ಇಂದಿನಿಂದ ಕೊರೋನಾ ಲಸಿಕೆ ರೆಜಿಸ್ಟ್ರೇಶನ್ ಆರಂಭ – ಸಂಪೂರ್ಣ ಮಾಹಿತಿ

ಮೇ 1 ರಿಂದ ಕೊರೊನಾ ಲಸಿಕೆಯ 3ನೇ ಹಂತದ ಆಭಿಯಾನ ಆರಂಭವಾಗಲಿದ್ದು, 18 ರಿಂದ 45 ವರ್ಷದವರಿಗೆ ಲಸಿಕೆ ನೀಡಲಾಗುತ್ತೆ. ಅದರಂತೆ ಕೋವಿನ್ ಪ್ಲಾಟ್ ಫಾರ್ಮ್ ಮತ್ತು ಆರೋಗ್ಯ ಸೇತು ಆಯಪ್ ನಲ್ಲಿ ಏಪ್ರಿಲ್ 28 ಅಂದರೆ, ಇಂದಿನಿಂದ ಲಸಿಕೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಕೋವಿನ್ ಪೋರ್ಟಲ್ ಮೂಲಕ ಕೋವಿಡ್-19 ಲಸಿಕೆಗೆ ನೋಂದಾಯಿಸುವುದು ಹೇಗೆ..?

  • http://www.cowin.gov.in ಲಾಗ್ ಆನ್ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ನಿಮ್ಮ ಖಾತೆಯನ್ನು ರಚಿಸಲು ಒಟಿಪಿ ಪಡೆಯಿರಿ.
  • ಒಟಿಪಿ ನಮೂದಿಸಿ ಮತ್ತು ‘ವೆರಿಫೈ’ ಬಟನ್ ಮೇಲೆ ಒತ್ತಿ.
  • ಲಸಿಕೆಯ ಪುಟದ ನೋಂದಣಿಗೆ ನಿಮಗೆ ನಿರ್ದೇಶಿಸಲಾಗುತ್ತದೆ. ಈ ಪುಟದಲ್ಲಿ, ಒಂದು ಫೋಟೋ ಐಡಿ ಪ್ರೂಫ್ ಅನ್ನು ಆಯ್ಕೆ ಮಾಡುವ ಆಯ್ಕೆ ಇರುತ್ತದೆ.
  • ನಿಮ್ಮ ಹೆಸರು, ವಯಸ್ಸು, ಲಿಂಗವನ್ನ ಭರ್ತಿ ಮಾಡಿ ಮತ್ತು ಗುರುತಿನ ದಾಖಲೆಯನ್ನ ಅಪ್ ಲೋಡ್ ಮಾಡಿ.
  • ‘ರಿಜಿಸ್ಟರ್’ ಬಟನ್ ಮೇಲೆ .
  • ನೋಂದಣಿ ಪೂರ್ಣಗೊಂಡ ನಂತರ, ‘ಖಾತೆ ವಿವರಗಳು’ ಅನ್ನು ತೋರಿಸುತ್ತದೆ.
  • ಒಬ್ಬ ನಾಗರಿಕನು ‘ಇನ್ನಷ್ಟು ಸೇರಿಸು’ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಇನ್ನೂ ಮೂರು ಜನರನ್ನ ಸೇರಿಸಬಹುದು.
  • ‘ಶೆಡ್ಯೂಲ್ ಅಪಾಯಿಂಟ್ಮೆಂಟ್’ ಸೂಚಿಸುವ ಬಟನ್ ಇರುತ್ತದೆ. ಈಗ ಅದರ ಮೇಲೆ .
  • ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಪಿನ್ ಕೋಡ್ ಮೂಲಕ ಆಯ್ಕೆಯ ಲಸಿಕೆ ಕೇಂದ್ರವನ್ನು ಹುಡುಕಿ.
  • ದಿನಾಂಕ ಮತ್ತು ಲಭ್ಯತೆಯನ್ನು ಸಹ ಪ್ರದರ್ಶಿಸಲಾಗುವುದು.
  • ‘ಬುಕ್’ ಬಟನ್ ಮೇಲೆ .
  • ಬುಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ನೀವು ಸಂದೇಶವನ್ನ ಸ್ವೀಕರಿಸುತ್ತೀರಿ. ಆ ದೃಢೀಕರಣ ವಿವರಗಳನ್ನ ಲಸಿಕೆ ಕೇಂದ್ರದಲ್ಲಿ ತೋರಿಸಬೇಕಾಗುತ್ತದೆ.

ಆರೋಗ್ಯ ಸೇತು ಮೂಲಕ ಕೋವಿಡ್-19 ಲಸಿಕೆಗೆ ನೋಂದಾಯಿಸಿಕೊಳ್ಳುವುದು ಹೇಗೆ..?

  • ಆರೋಗ್ಯ ಸೇತು ಆಯಪ್ ಮುಖಪುಟದಲ್ಲಿ, ‘ಕೋವಿನ್’ ಟ್ಯಾಬ್ ಗೆ ಹೋಗಿ.
  • ಕೋವಿನ್ ಐಕಾನ್ ಅಡಿಯಲ್ಲಿ, ನೀವು ನಾಲ್ಕು ಆಯ್ಕೆಗಳನ್ನು ನೋಡಬಹುದು- ಲಸಿಕೆ ಮಾಹಿತಿ, ಲಸಿಕೆ, ಲಸಿಕೆ ಪ್ರಮಾಣಪತ್ರ, ಲಸಿಕೆ ಡ್ಯಾಶ್ ಬೋರ್ಡ್.
  • ‘ವ್ಯಾಕ್ಸಿನೇಷನ್’ ಟ್ಯಾಬ್ ಅನ್ನು ಟ್ಯಾಪ್ ಮಾಡಿ ಮತ್ತು ನಂತರ ‘ಈಗ ನೋಂದಾಯಿಸಿ’ ಆಯ್ಕೆಯನ್ನು ಆಯ್ಕೆ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನ ನಮೂದಿಸಿ ಮತ್ತು ನಂತರ ‘ಪರಿಶೀಲಿಸಲು ಮುಂದುವರಿಯಿರಿ’ ಮೇಲೆ .
  • ಒಟಿಪಿ ನಮೂದಿಸಿ ಮತ್ತು ಮತ್ತೆ ‘ಪರಿಶೀಲಿಸಲು ಮುಂದುವರಿಯಿರಿ’ ಆಯ್ಕೆಮಾಡಿ.
  • ಒಮ್ಮೆ ನಂಬರ್ ವೆರಿಫಿಕೇಶನ್ ಮುಗಿದ ನಂತರ, ನೀವು ಫೋಟೋ ಐಡಿ ಕಾರ್ಡ್ ಅನ್ನು ಅಪ್ ಲೋಡ್ ಮಾಡಬೇಕಾಗುತ್ತದೆ.
  • ವಯಸ್ಸು, ಲಿಂಗ, ಹುಟ್ಟಿದ ವರ್ಷ ಮುಂತಾದ ಇತರ ವಿವರಗಳನ್ನ ಸಹ ನೀವು ಭರ್ತಿ ಮಾಡಬೇಕು.
  • ಆರೋಗ್ಯ ಸೇತು ಆಯಪ್ ಮೂಲಕ ಗರಿಷ್ಠ 4 ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಬಹುದು.
  • ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಪಿನ್ ಕೋಡ್ ಮೂಲಕ

ಎಪ್ರಿಲ್ 28, ಬುಧವಾರ,2021 : ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 15 ಸಲುವ ಚೈತ್ರ ಬಹುಳ ಬಿದಿಗೆ 48|| ಗಳಿಗೆ ದಿನ ವಿಶೇಷ :ಚೈತ್ರ ಮಾಸ ಕೃಷ್ಣಪಕ್ಷ ಆರಂಭ ನಿತ್ಯ ನಕ್ಷತ್ರ :ವಿಶಾಖಾ 27||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :12.00-1.30 ಗಂಟೆ ಗುಳಿಕ ಕಾಲ :10.30-12.00 ಗಂಟೆ ಸೂರ್ಯಾಸ್ತ :6.44 ಗಂಟೆ ಸೂರ್ಯೋದಯ :6.12 ಗಂಟೆ

ಮೇಷ

ಆದಾಯ ಮತ್ತು ಖರ್ಚು ಹೆಚ್ಚಾಗುವ ಸಾಧ್ಯತೆ. ನ್ಯಾಯಾಲಯದ ಕೆಲಸ–ಕಾರ್ಯಗಳಲ್ಲಿ ಪ್ರಗತಿ. ಹೊಸ ಆದಾಯದ ಮೂಲಗಳು ಗೋಚರವಾಗಲಿವೆ. ಸರಿ, ತಪ್ಪುಗಳನ್ನು ಅರಿತು ಮುಂದುವರೆಯುವುದು ಉತ್ತಮ.

