
ಶ್ರೀ ಶೀರೂರು ಮಠ ಉಡುಪಿ, ಪರಿವರ್ತನಾ ಫೌಂಡೇಶನ್ ರಿ. ಉಡುಪಿ ಹಾಗೂ ಶ್ರೀ ರಾಮತಾರಕ ಮಹಾಮಂಡಲ ಪೂಜಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀ ಕ್ಷೇತ್ರ ಶೀರೂರು ಮೂಲಮಠ ಶೀರೂರು ಹಿರಿಯಡ್ಕ ಇಲ್ಲಿ ಡಿಸೆಂಬರ್ 14 ಮತ್ತು 15 ನೇ ತಾರೀಕಿನಂದು ಹಿಂದೂ ಭಗಿನಿಯರ ರಕ್ಷಣೆ, ಅಖಂಡ ಹಿಂದೂ ರಾಷ್ಟ್ರದ ಸಂಕಲ್ಪ ಹಾಗೂ ರಾಮರಾಜ್ಯದ ಪರಿಕಲ್ಪನೆಯೊಂದಿಗೆ ನಡೆಯಲಿರುವ ಶ್ರೀರಾಮ ತಾರಕ ಮಹಾ ಮಂಡಲ ಪೂಜೆ, ಶ್ರೀರಾಮ ತಾರಕ ಯಾಗ, ಮನು ಸೂಕ್ತ ಯಾಗ, ವಾಯುಸ್ತುತಿ ಯಾಗ, ದತ್ತಾತ್ರೇಯ ಯಾಗ ಕಾರ್ಯಕ್ರಮದ ವಿಜ್ಞಾಪನಾ ಪತ್ರಿಕೆಯನ್ನು ಪರಮಪೂಜ್ಯ ಶ್ರೀ ಕ್ರಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರವರು, ಪರಮಪೂಜ್ಯ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸಮಿತಿಯ ಅಧ್ಯಕ್ಷರಾದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹಾಗೂ ಕಾರ್ಯಾಧ್ಯಕ್ಷ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣರವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀಕಾಂತ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಭಟ್, ಸಂಘಟನಾ ಕಾರ್ಯದರ್ಶಿ ಜಿತೇಶ್, ಕೋಶಾಧಿಕಾರಿ ಶ್ರೀನಿವಾಸ್ ರಾವ್ ಕಾರ್ಯದರ್ಶಿಗಳಾದ ದಿವಾಕರ್ ಹಿರಿಯಡ್ಕ, ಸಾಂಸ್ಕೃತಿಕ ಕಾರ್ಯದರ್ಶಿ ಅರುಣ್ ಕುಂದರ್, ಪ್ರಮುಖರಾದ ಡಾ. ವಿಜಯೇಂದ್ರ, ಶಿವಪ್ರಸಾದ್ ತಲ್ಲೂರು, ಜಗದೀಶ್ ಅಮೀನ್ ಮೂಡಬೆಟ್ಟು, ಅಶೋಕ್ ಕುಮಾರ್ ಅಲೆವೂರು ಮತ್ತಿತರು ಉಪಸ್ಥಿತರಿದ್ದರು