ಕಾಂಗ್ರೆಸ್ಸಿಗೆ ಎಲ್ಲದರಲ್ಲೂ ಜಾತಿ ಹುಡುಕುವ ಗೀಳು : ಉಡುಪಿ ಜಿಲ್ಲಾ ಬಿಜೆಪಿ ಟೀಕೆ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಚುನಾವಣೆ ಸಮೀಪಿಸುತ್ತಿದ್ದಂತೆ ಯಾವುದೇ ಮೌಲ್ಯಾಧಾರಿತ ವಿಚಾರಗಳಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್ಸಿಗೆ ಎಲ್ಲದರಲ್ಲೂ ಜಾತಿ ಹುಡುಕುವ ಗೀಳು ಹೆಚ್ಚಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್ ಎಲ್ಲ ವರ್ಗಗಳ ಜನತೆಯ ಹಿತವನ್ನು ಗಮನದಲ್ಲಿಟ್ಟಕೊಂಡು ನೀಡಿದ ದೂರದರ್ಶಿತ್ವ ಹೊಂದಿರುವ ಸರ್ವ ಸ್ಪರ್ಶಿ; ಸರ್ವ ವ್ಯಾಪಿ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಬಿಲ್ಲವ-ಮೊಗವೀರ ಸಮಾಜವನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರ ವಾದವನ್ನು ಜಿಲ್ಲಾ ಬಿಜೆಪಿ ತಳ್ಳಿ ಹಾಕಿದೆ.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ‘ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ’ವನ್ನು ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ವನ್ನಾಗಿ ಪರಿವರ್ತಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದು, ಸದ್ಯದಲ್ಲೇ ನಿಗದಿತ ಅನುದಾನ ಸಹಿತ ನಿಗಮವನ್ನು ಘೋಷಣೆ ಮಾಡುವ ಭರವಸೆ ಇದೆ. ಮೀನುಗಾರಿಕಾ ಕ್ಷೇತ್ರ ಅಭಿವೃದ್ದಿಗೆ ಬಜೆಟ್ ನಲ್ಲಿ ಅನೇಕ ಸೌಲಭ್ಯಗಳನ್ನು ಘೋಷಿಸಲಾಗಿದೆ. ಯಾವುದೇ ಸಮುದಾಯಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದಷ್ಟು ಜನಪರ ಯೋಜನೆಗಳು ಮತ್ತು ಸವಲತ್ತುಗಳನ್ನು ಕಾಂಗ್ರೆಸ್ ಆಡಳಿತದ ಸರಕಾರ ಎಂದೂ ನೀಡಿಲ್ಲ. ಪ್ರಸಕ್ತ ಸನ್ನಿವೇಶದ ಲಾಭ ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ಸಿಗೆ ನಿರಾಸೆ ನಿಶ್ಚಿತ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದ ಉಡುಪಿ ಜಿಲ್ಲಾ ಬೂತ್ ಸಮಿತಿ ಸಮಾವೇಶಕ್ಕೆ ಚಪ್ಪರ ಮಹೂರ್ತ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಫೆ.20ರಂದು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ನೇತೃತ್ವದಲ್ಲಿ ನಡೆಯಲಿರುವ ಬೂತ್ ಸಮಿತಿ ಸಮಾವೇಶಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಚಪ್ಪರ ಮುಹೂರ್ತ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಪ್ರಕೋಷ್ಠಗಳ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು,
ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಡಾ! ವಿದ್ಯಾಧರ ಶೆಟ್ಟಿ, ಕರಂಬಳ್ಳಿ ಮಹಾಶಕ್ತಿ ಕೇಂದ್ರ ಸಂಚಾಲಕ ಕಿಶೋರ್ ಕುಮಾರ್ ಕರಂಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಫೆ.19 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ ಕುಮಾರ್ ಬಹರೈನ್, ಅಂಬಲಪಾಡಿ ಇವರಿಗೆ ಸಾರ್ವಜನಿಕ ಸನ್ಮಾನ – ರಾಜಾಭಿನಂದನೆ

News by: ಜನತಾಲೋಕವಾಣಿನ್ಯೂಸ್

ಸಾಗರದಾಚೆ ಅರಬ್ ದೇಶದಲ್ಲಿ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ಕಂಪನ್ನು ಪಸರಿಸಿ ಮೇಳೈಸಿರುವ ಉಡುಪಿ – ಅಂಬಲಪಾಡಿಯ ರಾಜ್ ಕುಮಾರ್ ಬಹರೈನ್ ಇವರಿಗೆ ಪ್ರಸಕ್ತ 2022ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಒಲಿದು ಬಂದಿದೆ.

ಈ ಹಿನ್ನೆಲೆಯಲ್ಲಿ ‘ರಾಜಾಭಿನಂದನಾ ಸಮಿತಿ ಉಡುಪಿ’ ಇದರ ನೇತೃತ್ವದಲ್ಲಿ ಸಾರ್ವಜನಿಕ ಸನ್ಮಾನ “ರಾಜಾಭಿನಂದನೆ” ಕಾರ್ಯಕ್ರಮವನ್ನು ಫೆ.19 ರವಿವಾರ ಮಧ್ಯಾಹ್ನ ಗಂಟೆ 3.30ರಿಂದ ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿದೆ.

ಮೂಲತ: ಉಡುಪಿ ಜಿಲ್ಲೆಯ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ನಿವಾಸಿಯಾಗಿರುವ ರಾಜ್ ಕುಮಾರ್ ರವರು ಬಿಲ್ಲವ ಸಮಾಜದ ಓರ್ವ ಯಶಸ್ವಿ ಉದ್ಯಮಿಯಾಗಿ ದೂರದ ಬಹರೈನ್‌ನಲ್ಲಿ ನೆಲೆಸಿದ್ದರೂ ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು
ಹುಟ್ಟೂರಿನಲ್ಲೂ ಅನೇಕ ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.

ಉಡುಪಿಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿರುವ ಇವರು ಮಾಜಿ ಶಾಸಕ ದಿ|ದಾಮೋದರ್ ಅರ್. ಸುವರ್ಣ ಮುಲ್ಕಿ ಇವರ ಸುಪುತ್ರಿ, ಪತ್ನಿ ಡಾ| ಚೇತನಾ ರಾಜ್ ಕುಮಾರ್ ಹಾಗೂ ಮಗಳು ಆರ್ಯ ರಾಜ್ ಕುಮಾರ್ ಇವರೊಂದಿಗೆ ಬಹರೈನ್ ನಲ್ಲಿ ನೆಲೆಸಿ ತನ್ನ ಉದ್ಯಮದೊಂದಿಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೊತೆಗೆ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಅರಬ್ ರಾಷ್ಟ್ರದಲ್ಲಿ ಪಸರಿಸಲು ಅಹರ್ನಿಶಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಸಾಧಕರಾಗಿ ವಿಶಿಷ್ಟ ಸಾಧನೆಗೈದಿರುವ ರಾಜ್ ಕುಮಾರ್ ರವರು ಬಹರೈನ್ ಕನ್ನಡ ಸಂಘದಲ್ಲಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2 ಬಾರಿ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ತಾಯ್ನಾಡಿನಿಂದ ವಿವಿಧ ಕಲಾವಿದರನ್ನು ಕರೆಸಿ ಬಹರೈನ್ ನಲ್ಲಿ ಕನ್ನಡ ಸಂಸ್ಕೃತಿಯ ವೈಭವದ ಸೊಡಗನ್ನು ಅನಾವರಣಗೈದ ಖ್ಯಾತಿ ಇವರಿಗೆ ಸಲ್ಲುತ್ತದೆ. ‘ಆಳ್ವಾಸ್ ವಿಶ್ವ ನುಡಿಸಿರಿ’ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಆಯೋಜಿಸಿರುತ್ತಾರೆ.

