ಇಂದಿನ ಔಷಧೀಯ ಸಸ್ಯ ಪರಿಚಯ : ಹಂಗರಿಕೆ

ಅಲಿಯರ್ ,ಸನ್ನತಾ,ರಸನ ,ಅಂದರುಗಿಡ,ಬಂದರಿಗಿಡ ,ಅಂದರುಕೆ, ವಿರಾಳಿ, ಬಂದರು ಚೆಟ್ಟು ,ಗೊಲ್ಲಪುಲ್ಲೇಡ ,ಬಂದುರಿಕೆ, ವೇಲರಿ, ಹಂಗರ ,ಹಂಗರಿಕೆ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ಗಿಡವು ಬಯಲು ಸೀಮೆಯಲ್ಲಿ ಹೇ’ರಳವಾಗಿ ಕಂಡು ಬರುತ್ತೆ.ಕುರಚಲು ಕಾಡುಗಳು, ಬೆಟ್ಟ ಗುಡ್ಡಗಳು ಪಾಳು ಭೂಮಿ ಬಂಜರು ಭೂಮಿಯಲ್ಲಿ ಪೊದೆಯಂತೆ 3 ರಿಂದ 5 ಅಡಿ ಬೆಳೆಯುತ್ತೆ.
ಹಳ್ಳಿಗಳಲ್ಲಿ ಮನೆಹಟ್ಟಿ,ದನದ ಕೊಟ್ಟಿಗೆ,
ಕಣದ ಕಸ ಗುಡಿಸಲು ಪೊ’ರಕೆಯಾಗಿ ಉಪಯೋಗಿಸುತ್ತಾರೆ.ಬಿತ್ತನೆ ಕಾಲದಲ್ಲಿ ಕೂರಿಗೆಯಲ್ಲಿ ಬಿತ್ತಿದ ಬೀಜಗಳನ್ನು ಮುಳಿಗಿಸಲು ರೈತರು “ಯೆಟ್ಟ”ಕಟ್ಟಲು ಹೆಚ್ಚಾಗಿ ಬಳಸುತ್ತಾರೆ.
1/2 ಲೀಟರ್ ಶುದ್ಧವಾದ ಎಳ್ಳೆಣ್ಣೆಗೆ 50 ಗ್ರಾಂ ಅಂದರಿಗಿಡದ ಎಲೆಗಳು 50 ಗ್ರಾಂ ತೊಟ್ಟಿಲು ಗಿಡದ ಎಲೆಗಳನ್ನು ಜಜ್ಜಿ ಹಾಕಿ ಒಳೆಯ ಮೇಲಿಟ್ಟು ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ,ಗೆಡ್ಡೆ ಕರ್ಫೂರ 20 ಗ್ರಾಂ ಸೇರಿಸಿ ಕಲಸಿ,ಕೆ’ಳಗಿಳಿಸಿ ಉಗರು ಬೆಚ್ಚಗಾದಮೇಲೆ ಸೋಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇ’ಖರಿಸಿಟ್ಟುಕೊಂಡು,ಕೀಲುನೋವು,ಬಾವು, ಉಳಿಕಿದ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಗುಣವಾಗುತ್ತೆ.ದೇಹಕ್ಕೆ ಮ’ಸಾಜ್ ಮಾಡಿಕೊಂಡರೆ,ದೇಹದಲ್ಲಿ ಮಾಂಸ ಖಂಡಗಳು, ಮೂಳೆಗಳು ಬಲಿಷ್ಠವಾಗುತ್ತವೆ.
ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮೂಳೆ ಮು’ರಿದಾಗ,ಅಂದರಿ ಗಿಡದ ಎಲೆಗಳ ಜೊತೆ ಮಂಗರವಳ್ಳಿಯ ಕಾಂಡವನ್ನು ಸೇರಿಸಿ, ಚೆನ್ನಾಗಿ ಕುಟ್ಟಿ ಅದಕ್ಕೆ ನಾಟಿ ಕೋಳಿ ಮೊಟ್ಟೆಯ ಸೊನೆ(ಬಿ’ಳಿಯ ಭಾಗ) ಸೇರಿಸಿ ಮಿಶ್ರಣ ಮಾಡಿ, ಮೂಳೆ ಮುರಿದ ಜಾಗಕ್ಕೆ ಲೇಪಿಸಿ, ಬಿದರು ದಬ್ಬೆ ಹಾಕಿ ಹತ್ತಿ ಬಟ್ಟೆಯಿಂದ ಕಟ್ಟು ಕಟ್ಟುತ್ತಾರೆ.
ಹಲ್ಲು ನೋವಿದ್ದಾಗ ಅಂ’ದರಿಗಿಡದ ಎಲೆಗಳನ್ನು ಜಗಿಯುತ್ತಿದ್ದರೆ ಶೀಘ್ರ ಗುಣವಾಗುತ್ತೆ.
ಹಾವು ಚೇಳು ಇಲಿ ಕಚ್ಚಿದ ಗಾಯಕ್ಕೆ ಅಂದರಿ ಗಿಡದ ಎಲೆಗಳ ಪೇಸ್ಟ್ ಲೇಪಿಸಿದರೆ ವಿಷ ನಿವಾರಣೆಯಾಗುತ್ತೆ.
ದಿನವೂ ಐದಾರು ಎಲೆಗಳನ್ನು ಜಗಿದು ನುಂಗಿದರೆ ಮ^ಧುಮೇಹ ಅತೋಟಿಗೆ ಬರುತ್ತೆ.
ಅಂದ’ರಿಗಿಡದ ಸಮೂಲದಿಂದ ತಯಾರಿಸಿದ ಕಷಾಯ ಬೆಳಿಗ್ಗೆ ಸಂಜೆ 50ml ನಂತೆ ಸೇವಿಸುತ್ತಾ ಬಂದರೆ ಮೂ’ಲವ್ಯಾಧಿ ವಾಸಿಯಾಗುತ್ತೆ. ಜ್ವರ ನೆಗಡಿ ಕಫ,ಕೆಮ್ಮು ಶ’ಮನವಾಗುತ್ತೆ.ಉಸಿರಾಟಕ್ಕೆ ಸಂಬಂಧಿಸಿದ ವ್ಯಾಧಿಗಳು ಸಹ ಗುಣವಾಗುತ್ತೆ.
ಕಷಾಯ ಮಾಡುವ ವಿಧಾನ:- 100 ಗ್ರಾಂ ಅಂದರಿ ಗಿಡದ ಎಲೆಗಳು,2 ಚಮಚ ಅ’ರಸಿಣ ಚೂರ್ಣ, 2 ಚಮಚ ಜೀರಿಗೆ ಚೂರ್ಣ, 1ಲೀಟರ್ ನೀರಿಗೆ ಸೇರಿಸಿ ಒಲೆಯ ಮೇಲಿಟ್ಟು ಮಂದದ ಹುರಿಯಲ್ಲಿ ಚೆನ್ನಾಗಿ ಕುದಿಸಿ, 1/2 ಲೀಟರ್ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ ಸೇವಿಸಬೇಕು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಗಿಡ ಮೂ'ಲಿಕೆಯೊಡನೆಭೇಟಿಯಾಗೋಣ. ವಂದನೆಗಳು

ಕೊರೊನಾ ಮಹಾಮಾರಿಗೆ ಆಯುರ್ವೇದ ಚಿಕಿತ್ಸೆ ; ಕೊರೊನಾ ರೋಗಿಗಳ ಪಾಲಿಗೆ ಸಂಜೀವಿನಿಯಾದ ಡಾ. ಗಿರಿಧರ್ ಕಜೆ ಔಷಧಿ

ಜಗತ್ತನ್ನೇ ತ’ಲ್ಲಣಗೊಳಿಸಿರುವ ಕರೊನಾ ಮ&ಹಾಮಾರಿಗೆ ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದದಿಂದ ಪರಿಹಾರ ಸಾಧ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಿಂದ ದೃಢಪಟ್ಟಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ವಿ^ಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದ್ದು, ಕೇವಲ 9 ದಿನದಲ್ಲಿ ಎಲ್ಲರೂ ಗು’ಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದಾರೆ. ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ ನೇತೃತ್ವದಲ್ಲಿ ನಡೆದ ಈ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.

