ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ.
ಅಮೆರಿಕ ಹಾಗೂ ಒಂದಷ್ಟು ದೇಶಗಳಲ್ಲಿ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ಜನರಲ್ಲಿ ಭಾರೀ ತಲೆ ನೋವು ಸೃಷ್ಟಿಸಿದೆ.
ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಈ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರಕ್ಕೂ ಪಸರಿದೆ.
ಇದೇ ಸೆಪ್ಟೆಂಬರ್‌ನಲ್ಲಿ ಟೆಕ್ಸಾಸ್‌ನ ಆರು ವರ್ಷದ ಬಾಲಕನ ಮೆದುಳನ್ನು ಇದೇ ಅಮೀಬಾಗಳು ತಿಂದು ಹಾಕಿ ಆತ ಮೃತಪಟ್ಟ ಘಟನೆ ಅಮೆರಿಕಾದ್ಯಂತ ಆತಂಕದ ಅಲೆಗಳನ್ನು ಸೃಷ್ಟಿ ಮಾಡಿತ್ತು.
ಆ ಬಾಲಕನ ಕಮ್ಯೂನಿಟಿಗೆ ಪೂರೈಕೆಯಾಗುವ ನಲ್ಲಿ ನೀರಿನಲ್ಲಿ ಈ ಅಮೀಬಾಗಳು ಕಂಡು ಬಂದಿದ್ದವು. ಸೆಪ್ಟೆಂಬರ್ 8ರಂದು ಈ ಬಾಲಕ ಮೃತಪಟ್ಟಿದ್ದ.
ಬ್ರಿಟನ್ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್ನಿಂದ ಡಿಸೆಂಬರ್ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ಅನೇಕ ರಾಷ್ಟ್ರಗಳು ಬ್ರಿಟನ್ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿವೆ.
ಕಳೆದ ವಾರದಲ್ಲಿ ಕೋವಿಡ್ ವೈರಸ್ ರೂಪಾಂತರಗೊಂಡಿದ್ದು ದಕ್ಷಿಣ ಹಾಗೂ ಪೂರ್ವ ಇಂಗ್ಲೆಂಡ್ನಲ್ಲಿ ಸೋಂಕು ಅತ್ಯಂತ ವೇಗವಾಗಿ ಏರಿಕೆ ಕಾಣಲು ಸಹಾಯಕವಾಗಿವೆ. ಹೊಸ ರೂಪಾಂತರ ಪಡೆದ ಸೋಂಕಿನ 1108 ಪ್ರಕರಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಈ ಹೊಸ ಸೋಂಕಿನ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ.
ಕೊರೊನಾ ವೈರಸ್ ತನ್ನಲ್ಲಿ ಅನೇಕ ಬದಲಾವಣೆಯನ್ನ ಮಾಡಿಕೊಂಡು ಹೊಸ ರೂಪವನ್ನ ಪಡೆದುಕೊಂಡಿದೆ. ಕೊರೊನಾ ವೈರಸ್‌ನ ಪ್ರೋಟೀನ್ ಹಾಗೂ ಆರ್ಎನ್ಎಗಳಲ್ಲಿ ಕೆಲ ಬದಲಾವಣೆ ಉಂಟಾಗಿದ್ದು ಇದು ಮಾನವ ಜೀವಕೋಶದ ಎಸಿಇ 2 ಗ್ರಾಹಕದೊಂದಿಗೆ ಬಂಧಿಸುತ್ತದೆ. ಈ ಕಾರಣದಿಂದಾಗಿ ಈ ರೂಪಾಂತರಗೊಂಡ 70 ಪ್ರತಿಶತ ಹೆಚ್ಚಿನ ಪ್ರಮಾಣದಲ್ಲಿ ರೋಗವನ್ನ ಹರಡಬಲ್ಲುದು ಎಂದು ಅಂದಾಜಿಸಲಾಗಿದೆ.
ಆದರೆ ಈ ರೂಪಾಂತರಗೊಂಡ ವೈರಸ್ ತೀವ್ರವಾದ ಕಾಯಿಲೆ ಅಥವಾ ಮರಣಕ್ಕೆ ಕಾರಣವಾಗುತ್ತಾ ಎಂಬುದರ ಬಗ್ಗೆ ಇನ್ನೂ ಯಾವುದೇ ಪುರಾವೆಗಳು ದೊರಕಿಲ್ಲ. ಈ ಹೊಸ ವೈರಸ್‌ನ ಪರಿಣಾಮದ ಬಗ್ಗೆ ಸಂಶೋಧನೆಗಳು ಮುಂದುವರಿದಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ರೂಪಾಂತರಗೊಂಡ ವೈರಸ್ ಬಗ್ಗೆ ಆತಂಕ ಬೇಡ ಎಂದು ಹೇಳಿದೆ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ವಾರ : ಮಂಗಳವಾರ, ತಿಥಿ : ಅಷ್ಠಮಿ, ನಕ್ಷತ್ರ : ಉತ್ತರಭದ್ರ,
ರಾಹುಕಾಲ: 3.13 ರಿಂದ 4.39 ಗುಳಿಕಕಾಲ: 12.22 ರಿಂದ 1.47 ಯಮಗಂಡಕಾಲ: 9.30 ರಿಂದ 10.56
ಮೇಷ
ಕಠಿಣ ಪರಿಶ್ರಮದ ಫಲದಿಂದ ಉತ್ತಮ ಸಫಲತೆಯನ್ನು ಪಡೆಯಲಿದ್ದೀರಿ. ಯೋಜನೆಯನ್ನು ರೂಪಿಸುವ ಮುನ್ನ ಪುನಃ ಅವಲೋಕನ ಅಗತ್ಯ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆಯ ಸಾಧ್ಯತೆ ಕಂಡುಬರುತ್ತಿದೆ.
