ಮೂಲಂಗಿ ಸೇವನೆಯ ಲಾಭ ತಿಳಿದರೆ ಬೆರಗಾಗ್ತೀರ!!!

ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ. ಇದರಲ್ಲಿನ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಫಾಸ್ಫರಸ್, ಪ್ರೋಟಿನ್ ಮತ್ತು ನಾರಿನ ಅಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಮ್ಯಾಜಿಕ್ ಮಾಡುತ್ತದೆ.

ಉರಿಯೂತ, ಗಂಟಲಿನ ಕಿರಿಕಿರಿ, ಜ್ವರ ಮತ್ತು ಪಿತ್ತ ದೋಷಗಳಂಥ ಹಲವಾರು ಸಮಸ್ಯೆಗಳ ಚಿಕಿತ್ಸೆಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿ ಪದ್ಧತಿಯಲ್ಲಿ ಇದು ಬಳಕೆ ಆಗುತ್ತಿದೆ. ಮೂಲಂಗಿ ರಸದಲ್ಲಿ ಇರುವ ಐಸೋ ಥೈನೋಸೈಡ್ ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಮಲಬದ್ಧತೆ ತಡೆಯುತ್ತದೆ.

ಮೂಲಂಗಿಯಲ್ಲಿ ನಾರಿನಾಂಶ ಹೇರಳವಾಗಿದ್ದು, ದೇಹದ ತೂಕವನ್ನು ಇಳಿಸಿಕೊಳ್ಳುವುದು ಸುಲಭ ಆಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮೂಲಂಗಿಯಲ್ಲಿ ಇರುವ ವಿಟಮಿನ್ ಗಳು ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿದೆ.

ಜೂನ್ 13, 2020: ಶನಿವಾರ ಇಂದಿನ ರಾಶಿ ಫಲ

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಪೂರ್ವಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35

ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ ತಗಾದೆ ಕೋರ್ಟ್‍ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ, ದುರ್ಘಟನೆಗಳಿಂದ ಪ್ರಯಾಣ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಕೆಲಸಗಾರರಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ.

ವೃಷಭ: ಮಕ್ಕಳ ಭವಿಷ್ಯದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಶುಭ ಕಾರ್ಯ ಸಿದ್ಧಿ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ,ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ.

ಮಿಥುನ: ಸ್ವಂತ ಉದ್ಯಮದಲ್ಲಿ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಜಯ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ವಿಚಾರದಲ್ಲಿ ವೈಮನಸ್ಸು, ಮನೆಯಲ್ಲಿ ಮಾಟ-ಮಂತ್ರದ ಭೀತಿ, ಉದ್ಯೋಗ ಕಳೆದುಕೊಳ್ಳುವ ಆತಂಕ.

ಕಟಕ: ದೂರ ಪ್ರಯಾಣ, ವಿಪರೀತ ರಾಜಯೋಗ, ಉತ್ತಮ ಅವಕಾಶಗಳು ಪ್ರಾಪ್ತಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಆಯಾಸ, ಬಂಧುಗಳಿಂದ ಸಾಲಕ್ಕಾಗಿ ಬೇಡಿಕೆ, ಕೆಲಸಗಾರರು-ಸೇವಕರಿಂದ ನಷ್ಟ, ಅನಗತ್ಯ ತಿರುಗಾಟ, ಅಧಿಕ ಖರ್ಚು.

ಸಿಂಹ: ಮಕ್ಕಳ ಭವಿಷ್ಯದಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ-ವಾಹನ ಲಾಭ, ಇಚ್ಛೆಗಳು ಈಡೇರುವುದು, ಧರ್ಮ ಕಾರ್ಯಗಳನ್ನು ಮರೆಯುವಿರಿ, ಗೌರವಕ್ಕೆ ಧಕ್ಕೆ, ಅಪಕೀರ್ತಿ, ಮಾನಸಿಕ ವ್ಯಥೆ,ಉಷ್ಣ ಬಾಧೆ. ಅಮೂಲ್ಯ ವಸ್ತು ಕಳೆದುಕೊಳ್ಳುವ ಆತಂಕ.

ಕನ್ಯಾ: ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಇಲ್ಲ ಸಲ್ಲದ ಮಾತಿನಿಂದ ತೊಂದರೆ, ಭುಜ, ಕೈಕಾಲು ನೋವು, ನೆರೆಹೊರೆಯವರಿಂದ ಸಮಸ್ಯೆ, ಕುಟುಂಬದಲ್ಲಿ ಮನಃಸ್ತಾಪ, ಸಂಗಾತಿಯಿಂದ ಅನುಕೂಲ.

ತುಲಾ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಕುಟುಂಬ ನಿರ್ವಹಣೆಗೆ ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಜೀರ್ಣ ಸಮಸ್ಯೆ, ಮೈಕೈ ನೋವು, ಪತ್ರ ವ್ಯವಹಾರಗಳಲ್ಲಿ ಖರ್ಚು, ಬಂಧುಗಳಿಗಾಗಿ ಹಣವ್ಯಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಆಕಸ್ಮಿಕ ಧನ ಯೋಗ, ಸೋಲು, ನಷ್ಟ, ನಿರಾಸೆ, ಅಪಕೀರ್ತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಧಿಕ ಉಷ್ಣ ಬಾಧೆ, ತಲೆ ನೋವು, ಮೃತ್ಯು ಭಯ, ಹಾರ್ಮೋನ್ಸ್ ವ್ಯತ್ಯಾಸ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ.

