ವಾಟ್ಸ್ ಆ್ಯಪ್ ಹೇಗೆ ದುಡ್ಡು ಮಾಡುತ್ತೆ ಅಂತ ನಿಮ್ಗೆ ಗೊತ್ತಾ?

ವಾಟ್ಸ್ಆ್ಯಪ್ ಅತ್ಯಂತ ವೇಗವಾಗಿ ಸಂದೇಶ ರವಾನೆ ಮಾಡುತ್ತದೆ. ವಾಟ್ಸ್ಆ್ಯಪ್ ಬಳಕೆ ಇಲ್ಲದೆ ಸಾಧ್ಯವೇ ಇಲ್ಲ ಎಂಬುವಷ್ಟರಮಟ್ಟಿಗೆ ಅದು ನಮ್ಮ ಮೇಲೆ ಪ್ರಭಾವ ಬೀರಿದೆ.

ಆದರೆ,‌ನಾವು ಈ ಆ್ಯಪ್ ನಲ್ಲಿ ಜಾಹಿರಾತು ಕಾಣಲ್ಲ….! ಹಾಗಾದ್ರೆ ವಾಟ್ಸಪ್ ಗೆ ದುಡ್ಡು ಹೇಗೆ ಬರುತ್ತೆ?

ಆರಂಭದಲ್ಲಿ ವಾರ್ಷಿಕ ಶುಲ್ಕ ಪಾವತಿ ವಿಧಾನವಿತ್ತು. ಆದರೆ , ಫೇಸ್ ಬುಕ್ ಖರೀದಿ ಮಾಡಿದ ಬಳಿಕ ಅದೂ ಸಹ ಇಲ್ಲ…!
ವಾಟ್ಸ್ಆ್ಯಪ್ ಅನ್ನು ಫೇಸ್ ಬುಕ್ ಕೊಂಡಿದ್ದು19 ಬಿಲಿಯನ್ ಡಾಲರ್ ಗೆ. ಇಷ್ಟೊಂದು ದೊಡ್ಡಮೊತ್ತಕ್ಕೆ ಕೊಂಡಿದೆ ಅಂದ್ರೆ ಸಿಕ್ಕಾಪಟ್ಟೆ ದುಡ್ಡು ಇದೆ ಎಂದೇ ಅರ್ಥ ಅಲ್ಲವೇ?
ಪ್ರತಿಯೊಂದು ಸಂದೇಶ ಕೂಡ ಅಮೆರಿಕಾದಲ್ಲಿರುವ ಸರ್ವರ್ ಗೆ ಹೋಗಿ, ಅಲ್ಲಿಂದ ರವಾನೆ ಆಗುತ್ತದೆ. ಅಲ್ಲಿ ಎಲ್ಲವೂ ಸಂಗ್ರಹವಾಗಿರುತ್ತದೆ. ಈ ಡೇಟಾ ಇ-ಕಾಮರ್ಸ್ ಮೊದಲಾದ ಸಂಸ್ಥೆಗಳಿಗೆ ಚಿನ್ನದ ಗಣಿಯಂತೆ…! ಜನರ ಮೂಡ್ ಯಾವ ರೀತಿ ಎಂದು ತಿಳಿಯಲು ಈ ಡೇಟಾ ನೆರವಾಗುತ್ತದೆಯಂತೆ.
ಜನ ಮಳೆ ಬಗ್ಗೆ ಮಾತಾಡಿದ್ದರೆ, ಮಳೆ ಬಂದಿದೆ ಎಂದು ಅರ್ಥ.‌ಆಗ ಆತನಿಗೆ ಮಳೆಗೆ ಸಂಬಂಧಿಸಿದ ವಸ್ತುಗಳ ಜಾಹಿರಾತು ತೋರಿಸಬೇಕು ಎಂದರ್ಥ ‌.
ವಾಟ್ಸ್ಆ್ಯಪ್ ಅನ್ನು ಬಳಸಿಕೊಂಡು ಫೇಸ್ ಬುಕ್ ತನ್ನ ಜಾಹಿರಾತುಗಳನ್ನು ಮತ್ತಷ್ಟು ಟಾರ್ಗೆಟ್ ಮಾಡುತ್ತದೆ.

