ಮಾರ್ಚ್ 12,ಶುಕ್ರವಾರ , 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

12-3-2021 ಶುಕ್ರವಾರ ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 28 ಸಲುವ ಮಾಘ ಬಹುಳ 21 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಶತಭಿಷಾ4011ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30 – 9.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.42 ಗಂಟೆ

ಮೇಷ

ಔಷಧ ವ್ಯಾಪಾರಿಗಳು, ಹತ್ತಿ ಮತ್ತು ಬಟ್ಟೆ, ಔಷಧ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ತೊಡಗಿದವರಿಗೆ ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಕೊಂಚಮಟ್ಟಿನ ತೊಂದರೆ.

ವೃಷಭ

ತಂತ್ರಜ್ಞರಿಗೆ, ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಪದೋನ್ನತಿ. ಅತ್ಯಂತ ಸಂತೋಷದಾಯಕ ದಿನವಾಗಿ ಪರಿಣಮಿಸಲಿದೆ. ಯೋಜಿತ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ.

ಮಿಥುನ

ಆರೋಗ್ಯದಲ್ಲಿ ಸುಧಾರಣೆ. ರಾಜಿ ಸಂಧಾನಗಳು ಸಫಲಗೊಂಡು ಪ್ರತಿಷ್ಠಿತ ಸ್ಥಾನವೊಂದನ್ನು ಅಲಂಕರಿಸುವ ಸಾಧ್ಯತೆ. ಶತೃಗಳು ಸೃಷ್ಟಿಸುವ ಸಂಚುಗಳಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರಿಕೆ ಅಗತ್ಯ.

ಕಟಕ

ನೌರಿಯಲ್ಲಿರುವವರಿಗೆ ಬೇಸರವನ್ನುಂಟು ಮಾಡುವ ಸಾಧ್ಯತೆ. ಮನಸ್ಸಿಗೆ ಅಹಿತಕರವೆನಿಸುವ ಸುದ್ದಿಯೊಂದು ಕೇಳಿಬರುವ ಸಾಧ್ಯತೆ . ದ್ರವ್ಯ ಸಂಗ್ರಹ ಮಾಡುವ ಯೋಗವು ಕಂಡುಬರುತ್ತಿದೆ.

ಸಿಂಹ

ಆಸ್ತಿಯನ್ನು ಖರೀದಿ ಮಾಡುವ ಸಾಧ್ಯತೆ. ಹಣಕಾಸಿನ ಅನುಕೂಲದೊಂದಿಗೆ ಉನ್ನತ ಸ್ಥಾನಮಾನ ಲಭ್ಯ. ನಿಮ್ಮ ಕುಯುಕ್ತಿಯು ಬಯಲುಗೊಂಡು ಮಾನಹಾನಿ ಎದುರಿಸಬೇಕಾದ ಸಂದರ್ಭ ಎದುರಾಗಲಿವೆ.

ಕನ್ಯಾ

ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉನ್ನತ ಶಿಕ್ಷಣದ ಅವಕಾಶಗಳು ಕೈಗೂಡಲಿದೆ. ವಿವಾದಗಳಲ್ಲಿ ಯಶಸ್ಸು. ಶೃಂಗಾರ ಉಪಕರಣ, ಯಂತ್ರೋಪಕರಣಗಳ ವ್ಯಾಪಾರದಲ್ಲಿ ಉತ್ತಮ ಲಾಭ ದೊರಕಲಿದೆ.

ತುಲಾ

ವಾದವಿವಾದಗಳಿಂದಾಗಿ ನಿರಾಸಕ್ತಿ ಮೂಡುವ ಸಾಧ್ಯತೆ. ಶತೃ ಬಾಧೆಯಿಂದ ಮುಕ್ತರಾಗಿ ನೆಮ್ಮದಿ ಅನುಭವಿಸಲಿದ್ದೀರಿ. ವ್ಯವಹಾರದಲ್ಲಿ ಕಾರ್ಮಿಕರ ಕೊರತೆ ಎದುರಿಸಿ ನಷ್ಟ ಅನುಭವಿಸಬೇಕಾದೀತು.

ವೃಶ್ಚಿಕ

ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ತೆರೆದುಕೊಳ್ಳುವ ಲಕ್ಷಣ. ನೌಕರಸ್ಥ ಮಹಿಳೆಯರು ಕಛೇರಿಗಳಲ್ಲಿ ಕಿರಿಕಿರಿ ಎದುರಿಸಬೇಕಾದೀತು. ಯಂತ್ರೋಪಕರಣಗಳಲ್ಲಿ ತೊಂದರೆ ಕಂಡುಬರುವ ಸಾಧ್ಯತೆ.

ಧನು

ವ್ಯವಸಾಯದಲ್ಲಿ ತೊಡಗಿರುವವರು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾದೀತು. ಬಂಧುಗಳ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಪರಿಹಾರ. ಪ್ರೇಮ ಪ್ರಕರಣಗಳಲ್ಲಿ ಯಶಸ್ಸು. ಮಂಗಲ ಕಾರ್ಯಗಳಲ್ಲಿ ಭಾಗಿ.

ಮಕರ

ವಾದ– ವಿವಾದಗಳಲ್ಲಿ ವಿಜಯ. ವ್ಯವಹಾರ ಸಂಪರ್ಕದಿಂದ ಅಭಿವೃದ್ಧಿ. ಯುವಕರಿಗೆ ಭಾಗ್ಯೋದಯ. ವ್ಯಾಪಾರ ಪ್ರತಿನಿಧಿಗಳಿಗೆ ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸ. ಅತಿಯಾದ ಕಾರ್ಯಬಾಹುಳ್ಯ.

ಕುಂಭ

ಆತ್ಮೀಯರ ಸಲಹೆಯಿಂದಾಗಿ ಎದುರಾದ ವಿಪತ್ತಿನಿಂದ ಪಾರಾಗಲಿದ್ದೀರಿ. ಮನೆಯ ತುಂಬ ಹರ್ಷದ ಹೊನಲು. ಸಂಕಲ್ಪಿಸಿದ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ದೇವತಾರಾಧನೆಯಿಂದಾಗಿ ವಿಘ್ನಗಳು ಪರಿಹಾರ.

