ಜಿಲ್ಲಾ ಬಿಜೆಪಿಯಿಂದ‌ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ‘ಅಧ್ಯಯನ ಹಾಗೂ ಪರಿಶೀಲನ ಪತ್ರಕ’ ಡಿಜಿಟಲೀಕರಣ ಕಾರ್ಯಾಗಾರ

  • news by: ಜನತಾಲೋಕವಾಣಿನ್ಯೂಸ್

ಜಿಲ್ಲಾ ಬಿಜೆಪಿಯಿಂದ‌ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ‘ಅಧ್ಯಯನ ಹಾಗೂ ಪರಿಶೀಲನ ಪತ್ರಕ’ ಡಿಜಿಟಲೀಕರಣ ಕಾರ್ಯಾಗಾರ

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ‘ಅಧ್ಯಯನ ಹಾಗೂ ಪರಿಶೀಲನ ಪತ್ರಕ’ದ ಡಿಜಿಟಲೀಕರಣದ ಬಗ್ಗೆ ಮಾಹಿತಿ ಕಾರ್ಯಾಗಾರವು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಶುಕ್ರವಾರ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ‌‌ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷದ ಸಂಘಟನಾತ್ಮಕ ಕೆಲಸ ಕಾರ್ಯಗಳನ್ನು ಅತ್ಯಂತ ಶೃದ್ಧೆ ಮತ್ತು ಬದ್ಧತೆಯಿಂದ ನಿಭಾಯಿಸುವ ಸಶಕ್ತ ಕಾರ್ಯ ತಂಡಗಳು ಜಿಲ್ಲೆ, ಮಂಡಲ ಹಾಗೂ ವಿವಿಧ ಘಟಕಗಳ ಹಂತಗಳಲ್ಲಿವೆ. ಈ ನಿಟ್ಟಿನಲ್ಲಿ ‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದಡಿ ಬಾಕಿ ಇರುವ ಕೆಲವೊಂದು ಬೂತ್ ಗಳ ಅಧ್ಯಯನ ಹಾಗೂ ಪರಿಶೀಲನ ಪತ್ರಕವನ್ನು ಅಗತ್ಯ ಮಾಹಿತಿಯೊಂದಿಗೆ ಶೀಘ್ರವಾಗಿ ಪೂರ್ತಿಗೊಳಿಸಿ, ರಾಜ್ಯ ತಂಡ ನೀಡಿರುವ ಉಪಯುಕ್ತ ಮಾರ್ಗದರ್ಶನದೊಂದಿಗೆ ಸಮಗ್ರ ಮಾಹಿತಿಯ ಡಿಜಿಟಲೀಕರಣ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬೂತ್ ಸಶಸ್ತೀಕರಣ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಅಭಿಯಾನದ ಅಧ್ಯಯನ ಹಾಗೂ ಪರಿಶೀಲನ ಪತ್ರಕದ ಡಿಜಿಟಲೀಕರವು ಗರಿಷ್ಠ ಪ್ರಮಾಣದಲ್ಲಿ ಪ್ರಗತಿಯಲ್ಲಿದೆ. ಜಿಲ್ಲಾ ಮತ್ತು ಮಂಡಲವಾರು ತಂಡಗಳು ಜಿಲ್ಲಾ ವ್ಯಾಪ್ತಿಯ ಎಲ್ಲಾ 1,111 ಬೂತ್ ಗಳ ಸಮಗ್ರ ಮಾಹಿತಿಯ ಡಿಜಿಟಲೀಕರಣ ಹಾಗೂ ಪರಿಷ್ಕರಣೆಗೆ ಹೆಚ್ಚಿನ ಒತ್ತು‌ ನೀಡಿ ಶೀಘ್ರವಾಗಿ ಜಿಲ್ಲಾ ಬಿಜೆಪಿ ‘ಪರಿಪೂರ್ಣ ಬೂತ್ ಡಿಜಿಟಲೀಕೃತ ಜಿಲ್ಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ತೊಡಗಿಸಿಕೊಳ್ಳಬೇಕು ಎಂದರು.

‘ಸಶಕ್ತ ಬೂತ್ – ಸದೃಢ ಭಾರತ’ ಅಭಿಯಾನದ ‘ಅಧ್ಯಯನ ಹಾಗೂ ಪರಿಶೀಲನ’ ರಾಜ್ಯ ತಂಡದ ಪ್ರಮುಖ್ ಮಂಜುನಾಥ್ ಮಾಹಿತಿಯ ಡಿಜಿಟಲೀಕರಣ, ಪರಿಷ್ಕರಣೆ ಹಾಗೂ ಡಿಜಿಟಲ್ ಪುಸ್ತಕದ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಅಭಿಯಾನದ ಜಿಲ್ಲಾ ಮತ್ತು ಮಂಡಲಗಳ ತಂಡದ ಸದಸ್ಯರು ಉಪಸ್ಥಿತರಿದ್ದರು.

