ಫೆಬ್ರವರಿ 22, ಸೋಮವಾರ, 2021 : ಇಃದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ : ದಶಮಿ,
ನಕ್ಷತ್ರ: ಮೃಗಶಿರಾ,
ರಾಹುಕಾಲ: 8.12 ರಿಂದ 9.40
ಗುಳಿಕಕಾಲ: 2.06 ರಿಂದ 3.34
ಯಮಗಂಡಕಾಲ: 11.09 ರಿಂದ 12.37

ಮೇಷ

ಹಿತೈಷಿಗಳ ಭೇಟಿ ಸಾಧ್ಯತೆ. ವ್ಯಪಾರದಲ್ಲಿ ಲಾಭ. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಉತ್ತಮ ನೆರವು. ದಿನದ ಮಟ್ಟಿಗೆ ಪ್ರಯಾಣ ಸುಖನೀಡಲಾರದು. ಸ್ತ್ರೀಯರ ಇಷ್ಟಾರ್ಥಗಳು ನೆರವೇರಲಿವೆ.

ವೃಷಭ

ಉದ್ಯೋಗದಲ್ಲಿ ಸ್ಥಾನ ಅಥವಾ ಹುದ್ದೆಯಲ್ಲಿ ಬದಲಾವಣೆ ಕುರಿತು ಹಿರಿಯರೊಂದಿಗೆ ಚರ್ಚಿಸಿಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸುದ್ದಿ ಕೇಳಿಬರಲಿದೆ. ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ

ಮಿಥುನ

ದೂರದೂರಿಗೆ ಪ್ರಯಾಣ. ಸಾಮಾಜಿಕ ಗೌರವಕ್ಕೆ ಪಾತ್ರರಾಗಲಿದ್ದೀರಿ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ. ಮನಸ್ಸಿಗೆ ನೆಮ್ಮದಿ

ಕಟಕ

ಕುಟುಂಬದ ಜಟಿಲ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ ಪ್ರಶಂಸೆಗೆ ಪಾತ್ರರಾಗುವಿರಿ. ಅಧಿಕ ಧನಾಗಮನ. ಬಂಧುಗಳ ಸತ್ಕಾರಕ್ಕಾಗಿ ಅಪಾರ ವೆಚ್ಚ ಭರಿಸಬೇಕಾದೀತು.

ಸಿಂಹ

ಉತ್ತಮ ದುಡಿಮೆ ಮಾಡಿದ್ದೀರಿ. ನಿತ್ಯದ ಕೆಲಸಗಳಿಂದ ತುಸು ವಿಶ್ರಾಂತಿ ಅಗತ್ಯ. ಪ್ರೀತಿಪಾತ್ರರು ಹಾಗೂ ಗೆಳೆಯರ ಜೊತೆ ಸಂತಸದ ಸಮಯ ಕಳೆಯಲಿದ್ದೀರಿ. ಹಿತೈಶಿಗಳ ಆಗಮನ ಸಂತಸ.

ಕನ್ಯಾ

ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ. ವೈಕಕ್ತಿಕ ಸಮಸ್ಯೆ ಬಗೆಹರಿದು ಮನೋಲ್ಲಾಸ ಮೂಡಲಿದೆ.

ತುಲಾ

ಸಾಮಾಜಿಕ ಕಾರ್ಯ ಚಟುವಟಿಕೆ, ಮನರಂಜನೆ, ಸಪತ್ನಿಕರಾಗಿ ಭೋಜನ ಕೂಟಗಳಲ್ಲಿ ಭಾಗವಹಿಸಲಿದ್ದೀರಿ. ದೈವರಕ್ಷೆ ಇರುವುದರಿಂದ ಯಶಸ್ಸು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.

ವೃಶ್ಚಿಕ

ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿದೆ. ಮನೆಯವರೊಂದಿಗೆ ಸಂಬಂಧ ಉತ್ತಮಗೊಳ್ಳಲಿದೆ.

ಧನು

ಕಲಾವಿದರಿಗೆ ಹೆಚ್ಚಿನ ಸ್ಥಾನಮಾನ ಲಭ್ಯ. ಕೃಷಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಆದಾಯ. ಆಸ್ತಿ ಖರೀದಿಯ ಸಾಧ್ಯತೆ. ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ.

ಮಕರ

ಬಾಧ್ಯತೆಗಳ ನಿರ್ವಹಣೆಯಲ್ಲಿ ಸ್ಪಷ್ಟ ನಿಲುವು. ಸಂಶೋಧನೆಗೆ ಪ್ರೋತ್ಸಾಹ ದೊರಕುವ ಸಾಧ್ಯತೆ. ಬರವಣಿಗೆಯಲ್ಲಿ ನಿರತರಾದವರಿಗೆ ದ್ರವ್ಯಾನುಕೂಲ. ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರಕಲಿದೆ.

ಕುಂಭ

ಕಾರ್ಯಕ್ಷೇತ್ರದಲ್ಲಿ ಅನೇಕ ರೀತಿಯ ಸಂಪರ್ಕ ಸ್ನೇಹ ವಿಶ್ವಾಸಗಳು ಮೂಡಿ ಮುನ್ನಡೆಗೆ ನಾಂದಿಯಾಗಲಿದೆ. ವೃತ್ತಿರಂಗದಲ್ಲಿ ಗುರಿ ಸಾಧನೆಗೆ ಹೊಸ ಹಾದಿಯನ್ನು ಕ್ರಮಿಸಬೇಕಾದೀತು. ನಿರಾಶರಾಗದೆ ಮುನ್ನುಗ್ಗಿ.

ಮೀನ

ವಾಹನ ವಹಿವಾಟುಗಳಲ್ಲಿ ನಿರೀಕ್ಷೆಯಂತೆ ಲಾಭ. ಔದ್ಯೋಗಿಕ ವಿಷಯಗಳಲ್ಲಿ ಅನುಕೂಲ. ವಿವಾಹ ಸಂಬಂಧಿ ಮಾತುಕತೆಗಳು ಅನುಕೂಲಕರವಾಗಿ ಪರಿಣಮಿಸಲಿವೆ.

ಫೆಬ್ರವರಿ 21, ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ,
ತಿಥಿ : ನವಮಿ,
ನಕ್ಷತ್ರ : ರೋಹಿಣಿ,
ರಾಹುಕಾಲ:5.03 ರಿಂದ 6.31
ಗುಳಿಕಕಾಲ:3.34 ರಿಂದ 5.03
ಯಮಗಂಡಕಾಲ:12.37 ರಿಂದ 2.06

ಮೇಷ

ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಅವಕಾಶ ದೊರಕುವ ಸಾಧ್ಯತೆ. ಕೋರ್ಟ್ ಕಚೇರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ. ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ.

ವೃಷಭ

ವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸಿ, ಯಶಸ್ಸು ನಿಮ್ಮದಾಗಲಿದೆ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರುವ ಸಾಧ್ಯತೆ. ಸಮಾಧಾನದಿಂದಾಗಿ ಸಾಮರಸ್ಯ ಕಂಡುಕೊಳ್ಳಬಹುದು.