ವಾಟ್ಸ್ಆ್ಯಪ್ ನಿಂದಾಗಿ ಫೇಸ್‌ಬುಕ್‌ ಕೂಡ ಅನುಕೂಲವಾಗಿದೆ.
ಇತ್ತೀಚೆಗೆ ವಾಟ್ಸ್ಆ್ಯಪ್ ಮತ್ತೊಂದು ವಿಧಾನ ಹುಡುಕಿಕೊಂಡಿದೆ. ಸಾಮಾನ್ಯವಾಗಿ, ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದಕ್ಕಾಗಿ ಟೆಲಿಕಾಂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಎಸ್‌ಎಂಎಸ್‌ ಕಳುಹಿಸುತ್ತಿರುತ್ತವೆ. ಇದಕ್ಕೆ ಟೆಲಿಕಾಂ ಕಂಪನಿಗಳು ದರ ನಿಗದಿ ಮಾಡಿರುತ್ತವೆ.
ಟೆಲಿಕಾಂ ಕಂಪನಿಗಳ ಬದಲಿಗೆ ವಾಟ್ಸ್ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಇಂಥ ಕಂಪನಿಗಳನ್ನು ವಾಟ್ಸಾಪ್‌ ಅಪ್ರೂವ್‌ ಮಾಡುತ್ತಿದೆ. ಉದಾಹರಣೆಗೆ, ನೀವು ವಿಮಾನ ಟಿಕೆಟ್‌ ಬುಕ್‌ ಮಾಡಲು ಹೋಗುತ್ತೀರಿ. ನೀವು ಟಿಕೆಟ್‌ ಬುಕ್‌ ಮಾಡಿದ ಏರ್‌ ಲೈನ್ಸ್‌ ನಿಮಗೆ ಟಿಕೆಟ್‌ ವಿವರಗಳನ್ನು ಎಸ್‌ಎಂಎಸ್‌ ಮಾಡುತ್ತದೆ. ಆದರೆ ವಾಟ್ಸ್ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಂಡ ಕಂಪನಿಯು ನಿಮಗೆ ಎಸ್‌ಎಂಎಸ್‌ ಕಳುಹಿಸುವುದರ ಬದಲಿಗೆವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತದೆ. ಅದನ್ನು ನಿಮಗೆ ಟಿಕೆಟ್‌ ಪಿಡಿಎಫ್ ಸಿಗುತ್ತದೆ. ಟಿಕೆಟ್‌ ವಿವರ ಸಂದೇಶದ ರೂಪದಲ್ಲೂ ಸಿಗುತ್ತದೆ.
ಅದೇ ರೀತಿ ಬುಕ್ ಮೈ ಶೋನಲ್ಲಿ ನೀವು ಸಿನಿಮಾ ಟಿಕೆಟ್ ಬುಕ್ ಮಾಡಿದಾಗ ಅದು ವಾಟ್ಸಪ್ ಗೆ ಮಾಹಿತಿ ಕಳುಹಿಸಿರೋದನ್ನು ನೀವು ನೋಡಿರುತ್ತೀರಿ.ಆದರೆ, ವಾಟ್ಸಾಪ್‌ ಇವತ್ತಿಗೂ ಲಾಭದಲ್ಲಿದೆ ಎಂದೇನೂ ಹೇಳಲಾಗದು. 2014ರಲ್ಲಿ ವಾಟ್ಸಾಪ್‌ನ ಲಾಭ 1.5 ಕೋಟಿ ಡಾಲರ್‌. ಆದರೆ ನಷ್ಟ 23 ಕೋಟಿ ಡಾಲರ್‌. 2017ರ ಹೊತ್ತಿಗೆ ಈ ನಷ್ಟದ ಮೊತ್ತ 40 ಕೋಟಿಗೆ ತಲುಪಿದೆ. ಆದರೆ ವಾಟ್ಸಾಪ್‌ ಖರೀದಿಸಿದ ನಂತರ ಫೇಸ್‌ಬುಕ್‌ನ ಲಾಭದಲ್ಲಿ ಹೆಚ್ಚಳವಾಗಿದೆ. ಇದರರ್ಥ ಇಷ್ಟೇ. ವಾಟ್ಸಾಪ್‌ನ ಡೇಟಾ ಬಳಸಿಕೊಂಡು ಫೇಸ್‌ಬುಕ್‌ ಲಾಭ ಮಾಡಿಕೊಳ್ಳುತ್ತಿದೆ.

