ಫೆಬ್ರವರಿ11, ಗುರುವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 28 ಸಲುವ ಪೌಷ ಬಹುಳ ಅಮಾವಾಸ್ಯೆ 44| ಗಳಿಗೆದಿನ ವಿಶೇಷ :ಪುರಂದರದಾಸರ ಪುಣ್ಯದಿನನಿತ್ಯ ನಕ್ಷತ್ರ :ಶ್ರವಣ 18 ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.34 ಗಂಟೆಸೂರ್ಯೋದಯ :6.58 ಗಂಟೆ

ಮೇಷ

ಒಪ್ಪಂದದ ಮಾತುಕತೆಗಳು ಫಲಪ್ರದವಾಗಲಿವೆ. ಧಾರ್ಮಿಕ ಕೆಲಸಗಳಿಗಾಗಿ ವೆಚ್ಚ. ಕುಟುಂಬದವರೊಂದಿಗೆ ಕುಲದೇವತಾ ದರ್ಶನ ಭಾಗ್ಯ. ದೂರದ ಪ್ರಯಾಣ ಮಾಡಬೇಕಾದ ಅನಿವಾರ್ಯತೆ.

ವೃಷಭ

ನಿಮಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಹಣಕಾಸಿನ ಅನುಕೂಲತೆಗಳು ಒದಗಿಬರಲಿವೆ. ಪರಿಸ್ಥಿತಿಯ ಅರಿವು ನಿಮಗೆ ಆಗಲಿದ್ದು ಉತ್ತಮ ಕಾರ್ಯನಿರ್ವಹಣೆ ಆಗುವುದರಲ್ಲಿ ಸಂಶಯಬೇಡ.

ಮಿಥುನ

ಹೆರವರಿಗೆ ನಿಮ್ಮ ಮೇಲಿರುವ ಸಂಶಯಗಳು ದೂರವಾಗಿ ನಿರಾಳತೆ ಮೂಡಲಿದೆ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಪ್ರಾಪ್ತವಾಗುವ ಸಾಧ್ಯತೆ. ವಾಹನಗಳಿಂದ ಲಾಭ, ಮನೆ ಬಳಕೆಯ ವಿಶೇಷ ವಸ್ತುಗಳ ಖರೀದಿ.

ಕಟಕ

ಒದಗಿ ಬಂದ ಅವಕಾಶಗಳಲ್ಲಿ ಪ್ರಮುಖವಾದುದನ್ನು ಮಾತ್ರ ಆಯ್ದುಕೊಳ್ಳಿ. ಪರಿಸ್ಥಿತಿಗೆ ನೀವು ಚೆನ್ನಾಗಿ ಹೊಂದಿಕೊಳ್ಳುವುದರಿಂದಾಗಿ ಸಂಕಷ್ಟಗಳು ಎದುರಾಗಲಾರವು.

ಸಿಂಹ

ಹೆಚ್ಚಿನ ಜವಾಬ್ದಾರಿಗಳು ನಿಮಗೆ ಒದಗಿಬಂದರೂ ಯಾವುದನ್ನೂ ಅತಿಯೆಂದು ಭಾವಿಸದೇ ಸಮಾಧಾನ ಚಿತ್ತದಿಂದ ನಿರ್ವಹಿಸಿದಲ್ಲಿ ನಿಮ್ಮ ಯಶಸ್ಸಿಗೆ ಸೋಪಾನವಾಗಲಿದೆ. ಹೊಸ ಯೋಜನೆಗಳನ್ನು ಆರಂಭಕ್ಕೆ ಸಕಾಲ.

ಕನ್ಯಾ

ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚಿನ ಪ್ರಗತಿಯನ್ನು ತೋರಿ ಸಂತೋಷ ಮೂಡಿಸಲಿದ್ದಾರೆ. ಕೌಟುಂಬಿಕ ವಿಷಯಗಳನ್ನು ಆಪ್ತರಲ್ಲಿ ಹಂಚಿಕೊಳ್ಳುವುದರಿಂದ ನೆಮ್ಮದಿ. ವೈದ್ಯ ವೃತ್ತಿಯಲ್ಲಿರುವವರಿಗೆ ಉತ್ತಮ ಆದಾಯ.

ತುಲಾ

ಗೃಹ ನಿರ್ಮಾಣ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ವ್ಯವಹಾರ ನಿಮಿತ್ತ ಗೆಳೆಯರೊಂದಿಗೆ ಪ್ರವಾಸ ಹೊರಡುವ ಬಗ್ಗೆ ಯೋಚಿಸಲಿದ್ದೀರಿ. ಯಶಸ್ವೀ ಕಾರ್ಯ ನಿರ್ವಹಣೆ.

ವೃಶ್ಚಿಕ

ಮನೆ ಮಂದಿಯೊಂದಿಗಿನ ಬಾಂಧವ್ಯ ವೃದ್ಧಿಯಾಗುವುದು. ಆರ್ಥಿಕವಾಗಿ ಬಲಿಷ್ಟಗೊಳ್ಳುವ ಅವಕಾಶ ಒದಗಿಬರುವುದು. ಮನೆಯಲ್ಲಿ ದೇವತಾ ಕಾರ್ಯಗಳನ್ನು ನೆರವೇರಿಸಲಿದ್ದೀರಿ.

ಧನು

ಅದ್ಭುತವಾದ ಕಾರ್ಯಗಳನ್ನು ಮಾಡುವ ಮೂಲಕ ಸೈ ಎನ್ನಿಸಿಕೊಳ್ಳುವಿರಿ. ಇದು ನಿಮಗೆ ಸಹಜವಾಗಿ ಕಂಡಬಂದರೂ ಇತರರಿಗೆ ವಿಶೇಷವೆನಿಸಲಿದೆ. ಬದುಕಿನಲ್ಲಿ ಒಂದು ಹೊಸ ಆಯಾಮವನ್ನು ನೀಡಲಿದ್ದೀರಿ.

ಮಕರ

ರಚನಾತ್ಮಕ ಕಾರ್ಯ ನಿರ್ವಹಣೆಯಿಂದ ಸಮಾಜದಲ್ಲಿ ಹೆಚ್ಚಿನ ಗೌರವಾದರಗಳನ್ನು ಹೊಂದುವಿರಿ. ಈ ದಿನ ಸರಕು ಸಾರಿಗೆ ವ್ಯವಹಾರದಲ್ಲಿ ತೊಡಗಿದವರಿಗೆ ಹೆಚ್ಚಿನ ಲಾಭ. ಪಿತ್ರಾರ್ಜಿತ ಆಸ್ತಿ ಕೈ ಸೇರುವ ಸಾಧ್ಯತೆ.

ಕುಂಭ

ಹೆಚ್ಚಿನ ಸ್ವಾತಂತ್ರ್ಯ ದೊರೆತಿದೆ. ಉತ್ಸಾಹದಿಂದ ಮುನ್ನುಗ್ಗಿ ಕೆಲಸ ಕಾರ್ಯಗಳು ಸುಗಮವಾಗಲಿವೆ. ದೂರಪ್ರದೇಶದಲ್ಲಿರುವ ವ್ಯಕ್ತಿಗಳಿಂದ ಸಕಾಲದಲ್ಲಿ ಸಹಾಯ ದೊರಕಲಿವೆ. ಋಣ ಬಾಧೆಯಿಂದ ಮುಕ್ತಿ.

ಮೀನ

ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭ ದೊರಕಲಿದೆ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಲಿದ್ದೀರಿ.