ಬಹರೈನ್ ನಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿಯ ಜೊತೆಗೆ ಕನ್ನಡ ಕಲಿಕೆ ತರಗತಿಯನ್ನು ಪ್ರಾರಂಭಿಸಿರುವ ರಾಜ್ ಕುಮಾರ್ ರವರು ಅರಬ್ ರಾಷ್ಟ್ರದಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸರಕಾರದಿಂದ ರೂ.2 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ, ತನ್ನ ಅಧ್ಯಕ್ಷೀಯ ಅವಧಿಯಲ್ಲಿ ರೂ.1 ಕೋಟಿ ಮೊತ್ತವನ್ನು ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಚಿತ್ರ ರಂಗದ ಮಿನುಗು ತಾರೆಯರಾದ ಕೀರ್ತಿಶೇಷ ಡಾ| ಪುನೀತ್ ರಾಜ್ ಕುಮಾರ್ ಹಾಗೂ ಡಾ| ಶಿವರಾಜ್ ಕುಮಾರ್ ಇವರನ್ನು ಬಹರೈನ್ ಕನ್ನಡ ಸಂಘಕ್ಕೆ ಕರೆಸಿರುವುದು ಗತ ಇತಿಹಾಸ. ಅಲ್ಲದೆ ಕೀರ್ತಿಶೇಷ ಡಾ| ಪುನೀತ್ ರಾಜ್ ಕುಮಾರ್ ರವರ ಸವಿನೆನಪಿಗಾಗಿ ‘ಪುನೀತ್ ಗಾನ ನಮನ’ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.

ತನ್ನ ಸಾಧನೆಯ ಮಜಲಲ್ಲಿ ರಾಜ್ ಕುಮಾರ್ ರವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುವೈಟ್ ನಲ್ಲಿ ‘ವಿಶ್ವಮಾನ್ಯರು’ ಪ್ರಶಸ್ತಿ, ಬೆಂಗಳೂರಿನಲ್ಲಿ ‘ಸಾಧನ ಚೈತ್ರ’ ಪ್ರಶಸ್ತಿ, ಸಿಂಗಪೂರ್ ನಲ್ಲಿ ‘ಕುವೆಂಪು’ ಪ್ರಶಸ್ತಿ, ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’, ‘ಅಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಮೇರಿಕಾದ ‘ಅಕ್ಕ ಸಮ್ಮೇಳನ’ದಲ್ಲಿ ಸನ್ಮಾನಗೊಂಡಿರುವ ಶ್ರೀಯುತರು ಮುಂಬೈ ಬಂಟರ ಸಂಘ ಹಾಗೂ ದೆಹಲಿ ಕನ್ನಡ ಸಂಘದಿಂದಲೂ ಪುರಸ್ಕೃತಗೊಂಡಿದ್ದಾರೆ.

ಕನ್ನಡಾಭಿಮಾನದ ಜೊತೆಗೆ ಬಿಲ್ಲವ ಸಮಾಜದ ಸಂಘಟನೆಗೆ ಒತ್ತು ನೀಡಿದ್ದಾರೆ. 2003ರಲ್ಲಿ ‘ಬಹರೈನ್ ಶ್ರೀ ಗುರು ಸೇವಾ ಸಮಿತಿ’ಯನ್ನು ಸ್ಥಾಪಿಸಿ ನಂತರ ‘ಬಹರೈನ್ ಬಿಲ್ಲವಾಸ್’ ಇದರ ಸ್ಥಾಪಕರಾಗಿ 4 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದಾಗಿದೆ.

ಕನ್ನಡ, ತುಳು ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಯ ಜೊತೆಗೆ ಬಹರೈನ್ ನ ಸಿ.ಸಿ.ಐ.ಎ. (Co-Ordination Committee of Indian Associations) ಇದರ ಸದಸ್ಯರಾಗಿದ್ದಾರೆ. ಅಸಹಾಯಕ ಭಾರತೀಯರಿಗೆ ಸಕಾಲದಲ್ಲಿ ಸೂಕ್ತವಾಗಿ ಸ್ಪಂದಿಸುವ ನೆಲೆಯಲ್ಲಿ ಬಾರತೀಯ ರಾಯಭಾರಿ ಕಛೇರಿ ಆಶ್ರಯದ ಐ.ಸಿ.ಆರ್.ಎಫ್. (Indian Community Relief Fund) ಇದರ ಸಕ್ರಿಯ ಸದಸ್ಯರಾಗಿ ನಿಸ್ವಾರ್ಥ ಸೇವೆಗೈಯುತ್ತಿದ್ದಾರೆ. ಕೊಡುಗೈ ಧಾನಿಯಾಗಿರುವ ರಾಜ್ ಕುಮಾರ್ ರವರು ಅನೇಕ ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ರಾಜಾಭಿನಂದನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಮ್. ಪೂಜಾರಿ ಹಾಗೂ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.20 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಡುಪಿ ಜಿಲ್ಲೆಗೆ – ಬೂತ್ ಸಮಿತಿ ಸಮಾವೇಶ, ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗಿ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಫೆ.20ರಂದು ಉಡುಪಿ ಜಿಲ್ಲೆಗೆ ಬೇಟಿ ನೀಡಲಿದ್ದು, ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ಬೆಳಿಗ್ಗೆ 10.00ಕ್ಕೆ ನಡೆಯುವ ಜಿಲ್ಲಾ ಮಟ್ಟದ ಬೂತ್ ಸಮಿತಿ ಸಮಾವೇಶದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 2.00ಕ್ಕೆ ಬೈಂದೂರಿನಲ್ಲಿ ನಡೆಯುವ ಬೃಹತ್ ವಾಹನ ಜಾಥಾದಲ್ಲಿ ಪಾಲ್ಗೊಂಡು, 2.30ಕ್ಕೆ ಮುಳ್ಳಿಕಟ್ಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯತಂಡ ಮತ್ತು ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಪೂರ್ವಸಿದ್ಧತೆ ಹಾಗೂ ಗಂಭೀರತೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಜೆ.ಪಿ. ನಡ್ಡಾರವರ ಪ್ರಥಮ ಬೇಟಿ ಬಹಳ ಮಹತ್ವವನ್ನು ಪಡೆದಿದೆ.

ಬೂತ್ ಸಮಿತಿ ಸಮಾವೇಶದಲ್ಲಿ ವಿಧಾನಸಭಾ ಕ್ಷೇತ್ರವಾರು ಹಾಗೂ ಗ್ರಾಮ ಪಂಚಾಯತ್ ಮತ್ತು ಬೂತ್ ಶಹ ಬೂತ್ ಸಮಿತಿಯ ಎಲ್ಲ 12 ಮಂದಿಗೆ ಸೂಕ್ತ ಅಸನದ ವ್ಯವಸ್ಥೆಯನ್ನು ಮಾಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ 6 ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಘಟಿತರಾಗಿ ಶಕ್ತಿಕೇಂದ್ರ ಮತ್ತು ಬೂತ್ ಸಮಿತಿಗಳ ವ್ಯವಸ್ಥಿತ ಸಭೆಗಳನ್ನು ನಡೆಸಿ, ಜಿಲ್ಲೆಯ ಎಲ್ಲಾ 1,111 ಬೂತ್ ಸಮಿತಿಗಳ ತಂಡ ಪೂರ್ಣ ಪ್ರಮಾಣದಲ್ಲಿ ಸಮಾವೇಶದಲ್ಲಿ ಭಾಗವಹಿಸುವಂತೆ ನಿಗಾ ವಹಿಸಿ ಎರಡೂ ಕಾರ್ಯಕ್ರಮಗಳ ಯಶಸ್ಸಿಗೆ ಬದ್ಧತೆಯಿಂದ ಶ್ರಮಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಉಡುಪಿ ಜಿಲ್ಲಾ ಬೇಟಿ ಹೊಸ ಸಂಚಲನ ಸೃಷ್ಠಿಸಿ, ದೊಡ್ಡ ಸಂಘಟನಾ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ವ್ಯವಸ್ಥಿತ ಬೂತ್ ಸಂಪರ್ಕದ ಮೂಲಕ ನಿಗದಿತ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಮಾವೇಶ, ವಾಹನ ಜಾಥಾ ಹಾಗೂ ಸಾರ್ವಜನಿಕ ಸಭೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಸಂಘಟಿತ ಪ್ರಯತ್ನದ ಮೂಲಕ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಲು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಸುಮಾರು 15,000 ಮಂದಿ ಅಪೇಕ್ಷಿತರ ಜಿಲ್ಲಾ ಬೂತ್ ಸಮಿತಿ ಸಮಾವೇಶದಲ್ಲಿ ಜಿಲ್ಲೆಯ ಪ್ರತಿಯೊಂದು ಬೂತ್ ಸಮಿತಿಗಳ ತಲಾ 12 ಮಂದಿ ಪ್ರಮುಖರು ಕಡ್ಡಾಯವಾಗಿ ಉಪಸ್ಥಿತರಿರಬೇಕು. ಈ ಬಗ್ಗೆ ಮಂಡಲ ಮಟ್ಟದಲ್ಲಿ ಫೆ.16ರಂದು ಕಾಪು ಮತ್ತು ಕಾರ್ಕಳ ಹಾಗೂ ಫೆ.17ರಂದು ಬೈಂದೂರು, ಕುಂದಾಪುರ, ಉಡುಪಿ ನಗರ ಮತ್ತು ಉಡುಪಿ ಗ್ರಾಮಾಂತರ ಮಂಡಲಗಳ ಪೂರ್ಣ ಪ್ರಮಾಣದ ಪೂರ್ವಸಿದ್ಧತಾ ಸಭೆಗಳನ್ನು ನಡೆಸಬೇಕು. ಪ್ರತೀ ವಿಧಾನಸಭಾ ಕ್ಷೇತ್ರದ 2 ಮಂದಿ ಬೂತ್ ಅಧ್ಯಕ್ಷರ ಆಸನದ ಸಂಖ್ಯೆಯ ಅದೃಷ್ಟ ಚೀಟಿ ಎತ್ತುವ ಮೂಲಕ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದು ಎಂದರು.

