ಜೂನ್ 28 ,2020; ಭಾನುವಾರ: ಇಂದಿನ ರಾಶಿಫಲ

ಪಂಚಾಂಗ: 
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಉತ್ತರ ನಕ್ಷತ್ರ

ರಾಹುಕಾಲ: ಸಂಜೆ 5:14 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:38 ರಿಂದ 5:14
ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 2:02

ಮೇಷ

ಕೈಗೊಂಡ ದೊಡ್ಡ ದೊಡ್ಡ ಯೋಜನೆಗಳಿಗೆ ವಿಘ್ನಗಳುಂಟಾಗದಂತೆ ಎಚ್ಚರಿಕೆ ಅಗತ್ಯ. ಗಂಭೀರ ನಡವಳಿಕೆಯಿಂದ ಉನ್ನತ ವ್ಯಕ್ತಿತ್ವದ ನಿರ್ಮಾಣ. ಅಧಿಕಾರ ಗೌರವ ಲಾಭವು ಉಂಟಾಗಲಿದೆ. ಕೆಲ ವಿಷಯಗಳ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳಿ.

ವೃಷಭ

ಹೊಸಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿ ಹೊಸ ಮಾರ್ಗ ಗೋಚರವಾಗಲಿದೆ. ಹೊಸ ಹೊಸ ಯೋಜನೆಗಳ ರೂಪರೇಷೆಗಳನ್ನು ರಚಿಸಲು ಉತ್ತಮ ಕಾಲ. ಕೈಗೊಂಡ ಕಾರ್ಯಗಳು ನೆರವೇರುವ ಅವಕಾಶ ವೃದ್ಧಿ.

ಮಿಥುನ

ಗುರಿ ಸಾಧನೆಗಾಗಿ ತಾಳ್ಮೆ ವಹಿಸುವುದು ಉತ್ತಮ. ವೃತ್ತಿ ಜೀವನದಲ್ಲಿನ ತೊಡಕಿನ ನಿವಾರಣೆಗಾಗಿ ಸಹಾಯ ಪಡೆಯುವ ಸಾಧ್ಯತೆ. ತೊಡಕಿನ ನಿವಾರಣೆಗಾಗಿ ಯೋಗ್ಯ ನಿರ್ಣಯ ಕೈಗೊಳ್ಳುವ ಸಾಧ್ಯತೆ. ಸಹಧರ್ಮಿಣಿಯಿಂದ ಸಕಾಲಿಕ ನೆರವು.

ಕಟಕ

ಬದುಕಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವಿರಿ. ಅಪೇಕ್ಷಿತರ ಭೇಟಿಯ ಸಾಧ್ಯತೆ. ಒಪ್ಪಂದ ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ದುಡುಕುತನದಿಂದಾಗಿ ಕಾರ್ಯಗಳು ಕೆಟ್ಟುಹೋಗುವ ಸಾಧ್ಯತೆ.

ಸಿಂಹ

ಚುರುಕಿನಿಂದ ಕಾರ್ಯಪ್ರವೃತ್ತರಾಗಿ ಯಶಸ್ಸನ್ನು ಗಳಿಸುವಿರಿ. ಉದಾಸೀನತೆ ಯಾವುದೇ ಕಾರಣಕ್ಕೂ ಸಲ್ಲದು. ಸಕಾಲದಲ್ಲಿ ಆದಾಯದಲ್ಲಿ ವೃದ್ಧಿಯಾಗಿ ತೃಪ್ತಿಯ ಹಿತಾನುಭವ ಅನುಭವಿಸುವಿರಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ.

ಕನ್ಯಾ

ಹುಚ್ಚು ಓಟದಿಂದ ಕೂಡಿದ ವ್ಯಾಪಾರ ವ್ಯವಹಾರಗಳು ಒಂದು ಹಂತಕ್ಕೆ ಬರಲಿವೆ. ಜವಾಬ್ದಾರಿಯ ಸ್ಥಾನವೊಂದನ್ನು ಅಲಂಕರಿಸಬೇಕಾದೀತು. ಆತ್ಮವಿಶ್ವಾಸದಿಂದಾಗಿ ಜೀವನದ ದಿಕ್ಕು ಬದಲಾವಣೆ. ಸಹೋದ್ಯೋಗಿಗಳಿಂದ ಹೆಚ್ಚಿನ ಪ್ರೀತಿಯ ಸಹಕಾರ ದೊರೆಯಲಿದೆ.

ತುಲಾ

ಇಚ್ಛಾಶಕ್ತಿಯ ಬಲದಿಂದಾಗಿ ಕೈಗೊಂಡ ಯೋಜನೆಗಳು ಉತ್ತಮ ಹಂತವನ್ನು ತಲುಪಿ ಹೆಚ್ಚಿನ ಸಮಾಧಾನ ದೊರೆಯಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ವೃದ್ಧಿ. ಸೂರ್ಯನ ಆರಾಧನೆಯಿಂದ ಹೆಚ್ಚಿನ ಯಶಸ್ಸು.

ವೃಶ್ಚಿಕ

ಅತ್ಯಂತ ಶುಭದಿನವಾಗಿದ್ದು, ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಹಿಂಜರಿಕೆಯಿಲ್ಲದೆ ಮುನ್ನಡೆ ಅನುಭವಿಸುವಿರಿ. ಮೃದುವಾದ ಮಾತುಗಳ ಮೂಲಕ ಮುಕ್ತ ಚರ್ಚೆಗಳಲ್ಲಿ ಭಾಗವಹಿಸುವಿರಿ. ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಮುನ್ನಡೆ.

ಧನು

ಜಾಣ್ಮೆಯಿಂದ ಕಷ್ಟಸಾಧ್ಯವಾದುದರ ಸಾಧನೆ. ಅಧಿಕಾರ ಪ್ರಾಪ್ತಿಯ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ ತೃಪ್ತಿ ಹೊಂದುವಿರಿ. ಆಸೆ ಆಕಾಂಕ್ಷೆಗಳು ನೆರವೇರಿದ ಸಂಭ್ರಮ. ಮನೆಯಲ್ಲಿ ಸಂತೋಷದ ವಾತಾವರಣ

ಮಕರ

ಕೆಲಸ ಕಾರ್ಯಗಳಲ್ಲಿ ಒತ್ತಡ ವಿಲ್ಲದ ನಿರಾಳತೆ. ಸಹೋದ್ಯೋಗಿಗಳ ಇಚ್ಛೆ ಪೂರೈಕೆಗಾಗಿ ಶಕ್ತಿಮೀರಿ ಶ್ರಮ ವಹಿಸುವಿರಿ. ರೈತಾಪಿ ವರ್ಗದವರಿಗೆ ಪರಿಸರ ವ್ಯತ್ಯಯದಿಂದಾಗಿ ಸ್ವಲ್ಪಮಟ್ಟಿನ ಆತಂಕ ಸೃಷ್ಟಿಯಾಗುವುದು.

ಕುಂಭ

ವಿರೋಧಿಗಳ ಸಂಚು ಫಲಿಸದು. ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ಇಮ್ಮಡಿ ಉತ್ಸಾಹದಿಂದ ಮುನ್ನುಗ್ಗಿ. ನಿರಾಶರಾಗದೆ ಆಶಾವಾದ ಬೆಳೆಸಿಕೊಳ್ಳುವುದು ಉತ್ತಮ. ಹಿರಿಯರ ಹಿತವಚನಗಳನ್ನು ಗೌರವಿಸಿ.

ಮೀನ

ವೃತ್ತಿಯಲ್ಲಿ ನಿರೀಕ್ಷಿತ ಬದಲಾವಣೆ ಕಂಡು ಬರಬಹುದು. ಆಸೆಪಟ್ಟು ನಿರ್ವಹಿಸಿದ ಕೆಲಸಕಾರ್ಯಗಳು ಸುಗಮವಾಗಿ ನೆರವೇರುವುದು. ಅನಗತ್ಯ ಭಯದಿಂದ ಮುಕ್ತರಾಗಿ ನಿರಾಳತೆ ಕಂಡುಬರುವುದು. ಹನುಮನ ಆರಾಧನೆ ಸೂಕ್ತ.

