ಜುಲೈ 14, 2020; ಮಂಗಳವಾರ: ಇಂದಿನ ರಾಶಿಫಲ

ಮೇಷ

ಅದೃಷ್ಟದ ಶುಭವಾರ್ತೆಯನ್ನು ಕೇಳಲಿದ್ದೀರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹತ್ತಿ, ಅರಳೆ ಬಟ್ಟೆ ವ್ಯಾಪಾರಿಗಳಿಗೆ ಆದಾಯದಲ್ಲಿ ಹೆಚ್ಚಳ. ಸಾರಿಗೆ ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ.

ವೃಷಭ

ಸುಖ, ಸಂತೋಷ ಮನೋಲ್ಲಾಸದಿಂದಿರುವಿರಿ. ಮನೆಯಲ್ಲಿ ಶುಭಸಂಭ್ರಮ ಮನೆಮಾಡಲಿದೆ. ಮಿಶ್ರಲೋಹ, ಕಬ್ಬಿಣ ಮುಂತಾದ ಲೋಹದ ವ್ಯಾಪಾರಿಗಳಿಗೆ ವ್ಯವಹಾರ ಉತ್ತಮಗೊಂಡು ಅಧಿಕ ಲಾಭ.

ಮಿಥುನ

ದೂರದ ಪ್ರವಾಸವನ್ನು ಮುಂದೂಡಲಿದ್ದೀರಿ. ಕ್ಷೇತ್ರದರ್ಶನದ ಭಾಗ್ಯ ನಿಮ್ಮ ಪಾಲಿಗಿದೆ. ಹಿರಿಯ ಅಧಿಕಾರಿಗಳ ಸಹಮತದೊಂದಿಗೆ ಕೆಲಸ–ಕಾರ್ಯಗಳು ಸುಗಮ. ರಸಗೊಬ್ಬರ ವಿತರಕರಿಗೆ ವ್ಯವಹಾರದಲ್ಲಿ ಉತ್ಸಾಹ.

ಕಟಕ

ಕಚೇರಿ ಕೆಲಸಗಳಲ್ಲಿ ಯಶಸ್ಸು. ವ್ಯವಹಾರದಲ್ಲಿ ಔನ್ನತ್ಯ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಪ್ರತಿಷ್ಠೆಯಿಂದಾಗಿ ವಿರೋಧವನ್ನು ಎದುರಿಸಬೇಕಾದೀತು. ಹೋಟೆಲ್ ಮಾಲಿಕರಿಗೆ ಕೆಲಸಗಾರರ ದೆಸೆಯಿಂದ ನಷ್ಟ.

ಸಿಂಹ

ಉದ್ಯೋಗ ವ್ಯವಹಾರಗಳಲ್ಲಿ ಸಂತಸ. ವೃತ್ತಿಯಲ್ಲಿ ಉತ್ತಮ ಸುದ್ದಿಯನ್ನು ಕೇಳಲಿದ್ದೀರಿ. ಲೇವಾದೇವಿ ವ್ಯವಹಾರದಲ್ಲಿ ಹಣದ ಕೊರತೆ ಕಂಡಬರಲಿದೆ. ಸ್ತ್ರೀಯರಿಗೆ ವಿವಾಹ ನಿಶ್ಚಯ ಸಂಭವ.

ಕನ್ಯಾ

ಉದ್ಯೋಗ ವ್ಯವಹಾರಗಳು ಸುಗಮವಾಗಲಿವೆ. ದ್ರವ್ಯಾನುಕೂಲತೆ ಕಂಡುಬರುವುದು. ಬುದ್ಧಿವಂತಿಕೆಯ ವ್ಯವಹಾರದಿಂದಾಗಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಣ ಹೂಡಿಕೆಯಲ್ಲಿ ಎಚ್ಚರ ವಹಿಸುವುದು ಸೂಕ್ತ.

ತುಲಾ

ರಾಜಕೀಯ ವ್ಯಕ್ತಿಗಳಿಗೆ ಗುಪ್ತ ಧನಲಾಭವಾಗುವ ಸಾಧ್ಯತೆ. ತಂತ್ರಜ್ಞರಿಗೆ ರಕ್ಷಣಾಧಿಕಾರಿಗಳು, ವೈದ್ಯರುಗಳಿಗೂ ಸಾಮಾಜಿಕ ಪುರಸ್ಕಾರ ಸನ್ಮಾನಗಳು ಎದುರುಗೊಳ್ಳಲಿವೆ. ಕಲಾವಿದರುಗಳಿಗೆ ಧನ ಲಾಭ.

ವೃಶ್ಚಿಕ

ವಿನಾಕಾರಣ ಕಾನೂನು ಕಟ್ಟಳೆಗಳನ್ನು ಎದುರಿಸಬೇಕಾದೀತು. ಹಣದ ಕೊರತೆ ಕಂಡುಬರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ವಿರೋಧ. ದೇಹಾಲಸ್ಯ ಕಂಡುಬರಲಿದೆ. ದ್ರವ್ಯ ಹಾನಿಯ ಸಾಧ್ಯತೆ ಕಂಡುಬರುತ್ತಿದೆ.

ಧನು

ಉದ್ಯೋಗ ವ್ಯವಹಾರಗಳು ವೃದ್ಧಿ ಮತ್ತು ಧನಲಾಭ. ಸ್ತ್ರೀಯರಿಗೆ ಪುತ್ರ ಸಂತಾನ ಭಾಗ್ಯ ಸಾಧ್ಯತೆ. ಬುದ್ಧಿ ಚಾತುರ್ಯದಿಂದ ಕಾರ್ಯಗಳಲ್ಲಿ ಯಶಸ್ಸು. ಷೇರು ವ್ಯವಹಾರದಿಂದಾಗಿ ಅಧಿಕ ಲಾಭದ ಸಾಧ್ಯತೆ.

ಮಕರ

ವಸ್ತುಗಳ ಸಗಟು ವ್ಯವಹಾರಗಳು ವಿಫಲವಾಗುವ ಸಾಧ್ಯತೆ. ಮಿತ್ರ ಹಾಗೂ ಪಾಲುಗಾರಿಕೆ ವ್ಯವಹಾರದಲ್ಲಿ ಅಪನಂಬಿಕೆ ಅಪವಾದ ಎದುರಾದೀತು. ಪ್ರಯಾಣದಲ್ಲಿ ಕಲಹ. ಶುಭ ಕಾರ್ಯಗಳಲ್ಲಿ ವ್ಯತ್ಯಯ ಕಂಡಬರಲಿದೆ.

ಕುಂಭ

ಉತ್ಸವ ಸಮಾರಂಭಗಳಲ್ಲಿ ಭಾಗಿಯಾಗಲಿದ್ದೀರಿ. ಪ್ರಿಯ ವ್ಯಕ್ತಿಗಳಿಂದ ಒಳ್ಳೆಯ ಸುದ್ದಿಯೊಂದನ್ನು ಕೇಳಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣ. ಸಂಗಾತಿಯ ನಡವಳಿಕೆಯಿಂದಾಗಿ ಬೇಸರ ಉಂಟಾದೀತು.

ಮೀನ

ಕೈಗಾರಿಕೆ ಹಾಗೂ ಉದ್ದಿಮೆದಾರಿಗೆ ಉದ್ಯೋಗದಲ್ಲಿ ಉತ್ಕೃಷ್ಟತೆಯ ಕಾಲ. ದ್ರವ್ಯ ಮತ್ತು ಕನಕಾಭರಣ ಗಳನ್ನು ಹೊಂದುವ ಸಾಧ್ಯತೆ ಕಂಡುಬರುತ್ತಿದೆ. ಎಣ್ಣೆ, ತೈಲ, ತುಪ್ಪ ಮುಂತಾದವುಗಳ ವ್ಯಾಪಾರಸ್ಥರಿಗೆ ನಷ್ಟ.

ಆಯುರ್ವೇದ ಪಂಚಕರ್ಮ ಚಿಕಿತ್ಸೆ

ಆಯುರ್ವೇದದ ಪಂಚಕರ್ಮ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ

ಪಂಚಕರ್ಮ : 1

ಪುರಾಣ ವೇದಗಳಲ್ಲಿ ಆರೋಗ್ಯ ಚಿಕಿತ್ಸೆಯ ಕುರಿತಾದ ಒಂದು ಅಧ್ಯಾಯನ ಭಾಗವೇ ಆಯುರ್ವೇದ . ಇದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಚಿಕಿತ್ಸಾ ಪದ್ದತಿಯಾಗಿದೆ. ದೇಹ, ಮತ್ತು ಮನಸ್ಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಮತ್ತು ಕಾಯಿಲೆಗಳಿಂದ ದೂರವಿಡಲು ಆಯುರ್ವೇದ ಚಿಕಿತ್ಸೆ ನೆರವಾಗುತ್ತದೆ.ಆಯುರ್ವೇದದ ಪ್ರಕಾರ ಮನುಷ್ಯನ ಮನಸ್ಸೇ ಅನಾರೋಗ್ಯದ ಕೇಂದ್ರ ಬಿಂದುವಾಗಿದ್ದು, ಮನಸ್ಸಿನ ಅರೋಗ್ಯ ಎಷ್ಟು ಹದಗೆಡುವುದೋ ಅಷ್ಟೇ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸು ಉತ್ತಮವಾದಲ್ಲಿ ದೇಹವು ಉತ್ತಮವಾಗಿರುತ್ತೆ.

ಯೋಗಕ್ಷೇಮದ ನಿರ್ವಹಣೆಯ ಚೌಕಟ್ಟಿನ ಒಳಗೆ ಸ್ವಯಂ ಕಲಿಕೆ ಮತ್ತು ಹೊಂದಾಣಿಕೆಯ ದೃಷ್ಟಿಕೋನ ಮತ್ತು ಸಮನ್ವಯತೆ ಕೇಂದ್ರೀಕೃತವಾಗಿರುತ್ತದೆ. ಅದರಿಂದಲೇ ಆಧುನಿಕ ಜಗತ್ತಿನಲ್ಲಿ ಆಯುರ್ವೇದವನ್ನು ವಿಜ್ಞಾನವಾಗಿ,ಚಿಕಿತ್ಸಾ ವಿಭಾಗವಾಗಿ ಪರಿಗಣಿಸಲಾಗಿದೆ.

ಪಂಚಕರ್ಮ : 2

ಆಯುರ್ವೇದ ತನ್ನ ಗುಣಮಟ್ಟವನ್ನು ಹಿಂದಿನ ಕಾಲದಿಂದಲೂ ವ್ಯವಸ್ಥಿತವಾಗಿ ನಿರ್ವಹಿಸುತ್ತಲೇ ಬಂದಿದೆ . ಯೋಗಕ್ಷೇಮವನ್ನು ದೈಹಿಕ, ಮಾನಸಿಕ ಮತ್ತು ಪಾರಮಾರ್ಥಿಕ ಮಟ್ಟದಲ್ಲಿ ಕಾಯ್ದುಕೊಳ್ಳುವದೇ . ಆಯುರ್ವೇದದ ಪ್ರಮುಖ ಉದ್ದೇಶ. ಯೋಗಕ್ಷೇಮವು ಎಲ್ಲಾ ಶಕ್ತಿಗಳ ಒಪ್ಪಂದದೊಂದಿಗೆ ದೇಹವನ್ನು ಅನುಸರಿಸಿ ದೈಹಿಕ, ಮಾನಸಿಕ ಮತ್ತು ಆತ್ಮದ ಮಟ್ಟದಲ್ಲಿ ಚಿಕಿತ್ಸೆ ನಿರ್ವಹಿಸುವುದಾಗಿದೆ. ಪಾಶ್ಚಿಮಾತ್ಯ ಪದ್ದತಿಯ ಪ್ರಕಾರ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧದ ಮೂಲಕ ರೋಗವನ್ನು ಚಿಕಿತ್ಸಿಸಲಾಗುತ್ತದೆ ಆದರೆ ಆಯುರ್ವೇದ ವಿಚಾರದಲ್ಲಿ ಹಾಗಲ್ಲ.