ಫೆ.26ರಂದು ಬೆಳಿಗ್ಗೆ 11.00 ಗಂಟೆಗೆ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಕಡ್ಡಾಯವಾಗಿ ವೀಕ್ಷಿಸಿ, ವಿವರ ಮತ್ತು ಫೋಟೋವನ್ನು ನಿಗದಿತ ಲಿಂಕ್ ಮೂಲಕ ಅಪ್ಲೋಡ್ ಮಾಡಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ರವರು ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಈಗಾಗಲೇ ಪಕ್ಷದ ಪ್ರಮುಖರ ಸಭೆ ಅತ್ಯಂತ ಪರಿಣಾಮಕಾರಿಯಾಗಿ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು 5 ಅಭಿಯಾನಗಳನ್ನು ನೀಡಿದ್ದು; ವಿಜಯ ಸಂಕಲ್ಪ ಯಾತ್ರೆ, ಮೋರ್ಚಾ ಸಮಾವೇಶಗಳು, ಫಲಾನುಭವಿಗಳ ಸಮಾವೇಶ, ಪ್ರಗತಿರಥ ವಾಹನ (ಎಲ್ಇಡಿ ವೀಡಿಯೋ), ಪ್ರಣಾಳಿಕೆ ಸಲಹಾ ಅಭಿಯಾನಗಳನ್ನು ಆಯಾ ಸಂಚಾಲಕರ ತಂಡದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ಯೋಜನಾಬದ್ಧವಾಗಿ ನಡೆಸಬೇಕು. ವಿಜಯ ಸಂಕಲ್ಪ ಅಭಿಯಾನದಲ್ಲಿ ಬಾಕಿ ಇರುವ ಮನೆಗಳನ್ನು ಸಂಪರ್ಕಿಸುವ ಜೊತೆಗೆ ಮಿಸ್ ಕಾಲ್ ಅಭಿಯಾನದ ಮೂಲಕ ಬಿಜೆಪಿ ಸದಸ್ಯತನಕ್ಕೆ ಹೆಚ್ಚಿನ ವೇಗ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಚುನಾವಣಾ ಉಸ್ತುವಾರಿಗಳು ಮತ್ತು ಮುಂದಿನ 5 ಅಭಿಯಾನಗಳ ಸಂಚಾಲಕರ ತಂಡವನ್ನು ಘೋಷಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು, ಮಂಡಲಗಳ ಮೋರ್ಚಾ ಮತ್ತು ಪ್ರಕೋಷ್ಠಗಳ ಸಂಚಾಲಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.

ವಿಶ್ವ ನಾಯಕ ಪ್ರಧಾನಿ ಮೋದಿ ಹೆಸರೆತ್ತಲು ಬಿ.ಕೆ. ಹರಿಪ್ರಸಾದ್ ಗೆ ಯಾವ ನೈತಿಕತೆ ಇದೆ? : ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್

ಉಡುಪಿ: ದೇಶಕ್ಕೆ ಸಮರ್ಥ ನಾಯಕತ್ವವನ್ನು ನೀಡಿ ‘ಸರ್ವ ಸ್ಪರ್ಶಿ; ಸರ್ವ ವ್ಯಾಪಿ’ ಅಭಿವೃದ್ಧಿಯ ಸಹಿತ ತನ್ನ ವೈಶಿಷ್ಟ್ಯಪೂರ್ಣ ಕಾರ್ಯವೈಖರಿಯ ಮೂಲಕ ಜನಮನ್ನಣೆ ಪಡೆದು ವಿಶ್ವನಾಯಕರೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಹೆಸರೆತ್ತಲೂ ಯೋಗ್ಯತೆ ಇಲ್ಲದ ‘ಕೋತ್ವಾಲ್ ಶಿಷ್ಯ’ ಖ್ಯಾತಿಯ ಬಿ.ಕೆ. ಹರಿಪ್ರಸಾದ್ ರವರಿಗೆ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಅವರು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಿಂದ ನಡೆದ ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ರವರು ಕಾಂಗ್ರೆಸ್ಸಿನ ಟೂಲ್ ಕಿಟ್ ಪರ್ಸಂಟೇಜ್ ಪ್ರಹಸನದ ಜೊತೆ ತಳುಕಿಹಾಕಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಡಿರುವ ಅವಮಾನಕರ ಮಾತುಗಳನ್ನು ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ತನ್ನ ಹರಕು ಬಾಯಿಯಲ್ಲಿ ಸದಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧ ಬೊಗಳೆ ಬಿಡುವ ಬಿ.ಕೆ. ಹರಿಪ್ರಸಾದ್ ರವರು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ತನಿಖೆಯನ್ನು ಎದುರಿಸುತ್ತಾ ಪ್ರಸ್ತುತ ಬೇಲ್ ನಲ್ಲಿ ಹೊರಗಡೆ ಇದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳುವುದು ಉತ್ತಮ. ಕಾಂಗ್ರೆಸ್ಸಿನ 70 ವರ್ಷಗಳ ಲೂಟಿ ರಹಸ್ಯಗಳು ಇಂದಿನ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆರಳ ತುದಿಯಲ್ಲೇ ಲಭ್ಯವಿದೆ. ಇದೆಲ್ಲದರ ಬಗ್ಗೆ ಹರಿಪ್ರಸಾದ್ ರವರ ಜಾಣ ಕುರುಡುತನ ಹಾಸ್ಯಾಸ್ಪದ ಎಂದಿದ್ದಾರೆ.

‘ಭ್ರಷ್ಟಾಚಾರದ ಗಂಗೋತ್ರಿ’ ಎಂದೇ ಕುಖ್ಯಾತವಾಗಿರುವ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಂದರೆ ಅದು ‘ದೆವ್ವದ ಬಾಯಲ್ಲಿ ಭಗವದ್ಗೀತೆ’ ಎಂಬಂತಾಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ, ಒಂದೇ ಕುಟುಂಬದ ಗುಲಾಮಗಿರಿ, ಒಂದೇ ವರ್ಗದ ಓಲೈಕೆಯಿಂದ ದೇಶದಾದ್ಯಂತ ಜನತೆಯ ವಿಶ್ವಾಸವನ್ನು ಕಳೆದುಕೊಂಡು ಪ್ರಸಕ್ತ ಕೇವಲ 3 ರಾಜ್ಯಗಳಲ್ಲಿ ಮಾತ್ರ ಆಡಳಿತಕ್ಕೆ ಸೀಮಿತವಾಗಿರುವ ದೇಶ ವಿರೋಧಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದು ವಾಸ್ತವ.