ಎರಡೇ ಮಾತ್ರೆ ಬಳಕೆ: ಕ್ಲಿನಿಕಲ್ ಟ್ರಯಲ್ ಗೆ CTRI ನಲ್ಲಿ ನೋಂದಣಿ ಮಾಡಿಕೊಂಡಿರುವ ದಾಖಲೆ ಖಾಸಗಿ ವಾಹಿನಿಗೆ ಲಭ್ಯವಾಗಿದ್ದು ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಸೋಂ’ಕಿತರಿಗೆ ನೀಡಲಾಗಿತ್ತು. ಜೂ.7ರಿಂದ ಜೂ.25ರವರೆಗೆ ಕ್ಲಿ^ನಿಕಲ್ ಟ್ರಯಲ್ ನಡೆಸಲಾಗಿದೆ. 23 ವರ್ಷದಿಂದ 65 ವರ್ಷದವರೆಗಿನ ಸೋಂಕಿತರು ಟ್ರಯಲ್ಗೆ ಒಳಪಟ್ಟಿದ್ದು, ಎಲ್ಲರೂ ಸೋಂಕಿನ ಗುಣಲಕ್ಷಣ ಹೊಂದಿದ್ದರು. ಅದಾಗಲೇ ನೀಡುತ್ತಿದ್ದ ಅ^ಲೋಪತಿ ಚಿಕಿತ್ಸೆ ಜತೆಗೆ ಆಯುರ್ವೆದ ಟ್ರಯಲ್ ನಡೆಸಲಾಗಿದ್ದು, ಕೇವಲ 2ರಿಂದ 4 ದಿನದಲ್ಲಿ ಸೋಂಕಿನ ಗುಣಲಕ್ಷಣಗಳು ಸಂಪೂರ್ಣ ಮಾಯವಾಗಿವೆ. 3 ರಿಂದ 9 ದಿನದ ಅವಧಿಯಲ್ಲಿ ಎಲ್ಲ ಸೋಂಕಿತರ ಕೊರೊನಾ ಪರೀಕ್ಷೆ ನೆ’ಗೆಟಿವ್ ಬಂದಿದೆ. ಯಾವ ಸೋಂಕಿತರೂ ಮುಂದಿನ ಹಂತಕ್ಕೆ (ಸಾಮಾನ್ಯದಿಂದ ಗಂಭೀರ ಹಂತಕ್ಕೆ) ಹೋಗದೆ ಗುಣಮುಖರಾಗಿದ್ದು, ಯಾ’ವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ. ಈ ವಿಚಾರ ಸೋಮವಾರ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆಯಾಗಿರುವುದಾಗಿ ಆರೋಗ್ಯ ಇ^ಲಾಖೆ ಮೂಲಗಳು ತಿಳಿಸಿವೆ.

ಅತೀ ಕಡಿಮೆ ದರ: ಕೊರೊನಾ ಗುಣಪಡಿಸಲು ಲ’ಕ್ಷಾಂತರ ರೂ. ವೆಚ್ಚವಾಗುತ್ತಿರುವುದರ ನಡುವೆಯೇ ಆಯುರ್ವೇದ ಕ್ಲಿನಿಕಲ್ ಟ್ರಯಲ್ನಲ್ಲಿ ಪು^ಡಿಗಾಸಲ್ಲೇ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬ ರೋಗಿಗೆ ಕನಿಷ್ಠ 60 ರೂ. ನಿಂದ 180 ರೂ.ನಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ರಯಲ್ನಲ್ಲಿ ಭಾಗವಹಿಸಿದವರ ಪೈಕಿ ಒಬ್ಬರು ಕ್ಷ’ಯರೋಗದಿಂದ(ಟಿಬಿ) ಬಳಲುತ್ತಿದ್ದರು. ಹೃ^ದ್ರೋಗ ಸಮಸ್ಯೆ, ಮ’ಧುಮೇಹ ಹೊಂದಿದವರೆಲ್ಲರೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕ್ಲಿನಿಕಲ್ ಟ್ರಯಲ್ ಕುರಿತು ಪ್ರತಿಕ್ರಿಯೆಗೆ ಡಾ. ಗಿರಿಧರ ಕಜೆ ಲಭ್ಯವಾಗಿಲ್ಲ. ಇದೀಗ ನಡೆದಿರುವ ಯಶಸ್ವಿ ಪ್ರಯೋಗದ ಆಧಾರದಲ್ಲಿ ಆಯುರ್ವೆದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ (RGUHS) ಕುಲಪತಿ ಡಾ. ಎಸ್. ಸ’ಚ್ಚಿದಾನಂದ ಅವರಿಗೆ ಸರ್ಕಾರ ತಿಳಿಸಿದೆ.

ಗುಣಲಕ್ಷಣಗಳನ್ನು ಹೊಂದಿರುವ ಸೋಂಕಿತರು: ಕೊರೊನಾ ಸೋಂಕು ತಗುಲಿದ್ದರೂ ಶೇ.90 ಜನರಲ್ಲಿ ಯಾವುದೇ ಗು’ಣಲಕ್ಷಣಗಳು ಇರುವುದಿಲ್ಲ. ಈ ಪೈಕಿ ಅನೇಕರಲ್ಲಿ ಯಾವುದೇ ಔಷಧದ ಅವಶ್ಯಕತೆಯೂ ಇಲ್ಲದಂತೆ ಅಥವಾ ಸಾಮಾನ್ಯ ಔಷಧದಿಂದಲೇ ಗುಣಮುಖರಾಗುತ್ತಾರೆ. ಆದರೆ ಇನ್ನುಳಿದ ಶೇ.10 ಜನರಲ್ಲಿ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆಯಂತಹ ಗುಣಲಕ್ಷಣಗಳಿರುತ್ತವೆ. ಇವರಲ್ಲಿ ಕಿಡ್ನಿ, ಹೃದಯ, ಶ್ವಾ^ಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹದಂತಹ ಸಮಸ್ಯೆಗಳುಳ್ಳವರಾದರೆ (ಕೋ ಮಾರ್ಬಿಡ್) ಕರೊನಾದಿಂದ ಗುಣಮುಖವಾಗುವ ಸಾಧ್ಯತೆ ಕಡಿಮೆಯಾಗುತ್ತ ಸಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಲ್ಲಿ ಭಾಗಿಯಾಗಿದ್ದ ಎಲ್ಲ 10 ಸೋಂಕಿತರೂ ಗು’ಣಲಕ್ಷಣಗಳುಳ್ಳ ಹಾಗೂ ಕೋ^ಮಾರ್ಬಿಡ್ ಸ್ಥಿತಿಯಲ್ಲಿದ್ದವರಾದ್ದರಿಂದ ಔಷಧ ಎಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಆಯುರ್ವೇದಕ್ಕೆ ಇಂತಹ ಕಾಯಿಲೆಗಳು ಹಳೆಯವು: ಸಾಂ^ಕ್ರಾಮಿಕ ರೋಗಗಳ ನಿರ್ವಹಣೆ ಆಯುರ್ವೆದಕ್ಕೆ ಹೊಸತಲ್ಲ ಎಂದು CTRI ಗೆ ನೀಡಿರುವ ವಿವರಣೆಯಲ್ಲಿ ಸಂ’ಶೋಧಕರು ತಿಳಿಸಿದ್ದಾರೆ. ಪ್ರಾಚೀನ ವಿಜ್ಞಾನಿ, ಋಷಿಗಳು ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿ ದ್ದಾರೆ. ಚರಕ, ಸಾಂ^ಕ್ರಾಮಿಕ ರೋಗಗಳನ್ನು ಜನಪದೋಧ್ವಂಸ ಎಂಬ ಶೀರ್ಷಿಕೆಯಡಿ ಹಾಗೂ ಶುಶ್ರುತ, ಔಪಸರ್ಗಿಕ ರೋಗ ಎಂಬ ಶೀರ್ಷಿಕೆಯಡಿ ವಿ’ವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಶೋಧನೆ: ಭಾರತದ ಅನೇಕ ಆಯುರ್ವೇದ ವೈದ್ಯರು ಕೊರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ಭಾ’ರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಯಂತೆ ಹಾಗೂ ಅಂ^ತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈ’ಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ. ಬೆಂಗಳೂರಿನ ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರಿಗೆ ಪ್ರ’ಯೋಗಾತ್ಮಕ ಚಿಕಿತ್ಸೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಐಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಡಾ. ಗಿರಿಧರ ಕಜೆ ಮುಖ್ಯ ಸಂಶೋಧಕರಾದರೆ, ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ.ಆರ್. ಜಯಂತಿ ಸಹ-ಸಂಶೋಧಕಿಯಾಗಿದ್ದರು.

ಆಯುರ್ವೆದ ಸಂಶೋಧನೆಗೊಳಪಟ್ಟ 10 ಸೋಂಕಿತರೂ ಗುಣಮುಖರಾಗಿದ್ದಾರೆ. ಈ ಕುರಿತು ಟಾಸ್ಕ್ ಫೋರ್ಸ್ ಸಭೆಯಲ್ಲಿ ರ್ಚಚಿಸಲಾಗಿದೆ. ಈ ಸಂಶೋಧನೆಯನ್ನು ಚಿಕಿತ್ಸೆಯಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ಆರ್ಜಿಯುಎಚ್ಎಸ್ ಕುಲಪತಿಯವರಿಗೆ ತಿಳಿಸಲಾಗಿದೆ. ಅದರ ಆಧಾರದಲ್ಲಿ ಮುಂದುವರಿಯುತ್ತೇವೆ. ಬಿ. ಶ್ರೀರಾಮುಲು ಆರೋಗ್ಯ ಸಚಿವ.