ಮಿಥುನ

ವ್ಯಾಪಾರ ವಿಸ್ತರಣೆಗೆ ಸಕಾಲ. ಆರ್ಥಿಕ ಪ್ರಗತಿಯಿಂದ ಮನೆಯಲ್ಲಿ ಸಂತಸದ ವಾತಾವರಣ ಮೂಡಿಬರಲಿದೆ. ಸಹೋದರರಿಂದ ಧನ ಸಹಾಯ ನಿರೀಕ್ಷಿಸಬಹುದು.

ಕಟಕ

ಚಿನ್ನ, ತಾಮ್ರ ಮುಂತಾದ ಲೋಹಗಳ ಉದ್ಯಮಿಗಳಿಗೆ ಹೆಚ್ಚಿನ ಪ್ರಗತಿ. ಕಲಾವಿದರಿಗೆ ಕನಸು ನನಸಾಗುವ ದಿನ. ವಿದೇಶ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ.

ಸಿಂಹ

ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಯಶಸ್ಸಿನ ಕಿರೀಟ ಲಭ್ಯವಾಗುವ ಸಾಧ್ಯತೆ. ರಾಜಕೀಯದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ದೊರಕಲಿದೆ. ದೈವಾನುಗ್ರಹಕ್ಕಾಗಿ ಕುಲದೇವತಾ ದರ್ಶನ ಮಾಡುವುದು ಉತ್ತಮ.

ಕನ್ಯಾ

ರೇಷ್ಮೆ ನೇಕಾರರಿಗೆ ಉತ್ತಮ ಅವಕಾಶಗಳು ಲಭ್ಯ. ಸರಕಾರಿ ಕೆಲಸಗಳಿಗೆ ಹಣ ಖರ್ಚಾದರೂ ಕಾರ್ಯಾನುಕೂಲ ವಾಗಲಿದೆ. ಭೂ ವ್ಯವಹಾರ ನಡೆಸುತ್ತಿರುವವರಿಗೆ ಯಶಸ್ಸು ದೊರಕಲಿದೆ. ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ.

ತುಲಾ

ನೌಕರರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವಾಹನ ಖರೀದಿ ಮಾಡುವ ಸಾಧ್ಯತೆ ಸ್ಪಷ್ಟ ಗೋಚರವಾಗುತ್ತಿದೆ. ಅವಿವಾಹಿತರಿಗೆ ಉತ್ತಮ ಸಂಗಾತಿ ಪ್ರಾಪ್ತವಾಗುವ ಸಾಧ್ಯತೆ. ಸಂತಸದ ವಾತಾವರಣ ಮೂಡಲಿದೆ.

ವೃಶ್ಚಿಕ

ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ನಿಮ್ಮ ವ್ಯವಹಾರಕ್ಷೇತ್ರವನ್ನು ವಿಸ್ತರಿಸಲು ಸ್ನೇಹಿತರ ಸಹಾಯ ದೊರಕುವ ಸಾಧ್ಯತೆ ಕಂಡುಬರುತ್ತಿದೆ.

ಧನು

ವೈದ್ಯಕೀಯ ರಂಗದಲ್ಲಿರುವವರಿಗೆ ಯಶಸ್ಸಿನೊಂದಿಗೆ ಹೆಚ್ಚಿನ ಲಾಭವೂ ಪ್ರಾಪ್ತವಾಗುವುದು. ನೌಕರವರ್ಗದವರಿಗೆ ಮುಂಬಡ್ತಿ , ಸ್ಥಾನ ಬದಲಾವಣೆಯಾಗುವ ಸಾಧ್ಯತೆ.

ಮಕರ

ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಆತ್ಮವಿಶ್ವಾಸದಿಂದ ಸಮಸ್ಯೆಗಳಿಗೆ ಮುಕ್ತಿಯನ್ನು ಕಂಡುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ. ಪ್ರವಾಸ ಅಥವಾ ಕ್ಷೇತ್ರದರ್ಶನಗಳಿಂದ ಮನೋಲ್ಲಾಸ ದೊರಕಲಿದೆ.

ಕುಂಭ

ಸಮಯವರಿತು ಕಾರ್ಯ ಸಾಧನೆ ಮಾಡಲು ನಿಶ್ಚಯಿಸುವಿರಿ. ಮದುವೆ ಸಿದ್ಧತೆಗಳಿಗಾಗಿ ಪ್ರಯಾಣ ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ.

ಮೀನ

ಧನಾದಾಯದ ಹೂಡಿಕೆ ಯೋಜನೆಗಳ ಹುಡುಕಾಟದಲ್ಲಿ ಯಶಸ್ಸನ್ನು ಕಾಣುವಿರಿ. ಆರ್ಥಿಕ ಉನ್ನತಿಯಿಂದ ಹೊಸ ಕಾರ್ಯಗಳಲ್ಲಿ ಮುನ್ನಡೆ ಕಂಡುಕೊಳ್ಳುವಿರಿ. ಮನಸ್ಸಿಗೆ ನೆಮ್ಮದಿ ನೀಡುವ ಸುದ್ದಿ ಕೇಳಲಿದ್ದೀರಿ.

ಫೆಬ್ರವರಿ 20, ಶನಿವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘಮಾಸ, ಶುಕ್ಲಪಕ್ಷ,ಅಷ್ಟಮಿ/ನವಮಿ
ಶನಿವಾರ,ರೋಹಿಣಿ ನಕ್ಷತ್ರ

ರಾಹುಕಾಲ 9.40 ರಿಂದ 11:09
ಗುಳಿಕಕಾಲ 6.43 ರಿಂದ 8:12
ಯಮಗಂಡಕಾಲ 02:06 ರಿಂದ 3.34

ಮೇಷ

ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಯನ್ನು ಹೊಂದುವ ಅವಕಾಶ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಹಬ್ಬದ ವಾತಾವರಣ. ಕಾರ್ಯ ಸಾಧನೆಗಾಗಿ ಗಣೇಶ ಆರಾಧನೆ ಮಾಡಿ.

ವೃಷಭ

ಲೆಕ್ಕ ಪರಿಶೋಧನಾ ಅಥವಾ ಲೆಕ್ಕಪತ್ರಗಳನ್ನು ನೋಡಿಕೊಳ್ಳುವವರಿಗೆ ಬಿಡುವಿಲ್ಲದ ಕೆಲಸ. ಸಂಪಾದನೆಯಲ್ಲಿ ಏರುಮುಖ. ವಾದವಿವಾದಗಳು ಬಗೆಹರಿದು ನಿರಾಳತೆ ನೆಲೆಸುವುದು. ಆರೋಗ್ಯದೆಡೆ ಗಮನವಿರಲಿ.