ಫೆಬ್ರವರಿ 10,ಬುಧವಾರ,2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 27 ಸಲುವ ಪೌಷ ಬಹುಳ ಚತುರ್ದಶಿ 45|| ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಉತ್ತರಾಷಾಢಾ 18| ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.33 ಗಂಟೆಸೂರ್ಯೋದಯ :6.58 ಗಂಟೆ

ಮೇಷ

ದುಡುಕುತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ಹೆಚ್ಚಿನ ತಾಳ್ಮೆ ಹಾಗೂ ಜಾಗರೂಕತೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಉಂಟಾದೀತು.

ವೃಷಭ

ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ದಿನವನ್ನು ಸಂತೋಷದಿಂದ ಕಳೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಸಂತೋಷದ ಓಡಾಟ. ನೆಮ್ಮದಿಯ ದಿನ.

ಮಿಥುನ

ಕಾರ್ಯಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ನೀವು ಅನುಸರಿಸಿದ ಮಾರ್ಗ ಮೆಚ್ಚಿ ಮೇಲಾಧಿಕಾರಿಗಳಿಂದ ಪ್ರಶಂಸೆ. ಕಛೇರಿಯಲ್ಲಿ ನಿಮ್ಮ ಸ್ಥಾನಮಾನ ಗಟ್ಟಿಯಾಗುವ ಜೊತೆಗೆ ಕಾರ್ಯ ಬಾಹುಳ್ಯ ಅಧಿಕಗೊಳ್ಳುವ ಸಾಧ್ಯತೆ.

ಕಟಕ

ಕಛೇರಿ ಕೆಲಸಗಳ ಸುಗಮತೆಗಾಗಿ ಸಹವರ್ತಿಗಳ ಸಲಹೆ ಸಹಕಾರ ಕೋರಲಿದ್ದೀರಿ. ಸಂಗಾತಿಗೆ ಹೊಸ ಉದ್ಯೋಗ ದೊರೆತು ಸಂತೋಷ. ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವುದು ಒಳಿತು.

ಸಿಂಹ

ಉದ್ಯೋಗದಲ್ಲಿ ಸ್ಥಾನಮಾನಗಳು ಅಧಿಕಗೊಳ್ಳುವುದು. ರೈತಾಪಿ ವರ್ಗದವರಿಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ತೊಡಕು. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಮನೆಯಲ್ಲಿ ಸಮೃದ್ಧಿ ನೆಲೆಸಲಿದೆ.

ಕನ್ಯಾ

ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಆಭರಣ ಖರೀದಿ ಸಾಧ್ಯತೆ.

ತುಲಾ

ಒದಗಿ ಬಂದಿರುವ ಅವಕಾಶಗಳನ್ನು ಕಳೆದುಕೊಳ್ಳದೇ ಸದುಪಯೋಗ ಪಡೆದುಕೊಳ್ಳಿ. ಸ್ನೇಹಿತನ ಸಹಾಯಕ್ಕೆ ನಿಲ್ಲಬೇಕಾದ ಅವಕಾಶ ಎದುರಾದೀತು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಅವಕಾಶ.

ವೃಶ್ಚಿಕ

ಚಿತ್ರಕಲೆ, ಗಾಯನ ಮುಂತಾದ ಲಲಿತ ಕಲೆಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮುಖ್ಯವಾದ ವಿಷಯವೊಂದರ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕಾದೀತು.

ಧನು

ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದರ ಮನವರಿಕೆ. ಹಣಕಾಸಿನ ಅಡಚಣೆಗಳು ದೂರ. ಜೀವನದಲ್ಲಿ ಬದಲಾವಣೆ ತರುವ ಘಟನೆಯೊಂದು ಎದುರಾಗುವ ಸಾಧ್ಯತೆ. ಸಂಪನ್ಮೂಲಗಳು ಕೂಡಿಬರಲಿವೆ.

ಮಕರ

ಆತ್ಮೀಯರೊಂದಿಗೆ ಹಣಕಾಸಿನ ಪರಿಸ್ಥಿತಿ ಬಗ್ಗೆ ವಿಷಯ ಹಂಚಿಕೊಳ್ಳಲಿದ್ದೀರಿ. ನಿವೇಶನಕೊಳ್ಳವ ವಿಚಾರ ಮುಂದೂಡುವ ಬದಲಾಗಿ ಹೊಂದಾಣಿಕೆಯಿಂದ ಮುಂದುವರೆಯುವುದು ಉತ್ತಮ.

ಕುಂಭ

ಸಮಾಜಸೇವೆ ನಿಮಿತ್ತ ಹೆಚ್ಚಿನ ಓಡಾಟ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಸಂಭವ. ದೂರದಲ್ಲಿರುವ ಮಿತ್ರರೊಬ್ಬರು ಸನಿಹಕ್ಕೆ ಬರುವ ಸಾಧ್ಯತೆ. ಆರ್ಥಿಕ ಅನುಕೂಲತೆಗಳು ಸಹಜವಾಗಿರುವುದು.

ಮೀನ

ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ಒಪ್ಪಂದ ಏರ್ಪಟ್ಟು ಸಂತೋಷ. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಪ್ರಶಸ್ತಿ, ಗೌರವಾದರಗಳು ಲಭ್ಯವಾಗಲಿವೆ. ಪ್ರವಾಸ ಸಂತಸವನ್ನು ತರುವುದು.

ಫೆಬ್ರವರಿ 09,ಮಂಗಳವಾರ 2021 :ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು,ಪುಷ್ಯ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ : ಪುಷ್ಯ

ರಾಹುಕಾಲ: 3.33 ರಿಂದ 5.01
ಗುಳಿಕಕಾಲ: 12.37 ರಿಂದ 2.05
ಯಮಗಂಡಕಾಲ: 9.42 ರಿಂದ 11.10

ಮೇಷ

ವಿವಾಹಾಕಾಂಕ್ಷಿಗಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ.

ವೃಷಭ

ಸಂಪನ್ಮೂಲ ವೃದ್ಧಿಗಾಗಿ ಹೊಸದೊಂದು ಮಾರ್ಗ ಕಂಡುಕೊಳ್ಳುವಲ್ಲಿ ಯಶಸ್ಸು. ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸ. ತುರುಸಿನ ಕೆಲಸದಿಂದಾಗಿ ಮನೆಯ ಕೆಲಸಗಳನ್ನು ಮುಂದೂಡುವ ಸಾಧ್ಯತೆ.

ಮಿಥುನ

ಈ ದಿನ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೂ ವಿರಾಮ ಹೇಳಿ ಹೆಂಡತಿ ಮಕ್ಕಳೊಂದಿಗೆ ಸಮಯ ಕಳೆಯಲು ನಿಶ್ಚಯಿಸುವಿರಿ. ಸಂಜೆಯ ವೇಳೆಗೆ ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕಟಕ

ಅತಿಯಾದ ಕಾರ್ಯದೊತ್ತಡ ಉಂಟಾಗಲಿದೆ. ಕಾರ್ಯಬಾಹುಳ್ಯದಿಂದಾಗಿ ಮನೆಯ ವಿಷಯದಲ್ಲಿ ಉದಾಸೀನತೆ ಮಾಡಲಾಗದು. ಕಮಿಷನ್ ವ್ಯವಹಾರ ನಡೆಸುವವರಿಗೆ ಉತ್ತಮ ಆದಾಯ.

