ಎಪ್ರಿಲ್ 20, ಮಂಗಳವಾರ,2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 7 ಸಲುವ ಚೈತ್ರ ಶುದ್ಧ ಅಷ್ಟಮಿ 46 ಗಳಿಗೆ ,ದಿನ ವಿಶೇಷ :ಅಶೋಕಾಷ್ಟಮಿ ,ನಿತ್ಯ ನಕ್ಷತ್ರ :ಪುನರ್ವಸು 1|| ಗಳಿಗೆ ,ಮಹಾ ನಕ್ಷತ್ರ :ಅಶ್ವಿ‌ನಿ ,ಋತು :ವಸಂತ ರಾಹುಕಾಲ :3.00-4.30 ಗಂಟೆ ,ಗುಳಿಕ ಕಾಲ :12.00-1.30 ಗಂಟೆ ,ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.16 ಗಂಟೆ

ಮೇಷ

ಸಾಲಕೊಟ್ಟವರಿಂದ ಮರುಪಾವತಿಗಾಗಿ ತಗಾದೆ. ದ್ವೇಷಕ್ಕೆ ಮುಂದಾಗದೇ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿ. ಸಂಗಾತಿಯೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ.

ವೃಷಭ

ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಯಶಸ್ಸು.

ಮಿಥುನ

ಗೆಳೆಯರೊಂದಿಗೆ ಸಮಾಲೋಚನೆ. ಕೆಲಸಕಾರ್ಯಗಳಲ್ಲಿ ನಿಮ್ಮ ಸ್ವಭಾವದಿಂದಾಗಿ ಹಿನ್ನಡೆ. ದೃಢ ನಿರ್ಧಾರದಿಂದ ವ್ಯವಹರಿಸಿ. ಹಿರಿಯರ ಬೆಂಬಲದಿಂದಾಗಿ ಯಶಸ್ಸು.

ಕಟಕ

ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರ ವಿಷಯದಲ್ಲಿ ಎಚ್ಚರದಿಂದಿರುವುದು ಒಳಿತು. ಬಾಲ ಬಡುಕರನ್ನು ದಿನದಮಟ್ಟಿಗೆ ದೂರವಿಡಿ.

ಸಿಂಹ

ಸತ್ಯವನ್ನು ಬಯಲುಗೊಳಿಸಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆ. ವಾಹನ ಖರೀದಿಯ ಯೋಗ. ಯಂತ್ರೋಪಕರಣಗಳ ವ್ಯವಹಾರದಲ್ಲಿ ಅಧಿಕ ಲಾಭ.

ಕನ್ಯಾ

ನಿಮ್ಮ ಇಂದಿನ ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ದೂರದ ಪ್ರಯಾಣ ಖಂಡಿತ ಬೇಡ. ಮಕ್ಕಳಿಂದ ಮನಸ್ಸಿಗೆ ಸಂತಸ ದೊರೆಯುವುದು.

ತುಲಾ

ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಕ್ಕಿಸುವ ಸಾಧ್ಯತೆ. ಮನೆಯವರೊಂದಿಗೆ ದೂರದ ಪ್ರಯಾಣ. ಆರೋಗ್ಯದಲ್ಲಿ ವೃದ್ಧಿಯಾಗಿ ಸಂತಸ ಮೂಡುವುದು.

ವೃಶ್ಚಿಕ

ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆ. ಸಮಾಧಾನ ನಿಮ್ಮ ನೆರವಿಗೆ ಬರುವುದು. ಸಹೋದರಿಯರಿಂದ ಸಕಾಲಿಕ ಸಾಂತ್ವನ.

ಧನು

ಗುಂಪುಗಾರಿಕೆಯಿಂದಾಗಿ ಧನ ಮಾನಗಳ ಹಾನಿ. ಅನ್ಯರ ಮೇಲೆ ವಿನಾ ಸಂಶಯ ಒಳ್ಳೆಯದಲ್ಲ. ದೂರದಲ್ಲಿರುವ ಮಕ್ಕಳ ಆಗಮನ ಸಾಧ್ಯತೆ.

ಮಕರ

ಮನಸ್ಸಿನಲ್ಲಿ ಹರಿಯುತ್ತಿರುವ ಪ್ರೀತಿ ಪ್ರೇಮಗಳ ಹುಚ್ಚು ಹೋಳೆಗೆ ಲಗಾಮು ಹಾಕಿಕೊಳ್ಳಿ. ಸ್ನೇಹದ ವಿಷಯದಲ್ಲಿ ಎಡವಿ ಬೀಳುವ ಸಾಧ್ಯತೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರವಿರಲಿ.

ಕುಂಭ

ಬೇರೆಯವರ ಥಳುಕು ಬಳುಕಿನ ಮಾತಿಗೆ ಮರುಳಾಗಿ ಮೋಸಹೋಗುವ ಸಾಧ್ಯತೆ. ದಿನದ ಮಟ್ಟಿಗೆ ದೂರದ ಪ್ರಯಾಣ ಬೇಡ. ಹಿತಕರ ವಾತಾವರಣ ಮೂಡಲಿದೆ.

ಮೀನ

ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಸಾಧ್ಯತೆ. ಮನಸ್ಸಿಗೆ ನೆಮ್ಮದಿ ನೀಡುವ ಹೊಸ ಮಾರ್ಗವೊಂದು ಗೋಚರ. ವ್ಯಾಪಾರಸ್ಥರಿಗೆ ಗಣನೀಯ ಲಾಭ ದೊರಕುವುದು.

ಬಿಜೆಪಿ ಜಿಲ್ಲಾ ಹಿಂ.ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆ : ಹಿಂದುಳಿದ ವರ್ಗಗಳಿಂದ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ

ಬಿಜೆಪಿಯ ವಿವಿಧ ಮೋರ್ಚಾಗಳು ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪಕ್ಷದ ಒಂದು ಬಲಿಷ್ಠ ಅಂಗವಾಗಿದ್ದು ಪಕ್ಷಕ್ಕೆ ಶಕ್ತಿ ತುಂಬುವಲ್ಲಿ ಕಾರ್ಯೋನ್ಮುಖವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸೌಲಭ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮೂಲಕ ಹಿಂ.ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಮೋರ್ಚಾ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮುಂಬರಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡುವ ಜೊತೆಗೆ ಚುನಾವಣೆಯ ಭರ್ಜರಿ ಗೆಲುವಿಗೆ ಕಂಕಣಬದ್ಧರಾಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಹಿಂ. ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಪಣಿಯೂರು ಮಾತನಾಡಿ, ಜಿಲ್ಲಾ ಹಿಂ. ವರ್ಗಗಳ ಮೋರ್ಚಾ ಸಕ್ರಿಯವಾಗಿದ್ದು, ಈಗಾಗಲೇ ಹಿಂ. ವರ್ಗಗಳ ಅಭಿವೃದ್ಧಿಗೆ ಸರಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳು ಮತ್ತು ಹಿಂ.ವರ್ಗಗಳ ಹಾಸ್ಟೆಲ್‍ಗಳ ಸ್ಥಿತಿಗತಿಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ಹಿಂ.ವರ್ಗಗಳ ಕಲ್ಯಾಣ ಸಚಿವರೊಂದಿಗೆ ಸೂಕ್ತ ವಿಚಾರ ವಿನಿಮಯ ನಡೆಸಲಾಗಿದೆ. ಪಕ್ಷದ ಸೂಚನೆಯಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಹಿಂ.ವರ್ಗಗಳ ಮೋರ್ಚಾ ಬದ್ಧತೆಯಿಂದ ಶ್ರಮಿಸಲಿದೆ ಎಂದರು.