ಧನಸ್ಸು: ದೈವ ಶಾಪದ ಕಾಟ, ಕುಲದೇವರ ನಿಂದನೆ, ಮಕ್ಕಳ ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳ ಬದಲಾವಣೆಯ ಕನಸು, ವಿವಾದದಲ್ಲಿ ಸಿಲುಕುವ ಸಂಭವ, ಹಿರಿಯರ ಗೌರವಕ್ಕೆ ಧಕ್ಕೆ, ಪ್ರವಾಸ ಕೈಗೊಳ್ಳುವ ಆಲೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಸಾಲ ಬಾಧೆಯಿಂದ ಮುಕ್ತಿ, ಲಾಭದ ಪ್ರಮಾಣ ಅಧಿಕ, ವ್ಯಾಪಾರ-ಉದ್ಯಮ ಆರಂಭಕ್ಕೆ ಚಿಂತನೆ, ಕುತ್ತಿಗೆ ನೋವು, ನರ ದೌರ್ಬಲ್ಯ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಸಾಧ್ಯತೆ.

ಕುಂಭ: ಉದ್ಯೋಗ ಸ್ಥಳದಲ್ಲಿ ಧನಾಗಮನ, ಮಕ್ಕಳಿಗೆ ಅದೃಷ್ಟ ಒಲಿಯುವುದು, ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಚಿಂತನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಜೂಜು-ರೇಸು, ಲಾಟರಿಯಿಂದ ತೊಂದರೆ, ಲಾಭ ಪ್ರಮಾಣ ಅಧಿಕ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅಧಿಕವಾದ ಒತ್ತಡ, ತಂದೆ ಮಾಡಿದ ತಪ್ಪುಗಳು ಕಾಡುವುದು, ಸ್ಥಿರಾಸ್ತಿ-ವಾಹನ ಯೋಗ, ಮಕ್ಕಳ ಕೌಟುಂಬಿಕ ಜೀವನದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಂದರ್ಭ, ಮಾಡುವ ಕೆಲಸದಲ್ಲಿ ಸಂತೃಪ್ತಿ.

ಕೊರೊನಾ: ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತ

ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಭಾರತ ಇದೀಗ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 10,956 ಜನರಿಗೆ ಕೊರೊನಾ ವೈರಸ್ ತಗುಲಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ.ಮೊದಲ ಬಾರಿಗೆ ಭಾರತದಲ್ಲಿ ದಿನವೊಂದರಲ್ಲಿಯೇ ಹತ್ತು ಸಾವಿರ ಸೋಂಕು ವರದಿಯಾಗಿದೆ.

ಈ ಮೂಲಕ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿಂತಾಗಿದ್ದು, ರಷ್ಯಾ, ಬ್ರೆಝಿಲ್ ಮತ್ತು ಅಮೆರಿಕ ದೇಶಗಳು ಮಾತ್ರ ಇದೀಗ ಭಾರತಕ್ಕಿಂತ ಹೆಚ್ಚಿನ ಸೋಂಕಿತರನ್ನು ಹೊಂದಿದೆ.

ರಷ್ಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.93 ಲಕ್ಷ ಆಗಿದ್ದರೆ ಬ್ರೆಝಿಲ್‌ನಲ್ಲಿ 7.72 ಲಕ್ಷ ಹಾಗೂ ಅಮೆರಿಕದಲ್ಲಿ 20 ಲಕ್ಷ ಮಂದಿಗೆ ಸೋಂಕು ತಗುಲಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 396 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ದೇಶದಲ್ಲಿ 8498 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇ 24ರಂದು ಭಾರತ ವಿಶ್ವದಲ್ಲಿ ಗರಿಷ್ಠ ಸೋಂಕಿತರನ್ನು ಹೊಂದಿದ ಅಗ್ರ 10 ರಾಷ್ಟ್ರಗಳ ಪೈಕಿ ಸ್ಥಾನ ಪಡೆದ ಬಳಿಕ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಹೆಚ್ಚುತ್ತಿದೆ. ಕೇವಲ 18 ದಿನಗಳಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ.

ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ

ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. 

ರಾಜ್ಯದಲ್ಲಿರುವ ಎಲ್ಲ ಡಿಸಿಸಿ ಬ್ಯಾಂಕ್ ಗಳ ಮೂಲಕ ಬಡವರ ಬಂಧು ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಸಾಲಸೌಲಭ್ಯ ಒದಗಿಸಲು ಕ್ರಮವಹಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. 
ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಜಿಲ್ಲೆಯ ಶ್ರಮಿಕ ಅತಿ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
 
ತುಮಕೂರು ಜಿಲ್ಲೆಯಲ್ಲಿ ಒಂದು ಕೋಟಿ ಸಾಲ ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಖಾಸಗಿ ಅವರಿಂದ ಸಾಲ ಪಡೆದು ಹೆಚ್ಚು ಬಡ್ಡಿಯನ್ನು ಕಟ್ಟುವುದನ್ನು ತಪ್ಪಿಸಲು ಬಡವರ ಬಂಧು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಸಾಲ ಮರು ಪಾವತಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ದಿನ ಭವಿಷ್ಯ: 12-06-2020,ಶುಕ್ರವಾರ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಶತಭಿಷ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11

ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ-ಆತಂಕ, ದೈವ ಕಾರ್ಯ-ಪ್ರಯಾಣಕ್ಕೆ ಅಡೆತಡೆ, ದಾನ ಧರ್ಮ ಕಾರ್ಯಕ್ಕೆ ಖರ್ಚು.

ವೃಷಭ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ವಿಪರೀತ ಧೈರ್ಯ, ಸಾಹಸ-ಆತುರದ ಮನಸ್ಥಿತಿ, ಉದ್ಯೋಗ ಬದಲಾವಣೆಯ ಆಲೋಚನೆ, ಸ್ನೇಹಿತರಿಂದ ಅನುಕೂಲ, ಶುಭ ಕಾರ್ಯಗಳಲ್ಲಿ ಪ್ರಗತಿ, ಹಣಕಾಸು ವಿಚಾರವಾಗಿ ಕಲಹ.