ಮಾರಕ ‘ಕೊರೊನಾ’ ಸೋಂಕಿಗೆ ‘TV-5’ ಪತ್ರಕರ್ತ ಸಾವು

   ಕಿಲ್ಲರ್ ಕೊರೊನಾ ಸೋಂಕಿಗೆ ತೆಲುಗಿನ ಸುದ್ದಿವಾಹಿನಿ ಟಿವಿ 5 ಪತ್ರಕರ್ತ ದಾರುಣವಾಗಿ ಸಾವನ್ನಪ್ಪಿದ ಘಟನೆ ಹೈದರಾಬಾದ್ ನಲ್ಲಿ ಇಂದು  ನಡೆದಿದೆ.

ಕೊರೊನಾ ಶಂಕೆ ಹಿನ್ನೆಲೆ ಪತ್ರಕರ್ತ ಮನೋಜ್ ಕುಮಾರ್ ಅವರನ್ನು ಹೈದರಾಬಾದ್ ನ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ನಿನ್ನೆಯಷ್ಟೇ ಅವರ ಸ್ವಾಬ್ ಮಾದರಿಯ ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು, ಒಂದೇ ದಿನದ ಅಂತರದಲ್ಲಿ ಮನೋಜ್ ಕುಮಾರ್ ಬಲಿಯಾಗಿದ್ದಾರೆ.

ಇವರು ಬೆಲ್ಯಾಟರಲ್ ನ್ಯುಮೋನಿಯಾ ಮತ್ತು ಕೋವಿಡ್ 19 ನಿಂದ ಸಾವನ್ನಪ್ಪಿದ್ದಾರೆ ಎಂದು ಹೈದರಾಬಾದ್ ಗಾಂಧಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಮನೋಜ್ ಕುಮಾರ್ ತೆಲುಗಿನ ಸುದ್ದಿವಾಹಿನಿ ಟಿವಿ 5 ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು.

ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್

 ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಶಿಕ್ಷಕರು ಜೂ.8 ರಿಂದ ಶಾಲಾ ಕಛೇರಿಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.

ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಜೂ.8ರಂದು ಶಾಲೆಗೆ ಹಾಜರಾಗಿ ಶಾಲೆ ಪುನರಾರಂಭದ ಕುರಿತು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು,  ಹಾಗೆಯೇ ರಾಜ್ಯಾದ್ಯಂತ ದೂರದ ಊರುಗಳಿಂದ ಬರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಜೂನ್ 8ರಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ.

ಜೂನ್ 07: ಇಂದು ಸಿಟಿಬಸ್ ಸಂಚಾರ ಸ್ಥಗಿತ

ಜನ ಸಂಚಾರ ವಿರಳ ಹಿನ್ನೆಲೆ

ಉಡುಪಿ: ನಗರದಲ್ಲಿ ಜನ ಸಂಚಾರ ವಿರಳ ಹಿನ್ನೆಲೆಯಲ್ಲಿ ಜೂನ್ 7 ರಂದು ಸಿಟಿಬಸ್ ಸಂಚಾರ ಸ್ಥಗಿತಕ್ಕೆ ಬಸ್ ಮಾಲಕರು ನಿರ್ಧರಿಸಿದ್ದಾರೆ.

ಕಳೆದ ಭಾನುವಾರವೂ ಸಿಟಿಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು, ಆದ್ದರಿಂದ ಇಂದು( ಜೂನ್ 7 ರಂದು) ನಗರದಲ್ಲಿ ಸಂಚರಿಸುವ 23 ಬಸ್‌ಗಳು ರಸ್ತೆಗೆ ಇಳಿಯುದಿಲ್ಲ ಎಂದು ಬಸ್ ಮಾಲಕರ ಸಂಘದ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ಸಿಟಿ ಬಸ್ ಶೇ.15 ರಷ್ಟು ಟಿಕೆಟ್ ದರ ಏರಿಸಿ ನಗರದಲ್ಲಿ ಸಂಚಾರ ಪ್ರಾರಂಭಿಸಿತ್ತು. ವಾರದ ಬೇರೆ ದಿನಗಳಲ್ಲೂ ಪ್ರಯಾಣಿಕರ ಸಂಚಾರ ವಿರಳವಾಗಿದೆ. ಇಂದು ಪೂರ್ಣ ಪ್ರಮಾಣದಲ್ಲಿ ಸಿಟಿ ಬಸ್ ಸಂಚಾರ ನಿಲ್ಲಿಸುವುದಾಗಿ ತಿಳಿಸಿದರು.

ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ ….


ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು ಕೊಟ್ಟರು.
ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..
ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು…
ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ … ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ… ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..
ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು…
ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ….
ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..

ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು…

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

ಜೂನ್ 07,2020 ಭಾನುವಾರ ಇಂದಿನ ರಾಶಿ ಫಲ

ಮೇಷ

ಮನೆಯಲ್ಲಿ ಅತ್ಯಂತ ಗಡಿಬಿಡಿಯ ದಿನವಾಗುವ ಸಾಧ್ಯತೆ. ತಾಳ್ಮೆ ಕಳೆದುಕೊಳ್ಳದಿರುವುದು ಒಳಿತು. ಮಕ್ಕಳ ವಿಚಾರದಲ್ಲಿ ಅತ್ಯಂತ ವಿವೇಕಯುತವಾಗಿ ವ್ಯವಹರಿಸಿದಲ್ಲಿ ಹಿರಿತನಕ್ಕೊಂದು ಗೌರವ ಪಡೆಯುವಿರಿ.

ವೃಷಭ

ನಿಮ್ಮ ಬೇಜವಾಬ್ದಾರಿತನದಿಂದಾಗಿ ವ್ಯವಹಾರದಲ್ಲಿ ಕುಂಠಿತವಾಗುವ ಸಾಧ್ಯತೆ. ಆದಾಯದಲ್ಲಿಯೂ ಸ್ವಲ್ಪಮಟ್ಟಿನ ಹಿನ್ನಡೆ. ವಾಹನ ವ್ಯವಹಾರದಲ್ಲಿರುವವರಿಗೆ ಆದಾಯದಲ್ಲಿ ಚೇತರಿಕೆಯಾಗಲಿದೆ.

ಮಿಥುನ

ನಿಮ್ಮ ಕಾರ್ಯದಕ್ಷತೆಯಿಂದಾಗಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಒಟ್ಟಾರೆ ಸಂತಸದ ದಿನವಾಗಿಲಿದೆ.

ಕಟಕ

ಬಹುದಿನಗಳ ಕನಸಿನ ಯೋಜನೆಯೊಂದು ಸುಲಭವಾಗಿ ಕೈಗೂಡುವ ಸಾಧ್ಯತೆ ಕಂಡುಬರುತ್ತಿದೆ. ಅನಿರೀಕ್ಷಿತ ದೂರ ಪ್ರಯಾಣದ ಸಂಭವವಿದೆ. ಆರೋಗ್ಯದ ಕಡೆಗೆ ವಿಶೇಷ ಗಮನ ಅಗತ್ಯ.

ಸಿಂಹ

ಸವಾಲಿನ ಕ್ಷಣವನ್ನು ಎದುರಿಸಿ ಯಶಸ್ಸನ್ನು ಕಂಡುಕೊಳ್ಳಲಿದ್ದೀರಿ. ಬಂಧುಗಳ ನಡುವಿನ ವಿವಾದವನ್ನು ಬಗೆಹರಿಸಲು ಶ್ರಮ ವಹಿಸುವ ಸಾಧ್ಯತೆ ಕಂಡುಬರುತ್ತಿದೆ. ಸಂಗಾತಿಯ ಮಾತಿಗೆ ಮನ್ನಣೆ ಅವಶ್ಯ.

