ಎಪ್ರಿಲ್ 05, ಸೋಮವಾರ,2021, ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 22 ಸಲುವ ಫಾಲ್ಗುಣ ಬಹುಳ ನವಮಿ 49|| ಗಳಿಗೆದಿನ ವಿಶೇಷ :ರಾಷ್ಟ್ರೀಯ ನಾವಿಕರ ದಿನನಿತ್ಯ ನಕ್ಷತ್ರ :ಉತ್ತರಾಷಾಢಾ 49| ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.26 ಗಂಟೆ

ಮೇಷ

ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರದ ಪ್ರಯಾಣ ಮಾಡಬೇಕಾದೀತು. ಪತ್ನಿವರ್ಗದವರಿಂದ ಸಹಾಯ ದೊರಕಲಿದೆ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆಗಳು ನಿವಾರಣೆಯಾಗಲಿದೆ.

ವೃಷಭ

ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿಯನ್ನು ಉಂಟುಮಾಡಲಿದೆ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯ ಪೂರ್ವಕ ಪ್ರಸ್ತಾಪಗಳು ಬರಲಿದೆ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ.

ಮಿಥುನ

ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿ ಕೊಳ್ಳುವಿರಿ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ. ರಾಜಕೀಯದಲ್ಲಿ ತಲ್ಲೀನರಾದವರಿಗೆ ಮಾನಸಿಕ ದ್ವಂದ್ವಗಳು ಏರ್ಪಡಲಿದೆ.

ಕಟಕ

ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರಲಿದೆ.

ಸಿಂಹ

ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನವಾಗಲಿದೆ. ಲೆಕ್ಕ ಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದೀತು. ಉತ್ತಮ ಆದಾಯವನ್ನು ಹೊಂದುವಿರಿ. ಪುಸ್ತಕ ಗ್ರಂಥಗಳ ಖರೀದಿಗಾಗಿ ವೆಚ್ಚವನ್ನು ಭರಿಸಬೇಕಾದೀತು.

ಕನ್ಯಾ

ತಂದೆ ತಾಯಿಗಳಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಯೋಗ ದೊರಕಲಿದೆ. ಸತ್ಪುರುಷರ ಸಂದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ.

ತುಲಾ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲಗಳ ಕ್ರೂಢೀಕರಣಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರಹೊಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ.

ವೃಶ್ಚಿಕ

ವೈಯುಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾದೀತು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಅತಿಯಾದ ಪ್ರಯಾಣದಿಂದಾಗಿ ದೇಹಾಯಾಸದಿಂದ ಬಳಲುವಿರಿ.

ಧನು

ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುವುದು. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.

ಮಕರ

ತುರ್ತುವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿಯನ್ನು ಕಾಣುವಿರಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.

ಕುಂಭ

ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಮೂಡಲಿದೆ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.

ಮೀನ

ಜಮೀನಿನ ಕೆಲಸ ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ. ಮನೆಯವರ ದೂರ ಪ್ರಯಾಣದಿಂದಾಗಿ ಒಂಟಿತನ ಮನೆಮಾಡೀತು.

ಎಪ್ರಿಲ್ 02, ಶುಕ್ರವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

2-4-2021 ಶುಕ್ರವಾರ ಶಾರ್ವರಿ ಸಂ|ರದ ಮೀನ ಮಾಸ‌ ದಿನ 19 ಸಲುವ ಫಾಲ್ಗುಣ ಬಹುಳ ಪಂಚಮಿ 4|| ಗಳಿಗೆ ಉಪರಿ ಷಷ್ಠಿ 54| ಗಳಿಗೆದಿನ ವಿಶೇಷ :ಪಾವಂಜೆ ರಥ ಗುಡ್‌ಫ್ರೈಡೇನಿತ್ಯ ನಕ್ಷತ್ರ :ರೇವತಿಮಹಾ ನಕ್ಷತ್ರ :ಜ್ಯೇಷ್ಠಾ 53| ಗಳಿಗೆಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30-9.00 ಗಂಟೆಸೂರ್ಯಾಸ್ತ :6.40 ಗಂಟೆಸೂರ್ಯೋದಯ :6.28 ಗಂಟೆ

ಮೇಷ

ನಿಮ್ಮ ಸಾಥ್ವಿಕ ನಡತೆಯಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವಿರಿ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಕೆಲಸ ಕಾರ್ಯಗಳೊಂದಿಗೆ ಗೌರವವನ್ನು ತಂದುಕೊಡಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.

ವೃಷಭ

ವೈಜ್ಞಾನಿಕ ಸಂಶೋಧನೆಗಳ್ಲಿ ತೊಡಗಿಕೊಂಡಿವುರುವವರಿಗೆ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಉನ್ನತ ಅಧಿಕಾರಿಗಳಿಗೆ ಅಚ್ಚರಿ ಮೂಡಿಸುವ ಕಾರ್ಯ ಮಾಡಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು.

ಮಿಥುನ

ನಿಮ್ಮ ವ್ಯಾಪಾರದಲ್ಲಿ ಈ ದಿನದಿಂದ ಹಣದ ಹರಿವು ಸುಗಮವಾಗಿ ವ್ಯವಹಾರದಲ್ಲಿ ಉನ್ನತಿಯತ್ತ ಸಾಗಲಿದ್ದೀರಿ. ಯಾಂತ್ರೀಕೃತ ವಾಹನ, ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದಿಂದಾಗಿ ಉತ್ತಮ ಲಾಭ.

ಕಟಕ

ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭಕರವಾದ ನಿರ್ಧಾರಗಳು ಹೊರಬರಲಿವೆ. ಪಿತ್ರಾರ್ಜಿತವಾದ ಆಸ್ತಿ ನಿಮ್ಮ ಪಾಲಿಗೆ ದೊರಕುವುದು. ಬಂಧುಗಳೊAದಿಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.

ಸಿಂಹ

ಹೊಸ ಉದ್ಯಮಕ್ಕೆ ಕಾಲಿಡುವ ಧಾವಂತದಿಂದ ಕೆಲಸ–ಕಾರ್ಯಗಳನ್ನು ಮಾಡಲಿದ್ದೀರಿ. ಗುರಿ ತಲುಪುವ ಹಾದಿಯಲ್ಲಿ ಸ್ನೇಹಿತರ ಸಹಾಯ ಸಹಕಾರ ದೊರಕಲಿದೆ. ಯಶಸ್ಸಿನ ದಿನ ಪ್ರಾರಂಭವಾಗಲಿದೆ. ಸಂಗಾತಿಯಿಂದ ಸಂತಸ.