ಇಂದಿನ ಔಷಧೀಯ ಸಸ್ಯದ ಪರಿಚಯ : ಕೊಮ್ಮೇಗಿಡ

ಪುನಃನವಾ ಶ್ವೇತಪುನಃನವ, ರಕ್ತಪುನಃನವ, ಸೌಭಾಗ್ಯನಿ, ಥಿಕ್ರ, ಕೊಮ್ಮೇಗಿಡ, ಗೊನಜಾಲಿ, ಗಣಜಲಿ, ಅಡಕುಪಟ್ಟಿಗಿಡ, ಗಣಜೇರು, ಗಲಜೇರು, ಆಟಕಮಾಮಿಡಿ, ಮೂಕರತೈ ಚಡಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊಮ್ಮೇಗಿಡವು ಏಕವಾರ್ಷಿಕ ಸಸ್ಯವಾದರು, ತೇವಾಂಶ ಇರುವ ಭೂಮಿಯಲ್ಲಿ ಸದಾಕಾಲ ಕಾಣುಬರುತ್ತೆ. ಹೊಲ, ತೋಟ, ಬೀಳುಭೂಮಿ, ಪಾಳುಭೂಮಿ, ರಸ್ತೆಗಳ ಪಕ್ಕ, ಮನೆಗಳ ಪಕ್ಕಾ ಎಲ್ಲೆಂದರಲ್ಲಿ ಕಳೆಯಂತೆ ನೆಲದಲ್ಲಿ ಹಬ್ಬಿ ಬೆಳೆಯುತ್ತೆ. ಕೊಮ್ಮೆಗಿಡದಲ್ಲಿ ನಾಲ್ಕಾರು ಪ್ರಭೇದಗಳಿದ್ದರೂ, ಬಿಳಿ ಹೂ ಬಿಡುವ ಹಾಗು ಕೆಂಪು ಹೂ ಬಿಡುವ ಗಿಡಗಳನ್ನು ಮಾತ್ರ ಔಷಧಿಯಲ್ಲಿ ಬಳಸುತ್ತಾರೆ. ಕೊಮ್ಮೇಗಿಡದಲ್ಲಿರುವ ಅಭೂತಪೂರ್ವ ಔಷಧಿ ಗುಣಗಳನ್ನು ತಿಳಿದು ಪುರಾತನ ಕಾಲದಿಂದಲೂ ಆಯುರ್ವೇದ, ಹಿಂದೂ ಯುನಾನಿ, ಪಾರಂಪರಿಕ ಔಷಧಿ ಪದ್ಧತಿಗಳಲ್ಲಿ ಋಷಿಮುನಿಗಳು, ಪಂಡಿತರು, ನಾಟಿ ವೈದ್ಯರು ಔಷಧಿಯಾಗಿ ಬಳಸುತ್ತಾ ಬಂದಿದ್ದಾರೆ. ನಾವು ದಿನನಿತ್ಯ ಅಡಿಗೆಗೆ ಉಪಯೋಗಿಸುವ ಎಲ್ಲಾ ರೀತಿಯ ಸೊಪ್ಪುಗಳಂತೆ ಕೊಮ್ಮೆಸೊಪ್ಪನ್ನು ಪಲ್ಯ, ಸಾರು, ಚಟ್ನಿ ಮಾಡಿ ತಿನ್ನಬಹುದು. ಇದು ತಿನ್ನಲು ತುಂಬಾ ರುಚಿಕರವಾಗಿದ್ದು, ಆರೋಗ್ಯವನ್ನು ಕಾಪಾಡುತ್ತೆ. "ಪುನುರ್ನವ" ಅಂದರೆ ಮನುಷ್ಯರನ್ನು ಅನೇಕ ರೋಗಗಳಿಂದ ಮುಕ್ತಿಗೊಳಿಸಿ ಪುನರ್ಜನ್ಮ ನೀಡುತ್ತೆ ಅಂತಾ ಅರ್ಥ. ಇದನ್ನು ದಿನ ಆಹಾರದಲ್ಲಿ ನಿಯಮಿತವಾಗಿ ಬಳಸುತ್ತಿದ್ದರೆ, ಮೂತ್ರಪಿಂಡ, ಹೃದ್ರೋಗ, ಶ್ಯಾಸಕೋಶ, ಸಂಬಂಧಿಸಿದ ವ್ಯಾಧಿಗಳು ದೂರವಾಗುತ್ತೆ. ಅತಿಮುಖ್ಯವಾಗಿ ದೇಹದಲ್ಲಿನ ರಕ್ತ ಶುದ್ಧಿಯಾಗುತ್ತೆ. ಇದು ಅನೇಕ ವ್ಯಾಧಿಗಳು ಗುಣವಾಗಲು ರಾಮಬಾಣದಂತೆ ಕೆಲಸಮಾಡುತ್ತೆ. ಈ ಸಸ್ಯವು ವಿಷಯುಕ್ತವಲ್ಲದಿದ್ದರು ಪಂಡಿತರ ಸಲಹೆ ಪಡೆದು ಉಪಯೋಗಿಸಿ. ಮೂತ್ರಪಿಂಡ ರೋಗದಿಂದ ಬಳಲುತ್ತಿರುವುವರು ಕೊಮ್ಮೇಗಿಡದ ಜ್ಯುಸ್ ಅಥವಾ ಕಷಾಯವನ್ನು ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮುಂಚೆ 50ml ನಂತೆ ದಿನವು ಕ್ರಮಬದ್ಧವಾಗಿ ಕುಡಿಯುತ್ತಾ ಬಂದರೆ, ಮೂತ್ರಪಿಂಡ ವ್ಯಾಧಿಗಳು ದೂರವಾಗಿ, ಸುಗುಮವಾಗಿ ಕೆಲಸಮಾಡುತ್ತವೆ. ಮೂತ್ರಪಿಂಡದಲ್ಲಿನ ಕಲ್ಲುಗಳು ಕರಗಿ ಮೂತ್ರದಲ್ಲಿ ಹೊರಗಡೆ ಬರುತ್ತವೆ. ಕೆಟ್ಟಿರುವ ಮೂತ್ರಪಿಂಡಗಳು ಸಹ ಸಹಜ ಸ್ಥಿತಿಗೆ ಬಂದು ಕಾರ್ಯ ನಿರ್ವಹಿಸುತ್ತವೆ. ಕೊಮ್ಮೆಗಿಡದ ಬೇರನ್ನು ತಂದು, ಶುಭ್ರಗೊಳಿಸಿ, ನಾಟಿಹಸುವಿನ ತುಪ್ಪದಲ್ಲಿ ಗಂಧ ತೇಯ್ದು, ಕಣ್ಣಿಗೆ ಲೇಪನ ಮಾಡಿದರೆ, ಕಣ್ಣಿನ ವ್ಯಾಧಿಗಳು ವಾಸಿಯಾಗಿ, ದೃಷ್ಟಿ ಹೆಚ್ಚುತ್ತೆ. ಕೊಮ್ಮೆಗಿಡವನ್ನು ಸಮೂಲ ಸಹಿತ ತಂದು, ಶುಭ್ರಗೊಳಿಸಿ, ಚೆನ್ನಾಗಿ ಒರಳಲ್ಲಿ ಕುಟ್ಟಿ, ಒಂದು ಹತ್ತಿಬಟ್ಟೆಯಲ್ಲಿ ಹಾಕಿ ಒಂದು ಪಾತ್ರೆಗೆ ರಸವನ್ನು ಹಿಂಡಿಕೊಂಡು, ಒಂದು ಸೇರು ರಸಕ್ಕೆ 500ml ಎಳ್ಳೆಣ್ಣೆಸೇರಿಸಿ, ಒಲೆಯಮೇಲಿಟ್ಟು ಮಂದದ ಉರಿಯಲ್ಲಿ ಚೆನ್ನಾಗಿ ಕುದಿಸಿ ಕೊಮ್ಮೆ ರಸವೆಲ್ಲ ಹಿಂಗಿ ಎಣ್ಣೆ ಮಾತ್ರ ಉಳಿದಾಗ ಕೆಳಗಿಳಿಸಿ, ಸೋಸಿಕೊಂಡು, ಅದಕ್ಕೆ 5 ಗ್ರಾಂ ಗಡ್ಡೆ ಕರ್ಫ್ಯೂರ ಸೇರಿಸಿ, ಉಗರು ಬೆಚ್ಚಗಾದಾಗ ಒಂದು ಗಾಜಿನ ಸೀಸೆಯಲ್ಲಿ ಭದ್ರಪಡಿಸಿ, ಮೈಕೈನೋವು, ಕೀಲುನೋವು, ಮಾಂಸಖಂಡಗಳ ನೋವು, ನರದೌರ್ಬಲ್ಯ ಇದ್ದಾಗ ಮೈಗೆಲ್ಲ ಲೇಪಿಸಿ ಮಸಾಜ್ ಮಾಡಿಕೊಂಡರೆ, ನೋವು ನಿವಾರಣೆಯಾಗಲು ಈ ಎಣ್ಣೆ ಅದ್ಭುತವಾಗಿ ಕೆಲಸಮಾಡುತ್ತೆ.ಮಕ್ಕಳು ಕೈಕಾಲಲ್ಲಿ ಸ್ವಾದೀನವಿಲ್ಲದೆ ನಡೆದಾಡಲು ತುಂಬಾ ಕಷ್ಟ ಪಡ್ತಾರೆ.ಎಲ್ಲೆಂದರಲ್ಲಿ ಬಿದ್ದು ಗಾಯಗಳನ್ನು ಮಾಡಿಕೊಳ್ತಾರೆ ಅಂತಹ ಸಮಯದಲ್ಲಿ ಈ ಎಣ್ಣೆಯಿಂದ ಮೈಕೈಗೆ ಮಸಾಜ್ ಮಾಡುವುದರಿಂದ, ಕೈಕಾಲುಗಳಿಗೆ ಶಕ್ತಿ ಬಂದು, ಗುಣಮುಖರಾಗಿ ಚೆನ್ನಾಗಿ ನಡೆದಾಡುತ್ತಾರೆ. ಇದೇ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ ಒಂದು ಗಂಟೆಯ ನಂತರ ಸೀಗೆಕಾಯಿ ಉಪಯೋಗಿಸಿ