ಬಿಜೆಪಿ ಜಿಲ್ಲಾ ಹಿಂ.ವರ್ಗಗಳ ಮೋರ್ಚಾದ ಪ್ರಭಾರಿ ರೇಶ್ಮಾ ಉದಯ ಶೆಟ್ಟಿ ಮಾತನಾಡಿ ಸಂಘಟನಾತ್ಮಕ ವಿಚಾರಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಹಿಂ.ವರ್ಗಗಳ ಮೋರ್ಚಾದ ಮಂಡಲವಾರು ಪ್ರಭಾರಿಗಳನ್ನು ಘೋಷಿಸಲಾಯಿತು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿಜೆಪಿ ಹಿಂ.ವರ್ಗಗಳ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು, ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಜಿಲ್ಲಾ ಹಿಂ.ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕುಮಾರ್ ಬಾಣ ವಂದಿಸಿದರು.

ಎಪ್ರಿಲ್ 19, ಸೋಮವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ.
ತಿಥಿ: ಸಪ್ತಮಿ, ನಕ್ಷತ್ರ : ಪುನರ್ವಸು,
ವಾರ : ಸೋಮವಾರ

ರಾಹುಕಾಲ:7.43 ರಿಂದ 9.16
ಗುಳಿಕಕಾಲ :1.56 ರಿಂದ 3.29
ಯಮಗಂಡಕಾಲ :10.49 ರಿಂದ 12.22

ಮೇಷ

ವೈಯಕ್ತಿಕ ವಿಚಾರಗಳತ್ತ ಲಕ್ಷ್ಯ ಕೊಡಿ. ಹೊಸ ಉದ್ಯಮವೊಂದನ್ನು ಪ್ರಾರಂಭಿಸುವ ಬಗೆಗೆ ಮಾತುಕತೆ ನಡೆಸುವಿರಿ. ಹಿತಮಿತವಾದ ಮಾತುಗಳಿಂದ ಕಾರ್ಯಸಿದ್ಧಿ. ಮನೆಯಲ್ಲಿ ಆರೋಗ್ಯದೊಂದಿಗೆ ನೆಮ್ಮದಿ ನೆಲೆಸಲಿದೆ.

ವೃಷಭ

ಮಹಿಳೆಯರಿಗೆ ಆರ್ಥಿಕ ಸಬಲತೆಗೆ ಬೇಕಾದ ಅನುಕೂಲತೆಗಳು ದೊರಕಲಿವೆ. ಸರ್ಕಾರಿ ಸಂಸ್ಥೆಗಳಲ್ಲಿ ದುಡಿಯುವವರಿಗೆ ಬಡ್ತಿ ಸಾಧ್ಯತೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ನೀಡಬೇಕಾದೀತು.

ಮಿಥುನ

ರಾಜಕೀಯ ಮುತ್ಸದ್ದಿಗಳಿಗೆ ಉನ್ನತ ಹುದ್ದೆ ಅಲಂಕರಿಸುವ ಅವಕಾಶ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆಕಸ್ಮಿಕ ಧನಲಾಭ. ವಿವಾಹ ಸಂಬಂಧದ ಮಾತುಕತೆಗಳು ಮುಂದುವರಿದು ಯಶ ಕಾಣಲಿದೆ.

ಕಟಕ

ಸೌಂದರ್ಯವರ್ಧಕ ವಸ್ತುಗಳ ವ್ಯವಹಾರವನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ಹಣಕಾಸಿನ ವಿಷಯದಲ್ಲಿ ಅನುಕೂಲತೆಗಳು.

ಸಿಂಹ

ಬಂಧು ಮಿತ್ರರೊಂದಿಗೆ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಉದರ ಸಂಬಂಧಿ ಕಾಯಿಲೆಗಳು ಕಿರಿ ಕಿರಿ ಉಂಟುಮಾಡಬಹುದು. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ದೂರದ ಪ್ರಯಾಣ ಸಾಧ್ಯತೆ. ಬಂಧುಗಳಿಂದ ಸಹಕಾರ.

ಕನ್ಯಾ

ಮನೆಯ ನವೀಕರಣ ಅಥವಾ ನಿರ್ಮಾಣದ ಕೆಲಸಗಳು ಪ್ರಾರಂಭವಾಗುವವು. ಬಡವರಿಗೆ ಧಾನ್ಯಗಳನ್ನು ದಾನ ಮಾಡುವ ಅವಕಾಶ. ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುವಿರಿ.

ತುಲಾ

ನ್ಯಾಯಾಲಯದಲ್ಲಿನ ತಗಾದೆಗಳು ನಿಮ್ಮ ಪರವಾಗಿ ಇತ್ಯರ್ಥವಾಗುವುದರಿಂದ ಮಾನಸಿಕ ನೆಮ್ಮದಿ. ಹಿರಿಯ ಅಧಿಕಾರಿಗಳಿಂದ ಮಾನಸಿಕ ಕಿರಿಕಿರಿ. ಆರ್ಥಿಕ ವ್ಯವಹಾರದಲ್ಲಿನ ಉನ್ನತಿಗಾಗಿ ಗಣೇಶ ಪ್ರಾರ್ಥನೆ ಮಾಡಿ.

ವೃಶ್ಚಿಕ

ಸಭೆಯೊಂದರಲ್ಲಿ ಭಾಗವಹಿಸಿ ವಿಷಯವೊಂದರ ಕುರಿತು ಅಭಿಪ್ರಾಯ ಮಂಡಿಸುವ ಸಾಧ್ಯತೆ. ಕಳೆದುಕೊಂಡ ವಸ್ತುಗಳು ಕೈ ಸೇರುವ ಸಂಭವ. ಸಂಸಾರ ಸಮೇತ ದೂರದ ಪ್ರಯಾಣ ಮಾಡಲಿದ್ದೀರಿ. ಮಾನಸಿಕ ನೆಮ್ಮದಿ.

ಧನು

ರಾಜಕೀಯ ಪ್ರೇರಿತ ಕೆಲಸಗಳಲ್ಲಿ ಯಶಸ್ಸು. ಉನ್ನತ ಹುದ್ದೆ ಅಲಂಕರಿಸಿರುವ ಅಧಿಕಾರಿಗಳಿಗೆ ಹೊಂದಿದವರಿಗೆ ವರ್ಗಾವಣೆ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಮನ್ನಣೆ ದೊರಕಲಿದೆ.

ಮಕರ

ವಿದ್ಯಾಭ್ಯಾಸದ ಬಗ್ಗೆ ಹಣಕಾಸಿನ ವ್ಯವಸ್ಥೆ ಮಾಡಬೇಕಾದೀತು. ನೌಕರಸ್ಥರು ಸಹೋದ್ಯೋಗಿಗಳೊಡನೆ ನೇರವಾಗಿ ವ್ಯವಹರಿಸಿ. ಎಲೆಕ್ಟ್ರಿಕಲ್ ಗುತ್ತಿಗೆದಾರರು, ಮಾರಾಟಗಾರರಿಗೆ ಬಿಡುವಿಲ್ಲದ ಕೆಲಸ.

ಕುಂಭ

ವಿಶ್ವಾಸಿಗಳಿಗೆ ಅನಿವಾರ್ಯ ಹಣ ಸಹಾಯ ಮಾಡುವ ಅವಕಾಶ. ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅನುಕೂಲ. ಲಕ್ಷ್ಮೀ ನೃಸಿಂಹ ಸ್ತೋತ್ರ ಪಠಿಸಿ.