ಮಿಥುನ

ಸಂಶೋಧನಾ ಕಾರ್ಯಗಳಲ್ಲಿ ತೊಡಗಿದವರಿಗೆ ಹೊಸ ಸಂಶೋಧನೆಗೆ ಆರ್ಥಿಕ ಸಹಕಾರ ದೊರೆತು ಕೆಲಸಗಳು ನಿರ್ವಿಘ್ನವಾಗಿ ನಡೆಯಲಿದೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಿಡುವಿಲ್ಲದ ಕೆಲಸ.

ಕಟಕ

ರಂಗಕಲಾವಿದರಿಗೆ ವಿಶೇಷವಾಗಿ ಹಾಸ್ಯ ಕಲಾವಿದರಿಗೆ ವಿಶೇಷ ಗೌರವ. ಮಾತುಗಳಿಗೆ ಮನ್ನಣೆ ಹೊಂದುವಿರಿ. ಸಹೋದ್ಯೋಗಿಗಳ ಉತ್ತಮ ಸಹಕಾರದಿಂದಾಗಿ ಕಾರ್ಯಬಾಹುಳ್ಯದ ನಡುವೆಯೂ ನೆಮ್ಮದಿ.

ಸಿಂಹ

ಕಲಾವಿದರು, ನಟರು, ಸಂಗೀತಗಾರರಿಗೆ ಉತ್ತಮ ದಿನವಾಗಿದ್ದು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ವಾಹನ ಖರೀದಿ ಅಥವಾ ವಿಕ್ರಿಯಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಹೊಸ ಆದಾಯ ಮೂಲಕ್ಕಾಗಿ ಹುಡುಕಾಟ.

ಕನ್ಯಾ

ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಗೌರವಾದರಗಳು ಲಭಿಸಲಿದೆ. ಬರಹಗಾರರಿಗೆ ಕವಿಗಳಿಗೆ, ಕಲಾವಿದರುಗಳಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ಮಗಳಿಗೆ ಉತ್ತಮ ಸಂಬಂಧ ಕೂಡಿಬರಲಿದೆ.

ತುಲಾ

ಅರಣ್ಯ, ಪರಿಸರ ರಕ್ಷಣೆಯಲ್ಲಿ ತೊಡಗಿದವರಿಗೆ ಮನ್ನಣೆ ಸಿಗುವುದು. ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ. ಉತ್ತಮ ಆರೋಗ್ಯ.

ವೃಶ್ಚಿಕ

ಹೊಸ ಪುಸ್ತಕ ಅಥವಾ ಗ್ರಂಥ ಸಂಪಾದನೆಯಾಗಲಿದೆ. ವಿವಾಹದ ವಿಷಯದಲ್ಲಿ ನೇರ ಮಾತುಕತೆಯಿಂದಾಗಿ ಯಶಸ್ಸು. ಸಜ್ಜನರೊಂದಿಗಿನ ಮಾತುಕತೆಯಿಂದಾಗಿ ಮಾನಸಿಕ ಉಲ್ಲಾಸ. ವಿದ್ಯಾರ್ಥಿಗಳಿಗೆ ಶುಭ.

ಧನು

ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ. ವಸ್ತ್ರಾಭರಣ ಖರೀದಿ ಮಾಡಲು ಸುಸಮಯ.

ಮಕರ

ಕಟ್ಟಡ, ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆಯೊಂದಿಗೆ ಉದ್ಯೋಗಾವಕಾಶವು ವಿಫುಲವಾಗಿರುವುದು. ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆ ಅಥವಾ ಬಡ್ತಿಯಿಂದಾಗಿ ಉತ್ತಮ ಆದಾಯ. ಉತ್ತಮ ಆರೋಗ್ಯ.

ಕುಂಭ

ಆದಾಯ–ಖರ್ಚುಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವಿರಿ. ಮಿತವಾದ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ. ಸಂಸಾರದಲ್ಲಿ ನೆಮ್ಮದಿ. ವಿಶೇಷ ವ್ಯಕ್ತಿಗಳ ಆಗಮನ ಸಾಧ್ಯತೆ ಕಂಡುಬರುವುದು.

ಮೀನ

ಚಿತ್ರ ಕಲಾವಿದರು, ಕವಿಗಳಿಗೆ ಮನ್ನಣೆಗಳು ದೊರಕಲಿವೆ. ರಾಜಕಾರಣಿಗಳ ಮಾತಿಗೆ ಮರುಳಾಗುವ ಸಾಧ್ಯತೆ. ಹಿತ ಶತ್ರುಗಳ ಭರವಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ.

ಫೆಬ್ರವರಿ19, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 7 ಸಲುವ ಮಾಘ ಶುದ್ಧ ಸಪ್ತಮಿ 10| ಗಳಿಗೆ ದಿನ ವಿಶೇಷ :ರಥಸಪ್ತಮಿ ಮಹಾನಕ್ಷತ್ರ ಶತಭಿಷಾ ಆರಂಭನಿತ್ಯ ನಕ್ಷತ್ರ :ಕೃತ್ತಿಕಾ 57|| ಗಳಿಗೆಮಹಾ ನಕ್ಷತ್ರ :ಶತಭಿಷಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.35 ಗಂಟೆಸೂರ್ಯೋದಯ :6.56 ಗಂಟೆ

ಮೇಷ

ಅಧಿಕಾರ ಅಥವಾ ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ಎಲ್ಲ ಕಡೆಯಿಂದಲೂ ಗೌರವಾದರಗಳನ್ನು ಪಡೆದುಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಬಂಧುಗಳಿಂದ ಸಹಾಯ ದೊರಕುವ ಸಾಧ್ಯತೆ ಕಂಡುಬರುವುದು.

ವೃಷಭ

ಶ್ರಮಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದೆ. ಅತಿಯಾದ ಪ್ರಯಾಣದ ಆಲಸ್ಯ ಉಂಟಾಗುವ ಸಾಧ್ಯತೆ. ಸ್ತ್ರೀಯರಿಂದ ಅವಮಾನಕರ ಸನ್ನಿವೇಶ ಎದುರಾದೀತು. ದೇವತಾರಾಧನೆಯಿಂದ ನೆಮ್ಮದಿ.

ಮಿಥುನ

ಉನ್ನತ ಅಧಿಕಾರಿಗಳ ನೆರವಿನಿಂದಾಗಿ ಉದ್ಯೋಗದಲ್ಲಿ ಸ್ಥಿರತೆ. ಪ್ರಯಾಣ ಮಾಡಬೇಕಾದ ಸಂಭವ. ಆದಾಯದಲ್ಲಿ ಹೆಚ್ಚಳ. ಹೊಸ ಯೋಜನೆಯೊಂದನ್ನು ಸ್ಥಾಪಿಸುವ ಸಲುವಾಗಿ ಸಮಾಲೋಚನೆ ನಡೆಸಲಿದ್ದೀರಿ.‌

ಕಟಕ

ವಿವಾಹಿತರಿಗೆ ಪ್ರಾಪಂಚಿಕ ವಿಷಯಗಳನ್ನು ಉತ್ತಮವಾಗಿ ಅನುಭವಿಸುವ ಯೋಗ. ಬಂಧುಗಳೊಂದಿಗೆ ಮೃಷ್ಠಾನ್ನ ಭೋಜನ ಸವಿಯುವ ಸಾಧ್ಯತೆ. ಮಹಿಳೆಯರು ಚೋರಭಯವನ್ನು ಎದುರಿಸಬೇಕಾದೀತು.