ಮಾತೆತ್ತಿದರೆ 40% ಕಮಿಷನ್ ಎಂದು ಬೊಬ್ಬಿರಿಯುವ ಬಿ.ಕೆ. ಹರಿಪ್ರಸಾದ್ ಸಹಿತ ಕಾಂಗ್ರೆಸ್ ನಾಯಕರಿಗೆ ತಮ್ಮ ಟೂಲ್ ಕಿಟ್ ಭಾಗವಾಗಿರುವ ಈ ‘ಸ್ವಯಂಘೋಷಿತ ಪ್ರಹಸನ’ವನ್ನು ಸಾಕ್ಷಿ ಸಮೇತ ರುಜುವಾತು ಪಡಿಸುವ ತಾಕತ್ತು ಇಲ್ಲವೇ? ಜನತೆಯ ಮುಂದೆ ಬರೇ ಪೊಳ್ಳು ಮಾತುಗಳಿಗೆ ಸೀಮಿತವಾಗಿರುವ ಕಾಂಗ್ರೆಸ್ ತನ್ನ ಆಡಳಿತಾವಧಿಯ ಆಕ್ರಮಗಳ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ? ತನ್ನ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಹೆದರಿ ಲೋಕಾಯುಕ್ತವನ್ನೇ ಮುಚ್ಚಿ ಎಳ್ಳು ನೀರು ಬಿಟ್ಟ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಂತಹ ಭ್ರಷ್ಟರ ಕೂಟದಿಂದ ಬಿಜೆಪಿಗೆ ನೈತಿಕತೆಯ ಪಾಠದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ ನ ಸಾಕ್ಷ್ಯಾಧಾರವಿಲ್ಲದ ಮೋಸ ಜಾಲಗಳಿಗೆ ಎಂದೂ ಮರುಳಾಗಲಾರರು. ‘ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಂದ್ರ ಸರಕಾರದಿಂದ ಫಲಾನುಭವಿಗಳಿಗೆ 1 ರೂಪಾಯಿ ಮೊತ್ತ ಕಳುಹಿಸಿದರೆ ಅದರಲ್ಲಿ 15 ಪೈಸೆ ಮಾತ್ರ ತಲುಪುತ್ತಿತ್ತು’ ಎಂದು ಸ್ವತಃ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಹೇಳಿದ್ದರು. ಇದನ್ನು ಕಾಂಗ್ರೆಸ್ ನಿಂದ 85% ಕಮಿಷನ್ ವ್ಯವಹಾರ ಎಂದು ತಿಳಿಯಬೇಕೇ? ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ನೊಂದಿಗೆ ಭ್ರಷ್ಟಾಚಾರದ ಕುರಿತು ವಾದ ವಿವಾದ ಅರ್ಥಹೀನ ಎಂಬುದು ಜಗಜ್ಜಾಹೀರಾಗಿದೆ ಎಂದಿದ್ದಾರೆ.

ಉಡುಪಿ ಜಿಲ್ಲೆಗೆ ಬಂದು ತಲೆಬುಡವಿಲ್ಲದೆ ಮಾತನಾಡುವ ಮೊದಲು ಬಿ.ಕೆ. ಹರಿಪ್ರಸಾದ್ ರವರು ಜಿಲ್ಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಡಾ! ವಿ.ಎಸ್. ಆಚಾರ್ಯರವರ ದೂರದರ್ಶಿತ್ವದ ಚಿಂತನೆಯೊಂದಿಗೆ ನಡೆದ ದಾಖಲೆಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ತಿಳಿದುಕೊಳ್ಳಲು ಪ್ರವಾಸಕ್ಕೆ ಹೋಗುವುದು ಉತ್ತಮ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪರಿಕಲ್ಪನೆಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳು, ವಾರಾಹಿ ಕುಡಿಯುವ ನೀರಿನ ಯೋಜನೆ, ಗ್ರಾಮಾಂತರ ರಸ್ತೆಗಳ ಉನ್ನತೀಕರಣ, ಜಿಲ್ಲಾಧಿಕಾರಿಗಳ ಸಂಕೀರ್ಣ, ನೈರ್ಮಲ್ಯ ಸಹಿತ ನೂರಾರು ವಿನೂತನ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಸಂಚಲನ ಮೂಡಿಸಿವೆ. ಇನ್ನೊಂದು ಸಿದ್ಧರಾಮಯ್ಯ ಎನಿಸಿಕೊಳ್ಳಲು ಹೊರಟಿರುವ ಬಿ.ಕೆ. ಹರಿಪ್ರಸಾದ್ ರವರಿಗೆ ಇದನ್ನೆಲ್ಲ ಅರ್ಥೈಸಿಕೊಳ್ಳುವ ಶಕ್ತಿ ಇಲ್ಲ ಎಂದವರು ತಿಳಿಸಿದ್ದಾರೆ.

ಚುನಾವಣೆಯನ್ನು ಎದುರಿಸಲು ಯಾವುದೇ ಪ್ರಮುಖ ವಿಚಾರಗಳಿಲ್ಲದೆ ಸೊರಗಿರುವ ಕಾಂಗ್ರೆಸ್ ಸೋಲಿನ ಭಯದಿಂದ ಸದಾ ಸುಳ್ಳು ಆರೋಪಗಳು ಹಾಗೂ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಜನತೆಯನ್ನು ಯಾಮಾರಿಸಲು ನಡೆಸುವ ಯಾವುದೇ ಪ್ರಯತ್ನಗಳು ಫಲ ನೀಡದು. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ, ಅಭಿವೃದ್ಧಿ ಪರ ಆಡಳಿತ, ಉದಾತ್ತ ಯೋಜನೆಗಳು ಜನಮಾನಸದಲ್ಲಿ ಭರವಸೆ ಮೂಡಿಸಿದೆ. ಈ ನೆಲೆಯಲ್ಲಿ ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಭರ್ಜರಿ ಗೆಲುವಿನ ಜೊತೆಗೆ ರಾಜ್ಯದಾದ್ಯಂತ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮಗದೊಮ್ಮೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.11 ಬೆಳಿಗ್ಗೆ 10.00ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಸಂಸ್ಮರಣೆ ಮತ್ತು ಸಮರ್ಪಣಾ ದಿನಾಚರಣೆ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ



ಉಡುಪಿ: ಫೆ.11 ಭಾರತೀಯ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ರವರ ಬಲಿದಾನ ದಿನ. ರಾಜಕೀಯ ಕ್ಷೇತ್ರದಲ್ಲಿ ಸಚ್ಚಾರಿತ್ರ್ಯ, ದೇಶ ಭಕ್ತಿ, ಧ್ಯೇಯವಾದ, ಏಕಾತ್ಮ ಮಾನವತಾವಾದ ಹಾಗೂ ಉನ್ನತ ರಾಜಕೀಯ ಮೌಲ್ಯಗಳಿಗೆ ಮೇಲ್ಪಂಕ್ತಿಯಾಗಿ ಇಂದಿಗೂ ಪ್ರೇರಣೆ ನೀಡುತ್ತಿರುವ ಪಂಡಿತ್ ಜೀ ಯವರ ಸಂಸ್ಮರಣೆಯನ್ನು ಸಮರ್ಪಣಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಫೆ.11 ಶನಿವಾರ ಬೆಳಿಗ್ಗೆ ಗಂಟೆ 10.00ಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ರವರ ಸಂಸ್ಮರಣೆ ಹಾಗೂ ಸಮರ್ಪಣಾ ದಿನಾಚರಣೆಯು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಲಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಪಂಡಿತ್ ಜೀ ಯವರ ಜೀವನಾದರ್ಶಗಳ ಕುರಿತು ಉಪನ್ಯಾಸ ನಡೆಸಿಕೊಡಲಿದ್ದಾರೆ.