ಮೀನ

ವ್ಯವಹಾರಗಳು ಸುಗಮವಾಗಿ ನೆರವೇರುವವು. ಬರಬೇಕಾಗಿರುವ ಹಣ ನಿಮ್ಮ ಕೈ ಸೇರುವುದರಲ್ಲಿ ಅನುಮಾನವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ವಿಷಯದಲ್ಲಿ ಮಾಡಿದ ಪ್ರಯತ್ನಗಳು ಫಲ ನೀಡಲಿವೆ.

ಅಪಪ್ರಚಾರವೇ ಕಾಂಗ್ರೆಸ್ ಜೀವಾಳ: ಕುಯಿಲಾಡಿ ಸುರೇಶ್ ನಾಯಕ್

ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯದಲ್ಲಿ ಜಾರಿಯಲ್ಲಿರುವ ಅನ್ನ ಭಾಗ್ಯ ಯೋಜನೆಯನ್ನು ಕಾಂಗ್ರೆಸ್ ತನ್ನದೇ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ವಿಷಾದನೀಯ. ಪ್ರತೀ ಕೆ.ಜಿ. ಅಕ್ಕಿಗೆ ರೂ.29 ರಂತೆ ಕೇಂದ್ರ ಸರಕಾರ ಭರಿಸುತ್ತಿದ್ದರೂ, ರಾಜ್ಯದ ಪಾಲು ಕೇವಲ 3 ರೂ. ಭರಿಸಿ ಅನ್ನ ಭಾಗ್ಯ ಯೋಜನೆ ತನ್ನದೇ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಅನ್ನ ಭಾಗ್ಯ ಯೋಜನೆಯನ್ನು ರಾಜ್ಯ ಸರಕಾರ ರದ್ದುಮಾಡುವ ಪಿತೂರಿ ಇದೆ ಎಂಬ ಜಿಲ್ಲಾ ಕಾಂಗ್ರೆಸ್ ನ ಆರೋಪದ ಬಗ್ಗೆ ಜಿಲ್ಲಾ ಬಿಜೆಪಿ ತಿರುಗೇಟು ನೀಡಿದೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯು ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೆಸರಿಗೆ ಮಾತ್ರ ಕಡಿಮೆ ದರದ ಆಹಾರ ವ್ಯವಸ್ಥೆ ಎಂಬಂತಿದ್ದು, ಅಸಮರ್ಪಕ ನಿರ್ವಹಣೆಯಿಂದ ಈ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಹಗರಣ ನಡೆದಿರುವುದನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮರೆತಂತಿದೆ.

ರಾಜ್ಯಾದ್ಯಂತ ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಅನ್ನ ಭಾಗ್ಯ, ಬಿಸಿಯೂಟದಂತಹ ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಗತ್ಯ ಮಾರ್ಪಾಡುಗಳೊಂದಿಗೆ ಯಥಾವತ್ತಾಗಿ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯ. ಆದರೆ ಕಾಂಗ್ರೆಸ್ ಮಾತ್ರ ಕೊರೋನಾ ನಿರ್ವಹಣೆಯ ವಿಚಾರದಲ್ಲೂ ರಾಜಕೀಯ ದೃಷ್ಟಿಕೋನದ ಅಪಸ್ವರ ಎತ್ತುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ವಲಸಿಗರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ
ಒನ್ ನೇಶನ್ ಒನ್ ರೇಶನ್ ಕಾರ್ಡ್ ಆಪ್ ಮೂಲಕ ವಲಸಿಗರು, ಕಾರ್ಮಿಕರು ದೇಶದ ಯಾವುದೇ ಭಾಗದಲ್ಲೂ ಸುಲಭವಾಗಿ ಪಡಿತರ ಆಹಾರ ಧಾನ್ಯ ಪಡೆಯಲು ಸದವಕಾಶಗಳಾಗಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರದ ರೂ.6,000 ಜೊತೆಗೆ ರಾಜ್ಯ ಸರಕಾರದ ವತಿಯಿಂದ ರೂ.4,000 ಫಲಾನುಭವಿಗಳ ಖಾತೆಗೆ ಜಮಾ, ಜನಧನ್ ಖಾತೆಗಳಿಗೆ ರೂ.500 ರಂತೆ ಜಮಾ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಉಚಿತ ಆಹಾರ ಧಾನ್ಯ ವಿತರಣೆ ಇವೇ ಮುಂತಾದ ಹಲವಾರು ಸೌಲಭ್ಯಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾಳಜಿಗೆ ಜ್ವಲಂತ ಸಾಕ್ಷಿಯಾಗಿದೆ.

ಇವೆಲ್ಲದರ ನಡುವೆ ಸರಕಾರದ ಎಲ್ಲಾ ನಡೆಗಳನ್ನು ಕೇವಲ ವಿರೋಧಕ್ಕಾಗಿಯೇ ವಿರೋಧಿಸುವುದು ಕಾಂಗ್ರೆಸ್ ನ ಹಳೇ ಚಾಳಿಯಾಗಿದ್ದು, ನಿರಂತರ ಅಪಪ್ರಚಾರವೇ ಕಾಂಗ್ರೆಸ್ ನ ಸಾಧನೆಯಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಪ್ರಿಲ್ 17, ಶನಿವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 4 ಸಲುವ ಚೈತ್ರ ಶುದ್ಧ ಪಂಚಮಿ 35|| ಗಳಿಗೆದಿನ ವಿಶೇಷ :ಪಾವಂಜೆ, ಪುತ್ತೂರು ರಥ ನಿತ್ಯ ನಕ್ಷತ್ರ :ಮೃಗಶಿರಾ 50|| ಗಳಿಗೆ ಮಹಾ ನಕ್ಷತ್ರ :ಆಶ್ವಿ‌ನಿ ಋತು :ವಸಂತ ರಾಹುಕಾಲ :9.00-10.30 ಗಂಟೆ ಗುಳಿಕ ಕಾಲ :6.00-7.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.18 ಗಂಟೆ

ಮೇಷ

ವೈದ್ಯಕೀಯ ಕ್ಷೇತ್ರ, ಸಂಶೋಧಕರು, ಔಷಧ ವಿತರಕರಿಗೆ ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ. ಲೇವಾದೇವಿ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಲಾಭ ದೊರಕಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ವೃಷಭ

ಸಂಪತ್ತಿನಲ್ಲಿ ವೃದ್ಧಿಯನ್ನು ಕಂಡುಕೊಳ್ಳುವಿರಿ. ಜಲಸಂಬಂಧಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಾಧ್ಯತೆ. ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ ಸಾಧ್ಯತೆ. ಹೊಸ ವ್ಯಕ್ತಿಯೊಬ್ಬರ ಪರಿಚಯದಿಂದ ಸಂತಸ ಮೂಡಲಿದೆ.

ಮಿಥುನ

ಸಾಂಸಾರಿಕ ಜೀವನ ಸುಖಾನುಭವವನ್ನು ನೀಡಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಲಭಿಸುವ ಸಾಧ್ಯತೆ. ವ್ಯಾಪಾರದಲ್ಲಿ ಪ್ರಗತಿ.

ಕಟಕ

ಮನಸ್ಸಿಗೆ ಉಲ್ಲಾಸ ತರುವ ಸುದ್ದಿಯನ್ನು ಕೇಳಲಿದ್ದೀರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರತಿಫಲ ನಿರೀಕ್ಷೆ. ಉದ್ಯಮಿಗಳಿಗೆ ವಿಶೇಷ ಅನುಕೂಲತೆ. ಆರಕ್ಷಕ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಪ್ರಾಪ್ತಿ.