ಮಿಥುನ: ನೀವಾಡುವ ಮಾತಿನಿಂದ ತೊಂದರೆ, ಕುಟುಂಬಸ್ಥರಿಂದಲೇ ನೋವು, ಆರ್ಥಿಕ ಸಂಕಷ್ಟಗಳು, ಸಾಲದ ಸಹಾಯ ಲಭಿಸುವುದು, ಪ್ರಯಾಣ ಯೋಗ, ಚಿನ್ನಾಭರಣ ಕಳವು ಸಾಧ್ಯತೆ, ಅಲರ್ಜಿ,ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕಟಕ: ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಗ್ಯಾಸ್ಟ್ರಿಕ್,ದೃಷ್ಠಿ ದೋಷ, ದೈಹಿಕ ನೋವು, ಸಾಲ ಬಾಧೆ, ನಿದ್ರಾಭಂಗ, ಪಿತ್ರಾರ್ಜಿತ ಆಸ್ತಿ ನಷ್ಟದ ಭೀತಿ.

ಸಿಂಹ: ಸ್ಥಿರಾಸ್ತಿ ವಾಹನಕ್ಕಾಗಿ ಅಧಿಕ ಖರ್ಚು, ಮಾತೃವಿನಿಂದ ಲಾಭ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ನಷ್ಟ, ನಿರಾಸೆಗಳಿಂದ ವ್ಯಥೆ, ಅತೀ ಒಳ್ಳೆಯತನದಿಂದ ತೊಂದರೆ, ಸಾಲ ಮರುಪಾವತಿಗೆ ಹಿನ್ನಡೆ.

ಕನ್ಯಾ: ವ್ಯಾಪಾರ-ಉದ್ಯೋಗಕ್ಕಾಗಿ ತಿರುಗಾಟ, ಸ್ಥಿರಾಸ್ತಿಯ ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಶುಭ ಕಾರ್ಯ ಯೋಗ, ಅದೃಷ್ಟ ಒಲಿಯುವುದು, ಸ್ನೇಹಿತರು-ನಂಬಿಕಸ್ಥರಿಂದ ಮೋಸ, ತೀರ್ಥಕ್ಷೇತ್ರ ದರ್ಶನ, ದಾಯಾದಿಗಳ ಕಲಹ, ಸಹೋದರಿಯಿಂದ ಸಮಸ್ಯೆ, ಇಲ್ಲ ಸಲ್ಲದ ಅಪವಾದ.

ತುಲಾ: ಉದ್ಯೋಗ ಬದಲಾಯಿಸುವ ಪರಿಸ್ಥಿತಿ, ಆರ್ಥಿಕ ಅನುಕೂಲ, ಸಾಲದ ಸಮಸ್ಯೆ ಬಗೆಹರಿಯುವುದು, ಬಂಧುಗಳ ಆಗಮನ, ನೆರೆಹೊರೆಯವರಿಂದ ಧನ ಸಹಾಯ, ನೀವಾಡುವ ಮಾತುಗಳಿಂದ ವೈಮನಸ್ಸು, ಶತ್ರುತ್ವ ಹೆಚ್ಚಾಗುವುದು, ಉದ್ಯೋಗ ಸ್ಥಳದಲ್ಲಿ ನಷ್ಟ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.

ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ, ಮಕ್ಕಳಿಂದ ನೋವು, ಭವಿಷ್ಯದ ಬಗ್ಗೆ ಚಿಂತನೆ, ಮಾನಸಿಕ ಗೊಂದಲ, ತಂದೆಯಿಂದ ಧನ ಸಹಾಯ, ಸ್ಥಿರಾಸ್ತಿ-ವಾಹನದ ಮೇಲೆ ಹೂಡಿಕೆ, ಅದೃಷ್ಟ ಕೈ ತಪ್ಪುವುದೆಂಬ ಆತಂಕ, ಪ್ರಶಾಂತವಾದ ಭಾವನೆಗಳು ಕೆರಳುವುದು.

ಧನಸ್ಸು: ಸ್ಥಿರಾಸ್ತಿಯಿಂದ ಯೋಗ, ಮಾತೃವಿನಿಂದ ಅದೃಷ್ಟ, ಸ್ಥಿರಾಸ್ತಿ ಮಾರಾಟಕ್ಕೆ ಸೂಚನೆ, ವಾಹನಗಳಿಂದ ಅಧಿಕ ಖರ್ಚು, ದಾಂಪತ್ಯದಲ್ಲಿ ವೈರತ್ವ ಹೆಚ್ಚಾಗುವುದು, ಕೌಟುಂಬಿಕ ಕಲಹಗಳಿಂದ ನಿದ್ರಾಭಂಗ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಅಧಿಕವಾದ ಚಿಂತೆ ಶುರುವಾಗುವುದು.

ಮಕರ: ಸಂಗಾತಿಯಿಂದ ಧನಾಗಮನ ನಿರೀಕ್ಷೆ, ನೆರೆಹೊರೆ-ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ಸಾಲ ತೀರಿಸುವ ಯೋಗ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಜನ್ಮ ಸ್ಥಳದಿಂದ ದೂರ ಉಳಿಯುವ ಆಲೋಚನೆ.

ಕುಂಭ: ಸಾಲ ದೊರೆಯುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ, ನೀರಿನ ಪ್ರದೇಶಗಳಲ್ಲಿ ಎಚ್ಚರ, ಬಡ್ತಿ ವಿಚಾರದಲ್ಲಿ ಪ್ರಗತಿ, ಶುಭ ಹಾರೈಕೆ, ಪ್ರಶಂಸೆ ಲಭಿಸುವುದು.

ಮೀನ: ಮಕ್ಕಳ ಜೀವನದಲ್ಲಿ ಪ್ರಗತಿ, ಅಹಂಭಾವ ಹೆಚ್ಚಾಗುವುದು, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ದೇವರು-ಗುರುಗಳ ಅನುಗ್ರಹದಿಂದ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಅದೃಷ್ಟದ ಯೋಗ, ಆರ್ಥಿಕ ಸಮಸ್ಯೆ ಬಗೆಹರಿಯವುದು.

ಸೌಂದರ್ಯವರ್ಧಕ ಸೋರೆಕಾಯಿ…!