ವೃಷಭ
ನಿಮ್ಮ ಕೆಲಸವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಆರ್ಥಿಕ ಪ್ರಗತಿಯತ್ತ ದಾಪುಗಾಲು. ಬೇರೆಯವರ ಮಾತುಗಳ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದಿರಿ. ಉನ್ನತ ವಿಚಾರಗಳತ್ತ ಒಲವು ತೋರಲಿದ್ದೀರಿ.
ಮಿಥುನ
ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ ದೊರೆತು ಉತ್ತಮ ಅವಕಾಶ ನಿಮ್ಮದಾಗಲಿದೆ. ರಾಜಕೀಯ ಮುಖಂಡರು ಮುಖಭಂಗ ಅನುಭವಿಸುವ ಸಾಧ್ಯ. ಪತ್ರಿಕೋದ್ಯಮದವರಿಗೆ ವಿಫಲತೆ ಕಂಡುಬರುತ್ತಿದೆ.
ಕಟಕ
ಹಣಕಾಸಿನ ಅನುಕೂಲದ ನಿರೀಕ್ಷೆಯಲ್ಲಿರುವ ನಿಮಗೆ ಶೀಘ್ರಗತಿಯಲ್ಲಿ ಕೈಗೂಡಲಿದೆ. ಬಂಧುಗಳಿಂದ ಸಹಕಾರ. ಮಕ್ಕಳ ಪ್ರಗತಿಯಿಂದ ನೆಮ್ಮದಿ. ಸಂಗಾತಿಗೆ ಅನಾರೋಗ್ಯದ ಸಾಧ್ಯತೆ ಕಂಡುಬರುತ್ತಿದೆ.
ಸಿಂಹ
ಆದಾಯದ ಹೊಸ ದಾರಿ ಗೋಚರಿಸಲಿದೆ. ಹಾಗಂತ ಅತಿಯಾದ ಖರ್ಚನ್ನು ನಿಯಂತ್ರಣದಲ್ಲಿಡುವುದು ಒಳ್ಳೆಯದು. ಯಂತ್ರಾಗಾರದಲ್ಲಿ ಅಗ್ನಿಭಯ ಸಾಧ್ಯತೆ. ದೇವತಾ ಆರಾಧನೆಯಿಂದ ನೆಮ್ಮದಿ ಮೂಡಿಬರಲಿದೆ.
ಕನ್ಯಾ
ಶೀಘ್ರದಲ್ಲಿ ಉದ್ಯೋಗದಲ್ಲಿ ಉನ್ನತಿಯನ್ನು ಸಾಧಿಸುವಿರಿ. ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರಲಿದೆ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ವೃಥಾ ಆರೋಪಗಳ ಬಗ್ಗೆ ಗಮನ ಬೇಡ.
ತುಲಾ
ಕುಲಕಸುಬುದಾರರಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ ಪ್ರಾಪ್ತಿ. ಪಾರಂಪರಿಕವಾಗಿ ನಡೆದುಬಂದ ವ್ಯವಹಾರವನ್ನು ಕೈ ಬಿಡುವುದು ಬೇಡ. ಚಲನಚಿತ್ರರಂಗದವರಿಗೆ ಉತ್ತಮ ಅವಕಾಶ ಲಭಿಸಲಿದೆ.
ವೃಶ್ಚಿಕ
ಕೈಗಾರಿಕೋದ್ಯಮಿಗಳಿಗೆ ಪ್ರಗತಿ ಸಾಧ್ಯತೆ. ಹೊಸ ಉದ್ಯಮದಲ್ಲಿ ಯಶಸ್ಸನ್ನು ಕಾಣುವಿರಿ. ಮನೆಯಲ್ಲಿ ಬಹಳ ದಿನಗಳ ನಂತರ ನಗುವನ್ನು ಕಾಣಲಿದ್ದೀರಿ.
ಧನು
ಉದ್ಯೋಗಕ್ಷೇತ್ರದಲ್ಲಿ ಅತಿಯಾದ ಒತ್ತಡ ಕಾಣಿಸಿದರೂ ಸ್ನೇಹಿತರ ಸಹಕಾರದಿಂದ ನಿರಾಳ. ಮಕ್ಕಳ ಯೋಗಕ್ಷೇಮದ ಬಗ್ಗೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಎದುರಾಗುವ ಸಂಕಷ್ಟಗಳು ಗೆಲುವಿನ ಸೋಪಾನವಾಗಲಿದೆ.