ಕನ್ಯಾ

ಮನೆಗೆ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು ಉಂಟಾಗಲಿದೆ. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು. ಉದ್ವೇಗದ ನಡೆ ತರವಲ್ಲ.

ತುಲಾ

ಪಾಲುದಾರಿಕೆಯಿಂದ ಅಪೂರ್ಣವಾಗಿದ್ದ ನಿಮ್ಮ ವ್ಯಾಪಾರ ಈ ದಿನ ಪ್ರಾಧಾನ್ಯತೆಯನ್ನು ಪಡೆದುಕೊಳ್ಳಲಿದ್ದು, ಲಾಭಾಂಶದಲ್ಲಿ ಹೆಚ್ಚಿನ ಭಾಗ ನಿಮ್ಮದಾಗಲಿದೆ. ವ್ಯವಹಾರಗಳ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಮೂಡಿಬರಲಿದೆ.

ವೃಶ್ಚಿಕ

ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಾಧ್ಯವಾದ ಸಹಾಯ ಹಸ್ತ ಚಾಚುವಿರಿ. ವೈಯಕ್ತಿಕ ವ್ಯವಹಾರದಲ್ಲಿ ಉಂಟಾದ ಹಿನ್ನಡೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಿತೈಷಿಗಳ ಸಹಕಾರದ ಭರವಸೆ.

ಧನು

ವೈಯಕ್ತಿಕ ಜೀವನದಲ್ಲಿನ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳುವ ದಿಕ್ಕಿನಲ್ಲಿ ಗಣ್ಯರೊಂದಿಗೆ ಮುಖಾಮುಖಿ ಸಂಭಾಷಣೆ. ದುಡುಕು ಸ್ವಭಾವದಿಂದಾಗಿ ತೊಂದರೆ. ವಾತಸಂಬಂಧಿ ಕಾಯಿಲೆ ಉಲ್ಬಣವಾದೀತು.

ಮಕರ

ವ್ಯವಹಾರದಲ್ಲಿ ಕೌಶಲದಿಂದಾಗಿ ಹೆಚ್ಚಿನ ಲಾಭ ದೊರಕುವುದು. ಭೂ ವ್ಯವಹಾರದಲ್ಲಿ ನಿಮ್ಮ ಹಟಮಾರಿತನಕ್ಕೆ ಜಯವಾಗುವುದರಲ್ಲಿ ಅನುಮಾನವಿಲ್ಲ. ಇಚ್ಛೆಯಂತೆ ಭೂಮಿ ಅಥವಾ ಮನೆ ಖರೀದಿ ಭಾಗ್ಯ.

ಕುಂಭ

ಬೃಹತ್ ಯೋಜನೆಗಳಿಗೆ ಎಲ್ಲ ಸನ್ನಿವೇಶಗಳು ಅನುಕೂಲಕರವಾಗಿ ಪರಿಣಮಿಸಲಿವೆ. ಹೊಸ ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವಿವಾಹಾಕಾಂಕ್ಷಿಗಳಿಗೆ ವೈವಾಹಿಕ ಮಾತುಕತೆಯಿಂದ ತೃಪ್ತಿಕರ ಸಮಾಚಾರ.

ಮೀನ

ಕುಶಲಕರ್ಮಿಗಳಿಗೆ ಪ್ರತಿಭಾ ಪ್ರದರ್ಶನದ ಅವಕಾಶದೊಂದಿಗೆ ಮಾರಾಟದಿಂದ ಉತ್ತಮ ಲಾಭ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ. ಪ್ರಯಾಣದಲ್ಲಿ ಸುಖಾನುಭವ. ಆರೋಗ್ಯ ಉತ್ತಮವಾಗಿರುವುದು.

ಎಪ್ರಿಲ್ 01, ಗುರುವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ, ಚತುರ್ಥಿ / ಪಂಚಮಿ, ಗುರುವಾರ,ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ

ರಾಹುಕಾಲ 01:59 ರಿಂದ 03:31
ಗುಳಿಕಕಾಲ 09:23 ರಿಂದ 10:55
ಯಮಗಂಡಕಾಲ 6 19 ರಿಂದ 07:51

ಮೇಷ

ಮಹಿಳೆಯರಿಗೆ ವಿಶೇಷ ದಿನವಾಗಿ ಕಂಡುಬರುವುದು. ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗದು. ಷೇರು ಮಾರುಕಟ್ಟೆಯಲ್ಲಿ ವಿಚಾರ ವಿಮರ್ಶೆ ಮಾಡಿ ಹಣ ತೊಡಗಿಸಿಕೊಳ್ಳುವುದು ಉತ್ತಮ. ಅತಿಯಾದ ಆಸೆಯಿಂದಾಗಿ ಮೋಸಹೋಗುವ ಸಾಧ್ಯತೆ

ವೃಷಭ

ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ತಯಾರಕರಿಗೆ ದುರಸ್ತಿ ಮಾಡುವವರಿಗೆ ಹೆಚ್ಚಿನ ಆದಾಯ ತರುವಂತಹ ದಿನವಾಗಲಿದೆ. ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯಗಳಿಗೆ ತಯಾರಿ ನಡೆಸಲಿದ್ದೀರಿ. ಹಬ್ಬದ ವಾತಾವರಣ ಮೂಡಿಬರಲಿದೆ.

ಮಿಥುನ

ಸಹೋದ್ಯೋಗಿಗಳೊಡನೆ ಹೊಂದಾಣಿಕೆಯ ಅಗತ್ಯ ಕಂಡುಬರುವುದು. ಕೆಲಸದ ಒತ್ತಡ ಕಡಿಮೆಯಾಗಿ ನೆಮ್ಮದಿಯನ್ನು ತರಲಿದೆ. ಉದ್ಯೋಗದಲ್ಲಿ ಲಾಭವನ್ನು ಕಾಣಲಿದ್ದೀರಿ. ಮನೆಯವರೊಂದಿಗೆ ಸಂಭ್ರಮದಿAದ ದಿನ ಕಳೆಯುವಿರಿ.

