡೆಸಿಕೊಟ್ಟರು.

ಕೇಂದ್ರ ಸರಕಾರ ಈ ಬಾರಿ ಮಂಡಿಸಿರುವ ಬಜೆಟ್ ದೂರದರ್ಶಿತ್ವವುಳ್ಳ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್ ಆಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2022ನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಯಿತು.

ದೇಶದ ಸ್ವಾತಂತ್ರ್ಯಾ ನಂತರ ಕೇಂದ್ರ ಸರಕಾರ ಮಂಡಿಸಿರುವ ಎಲ್ಲ ಬಜೆಟ್ ಗಳಿಗಿಂತ ಈ ಬಾರಿಯ ಬಜೆಟ್ ವಿಭಿನ್ನವಾಗಿದೆ. ಈ ಬಜೆಟ್ ಯಾವುದೇ ಚುನಾವಣೆ, ವರ್ಗ ಅಥವಾ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಬಜೆಟ್ ಆಗಿರದೆ, ದೇಶದ ಮುಂದಿನ 25 ವರ್ಷಗಳ ಭವಿಷ್ಯದ ದೃಷ್ಠಿಯಿಂದ ಮಂಡಿಸಿರುವ ಬಜೆಟ್ ಆಗಿದೆ.

*ಬಜೆಟ್ ಗೆ ಪೂರಕ ಅಂಶಗಳು*:

ಜ.19ರಂದು ಆರ್.ಬಿ.ಐ. ಸಲ್ಲಿಸಿರುವ ಹಣಕಾಸು ವರದಿ.

ಕೋವಿಡ್ ಸಂದರ್ಭದಲ್ಲಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಹಾಗೂ ಅದರ ಪ್ರಯೋಜನ ದೇಶದ 80 ಕೋಟಿ ಜನತೆಗೆ ತಲುಪಿದ ರೀತಿ.

ಕಳೆದ 2 ವರ್ಷದಲ್ಲಿ ದೇಶವಾಸಿಗಳ ಆರೋಗ್ಯದ ಬಗ್ಗೆ ಲಸಿಕೆ, ಪ್ರಚಾರ ಇತ್ಯಾದಿಗಳಿಗೆ ತಗಲಿದ ವೆಚ್ಚ ಮತ್ತು ಲಸಿಕೆ ವಿತರಣೆಯಲ್ಲಿ 75% ಗುರಿ ತಲುಪಿರುವುದು.

ಡಿ.2021ರ ವರ್ಲ್ಡ್ ಬ್ಯಾಂಕ್ ವರದಿಯಂತೆ ವಿಶ್ವದ ಆರ್ಥಿಕತೆ ಬೆಳವಣಿಗೆ ಯಾದಿಯಲ್ಲಿ ಭಾರತ 8.75% ದರದೊಂದಿಗೆ ಮೊದಲ ಸ್ಥಾನ ಪಡೆದಿರುವುದು.

2021ರಲ್ಲಿ ಹಣದುಬ್ಬರ ಸ್ಥಿತಿಯಲ್ಲಿ ಭಾರತ 6% ದರದೊಂದಿಗೆ ಅಮೇರಿಕಾವನ್ನು ಮೀರಿಸಿರುವುದು.

ಡಿ.2021ರಲ್ಲಿ ದೇಶದ ಆರ್ಥಿಕತೆ ಕೋವಿಡ್ ನ ಮೊದಲು ಅಂದರೆ 2019ಕ್ಕಿಂತ ಮೀರಿ ಬೆಳೆದಿರುವುದು.

ನಿರುದ್ಯೋಗ ದರ ಜನವರಿ 2022ರಲ್ಲಿ 8% ದಿಂದ 9% ದಷ್ಟಿದ್ದು ಕೋವಿಡ್ ಸಂದರ್ಭದಲ್ಲಿ 30% ದಿಂದ 40% ಇತ್ತು. ಈ ಪ್ರಮಾಣ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ 6% ಇದ್ದೇ ಇರುತ್ತದೆ.

ರಾಜ್ಯಗಳ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು.

ಶೇರು ಮಾರುಕಟ್ಟೆ ದಿನದಿಂದ ದಿನಕ್ಕೆ ಏರುತ್ತಿದ್ದು 22% ರಷ್ಟು ಏರಿಕೆ ಕಂಡಿದೆ.