ಕೃಪೆ : ವಿಜಯವಾಣಿ

ಜುಲೈ 1, 2020 ಬುಧವಾರ : ಇಂದಿನ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಮಾಘ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:27 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:39 ರಿಂದ 9:15

ಮೇಷ

ಕಚೇರಿ ಕೆಲಸಗಳಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ಬರಹಗಾರರು, ಮುದ್ರಣಕಾರರಿಗೆ ಹೆಚ್ಚಿನ ಅವಕಾಶಗಳು ಒದಗಿ ಬರಲಿವೆ. ಹೊಸ ಗೆಳೆಯರ ಪರಿಚಯದೊಂದಿಗೆ ಹೊಸತನ ಮೂಡಲಿದೆ.

ವೃಷಭ

ಮನೆಯವರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಲಿದ್ದೀರಿ. ನಿಮ್ಮ ಅನಿಸಿಕೆಗಳಿಗೆ ಗಮನ ಕೊಟ್ಟು ಕಾರ್ಯ ನಿರ್ವಹಿಸಿದಲ್ಲಿ ವೈಯಕ್ತಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.

ಮಿಥುನ

ವ್ಯಾಪಾರಗಳಲ್ಲಿ ಉತ್ತಮ ಲಾಭದ ನಿರೀಕ್ಷೆ. ಮನಃಶಾಂತಿಗಾಗಿ ದೇವಸ್ಥಾನ ಅಥವಾ ಪ್ರವಚನ ಮಂದಿರಗಳಿಗೆ ಭೇಟಿ ನೀಡಲಿದ್ದೀರಿ. ಪರಿವರ್ತನೆಗಳಿಗಾಗಿ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ.

ಕಟಕ

ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಳ್ಳಲಿದೆ. ಜೀವನದಲ್ಲಿದ್ದ ನಿರುತ್ಸಾಹ ದೂರವಾಗುವುದು. ದುಡಿಮೆಯ ಹೆಚ್ಚಿನ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.

ಸಿಂಹ

ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಸಾಧ್ಯತೆ. ಮೇಲಧಿಕಾರಿಗಳಿಂದ ಪ್ರಶಂಸೆ. ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿನ ಕೆಲಸಗಳು ನೆರವೇರುವವು. ಸಂಸಾರದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಲಿವೆ.

ಕನ್ಯಾ

ನಿತ್ಯದ ಕಾರ್ಯಕ್ರಮಗಳಿಂದ ಬದಲಾವಣೆ ಕಾಣಲಿರುವಿರಿ. ಕೆಲಸದವರಿಗೆ ವ್ಯವಹಾರವನ್ನು ಮನವರಿಕೆ ಮಾಡಿಕೊಡುವುದರಿಂದ ಯಶಸ್ಸನ್ನು ಸಾಧಿಸಲಿದ್ದೀರಿ. ಅಧ್ಯಾಪಕ ವರ್ಗದವರು ಹೆಸರು ಗಳಿಸಲಿದ್ದೀರಿ.

ತುಲಾ

ಸ್ಥಿರ ಮತ್ತು ಚರಾಸ್ತಿಗಳ ಬಗ್ಗೆ ದಾಯಾದಿಗಳಲ್ಲಿನ ಭಿನ್ನಾಭಿಪ್ರಾಯಗಳು ಮಿತ್ರರ ಮೂಲಕ ಬಗೆಹರಿಯುವುದು. ನೇರವಾದ ಮಾತುಗಳು ಪ್ರಮುಖ ಎನಿಸುವುದು. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನೆಡೆ.

ವೃಶ್ಚಿಕ

ಬಂಧು ಬಳಗದವರ ಸಹಕಾರದಿಂದ ಎಲ್ಲಾ ಕೆಲಸಗಳು ಸರಾಗವಾಗಿ ಮುಗಿದು ಮನಸ್ಸಿಗೆ ಉಲ್ಲಾಸ ಮತ್ತು ನೆಮ್ಮದಿಯನ್ನು ಹೊಂದುವಿರಿ. ಮಕ್ಕಳ ಅಭಿಲಾಷೆ ಈಡೇರಿಸುವ ಸಲುವಾಗಿ ವೆಚ್ಚ ಭರಿಸಬೇಕಾದೀತು.

ಧನು

ಹೊಸ ಉದ್ಯೋಗದ ಬಗ್ಗೆ ಚಿಂತನೆಯಲ್ಲಿ ಯಶಸ್ಸು. ಹೆಂಚು, ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಅತಿಯಾದ ಆತ್ಮವಿಶ್ವಾಸ ಸಲ್ಲದು.

ಮಕರ

ಹೊಸ ಉದ್ಯಮದ ಬಗೆಗಿನ ನಿಮ್ಮ ಆಶಾವಾದಕ್ಕೆ ಪುಷ್ಟಿ ದೊರೆಯಲಿದೆ. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ವಾಹನಾದಿಗಳ ಖರೀದಿಯನ್ನು ಮಾಡುವ ಸಾಧ್ಯತೆ.

ಕುಂಭ

ಹಿಂದಿನ ಸಾಲಗಳಿಂದ ಮುಕ್ತರಾಗಲು ಹೊಸ ಮಾರ್ಗವೊಂದು ಗೋಚರಿಸಲಿದೆ. ಸ್ನೇಹಿತರ ಸಹಕಾರದಿಂದಾಗಿ ವ್ಯವಹಾರವನ್ನು ಉತ್ತಮ ಸ್ಥಿತಿಗೆ ಒಯ್ಯಲಿದ್ದೀರಿ. ದೂರದ ಪ್ರಯಾಣ ಮಾಡಿದಿರಿ.

ಮೀನ

ಹಣಕಾಸಿನ ವಿಚಾರದಲ್ಲಿ ಚೇತರಿಕೆ. ಮನೆ ಕಟ್ಟುವ ವಿಷಯವಾಗಿ ಮನೆಯವರೊಂದಿಗೆ ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ಸು. ಮಾತೃವರ್ಗದವರಲ್ಲಿ ಆರೋಗ್ಯದ ಸಮಸ್ಯೆ ಉಂಟಾದೀತು.

