ಮಾರ್ಚ್ 25,ಗುರುವಾರ,2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಆಶ್ಲೇಷ ನಕ್ಷತ್ರ
ಶುಕ್ಲ ಪಕ್ಷ, ಏಕಾದಶಿ/ದ್ವಾದಶಿ, ಗುರುವಾರ,

ರಾಹುಕಾಲ: 2:00 ರಿಂದ3:31
ಗುಳಿಕಕಾಲ: 9 :27ರಿಂದ 10:58
ಯಮಗಂಡಕಾಲ: 06:24ರಿಂದ 07:56

ಮೇಷ

ಉದ್ಯೋಗದಲ್ಲಿ ನೆಮ್ಮದಿ ತರುವ ದಿನ. ಶುಭ ಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿ ಮಾಡುವ ಸಾಧ್ಯತೆ. ಗೊಂದಲದ ಮನಃಸ್ಥಿತಿ. ಹಿರಿಯರ ಸಾಂತ್ವನದ ಮಾತುಗಳಿಂದಾಗಿ ಆತ್ಮಸ್ಥೈರ್ಯ ವೃದ್ಧಿ.

ವೃಷಭ

ವಿವಾಹಾಪೇಕ್ಷಿತರಿಗೆ ವಿವಾಹ ಕೂಡಿಬರುವ ಸಾಧ್ಯತೆ. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳಿಂದ ಹೆಚ್ಚಿನ ಶ್ರಮ ಅಗತ್ಯ. ಸಾಲದಿಂದ ಮುಕ್ತಿ ಹೊಂದಲಿದ್ದೀರಿ. ಕನ್ಯೆಯರಿಗೆ ಮಾನಸಿಕ ಗೊಂದಲದ ದಿನ.

ಮಿಥುನ

ಕಮಿಷನ್ ವ್ಯವಹಾರದಿಂದ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರಿಳಿತ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು.

ಕಟಕ

ಕೌಟುಂಬಿಕ ಕಲಹಗಳು ಇತ್ಯರ್ಥ. ಬಹು ನಿರೀಕ್ಷಿತ ವ್ಯವಹಾರವೊಂದರಲ್ಲಿ ಯಶಸ್ಸು. ಸಂಗಾತಿಯ ನೆಮ್ಮದಿಯ ಮಾತುಗಳಿಂದ ಸಂತೋಷಗೊಳ್ಳುವಿರಿ. ಮಕ್ಕಳ ಆರೋಗ್ಯದೆಡೆಗೆ ಗಮನವಿರಲಿ.

ಸಿಂಹ

ಸೈನಿಕರಿಗೆ, ಆರಕ್ಷಣಾ ಕೆಲಸದಲ್ಲಿ ತೊಡಗಿಕೊಂಡವರಿಗೆ ಬಿಡುವಿಲ್ಲದ ದಿನ. ಜೀವನದಲ್ಲಿ ಸಾಧನೆಯೊಂದನ್ನು ಮಾಡಿದ ತೃಪ್ತಿ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉನ್ನತ ಪದವಿಯನ್ನು ಹೊಂದುವ ಲಕ್ಷಣ ಕಂಡುಬರುತ್ತಿದೆ.

ಕನ್ಯಾ

ಕನ್ಯೆಯರಿಗೆ ವಿಶೇಷ ಉಡುಗೊರೆ ಸ್ವೀಕರಿಸುವ ಅವಕಾಶ. ಕಾರ್ಯನೈಪುಣ್ಯತೆಯಿಂದಾಗಿ ಸ್ನೇಹಿತರ ನಡುವೆ ಗೌರವಕ್ಕೆ ಪಾತ್ರರಾಗಲಿದ್ದೀರಿ. ಉದ್ಯೋಗ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ. ರೈತರಿಗೆ ಸಂತೋಷದ ದಿನ.

ತುಲಾ

ಸಾಮಾಜಿಕ ಗೌರವ ಪ್ರಾಪ್ತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ರಾಜಕೀಯ ವ್ಯಕ್ತಿಗಳಿಗೆ ಇರುಸು ಮುರುಸು. ಸಾಂಸಾರಿಕವಾಗಿ ಸಮಾಧಾನ. ತಾಂತ್ರಿಕ ವಿದ್ಯಾರ್ಥಿಗಳಿಗೆ ನೈಪುಣ್ಯತೆಯ ಬಗ್ಗೆ ಹೆಮ್ಮೆಯ ದಿನ.

ವೃಶ್ಚಿಕ

ರಾಜಕಾರಣಿಗಳಿಗೆ ಒತ್ತಡದ ದಿನ. ಕಾರ್ಯಬಾಹುಳ್ಯದಿಂದ ಸ್ವಲ್ಪಮಟ್ಟಿನ ವಿರಾಮ ದೊರಕಿ ಮಾನಸಿಕ ನೆಮ್ಮದಿ. ಸಂಸಾರದೊಂದಿಗೆ ಸಂತಸದ ಪ್ರಯಾಣ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಪುರಸ್ಕಾರ.

ಧನು

ಸರ್ಕಾರಿ ನೌಕರಿಯಲ್ಲಿರುವವರಿಗೆ ಕಾರ್ಯ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳತೆ ಮೂಡಿಬರಲಿದೆ. ಮಿತ್ರ ವೃಂದದವರಿಂದ ಶುಭ ವಾರ್ತೆ. ಮಿತ ವ್ಯಯ ಮಾಡುವಿರಿ. ಆರ್ಥಿಕ ಅನುಕೂಲತೆ ಕೂಡಿಬರಲಿದೆ.

ಮಕರ

ಕಾರ್ಖಾನೆ, ಕೃಷಿ ಕ್ಷೇತ್ರದ ಕೆಲಸಗಾರರಿಗೆ ಕಾರ್ಯಸಿದ್ಧಿಯಿಂದಾಗಿ ಸಮಾಧಾನಕರ ದಿನ. ವಿಶೇಷ ಸಮಾರಂಭವೊಂದರಲ್ಲಿ ಭಾಗವಹಿಸುವ ಸಾಧ್ಯತೆ. ವಾತ ಸಂಬಂಧಿ ಬಾಧೆಯಿಂದ ಸುಧಾರಿಸಿಕೊಳ್ಳಲಿದ್ದೀರಿ.

ಕುಂಭ

ಮನಸ್ಸಿನಲ್ಲಿ ಗೊಂದಲಕರ ವಾತಾವರಣ ಕಂಡುಬರುತ್ತದೆ. ಸಮಾಧಾನಕರ ನಡವಳಿಕೆಯಿಂದಾಗಿ ಸಂಸಾರದಲ್ಲಿ ಸಂತಸ ಮೂಡಿಬರಲಿದೆ. ಮಕ್ಕಳಿಂದ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ.

ಮೀನ

ನ್ಯಾಯ ತೀರ್ಮಾನ ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಿರಿ. ತೈಲ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಸಕಾಲಿಕ ನೆರವಿನಿಂದಾಗಿ ಸಂತೋಷದ ವಾತಾವರಣ.