ಇಲ್ಲಿ ಚಿಕಿತ್ಸೆಯ ಜೊತೆ ಜೊತೆಗೆ ಯೋಗಕ್ಷೇಮವನ್ನು ನೋಡಿಕೊಳ್ಳುವ ಹಲವು ಮಾರ್ಗಸೂಚಿಗಳನ್ನು ಸಂಯೋಜಿಸುತ್ತದೆ. ಆದ್ದರಿಂದಲೇ ಆಯುರ್ವೇದದ ವ್ಯಾಪ್ತಿಯು ವಿಸ್ತಾರವಾಗಿದ್ದು ಆಹಾರ, ಜೀವನ ಶೈಲಿ, ಜೀವನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅನಾರೋಗ್ಯಕ್ಕೆ ಪೂರಕವಾದ ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವುದು ಮತ್ತು ಅದಕ್ಕೆ ಸೂಕ್ತವಾದ ಪ್ರಕೃತಿ ದತ್ತ ಔಷಧಿಗಳ ಮೂಲಕ ಚಿಕಿತ್ಸೆ ನೀಡುವ ಪರಿಕಲ್ಪನೆಯನ್ನು ತಲತಲಾಂತರದಿಂದ ತನ್ನ ಅಸ್ತಿತ್ವದಲ್ಲಿ ಸ್ವತಂತ್ರ್ಯವಾಗಿ ನಿಭಾಯಿಸುತ್ತಾ ಬಂದಿದೆ.

ಆಯುರ್ವೇದದಲ್ಲಿ ಒಂದು ವ್ಯಕ್ತಿ ಮನುಷ್ಯನ ಮನಸ್ಸನ್ನು ಪ್ರಕೃತಿಯ ಅಂಶವೆಂದು ಮತ್ತು ದೇಹವನ್ನು ಇಡೀ ಬ್ರಹ್ಮಾಂಡವೆಂದು ಪರಿಗಣಿಸಲಾಗುತ್ತದೆ. ಮನಸ್ಸಿನ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಲುಪ್ರೇರೇಪಿಸುತ್ತದೆ. ಆಯುರ್ವೇದ ತನ್ನ ಚಿಕಿತ್ಸಾ ವಿಧಾನದಲ್ಲಿ ಮನಸ್ಸು ಮತ್ತು ಆತ್ಮ ಎಂಬ 2 ವಿಭಾಗವಾಗಿ ವರ್ಗೀಕರಿಸಿ ಸಮನಾಗಿ ಚಿಕಿತ್ಸೆ ನೀಡುತ್ತದೆ.
ಇದು ಅಂಕಣ ಸಂಚಿಕೆಯಾಗಿದ್ದು ಇದರಲ್ಲಿ ಆಯುರ್ವೇದ ಮತ್ತು ಅದಕ್ಕೆ ಸಂಬಂಧಿತ ವಿಷಯಗಳನ್ನು ಹಲವು ಭಾಗಗಳಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ.

1..ಪಂಚಕರ್ಮ ಚಿಕಿತ್ಸಾ ಪದ್ದತಿಗಳು: ಐದು ವಿಧದ ಚಿಕಿತ್ಸೆಯ ಮೂಲಕ ಆರೋಗ್ಯವನ್ನು ಕಾಪಾಡುವುದು ಮತ್ತು ದೇಹವನ್ನು ರಕ್ಷಣೆ ಮಾಡುವುದೇ ಪಂಚಕರ್ಮ ಚಿಕಿತ್ಸೆಯ ಮೂಲ ಉದ್ದೇಶ. ಇದು ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಮೂಲ ಮತ್ತು ಪ್ರಮುಖ ಅಂಶವಾಗಿದೆ.

  1. ಸ್ವೇಧನಂ ಚಿಕಿತ್ಸ: ಆಯುರ್ವೇದದಲ್ಲಿ ಇದು ಒಂದು ದೊಡ್ಡ ಚಿಕಿತ್ಸೆಯಾಗಿದೆ. ಔಷಧೀಕೃತ ಹಬೆ (steam)ಯ ಮೂಲಕ ಚಿಕಿತ್ಸೆಯನ್ನು ನಿರ್ವಹಿಸಲಾಗುತ್ತದೆ ಅಮೂಲ್ಯ ಗಿಡಮೂಲಿಕೆಗಳ ಎಲೆಗಳು ಮತ್ತು ಗಿಡಮೂಲಿಕೆಗಳನ್ನು ನೀರಿನಲ್ಲಿ ಬೇಯಿಸಿ ಆ ಮೂಲಕ ಉತ್ಪತಿಯಾಗುವ ಔಷಧೀಕೃತ ಆವಿಯನ್ನು ಸಣ್ಣ ಕೊಠಡಿ ಆಕಾರದ ಗೂಡಿನಲ್ಲಿ ಬಿಡಲಾಗುತ್ತದೆ.
  2. ಅಭಯಾಂಗ: ಅಭಯಾಂಗ ಎಂದರೆ ಎಣ್ಣೆಯ ಮಜ್ಜನ , ಅಥವಾ ಗಿಡಮೂಲಿಕೆಯ ಎಣ್ಣೆಯಿಂದ ಇಡೀ ದೇಹವನ್ನು ಮಸಾಜ್ ಮಾಡುವ ಪ್ರಕ್ರಿಯೆಯಾಗಿದೆ. ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ರಕ್ತ ಸಂಚಾರವನ್ನು ಸುಧಾರಿಸುವುದರ ಜೊತೆಗೆ ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

4.ವಾಸ್ತಿ ಕರ್ಮ: ಪಂಚಕರ್ಮ ಚಿಕಿತ್ಸೆಗಳಲ್ಲಿ ವಾಸ್ತಿ ಕರ್ಮ ಕೂಡ ಒಂದು. ಮುಖ್ಯವಾಗಿ ವಾತ ದೋಷವನ್ನು ನಿವಾರಿಸುವಲ್ಲಿ ಇದು ಸಹಕಾರಿಯಾಗಿದೆ. ಗಿಡ ಮೂಲಿಕೆಗಳು, ತುಪ್ಪ, ಎಣ್ಣೆ ಇತ್ಯಾದಿಗಳನ್ನು ಬಳಸಿ ಕುತಿಗೆಯ ಭಾಗದಿಂದ ತೋಳುಗಳ ಮೇಲೆ ಮಸಾಜ್ ಮಾಡಲಾಗುತ್ತದೆ . ಈ ಚಿಕಿತ್ಸಾ ವಿಧಾನದಿಂದ ಸೈನಸ್,ಮೈಗ್ರೇನ್, ಶೀತ ಮತ್ತು ನೆಗಡಿಯನ್ನು ತಡೆಯಬಹದು

5.ವಿರೇಚನ ಕರ್ಮ: ಆಯುರ್ವೇದ ಚಿಕಿತ್ಸೆಯ ಮತ್ತೊಂದು ಭಾಗವಾಗಿದೆ. ಇದು ದೇಹದ ಪಿತ್ತಕೋಶದಲ್ಲಿ ಉದ್ಭವಿಸುವ ಸಮಸ್ಯೆಯನ್ನು ನಿವಾರಿಸುತ್ತದೆ. ಡಯಾಬಿಟಿಸ್, ಅಸ್ಥಮಾ, ಚರ್ಮರೋಗ, ಅಜೀರ್ಣ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯಾಗಿದೆ.

  1. ನಾಸ್ಯ: ನಾಸ್ಯಕರ್ಮ ಎಂದರೆ ಅಂಗಗಳ ಚಟುವಟಿಕೆ ಹೆಚ್ಚಿಸಲು ಮತ್ತು ತಲೆಯಾ ಭಾಗದಲ್ಲಿ ಉಂಟಾಗುವ ವಿವಿಧ (urdhwanga) ರೋಗಗಳನ್ನು ತಡೆಯುವುದಾಗಿದೆ. ನಾಸ್ಯ ಕರ್ಮದ ಮೂಲಕ ಕಣ್ಣು , ಕಿವಿ, ಮತ್ತು ಮೂಗಿನ ಸಮಸ್ಯೆಯನ್ನು ನಿವಾರಿಸಬಹುದು.

7.ತೈಲ ಧಾರಾ: ಪಾರ್ಶ್ವ ವಾಯು ಸಮಸ್ಯೆ ,ಲೈಂಗಿಕ ದೌರ್ಬಲ್ಯ, ದೇಹದ ನೋವುಗಳಿಗೆ ತೈಲ ಧಾರಾ ಬಲಸಲಾಗುತ್ತದೆ. ತೈಲ ಧಾರಾ ದಿಂದ ದೇಹದ ಚರ್ಮ ಕಾಂತಿ ಯುಕ್ತವಾಗುವುದಷ್ಟೇ ಅಲ್ಲದೆ ಆಯಾಸ ಮತ್ತು ಅಲಾಸ್ಯವನ್ನು ತಡೆಯಬಹುದು

8.ಮರ್ಮ ಚಿಕಿತ್ಸಾ: ಸಂಧಿವಾತ, ಜಂಟಿ ಮತ್ತು ಸ್ನಾಯು ನೋವು, ಹಲವು ಬೇನೆಗಳಿಗೆ ಈ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ , ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಮುಟ್ಟಿನ, ಬಂಜೆತನ ಮತ್ತು ನರ ದೌರ್ಬಲ್ಯ ನಂತಹ ಲೈಂಗಿಕ ಕಾಯಿಲೆಗಳಿಗೆ ಉಪಶಮನವಾಗಿದೆ.

9.ಔಷಧ ಎಳೆಗಳ ಒಳಗೊಂಡ ಚಿಕಿತ್ಸೆ: ಔಷಧೀಯ ಎಲೆಗಳನ್ನು ಬೇವಿನ ಅಥವಾ ಹರಳೆಣ್ಣೆ ಜೊತೆಗೆ ಹುರಿದು ಔಷಧೀಕೃತ ತೈಲ ಮಾಡಲಾಗುತ್ತದೆ. ಇದರಲ್ಲಿ ನಿಂಬೆ ತುಣುಕುಗಳನ್ನು ಮತ್ತು ತೆಂಗನ್ನು ಸೇರಿಸಲಾಗುತ್ತದೆ. ನಂತರ ಶುಬ್ರ ಬಟ್ಟೆಯಲ್ಲಿಟ್ಟು ಗೊಂಚಲಾಕಾರದಲ್ಲಿ ಕಟ್ಟಿ ಔಷಧೀಕೃತ ತೈಲ ಮುಳುಗಿಸಿ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ತದ ನಂತರ ಮಸ್ಲಿನ್ ಬಟ್ಟೆಯಲ್ಲಿ ಔಷಧೀಕೃತ ಪುಡಿಯನ್ನು ಹಾಕಿ ಸಣ್ಣ ಗೊಂಚಲಿನಾಕಾರದಲ್ಲಿ ಕಟ್ಟಿ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ಸ್ನಾಯು ನೋವು, ಸಂಧಿ ಊತ ಮೈ ಕೈ ನೋವುಗಳನ್ನು ಇದು ಶಮನಗೊಳಿಸುತ್ತದೆ.