ಕನ್ಯಾ

ಸಣ್ಣ ಪ್ರಮಾಣದ ತೊಡಕುಗಳನ್ನು ಎದುರಿಸುವ ಸಾಧ್ಯತೆ ಇದೆ. ಅಪರಿಚಿತರಿಂದ ದೊರಕುವ ಸಹಾಯ ಸಹಕಾರದಿಂದಾಗಿ ಎಲ್ಲವೂ ಪರಿಹಾರವಾಗುವವು. ಈ ದಿನ ಹೊಸ ಯೋಜನೆಗೆ ಕೈ ಹಾಕದಿರುವುದು ಒಳ್ಳೆಯದು.

ತುಲಾ

ನಿಮ್ಮ ಮಾತುಗಳು ಇತರರಿಗೆ ಅಪಾರ್ಥವಾಗಿ ಅನರ್ಥ ಸೃಷ್ಟಿಸುವ ಸಾಧ್ಯತೆ ಇದ್ದು ಮಾತಿನ ಮೇಲೆ ಹಿಡಿತ ವಿಟ್ಟುಕೊಳ್ಳುವುದು ಸೂಕ್ತ. ಅನಗತ್ಯ ಬೇರೆಯವರ ವಿಷಯದಲ್ಲಿ ಮೂಗು ತೂರಿಸದಿರುವುದು ಒಳಿತು.

ವೃಶ್ಚಿಕ

ಒಮ್ಮೆ ಮಾಡಿದ ಕೆಲಸವನ್ನು ಪುನಃ ಮಾಡಬೇಕಾಗಬಹುದು. ಗಮನವಿಟ್ಟು ಮತ್ತೊಮ್ಮೆ ಯೋಚಿಸಿ ಕಾರ್ಯಪ್ರವೃತ್ತರಾಗುವುದು ಸೂಕ್ತ. ನಾಜೂಕಿನ ಕೆಲಸ ಸಾಧನೆಯಿಂದ ನೆಮ್ಮದಿ ನಿಮ್ಮದಾಗಲಿದೆ.

ಧನು

ನಿಮ್ಮ ಎಲ್ಲ ಕೆಲಸ ಕಾರ್ಯಗಳು ಅತ್ಯಂತ ಸುಲಭವಾಗಿ ನೆರವೇರುವ ಸಾಧ್ಯತೆ ಇದೆ. ಮನೆಯವರ ಇಚ್ಛೆಯನ್ನು ಈಡೇರಿಸುವ ಮೂಲಕ ಸಂತಸವನ್ನು ಅನುಭವಿಸುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.

ಮಕರ

ನಿಮ್ಮ ಯೋಜನೆಗೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸುವಿರಿ. ಅತ್ಯಂತ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆ. ದೇವತಾರಾಧನೆಯಿಂದ ಮನಸ್ಸಿನಲ್ಲಿನ ದುಗುಡ ನಿವಾರಣೆಯಾಗಲಿದೆ.

ಕುಂಭ

ಬೇರೆಯವರ ಕುಹಕದ ಮಾತುಗಳ ಬಗ್ಗೆ ಗಮನ ಹರಿಸದೇ ನಿಮ್ಮ ಕೆಲಸದಲ್ಲಿ ವಿಶ್ವಾಸದಿಂದ ಮುಂದುವರಿಯಿರಿ. ನಿಮ್ಮ ಶತ್ರುಗಳು ಸಹ ನಿಮ್ಮ ಸ್ನೇಹವನ್ನು ಬಯಸುವ ಸಾಧ್ಯತೆ ಕಂಡುಬರುತ್ತಿದೆ.

ಮೀನ

ಬೇರೆಯವರನ್ನು ಖುಷಿಪಡಿಸುವ ಬಣ್ಣದ ಮಾತುಗಳನ್ನು ಬಿಟ್ಟು ನೇರ, ದಿಟ್ಟ ಪ್ರತಿಕ್ರಿಯೆಯಿಂದ ಮನಸ್ಸಿಗೆ ನೆಮ್ಮದಿ ದೊರಕುವುದು. ನಿಮ್ಮ ಪ್ರಾಮಾಣಿಕತನದಿಂದಾಗಿ ಉತ್ತಮ ಸ್ಥಾನಮಾನ ದೊರಕುವ ಸಾಧ್ಯತೆ.