ಸಿಂಹಸಗಟು ವ್ಯಾಪಾರದಲ್ಲಿ ತೊಡಗಿರುವವರಿಗೆ ಧನಲಾಭ. ಗಣಕಯಂತ್ರ ಮುಂತಾದ ತಾಂತ್ರಿಕ ವಸ್ತುಗಳ ಖರೀದಿ ಸಾಧ್ಯತೆ. ಬಂಧುಗಳ ಸಹಕಾರದಿಂದ ಸಹೋದರರಿಂದ ಎದುರಾಗಬಹುದಾದ ವಿರೋಧಗಳು ಶಮನಗೊಳ್ಳಲಿವೆ.

ಕನ್ಯಾ

ಮನಸ್ಸಿಗೆ ಸ್ವಲ್ಪಮಟ್ಟಿನ ವ್ಯಥೆ. ಮಕ್ಕಳ ವಿಷಯದಲ್ಲಿ ಗಮನ ಅಗತ್ಯ. ಸ್ತ್ರೀಯರಿಗೆ ದೈಹಿಕ ಶ್ರಮ. ಯುವತಿಯರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ನೇಹಿತರೊಂದಿಗೆ ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ವಿರಸ.

ತುಲಾ

ವ್ಯವಸಾಯದಲ್ಲಿನ ಅಭಿವೃದ್ಧಿಯಿಂದ ಆದಾಯದಲ್ಲಿ ಹೆಚ್ಚಳ. ಔಷಧ ವಿತರಕರಿಗೆ ಅನುಕೂಲಕರ ವ್ಯವಹಾರ ಸಾಗಲಿದೆ. ಆಭರಣ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಚೇತರಿಕೆ ಉಂಟಾಗಿ ಲಾಭದಲ್ಲಿ ಹೆಚ್ಚಳವಾಗಲಿದೆ.

ವೃಶ್ಚಿಕ

ಜಮೀನು ಆಸ್ತಿಗಳಿಗೆ ಸಂಬಂಧಿಸಿದ ನೋಂದಣಿ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸದವಕಾಶ. ಯೋಧರು, ಕ್ರೀಡಾಪಟುಗಳಿಗೆ ಸರ್ಕಾರದ ಗೌರವ.

ಧನು

ಸಂಗೀತ ಮೊದಲಾದ ಲಲಿತಕಲೆಗಳ ಪರಿಣತರಿಗೆ ಪ್ರದರ್ಶನದ ಅವಕಾಶಗಳೊಂದಿಗೆ ಸಾರ್ವಜನಿಕ ಮನ್ನಣೆಗೆ ಪ್ರಾಪ್ತವಾಗುವ ಅವಕಾಶ. ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಮಕ್ಕಳಿಗೆ ವಿದೇಶಕ್ಕೆ ತೆರಳುವ ಅವಕಾಶ.

ಮಕರ

ಬರಬೇಕಾದ ಹಣ ಹಿಂದಿರುಗಿ ಬರಲಿದೆ. ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ ಅಥವಾ ಬೆದರಿಕೆ. ಎಣ್ಣೆ, ಜೇನುತುಪ್ಪ, ಹಾಲು ಇತ್ಯಾದಿ ದ್ರವ ಪದಾರ್ಥಗಳ ವ್ಯಾಪಾರ ವ್ಯವಹಾರದಲ್ಲಿ ಅತ್ಯಂತ ಲಾಭ ದೊರಕಲಿದೆ.

ಕುಂಭ

ಗೃಹನಿರ್ಮಾಣ ಅಥವಾ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಗಣ್ಯ ವ್ಯಕ್ತಿಗಳ ಸಹಕಾರದಿಂದ ಕೆಲಸಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ.

ಮೀನ

ರಾಜಕೀಯ ಕ್ಷೇತ್ರದಲ್ಲಿ ವ್ಯವಹರಿಸುವವರಿಗೆ ಉತ್ತಮ ಸ್ಥಾನ ಲಭ್ಯ. ಆಸ್ತಿ ಖರೀದಿಯ ಸಾಧ್ಯತೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನಿರೀಕ್ಷಿತ ಯಶವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು.

ಪಿಂಕ್ ವಾಟ್ಸಾಪ್ ಲಿಂಕ್ ಒತ್ತುವ ವಾಟ್ಸಾಪ್ ಬಳಕೆದಾರರೇ ಎಚ್ಚರ! ಸದ್ದಿಲ್ಲದೇ ಎಂಟ್ರಿಯಾಗುತ್ತೇ ವಾಟ್ಸಾಪ್ ಲಿಂಕ್ ವೈರಸ್!

ವಾಟ್ಸಪ್ ಜಾಲತಾಣದಲ್ಲಿ ಹೊಸ ಲಿಂಕ್ ಒಂದು ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಹರಿದಾಡುತಿದ್ದು ಈ ಲಿಂಕ್ ಒತ್ತಿದ ಅದೆಷ್ಟೋ ಮಂದಿ ಹೊಸ ಅವತಾರ ಕಂಡು ಬೆಚ್ಚಿ ಬಿದ್ದಿದ್ದಾರೆ.

ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವರ್ಡ್ ಆಗುತ್ತಿದೆ ಯಾರ ಜೊತೆಗೆಲ್ಲಾ ವಾಟ್ಸಪ್ ಕನೆಕ್ಷನ್ ಇಟ್ಟುಕೊಂಡಿದ್ದಾರೋ ಅವರೆಲ್ಲರಿಗೂ ಲಿಂಕ್ ತನ್ನಿಂದ ತಾನೇ share ಆಗುತ್ತಿದ್ದು ಪಿಂಕ್ ಹೆಸರಲ್ಲಿ ಯಾರೋ ಮಾಂತ್ರಿಕ ನಕಲಿ ಲಿಂಕ್ ಬಿಟ್ಟು ಯಾಮಾರಿಸಿದ್ದಾರೆ.

ಈ ಲಿಂಕ್ ತನ್ನಿಂದ ತಾನೇ ಒತ್ತಿದ ವ್ಯಕ್ತಿ ಎಷ್ಟು ಗ್ರೂಪ್ ಗಳಲ್ಲಿ ಸದಸ್ಯರಾಗಿದ್ದಾರೆ ಮತ್ತು ಅವರ ಜೊತೆ ವೈಯಕ್ತಿಕವಾಗಿ ಯಾರೆಲ್ಲ ಲಿಂಕ್ ಹೊಂದಿದ್ದಾರೆ ಅವೆರಲ್ಲರಿಗೂ ಈ ಲಿಂಕ್ ಹೋಗ್ತಾ ಇತ್ತು. ಹೊಸ ವರ್ಷನ್ ಏನೋ ಇರಬೇಕು ಎಂದು ಹೊಸ ವ್ಯಕ್ತಿ ಅದನ್ನು ಒತ್ತಿದ ಕೂಡಲೇ ಅದು ಮತ್ತೆ ಎಲ್ಲರ ಜೊತೆಗೂ ಹಂಚಿಕೆ ಆಗ್ತಾ ಇತ್ತು. ಇದು ಹೊಸ ರೀತಿಯ ವೈರಸ್ ಆಗಿದ್ದು ವಾಟ್ಸಪಲ್ಲಿ ಕುಟ್ಟುತ್ತಾ ಇರುವ ಶೂರರೆಲ್ಲಾ ಈ ಲಿಂಕಾಸುರನ ಕೂಪಕ್ಕೆ ಸಿಲುಕಿ ಕೆಲಕಾಲ ಒದ್ದಾಡಿದ್ದಾರೆ.  