ಕಟಕ

ನಿಮ್ಮ ಕಾರ್ಯತಂತ್ರವನ್ನು ತಡಮಾಡದೇ ರೂಪಿಸಲಿದ್ದೀರಿ. ಈ ದಿನ ನೀವು ವಿಚಾರ ಮಾಡಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಸರಿಯಾಗಿದ್ದು ಶುಭಫಲಗಳನ್ನೇ ತರಲಿವೆ. ಹಿರಿಯರ ಆರೋಗ್ಯಕ್ಕಾಗಿ ವೆಚ್ಚ ಭರಿಸಬೇಕಾದೀತು.

ಸಿಂಹ

ಸ್ನೇಹ ಸಂಬಂಧಗಳು ಗಟ್ಟಿಯಾಗಿ ಹೊಸ ಚೈತನ್ಯ ಮೂಡುವುದರಿಂದ ಸಹಾಯ, ಸಹಕಾರಗಳು ನಿರೀಕ್ಷೆಗೂ ಮೀರಿ ದೊರಕಲಿದೆ. ಪ್ರಿಯರಿಂದ ಉಡುಗೊರೆ ಲಭ್ಯವಾಗುವ ಸಾಧ್ಯತೆ. ಕಲಾವಿದರಿಗೆ ಆದಾಯದಲ್ಲಿ ಹೆಚ್ಚಳ.

ಕನ್ಯಾ

ಕಾರ್ಯಕ್ಷೇತ್ರದಲ್ಲಿನ ಕೆಲಸಗಳನ್ನು ಶೀಘ್ರವಾಗಿ ಮುಗಿಸಲಿದ್ದೀರಿ. ಮನೆಯಲ್ಲಿ ನಡೆಯಬೇಕಾದ ಮದುವೆ ಮುಂಜಿ ಮುಂತಾದ ಮಂಗಳ ಕಾರ್ಯಗಳ ಜವಾಬ್ದಾರಿ ನಿಭಾಯಿಸುವ ಧಾವಂತ. ಬಂಧುಗಳ ಆಗಮನ.

ತುಲಾ

ಚಿನ್ನಾಭರಣ ಖರೀದಿ ಸಾಧ್ಯತೆ. ಆದಾಯದಲ್ಲಿ ಹೆಚ್ಚಳ. ತಂದೆಯ ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದೂರ ಪ್ರಯಾಣದ ಸಿದ್ಧತೆ ನಡೆಸಲಿದ್ದೀರಿ.

ವೃಶ್ಚಿಕ

ನಿಮ್ಮ ಪ್ರತಿಭೆಯ ತೀಕ್ಷ್ಣತೆಯು ಸಂಬಂಧಪಟ್ಟವರ ಗಮನ ಸೆಳೆಯಲಿದೆ. ತಾಂತ್ರಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಬಡ್ತಿ ನಿರೀಕ್ಷಿಸಬಹುದು. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಆಲಸ್ಯ. ಸಮಾಧಾನದ ನಡೆ ಅವಶ್ಯಕ.

ಧನು

ಮೇಲಧಿಕಾರಿಗಳು ನಿಮ್ಮ ನಿರ್ಧಾರಕ್ಕೆ ನಿಮ್ಮೊಂದಿಗಿದ್ದಾರೆಂಬ ಭರವಸೆಯಿಂದ ಕೆಲಸ ನಿರ್ವಹಿಸಲಿದ್ದೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಾಲೋಚನೆ ಮಾಡುವುದು ಉತ್ತಮ.

ಮಕರ

ಹೊಸ ಅವಕಾಶಗಳ ಬಾಗಿಲು ತೆರೆಯುವುದರಿಂದ ನಿಯೋಜಿತ ಕೆಲಸಗಳನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿರಿ. ಆತ್ಮವಿಶ್ವಾಸ ಮೂಡಿಬರಲಿದೆ. ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಹೊಸ ಕೆಲಸ ಸಿಗಲಿದೆ.

ಕುಂಭ

ವ್ಯವಹಾರದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಈ ದಿನದ ಕಷ್ಟದ ಕ್ಷಣಗಳು ನಿಮ್ಮ ನಾಳಿನ ಬದುಕಿನ ಸುಖಕ್ಕೆ ನಾಂದಿಯಾಗಲಿದೆ. ತಾಳ್ಮೆ ಹಾಗೂ ಸಹಿಷ್ಣುತೆಯೇ ಈ ದಿನದ ಶುಭ ಫಲಕ್ಕೆ ಹೇತುವಾಗಲಿದೆ.

ಮೀನ

ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳ ಖರೀದಿ ಮಾಡುವ ಸಾಧ್ಯತೆ. ಆಯುಧಗಳ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳಿತು. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ.

ಮಾರ್ಚ್ 31, ಬುಧವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 17 ಸಲುವ ಫಾಲ್ಗುಣ ಬಹುಳ ತದಿಗೆ 19| ಗಳಿಗೆ ದಿನ ವಿಶೇಷ :ಸಂಕಷ್ಟಹರ ಚತುರ್ಥಿ (ಚ.ಉ.ಗಂ. 9.25) ಮಹಾ ನಕ್ಷತ್ರ ರೇವತಿ ಆರಂಭನಿತ್ಯ ನಕ್ಷತ್ರ :ಸ್ವಾತಿ 8| ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.40 ಗಂಟೆ ಸೂರ್ಯೋದಯ :6.29 ಗಂಟೆ

ಮೇಷ

ಕಲೆ ಸಂಗೀತ, ಸಿನಿಮಾ ಮುಂತಾದ ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಒಳ್ಳೆಯ ಪುರೋಭಿವೃದ್ಧಿ. ಹೋಟೆಲ್ ಉದ್ಯಮಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ. ವಸ್ತ್ರಾಭರಣ ಖರೀದಿ ಸಾಧ್ಯತೆ.

ವೃಷಭ

ಸರ್ಕಾರಿ ಮಟ್ಟದ ಉದ್ಯೋಗಿಗಳಿಗೆ ಯಶಸ್ಸು. ಮೇಲ್ವರ್ಗದ ಗುತ್ತಿಗೆದಾರರಿಗೆ ಟೆಂಡರ್ ಮೂಲಕ ಗುತ್ತಿಗೆ ಪಡೆಯುವ ಅವಕಾಶ ದೊರಕಲಿದೆ. ಕೃಷಿಕರಿಗೆ, ಕೃಷಿ ಜಮೀನು ವ್ಯಾಪಾರದಲ್ಲಿ ತೊಡಗಿರುವವರಿಗೆ ಉತ್ತಮ ಲಾಭ.