10.ಧಾರಾ:ಕೇರಳೀಯ ಆಯುರ್ವೇದ ಚಿಕಿತ್ಸಾ ಪದ್ದತಿಗಳಲ್ಲಿ ವಿಭಿನ್ನ ಮತ್ತು ವಿಶೇಷ ವಾದ ಚಿಕಿತ್ಸೆಯಾಗಿದೆ. ಔಷಧಿ ಎಳೆಗಳ ಬೆಚ್ಚಗಿನ ಎಣ್ಣೆ / ಗಿಡಮೂಲಿಕೆ ಕಷಾಯ / ಔಷಧೀಯ ಹಾಲು / ಮಜ್ಜಿಗೆ ಯನ್ನು ನಿರಂತರವಾದ ಧಾರೆಯಾಗಿ 45 ರಿಂದ 90 ನಿಮಿಷಗಳ ಕಾಲ ಹಣೆಯ ಮೇಲೆ ಸುರಿಯಲಾಗುತ್ತದೆ. ಅಗತ್ಯ ಬದಲಾವಣೆಗಳೊಂದಿಗೆ, ದೋಷ ಸ್ಥಿತಿಯನ್ನು ಪರಿಶೀಲಿಸಿ ಅದಕ್ಕೆ ಸೂಕ್ತ ಪ್ರಕಾರ ದ್ರವ ಬದಲಾಯಿಸುವ ಮೂಲಕ ಧಾರಾ ಚಿಕಿತ್ಸೆಯನ್ನು ನೆರವೇರಿಸಲಾಗುತ್ತದೆ.

11.ವಾಮನ ಚಿಕಿತ್ಸಾ: ಪಂಚ ಕರ್ಮ ಚಿಕಿತ್ಸಾ ವಿಧಾನದಲ್ಲಿ ಪ್ರಮುಖವಾದ ಚಿಕಿತ್ಸೆಯಾಗಿದೆ.ಅತಿಸಾರ ಬೇದಿ, ಜಠರ ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ. ವಾಮನ ಚಿಕಿತ್ಸೆಯನ್ನು ಸೂಕ್ತ ವಿಧಾನದಲ್ಲಿ ತಜ್ಞರ ಉಪಸ್ತಿತಿಯಲ್ಲಿ ಮಾತ್ರ ನಡೆಸಲು ಸಾಧ್ಯ. ವಾಮನ ಚಿಕಿತ್ಸೆಯಿಂದ ಬಹಳಷ್ಟು ಲಾಭ ಪಡೆಯಬಹುದು.

12.ಸ್ನೇಹನಂ ಚಿಕಿತ್ಸಾ: ” ಸ್ನೇಹಾನಂ ಸ್ನೇಹ ವಿಶ್ಯಾಂದ ಮಾರ್ದವ ಕಳೆದ ಕಾರಣಂ” ಎಂದು ಸ್ನೇಹಾನಂ ಚಿಕಿತ್ಸೆಯನ್ನು ಸಂಸ್ಕೃತದಲ್ಲಿ ವ್ಯಾಖ್ಯಾನಿಸಲಾಗಿದೆ . ಔಷಧ ಮತ್ತು ಚಿಕಿತ್ಸೆಯ ಮೂಲಕ ದೇಹದ ಎಲ್ಲಾ ಭಾಗವನ್ನು ನಯಗೊಳಿಸುವುದು ಎಂದರ್ಥ. ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕಿ ದೈಹಿಕ ಪ್ರಕ್ರಿಯೆಯನ್ನು ಹೆಚ್ಚಿಸುವುದೇ ಇದರ ಮೂಲ ಉದ್ದೇಶ . ಇದು ಸ್ವೇದನಾ ಚಿಕಿತ್ಸೆಯ ಒಂದು ಪ್ರಕಾರ ವಾಗಿದೆ.

  1. ಬಸ್ತಿ ಚಿಕಿತ್ಸಾ: ಬಸ್ತಿ ಮೂಲತಃ ಆಯುರ್ವೇದ ಪದವಾಗಿದೆ . ಸೊಂಟದ ಕೆಳಗಿನ ಭಾಗವಾದ ಮೂತ್ರ ಕೋಶ ಅಥವಾ ಮೂತ್ರ ಸ್ವೀಕರಿಸುವ ಅಂಗಕ್ಕೆ ಬಸ್ತಿ ಎಂದು ಕರೆಯಲಾಗುತ್ತದೆ . ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಅತ್ಯಂತ ಶ್ರೇಷ್ಠ ಚಿಕಿತ್ಸಾ ಭಾಗವೆಂದು ಇದನ್ನು ಪರಿಗಣಿಸಲಾಗಿದೆ. ದೀರ್ಘಕಾಲದ ನರ ದೌರ್ಬಲ್ಯ ಸಮಸ್ಯೆಗಳು, ಬೆನ್ನಿನ ನೋವಿಗೆ ಇದು ಪರಿಣಾಮಕಾರಿಯಾದ ಚಿಕಿತ್ಸೆ ಯಾಗಿದೆ
  2. ರಕ್ತ ಮೋಕ್ಷಾ ಚಿಕಿತ್ಸಾ: ರಕ್ತದ ಶುದ್ಧೀಕರಣಕ್ಕೆ ಪ್ರಯೋಗಿಸಲಾಗುವ ಸಾಂಪ್ರದಾಯಿಕ ಆಯುರ್ವೇದ ವಿಧಾನ. ದೇಹಕ್ಕೆ ಸಮಸ್ಯೆ ಒಡ್ಡುವಂತಹ ಟಾಕ್ಸಿನ್ ಗಳು ಕರಳಿನ ಭಾದಲ್ಲಿ ಮತ್ತು ರಕ್ತ ಕಣಗಳಲ್ಲಿ ಹೇರಳವಾಗಿರುತ್ತದೆ . ಇದು ವಿಷಯುಕ್ತ ರಕ್ತ ಕಣಗಳನ್ನು ದೇಹದಿಂದ ಹೊರಹಾಕಿ ಗಿಡಮೂಲಿಕೆಯ ಕಷಾಯದ ಸೇವನೆಯ ಮೂಲಕ ರಕ್ತ ಶುದ್ಧೀರಿಸಲಾಗುತ್ತದೆ. ದೇಹದಲ್ಲಿ ರಕ್ತ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವುದೆ ಇದರ ಮೂಲ ಉದ್ದೇಶ

ಜುಲೈ 13, 2020; ಸೋಮವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ
ಸೋಮವಾರ, ರೇವತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:40 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:28

ಮೇಷ

ಉದ್ಯೋಗದಲ್ಲಿರುವವರು ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದಿರುವುದು ಒಳ್ಳೆಯದು. ಪ್ರತಿಭಾವಂತರಿಗೆ ವಿಫುಲ ಅವಕಾಶಗಳು ಕೂಡಿಬರಲಿವೆ. ಆಭರಣಾದಿ ಬೆಲೆಬಾಳುವ ವಸ್ತುಗಳ ಖರೀದಿ ಯೋಗ.

ವೃಷಭ

ವ್ಯವಹಾರದಲ್ಲಿ ನಿಪುಣತೆಯನ್ನು ಮೆರೆಯಲಿದ್ದೀರಿ. ಅಧಿಕಾರಿಗಳಿಂದ ಮಾನಸಿಕ ಹಿಂಸೆ ಸಂಭವ. ಆಧ್ಯಾತ್ಮಿಕ ಒಲವಿನಿಂದಾಗಿ ಸಮಾಧಾನ. ಆತ್ಮೀಯರಿಂದ ಸಮಸ್ಯೆಗಳಿಗೆ ಪರಿಹಾರ. ಮಹಿಳೆಯರಿಗೆ ತಾಳ್ಮೆ ಅಗತ್ಯ.

ಮಿಥುನ

ಹೊಸ ಉದ್ಯಮವೊಂದರ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ. ವಿದ್ಯುತ್, ಬೆಂಕಿ ಮುಂತಾದವುಗಳ ವಿಷಯದಲ್ಲಿ ಜಾಗೃತೆ ಅಗತ್ಯ. ಲಲಿತ ಕಲೆಗಳಲ್ಲಿ ತೊಡಗಿಕೊಂಡವರಿಗೆ ಲಾಭ. ಮಕ್ಕಳಿಂದ ನೆಮ್ಮದಿ.

ಕಟಕ

ದೈನಂದಿನ ಕೆಲಸ–ಕಾರ್ಯಗಳಲ್ಲಿ ಆಸಕ್ತಿ ಮೂಡುವುದು. ತಲೆದೋರಿರುವ ವಿವಾದಗಳಿಗೆ ಮುಕ್ತಿ ದೊರಕುವ ಸಾಧ್ಯತೆ. ದೂರದ ಪ್ರಯಾಣದ ಅನಿವಾರ್ಯತೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ಸಿಂಹ

ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಕೀರ್ತಿ, ಶುಭ ಲಾಭಗಳು ಕಂಡುಬರುವವು. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರದ ಸಾಧ್ಯತೆ. ರಾಜಕೀಯ ಜೀವನದಲ್ಲಿ ಸಂತೃಪ್ತಿ. ದೇವತಾರಾಧನೆಯಿಂದ ನೆಮ್ಮದಿ. ವ್ಯಾಪಾರದಲ್ಲಿ ಪ್ರಗತಿ.

ಕನ್ಯಾ

ವ್ಯವಹಾರದ ವಿಷಯದಲ್ಲಿ ಮಹತ್ತರ ನಿರ್ಣಯವೊಂದನ್ನು ತೆಗೆದುಕೊಳ್ಳಲಿದ್ದೀರಿ. ಮಾತೃವರ್ಗದವರಿಂದ ಸಾಂತ್ವನ ದೊರೆತು ನೆಮ್ಮದಿ. ಆಂತರಿಕ ಸಮಸ್ಯೆಗಳಿಂದ ಮುಕ್ತಿ. ಅಮೂಲ್ಯ ವಸ್ತುಗಳ ಸಂಗ್ರಹದ ಸಾಧ್ಯತೆ.

ತುಲಾ

ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ವ್ಯವಹಾರದಲ್ಲಿ ಪ್ರಗತಿ. ಹಿರಿಯರ ಆರೋಗ್ಯದ ಬಗ್ಗೆ ಖರ್ಚು. ಪುಣ್ಯಕ್ಷೇತ್ರ ದರ್ಶನ ಭಾಗ್ಯ. ಮಹಿಳೆಯರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತವಾಗಲಿದೆ.

ವೃಶ್ಚಿಕ

ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಆದಾಯದಲ್ಲಿ ಕಡಿತ. ಆರ್ಥಿಕ ಸಂಪನ್ಮೂಲಗಳ ವೃದ್ಧಿ. ನಿರೀಕ್ಷಿಸಿದ ವ್ಯಕ್ತಿಗಳಿಂದ ಸಹಕಾರ ಲಭ್ಯವಾಗುವುದು. ಹಿತಶತ್ರುಗಳಿಂದ ಮೋಸಹೋಗುವ ಸಾಧ್ಯತೆ.