ಪಕ್ಷದ ಚಟುವಟಿಕೆಗಳಿಗೆ ಪೂರಕವಾಗಿ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿಂದ ಸಂಜೆಯ ವರೆಗೆ ಸಾಮೂಹಿಕ ನಿಧಿ ಅರ್ಪಣೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲ, ಪ್ರಕೋಷ್ಠ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ವಿವಿಧ ಸ್ತರದ ಜನ ಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಕ್ಷೇತ್ರಾದ್ಯಂತ ಇ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಡಿಜಿಟಲ್ ಸ್ಟಿಕ್ಕರ್ ಅಂಟಿಸುವ ಅಭಿಯಾನ

News By: ಜನತಾಲೋಕವಾಣಿನ್ಯೂಸ್

ಕಾಪು: ಕಾಪು ಕ್ಷೇತ್ರಾದ್ಯಂತ ಇಂದು ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಡಿಜಿಟಲ್ ಸ್ಟಿಕ್ಕರ್ ಅಂಟಿಸುವ ಕೆಲಸ ಭರದಿಂದ ಸಾಗಿದೆ. ಅಲೆವೂರು, ಮಣಿಪುರ, ಕಟಪಾಡಿ, ಕುತ್ಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಡಿಜಿಟಲ್ ಸ್ಟಿಕ್ಕರ್ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಜಿಲ್ಲಾ ಸಹಕಾರಿ ಪ್ರಕೋಷ್ಠ ಸಂಚಾಲಕರಾದ ಮುರಳೀಧರ್ ಪೈ, ಕಟಪಾಡಿ ಶಕ್ತಿಕೇಂದ್ರ ಪ್ರಮುಖ್ ನಿತಿನ್ ಸೇರಿಗಾರ್, ಪ್ರಮುಖರಾದ ಸುರೇಶ್ ನಾಯಕ್, ಸತೀಶ್ ಶೆಟ್ಟಿ ಅಲೆವೂರು, ಸತೀಶ್ ನಾಯಕ್, ರಾಘವೇಂದ್ರ ಆಚಾರ್ಯ, ಪದ್ಮನಾಭ ಕೊಡಂಗಳ, ಪ್ರಜ್ವಲ್ ಹೆಗ್ಡೆ ಮರ್ಣೆ, ಕುತ್ಯಾರು ನವೀನ್ ಶೆಟ್ಟಿ, ಲತಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ – ‘ಆತ್ಮ ನಿರ್ಭರದಿಂದ ಅಮೃತ ಕಾಲದತ್ತ ಭಾರತ’ : ಉಡುಪಿ ಜಿಲ್ಲಾ ಬಿಜೆಪಿ

News By: ಜನತಾಲೋಕವಾಣಿನ್ಯೂಸ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಮಂಡಿಸಿರುವ ಕೇಂದ್ರ ಬಜೆಟ್-2023 ಒಂದು ಅತ್ಯುತ್ತಮ ಬಜೆಟ್. ‘ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ’ ಎಂಬ ಮಾತಿನಂತೆ ಈ ಬಜೆಟ್ ಉತ್ತರದಾಯಿಯಾಗಿ ಮೂಡಿ ಬಂದಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ 2023ಬೇ ಸಾಲಿನ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಫೆಡರಲ್ ಸಿಸ್ಟಮ್‌ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಆಶಾದಾಯಕ ಬಜೆಟನ್ನು ಮಂಡಿಸಲು ನಿಖರವಾದ ದೂರದರ್ಶಿತ್ವ ಇಟ್ಟುಕೊಂಡಿರುವ ಸದೃಢ, ಸಶಕ್ತ ಸರಕಾರದಿಂದ ಮಾತ್ರ ಸಾಧ್ಯ. ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಲಸಿಕೆ ನೀಡಿರುವುದು ಭಾರತ. ಭವಿಷ್ಯದಲ್ಲಿ ದೇಶವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕೆಂಬ ಉದಾತ್ತ ಚಿಂತನೆಯೊಂದಿಗೆ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ಸವಾಲುಗಳನ್ನು ಮೆಟ್ಟಿ ನಿಂತು ಆರ್ಥಿಕ ಶಿಸ್ತು ಕಾಪಾಡಿಕೊಂಡು ಮಂಡಿಸಿದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ.

*ವೈಶಿಷ್ಟ್ಯತೆಗಳು :*

1. ಸ್ವಾತಂತ್ರ್ಯಾನಂತರ ಪ್ರಸಕ್ತ ನೂತನ ಸೆಂಟ್ರಲ್ ವಿಸ್ತಾ ಯೋಜನೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪಾರ್ಲಿಮೆಂಟ್ ಭವನದಲ್ಲಿ ಮಂಡಿಸಿರುವ ಕೊನೆಯ ಬಜೆಟ್.

2. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 2ನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್.

3. ಬಜೆಟ್ ಗಾತ್ರ ರೂ.45.03 ಲಕ್ಷ ಕೋಟಿ.

4. ಈ ಬಜೆಟ್‌ನಲ್ಲಿ ವಿತ್ತೇಯ ಕೊರತೆ 5.9%.

5. 2022-23ರ ಬಜೆಟ್‌ಗೆ ಹೋಲಿಸಿದರೆ 14% ಪ್ರಗತಿ.

6. ‘ದೇಶದ ಅಮೃತ ಕಾಲದ ಮೊದಲ ಬಜೆಟ್’ ಎಂಬ ಖ್ಯಾತಿ.

7. ಅಭಿವೃದ್ಧಿಗೆ 7 ಸೂತ್ರಗಳನ್ನು ಇಟ್ಟುಕೊಂಡು ಮಾಡಿದ ಪ್ರಥಮ ಬಜೆಟ್.

*ಬಜೆಟ್‌ಗೆ ಪೂರಕ ಮತ್ತು ಉತ್ತೇಜಿತ ಅಂಶಗಳು :*

ಬಿಜೆಪಿ ನೇತೃತ್ವದ ಸರಕಾರದ 8 ವರ್ಷಗಳ ಸಾಧನೆಗಳೇ ಈ ಬಜೆಟ್ ಮಂಡನೆಗೆ ದಾರಿ ದೀಪ ಮತ್ತು ಮಾನದಂಡವಾಗಿದೆ.

1) ದೇಶದಲ್ಲಿ ಡಿಜಿಟಲ್ ಕ್ರಾಂತಿಯೇ ಜರಗುತ್ತಿದೆ. 2022ನೇ ವರ್ಷದಲ್ಲಿ ಸುಮಾರು ರೂ.7,400 ಕೋಟಿ ಡಿಜಿಟಲ್ ವ್ಯವಹಾರವಾಗಿದೆ.

2) ದೇಶದಲ್ಲಿ 11.74 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

3) ಉಜ್ವಲ ಯೋಜನೆಯಡಿಯಲ್ಲಿ ಸುಮಾರು 9.4 ಕೋಟಿ ಉಚಿತ ಗ್ಯಾಸ್ ಸಂಪರ್ಕ ಮಾಡಲಾಗಿದೆ.

4) 220 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.

5) 47.8 ಕೋಟಿ ಜನ್‌ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

6) ರೂ. 44.64 ಕೋಟಿ ಆಯುಷ್ಮಾನ್ ಆರೋಗ್ಯ ವಿಮೆ ಪಾವತಿಸಲಾಗಿದೆ.

7) ಕೃಷಿ ಸಮ್ಮಾನ್ ಯೋಜನೆಯಡಿ 11.4 ಕೋಟಿ ರೈತರಿಗೆ ರೂ.2.20 ಲಕ್ಷ ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ.

*ನಾಲ್ಕು ಅವಕಾಶಗಳು (ಅಮೃತ ಕಾಲಕ್ಕೆ 4 ಸ್ತಂಭಗಳು):*

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ದೇಶದ ಬಹುಮುಖ್ಯ ನಾಲ್ಕು ಅವಕಾಶಗಳನ್ನು ಗುರುತಿಸಿ ಅದನ್ನು ಸದೃಢಗೊಳಿಸಲು ಪೂರಕ ವ್ಯವಸ್ಥೆಗಳನ್ನು ಒದಗಿಸಿದ್ದಾರೆ.

1) *ಆರ್ಥಿಕ ಬಲಾಡ್ಯ ನಾರೀ ಶಕ್ತಿ :*

ಮಹಿಳೆಯರ ಆರ್ಥಿಕ ಸಶಕ್ತೀಕರಣ, ಮಹಿಳಾ ಉಳಿತಾಯ ಪತ್ರ ಬಿಡುಗಡೆ ಮತ್ತು 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು.

