ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಗಳ ಸರ್ವತೋಮುಖ ಅಭಿವೃದ್ಧಿಗೆ, 2021-22 ನೇ ಆರ್ಥಿಕ ವರ್ಷದಲ್ಲಿ ಒಟ್ಟು 369.00 ಕೋಟಿ ರೂಪಾಯಿ ಕೇಂದ್ರ ಸರಕಾರದಿಂದ ಮಂಜೂರು- ಶೋಭಾ ಕರಂದ್ಲಾಜೆ.

2021-22ನೇ ಆರ್ಥಿಕ ವರ್ಷದಲ್ಲಿಉಡುಪಿ-ಚಿಕ್ಕಮಗಳೂರು ಕ್ಷೇತ್ರದ;ರಾಷ್ಟ್ರೀಯ ಹೆದ್ದಾರಿ 169A ಯ ಹೆಬ್ರಿ-ಪರ್ಕಳ ರಸ್ತೆ, ಕರಾವಳಿ ಜಂಕ್ಷನ್-ಮಲ್ಪೆ ಸಂಪರ್ಕಿಸುವ ರಸ್ತೆಗಳನ್ನು ಚತುಷ್ಪಥೀಕರಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಹಾಗೂ ಒಟ್ಟು 29.1 ಕಿ ಮೀ ಉದ್ದದ ಕಾಮಗರಿಗಳಿಗೆ ಭೂ ಸಾರಿಗೆ ಸಚಿವಾಲಯ ಅಂದಾಜು ಮೊತ್ತ 350.00 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ.ರಾಷ್ಟ್ರೀಯ ಹೆದ್ದಾರಿ 169A ಸೀತಾನದಿ ಬಳಿಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು, ತಡೆಗೋಡೆ ನಿರ್ಮಾಣ, ರಸ್ತೆ ಎತ್ತರಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ರಸ್ತೆ ಎತ್ತರಿಸಿ ತಡೆಗೋಡೆಯನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಅಂದಾಜು ಮೊತ್ತ 19.00 ಕೋಟಿ ರೂಪಾಯಿಗಳ ಅನುಮೋದನೆಯನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯ ನೀಡಿದೆ.

ರಾಷ್ಟ್ರೀಯ ಹೆದ್ದಾರಿ 169A ಸೀತಾನದಿ ಬಳಿಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು, ತಡೆಗೋಡೆ ನಿರ್ಮಾಣ, ರಸ್ತೆ ಎತ್ತರಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ರಸ್ತೆ ಎತ್ತರಿಸಿ ತಡೆಗೋಡೆಯನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಅಂದಾಜು ಮೊತ್ತ 19.00 ಕೋಟಿ ರೂಪಾಯಿಗಳ ಅನುಮೋದನೆಯನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯ ನೀಡಿದೆ.

ದೇಶ ಕೋವಿಡ್ ಸೋಂಕಿನ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲೂ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಿ ರೂಪಾಯಿ 369.00 ಕೋಟಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಹಾಗೂ ವಿಶೇಷವಾಗಿ ಕೇಂದ್ರ ಭೂ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ವಿಶೇಷವಾದ ಧನ್ಯವಾದ ಹಾಗು ಕೃತಜ್ಞತೆಗಳನ್ನು ತಿಳಿಸಿರುತ್ತಾರೆ.

ಆದಿ ಉಡುಪಿ – ಮಲ್ಪೆ ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಹಸಿರು ನಿಶಾನೆ – ಶಾಸಕ ರಘುಪತಿ ಭಟ್ ಅಭಿನಂದನೆ

ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯ ಆದಿ ಉಡುಪಿಯಿಂದ ಮಲ್ಪೆ ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಹಸಿರು ನಿಶಾನೆ ತೋರಿಸಿದ್ದು, ಈ ಹೆದ್ದಾರಿ ಹಾದು ಹೋಗುವ ಪರ್ಕಳದಿಂದ ಹಿರಿಯಡ್ಕ ವರೆಗೆ ಚತುಷ್ಪಥ ಹಾಗೂ ಹಿರಿಯಡ್ಕದಿಂದ ಹೆಬ್ರಿ ವರೆಗೆ ದ್ವಿಪಥವಾಗಿ ಅಭಿವೃದ್ಧಿ ಪಡಿಸಲು ಒಟ್ಟು ರೂ. 350.00 ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಅನುಮೋದನೆ ನೀಡಲಾಗಿದೆ

ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯ ಮಲ್ಪೆಯಿಂದ ಹೆಬ್ರಿವರೆಗೆ ಸಮಗ್ರ ಅಭಿವೃದ್ಧಿಯ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ದಿನಾಂಕ 23-03-2021ರಂದು ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಕೇಂದ್ರ ಭೂ ಸಾರಿಗೆ ಮತ್ತು ಹೆದ್ಧಾರಿ ಸಚಿವರಾದ ಶ್ರೀಯುತ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಉಡುಪಿ ಜಿಲ್ಲೆಯ ಬಹು ಬೇಡಿಕೆಯಾಗಿರುವ ಈ ಪ್ರಮುಖ ಹೆದ್ದಾರಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ ಹೆದ್ದಾರಿ ಅಭಿವೃದ್ಧಿಯ ಪ್ರಾಮುಖ್ಯತೆಯ ವಸ್ತುಸ್ಥಿತಿಗಳನ್ನು ಮನವರಿಕೆ ಮಾಡಿ ನಂತರ ಯೋಜನೆಗೆ ಅನುಮೋದನೆ ದೊರಕುವವರೆಗೆ ನಿರಂತರವಾಗಿ ಪ್ರಯತ್ನಿಸಿ ಶ್ರಮವಹಿಸಿದ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವರಾದ ಶ್ರೀಯುತ ನಿತಿನ್ ಗಡ್ಕರಿ ಅವರಿಗೆ ಶಾಸಕ ರಘುಪತಿ ಭಟ್ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಆಡಳಿತದ ಸಾರ್ಥಕ 7 ವರ್ಷಗಳ ಪ್ರಯುಕ್ತ ಜಿಲ್ಲೆಯಾದ್ಯಂತ ಸೇವಾ ಕಾರ್ಯಗಳ ಮಹಾಪೂರ: ಕುಯಿಲಾಡಿ ಸುರೇಶ್ ನಾಯಕ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಾರ್ಥಕ ಆಡಳಿತದ ಏಳನೇ ವರ್ಷ ಪೂರೈಸಿರುವ ಸುಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಸೂಚನೆಯಂತೆ ಉಡುಪಿ ಜಿಲ್ಲೆಯಾದ್ಯಂತ ಮೇ 30ರಂದು ಸೇವಾ ಹೀ ಸಂಘಟನ್ ತತ್ವದಡಿ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಮೋರ್ಚಾಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಒಟ್ಟು 1,297 ಸೇವಾ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳ ಮೂಲಕ 170 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. 34 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 280 ಮಂದಿ ಕೋವಿಡ್ ಸೋಂಕಿತ ವ್ಯಕ್ತಿಗಳ ಮನೆಗಳನ್ನು ಸಂದರ್ಶಿಸಿ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯ ಸಹಾಯದ ಬಗ್ಗೆ ಅವಲೋಕಿಸಲಾಗಿದೆ.

ಸುಮಾರು 25,000 ಮಾಸ್ಕ್, 2,500 ಹ್ಯಾಂಡ್ ಗ್ಲೋವ್ಸ್, 1,057 ಆಹಾರ ಸಾಮಗ್ರಿಗಳ ಕಿಟ್, 940 ಆಹಾರ ಪೊಟ್ಟಣ, 350 ಲೀಟರ್ ಸ್ಯಾನಿಟೈಸರ್, 357 ಮೆಡಿಕಲ್ ಕಿಟ್, 370 ಪಿಪಿಇ ಕಿಟ್ ಇತ್ಯಾದಿಗಳನ್ನು ಫ್ರಂಟ್ ಲೈನ್ ವರ್ಕರ್ಸ್ ಮತ್ತು ಅಶಕ್ತರಿಗೆ ವಿತರಿಸುವ ಜೊತೆಗೆ ಕೋವಿಡ್ ಬಗ್ಗೆ ಜಾಗ್ರತಿ ಮೂಡಿಸುವ 4 ವಾಹನಗಳಿಗೆ ಚಾಲನೆ ನೀಡಲಾಗಿದೆ.