ಸಿಂಹ

ಜ್ಞಾನಾರ್ಜನೆಗಾಗಿ ಪರಸ್ಥಳದಲ್ಲಿ ವಾಸಿಸಬೇಕಾದ ಅಥವಾ ದೂರ ಪ್ರಯಾಣ ಕೈಗೊಳ್ಳಬೇಕಾದ ಪ್ರಸಂಗ ಎದುರಾದೀತು. ಜ್ಞಾನದೊಂದಿಗೆ ಧನಾರ್ಜನೆಯ ಕೆಲಸವೂ ನಡೆಯಲಿದೆ. ಸಜ್ಜನರ ಸಾಂಗತ್ಯದಿಂದಾಗಿ ನೆಮ್ಮದಿ.

ಕನ್ಯಾ

ಆಸೆ ಆಕಾಂಕ್ಷೆಗಳು ಸುಗಮವಾಗಿ ನೆರವೇರುವುದರಿಂದಾಗಿ ಮಾನಸಿಕ ನೆಮ್ಮದಿಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವಸ್ತ್ರಾಭರಣ ಖರೀದಿ ಸಾಧ್ಯತೆ ಕಂಡುಬರುವುದು.

ತುಲಾ

ಉತ್ತಮ ಆರೋಗ್ಯವನ್ನು ಹೊಂದುವಿರಿ. ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಹೆಚ್ಚಳ. ಆದಾಯದಲ್ಲಿ ಹೆಚ್ಚಳದಿಂದಾಗಿ ಆರ್ಥಿಕ ಅಭಿವೃದ್ಧಿ. ಹಿರಿಯರ ಆರೋಗ್ಯದ ನಿಮಿತ್ತ ಖರ್ಚು.

ವೃಶ್ಚಿಕ

ಅಪರೂಪದ ಬಂಧುಗಳ ಭೇಟಿ ಅಥವಾ ಆಗಮನ ಸಾಧ್ಯತೆ. ಅಧಿಕಾರಿಗಳಿಂದ ಗೌರವ, ಪ್ರಶಂಸೆಗಳನ್ನು ಗಳಿಸಿಕೊಳ್ಳಲಿದ್ದೀರಿ. ಆಕಾಂಕ್ಷಿಗಳಿಗೆ ಸಂತಾನ ಪ್ರಾಪ್ತಿಯಾಗುವ ಸಾದ್ಯತೆ.

ಧನು

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು. ವ್ಯವಹಾರದಲ್ಲಿ ಉತ್ತಮ ಪ್ರತಿಫಲ ನಿರೀಕ್ಷೆ. ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಉತ್ತಮ. ಸಂಗಾತಿಯೊಂದಿಗೆ ಸ್ನೇಹಪರ ಮಾತುಕತೆ. ಒಟ್ಟಾರೆ ದಿನವಿಡೀ ಸಂತಸ.

ಮಕರ

ವ್ಯವಹಾರ ಕ್ಷೇತ್ರದಲ್ಲಿ ಗಳಿಕೆ ಅಧಿಕಗೊಂಡು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಮಕ್ಕಳ ವಿವಾಹ ಸಂಬಂಧಿಸಿದ ಪ್ರಯತ್ನಗಳು ಫಲಕಾರಿಯಾಗಿ ಪರಿಣಮಿಸುವವು.

ಕುಂಭ

ವಾಹನ ಖರೀದಿ ಸಾಧ್ಯತೆ. ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲಿದೆ. ರೈತಾಪಿ ವರ್ಗದವರಿಗೆ ಹೈನುಗಾರಿಕೆ ನಡೆಸುವವರಿಗೆ ಉತ್ತಮ ದಿನ. ಉನ್ನತಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ಮೀನ

ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಕೋಪವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಉತ್ತಮ. ಕಷ್ಟವಾದರೂ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಿರಿ.

ಫೆಬ್ರವರಿ18,ಗುರುವಾರ, 2021 : ಇಂದಿನ ರಾಶಿಭವಿಷ್ಯ

ರಾಹುಕಾಲ 02:05 ರಿಂದ 3.33
ಗುಳಿಕಕಾಲ 09:41 ರಿಂದ 11:09
ಯಮಗಂಡಕಾಲ 06:44 ರಿಂದ 08:13

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು, ಮಾಘಮಾಸ, ಶುಕ್ಲಪಕ್ಷ, ಗುರುವಾರ ಭರಣಿ ನಕ್ಷತ್ರ

ಮೇಷ

ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಬಡ್ತಿ ಅಥವಾ ಸ್ಥಳ ಬದಲಾವಣೆಯ ಸಾಧ್ಯತೆ. ಹೊಸ ನಿವೇಶನ ಖರೀದಿ ಅಥವಾ ಗೃಹನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಒತ್ತಡ ಹೆಚ್ಚಲಿದೆ.

ವೃಷಭ

ರಾಸಾಯನಿಕ ವಸ್ತುಗಳ ರಫ್ತು ವ್ಯವಹಾರದಿಂದ ಅಧಿಕ ವರಮಾನ. ಹೊಸ ಗೃಹನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸಮಾಧಾನದಿಂದ ಕೆಲಸಗಳನ್ನು ನಿರ್ವಹಿಸಿ ಅಪಾಯದಿಂದ ತ‌ಪ್ಪಿಸಿಕೊಳ್ಳಿ.

ಮಿಥುನ

ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ ಹರಿದು ಬರಲಿದೆ. ವಾಹನ ಮಾರಾಟದಿಂದ ಉತ್ತಮ ಲಾಭ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದ ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ.

ಕಟಕ

ಕೈಗೊಂಡ ಕೆಲಸ–ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನವ ದಂಪತಿಗಳಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡುವ ಸಾಧ್ಯತೆ.

ಸಿಂಹ

ಕೃಷಿಕರಿಗೆ ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕುವುದರಿಂದಾಗಿ ಕೃಷಿ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ. ಹೊಸ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ.

ಕನ್ಯಾ

ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಸರ್ಕಾರದ ಕಾಮಗಾರಿಗಳು ದೊರೆತು ಸಂತಸ. ಮಂಗಳ ಕಾರ್ಯಗಳಿಗಾಗಿ ಮಕ್ಕಳೊಂದಿಗೆ ಚರ್ಚಿಸುವ ಸಾಧ್ಯತೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ.

ತುಲಾ

ಜಾಹೀರಾತುಗಳ ಮೂಲಕ ವಹಿವಾಟು ಹೆಚ್ಚಿಸಿಕೊಳ್ಳಲಿದ್ದೀರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದಾಗಿ ಲಾಭ. ಮಂಗಳಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ. ತಾಯಿಗೆ ನುರಿತ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ.