ಮಕರ
ಬಹುದಿನಗಳ ದುಡಿಮೆಯ ನಡುವೆ ವಿಶ್ರಾಂತಿಯ ಅಗತ್ಯತೆ. ಒತ್ತಡದಿಂದ ಹೊರಬರುವ ಸಾಧ್ಯತೆ. ನೌಕಾಯಾನಿಗಳಿಗೆ ಒಳ್ಳೆಯ ಸಮಯ. ದೇವತಾ ದರ್ಶನ ಭಾಗ್ಯದಿಂದಾಗಿ ನೆಮ್ಮದಿ ಮೂಡಿಬರಲಿದೆ.
ಕುಂಭ
ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ಮಾನಸಿಕ ನೋವನ್ನು ಇತರರಲ್ಲಿ ಹಂಚಿಕೊಳ್ಳಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅನ್ಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಯೋಗ ದೊರಕಲಿದೆ.
ಮೀನ
ನಿರೀಕ್ಷೆಯಲ್ಲಿದ್ದ ಮೂಲದಿಂದ ಹಣಕಾಸಿನ ಅನುಕೂಲ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಆತಂಕದ ಕ್ಷಣಗಳು ದೂರವಾಗುವ ಸಾಧ್ಯತೆ ಗೋಚರವಾಗುತ್ತಿದೆ. ಬಂಧುಗಳ ಸಹಾಯ ನಿಮಗಿದೆ.
ವಾರ: ಸೋಮವಾರ, ತಿಥಿ : ಸಪ್ತಮಿ, ನಕ್ಷತ್ರ : ಪೂರ್ವಭಾದ್ರ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತ, ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ರಾಹುಕಾಲ: 8.04 ರಿಂದ 9.30 ಗುಳಿಕಕಾಲ: 1.47 ರಿಂದ 3.13 ಯಮಗಂಡಕಾಲ: 10.56 ರಿಂದ 12.22
ಮೇಷ
ವಿರೋಧಿಗಳ ವಿಷಯದಲ್ಲಿ ಎಚ್ಚರದಿಂದಿರಿ. ಪ್ರತಿಸ್ಪರ್ಧಿಗಳ ಸವಾಲು ಎದುರಿಸಬೇಕಾದೀತು. ಮನೆಯವರ ಸಹಕಾರದಿಂದಾಗಿ ಎಲ್ಲವೂ ಸುಗಮವಾಗಿ ನಡೆಯಲಿದೆ.
ವೃಷಭ
ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಲಿದೆ. ನಿರುದ್ಯೋಗಿಗಳ ಜೀವನದಲ್ಲಿ ತಿರುವು ಸಾಧ್ಯತೆ. ಕುಲದೇವತಾ ಆರಾಧನೆಯಿಂದ ಯಶಸ್ಸನ್ನು ಗಳಿಸಲಿದ್ದೀರಿ.
ಮಿಥುನ
ಭೂ ವ್ಯವಹಾರಕ್ಕೆ ಅಷ್ಟೊಂದು ಪ್ರಶಸ್ತವಲ್ಲದ ದಿನ. ಅದರಿಂದ ದೂರವಿರುವುದೇ ಒಳ್ಳೆಯದು. ದಿನಾಂತ್ಯದಲ್ಲಿ ಮನೆಯಲ್ಲಿ ಸಂತೋಷಕರ ವಾತಾವರಣ ಮೂಡಲಿದೆ.
ಕಟಕ
ಕುಲದೇವತಾರಾಧನೆಯಿಂದ ಮಾನಸಿಕ ನೆಮ್ಮದಿ. ಸಾಮಾಜಿಕ ಸ್ಥಾನಮಾನ ದೊರಕುವ ಸಾಧ್ಯತೆ. ಕಲಾವಿದರಿಗೆ ಅನುಕೂಲಕರ ದಿನ. ಧಾನ್ಯ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
ಸಿಂಹ
ಈ ದಿನದ ಪ್ರಗತಿ ಅಷ್ಟೊಂದು ಉತ್ತಮ ಅಲ್ಲದಿದ್ದರೂ ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ. ಪತ್ನಿ ಬಂಧುವರ್ಗದವರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ.
ಕನ್ಯಾ
ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ ದೊರಕಲಿದೆ. ತೈಲ ವಸ್ತುಗಳ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಗುರು ಆರಾಧನೆಯಿಂದ ಹೆಚ್ಚಿನ ಯಶಸ್ಸು ಗಳಿಸಲಿದ್ದೀರಿ.