ಮೀನ

ಪ್ರವಾಸೋದ್ಯಮ, ಸಂಚಾರ ವ್ಯವಸ್ಥೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶ. ಕಲಾವಿದರು, ಸಾಹಿತಿಗಳಿಗೆ ಸನ್ಮಾನ ಸಮಾರಂಭಗಳು ಏರ್ಪಡುವ ಸಾಧ್ಯತೆ. ಅನಿರೀಕ್ಷಿತ ಮೂಲಗಳಿಂದ ಆದಾಯ.

ಮಾರ್ಚ್ 11,ಗುರುವಾರ,2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ದಿನಾಂಕ 11/03/2021

ಶಾಲಿವಾಹನ ಶಕೆ ೧೯೪೩
ಶಾರ್ವರೀ ಸಂವತ್ಸರ
ಉತ್ತರಾಯನ
ಶಿಶಿರ ಋತು
ಕುಂಭ ೨೭
ಪೂರ್ವಾಭಾದ್ರಾ ಮಹಾನಕ್ಷತ್ರ. (೨೮-೫೩)
ಮಾಘ ಮಾಸ
ಕೃಷ್ಣ ಪಕ್ಷ
ಗುರುವಾರ
ತ್ರಯೋದಶಿ ತಿಥಿ (02-59pm)
ಧನಿಷ್ಠಾ ನಕ್ಷತ್ರ (10-05pm)
ಶಿವ ಯೋಗ (೦೮-೩೫)
ವಣಿಜ ಕರಣ (೨೦-೩೯)
ಸೂರ್ಯೋದಯ – 06-43am
ಸೂರ್ಯಾಸ್ತ – 06-36pm

ದಿನ ವಿಶೇಷ :ಮಹಾಶಿವರಾತ್ರಿ

ರಾಹು ಕಾಲ
01:40pm – 03:09pm ಅಶುಭ
ಯಮಘಂಡ ಕಾಲ
06:11am – 07:41am ಅಶುಭ
ಗುಳಿಕ ಕಾಲ
09:10am – 10:40am

ಮೇಷ

ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ. ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ.

ವೃಷಭ

ಆರ್ಥಿಕವಾಗಿ ನಾನಾರೀತಿಯಲ್ಲಿ ಧನ ಸಂಗ್ರಹವಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನುಕೂಲತೆ ಕೂಡಿಬರಲಿದೆ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ ಹೆಚ್ಚಳ.

ಮಿಥುನ

ಗೃಹ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮ ಕಾಲ. ಮನಸ್ಸಿಟ್ಟು ಕೆಲಸ ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಭೂ ಖರೀದಿ ವ್ಯವಹಾರವನ್ನು ಮಾಡಲು ಸಕಾಲ.

ಕಟಕ

ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ನೌಕರ ವರ್ಗಕ್ಕೆ ಕೆಲಸಗಳಿಂದ ವಿರಾಮ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು.

ಸಿಂಹ

ಉನ್ನತ ಅಧ್ಯಯನಕ್ಕೆ ಉತ್ತೇಜನ ದೊರೆತು ವಿದೇಶಕ್ಕೆ ಪ್ರಯಾಣ ಮಾಡುವ ಸಾಧ್ಯತೆ. ಸಾರಾಸಾರ ವಿವೇಚನೆಯಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ವಿಶೇಷ ಭೋಜನ ಕೂಟದಲ್ಲಿ ಭಾಗಿ.

ಕನ್ಯಾ

ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು.

ತುಲಾ

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳುವ ಸಾಧ್ಯತೆ. ನ್ಯಾಯಾಲಯದಲ್ಲಿನ ಕಟ್ಳೆಗಳಿಗೆ ಚಾಲನೆ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ. ಸಾಹಿತಿ, ಬುದ್ಧಿಜೀವಿಗಳಿಗೆ ಗೌರವ ಪ್ರಾಪ್ತಿ.

ವೃಶ್ಚಿಕ

ಕೆಲಸ ಕಾರ್ಯಗಳಲ್ಲಿ ಅನುಕೂಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಿಶ್ವಾಸದಿಂದ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಲಾಭ.

ಧನು

ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತ ಉದ್ಯೋಗಾವಕಾಶ. ವಿದೇಶಿ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ತಿರುವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಕರ

ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆ. ಸಾಮಾಜಿಕೆ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತೋಷ ಅನುಭವಿಸಲಿದ್ದೀರಿ. ಮಕ್ಕಳಿಂದ ಆರ್ಥಿಕ ಸಹಕಾರ.

ಕುಂಭ

ದೇವತಾನುಗ್ರಹದಿಂದ ಶುಭ ಕಾರ್ಯಗಳು ನಿಮ್ಮ ಮನದಿಚ್ಛೆಯಂತೆ ನೆರವೇರುವವು. ಧೈರ್ಯ ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲದಿಂದಾಗಿ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.

ಮೀನ

ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಅವಶ್ಯಕತೆಗಿಂತ ಹೆಚ್ಚಾಗಿ ಹಣಕಾಸಿನ ನೆರವು ದೊರೆಯಲಿದೆ. ಶೀಘ್ರದಲ್ಲೇ ಸಂತೋಷಕರ ಸುದ್ದಿಯೊಂದನ್ನು ಆಲಿಸಲಿದ್ದೀರಿ.

ಮಾರ್ಚ್ 10,ಬುಧವಾರ ,2021 :ಇಂದಿನ ಪಂಚಾಂಗ ಮತ್ತು ವಾರಭವಿಷ್ಯ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 26 ಸಲುವ ಮಾಘ ಬಹುಳ ದ್ವಾದಶಿ 20 ಗಳಿಗೆದಿನ ವಿಶೇಷ :ಪ್ರದೋಷ ಶ್ರವಣೋಪವಾಸನಿತ್ಯ ನಕ್ಷತ್ರ :ಶ್ರವಣ 36 ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.44 ಗಂಟೆ

ಮೇಷ

ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯಕ್ಷೇತ್ರದಲ್ಲಿ ಗೊಂದಲ ಕಿರಿಕಿರಿ. ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರದಿಂದಾಗಿ ಆದಾಯದಲ್ಲಿ ಹೆಚ್ಚಳ.