ಆರ್.ಎಸ್.ಎಸ್. ಕಚೇರಿಗೆ ಮುತ್ತಿಗೆ ಯತ್ನ ಖಂಡನೀಯ

News By: ಜನತಾಲೋಕವಾಣಿನ್ಯೂಸ್

ಆರ್.ಎಸ್.ಎಸ್. ಕಚೇರಿಗೆ ಮುತ್ತಿಗೆ ಯತ್ನ ಖಂಡನೀಯ

ಉಡುಪಿ: ಇಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಕಚೇರಿಗೆ ಪಿ.ಎಫ್.ಐ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿರುವುದು ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎನ್.ಐಎ ಅಧಿಕಾರಿಗಳು ದೇಶಾದ್ಯಂತ ತಪ್ಪಿತಸ್ಥರಾದ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಕಚೇರಿ ಮೇಲೆ ದಾಳಿ ನಡೆಸಿದಾಗ ಉಡುಪಿಯಲ್ಲಿ ಕೆಲವು ಕಿಡಿಗೇಡಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಅಂಥವರನ್ನು ಹದ್ದುಬಸ್ತಿನಲ್ಲಿಟ್ಟು ಮಟ್ಟಹಾಕಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ಅತ್ಯಂತ ದಿಟ್ಟ ಹೆಜ್ಜೆ ಇಡಲಿದೆ.

ಅತ್ಯಂತ ಶಾಂತಿ ಪ್ರಿಯ ಉಡುಪಿಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸುತ್ತಿರುವ ಇಂಥ ಯುವಕರಿಗೆ ಮುಸಲ್ಮಾನ ನಾಯಕರು ಇನ್ನಾದರೂ ಬುದ್ಧಿ ಹೇಳಬೇಕು. ಇಲ್ಲವಾದಲ್ಲಿ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸುವುದು ಶತಃಸಿದ್ಧ ಎಂದು ಕುಯಿಲಾಡಿ ತಿಳಿಸಿದ್ದಾರೆ.

ಸೆ.24-25 : ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಶಿಕ್ಷಣ ವರ್ಗ


ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಶಿಕ್ಷಣ ವರ್ಗವು ಸೆ.24 ಮತ್ತು ಸೆ.25ರಂದು ಉಡುಪಿ ಮಥುರಾ ಕಾಂಫರ್ಟ್ಸ್ ಸಭಾಂಗಣದಲ್ಲಿ ಜರಗಲಿದೆ.

ಸೆ.24ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಇಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಪ್ರಶಿಕ್ಷಣದ ಉದ್ಘಾಟನೆಯನ್ನು ನೆರವೇರಿಸುವರು. ಸೆ.25ರ ಸಂಜೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ‌ ಶ್ರೀನಿವಾಸ ಪೂಜಾರಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ‌ ಮಾರ್ಗದರ್ಶನ ನೀಡಲಿದ್ದಾರೆ.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ.ಸುವರ್ಣ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಮ್. ಸುಕುಮಾರ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಂಟುವವರ’ ಹುಟ್ಟಡಗಿಸಿದ ಪೋಲಿಸ್ ಇಲಾಖೆ; ಪಿಎಫ್ಐ, ಎಸ್ಡಿಪಿಐಗೆ ಮರ್ಮಾಘಾತ ನೀಡಿದ ಎನ್ಐಎ ಐತಿಹಾಸಿಕ ದಾಳಿ‌ ಶ್ಲಾಘನೀಯ: ಕುಯಿಲಾಡಿ ಸುರೇಶ್ ನಾಯಕ್