ಬಿಜೆಪಿ ಜಿಲ್ಲಾ ಕೋವಿಡ್ ಸಹಾಯವಾಣಿ ಮತ್ತು ವಿವಿಧ ಮಂಡಲಗಳ ಸಹಾಯವಾಣಿ ಮೂಲಕ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ತುರ್ತು ಸಹಾಯ ನೀಡಲಾಗುತ್ತಿದೆ. ಕೋವಿಡ್ ಲಸಿಕೆ ವಿತರಣಾ ಕೇಂದ್ರಗಳ ಮಾಹಿತಿಯ ಜೊತೆಗೆ ಜನತೆ ಲಸಿಕೆಯನ್ನು ಪಡೆಯುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಎಲ್ಲಾ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಸಮರ್ಪಣಾಭಾವದ ಸೇವೆ ಪ್ರಶಂಸನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಾಥ ಮಕ್ಕಳ ನೆರವಿಗೆ ನಿಂತ ಮೋದಿ ಸರ್ಕಾರ, ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆ ಜಾರಿ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗಲು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ವಿಶೇಷ ಯೋಜನೆ ಘೋಷಿಸಿದೆ.

ಅನಾಥರಾದ ಮಕ್ಕಳಿಗೆ 18 ವರ್ಷ ತುಂಬಿದ ಕೂಡಲೇ 10 ಲಕ್ಷ ರೂಪಾಯಿ ಮೀಸಲು ನಿಧಿಯಿಂದ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

ಮಕ್ಕಳು 23 ವರ್ಷಕ್ಕೆ ಕಾಲಿಟ್ಟಾಗ ಉನ್ನತ ಶಿಕ್ಷಣ ಮತ್ತಿತರ ಖರ್ಚಿಗೆ 10 ಲಕ್ಷ ರೂಪಾಯಿ ನಗದು ನೆರವು ನೀಡಲಾಗುವುದು.

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ, ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ.

ಮಕ್ಕಳ ಸಮವಸ್ತ್ರ, ಪುಸ್ತಕಗಳ ಖರೀದಿಗೆ ಪುಸ್ತಕ ಖರೀದಿಗೆ ಪಿಎಂ ಕೇರ್ಸ್ ನಿಧಿಯಿಂದ ಆರ್ಥಿಕ ನೆರವು ನೀಡಲಾಗುವುದು.

ಪೋಷಕರನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗೆ 5 ಲಕ್ಷ ರೂ. ಆರೋಗ್ಯವಿಮೆ, ಖಾಸಗಿ ಶಾಲೆಯಲ್ಲಿ ಸೇರಿದ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಶುಲ್ಕ ಪಾವತಿ ಮಾಡಲಾಗುತ್ತದೆ.

ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸುಗಳಿಗೆ ಕೋರ್ಸ್ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿ ವೇತನ ನೀಡಲಾಗುವುದು. ಪಿಎಂ ಕೇರ್ಸ್ ನಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಮೇ 25 ರವರೆಗೆ ದೇಶದಲ್ಲಿ 577 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕೊರೋನಾದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ

ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ನಿಗಮ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವಿಸ್ತರಿಸಲಾಗುವುದು. ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಮೃತ ಕಾರ್ಮಿಕನ ಒಂದು ದಿನದ ಸರಾಸರಿ ವೇತನದ ಶೇಕಡ 90 ರಷ್ಟು ಪಿಂಚಣಿ ರೂಪದಲ್ಲಿ ನೀಡಲಾಗುವುದು. ಕಳೆದ ವರ್ಷ ಮಾರ್ಚ್ 24 ರಿಂದ ಅನ್ವಯವಾಗುವಂತೆ ನಿಯಮ ಜಾರಿಗೆ ಬರಲಿದ್ದು, 2022 ರ ಮಾರ್ಚ್ 24 ರ ವರೆಗಿನ ಪ್ರಕರಣಗಳಿಗೆ ಅನ್ವಯವಾಗಲಿದೆ.