ಮಾರ್ಚ್ 23, ಮಂಗಳವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ: ನವಮಿ,
ನಕ್ಷತ್ರ: ಪುನರ್ವಸು,
ರಾಹುಕಾಲ:3.32 ರಿಂದ 5.03
ಗುಳಿಕಕಾಲ :12.30 ರಿಂದ 2.01
ಯಮಗಂಡಕಾಲ :9.28 ರಿಂದ 10.59

ಮೇಷ

ನಿರಾಯಾಸವಾಗಿ ಕೆಲಸ ಕಾರ್ಯಗಳನ್ನು ಸಾಧಿಸಲಿದ್ದೀರಿ. ಸಂಘ ಸಂಸ್ಥೆಗಳ ಸಹಕಾರವು ದೊರೆತು ಕಾರ್ಯಾನುಕೂಲ. ಅಧ್ಯಯನಶೀಲರು ಮುನ್ನಡೆ ಕಂಡುಕೊಳ್ಳುವಿರಿ. ಮಾನಸಿಕ ಶಾಂತಿ, ನೆಮ್ಮದಿ ದೊರಕಲಿದೆ.

ವೃಷಭ

ವ್ಯಾಪಾರದಲ್ಲಿ ವಿಶೇಷ ಲಾಭ. ಪ್ರೀತಿಪಾತ್ರರ ಭೇಟಿಯಿಂದ ಮನಸ್ಸಿನಲ್ಲಿ ಉಂಟಾದ ಆತಂಕಗಳು ಶಮನ. ಉದ್ಯೋಗದಲ್ಲಿರುವವರಿಗೆ ಸ್ವಲ್ಪಮಟ್ಟಿನ ಕಿರಿ ಕಿರಿ ಸಾಧ್ಯತೆ.

ಮಿಥುನ

ವ್ಯವಹಾರದಲ್ಲಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ವಿನಾಕಾರಣ ಮನೆ ಮಂದಿಯೊಂದಿಗಿನ ದುಡುಕಿನಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ. ಸಂಗಾತಿಯ ಸಮಾಧಾನದಿಂದ ಅನುಕೂಲಕರ ವಾತಾವರಣ.

ಕಟಕ

ನಿರೀಕ್ಷೆಯಂತೆ ನಿತ್ಯದ ಕೆಲಸ ಕಾರ್ಯಗಳು ಸಾಗಿ ಜೀವನಾಧಾರ ಮೂಡಿಸಲಿದೆ. ಕ್ರೀಡಾಪಟುಗಳಿಗೆ ಯಶಸ್ಸಿನ ದಿನವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಅನುಕೂಲ. ಆರೋಗ್ಯದಲ್ಲಿ ಸುಧಾರಣೆ.

ಸಿಂಹ

ಹೊಸ ವಾಹನವೊಂದರ ಖರೀದಿ ಮಾಡುವ ಸಲುವಾಗಿ ಮಿತ್ರರೊಂದಿಗೆ ಚರ್ಚೆ. ಜಮೀನು ಅಥವಾ ನಿವೇಶನ ಖರೀದಿ ಮಾಡುವ ಆಲೋಚನೆ ಕೈಗೂಡುವ ಸಾಧ್ಯತೆ. ಅಲ್ಪ ಪ್ರಮಾಣದ ಕಿರಿಕಿರಿ ಉಂಟಾದೀತು.

ಕನ್ಯಾ

ಬಹುದಿನಗಳಿಂದ ನಡೆಯುತ್ತಿದ್ದ ತಂಟೆ ತಕರಾರುಗಳು ಬಗೆಹರಿದು ನಿಶ್ಚಿಂತರಾಗಲಿದ್ದೀರಿ. ಕೋಪ ತಾಪಗಳಿಂದಾಗಿ ವ್ಯವಹಾರದಲ್ಲಿ ಹಿನ್ನಡೆ. ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಿ.

ತುಲಾ

ಉದ್ಯೋಗದಲ್ಲಿ ಒತ್ತಡದ ವಾತಾವರಣದಿಂದಾಗಿ ಮಾನಸಿಕ ಚಂಚಲತೆ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ಮಕ್ಕಳೊಂದಿಗೆ ವೃಥಾ ವಾಗ್ವಾದ ಸಲ್ಲದು. ಆರೋಗ್ಯದ ಕಡೆ ಗಮನ ವಹಿಸುವುದು ಅಗತ್ಯ.

ವೃಶ್ಚಿಕ

ಧೈರ್ಯದ ನಡೆಯಿಂದಾಗಿ ಕಾರ್ಯ ಕಲಾಪಗಳು ಸರಾಗವಾಗಿ ಸಾಗಲಿವೆ. ವ್ಯಾಪಾರದಲ್ಲಿ ತೊಡಗಿರುವವರ ಲಾಭದಲ್ಲಿ ವೃದ್ಧಿ. ಆತ್ಮೀಯರೊಂದಿಗೆ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದೀರಿ.

ಧನು

ಹೊಸ ಹೊಸ ವಿಚಾರಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ ಮುಂದುವರೆಯುವುದರಿಂದ ಯಶಸ್ಸು. ಸಂತೋಷದ ಸುದ್ದಿಯೊಂದನ್ನು ಕೇಳಲಿದ್ದೀರಿ. ಸಾಮಾಜಿಕ ಗೌರವಾದರಗಳು ಪ್ರಾಪ್ತಿ.

ಮಕರ

ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಸಲ್ಯ ಮನೋಭಾವ ಸಲ್ಲದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಅಡಚಣೆ ಸಾಧ್ಯತೆ. ನಿಮ್ಮ ತಪ್ಪುಗಳು ಅರಿವಾಗುವುದರಿಂದ ಹಳೆಯ ವೈಷಮ್ಯಗಳು ದೂರ.

ಕುಂಭ

ಉದ್ಯೋಗದಲ್ಲಿ ಪ್ರಗತಿ. ಆರೋಗ್ಯದಲ್ಲಿ ವ್ಯತ್ಯಯ. ಪ್ರೀತಿಪಾತ್ರರೊಬ್ಬ ಭೇಟಿಯಿಂದಾಗಿ ಮಾನಸಿಕ ನೆಮ್ಮದಿ. ಲೇವಾದೇವಿ ವ್ಯವಹಾರಸ್ಥರಿಗೆ ಉತ್ತಮ ಲಾಭ ತರುವ ದಿನವಾಗಿದೆ.

ಮೀನ

ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ಉದ್ಯೋಗಸ್ಥರಿಗೆ ಬಡ್ತಿ ಅಥವಾ ಉನ್ನತಿಯನ್ನು ನಿರೀಕ್ಷಿಸಬಹುದು. ವ್ಯಾಪಾರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಹಿತೈಷಿಗಳೊಬ್ಬರ ಆಗಮನ ಸಾಧ್ಯತೆ.

ಮಾರ್ಚ್ 22, ಸೋಮವಾರ, 2021 :ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ : ಅಷ್ಠಮಿ,
ನಕ್ಷತ್ರ: ಆರಿದ್ರ,
ರಾಹುಕಾಲ: 7.57 ರಿಂದ 9.28
ಗುಳಿಕಕಾಲ: 2.01 ರಿಂದ 3.32
ಯಮಗಂಡಕಾಲ: 10.59 ರಿಂದ 12.30

ಮೇಷ

ಉದ್ಯೋಗಸ್ಥ ಮಹಿಳೆಯರಿಗೆ ಆದಾಯದಲ್ಲಿ ವೃದ್ಧಿ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ಪಡೆಯುವಿರಿ. ಧಾನ್ಯ ಮಾರಾಟಗಾರರಿಗೆ ಆದಾಯದಲ್ಲಿ ಹೆಚ್ಚಳ.