ವೃಶ್ಚಿಕ

ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ಕುದುರುವುದರಿಂದ ಆದಾಯ ಹೆಚ್ಚಲಿದೆ. ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರಕುವ ಸಾಧ್ಯತೆ. ವಿವಾಹ ನಿಶ್ಚಯ ಮುಂತಾದ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.

ಧನು

ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ ದೊರಕಲಿದೆ. ಹೊಸ ಕೆಲಸಗಳಿಗೆ ಮಾಡುವ ಪ್ರಯತ್ನಕ್ಕೆ ಸ್ನೇಹಿತರಿಂದ ಸಹಾಯ ದೊರೆಯಲಿದೆ. ಯಂತ್ರೋಪಕರಣಗಳ ವ್ಯವಹಾರದಿಂದಾಗಿ ಉತ್ತಮ ಲಾಭ.

ಮಕರ

ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಕರುಗಳಿಗೆ ವಿಶೇಷ ಬೇಡಿಕೆಯಿಂದಾಗಿ ಉತ್ತಮ ಲಾಭ. ಸ್ವಂತ ಉದ್ಯಮ, ಫ್ಯಾಕ್ಟರಿಗಳನ್ನು ನಡೆಸುತ್ತಿರುವವರಿಗೆ ಉತ್ತಮ ಆದಾಯ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ

ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಸಿದ್ಧತೆ ನಡೆಸಲು ಸಕಾಲ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲೂ ವಿಸ್ತರಿಸಲು ಅನುಮತಿ ಪಡೆಯಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಕ್ಕಳು ವಿಶೇಷ ಸಾಧನೆ ಮಾಡುವ ಸಾಧ್ಯತೆ.

ಮೀನ

ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟದಿಂದಾಗಿ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳಲಿದ್ದೀರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಅವಕಾಶ. ಶುಭಕಾರ್ಯಗಳನ್ನು ನಡೆಸುವ ಬಗ್ಗೆ ಚಿಂತನೆ.

ಫೆಬ್ರವರಿ 17, ಬುಧವಾರ ,2021: ಇಂದಿನ ರಾಶಿಭವಿಷ್ಯ

ರಾಹುಕಾಲ:12.37 ರಿಂದ 2.05
ಗುಳಿಕಕಾಲ:11.09 ರಿಂದ 12.37
ಯಮಗಂಡಕಾಲ:8.13 ರಿಂದ 9.41
ಬುಧವಾರ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ,ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ.

ಮೇಷ

ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಹೊಸ ಜಾಣ್ಮೆಯನ್ನು ಬಳಬೇಕಾದ ಸಂದರ್ಭ ಬರಬಹುದು. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ.

ವೃಷಭ

ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸ–ಕಾರ್ಯಗಳಿಗೆ ಸ್ಫೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ ನೆರವು ದೊರೆಯುವ ಸಾಧ್ಯತೆ.

ಮಿಥುನ

ಬೇರೆಯವರ ಸಲಹೆಯಿಂದಾಗಿ ಅಪಾಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಹಿರಿಯರ ಮಾತುಗಳನ್ನು ಗೌರವಿಸುವುದರಿಂದ ಆಪತ್ತಿನಿಂದ ಪಾರಾಗುವಿರಿ. ಛಲಕ್ಕೊಂದು ಬಲ ದೊರೆತು ಯಶಸ್ಸು ನಿಮ್ಮದಾಗಲಿದೆ.

ಕಟಕ

ಬಹುದಿನಗಳಿಂದ ಬಾಕಿ ಇರುವ ಕೆಲಸ–ಕಾರ್ಯಗಳು ಇಂದು ವಿಳಂಬವಿಲ್ಲದೇ ನೆರವೇರುವ ಸಾಧ್ಯತೆ. ಸಮಾಜದ ಗೌರವಾದರಗಳು ನಿಮ್ಮನ್ನರಸಿ ಬರುವವು. ಭರವಸೆಗಳ ಈಡೇರಿಕೆಗಾಗಿ ಅತ್ಯಂತ ಶ್ರಮ ವಹಿಸಿ.

ಸಿಂಹ

ಬಂಧುಗಳ ಸಲಹೆ ಮತ್ತು ಆಶ್ವಾಸನೆಗಳಲ್ಲಿ ವಿಶ್ವಾಸವಿಡಿ. ಹೊಸ ಕೆಲಸ–ಕಾರ್ಯಗಳಲ್ಲಿ ತೊಡಗಲು ಪ್ರಶಸ್ತವಾಗಿದೆ. ಷರತ್ತುಬದ್ಧ ಅವಕಾಶಗಳು ದೊರಕುವ ಸಾಧ್ಯತೆ. ಉದ್ಯೋಗರಂಗದಲ್ಲಿ ಬದಲಾವಣೆಯ ಸಾಧ್ಯತೆ.

ಕನ್ಯಾ

ನಂಬಿ ಬಂದವರಿಗೆ ಉತ್ತಮ ಆಸರೆ ನೀಡಿ ಹರ್ಷದಾಯಕ ಸಂದೇಶ ನೀಡುವ ಸಾಧ್ಯತೆ. ಚಮತ್ಕಾರಿಕವಾಗಿ ಸತ್ಕಾರ್ಯಗಳಲ್ಲಿ ತೊಡಗಿ ನಿರ್ವಹಿಸುವ ಅವಕಾಶ ನಿಮ್ಮದಾಗಲಿದೆ. ಪ್ರಶಂಸೆಗೆ ಪಾತ್ರರಾಗುವಿರಿ.

ತುಲಾ

ಅಭಿರುಚಿಗೆ ತಕ್ಕಂತೆ ಸ್ವಾವಲಂಬಿ ಕಾರ್ಯಗಳಲ್ಲಿ ತೊಡಗುವಿರಿ. ಆದರ್ಶ ಹೊಂದಿದ ಕೆಲಸ–ಕಾರ್ಯಗಳಿಗೆ ಸಹಾಯ ದೊರಕಿ ಕಾರ್ಯಸಾಧನೆ ಮಾಡಲಿದ್ದೀರಿ. ಘನತೆ ಗೌರವಗಳು ನಿಮ್ಮದಾಗಲಿವೆ.

ವೃಶ್ಚಿಕ

ಸದಾಚಾರ ಕಾರ್ಯಗಳಲ್ಲಿ ಸ್ವಸ್ಥ ಮನಸ್ಸಿನಿಂದ ತೊಡಗುವಿರಿ. ಇಷ್ಟಮಿತ್ರರ ಮಧ್ಯಸ್ಥಿಕೆಯಲ್ಲಿ ಗಂಭೀರ ಸಮಾಲೋಚನೆಗಳು ನಡೆಯುವ ಸಾಧ್ಯತೆಯಿದ್ದು ಶುಭದಾಯಕವಾಗಿ ಪರಿಣಮಿಸಲಿದೆ.