ವೃಷಭ

ಸಾಮಾಜಿಕ ಉನ್ನತೀಕರಣಕ್ಕಾಗಿ ಹಿರಿಯರೊಂದಿಗೆ ಚರ್ಚಿಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಮಹಿಳಾ ಉದ್ಯೋಗಿಗಳಿಗೆ ಭಡ್ತಿ. ವ್ಯವಹಾರದಲ್ಲಿ ಸ್ಥಿರತೆ.

ಮಿಥುನ

ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯದಿಂದ ಸರ್ಕಾರದಿಂದ ಆಗಬೇಕಾದ ಕೆಲಸಗಳು ಸುಸೂತ್ರವಾಗಿ ನೆರವೇರುವವು. ಶತ್ರುಗಳ ಬಾಧೆ. ಮಕ್ಕಳ ವಿದ್ಯಾಭ್ಯಾಸದ ಕುರಿತು ಇದ್ದ ಚಿಂತೆಗಳು ದೂರ.

ಕಟಕ

ಸರ್ಕಾರಿ ನೌಕರರಿಗೆ ಒಳ್ಳೆಯ ದಿನವಾಗಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನವಾಗಿರುವುದು. ಸಂಗಾತಿಯ ಆಲೋಚನೆಗಳಿಗೆ ಪುರಸ್ಕಾರ ನೀಡುವುದು ಒಳ್ಳೆಯದು.

ಸಿಂಹ

ವಾಹನ ಮಾರಾಟದಲ್ಲಿ ತೊಡಗಿದವರಿಗೆ ಉತ್ತಮ ಲಾಭ. ಯಕ್ಷಿಣೀಗಾರರಿಗೆ ಉತ್ತಮ ಅವಕಾಶ. ಕಳೆದುಕೊಂಡ ವಸ್ತುವೊಂದು ಪುನಃ ಕೈ ಸೇರುವ ಸಾಧ್ಯತೆ. ವಿವಾಹ ಸಂಬಂಧ ಒತ್ತಡಕ್ಕೆ ಮಣಿಯಬೇಕಾದೀತು.

ಕನ್ಯಾ

ಕುಟುಂಬದಲ್ಲಿ ಸುಖ ಸಂತೋಷದೊಂದಿಗೆ ಆರ್ಥಿಕ ಅಭಿವೃದ್ಧಿ. ಹಿತೈಷಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿ. ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಪರಿಶ್ರಮ.

ತುಲಾ

ಸಗಟು ವ್ಯಾಪಾರಗಳಲ್ಲಿ ಗಣನೀಯ ಪ್ರಗತಿ, ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಆದಾಯಕ್ಕೆ ಮೀರಿದ ವೆಚ್ಚ ಭರಿಸಬೇಕಾದೀತು. ನೌಕರಿಯಲ್ಲಿರುವವರಿಗೆ ಬಿಡುವು. ಸಂಗಾತಿಯ ಸಹಕಾರದಿಂದಾಗಿ ಸಂತಸ.

ವೃಶ್ಚಿಕ

ಉದ್ಯೋಗದಲ್ಲಿ ಬದಲಾವಣಿಗಾಗಿ ಚಿಂತಿಸಲಿದ್ದೀರಿ. ಹಿತೈಷಿಗಳ ಸಲಹೆಗಾಗಿ ಚರ್ಚಿಸಲಿದ್ದೀರಿ. ದುಡುಕುತನ ತೋರಿಸದಿರುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ. ಬರಹಗಾರರೊಬ್ಬರ ಅನಿರೀಕ್ಷಿತ ಭೇಟಿ.

ಧನು

ಉದ್ಯೋಗದ ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಆದಾಯದಲ್ಲಿ ಹೆಚ್ಚಳದಿಂದಾಗಿ ನೆಮ್ಮದಿ ಮೂಡಿಬರಲಿದೆ. ನೇತ್ರ ಸಂಬಂಧಿ ಕಾಯಿಲೆಗಳು ದೂರವಾಗುವವು.

ಮಕರ

ಚಿನ್ನ ಬೆಳ್ಳಿ ಮುಂತಾದ ಆಭರಣ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ಕುದುರುವುದು. ಕೃಷಿ ಕಾರ್ಯಗಳಿಗಾಗಿ ಧನ ವಿನಿಯೋಗ. ಧವಸ ಧಾನ್ಯಗಳ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ.

ಕುಂಭ

ಕೃಷಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉತ್ತಮ ಅವಕಾಶ. ಬರಹಗಾರರಿಗೆ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವ ಅವಕಾಶ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿನಿಯೋಗ ಮಾಡಬೇಕಾದೀತು.

ಮೀನ

ಆರ್ಥಿಕ ಸದೃಢತೆಯಿಂದಾಗಿ ಆಸ್ತಿ ಖರೀದಿ. ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸದೊಂದು ಆಶಾಕಿರಣ ಮೂಡಿಬರಲಿದೆ. ರೈತಾಪಿ ವರ್ಗದವರಿಗೆ ಉತ್ತಮ ಬೆಳೆಯ ನಿರೀಕ್ಷೆ.

ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನೈತಿಕತೆಯ ಪಾಠ ಅನಗತ್ಯ – ಜಿಲ್ಲಾ ಬಿಜೆಪಿ

ತನ್ನ ಆಡಳಿತಾವಧಿಯಲ್ಲಿ ಸಾಲ ಪಡೆಯುವುದರಲ್ಲಿ ಹಿಂದಿನ ಎಲ್ಲಾ ಮುಖ್ಯ ಮಂತ್ರಿಗಳನ್ನು ಮೀರಿಸಿ ರಾಜ್ಯವನ್ನು ಅತಿ ಹೆಚ್ಚು ಸಾಲದ ಕೂಪಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ದರಾಮಯ್ಯ ನೈತಿಕತೆಯ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ.

ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ಸದನದಲ್ಲಿ ಪೂರ್ವ ನಿರ್ಧರಿತವಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಸಭಾತ್ಯಾಗ ಮಾಡಿದ್ದು, ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲೂ ಕ್ಷುಲ್ಲಕ ಕಾರಣ ನೀಡಿ ಸಭಾತ್ಯಾಗ ಮಾಡಿರುವುದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇತರರಿಗೆ ಬೆರಳು ತೋರುವ ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠರ ಸಹಿತ ಕೆಲವು ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದು ಬೇಲ್ ಮೇಲೆ ತಿರುಗಾಡುತ್ತಿರುವುದನ್ನು ಮರೆತಂತಿದೆ.