ಸೋರೆಕಾಯಿ ರಸ ದೇಹಕ್ಕೆ ಮಾತ್ರವಲ್ಲ ಕೂದಲಿಗೂ ಒಳ್ಳೆಯದು. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹತೂಕ ಇಳಿಯುತ್ತದೆ. ಚರ್ಮದ ಮೇಲೆ ಮೂಡುವ ಸುಕ್ಕು, ನೆರಿಗೆಗಳು ದೂರವಾಗುತ್ತವೆ. ಇದರಲ್ಲಿ ಸತು ಮತ್ತು ವಿಟಮಿನ್ ಸಿ ಇದ್ದು ಇದು ಅಕಾಲಿಕ ವಯಸ್ಸಿನ ಸಮಸ್ಯೆಗಳನ್ನು ತಡೆಯುತ್ತದೆ. ಇದರ ರಸವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಬೇಕು.

ಬೆಳಿಗ್ಗೆ ಎದ್ದಾಕ್ಷಣ ಕಣ್ಣು ಉಬ್ಬಿರುವವರು ಇದರ ರಸವನ್ನು ಪ್ರಯತ್ನಿಸಿ. ಇದು ಊತವನ್ನು ನಿವಾರಿಸುತ್ತದೆ. ತಾಜಾ ಸೋರೆಕಾಯಿಯ ಎರಡು ಹೋಳುಗಳನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 15 ನಿಮಿಷ ಬಳಿಕ ಕಣ್ಣು ತೊಳೆದರೆ ಈ ಬಾವು ಕಡಿಮೆಯಾಗುತ್ತದೆ.

ಈ ತರಕಾರಿಯಲ್ಲಿರುವ ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಸಾಂದ್ರತೆಯಿಂದ ಮುಖದ ಮೇಲೆ ಹೊಳಪು ಮರಳುತ್ತದೆ. ನಿತ್ಯ ಈ ರಸ ಸೇವಿಸುವುದರಿಂದ ದೇಹದ ಕಾರ್ಯಗಳು ನಿಯಂತ್ರಣಗೊಳ್ಳುತ್ತದೆ ಮತ್ತು ಚರ್ಮ ಹೊಳಪು ಪಡೆಯುತ್ತದೆ.

ರಾಜ್ಯದಲ್ಲಿ ಇಂದು ಕಿಲ್ಲರ್ ಕೊರೋನಾಗೆ ಮೂವರು ಬಲಿ : ಸಾವಿನ ಸಂಖ್ಯೆ 72ಕ್ಕೆ ಏರಿಕೆ

 ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 204 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಇವರಲ್ಲಿ 2976 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3195 ಆಗಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಇಬ್ಬರು, ರಾಯಚೂರಿನಲ್ಲಿ ಒಬ್ಬರು ಕೊರೋನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಯಾದಗಿರಿ -66, ಉಡುಪಿ -22, ಬೆಂಗಳೂರು ನಗರ -17, ಕಲಬುರ್ಗಿ – 16, ರಾಯಚೂರು – 15, ಬೀದರ್ – 14, ಶಿವಮೊಗ್ಗ – 10, ದಾವಣೆಗೆರ -09, ಕೋಲಾರ – 06, ಮೈಸೂರು – 05, ರಾಮನಗರ -05, ವಿಜಯಪುರ – 04, ಬಾಗಲಕೋಟೆ -03, ಉತ್ತರಕನ್ನಡ -03, ದಕ್ಷಿಣ ಕನ್ನಡ -02, ಹಾಸನ -02, ಧಾರವಾಡ -02, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳದಲ್ಲಿ ತಲಾ ಒಂದೊಂದು ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ಇಂದು 204 ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾದ್ರೇ, 2976 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 3195 ಆಗಿದೆ.null

ಬೆಂಗಳೂರು ನಗರದ ಪಿ.6020 ಸೋಂಕಿತ 35 ವರ್ಷದ ವ್ಯಕ್ತಿ, ಐಎಲ್ಐ ಮೂಲಕ ಕೊರೋನಾ ಸೋಂಕು ಪತ್ತೆಯಾಗಿತ್ತು. ಇವರಿಗೆ ಲಿವರ್ ಸಮಸ್ಯೆ ಕೂಡ ಇತ್ತು. ಜೂನ್ 7ರಂದು ನಗರದ ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ವ್ಯಕ್ತಿ ಜೂ.10ರಂದು ಮರಣ ಹೊಂದಿದ್ದಾರೆ.

ಬೆಂಗಳೂರಿನ ಪಿ.6029 ಸೋಂಕಿತ 60 ವರ್ಷದ ವ್ಯಕ್ತಿಯೊಬ್ಬರು ಐಎಲ್ಐ ಮೂಲಕ ಕೊರೋನಾ ಸೋಂಕು ಪತ್ತೆಯಾಗಿತ್ತು. ಇವರು ಡಿಎಂ ಮತ್ತು ಐಹೆಚ್ ಡಿ ಹಿನ್ನಲೆಯಲ್ಲಿ ಜೂನ್ 6ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವ್ಯಕ್ತಿಯ ಜೂನ್ 11ರ ಇಂದು ಸಾವನ್ನಪ್ಪಿದ್ದಾರೆ.null

ಇನ್ನೂ ರಾಯಚೂರಿನ ಪಿ.6207 ಸೋಂಕಿತ 28 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೂ ಕೊರೋನಾ ಸೋಂಕು ತಗುಲಿತ್ತು. ಮೇ 30ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್ 8ರಂದು ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇಂದು ಮೂವರು ಕೊರೋನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲು : ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ ಜೂನ್ 11 : ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್ ಗಳಲ್ಲಿ ನಿಗಧಿತ ಸಾಮಾಜಿಕ ಅಂತರ ಪಾಲನೆಯಾಗದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್ ಗಳ ವಿರುದ್ದ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾದಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.