ಇಂದಿನ ಔಷಧೀಯ ಸಸ್ಯ ಪರಿಚಯ : ನೆಲನೆಲ್ಲಿ

ಭೂಮಿ ಅ’ಮಲಿಕಾ ನೆಲನೆಲ್ಲಿ, ಕಿರುನೆಲ್ಲಿ, ಭೂನೆಲ್ಲಿ, ಜಾಂಡಿಸ್ ಸೊಪ್ಪು,ಕೀಳಾನೆಲ್ಲಿ, ನ್ಯಾಲ ಉಸರಿಚೆಟ್ಟು, ಬಹುಫಲ ಮುಕ್ಕ, ಬಹುಪತ್ರ, ಭೂಧಾತ್ರಿ, ಬಹುಸುತ, ಸೂಕ್ಷ್ಮವತಿ, ಬ'ಹುವೀರ್ಯ ಎಂಬ ಹೆಸರುಗಳಿಂದ ಕರೆಯುತ್ತಾರೆ. ನೆಲನೆಲ್ಲಿ ಗಿಡವು ಏ'ಕವಾರ್ಷಿಕ ಸಸ್ಯವಾಗಿದ್ದು, ಹೊಲ, ತೋಟ, ಬೀಳುಭೂಮಿ, ತೇವಾಂಶ ಇರುವ ಕಡೆ ಕಳೆಯಂತೆ 1ರಿಂದ 1-1/2 ಅಡಿ ಬೆಳೆಯುತ್ತದೆ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ, ಈ ಕಿರುನೆಲ್ಲಿ ಸಸ್ಯವು ತನ್ನ ಒಡಲಲ್ಲಿ ಔಷಧೀಯ ಕಣಜವನ್ನೇ ತುಂಬಿಕೊಂಡಿದೆ.ಸಮೂಲ ಸಹಿತ ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು, ಅನೇಕ ವ್ಯಾಧಿಗಳನ್ನು ಗುಣಪಡಿಸಲು ರಾ'ಮಬಾಣದಂತೆ ಕೆಲಸ ಮಾಡುತ್ತೆ.ಈ ಸಸ್ಯವನ್ನು ಬಾಯಲ್ಲಿ ಜಗಿದು ಬ್ಲೆಡ್, ಕಲ್ಲನ್ನು ಜಗಿದು ಪುಡಿಪುಡಿ ಮಾಡಬಹುದು....! ಅಷ್ಟೊಂದು ಶಕ್ತಿಶಾಲಿ ಮೂಲಿಕೆ ಇದು. ನೆಲನೆಲ್ಲಿ ಗಿಡವನ್ನು ಸಮೂಲ ಸಹಿತ ತಂದು ಕಲಾಬತ್ತಿನಲ್ಲಿ ಹಾಕಿ ಅದಕ್ಕೆ ಎರಡು ಕಾಳು ಮೆಣಸು ಸೇರಿಸಿ ನುಣ್ಣಗೆ ಅರೆದು, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ, ಬೆಳಿಗ್ಗೆ-ಸಂಜೆ, ಎರಡು ವಾರಗಳ ಕಾಲ ಕುಡಿಯುತ್ತಾ ಬಂದರೆ ಹ'ಳದಿಕಾಮಾಲೆ (ಜಾಂಡಿಸ್) ಗುಣವಾಗುತ್ತೆ. ನೆಲನೆಲ್ಲಿ ಗಿಡದ 1 ಚಮಚ ರಸಕ್ಕೆ ಚಿಟಿಕೆ ಬೆಲ್ಲ ಸೇರಿಸಿ ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು ಸೇವಿಸುತ್ತಾ ಬಂದರೆ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು. ಶ್ವಾಸಕೋಶ ಸಮಸ್ಯೆಗಳಿದ್ದಾಗ,ದಿನವು ಖಾಲಿ ಹೊಟ್ಟೆಯಲ್ಲಿ 1 ಚಮಚ ಕಿರುನೆಲ್ಲಿ ಗಿಡದ ರಸ ಅಥವಾ 1 ಚಮಚ ಚೂರ್ಣವನ್ನು ಉಗರು ಬೆಚ್ಚಗಿನ 1/2 ಲೋಟ ಬಿಸಿನೀರಲ್ಲಿ ಕಲಸಿ ಕುಡಿಯುವುದರಿಂದ, ಶ್ವಾಸಕೋಶ ಶುದ್ಧಿಯಾಗಿ, ರಕ್ತಹೀನತೆ, ಅಜೀರ್ಣ ಸಮಸ್ಯೆಗಳು ದೂರವಾಗಿ, ಜೀರ್ಣಕ್ರಿಯೆ ಸು'ಗುಮವಾಗುತ್ತೆ. ನೆಲನೆಲ್ಲಿ, ಹಾಲುಬಳ್ಳಿ, ಗರುಗದ ಸೊಪ್ಪು ಸಮನಾಗಿ ತೆಗೆದುಕೊಂಡು, ನೆರಳಲ್ಲಿ ಒಣಗಿಸಿ, ಪುಡಿಮಾಡಿ, ವಸ್ತ್ರಗಾಲಿತಚೂರ್ಣ ಮಾಡಿಟ್ಟುಕೊಂಡು 1 ಚಮಚ ಚೂರ್ಣಕ್ಕೆ 1 ಚಮಚ ಜೇ'ನುತುಪ್ಪ ಕಲಸಿ ಸೇವಿಸುತ್ತಾ ಬಂದಲ್ಲಿ ಹಾಳಾಗಿರುವ ಮೂತ್ರಪಿಂಡಗಳು ಗುಣವಾಗಿ, ಸುಗುಮವಾಗಿ ಕಾರ್ಯ ನಿರ್ವಹಿಸುತ್ತವೆ. ನೆಲನೆಲ್ಲಿ ಗಿಡದ ಚಿಗುರನ್ನು ದಿನವು ಬೆಳಿಗ್ಗೆ ಸಂಜೆ ಜಗಿದು ತಿನ್ನುತ್ತಾ ಬಂದಲ್ಲಿ ಮಧುಮೇಹ ಅತೋಟಿಗೆ ಬರುತ್ತೆ. ತಾಜಾ ನೆಲನೆಲ್ಲಿಯ ರಸವನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಸೇವಿಸುತ್ತಾ ಬಂದರೆ, ಸ್ತ್ರೀಯರ ಶ್ವೇತ ಪ್ರದರ, ಋತಸ್ರಾವ ಸಮಸ್ಯೆಗಳು ವಾಸಿಯಾಗುತ್ತೆ. ನೆಲನೆಲ್ಲಿ ಗಿಡವನ್ನು ತಂದು ಅದಕ್ಕೆ ಚಿಟಿಕೆ ಅರಸಿಣ, ಚಿಟಿಕೆ ಉಪ್ಪು ಸೇರಿಸಿ ನುಣ್ಣಗೆ ಅರೆದು, ಗಾಯ, ಬಾವು, ಗಜ್ಜಿ, ಗಜಕರ್ಣದ ಮೇಲೆ ಲೇಪನ ಮಾಡುತ್ತಾ ಬಂದರೆ ಶೀಘ್ರ ಗುಣವಾಗುತ್ತೆ. ಭೂನೆಲ್ಲಿ ಗಿಡದ ಕಷಾಯ ನಿ'ಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಮೂತ್ರಪಿಂಡದಲ್ಲಿನ ಕಲ್ಲು ಕರಗುತ್ತೆ. ನೆಲನೆಲ್ಲಿ ಸಮೂಲ ಸಹಿತ ತಂದು ಅದಕ್ಕೆ ಬೇಲದ ಬೀಜ ಹಾಗು ಜೀರಿಗೆ ಹಾಕಿ ನುಣ್ಣಗೆ ಅರೆದು ಚಿಕ್ಕಚಿಕ್ಕ ಉಂಡೆಗಳು ಮಾಡಿ, ನೆರಳಲ್ಲಿ ಒಣಗಿಸಿ, ಬೆಳಿಗ್ಗೆ ಸಂಜೆ ಒಂದೊಂದು ಉಂಡೆಯನ್ನು ಬಿಸಿನೀರಿನಲ್ಲಿ ಕಲಸಿ ಕುಡಿಯುತ್ತಾ ಬಂದರೆ ಉದರ ಹಾಗೂ ಮೂತ್ರ ಸಮಸ್ಯೆಗಳು ದೂರವಾಗುತ್ತೆ. ನೆಲನೆಲ್ಲಿಯ ಸಮೂಲ ರಸಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ, ಸೇವಿಸಿದರೆ ಬಿಕ್ಕಳಿಕೆ ಶೀಘ್ರ ನಿಲ್ಲುತ್ತೆ.ಇದೆ ರಸಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಜ್ವರ, ನೆಗಡಿ, ಕೆಮ್ಮು ಶಮನವಾಗುತ್ತೆ. ನೆಲನೆಲ್ಲಿ ಸಮೂಲ ಹಾಗು ಮೆಂತ್ಯವನ್ನು ನುಣ್ಣಿಗೆ ಅರೆದು ಮಜ್ಜಿಗೆಯಲ್ಲಿ ಕದಡಿ ಕುಡಿದರೆ ಅತಿಸಾರಭೇದಿ ನಿಲ್ಲುತ್ತೆ. ಭೂನೆಲ್ಲಿಯ ಉಪಯೋಗಗಳು ನೂರಾರು. ಗೆಳೆಯರೆ ವಂದನೆಗಳು ನಾಳೆ ಇನ್ನೊಂದು ಔಷಧೀಯ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ.

ಜೂನ್‌ 30, 2020 ಮಂಗಳವಾರ : ಇಂದಿನ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಂಗಳವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:39 ರಿಂದ 5:15
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:51

ಮೇಷ

ಸಂತೋಷದ ಸುದ್ದಿಯೊಂದನ್ನು ಕೇಳುವಿರಿ. ಬಹುದಿನಗಳಿಂದಿರುವ ಕೆಲಸದ ಒತ್ತಡಗಳಿಂದ ಮುಕ್ತಿ ದೊರೆತು ನಿರಾಳರಾಗುವಿರಿ. ಉದ್ಯೋಗದಲ್ಲಿ ಬಡ್ತಿ ದೊರಕುವ ಸಾಧ್ಯತೆ.

ವೃಷಭ

ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಕೊಳ್ಳುವಿರಿ. ಕೆಲಸದಲ್ಲಿ ಹಿರಿಯರ ಸಹಕಾರ ದೊರಕಲಿದೆ. ಆರ್ಥಿಕ ಪ್ರಗತಿಯಿಂದಾಗಿ ಸಂತಸ. ಮಕ್ಕಳಿಂದ ವಿಶೇಷ ಗೌರವ ಪ್ರಾಪ್ತಿಯಾಗುವುದು.

ಮಿಥುನ

ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಸ್ವಜನರಿಂದಲೇ ವಂಚನೆಯ ಸಾಧ್ಯತೆಯಿದ್ದು ಎಚ್ಚರಿಕೆಯಿಂದಿರುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಚೇತರಿಕೆ. ದಾಂಪತ್ಯ ಜೀವನದಲ್ಲಿ ಸಂತಸ.

ಕಟಕ

ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ. ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳಿಂದ ಮುಜುಗರದ ಸನ್ನಿವೇಷಗಳನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನವಾಗಿದೆ.

ಸಿಂಹ

ವೃತ್ತಿಯಲ್ಲಿ ಬದಲಾವಣೆ ಅಥವಾ ವರ್ಗಾವಣೆಯ ಸಾಧ್ಯತೆ. ಮಹಿಳಾ ರಾಜಕಾರಣಿಗಳಿಗೆ ಸಂತೋಷದ ದಿನ. ಕೃಷಿಕರಿಗೆ ಹೆಚ್ಚಿನ ಧನಾಗಮನದ ನಿರೀಕ್ಷೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವಿರಿ.

ಕನ್ಯಾ

ಸಹೋದರರಿಂದ ಸಹಾಯ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ. ಮಹಿಳೆಯರ ಆಸೆ ಆಕಾಂಕ್ಷೆಗಳು ಕೈಗೂಡುವ ಸಾಧ್ಯತೆ. ಬಾಂಧವ್ಯದಲ್ಲಿ ವೃದ್ಧಿ, ಹಿತೈಷಿಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ.