ಮಿಥುನ

ಜೀವನದಲ್ಲಿ ಒಂದು ವಿಶೇಷ ತಿರುವನ್ನು ಪಡೆದುಕೊಳ್ಳುವ ಪರ್ವಕಾಲ. ನಿಮ್ಮ ದುಡಿಮೆ, ನಿಷ್ಠೆ, ಆತ್ಮವಿಶ್ವಾಸ ವೃತ್ತಿರಂಗದಲ್ಲಿ ಯಶಸ್ಸು. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ.

ಕಟಕ

ವಿಚಾರಗಳನ್ನು ಭಿನ್ನ ದೃಷ್ಟಿಯಿಂದ ನೋಡಲು ಪ್ರಯತ್ನಿಸುವಿರಿ. ದೈನಂದಿನ ರೀತಿ ರಿವಾಜುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಧಾವಂತದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾದೀತು. ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ.

ಸಿಂಹ

ಸಾಮಾಜಿಕ ರಂಗದಲ್ಲಿ ಸ್ಥಾನಮಾನದೊಂದಿಗೆ ಜನಾನುರಾಗಕ್ಕೂ ಉತ್ತಮ ಅವಕಾಶ ದೊರಕಲಿದೆ. ಸಂಕಲ್ಪದಂತೆ ಕಾರ್ಯಗಳು ನೆರವೇರಿ ಮುನ್ನಡೆ. ತೈಲೋದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಆದಾಯ.

ಕನ್ಯಾ

ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಬರಲಿವೆ. ಎಲ್ಲ ವಿಧದಿಂದಲೂ ಸುಖ ಜೀವನ ನಿಮ್ಮದಾಗಲಿದೆ. ಅವಿವಾಹಿತರಿಗೆ ಬಂಧುಗಳ ಸಹಾಯದಿಂದ ಅನಿರೀಕ್ಷಿತವಾಗಿ ವಿವಾಹ ಯೋಗ ಕೂಡಿಬರಲಿದೆ.

ತುಲಾ

ಹಲವು ಹೊಸಬರ ಪರಿಚಯದಿಂದಾಗಿ ಎಲ್ಲ ರೀತಿಯಿಂದಲೂ ಅನುಕೂಲ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಲಿದೆ. ಅವಿವಾಹಿತ ಸ್ತ್ರೀಯರಿಗೆ ಮಾಂಗಲ್ಯ ಭಾಗ್ಯ.

ವೃಶ್ಚಿಕ

ಕಾರ್ಯಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತವೆ. ಸಾಮಾಜಿಕವಾಗಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸೂಕ್ತ ವ್ಯಕ್ತಿಗಳಿಂದ ಸಕಾಲದಲ್ಲಿ ಸಲಹೆ ಪಡೆಯುವುದರಿಂದ ಅನುಕೂಲ.

ಧನು

ಕಾರ್ಯರಂಗದಲ್ಲಿ ಧೈರ್ಯ, ಪ್ರಯತ್ನ ಬಲ, ಆತ್ಮವಿಶ್ವಾಸದ ಪ್ರವೃತ್ತಿಗಳಿಂದಾಗಿ ಸಮಸ್ಯೆಗಳು ದೂರ. ಸಾಮಾಜಿಕವಾಗಿ ವರ್ಚಸ್ಸು ಹೆಚ್ಚುವುದರ ಜೊತೆಗೆ ಗೌರವ ಪ್ರಾಪ್ತಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.

ಮಕರ

ಶಿಸ್ತುಬದ್ಧ ಜೀವನದಿಂದಾಗಿ ಎಲ್ಲ ರಂಗಗಳಲ್ಲಿಯೂ ಯಶಸ್ಸು. ಸಕಾರಾತ್ಮಕ ಚಿಂತನೆಗಳಿಂದಾಗಿ ಸಮಸ್ಯೆಗಳು ಕರಗಿಹೋಗಲಿವೆ. ಆಪ್ತ ಮಹಿಳೆಯರಿಂದ ದೊರೆತ ಸಲಹೆಗಳನ್ನು ತಿರಸ್ಕರಿಸುವುದು ಸರಿಯಲ್ಲ.

ಕುಂಭ

ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಸೌಲಭ್ಯಗಳು ದೊರಕುವ ಸಾಧ್ಯತೆ. ಕೃಷಿಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತಮ ಆದಾಯ. ದರ್ಜಿಗಳು ಮತ್ತು ಜವುಳಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಆರೋಗ್ಯದಲ್ಲಿ ಸ್ಥಿರತೆ ಕಾಣುವಿರಿ.

ಮೀನ

ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯ ಬಂದರೂ ಖರ್ಚು ವೆಚ್ಚಗಳ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಹಿರಿಯರ ಅನುಗ್ರದಿಂದ ನೆಮ್ಮದಿ. ಹೊಸ ಯೋಜನೆ ಪ್ರಾರಂಭಕ್ಕೆ ಚಿಂತನೆ.

ಮಾರ್ಚ್ 30, ಮಂಗಳವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ದ್ವಿತೀಯ,
ನಕ್ಷತ್ರ : ಚಿತ್ತ,
ರಾಹುಕಾಲ:3.32 ರಿಂದ 5.04
ಗುಳಿಕಕಾಲ :12.28 ರಿಂದ 2.00
ಯಮಗಂಡಕಾಲ:9.24 ರಿಂದ 10.56.

ಮೇಷ

ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಮುಂದಿನ ಕಾರ್ಯಯೋಜನೆಗಳ ವಿಚಾರವಾಗಿ ಚಿಂತನೆ. ಶುಭ ಕಾರ್ಯ ನಡೆಸಲು ತಯಾರಿ. ಮನೆಯಲ್ಲಿ ಹಬ್ಬದ ವಾತಾವರಣ.

ವೃಷಭ

ಅನಾವಶ್ಯಕ ಮಾತುಗಳಿಂದಾಗಿ ಉದ್ವೇಗಕ್ಕೊಳಗಾಗುವ ಸಾಧ್ಯತೆ. ವಿಪರೀತ ಖರ್ಚು ಭರಿಸಬೇಕಾದ ಅನಿವಾರ್ಯತೆ ಇದ್ದರೂ, ಆರ್ಥಿಕ ಅನುಕೂಲತೆ. ಧನವನ್ನು ಕೂಡಿಡಲಿದ್ದೀರಿ.