ಅವರು ಗುರುವಾರ , ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರೋನಾ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಗಧಿತ ಸಂಖ್ಯೆಗಿAತ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್ ಗಳ ವಿರುದ್ದ ಸಾರಿಗೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದೇ , ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಈ ಕುರಿತಂತೆ ಸರ್ಕಾರದ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಸ್ ಮಾಲೀಕರುಗಳಿಗೆ ತಿಳಿಸಿದರು.
ಎಲ್ಲಾ ಬಸ್ ಗಳಲ್ಲಿ 30 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸದಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಪರಿಶೀಲನೆ ನಡೆಸುವಂತೆ ಸೂಚಿಸಿದರು, ಎಲ್ಲಾ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡುವಂತೆ ಹಾಗೂ ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ಬಸ್ ನೊಳಗೆ ಪ್ರವೇಶ ನೀಡದಂತೆ ಬಸ್ ಮಾಲೀಕರಿಗೆ ತಿಳಿಸಿ, ಈ ಬಗ್ಗೆ ತಮ್ಮ ಎಲ್ಲಾ ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು.ಬಸ್ ಗಳಲ್ಲಿ ಪೀಕ್ ಟೈಮ್ ನಲ್ಲಿ ಮಾತ್ರ ಜನರ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದ್ದು, ಉಳಿದಂತೆ ಇತರೆ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ ಆದ್ದರಿಂದ ಪೀಕ್ ಅವರ್ ನಲ್ಲಿ ಸಾಮಾಜಿಕ ಅಂತರ ಪಾಲನೆ ಕಷ್ಟ ಎಂದು ಬಸ್ ಮಾಲೀಕರು ತಿಳಿಸಿದರು. ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ , ಪೀಕ್ ಅವರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಓಡಿಸಿ ಅಥವಾ ನಿಮ್ಮ ಹಂತದಲ್ಲೇ ಟೈಮಿಂಗ್ ಬದಲಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಬಸ್ ದರದ ಹೆಚ್ಚಳ ಕುರಿತಂತೆ ಯಾವ ಆದೇಶದಲ್ಲಿ ಮಾಡಿದ್ದೀರಿ ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ, ಕರೋನಾ ದಿಂದ ಬಸ್ ದರ ಹೆಚ್ಚಳ ಮಾಡಿಲ್ಲ, ಬಸ್ ದರ ಹೆಚ್ಚಳ ಕುರಿತಂತೆ ಜನವರಿಯಲ್ಲಿಯೇ ಸರಕಾರ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ಕೆ.ಎಸ್.ಆರ್.ಟಿ.ಸಿಯಲ್ಲಿ ಹೆಚ್ಚಳವಾಗಿದೆ, ಖಾಸಗಿ ಬಸ್ ಗಳಿಗೆ ಈಗ ಆದೇಶ ಬಂದ ನಂತರ ರಾಜ್ಯಾದ್ಯಂತ ಹೆಚ್ಚಳ ಮಾಡಲಾಗಿದೆ, ಬಸ್ ಗಳಲ್ಲಿ 30 ಜನ ಪ್ರಯಾಣಿಕರನ್ನು ಕರೆದುಕೊಂಡು ಹೋದರೂ, ಉಳಿದ ಖಾಲಿ ಸೀಟುಗಳಿಗೆ ತೆರಿಗೆ ಪಾವತಿಸಬೇಕಿದ್ದು, ಪ್ರಯಾಣಿಕರ ಸಂಖ್ಯೆಗೆ ಮಾತ್ರವೇ ತೆರಿಗೆ ಪಾವತಿ ಮಾಡುವ ಕುರಿತಂತೆ ಅವಕಾಶ ನೀಡಬೇಕು ಎಂದು ಬಸ್ ಮಾಲೀಕರು ಜಿಲ್ಲಾಧಿಕಾರಿ ಅವರಲ್ಲಿ ಕೋರಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಕಾರ್ಯದರ್ಶಿ ಸದಾನಂದ ಛಾತ್ರ, ಉಡುಪಿ ಸರ್ವಿಸ್ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕರಾವಳಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಶಿರ್ವ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಆನ್ ಲೈನ್ ಶಿಕ್ಷಣ ರದ್ದುಗೊಳಿಸಲು ಆದೇಶ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಲೇ ನಿಲ್ಲಿಸಬೇಕೆಂದು ಆದೇಶ ನೀಡಿದ್ದಾರೆ.

ಚಿಕ್ಕಮಕ್ಕಳಿಗೆ ಆನ್ ಲೈನ್ ಶಿಕ್ಷಣ ಮಾನಸಿಕ ಒತ್ತಡ ಹೇರುತ್ತದೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಹಲವು ತಜ್ಞರೇ ವರದಿ ನೀಡಿದ್ದರು. ಪೋಷಕರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು

ಈ ಹಿನ್ನಲೆಯಲ್ಲಿ ಸುರೇಶ್ ಕುಮಾರ್ ಇಂದಿನಿಂದಲೇ 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ರದ್ದುಗೊಳಿಸಿ ಆದೇಶ ನೀಡಿದ್ದಾರೆ.

ದುಡ್ಡು ಮಾಡಲು ನಿಂತು ಬಿಟ್ಟ್ರಾ ಕೊರೋನಾ ವಾರಿಯರ್ಸ್!!!?