ಕೆಲವರಂತೂ ಈ ಲಿಂಕ್ ವೈರಸ್ ಅನ್ನೋದು ಗೊತ್ತಾಗುತ್ತಲೇ ಮತ್ತೆ ಡಿಲೀಟ್ ಬಟನ್ ಒತ್ತಲು ಆರಂಭಿಸಿದ್ದಾರೆ. ಆದರೆ, ಒಮ್ಮೆ ಒತ್ತಿದರೆ ಮುಗೀತು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಲಿಂಕ್ ಹಂಚಿಕೆಯಾಗಿರುತ್ತೆ. ಸಾವಿರಾರು ಮಂದಿ ಈ ಲಿಂಕ್ ಕೂಪಕ್ಕೆ ಒದ್ದಾಡುವಂತಾಗಿದೆ.

ಗೂಗಲಲ್ಲಿ surch ಮಾಡಿದರೆ, ಪಿಂಕ್ ವಾಟ್ಸಪ್ ಅನ್ನೋ ಕಾನ್ಸಪ್ಟ್ ಇದೆಯಂತೆ. ಒಂದೇ ಮೊಬೈಲಲ್ಲಿ ಎರಡು ರೀತಿಯಲ್ಲಿ ವಾಟ್ಸಪ್ ಬಳಕೆಗೆ ಅನುವು ಮಾಡುವ App ಒಂದೇ ನಂಬರಿನಲ್ಲಿ ಎರಡು ಬಗೆಯಲ್ಲಿ ವಾಟ್ಸಪ್ ಬಳಕೆ ಮಾಡಿಕೊಳ್ಳಲು ಪಿಂಕ್ ವಾಟ್ಸಪ್ ಬಳಕೆ ಮಾಡಬಹುದು ಎಂದಿದೆ. ಆದರೆ, ಈ ಪಿಂಕ್ ವಾಟ್ಸಪ್ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ವೈರಸ್ ಲಿಂಕನ್ನೇ ತೆರೆದು ಹರಿಯಬಿಟ್ಟಿದ್ದಾರೆ. 

ಆದ್ದರಿಂದ ಇಂತಹ ಲಿಂಕ್ ಒತ್ತಿ ಯಾಮಾರೋ ಮೊದಲು ಹುಷಾರಾಗಿರಿ ಇಂತಹ ಲಿಂಕ್ ಇದಲ್ಲಿ ತಕ್ಷಣವೇ ಡಿಲೀಟ್ ಮಾಡಿ ಈ ಲಿಂಕ್ play storeನಲ್ಲಿ uninstall ಮಾಡಲು ಸಾಧ್ಯವಿಲ್ಲ ಇದನ್ನು setting ನಲ್ಲಿ App setting ಹೋಗಿ ನಿಮ್ಮ ಮೊಬೈಲ್ ನಿಂದ ಇದನ್ನು ಹೊರ ಹಾಕಬಹುದಾಗಿದೆ. ಇತರರಿಗೆ ಈ ಲಿಂಕ್ ಹಂಚದೇ ಇರೋದು ಉತ್ತಮವಾಗಿದೆ

ಎಪ್ರಿಲ್ 16, ಶುಕ್ರವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 3 ಸಲುವ ಚೈತ್ರ ಶುದ್ಧ ಚೌತಿ 29|| ಗಳಿಗೆ ದಿನ ವಿಶೇಷ :ಮಧೂರು ಉಂಡಾರು ರಥ ನಿತ್ಯ ನಕ್ಷತ್ರ :ರೋಹಿಣಿ 43|| ಗಳಿಗೆ ಮಹಾ ನಕ್ಷತ್ರ :ಆಶ್ವಿ‌ನಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.19 ಗಂಟೆ

ಮೇಷ

ಗಂಡಾಂತರಕ್ಕೆ ಬಲಿಯಾಗದಂತೆ ಹಿರಿಯರಿಂದ ಸಕಾಲಿಕ ಸಲಹೆಗಳು. ವೈಮನಸ್ಸು ನಿವಾರಣೆಯಾಗಿ ದೃಢ ಸಂಕಲ್ಪ. ಆರೋಗ್ಯದಲ್ಲಿ ಪ್ರಗತಿ. ಬಂಧುಗಳ ಆಗಮನ ಸಾಧ್ಯತೆ.

ವೃಷಭ

ಕೆಲಸ–ಕಾರ್ಯಗಳಲ್ಲಿ ಉತ್ತಮ ಪ್ರಗತಿ. ನಿಕಟವರ್ತಿಗಳಿಂದ ಅನುಕೂಲಕರ ಸಹಾಯ. ಆತ್ಮಸ್ಥೈರ್ಯ ಮೂಡುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಗಣ್ಯರ ಭೇಟಿ ಸಂಭವ.

ಮಿಥುನ

ಭಿನ್ನಾಭಿಪ್ರಾಯದಿಂದಾಗಿ ನಿಂತು ಹೋದ ಕಾರ್ಯಗಳು ಒಮ್ಮತದಿಂದ ಸಾಧಿಸಲ್ಪಡುವವು. ಮದುವೆ ಮುಂತಾದ ಮಂಗಳಕಾರ್ಯಗಳ ನಿಶ್ಚಯ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸು.

ಕಟಕ

ಕುಟುಂಬದಲ್ಲಿ ಹೊಂದಾಣಿಕೆಯಿಂದ ಬೆಂಬಲ ಗಳಿಸುವಿರಿ. ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭದ ನಿರೀಕ್ಷೆ. ಸಂಘರ್ಷದಿಂದ ದೂರ. ಗೆಳೆಯರಿಂದ ನೆಮ್ಮದಿ.

ಸಿಂಹ

ಬೇರೆಯವರ ವಿವಾದಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕಾದೀತು. ಅಡ್ಡಿ ಆತಂಕಗಳಿಲ್ಲದ ಜೀವನದಿಂದಾಗಿ ಉಲ್ಲಾಸ ಮೂಡುವುದು. ಸ್ನೇಹಿತರಿಂದಾಗಿ ಸಂತೋಷದ ವಾತಾವರಣ.

ಕನ್ಯಾ

ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪ್ರಯಾಣದ ಸಾಧ್ಯತೆ ಕಂಡುಬರುವುದು. ಆಶ್ಚರ್ಯಕರ ರೀತಿಯಲ್ಲಿ ಕೆಲಸ ಕಾರ್ಯಗಳು ಕೂಡಿಬರುವವು.

ತುಲಾ

ಆತ್ಮಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲಗಳು ನಿವಾರಣೆಯಾಗುವವು. ನಿಷ್ಕಲ್ಮಷ ಭಾವನೆಯಿಂದ ಸಮಾಧಾನ. ಸ್ನೇಹಿತರಿಂದ ಪ್ರಶಂಸೆ, ಸಂಗಾತಿಯಿಂದ ಉತ್ತಮ ಸಹಕಾರ.

ವೃಶ್ಚಿಕ

ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಚ್ಚರಿಯ ಸುದ್ದಿಯನ್ನು ಕೇಳುವ ಸಾಧ್ಯತೆ. ಸ್ವಪ್ರಯತ್ನದಿಂದ ಕಾರ್ಯಕ್ಷೇತ್ರಗಳಲ್ಲಿ ಉನ್ನತಿ. ಸಾಮಾಜಿಕ ಮನ್ನಣೆ ನಿಮ್ಮದಾಗಲಿದೆ.

ಧನು

ಬಿಚ್ಚು ಮನಸ್ಸಿನ ಸ್ಪಷ್ಟ ಹೇಳಿಕೆಯಿಂದಾಗಿ ಸಹೋದ್ಯೋಗಿಗಳಿಗೆ ಇರುಸು ಮುರುಸು. ಸತ್ಯದರ್ಶನದಿಂದ ಎಲ್ಲವೂ ನಿರಾಳ. ಸಂತೋಷದ ವಾತಾವರಣ ಮೂಡುವುದು.