ಉಡುಪಿ: ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೇಶದ 10 ರಾಜ್ಯಗಳಲ್ಲಿ ಐತಿಹಾಸಿಕ ಮಿಂಚಿನ ದಾಳಿ ನಡೆಸಿ ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ 100ಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂದಿಸಿರುವ ದಿಟ್ಟ ಕ್ರಮ ಹಾಗೂ ದಾಳಿಯನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಕಾಪು ಮತ್ತು ಉಡುಪಿ ನಗರದಲ್ಲಿ ‘ತಾಂಟುವ’ ಮನಸ್ಥಿತಿಯನ್ನು ಹೊಂದಿರುವ ಕಿಡಿಗೇಡಿಗಳ ರಸ್ತೆ ತಡೆಯನ್ನು ವಿಫಲಗೊಳಿಸಿ‌ ಮತಾಂಧ ಸಮಾಜಘಾತುಕ‌ ದುಷ್ಟ ಶಕ್ತಿಗಳ‌ ಹುಟ್ಟಡಗಿಸಿರುವ ಜಿಲ್ಲಾ ಪೋಲಿಸ್ ಇಲಾಖೆಯ ಕ್ರಮ ಶ್ಲಾಘನೀಯ ಎಂದು‌ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ‌ ಹಿಂದೂ‌ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಆಮೂಲಾಗ್ರ ತನಿಖೆ ಹಾಗೂ ಇನ್ನಿತರ ಮಹತ್ತರ ವಿಚಾರಗಳ ಹಿನ್ನೆಲೆಯಲ್ಲಿ‌ ಮುಸ್ಲಿಂ ತೀವ್ರವಾದ ಸಂಘಟನೆಗಳಾದ‌ ಪಿಎಫ್ಐ ಮತ್ತು ಎಸ್ಡಿಪಿಐ ಚಟುವಟಿಕೆಗಳ‌ ಮೇಲೆ ತೀವ್ರ ನಿಗಾ ವಹಿಸಿರುವ ಎನ್ಐಎ ಯೋಜನಾಬದ್ಧವಾಗಿ ಈ ದಾಳಿಯನ್ನು ನಡೆಸಿದ್ದು ಇಂತಹ ದೇಶ ವಿರೋಧಿ ಸಂಘಟನೆಗಳನ್ನು ಬೇರು ಸಹಿತ ಕಿತ್ತುಹಾಕಲು ಕೇಂದ್ರ ಗೃಹ ಇಲಾಖೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದು, ಈ ಪ್ರಕ್ರಿಯೆ ಕೇವಲ‌ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ನಿಷೇಧಕ್ಕೆ ಮಾತ್ರ ಸೀಮಿತವಾಗಿರದೆ ಅದರ ಹಣಕಾಸು ವ್ಯವಹಾರ ಹಾಗೂ ಅಸ್ತಿತ್ವಕ್ಕೆ ಧಕ್ಕೆ ತರುವ ಎಲ್ಲಾ ಅಗತ್ಯ ಕ್ರಮಗಳನ್ನು‌ ಕಾರ್ಯಗತಗೊಳಿಸಲಿದೆ.

ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲೇ ಧರ್ಮಾಧಾರಿತವಾಗಿ ದೇಶ ವಿಭಜನೆಗೈದ ಕಾಂಗ್ರೆಸ್ ಇಂದು ದೇಶದೆಲ್ಲೆಡೆ ನಡೆಯುತ್ತಿರುವ ಹಲವಾರು ಅನಪೇಕ್ಷಿತ ಘಟನೆಗಳಿಗೆ ನಾಂದಿ ಹಾಡಿರುವುದು ವಾಸ್ತವ. ಪ್ರಸಕ್ತ ದೇಶದಾದ್ಯಂತ ಯಾವುದೇ ರಾಷ್ಟ್ರ ವಿರೋಧಿ ಮತಾಂಧ ಸಂಘಟನೆಗಳು ಹದ್ದು ಮೀರಿ ವರ್ತಿಸಿದಲ್ಲಿ ತಕ್ಕ ಶಾಸ್ತಿ ನೀಡಲು‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸದೃಢ ಆಡಳಿತ ವ್ಯವಸ್ಥೆ ಸರ್ವ ಸನ್ನದ್ಧವಾಗಿದೆ ಎಂಬುದು ಎನ್ಐಎ ದಾಳಿ ಹಾಗೂ ಪಿಎಫ್ಐ ನಾಯಕರ ಬಂಧನದಿಂದ ರುಜುವಾತಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಉಡುಪಿ ನಗರ ‘ಸೇವಾ ಪಾಕ್ಷಿಕ’ : ಸೆ.20ರ ಸಂಜೆ 4.30ಕ್ಕೆ ಕ್ಲಾಕ್ ಟವರ್ ಬಳಿ ‘ಮೋದಿ ಪಥ’ ಪ್ರದರ್ಶಿನಿ, ಬೀದಿ ನೃತ್ಯ



ಉಡುಪಿ: ಬಿಜೆಪಿ ಉಡುಪಿ ನಗರ ವತಿಯಿಂದ ‘ಸೇವಾ ಪಾಕ್ಷಿಕ’ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ‌ಮೋದಿಯವರ 72ನೇ ಜನ್ಮ ದಿನಾಚರಣೆಯ ಪ್ರಯುಕ್ತ‌ ಸೆ.20 ಮಂಗಳವಾರ ಸಂಜೆ 4.30ಕ್ಕೆ ಉಡುಪಿ ಕ್ಲಾಕ್ ಟವರ್ ಬಳಿ‌ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಧಾನಿ ಮೋದಿ ಜೀವನ, ದೂರದೃಷ್ಟಿ ಮತ್ತು‌ ನೀತಿಗಳನ್ನು ಪ್ರಚುರಪಡಿಸುವ ಬೃಹತ್ ಎಲ್.ಇ.ಡಿ. ಪ್ರದರ್ಶಿನಿ ‘ಮೋದಿ ಪಥ’ ಹಾಗೂ ‘ಬೀದಿ ನೃತ್ಯ’‌ (ಫ್ಲ್ಯಾಶ್ ಮೋಬ್) ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಯಲಿದೆ.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಡೆಯಲಿರುವ ಈ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಲಿದ್ದಾರೆ.