ಸಿಂಹ

ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಷ್ಮವಾಗಿ ಪರಿಶೀಲಿಸಿ ಮುಂದುವರಿಯುವುದು ಉಚಿತ. ಸಂಸ್ಥೆಯ ಅಭಿವೃದ್ಧಿಗಾಗಿ ಕಾರ್ಮಿಕ ವರ್ಗದವರೊಡನೆ ಸಕಾರಾತ್ಮಕ ಮಾತುಕತೆ ನಡೆಸಿ ಯಶಸ್ಸನ್ನು ಕಾಣಲಿದ್ದೀರಿ.

ಕನ್ಯಾ

ಸ್ಥಗಿತಗೊಂಡಿರುವ ಅಭ್ಯಾಸ ಅಥವಾ ಅಧ್ಯಯನವನ್ನು ಮುಂದುವರೆಸಲಿದ್ದೀರಿ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ ನಿಶ್ಚಯವಾಗಲಿದೆ. ಹಿರಿಯರೊಬ್ಬರ ಆಗಮನದ ಜೊತೆ ವಿವಾಹ ವಿಷಯ ಪ್ರಸ್ತಾಪವಾಗಲಿದೆ.

ತುಲಾ

ಹೆಣ್ಣು ಮಕ್ಕಳಿಗೆ ಹೊಸ ಸಂಬಂಧವೊಂದು ಕಂಡುಬರುವ ಸಾಧ್ಯತೆ. ನೂತನ ಉದ್ಯಮವೊಂದರ ಸ್ಥಾಪನೆಯ ಬಗ್ಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ.

ವೃಶ್ಚಿಕ

ನಿಮ್ಮ ಪ್ರಯತ್ನಗಳು ವ್ಯರ್ಥಗೊಳ್ಳದೆ ಸಮಯೋಚಿತವೆನಿಸಲಿದೆ. ನಿಧಾನವಾದರೂ ಶ್ರಮಕ್ಕೆ ಮೀರಿದ ಪ್ರತಿಫಲ ದೊರಕಿ ನೆಮ್ಮದಿ ಮೂಡಿಬರಲಿದೆ. ಹಿರಿಯರ ಪ್ರಶಂಸೆ ಭಾಜನರಾಗುವ ಸಾಧ್ಯತೆ.

ಧನು

ಊರಿನ ವ್ಯಾಜ್ಯವೊಂದರ ಪರಿಹಾರಾರ್ಥ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಒದಗಿಬರಲಿದೆ. ಕಾರ್ಯಾನುಕೂಲವಿರುವುದು. ಕುಟುಂಬ ಸಮೇತ ಕುಲದೇವತಾ ದರ್ಶನಕ್ಕಾಗಿ ತೆರಳುವ ಸಾಧ್ಯತೆ ಇದೆ.

ಮಕರ

ಭವಿಷ್ಯದ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸಲಿದ್ದೀರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನವಾಗಿ ಪರಿಣಮಿಸಲಿದೆ. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಹರುಷ. ಕವಿಗಳಿಗೆ ಮನ್ನಣೆಯ ದಿನ.

ಕುಂಭ

ಮನೆಯಲ್ಲಿ ಹಿತಕರ ವಾತಾವರಣ. ಧಾನ್ಯಗಳ ಸಗಟು ವರ್ತಕರಿಗೆ ಲಾಭದಾಯಕ ದಿನ. ದ್ರವ ಪದಾರ್ಥಗಳ ವ್ಯಾಪಾರಸ್ತರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಮಕ್ಕಳೊಂದಿಗೆ ಸಂಜೆ ಹಿತವಾದ ಸುತ್ತಾಟ ನೆಮ್ಮದಿ ತರಲಿದೆ.

ಮೀನ

ಮಕ್ಕಳೊಂದಿಗೆ ಕಿರು ಪ್ರವಾಸದ ಯೋಜನೆಯನ್ನು ಹಾಕುವಿರಿ. ವೈದ್ಯರಿಗೆ ಆದಾಯ ಹೆಚ್ಚಾಗುವುದು. ಶುಭ ಕಾರ್ಯದ ಬಗ್ಗೆ ಆತ್ಮೀಯರೊಂದಿಗೆ ಮಾತುಕತೆ ನಡೆಸಲಿದ್ದೀರಿ.

ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ

ಬಿಜೆಪಿ ಆರ್ಥಿಕ ಪ್ರಕೋಷ್ಠ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ (ರಿ.) ಇದರ ಜಂಟಿ ಆಶ್ರಯದಲ್ಲಿ “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿಗಳು ಫೆ.6 ರಂದು ಹೋಟೆಲ್ ಕಿದಿಯೂರು ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರ ಗೋಷ್ಠಿಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಆರ್ಥಿಕ ತಜ್ಞರಾದ ವಿಶ್ವನಾಥ್ ಭಟ್ ಬೆಂಗಳೂರು ಇವರು “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಬಗ್ಗೆ ಹಾಗೂ ಲೆಕ್ಕ ಪರಿಶೋಧಕ ರಾದ ಸಿ.ಎ. ವಿಕಾಸ್ ಶೆಣೈ ಮಂಗಳೂರು ಇವರು “ಜಿ.ಎಸ್.ಟಿ.” ಇತ್ತೀಚಿನ ಬದಲಾವಣೆಗಳು ವಿಷಯದಲ್ಲಿ ವಿಸ್ತೃತ ವಿಚಾರ ಗೋಷ್ಠಿಗಳನ್ನು ನಡೆಸಿಕೊಟ್ಟರು. ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಪ್ರಸಾದ್ ಉಪಾಧ್ಯಾಯರವರು ಸ್ವಾಗತಿಸಿ, ಕೋಶಾಧಿಕಾರಿ ಗಳಾದ ಬಿ.ಎಮ್. ಭಟ್ ರವರು ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕರಾದ ದಿವಾಕರ ಶೆಟ್ಟಿ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಸಂಚಾಲಕರಾದ ವೆಂಕಟೇಶ್ ನಾವುಂದ ವಂದಿಸಿದರು.

ಫೆಬ್ರವರಿ 08, ಸೋಮವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ ವಾರ : ಸೋಮವಾರ,
ತಿಥಿ : ದ್ವಾದಶಿ, ನಕ್ಷತ್ರ : ಮೂಲ,

ರಾಹುಕಾಲ: 8.15_9.42
ಗುಳಿಕಕಾಲ: 2.05_3.32
ಯಮಗಂಡಕಾಲ: 11.10-12.37

ಮೇಷ

ನಿಮ್ಮ ಇಷ್ಟದಂತೆಯೇ ಕೆಲಸ ಕಾರ್ಯಗಳು ಸಾಗುವುದರಿಂದ ನೆಮ್ಮದಿಯೊಂದಿಗೆ ಆತ್ಮವಿಶ್ವಾಸ ಮೂಡಲಿದೆ. ಅತಿಯಾದ ವಿಶ್ವಾಸದಿಂದಾಗಿ ಬೀಗದೆ ಮುಂದಿನ ಯೋಜನೆಯೊಂದರ ಬಗ್ಗೆ ಯೋಚಿಸುವ ಅಗತ್ಯ ಕಂಡುಬರುವುದು.

ವೃಷಭ

ನಿರೀಕ್ಷಿತ ಕಾರ್ಯಕಲಾಪಗಳು ನೆರವೇರಿ ನೆಮ್ಮದಿ. ಯಂತ್ರೋಪಕರಣ ಮಾರಾಟದಿಂದಾಗಿ ಅಧಿಕ ಲಾಭದ ನಿರೀಕ್ಷೆ. ಸಾಲ ಮರುಪಾವತಿಸಿ ಋಣ ಮುಕ್ತರಾಗುವ ಲಕ್ಷಣಗಳು ಕಂಡುಬರುವುದು.