ವೃಷಭ

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರಕುವ ಸಾಧ್ಯತೆ ಇದ್ದು ಸ್ವಯಂ ತರಬೇತಿ ತರಗತಿಗಳನ್ನು ನಡೆಸುವ ಯೋಜನೆಯು ಕೈಗೂಡಲಿದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿನಿಯೋಗ ಮಾಡಲಿದ್ದೀರಿ.

ಮಿಥುನ

ರಾಜಕೀಯ ಉನ್ನತಿಗಾಗಿ ಚಿಂತನ ಮಂತನ ನಡೆಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಸಹೋದರಿಯರಿಗೆ ಹೆಚ್ಚಿನ ಉಡುಗೊರೆ ನೀಡಿ ಸಂತಸ ಪಡಲಿದ್ದೀರಿ.

ಕಟಕ

ಕೇಂದ್ರ ಸರ್ಕಾರದ ಹುದ್ದೆಯೊಂದು ದೊರಕುವ ಸಾಧ್ಯತೆ ಇದ್ದು ತನ್ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಆದಾಯದಲ್ಲಿ ಹೆಚ್ಚಳದಿಂದಾಗಿ ನೆಮ್ಮದಿ. ಹಿರಿಯರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ.

ಸಿಂಹ

ಅರೆಕಾಲಿಕ ನೌಕರರಿಗೆ ಸುದಿನ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನ. ಮಗಳ ಸಲುವಾಗಿ ಉಳಿತಾಯ ಮಾಡುವುದು ಉತ್ತಮ. ಸಂಗಾತಿಯ ಆಲೋಚನೆಗಳಿಗೆ ಪುರಸ್ಕಾರ ನೀಡಿ.

ಕನ್ಯಾ

ಆರ್ಥಿಕ ಸದೃಢತೆಯಿಂದಾಗಿ ಆಸ್ತಿ ಖರೀದಿ ಮಾಡುವ ಸಾಧ್ಯತೆ. ವಿದ್ಯಾರ್ಥಿಗಳು ಮುಂದಿನ ಅಭ್ಯಾಸದ ವಿಚಾರದಲ್ಲಿ ಅತ್ಯಂತ ಕುತೂಹಲ ಮತ್ತು ಮುತುವರ್ಜಿ ವಹಿಸಲಿದ್ದೀರಿ. ರೈತಾಪಿ ವರ್ಗದವರಿಗೆ ಉತ್ತಮ ಬೆಳೆಯ ನಿರೀಕ್ಷೆ.

ತುಲಾ

ವಿದೇಶಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುವ ವಿಚಾರದಲ್ಲಿ ಸ್ನೇಹಿತರು ಬಂಧು ಬಾಂಧವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಾಪಾಡುವಿರಿ. ಬರಹಗಾರರೊಬ್ಬರ ಅನಿರೀಕ್ಷಿತ ಭೇಟಿ.

ವೃಶ್ಚಿಕ

ಸಗಟು ವ್ಯಾಪಾರಗಳಲ್ಲಿ ಗಣನೀಯ ಪ್ರಗತಿ ಕಂಡುಬರಲಿದ್ದು ಆದಾಯದಲ್ಲಿ ಹೆಚ್ಚಳ. ನೌಕರಿಯಲ್ಲಿರುವವರಿಗೆ ಬಿಡುವು ದೊರಕುವ ಸಾಧ್ಯತೆ. ಮಕ್ಕಳಿಗಾಗಿ ಖರ್ಚು. ಸಂಗಾತಿಯ ಸಹಕಾರದಿಂದಾಗಿ ಸಂತಸ.

ಧನು

ಚಿನ್ನ, ಬೆಳ್ಳಿ ಮುಂತಾದ ಆಭರಣ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ. ಕೃಷಿ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಬೇಕಾದೀತು. ಸಿಹಿ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರದಿಂದಾಗಿ ಲಾಭ.

ಮಕರ

ವಾಹನ ಮಾರಾಟದಲ್ಲಿ ತೊಡಗಿದವರಿಗೆ ಉತ್ತಮ ಲಾಭ. ಕಳೆದುಕೊಂಡ ವಸ್ತುವೊಂದು ಪುನಃ ಕೈ ಸೇರುವ ಸಾಧ್ಯತೆ. ಕ್ರೀಡಾಪಟುಗಳಿಗೆ ಉತ್ತಮ ಆಸಕ್ತಿ ಮೂಡುವುದರ ಜೊತೆಗೆ ಅವಕಾಶಗಳು ತೆರೆದುಕೊಳ್ಳಲಿವೆ.

ಕುಂಭ

ಕುಟುಂಬದಲ್ಲಿ ಸುಖ, ಸಂತೋಷ ನೆಮ್ಮದಿ ಕಾಣಲಿದ್ದೀರಿ. ಹಿತೈಷಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ.

ಮೀನ

ಸರ್ಕಾರದಿಂದ ಆಗಬೇಕಾದ ಕೆಲಸದ ವಿಚಾರದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಬಾಧೆ ನಿವಾರಣೆ. ಸಹೋದರರಿಂದ ಉತ್ತಮ ಸಹಾಯ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಚಿಂತೆ ಎದುರಾಗಲಿದೆ.

ಮಾರ್ಚ್ 21, ಭಾನುವಾರ, 2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ, ತಿಥಿ: ಸಪ್ತಮಿ,
ನಕ್ಷತ್ರ: ಮೃಗಶಿರಾ,
ರಾಹುಕಾಲ: 5.03 ರಿಂದ 6.34
ಗುಳಿಕಕಾಲ: 3.32 ರಿಂದ 5.03
ಯಮಗಂಡಕಾಲ: 12.30 ರಿಂದ 2.01

ಮೇಷ

ನೆನೆಗುದಿಗೆ ಬಿದ್ದ ವಿಷಯವೊಂದರ ಬಗ್ಗೆ ದೃಢ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ. ಸಂಗಾತಿಯೊಂದಿಗೆ ಪ್ರವಾಸ ಹೋಗುವ ಸಾಧ್ಯತೆ.

ವೃಷಭ

ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಸಹಕಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದೀತು.

ಮಿಥುನ

ನ್ಯಾಯಾಂಗದ ಬಗೆಗಿನ ಕಾಳಜಿಯಿಂದಾಗಿ ಹಿಂದೆ ಸರಿಯದ ದೃಢ ನಿರ್ಧಾರ ಒಳಿತನ್ನು ತರಲಿದೆ. ಸ್ಪಷ್ಟ ನಿಲುವಿನಿಂದಾಗಿ ವಿಶೇಷ ಸಾಧನೆಯ ಗರಿಮೆ ನಿಮ್ಮದಾಗಲಿದೆ.

ಕಟಕ

ಪ್ರಾಮಾಣಿಕ ಪ್ರಯತ್ನದಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿವ್ರ್ಯಾಜ ಪರೋಪಕಾರದಿಂದಾಗಿ ಮಾನಸಿಕ ತೃಪ್ತಿ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು.