ಸ್ನಾನ ಮಾಡುವುದರಿಂದ ಗಜ್ಜಿ, ನವೆ, ದದ್ದು ಇನ್ನು ಮುಂತಾದ ಚರ್ಮ ವ್ಯಾಧಿಗಳು ಗುಣವಾಗುತ್ತೆ.
ಬಿಳಿ ಕೊಮ್ಮೆ ಎಲೆಗಳಿಂದ ರಸ ತೆಗೆದು, ಅದಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ, ಒಲೆಯಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ಪಾಕ ಬಂದಮೇಲೆ, ಆ ಪಾಕವನ್ನು ಒಂದು ಗಾಜಿನ ಸೀಸೆಯಲ್ಲಿ ಶೇಖರಿಸಿಟ್ಟುಕೊಂಡು, ಬೆಳಿಗ್ಗೆ ಸಂಜೆ 1 ಚಮಚದಂತೆ 1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಕುಡಿಯುತ್ತಾ ಬಂದರೆ ಎಂತಹ ಹೃದ್ರೋಗ ಸಮಸ್ಯೆಗಳು ಇದ್ದರೂ ನಿವಾರಣೆಯಾವುತ್ತೆ.
ಒಂದು ಹಿಡಿ ಕೊಮ್ಮೇಗಿಡದ ಎಲೆಗಳನ್ನು ಶುಭ್ರಗೊಳಿಸಿ, ತಾಮ್ರದ ಪಾತ್ರೆಯಲ್ಲಿನ 150ml ನೀರು ಹಾಕಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮುಂಚಿತವಾಗಿ 50ml ನಂತೆ ಒಂದು ವಾರ ಕುಡಿದರೆ, ಮೂತ್ರಪಿಂಡ ವ್ಯಾಧಿಗಳು ಗುಣವಾಗುತ್ತೆ.ಅಧಿಕ ರಕ್ತದೊತ್ತಡ ದೂರವಾಗುತ್ತೆ.ರಕ್ತ ಶುದ್ಧಿಯಾಗುತ್ತೆ.ಮದ್ಯಪಾನ, ಧೂಮಪಾನದಿಂದ ಕೆಟ್ಟಿರುವ ಶ್ವಾಸಕೋಶಗಳು ಸಹಜ ಸ್ಥಿತಿಗೆ ಮರಳಿ ಕಾರ್ಯ ನಿರ್ವಹಿಸುತ್ತವೆ.
50ml ಬೇರಿನ ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ತಿಂಗಳು ಕುಡಿಯುತ್ತಾ ಬಂದಲ್ಲಿ, ಹೊಟ್ಟೆಯಲ್ಲಿನ ಹುಣ್ಣು,
ಗಡ್ಡೆ ನಿವಾರಣೆಯಾಗುತ್ತೆ.
ದೇಹದಲ್ಲಿ ಅಧಿಕ ಉಷ್ಣತೆಯಿಂದ ಬಳಲುತ್ತಿದ್ದರೆ, ಪಲ್ಯ,ಸಾರು ಮಾಡಿ ಸೇವಿಸುತ್ತಿದ್ದರೆ,ದೇಹಕ್ಕೆತಂಪು ನೀಡಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುತ್ತೆ.ಅನೇಕ ವ್ಯಾಧಿಗಳನ್ನು ಸಹ ಗುಣಪಡಿಸುತ್ತೆ.
ಕೊಮ್ಮೆಗಿಡದಲ್ಲಿ ಕಬ್ಬಿಣಾಂಶ ಹೆಚ್ಚು ಇದ್ದು,ದೇಹಕ್ಕೆ ಕಬ್ಬಿಣಾಂಶ ಪೂರೈಸಿ, ರಕ್ತ ವೃದ್ಧಿಯಾಗಲು ಸಹಾಯ ಮಾಡುತ್ತೆ.ಕ್ಯಾಲ್ಸಿಯಂ ಸಹ ಅಧಿಕ ಪ್ರಮಾಣದಲ್ಲಿದ್ದು, ಮೂಳೆಗಳು ಸದೃಢವಾಗುತ್ತವೆ.
ಸಮೂಲದ ಕಷಾಯವನ್ನು ಕ್ರಮಬದ್ದವಾಗಿ ಒಂದು ತಿಂಗಳು ಬೆಳಿಗ್ಗೆ ಸಂಜೆ ಸೇವಿಸುವುದರಿಂದ ಸ್ತ್ರೀಯರ ಋತಸ್ರಾವ ಸಮಸ್ಯೆಗಳು ದೂರವಾಗಿ, ಋತಚಕ್ರ ಕ್ರಮಬದ್ಧವಾಗುತ್ತೆ.
ರಾತ್ರಿ ಕನಸಲ್ಲಿ ಪುರುಷರಿಗೆ ವೀರ್ಯಸ್ಖಲನ ವಾಗುತ್ತಿದ್ದರೆ, ಕೊಮ್ಮೇಗಿಡದ ಸಮೂಲದ ಚೂರ್ಣ 1 ಚಮಚಕ್ಕೆ 1 ಚಮಚ ಕಲ್ಲುಸಕ್ಕರೆ ಅಥವಾ ತಾಟಿಬೆಲ್ಲ ಸೇರಿಸಿ 15 ದಿನಗಳ ಕಾಲ ಸೇವಿಸುತ್ತಾ ಬಂದಲ್ಲಿ, ಸ್ವಪ್ನಸ್ಖಲನ ಸಮಸ್ಯೆ ನಿವಾರಣೆಯಾಗುತ್ತೆ. ಪುನಃನವಾ ಔಷಧೀಯ ಗುಣಗಳ ಬಗ್ಗೆ ಹೇಳುತ್ತಾ ಹೋದರೆ ಸಮಯವೆ ಸಾಲುವುದಿಲ್ಲ.ಇದು ನೂರು ರೋಗಗಳಿಗೆ ರಾಮಬಾಣ. ಗೆಳೆಯರೆ ವಂದನೆಗಳು ಪಾರ್ಥಸಾರಥಿ ಕ್ಷತ್ರಿಯ

ದೈನಂದಿನ ರಾಶಿ ಭವಿಷ್ಯ | ಶನಿವಾರ, ಜೂನ್‌ 27, 2020 ದೈನಂದಿನ ರಾಶಿ ಭವಿಷ್ಯ

ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಸಪ್ತಮಿ ತಿಥಿ, ಶನಿವಾರ,
ಪೂರ್ವ ಫಾಲ್ಗುಣಿ ನಕ್ಷತ್ರ
ಬೆಳಗ್ಗೆ 10:11 ನಂತರ ಉತ್ತರ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:14 ರಿಂದ 10:50
ಗುಳಿಕಕಾಲ: ಬೆಳಗ್ಗೆ 6:01 ರಿಂದ 7:38
ಯಮಗಂಡಕಾಲ: ಮಧ್ಯಾಹ್ನ 2:02ರಿಂದ 3:38

ಮೇಷ

ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ. ನಿರ್ಲಕ್ಷ್ಯ ಮಾಡದಿರಿ.

ವೃಷಭ

ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಗುರುವಿನ ಆರಾಧನೆಯಿಂದ ಉತ್ತಮ ಫಲ ದೊರೆಯುವುದು.

ಮಿಥುನ

ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನಶೀಲರಿಗೆ ಯಶಸ್ಸು.

ಕಟಕ

ಅಪರಿಚಿತ ವ್ಯಕ್ತಿಗಳಿಂದ ಮೋಸಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಮನೆಯವರ ಸಲಹೆಗೆ ಮನ್ನಣೆ ನೀಡಿ. ಕುಲದೇವತಾ ಪ್ರಾರ್ಥನೆ ಮಾಡಿ.

ಸಿಂಹ

ನೀವು ಯೋಜಿಸಿದ ಮಹತ್ತರ ಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಉತ್ತಮ ಸಲಹೆ ಸಹಕಾರಗಳು ದೊರೆತು ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಗಣಪತಿಯ ಧ್ಯಾನ ಮಾಡಿ ಮುಂದುವರಿಯಿರಿ.

ಕನ್ಯಾ

ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲೈಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತಾನುಭವ. ಸ್ನೇಹಿತರ ಬಂಧುವರ್ಗದವರ ಅನಿರೀಕ್ಷಿತ ಭೇಟಿಯ ಸಾಧ್ಯತೆ.

ತುಲಾ

ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ರಾಜೀನಾಮೆ ನೀಡುವ ಪರಿಸ್ಥಿತಿ ತಲೆದೋರಬಹುದು. ದುಡುಕದೇ ಧೈರ್ಯವಾಗಿ ಮುನ್ನುಗ್ಗಿ. ಯಶಸ್ಸು ನಿಮ್ಮದಾಗಲಿದೆ.

ವೃಶ್ಚಿಕ

ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಮುದಗೊಳಿಸುವಿರಿ. ನಿಮ್ಮ ನಿರ್ಧಾರಗಳು ಸಮರ್ಪಕವಾಗಿದ್ದು ಬಹುಜನರ ಪ್ರಶಂಸೆಗೆ ಪಾತ್ರವಾಗುವುದು. ಯಶಸ್ಸಿನ ಅಮಲು ಉಚಿತವಲ್ಲ.