ಕೊರೋನಾ ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದ ನಡುವೆಯೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನತೆಗೆ ಯಾವುದೇ ಹೊಸ ತೆರಿಗೆಯ ಭಾರ ಹೊರಿಸದೆ ಸರ್ವಸ್ಪರ್ಷಿ ಸರ್ವವ್ಯಾಪಿ ಅಭಿವೃದ್ಧಿ ಪರ ಬಜೆಟ್ ಮಂಡಿಸಿರುವುದನ್ನು ಅರಗಿಸಿಕೊಳ್ಳಲಾಗದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹತಾಶ ಮನೋಭಾವದ ವರ್ತನೆ ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್ ಕುಂಜಿಬೆಟ್ಟು ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆರಿಗೆ ರಹಿತ ಡಿಸೀಲ್ ಘೋಷಣೆ, ಮೀನುಗಾರ ವರ್ಗದಲ್ಲಿ ಮಂದಹಾಸ – ಕುಯಿಲಾಡಿ ಸುರೇಶ್ ನಾಯಕ್

ರಾಜ್ಯ ಬಜೆಟ್‍ನಲ್ಲಿ ಯಾಂತ್ರೀಕೃತ ದೋಣಿಗಳಿಗೆ ರೂ.1.50 ಲಕ್ಷ ಕಿ.ಲೀ. ಡಿಸೀಲ್ ಮನ್ನಾ, ಮಾರಾಟ ತೆರಿಗೆ ಮರುಪಾವತಿಯ ಬದಲು, ಡಿಸೀಲ್ ಡೆಲಿವರಿ ಕೇಂದ್ರದಲ್ಲಿ ಕರ ರಹಿತ ಡಿಸೀಲ್ ವಿತರಣೆಗೆ ಅನುಮೋದನೆ ನೀಡಿರುವುದು ಕರಾವಳಿಯ ಮೀನುಗಾರ ವರ್ಗದಲ್ಲಿ ಮಂದಹಾಸ ಮೂಡಿಸಿದೆ. ಬಜೆಟ್‍ನಲ್ಲಿ ಸದ್ರಿ ಸೌಲಭ್ಯದ ಘೋಷಣೆಗೈದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ – ಕುಯಿಲಾಡಿ ಸುರೇಶ್ ನಾಯಕ್

ವಿಶ್ವ ಮಹಿಳಾ ದಿನಾಚರಣೆಯಂದು ಮಂಡಿಸಲ್ಪಟ್ಟ ಈ ಬಾರಿಯ ರಾಜ್ಯ ಬಜೆಟ್ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಮಹಿಳೆಯರಿಗೆ 6 ತಿಂಗಳ ಹೆಚ್ಚುವರಿ ಹೆರಿಗೆ ರಜೆ, ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ರಿಯಾಯಿತಿ ಪ್ರಯಾಣ, ಎಪಿಎಂಸಿಯಲ್ಲಿ ಮಹಿಳಾ ಮೀಸಲಾತಿ, ಮಹಿಳಾ ಸುರಕ್ಷತೆಗೆ ವಿಶೇಷ ಕ್ರಮ, 2 ಕೋಟಿ ಮಹಿಳೆಯರಿಗೆ ಸ್ವೋಧ್ಯೋಗಕ್ಕಾಗಿ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮುಂತಾದ ಹಲವು ಘೋಷಣೆಗಳೊಂದಿಗೆ ಮಹಿಳಾ ಪರ ಬಜೆಟ್ ಎನಿಸಿದರೆ ಹೊಸ ಮಾರುಕಟ್ಟೆಗಳ ವಿಸ್ತರಣೆ, ಆಹಾರ ಸಂಸ್ಕರಣಾ ಘಟಕ ಸ್ಥಾಪನೆ, ಸಾವಯವ ಕೃಷಿಗೆ ಉತ್ತೇಜನ ಮುಂತಾದ ಘೋಷಣೆಗಳೊಂದಿಗೆ ರೈತ ಪರ ಬಜೆಟ್ ಎನಿಸಿದೆ. ಯಾಂತ್ರೀಕೃತ ದೋಣಿಗೆ ತೆರಿಗೆ ರಹಿತ ಡಿಸೀಲ್, ಯಾವುದೇ ಹೊಸ ತೆರಿಗೆಯನ್ನು ವಿಧಿಸದೆ ಮೂಲಭೂತ ಸೌಕರ್ಯಕ್ಕೆ ಆಧ್ಯತೆ ನೀಡಿದ ಬಜೆಟ್. ಆಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ, ಜಿಲ್ಲೆಗೊಂದು ಗೋಶಾಲೆ ಮುಂತಾದ ಯೋಜನೆಗಳೊಂದಿಗೆ ಆರೋಗ್ಯ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಿದ ದೂರದರ್ಶಿತ್ವದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು ಕುಯಿಲಾಡಿ ತಿಳಿಸಿದ್ದಾರೆ.

ಮಾರ್ಚ್ 07, ಭಾನುವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 23 ಸಲುವ ಮಾಘ ಬಹುಳ ನವಮಿ 25| ಗಳಿಗೆದಿನ ವಿಶೇಷ :ಸೌಕೂರು ರಥನಿತ್ಯ ನಕ್ಷತ್ರ :ಮೂಲಾ 35|| ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.45 ಗಂಟೆ

ಮೇಷ

ಸ್ನೇಹಿತರು ಮತ್ತು ಬಂಧುಗಳೊಂದಿಗಿನ ಸಂಬಂಧಗಳು ಗಟ್ಟಿಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಮನೆಯ ಜವಾಬ್ದಾರಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಮನೆಯವರ ಮನ ಮೆಚ್ಚಿಸಲು ಅನ್ಯ ಮಾರ್ಗ ಸರಿಯಾಗಲಾರದು.

ವೃಷಭ

ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಮಾಜ ಕಲ್ಯಾಣ ಕಾರ್ಯಕ್ಕಾಗಿ ನಿಮ್ಮ ಸಲಹೆ ಸಹಕಾರ ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಆದಾಯದಲ್ಲಿ ಹೆಚ್ಚಳ.

