ಉಡುಪಿ: ಇತ್ತೀಚೆಗೆ ನಡೆದ ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ, ಈ ಕ್ರಿಕೆಟ್ ಪಂದ್ಯಾಟದಿಂದ ಉಳಿಕೆಯಾದ ಮೊತ್ತ ಸುಮಾರು ರೂ.63 ಸಾವಿರವನ್ನು ಶಾಲಾ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಶಾಲೆಯನ್ನು ದತ್ತು ಪಡೆದ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಗೆ ನೀಡಲಾಯಿತು. ಶಾಲಾ ಮುಖ್ಯೊಪಾಧ್ಯಾಯರಾದ ಶ್ರೀಮತಿ ಸವಿತಾರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುರೇಶ್ ನಾಯಕ್, ರಮೇಶ್ ಕಾಮತ್,Continue reading “ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ”
Daily Archives: April 19, 2022
ಸಾಮಾಜಿಕ ನ್ಯಾಯ ಸಪ್ತಾಹಧ ಅಂಗವಾಗಿ ಅರ್ಥಪೂರ್ಣ ಪೋಷಣ್ ಅಭಿಯಾನ್
ಕಾಪು: ಕಾಪು ಬಿಜೆಪಿ ಮಹಿಳಾಮೋರ್ಚವತಿಯಿಂದ ಇಂದು ಕುರ್ಕಾಲು ಗಿರಿನಗರ ಬಳಿಯ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ್ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ರಾಜ್ಯ ಮಹಿಳಾಮೋರ್ಚ ಪ್ರಧಾನಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ನೇತ್ರತ್ವದಲ್ಲಿ ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂಧಿಯಿಂದ ಪೌಷ್ಟಿಕ ಆಹಾರದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ಗರ್ಭಿಣಿ ಯುವತಿ ಮಾಳವಿಕಾ ಇವರಿಗೆ ಸೀಮಂತ ಬಡಿಸುವ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ನಡಿಯಿತು.Continue reading “ಸಾಮಾಜಿಕ ನ್ಯಾಯ ಸಪ್ತಾಹಧ ಅಂಗವಾಗಿ ಅರ್ಥಪೂರ್ಣ ಪೋಷಣ್ ಅಭಿಯಾನ್”