
2-4-2021 ಶುಕ್ರವಾರ ಶಾರ್ವರಿ ಸಂ|ರದ ಮೀನ ಮಾಸ ದಿನ 19 ಸಲುವ ಫಾಲ್ಗುಣ ಬಹುಳ ಪಂಚಮಿ 4|| ಗಳಿಗೆ ಉಪರಿ ಷಷ್ಠಿ 54| ಗಳಿಗೆದಿನ ವಿಶೇಷ :ಪಾವಂಜೆ ರಥ ಗುಡ್‌ಫ್ರೈಡೇನಿತ್ಯ ನಕ್ಷತ್ರ :ರೇವತಿಮಹಾ ನಕ್ಷತ್ರ :ಜ್ಯೇಷ್ಠಾ 53| ಗಳಿಗೆಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.40 ಗಂಟೆಸೂರ್ಯೋದಯ :6.28 ಗಂಟೆ
ಮೇಷ
ನಿಮ್ಮ ಸಾಥ್ವಿಕ ನಡತೆಯಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವಿರಿ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಕೆಲಸ ಕಾರ್ಯಗಳೊಂದಿಗೆ ಗೌರವವನ್ನು ತಂದುಕೊಡಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.
ವೃಷಭ
ವೈಜ್ಞಾನಿಕ ಸಂಶೋಧನೆಗಳ್ಲಿ ತೊಡಗಿಕೊಂಡಿವುರುವವರಿಗೆ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಉನ್ನತ ಅಧಿಕಾರಿಗಳಿಗೆ ಅಚ್ಚರಿ ಮೂಡಿಸುವ ಕಾರ್ಯ ಮಾಡಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು.
ಮಿಥುನ
ನಿಮ್ಮ ವ್ಯಾಪಾರದಲ್ಲಿ ಈ ದಿನದಿಂದ ಹಣದ ಹರಿವು ಸುಗಮವಾಗಿ ವ್ಯವಹಾರದಲ್ಲಿ ಉನ್ನತಿಯತ್ತ ಸಾಗಲಿದ್ದೀರಿ. ಯಾಂತ್ರೀಕೃತ ವಾಹನ, ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದಿಂದಾಗಿ ಉತ್ತಮ ಲಾಭ.
ಕಟಕ
ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭಕರವಾದ ನಿರ್ಧಾರಗಳು ಹೊರಬರಲಿವೆ. ಪಿತ್ರಾರ್ಜಿತವಾದ ಆಸ್ತಿ ನಿಮ್ಮ ಪಾಲಿಗೆ ದೊರಕುವುದು. ಬಂಧುಗಳೊAದಿಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.
ಸಿಂಹ
ಹೊಸ ಉದ್ಯಮಕ್ಕೆ ಕಾಲಿಡುವ ಧಾವಂತದಿಂದ ಕೆಲಸ–ಕಾರ್ಯಗಳನ್ನು ಮಾಡಲಿದ್ದೀರಿ. ಗುರಿ ತಲುಪುವ ಹಾದಿಯಲ್ಲಿ ಸ್ನೇಹಿತರ ಸಹಾಯ ಸಹಕಾರ ದೊರಕಲಿದೆ. ಯಶಸ್ಸಿನ ದಿನ ಪ್ರಾರಂಭವಾಗಲಿದೆ. ಸಂಗಾತಿಯಿಂದ ಸಂತಸ.
ಕನ್ಯಾ
ಮನೆಗೆ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು ಉಂಟಾಗಲಿದೆ. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು. ಉದ್ವೇಗದ ನಡೆ ತರವಲ್ಲ.
ತುಲಾ
ಪಾಲುದಾರಿಕೆಯಿಂದ ಅಪೂರ್ಣವಾಗಿದ್ದ ನಿಮ್ಮ ವ್ಯಾಪಾರ ಈ ದಿನ ಪ್ರಾಧಾನ್ಯತೆಯನ್ನು ಪಡೆದುಕೊಳ್ಳಲಿದ್ದು, ಲಾಭಾಂಶದಲ್ಲಿ ಹೆಚ್ಚಿನ ಭಾಗ ನಿಮ್ಮದಾಗಲಿದೆ. ವ್ಯವಹಾರಗಳ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಮೂಡಿಬರಲಿದೆ.
ವೃಶ್ಚಿಕ
ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಾಧ್ಯವಾದ ಸಹಾಯ ಹಸ್ತ ಚಾಚುವಿರಿ. ವೈಯಕ್ತಿಕ ವ್ಯವಹಾರದಲ್ಲಿ ಉಂಟಾದ ಹಿನ್ನಡೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಿತೈಷಿಗಳ ಸಹಕಾರದ ಭರವಸೆ.
ಧನು
ವೈಯಕ್ತಿಕ ಜೀವನದಲ್ಲಿನ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುವ ದಿಕ್ಕಿನಲ್ಲಿ ಗಣ್ಯರೊಂದಿಗೆ ಮುಖಾಮುಖಿ ಸಂಭಾಷಣೆ. ದುಡುಕು ಸ್ವಭಾವದಿಂದಾಗಿ ತೊಂದರೆ. ವಾತಸಂಬಂಧಿ ಕಾಯಿಲೆ ಉಲ್ಬಣವಾದೀತು.
ಮಕರ
ವ್ಯವಹಾರದಲ್ಲಿ ಕೌಶಲದಿಂದಾಗಿ ಹೆಚ್ಚಿನ ಲಾಭ ದೊರಕುವುದು. ಭೂ ವ್ಯವಹಾರದಲ್ಲಿ ನಿಮ್ಮ ಹಟಮಾರಿತನಕ್ಕೆ ಜಯವಾಗುವುದರಲ್ಲಿ ಅನುಮಾನವಿಲ್ಲ. ಇಚ್ಛೆಯಂತೆ ಭೂಮಿ ಅಥವಾ ಮನೆ ಖರೀದಿ ಭಾಗ್ಯ.
ಕುಂಭ
ಬೃಹತ್ ಯೋಜನೆಗಳಿಗೆ ಎಲ್ಲ ಸನ್ನಿವೇಶಗಳು ಅನುಕೂಲಕರವಾಗಿ ಪರಿಣಮಿಸಲಿವೆ. ಹೊಸ ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವಿವಾಹಾಕಾಂಕ್ಷಿಗಳಿಗೆ ವೈವಾಹಿಕ ಮಾತುಕತೆಯಿಂದ ತೃಪ್ತಿಕರ ಸಮಾಚಾರ.
ಮೀನ
ಕುಶಲಕರ್ಮಿಗಳಿಗೆ ಪ್ರತಿಭಾ ಪ್ರದರ್ಶನದ ಅವಕಾಶದೊಂದಿಗೆ ಮಾರಾಟದಿಂದ ಉತ್ತಮ ಲಾಭ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ. ಪ್ರಯಾಣದಲ್ಲಿ ಸುಖಾನುಭವ. ಆರೋಗ್ಯ ಉತ್ತಮವಾಗಿರುವುದು.