ಮಿಥುನ

ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಸರಳ ವಿವಾಹದ ನಿಶ್ಚಯದಿಂದಾಗಿ ಮನೆಯಲ್ಲಿ ಸಂತಸ ಮೂಡಿಸಲಿದ್ದೀರಿ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯಲಿದೆ.

ಕಟಕ

ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿದೆ. ಗುಪ್ತ ಆಸ್ತಿ ಖರೀದಿಯ ಸಾಧ್ಯತೆ ಕಂಡುಬರುತ್ತಿದೆ. ತುರ್ತು ವಿಷಯಗಳ ಬಗ್ಗೆ ಗಮನ ಹರಿಸುವಿರಿ.

ಸಿಂಹ

ಕೆಲಸ ಕಾರ್ಯಗಳಲ್ಲಿ ಪೂರ್ಣ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸುವುದರಿಂದ ನೆಮ್ಮದಿಯನ್ನು ಅನುಭವಿಸಲಿದ್ದೀರಿ.

ಕನ್ಯಾ

ವೃತ್ತಿ ಜೀವನದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಆದಾಯದಲ್ಲಿ ಹೆಚ್ಚಳದ ನಿರೀಕ್ಷೆ ಇದೆ. ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆ ಗಮನಿಸಿ ಸಾಮಾಜಿಕ ಗೌರವ ಪ್ರಾಪ್ತ. ಸಂಗಾತಿಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಉಚಿತ.

ತುಲಾ

ಅನಗತ್ಯ ಮಾತುಕತೆ, ಚರ್ಚೆಗಳಲ್ಲಿ ಭಾಗವಹಿಸದಿರುವುದೇ ಉತ್ತಮ. ವಕೀಲ ವೃತ್ತಿಯಲ್ಲಿರುವವರಿಗೆ ಬಿಡುವಿನ ದಿನವಾಗಲಿದೆ. ಪ್ರಯಾಣ ಪ್ರವಾಸ ಗಳಿಗೆ ಶುಭದಿನವಾಗಲಿದೆ. ಚಿನ್ನಾಭರಣ ವ್ಯಾಪಾರಿಗಳಿಗೆ ವಿಶೇಷ ಲಾಭ .

ವೃಶ್ಚಿಕ

ಬಂಧುವೊಬ್ಬರ ಮನೆಯಲ್ಲಿ ಸಂಜೆಯವರೆಗೂ ವಿಶೇಷ ಸಮಾರಂಭ ಗಳಲ್ಲಿ ಭಾಗಿಯಾಗಿ ಭೋಜನಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಕಂಡು ಬರುತ್ತಿದೆ. ಮನೆಯವರ ವಿಷಯದಲ್ಲಿ ಉದಾಸೀನ ಸಲ್ಲದು.

ಧನು

ನಿಮ್ಮ ರಾಜಕೀಯ ವಿಷಯದಲ್ಲಿ ಬದಲಾವಣೆಯೊಂದನ್ನು ಕಾಣಲಿ ದ್ದೀರಿ. ನಿಮ್ಮ ಪ್ರಭಾವದಿಂದಾಗಿ ನೆರೆ ಹೊರೆಯವರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ.

ಮಕರ

ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಶ್ರಮವಹಿಸಿ ಮಾಡಿದ ಸಾಧನೆಯ ಸಂತಸವನ್ನು ಮನೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಸ್ಥಾನ ಪಲ್ಲಟ ಇಲ್ಲವೇ ಪದೋನ್ನತಿಯಿಂದಾಗಿ ಉತ್ತಮ ಆದಾಯ.

ಕುಂಭ

ಆಭರಣ ತಯಾರಿಕೆ, ಗೃಹಾಲಂಕಾರ ಸಾಮಗ್ರಿ ಮುಂತಾದ ಕರಕುಶಲ ವೃತ್ತಿಗಳಲ್ಲಿ ತೊಡಗಿದವರಿಗೆ ಹೆಚ್ಚಿನ ವರಮಾನ ದೊರಕಲಿದೆ. ನಿರ್ಮಾಣ ಕೆಲಸಗಳು ಚುರುಕು ಪಡೆದುಕೊಳ್ಳುತ್ತವೆ. ಸಂಸಾರದಲ್ಲಿ ನೆಮ್ಮದಿ.

ಮೀನ

ನೌಕರಸ್ಥರಿಗೆ ವಿಶೇಷ ಸ್ಥಾನಮಾನ ದೊರಕಲಿದೆ. ಪದೋನ್ನತಿಯಿಂದಾಗಿ ಆರ್ಥಿಕ ಸುಧಾರಣೆ ಕಾಣಲಿದ್ದೀರಿ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೆಗೆ ಹೊಸ ಸದಸ್ಯರ ಸೇರ್ಪಡೆಯ ಸಂಭ್ರಮ ಸಾಧ್ಯತೆ.

ಮಾರ್ಚ್ 04, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 20 ಸಲುವ ಮಾಘ ಬಹುಳ ಷಷ್ಠಿ 38 ಗಳಿಗೆ. ದಿನ ವಿಶೇಷ :ಮಹಾನಕ್ಷತ್ರ ಪೂರ್ವಾಭಾದ್ರ ಆರಂಭನಿತ್ಯ ನಕ್ಷತ್ರ :ವಿಶಾಖಾ 43 ಗಳಿಗೆ ಮಹಾ ನಕ್ಷತ್ರ :ಪೂರ್ವಾಭಾದ್ರಾ ಋತು :ಶಿಶಿರರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.38 ಗಂಟೆ ಸೂರ್ಯೋದಯ :6.47 ಗಂಟೆ

ಮೇಷ

ಉದ್ಯೋಗದ ವಿಷಯದಲ್ಲಿ ಭಾಗ್ಯೋದಯವಾಗಲಿದೆ. ಮಿತ್ರರಿಂದ ಔದಾರ್ಯ. ಆರ್ಥಿಕ ಅಭಿವೃದ್ಧಿ. ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಕಂಡುಬರುತ್ತಿದೆ. ಸಂಯಮದಿಂದ ಎಲ್ಲವೂ ನಿರಾಳವಾಗಲಿದೆ.