ಧನು

ಒಂಟಿತನದಿಂದ ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ. ಜೀವನಕ್ಕೊಂದು ಹೊಸ ತಿರುವು ಬರುವ ನಿರೀಕ್ಷೆ.

ಮಕರ

ಪ್ರೀತಿ ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ.

ಕುಂಭ

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು.

ಮೀನ

ಸಂಕೋಚ ಸ್ವಭಾವದಿಂದ ಹೊರ ಬಂದು ಕಾರ್ಯ ಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ತಗಾದೆಯ ಸಾಧ್ಯತೆ.

ಸಂಕ್ಷಿಪ್ತ ಭಗವದ್ಗೀತೆ

ಭಗವದ್ಗೀತೆ ಓದಬೇಕು ಅಂತ ಬಹುತೇಕ ಹಿಂದೂಗಳಿಗೆ ಆಸೆ ಇರುತ್ತದೆ. ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಗೀಕ ಎಲ್ಲ ಯಾರು ಓದ್ತಾರೆ ಅಂತ ಸುಮ್ನಾಗಿರ್ತಾರೆ. ನಿಮ್ಮಂಥವರಿಗಾಗಿಯೇ ಸರಳವಾಗಿ ಒಂದೊಂದು ಅಧ್ಯಾಯಗಳ ಸಾರವನ್ನೂ ಒಂದೆರಡು ಸಾಲಿನಲ್ಲಿ ಇಲ್ಲಿ ಕೊಡಲಾಗಿದೆ.

ಅಧ್ಯಾಯ 1: ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ
ಅರ್ಜುನನ ದುಃಖ ಇಲ್ಲಿ ಮುಖ್ಯ ವಿಷಯ. ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ. ಧರ್ಮ ಹಾಳುಗೆಡವಿದ್ದನ್ನು ನೋಡುವುದಕ್ಕಿಂತ ಅವರೆಲ್ಲ ತನ್ನ ಬಂಧುಗಳೇ. ಅವರನ್ನು ಹೇಗೆ ಕೊಲ್ಲುವುದು ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆದರೆ, ಈ ಯೋಚನೆ ತಪ್ಪು. ಧರ್ಮವು ಈ ಭವಬಂಧನಗಳಿಗಿಂತ ಹೆಚ್ಚು. ತಪ್ಪಾಗಿ ಯೋಚಿಸುವುದರಿಂದ ತಪ್ಪಾದ ತೀರ್ಪು ಹೊರಬರುತ್ತದೆ ಎಂಬುದನ್ನು ಶ್ರೀಕೃಷ್ಣ ವಿವರಿಸುತ್ತಾನೆ. ಆದರೆ, ಅರ್ಜುನನಿಗೆ ಸಮಧಾನವಾಗುವುದಿಲ್ಲ. ಆತ ಗೊಂದಲ ಹಾಗೂ ದುಃಖದಿಂದ ಕುಳಿತುಕೊಳ್ಳುತ್ತಾನೆ.

ಅಧ್ಯಾಯ 2: ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ
ಕೃಷ್ಣನು ಅರ್ಜುನನಿಗೆ ಅವನೆಲ್ಲ ದುಃಖದುಮ್ಮಾನ, ಸಮಸ್ಯೆಗಳಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಸುತ್ತಾನೆ. ಭೀಷ್ಮನಿಂದ ಹಿಡಿದು ಯಾರೊಬ್ಬರ ಆತ್ಮಗಳನ್ನೂ ನಾಶಪಡಿಸಲಾಗುವುದಿಲ್ಲ. ಹಾಗಾಗಿ ಅವರೆಲ್ಲ ಶಾಶ್ವತವಾಗಿರುತ್ತಾರೆ. ಯುದ್ಧವನ್ನು ದೂರವಿಡುವುದರಿಂದ ನಿನ್ನ ಧರ್ಮವನ್ನೇ ದೂರವಿಟ್ಟಂತಾಗುತ್ತದೆ. ಅದು ಪಾಪಕಾರ್ಯ. ಹೋರಾಡದಿದ್ದರೆ ಆತನೊಬ್ಬ ಹೇಡಿ ಎನಿಸಿಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾನೆ ಕೃಷ್ಣ.

ಅಧ್ಯಾಯ 3: ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ
ಕೃಷ್ಣ ಇಲ್ಲಿ ನಿಸ್ವಾರ್ಥ ಸೇವೆಯಾದ ಕರ್ಮಯೋಗದ ಕುರಿತು ಮಾತನಾಡುತ್ತಾನೆ. ಕರ್ಮಯೋಗಿಯು ಧರ್ಮದ ಆಧ್ಯಾತ್ಮಕ್ಕೆ ಬೆಲೆ ಕೊಟ್ಟು ತನ್ನೆಲ್ಲ ಕೆಲಸಗಳನ್ನು ದೇವರಿಗೆ ಸಮರ್ಪಿಸುತ್ತಾನೆ. ಫಲಿತಾಂಶದ ಬಗ್ಗೆ ಯೋಚಿಸದೆ ತನ್ನ ಪಾಡಿಗೆ ತಾನು ಶಾಂತಚಿತ್ತದಿಂದ ಕೆಲಸ ಮಾಡಿಕೊಂಡು ಹೋಗುತ್ತಾನೆ. ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ತಿಳಿಸುತ್ತಾನೆ.

ಅಧ್ಯಾಯ 4: ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ
ಧರ್ಮಕ್ಕೆ ಹಾನಿಯಾದಾಗ ಭಗವಂತನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಕೃಷ್ಣ ವಿವರಿಸುತ್ತಾನೆ. ಅಷ್ಟೇ ಅಲ್ಲ, ಭಗವಂತನ ಈ ಜನ್ಮ ರಹಸ್ಯವನ್ನು ಅರಿತವರು ಮೋಕ್ಷ ಪ್ರದರು ಎಂದು ತಿಳಿಸುತ್ತಾನೆ.

ಅಧ್ಯಾಯ 5: ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು
ಹೇಗೆ ಕರ್ತವ್ಯ ನಿಭಾಯಿಸುತ್ತಲೇ ಫಲದಾಸೆಯಿಲ್ಲದೆ ಸನ್ಯಾಸಿಯಂತಿರುವುದು ಎಂದು ಅರ್ಜುನ ಪ್ರಶ್ನಿಸುತ್ತಾನೆ. ಇದಕ್ಕೆ ಕೃಷ್ಣನು ನಿಜವಾದದ ಕರ್ಮಯೋಗಿಯು ಫಲಿತಾಂಶದ ಬಗ್ಗೆ ಯೋಚಿಸದೆ ಫಲವನ್ನು ದೇವರಿಗೆ ಬಿಟ್ಟು ತಾನು ಕರ್ತವ್ಯ ನಿಭಾಯಿಸುತ್ತಾನೆ. ಈ ಮನಸ್ಥಿತಿಯಿಂದಾಗಿ ಆತ ಸ್ವಯಂ ನಿಯಂತ್ರಣ ಸಾಧಿಸಿ ಅಹಂಕಾರದಿಂದ ಹೊರಬರಬಲ್ಲ ಎಂದು ಹೇಳುತ್ತಾನೆ.

ಅಧ್ಯಾಯ 6: ಧ್ಯಾನಸಾಧಕನಿಗೆ ಕರ್ಮ ಸಾಧನೆ ಸಾಧ್ಯ
ಧ್ಯಾನದ ಕುರಿತು ಇಲ್ಲಿ ಕೃಷ್ಣ ಹೇಳುತ್ತಾನೆ. ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ, ದೇಹವನ್ನೂ ಮನಸ್ಸನ್ನೂ ಬಿಗಿಹಿಡಿದು, ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿಕೊಂಡಿರಬೇಕು. ಪ್ರಯತ್ನದಿಂದಲೇ ಇಂದ್ರಿಯಗಳನ್ನೂ, ಮನಸ್ಸನ್ನು ಗೆಲ್ಲಬೇಕು ಎನ್ನುತ್ತಾನೆ.

ಅಧ್ಯಾಯ 7: ನೀನಾರು ಎಂದು ತಿಳಿದುಕೋ.
ಧ್ಯಾನ ಮಾಡುತ್ತಿರುವುದರಿಂದ ನಿನಗೆ ನೀನು ಯಾರೆಂಬುದು ಅರಿವಾಗಬೇಕು. ಜ್ಞಾನಿಯು ನನ್ನಲ್ಲಿ ಲೀನನಾಗುತ್ತಾನೆ ಎಂಬ ತತ್ವ ಬೋಧಿಸುತ್ತಾನೆ.

ಅಧ್ಯಾಯ 8: ಪ್ರಯತ್ನ ಬಿಡಬೇಡ
ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರುವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಪ್ರಯತ್ನ ಬಿಡಕೂಡದು ಎಂದು ಹೇಳುತ್ತಾನೆ.