ಸಿಂಹ

ಕಷ್ಟದಲ್ಲಿರುವವರಿಗೆ ನೆರವು ನೀಡಬೇಕಾದ ಸುಸಂದರ್ಭ ದೊರಕಿ ಧನ್ಯತೆ. ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿ ಮೂಡುವುದು. ಸಮಾರಂಭಗಳಲ್ಲಿ ಭಾಗವಹಿಸಿ ಸಂಭ್ರಮಿಸುವ ಅವಕಾಶ ದೊರೆಯಲಿದೆ.

ಕನ್ಯಾ

ಉದ್ಯೋಗ ಕ್ಷೇತ್ರದಲ್ಲಿ ಒಲುಮೆಯಿಂದಲೇ ಗೆಲವುವನ್ನು ಸಾಧಿಸಲಿದ್ದೀರಿ. ಬದುಕಿಗೊಂದು ಹೊಸ ಬೆಳಕು ಮೂಡಿಬರಲಿದೆ. ಕಾರ್ಯಸಾಧನೆಯಿಂದಾಗಿ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ.

ತುಲಾ

ಬದುಕಿಗೊಂದು ನಿಶ್ಚಿತ ಆಸರೆ ಕಲ್ಪಿಸಿಕೊಳ್ಳಲಿದ್ದೀರಿ. ಆಶಾಕಿರಣ ಮೂಡಿಬರಲಿದೆ. ಉತ್ತಮ ಗುಣದಿಂದಾಗಿ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ. ಕಲಾವಿದರಿಗೆ ಹೆಚ್ಚಿನ ಅನುಕೂಲವಾಗಲಿದೆ.

ವೃಶ್ಚಿಕ

ನೌಕರಿಯಲ್ಲಿರುವವರು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾದೀತು. ನೆರೆಹೊರೆಯವರೊಂದಿಗೆ ಹಿತವಾದ ಮಾತುಕತೆಗಳಿಂದಾಗಿ ಮನ ಗೆಲ್ಲಲಿದ್ದೀರಿ.

ಧನು

ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಾಢ ಚಿಂತನೆ. ಸಾಮರಸ್ಯದ ದೃಢ ಹೆಜ್ಜೆ ಹಾಕುವಿರಿ. ಕೆಲಸ ಕಾರ್ಯಗಳಲ್ಲಿ ಕೌಶಲ್ಯ ಮೆರೆದು ಇತರರ ಪ್ರಶಂಸೆಗೆ ಪಾತ್ರರಾಗುವಿರಿ.

ಮಕರ

ಸ್ವಯಂ ಶಕ್ತಿ, ನಂಬಿಕೆ ವಿಶ್ವಾಸಗಳನ್ನು ನಂಬಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಜಾಣ್ಮೆಯಿಂದಾಗಿ ಅಸಾಧ್ಯವಾದ ಸಾಧನೆ ಮಾಡಲಿದ್ದೀರಿ. ಮನೋಭಿಲಾಷೆಗಳು ಈಡೇರಲಿವೆ.

ಕುಂಭ

ದೃಢವಾದ ಸಂಕಲ್ಪದಿಂದ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡು ಯಶಸ್ಸನ್ನು ಸಾಧಿಸಲಿದ್ದೀರಿ. ಸಮಾಜದ ಸರ್ವತೋಮುಖ ಪ್ರಗತಿಗಾಗಿ ಉತ್ತಮ ಮಾರ್ಗದರ್ಶನ ಮಾಡಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.

ಮೀನ

ಒಳ್ಳೆಯ ಚಿಂತನೆಯಿಂದಾಗಿ ಉತ್ತಮ ಮನಃಸ್ಥಿತಿಯನ್ನು ಕಾಯ್ದುಕೊಳ್ಳುವಿರಿ. ಶಕ್ತ್ಯಾನುಸಾರ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡು ನಿರಾಶರಾಗದೆ ಸಾಧಿಸಲಿದ್ದೀರಿ. ನ್ಯಾಯಕ್ಕಾಗಿ ನಡೆಸಿರುವ ಯತ್ನದಲ್ಲಿ ಸಾಫಲ್ಯ.

ಮಾರ್ಚ್ 20, ಶನಿವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಸಪ್ತಮಿ, ಶನಿವಾರ,
ರೋಹಿಣಿ ನಕ್ಷತ್ರ (ಹಗಲು 4.46)
ಮೃಗಶಿರಾ ನಕ್ಷತ್ರ
ರಾಹುಕಾಲ: 9:28 ರಿಂದ 10:59
ಗುಳಿಕಕಾಲ: 6: 27ರಿಂದ 07:57
ಯಮಗಂಡಕಾಲ: 02:01 ರಿಂದ 03:32

ಮೇಷ

ಕೃಷಿ ಕಾಮಗಾರಿಗಳ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೊಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ.

ವೃಷಭ

ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.

ಮಿಥುನ

ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾದೀತು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಅತಿಯಾದ ಆಯಾಸದಿಂದ ಬಳಲುವಿರಿ.

ಕಟಕ

ಮನೆಯವರ ಅಸಮ್ಮತಿಯ ನಡುವೆಯೂ ದೂರ ಪ್ರಯಾಣ ಮಾಡಬೇಕಾದೀತು. ಪತ್ನಿವರ್ಗದವರಿಂದ ಸಹಾಯ ದೊರಕಲಿದೆ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆ ನಿವಾರಣೆಯಾಗಲಿದೆ.

ಸಿಂಹ

ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.

ಕನ್ಯಾ

ತಂದೆ ತಾಯಿಗಳಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಸಾಧ್ಯತೆ. ಸತ್ಪುರುಷರ ಸಂದರ್ಶನ ಮಾಡುವ ಸಂಭವ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ.

ತುಲಾ

ಜಮೀನಿನ ಕೆಲಸ–ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ.

ವೃಶ್ಚಿಕ

ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಹಿನ್ನಡೆ.

ಧನು

ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.

ಮಕರ

ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ. ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದೀತು. ಉತ್ತಮ ಆದಾಯ. ಪುಸ್ತಕ ಖರೀದಿಗಾಗಿ ವೆಚ್ಚವನ್ನು ಭರಿಸಬೇಕಾದೀತು.

ಕುಂಭ

ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿಯನ್ನು ಉಂಟುಮಾಡಲಿದೆ. ಮಕ್ಕಳ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿದೆ. ಸಾಲದಿಂದ ಮುಕ್ತಿ.

ಮೀನ

ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಅನುಕೂಲ. ರಾಜಕೀಯದಲ್ಲಿ ಮಾನಸಿಕ ದ್ವಂದ್ವ ಏರ್ಪಡಲಿದೆ.

ಮಾರ್ಚ್ 19,ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಶುಕ್ಲ ಪಕ್ಷ,ಷಷ್ಠಿ, ಶುಕ್ರವಾರ, ಕೃತಿಕ ನಕ್ಷತ್ರ/ರೋಹಿಣಿ ನಕ್ಷತ್ರ.
ರಾಹುಕಾಲ 11:00ರಿಂದ 12: 31
ಗುಳಿಕಕಾಲ 07:58 ರಿಂದ 09:29
ಯಮಗಂಡಕಾಲ 3.33 ರಿಂದ 05:04

ಮೇಷ

ಶತ್ರುಭೀತಿ ದೂರವಾಗಿ ನಿರುಮ್ಮಳವೆನ್ನಿಸಲಿದೆ. ವ್ಯವಹಾರಗಳಲ್ಲಿ ಮಕ್ಕಳ ಸಹಕಾರ ದೊರೆಯುವುದು. ಆತ್ಮೀಯರೊಂದಿಗೆ ಸಮಾಲೋಚನೆಯಿಂದ ನೆಮ್ಮದಿ. ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆಯ ಕಾಲ.