ದೇಶದ ವಿದೇಶಿ ವಿನಿಮಯ ನಿಧಿ 13 ರಿಂದ 17 ತಿಂಗಳಿಗಾಗುವಷ್ಟು ಅಂದರೆ 634 ಬಿಲಿಯನ್ ಡಾಲರ್ ಆಗಿದೆ. ಇದು ಸರ್ವಕಾಲಿಕ ಹೆಚ್ಚಳ.

ದೇಶದ ಅಭಿವೃದ್ಧಿಗೆ ಇಷ್ಟೆಲ್ಲಾ ಪೂರಕ ಅಂಶಗಳು ಇರುವಾಗ ಈ ಬಾರಿ ಅದಕ್ಕೆ ವೇಗ ಕೊಡುವ ಬಜೆಟ್ ಮಂಡಿಸಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ 2025ರ ವೇಳೆಗೆ 5 ಟ್ರಿಲಿಯನ್ ತಲುಪಬಹುದು ಎಂಬ ಲೆಕ್ಕಾಚಾರ. ಚುನಾವಣಾ ಅಥವಾ ಇನ್ನಿತರ ಆಕರ್ಷಣೆಗಾಗಿ ಬಜೆಟ್ ಮಾಡಿದಾಗ ಆರ್ಥಿಕತೆ ಹಳಿ ತಪ್ಪುವ ಸಾಧ್ಯತೆಯೇ ಹೆಚ್ಚು.

*ಬಜೆಟ್ ಮುಖ್ಯಾಂಶಗಳು:*

ಕಳೆದ ವರ್ಷಕ್ಕಿಂತ ಬಂಡವಾಳ ವೆಚ್ಚ 35.4% ಹೆಚ್ಚಳ, ಅಂದರೆ ಸುಮಾರು 7.5 ಲಕ್ಷ ಕೋಟಿ

ನದಿ ಜೋಡಣೆಗೆ 45,605 ಕೋಟಿ

ಎಮ್ಎಸ್ಎಮ್ಇ ಗೆ 5 ಲಕ್ಷ ಕೋಟಿ, ಇಸಿಎಲ್ಜಿ ಸ್ಕೀಮ್ ನಲ್ಲಿ 1 ವರ್ಷ ವಿಸ್ತರಣೆ

ಎಲ್ಐಸಿ ಖಾಸಗೀಕರಣ

2023ರ ಒಳಗೆ 5ಜಿ ಟೆಂಡರ್

68% ಸ್ವದೇಶಿ ನಿರ್ಮಿತ ಮಿಲಿಟರಿ ಸಂಬಂಧಿತ ಖರೀದಿ

ಒನ್ ನೇಷನ್ ಒನ್ ರಿಜಿಸ್ಟ್ರೇಷನ್

ದೇಶದ ಗಡಿಗಳ ಮತ್ತು ಹಳ್ಳಿಗಳ ಅಭಿವೃದ್ಧಿ

ದೇಶದ 1,05,000 ಅಂಚೆ ಕಛೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತರುವುದು

ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್

ಇ-ಪಾಸ್ಪೋರ್ಟ್

ಪಟ್ಟಣಗಳ ಅಭಿವೃದ್ಧಿ

1,486 ಕಾನೂನುಗಳನ್ನು ತೆಗೆಯಲಾಗಿದೆ

ಸಿಂಗಲ್ ವಿಂಡೋ ಅಪ್ರೋವಲ್ – ಗ್ರೀನ್ ಸಿಪಿಸಿ

ಕೃಷಿಗೆ ಡ್ರೋನ್ ಶಕ್ತಿ

ಆರ್ ಬಿ ಐ ನಿಂದ ಸ್ವಂತ ಡಿಜಿಟಲ್ ರೂಪಾಯಿ, ವರ್ಗಾಯಿಸಲ್ಪಡುವ ವ್ಯವಸ್ಥೆಯೊಂದಿಗೆ.