ಧನು

ಹೊಸ ಆಸ್ತಿ, ಮನೆಯನ್ನು ಖರೀದಿಸುವ ಸಾಧ್ಯತೆ. ಉದ್ಯೋಗ ಕ್ಷೇತ್ರದಲ್ಲಿ ನಿಷ್ಠೆಯಿಂದಾಗಿ ಪ್ರೋತ್ಸಾಹ ಪ್ರಶಂಸೆ ಸಿಗಲಿದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರಕುವ ದಿನ. ಪತ್ರ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ.

ಮಕರ

ಅನಾವಶ್ಯಕ ವಿವಾದಗಳಿಂದ ದೂರ ಇರುವುದು ಉತ್ತಮ. ಆರೋಗ್ಯದಲ್ಲಿ ಪ್ರಗತಿ. ರಾಜಕೀಯ ವ್ಯಕ್ತಿಗಳು ಶುಭ ಸಮಾಚಾರ ಕೇಳಲಿದ್ದೀರಿ. ಆಲಸ್ಯದಿಂದಾಗಿ ಕೆಲಸಗಳಲ್ಲಿ ಹಿನ್ನೆಡೆ ಸಾಧ್ಯತೆ.

ಕುಂಭ

ಯೋಜಿತ ಕಾರ್ಯಗಳಲ್ಲಿ ಯಶಸ್ಸು. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ದಾಯಾದಿಗಳೊಂದಿಗಿನ ಹೊಂದಾಣಿಕೆಯಿಂದ ಆಸ್ತಿ ತಗಾದೆಗಳು ತೀರ್ಮಾನವಾಗಲಿವೆ. ಆರೋಗ್ಯದ ಬಗ್ಗೆ ನಿಗಾ ಅಗತ್ಯ.

ಮೀನ

ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಮತ್ತೊಮ್ಮೆ ಯೋಚಿಸುವುದು ಉತ್ತಮ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಋಣಬಾಧೆಯಿಂದ ಮುಕ್ತಿ ದೊರಕುವ ಸಾಧ್ಯತೆ. ತಾಯಿಯಿಂದ ಸಹಕಾರ.

ಇಂದಿನ ಔಷಧೀಯ ಸಸ್ಯದ ಪರಿಚಯ: ನಂದಿಬಟ್ಟಲು

ತಗರ (ನಂದಿ ಬಟ್ಲು) ನಂದಿ ವರ್ಧನ, ನಂದಿವಾಳ, ನಂದಿಯ ವಟೈ, ನಂದಿಯ ವಟ್ಟಂ ನಂದಿಯ ಪೂ ಎಂಬ ಹೆಸರುಗಳಿಂದ ಕರೆಯುತ್ತಾರೆ. ನಂದಿ ಬಟ್ಲು ಗಿಡವನ್ನು ಹಳ್ಳಿಗಳಲ್ಲಿ ಮನೆಯ ಹಿತ್ತಲಲ್ಲಿ, ತೋಟಗಳಲ್ಲಿ, ದೇವಾಲಯಗಳಲ್ಲಿ, ಉದ್ಯಾನ ವನಗಳಲ್ಲಿ ಅಂದಕ್ಕಾಗಿ ಬೆಳೆಸಿರುತ್ತಾರೆ. ಸುಮಾರು 6 ರಿಂದ 10 ಅಡಿ ಎತ್ತರ ಬೆಳೆದು,ಸುವಾಸನೆಭರಿತವಾದ ಗೊಂಚಲು

ಗೊಂಚಲು ಬಿಳಿಯ ಹೂವುಗಳನ್ನು ಬಿಡುತ್ತದೆ.
ಶಿವನ ಆರಾಧನೆಗೆ ನಂದಿವಾಳ ಹೂವುಗಳು ಬಹಳ ಶ್ರೇಷ್ಠವೆಂದು ಹಿಂದೂಗಳು ಭಾವಿಸುತ್ತಾರೆ.
ಈ ಹೂವುಗಳನ್ನು ಸೋಮವಾರ ಅಥವಾ ಕಾರ್ತಿಕ ಸೋಮವಾರದಂದು, ಮನೆಯಲ್ಲಿ ಶಿವನ ಪೋಟೋಗೆ ಅಥವಾ ಶಿವಾಲಯಗಳಲ್ಲಿ ಶಿವನಿಗೆ ಸಮರ್ಪಿಸಿದರೆ ಮನದಲ್ಲಿನ ಎಲ್ಲಾ ಕೋರಿಕೆಗಳು ನೆರವೇರುತ್ತೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ.ಮನದಲ್ಲಿನ ಎಲ್ಲಾ ಆತಂಕಗಳು ದೂರವಾಗಿ, ಐಶ್ವರ್ಯ ಪ್ರಾಪ್ತಿಯಾಗುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಿದೆ. ಕಾರ್ತಿಕ ಮಾಸದಲ್ಲಿ ತುಂಬಾ ಹೂವುಗಳು ಸಿಗುವುದರಿಂದ, ಈ ಹೂವುಗಳನ್ನು ಶಿವಾರಾಧನೆಗೆ ಉಪಯೋಗಿಸುತ್ತಾರೆ.
ನಂದಿವರ್ಧನ, ಗರುಡವರ್ಧನ, ಗೋವರ್ಧನ ಎಂಬ ಮೂರು ಪ್ರಭೇದಗಳಿದ್ದು,ಮೂರು ಪ್ರಭೇದಗಳಲ್ಲೂ ಅಸಾಧಾರಣ ಔಷಧೀಯ ಗುಣಗಳು ತುಂಬಿವೆ.
ಪುರಾತನ ಕಾಲದಿಂದಲೂ ನಂದಿಬಟ್ಲು ಗಿಡವನ್ನು ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಔಷಧಿಯಾಗಿ ಉಪಯೋಗಿಸುತ್ತಾ ಬಂದಿದ್ದಾರೆ.
ಹಿಂದಿನ ಕಾಲದಲ್ಲಿ ಸ್ತ್ರೀಯರು ಕಣ್ಣಿನ ಅಂದ ಹೆಚ್ಚಲು ಇದರ ಹೂವುಗಳಲ್ಲಿ ಕಾಡಿಗೆ ತಯಾರಿಸಿ ಕಣ್ಣಿಗೆ ಅಚ್ಚಿಕೊಳುತ್ತಿದ್ದರು.ಕಣ್ಣಿಗೆ ಇದರ ಕಾಡಿಗೆ ಲೇಪಿಸುವುದರಿಂದ, ಕಣ್ಣಿನ ಆರೋಗ್ಯ ಕಾಪಾಡಿ, ಕಣ್ಣಿಗೆ ರಕ್ಷಾಕವಚವಾಗಿ, ಅನೇಕ ವ್ಯಾಧಿಗಳಿಂದ ಕಾಪಾಡುತ್ತೆ.
ನಂದಿಬಟ್ಲು ಹೂವುಗಳು ಕಣ್ಣಿನ ವ್ಯಾಧಿಗಳಿಗೆ ತುಂಬಾ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುವುದಲ್ಲದೆ,ಕಣ್ಣನ್ನು ರಕ್ಷಿಸಿ, ಕಣ್ಣಿಗೆ ತಂಪನ್ನು ನೀಡುತ್ತವೆ.
ನಂದಿಬಟ್ಲು ಹೂವಿನ ರಸ ತೆಗೆದು ಹರಳೆಣ್ಣೆ ಅಥವಾ ಮೊಲೆ ಹಾಲಿನಲ್ಲಿ ರಂಗಳಿಸಿ ಕಣ್ಣಿಗೆ ಲೇಪನ ಮಾಡಿದರೆ,ದೇಹದಲ್ಲಿನ ಉಷ್ಣತೆಯಿಂದ ಬರುವ ಕಣ್ಣಿನ ನೋವು, ನವೆ, ಉರಿ,ಕಣ್ಣು ಕೆಂಪಾಗಿ ನೀರು ಸುರಿಯುವುದೆಲ್ಲ ನಿವಾರಣೆಯಾಗುತ್ತೆ.
ನಂದಿಬಟ್ಲು ಗಿಡದ ಎಲೆಗಳಿಗೆ ಚಿಟಿಕೆ ಅರಸಿನ ಸೇರಿಸಿ ಅರೆದು ಗಾಯಗಳಿಗೆ ಲೇಪಿಸಿದರೆ,ಗಾಯಗಳು ಬೇಗನೆ ಗುಣವಾಗುತ್ತೆ.
ಈ ಗಿಡದ ಎಲೆಗಳ ಕಷಾಯವನ್ನು ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ, ಬಾಯಿ ದುರ್ವಾಸನೆ ದೂರವಾಗಿ, ವಸಡುಗಳು ದೃಢವಾಗಿ, ದಂತಪಂಕ್ತಿ ಗಟ್ಟಿಯಾಗುತ್ತೆ.
ನಂದಿಬಟ್ಲು ಹೂವುಗಳನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು, ಬೆಳಿಗ್ಗೆ ಆ ನೀರಿನಿಂದ ಕಣ್ಣುಗಳನ್ನು ಶುಭ್ರವಾಗಿ ತೊಳೆದುಕೊಂಡರೆ, ಕಣ್ಣಿನ ಅನೇಕ ದೋಷಗಳು ದೂರವಾಗುತ್ತೆ.ಹೂವುಗಳು ನೆನಸಿಟ್ಟ ನೀರನ್ನು ಹೊಟ್ಟೆಗೆ ಕುಡಿದರೆ, ಮೂತ್ರದಲ್ಲಿನ ಉರಿ, ಮೂತ್ರದ ಸಮಸ್ಯೆಗಳು ಶಮನವಾಗುತ್ತೆ.
ಒಂದು ಲೋಟ ಬಿಸಿನೀರಿನಲ್ಲಿ 3 ಚಮಚ ಎಲೆಗಳ ರಸವನ್ನು ಕಲಸಿ ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದಲ್ಲಿ ಸ್ತ್ರೀಯರಲ್ಲಿನ ಶ್ವೇತ ಪ್ರದರ ರೋಗ ಗುಣವಾಗುತ್ತೆ.
ಹಲ್ಲು ನೋವಿದ್ದಾಗ ಬೇರಿನ ಒಂದು ಚ್ಚಿಕ್ಕ ತುಂಡನ್ನು ಜಗೆದು ಸ್ವಲ್ಪ ಸಮಯದ ನಂತರ ಉಗಳಿದರೆ ಹಲ್ಲು ನೋವು ವಾಸಿಯಾಗುತ್ತೆ.
ಈ ಗಿಡದ ಹಾಲನ್ನು ಬಾವು, ಹುಣ್ಣು, ಗಾಯಕ್ಕೆ ಲೇಪಿಸುವುದರಿಂದ ಬೇಗ ಗುಣವಾಗುತ್ತೆ.
ನಂದಿಬಟ್ಲು ಹೂವು ಅಥವಾ ಎಲೆಗಳ ಕಷಾಯ ಮಾಡಿ ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಅಧಿಕ ರಕ್ತದೊತ್ತಡ ಅತೋಟಿಗೆ ಬರುತ್ತೆ.
ಹೂವು ಅಥವಾ ಎಲೆಗಳ ರಸವನ್ನು ತೆಗೆದು, ಕೊಬ್ಬರಿ ಎಣ್ಣೆಯಲ್ಲಿ ಕಲಸಿ, ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಿದ್ದಾಗ ತಲೆಗೆ ಮಸಾಜ್ ಮಾಡಿಕೊಂಡರೆ ಶಿರೋ ವ್ಯಾಧಿಗಳು ದೂರವಾಗುತ್ತೆ. ಗೆಳೆಯರೆ ವಂದನೆಗಳು