ಮಕರ

ಸ್ನೇಹಿತರೊಂದಿಗೆ ವಿಷಯಗಳ ವಿನಿಮಯದಿಂದಾಗಿ ವಾತಾವರಣ ತಿಳಿಗೊಂಡು ಮನಸ್ಸಿಗೆ ನೆಮ್ಮದಿ. ವಿಶೇಷ ಭೋಜನ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಂಗಾತಿಯಿಂದ ಸಹಕಾರ.

ಕುಂಭ

ನಿಮ್ಮ ನಿಲುವಿನಲ್ಲಿ ಆಕಸ್ಮಿಕ ತಿರುವು ಕಂಡುಬರುವುದು. ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಿ ನಿರಾಳ ಭಾವ. ಕಾರ್ಯನಿರ್ವಹಣೆಯಲ್ಲಿ ಯಶಸ್ಸನ್ನು ಕಾಣುವಿರಿ.

ಮೀನ

ಆತ್ಮೀಯತೆಯಿಂದಾಗಿ ಶುಭ ಸಂದರ್ಭ ನಿರ್ಮಾಣ. ಹೊಣೆಗಾರಿಕೆಯ ವಿಷಯದಲ್ಲಿ ಸಮರ್ಥ ನಿರ್ವಹಣೆ. ವಿಷಯಗಳ ಸ್ಪಷ್ಟ ಅರಿವು ಉಂಟಾಗಿ ವಿಶ್ವಾಸ ಮೂಡುವುದು

ಎಪ್ರಿಲ್ 15, ಗುರುವಾರ, 2021 :

ಪ್ಲವ ಸಂ|ರದ ಮೇಷಮಾಸ‌ ದಿನ 2 ಸಲುವ ಚೈತ್ರ ಶುದ್ಧ ತದಿಗೆ 23 ಗಳಿಗೆದಿನ ವಿಶೇಷ :ಮತ್ಸ್ಯ ಜಯಂತಿ, ಕಡಿಯಾಳಿ ರಥನಿತ್ಯ ನಕ್ಷತ್ರ :ಕೃತಿಕಾ 35|| ಗಳಿಗೆಮಹಾ ನಕ್ಷತ್ರ :ಆಶ್ವಿ‌ನಿಋತು :ವಸಂತ ರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.42 ಗಂಟೆ ಸೂರ್ಯೋದಯ :6.19 ಗಂಟೆ

ಮೇಷ

ಸಾಮಾಜಿಕ ಕಾರ್ಯಕರ್ತರಿಗೆ ಸಂತಸ ತರುವ ದಿನವಾಗಿದೆ. ಮನೆಯಲ್ಲಿ ವಸ್ತಾçಭರಣ ಖರೀದಿ ಸಾಧ್ಯತೆ. ಶತ್ರುಬಾಧೆ ಉಲ್ಬಣಗೊಳ್ಳುವ ಸಾಧ್ಯತೆ. ಅನಿರೀಕ್ಷಿತ ಕಾರ್ಯ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ

ವೃಷಭ

ಆರ್ಥಿಕ ತೊಂದರೆಯಿAದ ಮುಕ್ತರಾಗುವಿರಿ. ಕೋರ್ಟ್ ಕಛೇರಿಗಳಲ್ಲಿನ ವ್ಯಾಜ್ಯಗಳು ಪರಿಹಾರ ವಾಗಿ ನೆಮ್ಮದಿ ಮೂಡಿಬರಲಿದೆ. ವಸ್ತಾçಭರಣಗಳನ್ನು ಖರೀದಿಸಲಿದ್ದೀರಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ಮಿಥುನ

ಆರ್ಥಿಕ ಅಭಿವೃದ್ಧಿ ಕಂಡುಬರುವುದು. ವ್ಯವಹಾರದಲ್ಲಿ ಲಾಭ ಸಾಧ್ಯತೆ. ಸಾಮಾಜಿಕ ಚಿಂತನೆಗಳಿಂದ ಗೌರವಾದರಗಳನ್ನು ಹೊಂದುವಿರಿ. ಕೃಷಿ ಕ್ಷೇತ್ರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ. ಸಂಗಾತಿಯಿಂದ ಸಂತಸದ ಸುದ್ದಿ.

ಕಟಕ

ಹೊಸ ಸಂಬಂಧಿಗಳಿಂದ ಹೊಸ ಯೋಜನೆಗಳಿಗೆ ಉತ್ಸಾಹ ಮೂಡುವುದು. ಶುಭಕಾರ್ಯಗಳ ಸಂಕಲ್ಪ ಈಡೇರಿ ಸಂತಸ ಮೂಡುವುದು. ತೃಪ್ತಿದಾಯಕ ಕೌಟುಂಬಿಕ ಜೀವನ. ಅವಸರದ ನಿರ್ಧಾರಗಳು ಸೂಕ್ತವಲ್ಲ. ಮಹಿಳೆಯರಿಗೆ ಗೌರವ ಪ್ರಾಪ್ತಿ.

ಸಿಂಹ

ಅನಾವಶ್ಯಕ ವ್ಯವಹಾರಗಳಲ್ಲಿ ಭಾಗಿಯಾಗುವುದರಿಂದ ಆರೋಪಗಳನ್ನು ಎದುರಿಸಬೇಕಾದೀತು. ಹೊಸ ಯೋಜನೆಯನ್ನು ನಿರೂಪಿಸುವಲ್ಲಿ ಯಶಸ್ಸು. ಮಾತೃವರ್ಗದವರಿಂದ ಸಹಕಾರ ದೊರಕುವುದು. ದೂರದ ಪ್ರಯಾಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ

ಹಣಕಾಸಿನ ವಿಷಯಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಸರ್ಕಾರಿ ನೌಕರರಿಗೆ ಅಕಾಲಿಕ ತಪಾಸಣೆಯಿಂದ ಕಿರಿಕಿರಿ ಹಾಗೂ ವೃಥಾ ಖರ್ಚು ಸಂಭವ. ದಾಂಪತ್ಯದಲ್ಲಿ ಸೌಹಾರ್ದತೆ, ಸಂತಸ ಮೂಡುವುದು. ಸೋದರರಿಂದ ಸಹಕಾರ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ತುಲಾ

ಸಂಪನ್ಮೂಲಗಳ ಅಭಿವೃದ್ಧಿ ಯಿಂದಾಗಿ ಚಿಂತೆಗಳು ದೂರವಾಗಿ ನೆಮ್ಮದಿ ಮನೆಮಾಡಲಿದೆ. ಮಹಿಳೆಯರ ಮನೋಭಿಲಾಷೆಗಳು ಈಡೇರುವವು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವ ಸಾಧ್ಯತೆ. ಪ್ರಾಪ್ತವಯಸ್ಕರಿಗೆ ಸೂಕ್ತ ಸಂಬAಧ ದೊರೆತು ವಿವಾಹ ನಿಶ್ಚಯ ಸಾಧ್ಯತೆ

ವೃಶ್ಚಿಕ

ದೂರದ ಪ್ರಯಾಣಗಳನ್ನು ಮಾಡದಿರುವುದು ಉಚಿತ. ಸಂಗಾತಿಯ ಸಹಕಾರದಿಂದಾಗಿ ಸಾಂಸಾರಿಕ ನೆಮ್ಮದಿ ದೊರಕುವುದು. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬAಧಗಳು ಕೂಡಿಬರಲಿವೆ. ದೇವತಾ ದರ್ಶನದಿಂದಾಗಿ ಮಾನಸಿಕ ನೆಮ್ಮದಿ.

