ಉಡುಪಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಮೇಲೆ ಕಲ್ಲು ಹೊಡೆದು ದಾಂಧಲೆ ನಡೆಸಿರುವ ಗಲಭೆಕೋರ ಸಮಾಜ ಘಾತುಕರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ನೆರವು ನೀಡಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಕಾಂಗ್ರೆಸ್ ನಾಯಕನ ಈ ಕುಕೃತ್ಯದಿಂದ ಜಾತ್ಯಾತೀತತೆಯ ಸೋಗಿನಲ್ಲಿರುವ ಕಾಂಗ್ರೆಸ್ ನ ನೈಜ ಬಣ್ಣ ಬಯಲಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಈ ಹಿಂದೆ ಪಾದರಾಯನಪುರ ಪುಂಡರಿಗೂ ಸಹಾಯ ಮಾಡಿ ವಿವಾದಕ್ಕೀಡಾಗಿದ್ದ ಜಮೀರ್ ಅಹ್ಮದ್ ಖಾನ್ ಜಾಮೀನಿನಲ್ಲಿ ಹೊರಬಂದ ಪುಂಡರಿಗೆ ನಗದು ಮತ್ತುContinue reading “ಸಮಾಜ ಘಾತುಕರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ನೆರವು; ಕಾಂಗ್ರೆಸ್ ನ ನಕಲಿ ಜಾತ್ಯಾತೀತತೆಯ ನೈಜ ಬಣ್ಣ ಬಯಲು: ಕುಯಿಲಾಡಿ ಸುರೇಶ್ ನಾಯಕ್”
Monthly Archives: April 2022
ನಿಧನ
ಕೆಮ್ಮಣ್ಣು ಪಡು ತೋನ್ಸೆ, ಅಡ್ಡ ಬೆಂಗ್ರೆ ನಿವಾಸಿ ಜಗನ್ನಾಥ ಕೆ. ಜತ್ತನ್ (72 ವರ್ಷ) ರವರು ಎ.26ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವ್ಯಾಪಾರಸ್ಥರಾಗಿದ್ದ ಅವರು ಪಡು ತೋನ್ಸೆ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷರಾಗಿ, ಕೋಡಿ ಬೆಂಗ್ರೆ ಬಿಲ್ಲವರ ಸೇವಾ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪಿಎಸ್ಐ ಪರೀಕ್ಷೆ ಆಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ ಬಂಧಿಸಿ ತನಿಖೆ ನಡೆಸುವಂತೆ ಕುಯಿಲಾಡಿ ಆಗ್ರಹ
ಉಡುಪಿ: ಪಿಎಸ್ಐ ನೇಮಕಾತಿ ಪರೀಕ್ಷೆ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತನ್ನ ಬಳಿ ಇದ್ದ ಆಡಿಯೋವನ್ನು ವಿಳಂಬವಾಗಿ ಬಿಡುಗಡೆ ಮಾಡಿದ ಮರ್ಮ ಹಾಗೂ ಇನ್ನಿತರ ಎಲ್ಲಾ ವಿವರಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಸಿಐಡಿ ವಿಶೇಷ ಘಟಕಕ್ಕೆ ಸಹಕರಿಸದಿದ್ದಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಕಾರವನ್ನು ಆಗ್ರಹಿಸಿದ್ದಾರೆ. ಸದ್ರಿ ಪ್ರಕರಣದಲ್ಲಿ ಕಾಂಗ್ರೆಸ್ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿದೆ. ಆದರೆContinue reading “ಪಿಎಸ್ಐ ಪರೀಕ್ಷೆ ಆಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ ಬಂಧಿಸಿ ತನಿಖೆ ನಡೆಸುವಂತೆ ಕುಯಿಲಾಡಿ ಆಗ್ರಹ”