ವೃಷಭ

ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ. ವೃತ್ತಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಆರೋಗ್ಯದಲ್ಲಿ ಸುಧಾರಣೆ. ಬಂಧು ಬಾಂಧವರ ಭೇಟಿಯಿಂದಾಗಿ ಮಾನಸಿಕ ನೆಮ್ಮದಿ ಹೊಂದುವಿರಿ.

ಮಿಥುನ

ವಾಹನ, ಯಂತ್ರೋಪಕರಣಗಳಿಂದಾಗಿ ಸ್ವಲ್ಪಮಟ್ಟಿನ ತೊಂದರೆ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಂತಸದ ಸುದ್ದಿಯೊಂದನ್ನು ಸ್ವೀಕರಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕಟಕ

ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಪ್ರೀತಿಪಾತ್ರರ ಭೇಟಿಯಿಂದಾಗಿ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಸಫಲತೆ. ವಿವಾದಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಾಮಾಜಿಕ ಗೌರವಾದರಗಳು.

ಸಿಂಹ

ವಿವಾಹ ಸಂಬಂಧ ವಿರೋಧಿಗಳಿಂದ ಒತ್ತಡವನ್ನು ಎದುರಿಸಬೇಕಾದೀತು. ಕುಟುಂಬ ವರ್ಗದವರಲ್ಲಿ ಸಣ್ಣಪುಟ್ಟ ಮನಸ್ತಾಪ ಕಂಡುಬರುವುದು. ಮಿತ್ರರ ಸಹಕಾರದಿಂದಾಗಿ ಎಲ್ಲವೂ ಸುಗುಮವಾಗಲಿದೆ.

ಕನ್ಯಾ

ಎದೆಗುಂದದ ಧೈರ್ಯದಿಂದಾಗಿ ಕೆಲಸ–ಕಾರ್ಯಗಳಲ್ಲಿ ಅಡಚಣೆಗಳು ನಿವಾರಣೆಯಾಗುವುದು. ಲೇವಾದೇವಿ ವ್ಯವಹಾರದಿಂದ ಅಧಿಕ ಲಾಭ. ಆಪ್ತರ ಭೇಟಿ ಸಂತಸ ನೀಡಲಿದೆ. ವಿಪರೀತ ಖರ್ಚು.

ತುಲಾ

ಒತ್ತಡಗಳ ಪರಿಣಾಮವಾಗಿ ವಿರೋಧಿಗಳು ತಟಸ್ಥರಾಗಲಿದ್ದಾರೆ. ವಾಹನ, ಯಂತ್ರೋಪಕರಣಗಳಿಂದ ನೆಮ್ಮದಿ. ಕುಟುಂಬದಲ್ಲಿನ ಕಿರಿಕಿರಿಯಿಂದ ಹೊರಬಂದು ನೆಮ್ಮದಿಯನ್ನು ಹೊಂದಲಿದ್ದೀರಿ.

ವೃಶ್ಚಿಕ

ಅಧ್ಯಯನದಲ್ಲಿ ಉನ್ನತಿ ಕಾಣುವಿರಿ. ವೃತ್ತಿಜೀವನದಲ್ಲಿ ಪ್ರಗತಿ. ಅಸ್ಥಿರ ಮನಸ್ಸಿನಿಂದಾಗಿ ಭಯ ಮೂಡುವ ಸಾಧ್ಯತೆ. ಪ್ರೀತಿಪಾತ್ರರೊಂದಿಗಿನ ಸಮಾಲೋಚನೆ ಮಾನಸಿಕ ನೆಮ್ಮದಿ ತರಲಿದೆ.

ಧನು

ಸಮಯೋಚಿತವಾಗಿ ಕೈಗೊಂಡ ಕಾರ್ಯಗಳು ಸಂಪೂರ್ಣಗೊಂಡು ಹಿರಿಯರಿಂದ ಮೆಚ್ಚುಗೆ. ಆರೋಗ್ಯದಲ್ಲಿ ಸುಧಾರಣೆ. ಪ್ರಯಾಣದಲ್ಲಿನ ನೆಮ್ಮದಿಯನ್ನು ಸಂಪೂರ್ಣ ಪಡೆದುಕೊಳ್ಳಲಿದ್ದೀರಿ.

ಮಕರ

ಭಿನ್ನಮತ ಬಗೆಹರಿಯುವುದರೊಂದಿಗೆ ಕೆಲಸ–ಕಾರ್ಯಗಳು ಸರಾಗವಾಗಿ ಸಂತಸ ಮೂಡಲಿದೆ. ಭೂ ವ್ಯವಹಾರದಲ್ಲಿ ಹಿರಿಯರ ಸಲಹೆ ಪಡೆದು ಮುಂದುವರೆಯುವುದು ಒಳಿತು. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ.

ಕುಂಭ

ಕೆಲಸದಲ್ಲಿ ಒತ್ತಡ ಎದುರಿಸುವಿರಿ. ವಿಪರೀತ ಶ್ರಮ ವಹಿಸಿ ಕಾರ್ಯನಿರ್ವಹಿಸುವುದರಿಂದಾಗಿ ದೇಹಾಲಸ್ಯ. ಅನಾವಶ್ಯಕ ಓಡಾಟಗಳು ಎದುರಾಗುವ ಸಾಧ್ಯತೆ. ಸಂಗಾತಿಯ ಸಹಕಾರದಿಂದ ನೆಮ್ಮದಿ.

ಮೀನ

ವ್ಯಾಪಾರ ವ್ಯವಹಾರಗಳಲ್ಲಿನ ಲಾಭ ವೃದ್ಧಿಯಾಗಲಿದೆ. ಹರ್ಷ ಮೂಡಿಸುವ ಸಂದೇಶಗಳನ್ನು ಕೇಳುವಿರಿ. ಬಹುದಿನಗಳಿಂದ ಬರಬೇಕಾದ ಬಾಕಿ ಹಣ ಬರಲಿದೆ. ಕುಟುಂಬದಲ್ಲಿ ಶಾಂತ ವಾತಾವರಣ ನೆಲೆಸುವುದು.

ಮಾರ್ಚ್ 18, ಗುರುವಾರ, 2021 : ಇಂದಿನ. ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ಪಂಚಮಿ, ಗುರುವಾರ,
ಭರಣಿ ನಕ್ಷತ್ರ/ಕೃತಿಕಾ ನಕ್ಷತ್ರ,
ರಾಹುಕಾಲ 02:02 ರಿಂದ 3.33
ಗುಳಿಕಕಾಲ 9.30 ರಿಂದ 11:01
ಯಮಗಂಡಕಾಲ 6:29 ರಿಂದ 07:59

ಮೇಷ

ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರಶಂಸೆ. ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರುವುದು ಕ್ಷೇಮ. ಪತ್ರ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ.

ವೃಷಭ

ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ತೊಂದರೆ ಸಾಧ್ಯತೆ. ತಾಯಿಯ ಆಶೀರ್ವಾದದಿಂದ ಜೀವನದಲ್ಲಿ ಅಭಿವೃದ್ಧಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೀರಿ.