ಮಿಥುನ

ಕಾರ್ಯ ನಿಮಿತ್ತ ಕೈಗೊಂಡ ದೂರದ ಪ್ರಯಾಣದಿಂದಾಗಿ ಅಧಿಕ ಆದಾಯ. ವೆಚ್ಚದ ಮೇಲೆ ಹಿಡಿತದಿಂದಾಗಿ ಉಳಿತಾಯ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಬಿಡುವಿನ ದಿನ.

ಕಟಕ

ಕಚೇರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಸ್ಥಾನ ಭದ್ರತೆ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ನಿರಾಳರಾಗುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ಸಾಧ್ಯತೆ.

ಸಿಂಹ

ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಸಾಧ್ಯತೆ. ಮನೆಯ ಅಲಂಕಾರಕ್ಕಾಗಿ ವೆಚ್ಚ. ವಾಹನಗಳ ವ್ಯವಹಾರದಲ್ಲಿ ಉತ್ತಮ ಲಾಭ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು.

ಕನ್ಯಾ

ಕ್ರೀಡಾಪಟುಗಳು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಸಾಮರ್ಥ್ಯ‌ ಪ್ರದರ್ಶಿಸುವ ಪೈಪೋಟಿಯ ದಿನವಾಗಲಿದೆ. ಮನೆಯ ವ್ಯವಹಾರಗಳಲ್ಲಿ ತೊಂದರೆಗಳು ದೂರವಾಗಿ ನೆಮ್ಮದಿ ಮೂಡಲಿದೆ.

ತುಲಾ

ಸಮಯವನ್ನು ವ್ಯರ್ಥಮಾಡದೇ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಉತ್ತಮ ಫಲ ಪಡೆಯಲಿದ್ದೀರಿ. ರೇಷ್ಮೆ ಬೆಳೆಗಾರರು ಹಾಗೂ ಉದ್ಯಮದಲ್ಲಿ ತೊಡಗಿರುವವರಿಗೆ ಬಿಡುವಿಲ್ಲದ ದಿನವಾಗುವುದು.

ವೃಶ್ಚಿಕ

ನೂತನ ವ್ಯವಹಾರವನ್ನು ಪ್ರಾರಂಭಿಸುವ ಸಲುವಾಗಿ ಚಿಂತನೆ ನಡೆಸುವಿರಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ವ್ಯಯ. ಆರೋಗ್ಯ ಉತ್ತಮಗೊಳ್ಳಲಿದೆ.

ಧನು

ಕೃಷಿ ಚಟುವಟಿಕೆಗಳು ಭರದಿಂದ ಸಾಗಲಿವೆ. ಮಕ್ಕಳ ನೆಮ್ಮದಿಗಾಗಿ ಬೊಂಬೆಗಳ ಖರೀದಿ ಸಾಧ್ಯತೆ. ಯುವಕರಿಗೆ ಸಂಶೋಧನಾ ಕ್ಷೇತ್ರದಲ್ಲಿ ನೌಕರಿ ಮಾಡುವ ಅವಕಾಶ ಲಭ್ಯ.

ಮಕರ

ಹೊಸ ವಾಹನ ಖರೀದಿ ಮಾಡಲಿದ್ದೀರಿ. ಮಕ್ಕಳೊಂದಿಗೆ ಆನಂದದಿಂದ ಕಾಲ ಕಳೆಯುವಿರಿ. ಪ್ರಯಾಣದಲ್ಲಿ ಗಣ್ಯ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಹಿಂದಿನ ಸಂತಸದ ಸಮಯವನ್ನು ಮೆಲುಕು ಹಾಕಲಿದ್ದೀರಿ.

ಕುಂಭ

ಹಿರಿಯರ ಮಾತಿನಂತೆ ನಡೆದಲ್ಲಿ ಹೆಚ್ಚಿನ ಸಂಪಾದನೆ. ಪ್ರೀತಿಪಾತ್ರರೊಂದಿಗೆ ವಿಹಾರಾರ್ಥ ಕಾಲ ಕಳೆಯುವ ಸಾಧ್ಯತೆ. ಮನೆಯಲ್ಲಿ ಹಬ್ಬದ ವಾತಾವರಣ. ಸ್ತ್ರೀಯರಿಗೆ ಗೌರವ ಪ್ರಾಪ್ತಿ.

ಮೀನ

ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಉದಾರ ಮನೋಭಾವದಿಂದ ಸಹಾಯ ಮಾಡಲಿದ್ದೀರಿ. ಸ್ತ್ರೀಯರಿಗೆ ಮನೋಭಿಲಾಷೆ ಈಡೇರಿಲಿದೆ.