ಮಿಥುನ

ಸಾಮಾಜಿಕ ಗೌರವ ಮನ್ನಣೆಗಳು ನಿಮ್ಮ ಪಾಲಿಗೆ ದೊರಕಲಿದೆ. ದೇವತಾನುಗ್ರಹದಿಂದ ಕೆಲಸ ಕಾರ್ಯಗಳು ಕೈಗೂಡಲಿದೆ. ಮನರಂಜನೆಗಾಗಿ ವ್ಯಯ ಮಾಡಬೇಕಾದೀತು. ಪತ್ನಿಯ ಅಭಿಪ್ರಾಯ ಗೌರವಿಸುವುದು ಉತ್ತಮ.

ಕಟಕ

ಮದುವೆ ಮುಂತಾದ ಮಂಗಳ ಕಾರ್ಯಗಳಿಗೆ ಸಹಾಯ ಮಾಡಬೇಕಾದೀತು. ಮನೆ ಪಾಠ ಪ್ರವಚನ ಮಾಡುವವರಿಗೆ ಬಿಡುವಿನ ದಿನವಾಗಲಿದೆ. ವಾಣಿಜ್ಯ ಬೆಳೆ ಬೆಳೆಗಾರರಿಗೆ ಉತ್ತಮ ಲಾಭ ದೊರಕಲಿದೆ.

ಸಿಂಹ

ದಿನಬಳಕೆ ವಸ್ತುಗಳ ಮಾರಾಟಗಾರರಿಗೆ ಉತ್ತಮ ವ್ಯವಹಾರ ನಡೆಯಲಿದೆ. ಹೊಸ ವ್ಯಾಪಾರ ಆರಂಭಿಸಲು ಯೋಚಿಸಲಿದ್ದೀರಿ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ.

ಕನ್ಯಾ

ಬದುಕಿಗೊಂದು ಹೊಸ ಆಯಾಮ ಕಂಡುಕೊಳ್ಳಲಿದ್ದೀರಿ. ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳವಾದುದು ಎಂದು ತಿಳಿದುಕೊಳ್ಳುವಿರಿ. ಮನೆಯವರ ಭಾವನೆಗಳಿಗೆ ಬೆಲೆ ಕೊಡಲಿದ್ದೀರಿ.

ತುಲಾ

ಆರೋಗ್ಯದಲ್ಲಿ ಸುಧಾರಣೆ. ಮನೆಯ ವಿಸ್ತರಣೆ ಅಥವಾ ನವೀಕರಣಕ್ಕಾಗಿ ವೆಚ್ಚ. ನಿಮ್ಮ ವಿಚಾರಗಳಿಂದ ವ್ಯಕ್ತಿಯೊಬ್ಬರೊಡನೆ ವಾದ ಮಂಡಿಸಿ ಮನ ಗೆಲ್ಲಲಿದ್ದೀರಿ. ಗೆಳೆಯರೊಂದಿಗೆ ಪ್ರವಾಸ ಸಾಧ್ಯತೆ.

ವೃಶ್ಚಿಕ

ಸಂತಾನ ಪ್ರಾಪ್ತಿಯ ಸುದ್ದಿಯಿಂದಾಗಿ ಸಂತಸ. ಮರಮುಟ್ಟುಗಳ ವ್ಯಾಪಾರದಿಂದಾಗಿ ಅಧಿಕ ಲಾಭ. ಮಕ್ಕಳಿಗೆ ಉತ್ತಮ ಸ್ಥಾನ ಲಭಿಸಿದ್ದನ್ನು ಕಂಡು ಸಂತೋಷ ಪಡಲಿದ್ದೀರಿ.

ಧನು

ವೃತ್ತಿಯಲ್ಲಿನ ಬದಲಾವಣೆ ಅಥವಾ ಸ್ಥಾನ ಬದಲಾವಣೆಯ ಬಗ್ಗೆ ಸಂಗಾತಿಯೊಡನೆ ಚರ್ಚಿಸಲಿದ್ದೀರಿ. ರೈತರು ರಸಗೊಬ್ಬರ ಮತ್ತು ಕೀಟನಾಶಕ ಮುಂತಾದ ಕೃಷಿ ರಕ್ಷಣಾ ಖರೀದಿಗಾಗಿ ಹಣ ವ್ಯಯಿಸಬೇಕಾದೀತು.

ಮಕರ

ಬಂಧುಮಿತ್ರರೊಡಗೂಡಿ ನೆನಪಿನ ದಿನವೊಂದನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದ್ದೀರಿ. ಹಲವರಿಗೆ ಮದುವೆ ವಿಷಯ ಪ್ರಸ್ತಾಪವಾಗುವ ಸಾಧ್ಯತೆ. ಮಕ್ಕಳಿಂದ ಶುಭ ಸುದ್ದಿ. ಬಂಧಗಳ ಅಗತ್ಯ ಪೂರೈಕೆಗಾಗಿ ಶ್ರಮ.

ಕುಂಭ

ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಅತೀವ ಲಾಭ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಲಲಿತ ಕಲೆಗಳಲ್ಲಿ ಉನ್ನತ ಸ್ಥಾನ ಲಭ್ಯವಾಗಲಿದೆ. ಬರಹಗಾರರಿಗೆ ಉತ್ತಮ ಅವಕಾಶ.

ಮೀನ

ವಾಹನ ಪ್ರಯಾಣ ಅನುಕೂಲಕರವಾಗಿ ಪರಿಣಮಿಸಲಿದೆ. ಚಿನ್ನ ಬೆಳ್ಳಿ ಮುಂತಾದ ಆಭರಣ ಮಾರಾಟಗಾರರಿಗೆ ಗಳಿಕೆಯಲ್ಲಿ ಹೆಚ್ಚಳ. ಮುಖ್ಯವಾದ ಕೆಲಸವೊಂದನ್ನು ಪ್ರಾರಂಭಿಸುವ ಸಲುವಾಗಿ ಹಿರಿಯರೊಂದಿಗೆ ಚರ್ಚೆ.

ʼಉತ್ತರಕಾಂಡ್‌ʼನಲ್ಲಿ ದಿಢೀರ್‌ ಪ್ರವಾಹ: 150 ಜನ ನಾಪತ್ತೆ, ತಪೋವನದಲ್ಲಿ 9-10 ಮೃತದೇಹ ಪತ್ತೆ..!

ಉತ್ತರಕಾಂಡ್:‌ ಉತ್ತರಕಾಂಡ್‌ʼನಲ್ಲಿ ಹಿಮಕುಸಿತದ ಹಿನ್ನೆಲೆ ದಿಢೀರ್‌ ಪ್ರವಾಹ ಉಂಟಾಗಿದೆ. ಹಿಮಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ.

ಭೀಕರ ಹಿಮಪಾತದಿಂದಾಗಿ ಇಲ್ಲಿನ ರಿಷಿ ಗಂಗಾ ನದಿಯಲ್ಲಿ ಸೃಷ್ಟಿಯಾದ ದಿಢೀರ್ ಪ್ರವಾಹ, ಚಮೋಲಿ ನದಿಯಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ರಿಷಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು. ನದಿ ಪಾತ್ರಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂತು. ಹೀಗಾಗಿ, ರಿಷಿ ಗಂಗಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಜಲ ವಿದ್ಯುತ್‌ ಯೋಜನೆಯ ಕಾಮಗಾರಿ ಸ್ಥಳ ಪ್ರವಾಹದಿಂದ ಆವೃತವಾಯ್ತು. 