ನೌಕರರ ಠೇವಣಿ ಆಧಾರಿತ ವಿಮೆ ಯೋಜನೆಯಲ್ಲಿ ಗರಿಷ್ಠ ವಿಮಾ ಮೊತ್ತವನ್ನು 7 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕೊರೊನಾದಿಂದ ಮೃತಪಟ್ಟವ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲಿದೆ ಎಂದು ಪ್ರಧಾನ ಮಂತ್ರಿಯವರ ಕಚೇರಿ ಮಾಹಿತಿ ನೀಡಿದೆ. ಕಾರ್ಮಿಕ ಸಚಿವಾಲಯ ಯೋಜನೆ ಕುರಿತ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಲಿದೆ.

ಕೋವಿಡ್ ಸಂಕಷ್ಟದ ಹಿನ್ನೆಲೆ ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಮೇ 2021ರ ಒಂದು ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಲಾಕ್​ಡೌನ್ ಜಾರಿಯಲ್ಲಿದ್ದು, ಖಾಸಗಿ ವಾಹನಗಳು ರಸ್ತೆಗಿಳಿಯುವುದನ್ನು ನಿರ್ಬಂಧಿಸಿ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿತ್ತು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವತಿಯಿಂದ ಉಡುಪಿ ಜಿಲ್ಲೆಗೆ ಉಚಿತ ಆಂಬುಲೆನ್ಸ್ ಸೇವೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ರವರು ಉಡುಪಿ ಜಿಲ್ಲಾ ಬಿಜೆಪಿಯ ಜಿಲ್ಲಾ ಕೋವಿಡ್ ಸಹಾಯವಾಣಿಗೆ ಕೊಡಮಾಡಿದ ಅಂಬ್ಯುಲೆನ್ಸ್ ನ್ನು ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಕೋವಿಡ್ ಸಂಬಂಧಿತ ತುರ್ತು ಉಪಯೋಗಕ್ಕಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ ಆತ್ರಾಡಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ವಿನೋದ್ ನಾಯಕ್, ಅಂಬ್ಯುಲೆನ್ಸ್ ಚಾಲಕ ನಿಶಾಂತ್ ಗೌಡ (63615 07676) ಮುಂತಾದವರು ಉಪಸ್ಥಿತರಿದ್ದರು.

ದೇಶದಲ್ಲಿ ಕಾಣಿಸಿಕೊಂಡಿದೆ ‘ಯೆಲ್ಲೋ ಫಂಗಸ್’ ನ ಮೊದಲ ಪ್ರಕರಣ

ದೇಶದಲ್ಲಿ ಒಂದು ಕಡೆ ಕೊರೊನಾ ಕಾಟವಾದ್ರೆ ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಜೊತೆ ಈಗ ಯಲ್ಲೋ ಫಂಗಸ್ ಸಮಸ್ಯೆ ಶುರುವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ ಕಾಣಿಸಿಕೊಂಡಿದೆ. ಇದಕ್ಕೆ ತುತ್ತಾದ ವ್ಯಕ್ತಿಯೊಬ್ಬನಿಗೆ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಆಲಸ್ಯ, ಹಸಿವಿನ ಕೊರತೆ ಅಥವಾ ಹಸಿವಾಗದಿರುವುದು ಹಳದಿ ಶಿಲೀಂಧ್ರ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಾಗಿವೆ. ಈ ರೋಗಿಯ ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ರೋಗ ಹೆಚ್ಚಾಗ್ತಿದ್ದಂತೆ ಕೀವು, ನಿಧಾನವಾಗಿ ಗುಣವಾಗುವ ಗಾಯ, ಅಪೌಷ್ಟಿಕತೆ ಕಾಡುತ್ತದೆ. ಅಂಗಗಳ ಕಾರ್ಯನಿರ್ವಹಣೆ ಕಡಿಮೆಯಾಗುತ್ತದೆ. ರೋಗಿಯ ಕಣ್ಣುಗಳು ಒಳಗೆ ಹೋಗಲು ಶುರುವಾಗುತ್ತದೆ.null

ಹಳದಿ ಶಿಲೀಂಧ್ರ, ಬಿಳಿ ಹಾಗೂ ಕಪ್ಪು ಫಂಗಸ್ ಗಿಂತ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಆರಂಭಿಕ ಲಕ್ಷಣದಲ್ಲಿಯೇ ಚಿಕಿತ್ಸೆ ಸಿಕ್ಕಲ್ಲಿ ರೋಗ ಬೇಗ ಗುಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೊಳಕು ಹಾಗೂ ತೇವಾಂಶ. ಮನೆ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬ್ಯಾಕ್ಟೀರಿಯಾ, ಶಿಲೀಂಧ್ರ ಬೆಳೆಯದಂತೆ ನೋಡಿಕೊಳ್ಳಬೇಕು.

ಜನ ಸೇವೆಯ ಜೊತೆಗೆ ಸ್ವಯಂ ಕಾಳಜಿ ಅಗತ್ಯ: ಡಾ! ನಿ.ಬೀ. ವಿಜಯ ಬಲ್ಲಾಳ್

ಕೋವಿಡ್ ವಾರಿಯರ್ಸ್ ಹಾಗೂ ಕೋವಿಡ್-19 ಹೆಲ್ಪ್ ಡೆಸ್ಕ್ ಸೇವಾ ನಿರತ ಕಾರ್ಯಕರ್ತರು ಜನ ಸೇವೆಯ ಜೊತೆಗೆ ಸ್ವಯಂ ಅರೋಗ್ಯ ಪಾಲನೆಯ ಕಾಳಜಿಯನ್ನೂ ವಹಿಸುವುದು ಅತೀ ಅಗತ್ಯ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ನೇತೃತ್ವದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ಮಾರ್ಗದರ್ಶನದಲ್ಲಿ ಯುವಕ ಮಂಡಲ (ರಿ.) ಅಂಬಲಪಾಡಿ ಮತ್ತು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯುವಕ ಮಂಡಲದ ಕಛೇರಿಯಲ್ಲಿ ಕಾರ್ಯಾಚರಿಸುತ್ತಿರುವ ಕೋವಿಡ್-19 ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ಬೇಟಿ ನೀಡಿ ಅಗತ್ಯ ಪರಿಕರಗಳನ್ನು ಹಸ್ತಾಂತರಿಸಿ, ದಾನಿಗಳ ನೆರವಿನ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.

ಸ್ವಯಂ ಜಾಗ್ರತಿಯೇ ಕೋವಿಡ್ ಸೋಂಕನ್ನು ತಡೆಗಟ್ಟುವ ಸುಲಭ ವಿಧಾನ. ಮಾಸ್ಟ್ ಧರಿಸುವ ಜೊತೆಗೆ ಸಾಮಾಜಿಕ ಅಂತರ, ಸ್ವಚ್ಛತೆಗೆ ಆದ್ಯತೆ ನೀಡಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಅಶಕ್ತರಿಗೆ ಸಹಾಯ ಮಾಡುವುದು ಇಂದಿನ ಅಗತ್ಯತೆ ಎಂದರು.

ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನ ಸೇವೆಗೈಯುವುದೇ ಒಂದು ಸುಯೋಗ. ಕಳೆದ ವರ್ಷವೂ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ, ಅಶಕ್ತರಿಗೆ ಟ್ರಸ್ಟ್ ಮೂಲಕ ಗರಿಷ್ಠ ಸಹಾಯವನ್ನು ನೀಡಿದ್ದು, ಈ ಬಾರಿಯೂ ಅಗತ್ಯ ಫಲಾನುಭವಿಗಳನ್ನು ಗುರುತಿಸಿದಲ್ಲಿ ಟ್ರಸ್ಟ್ ಮೂಲಕ ಆಹಾರ ಧಾನ್ಯ ಕಿಟ್ ವಿತರಿಸಲು ಬದ್ಧ. ಕೋವಿಡ್-19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಇದರ ಮಾದರಿ ಸೇವಾ ಕಾರ್ಯ ಪ್ರಶಂಸನೀಯ ಎಂದರು.