ಕಾಮ ಕಸ್ತೂರಿ ಬೀಜದ ಉಪಯೋಗಗಳು ತಿಳಿಯೋಣ ಬನ್ನಿ

  1. ಕಾಮ ಕಸ್ತೂರಿ (sabja seeds)ಬೀಜವನ್ನು ದಿನಾಲೂ ಉಪಯೋಗಿಸಿ ಇದರಿಂದ ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಬಹುದು. ಹಾಗು ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯವಾಗುತ್ತದೆ.
  2. ಇದು ಆಂಟಿಬಯೋಟಿಕ್ಸ್ ಆಗಿ ಕೆಲಸ ಮಾಡುತ್ತದೆ. ಇದನ್ನು ಪ್ರತಿದಿನ ರಾತ್ರಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟರಾಲ್ ಅನ್ನು ಹೊರಗಡೆ ಹಾಕಲು ಸಹಾಯವಾಗುತ್ತದೆ.
  3. ಇದನ್ನು ಬೇಸಿಗೆ ಅಲ್ಲಿ ಪ್ರತಿನಿತ್ಯ ಕುಡಿಯುವುದರಿಂದ ನಮಗೆ ಡಿಹೈಡ್ರಾಷನ್ ಇಂದ ಮುಕ್ತಿ ಸಿಗುತ್ತದೆ.
  4. ನಿಮ್ಮ ದೇಹದ ಉಷ್ಣತೆ ಹೆಚ್ಚಿದರೆ ನೀವು 5 – 6 ದಿನ ಇದನ್ನು ಕುಡಿಯುತ್ತ ಬಂದರೆ ನಿಮ್ಮ ದೇಹದ ಉಷ್ಣತೆ ಅನ್ನು ಕಡಿಮೆ ಆಗುತ್ತದೆ.
  5. ನಿಮಗೆ ಥೈರಾಯಿಡ್ ಸಮಸ್ಯೆ ಇದ್ದರೆ ಇದೊಂದು ಒಳ್ಳೆ ಮನೆ ಮದ್ದು. ಇದನ್ನು ದಿನಾಲೂ ಕುಡಿಯುತ್ತ ಬನ್ನಿ ಥೈರಾಯಿಡ್ ಇಂದ ಮುಕ್ತಿ ಕಾಣುತ್ತೀರಿ.
  6. ಸಕ್ಕರೆ ಕಾಯಿಲೆ ಇರುವವರು ಕೂಡ ಇದನ್ನು ಸೇವನೆ ಮಾಡುವುದರಿಂದ ಡಯಾಬೆಟಿಕ್ಸ್ ಕಂಟ್ರೋಲ್ ಮಾಡುತ್ತದೆ.
  7. ನಿಮಗೆ ಹುಳುಕಡ್ಡಿ ಅಥವಾ ಖಜ್ಜಿ ಸಮಸ್ಯೆ ಅಥವಾ ಸೋರಿಯಾಸಿಸ್ ಅಂತ ಸಮಸ್ಯೆಗಳಿದ್ದರೆ ಈ ಬೀಜವನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನಿಮಗೆ ತೊಂದರೆ ಆಗಿರುವ ಭಾಗಕ್ಕೆ ಹಚ್ಚುತ್ತಾ ಬನ್ನಿ. ಇದರಿಂದ ಬೇಗ ಗುಣಮುಖರಾಗುವುರಿ.
    Note: ಹೆಣ್ಣುಮಕ್ಕಳು ಈ ನೀರನ್ನು ರಾತ್ರಿಯಲ್ಲಿ ಕುಡಿಯುತ್ತ ಬಂದರೆ ಒಳ್ಳೆದು.

ಮಾರ್ಚ್ 29, ಸೋಮವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪಾಲ್ಗುಣ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಾಡ್ಯ, ನಕ್ಷತ್ರ : ಹಸ್ತ,

ರಾಹುಕಾಲ : 7.53 ರಿಂದ 9.25
ಗುಳಿಕಕಾಲ : 2.00 ರಿಂದ 3.32
ಯಮಗಂಡಕಾಲ : 10.57 ರಿಂದ 12.29

ಮೇಷ

ಮಕ್ಕಳ ಪ್ರತಿಭೆ ಬೆಳಕಿಗೆ ಬಂದು ಅಪಾರ ಸಂತೋಷ ತರಲಿದೆ. ಸತ್ಕಾರ ನಿರ್ವಹಣೆಯಲ್ಲಿ ಧಾರ್ಮಿಕ ಮುಖಂಡರು ಮುಖ್ಯ ಪಾತ್ರ ವಹಿಸಲಿದ್ದಾರೆ. ವೈವಾಹಿಕ ವ್ಯವಹಾರಗಳನ್ನು ಮುಂದೂಡಲಿದ್ದೀರಿ.

ವೃಷಭ

ಶೈಕ್ಷಣಿಕ ವಲಯದಲ್ಲಿ ವಿದ್ಯಾರ್ಥಿಗಳ ಅಪಾರ ಸಾಧನೆ ಗಣನೀಯವಾಗಿ ಹೆಚ್ಚಲಿದೆ. ಸಮಾಜಸೇವೆಯಲ್ಲಿ ಭಾಗಿ. ಹಿರಿಯರಿಂದ ಪ್ರಶಂಸೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ.

ಮಿಥುನ

ಅನಿವಾರ್ಯ ಕಾರಣದಿಂದ ತಿರುಗಾಟ. ಷೇರುಪೇಟೆ, ಹೂಡಿಕೆಗಳಲ್ಲಿ ಉತ್ತಮ ಲಾಭ. ರೇಷ್ಮೆ ನೇಕಾರರಿಗೆ ಉತ್ತಮ ಆದಾಯ. ಹೊಸ ವಸ್ತ್ರ ವಿನ್ಯಾಸಕಾರರು, ಕಲಾವಿದರುಗಳಿಗೆ ಅವಕಾಶಗಳು ಹೆಚ್ಚಲಿದೆ.

ಕಟಕ

ಸತ್ಕಾರ್ಯಗಳನ್ನು ಸರಾಗವಾಗಿ ನೆರವೇರಿಸಲಿದ್ದೀರಿ. ವ್ಯವಹಾರದಲ್ಲಿ ಸಾಧಾರಣ ಲಾಭ. ಉದ್ದೇಶಿತ ಕಾರ್ಯಗಳಿಗೆ ಸಕಾಲದಲ್ಲಿ ಬರಬೇಕಾದ ಹಣ ಬರುವುದರಿಂದ ಅನುಕೂಲ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದಾಗಿ ದೇಹಾಲಾಸ್ಯ ಉಂಟಾದೀತು.

ಸಿಂಹ

ಬರವಣಿಗೆಯಿಂದ ಉತ್ತಮ ಆದಾಯ. ಕಠಿಣವೆನಿಸಿದ ಕಾರ್ಯಗಳು ಸಹ ಸುಗಮವಾಗಿ ನೆರವೇರುವುದರಿಂದಾಗಿ ನೆಮ್ಮದಿ ಮೂಡಲಿದೆ. ಮನೆಯಲ್ಲಿ ಹಬ್ಬದ ವಾತಾವರಣ. ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗುವಿರಿ.

ಕನ್ಯಾ

ಅಧಿಕ ಓಡಾಟದ ಸಾಧ್ಯತೆ. ಸುದ್ದಿ ಮಾಧ್ಯಮದಲ್ಲಿ ದುಡಿಯುವವರಿಗೆ ಬಿಡುವಿಲ್ಲದ ಕಾರ್ಯದೊಂದಿಗೆ ಯಶಸ್ಸು ದೊರಕಲಿದೆ. ಎಂಜಿನೀಯರುಗಳಿಗೆ ಧನಲಾಭದೊಂದಿಗೆ ಉನ್ನತ ಸ್ಥಾನದಲ್ಲಿರುವವರಿಂದ ಪ್ರಶಂಸೆ.