ಕರಾವಳಿ ತತ್ತರ: ರಾಜ್ಯದಲ್ಲಿ ಇಂದು ಕೂಡಾ ಕೊರೋನಾ ಸುನಾಮಿ

ಬೆಂಗಳೂರು: ರಾಜ್ಯಾದ್ಯಂತ ಮಹಾಮಾರಿ ವೈರಲ್ ವೈರಸ್ ಮತ್ತೆ ಕರುನಾಡನ್ನು ಕಾಡುತ್ತಿದ್ದು ಇಂದು378 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಕಡಲತಡಿಯ ಉಡುಪಿ ದಕ್ಷಿಣಕನ್ನಡದಲ್ಲೂ ಮಹಾಮಾರಿ ವೈರಸ್ ನ ಅಲೆಗಳು ಬೀಸಿದ್ದು ಕರಾವಳಿಗರನ್ನು ಕಂಗೆಡಿಸಿದೆ.
ಯಾದಗಿರಿ,ಕಲಬುರ್ಗಿ, ಬೆಂಗಳೂರಿನಲ್ಲೂ ಮಹಾಮಾರಿ ರುದ್ರನರ್ತನ ತಾಂಡವಾಡುತ್ತಿದ್ದು ರಾಜ್ಯಾದ್ಯಂತ ಐದು ಸಾವಿರದ ಗಡಿದಾಟಿ ಮುನ್ನುಗಿದೆ.

ಕರ್ನಾಟಕದಲ್ಲಿ ಇಂದು378ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ

378ಸೋಂಕಿತರ ಪೈಕಿ 341ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಬಂದವರಾಗಿರುತ್ತಾರೆ

ಬೀದರ್ ಹಾಗೂ ವಿಜಯಪುರದಲ್ಲಿ ಕೊರೋನಾ ಮಾಹಾಮಾರಿಗೆ ಇಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು

ಉಡುಪಿ 121
ಯಾದಗಿರಿ 103
ಕಲಬುರ್ಗಿ 69
ದಕ್ಷಿಣಕನ್ನಡ 24
ಬೆಂಗಳೂರು 18
ವಿಜಯಪುರ 06
ದಾವಣಗೆರೆ 06
ಬೆಳಗಾವಿ 05
ಗದಗ 04
ಮಂಡ್ಯ 03
ಹಾಸನ 03
ಧಾರವಾಡ 03
ಹಾವೇರಿ 03
ಚಿಕ್ಕಬಳ್ಳಾಪುರ 02
ಉತ್ತರಕನ್ನಡ 02
ರಾಯಚೂರು 02
ಕೊಪ್ಪಳ 01
ಬೀದರ್ 01
ತುಮಕೂರು 01
ಕೋಲಾರ 01

ಮುಂಬೈನಿಂದ ಬಂದ ಯುವತಿಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿ ಏಳು ದಿನದ ಕ್ವಾರಂಟೈನ್ ಮುಗಿಸಿ ಉದ್ಯಾವರದ ತನ್ನ ಮನೆಗೆ ಬಂದಿದ್ದ 26 ವರ್ಷದ ಮಹಿಳೆಗೆ ಇದೀಗ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಹಾಗಾಗಿ ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಉದ್ಯಾವರದ ಕಲಾಯಿಬೈಲಿನ ವಿವಾಹಿತ ಮಹಿಳೆ ಸರಕಾರಿ ಆದೇಶದ 7 ದಿನದ ಕ್ವಾರಂಟೈನ್ ಮುಗಿಸಿ, ಉದ್ಯಾವರದ ತನ್ನ ಮನೆಗೆ ಆಗಮಿಸಿದ್ದರು. ಆದರೆ ಇದೀಗ ಆ ಮಹಿಳೆಯಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದ್ದು, ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಉದ್ಯಾವರ ಗ್ರಾಮದಲ್ಲಿ ಇದು ಪ್ರಥಮ ಕೋವಿಡ್-19 ಪಾಸಿಟಿವ್ ಇದಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಶುಕ್ರವಾರ ಜಿಲ್ಲೆಯಲ್ಲಿ ಒಂದೇ ದಿನ 205 ಜನರಿಗೆ ಕೋವಿಡ್-19 ಸೋಂಕು ದೃಢವಾಗಿತ್ತು.

ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ 66 ಮತ್ತು 169ಎ ನಲ್ಲಿ , ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸದOತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಗಾಲದಲ್ಲಿ ರಾಷ್ಟಿಯ ಹೆದ್ದಾರಿ 66 ರಲ್ಲಿ ನೀರು ನಿಂತು ಅಪಘಾತಗಳು ಸಂಭವಿಸುವ ಸಾದ್ಯತೆಗಳಿದ್ದು, ಅಂತಹ ಸ್ಥಳಗಳನ್ನು ಕೂಡಲೇ ಗುರುತಿಸಿ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು, ಹೆದ್ದಾರಿಯ ಬದಿಯಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಅಗತ್ಯ ಕ್ರಮ ಕೈಗೊಳ್ಳಿ, ಅಗತ್ಯವಿರುವಡೆಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಿಸುವಂತೆ ಹಾಗೂ ಹೆದ್ದಾರಿಯಲ್ಲಿ ಪಾಟ್ ಹೋಲ್ ಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ರಾಷ್ಟಿಯ ಹೆದ್ದಾರಿ 166ಎ ರಲ್ಲಿ ಸಹ ಪಾಟ್ ಹೋಲ್ ಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವಂತೆ , ಇಂದ್ರಾಳಿ ರೈಲ್ವೆ ಬಿಡ್ಜ್ ಬಳಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಿ, ರಾಷ್ಟಿಯ ಹೆದ್ದಾರಿ ಸಂಪರ್ಕಿಸುವ ನಗರಸಭೆಯ ರಸ್ತೆಗಳ ಬಳಿ ಸೂಚನಾ ಫಲಕಗಳನ್ನು ಅಳವಡಿಸಿ ಅಪಘಾತಗಳಾಗುವುದನ್ನು ತಡೆಯಿರಿ, ಸಾರ್ವಜನಿಕರಿಗೆ , ವಾಹನ ಸವಾರರಿಗೆ ಯವುದೇ ತೊಂದರೆಯಾಗದoತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಸಂಚರಿಸುವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಂತೆಕಟ್ಟೆಯ ಮಾರುಕಟ್ಟೆಯನ್ನು ಒಂದು ವಾರದ ಒಳಗೆ ಸ್ಥಳಾಂತರಿಸುವoತೆ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹಾಗೂ ರಾಷ್ಟಿಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳು ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊರೋನಾ ವಾರಿಯರ್ಸ್ಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತರಿಗೆ KMF ಕಿಟ್ ವಿತರಣೆ

ಕೋರೋನಾ ಎಂಬ ಮಹಾಮಾರಿ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ಸ್ಥಿತಿಯ ಬಗ್ಗೆ ಹಾಗೂ ಹೊಂ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಕೋರೋನ ವೈರಸ್ ಸಾಮೂಹಿಕವಾಗಿ ಹರಡು ವುದನ್ನು ತಡೆಗಟ್ಟುವಿಕೆಯಲ್ಲಿ ಇವರ ಪಾತ್ರ ಅವಿಸ್ಮರಣೀಯ.

ಇವರ ಈ ಸೇವೆಯನ್ನು ಮನಗಂಡು K.M.F ಮಂಗಳೂರು ಇವರ ವತಿಯಿಂದ ಸುಮಾರು 2600 ನಂದಿನಿ ಉತ್ಪನ್ನಗಳ ವಿಶೇಷ ಕಿಟ್ ಗಳನ್ನು ಆಶಾ ಕಾರ್ಯಕರ್ತೆಯರಿಗೆ ಗೌರವ ರೂಪದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲೋಕಸಭಾ ಸಂಸದರಾದ ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋಟ್ ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಕೊಡವೂರು ರವಿರಾಜ್ ಹೆಗ್ಡೆ, ಉಪಾಧ್ಯಕ್ಷರಾದ ಪ್ರಕಾಶ್ ಚಂದ್ರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿ. ವಿ ಹೆಗ್ಡೆ, ನಿರ್ದೇಶಕರಾದ ಸ್ಮಿತಾ ಆರ್. ಶೆಟ್ಟಿ ಮತ್ತು ಇತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Design a site like this with WordPress.com
Get started