ಹಳ್ಳಿಯ ವಿಧ್ಯಾರ್ಥಿಗಳಿಗಾಗಿ 200 ಟಿ.ವಿ. ಚಾನೆಲ್

ಆದಾಯ ತೆರಿಗೆ ಪರಿವರ್ತಿತ ರಿಟರ್ನ್

ಅತ್ಮನಿರ್ಭರ ಭಾರತ ಪರಿಕಲ್ಪನೆಯಡಿ 60 ಲಕ್ಷ ಉದ್ಯೋಗ ಸೃಷ್ಠಿಯ ಗುರಿ

ಈ ಎಲ್ಲಾ ಪ್ರಮುಖ ಅಂಶಗಳು ಈ ಬಾರಿಯ ಕೇಂದ್ರ ಬಜೆಟ್ ದೂರದರ್ಶಿತ್ವದ ಅಭಿವೃದ್ಧಿ ಪರ ಆತ್ಮನಿರ್ಭರ ಬಜೆಟ್ ಎಂಬುದಕ್ಕೆ ಪುಷ್ಠಿನೀಡಿದೆ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ ದೂರದೃಷ್ಟಿಯ ಅಭಿವೃದ್ಧಿಪರ ಆತ್ಮನಿರ್ಭರ ಬಜೆಟ್: ಜಿಲ್ಲಾ ಬಿಜೆಪಿ

ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಸಮರ್ಪಿತ ಬದುಕು ಪ್ರತಿಯೊಬ್ಬ ಕಾರ್ಯಕರ್ತರಿಗೆ ಪ್ರೇರಣೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ವತಿಯಿಂದ ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದಯಾಳ್ ಉಪಾದ್ಯಾಯರವರ ಬಲಿದಾನ ದಿನವನ್ನು ಸಮರ್ಪಣಾ ದಿನವನ್ನಾಗಿ ಫೆ.11ರಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಯಿಲಾಡಿ, ದೇಶ ಸೇವೆಗೆ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು ಇಂದಿಗೂ ಕಾರ್ಯಕರ್ತರಿಗೆ ಸ್ಫೂರ್ತಿ ಹಾಗೂ ಪ್ರೇರಣಾ ಶಕ್ತಿಯಾಗಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯರವರು ಅಜರಾಮರ. ಪಂಡಿತ್ ಜೀ ಯವರ ಜೀವನಾದರ್ಶ, ನಡೆದು ಬಂದ ದಾರಿ, ರಾಷ್ಟ್ರ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ರೀತಿ ದೇಶದ ಯುವಕರಿಗೆ ಎಂದಿಗೂ ದಾರಿದೀಪ. ಸದಾ ರಾಷ್ಟ್ರ ಹಿತದ ಚಿಂತನೆಯಲ್ಲಿದ್ದು, ಏಕಾತ್ಮ ಮಾನವತಾವಾದವನ್ನು ಪ್ರತಿಪಾದಿಸಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯರವರು ಪ್ರಾತಃಸ್ಮರಣೀಯ ಮಹಾನ್ ಚೇತನ ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ತ್ಯಾಗ ಮತ್ತು ಸಮರ್ಪಣೆಗೆ ಇನ್ನೊಂದು ಹೆಸರು ಪಂಡಿತ್ ದೀನದಯಾಳ್ ಉಪಾಧ್ಯಾಯರವರು. ಪಂಡಿತ್ ಜೀ ಯವರ ತತ್ವಾದರ್ಶ, ಸಿದ್ಧಾಂತಗಳು ಪಕ್ಷ ಮತ್ತು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ. ಉನ್ನತ ಮಾನವೀಯ ಮತ್ತು ರಾಜಕೀಯ ಮೌಲ್ಯಗಳನ್ನು ಸಾರಿದ ಪಂಡಿತ್ ಜೀ ಯವರ ಉದಾತ್ತ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು.

ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪಕ್ಷದ ಚಟುವಟಿಕೆಗಳಿಗೆ ನಿಧಿ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಿಜೆಪಿ ಹೆರ್ಗ ಮಹಾ ಶಕ್ತಿಕೇಂದ್ರದಲ್ಲಿ ಸಮರ್ಪಣಾ ದಿನಾಚರಣೆ

ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಬಲಿದಾನದ ದಿನವನ್ನು ಸಮರ್ಪಣಾ ದಿನವಾಗಿ ಬಿಜೆಪಿ ಹೆರ್ಗ ಮಹಾ ಶಕ್ತಿಕೇಂದ್ರದ ವತಿಯಿಂದ ಫೆ.11ರಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಚರಿಸಲಾಯಿತು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಧರ್ಮ ಜಾಗರಣ ಸಮನ್ವಯ ಪೂರ್ಣಾವಧಿ ಕಾರ್ಯಕರ್ತ ಅಶೋಕ್ ಪರ್ಕಳ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶಗಳ ಬಗ್ಗೆ ಉಪನ್ಯಾಸವನ್ನು ನಡೆಸಿಕೊಟ್ಟರು.

ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪಕ್ಷದ ಚಟುವಟಿಕೆಗಳಿಗೆ ನಿಧಿ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ, ಹೆರ್ಗ ಮಹಾ ಶಕ್ತಿಕೇಂದ್ರದ ಉಸ್ತುವಾರಿ ಶಿವಕುಮಾರ್ ಅಂಬಲಪಾಡಿ, ಮಹಾ ಶಕ್ತಿಕೇಂದ್ರದ ಸಹ ಸಂಚಾಲಕ ಶಿವಾನಂದ್ ಕಾಮತ್, ಉಡುಪಿ ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ವಿಜಯಲಕ್ಷ್ಮಿ, ಅಶ್ವಿನಿ ಅರುಣ್ ಪೂಜಾರಿ, ಹೆರ್ಗ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಶಕ್ತಿಕೇಂದ್ರಗಳು ಮತ್ತು ಬೂತ್ ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಫೆ.11: ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಮತ್ತು ಮಹಾ ಶಕ್ತಿಕೇಂದ್ರ ಮಟ್ಟದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಸಂಸ್ಮರಣೆ, ಸಮರ್ಪಣಾ ದಿನಾಚರಣೆ

ಉಡುಪಿ: ಫೆ.11 ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಏಕಾತ್ಮ ಮಾನವತಾವಾದದ ಪ್ರವರ್ತಕ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಬಲಿದಾನದ ದಿನ. ಈ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಫೆ.11 ಶುಕ್ರವಾರ ಬೆಳಿಗ್ಗೆ ಗಂಟೆ 10.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಹಾಗೂ ಪ್ರಥಮ ಬಾರಿಗೆ ಎಲ್ಲಾ ಮಂಡಲಗಳ ವ್ಯಾಪ್ತಿಯ ಪ್ರತೀ ಮಹಾ ಶಕ್ತಿಕೇಂದ್ರಗಳಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಸಂಸ್ಮರಣೆ, ಪಕ್ಷದ ಚಟುವಟಿಕೆಗಳಿಗೆ ನಿಧಿ ಅರ್ಪಣೆ ಮೂಲಕ ಸಮರ್ಪಣಾ ದಿನಾಚರಣೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಪ್ರಮುಖರು ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್ ಮಟ್ಟದ ಪದಾಧಿಕಾರಿಗಳು, ವಿವಿಧ ಸ್ತರದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಮಹಾ ಶಕ್ತಿಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ನಿಧಿ ಅರ್ಪಣೆಯ ಬಳಿಕ ಪಂಡಿತ್ ಜೀ ಯವರ ಜೀವನಾದರ್ಶದ ಬಗ್ಗೆ ಉಪನ್ಯಾಸ ನಡೆಯಲಿದೆ.

ಪಕ್ಷದ ಮುಖಂಡರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಕಾರ್ಯಕ್ರಮದಲ್ಲಿ ಬದ್ಧತೆಯಿಂದ ಭಾಗವಹಿಸಿ ಸಮರ್ಪಣಾ ದಿನಾಚರಣೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಜಾಬ್ ವಿಚಾರಣೆಗೆ ಹೈಕೋರ್ಟ್ ವಿಶೇಷ ಪೂರ್ಣ ಪೀಠ ರಚನೆ, ನಾಳೆ ಮಧ್ಯಾಹ್ನ ವಿಚಾರಣೆ

ಬೆಂಗಳೂರು: ಹಿಜಾಬ್ ವಿವಾದದ ವಿಚಾರಣೆಗೆ ಹೈಕೋರ್ಟ್ ನಿಂದ ವಿಶೇಷ ಪೂರ್ಣ ಪೀಠವನ್ನು ರಚಿಸಲಾಗಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಮೂವರು ನ್ಯಾಯಮೂರ್ತಿಗಳ ಪೀಠವನ್ನು ರಚನೆ ಮಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೋನ್ ಅವರ ಪೂರ್ಣ ಪೀಠವನ್ನು ರಚನೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 2:30 ಕ್ಕೆ ಹಿಜಾಬ್ ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ.