ಧನು

ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ. ಮಕ್ಕಳ ಶ್ರೇಯೋಭಿವೃದ್ಧಿಯಿಂದಾಗಿ ಮಾನಸಿಕ ತೃಪ್ತಿ ಹೊಂದುವಿರಿ. ಮನೆಯಲ್ಲಿ ಸಂತೋಷದ ವಾತಾವರಣ.

ಮಕರ

ಧಾವಂತದ ಕೆಲಸಗಳು ಎದುರಾಗುವ ಸಾಧ್ಯತೆ ಕಂಡುಬರುವುದು. ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಸಲುವಾಗಿ ದೂರ ಪ್ರಯಾಣ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಆತುರತೆ ಬೇಡ. ವ್ಯವಹಾರದಲ್ಲಿ ಆರ್ಥಿಕ ನಷ್ಟ ಸಾಧ್ಯತೆ.

ಕುಂಭ

ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಪ್ರಗತಿಯನ್ನು ಕಾಣಬಹುದು. ಸಾಮಾಜಿಕ ಕಾರ್ಯಗಳಿಂದ ಗೌರವ ಪ್ರಾಪ್ತವಾಗುವುದು. ಸರ್ಕಾರದಿಂದಾಗುವ ಕೆಲಸ ಕಾರ್ಯಗಳು ಸುಗಮವಾಗುವವು. ಉದ್ಯೋಗ ನಿಮಿತ್ತ ದೂರ ಪ್ರಯಾಣ ಯೋಗ. ಆರೋಗ್ಯ ಲಾಭ.

ಮೀನ

ನೆರೆಹೊರೆಯವರೊಂದಿಗೆ ವಿನಾಕಾರಣ ನಿಷ್ಟೂರಕ್ಕೊಳಗಾಗುವ ಸಾಧ್ಯತೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿದೆ. ಉದ್ಯೋಗದಲ್ಲಿರುವವರಿಗೆ ಸ್ಥಳ ಬದಲಾವಣೆ. ಇಷ್ಟದೇವತಾ ದರ್ಶನದಿಂದ ನೆಮ್ಮದಿ. ಮನೆಯಲ್ಲಿ ಸಂತಸ.

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತಗಳು ಮತ್ತು ದೂರದರ್ಶಿತ್ವ ಸಾರ್ವಕಾಲಿಕ : ಕುಯಿಲಾಡಿ ಸುರೇಶ್ ನಾಯಕ್

ಸಂವಿಧಾನ ಶಿಲ್ಪಿ ಡಾ! ಬಿ.ಆರ್. ಅಂಬೇಡ್ಕರ್ ನಡೆದು ಬಂದ ದಾರಿ, ಎದುರಿಸಿದ ಸವಾಲುಗಳು ಇಂದಿನ ರಾಜಕಾರಿಣಿಗಳಿಗೆ ಮಾದರಿ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ಮತ್ತು ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ! ಬಿ.ಆರ್. ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಾಡಿಗೆ ನೀಡಿರುವ ಸಂವಿಧಾನ ಒಂದು ಜಾತಿಗೆ ಸೀಮಿತವಾಗಿರದೆ ಇಡೀ ದೇಶದ ರಾಜಕೀಯ ಹಾಗೂ ಆಡಳಿತದ ಕೇಂದ್ರ ಬಿಂದುವಾಗಿದೆ. ಅವರ ಅಗಾಧ ಜ್ಞಾನ ಸಂಪತ್ತು, ವಿಧ್ವತ್ ಹಾಗೂ ದೇಶದ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಇವೆಲ್ಲವನ್ನೂ ಅವಲೋಕಿಸಿದರೆ ಅವರ ಮೇರು ವ್ಯಕ್ತಿತ್ವದ ಪರಿಚಯವಾಗುವುದು.

‘ಬದುಕಲು ರಾಜಕೀಯಕ್ಕೆ ಬರಬೇಡಿ, ಬದುಕನ್ನು ಬದಲಾಯಿಸಲು ಬನ್ನಿ. ಏಕೆಂದರೆ ರಾಜಕೀಯವು ಉದ್ಯೋಗವಲ್ಲ, ಸಾಮಾಜಿಕ ಜವಾಬ್ದಾರಿ’ ಎನ್ನುವ ಡಾ! ಬಿ.ಆರ್. ಅಂಬೇಡ್ಕರ್ ರವರ ಉದಾತ್ತ ಚಿಂತನೆ ಇಂದಿನ ರಾಜಕಾರಣ ವ್ಯವಸ್ಥೆಯಲ್ಲಿ ಪ್ರಸ್ತುತವಾಗಿರುತ್ತದೆ ಎಂದು ಕುಯಿಲಾಡಿ ಹೇಳಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ ಯವರು ಮಾತನಾಡಿ ಡಾ! ಬಿ.ಆರ್. ಅಂಬೇಡ್ಕರ್ ರವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಸವಾಲುಗಳು, ಕಾಂಗ್ರೆಸ್ ಪಕ್ಷ ಅವರನ್ನು ಅವಮಾನಕರವಾಗಿ ನಡೆಸಿಕೊಂಡ ರೀತಿ, ಬಿಜೆಪಿ ಅವರ ಮೌಲ್ಯಗಳನ್ನು ಆಧರಿಸಿ ಗೌರವಿಸುತ್ತಿರುವ ಪರಿಯನ್ನು ಉಲ್ಲೇಖಿಸಿ, ಅವರ ಗುಣಗಾನಗೈದರು.

ಪ್ರಾರಂಭದಲ್ಲಿ ಜ್ಯೋತಿ ಬೆಳಗಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಬಿಜೆಪಿ ರಾಜ್ಯ ಮೀನುಗಾರ ಪ್ರಕೋಷ್ಠದ ಸಂಚಾಲಕ ಯಶ್ಪಾಲ್ ಸುವರ್ಣ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಉಡುಪಿ ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ್ ಹಾಗೂ ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು, ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಬಿಜೆಪಿ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಎಪ್ರಿಲ್ 13, ಮಂಗಳವಾರ, 2021 : ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೀನ ಮಾಸ‌ ದಿನ 30 ಸಲುವ ಚೈತ್ರ ಶುದ್ಧ ಪಾಡ್ಯ 10 ಗಳಿಗೆ ದಿನ ವಿಶೇಷ :ಮೇಷ ಸಂಕ್ರಮಣ, ಚಾಂದ್ರ ಯುಗಾದಿ, ಚಂದ್ರ ದರ್ಶನ, ಪ್ಲವ ಸಂವತ್ಸರ ಆರಂಭ, ನಿತ್ಯ ನಕ್ಷತ್ರ :ಆಶ್ವಿ‌ನಿ 20 ಗಳಿಗೆ ,ಮಹಾ ನಕ್ಷತ್ರ :ಆಶ್ವಿ‌ನಿ, ಋತು :ವಸಂತ ರಾಹುಕಾಲ :3.00-4.30 ಗಂಟೆ, ಗುಳಿಕ ಕಾಲ :12.00-1.30 ಗಂಟೆ ,ಸೂರ್ಯಾಸ್ತ :6.41 ಗಂಟೆ ಸೂರ್ಯೋದಯ :6.20 ಗಂಟೆ

ಮೇಷ

ಮಹತ್ತರವಾದ ಕನಸೊಂದು ಈಡೇರುವ ದಿಶೆಯಲ್ಲಿ ಬಂಧುಗಳಿAದ ಸಲಹೆಗಳು ಬರುವ ಸಾಧ್ಯತೆ. ನಿಮ್ಮ ದಿಟ್ಟ ನಿಲುವಿನಿಂದ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಯಾವುದೇ ಕೆಲಸಕ್ಕೂ ದುಡಕದೇ ಮತ್ತೊಮ್ಮೆ ಯೋಚಿಸಿ ಕೈ ಹಾಕುವುದು ಉತ್ತಮ

ವೃಷಭ

ಅಡೆತಡೆಗಳ ನಡುವೆಯೂ ಉದ್ದೇಶಿತ ಕಾರ್ಯಗಳಲ್ಲಿ ಯಶಸ್ಸು. ಬುದ್ಧಿವಂತಿಕೆಯಿAದ ಕಾರ್ಯ ಸಾಧನೆ ಮಾಡುವಿರಿ. ಮಹಿಳೆಯರಿಂದ ಬಂದ ಸಲಹೆಗಳಿಗೆ ಆದ್ಯತೆ ನೀಡಲಿದ್ದೀರಿ. ದೇವಿಯ ದರ್ಶನ ಯೋಗ ಕಂಡುಬರುವುದು. ಮಾನಸಿಕ ಶಾಂತಿ ಲಭಿಸಲಿದೆ.