ತುಲಾ

ಹಣಕಾಸು ವ್ಯವಹಾರ ನಡೆಸುವವರು ಯೋಜನೆ ವಿಸ್ತರಣೆ ಮಾಡಲು ಉತ್ತಮ ದಿನ. ಸ್ಥಾನದಲ್ಲಿ ಬದಲಾವಣೆ. ಸಂಪರ್ಕ, ಸಂವಹನ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಗೌರವಾದರ ದೊರಕಲಿವೆ. ಹಣ ವ್ಯಯ.

ವೃಶ್ಚಿಕ

ಕೋರ್ಟ್ ಕಚೇರಿಗಳಲ್ಲಿನ ಕೆಲಸಗಳಲ್ಲಿ ಯಶಸ್ಸು. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ. ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಲಾಭ. ಮಂಗಳ ಕಾರ್ಯಗಳು ಜರುಗುವವು. ಆರೋಗ್ಯದಲ್ಲಿ ಸುಧಾರಣೆ.

ಧನು

ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟೋಣ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಒಳ್ಳೆಯ ಆದಾಯ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವವು. ಕೆಲಸಕಾರ್ಯಗಳು ನಿರ್ವಿಘ್ನದಾಯಕವಾಗಿ ಸಾಗುವವು.

ಮಕರ

ನಿಮ್ಮ ಬಯಕೆಗಳು ಈಡೇರುವ ದಿನವಾಗಲಿದೆ. ಹಣಕಾಸಿನ ಅನುಕೂಲತೆಗಳು ಕೂಡಿಬರಲಿವೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ. ವಿವಾಹಾಪೇಕ್ಷಿತರಿಗೆ ಅನುರೂಪ ಸಂಗಾತಿಯು ದೊರಕಿ ನಿಶ್ಚಯವಾಗಲಿದೆ.

ಕುಂಭ

ವ್ಯಾಪಾರಿಗಳಿಗೆ ಉತ್ತಮ ಲಾಭ. ಕೃಷಿಕರಿಗೆ ಉತ್ತಮ ಆದಾಯ. ಸರಕಾರಿ ನೌಕರರಿಗೆ ಇತರೆ ಮೂಲಗಳಿಂದ ಅಧಿಕ ಆದಾಯ. ಆದಾಯಕ್ಕಿಂತ ವೆಚ್ಚ ಅಧಿಕವಾಗುವ ಸಾಧ್ಯತೆ. ಕಳ್ಳ ಕಾಕರ ಹಾಗೂ ಅಗ್ನಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಮೀನ

ಐಶ್ವರ್ಯ ವೃದ್ಧಿಸುವುದು. ಅವಿವಾಹಿತರಿಗೆ ವಿವಾಹ ಯೋಗ. ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ. ವೈದ್ಯಕೀಯ ವೆಚ್ಚ ಭರಿಸಬೇಕಾದೀತು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದ್ದೀರಿ.

ಮಾರ್ಚ್ 28, ಭಾನುವಾರ , 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಶುಕ್ಲ ಪಕ್ಷ. ತಿಥಿ : ಹುಣ್ಣಿಮೆ,
ನಕ್ಷತ್ರ : ಉತ್ತರ, ವಾರ : ಭಾನುವಾರ,

ರಾಹುಕಾಲ: 5.03 ರಿಂದ 6.34
ಗುಳಿಕಕಾಲ: 3.32 ರಿಂದ 5.03
ಯಮಗಂಡಕಾಲ: 12.29 ರಿಂದ 2.00

ಮೇಷ

ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.

ವೃಷಭ

ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರದ ಪ್ರಯಾಣ. ಪತ್ನಿವರ್ಗದವರಿಂದ ಸಹಾಯ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆಗಳು ನಿವಾರಣೆಯಾಗಲಿವೆ.

ಮಿಥುನ

ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.

ಕಟಕ

ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ. ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದೀತು. ಉತ್ತಮ ಆದಾಯ. ಪುಸ್ತಕ ಗ್ರಂಥಗಳ ಖರೀದಿಗಾಗಿ ವೆಚ್ಚವನ್ನು ಭರಿಸಬೇಕಾದೀತು.

ಸಿಂಹ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರಹೊಗಬೇಕಾದೀತು. ದೂರದ ಪ್ರಯಾಣ. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ.

ಕನ್ಯಾ

ತಂದೆ–ತಾಯಿಗಳಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಯೋಗ. ಸತ್ಪುರುಷರ ಸಂದರ್ಶನ ಮಾಡುವ ಸಾಧ್ಯತೆ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ.

ತುಲಾ

ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿದೆ. ಸಾಲದಿಂದ ಮುಕ್ತಿ ಹೊಂದುವಿರಿ.

ವೃಶ್ಚಿಕ

ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾದೀತು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ. ವಾಸಸ್ಥಳ ಬದಲಾವಣೆ ಸಾಧ್ಯತೆ. ಅತಿಯಾದ ಪ್ರಯಾಣದಿಂದಾಗಿ ದೇಹಾಯಾಸ.

ಧನು

ತರಕಾರಿ, ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ಸಾಧ್ಯತೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ.

ಮಕರ

ಸಂಶೋಧನಾ ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸಿನ ಅನುಕೂಲತೆ. ಮನೆಯವರ ದೂರ ಪ್ರಯಾಣದಿಂದಾಗಿ ಒಂಟಿತನ ಮನೆ ಮಾಡೀತು.

ಕುಂಭ

ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.

ಮೀನ

ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಕೆಲಸ ಮಾಡುವವರಿಗೆ ಅನುಕೂಲ. ರಾಜಕೀಯದಲ್ಲಿ ತಲ್ಲೀನರಾದವರಿಗೆ ಮಾನಸಿಕ ದ್ವಂದ್ವಗಳು ಏರ್ಪಡಲಿದೆ.

ಮಾರ್ಚ್ 26, ಶುಕ್ರವಾರ,2021 : ನಿತ್ಯ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,
ದ್ವಾದಶಿ / ಉಪರಿ ತ್ರಯೋದಶಿ,
ಶುಕ್ರವಾರ, ಮಖಾ ನಕ್ಷತ್ರ.

ರಾಹುಕಾಲ: 10:58 ರಿಂದ 12: 29
ಗುಳಿಕಕಾಲ: 7.56 ರಿಂದ 09:27
ಯಮಗಂಡಕಾಲ: 03:31 ರಿಂದ 05:02

ಮೇಷ

ಗೃಹ ನವೀಕರಣ ಕಾರ್ಯಗಳು ಭರದಿಂದ ಸಾಗಲಿದೆ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಭೂ ಖರೀದಿ ವ್ಯವಹಾರವನ್ನು ಮಾಡಲು ಸಕಾಲ. ಅತಿಯಾದ ಕೆಲಸದಿಂದಾಗಿ ದೇಹಾಲಾಸ್ಯ ಉಂಟಾದೀತು.