ಬಳಿಕ ಸಂಜೆ 5.30ಕ್ಕೆ ರಾಜಾಂಗಣದ ಪಾರ್ಕಿಂಗ್, 6.30ಕ್ಕೆ ಮಲ್ಪೆ ಬೀಚ್, 7.30ಕ್ಕೆ ಸಂತೆಕಟ್ಟೆ ಜಂಕ್ಷನ್, 8.30ಕ್ಕೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಪ್ರದರ್ಶಿನಿ ಹಾಗೂ ಬೀದಿ ನೃತ್ಯ ನಡೆಯಲಿದೆ.

ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು, ಯುವ ಸಮುದಾಯ, ಮೋದಿ ಅಭಿಮಾನಿಗಳು ಮತ್ತು ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭೂತಪೂರ್ವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ‘ಸೇವಾ ಪಾಕ್ಷಿಕ’ ಅಭಿಯಾನದ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ‌ ಜಿಲ್ಲಾ ಒಬಿಸಿ ಮೋರ್ಚಾ: ವಿಶ್ವಕರ್ಮ‌ ಜಯಂತಿ, ನಾರಾಯಣ ಗುರು ಜಯಂತಿ ಆಚರಣೆ, ಸಾಧಕರಿಗೆ ಸನ್ಮಾನ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಮತ್ತು ಬ್ರಹ್ಮಶ್ರೀ‌ ನಾರಾಯಣ ಗುರು ಜಯಂತಿ ಆಚರಣೆಯು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು ಅಧ್ಯಕ್ಷತೆಯಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಸಕ್ತ‌ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಡಾ! ಅಣ್ಣಯ್ಯ ಕುಲಾಲ್, ಅತ್ಯುತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಜೀವ ದೇವಾಡಿಗ, ಕೊರಗ ಸಮುದಾಯದ ಗುರಿಕಾರ ಸುಂದರ ಕೊರಗ ಇವರನ್ನು ಸನ್ಮಾನಿಸಲಾಯಿತು.

ಭಗವಾನ್‌ ವಿಶ್ವಕರ್ಮರ ಕುರಿತು‌ ಉಪನ್ಯಾಸವನ್ನು ಕಟಪಾಡಿ ಆನೆಗುಂದಿ ಸಂಸ್ಥಾನದ ಪವನ್ ಶರ್ಮ ನಡೆಸಿಕೊಟ್ಟರು. ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಉಪನ್ಯಾಸವನ್ನು ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಯಾನಂದ ಡಿ. ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಶೋಕ್ ಮೂರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಜಿಲ್ಲಾ ಒಬಿಸಿ ಮೋರ್ಚಾದ ಉಸ್ತುವಾರಿ ರೇಷ್ಮಾ ಉದಯ ಶೆಟ್ಟಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು, ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಬಿಲ್ಲವ ಸಮಾಜದ ಬಂಧುಗಳು ಮತ್ತು ವಿಶ್ವಕರ್ಮ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಕಡಿಯಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕುಮಾರ್ ಬಾಣ ವಂದಿಸಿದರು.

ಮೋದೀಜಿ ಜನ್ಮದಿನದ ಅಂಗವಾಗಿ ಮಹಿಳಾಮೋರ್ಚ ವತಿಯಿಂದ ಆದರ್ಶ ಅಂಗನವಾಡಿ ಕಾರ್ಯಕ್ರಮದಡಿ ಯಲ್ಲಿ ಕುತ್ಯಾರಿನಲ್ಲಿ ಅಂಗನವಾಡಿ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ

ಕಾಪು: ಮೋದೀಜಿ ಜನ್ಮದಿನದ ಅಂಗವಾಗಿ ಮಹಿಳಾಮೋರ್ಚ ವತಿಯಿಂದ ಆದರ್ಶ ಅಂಗನವಾಡಿ ಕಾರ್ಯಕ್ರಮದಡಿ ಯಲ್ಲಿ ಕುತ್ಯಾರಿನಲ್ಲಿ ಅಂಗನವಾಡಿ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯದ ಎಲ್ಲ ಮಂಡಲಗಳಲ್ಲಿ ಮಹಿಳಾಮೋರ್ಚ ವತಿಯಿಂದ ತಲಾ ಒಂದು ಅಂಗನವಾಡಿ ದತ್ತು ಸ್ವೀಕಾರ ಮಾಡಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸ್ಥಿರ ಅಂಗನವಾಡಿ ಮಾಡಿ ಸುಶಾಸನ ದಿನದಂದು ಅವರಿಗೆ ಬಿಟ್ಟುಕೊಡುವ ಆದರ್ಶ ಕಾರ್ಯಕ್ರಮ.

ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ಈ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಕಾರ್ಯಕ್ರಮದ ಸ್ವರೂಪ ವಿವರಿಸಿದರು. ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ ಸ್ವಾಗತಿಸಿದರು. ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿಗಳಾದ ನೀತಾ ಗುರುರಾಜ್ , ಸುರೇಖ ಶೈಲೇಶ್ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಕುತ್ಯಾರು ಪಂಚಾಯತ್ ಅಧ್ಯಕ್ಷರಾದ ಲತಾ ಆಚಾರ್ಯ, ಜಿಲ್ಲಾ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಪಕ್ಷದ ವಿವಿಧ ಪದಾಧಿಕಾರಿಗಳು, ಮಹಿಳಾಮೋರ್ಚ ಪದಾಧಿಕಾರಿಗಳು ಉಪಸ್ಥಿತರಿದ್ದರು. ‌

ಇಂದು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಮೋದೀಜಿ ಜನ್ಮದಿನದ ಆಚರಣೆ

ಕಾಪು: ಮೋದೀಜಿ ಜನ್ಮದಿನದ ಅಂಗವಾಗಿ ಇಂದು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಮೋದೀಜಿ ಜನ್ಮದಿನದ ಆಚರಣೆ ನಡೆಯಿತು. ಅದರೊಂದಿಗೆ ನಮ್ಮ ಪಕ್ಷದ ಕಾರ್ಯಕರ್ತರಾದ ಚಂದ್ರ ಮಲ್ಲಾರ್ ಹಾಗೂ ಶೇಖ್ ನಝೀರ್ ಇವರು ಒಂದು‌ ದಿನ 5 ಕಿ.ಮೀ. ವರೆಗೆ ಸಾರ್ವಜನಿಕರಿಗೆ ಉಚಿತ ಸೇವೆ ನೀಡುವುದನ್ನು ಉದ್ಘಾಟಿಸಲಾಯಿತು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಮತ್ತು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್, ರಾಜ್ಯ ಮಹಿಳಾಮೋರ್ಚ ಪ್ರಧಾನ‌ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಮಂಡಲ ಪ್ರಧಾನ‌ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ ಪ್ರಧಾನ ಕಾರ್ಯದರ್ಶಿಗಳಾದ ನೀತಾ ಗುರುರಾಜ್ ಸುರೇಖ ಶೈಲೇಶ್ ಮತ್ತಿತರು ಉಪಸ್ಥಿತರಿದ್ದರು. ಪುರಸಭಾ ಸದಸ್ಯರುಗಳ ವಿಶೇಷ ಮುತುವರ್ಜಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು ಪುರಸಭಾ ಸದಸ್ಯರುಗಳಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ರತ್ನಾಕರ ಶೆಟ್ಟಿ, ನಾಗೇಶ್ ಶೈಲೇಶ್ ಅಮೀನ್ ಸರಿತಾ ಪೂಜಾರಿ, ಮತ್ತಿತರು ಉಪಸ್ಥಿತರಿದ್ದರು. ಯುವಮೋರ್ಚ ಪದಾಧಿಕಾರಿಗಳಾದ ಪ್ರವೀಣ್ ಪೂಜಾರಿ, ಸಚಿನ್ ಬೊಳ್ಜೆ ರಾಘವೇಂದ್ರ ರಾವ್ ಮತ್ತಿತರು, ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಉಪಸ್ಥಿತರಿದ್ದರು. ‌

ಮೋದೀಜಿ ಜನ್ಮದಿನದ ಅಂಗವಾಗಿ‌ “ಸೇವಾ ಪಾಕ್ಷಿಕ” ಕಾರ್ಯಕ್ರಮದ ಪೂರ್ವಭಾವಿ ಸಭೆ

ಕಾಪು: ಮೋದೀಜಿ ಜನ್ಮದಿನದ ಅಂಗವಾಗಿ ಸೆ.17 ರಿಂದ ಅ. 2 ಗಾಂಧಿಜಯಂತಿ ಯ ತನಕ ಸುಮಾರು 15 ದಿನಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ನಡೆಸುವ ಕುರಿತಂತೆ ಪೂರ್ವಭಾವಿ ಸಭೆ ಕಾಪು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಪಕ್ಷ ಕೊಟ್ಟ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿ ಪ್ರತೀ ಶಕ್ತಿ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಸೇವಾ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದೆನು. ವಿಶೇಷವಾಗಿ ಸ್ಬಚ್ಚತಾ ಕಾರ್ಯಕ್ರಮ, ರಕ್ತದಾನ ಶಿಬಿರ, ಕೆರೆಗಳ ಸ್ವಚ್ಚತೆ, ಗಿಡ ನೆಡುವ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರ ಇತ್ಯಾದಿ ಕಾರ್ಯಕ್ರಮ ನಡೆಸುವ ಬಗ್ಗೆ ರೂಪುರೇಷೆ ಕೈಗೊಳ್ಳಲಾಯಿತು.