2) *ಸಾಂಪ್ರದಾಯಕ ಕುಶಲ ಕರ್ಮಿಗಳ ಕೌಶಲ್ಯ :*

‘ವಿಶ್ವಕರ್ಮ ಕೌಶಲ್ಯ ಸಮ್ಮಾನ ಯೋಜನೆ’ಯನ್ನು ರೂಪಿಸಿ ಎಲ್ಲಾ ತರಹದ ಕುಶಲ ಕರ್ಮಿಗಳಿಗೆ ಸಹಾಯ.

3) *ಪ್ರವಾಸ್ಕೋದ್ಯಮ ಗುರುತಿಸಿ ಅಭಿವೃದ್ಧಿ ಪಡಿಸುವುದು :*

ದೇಶದ 50 ಪ್ರವಾಸಿ ಕೇಂದ್ರಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಿ, ಅಗತ್ಯ ಪ್ರಚಾರ ಮೂಲಕ ಮಾಹಿತಿ ನೀಡುವುದು.

4) *’ಹಸಿರೇ ಉಸಿರು’ ಎಂಬಂತೆ ಎಲ್ಲದರಲ್ಲಿಯೂ ಹಸಿರಿಗೆ ಉತ್ತೇಜನ :*

ಹಸಿರು ಇಂಧನ, ಹಸಿರು ಶಕ್ತಿ, ಹಸಿರು ಕೃಷಿ, ಹಸಿರು ಸಾರಿಗೆ, ಹಸಿರು ಕಟ್ಟಡ, ಹಸಿರು ಉಪಕರಣ, ಇಂಗಾಲದ ಹೊರ ಸೂಸುವಿಕೆ ತಡೆಯುವುದು.

*ಸಪ್ತ ಸೂತ್ರಗಳು :*

ಬಜೆಟ್ ವಿನಿಯೋಗವನ್ನು 7 ಮಜಲುಗಳನ್ನಾಗಿ ವಿಂಗಡಿಸಿ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿ, ಹಣಕಾಸು ಒದಗಿಸಿ ದೇಶವು ತ್ವರಿತ ಗತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವಂತೆ ಮಾಡುವ ಉದ್ದೇಶದಿಂದ ಸಪ್ತ ಸೂತ್ರಗಳನ್ನು ಅಳವಡಿಸಲಾಗಿದೆ.

1) *ಶ್ರೀ ಅನ್ನ ಯೋಜನೆ :*

ದೇಶದ 20 ರಾಜ್ಯಗಳಲ್ಲಿ ಸಿರಿಧಾನ್ಯ ಕೃಷಿಗೆ ಭಾರೀ ಪ್ರೋತ್ಸಾಹ, ಕೃಷಿ ಉತ್ತೇಜನ ನಿಧಿ ಸ್ಥಾಪಿಸುವುದು, ನರೇಗಾ ಯೋಜನೆಗೆ ರೂ.6,000 ಕೋಟಿ ಒದಲಿಸುವುದು. ಕೃಷಿಗೆ ರೂ.20 ಲಕ್ಷ ಕೋಟಿ ಸಾಲ.

2) *ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ :*

ಗುಡಿ ಕೈಗಾರಿಕೆ, ಬುಡಕಟ್ಟು ಜನಾಂಗಕ್ಕೆ ಉದ್ಯೋಗವಕಾಶ, ಆದಿವಾಸಿ ಹಾಗೂ ಕೊರಗ ಜನಾಂಗದವರಿಗೆ ವಿಫುಲ ಅವಕಾಶ.

3) *ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಧ್ಯಮ ವರ್ಗಕ್ಕೆ ಸರ್ವ ಸಹಕಾರ :*

ಹಿರಿಯರಿಗೆ ಉಳಿತಾಯ ಯೋಜನೆ, ಸ್ತ್ರೀಯರಿಗೆ ಸಮ್ಮಾನ ಯೋಜನೆ, ಮಹಿಳಾ ಉಳಿತಾಯ ಪತ್ರ ಹಾಗೂ ಮಧ್ಯಮ ವರ್ಗಕ್ಕೆ ಉತ್ತೇಜನ.

4) *ಕೌಶಲ್ಯಾಭಿವೃದ್ಧಿ ಮೂಲಕ ಯುವ ಶಕ್ತಿಗೆ ಉತ್ತೇಜನ :*

ದೆಹಲಿಯಲ್ಲಿ ಯುನಿಟಿ ಮಾಲ್, ಸ್ಕಿಲ್ ಇಂಡಿಯಾ ಸೆಂಟರ್, 3 ವರ್ಷದಲ್ಲಿ 47 ಲಕ್ಷ ಯುವಕರಿಗೆ ಸ್ಟೈಪಂಡ್.

5) *ಹಸಿರು ಹೊದಿಕೆ :*

ಎಲ್ಲಾ ಅಭಿವೃದ್ಧಿ ವಿಷಯದಲ್ಲಿ ಹಸಿರೇ ಉಸಿರು ಎಂಬ ಧ್ಯೇಯದೊಂದಿಗೆ ಯೋಜನೆ.

8) *ಮೂಲ ಸೌಕರ್ಯ ಹೆಚ್ಚಿಸುವುದು :*

ರಸ್ತೆ, ರೈಲು, ಮುಂತಾದ ಮೂಲ ಸೌಕರ್ಯಕ್ಕೆ ದಾಖಲೆ ಮಟ್ಟದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಈ ಪ್ರಮಾಣ ಕಳೆದ ವರ್ಷಕ್ಕಿಂತ 33% ಹೆಚ್ಚಳವಾಗಿದೆ.

7) *ಡಿಜಿಟಲ್ ಟಚ್:*

100 ಹೆಚ್ಚಿನ ಲ್ಯಾಬ್ ಸ್ಥಾಪನೆ ಹಾಗೂ ಎಲ್ಲಾ ವಲಯಕ್ಕೆ 5ಜಿ ಸೇವೆ.

*ಆದಾಯ ತೆರಿಗೆ :*

ಆದಾಯ ತೆರಿಗೆಯ ಹೊಸ ನಿಯಮದಲ್ಲಿ ಐತಿಹಾಸಿಕ ಬದಲಾವಣೆ ಮಾಡಲಾಗಿದ್ದು, ರೂ.7.00 ಲಕ್ಷದ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ವೇತನದಾರರಿಗೆ ರೂ.50,000/- ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶ

*ಆದಾಯ ತೆರಿಗೆ ದರ*
0 ರಿಂದ 3 ಲಕ್ಷ .. 0%
3 ರಿಂದ 6 ಲಕ್ಷ .. 5%
6 ರಿಂದ 9 ಲಕ್ಷ .. 10%
9 ರಿಂದ 12 ಲಕ್ಷ .. 15%
12 ರಿಂದ 15 ಲಕ್ಷ .. 20%
20 ರಿಂದ .. 30%

*ಉಲ್ಲೇಖನೀಯ ಅಂಶಗಳು :*

1) ಬಿಜೆಪಿ ಸರಕಾರ ಬರುವ ಮೊದಲು ಬಜೆಟ್ ಗಾತ್ರ ರೂ.15.00 ಲಕ್ಷ ಕೋಟಿ ಆಗಿದ್ದು, ಪ್ರಸಕ್ತ ಬಜೆಟ್ ಗಾತ್ರ ರೂ.45.03 ಲಕ್ಷ ಕೋಟಿ ಆಗಿರುತ್ತದೆ. ಅಂದರೆ 3 ಪಟ್ಟು ಹೆಚ್ಚಳವಾಗಿದೆ.

2) ಅದೇ ರೀತಿ 2013ರಲ್ಲಿ ದೇಶದ ಜಿ.ಡಿ.ಪಿ. ರೂ.112.00 ಲಕ್ಷ ಕೋಟಿ ಆಗಿದ್ದು, ಈಗ ರೂ.270.00 ಲಕ್ಷ ಕೋಟಿ ಆಗಿರುತ್ತದೆ. ಅಂದರೆ ಎರಡೂವರೆ ಪಟ್ಟು ಹೆಚ್ಚಳವಾಗಿದೆ.

3) ಬಿಜೆಪಿ ಸರಕಾರ ಬರುವ ಮೊದಲು ವಿಶ್ವದಲ್ಲಿ ಭಾರತ 10ನೇ ಆರ್ಥಿಕ ಶಕ್ತಿಯಾಗಿತ್ತು. ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ.