ದುಡ್ಡು ಮಾಡಲು ನಿಂತು ಬಿಟ್ರಾ ಕೊರೋನಾ ವಾರಿಯರ್ಸ್‌!!? ನಿಜಕ್ಕೂ ಇದು ಅಚ್ಚರಿ ಮೂಡಿಸುವ ವಿಚಾರ. KOVID 19 ಇಡೀ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿದೆ. ಜನತೆಯ ಬದುಕು ನಲುಗಿ ಹೋಗಿದೆ. ಜೀವನವೇ ಸಾಕಾಗಿಬಿಟ್ಟಿದೆ. ಸಾವು ಕಣ್ಣೆದುರಲ್ಲೇ ಇದೆ. ಆದರೂ ಜನರು ಬದಲಾಗಲಿಲ್ಲ!! ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕಾಗಿಬಂದಾಗ ಒಲ್ಲದ ಮನಸ್ಸಿನಿಂದಲೋ, ಸಾವಿನ ಭಯದಿಂದಲೋ ಒಗ್ಗಿಕೊಂಡರು ಒಂದಷ್ಟು ಅನಿಷ್ಟ ಮಂದಿಯ ಹೊರತಾಗಿ!? ಜನರ ಹಿತದೃಷ್ಟಿಯಿಂದ, ಆರ್ಥಿಕ ಚೇತರಿಕೆಗಾಗಿ ಹಂತಹಂತವಾಗಿ ಕಠಿಣ ಹಾಗೂ ಕಡ್ಡಾಯ ನೀತಿಗಳನ್ನು ಸಡಿಲಗೊಳಿಸುತ್ತಾ ಬಂದಂತೆಲ್ಲ ಜನತೆ ತಮ್ಮ ಕರ್ತವ್ಯವನ್ನು ಮರೆತು ಕೇವಲ ಸರ್ಕಾರ ಇದನ್ನೆಲ್ಲ ನೋಡಿಕೊಳ್ಳಬೇಕು ಎಂಬ ತಮ್ಮ ಮಾಮೂಲಿ ನಿಲುವಿಗೆ ಪುನಃ ಅಂಟಿಕೊಂಡುಬಿಟ್ಟರು. ಕೊರೋನಾ ಸಂದರ್ಭದಲ್ಲೂ ಕೂಡ ಸರ್ಕಾರದ ಮುಂಜಾಗ್ರತಾ ಕ್ರಮಗಳು, ಕಠಿಣ ನಿಲುವುಗಳು ರಾಜಕೀಯ ಹಾಗೂ ಧಾರ್ಮಿಕವಾಗಿ ಹಲವು ವಿರೋಧಗಳಿಗೂ ಕಾರಣವಾಗಿದ್ದು ವಿಪರ್ಯಾಸ!!! ಜೀವಕ್ಕೆ ಬೆಲೆಕೊಟ್ಟಾಗ ಉಡುಪಿ ಜಿಲ್ಲೆಯು ಮೂರೇ ಸೋಂಕಿತರಿಗೆ ನಿಂತಿತ್ತು. ಯಾವಾಗ ಭಾವನೆಗಳಿಗೆ ಬೆಲೆಕೊಡಬೇಕೆಂದು ಒತ್ತಾಯಮಾಡು ಒತ್ತಡ ತರಲಾಯಿತೋ ಅಲ್ಲಿಗೆ ಮೂರಂಕಿ ಮುಗಿಸಿ ನಾಲ್ಕಂಕಿಗೆ ಮಗ್ಗುಲು ಬದಲಾಯಿಸಿದೆ.

ಇದಕ್ಕೇನು ಕಾರಣ? ಯಾರು ಕಾರಣ ಎಂಬುದಕ್ಕಿಂತ ಮುಂಚೆ ನಾವು ಯೋಚಿಸಬೇಕಾದ ಬಹುಮುಖ್ಯ ವಿಚಾರವೆಂದರೆ ನಮ್ಮ ಕೊರೋನಾ ವಾರಿಯರ್ಸ್ ಹಣ ಮಾಡಲು ನಿಂತು ಬಿಟ್ರಾ ಅನ್ನೋದು!? ಹಾಗಂತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡಿಬಿಟ್ಟಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕಿದ್ದ ನಾವು, ನಮ್ಮನ್ನು ಕಾಪಾಡಲು ನಿಂತವರ ವಿರುದ್ಧವೇ ನಿಂತುಬಿಟ್ಟಿದ್ದೇವೆ ಅನ್ನುವುದು ಮಾತ್ರ ಹಾಸ್ಯಾಸ್ಪದ. ಕೊರೋನಾ +ve ಇಲ್ಲ, ಎಲ್ಲವೂ ಕೂಡ ತಲೆಗೆ ಮೂರುವರೆ ಲಕ್ಷ ರೂಪಾಯಿ ದುಡ್ಡು ಹೊಡೆಯುವ ತಂತ್ರ ಅಂತ ಬಿಂಬಿಸಲಾಗುತ್ತಿದೆ. ಎಗ್ಗಿಲ್ಲದೆ ಆರೋಪ ಮಾಡುವ ನೀವು ಹಲವು ವಾಸ್ತವ ಸಂಗತಿಗಳನ್ನು ಮೊದಲು ಗಮನಿಸಬೇಕು. ರಿಪೋರ್ಟ್ ನೀಡಿ ಕರೆದುಕೊಂಡು ಹೋಗಿ ಎನ್ನುವವರು ಸತ್ತರೆ, ನಿಮ್ಮನ್ನು ನಂಬುದವರಿಗಷ್ಟೇ ನಷ್ಟ!! ನೀವ್ಯಾರು ಒಂದೇ ಒಂದು ಪೈಸೆ ಖರ್ಚುಮಾಡಿ ಗುಣಮುಖರಾಗಿ ಬರುವುದಿಲ್ಲ! ಹಾಗಿದ್ದಾಗ್ಯೂ ಹಣ ಹೊಡೆಯುವ ತಂತ್ರ ಎಂಬ ಅನಕ್ಷರ ಧೋರಣೆ ಬಿಟ್ಟುಬಿಡಿ ಇಲ್ಲವೇ ಸೂಕ್ತ ದಾಖಲೆಗಳಿದ್ದರೆ ಕಾನೂನು ಹೋರಾಟ ಮಾಡಿ.

ಸರ್ಕಾರ ನಿಮಗೆ ಖರ್ಚು ಮಾಡುವ ಪ್ರತಿಯೊಂದು ಪೈಸೆಯೂ ಜನರ ತೆರಿಗೆ ಹಣ. ಸಾಲದ್ದಕ್ಕೆ ಉಡುಪಿಯಲ್ಲಿ ಒಂದೇ ಒಂದು KOVID TEST LAB ಕೂಡ ಸರ್ಕಾರ ಸ್ಥಾಪಿಸಿಲ್ಲ!!