ತುಲಾ

ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಆರ್ಥಿಕ ಸುಧಾರಣೆ. ಬಹುದಿನಗಳಿಂದ ನ್ಯಾಯಾಲಯದಲ್ಲಿರುವ ವ್ಯಾಜ್ಯವು ನಿಮಗೆ ಅನುಕೂಲಕರ ರೀತಿಯಲ್ಲಿ ಇತ್ಯರ್ಥವಾಗುವುದು. ಬಂಧುಗಳ ಸತ್ಕಾರ ಸ್ವೀಕರಿಸುವಿರಿ.

ವೃಶ್ಚಿಕ

ಮೇಲಧಿಕಾರಿಗಳಿಂದ ಪ್ರಶಂಸೆ, ಪ್ರೋತ್ಸಾಹಗಳು ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವುದು. ಪ್ರಾಪ್ತ ವಯಸ್ಕರಿಗೆ ಉತ್ತಮ ಸಂಬಂಧ ಕೂಡಿಬರಲಿದೆ. ಧಾರ್ಮಿಕ ಕಾರ್ಯ ನಡೆಸಲಿದ್ದೀರಿ.

ಧನು

ಅನವಶ್ಯಕ ಕೆಲಸ–ಕಾರ್ಯಗಳಲ್ಲಿ ತೊಡಗುವುದು ಬೇಡ. ಆರ್ಥಿಕ ಚೇತರಿಕೆಯಿಂದಾಗಿ ನೆಮ್ಮದಿ ಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಬದುಕಿನಲ್ಲಿ ಹೊಸದೊಂದು ಆಶಾಕಿರಣ ಮೂಡಿಬರಲಿದೆ.

ಮಕರ

ಮನೆಗೆ ಅಪರೂಪದ ವಿಶೇಷ ವ್ಯಕ್ತಿಗಳ ಆಗಮನ ಸಾಧ್ಯತೆ. ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು. ಲೋಹದ ವ್ಯಾಪಾರಸ್ಥರಿಗೆ ವಿಶೇಷ ಲಾಭ.

ಕುಂಭ

ಕೆಲಸ–ಕಾರ್ಯಗಳಲ್ಲಿ ಆತುರತೆ ಸಲ್ಲದು. ತೊಡಗಿಕೊಂಡ ಕೆಲಸಗಳಲ್ಲಿ ಶ್ರದ್ಧೆಯಿಂದಾಗಿ ಪ್ರಗತಿಯನ್ನು ಕಾಣುವಿರಿ. ಪ್ರೇಮ ಪ್ರಕರಣದಿಂದ ತೊಂದರೆಯಲ್ಲಿ ಸಿಲುಕುವ ಸಾಧ್ಯತೆ. ಕೃಷಿಕರಿಗೆ ಸ್ವಲ್ಪಮಟ್ಟಿನ ಸಂಕಷ್ಟ.

ಮೀನ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಹೊಸ ಉದ್ಯಮವೊಂದರಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿನ ಸಮಸ್ಯೆಗಳಿಂದ ಮುಕ್ತಿಯ ಸಾಧ್ಯತೆ. ಮಿತ್ರವೃಂದದವರಿಂದ ಸಹಕಾರ.

ಡಿಜಿಟಲ್ ಸ್ಟ್ರೈಕ್! ಟಿಕ್ ಟಾಕ್ ಸೇರಿ ರೆಡ್ ಡ್ರಾಗನ್ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿದ ಮೋದಿ ಸರ್ಕಾರ..

ಭಾರತ ಮತ್ತು ಚೀನಾ ನಡುವಿನ ಘರ್ಷಣೆ ಮುಂ’ದುವರೆದಿರುವ ಬೆನ್ನಲ್ಲೇ ಚೀನಾ ವಿರುದ್ಧ ಭಾರತದೆಲ್ಲೆಡೆ ಆಕ್ರೋಶ ಮುಗಿಲು ಮುಟ್ಟಿದೆ. ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ಭಾರತದಿಂದ ನಿಷೇಧಿಸುವಂತೆ ಕೂಗು ಕೇಳಿ ಬರುತ್ತಿದೆ. ಸಿಎಐಟಿಯಂತಹ ಕೆಲವು ವ್ಯಾಪಾರ ಸಂಸ್ಥೆಗಳು ಗಡಿ ಬಿಕ್ಕಟಿಗೆ ಸಂ’ಬಂಧಿಸಿದಂತೆ ಪ್ರತಿಭಟನೆ ನಡೆಸಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ.

ಚೀನಾ ಮೂಲದ ಸ್ಮಾ’ರ್ಟ್‌ಫೋನ್‌ಗಳ ಅಬ್ಬರದ ಜೊತೆಗೆ ಚೀನಿ ನಿರ್ಮಿತ ಆ್ಯಪ್ ಗಳನ್ನೂ ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಇದರ ಭಾಗವಾಗಿ ಕೇಂದ್ರ ಸರ್ಕಾರ‌ ಇಂದು ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಜನಪ್ರಿಯ ಆ್ಯಪ್ ಆಗಿರುವ ಟಿಕ್ ಟಾಕ್ ಅನ್ನೂ ಕೇಂದ್ರ ಸರ್ಕಾರ ನಿಷೇಧಿಸಿದೆ. ಟಿಕ್ ಟಾಕ್ ಜೊತೆಗೆ ಶೇರ್ ಇಟ್, ಯುಸಿ ಬ್ರೌಸರ್ ಸೇರಿದಂತೆ 59 ಆ್ಯಪ್ ಗಳು ಇನ್ನುಮುಂದೆ ಭಾರತದಲ್ಲಿ ಕೆಲಸ ಮಾ’ಡುವಂತಿಲ್ಲ. ಚೀನಾ ಆ್ಯಪ್ ಗಳು ಕೋಟ್ಯಾಂತರ ರೂಪಾಯಿ ಹಣವನ್ನು ಭಾರತದಿಂದ ದುಡಿಯುತ್ತಿದ್ದವು. ಇದೀಗ ಈ ಅವಕಾಶ ತಪ್ಪಿಹೋಗಲಿದೆ.

ಇದೊಂದು ಐ’ತಿಹಾಸಿಕ ನಿರ್ಧಾರವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರ್ಷ ವ್ಯಕ್ತವಾಗಿದೆ. ಭಾರತೀಯರ ಖಾಸಗಿತನಕ್ಕೆ ಈ ಆ್ಯಪ್ ಗಳಿಂದ ಧಕ್ಕೆ ಬರುತ್ತಿತ್ತು ಹಾಗೂ ಭಾರತೀಯರ ದ’ತ್ತಾಂಶಗಳನ್ನು ಚೀನಾ ಈ ಆ್ಯಪ್ ಗಳ ಮೂಲಕ ಕಳುವು ಮಾಡುತ್ತಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ. ಟಿಕ್ ಟಾಕ್ ಗೆ ವಿಶ್ವದಲ್ಲೇ ಅತೀ ಹೆಚ್ಚು ಜನ ಬಳಕೆದಾರರು ಭಾರತದಲ್ಲಿದ್ದರು. ಕೇಂದ್ರದ ಈ ನಿರ್ಧಾರದಿಂದ ಭಾರತದ ಮೇಲೆ ಕಿಡಿಕಾರಿದ್ದ ಚೀನಾಗೆ ಮರ್ಮಾಘಾತವೇ ಆಗಿದೆ.

ಇಲ್ಲಿದೆ ನೋಡಿ ಕೇಂ’ದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿಷೇ’ಧಿಸಿರುವ ಚೀನಾದ 59 ಆ್ಯಪ್ಗಳು..:

TikTok
Shareit
Kwai
UC Browser
Baidu map
Shein
Clash of Kings
DU battery saver
Helo
Likee
YouCam makeup
Mi Community
CM Browers
Virus Cleaner
APUS Browser
ROMWE
Club Factory
Newsdog
Beutry Plus
WeChat
UC News
QQ Mail
Weibo
Xender
QQ Music
QQ Newsfeed
Bigo Live
SelfieCity
Mail Master
Parallel Space
Mi Video Call Xiaomi
WeSync
ES File Explorer
Viva Video QU Video Inc
Meitu
Vigo Video
New Video Status
DU Recorder
Vault- Hide
Cache Cleaner DU App studio
DU Cleaner
DU Browser
Hago Play With New Friends
Cam Scanner
Clean Master Cheetah Mobile
Wonder Camera
Photo Wonder
QQ Player
We Meet
Sweet Selfie
Baidu Translate
Vmate
QQ International
QQ Security Center
QQ Launcher
U Video
V fly Status Video
Mobile Legends
DU Privacy 