4) ಐ.ಎಂ.ಎಫ್., ವಿಶ್ವ ಬ್ಯಾಂಕ್ ಮತ್ತು ತಜ್ಞರ ಅಂದಾಜಿನ ಪ್ರಕಾರ 2030ಕ್ಕೆ ಭಾರತ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. 2045ಕ್ಕೆ ಭಾರತ 2ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ.

5) ದೇಶದ ವಿದೇಶಿ ವಿನಿಮಯ ಗಾತ್ರ 600 ಬಿಲಿಯನ್ ಡಾಲರ್ ತಲುಪಿದೆ.

6) ದೇಶದ ಅಭಿವೃದ್ಧಿಯ ಧನಾತ್ಮಕ ಚಿಂತನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಹಾಗೂ ಸದೃಢ ಸರಕಾರದಿಂದ ಮಾತ್ರ ಇಂತಹ ಅಭಿವೃದ್ಧಿ ಪರ, ಜನ ಪರ ಬಜೆಟ್ ಮೂಲಕ ಐತಿಹಾಸಿಕ ಸಾಧನೆ ಸಾಧ್ಯವಾಗಲಿದೆ.

*ಐ.ಎಂ.ಎಫ್. ಮಾತಿನಂತೆ ‘ಭಾರತ ಇಂದು ವಿಶ್ವದ ಪ್ರಕಾಶಮಾನ ಕೇಂದ್ರ’.*

*ಬಜೆಟ್ ನಲ್ಲಿ ಘೋಷಿಸಿದ ಪ್ರಮುಖ ಯೋಜನೆಗಳು :*

1) ಕೋವಿಡ್ ಕಾಲದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗಿತ್ತು, ಅದನ್ನು ಡಿ.31, 2023ರ ವರೆಗೆ ವಿಸ್ತರಿಸಲಾಗಿದೆ.

2) 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

3) ಎಲ್ಲಾ ನಗರಕ್ಕೆ ಸ್ಯಾನಿಟೇಶನ್ ಯಂತ್ರ ಸರಬರಾಜು ಮಾಡುವ ಯೋಜನೆ ಹಾಕಲಾಗಿದೆ.

4) ಏಕಲವ್ಯ ವಸತಿ ಶಾಲೆಗಳಗೆ 38,000 ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.

5) 5ಜಿ ಸೇವೆಗಾಗಿ 100 ಹೊಸ ಲ್ಯಾಬ್‌ಗಳನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾಪಿಸಲಾಗುವುದು.

8) 50 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು.

7) 50 ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಿ, ಪ್ರಚುರಪಡಿಸಲಾಗುವುದು.

8) ಎಲ್ಲಾ ರಾಜ್ಯಗಳಿಗೂ ‘ವಂದೇ ಭಾರತ’ ರೈಲು ಓಡಿಸಲಾಗುವುದು.

9) ಸಹಕಾರಿ ಸಂಘಗಳ ಪಕ್ಕಾ ಲೆಕ್ಕ ತೆಗೆದು ಅದನ್ನು ಅಭಿವೃದ್ಧಿ ಪಡಿಸಿ ರೂ.3 ಕೋಟಿ ತನಕ ವ್ಯವಹಾರ ನಡೆಸಲಾಗುವುದು.

10) ಕಳೆದ ವರ್ಷದ ಬಜೆಟ್ ಕೊರತೆ 8.70%; ಆದರೆ ಈ ಬಾರಿಯ ಕೊರತೆ 5.90% ಆಗಿದ್ದು, 2025ರ ನಂತರ 3.50%ರ ಗುರಿ ಹಾಕಲಾಗಿದೆ.

11) ಮೂಲಭೂತ ಸೌಕರ್ಯಕ್ಕಾಗಿ ರಾಜ್ಯಗಳಿಗೆ 50 ವರ್ಷದ ಬಡ್ಡಿ ರಹಿತ ಸಾಲ ನೀಡಲು ರೂ.1.50 ಲಕ್ಷ ಕೋಟಿ ನಿಗದಿಪಡಿಸಲಾಗಿದೆ.

12) ನಿರ್ಯಾತ ಜಾಸ್ತಿ ಮಾಡುವ ಗುರಿಯೊಂದಿಗೆ ಆಮದು ಮಾಡುವ ಕಚ್ಚಾ ವಸ್ತುವಿಗೆ ಕಸ್ಟಂ ಡ್ಯೂಟಿ ಕಡಿಮೆ ಮಾಡಲಾಗಿದೆ.

13) ಸಿರಿಧಾನ್ಯಕ್ಕೆ ‘ಶ್ರೀ ಅನ್ನ ಯೋಜನೆ’ ಜಾರಿ ಮಾಡಿ 20 ರಾಜ್ಯಗಳಲ್ಲಿ ಬೆಳೆಯಲು ಗುರಿ ನಿಗದಿಪಡಿಸಲಾಗಿದೆ.

14) ಕೃಷಿ, ಹೈನು, ಪಶು, ಮೀನುಗಾರಿಕೆಗಳ ಸಾಲಕ್ಕಾಗಿ ರೂ.20 ಲಕ್ಷ ಕೋಟಿ ತೆಗೆದಿರಿಸಲಾಗಿದೆ.

15) ಮತ್ಸ್ಯ ಸಂಪದಕ್ಕೆ ರೂ.8,೦೦೦ ಕೋಟಿ ತೆಗೆದಿರಿಸಲಾಗಿದೆ.

16) ರೋಗ ಮುಕ್ತ ಗಿಡ ಸರಬರಾಜಿಗಾಗಿ ರೂ.2,200 ಕೋಟಿ ಒದಗಿಸಲಾಗಿದೆ.

17) ಆರೋಗ್ಯ ಕ್ಷೇತ್ರಕ್ಕೆ ರೂ.88,956 ಕೋಟಿಯನ್ನು ಒದಗಿಸಲಾಗಿದೆ.

18) ಉದ್ಯಮಕ್ಕೆ ಸಿಂಗಲ್ ವಿಂಡೋ ಸ್ಥಾಪಿಸಿ ಪಾನ್ ಸಂಖ್ಯೆಯ ಒಂದೇ ದಾಖಲೆ ಮಾಡಲಾಗುವುದು.

19) ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ.

20) ಮಹಿಳಾ ಸಂಪದದಂತೆ ಎಂ.ಎಸ್.ಎಸ್. ಪತ್ರ 2 ವರ್ಷಕ್ಕೆ ರೂ.2 ಲಕ್ಷ ನಿಗದಿಪಡಿಸಲಾಗಿದೆ.

21) ಪ್ರಧಾನಮಂತ್ರಿ ಆವಾಸ್ ಯೋಜನೆಗೆ ರೂ.78,000 ಕೋಟಿ ನಿಗದಿಪಡಿಸಲಾಗಿದೆ.

22) ‘ದೇಖೋ ಅಪ್ನಾ ದೇಶ್’ ಉಲ್ಲೇಖದೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು.

23) 30 ಸ್ಕಿಲ್ ಇಂಡಿಯಾ ಕೌನ್ಸಿಲ್ ಗಳನ್ನು ಸ್ಥಾಪಿಸಲಾಗುವುದು.

24) ಪ್ರತೀ ಜಿಲ್ಲೆಗಳಲ್ಲಿ ಶಿಕ್ಷಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.

25) ಸರಕಾರಿ ನೌಕರರಿಗೆ ತರಬೇತಿಗಾಗಿ ‘ಮಿಶನ್ ಕರ್ಮಯೋಗಿ ಯೋಜನೆ’ ಹಾಕಲಾಗಿದೆ.

26) ಸಣ್ಣ ಕೈಗಾರಿಕೆಗಳಿಗೆ ತೆರಿಗೆ ರಾಜಿ ಪದ್ಧತಿ ತರಲಾಗಿದೆ.

27) ಕರ್ನಾಟಕದ ಭದ್ರಾ 2ನೇ ಹಂತದ ಯೋಜನೆಗೆ ರೂ.5,300 ಕೋಟಿ ತೆಗೆದಿಟ್ಟು, ಅದನ್ನು ರಾಷ್ಟ್ರೀಯ ಯೋಜನೆ ಮಾಡಲಾಗಿದೆ.