ಕೆಎಂಸಿ, ಯೆನಪೋಯ,ವೆನ್ಲಾಕ್, ಶಿವಮೊಗ್ಗ,ಹಾಸನ ಹೀಗೆ ನಾನಾ ಕಡೆಗಳಿಗೆ ನಿಮ್ಮಿಂದ ಸಂಗ್ರಹಿಸಿದ ಅಮೃತವನ್ನು ಕಳಿಸಿ, ಅದರಲ್ಲಿ ವಿಷ ಇದೆಯೇ ಅಂತ ಪರೀಕ್ಷಿಸಲಾಗುತ್ತಿದೆ.

ಒಬ್ಬ ವ್ಯಕ್ತಿಯ ರಿಪೋರ್ಟ್ ತಿಳಿಯಲು ಬರೋಬ್ಬರಿ ಎಂಟು ಗಂಟೆಗಳು ಬೇಕು!!

ಅತ್ಯಂತ ಆಧುನಿಕ ವ್ಯವಸ್ಥೆ ಹೊಂದಿರುವ ಲ್ಯಾಬ್ ಇರುವ ಆಸ್ಪತ್ರೆಗಳಲ್ಲಿ max to max 100 ಜನರ ರಿಪೋರ್ಟ್ ದಿನವೊಂದಕ್ಕೆ ಪಡೆಯಬಹುದು ಅಷ್ಟೇ!! ಇನ್ನುಳಿದವುಗಳಲ್ಲಿ 50 ದಾಟಿದರೆ ಹೆಚ್ಚು!!? ಹೀಗಿರುವಾಗ ಕೇವಲ 2 - 3 ದಿನದಲ್ಲಿ ಆಗಮಿಸಿದ ಎಂಟು ಸಾವಿರದಷ್ಟು ಮಂದಿಯ ರಿಪೋರ್ಟ್ ಅಷ್ಟು ಸುಲಭವಾಗಿ ಸಿಕ್ಕೀತೆ?? ಕಾಯುವ, ಕೇಳುವ ತಾಳ್ಮೆ ಇರದ ನೀವು ವಾಚಾಮಗೋಚರ ಮಾತಾಡುತ್ತಿರುವುದು ತಪ್ಪು. CORONA ವಾರಿಯರ್ಸ್‌ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ತಿಂಗಳುಗಳಿಂದ ಸಂಪೂರ್ಣ ಕುಟುಂಬದಿಂದ ದೂರವುಳಿದವರಿದ್ದಾರೆ. ಅವರಿಗೂ ಭಾವನೆಗಳಿವೆ. ಬದುಕುವ ಬಯಕೆಗಳು ಜೀವಂತವಾಗಿವೆ. ಸಮುದಾಯಕ್ಕೆ ಸೋಂಕು ಹರಡಬಾರಡು, ಸೋಂಕಿತರನ್ನು ಗುಣಪಡಿಸಬೇಕೆಂದು ಕರ್ತವ್ಯವೇ ದೇವರೆಂಬಂತೆ ದುಡಿಯುತ್ತಿದ್ದಾರೆ. ಹೀಗಿರುವಾಗ ಅವರು ದುಡ್ಡು ಹೊಡೆಯಲು *+ve* ಎಂಬ ತಂತ್ರ ಅನುಸರಿಸುತ್ತಿದ್ದಾರೆಂಬ ನಿಮ್ಮ ದಾಖಲೆರಹಿತ ಆರೋಪಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ!! *ಉಡುಪಿಯ 98% ಸೋಂಕಿತರು Asymptomatic!!* ಯಾವ ವ್ಯಕ್ತಿಯಲ್ಲೂ ಸೋಂಕಿನ ಲವಲೇಷ ಲಕ್ಷಣವೂ ಕಾಣಿಸಿಲ್ಲ.

Asymptomatic ರೋಗಿಯೊಬ್ಬನ ಪ್ರತಿದಿನದ ಖರ್ಚು ಸರ್ಕಾರಿ ಲೆಕ್ಕಾಚಾರದಲ್ಲಿ 8000 ಸಾವಿರ, sensitive ಕೇಸುಗಳಲ್ಲಿ ಇನ್ನೂ ಹೆಚ್ಚು!! ಖಾಸಗಿ ಆಸ್ಪತ್ರೆಯಲ್ಲಾದರೆ Asymptomatic ವ್ಯಕ್ತಿಯ ದಿನವಹಿ ಖರ್ಚು ಅಂದಾಜು ಇಪ್ಪತ್ತು ಸಾವಿರ ಮೀರುತ್ತದೆ. Sensitive ಪ್ರಕರಣವಿದ್ದರೆ ಇನ್ನೂ ಹೆಚ್ಚು ವ್ಯಯಿಸಬೇಕಾಗುತ್ತದೆ.

ನೆಗೆಟಿವ್ ಇರುವವರನ್ನು ಪಾಸಿಟಿವ್ ಎಂದು ಸುಳ್ಳು ರಿಪೋರ್ಟ್ ಕೊಟ್ಟು ದುಡ್ಡುಮಾಡಲು ತಂತ್ರ ರೂಪಿಸಿದ್ದಾರೆಂದರೆ ನಂಬಲು ಹೇಗೆ ಸಾಧ್ಯ ಹೇಳಿ?
ಅಷ್ಟು ಸುಲಭವಾಗಿ ಅದನ್ನೆಲ್ಲ ಮಾಡುವಂತಿದ್ದರೆ ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಕಣ್ಮುಚ್ಚಿ ಕುಳಿತುಬಿಡುತ್ತಿದ್ದವಾ?? ವ್ಯಕ್ತಿಯೊಬ್ಬನಿಗೆ ಸೋಂಕು ಇರುವುದು ಖಾತರಿಯಾದ ತಕ್ಷಣವೇ Lab ನಿಂದ, ಜಿಲ್ಲಾ call center ಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದಲೇ ambulance ನ ವ್ಯವಸ್ಥೆ ಮಾಡುತ್ತಾರೆ.