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ಸುರೇಂದ್ರ ಪಣಿಯೂರು, ಜಿಲ್ಲಾ ಸಹಕಾರಿ ಪ್ರಕೋಷ್ಠ ಸಂಚಾಲಕರಾದ ಮುರಳೀಧರ ಪೈ, ಮಂಡಲ ಮೋರ್ಚಗಳ ಅಧ್ಯಕ್ಷರುಗಳಾದ ಸಚಿನ್ ಸುವರ್ಣ, ಸಂತೋಷ್ ಮೂಡುಬೆಳ್ಳೆ, ಗುರುನಂದನ್ ನಾಯಕ್, ಸುಮಾಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ, ಚಂದ್ರಶೇಖರ ಕೋಟ್ಯನ್, ಸಂಧ್ಯಾ ಕಾಮತ್, ಸುಭಾಷ್ ನಾಯ್ಕ್, ಸುಧಾಮ ಶೆಟ್ಟಿ, ಮಂಡಲ ಕಾರ್ಯದರ್ಶಿಗಳಾದ ಚಂದ್ರ ಮಲ್ಲಾರ್, ರಾಜೇಶ್ ಕುಂದರ್, ಕಾಪು ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಅನಿಲ್ ಕುಮಾರ್, ಸರಿತಾ ಪೂಜಾರಿ ಮಹಾಶಕ್ತಿಕೇಂದ್ರ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೇವಾ ಕಾರ್ಯಗಳ ಮಹಾಪೂರ : ಸೆ.17- ಅ.2 ಬಿಜೆಪಿ ‘ಸೇವಾ ಪಾಕ್ಷಿಕ’ ಅಭಿಯಾನಉಡುಪಿ ಜಿಲ್ಲಾ ಬಿಜೆಪಿ ಪತ್ರಿಕಾ ಗೋಷ್ಠಿ



ಪ್ರಧಾನಿ ನರೇಂದ್ರ ಮೋದಿಯವರ ಅಪ್ರತಿಮ ನಾಯಕತ್ವದಲ್ಲಿ ಕೇಂದ್ರ ಸರಕಾರವು ‘ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ’ಕ್ಕೆ ಬದ್ಧವಾಗಿದೆ. ಸರಕಾರದ ಅನೇಕ ಜನಪರ ಯೋಜನೆಗಳನ್ನು ಸ್ವೀಕರಿಸಿ ಫಲಾನುಭವಿಗಳಾಗುವ ಮೂಲಕ ದೇಶವಾಸಿಗಳು ಇದನ್ನು ಅನುಮೋದಿಸಿದ್ದಾರೆ.

ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಸೆ.25ರಂದು ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜನ್ಮದಿನ, ಅ.2ರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಸೂಚನೆಯಂತೆ, ರಾಜ್ಯ ಬಿಜೆಪಿ ಮಾರ್ಗದರ್ಶನದಲ್ಲಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸೆ.17ರಿಂದ ಅ.2ರ ವರೆಗೆ ಜಿಲ್ಲೆಯಾದ್ಯಂತ ವೈಶಿಷ್ಟ್ಯಪೂರ್ಣ ಸೇವಾ ಚಟುವಟಿಕೆಗಳೊಂದಿಗೆ ‘ಸೇವಾ ಪಾಕ್ಷಿಕ’ ಅಭಿಯಾನವನ್ನು ಆಚರಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದರು.

ಅವರು ಗುರುವಾರ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

*ಅಭಿಯಾನದ ಪ್ರಮುಖ 13 ಸೇವಾ ಕಾರ್ಯಗಳು*:

*ಸೆ.17-18* ರಕ್ತದಾನ ಶಿಬಿರ
*ಸೆ.17 – ಅ.2* ಜೀವ ರಕ್ಷಕ ಲಸಿಕಾ ಅಭಿಯಾನ
*ಸೆ.20 – 21* ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಪ್ರದರ್ಶಿನಿ
*ಸೆ.21 – 22* ಆರೋಗ್ಯ ತಪಾಸಣಾ ಶಿಬಿರ
*ಸೆ.22 – 23* ಅರಳಿ ಮರ ನೆಡುವ ಅಭಿಯಾನ
*ಸೆ.24 – 25* ಕಮಲೋತ್ಸವ (ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ)
*ಸೆ.25 – 29* ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ
*ಸೆ.26 – 27* ಅಮೃತ ಸರೋವರ ನಿರ್ಮಾಣ
*ಸೆ.28 – 29* ಅಂಗನವಾಡಿ ಸೇವಾ ದಿವಸ್
*ಸೆ.30* ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ
*ಸೆ.30* ಕ್ಷಯರೋಗ ನಿರ್ಮೂಲನಾ ಅಭಿಯಾನ
*ಅ.2* ಸ್ವಚ್ಛತಾ ಅಭಿಯಾನ
*ಅ.2* ಖಾದಿ ಉತ್ಸವ (ಗಾಂಧಿ ಜಯಂತಿ)

‘ಸೇವಾ ಪಾಕ್ಷಿಕ’ ಅಭಿಯಾನದ ಜಿಲ್ಲಾ ಸಂಚಾಲಕರಾಗಿ ಮನೋಹರ್ ಎಸ್. ಕಲ್ಮಾಡಿ ಹಾಗೂ ಜಿಲ್ಲಾ ಸಹ ಸಂಚಾಲಕರಾಗಿ ಸದಾನಂದ ಉಪ್ಪಿನಕುದ್ರು ಮತ್ತು ಶಿವಕುಮಾರ್ ಅಂಬಲಪಾಡಿ ನೇಮಕಗೊಂಡಿದ್ದು, ಅಭಿಯಾನದ ಮಂಡಲ ಸಂಚಾಲಕರು, ಸಹ ಸಂಚಾಲಕರು ಮತ್ತು ಅಭಿಯಾನದ 13 ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮಿಸಲಾಗಿದೆ. ಈ ತಂಡವು ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ವರೆಗೆ ನಡೆಯಲಿರುವ ‘ಸೇವಾ ಪಾಕ್ಷಿಕ’ ಅಭಿಯಾನದ ವ್ಯವಸ್ಥಿತ ಸಂಯೋಜನೆ ಹಾಗೂ ವರದಿ ಸಲ್ಲಿಕೆಯ ಬಗ್ಗೆ ಗಮನ ಹರಿಸಲಿದೆ.

ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ನೀಡಿರುವ ಎಲ್ಲಾ ಅಭಿಯಾನಗಳನ್ನು ಬದ್ಧತೆಯಿಂದ ನಿರ್ವಹಿಸಿರುವ ಹಿರಿಮೆಗೆ ಪಾತ್ರವಾಗಿದ್ದು ‘ಸೇವಾ ಪಾಕ್ಷಿಕ’ ಅಭಿಯಾನವನ್ನೂ ಅತ್ಯಂತ ಯಶಸ್ವಿಯಾಗಿ ಆಚರಿಸಲಿದೆ. ಎಲ್ಲಾ ಮಂಡಲ ಕೇಂದ್ರಗಳಲ್ಲೂ ಪತ್ರಿಕಾ ಗೋಷ್ಠಿ ನಡೆಯಲಿದ್ದು ಅಭಿಯಾನದ ಮಂಡಲವಾರು ಸೇವಾ ಕಾರ್ಯಗಳ ವಿವರಗಳನ್ನು ಪ್ರಕಟಿಸಲಾಗುವುದು.

ಸೆ.17ರಂದು ಯುವ ಮೋರ್ಚಾ ಹಾಗೂ ಇತರ ಮೋರ್ಚಾಗಳ ವತಿಯಿಂದ ರಕ್ತದಾನ ಶಿಬಿರಗಳು ನಡೆಯಲಿದ್ದು, ಉಚಿತ ಆರೋಗ್ಯ ಶಿಬಿರಗಳನ್ನೂ ಆಯೋಜಿಸಲಾಗುವುದು.

‘ಆಜಾದಿ ಕಾ ಅಮೃತ ಮಹೋತ್ಸವ’ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ 75 ಕೆರೆಗಳ ನಿರ್ಮಾಣಕ್ಕೆ ಸರಕಾರ ನಿರ್ದೇಶನ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅಮೃತ ಸರೋವರ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವರು ಹಾಗೂ ಸಸಿಗಳನ್ನು ನೆಡಲಿದ್ದಾರೆ.

2025ಕ್ಕೆ ಭಾರತವು ಕ್ಷಯ ರೋಗದಿಂದ ಮುಕ್ತ ಆಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಅಂತಹ ರೋಗಿಗಳಿಗೆ ಮಾರ್ಗದರ್ಶನ, ಚಿಕಿತ್ಸಾ ವ್ಯವಸ್ಥೆಗೆ ಪೂರಕ ಬೆಂಬಲ ಕೊಡಲಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಜೀವನ ಮತ್ತು ಗುರಿ’ಯ ಕುರಿತಾಗಿ ಒಂದು ಪ್ರದರ್ಶಿನಿಯನ್ನು ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಆಯೋಜಿಸಲಾಗುವುದು.