ಫೆ.11 ಮಹಾಶಕ್ತಿ ಕೇಂದ್ರ ಮಟ್ಟದಲ್ಲಿ ಸಮರ್ಪಣಾ ದಿನಾಚರಣೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಪುಣ್ಯ ಸಂಸ್ಮರಣೆಯ ಪ್ರಯುಕ್ತ ವಿನೂತನವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ ಎಲ್ಲಾ ಮಹಾ ಶಕ್ತಿಕೇಂದ್ರಗಳ ನೇತೃತ್ವದಲ್ಲಿ ಸಮರ್ಪಣಾ ದಿನಾಚರಣೆಯನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಫೆ.7ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಹಾ ಶಕ್ತಿಕೇಂದ್ರಗಳ ನೂತನ ಉಸ್ತುವಾರಿಗಳ ಯಾದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮುಂದಿನ ಎಲ್ಲಾ ಚುನಾವಣೆಗಳನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಸದೃಢಗೊಳಿಸಲು ಹಾಗೂ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ 42 ಮಹಾಶಕ್ತಿ ಕೇಂದ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬೂತ್ ಅಧ್ಯಕ್ಷರ ನಾಮ ಫಲಕ ಅನಾವರಣ ಸಹಿತ ಬೂತ್ ಸಮಿತಿ, ಪೇಜ್ ಪ್ರಮುಖ್, ಪಂಚರತ್ನ ಸಮಿತಿ, ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಿ ನಿಗದಿತ ಸಮಯದಲ್ಲಿ ಮಹಾ ಶಕ್ತಿಕೇಂದ್ರದಲ್ಲಿ ಸಭೆಗಳನ್ನು ನಡೆಸಿ ಜಿಲ್ಲಾ ಕಾರ್ಯಕಾರಿಣಿ ಸಭೆಗೆ ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಪ್ರಗತಿಯ ವರದಿಯನ್ನು ನೀಡಲಿದ್ದಾರೆ ಎಂದು ಕುಯಿಲಾಡಿ ಹೇಳಿದರು.

ಪಕ್ಷದ ಮಂಡಲ ಮತ್ತು ಮೇಲ್ಪಟ್ಟ ವಿವಿಧ ಸ್ತರದ ಪದಾಧಿಕಾರಿಗಳು ವಿಸ್ತಾರಕರಾಗಿ ಶಕ್ತಿಕೇಂದ್ರ ಮಟ್ಟದಲ್ಲಿ ಸೇವೆ ಸಲ್ಲಿಸಲಿದ್ದು, ವಿವಿಧ ಮಂಡಲಗಳಲ್ಲಿ ಫೆ.14 ಮತ್ತು ಫೆ.15ರಂದು ಪ್ರಮುಖರು ಸಭೆ ಸೇರಿ ವಿಸ್ತಾರಕರ ಹೆಸರಿನ ಯಾದಿಯನ್ನು ಅಂತಿಮಗೊಳಿಸಲಿದ್ದಾರೆ. ಜನಸಂಘದ ಅವಧಿಯಿಂದ ಸೇವೆ ಸಲ್ಲಿಸಿರುವ ಪಕ್ಷದ ಹಿರಿಯ ಕಾರ್ಯಕರ್ತರ ಮಾಹಿತಿ ಸಂಗ್ರಹ, ಪಕ್ಷದ ಮೈಕ್ರೋ ಡೊನೇಷನ್ ಇತ್ಯಾದಿ ಕಾರ್ಯಚಟುವಟಿಕೆಗಳಿಗೆ ವೇಗ ನೀಡುವ ಜೊತೆಗೆ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ವಿವಿಧ ಹಂತಗಳ ಜೊತೆಗೆ ಬೂತ್ ಮಟ್ಟಕ್ಕೆ ತಲುಪಿಸಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವಂತೆ ಕುಯಿಲಾಡಿ ಕರೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಪ್ರಮುಖ ಆರು ಕಾರ್ಯಕ್ರಮಗಳ ಸಹಿತ ಸಂಘಟನಾತ್ಮಕ ವಿಚಾರಗಳನ್ನು ವಿಸ್ತೃತವಾಗಿ ಮಂಡಿಸಿದರು.

ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಾ ಶಕ್ತಿಕೇಂದ್ರಗಳ ನೂತನ ಉಸ್ತುವಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.

Design a site like this with WordPress.com
Get started