ಧನು

ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಬಣ್ಣ ಬಯಲಾಗಲಿದೆ. ಮೇಧಾವಿತನದಿಂದಾಗಿ ಹಿತಕರ ವಾತಾವರಣ ನಿಮ್ಮದಾಗುವುದು. ಗೊಂದಲ ನಿವಾರಣೆಗಾಗಿ ವೆಚ್ಚ ಮಾಡುವ ಸಾಧ್ಯತೆ ಇದೆ.

ಮಕರ

ಭರವಸೆಗಳ ಮಹಾಪೂರವೇ ಹರಿದುಬಂದು ಸಂತೋಷ ಮೂಡುವುದು. ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಸವಾಲುಗಳು ಎದುರಾಗಲಿದ್ದು ಎದೆಗುಂದದೇ ಮುನ್ನುಗ್ಗಿ.

ಕುಂಭ

ಹೊಂದಿಕೊಳ್ಳುವ ಮನೋಭಾವದಿಂದಾಗಿ ಮಹತ್ವದ ವಿಷಯಗಳಲ್ಲಿ ಒಡಂಬಡಿಕೆಗೆ ಬರುವ ಸಾಧ್ಯತೆ. ವಿಪರೀತ ಸನ್ನಿವೇಶಗಳು ಎದುರಾಗಬಹುದು. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯ ಚರ್ಚೆ ನಡೆಯುವ ಸಾಧ್ಯತೆ.

ಮೀನ

ನಿಮ್ಮ ಬಹುದಿನಗಳ ಬಯಕೆ ಇಡೇರುವ ಸಾಧ್ಯತೆ. ವೃತ್ತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ. ಉತ್ತಮ ಕೆಲಸ ಕಾರ್ಯಗಳಿಂದಾಗಿ ಮನ್ನಣೆ ಗಳಿಸುವಿರಿ. ಮನೆಯವರ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ಫೆಬ್ರವರಿ 16, ಮಂಗಳವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ರಾಹುಕಾಲ:3.34 ರಿಂದ 5.02
ಗುಳಿಕಕಾಲ:12.38 ರಿಂದ 2.06
ಯಮಗಂಡಕಾಲ:9.42 ರಿಂದ 11.10
ವಾರ : ಮಂಗಳವಾರ,
ತಿಥಿ : ಪಂಚಮಿ,
ನಕ್ಷತ್ರ : ರೇವತಿ,

ಮೇಷ

ವ್ಯವಹಾರಸ್ಥರಿಗೆ ಉತ್ತಮ ಫಲ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ನೆರೆಹೊರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತವಾಗಲಿದೆ. ಕುಟುಂಬದಲ್ಲಿ ವೈಮನಸ್ಸು.

ವೃಷಭ

ವೃತ್ತಿಯಲ್ಲಿ ವರ್ಗಾವಣೆ ಅಥವಾ ಸ್ಥಾನ ಬದಲಾವಣೆ ಸಾಧ್ಯತೆ. ಸಾಲಕ್ಕಾಗಿ ಜಾಮೀನು ನೀಡದಿರುವುದು ಒಳ್ಳೆಯದು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತವಾಗುವ ಸಾಧ್ಯತೆ.

ಮಿಥುನ

ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವುದು ಸೂಕ್ತ. ವ್ಯವಹಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿ. ನ್ಯಾಯಾಲಯದಲ್ಲಿರುವ ಕಟ್ಟಳೆಗಳು ವಿಳಂಬವಾಗುವ ಸಾಧ್ಯತೆ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ.

ಕಟಕ

ಬಟ್ಟೆ, ಹತ್ತಿ ವ್ಯಾಪಾರಿಗಳಿಗೆ ವಿಶೇಷ ಲಾಭವಾಗುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸ್ವಯಂ ಉದ್ಯೋಗಿಗಳಿಗೆ ಯಶಸ್ಸು ದೊರಕಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾದೀತು.

ಸಿಂಹ

ವಿದ್ಯುತ್ ಉಪಕರಣಗಳನ್ನು ಬಳಸುವಾಗ ಬಹಳ ಎಚ್ಚರಿಕೆ ವಹಿಸುವುದು ಅವಶ್ಯ. ಮಹಿಳೆಯರು ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಮಿತ್ರರಿಂದ ಧನ ಲಾಭ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ.

ಕನ್ಯಾ

ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯದಿಂದ ಮುಕ್ತಿ ದೊರಕುವ ಸಾಧ್ಯತೆ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳಲಿದ್ದೀರಿ. ವ್ಯವಹಾರ ಉತ್ತಮಗೊಳ್ಳುವ ಸಾಧ್ಯತೆ. ಗೃಹದಲ್ಲಿ ಧಾರ್ಮಿಕ ಕಾರ್ಯ ನೆರವೇರುವ ಸಾಧ್ಯತೆ.

ತುಲಾ

ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ವಹಿಸುವುದು ಅವಶ್ಯ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಉತ್ತಮ ಫಲ ಪ್ರಾಪ್ತಿ. ಸಂತೃಪ್ತಿದಾಯಕ ದಾಂಪತ್ಯ ಜೀವನ ನಿಮ್ಮದಾಗಲಿದೆ.

ವೃಶ್ಚಿಕ

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ. ಸೋದರರಿಂದ ಸಹಕಾರ ದೊರಕಲಿದೆ. ಮಧುಮೇಹದಂತಹ ರೋಗ ಬಾಧೆ ಹೆಚ್ಚಾಗುವ ಸಾಧ್ಯತೆ. ವಿದೇಶ ಪ್ರಯಾಣ ಸಾಧ್ಯತೆ ಕಂಡುಬರುವುದು.

ಧನು

ದೈನಂದಿನ ಕೆಲಸ–ಕಾರ್ಯಗಳಲ್ಲಿ ಉತ್ಸಾಹ ಮತ್ತು ಗಣನೀಯ ಸಾಧನೆ. ದೂರದ ಪ್ರಯಾಣ ಸಾಧ್ಯತೆ. ಮಕ್ಕಳ ಬಗ್ಗೆ ವಿಶೇಷ ಗಮನ ಅಗತ್ಯ. ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆ. ಕಲಾವಿದರಿಗೆ ಉತ್ತಮ ಪ್ರೋತ್ಸಾಹ.

ಮಕರ

ಹಿತಶತ್ರುಗಳ ವಿಚಾರದಲ್ಲಿ ಬಹಳ ಜಾಗೃತೆ ವಹಿಸುವುದು ಅವಶ್ಯಕ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಸಾಧ್ಯತೆ. ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ವಾಹನ ಚಾಲಕರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಕುಂಭ

ಪ್ರಿಯ ವ್ಯಕ್ತಿಗಳೆಂದು ನಂಬಿ ವಿಚಾರಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಲಾರದು. ಬಂಧುಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ ಒಮ್ಮತ ಮೂಡಲಿದೆ. ಸಂತೃಪ್ತ ದಾಂಪತ್ಯ ಜೀವನ ಅನುಭವಿಸಲಿದ್ದೀರಿ.