ತುಲಾ
ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರಕಿ ಸಂಭ್ರಮಿಸುವಿರಿ. ವಾಸ್ತು – ವಸ್ತ್ರ ವಿನ್ಯಾಸಕಾರರಿಗೆ ಅಧಿಕ ಮನ್ನಣೆ. ನೇಕಾರರಿಗೆ ಉತ್ತಮ ಲಾಭ. ಆರೋಗ್ಯದ ಮೇಲೆ ನಿಗಾ ಇರಲಿ.
ವೃಶ್ಚಿಕ
ಹಿರಿಯರೊಂದಿಗೆ ಮನಃಸ್ತಾಪ. ಇಷ್ಟ ಮಿತ್ರರ ಆಗಮನದಿಂದ ಪರಿಸ್ಥಿತಿ ತಿಳಿಯಾಗಲಿದೆ. ದಿನದಂತ್ಯದಲ್ಲಿ ಯಶಸ್ಸನ್ನು ಕಾಣುವಿರಿ. ದೇವತಾರಾಧನೆಯಿಂದ ಮನಸ್ಸಿಗೆ ಉಲ್ಲಾಸ.
ಧನು
ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ದಿನ. ಮೇಲಧಿಕಾರಿಗಳಿಂದ ಪ್ರಶಂಸೆ. ವಾಹನಗಳಿಂದ ಸ್ವಲ್ಪಮಟ್ಟಿನ ತೊಂದರೆಯ ಸಾಧ್ಯತೆ. ಹೆಚ್ಚಿನ ಅಪಾಯವಿಲ್ಲ.
ಮಕರ
ವೆಚ್ಚದ ಮೇಲೆ ಹಿಡಿತವಿರಲಿ. ಅನಾವಶ್ಯಕ ವಿಷಯಗಳಿಂದ ಮನಸ್ಸಿಗೆ ಕಿರಿಕಿರಿಯುಂಟಾಗಿ ವ್ಯತಿರಿಕ್ತ ಪರಿಣಾಮ ಎದುರಿಸುವಿರಿ. ಪತ್ನಿಯ ಸಕಾಲ ನೆರವಿನಿಂದ ಹಿತಾನುಭವ.
ಕುಂಭ
ವಾಹನ ಖರೀದಿ ಯೋಗ ಕಂಡುಬರುತ್ತಿದೆ. ಆರೋಗ್ಯದಲ್ಲಿ ಸುಧಾರಣೆ. ಕೃಷಿ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಶಿವನ ಆರಾಧನೆಯಿಂದ ಹೆಚ್ಚಿನ ಅನುಕೂಲ ದೊರೆಯಲಿದೆ.
ಮೀನ
ಗುರುಹಿರಿಯರಿಂದ ಪ್ರಶಂಸೆ. ಆಕಸ್ಮಿಕ ಧನ ಲಾಭ. ಪ್ರೀತಿಪಾತ್ರದವರಿಂದ ಸ್ವಲ್ಪಮಟ್ಟಿನ ಕಿರಿಕಿರಿ. ಶಿವನ ಅನುಗ್ರಹದಿಂದ ಅನುಕೂಲ.
ಪಂಚಾಂಗ: ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,ಮಾರ್ಗಶಿರ ಮಾಸ, ಶುಕ್ಲ ಪಕ್ಷ,ಪಂಚಮಿ, ಶನಿವಾರ, ಧನಿಷ್ಠಾ ನಕ್ಷತ್ರ, ರಾಹುಕಾಲ 9:28 ರಿಂದ 10:54 ಗುಳಿಕಕಾಲ 6: 37 ರಿಂದ 08:02 ಯಮಗಂಡಕಾಲ 01:45 ರಿಂದ 03:11
ಮೇಷ
ಹೊಸ ವಸ್ತ್ರ ಖರೀದಿ ಸಾಧ್ಯತೆ. ಶುಭಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ. ದೂರದಿಂದ ಸಹೋದರಿಯ ಆಗಮನ. ಅನಿರೀಕ್ಷಿತ ಧನಾಗಮನ. ಆರೋಗ್ಯದಲ್ಲಿ ಚೇತರಿಕೆ. ಈ ದಿನ ಮನಸ್ಸಿಗೆ ನೆಮ್ಮದಿ.
ವೃಷಭ
ಆರಂಭಶೂರತ್ವ ಬೇಡ. ಮಾಡುವ ಕೆಲಸದಲ್ಲಿ ಜಾಗೃತೆ ಇರಲಿ. ನಿಧಾನವಾದರೂ ಕಾರ್ಯಸಾಧನೆಯಾಗಲಿದೆ. ಸಾಲಗಾರರ ಕಾಟ ಸಾಧ್ಯತೆ. ಜಿಗುಪ್ಸಾ ಮನೋಭಾವ ಬೇಡ. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ.
ಮಿಥುನ
ಸಂಗಾತಿಯ ಸಹಕಾರದಿಂದ ಕಾರ್ಯದಲ್ಲಿ ಪ್ರಗತಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆ. ಸಾಯಂಕಾಲ ಸಂತೋಷ ಕೂಟದಲ್ಲಿ ಭಾಗಿಯಾಗಲಿದ್ದೀರಿ. ದೇವತಾ ದರ್ಶನ ಭಾಗ್ಯ ಕಂಡುಬರುವುದು.