ಜೋಶಿಮಠದಲ್ಲಿರುವ ಧೌಲಿ ಗಂಗಾ, ಅಲಕನಂದ ನದಿಯ ಹಿಮ ಪ್ರವಾಹದಲ್ಲಿ 150ಕ್ಕೂ ಜನರು ಕಾಣೆಯಾಗಿದ್ದಾರೆ. ಎನ್ಡಿಆರ್ಎಫ್ ಪಡೆಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದ್ದು, ಸುರಂಗದಲ್ಲಿ ಸಿಲುಕಿರುವ 20 ರಿಂದ 25 ಮಂದಿಯನ್ನ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಚೆಮೋಲಿಯ ತಪೋವನದಲ್ಲಿ ಅಂದ್ರೆ ಒಂದೇ ಕಡೆ 9 ರಿಂದ 10 ಮೃತದೇಶಗಳು ಪತ್ತೆಯಾಗಿವೆ.

ಇನ್ನು ಉತ್ತರಕಾಂಡ್‌ʼನ ನಾಲ್ಕು ಜಿಲ್ಲೆಗಳಲ್ಲಿ ಹೈ ಆಲರ್ಟ್‌ ಘೋಷಣೆ ಮಾಡಲಾಗಿದೆ. ಹರಿದ್ವಾರ, ಋಷಿಕೇಶ್‌, ರುದ್ರ ಪ್ರಯಾಗ್‌, ಚಮೋಲಿಗಳಲ್ಲಿ ಹೈ ಆಲರ್ಟ್‌ ಘೋಷಿಸಿಸಲಾಗಿದ್ದು, ಧೌಲಿ ಗಂಗಾ ನದಿಯ ತಟದಲ್ಲಿರುವ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ.

ಇನ್ನು ಈ ರಕ್ಷಣಾ ಕಾರ್ಯದಲ್ಲಿ ಡಿಆರ್ಎಫ್ ಪಡೆಗಳ ಜೊತೆಗೆ ಭಾರತೀಯ ಸೇನೆಯೂ ಸೇರಿಕೊಂಡಿದ್ದು ನಾಪತ್ತೆಯಾದವರ ತೀವ್ರ ಹುಡುಕಾಟ ನಡೆದಿದೆ.

ಫೆಬ್ರವರಿ 07;ಭಾನುವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯನ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ, ತಿಥಿ: ಏಕಾದಶಿ
ವಾರ: ಭಾನುವಾರ, ನಕ್ಷತ್ರ : ಜೇಷ್ಠ,

ರಾಹುಕಾಲ: 5.00 ರಿಂದ 6.27
ಗುಳಿಕಕಾಲ: 3.32 ರಿಂದ 5.00
ಯಮಗಂಡಕಾಲ: 12.37 ರಿಂದ 2.05

ಮೇಷ

ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆಯವರೊಡನೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸ ಹೊರಡಲು ಮಕ್ಕಳು ನಿಮಗೆ ನೆರವಾಗಲಿದ್ದಾರೆ.

ವೃಷಭ

ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಯ ದಿನ. ಪ್ರಯಾಣದಿಂದ ಲಾಭಗಳಿಸುವಿರಿ. ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಸಂದರ್ಶಿಸಬೇಕಾದೀತು. ರಾಜಕೀಯ ಸ್ಥಿತ್ಯಂತರ.

ಮಿಥುನ

ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ತಿಗೊಳಿಸುವಿರಿ. ಇಷ್ಟದೇವರ ಸೇವೆಯಿಂದ ಕಷ್ಟಗಳೆಲ್ಲವೂ ಪರಿಹಾರ. ಬಂಧುಗಳಿಂದ ಸಹಾಯ ಸಹಕಾರಗಳು ದೊರಕಲಿವೆ.

ಕಟಕ

ಶುಭ ಸುದ್ದಿಯೊಂದನ್ನು ಕೇಳುವ ಭಾಗ್ಯ ನಿಮ್ಮದಾಗಲಿದೆ. ಮನಸ್ಸಿಗೆ ಮುದ ನೀಡುವ ಘಟನಾವಳಿಗಳು ಸಂಭವಿಸುವವು. ಔಷಧ ವ್ಯಾಪಾರದಲ್ಲಿ ತೊಡಗಿದವರಿಗೆ ಉತ್ತಮ ಲಾಭ. ದೃಢ ನಿರ್ಧಾರ ಕೈಗೊಳ್ಳುವುದರಿಂದ ಯಶಸ್ಸು.

ಸಿಂಹ

ವೃತ್ತಿ ಜೀವನಕ್ಕೆ ಬಹಳ ಅವಶ್ಯಕವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ನಿಲುವುಗಳನ್ನು ಬದಲಾಯಿಸದೇ ಸಮರ್ಥಿಸಿಕೊಳ್ಳುವುದು ಉತ್ತಮ. ಮಹಿಳೆಯರಿಗೆ ಮಾನಸಿಕ ಕಿರಿಕಿರಿ ಉಂಟಾಗುವ ಸಾಧ್ಯತೆ.

ಕನ್ಯಾ

ನಿಮ್ಮ ಕೆಲಸಗಳ ಬಗೆಗೆ ಹೆಚ್ಚಿನ ಆದ್ಯತೆಯೊಂದಿಗೆ ನಿಗಾವಹಿಸುವುದು ಒಳಿತು. ಬಿಡುವಿಲ್ಲದ ಕೆಲಸದಿಂದ ಸ್ವಲ್ಪಮಟ್ಟಿನ ಬಿಡುವನ್ನು ಹೊಂದಲಿದ್ದೀರಿ. ಕುಟುಂಬದವರೊಂದಿಗೆ ಆರಾಮದಾಯಕ ದಿನವನ್ನಾಗಿ ಕಳೆಯುವಿರಿ.

ತುಲಾ

ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಂತಸದಿಂದ ಕಾಲಕಳೆಯುವಿರಿ. ಕೂಡಿಟ್ಟ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯಯಿಸಬೇಕಾದೀತು. ಚಿಂತಿಸಬೇಕಾದ ಅಗತ್ಯವಿಲ್ಲ.

ವೃಶ್ಚಿಕ

ಆಯಾಸ ಕಡಿಮೆಯಾಗುವ ಜೊತೆಗೆ ಆಸ್ಪತ್ರೆಯ ಅಲೆದಾಟ ಮುಕ್ತಾಯವಾಗುವ ಸಾಧ್ಯತೆ. ಮಕ್ಕಳ ಒತ್ತಾಸೆ ಮೇರೆಗೆ ವಾಹನ ಖರೀದಿಯನ್ನು ಮಾಡಲಿದ್ದೀರಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಅತ್ಯಂತ ಲಾಭದಾಯಕ ದಿನ.

ಧನು

ಆದಾಯ ಹೆಚ್ಚಿಸಿಕೊಳ್ಳುವ ಮೂಲವೊಂದನ್ನು ಕಂಡುಕೊಳ್ಳಲಿದ್ದೀರಿ. ಹಿರಿಯರ ಮಧ್ಯಸ್ಥಿಕೆಯಿಂದಾಗಿ ಮನೆಯ ವಿಚಾರಗಳನ್ನು ಬಗೆಹರಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ. ವಿವಾಹ ಸಂಬಂಧದ ಮಾತುಕತೆ ನಡೆಸುವ ಸಾಧ್ಯತೆ.