ಔಷಧೀಯ ಸಸ್ಯ ಪರಿಚಯ : ಅಮೃತಬಳ್ಳಿ

ಅಮೃತ ಬಳ್ಳಿ : ಇದನ್ನು ಸಂಸ್ಕೃತದಲ್ಲಿ ಗುಡುಚಿ ಎನ್ನಲಾಗುತ್ತದೆ. ಅಮೃತ ಬಳ್ಳಿ ಇದರ ವೈಜ್ಞಾನಿಕ ಹೆಸರು ಟಿನೋಸ್ಪೊರಾ ಕಾರ್ಡಿಫೋಲಿಯಾ. ಇದನ್ನು ಇಂಡಿಯನ್ ಕ್ವಿನೈನ್ ಎಂದು ಕರೆಯುತ್ತಾರೆ. ಇದು ಮೆನಿಸ್ಪೆರ್ಮೇಸಿಯಾ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ . .ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಅಮೃತಬಳ್ಳಿ:ಭಾರತ ಮತ್ತು ಶ್ರೀಲಂಕಾದ ಉಷ್ಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಕಂಡು ಬರುತ್ತದೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು. ಅಮೃತ ಬಳ್ಳಿ ಹೆಸರಲ್ಲೇ ಇರುವ ಹಾಗೆ ಇದು ನಿಜಕ್ಕೂ ಅಮೃತವೇ ,ಮೃತದ ವಿರುದ್ಧ ಪದ ಅಮೃತ. ಸಂಸ್ಕೃತದಲ್ಲಿ ಅಮೃತವೆಂದರೆ ಸಾವು ಬರದೇ ಇರುವಂತಹದು ಎಂದರ್ಥ. ಇದಕ್ಕೆ ವಿಶೇಷವಾದ ಆರೈಕೆ ಏನು ಬೇಡ. ಇದಕ್ಕೆ ಯಾವ ಗೊಬ್ಬರವೂ ಹಾಕುವ ಹಾಗಿಲ್ಲ. ಒಂದು ಬಿಂದಿಗೆ ನೀರು ಹಾಕಿದರೆ ಸಾಕು ಎಲ್ಲಾ ಕಾಲದಲ್ಲಿಯೂ ಚಿಗುರುತ್ತದೆ. ಹಿಂದಿನ ಕಾಲದಲ್ಲಿ ತುಳಸಿಗಿಡ ಹಾಕುವ ಹಾಗೆ ಎಲ್ಲರೂ ತಮ್ಮ ಹಿತ್ತಲಿನಲ್ಲಿ ಅಮೃತ ಬಳ್ಳಿಯನ್ನು ಹಾಕುತ್ತಿದ್ದರು. ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ. ಅಮೃತಬಳ್ಳಿಯು ಮರಗಳ ಮೇಲೆ ತೋಟಗಳ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳಲ್ಲಿ ಪೊದೆಗಳ ಮೇಲೂ ಸಹ ಹಬ್ಬಿರುತ್ತದೆ. ಇದರ ಪತ್ರೆ ಹಸಿರು ಮತ್ತು ಹೃದಯಾಕಾರವಾಗಿರುತ್ತದೆ, ಮೃದುವಾಗಿರುತ್ತದೆ. ಕಾಂಡದ ಮೇಲೆ ತೆಳು ಪೊರೆಯಿರುತ್ತದೆ ಮತ್ತು ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ. ಪ್ರತಿಭಾಗವೂ ಕಹಿಯಾಗಿರುತ್ತದೆ.
ಅಮೃತಬಳ್ಳಿಯನ್ನು ನಿಮಗೆ ಬಂದಿರುವಂತಹ ಕಾಯಿಲೆಗೆ ಮನೆಮದ್ದಿನ ರೂಪದಲ್ಲಿ ಬಳಕೆ ಮಾಡಬಹುದು.
ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆಆಹಾರ ಸೇವನೆಗೆ ಮುಂಚೆ ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ,ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಕಷಾಯ ಮಾಡಿ ಕುಡಿಯಬಹುದು. ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ. ಎಲ್ಲಾ ಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿಯು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ ರೋಗಕ್ಕೆ ಔಷಧಿಯಾಗಿ ಬಳಸುತ್ತಾರೆ. ಅದರ ತಜಾ ಕಾಂಡವನ್ನು ಜಜ್ಜಿ , ಹಿಸುಕಿ ರಸ ತೆಗೆದು ೨ ಚಮಚ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ ೩ ಬಾರಿ ಆಹಾರ ಸೇವನೆಯ ಮುಂಚೆ ಕುಡಿಯ ಬೇಕು. ಅಮೃತಬಳ್ಳಿಯ ಚೂರ್ಣ ಅರ್ಧ ಟೀ ಚಮಚದಷ್ಟೇ ಒಂದೆರಡು ಮೆಣಸು ಕಾಳಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ವೇಳೆ ಸೇವಿಸುವುದು. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು. ಹೃದಯ ಶೂಲೆಯಲ್ಲಿ
ಸ್ಮರಣ ಶಕ್ತಿಗೆ:ಶತಾವರಿ ಶುಂಠಿ ವಾಯುವಿಳಂಗ ಬಜೆ, ಬ್ರಾಹ್ಮಿ ಅಳಲೆಕಾಯಿ ಉತ್ತರಾಣೆ ಮತ್ತು ಸಮಭಾಗ ಅಮೃತಬಳ್ಳಿ ಸೇರಿಸಿ ನಯವಾದ ಚೂರ್ಣ ಮಾಡಿಟ್ಟುಕೊಳ್ಳುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಸ್ವಲ್ಪ ತುಪ್ಪ ಸೇರಿಸಿ ನೆಕ್ಕುವುದು. ಮೇಲೆ ಕೆಂಪು ಕಲ್ಲುಸಕ್ಕರೆ ಹಾಕಿರುವ ಬಿಸಿ ಹಾಲನ್ನು ಕುಡಿಯುವುದು. ದೂರವಾಣಿ ಸಂಖ್ಯೆಗಳನ್ನಾಗಲಿ ಅಥವಾ 15ರಿಂದ 19ರ ತನಕ ಮಗ್ಗಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದು ಕೆಲವೇ ತಿಂಗಳಲ್ಲಿ ಫಲ ದೊರೆಯುವುದು.
ಬಾಯಾರಿಕೆ, ವಾಂತಿ, ವಾಕರಿಕೆ : ಸುಮಾರು 25 ಗ್ರಾಂನಷ್ಟು ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳುವುದು. ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದು.
ಮೂತ್ರನಾಳದಲ್ಲಿ ಕಲ್ಲು : ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯ ಸಮತೂಕ ನಯವಾಗಿ ಚೂರ್ಣ ಮಾಡಿಟ್ಟುಕೊಳ್ಳುವುದು. 10ಗ್ರಾಂನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು.
ಮೈಮೇಲೇಳುವ ಪಿತ್ತದ ಗಂಧೆಗಳು : ಅಮೃತಬಳ್ಳಿಯ ಎಲೆ ಸಾಸಿವೆ ಶ್ರೀಗಂಧದ ಚಕ್ಕೆ ಇವುಗಳ ಸಮತೂಕವನ್ನು ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ ಹಚ್ಚುವುದು. ಪಿತ್ತ ವಿಕಾರ ಕಡಿಮೆ ಆಗಿ ಪಿತ್ತದ ಗಂಧೆಗಳು ಮತ್ತು ನೆವೆ ಉರಿ ಶಮನವಾಗುವುದು.
ಹೊಟ್ಟೆ ಉರಿ : ಹಸಿಸೊಪ್ಪಿನ ರಸ 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.
ವಾತ ಜ್ವರದಲ್ಲಿ : ಅಮೃತಬಳ್ಳಿ ತ್ರಫಲ ಚೂರ್ಣ, ತುಂಗೇಗುಡ್ಡೆ ಕೊತ್ತಂಬರಿ, ಶತಾವರಿ, ಕಳ್ಳಂಗಡಲೆ ಮತ್ತು ಬೇಲದ ಬೇರು ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು. ಸ್ವಲ್ಪ ಚೂರ್ಣಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಿಸಿ ಅರ್ಧ ಬಟ್ಟಲು ಕಷಾಯವನ್ನು ಮಾಡಿ ಆರಿಸಿ ಕುಡಿಯುವುದು.
ಬುದ್ಧಿ ಭ್ರಮಣೆಗೆ : ಹಸಿ ಅಮೃತಬಳ್ಳಿಯನ್ನು ತಂದು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಪಟ್ಟು ಹಾಕುವುದು. ಒಂದೆರಡು ತಾಸುಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದು.
ದೃಷ್ಟಿಮಾಂದ್ಯದಲ್ಲಿ : ಅಮೃತಬಳ್ಳಿ ತ್ರಿಫಲ ಚೂರ್ಣ, ಹಿಪ್ಪಲಿ ಸಮ ಪ್ರಮಾಣ ಸೇರಿಸಿ ಜಜ್ಜಿ ಕಷಾಯ ಮಾಡುವುದು. ಅರ್ಧ ಬಟ್ಟಲು ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದು.
ಬೊಜ್ಜು ಮತ್ತು ಕೊಬ್ಬು ಕಡಿಮೆ ಆಗಲು, ಆಯಸ್ಸು ಹೆಚ್ಚಲು : ಇದು ಪರಿಣಾಮಕಾರಿ ಔಷಧಿ. ಮೇಲಿನ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಟೀ ಚಮಚ ಜೇನು ತುಪ್ಪವನ್ನು ಕೂಡಿಸಿ ಸೇವಿಸುವುದು. ಸುಮಾರು 40 ದಿವಸ ಅರಳ ಅಂಗಸಾಧನೆ, ಕೊಬ್ಬು ರಹಿತ ಆಹಾರ, ತಣ್ಣೀರು ಸ್ನಾನ ಮತ್ತು ದೀರ್ಘ ನಡಿಗೆ ಅಭ್ಯಾಸ ಮಾಡಿಕೊಳ್ಳುವುದು.
ಸ್ತ್ರೀಯರ ರಕ್ತ ಪ್ರದರಕ್ಕೆ : 20ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಸಕ್ಕರೆ ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು.
ಉರಿ ಮೂತ್ರದಲ್ಲಿ : ಅಮೃತಬಳ್ಳಿ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿವಸಕ್ಕೆ ಎರಡು ಬಾರಿ ಸೇವಿಸುವುದು ಅಥವಾ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದು, ಪ್ರಮಾಣ ಒಂದು ಗ್ರಾಂ ವೇಳೆಗೆ.
ಅದಲ್ಲದೆಯೇ ಅಮೃತ ಬಳ್ಳಿಯನ್ನು ಊಟದ ರೂಪದಲ್ಲಿ ಸಾಂಬಾರು, ಪಲ್ಯ,ಚಟ್ನಿಯನ್ನು ಕೂಡ ಮಾಡಿಕೊಂಡು ತಿನ್ನಬಹುದು. ಇತರಹದ ರೂಪದಲ್ಲಿಯೂ ಕೂಡ ಉಪಯೋಗ ಮಾಡಿದೆ ಆದಲ್ಲಿ ಮುಂದೆ ಬರುವಂತಹ ಕಾಯಿಲೆಗಳನ್ನ ತಡೆಗಟ್ಟಲಿಕೆ ಸಾಧ್ಯತೆ ಇದೆ.
‘ಸ್ವಾಸ್ಥಸ್ಯ ಸ್ವಾಸ್ಥ ರಕ್ಷಣಂ’ ಅಂದರೆ ಕಾಯಿಲೆ ಬಂದ ಮೇಲೆ ವಾಸಿ ಮಾಡಿಕೊಳ್ಳುವುದಕ್ಕೇ ಪ್ರಯತ್ನ ಪಡುವ ಬದಲು ಕಾಯಿಲೆನೆ ಬರದ ಹಾಗೆ ತಡೆಯಬೇಕು ಎಂದರ್ಥ. ಈ ಅಮೃತ ಬಳ್ಳಿಯನ್ನು ಬಳಸುವುದರಿಂದ ಬರುವಂತ ಕಾಯಿಲೆಗಳನ್ನು ಅಲ್ಲೇ ತಡೆಯುವಂತಹ ಅವಕಾಶಗಳಿವೆ
ಸಂಗ್ರಹ , ಮಾಹಿತಿ: GRATION MANGALORE

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ರಲ್ಲೂ ಕೊರೊನಾ ಪಾಸಿಟಿವ್

ಮುಂಬೈ, ಬಾಲಿವುಡ್ ನ ಹಿರಿಯ ನಟ ಬಿಗ್ ಬಿ ಎಂದೇ ಖ್ಯಾತಿಯನ್ನು ಪಡೆದಿರುವ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ರಲ್ಲೂ ಇದೀಗ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. 