ವೃಷಭ

ವ್ಯವಹಾರದಲ್ಲಿ ಹೊಸ ಯೋಜನೆಯೊಂದನ್ನು ಪ್ರಾರಂಭಿಸುವ ಸಾಧ್ಯತೆ. ಹೊಸ ವ್ಯಕ್ತಿಯೊಬ್ಬರ ಪರಿಚಯವಾಗಲಿದೆ. ಹತ್ತಿ, ನಾರು ವಸ್ತುಗಳ ವ್ಯಾಪಾರಸ್ಥರಿಗೆ ವಿಶೇಷ ಲಾಭ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಯ ಉಂಟಾದೀತು.

ಮಿಥುನ

ಗುತ್ತಿಗೆದಾರರಿಗೆ ಕಲ್ಲು, ಗಣಿ ಕೆಲಸಗಾರರಿಗೆ ಶ್ರೇಯಸ್ಸು. ವಾಹನಾದಿಗಳ ವ್ಯಾಪಾರದಲ್ಲಿ ಅಧಿಕ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಸಂಭ್ರಮಿಸಲಿದ್ದೀರಿ. ವ್ಯಾಜ್ಯಗಳು ಇತ್ಯರ್ಥವಾಗುವ ಸಾಧ್ಯತೆ.

ಕಟಕ

ಉದ್ಯೋಗದಲ್ಲಿ ವಿಶೇಷ ಅನುಕೂಲವಾಗಲಿದೆ. ಬಟ್ಟೆ, ಶೃಂಗಾರ ಸಾಮಗ್ರಿಗಳ ವ್ಯವಹಾರದಲ್ಲಿ ಉತ್ತಮ ಲಾಭ. ಚಿತ್ರನಟರು, ನಿರ್ಮಾಪಕರುಗಳಿಗೆ ಗೌರವಾದರಗಳು ದೊರಕಲಿವೆ. ಮಹಿಳಾ ರಾಜಕಾರಣಿಗಳಿಗೆ ಧನಾಗಮನ.

ಸಿಂಹ

ನಿವೇಶನ ಅಥವಾ ಜಮೀನು ಖರೀದಿ ಸಾಧ್ಯತೆ. ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ನಾನಾ ಮೂಲಗಳಿಂದ ಸಂಪತ್ತನ್ನು ಕ್ರೋಢೀಕರಿಸಲಿದ್ದೀರಿ. ಲೋಹದ ವ್ಯಾಪಾರಿಗಳಿಗೆ ಅನುಕೂಲ.

ಕನ್ಯಾ

ಹಣಕಾಸು ಸಂಸ್ಥೆ ನಡೆಸುವವರಿಗೆ ಮತ್ತು ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾದೀತು. ಕಲಾವಿದರುಗಳಿಗೆ ವಿಶೇಷ ಮನ್ನಣೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ.

ತುಲಾ

ನಿಮ್ಮ ಬುದ್ಧಿಮತ್ತೆ ಬೆಳಕಿಗೆ ಬರಲಿದೆ. ಸಾಮಾಜಿಕ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವ್ಯವಹಾರದಲ್ಲಿ ಯಶಸ್ಸು. ದೇಹಾರೋಗ್ಯ ಉತ್ತಮಗೊಳ್ಳಲಿದೆ. ಆಹಾರಧಾನ್ಯಗಳ ವ್ಯಾಪಾರಸ್ಥರಿಗಳಿಗೆ ವಿಶೇಷ ಅನುಕೂಲ.

ವೃಶ್ಚಿಕ

ಲೆಕ್ಕ ಪರಿಶೋಧಕರಿಗೆ ಉತ್ತಮ ಆದಾಯದೊಂದಿಗೆ ಸಾಮಾಜಿಕ ಮನ್ನಣೆ ದೊರಕುವ ಸಾಧ್ಯತೆ. ಯುವಜನರು ಕಠಿಣ ಸ್ಫರ್ಧೆಗಳನ್ನು ಎದುರಿಸಬೇಕಾದೀತು. ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗ ಎದುರಾಗುವ ಸಾಧ್ಯತೆ.

ಧನು

ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಬಿಡುವಿಲ್ಲದ ಕೆಲಸದೊಂದಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಆರೋಗ್ಯದಲ್ಲಿ ಹೆಚ್ಚಿನ ವೈಪರಿತ್ಯ ಕಂಡುಬರಲಿದೆ. ಮಿತ್ರರಿಂದ ಸ್ವಲ್ಪಮಟ್ಟಿನ ಕಿರಿಕಿರಿ.

ಮಕರ

ನೌಕರಿಯಲ್ಲಿ ಪರಿಶ್ರಮದಿಂದಾಗಿ ಹೆಚ್ಚಿನ ಪ್ರಶಂಸೆ ಅಥವಾ ಪದೋನ್ನತಿಯ ಸಾಧ್ಯತೆ. ನಡವಳಿಕೆಯ ವಿಚಾರದಲ್ಲಿ ಹಿರಿಯರಿಂದ ವಿರೋಧ. ವಿಪರೀತ ಧನವ್ಯಯ. ಸಾಲದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ

ನೌಕರಿಯಲ್ಲಿರುವವರಿಗೆ ಅನಿರೀಕ್ಷಿತ ವರ್ಗಾವಣೆ ಅಥವಾ ಸ್ಥಾನ ಪಲ್ಲಟ ಸಾಧ್ಯತೆ. ಮನೆಯಲ್ಲಿ ಶುಭ ಸಮಾರಂಭ ಏರ್ಪಡಿಸಲಿದ್ದೀರಿ. ಅಲಂಕಾರಿಕ ವಸ್ತುಗಳ ಖರೀದಿ ಮಾಡಲಿದ್ದೀರಿ. ಸಂಗಾತಿಯಿಂದ ಉತ್ತಮ ಸಹಕಾರ.

ಮೀನ

ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸ್ಥಾನ ಬದಲಾವಣೆ ಸಾಧ್ಯತೆ. ರೈತಾಪಿವರ್ಗದವರಿಗೆ ಆತಂಕದ ಕ್ಷಣಗಳು ಎದುರಾದೀತು. ಉದ್ಯೋಗ ಮತ್ತು ವ್ಯವಹಾರಸ್ಥರಿಗೆ ಉನ್ನತಿ . ದೊಡ್ಡ ದೊಡ್ಡ ಸಾಹಸೀ ಕೆಲಸಕ್ಕೆ ಕೈಹಾಕಲಿದ್ದೀರಿ.