ಮಕರ

ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭದ ದಿನವಾಗಲಿದೆ. ಮನೆಯಲ್ಲಿ ವಿವಾಹ ಸಿದ್ಧತೆಗಳನ್ನು ಭರದಿಂದ ಮಾಡಿಕೊಳ್ಳಬೇಕಾದ ಸಾಧ್ಯತೆ ಕಂಡುಬರುತ್ತಿದೆ. ಬಂಧುಗಳೊಂದಿಗೆ ತೀರ್ಥಯಾತ್ರೆ ಪ್ರಸ್ತಾಪ ಮಾಡಲಿದ್ದೀರಿ.

ಕುಂಭ

ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಹೆತ್ತವರ ಹಾರೈಕೆ ಮತ್ತು ದೇವರ ಆಶೀರ್ವಾದ ಪಡೆಯಲಿದ್ದೀರಿ. ದಿನವಿಡೀ ಸಂಗಾತಿಯೊಂದಿಗೆ ಸಂತೋಷದಿಂದ ಕಾಲಕಳೆಯಲಿದ್ದೀರಿ.

ಮೀನ

ಖರ್ಚು ವೆಚ್ಚಗಳ ಮೇಲೆ ಬಿಗಿಯಾದ ಹಿಡಿತ ಅನಿವಾರ್ಯವಾಗಿರುವುದು. ಮಹಿಳೆಯರ ಆಶೋತ್ತರಗಳು ಈಡೇರಲಿವೆ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ತೀರ್ಮಾನ ಕೈಗೊಳ್ಳುವಿರಿ.

ಫೆಬ್ರವರಿ06, ಶನಿವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು,ಪುಷ್ಯ ಮಾಸ,
ಕೃಷ್ಣಪಕ್ಷ,ನವಮಿ,
ಶನಿವಾರ,ಅನುರಾಧ ನಕ್ಷತ್ರ,
ರಾಹುಕಾಲ 9:42-11:10
ಗುಳಿಕಕಾಲ 6: 47-8:15
ಯಮಗಂಡಕಾಲ 02:05-3:32

ಮೇಷ

ಮಿತ್ರರ ಸಹಕಾರದಿಂದ ವ್ಯಾವಾಹಾರಿಕ ಚತುರತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಲಿದ್ದೀರಿ. ಗುರು ಹಿರಿಯರ ಅವಗಣನೆ ಸಲ್ಲದು. ಆರೋಗ್ಯದ ಕಡೆಗೆ ಗಮನ ವಹಿಸುವುದು ಅವಶ್ಯ.

ವೃಷಭ

ಶ್ರಮವರಿಯದ ಕೆಲಸ ಕಾರ್ಯಗಳು. ತುರುಸಿನ ಓಡಾಟ ಮಾಡಬೇಕಾದ ಅನಿವಾರ್ಯತೆ ತಲೆದೋರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳುವ ಅವಕಾಶ.

ಮಿಥುನ

ಆತ್ಮವಿಶ್ವಾಸದ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಸುಯೋಗ. ಸಹೋದ್ಯೋಗಿಗಳಲ್ಲಿ ಹರ್ಷ ಮೂಡಿಸಲಿದ್ದೀರಿ. ಮನೆಯವರೊಂದಿಗೆ ದೇವತಾ ದರ್ಶನ.

ಕಟಕ

ವ್ಯವಹಾರದಲ್ಲಿ ಮೋಸಹೋಗವ ಸಾಧ್ಯತೆ ಇದ್ದು ಎಚ್ಚರಿಕೆಯ ನಡೆ ಅಗತ್ಯ. ದಿನ ನಿತ್ಯದ ಕಾರ್ಯಕಲಾಪಗಳು ಸುಗಮ. ಅಪರೂಪದ ವ್ಯಕ್ತಿಯೊಬ್ಬರ ಭೇಟಿಯಿಂದಾಗಿ ಸಂತಸ. ಸಂಗಾತಿಯೊಂದಿಗೆ ಸಂತಸ ಹಂಚಿಕೊಳ್ಳಲಿದ್ದೀರಿ.

ಸಿಂಹ

ಸಮಯೋಚಿತ ಕೆಲಸಗಳಿಂದಾಗಿ ಹಿರಿಯರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಜ್ಯ, ತಗಾದೆಗಳು ರಾಜಿ ವ್ಯವಹಾರಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ.

ಕನ್ಯಾ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಸರ್ಕಾರದಿಂದ ದೊರೆಯಬೇಕಾದ ಅನುಕೂಲತೆಗಳು ಸಕಾಲದಲ್ಲಿ ಲಭ್ಯ. ಕೃಷಿ ಉತ್ಪನ್ನಗಳ ವ್ಯಾಪಾರಸ್ಥರಿಗೆ ಅನುಕೂಲಕರ ವಾತಾವರಣ.

ತುಲಾ

ಅಡೆತಡೆಗಳನ್ನು ಎದುರಿಸಿ ಧೈರ್ಯದಿಂದ ಕಾರ್ಯ ಸಾಧನೆ ಮಾಡಲಿದ್ದೀರಿ. ಕ್ರಯ ವಿಕ್ರಯಗಳಲ್ಲಿ ಲಾಭ ನಿರೀಕ್ಷಿಸಬಹುದು. ಪತ್ನಿಯ ಅನಾರೋಗ್ಯದಿಂದಾಗಿ ವಿಪರೀತ ಖರ್ಚು. ಸಂತಸದ ಸುದ್ದಿಯೊಂದನ್ನು ಕೇಳಲಿದ್ದೀರಿ.

ವೃಶ್ಚಿಕ

ಉದ್ಯೋಗ ಕ್ಷೇತ್ರದಲ್ಲಿ ವಿಪರೀತ ಒತ್ತಡದ ಸಾಧ್ಯತೆ. ಬಿಡುವಿಲ್ಲದ ಓಡಾಟ. ವಾಹನಗಳಿಂದ ತೊಂದರೆ ಉಂಟಾಗುವ ಸಾಧ್ಯತೆ. ಆರೋಗ್ಯದಲ್ಲಿ ಸ್ಥಿರತೆ. ಕೌಟುಂಬಿಕ ಶಾಂತಿ ನೆಮ್ಮದಿಗಳನ್ನು ಸಾಧಿಸಲಿದ್ದೀರಿ.

ಧನು

ಕಾರ್ಯಸಾಧನೆಗಾಗಿ ವಿಪರೀತ ಶ್ರಮ ವಹಿಸಬೇಕಾದೀತು. ಸಹೋದ್ಯೋಗಿಗಳಲ್ಲಿನ ಅನುಮಾನಗಳು ಪರಸ್ಪರ ಅಪನಂಬಿಕೆಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಫಲ.

ಮಕರ

ಕುಟುಂಬದಲ್ಲಿ ಶಾಂತವಾತಾವರಣ. ವ್ಯಾಪಾರದಲ್ಲಿ ವೃದ್ಧಿ. ಸಂತೋಷದ ಸುದ್ದಿಗಳನ್ನು ಕೇಳಲಿದ್ದೀರಿ. ಪ್ರಯಾಣದಲ್ಲಿ ಸುಖಾನುಭವ. ಹಿರಿಯರೊಂದಿಗಿನ ಸಮಾಲೋಚನೆ ಉತ್ತಮ ದಾರಿ ಕಲ್ಪಿಸಲಿದೆ.