ಅಂಬಲಪಾಡಿ ದೇವಸ್ಥಾನ ಹಾಗೂ ಕೆ.ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೋವಿಡ್-19 ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ನೀಡಿದ ಪಲ್ಸ್ ಆಕ್ಸಿ ಮೀಟರ್, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್, ಗ್ಲೋವ್ಸ್, ಫೇಸ್ ಶೀಲ್ಡ್, ಫ್ಲೋರ್ ಸ್ಯಾನಿಟೈಸರ್ ಇತ್ಯಾದಿ ಕೋವಿಡ್ ಮುಂಜಾಗ್ರತಾ ಸಂಬಂಧಿತ ಪರಿಕರಗಳನ್ನು ಹಸ್ತಾಂತರಿಸಲಾಯಿತು. ಜೊತೆಗೆ ರಾಜೇಂದ್ರ ಪಂದುಬೆಟ್ಟು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ವತಿಯ ಪಲ್ಸ್ ಅಕ್ಸೀ ಮೀಟರ್, ಅಂಡಾರು ದೇವಿಪ್ರಸಾದ್ ಶೆಟ್ಟಿ ವತಿಯ ಮಾಸ್ಕ್, ಪ್ರಶಾಂತ್ ಅಂಬಲಪಾಡಿ ವತಿಯ ಸ್ಯಾನಿಟೈಸಿಂಗ್ ಕಿಟ್, ಜತ್ತನ್ ಪದ್ಮನಾಭ ಅಣ್ಣು ಮತ್ತು ಹೆಲ್ಪ್ ಲೈನ್ ಉಡುಪಿ ಇವರ ವತಿಯ ಆಹಾರ ಧಾನ್ಯಗಳ ಕಿಟ್ ಕೊಡುಗೆಗಳನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ಉಪ ನಿರೀಕ್ಷಕ ವಾಸಪ್ಪ ನಾಯ್ಕ್ ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ಬೇಟಿ ನೀಡಿದರು.

ಯುವಕ ಮಂಡಲ (ರಿ.) ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್, ಉಡುಪಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಸಾಮಾಜಿಕ ಮುಖಂಡ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಉಡುಪಿ ನಗರ ಆರಕ್ಷಕ ಠಾಣೆಯ ಸಿಬ್ಬಂದಿಗಳಾದ ಮಹಾಲಿಂಗ ಪಾತ್ರೋಟ್, ಚೇತನ್ ಎಸ್., ಕೋವಿಡ್-19 ಹೆಲ್ಪ್ ಡೆಸ್ಕ್ ತಂಡದ ಸೇವಾ ಪ್ರಮುಖರಾದ ಕೀರ್ತಿ ಶೆಟ್ಟಿ, ಯೋಗೀಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಾಮನ್ ಪಾಲನ್, ರಾಜೇಂದ್ರ ಪಂದುಬೆಟ್ಟು, ಹರೀಶ್ ಆಚಾರ್ಯ, ಅಜಿತ್ ಕಪ್ಪೆಟ್ಟು, ಪ್ರಶಾಂತ್ ಕೆ.ಎಸ್., ಕೃಷ್ಣ ಅಂಬಲಪಾಡಿ, ಜಗದೀಶ್ ಆಚಾರ್ಯ, ಪ್ರವೀಣ್ ಉಪಾಧ್ಯಾಯ, ಭರತ್ ರಾಜ್ ಕೆ.ಎನ್., ರಾಜೇಶ್ ಸುವರ್ಣ, ಲಕ್ಷ್ಮಣ ಪೂಜಾರಿ, ಗಣೀಶ್ ಶೆಣೈ, ಹರೀಶ್, ನಿಶಾಂತ್, ಮೇಘ, ಮಹೇಂದ್ರ ಕೋಟ್ಯಾನ್, ವಿನೋದ್ ಪೂಜಾರಿ, ಸುನಿಲ್ ಕುಮಾರ್, ಶ್ರೀಧರ, ಸುಜಿತ್ ಕಪ್ಪೆಟ್ಟು, ಸತೀಶ್ ಭಂಡಾರಿ, ರಾಮರಾಜ್ ಕಿದಿಯೂರು, ಗಿರೀಶ್ ಅಮೀನ್ ಕಿದಿಯೂರು, ಸುಂದರ ಪೂಜಾರಿ, ಶಶಿಧರ್ ಸುವರ್ಣ, ನವೀನ್ ಕಿದಿಯೂರು, ಆಶಾ ಕಾರ್ಯಕರ್ತೆಯರಾದ ಸರಸ್ವತಿ ಕೆ. ಶ್ರೀಯಾನ್, ಗಾಯತ್ರಿ, ನಿಶಾ ಮುಂತಾದವರು ಉಪಸ್ಥಿತರಿದ್ದರು.