ಇಂದಿನ ಔಷಧೀಯ ಸಸ್ಯ : ಅಂಕೋಲೆ

ಅಂಕೋಲ್ಲಕ
ತಾಮ್ರ ಫಲ ಪೀತಧಾರ ನಿರೋಚಕ ಗುಪ್ತಸ್ನೇಹ ವಿ’ರೇಚಿ ಭೂ ಸುಧಾ ದೀರ್ಘ ಕೀಲಕ ಅಂಕೋಲೆ ಅಂಕೋಲಂ ಅಂಕೋಲಮು ಅಂಕೋಲ ಶೋಧನಂ ಅಲಾಂಜಿ ಊಡುಗ ಚೆಟ್ಟು(ಮಾನು) ಕಲ್ಲುಮಾವು ಗುಡ್ಡದಗೋಣಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕಾಡು ಮೇಡುಗಳು,ಕುರಚಲು ಕಾಡುಗಳು, ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಪೊದೆಯಂತೆ ಬೆಳೆಯುತ್ತದೆ.ಕೆಲವು ಪ್ರಾಂತ್ಯಗಳಲ್ಲಿ ಬೇ’ಲಿಗಿಡವಾಗಿ ಬೆಳಿಸಿದರೆ,ಕೆಲವು ಕಡೆ ಹೊಲ ಗದ್ದೆಗಳ ಬದಿಗಳ ಮೇಲೆ ಮರಗಳಂತೆ ಬೆಳೆಸುತ್ತಾರೆ.ಮರವು ತುಂಬಾ ಗಟ್ಟಿಯಾಗಿದ್ದು,ಮುಳ್ಳುಗಳಿಂದ ಕೂಡಿದ್ದು,8 ರಿಂದ 15 ಅಡಿವರಿಗೂ ಬೆಳೆಯುತ್ತೆ.ಬಿಳಿ ಕೆಂಪು ಹಾಗೂ ಕಪ್ಪು ಎಂಬ ಮೂರು ಪ್ರ’ಭೇದಗಳಿದ್ದು,ಬಿಳಿ ಕೆಂಪು ಹೆಚ್ಚಿಗೆ ಕಾಣಿಸುತ್ತೆ, ಕಪ್ಪು ತುಂಬಾ ಅಪರೂಪವಾಗಿ ಕಾಣುತ್ತೆ.
ಅಂಕೋಲೆ ಎಷ್ಟು ಪವಿತ್ರ ಹಾಗೂ ಶಕ್ತಿಶಾಲಿ ಮರವೆಂದರೆ ವರ್ಣಿಸಲು ಅಸಾಧ್ಯ…! ಗ್ರಾಮಾಂತರ ಪ್ರ’ದೇಶಗಳಲ್ಲಿ ಈಗಲೂ ಮನೆ ನಿರ್ಮಿಸುವಾಗ ಮುಖ ದ್ವಾರದ ಪೀಠಕ್ಕೆ ಬಲಿತ ಅಂಕೋಲೆ ಮರವನ್ನೇ ಉ’ಪಯೋಗಿಸುತ್ತಾರೆ.ಮನೆಗೆ ಕೆಡಕು, ಮಾಯ ಮಂತ್ರಗಳ ಪ್ರಯೋಗ,ಭೂತ ಪ್ರೇತಗಳ ಕಾಟದಿಂದ ತಮ್ಮನ್ನು ರಕ್ಷಿಸುತ್ತದೆ ಎಂಬ ಅಚಲ ನಂಬಿಕೆ ಜನರದ್ದು.
ಅಂಕೋಲೆ ಸರ್ವ ವ’ಶೀಕರಣ,ಆಕರ್ಷಣೆಗೆ ಮಂತ್ರ ತಂತ್ರಗಳಲ್ಲಿ ಮಾಂತ್ರಿಕರು ಜ್ಯೋತಿಷಿಗಳು ಉಪಯೋಗಿಸೊ ಮಾಹಾ ಶಕ್ತಿದಾಯಕ ಗಿಡ.ಇಂದ್ರ ಜಾಲ ಮಾ’ಡುವವರ ಕೈಯಲ್ಲಿರುವ ಮಂತ್ರ ದಂಡ ಸಹಾ ಅಂಕೋಲೆಯಲ್ಲೇ ಮಾಡಿರುವಂತದ್ದು.
ಅದೃಶ್ಯಕರಣೀ ವಿದ್ಯೆ,ನೀರಿನ ಮೇಲೆ ನಡಿಗೆ,ಬೆಂಕಿಯನ್ನು ಉ’ಗುಳುವುದು ಮುಂತಾದ ಯಕ್ಷಣಿ ವಿದ್ಯೆಗಳ ಪ್ರದರ್ಶನ ಹಾಗೂ ಪ್ರಯೋಗಗಳಿಗೆ ಇದರ ಅಗತ್ಯ ಬಹಳ ಅವಶ್ಯ.
ಜಾದು ಮಾಡುವವರು ಅಂಕೋಲೆ ಎಣ್ಣೆಯಲ್ಲಿ ಮಾವಿನ ಓಟೆ ನೆ’ನಸಿಟ್ಟುಕೊಂಡು,ಜಾದು ಮಾಡುವಾಗ
ಮಾವಿನ ಓಟೆಯನ್ನು ಮಣ್ಣಿನಲ್ಲಿಟ್ಟು ನೀರು ಹಾಕಿದರೆ,
ತಕ್ಷಣ ಮಾ’ವಿನ ಗಿಡ ಉದ್ಭವಿಸುವುದನ್ನ,ತೋರಿಸಿ ಜನರನ್ನು ಬೆರಗುಗೊಳಿಸುತ್ತಾರೆ.
ಅಂ’ಕೋಲೆಯ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ….! ಈ ವೃಕ್ಷದಲ್ಲಿರುವ ಅದ್ಭುತವಾದ ಶಕ್ತಿಯನ್ನು ಅಂದಾಜು ಮಾಡಬಹುದುದಾಗಿದೆ.
ಅಂಕೋಲೆ ಬೀಜದ ಎಣ್ಣೆಯನ್ನು ತೆಗೆದು, ಅದರಿಂದ ದೇಹಕ್ಕೆ ಮಸಾಜ್ ಮಾ’ಡಿಕೊಂಡರೆ ನರಗಳು ಗಡುಸಾಗಿ, ಮಾಂಸ ಖಂಡಗಳು ಬಲಿಷ್ಠವಾಗುತ್ತವೆ.ಇದು ಬಹು ಬಲಕಾರಕ ಹಾಗೂ ವಿರೇಚಕ.
ಸುಂ’ದರವಾದ ಅಂಗ ಸೌಷ್ಠವವನ್ನು ಪಡೆಯಲು ಅಂಕೋಲೆ ಎಣ್ಣೆ ಸ’ಹಕರಿಸಬಲ್ಲದು….! ಜೋತು ಬಿದ್ದಿರುವ ಸ್ತನಗಳಿಗೆ ದಿನ ಬಿಟ್ಟು ದಿನ ಕ್ರಮ ತಪ್ಪದೆ, ಅಂಕೋಲೆ ಎಣ್ಣೆಯಲ್ಲಿ ಮಸಾಜ್ ಮಾಡಿಕೊಳ್ಳುತ್ತಾ
ಬಂದರೆ, ಸ್ತನಗಳು ದೃಢತೆಯನ್ನು ಹೊಂದಿ ಯಥಾ
ಸ್ಥಿತಿಗೆ ಬರುತ್ತವೆ.
ತುಂಬಾ ರು’ಚಿಕರವಾದ ಅಂಕೋಲೆ ಹಣ್ಣುಗಳನ್ನು ಪಕ್ಷಿಗಳು ಇಷ್ಟ ಪಟ್ಟು ತಿನ್ನುತ್ತವೆ.ಹಳ್ಳಿಗಳಲ್ಲಿ ಮಕ್ಕಳು,ಹಿ’ರಿಯರೆನ್ನದೆ ಇದರ ಹಣ್ಣುಗಳನ್ನು ತಿನ್ನುತ್ತಾರೆ.
ಈ ಹಣ್ಣಿನ ಸೇವನೆಯಿಂದ ಮಕ್ಕಳ ಆರೋಗ್ಯ ಸುಧಾರಿಸಿ,ತುಂಬಾ ಬಲಿಷ್ಠರಾಗಿ ಬೆಳೆಯುತ್ತಾರೆ.ಮಾ’ನಸಿಕ ಉಲ್ಲಾಸ ಬೆಳೆದು, ದೇಹಕ್ಕೆ ಬೇಕಾದ ಪೌಷ್ಟಿಕತೆ ದೊರೆತು ಆರೋಗ್ಯವಂತರಾಗಿರುತ್ತಾರೆ.ಇದರ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ.ಇದರಲ್ಲಿ ಕೊ’ಬ್ಬಿನಾಂಶ ಕಡಿಮೆ ಇದ್ದು ನಾರಿನಾಂಶ ಹೆಚ್ಚು ಇರುವುದರಿಂದ, ಮಾನಸಿಕ ಒತ್ತಡ ಕಡಿಮೆ ಮಾಡಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ.ಮೆದಳು ಯಾ’ವಾಗಲೂ ತೀಕ್ಷ್ಣವಾಗಿ ಕಾರ್ಯ ನಿರ್ವಹಿಸುತ್ತೆ.ಕಣ್ಣಿನ ದೃ’ಷ್ಠಿಹೆಚ್ಚಿಸುವುದಲ್ಲದೇ,ಕ್ಯಾನ್ಸರ್ ರೋಗವನ್ನು ಸಹಾ ತಡೆಗಟ್ಟುತ್ತೆ, ಚರ್ಮ ರೋಗಗಳಿಂದಲೂ ಕಾಪಾಡುತ್ತೆ.ಮಧುಮೇಹ ಸಹಾ ಅತೋಟಿಗೆ ಬರುತ್ತೆ.
ಅಂ’ಕೋಲೆಯ ಚಿಗರನ್ನು ತಂದು, ಮೇಕೆ ಅಥವಾ ಕುರಿಯ ಹಾಲಿನಲ್ಲಿ ನುಣ್ಣಗೆ ಅರೆದು,ಬಟಾ’ಣಿಕಾಳಿನಷ್ಟು ಮಾತ್ರೆಗಳು ಮಾಡಿ, ನೆರಳಲ್ಲಿ ಒಣಗಿಸಿ, ಬೆಳಿಗ್ಗೆ ಸಂಜೆ ಒಂದು ಮಾತ್ರೆಯನ್ನು
ಹೊಟ್ಟೆಗೆ ತೆಗೆದು ಕೊಂಡರೆ ಉಬ್ಬಸ ಕೆಮ್ಮು ಕಫ ಶಮನವಾಗುತ್ತೆ.( ವಾಂತಿಯಾದರೆ ಹಸುವಿನ ತುಪ್ಪದಲ್ಲಿ ತೆಗೆದುಕೊಳ್ಳಬೇಕು).
ಅಂಕೋಲೆ ಬೇರನ್ನು ತಂದು ನಾಟಿ ಹಸುವಿನ ಹಾಲಿನಲ್ಲಿ ಗಂಧ ತೇಯ್ದು 1 ಚ’ಮಚದಂತೆ ಬೆಳಿಗ್ಗೆ ಸಂಜೆ ಹೊಟ್ಟೆಗೆ ಸೇವಿಸಿದರೆ, ನಾಯಿ ಕಡಿತದ ವಿಷ ನಿ’ವಾರಣೆಯಾಗುತ್ತೆ.
ದೇಹದ ಆರೋಗ್ಯ ಕೆಟ್ಟಾಗ, ಅಂಕೋಲೆ ಬೇರಿನ ಚೂ’ರ್ಣವನ್ನು ಮಾಡಿಟ್ಟುಕೊಂಡು 2 ಚಿಟಿಕೆ ಚೂರ್ಣವನ್ನು 1 ಚಮಚ ಜೇನುತುದಲ್ಲಿ ತೆಗಿದುಕೊಂಡರೆ, ದೇಹದ ಆರೋಗ್ಯ ಸುಧಾರಿಸುತ್ತೆ.
ಅಂಕೋಲೆಯ ಉ’ಪಯೋಗಗಳ ಬಗ್ಗೆ ಹೇಳಲು, ಸಮಯ,ಸ್ಥಳದ ಅಭಾವದ ಕಾರಣ ಇಲ್ಲಿ ಹೇಳಲು ಆಗುತ್ತಿಲ್ಲ.ಅಷ್ಟೊಂದು ಅಮೂಲ್ಯವಾದ, ಶ್ರೇಷ್ಠವಾದ ವೃಕ್ಷವಿದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾ'ಡಿಕೊಳ್ಳೋಣ.ವಂದನೆಗಳು