ಸದ್ಯ ಬಿಗ್ ಬಿ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ, ಪ್ರಾಥಮಿಕ ಸಂಪರ್ಕದಲ್ಲಿದ್ದವರು, ಕುಟುಂಬದವರಿಗೆ ಕ್ವಾರಂಟೈನ್ ವಿಧಿಸಲಾಗಿದೆ.

image

ಇನ್ನು ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ನನಗೆ ಕೊವಿಡ್​-19 ಸೋಂಕು ಇರುವುದು ಪತ್ತೆಯಾಗಿದೆ. ಈ ಕಾರಣದಿಂದಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದವರು, ಸಿಬ್ಬಂದಿಗಳು ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಅವರ ವರದಿ ನಿರೀಕ್ಷಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜುಲೈ 12, 2020;ಭಾನುವಾರ: ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಉತ್ತರಭಾದ್ರ ನಕ್ಷತ್ರ ಉಪರಿ ರೇವತಿ ನಕ್ಷತ್ರ

ರಾಹುಕಾಲ: ಸಂಜೆ 5:16 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:40 ರಿಂದ 5:16
ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 2:04

ಮೇಷ: ಮಾಡುವ ಕೆಲಸದಲ್ಲಿ ಮುನ್ನಡೆ, ನೀಚ ಜನರ ಸಹವಾಸದಿಂದ ತೊಂದರೆ, ಹಿತ ಶತ್ರುಗಳಿಂದ ಕುತಂತ್ರ, ಬೆಲೆ ಬಾಳುವ ವಸ್ತುಗಳಿಗೆ ವೆಚ್ಚ, ದಿನಸಿ ವ್ಯಾಪಾರಿಗಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಈ ವಾರ ಮಿಶ್ರ ಫಲ ಯೋಗ.

ವೃಷಭ: ಮಿತ್ರರೊಂದಿಗೆ ವೈಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣ ಸಂಪಾದನೆಗೆ ಯೋಜನೆ, ಜೀವನದಲ್ಲಿ ಅಭಿವೃದ್ಧಿಯಾಗಿಲ್ಲ ಅನ್ನೋ ಚಿಂತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ನಂಬಿಕಸ್ಥರ ಕುತಂತ್ರಕ್ಕೆ ಒಳಗಾಗುವ ಸಾಧ್ಯತೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಕೆಲಸಗಳಲ್ಲಿ ತಾಳ್ಮೆ ಅಗತ್ಯ.

ಮಿಥುನ: ಬಂಧುಗಳ ಆಗಮನ, ಆತ್ಮೀಯ ಸ್ನೇಹಿತರ ಭೇಟಿ, ಯತ್ನ ಕಾರ್ಯದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ-ಗೊಂದಲ, ಮನಸ್ಸಿನಲ್ಲಿ ಗೊಂದಲ, ಕುಟುಂಬಸ್ಥರಿಂದ ಸಲಹೆ, ಹಳೇ ಸಾಲ ತೀರಿಸುವ ಪರಿಸ್ಥಿತಿ.

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಸಮಸ್ಯೆ, ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ನೆಮ್ಮದಿ ಇಲ್ಲದ ಜೀವನ, ಶತ್ರು ನಾಶ, ಸ್ತ್ರೀ ಸೌಖ್ಯ, ಸುಖ ಭೋಜನ, ಪರರ ಧನ ಪ್ರಾಪ್ತಿ, ಕುಟುಂಬದಲ್ಲಿ ನೋವು, ಮಿಶ್ರ ಫಲ ಯೋಗ.

ಸಿಂಹ: ತೀರ್ಥಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ, ಮನೆಯಲ್ಲಿ ಅಶಾಂತಿ ವಾತಾವರಣ, ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಿಗೆ ಗೌರವ ನೀಡಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಮಾತಿನ ಚಕಮಕಿ, ಸ್ತ್ರೀಯರಿಗೆ ಅನುಕೂಲವಾದ ವಾರ.

ಕನ್ಯಾ; ಉದ್ಯೋಗ ಸ್ಥಳದಲ್ಲಿ ಪ್ರಶಂಸೆ, ಆತ್ಮೀಯರ ನಡವಳಿಕೆಯಿಂದ ಬೇಸರ, ಸಂಗಾತಿ ಜೊತೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ಒತ್ತಡ, ಕೆಲಸಗಳಲ್ಲಿ ಅಧಿಕ ಒತ್ತಡ, ನೀವಾಡುವ ಮಾತುಗಳಿಂದ ಕಲಹ.

ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾಟ-ಮಂತ್ರ ತಂತ್ರದ ಭೀತಿ, ಮಾನಸಿಕ ಗೊಂದಲ, ಹಣಕಾಸು ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಆತ್ಮೀಯರಿಂದ ಸಹಾಯ, ಶತ್ರುಗಳಿಂದ ತೊಂದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲ.

ವೃಶ್ಚಿಕ: ಆತ್ಮೀಯರಲ್ಲಿ ಮನಃಸ್ತಾಪ, ಚಂಚಲ ಮನಸ್ಸು, ಆರೋಗ್ಯ ವ್ಯತ್ಯಾಸ ಸಾಧ್ಯತೆ, ಹಣಕಾಸು ಸಮಸ್ಯೆ ಉಲ್ಬಣ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ವಿಪರೀತ ವ್ಯಸನ, ಕೆಲಸ ಕಾರ್ಯದಲ್ಲಿ ನಿಧಾನ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ.

ಧನಸ್ಸು: ಹಣಕಾಸು ಪರಿಸ್ಥಿತಿ ಚೇತರಿಕೆ, ಮನಸ್ಸಿನಲ್ಲಿ ನಾನಾ ಆಲೋಚನೆ, ಆತಂಕದ ವಾತಾವರಣ, ವ್ಯವಹಾರಗಳಲ್ಲಿ ಅಲ್ಪ ಲಾಭ, ಮನೆಗೆ ಹಿರಿಯರ ಆಗಮನದ ನಿರೀಕ್ಷೆ, ಅಧಿಕವಾದ ಆದಾಯ, ಖರ್ಚಿನ ಪ್ರಮಾಣದ ಹೆಚ್ಚಾಗುವ ಸಾಧ್ಯತೆ, ಪ್ರವಾಸಕ್ಕೆ ತೆರಳಲು ಯೋಜನೆ.

ಮಕರ: ಉದ್ಯೋಗದಲ್ಲಿ ಆತಂಕ, ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯದಲ್ಲಿ ಅಲ್ಪ ಜಯ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ, ತೀರ್ಥಯಾತ್ರೆ ದರ್ಶನಕ್ಕೆ ಚಿಂತನೆ, ಸೈಟ್ ವಾಹನ ಖರೀದಿ ಯೋಗ.

ಕುಂಭ: ಆತ್ಮೀಯರೇ ಮೋಸ ಮಾಡುವರು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಅವಿವಾಹಿತರಿಗೆ ವಿವಾಹ ಯೋಗ, ವಿರೋಧಿಗಳಿಂದ ಸಮಸ್ಯೆ, ಚೋರ ಭಯ, ಅಗ್ನಿ ಭೀತಿ, ಆರೋಗ್ಯದ ಬಗ್ಗೆ ಎಚ್ಚರ, ಶೀತ ಸಂಬಂಧಿತ ರೋಗ, ಚಿನ್ನಾಭರಣ ಯೋಗ ಪ್ರಾಪ್ತಿ.

ಮೀನ: ದುಬಾರಿ ವಸ್ತುಗಳ ಕಳವು, ತಾಯಿಯ ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮೃಷ್ಟಾನ್ನ ಭೋಜನ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ಈ ವಾರ ಮಿಶ್ರ ಫಲ ಯೋಗ.

ಜುಲೈ 11, 2020; ಶನಿವಾರ: ಇಂದಿನ ರಾಶಿಫಲ

ಪಂಚಾಂಗ:
ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಮಧ್ಯಾಹ್ನ 1:34 ನಂತರ ಸಪ್ತಮಿ ತಿಥಿ,
ಶನಿವಾರ, ಉತ್ತರ ಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:16 ರಿಂದ 10:52 12:32
ಗುಳಿಕಕಾಲ: ಬೆಳಗ್ಗೆ 6:04 ರಿಂದ 7:40
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40

ಮೇಷ: ಶುಭ ಕಾರ್ಯಗಳಿಗೆ ಓಡಾಟ, ದೇವತಾ ಕಾರ್ಯಗಳಿಗೆ ಖರ್ಚು, ವಯೋವೃದ್ಧರಿಗೆ ಸಹಾಯ ಮಾಡುವಿರಿ, ಮಕ್ಕಳಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ತಾಯಿಯೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ವೃಷಭ: ಸಂಗಾತಿಯೊಂದಿಗೆ ವಾಗ್ವಾದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ಕೆಲವೊಂದು ವಿಚಾರಗಳಿಂದ ತೊಂದರೆ, ತಂದೆಯಿಂದ ನೋವು, ಉದ್ಯೋಗ ಬದಲಾವಣೆಗೆ ಆಲೋಚನೆ, ನೆರೆಹೊರೆ-ಬಂಧುಗಳಿಂದ ಅನುಕೂಲ.

ಮಿಥುನ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಹಣಕಾಸು ವಿಚಾರದಲ್ಲಿ ಕೆಟ್ಟ ನಿರ್ಧಾರ, ಅನಗತ್ಯ ಮಾತಿಂದ ಸಮಸ್ಯೆಗೆ ಸಿಲುಕುವಿರಿ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಅಭಿವೃದ್ಧಿ.

ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಪ್ರಗತಿ, ಕಾಲು ನೋವು, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಕೋಪ, ಮಿತ್ರರಿಂದ ಅನುಕೂಲ, ಮಕ್ಕಳಲ್ಲಿ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಸಿಂಹ: ಶತ್ರುಗಳ ಕಾಟ, ಸಾಲಗಾರರಿಂದ ಕಿರಿಕಿರಿ, ಮಾನಸಿಕ ಒತ್ತಡ, ಸಂಗಾತಿಯಲ್ಲಿ ಬೇಜವಾಬ್ದಾರಿ, ವೈದ್ಯರಿಗೂ ಗೋಚರವಾಗದ ರೋಗ ಬಾಧೆ, ಮಾಟ-ಮಂತ್ರದ ಭೀತಿ, ವಯೋವೃದ್ಧರಿಗೆ ಗೌರವ ನೀಡಿ, ಹಳೇ ವಸ್ತು-ವಾಹನದಿಂದ ಖರ್ಚು, ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು.