ಮಿಥುನ

ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವ ಅವಕಾಶ ಹೊಂದಲಿದ್ದೀರಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಸ್ನೇಹಿತರೆನಿಸಿಕೊಂಡವರಿಂದಲೇ ತೊಂದರೆ ಎದುರಾದೀತು.

ಕಟಕ

ಉನ್ನತ ಹುದ್ದೆಯಲ್ಲಿರುವವರಿಂದ ಅಭಿಮಾನದ ಮಾತುಗಳನ್ನು ಕೇಳಲಿದ್ದೀರಿ. ಮಹಿಳೆಯರ ಇಷ್ಟಾರ್ಥಗಳು ಸಿದ್ಧಿಗೊಂಡು ಮನೋಲ್ಲಾಸ. ನ್ಯಾಯಾಲಯದ ಕಟ್ಟಲೆಗಳು ವಿಳಂಬವಾಗುವ ಸಾಧ್ಯತೆ.

ಸಿಂಹ

ಸಾಮಾಜಿಕ ಗೌರವಗಳು ಪ್ರಾಪ್ತವಾಗುವ ಲಕ್ಷಣ. ಮಿತ್ರರಿಂದ ಸಹಕಾರ ದೊರಕಲಿದೆ. ಅಮೂಲ್ಯ ವಸ್ತುಗಳ ಸಂಗ್ರಹ ಮಾಡಲಿದ್ದೀರಿ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನಗಳ ವಿಚಾರದಲ್ಲಿ ಯಶಸ್ಸು ಸಾಧ್ಯತೆ.

ಕನ್ಯಾ

ನೆರೆಹೊರೆಯವರೊಂದಿಗೆ ವಿನಾಕಾರಣ ವೈಮನಸ್ಸು ಉಂಟಾಗಲಿದೆ. ಸಂಯಮದ ಮಾತುಗಳಿಂದ ಗೌರವ ಪ್ರಾಪ್ತವಾಗಲಿದೆ. ಮಕ್ಕಳನ್ನು ದಿನದ ಮಟ್ಟಿಗೆ ಅತ್ಯಂತ ಜತನದಿಂದ ನೋಡಿಕೊಳ್ಳಿ.

ತುಲಾ

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪಗಳು ಎದುರಾಗುವ ಸಾಧ್ಯತೆ. ಮಹಿಳೆಯರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಬೇರೆಯವರಿಗೆ ಜಾಮೀನಾಗುವುದು ಒಳಿತಲ್ಲ.

ವೃಶ್ಚಿಕ

ಮನೆ ಅಥವಾ ಆಸ್ತಿಯಲ್ಲಿ ವೃದ್ಧಿಯಾಗಲಿದೆ. ಆರ್ಥಿಕ ತೊಂದರೆಯಲ್ಲಿರುವವರಿಗೆ ಜೀವನೋಪಾಯಕ್ಕೆ ಹೊಸ ಮಾರ್ಗವೊಂದು ಗೋಚರವಾಗಲಿದೆ. ರಫ್ತು ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ವ್ಯವಹಾರ.

ಧನು

ಉದ್ಯೋಗ ವ್ಯವಹಾರಗಳು ಉತ್ತಮಗೊಂಡ ಆರ್ಥಿಕ ಬಲವರ್ಧನೆ. ತಾಂತ್ರಿಕ ಯಂತ್ರೋಪಕರಣಗಳನ್ನು ಖರೀದಿಸುವ ಸಾಧ್ಯತೆ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ವಾ ಬಡ್ತಿ ದೊರಕುವ ಸಾಧ್ಯತೆ ಕಂಡುಬರುವುದು.

ಮಕರ

ಕೆಲಸಗಾರರ ಕೊರತೆಯಿಂದಾಗಿ ಕೆಲಸ–ಕಾರ್ಯಗಳಲ್ಲಿ ಅಡಚಣೆ. ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಬಗ್ಗೆ ಪ್ರಯತ್ನ ಸಫಲವಾಗಲಿದೆ. ಸಂಗಾತಿಯೊಂದಿಗೆ ವಿಶೇಷ ಪ್ರಯಾಣವೊಂದನ್ನು ಕೈಗೊಳ್ಳಲಿದ್ದೀರಿ.

ಕುಂಭ

ಆರ್ಥಿಕ ಅಭಿವೃದ್ಧಿಯನ್ನು ಕಾಣಲಿದ್ದೀರಿ. ಅತಿಯಾದ ಕೆಲಸ ಕಾರ್ಯಗಳಿಂದಾಗಿ ನೇತ್ರ ಸಂಬಂಧಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ಬಂಧುಗಳ ಸಹಾಯದಿಂದ ಎದುರಾದ ತಾಪತ್ರಯಗಳಿಗೆ ಪರಿಹಾರ.

ಮೀನ

ರಕ್ಷಣಾಕಾರ್ಯದಲ್ಲಿ ತೊಡಗಿರುವವರಿಗೆ ಬಿಡುವಿಲ್ಲದ ಕೆಲಸದಿಂದ ಬಳಲಿಕೆ. ಜವಾಬ್ದಾರಿಯುತ ಕಾರ್ಯನಿರ್ವಹಣೆಯಿಂದಾಗಿ ಪ್ರಶಂಸೆ. ಮನೆಯವರೆಲ್ಲರೂ ಮೆಚ್ಚುವಂತಹ ಕಾರ್ಯವೊಂದನ್ನು ನಿರ್ವಹಿಸಲಿದ್ದೀರಿ.

ಮಾರ್ಚ್ 16, ಮಂಗಳವಾರ,2021: ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ : ಮಂಗಳವಾರ, ತಿಥಿ : ತೃತೀಯ,
ನಕ್ಷತ್ರ : ಅಶ್ವಿನಿ,
ರಾಹುಕಾಲ: 3.33 ರಿಂದ 5.04
ಗುಳಿಕಕಾಲ: 12.32 ರಿಂದ 2.02
ಯಮಗಂಡಕಾಲ: 9.30 ರಿಂದ 11.01

ಮೇಷ

ಆರ್ಥಿಕ ಸಹಾಯ ದೊರಕಿ ಆಸ್ತಿ ವ್ಯವಹಾರದಲ್ಲಿ ಕೈಹಾಕುವ ಸಾಧ್ಯತೆ. ದಲ್ಲಾಳಿ ವ್ಯವಹಾರದಿಂದ ಉತ್ತಮ ಆದಾಯ. ಗಣಕಯಂತ್ರ ಮುಂತಾದ ಆಧುನಿಕ ಯಂತ್ರಗಳ ವ್ಯವಹಾರ ನಿಮಗೆ ಉತ್ತಮ ಆದಾಯ ತರಲಿದೆ.

ವೃಷಭ

ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ಹಿಂದಿನ ವರ್ಷದ ಕೆಲವು ಕಹಿ ಘಟನೆಗಳಿಗೆ ಇಂದು ಉತ್ತರ ದೊರಕಿಸಿಕೊಳ್ಳಲಿದ್ದೀರಿ. ಮನೆಯಲ್ಲಿ ಸಹೋದರರ ವಿರೋಧವನ್ನು ಎದುರಿಸಬೇಕಾಗಬಹುದು.