ವೃಷಭ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚಿನ ಶ್ರಮ ವಹಿಸಿ. ಉದ್ಯೋಗಾಕಾಂಕ್ಷಿಗಳಿಗೆ ಯಥಾಸ್ಥಿತಿ. ಅವಕಾಶ ಸದುಪಯೋಗ ಪಡಿಸಿಕೊಳ್ಳಿ.

ಮಿಥುನ

ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ಧೈರ್ಯದಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಹುದು. ಕೆಲಸ–ಕಾರ್ಯಗಳಿಗೆ ಕಾಲಮಿತಿ ಹಾಕಿಕೊಳ್ಳುವುದು ಉತ್ತಮ. ಸಾಂಸಾರಿಕವಾಗಿ ತೃಪ್ತಿಕರ ಜೀವನ.

ಕಟಕ

ನಿಮ್ಮ ಅನಿರೀಕ್ಷಿತ ನಡವಳಿಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಅಸಹನೆ. ನಿರ್ಧಾರಗಳನ್ನು ಪದೇ ಪದೇ ಬದಲಿಸದಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಬಿಡುವಿಲ್ಲದ ಶ್ರಮ. ಸ್ನೇಹಿತರಿಂದ ಸಹಾಯ ದೊರೆಯಲಿದೆ.

ಸಿಂಹ

ಯಾವುದೇ ವಿಚಾರದಲ್ಲಿ ಆತುರದ ತೀರ್ಮಾನ ಬೇಡ. ಬಿಡುವಿಲ್ಲದ ಕೆಲಸ–ಕಾರ್ಯಗಳಿಂದಾಗಿ ಒತ್ತಡ ಹೆಚ್ಚಾಗಿ ಮಾನಸಿಕ ಚಂಚಲತೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯದಿಂದಾಗಿ ಪ್ರತಿಕೂಲ ಪರಿಣಾಮ ಉಂಟಾಗಬಹುದು.

ಕನ್ಯಾ

ವಿವಿಧ ಮೂಲಗಳಿಂದ ಧನಾಗಮನದಿಂದಾಗಿ ಕಾರ್ಯಾನುಕೂಲವಾಗಲಿದೆ. ಮಹಿಳಾ ಉದ್ಯೋಗಿಗಳಿಗ ಪದೋನ್ನತಿ ದೊರಕುವ ಸಾಧ್ಯತೆ. ಅಸಹನೆಯ ಮನೋವೃತ್ತಿ ಅನಾವಶ್ಯಕ ತಪ್ಪು ಅಭಿಪ್ರಾಯಕ್ಕೆ ಹೇತುವಾದೀತು.

ತುಲಾ

ಕೆಲಸ–ಕಾರ್ಯಗಳಿಗೆ ವಿಘ್ನಗಳುಂಟಾದರೂ ಎದೆಗುಂದದೇ ಮುಂದುವರಿದು ಯಶಸ್ಸನ್ನು ಸಾಧಿಸಲಿದ್ದೀರಿ. ಸಹೋದ್ಯೋಗಿಗಳ ಸಹಕಾರದಿಂದಾಗಿ ನೆಮ್ಮದಿ ದೊರಕಲಿದೆ. ಹಿರಿಯರ ಸಲಹೆಗಳನ್ನು ಗೌರವಿಸಿ.

ವೃಶ್ಚಿಕ

ಕುಟುಂಬ ಸದಸ್ಯರಲ್ಲಿ ಅಸಹನೆ ಕಂಡುಬರಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದ ಮೇಲೆ ಏಕಾಗ್ರತೆ ಕಡಿಮೆಯಾದರೂ ಗುರಿ ಸಾಧನೆಗೆ ತೊಡಕಾಗದು. ಸಣ್ಣಪುಟ್ಟ ವ್ಯಾಪಾರಿ ವರ್ಗದವರಲ್ಲಿ ನಿರೀಕ್ಷಿತ ಲಾಭ ಸಂಪಾದನೆ.

ಧನು

ನಿಮ್ಮ ಇಚ್ಛೆಗಳು ಸುಗಮವಾಗಿ ಈಡೇರುವವು. ಯೋಗ್ಯ ವಯಸ್ಕರಿಗೆ ಉತ್ತಮ ಅವಕಾಶಗಳಿಂದಾಗಿ ವೈವಾಹಿಕ ಭಾಗ್ಯ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ. ಇತರರೊಂದಿಗೆ ಉತ್ತಮ ಸಂಬಂಧ.

ಮಕರ

ನೌಕರ ವರ್ಗದವರಿಗೆ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆತು ಉದ್ಯೋಗದಲ್ಲಿ ಬದಾಲವಣೆಯನ್ನು ಕಾಣುವ ಸಾಧ್ಯತೆ. ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದ್ದು ಸಮಾಧಾನ ಚಿತ್ತರಾಗಿ ವ್ಯವಹರಿಸಿ.

ಕುಂಭ

ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ. ಆರ್ಥಿಕ ಸಬಲತೆ. ಪ್ರಮುಖ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ದಿನದ ಮಟ್ಟಿಗೆ ಬೇಡ. ಉತ್ತಮ ಸಂಗಾತಿ ದೊರಕುವ ಸಾಧ್ಯತೆ ಇದ್ದು ನೆಮ್ಮದಿ ಉಂಟಾಗಲಿದೆ.

ಮೀನ

ಉತ್ತಮ ಫಲ ನೀಡುವ ದಿನವಾಗಿದ್ದು, ಸಣ್ಣ ಪುಟ್ಟ ಪ್ರಯಾಣ ಯೋಗ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಮರ್ಥ್ಯವನ್ನರಿತು ಕೆಲಸ ನಿರ್ವಹಿಸಿ. ಮಿತ್ರವೃಂದದಿಂದ ಉಪಯುಕ್ತ ಸಲಹೆ ದೊರೆತು ವೃತ್ತಿಯಲ್ಲಿ ಯಶಸ್ಸು.

ಎಪ್ರಿಲ್ 27, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 14 ಸಲುವ ಚೈತ್ರ ಶುದ್ಧ ಹುಣ್ಣಿಮೆ 7 ಗಳಿಗೆ ದಿನ ವಿಶೇಷ :ಚಿತ್ರಾ ಪೂರ್ಣಿಮಾ ಹನುಮಜ್ಜಯಂತಿ, ಮಹಾನಕ್ಷತ್ರ ಭರಣಿ ಆರಂಭ ನಿತ್ಯ ನಕ್ಷತ್ರ :ಶ್ವಾತಿ 35 ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :3.00-4.30 ಗಂಟೆ ಗುಳಿಕ ಕಾಲ :12.00-1.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.13 ಗಂಟೆ

ಮೇಷ

ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತಸ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.

ವೃಷಭ

ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರ ಪ್ರಯಾಣ ಮಾಡಬೇಕಾದೀತು. ಪತ್ನಿವರ್ಗದವರಿಂದ ಸಹಾಯ ದೊರಕಲಿದೆ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆ ನಿವಾರಣೆ.

ಮಿಥುನ

ಹೊಸ ಉದ್ಯಮದ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯ ಪೂರ್ವಕ ಪ್ರಸ್ತಾಪಗಳು ಬರಲಿದೆ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ.

ಕಟಕ

ಚಿನ್ನಾಭರಣಗಳ ವ್ಯವಹಾರದಲ್ಲಿ ಹಿನ್ನಡೆಯ ದಿನ. ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದೀತು. ಉತ್ತಮ ಆದಾಯ ಹೊಂದುವಿರಿ. ಪುಸ್ತಕ ಗ್ರಂಥಗಳ ಖರೀದಿಗಾಗಿ ವೆಚ್ಚವನ್ನು ಭರಿಸಬೇಕಾದೀತು.

ಸಿಂಹ

ತರಕಾರಿ, ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ.

ಕನ್ಯಾ

ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಿ. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಅತಿಯಾದ ಪ್ರಯಾಣದಿಂದಾಗಿ ದೇಹಾಯಾಸ.

ತುಲಾ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರಹೊಗಬೇಕಾದೀತು. ದೂರದ ಪ್ರಯಾಣ. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ.

ವೃಶ್ಚಿಕ

ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ.

ಧನು

ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ.

ಮಕರ

ಜಮೀನಿನ ಕೆಲಸಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ. ಮನೆಯವರ ದೂರ ಪ್ರಯಾಣ.

ಕುಂಭ

ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಸಹಾಯ, ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.

ಮೀನ

ತಂದೆ–ತಾಯಿಗಳಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಯೋಗ. ಸತ್ಪುರುಷರ ಸಂದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ.

ಭಾರತ ಸರಕಾರದ ಮೌನ ಅಮೆರಿಕವನ್ನು ಅಲ್ಲಾಡಿಸಿತು, ನಿದ್ದೆಗೆಡಿಸಿತು

ಒಂದು ವಾರದ ಹಿಂದಷ್ಟೇ, ನಾವು ಭಾರತಕ್ಕೆ ಲಸಿಕೆ ತಯಾರಿಸಲು ಬೇಕಾಗುವ ಕಚ್ಚಾವಸ್ತು ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಅಮೇರಿಕ ಈಗ ಇದ್ದಕ್ಕಿದ್ದಂತೆ ಇಷ್ಟು ಮೆತ್ತಗಾಗಿದ್ದು ಯಾಕೆ.? ಪ್ರಧಾನಿ ಮೋದಿಯರಿಗೆ ಗೊತ್ತು, ಅಮೆರಿಕಾಕ್ಕೆ ಅರ್ತ ಆಗುವ ಭಾಷೆ ಯಾವುದು ಅಂತ, ಹಾಗೆಯೇ ಅಮೆರಿಕದ ಡಿಪ್ಲೊಮೇಟ್ಸ್ ಗಳಿಗೂ ಗೊತ್ತು, ಇತಿಹಾಸದಲ್ಲಿ ಯಾವ ಯಾವ ಸಂದರ್ಭದಲ್ಲಿ ಭಾರತಕ್ಕೆ ಅಮೆರಿಕಾ ಸಹಾಯ ನಿರಾಕರಿಸಿತ್ತೋ ಭಾರತ ಅದನ್ನು ತನ್ನದೇ ರೀತಿಯಲ್ಲಿ ನಿಭಾಯಿಸಿಕೊಂಡಿದೆ ಎಂಬುದು.

🇺🇸ಅಮೆರಿಕಾ ಪರಮಾಣು ತಂತ್ರಜ್ಞಾನದಲ್ಲಿ ಕಾಡಿತ್ತು
🇮🇳 ಭಾರತ ಅದನ್ನು ಸ್ವಂತ ಬಲದಿಂದ 1974 ಮತ್ತು 1998 ರಲ್ಲಿ ಸಾಧಿಸಿತು

🇺🇸 ಅಮೆರಿಕಾ ಭಾರತಕ್ಕೆ 1993-94ರ ಸುಮಾರಿಗೆ ಕ್ರಯೋಜನಿಕ್ ತಂತ್ರಜ್ಞಾನ ರಷ್ಯದಿಂದ ಪಡೆಯಲು ಅಡ್ಡಿ ಮಾಡಿತು
🇮🇳 ಭಾರತ ತನ್ನ ಸ್ವಂತ ಬಲದಲ್ಲಿ 2017ರಲ್ಲಿ ಕ್ರಯೋ ಜನಿಕ್ ಏಂಜಿನ್ ಅಭಿವೃದ್ಧಿಪಡಿಸಿತು

🇺🇸ಅಮೆರಿಕಾ 1999 ರ ಕಾರ್ಗಿಲ್ ಯುದ್ದದ ಸಮಯದಲ್ಲಿ ಭಾರತಕ್ಕೆ GPS ತಂತ್ರಜ್ಞಾನವನ್ನು ನಿರಾಕರಿಸಿತು
🇮🇳 ಭಾರತ 2018ರಲ್ಲಿ ತನ್ನದೇ GPS ‘NVIC’ಅನ್ನು ಅಭಿವೃದ್ಧಿ ಮಾಡಿತು. ಇದರಲ್ಲಿ ಒಂದು ವಿಚಾರ ಗಮನಿಸಬೇಕು, ಅಮೆರಿಕಾ ಭಾರತಕ್ಕೆ ತಂತ್ರಜ್ಞಾನ ನಿರಾಕರಿಸಿದಾಗ ಮತ್ತು ಭಾರತ ಅದನ್ನು ತನ್ನ ಸ್ವಂತ ಬಲದಲ್ಲಿ ಸಾಧಿಸಿದಾಗ ದೇಶದಲ್ಲಿ ಬಹುತೇಕ ಇದ್ದದ್ದು ಬಿಜೆಪಿ ಸರಕಾರವೇ.. ಈಗ ಕೊವಿಡ್ ಲಸಿಕೆ‌ ಅಭಿವೃದ್ಧಿ ಮಾಡುವ ವಿಚಾರದಲ್ಲೂ ಅಷ್ಟೆ ಭಾರತ‌ ವಿಶ್ವದ ಯಾವುದೇ ಬಲಿಷ್ಟ ರಾಷ್ಟ್ರ ಸಾಧಿಸಲು ಆಗದ್ದನ್ನು ಸಾಧಿಸಿದೆ. ಮತ್ತು ಈಗಲೂ ದೇಶದಲ್ಲಿ ಅಧಿಕಾರದಲ್ಲಿ‌ ಇರುವುದು ಬಿಜೆಪಿ‌ ಸರಕಾರ.!!

ತಾನು ಭಾರತದ ಪರಮಾಪ್ತ ಸ್ನೇಹಿತ ಅನ್ನುತ್ತಲೆ ಇದ್ದ ಅಮೆರಿಕ, ಚೀನಾದ ವಿರುದ್ಧ ಹೋರಾಡಲು ನಾವು ಒಂದಾಗಬೇಕು ಎಂದು ‘ಕ್ವಾಡ್’ ಮಾಡಿ ಅದನ್ನು ದಕ್ಷಿಣ ಏಷ್ಯಾದ ‘ನೇಟೋ’ ಎಂದು ಕರೆದು, ಭಾರತ ಅದರ ಒಬ್ಬ ಬಹು ಮುಖ್ಯ ಪಾರ್ಟ್ನರ್ ಅಂದ ಅಮೆರಿಕಾ, ಲಸಿಕೆಯ ವಿಚಾರದಲ್ಲಿ ಯಾಕೆ ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತು? ಎರಡು ದಿನದ ಹಿಂದೆ ಭಾರತ್ ಬಯೋ ಟೆಕ್ ನ ಚೆರ್ಮೆನ್ ಡಾ.ಎಲ್ಲಾ ಅವರ ಸಂದರ್ಶನವನ್ನು ರಿಪಬ್ಲಿಕ್ ಟಿವಿಯಲ್ಲಿ ನೋಡಿದವರಿಗೆ ಅರ್ತ ಆಗುತ್ತದೆ. ಅಮೆರಿಕ ಸುಮಾರು 80 ಸಾವಿರ ಕೋಟಿಯಷ್ಟು ($11ಬಿಲಿಯನ್) ಹಣ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಲು ತನ್ನ ಖಾಸಗಿ ಕಂಪೆನಿಗಳಿಗೆ ಕೊಟ್ಟಿತು. ಅದೇ ಸಮಯಕ್ಕೆ ಭಾರತ ಸರಕಾರವು ಸುಮಾರು 1 ಸಾವಿರ ಕೋಟಿಯಷ್ಟು ಹಣ ತನ್ನ ಸುಮಾರು 15 ಖಾಸಗೀ ಕಂಪೆನಿಗಳಿಗೆ ಕೊಟ್ಟು ಲಸಿಕೆ ಅಭಿವೃದ್ಧಿ ಮಾಡುವಂತೆ ಹೇಳಿತು.
ಭಾರತದ ಇಸ್ರೋ ವಿಜ್ಞಾನಿಗಳೇ ಇರಲಿ, ಅಥವಾ ಔಷಧಿ ಕಂಪೆನಿಗಳ ವಿಜ್ಞಾನಿಗಳೇ ಇರಲಿ ಅತ್ಯಂತ ಕಮ್ಮಿ ದರದಲ್ಲಿ ಅತ್ಯಂತ ಪರಿಣಾಮಕಾರಿಯಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಇಸ್ರೋದ ಕಮ್ಮಿ ಖರ್ಚಿನ ಮಂಗಳ ಯಾನದ ಕಥೆ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸುವಂತೆ ಮಾಡಿದ್ದು ನಿಮಗೆ ಗೊತ್ತೇ ಇದೆ. ಔಷಧೀಯ ಕ್ಷೇತ್ರದಲ್ಲಿಯೂ ಭಾರತ ಅಂತಹುದೇ ಸಾಧನೆ ಮಾಡಿದೆ. ಹಿಂದೆ ಇದೇ ಭಾರತ್ ಬಯೋಟೆಕ್ ಕಂಪೆನಿಯು ಅಮೆರಿಕಾಕ್ಕೆ ಅಸಾಧ್ಯವಾಗಿದ್ದ ಕಮ್ಮಿ ದರದ ಔಷದಿ ಒಂದನ್ನು HVI ಕಾಯಿಲೆಗೆ ಕಂಡು ಹಿಡಿದು ಅಮೆರಿಕಕ್ಕೆ ಕೊಟ್ಟಿತ್ತು. ಅದರ ಬೆಲೆ ಸುಮಾರು ಒಂದುವರೆ ಡಾಲರ್ ಗೂ ಕಮ್ಮಿ ಇತ್ತು. ಈಗ ಇದೇ ಭಾರತ್ ಬಯೋಟೆಕ್ ಕಂಪೆನಿಯ ‘ಕೋವ್ಯಾಕ್ಸ್ಇನ್’ ಅಮೆರಿಕ ‌ ಕಂಡುಹಿಡಿದ ಲಸಿಕೆಗಿಂತ ನೂರು ಪಾಲು‌ ಅಗ್ಗ ಮತ್ತು ಅದಕ್ಕಿಂತಲೂ ಹೆಚ್ಚು ವಿಶ್ವಾಸನೀಯ. ಇದು ಈಗಾಗಲೇ‌ ವಿಶ್ವ ಆರೋಗ್ಯ ಸಂಸ್ಥೆಯು ಸೇರಿದಂತೆ ವಿಶ್ವದ ಎಲ್ಲಾ ಪ್ರಮುಖ ಆರೋಗ್ಯ ಸಂಸ್ಥೆಗಳು ದ್ರಡಪಡಿಸಿವೆ.ಇದು ಇಷ್ಟೆ ಆಗಿದ್ದರೆ ಅಮೆರಿಕಾಕ್ಕೆ ಅಷ್ಟು ತಲೆಬಿಸಿ ಆಗುತ್ತಿರಲಿಲ್ಲ. ಈ‌ ಲಸಿಕೆ‌ಯ ದರವನ್ನು ಲಸಿಕೆ‌ ಉತ್ಪಾದನೆ ಮಾಡಿದ ಕಂಪೆನಿಗೆ ಬದಲು ಸರಕಾರವೇ ನಿಗದಿ ಮಾಡಿತ್ತು. ನಿಮಗೆ ಗೊತ್ತಿರಲಿ, ಯಾವಾಗ ವಿಶ್ವದ ಎಲ್ಲಾ‌ ಬಹುರಾಷ್ಟ್ರೀಯ ಫಾರ್ಮಾ ಕಂಪೆನಿಗಳು ಕರೋನಾಕ್ಕೆ‌ ಲಸಿಕೆ ಕಂಡುಹಿಡಿಯುವ ಪೂರ್ವದಲ್ಲಿ ಈ‌ ಲಸಿಕೆ ಸುಮಾರು ₹3,500 ರಿಂದ ₹4000 ಪ್ರತಿ ಡೋಸಿಗೆ ಮಾರಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಭಾರತ ಸರಕಾರ‌ ಯಾವಾಗ ಇದರ ದರ ₹250 ಕ್ಕೆ ನಿಗದಿ ಮಾಡಿತೋ ಆಗಲೇ ಇವರ ಎಲ್ಲಾ ಲೆಕ್ಕಾಚಾರ ಬುಡಮೇಲು ಆಗಿದ್ದು. ಭಾರತ ಬಯೋಟೆಕ್ ಕಂಪೆನಿ ತನ್ನ್ Covaxin ಲಸಿಕೆಯನ್ನು ಅಮೆರಿಕಾದಿಂದ ತಂದ ಕಚ್ಚಾವಸ್ತು ಬಳಸಿ ಅದಕ್ಕಿಂತ 200 ಪಟ್ಟು ಕಮ್ಮಿ ದರದಲ್ಲಿ ಮಾರುಕಟ್ಟೆಗೆ ಬಿಟ್ಟರೆ, ಅಮೆರಿಕ ತಾನೇ ಉತ್ಪದನೆ ಮಾಡಿದ ಲಸಿಕೆ ಪರಿಣಾಮಕಾರಿಯೂ ಅಲ್ಲ ಅಗ್ಗವೂ ಅಲ್ಲ, ಜೊತೆಗೆ ಭಾರತದಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯು ಆಗುತ್ತಿಲ್ಲ. ಇವಿಷ್ಟೂ ಸಂಗತಿಗಳು ಅಮೇರಿಕದ ಆರ್ಥಿಕ ಹಿತಾಸಕ್ತಿಗೆ ಹಾನಿ ಮಾಡುತ್ತದೆ.

ಇದೂ ಅಮೇರಿಕಾದ ಸ್ವಯಂ ಕೃತ ಅಪರಾಧವೇ. ಭಾರತದ ಸಂಸ್ಕೃತಿಯಲ್ಲಿ ಆರೋಗ್ಯ, ಅನ್ನ ಮತ್ತು ಶಿಕ್ಷಣ ಯಾವತ್ತೂ ಒಂದು ಸೇವೆ ಎಂಬ ಭಾವನೆ ಇತ್ತು, ಈಗಲೂ ಆಂತರ್ಯದಲ್ಲಿ ಅದು ಇದ್ದೇ ಇದೆ. ಆದರೆ ಈ ಮೂರೂ ಸಂಗತಿಯಲ್ಲಿ ಜನರ‌‌ ಭಾವನೆಗಳೊಂದಿಗೆ ಚಲ್ಲಾಟ ಆಡಿ ಯಥೇಚ್ಛವಾಗಿ ಹಣ ಸಂಪಾದನೆ ‌ಮಾಡಬಹುದು ಎಂಬುದನ್ನ‌ ಇದೇ ಅಮೇರಿಕ‌ ಜಗತ್ತಿಗೆ‌ ಕಲಿಸಿ‌ಕೊಟ್ಟದ್ದು. ಆಗ ಭಾರತ ಇನ್ನೂ ತನ್ನ ದಾಸ್ಯದಿಂದ‌ ಹೊರಗೆ ಬರುವ ಪ್ರಯತ್ನದಲ್ಲಿತ್ತು. ಜಗತ್ತು ಅಮೇರಿಕಾ ಹೇಳಿದ್ದೇ ವೇದವಾಕ್ಯ ಆಡಿದ್ದೆ ಆಟ ಅನ್ನುತಿತ್ತು. ಈಗ
ಪರಿಸ್ಥಿತಿ ಬದಲಾಗಿದೆ, ಭಲಿಷ್ಟವಾಗಿದೆ. ಭಾರತ ಲಸಿಕೆಯನ್ನು‌ ಇಷ್ಟು‌ ಕಮ್ಮಿ ದರದಲ್ಲಿ‌ ಮಾರುವುದು ಅಲ್ಲದೇ ಜಗತ್ತಿನ ಎಲ್ಲಾ‌ ರಾಷ್ಟ್ರಗಳು ಇದರ ಮೇಲಿನ ಪೇಟೆಂಟ್ ರದ್ದುಗೊಳಿಸಿ‌ ಉಚಿತವಾಗಿ ‌ಅತ್ಯಂತ ಕಮ್ಮಿದರದಲ್ಲಿ ‌‌ಕೊಡಬೇಕು ಎಂದು‌ ವಿಶ್ವ ನಾಯಕರನ್ನು ಆಗ್ರಹಿಸಿತು. ಭಾರತದ ಈ ನಡೆ ಅದು‌ ಅಮೇರಿಕಾದ ಫಾರ್ಮಾ‌ಕಂಪೆನಿಗಳ ಬೆವರಿಳಿಸಿತು.

ಈ ಎಲ್ಲಾ ಲಾಭ‌ನಷ್ಟದ ಲೆಕ್ಕಾಚಾರ ‘ಅಮೇರಿಕಾ ಫಷ್ಟ್’ ಎನ್ನುವ ಮುಖವಾಡದಡಿ ಭಾರತಕ್ಕೆ ಕಚ್ಚಾವಸ್ತುಗಳು ಪೂರೈಕೆ ನಿಲ್ಲಿಸಿ ಲಸಿಕೆಯ ಉತ್ಪಾದನೆಗೆ ಏಟು ಕೊಡಲು‌ ನಿರ್ಧರಿಸಿತು. ಅದಕ್ಕೆ ಭಾರತದ ಜೊತೆಗೆ ಉಳಿದ ವಿಚಾರದಲ್ಲಿ ಇರುವ ಅವಲಂಬನೆ ನನಪು ಹೋಗಿತ್ತು ಭಾರತ ಇನ್ನೂ 60 ರ ದಶಕದ ಭಾರತ ಅಂದುಕೊಂಡಿತ್ತು.
ಈ ಎಲ್ಲಾ ಬೆಳವಣಿಗೆಯ ನಡುವೆ ಪ್ರಧಾನಿ ಮೋದಿ ಮೌನವಾಗಿಯೇ ಇದ್ದರು,ಎಲ್ಲೂ ಯಾವುದೇ ಬಹಿರಂಗ ಹೇಳಿಕೆ ಕೊಡುವ ಗೋಜಿಗೆ ಹೋಗಲಿಲ್ಲ. ಯಥಾ ಪ್ರಕಾರ ಭಾರತದ ಫಾರ್ಮಾ ಕಂಪೆನಿಗಳು ಸಹಾ ಈ ಸಮಸ್ಯೆಯನ್ನು ಸಮಚಿತ್ತದಿಂದ ನಿಭಾಯಿಸಿದವು. ತಮಗೆ ಅಮೆರಿಕ ಹಾಕುವ ನಿರ್ಭಂಧ ಯಾವುದೇ ಪರಿಣಾಮ ಬೀರದು ಎಂಬುದನ್ನು‌ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೇಳತೊಡಗುದವು. ಭಾರತ ತನ್ನದೇ ಸ್ವ ಸಾಮರ್ಥ್ಯದಲ್ಲಿ ಲಸಿಕೆಗೆ ಬೇಕಾಗುವ ಕಚ್ಚಾವಸ್ತು ಸಿದ್ದಪಡಿಸಿಕೊಳ್ಳುವ ಕೆಲಸಕ್ಕೆ ಇಳಿಯಿತು. ಭಾರತ್ ಬಯೋಟೆಕ್ ಮತ್ತು Council of Scientific and Industrial Research (CSIR) ಭಾರತದಲ್ಲೇ ಲಸಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ಉತ್ಪಾದನೆ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡವು. ಇದು ಅಮೆರಿಕಕ್ಕೆ ಮತ್ತೆ ಇತಿಹಾಸವನ್ನು ನೆನಪಿಸಿತು. ಭಾರತ ಯಾವತ್ತೂ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯದು, ನೀವು ಸಹಾಯ ಮಾಡಿದರೆ ಸಂತೋಷ, ಇಲ್ಲದೆ ಹೋದರೆ ಬೇಸರ ಇಲ್ಲ, ನಮಗೆ ಕೊಂಚ ಕಷ್ಟ ಆಗಬಹುದು, ಆದರೆ ನಾವು ತಲುಪುವ ಗುರಿ ತಲುಪದೇ ಬಿಡೆವು ಎನ್ನುವ ಸ್ಪಷ್ಟ ಸಂದೇಶ ಭಾರತ್ ಬಯೋಟೆಕ್ ಅಮೆರಿಕಕ್ಕೆ ಕೊಟ್ಟಿತು. ರಾಜತಾಂತ್ರಿಕವಾಗಿ ಏನು ಮಾಡಬೇಕು , ಎಲ್ಲೆಲ್ಲಿ ಯಾವ ನರವನ್ನು ಹಿಡಿಯಬೇಕು, ಒತ್ತಬೇಕು ಅನ್ನುವ ಕಲೆ ಮೋದಿಯವರಿಗೆ ಗೊತ್ತೇ ಇದೆ. ಅಮೆರಿಕದ ಕೆಲವು ಅಧಿಕಾರಿಗಳೇ ಅಲ್ಲಿಯ ಸರಕಾರಕ್ಕೆ ಭಾರತವನ್ನು ಅಮೇರಿಕಾ ಎದುರು ಹಾಕಿಕೊಂಡಾಗ ಆದ ಮತ್ತು ಆಗುವ ನಷ್ಟಗಳು ಏನು ಎಂಬುದು ಮನವರಿಕೆ ಮಾಡಿದರು. ಅಮೆರಿಕ ಮೆತ್ತಗಾಯಿತು, ಈಗ ಜೊತೆಗಿರುತ್ತೇನೆ ಅಂದಿತು.

ನೆನಪಿಡಿ ಮೋದಿಯ ಮಾತಿಗಿಂತ ಮೋದಿಯ ಮೌನ ವಿರೋಧಿಗಳ, ವಿರೋಧಗಳ ಮುಖವಾಡ ಕಳಿಚಿದ್ದೇ ಹೆಚ್ಚು..!!!

IndiaFightsCorona

ಅಂಬಲಪಾಡಿ ವಾರ್ಡಿನಲ್ಲಿ ಹಡಿಲು ಭೂಮಿ ಕೃಷಿ : ಪೂರ್ವಭಾವಿ ಸಭೆ

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರ ಕನಸಿನ ಯೋಜನೆಯಂತೆ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡ್ 1 ಮತ್ತು 2ರ ಪರಿಮಿತಿಯಲ್ಲಿ ಸುಮಾರು 25 ಎಕ್ರೆಗೂ ಮಿಕ್ಕಿ ಹಡಿಲು ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ಬಗ್ಗೆ ಅಂಬಲಪಾಡಿ ವಾರ್ಡ್ ಜನಪ್ರತಿನಿಧಿಗಳ, ಪ್ರಮುಖರ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಅಂಬಲಪಾಡಿ ಯೋಗೀಶ್ ಶೆಟ್ಟಿಯವರ ನಿವಾಸದಲ್ಲಿ ನಡೆಯಿತು.

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಮುಖ್ಯ ತೋಡುಗಳ ಹೂಳೆತ್ತುವ ಜೊತೆಗೆ ಹಡಿಲು ಭೂಮಿ ಕೃಷಿಯ ಬಗ್ಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಯಿತು. ಈಗಾಗಲೇ ಹಡಿಲು ಭೂಮಿಯ ಮಾಲಕರಲ್ಲಿ ಈ ಬಗ್ಗೆ ಅನುಮತಿಯನ್ನು ಪಡೆದುಕೊಳ್ಳಕಾಗಿದ್ದು ಶಾಸಕರಾದ ಕೆ.ರಘುಪತಿ ಭಟ್ ರವರ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಹಡಿಲು ಭೂಮಿ ಕೃಷಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಗ್ರಾಮಸ್ಥರ ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಕೋರಲು ನಿರ್ಣಯಿಸಲಾಯಿತು. ಅಲ್ಲದೆ ಯೋಜನೆಯ ಪ್ರಗತಿಗೆ ಅನುಗುಣವಾಗಿ ಇನ್ನಷ್ಟು ಹಡಿಲು ಭೂಮಿಯ ಮಾಲೀಕರನ್ನು ಸಂಪರ್ಕಿಸಿ ಹಡಿಲು ಭೂಮಿ ಕೃಷಿಗೆ ಅವಕಾಶ ಮಾಡಿಕೊಡಲು ವಿನಂತಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಅಂಬಲಪಾಡಿ ವಾರ್ಡ್ ವ್ಯಾಪ್ತಿಯ ಹಡಿಲು ಭೂಮಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಗೆ ಇನ್ನಷ್ಟು ಪ್ರಮುಖರನ್ನು ಸೇರ್ಪಡೆಗೊಳಿಸಿ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ನಿಶ್ಚಯಿಸಲಾಯಿತು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸೋಮನಾಥ್ ಬಿ.ಕೆ., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ, ನಿವೃತ್ತ ಪೊಲೀಸ್ ಅಧಿಕಾರಿ ಕೇಳು ನಾರಾಯಣ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಸುಜಾತ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಕುಮಾರ್, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಮಹೇಂದ್ರ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ರಾವ್, ವಾರ್ಡ್ ಪ್ರಮುಖರಾದ ಹರೀಶ್ ಆಚಾರ್ಯ, ಶರತ್ ಶೆಟ್ಟಿ, ಅನಿಲ್ ರಾಜ್ ಅಂಚನ್, ಭುವನೇಂದ್ರ ಸುವರ್ಣ, ವಿನೋದ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಎಪ್ರಿಲ್ 25, ಭಾನುವಾರ,2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 12 ಸಲುವ ಚೈತ್ರ ಶುದ್ಧ ತ್ರಯೋದಶಿ 25 ಗಳಿಗೆ ದಿನ ವಿಶೇಷ :ಅನಂಗ ತ್ರಯೋದಶಿ , ಮಹಾವೀರ ಜಯಂತಿ ನಿತ್ಯ ನಕ್ಷತ್ರ :ಹಸ್ತಾ 49| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :4.30-6.00 ಗಂಟೆ ಗುಳಿಕ ಕಾಲ :3.00-4.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.14 ಗಂಟೆ

ಮೇಷ: ನಿಮ್ಮ ಉದ್ಯೋಗದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ವೃದ್ಧಿ. ಹಿರಿಯರ ಹಾರೈಕೆ. ಶುಭಸಂಖ್ಯೆ: 8

ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಧನಾತ್ಮಕ ಚಿಂತನೆಯನ್ನು ಮಾಡಿ. ಹಳೆಯ ಸ್ನೇಹಿತನ ಭೆೇಟಿ. ಶುಭಸಂಖ್ಯೆ: 9

ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಲಿದೆ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ. ಅಕ್ಕ ತಂಗಿಯರೊಂದಿಗೆ ಭೋಜನ. ಶುಭಸಂಖ್ಯೆ: 1

ಕಟಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ: 2

ಸಿಂಹ: ಅನವಶ್ಯಕ ತಿರುಗಾಟ ಸಾಧ್ಯತೆ. ಸ್ವಂತ ಗ್ರಾಮಕ್ಕೆ ಭೇಟಿ ನೀಡುವಿರಿ. ಕೃಷಿಕರಿಗೆ ವಿಶೇಷ ಲಾಭ. ಭೂವಿವಾದ ಅಂತ್ಯ ಕಾಣಲಿದೆ. ಶುಭಸಂಖ್ಯೆ: 4

ಕನ್ಯಾ: ಅನಿರೀಕ್ಷಿತವಾಗಿ ಧನಲಾಭ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಗುಣಗಾನ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 7

ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಉನ್ನತ ವಿದ್ಯಾಭ್ಯಾಸ ಪೂರ್ಣ. ಸಂಗಾತಿಯೊಂದಿಗೆ ವಿರಸ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 8

ವೃಶ್ಚಿಕ: ಮನೆ ಬದಲಾವಣೆ ಸಾಧ್ಯತೆ. ಭೂಮಿ ವಿವಾದದ ತೀರ್ಪು ಪ್ರಕಟ. ನಿರಾಸೆ. ಕುಟುಂಬದೊಂದಿಗೆ ಸಮಾಲೋಚನೆ. ಶುಭಸಂಖ್ಯೆ: 9

ಧನಸ್ಸು: ಕೆಲವೊಂದು ಘಟನೆಗಳು ನಿಮ್ಮ ಸಹನೆಯನ್ನು ಪರೀಕ್ಷಿಸಲಿದೆ. ಸಾರ್ವಜನಿಕವಾಗಿ ಅವಮಾನ. ಸ್ನೇಹಿತನಿಂದ ಸಮಾಧಾನ. ಶುಭಸಂಖ್ಯೆ: 6

ಮಕರ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲೆ ಅಸಮಾಧಾನ. ಸ್ತ್ರೀಯರಿಂದ ಸಹಾಯ. ಶುಭಸಂಖ್ಯೆ: 6

ಕುಂಭ: ಉದ್ಯೋಗಸ್ಥರಿಗೆ ವಿಶೇಷ ದಿನ. ಧಾರ್ವಿುಕ ಮಂದಿರಕ್ಕೆ ಭೇಟಿ. ಮನಸ್ಸಿಗೆ ಸಮಾಧಾನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 5

ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಹಣ ಕಾಸಿನ ವಿಚಾರದಲ್ಲಿ ಹಿರಿಯರ ಸಲಹೆ ಮುಖ್ಯ. ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 3

ಎಪ್ರಿಲ್ 23, ಶುಕ್ರವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

23 -4-2021 ಶುಕ್ರವಾರ ಪ್ಲವ ಸಂ|ರದ ಮೇಷ ಮಾಸ‌ ದಿನ 10 ಸಲುವ ಚೈತ್ರ ಶುದ್ಧ ಏಕಾದಶಿ 38||| ಗಳಿಗೆ ದಿನ ವಿಶೇಷ :ಸರ್ವೈಕಾದಶಿ ನಿತ್ಯ ನಕ್ಷತ್ರ :ಮಖಾ 3||| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :10.30-12.00 ಗಂಟೆ ಗುಳಿಕ ಕಾಲ :7.30-9.00 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.14 ಗಂಟೆ

ಮೇಷ

ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಗೃಹ ಕಲಹಗಳಿಗೆ ದಾರಿಯಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ. ಬಂಧುಗಳ ಮನೆಯ ಕಾರ್ಯಕ್ರಮಗಳಲ್ಲಿ ಭಾಗಿ.

ವೃಷಭ

ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆಯನ್ನು ಕಂಡುಕೊಳ್ಳುವಿರಿ. ಸಾಮಾಜಿಕ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತೋಷವನ್ನು ಅನುಭವಿಸಲಿದ್ದೀರಿ. ಮಕ್ಕಳಿಂದ ಆರ್ಥಿಕ ಸಹಕಾರ.

ಮಿಥುನ

ಉದ್ಯೋಗಾವಕಾಶಗಳು ತೆರೆದುಕೊಳ್ಳುವ ಸಾಧ್ಯತೆ. ನ್ಯಾಯಾಲಯದಲ್ಲಿನ ಕಟ್ಳೆಗಳಿಗೆ ಚಾಲನೆ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ. ಸಾಹಿತಿ, ಕವಿಗಳು, ಬರಹಗಾರರಿಗೆ ಗೌರವ ಪ್ರಾಪ್ತಿ.

ಕಟಕ

ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನುಕೂಲತೆ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭ ಹೆಚ್ಚಳ. ರಾಜಕೀಯದಲ್ಲಿ ಸೂಕ್ತ ಸ್ಥಾನ ದೊರಕುವ ಸಾಧ್ಯತೆ.

ಸಿಂಹ

ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತ ಉದ್ಯೋಗಾವಕಾಶ. ದೂರದ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ತಿರುವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ. ಅತಿಯಾದ ಆಯಾಸ.

ಕನ್ಯಾ

ಕೆಲಸ ಕಾರ್ಯಗಳಲ್ಲಿ ಅನುಕೂಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಿಶ್ವಾಸದಿಂದ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಲಾಭ.

ತುಲಾ

ದೇವತಾನುಗ್ರಹದಿಂದ ಶುಭ ಕಾರ್ಯಗಳು ನಿಮ್ಮ ಮನದಿಚ್ಛೆಯಂತೆ ನೆರವೇರುವುದರಿಂದ ನೆಮ್ಮದಿ. ಧೈರ್ಯ ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲದಿಂದಾಗಿ ಕಾರ್ಯಾನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.

ವೃಶ್ಚಿಕ

ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ನೌಕರ ವರ್ಗಕ್ಕೆ ಕೆಲಸಗಳಿಂದ ವಿರಾಮ ದೊರೆತು ದೂರದೂರಿನ ಪ್ರಯಾಣ ಸಾಧ್ಯತೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು.

ಧನು

ಉನ್ನತ ಅಧ್ಯಯನಕ್ಕೆ ಉತ್ತೇಜನ ದೊರೆತು ಉತ್ತಮ ಸಾಧನೆ. ಸಾರಾಸಾರ ವಿವೇಚನೆಯಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ವಿಶೇಷ ಭೋಜನ ಕೂಟದಲ್ಲಿ ಭಾಗಿ.

ಮಕರ

ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಅವಶ್ಯಕತೆಗಿಂತ ಹೆಚ್ಚಾಗಿ ಹಣಕಾಸಿನ ನೆರವು ದೊರೆಯಲಿದೆ. ಶೀಘ್ರದಲ್ಲೇ ಸಂತೋಷಕರ ಸುದ್ದಿಯೊಂದನ್ನು ಆಲಿಸಲಿದ್ದೀರಿ.

ಕುಂಭ

ಗೃಹ ಖರೀದಿ ಅಥವಾ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮ ಕಾಲ. ಮನಸ್ಸಿಟ್ಟು ಕೆಲಸವನ್ನು ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಭೂ ಖರೀದಿ ವ್ಯವಹಾರವನ್ನು ಮಾಡಲು ಸಕಾಲ.

ಮೀನ

ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಶಾರೀರಿಕ ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ.

ಎಪ್ರಿಲ್ 22, ಗುರುವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ದಿನಾಂಕ :Thursday, 22 Apr 2021ಪ್ಲವ ಸಂ|ರದ ಮೇಷ ಮಾಸ‌ ದಿನ 9 ಸಲುವ ಚೈತ್ರ ಶುದ್ಧ ದಶಮಿ 43| ಗಳಿಗೆದಿನ ವಿಶೇಷ :ಕಾರ್ಕಳ ಅನಂತಶಯನ ರಥ , ಅಶ್ವತ್ಥಪುರ ರಥ ನಿತ್ಯ ನಕ್ಷತ್ರ :ಆಶ್ಲೇಷಾ 5 ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :1.30-3.00 ಗಂಟೆ ಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.15 ಗಂಟೆ

ಮೇಷ

ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಬೇರೆಯವರಿಗೆ ಸಹಾಯ ಮಾಡುವ ವಿಷಯದಲ್ಲಿ ತೂಗಿ ನೋಡುವುದು ಉತ್ತಮ. ಸಂಗಾತಿಯ ಸಹಕಾರದಿಂದಾಗಿ ಸಂತೃಪ್ತ ಜೀವನ ನಿಮ್ಮದಾಗಲಿದೆ.

ವೃಷಭ

ದೈನಂದಿನ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಾಗುವವು. ಹಿತ ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆಸ್ತಿ ಸಂಬಂಧದ ವಿವಾದಗಳು ಬಗೆಹರಿಯಲಿವೆ. ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗಿ.

ಮಿಥುನ

ವಿದ್ವಾಂಸರು, ಪರಿಣತರುಗಳಿಗೆ ಗೌರವಾದರಗಳು ಪ್ರಾಪ್ತವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಂದಾಣಿಕೆಯಿಂದಾಗಿ ನೆಮ್ಮದಿಯನ್ನು ಹೊಂದುವಿರಿ. ಮಹಿಳೆರಿಗೆ ಸಮಾರಂಭಗಳಲ್ಲಿ ಭಾಗಿ ಆಗುವಂತೆ ಆಹ್ವಾನ.

ಕಟಕ

ಕೃಷಿ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ. ಯಂತ್ರಾಯುಧಗಳ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮಹಿಳೆಯರಿಗೆ ಸಂಗಾತಿಯಿಂದ ಉತ್ತಮ ಸಹಕಾರ. ಹಿರಿಯರ ಆರೋಗ್ಯದ ನಿಮಿತ್ತ ವೈದ್ಯಕೀಯ ವೆಚ್ಚ.

ಸಿಂಹ

ಆರ್ಥಿಕ ಅಭಿವೃದ್ಧಿಯ ಕಾರ್ಯಗಳಲ್ಲಿ ಅಡೆತಡೆ. ಅಪೇಕ್ಷಿತರಿಗೆ ವಿವಾಹ ಸಂಬಂಧಗಳು ಕುದುರಲಿವೆ. ಒಡಹುಟ್ಟಿದವರ ಸಹಕಾರದಿಂದ ಅನುಕೂಲ. ವಾಹನ ಚಾಲನೆ ಮಾಡದಿರುವುದು ಉತ್ತಮ.