ಕನ್ಯಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಲಾಭ, ಮಕ್ಕಳ ಪ್ರೀತಿ ವಿಚಾರದಲ್ಲಿ ಆತಂಕ, ದುಶ್ಚಟಗಳು ಅಧಿಕ ಮಾಡಿಕೊಳ್ಳುವಿರಿ, ದಾಯಾದಿಗಳಿಂದ ಕುಟುಂಬದಲ್ಲಿ ಕಲಹ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ತುಲಾ: ಅನಗತ್ಯ ತಿರುಗಾಟ, ಶಕ್ತಿ ದೇವತೆ ದರ್ಶನ, ಮಕ್ಕಳು-ಬಂಧುಗಳಿಂದ ಅವಮಾನ, ಉದ್ಯೋಗ-ಸ್ಥಳ ಬದಲಾವಣೆಯಿಂದ ತೊಂದರೆ, ಸ್ಥಿರಾಸ್ತಿಯಲ್ಲಿ ಮೋಸ, ಉದ್ಯೋಗ ಕಳೆದುಕೊಳ್ಳುವ ಭೀತಿ, ಹಿತ ಶತ್ರುಗಳ ಕಾಟ.

ವೃಶ್ಚಿಕ: ಹೆಣ್ಣು ಮಕ್ಕಳಿಂದ ಅನುಕೂಲ, ಆರ್ಥಿಕ ಸಹಾಯ ಪ್ರಾಪ್ತಿ, ನೆರೆಹೊರೆಯವರೊಂದಿಗೆ ವಾಗ್ವಾದ, ದುಶ್ಚಟಗಳಿಗೆ ದಾಸರಾಗುವಿರಿ, ಪ್ರಯಾಣದಲ್ಲಿ ತೊಂದರೆ, ಮನಸ್ಸಿನಲ್ಲಿ ಆತಂಕ, ಕುಟುಂಬಕ್ಕೆ ಮಾಟ-ಮಂತ್ರದ ಭೀತಿ,

ಧನಸ್ಸು: ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ಹಳೇ ವಸ್ತುಗಳಿಂದ ಪೆಟ್ಟು, ಮಾನಸಿಕ ವೇದನೆ, ಆಕಸ್ಮಿಕ ದೇವ ಮಾನವರ ದರ್ಶನ, ವಿಕೃತ ಮನಃಸ್ಥಿತಿ ಹೆಚ್ಚಾಗುವುದು, ಸ್ಥಿರಾಸ್ತಿಯಿಂದ ನೋವು-ತೊಂದರೆ, ಆರ್ಥಿಕ ಮುಗ್ಗಟ್ಟು, ಬೇಡದ ವಿಚಾರಗಳಲ್ಲಿ ಚರ್ಚೆ ಮಾಡುವಿರಿ.

ಮಕರ: ವಿವಾಹದ ಶುಭ ವಾರ್ತೆ ಕೇಳುವಿರಿ, ಅಕ್ರಮ ಸಂಪಾದನೆಗೆ ಮನಸ್ಸು, ಮಕ್ಕಳು ದಾರಿ ತಪ್ಪುವ ಸಾಧ್ಯತೆ, ಯಂತ್ರೋಪಕರಣಗಳಿಂದ ತೊಂದರೆ, ಕೆಲಸಗಾರರಿಂದ ಸಮಸ್ಯೆ ಉದ್ಭವ, ಬಂಧುಗಳಿಂದ ನೋವು, ಪರಿಚಯಸ್ಥ ವ್ಯಕ್ತಿಗಳಿಂದ ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ.

ಕುಂಭ: ಕೆಲಸ ಕಾರ್ಯದಲ್ಲಿ ಜಯ, ವೃತ್ತಿಪರರಿಗೆ ಅನುಕೂಲ, ಸೇವಕರಿಂದ ಅಪವಾದ, ಮಾಟ-ಮಂತ್ರ, ತಂತ್ರದ ಭೀತಿ, ಹಣಕಾಸು ವಿಚಾರದಲ್ಲಿ ನಿಧಾನ, ಶೀತ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

ಮೀನ: ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ನೋವು, ಪ್ರೀತಿ ಪ್ರೇಮ ವಿಚಾರದಲ್ಲಿ ಅನುಮಾನ, ಭಾವನೆಗಳಿಗೆ ಪೆಟ್ಟು, ದುರಾಸೆಗಳಿಗೆ ಬಲಿಯಾಗುವಿರಿ, ಬಾಲಾಗ್ರಹ ದೋಷ ಕಾಡುವುದು, ಆಧ್ಯಾತ್ಮದ ಕಡೆಗೆ ಒಲವು, ವೃದ್ಧರಿಗಾಗಿ ಖರ್ಚು ಮಾಡುವಿರಿ, ಹಳೇ ವಸ್ತುಗಳಿಗಾಗಿ ಖರ್ಚು.

ಇಂದಿನ ಔಷಧೀಯ ಸಸ್ಯದ ಪರಿಚಯ : ಆಡುಸೋಗೆ

ಆಡುಮುಟ್ಟದ ಗಿಡ ಎಂದೇ ಖ್ಯಾತಿಯಾಗಿರುವ ಆಡುಸೋಗೆ ಸೊಪ್ಪಿನಲ್ಲಿವೆ ಹುಳುಕಡ್ಡಿ, ಅಸ್ತಮ ಹೀಗೆ ಹಲವು ರೋಗಗಳಿಗೆ ರಾಮಬಾಣವಾಗಿದೆ..!

ಹೌದು ನಿಮ್ಮ ಹತ್ತಿರದಲ್ಲೇ ಸಿಗುವಂತಹ ಈ ಗಿಡದಲ್ಲಿ ಹಲವು ರೋಗಗಳನ್ನು ಹೋಗಲಾಡಿಸುವಂತಹ ಗುಣವನ್ನು ಹೊಂದಿದೆ ಹಾಗಿದ್ರೆ ಬನ್ನಿ ಈ ಗಿಡದಿಂದ ಯಾವ ಯಾವ ಖಾಯಿಲೆಗಳನ್ನು ಹೋಗಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ.

ದಮ್ಮು ನಿವಾರಣೆಗೆ: ಬೆಳ್ಳುಳ್ಳಿ, ಹಿಪ್ಪಲಿ, ಮೆಣಸು, ಕಟುಕರೋಹಿಣಿ ಮತ್ತು ಆಡುಸೋಗೆ ಎಲೆಗಳನ್ನು ಸಮತೂಕದಷ್ಪು ಬಿಸಿನೀರಿನಲ್ಲಿ ಅರೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಉಪಯೋಗಿಸುವುದು ಅಥವಾ ಆಡುಸೋಗೆ ಎಲೆಯ ಒಣಗಿದ ಚೂರ್ಣದ ಗೊಗೆಯನ್ನು ಬೀಡಿ ರೂಪದಲ್ಲಿ ಸೇದುದ್ದರಿಂದ ದಮ್ಮು ವ್ಯಾಧಿ ಉಪಶಮನವಾಗುತ್ತದೆ.
ಕೆಮ್ಮು ನಿವಾರಣೆಗೆ: ಸುಮಾರು 5ಗ್ರಾಂ ಆಡುಸೋಗೆ, 5ಗ್ರಾಂ ಹಸಿರು ಅಮೃತಬಳ್ಳಿಯ ಕಷಾಯ ಮಾಡಿ ಆರಿಸಿ ಶೋಧಿಸಿಟ್ಟುಕೊಳ್ಳುವುದು. ಇದನ್ನು ದಿವಸಕ್ಕೆರಡು ಬಾರಿ 10 ಗ್ರಾಂ ನಷ್ಟು ಶುದ್ಧ ಜೇನಿನಲ್ಲಿ ಕುಡಿಸುವುದು. ಇದು ಒಂದು ಉಪಯುಕ್ತವಾದ ವನೌಷಧಿ. ಮಕ್ಕಳಿಗಾದರೆ ಆಡುಸೋಗೆ ಎಲೆಗಳ 5ಗ್ರಾಂ ರಸವನ್ನು ಸ್ವಲ್ಪ ಜೇನಿನಲ್ಲಿ ಸೇರಿಸಿ, ಸ್ವಲ್ಪ ಬಿಸಿಮಾಡಿ ದಿವಸಕ್ಕೆ 4 ರಿಂದ 5 ಬಾರಿ ಕುಡಿಸುವುದು.

ಅಸ್ತಮ, ಗೂರಲು ನಿವಾರಣೆಗೆ: ಜ್ಯೇಷ್ಠಮಧು 10ಗ್ರಾಂ, ಹಿಪ್ಪಲಿ 20ಗ್ರಾಂ ಹಾಗೂ 5 ಗ್ರಾಂ ಆಡುಸೋಗೆ ಎಲೆಗಳನ್ನು ಚೆನ್ನಾಗಿ ಅರೆದು ಅಷ್ಟಾಂಶ ಕಷಾಯವನ್ನು ಮಾಡಿ ದಿವಸಕ್ಕೆ ಮೂರು ಬಾರಿ ಸ್ವಲ್ಪ ಜೇನು ಸೇರಿಸಿ ಕುಡಿಯುವುದು. ಅಥವಾ ಆಡುಸೋಗೆ ಎಲೆಯ ರಸ ಮತ್ತು ಸಮಭಾಗ ಸಕ್ಕರೆ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ರಾತ್ರಿ ನೆಕ್ಕಿಸುವುದು. ಅಥವಾ 10-12 ಆಡುಸೋಗೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಸುವುದು.
ಮೂತ್ರಾಶಯದ ಭಾದೆ, ನೋವು ನಿವಾರಣೆಗೆ: 20ಗ್ರಾಂ ಆಡುಸೋಗ ಎಲೆಗಲ ರಸಕ್ಕೆ 20ಗ್ರಾಂ ಜೇನು ತುಪ್ಪವನ್ನು ಸೇರಿಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಹಾಗೂ ಬೇವಿನ ಎಲೆ ಮತ್ತು ಆಡುಸೋಗೆ ಎಲೆಗಳನ್ನು ಜಜ್ಜಿ ಸ್ವಲ್ಪ ಬಿಸಿ ಮಾಡಿ ಕಿಬ್ಬೊಟ್ಟೆಗೆ ಕಟ್ಟುವುದು ಅಥಾವ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡುವುದು ಇದರಿಂದ ಮೂತ್ರಾಶಯದ ನೋವು ನಿಲ್ಲುವುದು.

ಹಳುಕಡ್ಡಿ, ತುರಿ, ನವೆ ನಿವಾರಣೆಗೆ: ಆಡುಸೋಗೆಯ ಚಿಗುರೆಲೆಗಳ ಜೊತೆಗೆ ಸ್ಪಲ್ಪ ಅರಿಷಿಣ ಸೇರಿಸಿ ಗೋಮೂತ್ರದಲ್ಲಿ ನುಣ್ಣಗೆ ಅರೆದು ಲೇಪಿಸುವುದು. ಎಣ್ಣೆ ಪದಾರ್ಥಗಳನ್ನು ವರ್ಜಿಸುವುದು. ಸೋಪನ್ನು ಬಳಸದೆ ಶೀಗೆಕಾಯಿ ಹಚ್ಚಿ ಸ್ನಾನ ಮಾಡುವುದು.

ರಕ್ತಪಿತ್ತ ನಿವಾರಣೆಗೆ: ಶರೀರದ ಯಾವುದೇ ಭಾಗದಿಂದ ವಿನಾಕಾರಣ ರಕ್ತ ಬೀಳುವ ಕಾಯಿಲೆ ಅಂದರೆ ಕಿವಿ, ಕಣ್ಣು, ಮೂಗು, ಬಾಯಿ, ಮಲದ್ವಾರ ಹಾಗೂ ದೇಹದ ಒಳಗಡೆ ಅಂದರೆ ಕರಳು ಜಠರ ಇವುಗಳಿಂದ ರಕ್ತ ಬೀಳುವುದು. ಆಡುಸೋಗೆ ಹಸಿ ಎಲೆರಸ ಸುಮಾರು 15 ಗ್ರಾಂನಷ್ಟುನ್ನು ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆರಡು ವೇಳೆ ಐದು ದಿವಸ ಕುಡಿಸುವುದು ಅಥವಾ ಪರ್ಪಾಷ್ಠಕ ಆಡುಸೋಗೆ ಸೊಪ್ಪು, ಕೊತ್ತಂಬರಿ, ಒಣಗಿದ ದ್ರಾಕ್ಷಿ ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಕಿವುಚಿ 30 ಗ್ರಾಂ ನಷ್ಷು ಕುಡಿಯುವುದು. ದಿನಕ್ಕೆ ಮೂರುಬಾರಿ ಬಳಸುವುದು ಅಥವಾ ಮೇಲಿನ ವಸ್ತುಗಳ ನಯವಾದ ಚೂರ್ಣ ಮಾಡಿ ಒಂದು ಟೀ ಚಮಚದಷ್ಟು ಚೂರ್ಣವನ್ನು ಒಂದು ಬಟ್ಟಲು ಶುದ್ಧವಾದ ತಣ್ಣೀರಿನಲ್ಲಿ ರಾತ್ರಿ ಹಾಕಿ ಬೆಳಿಗ್ಗೆ ಈ ನೀರನ್ನು ಕುಡಿಯುವುದು.

ಕಫದ ಕೆಮ್ಮು, ಜ್ವರ, ಉಬ್ಬಸ ನಿವಾರಣೆಗೆ: ಅಮೃತಬಳ್ಳಿ ಗುಳ್ಳದ ಬೇರು ಮತ್ತು ಆಡುಸೋಗೆ ಬೇರು ಇವುಗಳ 30 ಗ್ರಾಂ ಗಳಷ್ಟು ಕಷಾಯವನ್ನು ಮಾಡುವುದು, ಕಷಾಯವನ್ನು ಎರಡು ಭಾಗ ಮಾಡಿ, ಬೆಳಿಗ್ಗೆ ಸಾಯಂಕಾಲ ಕುಡಿಸುವುದು. ಈ ಮೂಲಿಕೆಗೆ ಶ್ವಾಸಕೋಶಗಳ ಬಾಧೆ ನೀಗಿ ಕೆಮ್ಮು, ದಮ್ಮು, ಉಬ್ಬಸ, ಗೂರಲು ವಾಸಿ ಮಾಡುವ ಮಹಾ ಗುಣವಿದೆ. ಶ್ವಾಶಕೋಶ ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಿ ಹೊರ ಹಾಕಿ ರಕ್ತ ಸುದ್ಧ ಮಾಡಿ ಜ್ವರವನ್ನು ತಗ್ಗಿಸಿ ರಕ್ತ ಉಗುಳುವ ವ್ಯಾಧಿಯನ್ನು ವಾಸಿ ಮಾಡುವ ಅಪೂರ್ವ ಶಕ್ತಿ ಇದೆ.

ಜುಲೈ 10, 2020 ;ಶುಕ್ರವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಬೆಳಗ್ಗೆ 11:39 ನಂತರ ಷಷ್ಠಿ ತಿಥಿ,
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:52 ರಿಂದ 12:32
ಗುಳಿಕಕಾಲ: ಬೆಳಗ್ಗೆ 7:40 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:16

ಮೇಷ

ಅನಿವಾರ್ಯ ಒತ್ತಡಕ್ಕೆ ಒಳಗಾಗಿ ಎಲ್ಲವನ್ನು ತಾಳಿಕೊಳ್ಳಬೇಕಾದೀತು. ಒಳ್ಳೆಯ ಯೋಜನೆಯೊಂದಕ್ಕೆ ಮುನ್ನುಡಿ ಹಾಡುವ ಸಾಧ್ಯತೆ. ವಿಶ್ವಾಸ, ಪ್ರೀತಿಪಾತ್ರ ನಡೆಗಳಿಂದಾಗಿ ಎಲ್ಲರಲ್ಲೂ ಪ್ರಶಂಸೆಗೆ ಪಾತ್ರರಾಗುವಿರಿ.

ವೃಷಭ

ಆಕರ್ಷಣೀಯ ವ್ಯಕ್ತಿತ್ವದ ಜೊತೆಗೆ ನಡವಳಿಕೆಯಿಂದಾಗಿ ಅಭಿಮಾನಿಗಳು ಹೆಚ್ಚುವ ಸಾಧ್ಯತೆ. ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಭಾವನೆಗಳಿಗೆ ಮನ್ನಣೆ ನೀಡಿ ಗೌರವ ಸಂಪಾದನೆ.

ಮಿಥುನ

ಸ್ವತಂತ್ರ ನಿರ್ಧಾರ ಕೈಗೊಳ್ಳುವಲ್ಲಿ ಹಿಂಜರಿಕೆ ಬೇಡ. ಸಮತೋಲನ ಕಾಯ್ದುಕೊಳ್ಳುವ ಚಾಣಾಕ್ಷತೆಯಿಂದಾಗಿ ಮಾನಸಿಕ ನೆಮ್ಮದಿ. ಸ್ನೇಹಿತರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ಕಟಕ

ಎದುರಾದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ದಿಟ್ಟ ಸಾಮರ್ಥ್ಯ ನಿಮ್ಮದು. ಯಾವುದೇ ವಿಚಾರದಲ್ಲಿ ರಾಜಿಯಾಗದ ಮನಸ್ಥಿತಿ. ಪ್ರೀತಿಪಾತ್ರರಿಂದ ಸಮಯೋಚಿತ ಭರವಸೆಯ ಬಲ.

ಸಿಂಹ

ಕಾರ್ಯಯೋಜನೆಯ ಯಶಸ್ಸಿಗಾಗಿ ಅನೇಕ ಸಲಹೆಗಳು ಬಂದರೂ ಸ್ವಯಂ ತುಲನೆ ಮಾಡಿ ನಿರ್ಧಾರಕ್ಕೆ ಬರುವುದು ಒಳ್ಳೆಯದು. ಜನಪ್ರತಿನಿಧಿಗಳಿಗೆ ದೂರದ ಪ್ರಯಾಣ ಶ್ರೇಯಸ್ಕರವಲ್ಲ. ಉದ್ಯೋಗದಲ್ಲಿ ಅಡೆತಡೆ.

ಕನ್ಯಾ

ಕುಟುಂಬದ ಸದಸ್ಯರೊಂದಿಗೆ ಸಂತಸದ ದಿನವನ್ನು ಕಳೆಯುವಿರಿ. ಉದ್ಯೋಗದಲ್ಲಿ ಬಡ್ತಿ. ಶಿಸ್ತಿನ ನಡವಳಿಕೆ ಪಾಲಿಸಿ. ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯಲಿದೆ. ಸಂಬಂಧಿಗಳ ದರ್ಶನ ಸಾಧ್ಯತೆ.

ತುಲಾ

ತೊಂದರೆ ಎದುರಾದರೂ ಹೆಚ್ಚು ಕೆಲಸ ಮಾಡುವ ಸ್ಥೈರ್ಯ. ಬುದ್ಧಿವಂತಿಕೆಯಿಂದ ಸಾಧನೆ ಮಾಡುವಿರಿ. ಗೌರವಾದರಗಳು ಲಭಿಸಲಿವೆ. ದೇವಿಯ ದರ್ಶನ ಯೋಗ ಕಂಡುಬರುವುದು. ಮಾನಸಿಕ ಶಾಂತಿ ಲಭಿಸಲಿದೆ.

ವೃಶ್ಚಿಕ

ನಿಮ್ಮ ಸಾಹಸೀ ಪ್ರವೃತ್ತಿಯೇ ನಿಮಗೊಂದು ವೃತ್ತಿಯಾಗಿ ಮಾರ್ಪಾಡಾಗುವ ಸಾಧ್ಯತೆ. ಕಳಕಳಿ ಹೊಂದಿದವರಿಂದ ಉಚಿತವಾದ ಸಲಹೆ, ಸಹಕಾರ ದೊರೆತು ಶುಭ ಲಾಭಗಳನ್ನು ತಂದುಕೊಡಲಿವೆ.

ಧನು

ನಿಮ್ಮ ಗುರಿಸಾಧನೆಯಲ್ಲಿ ಪ್ರಗತಿ ಸಾಧಿಸುವಿರಿ. ಅಂದುಕೊಂಡ ಕಾರ್ಯ ಸಾಧನೆಗಾಗಿ ಸಮರ್ಥ ಮಾರ್ಗ ಗೋಚರವಾಗಲಿದೆ. ಸಹೋದ್ಯೋಗಿಗಳಿಂದ ಸ್ವಲ್ಪಮಟ್ಟಿನ ವಿರೋಧ ವ್ಯಕ್ತವಾಗಬಹುದು. ಸಮಚಿತ್ತ ಕಾಯ್ದುಕೊಳ್ಳಿ.

ಮಕರ

ನಿಮ್ಮ ಮಹತ್ತರವಾದ ಕನಸುಗಳನ್ನು ಕೈಬಿಡುವಂತೆ ಬಂಧುಗಳಿಂದ ಸಲಹೆಗಳು ಬರುವ ಸಾಧ್ಯತೆ. ನಿಮ್ಮ ದಿಟ್ಟ ನಿಲುವಿನಿಂದ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಯಾವುದೇ ಕೆಲಸಕ್ಕೂ ದುಡಕದೇ ಮತ್ತೊಮ್ಮೆ ಯೋಚಿಸಿ.

ಕುಂಭ

ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಿ ಮುಗಿಸುವ ತವಕದಿಂದಾಗಿ ಗೊಂದಲ ಉಂಟಾಗಬಹುದು. ದುಂದುವೆಚ್ಚವನ್ನು ಭರಿಸಬೇಕಾಗಬಹುದು. ಕಾರ್ಯಯೋಜನೆಯಿಂದ ವೆಚ್ಚ ಕಡಿತಗೊಳಿಸುವ ಸಾಧ್ಯತೆ.

ಮೀನ

ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣತ ವ್ಯಕ್ತಿಗಳೊಂದಿಗೆ ಸಮಾಲೋಚನೆಯ ಸಾಧ್ಯತೆ. ಸರಿಯಾದ ನಿರ್ಧಾರದಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ನಿಶೆ ಏರಿಸುವ ವಸ್ತುಗಳಿಂದ ದಿನದ ಮಟ್ಟಿಗೆ ದೂರವಿರಿ.

Design a site like this with WordPress.com
Get started