ಮೀನ

ಆರೋಗ್ಯದ ಕಡೆಗೆ ಹೆಚ್ಚು ಗಮನ ಅಗತ್ಯ. ಬಂಧುಗಳೊಡನೆ ಆಕಸ್ಮಿಕ ಪ್ರಯಾಣ ಸಾಧ್ಯತೆ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ ಕೂಡಬರಲಿದೆ. ಆಸ್ತಿ ವಿವಾದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ.

ಫೆಬ್ರವರಿ15, ಸೋಮವಾರ, 2021 : ಇಂದಿನ ರಾಶಿಭವಿಷ್ಯ

15 -2-2021 ಸೋಮವಾರ ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 3 ಸಲುವ ಮಾಘ ಶುದ್ಧ ಚೌತಿ 51|||ಗಳಿಗೆದಿನ ವಿಶೇಷ :ಕೆಮ್ಮಣ್ಣು ರಥನಿತ್ಯ ನಕ್ಷತ್ರ :ಉತ್ತರಾಭಾದ್ರಾ 29 ಗಳಿಗೆಮಹಾ ನಕ್ಷತ್ರ :ಧ‌ನಿಷ್ಠಾಋತು :ಶಿಶಿರರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.34 ಗಂಟೆಸೂರ್ಯೋದಯ :6.57 ಗಂಟೆ

ಮೇಷ

ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿ ದೊರಯಲಿದೆ.

ವೃಷಭ

ಹಿರಿಯರ ಆಸೆ ಪೂರೈಸುವ ಸಲುವಾಗಿ ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದಾಗಿ ಅಧಿಕ ಲಾಭ.

ಮಿಥುನ

ಕೆಲಸ ಕಾರ್ಯಗಳು ನಿಧಾನವಾಗಿ ಆದರೂ ಒಂದೇರೀತಿಯ ಪ್ರಗತಿಯಲ್ಲಿರುವವು. ಮಕ್ಕಳ ಓದಿನ ಬಗ್ಗೆ ಅತೀವ ಕಾಳಜಿ ವಹಿಸಲಿದ್ದೀರಿ. ಮನೆಯ ಮಂದಿಯ ಬಗ್ಗೆ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದೀತು.

ಕಟಕ

ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಪ್ರಸಿದ್ಧಿಯ ಗರಿ ಮುಡಿಗೇರಲಿದೆ. ಪಾರಮಾರ್ಥಿಕ ವಿಚಾರಗಳು ಮನಸ್ಸಿನಲ್ಲಿ ಮೂಡಲಿವೆ. ಸುಬ್ರಹ್ಮಣ್ಯ ದೇವರ ದರ್ಶನ ಸಾಧ್ಯತೆ.

ಸಿಂಹ

ನಿಮ್ಮ ಮಾತಿಗೆ ಈಗ ಹೆಚ್ಚಿನ ಮಹತ್ವ ಬರುವುದರಲ್ಲಿ ಸಂಶಯವಿಲ್ಲ. ಆತ್ಮೀಯರೊಬ್ಬರಿಗೆ ಶಿಫಾರಸು ನಡೆಸಿ ಬದುಕಿನ ದಾರಿ ಕಲ್ಪಿಸಿಕೊಡುವಿರಿ. ಸಂಬಂಧಗಳು ಗಟ್ಟಿಗೊಳ್ಳಲಿವೆ.

ಕನ್ಯಾ

ಪುಸ್ತಕ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೀರಿ. ಸ್ಟೇಷನರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ನೆರೆಯವರೊಂದಿಗಿನ ಸಂಬಂಧ ವೃದ್ಧಿ. ಕುಟುಂಬಕ್ಕೆ ಹೊಸಬರೊಬ್ಬರ ಆಗಮನ ಸಾಧ್ಯತೆ.

ತುಲಾ

ಸಾಮರ್ಥ್ಯಕ್ಕೆ ತಕ್ಕುದಾದ ಉದ್ಯೋಗ ದೊರಕಲಿದೆ. ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯವೆನಿಸಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕಾದೀತು. ದೇವತಾ ದರ್ಶನದಿಂದ ನೆಮ್ಮದಿ.

ವೃಶ್ಚಿಕ

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ. ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧ ಉತ್ತಮಗೊಳ್ಳಲಿದೆ. ಪದೋನ್ನತಿಯ ವಿಚಾರ ಪ್ರಸ್ತಾಪವಾಗಿ ಸಂತಸ ಮೂಡಲಿದೆ.

ಧನು

ಸಹೋದರನಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಮನೆಯಲ್ಲಿ ಸಂಭ್ರಮ ಮನೆಮಾಡಲಿದೆ. ನೆರೆಯವರೊಂದಿಗೆ ಕಾಲಹರಣ ಮಾಡಬೇಕಾದೀತು. ಮನಸ್ಸಿಗೆ ನೆಮ್ಮದಿ ಮೂಡಿಬರಲಿದೆ.

ಮಕರ

ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯತೆ. ತಾಂತ್ರಿಕ ಪರಿಣತರಿಗೆ ಮಾಧ್ಯಮಗಳ ಕೆಲಸ ಕಾರ್ಯಗಳು ದೊರೆತು ಉತ್ತಮ ಆದಾಯ ದೊರಕಲಿದೆ. ಪ್ರಚಾರ ಸಾಮಗ್ರಿ ತಯಾರಕರಿಗೆ ಅಮಿತ ಆದಾಯ.

ಕುಂಭ

ನೇತ್ರ ಸಂಬಂಧಿ ವ್ಯಾಧಿಗಳಿಂದ ಮುಕ್ತರಾಗಲಿದ್ದೀರಿ. ಮಕ್ಕಳ ವ್ಯವಹಾರಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮನೆಯವರೊಂದಿಗೆ ನೆಮ್ಮದಿಯ ದಿನವನ್ನಾಗಿಸಿಕೊಳ್ಳುವಿರಿ. ಉತ್ತಮ ಆರೋಗ್ಯ ಭಾಗ್ಯ.

ಮೀನ

ಕಛೇರಿಯ ಸಹೋದ್ಯೋಗಿಗಳಿಂದ ಪ್ರಶಂಸೆಯ ಮಾತುಗಳೊಂದಿಗೆ ಭೋಜನ ಕೂಟದಲ್ಲಿ ಭಾಗಿಯಾಗುವಿರಿ. ಸರ್ಕಾರದಿಂದ ಬರಬೇಕಾದ ಹಣ ಕೈ ಸೇರುವ ನಿರೀಕ್ಷೆ. ವೃದ್ಧಾಪ್ಯದ ಸಂಕಟಗಳು ಎದುರಾಗುವ ಸಾಧ್ಯತೆ.

ಫೆಬ್ರವರಿ 13, ಶನಿವಾರ ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘ ಮಾಸ,
ಶುಕ್ಲಪಕ್ಷ,ದ್ವಿತೀಯ,
ಶನಿವಾರ, ಶತಭಿಷಾ ನಕ್ಷತ್ರ/ಪೂರ್ವ ಭಾದ್ರಪದ ನಕ್ಷತ್ರ,
ರಾಹುಕಾಲ 9.42 ರಿಂದ 11:10
ಗುಳಿಕಕಾಲ 06:46 ರಿಂದ 08:14
ಯಮಗಂಡಕಾಲ 02:06 ರಿಂದ 3.34

ಮೇಷ

ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದೀರಿ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭ.