ಕಟಕ
ನಿಮಗೆ ಬೇಕಾದ ಸೌಲತ್ತುಗಳು ಶೀಘ್ರದಲ್ಲಿ ದೊರೆಯಲಿವೆ. ಪ್ರೇಮಿಗಳಿಗೆ ಆಶೋತ್ತರಗಳು ಕೈಗೂಡುವ ಶುಭದಿನ. ಮನೆಯಲ್ಲಿ ಶುಭ ಸಮಾಚಾರ ನಿರೀಕ್ಷಣೆ. ಕೆಲಸ–ಕಾರ್ಯಗಳಲ್ಲಿ ಪ್ರಗತಿ ನಿಮ್ಮದಾಗಲಿದೆ.
ಸಿಂಹ
ರಾಜಕೀಯದಲ್ಲಿ ಉನ್ನತ ಸ್ಥಾನ ಲಭ್ಯವಾಗಲಿದೆ. ಗ್ರಹಬಲಗಳು ನಿಮ್ಮ ವ್ಯಕ್ತಿತ್ವವನ್ನು ಔಚಿತ್ಯಪೂರ್ಣ ಸ್ಥಾನಕ್ಕೆ ಕೊಂಡೊಯ್ಯಲಿವೆ. ಸಿಡುಕುತನದ ಸ್ವಭಾವ ಬೇಡ. ಸಮಾಜ ಸುಧಾರಕರಿಗೆ ನೆಮ್ಮದಿ.
ಕನ್ಯಾ
ಸ್ನೇಹಿತರ ಕಠಿಣ ಪರಿಶ್ರಮ ನಿಮಗೆ ಅನುಕೂಲವನ್ನು ತರಲಿದೆ. ಕಲಾವಿದರು, ಸಿನಿಮಾರಂಗದವರಿಗೆ ಹೊಸ ಹೊಸ ಅವಕಾಶ ಸಿಗಲಿದೆ. ಆತ್ಮವಿಶ್ವಾಸದ ನಡೆ ಸಹಕಾರಿಯಾಗಲಿದೆ.
ತುಲಾ
ಕುಗ್ಗಿಹೋದ ಮನಸ್ಥೈಯ ದೃಢತೆಯನ್ನು ಪಡೆಯಲಿದೆ. ಧೈರ್ಯದಿಂದಾಗಿ ಯಶಸ್ಸು. ಹಳೆಯ ಸಾಲವನ್ನು ತೀರಿಸಲು ಸಕಾಲ. ಉದ್ಯೋಗದ ಬದಲಾವಣೆ ಬೇಡವೇ ಬೇಡ
ವೃಶ್ಚಿಕ
ಸಿಮೆಂಟ್ ಮತ್ತು ಕಬ್ಬಿಣ ಮುಂತಾದ ಗೃಹನಿರ್ಮಾಣ ವಸ್ತುಗಳ ವ್ಯಾಪಾರದಲ್ಲಿ ಪ್ರಗತಿ. ಹಿರಿಯರ ಆಗಮನ ಮತ್ತು ಮಾರ್ಗದರ್ಶನಕ್ಕಾಗಿ ಕಾಯುತ್ತಿರುವ ನಿಮಗೆ ಶುಭ ಸುದ್ದಿ ಸಿಗಲಿದೆ. ಕುಲದೇವರ ಆರಾಧನೆ ಅಗತ್ಯ.
ಧನು
ನಿತ್ಯ ಕೆಲಸಗಳನ್ನು ಮುಂದೂಡಿ ಸಂಸಾರದ ಬಗ್ಗೆ ಗಮನ ಕೊಡುವುದು ಲೇಸು. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಮನಸ್ಸಿನ ನಿಯಂತ್ರಣಕ್ಕೆ ದೇವಿಯ ಆರಾಧನೆ ಮಾಡಿ.
ಮಕರ
ಚಿಲ್ಲರೆ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ನೆಮ್ಮದಿ. ಮುಂಚೂಣಿಯಲ್ಲಿರುವ ನಿರ್ಧಾರವನ್ನು ಸರಿದೂಗಿಸಿಕೊಂಡು ನಡೆಯುವುದು ಉತ್ತಮ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ.
ಕುಂಭ
ಪತ್ರಿಕಾರಂಗ ಮುದ್ರಣ ಉದ್ಯಮದವರಿಗೆ ಸಂಚಲನ ಮೂಡುವ ದಿನ. ಸಕಾರಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳುವುದು ಉನ್ನತ ಸ್ಥಾನಕ್ಕೇರಲು ನಿಮಗೆ ದಾರಿಯಾಗಲಿದೆ.