ಮಂಜುನಾಥ ಭಂಡಾರಿ ಹೇಳಿಕೆ ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ : ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಸ್ವಾತಂತ್ರ್ಯ ನಂತರ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿರುವ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರಗೈದಿರುವುದನ್ನು ಮರೆತು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿ ಇದೀಗ ಬೇಲ್ ಮೇಲೆ ಹೊರಗಡೆ ತಿರುಗಾಡುತ್ತಿರುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಂದ್ರದ ಯೋಜನೆಯ ಪ್ರತಿ 1Continue reading “ಮಂಜುನಾಥ ಭಂಡಾರಿ ಹೇಳಿಕೆ ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ : ಕುಯಿಲಾಡಿ ಸುರೇಶ್ ನಾಯಕ್”
ಸ್ವಾತಂತ್ರ್ಯದ ಅಮ್ರತ ಮಹೋತ್ಸವ ಶುಭಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಯೋಧರಿಗೆ ಸನ್ಮಾನ
ಕಾಪು: ಸ್ವಾತಂತ್ರ್ಯದ ಅಮ್ರತ ಮಹೋತ್ಸವ ಶುಭಸಂದರ್ಭದಲ್ಲಿ ಪಕ್ಷದ ಸೂಚನೆ ಮೇರೆಗೆ ಇಂದು ಕಾಪು ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಅಧ್ಯಕ್ಷರಾದ ಸಚಿನ್ ಸುವರ್ಣ ಇವರ ನೇತ್ರತ್ವದಲ್ಲಿ ಯೋಧರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ನಡೆಯಿತು. ಕಾಪು ಪುರಸಭಾ ವ್ಯಾಪ್ತಿಯಲ್ಲಿ 4 ಜನ ಯೋಧರನ್ನು ಗುರುತಿಸಿ ಅವರ ಮನೆಗೆ ತೆರಳಿ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಕಾಪು ಮಂಡಲContinue reading “ಸ್ವಾತಂತ್ರ್ಯದ ಅಮ್ರತ ಮಹೋತ್ಸವ ಶುಭಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಯೋಧರಿಗೆ ಸನ್ಮಾನ”
ಬಿಜೆಪಿ ಚುನಾವಣಾ ಸಿದ್ಧತೆ; ಪಕ್ಷ ಸಂಘಟನೆಗೆ ವೇಗ; ಮೇ 10ರಂದು ಉಡುಪಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ: ಕುಯಿಲಾಡಿ ಸುರೇಶ್ ನಾಯಕ್
ಮುಂಬರಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳನ್ನು ಪುನರಪಿ ಗೆಲ್ಲುವ ಗುರಿಯೊಂದಿಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ವೇಗ ನೀಡಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಜಿಲ್ಲಾ ಪ್ರಕೋಷ್ಠಗಳ ಸಂಕುಲಗಳ ಮತ್ತು ವಿವಿಧ ಕಾರ್ಯಕ್ರಮಗಳ ಉಸ್ತುವಾರಿಗಳ ಯಾದಿಯನ್ನು ಬಿಡುಗಡೆಗೊಳಿಸಿದರು.ಮಾತನಾಡಿದರು. ಇತ್ತೀಚೆಗೆ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾದ್ಯಂತ ಸದೃಢ ಪಕ್ಷ ಸಂಘಟನೆಗೆ ವಿವಿಧ ಕಾರ್ಯಸೂಚಿಗಳನ್ನು ನೀಡಲಾಗಿದೆ.Continue reading “ಬಿಜೆಪಿ ಚುನಾವಣಾ ಸಿದ್ಧತೆ; ಪಕ್ಷ ಸಂಘಟನೆಗೆ ವೇಗ; ಮೇ 10ರಂದು ಉಡುಪಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ: ಕುಯಿಲಾಡಿ ಸುರೇಶ್ ನಾಯಕ್”
ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ
ಉಡುಪಿ: ಇತ್ತೀಚೆಗೆ ನಡೆದ ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ, ಈ ಕ್ರಿಕೆಟ್ ಪಂದ್ಯಾಟದಿಂದ ಉಳಿಕೆಯಾದ ಮೊತ್ತ ಸುಮಾರು ರೂ.63 ಸಾವಿರವನ್ನು ಶಾಲಾ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಶಾಲೆಯನ್ನು ದತ್ತು ಪಡೆದ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಗೆ ನೀಡಲಾಯಿತು. ಶಾಲಾ ಮುಖ್ಯೊಪಾಧ್ಯಾಯರಾದ ಶ್ರೀಮತಿ ಸವಿತಾರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುರೇಶ್ ನಾಯಕ್, ರಮೇಶ್ ಕಾಮತ್,Continue reading “ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ”
ಸಾಮಾಜಿಕ ನ್ಯಾಯ ಸಪ್ತಾಹಧ ಅಂಗವಾಗಿ ಅರ್ಥಪೂರ್ಣ ಪೋಷಣ್ ಅಭಿಯಾನ್
ಕಾಪು: ಕಾಪು ಬಿಜೆಪಿ ಮಹಿಳಾಮೋರ್ಚವತಿಯಿಂದ ಇಂದು ಕುರ್ಕಾಲು ಗಿರಿನಗರ ಬಳಿಯ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ್ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ರಾಜ್ಯ ಮಹಿಳಾಮೋರ್ಚ ಪ್ರಧಾನಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ನೇತ್ರತ್ವದಲ್ಲಿ ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂಧಿಯಿಂದ ಪೌಷ್ಟಿಕ ಆಹಾರದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ಗರ್ಭಿಣಿ ಯುವತಿ ಮಾಳವಿಕಾ ಇವರಿಗೆ ಸೀಮಂತ ಬಡಿಸುವ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ನಡಿಯಿತು.Continue reading “ಸಾಮಾಜಿಕ ನ್ಯಾಯ ಸಪ್ತಾಹಧ ಅಂಗವಾಗಿ ಅರ್ಥಪೂರ್ಣ ಪೋಷಣ್ ಅಭಿಯಾನ್”
ಕಾಪು ಮಂಡಲ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ಕಿಸಾನ್ ಸಮ್ಮಾನ್ ಮಾಹಿತಿ
ಕಾಪು: ಕಾಪು ಮಂಡಲ ರೈತ ಮೋರ್ಚ ದ ಕಾರ್ಯಕಾರಿಣಿ ಹಾಗೂ ಜಿಲ್ಲಾ ರೈತ ಮೋರ್ಚ ವತಿಯಿಂದ ಕಿಸಾನ್ ಸಮ್ಮಾನ್ ಮಾಹಿತಿ ಇನ್ನಂಜೆ ಪಂಚಾಯತ್ ವ್ಯಾಪ್ತಿಯ ಪಾಂಗಳ ಜನಾರ್ದನ ದೇವಸ್ಥಾನ ಬಳಿ ನಡೆಯಿತು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಪು ಮಂಡಲ ರೈತಮೋರ್ಚ ಅಧ್ಯಕ್ಷರಾದ ಗುರುನಂದನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತಮೋರ್ಚ ಅಧ್ಯಕ್ಷರಾದ ಪ್ರವೀಣ್ ಗುರ್ಮೆ, ಶಿವಕುಮಾರ್, ರಾಘವೇಂದ್ರ ಉಪ್ಪೂರು, ಮಲ್ಲಿಕಾ ಆಚಾರ್ಯContinue reading “ಕಾಪು ಮಂಡಲ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ಕಿಸಾನ್ ಸಮ್ಮಾನ್ ಮಾಹಿತಿ”
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಂಘಟನಾ ವಿಚಾರ ಮಂಡಿಸಿದ ಕೆ.ಉದಯಕುಮಾರ್ ಶೆಟ್ಟಿ
ವಿಜಯಪುರ: ವಿಜಯಪುರದ ಹಂಪಿಯಲ್ಲಿ ಎಪ್ರಿಲ್ 16ರಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಂಘಟನಾ ವಿಷಯಗಳ ಬಗ್ಗೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿಯವರು ವಿಚಾರ ಮಂಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಸಚಿವರಾದ ಆನಂದ್Continue reading “ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಂಘಟನಾ ವಿಚಾರ ಮಂಡಿಸಿದ ಕೆ.ಉದಯಕುಮಾರ್ ಶೆಟ್ಟಿ”