ಮಾರ್ಚ್ 03, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘಮಾಸ, ಕೃಷ್ಣಪಕ್ಷ
ವಾರ: ಬುಧವಾರ,
ತಿಥಿ: ಪಂಚಮಿ
ನಕ್ಷತ್ರ: ಸ್ವಾತಿ ನಕ್ಷತ್ರ
ರಾಹುಕಾಲ: 12:35 ರಿಂದ 2:05
ಗುಳಿಕಕಾಲ: 11:06 ರಿಂದ 12,35
ಯಮಗಂಡಕಾಲ: 8::07 ರಿಂದ 09:36

ಮೇಷ

ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಕಾರ್ಯನಿಮಿತ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ. ಮನೆಯಲ್ಲಿ ಸಂಭ್ರಮದ ವಾತಾವರಣ.

ವೃಷಭ

ಶೃಂಗಾರ ಸಾಮಗ್ರಿಗಳು, ಸೌಂದರ್ಯವರ್ಧಕಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ. ನೌಕರಿಯಲ್ಲಿ ಬಡ್ತಿಯಿಂದಾಗಿ ಉತ್ತಮ ಸ್ಥಾನಮಾನ ಆದಾಯ ಲಭಿಸಲಿದೆ. ಉತ್ತಮ ಆರೋಗ್ಯ. ಜನಮನ್ನಣೆಗೆ ಭಾಜನರಾಗಲಿದ್ದೀರಿ.

ಮಿಥುನ

ಸಹಕಾರ ಸಂಘ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಯನ್ನು ಹೊಂದುವಲ್ಲಿ ನಿಮ್ಮ ಕೆಲಸಗಳು ನೆರವಾಗಲಿವೆ. ಮನೆಯಲ್ಲಿ ಹಬ್ಬದ ವಾತಾವರಣ. ಕಾರ್ಯ ಸಾಧನೆಗಾಗಿ ದೇವೀ ಆರಾಧನೆ ಮಾಡಿ.

ಕಟಕ

ಸಂಶೋಧನಾ ಕಾರ್ಯಗಳಲ್ಲಿ ತೊಡಗಿದವರಿಗೆ ಹೊಸ ಸಂಶೋಧನೆಗೆ ಆರ್ಥಿಕ ಸಹಕಾರದ ಕೊರತೆ ಎದುರಾದೀತು. ಕೃಷಿ ಕೆಲಸಗಳು ನಿರ್ವಿಘ್ನವಾಗಿ ನಡೆಯಲಿದೆ.

ಸಿಂಹ

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ವಿವಾಹದ ವಿಷಯದಲ್ಲಿ ನೇರ ಮಾತುಕತೆಯಿಂದಾಗಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಶುಭ. ವೈದ್ಯರಿಗೆ ಹೆಚ್ಚಿನ ಆದಾಯ.

ಕನ್ಯಾ

ಹೊಸ ಆದಾಯ ಮೂಲವನ್ನು ಕಂಡುಕೊಳ್ಳುವಿರಿ. ಕಲಾವಿದರು, ನಟರು, ಸಂಗೀತಗಾರರಿಗೆ ಉತ್ತಮ ದಿನವಾಗಿದ್ದು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ತುಲಾ

ರಕ್ಷಣಾ ಕಾರ್ಯದಲ್ಲಿ ತೊಡಗಿದವರಿಗೆ ತೊಂದರೆಗಳು ಎದುರಾಗುವ ಸಾಧ್ಯತೆ. ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ವೃಶ್ಚಿಕ

ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ವಿಶೇಷ ಗೌರವ ಮನ್ನಣೆ. ಮಾತುಗಳಿಗೆ ಮನ್ನಣೆ ಹೊಂದುವಿರಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರದಿಂದಾಗಿ ಕಾರ್ಯಬಾಹುಳ್ಯದ ನಡುವೆಯೂ ನೆಮ್ಮದಿ.

ಧನು

ಗುತ್ತಿಗೆ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಆದಾಯ. ರಾಜಕಾರಣಿಗಳ ಮಾತಿಗೆ ಮರುಳಾಗುವ ಸಾಧ್ಯತೆ. ಹಿತಶತ್ರುಗಳ ಭರವಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮನೆಯಲ್ಲಿ ಸಂತಸದ ವಾತಾವರಣ.

ಮಕರ

ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಗೌರವಾದರಗಳು ಲಭಿಸಲಿದೆ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ದೊರೆಯುವುದು. ಪ್ರಶಸ್ತಿ ಫಲಕಗಳಿಗೆ ಭಾಜನರಾಗುವ ಸಾಧ್ಯತೆ.

ಕುಂಭ

ಆದಾಯ–ಖರ್ಚುಗಳ ಬಗ್ಗೆ ಗಮನ ಅಗತ್ಯ. ಮಿತವಾದ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ. ಸಂಸಾರದಲ್ಲಿ ನೆಮ್ಮದಿ. ವಿಶೇಷ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಮೀನ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ಸಂಪಾದನೆಯಲ್ಲಿ ಏರುಮುಖವನ್ನು ಕಾಣುವಿರಿ. ವಾದವಿವಾದಗಳು ಬಗೆಹರಿದು ನಿರಾಳತೆ.

ಮಾರ್ಚ್ 02, ಮಂಗಳವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣಪಕ್ಷ.
ವಾರ: ಮಂಗಳವಾರ, ತಿಥಿ: ಚತುರ್ಥಿ
ನಕ್ಷತ್ರ: ಚಿತ್ತ
ರಾಹುಕಾಲ: 03:34 ರಿಂದ 5:03
ಗುಳಿಕಕಾಲ:12 35 ರಿಂದ 2:05
ಯಮಗಂಡಕಾಲ: 9:37 ರಿಂದ 11 :06

ಮೇಷ

ತೊಂದರೆ, ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ವಿಶೇಷ ಕಾರ್ಯಕ್ರಮದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಗೆಳೆಯರೊಂದಿಗೆ ಸಂತಸದ ದಿನವನ್ನಾಗಿಸಿಕೊಳ್ಳುವಿರಿ.