ಮೀನ
ಕೆಲಸದಲ್ಲಿ ಭಿನ್ನಾಭಿಪ್ರಾಯಗಳು ಒದಗಿ ಬಂದರೂ ಚಿಂತಿಸುವ ಅವಶ್ಯಕತೆ ಇಲ್ಲ. ಹಾಗೆಂದು ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸಬೇಡಿ. ಸ್ನೇಹಿತರ ಅನಿರೀಕ್ಷಿತ ಆಗಮನದಿಂದ ಸಂತೋಷ ಪ್ರಾಪ್ತಿಯಾಗಲಿದೆ.
ಪಂಚಾಂಗ: ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು, ಮಾರ್ಗಶಿರಮಾಸ, ಶುಕ್ಲಪಕ್ಷ, ಚತುರ್ಥಿ, ಶುಕ್ರವಾರ, ಶ್ರವಣ ನಕ್ಷತ್ರ, ರಾಹುಕಾಲ 10:54 ರಿಂದ 12 :20 ಗುಳಿಕಕಾಲ 08:02 ರಿಂದ 09:28 ಯಮಗಂಡಕಾಲ 3: 11ರಿಂದ 04:37
ಮೇಷ
ನಿಮ್ಮ ವೃತ್ತಿ ಅನುಭವ ಮತ್ತು ಸಾಮರ್ಥ್ಯದ ಫಲದಿಂದಾಗಿ ಸಾಮಾಜಿಕ ಮನ್ನಣೆ. ಖಾಸಗಿ ಉದ್ಯೋಗಿಗಳಿಗೆ ಯಶಸ್ಸು. ರಾಜಕೀಯದಲ್ಲಿ ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾದೀತು. ಮಾನಸಿಕ ಚಂಚಲತೆ.
ವೃಷಭ
ನಿಮ್ಮ ಸಮಸ್ಯೆಗಳನ್ನು ಸಮಾಧಾನವಾಗಿ ತೆಗೆದುಕೊಳ್ಳಿ. ಆರ್ಥಿಕ ಸ್ಥಿರತೆಯನ್ನು ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಸರ್ಕಾರದಿಂದ ಸಹಾಯ ದೊರಯಲಿದೆ. ಮನೆಯಲ್ಲಿ ಶಾಂತಿ ದೊರಕಲಿದೆ.
ಮಿಥುನ
ಉದ್ಯೋಗದಲ್ಲಿ ಪ್ರಗತಿ. ಕ್ರೀಡಾಸ್ಪರ್ಧಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಕಳೆದುಕೊಂಡ ಸಂಪತ್ತು ಪುನಃ ಸಿಗಲಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ. ಮಕ್ಕಳಿಂದ ನೆಮ್ಮದಿ ಮೂಡಿಬರಲಿದೆ.
ಕಟಕ
ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಒಳಿತನ್ನು ಕೊಡಲಿದೆ. ಕೆಲಸದ ಒತ್ತಡದ ನಡುವೆಯೂ ಖುಷಿಯ ಅನುಭವ ನಿಮ್ಮ ಪಾಲಿಗೆ. ಕಿರಿಯರ ಮೇಲೆ ಜಾಗ್ರತೆ ಇರಲಿ. ಪ್ರಯಾಣದಲ್ಲಿ ಸುಖಾನುಭವ.
ಸಿಂಹ
ಹಳೆಯ ಸ್ನೇಹಿತರಿಂದ ಮತ್ತು ಉದ್ಯಮಿಗಳಿಂದ ನೆರವು. ಆಪ್ತ ಬಂಧುಗಳಿಂದ ಉಪಯುಕ್ತ ಸಲಹೆ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.
ಕನ್ಯಾ
ಸಾಮಾಜಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಜಂಜಾಟ ಪರಿಸ್ಥಿತಿಯು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ. ಧೃತಿಗೆಡಬೇಕಾದ ಅಗತ್ಯವಿಲ್ಲ. ಈ ದಿನವನ್ನು ಖುಷಿಯಾಗಿ ಕಳೆಯಲಿದ್ದೀರಿ.
ತುಲಾ
ಸಮಾಜದ ಒಳಿತಿಗಾಗಿ ತೆಗೆದುಕೊಂಡ ನಿರ್ಧಾರಗಳು ಫಲ ಕೊಡಲಿವೆ. ಹೃದಯಸ್ಪರ್ಶಿ ಕ್ಷಣಗಳು ನಿಮಗಾಗಿ ಕಾದಿವೆ. ಅಪರೂಪದ ನೆಮ್ಮದಿ ನಿಮ್ಮನ್ನರಸಿ ಬರಲಿದೆ. ಮಾಡುವ ಕೆಲಸದ ಬಗ್ಗೆ ಅವಲೋಕನ ಅಗತ್ಯ.
ವೃಶ್ಚಿಕ
ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯಲಿವೆ. ಹಗಲುಗನಸು ಕಾಣುವುದು ಬೇಡ. ಆಲಸ್ಯದಿಂದ ದೂರವಿರಿ. ಉತ್ತಮ ಯೋಜನೆಯನ್ನು ರೂಪಿಸಿ. ದೀನರಿಗೆ ಸಹಾಯ ಹಸ್ತ ನೀಡಿ.
