Design a site like this with WordPress.com
Get started

ಶಾಂತಿ ಕಾಯಿ ಮರ :ಔಷಧೀಯ ಗುಣಗಳು

ವಿಭೀತಕೀ ತಾರೆಮರ ಶಾಂತಿಮರ ತಾನಿಕಾಯಿ ಚೆಟ್ಟು (ಮಾನು) ಬಿಭೀತ ಬಹೆಡಾ ತಾಡಿ ಅಕ್ಕಮ್ ತೊಡೀಕೈ ತನ್ರಿ ಬೈಡಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ ಮಾತ್ರ ಕಂಡು ಬರುವ ತಾರೆ ಮರ, ಸಾಂಪ್ರದಾಯಿಕವಾಗಿ ಪೂಜನೀಯ ಸ್ಥಾನ ಹೊಂದಿರುವ ತಾರೆಮರವನ್ನು ಶನಿದೇವರ ಪ್ರತಿನಿಧಿ ಎಂದು ಭಾವಿಸಲಾಗಿದ್ದು, ಹಲವಾರು ಶನೇಶ್ವರ ದೇವಾಲಯಗಲ್ಲಿ ಬೆಳೆಸಿರುತ್ತಾರೆ. ಸುಮಾರು 55 ರಿಂದ 90 ಅಡಿವರಿಗೂ ಎತ್ತರ ಬೆಳೆಯುತ್ತೆ. ಆಯುರ್ವೇದ, ಯುನಾನಿ, ಸಾಂಪ್ರದಾಯಿಕ ಚಿಕಿತ್ಸ ಪದ್ಧತಿಯಲ್ಲಿ, ಬೀಜ,ತೊಗಟೆ,ಕಾಯಿಯ ಸಿಪ್ಪೆಯನ್ನು ಔಷಧೀಯ ಉದ್ದೇಶಕ್ಕಾಗಿ ಬಳಸುತ್ತಾರೆ. ತಾರೆಕಾಯಿಯ ಚೂರ್ಣವನ್ನು ಬಿಸಿContinue reading “ಶಾಂತಿ ಕಾಯಿ ಮರ :ಔಷಧೀಯ ಗುಣಗಳು”

ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಂದ 27000 ರೂ.ದಂಡ ಸಂಗ್ರಹ:ನೀವು ಜಾಗರೂಕರಾಗಿರಿ ಮಾಸ್ಕ್ ