ಕೆಮ್ಮಣ್ಣು ಪಡು ತೋನ್ಸೆ, ಅಡ್ಡ ಬೆಂಗ್ರೆ ನಿವಾಸಿ ಜಗನ್ನಾಥ ಕೆ. ಜತ್ತನ್ (72 ವರ್ಷ) ರವರು ಎ.26ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವ್ಯಾಪಾರಸ್ಥರಾಗಿದ್ದ ಅವರು ಪಡು ತೋನ್ಸೆ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷರಾಗಿ, ಕೋಡಿ ಬೆಂಗ್ರೆ ಬಿಲ್ಲವರ ಸೇವಾ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.