28) ಈ ಸಲದ ಬಜೆಟ್ ‘ಹಸಿರು ಬಜೆಟ್’ ಆಗಿದ್ದು, ಹಸಿರು ಯೋಜನೆ ಎಲ್ಲಾ ಘಟ್ಟಗಳಲ್ಲಿ ಹಾಕಿಕೊಳ್ಳಲಾಗಿದೆ.

29) ಕರ್ನಾಟಕದ ನಿಮ್ಯಾನ್ಸ್ ಆಸ್ಪತ್ರೆಗೆ ರೂ.130 ಕೋಟಿ ಕಾದಿರಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

ಸರ್ವ ಸ್ಪರ್ಶಿ ಸರ್ವ ವ್ಯಾಪಿ ಹಸಿರು ಬಜೆಟ್ : ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್



ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈ ಬಾರಿ ಮಂಡಿಸಿರುವ ಬಜೆಟ್ ಯುವ ಸ್ನೇಹಿ, ರೈತ ಸ್ನೇಹಿಯಾಗಿ ಸಪ್ತ ಸೂತ್ರಗಳೊಂದಿಗೆ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಹಸಿರು ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ವಿನಿಯೋಗಿಸುವ ಉತ್ತಮ ದೂರದರ್ಶಿತ್ವದ ಯೋಜನೆ ನೀಡಲಾಗಿದೆ. ಜಗತ್ತಿನೆಲ್ಲೆಡೆ ಆರ್ಥಿಕ ಹಿಂಜರಿತ ಇದ್ದರೂ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಘೋಷಿಸಿರುವ ಸಣ್ಣ ಉದ್ದಿಮೆದಾರರಿಗೆ ನೀಡುವ ರೂ.10 ಲಕ್ಷ ಸಾಲ ಯೋಜನೆಯಾದ ‘ಕ್ರೆಡಿಟ್ ಗ್ಯಾರಂಟಿ’ಯನ್ನು ಮುಂದುವರಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಘೋಷಿಸಿರುವ ಬಡವರಿಗೆ ಉಚಿತ ಪಡಿತರ ನೀಡುವ ‘ಶ್ರೀ ಅನ್ನ ಯೋಜನೆ’ಯನ್ನು ಮುಂದುವರಿಸಲಾಗಿದೆ. 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ ಸಹಿತ 30 ರಾಜ್ಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಯೋಜನೆಯ ಮೂಲಕ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗಿದೆ.

ಕುಶಲಕರ್ಮಿಗಳಿಗೆ ‘ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ’ ಯೋಜನೆ ಜಾರಿಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಜೊತೆಗೆ ವಾಹನ ಗುಜರಿ ನೀತಿಯಡಿ ಹಳೆ ಸರ್ಕಾರಿ ವಾಹನಗಳನ್ನು ಬದಲಾಯಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ‘ಮಹಿಳಾ ಸಮ್ಮಾನ್’ ಯೋಜನೆ ಜಾರಿಗೊಳಿಸಲಾಗಿದೆ. ಮಧ್ಯಮ ವರ್ಗದ ಜನತೆಗೆ ಆದಾಯ ತೆರಿಗೆಯಲ್ಲಿ ಬಹುನಿರೀಕ್ಷಿತ ವಿನಾಯಿತಿ ಘೋಷಿಸಲಾಗಿದೆ.

ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ; ಕಟ್ಟಕಡೆಯ ಜನತೆಯನ್ನು ತಲುಪುವುದು; ಮೂಲಸೌಕರ್ಯ; ಸಾಮರ್ಥ್ಯದ ಸದ್ಬಳಕೆ; ಪರಿಸರ ಸ್ನೇಹಿ ಅಭಿವೃದ್ಧಿ; ಯುವಶಕ್ತಿಗೆ ಉತ್ತೇಜನ; ಅರ್ಥಿಕ ಸುಧಾರಣೆ, ಈ ಸಪ್ತ ಮಂತ್ರಗಳ ಭದ್ರ ಬುನಾದಿಯಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಲಿದೆ.

ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಸಾಮಾನ್ಯ ಜನತೆ, ಕೃಷಿಕರು, ಉದ್ಯಮ, ಯುವ ಮತ್ತು ಮಹಿಳಾ ವರ್ಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಕುಯಿಲಾಡಿ ತಿಳಿಸಿದ್ದಾರೆ.

ಸರ್ವ ಸ್ಪರ್ಶಿ ಸರ್ವ ವ್ಯಾಪಿ ಹಸಿರು ಬಜೆಟ್ : ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈ ಬಾರಿ ಮಂಡಿಸಿರುವ ಬಜೆಟ್ ಯುವ ಸ್ನೇಹಿ, ರೈತ ಸ್ನೇಹಿಯಾಗಿ ಸಪ್ತ ಸೂತ್ರಗಳೊಂದಿಗೆ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಹಸಿರು ಬಜೆಟ್ ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ವಿನಿಯೋಗಿಸುವ ಉತ್ತಮ ದೂರದರ್ಶಿತ್ವದ ಯೋಜನೆ ನೀಡಲಾಗಿದೆ. ಜಗತ್ತಿನೆಲ್ಲೆಡೆ ಆರ್ಥಿಕ ಹಿಂಜರಿತ ಇದ್ದರೂ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಘೋಷಿಸಿರುವ ಸಣ್ಣ ಉದ್ದಿಮೆದಾರರಿಗೆ ನೀಡುವ ರೂ.10 ಲಕ್ಷ ಸಾಲ ಯೋಜನೆಯಾದ ‘ಕ್ರೆಡಿಟ್ ಗ್ಯಾರಂಟಿ’ಯನ್ನು ಮುಂದುವರಿಸಲಾಗಿದೆ. ಜೊತೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಘೋಷಿಸಿರುವ ಬಡವರಿಗೆ ಉಚಿತ ಪಡಿತರ ನೀಡುವ ‘ಶ್ರೀ ಅನ್ನ ಯೋಜನೆ’ಯನ್ನು ಮುಂದುವರಿಸಲಾಗಿದೆ. 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ ಸಹಿತ 30 ರಾಜ್ಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಯೋಜನೆಯ ಮೂಲಕ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗಿದೆ.

ಕುಶಲಕರ್ಮಿಗಳಿಗೆ ‘ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ’ ಯೋಜನೆ ಜಾರಿಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಜೊತೆಗೆ ವಾಹನ ಗುಜರಿ ನೀತಿಯಡಿ ಹಳೆ ಸರ್ಕಾರಿ ವಾಹನಗಳನ್ನು ಬದಲಾಯಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ‘ಮಹಿಳಾ ಸಮ್ಮಾನ್’ ಯೋಜನೆ ಜಾರಿಗೊಳಿಸಲಾಗಿದೆ. ಮಧ್ಯಮ ವರ್ಗದ ಜನತೆಗೆ ಆದಾಯ ತೆರಿಗೆಯಲ್ಲಿ ಬಹುನಿರೀಕ್ಷಿತ ವಿನಾಯಿತಿ ಘೋಷಿಸಲಾಗಿದೆ.

ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ; ಕಟ್ಟಕಡೆಯ ಜನತೆಯನ್ನು ತಲುಪುವುದು; ಮೂಲಸೌಕರ್ಯ; ಸಾಮರ್ಥ್ಯದ ಸದ್ಬಳಕೆ; ಪರಿಸರ ಸ್ನೇಹಿ ಅಭಿವೃದ್ಧಿ; ಯುವಶಕ್ತಿಗೆ ಉತ್ತೇಜನ; ಅರ್ಥಿಕ ಸುಧಾರಣೆ, ಈ ಸಪ್ತ ಮಂತ್ರಗಳ ಭದ್ರ ಬುನಾದಿಯಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಲಿದೆ.

ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಸಾಮಾನ್ಯ ಜನತೆ, ಕೃಷಿಕರು, ಉದ್ಯಮ, ಯುವ ಮತ್ತು ಮಹಿಳಾ ವರ್ಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿರುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಕುಯಿಲಾಡಿ ತಿಳಿಸಿದ್ದಾರೆ.

Design a site like this with WordPress.com
Get started