ದೇಶವಿರೋಧಿ ಕಾಂಗ್ರೆಸ್ ಟೂಲ್ ಕಿಟ್ : ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ದೇಶ ವಿರೋಧಿ ಕಾಂಗ್ರೆಸ್ ಟೂಲ್ ಕಿಟ್ ಕುಕೃತ್ಯ ಬಹಿರಂಗಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ ಬಿದ್ದಿದೆ. ಇಡೀ ದೇಶವು ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ದುರ್ಲಾಭ ಪಡೆದು ದೇಶದ ವಿರುದ್ಧ ಅವಮಾನಕರ ಸನ್ನಿವೇಶವನ್ನು ಸೃಷ್ಟಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ದೇಶದಲ್ಲಿನ ಸಾವು ನೋವುಗಳ ವೈಭವೀಕರಣದ ಜೊತೆಗೆ ಉತ್ತರಾಖಂಡದ ಕುಂಭ ಮೇಳದ ಕುರಿತು ಸೂಪರ್ ಸ್ಪ್ರೆಡರ್ ಎಂದು ಬಿಂಬಿಸಿರುವುದು, ಆಸ್ಪತ್ರೆಗಳಲ್ಲಿ
ಹಾಸಿಗೆಗಳ ಕೃತಕ ಕೊರತೆ ಸೃಷ್ಟಿಸುವ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಸಂಗ್ರಹಿಸಿಡುವ ಆಘಾತಕಾರಿ ಕುಕೃತ್ಯ ಕಾಂಗ್ರೆಸ್ ಸಾಧನೆಯೇ. ದೇಶದ ಪ್ರಧಾನಿ ಮತ್ತು ಬಿಜೆಪಿ ನೇತೃತ್ವದ ಸರಕಾರದ ಮೇಲೆ ಅಪನಂಬಿಕೆಯನ್ನು ಪ್ರಚೋದಿಸುವ ಷಡ್ಯಂತ್ರದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಕುಗ್ಗಿಸಲು ಕಾಂಗ್ರೆಸ್ ಸಂಚು ರೂಪಿಸಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

ಪ್ರಧಾನಿ ಮೋದಿಯವರ ಅದ್ವಿತೀಯ ಸಾಧನೆಯನ್ನು ಸಹಿಸದೆ ಸದಾ ದೂಷಿಸಿಕೊಂಡು ತೇಜೋವಧೆಗೈಯಬೇಕೆನ್ನುವ ಹಪಾಹಪಿಯಲ್ಲಿ ದೇಶವನ್ನೇ ವಿರೋಧಿಸುವ ಕಾಂಗ್ರೆಸ್ ಕೀಳು ಮನಸ್ಥಿತಿ ಅತ್ಯಂತ ದೌರ್ಭಾಗ್ಯದ ಸಂಗತಿ. ಕಾಂಗ್ರೆಸ್ ಕೇವಲ ತನ್ನ ರಾಜಕೀಯ ಹಿತಾಸಕ್ತಿಗಾಗಿ ದೇಶವಾಸಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಶೋಚನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Design a site like this with WordPress.com
Get started