ವೃಷಭ

ಹಿತ ಮಿತವಾದ ಮಾತುಗಳಿಂದಾಗಿ ಜನಮನ ಗೆಲ್ಲುವಿರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ಅತ್ಯಂತ ಯಶಸ್ಸನ್ನು ಕಾಣುವ ದಿನವಾಗಿ ಕಂಡುಬರುತ್ತಿದೆ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ನೆನಪಿಸಿಕೊಳ್ಳಿ.

ಮಿಥುನ

ನಿಮ್ಮ ಬಹುದಿನದ ಬಯಕೆಯನ್ನು ವಿಶ್ವಾಸಿಕರಲ್ಲಿ ಸಮಾಲೋಚನೆಯ ಮೂಲಕ ಕಾರ್ಯರೂಪಕ್ಕೆ ತರಲಿದ್ದೀರಿ. ಇದರಿಂದ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗ ವ್ಯವಹಾರದ ವಿಷಯದಲ್ಲಿ ಒಂದು ನಿರ್ಣಯಕ್ಕೆ ಬರಲಿದ್ದೀರಿ.

ಕಟಕ

ಕೆಟ್ಟ ಯೋಚನೆಗಳನ್ನು ಬಿಟ್ಟು ಉತ್ತಮ ಚಿಂತನೆಯನ್ನು ರೂಢಿಸಿಕೊಳ್ಳುವುದು ಉತ್ತಮ. ನಿಮ್ಮ ಹಳೆಯ ಯೋಜನೆಗಳನ್ನು ನವೀಕರಿಸುವ ಸಾಧ್ಯತೆ ಕಂಡುಬರುತ್ತಿದೆ. ಆಸ್ತಿಪಾಸ್ತಿಗಳ ಸುಧಾರಣೆಗೆ ಮುಂದಾಗುವಿರಿ.

ಸಿಂಹ

ಇಂದು ಅತ್ಯಂತ ಆತ್ಮವಿಶ್ವಾಸದಿಂದ ಕೆಲಸ–ಕಾರ್ಯಗಳನ್ನು ನಿರ್ವಹಿಸುವಿರಿ. ಪ್ರಭಾವಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯನಿರ್ವಹಿಸುವುದು ಒಳಿತು.

ಕನ್ಯಾ

ಸಂತಸದ ದಿನವಾಗಿರುವುದು. ಜಾಣತನ ಮತ್ತು ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರಗಳು ದೊರಕುವವು. ಮಿತಿ ಮೀರಿದ ಉತ್ಸಾಹದಿಂದ ತೊಂದರೆ ಎದುರಾದೀತು. ಯೋಚಿಸಿ ಮುಂದಡಿ ಇಡುವುದು ಉತ್ತಮ.

ತುಲಾ

ಉದ್ಯೋಗ/ ಉದ್ಯಮಗಳಿಗೆ ಸಂಬಂಧಿಸಿದಂತೆ ಆತ್ಮೀಯರೊಂದಿಗೆ ಸಮಾಲೋಚನೆ ನಡೆಸುವಿರಿ. ಆರ್ಥಿಕ ಅನುಕೂಲಕ್ಕಾಗಿ ಹೊಸ ಯೋಜನೆ ರೂಪಿಸುವ ಸಾಧ್ಯತೆ. ಹಿರಿಯರ ಆರೋಗ್ಯದ ಕಡೆ ಗಮನ ಅಗತ್ಯ.

ವೃಶ್ಚಿಕ

ಮುಂದಿನ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಹಿಡಿತವನ್ನು ಕಂಡುಕೊಳ್ಳುವಿರಿ. ಅತ್ಯಂತ ಗಮನಾರ್ಹವಾದ ಸಾಧನೆಗಾಗಿ ಶ್ರಮಿಸುವಿರಿ. ದೂರದ ಪ್ರಯಾಣದ ಸಾಧ್ಯತೆ.

ಧನು

ನಿಮ್ಮನ್ನು ಅವಲಂಬಿಸಿರುವವರಿಗೆ ಭರವಸೆಯನ್ನು ಮೂಡಿಸುವಿರಿ. ರಕ್ಷಣಾ ಕಾರ್ಯಗಳಲ್ಲಿರುವವರು ಉತ್ತಮ ಮಾನ್ಯತೆ ಗಳಿಸುವ ಸಾಧ್ಯತೆ. ಆತಂಕಗಳೆಲ್ಲವೂ ದೂರವಾಗಿ ಸ್ಥಿರ ಮನಸ್ಸಿನಿಂದ ಸಂತಸ ಹೊಂದುವಿರಿ.

ಮಕರ

ಕೈಬಿಟ್ಟ ಕಾರ್ಯದಲ್ಲಿ ಅನಿರೀಕ್ಷಿತವಾಗಿ ಅವಕಾಶ ದೊರೆತು ಯಶಸ್ಸು. ವಿವಾಹಾದಿ ಮಂಗಳ ಕಾರ್ಯಗಳ ಪ್ರಸ್ತಾಪ ಮಾಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪಮಟ್ಟಿನ ಆಡಚಣೆ ತಲೆದೋರುವ ಸಾಧ್ಯತೆ.

ಕುಂಭ

ವಿದ್ಯಾಭ್ಯಾಸದಲ್ಲಿ ತೊಡಗಿರುವವರಿಗೆ ಉತ್ತಮ ಪ್ರಗತಿ. ಯೋಜಿತ ಕಾರ್ಯಗಳಲ್ಲಿನ ಆತಂಕಗಳು ದೂರವಾಗಿ ಯಶಸ್ಸು. ಉದರ ಸಂಬಂಧಿ ತೊಂದರೆಗಳು ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ.

ಮೀನ

ಒಂದು ವಿಷಯದ ಬಗ್ಗೆ ಅನೇಕ ಬಾರಿ ಯೋಚಿಸಿ, ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೀರಿ. ನಿಮ್ಮ ನಿರ್ಧಾರವು ಹುಸಿಯಾಗದೇ ಫಲ ನೀಡುವುದು. ಯೋಜನೆಯ ಕುರಿತು ಹೆಚ್ಚಿನ ಜ್ಞಾನಕ್ಕಾಗಿ ಅನ್ಯರೊಂದಿಗೆ ಚರ್ಚಿಸುವ ಸಾಧ್ಯತೆ.

Design a site like this with WordPress.com
Get started