ಇಷ್ಟೆಲ್ಲ ಆಗಿಯೂ ಕೂಡ ನಿಮಗೆ ನೆಮ್ಮದಿ ಇಲ್ಲವೆಂದಾದರೆ ವೈದ್ಯರಲ್ಲಿ ನಮ್ಮನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಿ ಅಂತ ಹೇಳಿ. ನಿಮ್ಮ ವರ್ತನೆಯಿಂದ ಬೇಸತ್ತ ಅವರು ಖಂಡಿತ ಕಳುಹಿಸುತ್ತಾರೆ!! +ve, -ve ನ ಅಸಲಿಯತ್ತಿನ ಪರಿಚಯ ಖಂಡಿತವಾಗಿಯೂ ಆಗುತ್ತದೆ. ಹಲವು ಜನರಲ್ಲಿ ರೋಗನಿರೋಧಕ ಶಕ್ತಿ (immunity power) ಉತ್ತಮವಾಗಿದ್ದು ಚೇತರಿಸಿಕೊಂಡಿದ್ದಾರೆ. ಅವರಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. Asymptomatic ಆಗುವ ಬದಲು ಜೋರು ಹುಷಾರಿಲ್ಲದೆ *+ve* ಬಂದದ್ದಾಗಿದ್ದರೆ ಎಲ್ಲರೂ ಕಣ್ಮುಚ್ಚಿ ಒಪ್ಪಿಕೊಂಡಿಬಿಡುತ್ತಿದ್ದೀರಿ ಅನ್ನಿಸುತ್ತಿದೆ!? ಇನ್ನು, ಕೆಲವರು ಒಂದೆರಡು ದಿನಗಳಲ್ಲೇ ಡಿಸ್ಚಾರ್ಜ್ ಆಗಿದ್ದಾರೆ. ಅವರ ರಿಪೋರ್ಟ್ ಬರುವಾಗಲೇ ಕೆಲ ದಿನ ತಗುಲಿದೆ, ಮರು ಟೆಸ್ಟ್ ನಲ್ಲಿ‌ *-ve* ಆಗಿದೆ. ಸೋಂಕಿತರೊಡನೆ ಇರುವುದು ಬೇಡವೆಂದು ಕಳುಹಿಸಿಕೊಡಲಾಗಿದೆ. *ದಿನಗಳೆದಂತೆ ವೈರಸ್ ಕೂಡ ತನ್ನ ಶಕ್ತಿಯನ್ನು, ಸೋಂಕು ಹರಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇಲ್ಲಿಯೂ ಹಾಗೇ ಆಗಿದೆ!!*

ಕೊರೋನಾ ಗೆಲ್ಲುವ ಶಕ್ತಿ ನಮ್ಮಲ್ಲೇ ಇದೆ. ಉತ್ತಮ ಆಹಾರ, ಸಾಮಾಜಿಕ ಅಂತರ, ಸಾಧ್ಯವಾದಷ್ಟು ಮನೆಯಲ್ಲೇ ಇರುವುದು, ಬಿಸಿನೀರು ಕುಡಿಯುವುದು, ಶುಚಿತ್ವನ್ನು ಪಾಲಿಸಿಕೊಳ್ಳುವುದು ಇತ್ಯಾದಿ. ಇನ್ನೂ ಕೆಲವರಿಗೆ ಕೊರೋನಾ ಸದ್ದಿಲ್ಲದೆ ಬಂದು ಹೋಗಿರಬಹುದು! ಏಕೆಂದರೆ CORONA ಜೊತೆ ಬದುಕಬೇಕಿದೆ ನಾವು!!!

DC, SP, DHO, ಪ್ರಮುಖ ವೈದ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನರ್ಸ್ಗಳು, ಆಶಾಕರ್ಯಕರ್ತೆಯರು ಹಾಗೂ ಕೊರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಎಲ್ಲರೂ ಕೂಡ ಪ್ರಶಂಸಾರ್ಹರು, ಅಭಿನಂದನಾರ್ಹರೇ ಹೋರತು ಟೀಕಾಯೋಗ್ಯರಲ್ಲ!!

ಇವರೆಲ್ಲ ಸೇರಿ ದುಡ್ಡುಮಾಡಲು ರೂಪಿಸಿದ ಮಹಾಸಂಚು ಎಂಬಂತೆ ಆರೋಪಿಸುತ್ತಿರುವುದು ಅವರ ಆತ್ಮಸ್ಥೈರ್ಯ ಕುಗ್ಗಿಸುವ, ನೈತಿಕ ಬಲ ಕಡಿಮೆಮಾಡುವ, ಕರ್ತವ್ಯದಿಂದ ವಿಮುಖರಾಗುವಂತೆ ಮಾಡುವ ಹೀನ ನಡವಳಿಕೆ ಅಂತಲೇ ಭಾವಿಸಬೇಕಾಗುತ್ತದೆ. ಅವರನ್ನು ಗೌರವಿಸದಿದ್ದರೂ, ಪ್ರಶಂಶಿಸದಿದ್ದರೂ ಪರವಾಗಿಲ್ಲ ವೃತಾ ಆರೋಪಗಳನ್ನು ಮಾತ್ರ ಮಾಡಬೇಡಿ. ಅವರೆಲ್ಲರೂ ಸೇರಿ ಕರ್ತವ್ಯದಿಂದಲೇ ದೂರವುಳಿಯಲು ನಿರ್ಧರಿಸಿದರೆ ಇನ್ನಷ್ಟು ಪರುಣಾಮಗಳನ್ನು ಎದುರಿಸಬೇಕಾಗುತ್ತದೆ

Design a site like this with WordPress.com
Get started