ಕುಂಭ

ಉದ್ಯೋಗದಲ್ಲಿ ಪ್ರಗತಿ. ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಹೊಂದಲಿದ್ದೀರಿ. ಬಂಧುಗಳೊಂದಿಗೆ ಮನಃಸ್ತಾಪ. ಅನವಶ್ಯಕ ವೆಚ್ಚವನ್ನು ಭರಿಸಬೇಕಾದೀತು. ದೂರದ ಪ್ರಯಾಣ ಉಚಿತವಲ್ಲ.

ಮೀನ

ಕೆಲಸ ಕಾರ್ಯಗಳಲ್ಲಿ ಅಡಚಣೆ ಸಾಧ್ಯತೆ. ಕ್ರಯ ವಿಕ್ರಯಗಳಲ್ಲಿ ಹಾನಿ ಸಂಭವಿಸಬಹುದು. ಕುಟುಂಬದಲ್ಲಿ ಮಾತಿನ ಚಕಮಕಿಯ ಸಾಧ್ಯತೆ. ಸಾಮಾಧಾನದ ನಡೆಯಿಂದ ಕಾರ್ಯಾನುಕೂಲ ಉಂಟಾಗಲಿದೆ.

ಫೆಬ್ರವರಿ 05, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 22 ಸಲುವ ಪೌಷ ಬಹುಳ ಅಷ್ಟಮಿ 8 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ವಿಶಾಖಾ 28||| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.32 ಗಂಟೆಸೂರ್ಯೋದಯ :6.59 ಗಂಟೆ

ಮೇಷ

ನಿರುತ್ಸಾಹದಿಂದಾಗಿ ಕೆಲಸ ಕಾರ್ಯಗಳಲ್ಲಿ ಮಂದಗತಿ ಕಾಣುವಿರಿ. ಏನಾದರೊಂದು ಚಿಂತೆ ಎದುರಾಗಲಿದೆ. ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ. ಆರೋಗ್ಯದಲ್ಲಿ ತೊಂದರೆ ಎದುರಾದೀತು.

ವೃಷಭ

ವ್ಯಾಪಾರ ವ್ಯವಹಾರದಲ್ಲಿ ಹಾನಿ ಸಾಧ್ಯತೆ. ಕೋಪ ತಾಪಗಳಿಂದಾಗಿ ಅಹಿತಕರ ಘಟನೆಗಳು ಸಂಭವಿಸಬಹುದು. ತಾಳ್ಮೆಯಿಂದಾಗಿ ಕೆಲಸ ಸಾಧ್ಯವಾಗಲಿದೆ. ಮನೆಯವರ ನೆರವಿನಿಂದಾಗಿ ನೆಮ್ಮದಿ ಮೂಡಲಿದೆ.

ಮಿಥುನ

ಹಣದ ವ್ಯವಹಾರದಲ್ಲಿನ ಅನುಮಾನಗಳು ಬಗೆಹರಿಯಲಿವೆ. ವೃತ್ತಿಯಲ್ಲಿ ಪ್ರಗತಿ ಕಂಡುಕೊಳ್ಳುವಿರಿ. ಮಿತ್ರರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ. ಸಂಗಾತಿಯ ಆಶೋತ್ತರಗಳನ್ನು ಈಡೇರಿಸಲಿದ್ದೀರಿ.

ಕಟಕ

ವ್ಯಾಪಾರದಲ್ಲಿ ನಿರೀಕ್ಷೆಗೆ ಮೀರಿದ ಲಾಭ ಸಾಧ್ಯತೆ. ಪ್ರಯಾಣದಲ್ಲಿ ಸೌಖ್ಯ. ಮಹಿಳೆಯರ ಕಲಾ ಕೌಶಲ್ಯಕ್ಕೆ ಮನ್ನಣೆ. ಬರಹಗಾರರಿಗೆ ಪತ್ರಕರ್ತರಿಗೆ ಬಿಡುವಿಲ್ಲದ ಕೆಲಸ.

ಸಿಂಹ

ಶ್ರಮರಹಿತ ಕಾರ್ಯ ಸಾಧನೆ ಮಾಡಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವ ಮನೋಭಾವದಿಂದಾಗಿ ಹಿರಿಯರ ಪ್ರಶಂಸೆ. ವ್ಯಾಪಾರದಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಆಟ ಪಾಠಗಳಲ್ಲಿ ಉತ್ತಮ ಪ್ರಗತಿ.

ಕನ್ಯಾ

ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಕಲಹ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಯ ಉಂಟಾದೀತು. ಕುಟುಂಬ ಸದಸ್ಯರಲ್ಲಿ ರಕ್ತದೊತ್ತಡದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ.

ತುಲಾ

ವ್ಯವಹಾರ ಚತುರತೆ ಮೆರೆಯಲಿದ್ದೀರಿ. ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭ. ಅತಿಯಾಸೆಯಿಂದಾಗಿ ಮುಜುಗರದ ಪ್ರಸಂಗ ಎದುರಾದೀತು. ಆಸ್ತಿ ಕಲಹದಲ್ಲಿ ಅಪಜಯ.

ವೃಶ್ಚಿಕರಾಜಕೀಯ ಅಧಿಕಾರ ಪ್ರಾಪ್ತವಾಗುವ ಸಾಧ್ಯತೆ. ಸ್ಥಿರ ನಿಲುವಿನಿಂದಾಗಿ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆಯೊಂದನ್ನು ನಿರೂಪಿಸಲಿದ್ದೀರಿ. ಹಿರಿಯರ ಸಹಕಾರ ದೊರಕಲಿದೆ.

ಧನು

ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಬ್ಯಾಂಕ್ ವ್ಯವಹಾರಗಳಲ್ಲಿ ಅಪನಂಬಿಕೆ ಉಂಟಾಗುವ ಸಾಧ್ಯತೆ. ಅಧಿಕಾರಿಗಳೊಂದಿಗೆ ಕಲಹ ಸಾಧ್ಯತೆ.

ಮಕರ

ಆತ್ಮಬಲದ ವೃದ್ಧಿಯಿಂದಾಗಿ ಅಸಾಧ್ಯ ಕೆಲಸವೊಂದನ್ನು ಮಾಡಿ ಪೂರೈಸಲಿದ್ದೀರಿ. ಮಿತ್ರರೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಅವಕಾಶ ದೊರಕಲಿದೆ. ವಿದ್ಯಾಭ್ಯಾಸದಲ್ಲಿ ಪುರಸ್ಕಾರ ದೊರೆಯಲಿದೆ.

ಕುಂಭ

ವಿಶೇಷ ಅಧ್ಯಯನಕ್ಕಾಗಿ ದೂರದ ಪ್ರಯಾಣ. ಉದ್ಯೋಗ ರಂಗದಲ್ಲಿ ಯಶಸ್ಸು. ಅತಿಯಾದ ಕೆಲಸದಿಂದಾಗಿ ದೇಹಾಲಸ್ಯ ಉಂಟಾದೀತು. ವೈದ್ಯಕೀಯ ವೆಚ್ಚ ಭರಿಸಬೇಕಾದ ಅನಿವಾರ್ಯತೆ.

ಮೀನ

ಸೋಮಾರಿತನದಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ. ವ್ಯಾಪಾರಸ್ಥರು ಆರ್ಥಿಕ ಮುನ್ನಡೆಯನ್ನು ಕಾಯ್ದುಕೊಳ್ಳಲಿದ್ದೀರಿ. ಸಂಘ ಸಂಸ್ಥೆಗಳಿಂದ ಸಹಾಯ ದೊರಕುವ ನಿರೀಕ್ಷೆ ಇದೆ.

