
News by: ಜನತಾಲೋಕವಾಣಿನ್ಯೂಸ್
ಕಾಪು: ಇತ್ತೀಚೆಗೆ ಕಾಪು ಕ್ಷೇತ್ರ ಮಾಜಿ ಶಾಸಕರೂ, ಕರ್ನಾಟಕ ಸರಕಾರದ ಮಾಜಿ ಸಚಿವರೂ ಆದ ವಿನಯ್ ಕುಮಾರ್ ಸೊರಕೆಯವರು ಎಸ್ ಡಿ ಪಿ ಐ ಪಕ್ಷದ ಚುನಾವಣಾ ಕರಪತ್ರಗಳನ್ನು ನಮ್ಮ ಶಾಸಕರು ಮುದ್ರಿಸಿ ಕೊಟ್ಟಿರುವರು ಹಾಗೂ ಜೊತೆಯಾಗಿ ವಿಜಯೋತ್ಸವ ಮಾಡಿರುವರು ಎಂದು ಹೇಳಿರುವುದು ಅವರ ರಾಜಕೀಯ ಅಪ್ರಬುಧ್ಧತೆ ತೋರಿಸುತ್ತದೆ. ಗಾಳಿಯಲ್ಲಿ ಗುಂಡು ಹಾರಿಸುವಲ್ಲಿ ಸೊರಕೆಯವರು ನಿಸ್ಸೀಮರು. ನಮ್ಮ ವಿಚಾರಧಾರೆಗಳಿಗೂ ಎಸ್ ಡಿ ಪಿ ಐ ವಿಚಾರಧಾರೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಎಸ್ ಡಿ ಪಿ ಐ ನಮ್ಮ ರಾಜಕೀಯ ವಿಚಾರಧಾರೆಗಳ ನೇರ ವಿರೋಧಿ ಪಕ್ಷ. ಆ ಪಕ್ಷದ ವಿಚಾರಗಳನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಅಂತಹ ಪಕ್ಷದೊಂದಿಗೆ ವಿಜಯೋತ್ಸವ ಮಾಡಿರುವರೆಂದು ಸುಳ್ಳು ಹೇಳಿ ಜನರನ್ನು ಮರುಳು ಮಾಡುವ ಮಾಜಿ ಶಾಸಕರ ಪ್ರಯತ್ನ ಅವರಿಗೇ ಮುಳುವಾಗುವುದು ಖಂಡಿತಾ. ಎಸ್ ಡಿ ಪಿ ಐ ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನುವುದು ಜಗಜ್ಜಾಹೀರು. ನೀವು ಶಾಸಕರಿರುವಾಗ ಈಗಿನ ನಿಷೇಧಿತ ಪಿಎಫ್ಐ ನ ಸಾವಿರಾರು ಕಾರ್ಯಕರ್ತರ ಬಿಡುಗಡೆಗೆ ಆಗಿನ ಮುಖ್ಯಮಂತ್ರಿಗಳಾದ ಸಿಧ್ಧರಾಮಯ್ಯರವರಿಗೆ ಪ್ರೋತ್ಸಾಹ ನೀಡಿರುವವರು. ಅವರನ್ನು ಬೆಳೆಸಿ ಇದೀಗ ನಿಮ್ಮ ತಲೆಯ ಮೇಲೆ ಬಂದಾಗ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಇಂತಹ ಚಿಲ್ಲರೆ ಹೇಳಿಕೆಗಳನ್ನು ಜನ ನಂಬುವರೆಂಬುದು ನಿಮ್ಮ ಮೂರ್ಖತನ. ಇಂತಹ ಡೋಂಗಿ ರಾಜಕಾರಣ ಬಿಟ್ಟು ಬಿಡಿ ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.