ಮಿಥುನ

ಎದುರಾದ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ದಿಟ್ಟ ಸಾಮರ್ಥ್ಯ ನಿಮ್ಮದು. ಯಾವುದೇ ವಿಚಾರದಲ್ಲಿ ರಾಜಿಯಾಗದ ಮನಸ್ಥಿತಿ. ಪ್ರೀತಿಪಾತ್ರರಿಂದ ಸಮಯೋಚಿತ ಭರವಸೆಯ ಬಲ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ, ಕಛೇರಿ ಕೆಲಸಗಳಿಗೆ ಅಡೆತಡೆ ಸಂಭವ.

ಕಟಕ

ಅನಿವಾರ್ಯ ಒತ್ತಡಕ್ಕೆ ಒಳಗಾಗಿ ಎಲ್ಲವನ್ನು ತಾಳಿಕೊಳ್ಳಬೇಕಾದೀತು. ಒಳ್ಳೆಯ ಯೋಜನೆಯೊಂದಕ್ಕೆ ಮುನ್ನುಡಿ ಹಾಡುವ ಸಾಧ್ಯತೆ. ವಿಶ್ವಾಸ, ಪ್ರೀತಿಪಾತ್ರ ನಡೆಗಳಿಂದಾಗಿ ಎಲ್ಲರಲ್ಲೂ ಪ್ರಶಂಸೆಗೆ ಪಾತ್ರರಾಗುವಿರಿ. ಸಕಾರಾತ್ಮಕ ಭರವಸೆ.

ಸಿಂಹ

ನಿಮ್ಮ ಹವ್ಯಾಸವೇ ನಿಮಗೊಂದು ವೃತ್ತಿಯಾಗಿ ಮಾರ್ಪಾಡಾಗುವ ಸಾಧ್ಯತೆ. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದೀರಿ. ಸಂದರ್ಭೋಚಿತವಾದ ಸಲಹೆ, ಸಹಕಾರ ದೊರೆತು ಶುಭ ಲಾಭಗಳನ್ನು ತಂದುಕೊಡಲಿವೆ.

ಕನ್ಯಾ

ಆಕರ್ಷಣೀಯ ವ್ಯಕ್ತಿತ್ವದ ಜೊತೆಗೆ ನಡವಳಿಕೆಯಿಂದಾಗಿ ಅಭಿಮಾನಿಗಳು ಹೆಚ್ಚುವ ಸಾಧ್ಯತೆ. ಸಮರ್ಥ ಕಾರ್ಯ ಯೋಜನೆ ಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಭಾವನೆಗಳಿಗೆ ಮನ್ನಣೆ ನೀಡಿ ಗೌರವ ಸಂಪಾದನೆ.

ತುಲಾ

ನಿಮ್ಮ ಗುರಿಸಾಧನೆಯಲ್ಲಿ ಯಶಸ್ಸನ್ನು ಕಾಣುವಿರಿ. ಅಂದುಕೊAಡ ಕಾರ್ಯ ಸಾಧನೆಗಾಗಿ ಸಮರ್ಥ ಮಾರ್ಗ ಗೋಚರವಾಗಲಿದೆ. ಸರ್ಕಾರಿ ಉದ್ಯೋಗಿಗಳು ಸ್ವಲ್ಪಮಟ್ಟಿನ ವಿರೋಧಗಳನ್ನು ಎದುರಿಸಬೇಕಾದೀತು. ಸಮಚಿತ್ತ ದಿಂದಾಗಿ ಕಾರ್ಯ ಸುಗಮ.

ವೃಶ್ಚಿಕ

ಕಾರ್ಯಯೋಜನೆಯ ಯಶಸ್ಸಿಗಾಗಿ ಅನೇಕ ಸಲಹೆಗಳು ಬಂದರೂ ಸ್ವಯಂ ತುಲನೆ ಮಾಡಿ ನಿರ್ಧಾರಕ್ಕೆ ಬರುವುದು ಒಳ್ಳೆಯದು. ಉದ್ಯೋಗದಲ್ಲಿ ಅಡೆತಡೆಗಳು ಕಂಡುಬAದರೂ ನಿವಾರಣೆ ಕಂಡುಕೊಳ್ಳುವಿರಿ.

ಧನು

ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಿ ಮುಗಿಸುವ ತವಕ ದಿಂದಾಗಿ ಗೊಂದಲ ಉಂಟಾಗಬಹುದು. ದುಂದುವೆಚ್ಚವನ್ನು ಭರಿಸಬೇಕಾಗಬಹುದು. ಕಾರ್ಯಯೋಜನೆಯಿಂದ ವೆಚ್ಚವನ್ನು ಕಡಿತ ಗೊಳಿಸುವ ಸಾಧ್ಯತೆ.

ಮಕರ

ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣಿತ ವ್ಯಕ್ತಿಗಳೊಂದಿಗೆ ಸಮಾಲೋಚನೆಯ ಸಾಧ್ಯತೆ. ಸರಿಯಾದ ನಿರ್ಧಾರದಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ನಿಶೆ ಏರಿಸುವ ವಸ್ತುಗಳಿಂದ ದಿನದಮಟ್ಟಿಗೆ ದೂರವಿರುವುದು ಒಳ್ಳೆಯದು.

ಕುಂಭ

ಸ್ವತಂತ್ರ ನಿರ್ಧಾರ ಕೈಗೊಳ್ಳುವಲ್ಲಿ ಹಿಂಜರಿಕೆ ಇಲ್ಲ. ಸಮತೋಲನ ಕಾಯ್ದುಕೊಳ್ಳುವ ಚಾಣಾಕ್ಷತೆಯಿಂದಾಗಿ ಮಾನಸಿಕ ನೆಮ್ಮದಿ. ಸ್ನೇಹಿತರೊಂದಿಗೆ ಹಿತವಾಚ ಚರ್ಚೆಗಳು ನಡೆದು ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ಮೀನ

ಕುಟುಂಬದ ಸದಸ್ಯರೊಂದಿಗೆ ಸಂತಸದ ದಿನವನ್ನು ಕಳೆಯುವಿರಿ. ಉದ್ಯೋಗದಲ್ಲಿ ಬಡ್ತಿ ವಾ ಪ್ರಗತಿಯ ಸಾಧ್ಯತೆ. ಶಿಸ್ತಿನ ನಡವಳಿಕೆ. ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯಲಿದೆ. ಸಂಬAಧಿಗಳ ದರ್ಶನ ಸಾಧ್ಯತೆ.

Design a site like this with WordPress.com
Get started