ಫೆಬ್ರವರಿ 04, ಗುರುವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 21 ಸಲುವ ಪೌಷ ಬಹುಳದಿನ ವಿಶೇಷ :ವಿವೇಕಾನಂದ ಜಯಂತಿ (ತಿಥಿ ಪ್ರಕಾರ) ಪಂಚಗ್ರಹ ಯೋಗಾರಂಭನಿತ್ಯ ನಕ್ಷತ್ರ :ಸ್ವಾತಿ 32 ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ

ಮೇಷ

ಮನಸ್ಸಿಗೆ ಬೇಸರ, ಖಿನ್ನತೆ. ವೃತ್ತಿಯಲ್ಲಿ ಹಿನ್ನಡೆಯುಂಟಾಗುವ ಸಾಧ್ಯತೆ. ತಾಯಿ ಆರೋಗ್ಯದಲ್ಲಿ ವ್ಯತ್ಯಯ. ಎದೆಗುಂದದೇ ಮುಂದುವರಿಯುವುದು ಅವಶ್ಯಕ. ಯಂತ್ರೋಪಕರಣಗಳಿಂದ ನಿಶ್ಚಿತ ಆದಾಯ ಪ್ರಾಪ್ತವಾಗಲಿದೆ.

ವೃಷಭ

ಸಮಯಕ್ಕೆ ಸರಿಯಾಗಿ ಕೆಲಸ–ಕಾರ್ಯಗಳು ಪೂರ್ಣಗೊಳ್ಳದೆ ಒತ್ತಡ. ಲೇವಾದೇವಿ ವ್ಯವಹಾರದಲ್ಲಿ ಹಾನಿ. ತಾಳ್ಮೆಯಿಂದ ನೆಮ್ಮದಿ ದೊರಕಲಿದೆ. ಆರೋಗ್ಯದಲ್ಲಿ ತೊಂದರೆ ಕಂಡುಬಂದೀತು.

ಮಿಥುನ

ಸರ್ಕಾರಿ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಲೆಕ್ಕಪತ್ರ ವ್ಯವಹಾರಗಳಲ್ಲಿನ ಗೊಂದಲ ನಿವಾರಣೆಯಾಗಿ ನೆಮ್ಮದಿ. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ದೊರೆಯಲಿದೆ. ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ ಕಂಡುಕೊಳ್ಳುವಿರಿ.

ಕಟಕ

ವ್ಯಾಪಾರ ವ್ಯವಹಾರಗಳಲ್ಲಿನ ಲಾಭದಲ್ಲಿ ಸ್ಥಿರತೆ. ಪ್ರೀತಿಪಾತ್ರರೊಬ್ಬರ ಭೇಟಿಯಾಗುವ ಸಾಧ್ಯತೆ. ಗೃಹಿಣಿಯರಿಗೆ ಕೆಲಸದ ಒತ್ತಡದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದೀತು. ವಿಶೇಷ ಭೋಜನ ಸವಿಯಲಿದ್ದೀರಿ.

ಸಿಂಹ

ಕೆಲಸ–ಕಾರ್ಯಗಳಲ್ಲಿ ಸಾಫಲ್ಯತೆ. ವ್ಯಾಪಾರ, ವ್ಯವಹಾರಗಳಲ್ಲಿನ ಲಾಭದಲ್ಲಿ ಹೆಚ್ಚಳವಾಗಲಿದೆ. ಹಿರಿಯರಿಂದ ಉತ್ತಮ ಮಾರ್ಗದರ್ಶನ ದೊರಕಲಿದೆ. ವಿರೋಧಿಗಳ ಉಪದ್ರದಿಂದಾಗಿ ಮನಸ್ಸಿಗೆ ಕಿರಿಕಿರಿ.

ಕನ್ಯಾ

ಇಡೀ ದಿನವೂ ಸಂತಸದ ದಿನವಾಗಿ ಪರಿಣಮಿಸಲಿದೆ. ಕುಟುಂಬದಲ್ಲಿ ವಿಷಯವೊಂದರ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಲಿದ್ದೀರಿ. ಕಾರ್ಯದಲ್ಲಿ ಸಫಲತೆ. ಲೇವಾದೇವಿ ವ್ಯವಹಾರದಲ್ಲಿ ಉತ್ತಮ ಲಾಭ.

ತುಲಾ

ಕೆಲಸ–ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು. ಖರೀದಿ, ಮಾರಾಟ ವ್ಯವಹಾರದಿಂದ ಅಧಿಕ ಲಾಭದ ನಿರೀಕ್ಷೆ. ಪ್ರಯಾಣದಲ್ಲಿ ಸುಖಾನುಭವ. ಬರಬೇಕಾದ ಹಣ ಹಿಂತಿರುಗಿ ಬರಲಿದೆ. ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ವೃಶ್ಚಿಕ

ಕೆಲಸ–ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗದು. ವ್ಯವಹಾರದಲ್ಲಿ ನಷ್ಟ. ತಂದೆಯ ಮೇಲೆ ವಿನಾಕಾರಣ ಮುನಿಸು. ತಾಳ್ಮೆಯ ನಡೆಯಿಂದಾಗಿ ನೆಮ್ಮದಿ. ಸಂಗಾತಿಯ ಪ್ರೀತಿ ಬೆಂಗಾವಲಾಗಲಿದೆ.

ಧನು

ಕೆಲಸ–ಕಾರ್ಯಗಳಲ್ಲಿನ ಅತಿಯಾದ ಒತ್ತಡದಿಂದಾಗಿ ತಪ್ಪುಗಳು ಉಂಟಾಗುವ ಸಾಧ್ಯತೆ. ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಶತ್ರುಗಳಿಂದ ಭೀತಿಯ ವಾತಾವರಣ ಸೃಷ್ಟಿ.

ಮಕರ

ಕಾರ್ಯ ಕಲಾಪಗಳು ಸರಾಗವಾಗಿ ನಡೆಯುವುದು. ವ್ಯಾಪಾರದಲ್ಲಿನ ಲಾಭದಲ್ಲಿ ಹೆಚ್ಚಳ. ಸ್ವಂತ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ. ತಂಟೆ ತಗಾದೆಗಳಲ್ಲಿ ಜಯ. ಆಪ್ತರೊಬ್ಬರ ಆಗಮನ ಸಾಧ್ಯತೆ.

ಕುಂಭ

ಸರಾಗವಾಗಿ ನಡೆಯುವ ಕೆಲಸ–ಕಾರ್ಯಗಳು. ಆರೋಗ್ಯದಲ್ಲಿ ಸ್ಥಿರತೆ. ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯಲಿದೆ. ಮಿತ್ರವರ್ಗದವರಿಂದ ಸಹಾಯ ದೊರಯಲಿದೆ. ಸಾಲ ತೀರುವಳಿಯಾಗಲಿದೆ.

ಮೀನ

ವ್ಯವಹಾರದಲ್ಲಿ ಅನುಕೂಲತೆಯುಂಟಾಗಿ ಅಭಿವೃದ್ಧಿ. ಹಿತಕರ ಘಟನೆಗಳು ಸಂಭವಿಸಲಿವೆ. ಅಧ್ಯಯನದಲ್ಲಿ ಪ್ರಗತಿ. ಶತ್ರುಭೀತಿ ದೂರವಾಗಲಿದೆ. ಸಮರಸದ ದಾಂಪತ್ಯ ಜೀವನದಿಂದಾಗಿ ನೆಮ್ಮದಿ.

Design a site like this with WordPress.com
Get started