ಕನ್ಯಾ

ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ಅತಿಯಾದ ಚಿಂತನೆ ಮಾಡದಿರುವುದು ಉತ್ತಮ. ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ. ಬರವಣಿಗೆ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳಿತು.

ತುಲಾ

ಮಾತಿನ ಮೇಲೆ ಹಿಡಿತ ಅಗತ್ಯ. ಸಹೋದರರ ಸಹಕಾರದಿಂದಾಗಿ ಕೈಗೊಂಡ ಕಾರ್ಯಗಳು ಸುಗಮ. ಅನವಶ್ಯಕ ವ್ಯವಹಾರಗಳಿಂದ ದೂರ ಉಳಿಲಯುವುದು ಉತ್ತಮ.

ವೃಶ್ಚಿಕ

ಆರ್ಥಿಕ ಸಂಪನ್ಮೂಲಗಳು ವೃದ್ಧಿ. ಚಿನ್ನಾಭರಣಗಳ ಖರೀದಿ ಸಾಧ್ಯತೆ. ಸಹನೆಯಿಂದಾಗಿ ನೆರೆಹೊರೆಯವರೊಂದಿಗಿನ ಸಂಬಂಧ ಉತ್ತಮ. ಮನೆಯಲ್ಲಿ ಹಬ್ಬದ ವಾತಾವರಣ.

ಧನು

ಅನಿರೀಕ್ಷಿತ ವ್ಯಕ್ತಿಯೊಬ್ಬರ ಪರಿಚಯದಿಂದ ಆಧ್ಯಾತ್ಮಕ ವಿಷಯಗಳ ಕುರಿತಾದ ಸಲಹೆಗಳನ್ನು ಪಡೆಯಲಿದ್ದೀರಿ. ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗಿ. ಆರೋಗ್ಯದಲ್ಲಿ ಸುಧಾರಣೆ.

ಮಕರ

ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ವಿಶೇಷ ಕಾಳಜಿ ಅಗತ್ಯ. ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಗಮನ ಅವಶ್ಯ. ಕೌಟುಂಬಿಕ ನೆಮ್ಮದಿ.

ಕುಂಭ

ಆತ್ಮೀಯರ ಆಗಮನ. ವಜ್ಯ ವೈಡೂರ್ಯಗಳ ವ್ಯಾಪಾರಸ್ಥರಿಗೆ ಲಾಭ. ದೈನಂದಿನ ಕೆಲಸ ಕಾರ್ಯಗಳಲ್ಲಿ ಆಸಕ್ತಿ. ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಸ್ಥಾನಮಾನ ಪ್ರಾಪ್ತವಾಗಲಿದೆ.

ಮೀನ

ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ನ್ಯಾಯಾಲಯದ ಮೊರೆಹೊಗುವ ಸಾಧ್ಯತೆ. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧಗಳು ಕೂಡಿಬರಲಿದೆ.

ಎಪ್ರಿಲ್ 21, ಬುಧವಾರ,2021: ಇಂದಿನ ನಿತ್ಯ ಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 8 ಸಲುವ ಚೈತ್ರ ಶುದ್ಧ ನವಮಿ 45||| ಗಳಿಗೆ ದಿನ ವಿಶೇಷ :ಶ್ರೀ ರಾಮ ನವಮಿ ,: ವಿಶ್ವ ಕಾರ್ಯದರ್ಶಿಗಳ ದಿನ: ನಿತ್ಯ ನಕ್ಷತ್ರ :ಪುಷ್ಯ 4| ಗಳಿಗೆ ಮಹಾ ನಕ್ಷತ್ರ :ಅಶ್ವಿ‌ನಿ ಋತು :ವಸಂತ ರಾಹುಕಾಲ :12.00-1.30 ಗಂಟೆ ಗುಳಿಕ ಕಾಲ :10.30-12.00 ಗಂಟೆ ಸೂರ್ಯಾಸ್ತ :6.43 ಗಂಟೆ ಸೂರ್ಯೋದಯ :6.16 ಗಂಟೆ

ಮೇಷ

ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಋಣ ಪರಿಹಾರದಿಂದ ಸಂತೃಪ್ತಿ. ಆಸ್ತಿ ಅಥವಾ ಚಿನ್ನಾಭರಣ ಖರೀದಿ. ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ. ಸಾಮಾಜಿಕ ಗೌರವ ಪ್ರಾಪ್ತಿ.

ವೃಷಭ

ಮನೆಯಲ್ಲಿ ನೆಮ್ಮದಿ. ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಾಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಉದ್ಯಮದಲ್ಲಿ ಪ್ರಗತಿ.

ಮಿಥುನ

ಮಿತ್ರವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ವಿದ್ಯಾಭ್ಯಾಸದಲ್ಲಿ ಉತ್ತಮ ಶ್ರದ್ಧೆಯಿಂದ ಸಫಲತೆ. ಯಂತ್ರೋಪಕರಣಗಳ ಖರೀದಿಗಾಗಿ ಖರ್ಚು.

ಕಟಕ

ದೀರ್ಘಕಾಲಿಕ ಅನಾರೋಗ್ಯದಿಂದ ಮುಕ್ತಿ. ಪ್ರಾಪ್ತವಯಸ್ಕರಿಗೆ ಉತ್ತಮ ಸಂಬಂಧಗಳು ದೊರಕುವ ಸಾಧ್ಯತೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ತೊಡುಕು. ಮಕ್ಕಳಿಂದ ಶುಭ ವಾರ್ತೆ.

ಸಿಂಹ

ಕಳೆದುಹೋದ ದಿನಗಳ ಬಗ್ಗೆ ಚಿಂತಿಸುವುದರಿಂದ ಪ್ರಯೋಜನವಿಲ್ಲ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರತೆ ತೋರಿ ಗಂಡಾಂತರಕ್ಕೆ ಸಿಲುಕದಿರಿ. ಹಿತಶತ್ರುಗಳಿಂದ ಸಮಸ್ಯೆ.

ಕನ್ಯಾ

ಭೂ ವ್ಯವಹಾರಗಳಿಂದ ಲಾಭ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು ನೆಮ್ಮದಿಯ ಜೀವನಕ್ಕೆ ನಾಂದಿಯಾಗುವುದು.

ತುಲಾ

ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸೋದರರಿಂದ ಸಲಹೆ ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ. ವಿದೇಶದಿಂದ ಪ್ರಮುಖ ಸುದ್ದಿ ಬರುವ ಸಾಧ್ಯತೆ.

ವೃಶ್ಚಿಕ

ದೂರದ ಪ್ರಯಾಣ ಯೋಗ. ವಾಹನ ಖರೀದಿ ಸಾಧ್ಯತೆ. ನ್ಯಾಯಾಲಯದಲ್ಲಿ ಜಯ. ಕುಟುಂಬ ಸದಸ್ಯರಿಂದ ಹೊಸ ಕೆಲಸ ಕಾರ್ಯಗಳಿಗೆ ಉತ್ತಮ ಸಹಕಾರ ದೊರಕಿ ನಿರಾಳತೆ.

ಧನು

ಮಾತೃವರ್ಗದವರಿಂದ ಸಹಕಾರ. ಆರೋಗ್ಯದಲ್ಲಿ ಏರುಪೇರಾಗುವ ಸಂಭವ, ವೈದ್ಯರ ಸಲಹೆ ಅತ್ಯಗತ್ಯ. ಅನವಶ್ಯಕ ವ್ಯವಹಾರಕ್ಕೆ ತಲೆಹಾಕದಿರುವುದು ಉತ್ತಮ.

ಮಕರ

ಆಧ್ಯಾತ್ಮಿಕ ಜೀವನದಲ್ಲಿ ಸಂತೃಪ್ತಿಯನ್ನು ಕಾಣುವಿರಿ. ವಿಶೇಷ ವ್ಯವಹಾರಗಳಲ್ಲಿ ಅಗತ್ಯ ಪ್ರೋತ್ಸಾಹಗಳು ದೊರಕುವುದು. ಸಹೋದರರಿಂದ ಸಹಕಾರ.

ಕುಂಭ

ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ನೆರೆಹೊರೆಯವರೊಂದಿಗೆ ಕಲಹ ಸಂಭವ. ಮಕ್ಕಳಿಂದ ನೆಮ್ಮದಿ ಸೌಖ್ಯ. ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ. ಗೃಹ ನಿರ್ಮಾಣ ಕೆಲಸಗಳಲ್ಲಿ ಪ್ರಗತಿ.