ವೃಷಭ

ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆ ಕಂಡು ಮನೆಯವರೆಲ್ಲರಿಗೂ ಅತೀವ ಸಂತೋಷ. ಉನ್ನತ ವ್ಯಾಸಂಗದ ವಿಚಾರದಲ್ಲಿ ಚರ್ಚೆ, ಅನುಕೂಲಕರ ವಾತಾವರಣ. ಸಂಪನ್ಮೂಲ ಕೂಡಿಬರಲಿದೆ.

ಮಿಥುನ

ಹೊಸ ಮನೆ ಕಟ್ಟುವ ಯತ್ನವು ಈಡೇರಲಿದೆ. ವಯಸ್ಕರು ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವ ನಿರ್ಧಾರ ಮಾಡಲಿದ್ದೀರಿ. ದೇವತಾ ದರ್ಶನಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ.

ಕಟಕ

ವಿವಾಹ ಸಂಬಂಧಿ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಅವಕಾಶಗಳು ದೊರಕಲಿವೆ. ದೇವತಾನುಗ್ರಹದಿಂದ ಸರ್ವಕಾರ್ಯ ಸಿದ್ಧಿ.

ಸಿಂಹ

ಸಲಹೆಯನ್ನು ಬಯಸಿ ಬಂದವರಿಗೆ ನಿರಾಕರಿಸದೇ ಉತ್ತಮ ಸಲಹೆಗಳನ್ನು ನೀಡಿ ಅನುಕೂಲ ಹೊಂದಲಿದ್ದೀರಿ. ಮನೆಯ ವಹಿವಾಟಿನತ್ತ ವಿಶೇಷ ಗಮನ ಹರಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿಯು ಲಭ್ಯವಾಗಲಿದೆ.

ಕನ್ಯಾ

ಉದ್ಯೋಗದ ಸ್ಥಳದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಬೆಂಬಲ ದೊರೆತು ಕಾರ್ಯ ಸುಗಮವಾಗಲಿದೆ. ಪ್ರೀತಿಪಾತ್ರರೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳುವಿರಿ. ತಾಪತ್ರಯಗಳಿಂದ ಮುಕ್ತರಾಗಿ ನೆಮ್ಮದಿ.

ತುಲಾ

ಜೀವನಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳುವಿರಿ. ಸ್ವಂತ ವ್ಯಾಪಾರ ವ್ಯವಹಾರ ನಡೆಸಲು ತೀರ್ಮಾನ. ತಂದೆಯವರ ಸಹಕಾರದಿಂದಾಗಿ ವ್ಯವಹಾರದಲ್ಲಿ ಯಶಸ್ಸನ್ನು ಹೊಂದುವಿರಿ.

ವೃಶ್ಚಿಕ

ಚಿತ್ರಕಲೆಯಲ್ಲಿ ತೊಡಗಿಕೊಂಡವರಿಗೆ ಸೃಜನಶೀಲತೆಯ ಉತ್ತುಂಗಕ್ಕೇರುವ ಅವಕಾಶ. ಮನಸ್ಸಿಗೆ ಮುದ ನೀಡುವ ಸಂಗತಿಗಳು ಜರುಗಲಿವೆ. ಜಟಿಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೀರಿ.

ಧನು

ನಿತ್ಯದ ಕೆಲಸ ಕಾರ್ಯಗಳ ಬಗೆಗೆ ಹೆಚ್ಚಿನ ನಿಗಾ. ಮನೆಯವರೊಂದಿಗೆ ದೇವತಾರಾಧನೆ ನಡೆಸಲಿದ್ದೀರಿ. ನೆನೆಗುದಿಗೆ ಬಿದ್ದಿರುವ ಕೆಲಸ ಪೂರ್ಣ. ಜೀವನದಲ್ಲಿ ಬದಲಾವಣೆಯೊಂದನ್ನು ನಿರೀಕ್ಷಿಸಬಹುದು.

ಮಕರ

ಕಾನೂನು ಕಾಯ್ದೆ ವಿಚಾರದಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ. ನೇರ ನಡೆ ನುಡಿಯಿಂದಾಗಿ ಇತರರ ಮನ ಗೆಲ್ಲುವಿರಿ. ಹೆಣೆದಿರುವ ತಂತ್ರಗಾರಿಕೆಯು ಫಲ ನೀಡಲಿದೆ. ದೇವಾಲಯ ದರ್ಶನ ಮಾಡುವ ಸಾಧ್ಯತೆ.

ಕುಂಭ

ಹಣಕಾಸು ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ. ಕೂಡಿಟ್ಟ ಬಂಡವಾಳದಿಂದಾಗಿ ನಿರೀಕ್ಷೆ ಮೀರಿದ ಲಾಭ. ಸಂಗಾತಿಯೊಂದಿಗೆ ಸಂತಸವನ್ನು ಹಂಚಿಕೊಳ್ಳಲಿದ್ದೀರಿ. ಹಸಿರು ಬಣ್ಣ ಶುಭ ತರಲಿದೆ.

ಮೀನ

ಕಛೇರಿಯಲ್ಲಿನ ನಿಮ್ಮ ಮೇಲಿನ ಭರವಸೆಗಳನ್ನು ದೃಢಪಡಿಸುವಿರಿ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ. ಉತ್ತಮ ಆರೋಗ್ಯದ ನಿಮಿತ್ತ ದೇವರ ಆರಾಧನೆ ಮಾಡಲಿದ್ದೀರಿ.

ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣೆ, ಸಮರ್ಪಣಾ ದಿನಾಚರಣೆ

ಉಡುಪಿ: ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲೋರ್ವರಾದ ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಬಲಿದಾನದ ದಿನವನ್ನು ಫೆ.11 ರಂದು ಸಮರ್ಪಣಾ ದಿನವಾಗಿ ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್ ಬನ್ನಂಜೆ ಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಕೆ.ಉದಯ ಕುಮಾರ್ ಶೆಟ್ಟಿಯವರು ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶಗಳು, ನಿಸ್ವಾರ್ಥ ಮನೋಭಾವದ ಸೇವೆ ಮತ್ತು ಬಲಿದಾನದ ವಿಚಾರಗಳನ್ನು ವಿಸ್ತೃತವಾಗಿ ವಿವರಿಸಿ ಉಪನ್ಯಾಸ ನೀಡಿದರು.

ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ನಿಧಿ ಸಮರ್ಪಣೆಯ ಮೂಲಕ ಪಂಡಿತ್ ಜೀ ಯವರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷರಾದ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿಯವರು ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರುರವರು ವಂದಿಸಿದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಎಮ್. ಅಂಚನ್ ರವರು ಕಾರ್ಯಕ್ರಮ ನಿರೂಪಿಸಿದರು.

Design a site like this with WordPress.com
Get started