ಅಧ್ಯಾಯ 9: ದೇವರ ಧ್ಯಾನದಿಂದ ನನ್ನ ಸೇರಬಹುದು
ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ ತುಂಬಿರುವುದು. ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು, ಆದರೆ ನಾನು ಅವುಗಳಲ್ಲಿ ಇಲ್ಲ.ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ, ನಾನು ಅವರ ಯೋಗಕ್ಷೇಮ ಹೊರೆ ಹೊರುತ್ತೇನೆ ಎನ್ನುತ್ತಾನೆ.

ಅಧ್ಯಾಯ 10: ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ
ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ.

ಅಧ್ಯಾಯ 11: ವಿಶ್ವರೂಪ ದರ್ಶನ
ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿ ಅರ್ಜುನ ಬೆರಗಾಗಿ ಶರಣಾಗುತ್ತಾನೆ. ಸತ್ಯವನ್ನು ಅರಿಯದಿದ್ದುದಕ್ಕೆ ಕ್ಷಮೆ ಯಾಚಿಸುತ್ತಾನೆ.

ಅಧ್ಯಾಯ 12: ವೈರಾಗ್ಯದಿಂದ ಧ್ಯಾನಿಸುವವರೇ ಯೋಗಿ
ಯಾರು ಭಗವಂತನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ವಿಶ್ವರೂಪವನ್ನು ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರು ಹೆಚ್ಚಿನ ಯೋಗಿಗಳು. ವಿವೇಕ ವೈರಾಗ್ಯಗಳಿಂದ ಅದನ್ನು ಅಭ್ಯಾ ಸಮಾಡಬೇಕು. ಅದು ಕಷ್ಟವಾದರೆ, ಭಗವಂತನ ಪ್ರೀತ್ಯರ್ಥವಾಗಿ ಕರ್ಮಗಳನ್ನು ಮಾಡು. ಅದೂ ಕಷ್ಟವಾದರೆ. ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು ಎನ್ನುತ್ತಾನೆ.

ಅಧ್ಯಾಯ 13: ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು
ಈ ಬ್ರಹ್ಮಾಂಡವೇ ಒಂದು ಮಾಯೆ. ಇವೆಲ್ಲದರ ಸೃಷ್ಟಿಕರ್ತ ಬ್ರಹ್ಮನಾಗಿದ್ದು,ಅವನು ಪ್ರತಿಯೊಂದು ಅಣುರೇಣತೃಣಕಾಷ್ಟಗಳಲ್ಲೂ ನೆಲೆಸಿದ್ದಾನೆ. ನಿನ್ನೊಳಗೂ ಆತ ಇರುವುದನ್ನು ಅರ್ಥ ಮಾಡಿಕೊಂಡು ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಜೀವಿಸು ಎಂದು ಕೃಷ್ಣ ವಿವರಿಸುತ್ತಾನೆ.

ಅಧ್ಯಾಯ 14: ನಿನ್ನದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ
ಎಲ್ಲರಲ್ಲೂ ಮೂರು ಗುಣಗಳಿರುತ್ತವೆ. ಸಾತ್ವಿಕ ಗುಣವು ಬೆಳಕಿನ, ಸುಖದ, ವಿಚಾರದ ರೂಪ, ರಜೋಗುಣವು ಪ್ರೀತಿ, ಬಯಕೆ ಅಹಂಕಾರದ ಕ್ರಿಯಾಶೀಲ ರೂಪ, ತಮವು ಅಜ್ಞಾನ, ತಪ್ಪು ತಿಳುವಳಿಕೆ, ಆಲಸ್ಯದ ರೂಪ. ಇವುಗಳಲ್ಲಿ ಶಕ್ತವಾದ ಗುಣ ಆತ್ಮವನ್ನು ಕಟ್ಟಿಹಾಕುತ್ತದೆ. ಎಲ್ಲರಲ್ಲಿಯೂ ಇಷ್ಟೂ ಗುಣಗಳಿದ್ದರೂ ಒಂದು ಗುಣ ಮೇಲುಗೈ ಸಾಧಿಸುವುದು. ಸಾತ್ವಿಕ ಗುಣದವನು ಮೋಕ್ಷ, ರಾಜಸಿಕ ಗುಣದವನು ಪುನರ್ಜನ್ಮ ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ.

ಅಧ್ಯಾಯ 15: ದೈವಿಕತ್ವಕ್ಕೆ ಬೆಲೆ ಕೊಡು
ಈ ಪ್ರಾಪಂಚಿಕ ಜೀವನದಲ್ಲಿ ನಾವು ಹೇಗೆ ಸಾವು ಹಾಗೂ ಪುನರ್ಜನ್ಮಗಳ ಮಧ್ಯೆ ಸಿಲುಕಿದ್ದೇವೆ ಎಂಬುದನ್ನು ಕೃಷ್ಣ ಅರ್ಜುನನಿಗೆ ಅರ್ಥ ಮಾಡಿಸುತ್ತಾನೆ. ಆತ ಸಂಸಾರವನ್ನು ತಲೆಕೆಳಗಾದ ಅರಳಿ ಮರಕ್ಕೆ ಹೋಲಿಸಿ ಮಾತನಾಡುತ್ತಾನೆ. ಪಾಪ ಪುಣ್ಯಗಳ ಕರ್ಮಗಳನ್ನು ಅಂಟಿಸುವ ಒಳ ಬೇರುಗಳು ಮೇಲಕ್ಕೂ ಕೆಳಕ್ಕೂ ಹರಡಿಕೊಂಡಿದೆ. ಸುಖದ ಬಯಕೆಗಳೆ ಅದರ ಚಿಗುರುಗಳು. ಇದು ಆದಿ ಅಂತ್ಯವಿಲ್ಲದ್ದು. ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು. ದೈವಿಕತ್ವಕ್ಕೆ ಬೆಲೆ ಕೊಟ್ಟಾಗ ಇದು ಸಾಧ್ಯ ಎಂದು ಕೃಷ್ಣ ಮನ ಮುಟ್ಟುವಂತೆ ಹೇಳುತ್ತಾನೆ.

ಅಧ್ಯಾಯ 16 : ಉತ್ತಮನಾಗಿರುವುದೇ ವರ
ಸಿಟ್ಟು, ಕ್ರೂರತೆ, ಅಜ್ಞಾನ, ಅಪ್ರಾಮಾಣಿಕತೆ, ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಾಶ ಮಾಡುತ್ತವೆ. ಆದರೆ ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣ ಮುಂತಾದ ಸದ್ಗುಣಗಳು ಜ್ಞಾನಕ್ಕೆ ಕಾರಣವಾಗಿ ಸ್ವತಂತ್ರರನ್ನಾಗಿಸುತ್ತದೆ.

ಅಧ್ಯಾಯ 17: ಮೇರು ಸತ್ಯ
ಇಲ್ಲಿ ಕೃಷ್ಣ ಓಂ ತತ್ ಸತ್ ಮಂತ್ರದ ಮಹತ್ವ ಹೇಳುತ್ತಾನೆ. ಇದರ ಅರ್ಥ ಮೇರು ಸತ್ಯ ಎಂದು. ಓಂನಾಮದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ, ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಎಂದು ವಿವರಿಸುತ್ತಾನೆ.

ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ
ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸಂನ್ಯಾಸ, ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ ಎಂದು ಹೇಳುವ ಕೃಷ್ಣನು, ಕರ್ಮಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯವಾಗಲು ದಾರಿ ತೋರುತ್ತದೆ ಎಂದು ವಿವರಿಸುತ್ತಾನೆ.
🙏ಕೃಷ್ಣಾರ್ಪಣಮಸ್ತು 🙏

ಇಂದಿನ ಔಷಧೀಯ ಸಸ್ಯ : ಪೇರಳೆ ಯಾ ಸೀಬೆಕಾಯಿ

ಅಮೃತಾ ಫಲಂ ಪೇರಳೆ,ಸೀಬೆಕಾಯಿ,ಚೇಪೆಕಾಯಿ,ಸೀಬೆ ಹಣ್ಣು,ಜಾಮುಕಾಯಿ,ಕೊಯ್ಯ ಫಳಮ್,ಗುವ, ಅಮೃದ್, ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೆರೆ ಕಟ್ಟೆಗಳ ಮೇಲೆ,ಹೊಲ,ಗದ್ದೆಗಳ ಬದಿಗಳ ಮೇಲೆ,ಕೆಲವು ಕಡೆ ತೋಟಗಳಲ್ಲಿ ವಿರಳವಾಗಿ ಬೆಳೆಯುತ್ತಿದ್ದ ಸೀಬೆಹಣ್ಣು ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು,ಈಗ ಎಲ್ಲೆಲ್ಲೂ ವಾಣಿಜ್ಯ ಬೆಳೆಯಾಗಿ ಹೇರಳವಾಗಿ ಬೆಳೆದು ಅಪಾರ ಲಾಭ ಗಳಿಸುತ್ತಿದ್ದಾರೆ. ಸೀಬೆ ಎಲೆಗಳನ್ನು ತಂದು,ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ದಿನಕ್ಕೆ 50ml ನಂತೆ ಸೇವಿಸುತ್ತಿದ್ದರೆ,

ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.ದೇಹದ
ತೂಕ ಇಳಿಯುತ್ತದೆ.ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತೆ.ರಕ್ತದ್ಲಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತೆ. ಜೀರ್ಣಕ್ರಿಯೆ ಚೆನ್ನಾಗಾಗಿ, ಹೊಟ್ಟೆಯಲ್ಲಿನ ಹುಣ್ಣನ್ನು
ಗುಣಪಡಿಸುತ್ತೆ.
2 ಸೀಬೆ ಎಲೆ 2 ಮಾವಿನ ಎಲೆ 2 ನೇರಳೆ ಎಲೆ 10 ತುಳಸಿ ಎಲೆ 4 ದೊಡ್ಡ ಪತ್ರೆ 200ml ನೀರಿನಲ್ಲಿ ಹಾಕಿ ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 50ml ಆದಾಗ ಕೆಳಗಿಳಿಸಿ ಸೋಸಿ, ಉಗರು ಬೆಚ್ಚಗಾದಾಗ 2 ಚಮಚ ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ, ದಿನಕ್ಕೆ ಮೂರು ಬಾರಿ ಸೇವಿಸಿದರೆ,ನೆಗಡಿ,ಕೆಮ್ಮು,ಕಫ,ವಾತ, ಪಿತ್ತ,ಜ್ವರ,ಅಜೀರ್ಣ ಸಮಸ್ಯೆ ಗುಣವಾಗುತ್ತೆ.ಒಣ ಕೆಮ್ಮು, ಅಸ್ತಮಾ ಸಹಾ ವಾಸಿಯಾಗುತ್ತೆ.
ತೊಗಟೆಯನ್ನು ಗಂಧ ತೇಯ್ದು ಬಾವು,
ಗಾಯ, ಹುಣ್ಣುಗಳ ಮೇಲೆ ಲೇಪನ ಮಾಡಿದರೆ
ವಾಸಿಯಾಗುತ್ತೆ.
ಸೀಬೆ ಹಣ್ಣಿನಲ್ಲಿ ನಾರಿನಾಂಶ ಅಧಿಕವಿದ್ದು,
ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯಿಂದ
ಮುಕ್ತಿಹೊಂದಬಹುದು.ಹಸಿಕಾಯಿ ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ.ಸೀಬೆಕಾಯಿ
ರಸ ತೆಗೆದು ಅದಕ್ಕೆ ಜೇನುತುಪ್ಪ ಕಲಸಿ ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಿ, ಹೃದಯವನ್ನು
ಗಟ್ಟಿಗೊಳಿಸುತ್ತೆ.
ಕಣ್ಣು ನೋವು, ಕಣ್ಣು ಕೆಂಪಗೆ ಇದ್ದಾಗ ಸೀಬೆ ಹೂವಿನ ರಸ ಹಿಂಡಿ, ಅದನ್ನು ಹರಳೆಣ್ಣೆಯಲ್ಲಿ ರಂಗಳಿಸಿ, ಕಣ್ಣಿಗೆ ಎರಡು ಮೂರು ತೊಟ್ಟು ಬಿಟ್ಟರೆ ಶೀಘ್ರ ವಾಸಿಯಾಗುತ್ತೆ.
ವಸಡುಗಳಲ್ಲಿ ಬಲವಿಲ್ಲದೆ ಹಲ್ಲುಗಳು ಅಲ್ಲಾಡುವುದು, ವಸುಡುಗಳಲ್ಲಿ ರಕ್ತ ಸುರಿಯುವಾಗ ಸೀಬೆ ದ್ವಾರಕಾಯಿಯನ್ನು ಜಗಿದು ತಿನ್ನುತ್ತಿದ್ದರೆ,
ವಸಡುಗಳು ಬಲಗೊಂಡು ದಂತಪಂಕ್ತಿ ಗಟ್ಟಿಯಾಗಿ
ರಕ್ತಸ್ರಾವ ನಿಲ್ಲುತ್ತೆ.
ಹಸಿ ಸೀಬೆಕಾಯಿಯನ್ನು ಜಜ್ಜಿ 200ml ನೀರು ಹಾಕಿ ಚೆನ್ನಾಗಿ ಕುದಿಸಿ, 50ml ನೀರಾದಾಗ ಕೆಳಗಿಳಿಸಿ, ಸೋಸಿ ಉಗರು ಬೆಚ್ಚಗಾದಾಗ ಮಜ್ಜಿಗೆಯಲ್ಲಿ ಕಲಸಿ ಕುಡಿದರೆ, ಅತಿಸಾರ ಭೇದಿ, ವಾಂತಿ ನಿಲ್ಲುತ್ತೆ.
1ಚೆನ್ನಾಗಿ ಹಣ್ಣಾಗಿರುವ ಸೀಬೆ ಹಣ್ಣಿನ ರಸ ತೆಗೆದು,(ಬೀಜ ಬಿಸಾಕಿ) ಸೋಸಿದ ರಸಕ್ಕೆ 2 ಚಮಚ
ಜೇನುತುಪ್ಪ ಕಲಸಿ, ಅದನ್ನು ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಬಲಹೀನತೆ ದೂರವಾಗುತ್ತೆ.ಇದರಲ್ಲಿ ವಿಟಮಿನ್ C ಇದ್ದು,ದೇಹಕ್ಕೆ ಕ್ಯಾಲ್ಸಿಯಂ ಅಧಿಕವಾಗಿ ದೊರೆಯುತ್ತದೆ.
(ಗರ್ಭಿಣಿಯರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಟಾನಿಕ್ ನಂತೆ ಅದ್ಭುತವಾಗಿ ಕೆಲಸ ಮಾಡುತ್ತೆ)
ಇದು ಹೃದಯ ಬಲ ಹೀನತೆ, ಜೀರ್ಣಕ್ರಿಯೆ,
ಮೂತ್ರದಲ್ಲಿನ ಉರಿ ಮುಂತಾದ ಸಮಸ್ಯೆಗಳಿಗೂ ಅದ್ಭುತವಾಗಿ ಕೆಲಸ ಮಾಡುತ್ತೆ.
ಸೀಬೆಯಲ್ಲಿ ಔಷಧೀಯ ಭಂಡಾರವೆ ತುಂಬಿದೆ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ ವಂದನೆಗಳು

ದೈನಂದಿನ ರಾಶಿ ಭವಿಷ್ಯ | ಶುಕ್ರವಾರ, ಜೂನ್‌ 26, 2020 ದೈನಂದಿನ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಬೆಳಗ್ಗೆ 7:04 ನಂತರ ಷಷ್ಠಿ ತಿಥಿ,
ಶುಕ್ರವಾರ, ಮಖ ನಕ್ಷತ್ರ,
ಬೆಳಗ್ಗೆ 11:25 ನಂತರ ಪೂರ್ವಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 11:50 ರಿಂದ 12:26
ಗುಳಿಕಕಾಲ: ಬೆಳಗ್ಗೆ 7:38 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:38 ರಿಂದ 5:14

ಮೇಷ

ಕುಟುಂಬ ಸದಸ್ಯರಲ್ಲಿನ ಭಿನ್ನಮತದಿಂದಾಗಿ ಬೇಸರದ ವಾತಾವರಣ. ಹಿರಿಯರ, ಹಿತೈಷಿಗಳ ಮಧ್ಯಪ್ರವೇಶದಿಂದಾಗಿ ಎಲ್ಲವೂ ನಿರ್ಧಾರಕ್ಕೆ ಬರಲಿದೆ. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿಂಜರಿಕೆ.

ವೃಷಭ

ಸಂಯಮದಿಂದ ಕಾರ್ಯ ಪ್ರವೃತರಾಗಿ. ಸಾಂಸಾರಿಕವಾಗಿ ತಲೆದೋರಿರುವ ಏರಿಳಿತಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಗುರುಹಿರಿಯರ ಸಕಾಲಿಕ ನೆರವಿನಿಂದ ಸಂತಸದ ಕ್ಷಣಗಳು ನಿಮ್ಮದಾಗುವವು.

ಮಿಥುನ

ನಿಮ್ಮ ಮುಂದಾಳುತನದ ಬಗ್ಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುವುದು. ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ. ಯಶಸ್ಸಿನ ಅಮಲಿನಲ್ಲಿ ಸಂಸಾರದ ಬಗ್ಗೆ ಅವಗಣನೆ ಸಲ್ಲ.

ಕಟಕ

ನಿಮ್ಮ ಬಹುದಿನದ ಕೆಲಸ–ಕಾರ್ಯಗಳು ಕ್ಷಿಪ್ರಗತಿಯಲ್ಲಿ ಮುಗಿದು ಮನಸ್ಸಿಗೆ ನೆಮ್ಮದಿ. ಆರ್ಥಿಕ ರಂಗದಲ್ಲಿಯೂ ಉತ್ತಮ ಪ್ರಗತಿಯನ್ನು ಹೊಂದಿ ನೆಮ್ಮದಿ ನೆಲೆಸುವುದು. ಮನೆಯಲ್ಲಿ ಹಬ್ಬದ ವಾತಾವರಣ.

ಸಿಂಹ

ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಯೋಜಿತ ಕ್ರಮದಂತೆ ಸುಗಮವಾಗಿ ಕೈಗೂಡುವುದು. ಮನಸ್ಸಿಗೆ ನೆಮ್ಮದಿ ದೊರೆತು ನಿರಾಳವಾಗುವಿರಿ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಕೇಳುವ ಅವಕಾಶ.