ಧನು
ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವಿದ್ಯಾರ್ಥಿಗಳಿಗೆ ಸಂತಸದ ದಿನವಾಗಲಿದೆ. ಆರ್ಥಿಕ ದೃಢೀಕರಣಕ್ಕಾಗಿ ಹೊಸ ರೂಪ ರೇಷೆಯನ್ನು ನೆರವೇರಿಸುತ್ತೀರಿ.
ಮಕರ
ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಸುವಲ್ಲಿ ಸಫಲರಾಗುತ್ತೀರಿ. ರಕ್ತಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಮಕ್ಕಳ ನಡವಳಿಕೆಗಳ ಬಗ್ಗೆ ಗಮನವಿರಲಿ.
ಕುಂಭ
ಬಹುದಿನಗಳ ವೃತ್ತಿಯಲ್ಲಿನ ಉದ್ವಿಘ್ನತೆ ದೂರವಾಗಲಿದೆ. ಸಂಗಾತಿಯೊಂದಿಗೆ ವಿಶ್ರಾಂತ ಸ್ಥಳಕ್ಕೆ ತೆರಳಲಿದ್ದೀರಿ. ನಿವೃತ್ತರಿಗೆ ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ. ಉನ್ನತ ಸ್ಥಾನ ಲಭ್ಯವಾಗುವ ಸಾಧ್ಯತೆ.
ಮೀನ
ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಬದಲಾಯಸುವಲ್ಲಿ ಸಫಲರಾಗುತ್ತೀರಿ. ರಕ್ತಸಂಬಂಧ ಬಂಧುಗಳು ಸಹಕಾರ ನೀಡಲಿದ್ದಾರೆ. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು. ಆತುರದ ನಿರ್ಧಾರ ಸಲ್ಲದು.
ಪಂಚಾಂಗ: ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತೃತೀಯ, ಗುರುವಾರ, ಉತ್ತರಾಷಾಡ ನಕ್ಷತ್ರ ರಾಹುಕಾಲ: 01:45 ರಿಂದ 03:11 ಗುಳಿಕಕಾಲ: 09:28 ರಿಂದ 10:54 ಯಮಗಂಡಕಾಲ: 06:37 ರಿಂದ 08:02
ಮೇಷ
ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಮನೆಗೆ ಅತ್ಯಂತ ಪ್ರಿಯವ್ಯಕ್ತಿಗಳ ಆಗಮನ ಸಾಧ್ಯತೆ. ತೂಕದ ಮಾತುಗಳಿಂದಾಗಿ ಗೌರವ ಲಭ್ಯವಾಗಲಿದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯ ವ್ಯವಹಾರ ಮಾಡುವುದು ಉತ್ತಮ.
ವೃಷಭ
ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ. ವಾಹನ ಚಲಾನೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಶಸ್ತ್ರಗಳಿಂದ ನೋವುಂಟಾಗುವ ಸಾಧ್ಯತೆ.
ಮಿಥುನ
ಕುಟುಂಬದಲ್ಲಿ ಸಮಸ್ಯೆಗಳು ನಿರಾಯಾಸವಾಗಿ ಪರಿಹಾರವಾಗಲಿವೆ. ನ್ಯಾಯಾಲಯಗಳಲ್ಲಿನ ತೀರ್ಪು ವಿಳಂಬವಾಗುವ ಸಾಧ್ಯತೆ. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು.
ಕಟಕ
ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆ. ಸೌಂದರ್ಯವರ್ಧಕ, ಅಲಂಕಾರಿಕ ವಸ್ತುಗಳ ವ್ಯವಹಾರಸ್ಥರಿಗೆ ಉತ್ತಮ ವ್ಯವಹಾರ. ಮಾತು ಹಿತಮಿತವಾಗಿರುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ
ಮಹಿಳೆಯರಿಗೆ ಸಾಮಾಜಿಕ ಗೌರವ ದೊರಕಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲಕರ ವಾತಾವರಣ. ಹಿರಿಯರ ಮಾತುಗಳನ್ನು ನಿರ್ಲಕ್ಷ್ಯ ಮಾಡದಿರಿ.
ಕನ್ಯಾ
ವ್ಯಾಪಾರಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ವಸ್ತ್ರಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ನೂತನ ಕಾರ್ಯಯೋಜನೆಯನ್ನು ನಿರೂಪಿಸಲು ಸಕಾಲ.
ತುಲಾ
ನಿವೇಶನ ಅಥವಾ ಗ್ರಹಖರೀದಿ ಸಾಧ್ಯತೆ. ದಾಂಪತ್ಯ ಸುಖ ಸಿಗಲಿದೆ. ನಿತ್ಯದ ವ್ಯವಹಾರಗಳು ಎಂದಿನಂತೆ ನಡೆಯಲಿದೆ. ಹಿತಶತ್ರುಗಳ ಬಾಧೆ ಎದುರಾಗುವ ಸಾಧ್ಯತೆ ಕಂಡುಬರುವುದು.