ಮಿಥುನ

ಗಣಕಯಂತ್ರ ಮುಂತಾದ ತಾಂತ್ರಿಕ ಉಪಕರಣಗಳ ಮಾರಾಟಗಾರರಿಗೆ ಉತ್ತಮ ಲಾಭ. ಬಂಧುಗಳ ಸಹಕಾರದಿಂದ ಆಸ್ತಿ ಖರೀದಿ ಸಾಧ್ಯತೆ. ಸಂಗಾತಿಯ ಆಸೆಯಂತೆ ದೂರದ ಪ್ರಯಾಣ ಮಾಡಲಿದ್ದೀರಿ.

ಕಟಕ

ಸ್ತ್ರೀಯರಿಗೆ ಅತಿಯಾದ ಕೆಲಸದಿಂದಾಗಿ ದೇಹಾಲಸ್ಯ. ಆಸ್ತಿ ಹಸ್ತಾಂತರ ಮಾಡುವ ಸಾಧ್ಯತೆ. ಸಾಲ ಮುಂಗಡ ಇತ್ಯಾದಿ ವ್ಯವಹಾರದಿಂದ ದಿನದ ಮಟ್ಟಿಗೆ ದೂರವಿರುವುದು ಒಳ್ಳೆಯದು. ಮಕ್ಕಳ ವಿಷಯದಲ್ಲಿ ಸಂತಸ.

ಸಿಂಹ

ಉದ್ಯಮವೊಂದರ ಸ್ಥಾಪನೆಗೆ ಅನುಕೂಲ ದೊರಕಿಸಿಕೊಳ್ಳಲಿದ್ದೀರಿ. ದಕ್ಷತೆಯ ಕಾರ್ಯನಿರ್ವಹಣೆಯಿಂದ ಉದ್ಯಮದಲ್ಲಿ ಯಶಸ್ಸು. ಆರೋಗ್ಯದಲ್ಲಿ ಏರುಪೇರುಗಳನ್ನು ನಿರೀಕ್ಷಿಸಬಹುದು.

ಕನ್ಯಾ

ಕೈಗಾರಿಕೋದ್ಯಮಿಗಳಿಗೆ ಅತ್ಯಂತ ಪ್ರಶಸ್ತವಾದ ದಿನ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಭಾಗವಹಿಸಿ ಗೌರವ ಹೊಂದಲಿದ್ದೀರಿ.

ತುಲಾ

ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯ ದೊರೆಯಲಿದೆ. ನೌಕರಿಯಲ್ಲಿರುವವರಿಗೆ ಕಿರಿಕಿರಿ ಸಾಧ್ಯತೆ. ಬಂಧುಗಳಿಂದ ಆರ್ಥಿಕ ಸಹಾಯದ ಭರವಸೆ ಪಡೆಯಲಿದ್ದೀರಿ. ಮನಸ್ಸಿಗೆ ಉಲ್ಲಾಸ ತರುವಂತಹ ವಾರ್ತೆಯೊಂದನ್ನು ಕೇಳಲಿದ್ದೀರಿ.

ವೃಶ್ಚಿಕ

ಹಣಕಾಸು ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ. ಮಹಿಳಾ ರಾಜಕಾರಣಿಗಳಿಂದ ಕಿರುಕುಳ ಉಂಟಾಗುವ ಸಾಧ್ಯತೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಹೆಸರಿನೊಂದಿಗೆ ಆದಾಯ ತರಲಿದೆ.

ಧನು

ಸಂಶೋಧನಾ ಕೆಲಸದಲ್ಲಿರುವವರಿಗೆ ಹೊಸ ಸಂಶೋಧನೆಯ ಗರಿ ಮುಡಿಗೇರಲಿದೆ. ಆಸ್ತಿ ಖರೀದಿ ಸಾಧ್ಯತೆ. ಮನೆಯಲ್ಲಿ ಆಧುನಿಕ ವಿಶೇಷ ಬದಲಾವಣೆಯೊಂದನ್ನು ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಗಮನ ಅವಶ್ಯ.

ಮಕರ

ಆಸ್ತಿ ನೋಂದಣಿ ಮುಂತಾದ ಕೆಲಸಗಳು ಸುಗಮವಾಗಿ ನಡೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆ. ವ್ಯವಸಾಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉತ್ತಮ ದಿನವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ.

ಕುಂಭ

ಕೋರ್ಟು ಕಛೇರಿ ಕೆಲಸಗಳಲ್ಲಿ ಯಶಸ್ಸು. ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಆದಾಯ. ಸಗಟು ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಕಿರಿಕಿರಿ ಅನುಭವಿಸಬೇಕಾದೀತು.

ಮೀನ

ಜಲ ಸಂಬಂಧಿ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಭವಿಷ್ಯ. ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ಕಾರ್ಯಾನುಕೂಲ. ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯ ಲಕ್ಷಣ ಕಂಡುಬರುತ್ತಿದೆ.

ಮಾರ್ಚ್ 15, ಸೋಮವಾರ, 2021 ; ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ರೇವತಿ, ರಾಹುಕಾಲ: 8.01 ರಿಂದ 9.31
ಗುಳಿಕಕಾಲ :2.03 ರಿಂದ 3.33
ಯಮಗಂಡಕಾಲ :11.02 ರಿಂದ 12.32

ಮೇಷ

ಉದ್ಯೋಗದಲ್ಲಿ ಬದಲಾವಣೆಯಾಗುವ ನಿರೀಕ್ಷೆ. ಯುವಕರಿಗೆ ಪ್ರಶಂಸೆಯ ಸುರಿಮಳೆ. ನೆರೆಹೊರೆಯವ ರೊಂದಿಗೆ ವಿರಸ ತಲೆದೋರಬಹುದು. ಉದ್ಯಮ ಸ್ಥಳದಲ್ಲಿ ನವೀಕರಣ/ ಬದಲಾವಣೆ ಮಾಡಲಿದ್ದೀರಿ.

ವೃಷಭ

ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ಅಧಿಕ ಧನಲಾಭ. ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ತಲೆದೋರೀತು.

ಮಿಥುನ

ಬಟ್ಟೆ ಹಾಗೂ ಲೋಹ ವ್ಯಾಪಾರ ಮಾಡುವವರಿಗೆ ವಿಶೇಷ ಆದಾಯ. ಹಣಕಾಸು ಸಂಸ್ಥೆಗಳ ಅಧಿಕಾರಿಗಳ ವ್ಯತಿರಿಕ್ತ ಸಲಹೆಯಿಂದಾಗಿ ನಷ್ಟ. ಲೇವಾದೇವಿದಾರರಿಗೆ ವಿಶೇಷ ಲಾಭದ ನಿರೀಕ್ಷೆ ಕಂಡುಬರುವುದು.

ಕಟಕ

ಆಮದು–ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರ ಸ್ವಲ್ಪಮಟ್ಟಿನ ಇರುಸುಮುರುಸು ತರುವ ಸಾಧ್ಯತೆ. ಉದ್ಯೋಗಸ್ಥರಿಗೆ ಒಳ್ಳೆಯ ಸುದ್ದಿ.

ಸಿಂಹ

ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಮೂಡುವ ಸಾಧ್ಯತೆ. ಮಕ್ಕಳು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಾಧ್ಯತೆ.

ಕನ್ಯಾ

ಅಡೆತಡೆಗಳ ನಡುವೆಯೂ ಶುಭ ಕಾರ್ಯ ನೆರವೇರಿಸಲಿದ್ದೀರಿ. ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಔಷಧ ತಯಾರಕರು, ಬಣ್ಣ ಮುಂತಾದ ರಾಸಾಯನಿಕ ವಸ್ತುಗಳ ವ್ಯವಹಾರಗಳಲ್ಲಿ ತೊಡಗಿದವರಿಗೆ ಉತ್ತಮ ಲಾಭ.