ವೃಷಭ

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಾಧ್ಯತೆ. ನ್ಯಾಯಾಲಯದಲ್ಲಿನ ಕಟ್ಳೆಗಳಿಗೆ ಚಾಲನೆ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ. ಸಾಹಿತಿ, ಬುದ್ಧಿಜೀವಿಗಳಿಗೆ ಗೌರವ ಪ್ರಾಪ್ತಿ.

ಮಿಥುನ

ಉನ್ನತ ಅಧ್ಯಯನಕ್ಕೆ ಬಂಧುಗಳ ಸಹಕಾರ. ಸಾರಾಸಾರ ವಿವೇಚನೆಯಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಗೃಹ ಕಲಹಗಳಿಗೆ ಬಂಧುಗಳ ಹಿರಿಯರ ಸಕಾಲಿಕ ಮಾರ್ಗದರ್ಶನ.

ಕಟಕ

ಶುಭ ಕಾರ್ಯಗಳು ನಿಮ್ಮ ಮನದಿಚ್ಛೆಯಂತೆ ನೆರವೇರುವುದು. ಮಂಗಳ ಕಾರ್ಯಗಳ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಧೈರ್ಯ ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲದಿಂದಾಗಿ ಕಾರ್ಯಾನುಕೂಲ.

ಸಿಂಹ

ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗಾವಕಾಶ. ವಿದೇಶಿ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ತಿರುವು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪಮಟ್ಟಿನ ತೊಂದರೆ.

ಕನ್ಯಾ

ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನಾನುಕೂಲತೆ. ಆರ್ಥಿಕ ಮುಗ್ಗಟ್ಟು ತಲೆದೋರೀತು. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ ಹೆಚ್ಚಳವಾಗಲಿದೆ. ರಾಜಕೀಯದಲ್ಲಿ ಸೂಕ್ತ ಸ್ಥಾನ ಸಾಧ್ಯತೆ.

ತುಲಾ

ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆ. ಗಹನವಾದ ವಿಚಾರವಾಗಿ ಗೆಳೆಯರೊಂದಿಗೆ ಚರ್ಚಿಸಲಿದ್ದೀರಿ. ಶಾರೀರಿಕ ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ.

ವೃಶ್ಚಿಕ

ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸ. ಕಟ್ಟೋಣ ಕೆಲಸದಲ್ಲಿ ತೊಡಗಿರುವವರು ಜಾಗರೂಕರಾಗಿರುವುದು ಅಗತ್ಯ. ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ ಸಾಧ್ಯತೆ.

ಧನು

ಕೆಲಸ ಕಾರ್ಯಗಳಲ್ಲಿ ಅನುಕೂಲಕರವಾಗಿ ತೋರಿಬರಲಿದೆ. ಆತ್ಮವಿಶ್ವಾಸದಿಂದ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವುದರಿಂದ ಯಶಸ್ಸು. ಆಸ್ತಿ ಲಾಭದ ಲಕ್ಷಣಗಳು ಕಂಡು ಬರುವುದು. ಮಾನಸಿಕ ನೆಮ್ಮದಿ.

ಮಕರ

ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸದಿಂದಾಗಿ ವೈಯಕ್ತಿಕ ಕೆಲಸಗಳು ನಿಧಾನವಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು.

ಕುಂಭ

ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆ. ಸಾಮಾಜಿಕೆ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತೋಷವನ್ನು ಅನುಭವಿಸಲಿದ್ದೀರಿ.

ಮೀನ

ಹೊಗಳಿಕೆಯಿಂದಾಗಿ ನಷ್ಟ ಅನುಭವಿಸಬೇಕಾದ ಪ್ರಸಂಗ ಎದುರಾದೀತು. ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯ ಸಾಧನೆ ಅಭಿನಂದನಾರ್ಹ : ಕುಯಿಲಾಡಿ

ವಿಶ್ವದಾದ್ಯಂತ ಕೋವಿಡ್-19 ಲಸಿಕೆಯನ್ನು ರವಾನಿಸಿರುವ ಭಾರತ ಜಾಗತಿಕ ಮನ್ನಣೆ ಪಡೆದಿರುವುದು ಐತಿಹಾಸಿಕ ಸಾಧನೆಯಾಗಿದೆ. ಪ್ರಸಕ್ತ ದೇಶದಾದ್ಯಂತ 5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅದ್ವಿತೀಯ ಸಾಧನೆ ಅಭಿನಂದನಾರ್ಹ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕೊರೋನಾ ವೈರಸ್ ನ 2ನೇ ಅಲೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ತೋರಿ ಬರುತ್ತಿದ್ದಂತೆಯೇ ಕೇಂದ್ರ ಸರಕಾರ ಇದೀಗ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿರುವುದು ಪ್ರಶಂಸನೀಯವಾಗಿದೆ. ಈಗಾಗಲೇ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಪಡೆಯುವ ಅವಕಾಶ ನೀಡಲಾಗಿತ್ತು. ಕೇಂದ್ರ ಸರಕಾರದ ಈ ನಡೆಯಿಂದ ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟಲು ಕೂಡಾ ಸಾಧ್ಯವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಈ ನಿಟ್ಟಿನಲ್ಲಿ ಎಪ್ರಿಲ್ 1ರಿಂದ ಎಪ್ರಿಲ್ 30ರ ವರೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಲಸಿಕೆ ವಿತರಣಾ ಪ್ರಕ್ರಿಯೆಗೆ ವೇಗ ನೀಡುವಂತೆಯೂ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದು, ಸಂಬಂಧಪಟ್ಟ ನಾಗರಿಕರು ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಬೇಕಾಗಿದೆ.

ಕೊರೋನಾ ಪ್ರಸರಣ ತಡೆಗೆ ಸೂಕ್ತ
ಮಾರ್ಗೋಪಾಯಗಳಾಗಿರುವ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಸರಕಾರದ ನಿರ್ದೇಶನದಂತೆ ಲಸಿಕೆ ಪಡೆಯುವ ಮೂಲಕ ನಾಗರಿಕರು ತಮ್ಮ ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯದ ಕಾಳಜಿಯನ್ನು ತೋರಬೇಕಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started