ವೃಶ್ಚಿಕ
ಉದ್ಯಮದಲ್ಲಿ ಯಶಸ್ಸು. ಹೊಸ ಯಂತ್ರೋಪಕರಣ, ವಾಹನಗಳನ್ನು ಖರೀದಿಸುವ ಯೋಗ. ಮಕ್ಕಳ ಪ್ರಗತಿಯ ವಿಚಾರದಲ್ಲಿ ಸಂತಸದ ಸುದ್ದಿ ಕೇಳಲಿದ್ದೀರಿ. ವ್ಯವಹಾರ ಕುಶಲತೆಯಿಂದಾಗಿ ಧನಪ್ರಾಪ್ತಿ.
ಧನು
ಆರೋಗ್ಯದಲ್ಲಿ ಸುಧಾರಣೆ. ಕಳೆದ ವಸ್ತುಗಳು ಅಥವಾ ಬರಬೇಕಾದ ಬಾಕಿ ಹಣವನ್ನು ಪಡೆದುಕೊಳ್ಳುವ ಸಾಧ್ಯತೆ. ವೃತ್ತಿಯಲ್ಲಿ ದಿನದಮಟ್ಟಿಗೆ ಹೊಂದಾಣಿಕೆಯಿಂದಿರುವುದು ಉತ್ತಮ.
ಮಕರ
ಮಕ್ಕಳ ಪ್ರಗತಿಯಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ. ದೂರಪ್ರಯಾಣ ಯೋಗ ಕಂಡುಬರುತ್ತಿದೆ. ಮಹಿಳೆಯರು ಸ್ವಲ್ಪಮಟ್ಟಿನ ನೋವನ್ನು ಅನುಭವಿಸಬೇಕಾದೀತು. ಬಂಧುಗಳಿಂದ ಸಕಾಲಿಕ ನೆರವು.
ಕುಂಭ
ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳು. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲ.
ಮೀನ
ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು. ಸೋಲು–ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು ಒಳಿತು. ವ್ಯವಹಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಉತ್ತಮ ಆರೋಗ್ಯವನ್ನು ಪಡೆಯಲಿದ್ದೀರಿ.
ಗೂಂಡಾ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ರಾಜ್ಯ ವಿಧಾನ ಪರಿಷತ್ ನಲ್ಲಿ ಗೌರವಾನ್ವಿತ ಉಪ ಸಭಾಪತಿಯವರನ್ನು ಪೀಠದಿಂದ ಎಳೆದಾಡಿದ ಫಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕಾಂಗ್ರೆಸ್ ನಾಯಕರ ವ್ಯಕ್ತಿತ್ವವನ್ನು ಬಿಂಬಿಸುವ ಇಂತಹ ಅನಾಗರಿಕ ಗೂಂಡಾಗಿರಿ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿಯುತ್ತಿದ್ದ ಕಾಂಗ್ರೆಸ್ ನಾಯಕರು ಸ್ವತಃ ಮೇಲ್ಮನೆ ಉಪ ಸಭಾಪತಿಯ ಸಾಂವಿಧಾನಿಕ ಹುದ್ದೆಗೆ ಅಪಮಾನಗೈದಿದ್ದಾರೆ. ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯರ ಇಂತಹ ಕೀಳು ಮನಸ್ಥಿತಿಯ ಹೇಯ ವರ್ತನೆ ಸಹಿಸಲಸಾಧ್ಯ. ಸರಕಾರ ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸದಾ ದೇಶ ವಿರೋಧಿ ನೀತಿ ಮತ್ತು ಅಪಪ್ರಚಾರವನ್ನೇ ಬಂಡವಾಳವನ್ನಾಗಿಸಿರುವ ಕಾಂಗ್ರೆಸ್ ದಿನೇದಿನೇ ದೇಶಾದ್ಯಂತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ವಾಸ್ತವ. ದೇಶದ ಮುಂದೆ ರಾಜ್ಯದ ಮಾನ ಹರಾಜು ಹಾಕಿರುವ ಕಾಂಗ್ರೆಸ್ ನ ಗೂಂಡಾಗಿರಿ ವರ್ತನೆಗೆ ರಾಜ್ಯದ ಜನತೆ ಮುಂಬರಲಿರುವ ಗ್ರಾಮ ಪಂಚಾಯತ್ ಸಹಿತ ಎಲ್ಲಾ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಹೇಳಿದ್ದಾರೆ.
ಪಂಚಾಂಗ: ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ. ವಾರ : ಬುಧವಾರ, ತಿಥಿ : ದ್ವಿತೀಯ, ನಕ್ಷತ್ರ : ಪೂರ್ವಾಷಾಡ, ರಾಹುಕಾಲ:12.19 ರಿಂದ 1.44 ಗುಳಿಕಕಾಲ: 10.53 ರಿಂದ 12.19 ಯಮಗಂಡಕಾಲ: 8.01 ರಿಂದ 9.27