ತುಲಾ

ಅಧಿಕಾರಿಗಳ ಅಸಹಕಾರದಿಂದ ಸರಕಾರದಿಂದಾಗಬೇಕಾದ ಕೆಲಸ ವಿಳಂಬ. ನಿರಾಸೆಯ ಮಧ್ಯೆ ಆಸೆಯ ಸೆಳೆವೊಂದು ಕಂಡುಬರಲಿದೆ. ಕಾರ್ಯಸಾಧನೆಗಾಗಿ ಅನ್ಯ ಮಾರ್ಗವೊಂದನ್ನು ಕಂಡುಕೊಳ್ಳುವಿರಿ.

ವೃಶ್ಚಿಕ

ಸಂಗಾತಿಗೆ ನೆರೆಹೊರೆಯವರಿಂದ ಸ್ವಲ್ಪಮಟ್ಟಿನ ಪ್ರತಿರೋಧ. ನವೀನ ವ್ಯವಹಾರವೊಂದರಲ್ಲಿ ಹಣ ವಿನಿಯೋಗ. ಹೊಸ ಉದ್ಯಮದಿಂದ ಶ್ರೇಯಸ್ಸು. ಧಾರ್ಮಿಕ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಲಿದ್ದೀರಿ.

ಧನು

ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪವನ್ನು ಎದುರಿಸಬೇಕಾದೀತು. ವಿಚಾರಣೆ ವೇಳೆಯಲ್ಲಿ ಸಂಯಮದಿಂದಾಗಿ ಎಲ್ಲವೂ ನಿರಾಳವಾಗಲಿವೆ.

ಮಕರ

ತುರ್ತುವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಾಸ್ಯ. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.

ಕುಂಭ

ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ ಉಂಟುಮಾಡಲಿದೆ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯ ಪೂರ್ವಕ ಪ್ರಸ್ತಾಪ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ.

ಮೀನ

ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರಲಿದೆ.

ಮಾರ್ಚ್ 13, ಶನಿವಾರ, 2021: ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ,
ಕೃಷ್ಣಪಕ್ಷ, ಅಮಾವಾಸ್ಯೆ, ಶನಿವಾರ, ಪೂರ್ವ ಭಾದ್ರಪದ ನಕ್ಷತ್ರ

ರಾಹುಕಾಲ: 9.33 ರಿಂದ 11.03
ಗುಳಿಕಕಾಲ: 6.32 ರಿಂದ 08:03
ಯಮಗಂಡಕಾಲ 02:03 ರಿಂದ 03:33

ಮೇಷ

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈ ಹಾಕದಿರುವುದು ಉತ್ತಮ. ಬಂಧು ಮಿತ್ರರೊಂದಿಗೆ ಶುಭ ಸಮಾರಂಭದಲ್ಲಿ ಭಾಗಿ. ದೈನಂದಿನ ವ್ಯವಹಾಗಳಲ್ಲಿ ಸಂತಸವನ್ನು ಕಾಣಲಿದ್ದೀರಿ.

ವೃಷಭ

ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನ ಖರೀದಿ ಮಾಡಲಿದ್ದೀರಿ.

ಮಿಥುನ

ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆಗಳು ಹರಿದುಬರಲಿವೆ. ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ ಮೂಡಲಿದೆ. ಆರ್ಥಿಕ ಅಭಿವೃದ್ಧಿಯಾಗಿ ಹೊಸ ಬದುಕಿಗೆ ನಾಂದಿಯಾಗಲಿದೆ.

ಕಟಕ

ದೂರಾಲೋಚನೆಯಿಂದ ಮಾಡಿದ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾದುದು ಅನಿವಾರ್ಯ. ದೂರಪ್ರಯಾಣ ಮಾಡದಿರುವುದು ಒಳಿತು.

ಸಿಂಹ

ಮಕ್ಕಳೊಂದಿಗೆ ವಾದ ವಿವಾದ ಮಾಡದಿರುವುದು ಉತ್ತಮ. ಮಿತ್ರರಿಂದ ಸಹಕಾರ ಸಲಹೆಗಳು ಲಭ್ಯ. ವಾಹನ ಚಾಲನೆ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಬಂಧುಗಳೊಂದಿಗಿನ ಭಿನ್ನಾಭಿಪ್ರಾಯ ದೂರ.

ಕನ್ಯಾ

ಆರ್ಥಿಕ ಅನುಕೂಲತೆಗಳು ಕೂಡಿಬರಲಿವೆ. ವಿದೇಶಪ್ರಯಾಣ ಯೋಗವೂ ಕಂಡುಬರುತ್ತಿದೆ. ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಮೂಡಿಬರಲಿದೆ. ಮಿತ್ರರ ಸಹಾಯ ಸಹಕಾರಗಳಿಂದಾಗಿ ವ್ಯವಹಾರಗಳು ಸುಧಾರಿಸಲಿವೆ.

ತುಲಾ

ದೈನಂದಿನ ಕಾರ್ಯಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಆಸ್ತಿ ವಿಷಯದಲ್ಲಿ ಕಲಹ ಎದುರಾಗುವ ಸಾಧ್ಯತೆ. ನೌಕರಿಯಲ್ಲಿರುವವರಿಗೆ ವರ್ಗಾವಣೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡಲಿದ್ದೀರಿ.

ವೃಶ್ಚಿಕ

ತಾಳ್ಮೆಯಿಂದ ಕಾರ್ಯಸಿದ್ಧಿ. ಕೃಷಿ ಕ್ಷೇತ್ರದಲ್ಲಿ ಕೆಲಸಮಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವ್ಯವಹಾರದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾದೀತು.

ಧನು

ಸಂತೃಪ್ತ ಸಾಂಸಾರಿಕ ಜೀವನ. ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಅತಿಯಾದ ಕೋಪ ತೊಂದರೆಗೆ ಆಹ್ವಾನವಾದೀತು.

ಮಕರ

ಬಹುಕಾಲದ ಬಯಕೆಗಳು ಈಡೇರಲಿವೆ. ಋಣಪರಿಹಾರದಿಂದಾಗಿ ಸಂತೃಪ್ತಿ. ವೈಯುಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸದೇ ಇರುವುದು ಕ್ಷೇಮ. ವಸ್ತ್ರ, ಹತ್ತಿ, ನಾರಿನ ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಆದಾಯ.

ಕುಂಭ

ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಗೃಹ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಮಹಿಳೆಯರಿಗೆ ಸಾಮಾಜಿಕ ಗೌರವಾದರಗಳು ದೊರಕಲಿವೆ. ರಾಜಕೀಯದಲ್ಲಿ ಯಶಸ್ಸಿನ ಹೆಜ್ಜೆ ತುಳಿಯಲಿದ್ದೀರಿ.

ಮೀನ

ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತುರುಸಿನಿಂದ ತೊಡಗಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆ ಅವಶ್ಯ. ಮಕ್ಕಳ ಆರೋಗ್ಯದ ಕಡೆ ತುಸು ಗಮನ ವಹಿಸುವುದು ಉತ್ತಮ.

Design a site like this with WordPress.com
Get started