ಜನ ಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ ಇರಲಿದೆ. ವಿಶೇಷವಾಗಿ ‘ಮೋದಿ 20 Dream Meet Delivery’ ಪುಸ್ತಕಕ್ಕೆ ಅತಿ ಹೆಚ್ಚು ಪ್ರಚಾರ ನೀಡಲಾಗುವುದು.

ಕೋವಿಡ್ ಲಸಿಕಾ ಅಭಿಯಾನವು ಐತಿಹಾಸಿಕವಾಗಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ 200 ಕೋಟಿಗಿಂತಲೂ ಹೆಚ್ಚು ಲಸಿಕೆಗಳನ್ನು ದೇಶದಲ್ಲಿ ನೀಡಕಾಗಿದ್ದು, ಜನತೆ ಪ್ರಸ್ತುತ ಬೂಸ್ಟರ್ ಡೋಸ್ ಲಸಿಕೆ ಪಡೆಯುತ್ತಿದ್ದಾರೆ. ಅಂತಹ ಲಸಿಕಾ ಕೇಂದ್ರಗಳ ಮುಂದೆ ಸೇವಾ ಚಟುವಟಿಕೆಯ ಕೇಂದ್ರ ಸ್ಥಾಪಿಸಿ ಇನ್ನೂ ಲಸಿಕೆ ಪಡೆಯದೇ ಇರುವವರನ್ನು ಗುರುತಿಸಿ ಲಸಿಕೆ ಕೊಡಿಸಲಾಗುವುದು.

ಜಿಲ್ಲೆಯ ಪ್ರತಿ ಬೂತ್‌ ವ್ಯಾಪ್ತಿಯಲ್ಲಿಯೂ ನಿರ್ದಿಷ್ಟ ಗುರಿಯೊಂದಿಗೆ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗುವುದು. ಎಲ್ಲಾ ಮಂಡಲಗಳಲ್ಲಿ ಎರಡು ದಿನಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗುವುದು. ಮೊದಲ ದಿನ ಸಾರ್ವಜನಿಕ ಸ್ಥಳಗಳಲ್ಲಿ ‘ಸ್ವಚ್ಚತಾ ಅಭಿಯಾನ’ ಹಾಗೂ ಎರಡನೇ ದಿನ ನದಿ, ಕೆರೆಗಳ ಸಹಿತ ಪ್ರಸ್ತುತ ಇರುವ ಮತ್ತು ನಿರ್ಮಾಣ ಹಂತದಲ್ಲಿರುವ ಅಮೃತ ಸರೋವರಗಳ ಸ್ವಚ್ಛತೆ ನಡೆಯಲಿದೆ. “Catch the Rain” ಅಭಿಯಾನದಡಿಯಲ್ಲಿ ಮಳೆ ನೀರಿನ ಶೇಖರಣೆಯ ಬಗ್ಗೆ ಅರಿವು ಮೂಡಿಸಲಾಗುವುದು.

‘ವೋಕಲ್ ಫಾರ್ ಲೋಕಲ್’ ಅಭಿಯಾನದಡಿ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯನ್ನು ಜಾಗೃತಗೊಳಿಸಲಾಗುವುದು. ಪ್ರಧಾನಿ ಮೋದಿ ಜೀವನ ಮತ್ತು ಗುರಿಯ ಕುರಿತು ಲೇಖನಗಳನ್ನು ಬರೆಸಲಾಗುವುದು.

ಪಕ್ಷದ ನಿರಂತರ ಸ್ಪೂರ್ತಿಯ ಚಿಲುಮೆಯಾದ ಪಂಡಿತ್ ದೀನ ದಯಾಳ್ ಉಪಾಧ್ಯಾಯರವರ ಜನ್ಮ ದಿನಾಚರಣೆಯನ್ನು ಸೆ.25ರಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಆಚರಿಸಲಾಗುವುದು. ಜೊತೆಗೆ ಅಂದೇ ಸೆ.25 ರವಿವಾರ ಬೆಳಿಗ್ಗೆ ಗಂಟೆ 11.09ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರತೀ ಬೂತ್‌ನಲ್ಲಿ ಸಾಮೂಹಿಕವಾಗಿ ಆಲಿಸುವ ಕಾರ್ಯ ನಡೆಯಲಿದೆ.

ಅ.2ರಂದು ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಮಹಾತ್ಮಾ ಗಾಂಧೀಜಿ ಜೀವನದ ಗುರಿಯನ್ನು ತಿಳಿಸುವ ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಹಾಗೂ ಖಾದಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Design a site like this with WordPress.com
Get started