ಉಡುಪಿ: ಉಡುಪಿಯ ಅಲಂಕಾರ್ ಥಿಯೇಟರ್ ಹಿಂಬದಿ ಎ . ಜೆ ಆಲ್ಸೆ ರಸ್ತೆಯಲ್ಲಿ ರುವ ಇಂಚರ ಸರ್ಜಿಕಲ್ ಕ್ಲಿನಿಕ್ ನ ಸಂಚಾಲಕತ್ವದಲ್ಲಿ ಹಾಗೂ ಡಾ ವೈ ಸುದರ್ಶನ ರಾವ್ ನೇತೃತ್ವದ ಶ್ರೀ ಎಲ್ಲೂರು ಲಕ್ಷ್ಮೀ ನಾರಾಯಣ ರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಉಡುಪಿ ಪರಿಸರದಲ್ಲಿನ ತೀರಾ ಅಶಕ್ತ ಹಾಗೂ ಆಸ್ಪತ್ರೆಗೆ ತರಲಾಗದ ಪರಿಸ್ಥಿತಿಯಲ್ಲಿರುವ ರೋಗಿಗಳ ಶುಶ್ರೂಷೆ ಯನ್ನು ಅವರವರ ನಿವಾಸದಲ್ಲಿಯೇ ಒದಗಿಸುವ ಉದ್ದೇಶ ದಿಂದ ಸೇವಾತಂಡವೊಂದನ್ನು ರಚಿಸಲಾಗಿದೆ . ಈ ಸೇವಾತಂಡದಲ್ಲಿ ಓರ್ವ ಪರಿಣಿತ ಶುಶ್ರೂಷಕರು, ( ನರ್ಸ್) ಹಾಗೂ ಓರ್ವ ಸಹಾಯಕರಿದ್ದು ಅವರಿಗೆ ದಿ| ಕಾಪು ಮೋಹನ್ ರಾವ್ ಹಾಗೂ ಅವರ ಪತ್ನಿ ದಿ| ರೋಹಿಣಿ ಬಾಯಿ ಸ್ಮರಣಾರ್ಥ ಒಂದು ಅಂಬ್ಯುಲೆನ್ಸ್ ನ್ನು ಒದಗಿಸಲಾಗಿದೆ. ತಂಡವು ಡಾ ವೈ ಸುದರ್ಶನ ರಾವ್ ರವರ ಮಾರ್ಗದರ್ಶನದಲ್ಲಿ ಗ್ಲುಕೋಸ್ / ಸಲೈನ್ ದ್ರಾವಣ ಅಳವಡಿಕೆ, ಬೆಡ್ ಸೋರ್ (bed sore) ಇತ್ಯಾದಿ ದೇಹದ ವ್ರಣಗಳ ಬ್ಯಾಂಡೇಜ್, ಮೂತ್ರದ ನಳಿಕೆ ಬದಲಾವಣೆ, ಮೂಗಿನ ಮೂಲಕ ಆಹಾರ ಕೊಡುವ ನಳಿಕೆಯ ಬದಲಾವಣೆ, ರಕ್ತ ಪರೀಕ್ಷೆ ಗಾಗಿ ಸಂಗ್ರಹ ಇತ್ಯಾದಿ ಶುಶ್ರೂಷೆಗಳು, ಆಮ್ಲಜನಕದ ಸಿಲಿಂಡರ್ ಅಥವಾ ಆಕ್ಸಿಜನ್ ಕಾಂನ್ಸನ್ ಟ್ರೇಟರ್ ಒದಗಿಸುವುದು, ಆಸ್ಪತ್ರೆಗೆ ರೋಗಿಯನ್ನು ಸಾಗಿಸುವುದು ಇತ್ಯಾದಿ ಸೇವೆಗಳನ್ನು ಮಿತದರದಲ್ಲಿ ಒದಗಿಸಲಿದೆ.
ನಾಗರಿಕರು ಅಗತ್ಯಬಿದ್ದಲ್ಲಿ ಈ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ| ವೈ ಸುದರ್ಶನ ರಾವ್ ತಿಳಿಸಿದ್ದಾರೆ. ಸೇವೆ ಲಬ್ಯವಿರುವ ಸಮಯ ಬೆಳೆಗ್ಗೆ 9 ರಿಂದ ಸಂಜೆ ಏಳುಸಂಪರ್ಕ ಸಂಖ್ಯೆ 7676799859, 8431022052, 9845136322
-ಡಾ. ವೈ ಸುದರ್ಶನ ರಾವ್ , ಇಂಚರ ಸರ್ಜಿಕಲ್ ಕ್ಲಿನಿಕ್ , ಎ.ಜೆ ಆಲ್ಸೆ ರಸ್ತೆ, ಅಲಂಕಾರ್ ಥಿಯೇಟರ್ ಹಿಂಬದಿ , ಪ್ರಸಾದ ನೇತ್ರಾಲಯ ಎದುರು, ಉಡುಪಿ 576101