ಕನ್ಯಾ

ನಿಮ್ಮ ಧಾರ್ಮಿಕ ನಡೆಯ ಬಗ್ಗೆ ಇತರರಲ್ಲಿ ಅಚ್ಚರಿ ಮೂಡುವುದು. ಹೊಸ ವಿಚಾರವೊಂದು ಮನದಲ್ಲಿ ಮೂಡಿ ಚಿಂತನೆಗೆ ಹಚ್ಚಲಿದೆ. ಸಮತೋಲನ ದೃಷ್ಟಿಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

ತುಲಾ

ಪರಿಸ್ಥಿತಿ ನಿಮಗೆ ವಿರೋಧವಾಗಿರುವುದರ ಜೊತೆಗೆ ಮಕ್ಕಳ ನಡೆ ನುಡಿಗಳಿಗೆ ನೀವು ತಲೆ ತಗ್ಗಿಸುವ ಸಂದರ್ಭ ಒದಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ. ಕುಲದೇವತಾ ಆರಾಧನೆಯಿಂದ ನೆಮ್ಮದಿ.

ವೃಶ್ಚಿಕ

ನಿಮ್ಮ ಕೆಲಸ–ಕಾರ್ಯಗಳು ಎಂದಿನಂತೆ ಸುಗಮವಾಗಿ ಸಾಗಲಿದೆ. ಆದರೆ ಅನ್ಯರ ಅನಪೇಕ್ಷಿತ ಹಸ್ತಕ್ಷೇಪದಿಂದ ಮಾನಸಿಕ ಕಿರಿಕಿರಿ. ಸಂಯಮದಿಂದ ಹಸ್ತಕ್ಷೇಪವನ್ನು ಗಡೆಗಣಿಸುವುದು ಉತ್ತಮ.

ಧನು

ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಆಯ್ಕೆ ದೊರೆಯುವುದು. ಕ್ಷಿಪ್ರ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದಿನದಾಂತ್ಯಕ್ಕೆ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ.

ಮಕರ

ಬಾಹ್ಯ ಸೌಂದರ್ಯದ ಸೆಳೆತದಿಂದಾಗಿ ಸಂಕಟಗಳು ಎದುರಾಗುವ ಸಾಧ್ಯತೆ. ಮನೋವೃತ್ತಿಯ ಮೇಲೆ ಹಿಡಿತ ಸಾಧಿಸಿ. ದಿನನಿತ್ಯದ ಕಾರ್ಯಗಳಲ್ಲಿ ಗಮನ ವಹಿಸುವುದು ಉತ್ತಮ. ಸಂಗಾತಿ ಮಾತಿಗೆ ಮನ್ನಣೆ ನೀಡಿ.

ಕುಂಭ

ಕಾವ್ಯ, ಕವನಗಳ ಬರವಣಿಗೆಯಲ್ಲಿ ಆಸಕ್ತಿ ಮೂಡುವುದು. ನಿಮ್ಮ ಮೇಲಿನ ಎಲ್ಲ ಆಪಾದನೆಗಳಿಂದ ಮುಕ್ತಿಪಡೆದು ಅಭಿಮಾನಕ್ಕೆ ಪಾತ್ರರಾಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮೀನ

ಕೆಲಸ-ಕಾರ್ಯಗಳಲ್ಲಿ ಹೊಸತನ, ಉತ್ಸಾಹಗಳು ಮೂಡಿಬರಲಿವೆ. ವೈದ್ಯಕೀಯ ವಲಯದಲ್ಲಿರುವವರಿಗೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಧನಪ್ರಾಪ್ತಿ. ಹೊಸ ಹೊಸ ಸ್ನೇಹಿತರಿಂದ ಹೊಸ ವಿಚಾರಗಳ ಬಗ್ಗೆ ತಿಳಿವಳಿಕೆ.

ಇಂದಿನ ಸಸ್ಯ ಪರಿಚಯ: ಚಿತ್ರಕ ಅಥವಾ ಚಿತ್ರಮೂಲ

ಚಿತ್ರಮೂಲಿಕಾ ಚಿತ್ರಮೂಲಮು ಹುತಾಶನ ಅಗ್ನಿಪಾವಕ ವಹ್ನಿಮೂಲ ಅಗ್ನಿಮೂಲ ಕೊಡಿವೇಲಿ ಅಧಿನಾರಿ ಅಧಿಮಹಾಮೂಲಿ ಕೂರಿಯವಹ್ನಿ ಕುಡನಾವಿ ವಹ್ನಿಪ್ರಿಯ ಎಂಬ ಹೆಸರುಗಿಂದ ಕರೆಯುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ ಬೀಳು ಭೂಮಿ ಪಾಳು ಜಮೀನು ಕೆರೆ ಕಟ್ಟೆಗಳ ಮೇಲೆ ರಸ್ತೆ ಪಕ್ಕದಲ್ಲಿ ಬೇಲಿಗಳಲ್ಲಿ ಧಾರಾಳವಾಗಿ ಬೆಳೆಯುತ್ತದೆ.
ಚಿತ್ರಮೂಲದಲ್ಲಿ ಐದಾರು ಪ್ರಭೇದಗಳಿವೆ ಎಂದು ಪುರಾತನ ಆಯುರ್ವೇದ ಗ್ರಂಥಗಳಲ್ಲಿ ಹೇಳಿದ್ದಾರೆ ಆದರೆ….! ಸದ್ಯಕ್ಕೆ ಲಭ್ಯವಿರುವುದು ಯತೇಚ್ಚವಾಗಿ ಬಿಳಿ ಚಿತ್ರಮೂಲ,ವಿರಳವಾಗಿ ನೀಲಿ ಹಾಗೂ ಕೆಂಪು ಚಿತ್ರಮೂಲ ಕಾಣಬಹುದು.ತಾಳೆಗರಿ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಕಪ್ಪು ಹಾಗೂ ಹಳದಿ ಚಿತ್ರಮೂಲಗಳು ಖಚಿತವಾಗಿ ತಿಳಿದು ಬಂದಿಲ್ಲ.
ಪುರಾತನ ಕಾಲದಿಂದಲೂ ಆಯುರ್ವೇದ ಯುನಾನಿ ನಾಟಿ ವೈದ್ಯ ಪದ್ದತಿಯಲ್ಲಿ ಚಿತ್ರಮೂಲಸಸ್ಯವನ್ನು ಔಷಧಿಯಾಗಿ ಬಳಸುತ್ತಾ ಬಂದಿದ್ದಾರೆ.
ಚಿತ್ರಮೂಲದ ಬೇರು ಚರ್ಮಕ್ಕೆ ತಾಕಿದರೆ ದದ್ದುಗಳು ಬರುತ್ತೆ, ಶುದ್ಧಿ ಮಾಡದೆ ಹೊಟ್ಟೆಗೆ ತೆಗಿದುಕೊಂಡರೆ ಜಠರ ಹಾಗೂ ಕರಳುಗಳು ಸುಟ್ಟು ಹೋಗುತ್ತವೆ.
ಶುದ್ಧಿ ಮಾಡುವ ವಿಧಾನ:-1 ನಿಂಬೆಹಣ್ಣಿನ ರಸದಲ್ಲಿ 3 ದಿನಗಳ ಕಾಲ ನೆನಸಿಟ್ಟು, ಹೊರ ತೆಗೆದು ಚೆನ್ನಾಗಿ ತೊಳೆದು ನೆರಳಲ್ಲಿ ಒಣಗಿಸಿದರೆ ಶುದ್ದಿಯಾಗುತ್ತೆ.
ವಿಧಾನ 2.ಎರಡು ದಿನಗಳ ಕಾಲ ಸುಣ್ಣದ ತಿಳಿನೀರಿನಲ್ಲಿ ನೆನಸಿಟ್ಟು, ಆಮೇಲೆ ಹೊರಗಡೆ ತೆಗೆದು ಚೆನ್ನಾಗಿ ತೊಳೆದು ನೆರಳಲ್ಲಿ ಒಣಗಿಸಿದರೆ ಶುದ್ದಿಯಾಗುತ್ತೆ.
ಶುದ್ಧಿ ಮಾಡಿದ ಬೇರಿನ ಚೂರ್ಣವನ್ನು 1 ಚಮಚದಂತೆ ಬಿಸಿನೀರಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಎಂತಹ ಅಜೀರ್ಣ ಸಮಸ್ಯೆ ಇದ್ದರು ಗುಣವಾಗುತ್ತೆ.ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ ಮೂಲಿಕೆ.
ಹೆಂಗಸರಲ್ಲಿ ಋತುಶ್ರಾವ ವಿಪರೀತ ಇದ್ದರೂ, ಏರುಪೇರು ಇದ್ದರೂ, ಅನಿಯಮಿತವಿದ್ದರೂ 1 ಚಮಚ ಚೂರ್ಣವನ್ನು ನಾಟಿ ಕೋಳಿ ಮೊಟ್ಟೆಯ ಬಿಳಿಯ ಲೋಳೆಯೊಂದಿಗೆ ಕಲಸಿ ದಿನ ಬೆಳಿಗ್ಗೆ ಸಂಜೆ ಸೇವಿಸುತ್ತಾ ಬಂದರೆ ಶೀಘ್ರ ಅತೋಟಿಗೆ ಬರುತ್ತದೆ.
ಚಿತ್ರಮೂಲದ ಬೇರಿನ ಚೂರ್ಣ 3 ಚಮಚ,ಪುನಃನವಾ(ಕೊಮ್ಮೆ) ಬೇರಿನ ಚೂರ್ಣ 3 ಚಮಚ, ಅಮೃತಬಳ್ಳಿ ಸಮೂಲ ಚೂರ್ಣ 3 ಚಮಚ, ಆನೆ ನೆಗ್ಗಿಲು ಕಾಯಿ ಚೂರ್ಣ 3 ಚಮಚ, ಚೆನ್ನಾಗಿ ಮಿಶ್ರಣ ಮಾಡಿ,200ml ನೀರಿನಲ್ಲಿ 5 ಗ್ರಾಂ ಮಿಶ್ರಣ ಕಲಸಿ ಚೆನ್ನಾಗಿ ಕುದಿಸಿ 1/4 ಭಾಗವಾದಾಗ ಬೆಳಿಗ್ಗೆ ಸಂಜೆ 25ml ನಂತೆ ಸೇವಿಸಿದರೆ ಕಾಲುಗಳ ಊತ, ನರಗಳ ಊತ ವಾಸಿಯಾಗುತ್ತೆ.
ಚಿತ್ರಮೂಲದ ಬೇರಿನ 1/4 ಚಮಚ ಚೂರ್ಣವನ್ನು 1 ಲೋಟ ಮಜ್ಜಿಗೆಯಲ್ಲಿ ಕಲಸಿ ದಿನವೂ ಸೇವಿಸುತ್ತಾ ಬಂದರೆ ಮೂಲವ್ಯಾಧಿ ವಾಸಿಯಾಗುತ್ತೆ.
ಶುದ್ಧಿ ಮಾಡಿದ ಚಿತ್ರಮೂಲದ ಚೂರ್ಣವನ್ನು ನಾಟಿ ಹಸುವಿನ ಗಂಜಲದಲ್ಲಿ ಕಲಸಿ ಸೇವಿಸುತ್ತಾ ಬಂದರೆ ಮುಖ ಹಾಗೂ ದೇಹ ಕಾಂತಿಯಿಂದ ಹೊಳೆಯುತ್ತದೆ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು

ಲಾಕ್‌ಡೌನ್‌ ಪುನಃ ಜಾರಿಮಾಡಬಾರದು ಎಂದಾದರೆ, ಸಾಮಾಜಿಕ ಅಂತರ, ಮುಂಜಾಗ್ರತೆ ವಹಿಸಿ’ – ಸಿಎಂ ಬಿಎಸ್‌ವೈ

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಮತ್ತೊಮ್ಮೆ ಲಾಕ್‌ಡೌನ್‌‌‌‌‌‌‌‌‌ ಜಾರಿ ಮಾಡಬಾರದು ಎಂದರೆ, ಸಾಮಾಜಿಕ ಅಂತರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ನಾಗರಿಕರು ಸಹಕರಿಸುವಂತೆ ಮುಂಖ್ಯಮಂತ್ರಿ ಬಿಎಸ್‌ವೈ ಅವರು ಕೇಳಿಕೊಂಡಿದ್ದಾರೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ಲಾಕ್‌ಡೌನ್‌‌ ಆಗುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಸುಳಿವು ನೀಡಿದ ಹಿನ್ನೆಲೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್‌ವೈ ಅವರು, ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಸಚಿವರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ಮುಂದುವರಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಒಟ್ಟು 1,685 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 418 ಮಂದಿ ಗುಣಮುಖರಾಗಿದ್ದು, 75 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ನಗರದಾದ್ಯಂತ 500ಕ್ಕೂ ಅಧಿಕ ಕಂಟೈನ್ಮೆಂಟ್‌‌‌ ವಲಯಗಳಿದ್ದು, ಕಳೆದ 24 ಗಂಟೆಯಲ್ಲಿ 170ಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಎಂ ಬಿಎಸ್‌ವೈ ಹೇಳಿದರು.

ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಲ್ಲದೇ, ಕೆಲವು ಪ್ರದೇಶಗಳನ್ನು ಸೀಲ್‌ಡೌನ್‌‌‌‌‌ ಮಾಡಿದ್ದೇವೆ. ಮಂತ್ರಿಗಳ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದು, ಇದನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,000 ದಾಟಿದ್ದು, ಈ ಪೈಕಿ ಒಟ್ಟು 164 ಮಂದಿ ಸಾವನ್ನಪ್ಪಿದ್ದಾರೆ. 6,151 ಮಂದಿ ಗುಣಮುಖರಾಗಿದ್ದಾರೆ. ಮೇ 31ರಂದು ಲಾಕ್‌ಡೌನ್‌‌ -4ರ ಸಂದರ್ಭ ಕರ್ನಾಟಕದಲ್ಲಿ 3,200 ಕೊರೊನಾ ಪ್ರಕರಣಗಳೂ ವರದಿಯಾಗಿತ್ತು. ಇದರಲ್ಲಿ ಬೆಂಗಳೂರಿನಲ್ಲಿ 350ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ. ಜೂನ್‌‌ 24ರಂದು ಅನ್‌ಲಾಕ್‌ -1ರ ವೇಳೆ ಕರ್ನಾಟಕದಲ್ಲಿ ಕೊರೊನಾ ಪ್ರಕರಣವು 10,000 ದಾಟಿದ್ದು, ಬೆಂಗಳೂರಿನಲ್ಲಿ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟು 1,600 ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚೆ ಮಾಡಲು ಸಿಎಂ ಬಿಎಸ್‌ವೈ ಅವರು ಸೋಮವಾರ ತುರ್ತು ಸಭೆ ಕರೆದಿದ್ದು, ಅಧಿಕ ಸೋಂಕು ಪತ್ತೆಯಾಗಿರುವ ಕ್ಲಸ್ಟರ್‌ಗಳಲ್ಲಿ ಲಾಕ್‌ಡೌನ್‌ನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದೇ ರೀತಿ ಬೆಂಗಳೂರಿನಾದ್ಯಂತ ಕ್ಲಸ್ಟರ್‌ಗಳಲ್ಲಿ ಕಟ್ಟುನಿಟ್ಟಾದ ಲಾಕ್‌‌ಡೌನ್‌‌‌‌‌ ಕ್ರಮಗಳನ್ನು ಜಾರಿಗೆ ತರಲಾಗಿದ್ದರೂ, ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೊನಾ ವೈರಸ್‌‌ ವ್ಯಾಪಿಸುವುದನ್ನು ಪರಿಶೀಲಿಸುವ ಸಲುವಾಗಿ ನಗರದ ಕೆ.ಆರ್‌.ಮಾರ್ಕೆಟ್‌‌‌‌ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಬಿಬಿಎಂಪಿ 15 ದಿನಗಳವರೆಗೆ ಸೀಲ್‌ಡೌನ್‌‌ ಮಾಡಿದೆ.

ಎಸ್‌‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ತಮ್ಮು ಉಜ್ವಲ ಭವಿಷ್ಯಕ್ಕಾಗಿ ಪರೀಕ್ಷೆ ಬರೆಯಬೇಕಾಗಿದೆ ಎಂದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ ಸಿ.ಎನ್.ಅಶ್ವಥಾ ನಾರಾಯಣ್, ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್‌.ಅಶೋಕ್‌‌‌, ವಿ.ಸೋಮಣ್ಣ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಭೈರತಿ ಬಸವರಾಜ್‌‌‌‌, ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌‌ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಾಪ್ ಸಿಂಹ ನಾಯಕ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ- ಶಾಸಕ ಶ್ರೀ ಕೆ ರಘುಪತಿ ಭಟ್

ಪ್ರತಾಪ್ ಸಿಂಹ ನಾಯಕ್ ಪಕ್ಷದ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರಾಗಿದ್ದವರು, ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅಂತವರಿಗೆ ಸ್ಥಾನಮಾನ ನೀಡುತ್ತಿರುವ ಘಟನೆಗಳು ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಸಾಧ್ಯ. ಭಾರತೀಯ ಜನತಾ ಪಕ್ಷಕ್ಕೆ ವಿಧಾನಪರಿಷತ್ತಿಗೆ ಪ್ರತಾಪ್ ಸಿಂಹ ನಾಯಕ್ ದೊಡ್ಡ ಆಸ್ತಿ ಯಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ ಶಾಸಕರು ವಿಶೇಷವಾಗಿ ಶುಭ ಹಾರೈಸಿದರು.

ಇಂದು ದಿನಾಂಕ 25-06-2020 ರಂದು ಜಿಲ್ಲಾ ಬಿಜೆಪಿ ವತಿಯಿಂದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ನಾಯಕ್ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಕಲ್ಮಾಡಿ, ಸದಾನಂದ ಉಪ್ಪಿನಕುದ್ರು ಮತ್ತು ನಗರಸಭಾ ಸದಸ್ಯರು, ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Design a site like this with WordPress.com
Get started