ಇಂದಿನ ರಾಶಿ ಭವಿಷ್ಯ : ಜೂನ್‌ 29, 2020 ಸೋಮವಾರ

ಮೇಷ

ಸಮಾಧಾನದ ವರ್ತನೆಯಿಂದಾಗಿ ಒದಗಬಹುದಾದ ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರಗಳಲ್ಲಿನ ತೊಂದರೆಗಳಿಂದ ಮುಕ್ತರಾಗುವಿರಿ. ಘನವಾದ ಕಾರ್ಯವೊಂದರ ಸಾಧನೆಯಿಂದಾಗಿ ವಿಶೇಷ ಮನ್ನಣೆಗೆ ಪಾತ್ರರಾಗುವಿರಿ.

ವೃಷಭ

ಅನ್ಯರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸ ಹೊಸ ವಿಚಾರಗಳನ್ನು ಕಲೆ ಹಾಕುವುದರಿಂದ ಸಂತೃಪ್ತಿ.

ಮಿಥುನ

ನಿಮ್ಮ ಬೇಜವಾಬ್ದಾರಿತನದಿಂದಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದ್ದು ಆಲಸ್ಯ ಯಾವುದಕ್ಕೂ ಕೂಡದು. ಅಹಂಭಾವವನ್ನು ತೊರೆದು ಎಲ್ಲರೊಂದಿಗೆ ಬೆರೆತು ಸಂತಸದ ದಿನವನ್ನಾಗಿಸಿಕೊಳ್ಳಿ.

ಕಟಕ

ನೆರೆಹೊರೆಯವರೊಂದಿಗೆ ಹೊಂದಾಣಿಕೆಯಿಂದಿರುವುದು ಉತ್ತಮ. ಪ್ರಯಾಣದಲ್ಲಿ ತೊಂದರೆಯ ಸಾಧ್ಯತೆ ಎಚ್ಚರವಿರಲಿ. ಉದ್ಯೋಗದಲ್ಲಿನ ತೊಡಕುಗಳು ನಿವಾರಣೆಯಾಗಿ ಸುಗಮವಾಗುವುದು.

ಸಿಂಹ

ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಬಿಡುವಿಲ್ಲದ ದಿನವಾಗಿದೆ. ನೌಕರರಿಗೆ ಹೊಸ ನಿರೀಕ್ಷೆಗಳು ಸಫಲವಾಗಲಿದೆ. ದಿನವಿಡೀ ಉಲ್ಲಾಸ, ಸಂಭ್ರಮದ ದಿನವಾಗಿರುವುದು. ಸಂತೃಪ್ತ ದಾಂಪತ್ಯ ಜೀವನ ನಿಮ್ಮದಾಗಲಿದೆ.

ಕನ್ಯಾ

ಹೊಸ ಉದ್ಯಮದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸ್ವತಂತ್ರ ಉದ್ಯೋಗಿಗಳಿಗೆ ಅಭಿವೃದ್ಧಿ ಕಂಡುಬರಲಿದೆ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ. ನಿಮ್ಮವರೇ ನಿಮಗೆ ದ್ರೋಹ ಮಾಡುವ ಸಾಧ್ಯತೆ.

ತುಲಾ

ಸ್ವಯಂ ಉದ್ಯೋಗಿಗಳಿಗೆ ಶುಭ ದಿನ. ಉತ್ತಮ ಆದಾಯದಿಂದಾಗಿ ಭದ್ರತೆ ನೆಮ್ಮದಿಯು ನಿಮ್ಮ ಪಾಲಿಗೆ ದೊರಕಲಿದೆ. ಹೊಸ ಸಂಬಂಧಗಳು ನಿಮ್ಮನ್ನರಸಿ ಬರಬಹುದು. ಗಣ್ಯ ವ್ಯಕ್ತಿಗಳೊಂದಿಗೆ ಸಮಾಲೋಚನೆ.

ವೃಶ್ಚಿಕ

ವ್ಯವಹಾರದಲ್ಲಿ ಜಾಗರೂಕರಾಗಿರುವುದು ಅವಶ್ಯ. ವಿಶೇಷವಾಗಿ ಪಾಲುಗಾರಿಕೆ ವ್ಯವಹಾರ, ಗುತ್ತಿಗೆ ವ್ಯವಹಾರಗಳಲ್ಲಿ ನಂಬಿದವರಿಂದ ಮೋಸಹೋಗುವ ಸಂಭವ ಕಂಡುಬರುತ್ತಿದೆ. ದುಡುಕು ನಿರ್ಧಾರ ಬೇಡ.

ಧನು

ಮಧ್ಯಸ್ಥಿಕೆಯಿಂದಾಗಿ ವಿವಾದಗಳಿಂದ, ತಗಾದೆಗಳಿಂದ ಮುಕ್ತರಾಗಿ ನಿರಾಳರಾಗುವಿರಿ. ಆರ್ಥಿಕ ದೃಢತೆ ನಿಮ್ಮದಾಗಲಿದೆ. ಹಿರಿಯರಿಗೆ ಆರೋಗ್ಯದಲ್ಲಿ ಕಿರಿಕಿರಿ ಸಂಭವ. ವೈದ್ಯರ ಸಲಹೆಯಂತೆ ನಡೆಯಿರಿ.

ಮಕರ

ವಿಶೇಷ ಪ್ರಯಾಣ ಮಾಡುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಿದ್ದು, ಅಧ್ಯಯನದಲ್ಲಿ ಆಸಕ್ತಿ ಉಂಟಾಗುವುದು. ಸೋದರರಿಂದ ನಿಮ್ಮ ಸಹಕಾರದ ನಿರೀಕ್ಷೆ.

ಕುಂಭ

ಸಹೋದರರಿಗೆ ತೃಪ್ತಿ ತರುವ ಕಾರ್ಯವೊಂದನ್ನು ಮಾಡಲಿದ್ದೀರಿ. ಕುಟುಂಬದಲ್ಲಿ ಸಾಮರಸ್ಯ ಕಂಡುಬರುವುದು. ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆ. ಮಕ್ಕಳು ತರುವ ಸಿಹಿ ಸುದ್ದಿಯಿಂದಾಗಿ ನೆಮ್ಮದಿ.

ಮೀನ

ಆತ್ಮೀಯರ ಭೇಟಿ ಸಂಭವ. ಕಚೇರಿ ಮತ್ತು ಮನೆಯವರೊಂದಿಗಿನ ವಿರಸ ದೂರವಾಗಲಿದೆ. ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ಸಾಹ ಲವಲವಿಕೆಗಳಿಂದ ಕಳೆಯುವಿರಿ. ಗುರು ಆರಾಧನೆ ಮಾಡಿ.

ಮಹಾಮಾರಿ ಕೊರೋನಾ: ಬೆಂಗಳೂರಿನಲ್ಲಿ 783 ಸೇರಿ 1267 ಮಂದಿಗೆ ಸೋಂಕು ದೃಢ

 ರಾಜ್ಯದಲ್ಲಿ ಇಂದು ಕೊರೋನಾ ಸ್ಫೋಟವಾಗಿತ್ತು ಬರೋಬ್ಬರಿ 1267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ ದಾಖಲೆಯ 783 ಮಂದಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಧಾರವಾಡ, ಮೈಸೂರು ತಲಾ 18, ಬಾಗಲಕೋಟೆ 17, ಉತ್ತರಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್, ಚಿತ್ರದುರ್ಗ ತಲಾ 7, ರಾಯಚೂರು, ಮಂಡ್ಯ, ದಾವಣಗೆರೆ ಜಿಲ್ಲೆಯಲ್ಲಿ ತಲಾ 6 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗು ತಲಾ 3, ತುಮಕೂರು 2, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

ಇಂದಿನ 1267 ಹೊಸ ಪ್ರಕರಣ ಸೇರಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13190 ಕ್ಕೆ ಏರಿಕೆಯಾಗಿದೆ. 7507 ಜನ ಬಿಡುಗಡೆಯಾಗಿದ್ದು, 5472 ಸಕ್ರಿಯ ಪ್ರಕರಣಗಳಿದ್ದು, 243 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 16 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಇದರೊಂದಿಗೆ ಮೃತಪಟ್ಟವರ ಸಂಖ್ಯೆ 207 ಕ್ಕೆ ಏರಿಕೆಯಾಗಿದೆ.

ಇಂದಿನ ಔಷಧೀಯ ಸಸ್ಯ ಪರಿಚಯ : ಸಂಧಿ ಬಳ್ಳಿ ಅಥವಾ ವಜ್ರವಲ್ಲಿ

ವಜ್ರವಲ್ಲಿ
ಅಸ್ಥಿಸಂಹಾರಿಕ ಅಸ್ಥಿಶ್ರಾಂಕುಲ ಮಂಗರವಳ್ಳಿ ಸುಂದುಬಳ್ಳಿ ಸುಂದೂಕದಗಿಡ ಪೆರಂಡೈ ಹರ್ಜೋರ್ ನಲ್ಲೇರು ನಲ್ಲರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಬೇಲಿ ಪೊದೆಗಳು ಪಾಳು ಬಿದ್ದ ಗೋಡೆಗಳ ಮೇಲೆ ಕುರಚಲು ಕಾಡುಗಳಲ್ಲಿ ಮರ ಗಿಡಗಳನ್ನ ಹಬ್ಬಿ ಬಳ್ಳಿಯಂತೆ ಬೆಳೆಯುತ್ತದೆ.
ಮಂಗರವಳ್ಳಿಯನ್ನು ತಂದು ಅದರ ಮೇಲಿನ ಪದರ ತೆಗೆದು,ತಿರಳಿಗೆ ಉಪ್ಪು ಕಾರ ಹಾಕಿ ಚೆಟ್ನಿ ಅಥವಾ ವಡೆಯಂತೆ ಎಣ್ಣೆಯಲ್ಲಿ ಕರಿದು ತಿಂದರೆ ಕಫ,ಅಜೀರ್ಣ ವಾಸಿಯಾಗುತ್ತೆ.ದೇಹದಲ್ಲಿನ ರಕ್ತ ಶುದ್ದಿಯಾಗುತ್ತೆ.
ಇದರ ಚಿಗರನ್ನು ಪಚ್ಚಡಿ ಮಾಡಿ ಸೇವಿಸುತ್ತಿದ್ದರೆ,ಜೀರ್ಣಸಮಸ್ಯೆಗಳುಗುಣವಾಗುತ್ತೆ.ಕೀಲು ನೋವುಗಳು, ಮಾಂಸ ಖಂಡಗಳ ನೋವುಗಳು ಶಮನವಾಗುತ್ತೆ, ಮೂಳೆಗಳು ಗಟ್ಟಿಯಾಗುತ್ತವೆ. ಮೈಯಲ್ಲಿನ ಅಧಿಕ ಉಷ್ಣತೆ ಕಡಿಮೆಯಾಗುತ್ತೆ
ಬಿಕ್ಕಳಿಕೆ ಬಂದಾಗ, ಮಂಗರವಳ್ಳಿ ತಂದು ಬೆಂಕಿಯಲ್ಲಿ ಸುಟ್ಟು ಹಿಂಡಿದ ರಸ 10 ರಿಂದ 20ml ತೆಗಿದುಕೊಂಡರೆ, ಬಿಕ್ಕಳಿಕೆ ಶೀಘ್ರ ನಿಲ್ಲುತ್ತೆ.
ಮೂಲವ್ಯಾಧಿಗಂತು ರಾಮಬಾಣದಂತೆ ಕೆಲಸ ಮಾಡುತ್ತೆ.ಪೈಲ್ಸ್ ಸಮಸ್ಯೆ ಇದ್ದಾಗ ಕಾಂಡವನ್ನು ಜಜ್ಜಿ ರಸ ತೆಗೆದು 2 ಚಮಚ ರಸವನ್ನು ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಶೀಘ್ರ ಗುಣವಾಗುತ್ತೆ.
ಮಂಗರವಳ್ಳಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಗ್ರಾಂ ಚೂರ್ಣ 1ಚಮಚ ಸಕ್ಕರೆ 1ಚಮಚ ತುಪ್ಪ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ, ಮೂಲವ್ಯಾಧಿ ಬೇಗನೆ ಗುಣವಾಗುತ್ತೆ.
ಕಿವಿ ನೋವಿದ್ದಾಗ ಮಂಗರವಳ್ಳಿ ಕಾಂಡ ತಂದು ಬೆಂಕಿಯಲ್ಲಿ ಸುಟ್ಟು, ಅದರ ಉಗರು ಬೆಚ್ಚಗಿನ ರಸ ಎರಡರಿಂದ ಮೂರು ತ್ತೊಟ್ಟು ಕಿವಿಗೆ ಬಿಟ್ಟರೆ ಬೇಗನೆ ವಾಸಿಯಾಗುತ್ತೆ.
ಮೂಳೆಗಳು ಮುರಿದಾಗ ಮಂಗರವಳ್ಳಿಯ ಕಾಂಡವನ್ನ ಚೆನ್ನಾಗಿ ಜಜ್ಜಿ ಅದಕ್ಕೆ ನಾಟಿಕೋಳಿ ಮೊಟ್ಟೆಯಲ್ಲಿನ ಬಿಳಿಯ ಭಾಗ ಕಲಸಿ,ಮೂಳೆ ಮುರಿದ ಜಾಗಕ್ಕೆ ಲೇಪಿಸಿ,ಬಿದರು ದಬ್ಬೆ ಹಾಕಿ,ಶುಭ್ರವಾದ ಹತ್ತಿ ಬಟ್ಟೆಯಿಂದ ಸುತ್ತಿ ಕಟ್ಟು ಕಟ್ಟಿದರೆ, ಮೂಳೆ ಬೇಗನೆ ಕೂಡಿಕೊಳ್ಳುತ್ತೆ.
ಮಂಗರವಳ್ಳಿಯನ್ನು ಕುಯ್ದಾಗ ಒಂದು ರೀತಿಯ ರಸ ಬರುತ್ತೆ, ಅದು ಕೈ ಮೇಲೆ ಬಿದ್ದರೆ ತುಂಬಾ ತುರುಕೆಯಾಗುತ್ತೆ, ಆದ್ದರಿಂದ ಕೈಗೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕುಯ್ಯಬೇಕು.
ಆಯುರ್ವೇದ ಪಂಡಿತರ ಸಲಹೆ ಸೂಚನೆ ಪಡೆದುಕೊಂಡು ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಮೂಲಿಕೆಯೊಡನೆ ಭೇಟಿಯಾಗೋಣ.ಧನ್ಯವಾದಗಳು

Design a site like this with WordPress.com
Get started