ಮೀನ

ನಿರೀಕ್ಷಿತ ಮೂಲಗಳಿಂದ ಧನಾಗಮನ. ವೃತ್ತಿ ಸಮಸ್ಯೆಗಳಿಂದ ಪರಿಹಾರ. ಮಹಿಳೆಯರಿಗೆ ಕಲಾವಿದರುಗಳಿಗೆ ಉತ್ತಮ ಅವಕಾಶ. ವಿವಾದಾತ್ಮಕ ಸಮಸ್ಯೆಗಳಿಂದ ಮುಕ್ತರಾಗುವಿರಿ.

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಮುಖ್ಯಾಂಶಗಳು


ನವದೆಹಲಿ: ದೇಶದ ಹದಗೆಟ್ಟಿರುವ ಕರೋನವೈರಸ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸೋಮವಾರ, ವೈದ್ಯರೊಂದಿಗಿನ ವರ್ಚುವಲ್‌ ಸಂವಾದದಲ್ಲಿ ಪಿಎಂ ಮೋದಿ ಅವರು ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ದೊಡ್ಡ ಅಸ್ತ್ರವಾಗಿದೆ ಅಂತ ಹೇಳಿದ್ದರು. ಈ ನಡುವೆ ಮೇ 1 ರಿಂದ ಎಲ್ಲಾ ವಯಸ್ಕರಿಗೆ ವ್ಯಾಕ್ಸಿನೇಷನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಂದು, ಪಿಎಂ ಮೋದಿ ಲಸಿಕೆ ತಯಾರಕರೊಂದಿಗೆ ಸಂವಹನ ನಡೆಸಿ ಈ ವೇಳೆಯಲ್ಲಿ ಎಲ್ಲಾ ಭಾರತೀಯರನ್ನು ಕಡಿಮೆ ಸಮಯದಲ್ಲಿ ಚುಚ್ಚುಮದ್ದು ನೀಡುವ ಸಲುವಾಗಿ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲು ಕೇಳಿಕೊಂಡರು.

ಇನ್ನೂ ‘ರಾಷ್ಟ್ರವನ್ನುದ್ದೇಶಿಸಿ’ ಇಂದು ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಹೈಲೆಟ್ಸ್‌

ಈಗ ದೇಶ ಅತಿ ದೊಡ್ಡ ಹೋರಾಟವನ್ನು ನಡೆಸುತ್ತಿದ್ದು, ನಮ್ಮ ದೇಶ ಎರಡನೇ ಬಾರಿ ಕರೋನದ ಎರಡನೇ ಅಲೆ ವಿರುದ್ದ ಹೋರಾಡುತ್ತಿದೆ. ನಾನು ನಿಮ್ಮ ದುಖಃದಲ್ಲಿ ಭಾಗಿಯಾಗಿರುವೆ ಅಂತ ಹೇಳಿದ ಅವರು ಸಫಾಯಿ ಕರ್ಮಚಾರಿಗಳು ಪೋಲಿಸರು, ತುರ್ತು ವಾಹನಗಳ ಚಾಲಕರು, ವೈದ್ಯರು, ನರ್ಸ್‌ಗಳು ಸೇರಿದಂತೆ ಕರೋನ ವಿರುದ್ದ ಹೋರಾಡಲು ಶ್ರಮಿಸಲು ಹೋರಾಡುತ್ತಿರುವ ಎಲ್ಲರಿಗೂ ನಮಿಸಿದರು. ಇದೇ ವೇಳೆ ಅವರು  ನೀವು ಅನುಭವಿಸುತ್ತಿರುವ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು COVID ಯಿಂದ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಅಂತ ಹೇಳಿದರು. ನಮ್ಮ ಸಂಕಲ್ಪ, ಧೈರ್ಯ ಮತ್ತು ಸಿದ್ಧತೆಯಿಂದ ನಾವು ದೊಡ್ಡ ಸವಾಲನ್ನು ಎದುರಿಸ ಬೇಕಾಗಿದೆ ಅಂತ ಹೇಳಿದರು.

ಇನ್ನೂ ಈ ಸಮಯದಲ್ಲಿ ಕರೋನ ಸೊಂಕು ಹೆಚ್ಚಳವಾಗಿದ್ದು, ದೇಶದಲ್ಲಿ ಮೆಡಿಸನ್‌ ಉತ್ಪಾದನೆ ಕೂಡ ಹೆಚ್ಚಳವಾಗಿದೆ. ಜನವರಿಗೆ ಹೋಲಿಕೆ ಮಾಡಿದ್ರೆ ಈಗ ದೇಶದಲ್ಲಿ ಮೆಡಿಸನ್‌ ಉತ್ಪಾದನೆ ಹೆಚ್ಚಾಗಿದೆ ಅಂತ ಹೇಳಿದರು.  ನಮ್ಮ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮೆಡಿಸನ್‌ ಉತ್ಪಾದನೆ ಮಾಡಲಾಗುತ್ತಿದೆ.  ದೇಶದ ಅನೇಕ ಭಾಗಗಳಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಕೇಂದ್ರ, ರಾಜ್ಯ ಸರ್ಕಾರ, ಖಾಸಗಿ ವಲಯವು ಅಗತ್ಯವಿರುವ ಎಲ್ಲರಿಗೂ ಆಮ್ಲಜನಕವನ್ನು ಲಭ್ಯವಾಗಿಸಲು ಪ್ರಯತ್ನಿಸುತ್ತಿದೆ. ಕರೋನ ಲಸಿಕೆಯನ್ನು ಕಡಿಮೆ ಸಮಯದಲ್ಲಿ ಕಂಡು ಹಿಡಿಯಲಾಗಿದೆ ಇದು ನಮ್ಮ ಹೆಮ್ಮೆಯಾಗಿದೆ ಅಂತ ಹೇಳಿದ ಅವರು  ಈ ದಿಕ್ಕಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.  ಕರೋನ ಲಸಿಕೆಯನ್ನು ದಾಖಲು ಮಾಡಿಕೊಳ್ಳುವ ಕೋಲ್ಡ್‌ ಸ್ಟೋರ್‌ ಮಾಡುವ ವ್ಯವಸ್ಥೆ ನಮ್ಮಲ್ಲಿದೆ ಅಂತ ಹೆಮ್ಮೆ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಕೆಲವು ನಗರಗಳಲ್ಲಿ, ದೊಡ್ಡ ಕರೋನ ಚಿಕಿತ್ಸೆಗಾಗಿ ಮೀಸಲಾದ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ ಅಂತ ಹೇಳಿದರು. ಎರಡು ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಶುರು ಮಾಡಿದ್ದು, ಇಲ್ಲಿಯವರೆಗೆ, 12 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ದೇಶದ ನಿವಾಸಿಗಳಿಗೆ ನೀಡಲಾಗಿದೆ. ನೀಡಲಾಗಿದೆ. ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಬಹುದು ಅಂಥ ಹೇಳಿದರು. ನಮ್ಮ ಬಳಿ ಅತಿ ದೊಡ್ಡ ಪ್ರಮಾಣದಲ್ಲಿ ಪಿಪಿಇ ಕಿಟ್‌, ಕರೋನ ಸೊಂಕು ಪತ್ತೆ ಹಚ್ಚು ಕಿಟ್‌ ಇದೇ ಅಂತ ಹೇಳಿದರು. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ನೀವು ಮನೆಯಲ್ಲಿ ಇರಿ ಅಂತ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡರು.  ಇನ್ನೂ ಇದೇ ವೇಳೆ ಅವರು ಲಾಕ್‌ಡೌನ್‌ ಮಾಡುವುದು ಆಯಾ ರಾಜ್ಯಗಳ ಕೊನೆ ಆಯ್ಕೆಯಾಗಿರಲಿ ಅಂಥ ಹೇಳಿದರು.  ಕಾರ್ಮಿಕರು ವಲಸೆ ಹೋಗದಂತೆ ಒತ್ತಾಯಿಸುವಂತೆ ನಾನು ರಾಜ್ಯ ಸರ್ಕಾರಗಳನ್ನು ಕೋರುತ್ತೇನೆ. ಕಾರ್ಮಿಕರು ರಾಜ್ಯಗಳು ಸಹಾಯ ಮಾಡುತ್ತದೆ ಮತ್ತು ಅವರು ಇರುವ ನಗರದಲ್ಲಿ ಲಸಿಕೆ ಹಾಕಲಾಗುವುದು ಅಂತ ಹೇಳಿದರು.

ಅಂದ ಹಾಗೇ ಕಳೆದ 24 ಗಂಟೆಗಳಲ್ಲಿ ಭಾರತ ಭಾರತವು 2,73,810 ಹೊಸ ಕರೋನ ಸೊಂಕು ಪ್ರಕರಣಗಳನ್ನು ದಾಖಲಾಗಿಸಿಕೊಂಡಿದೆ. ಇದೇ ವೇಳೆ 1,619 ಸಾವುಗಳು ಮತ್ತು 1,44,178 ಮಂದಿ ಕರೋನ ಸೊಂಕಿನಿಂದ ಗುಣಮುಖರಾಗಿ ಡಿಸ್ಜಾರ್ಜ್‌ ಆಗಿದ್ದಾರೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Design a site like this with WordPress.com
Get started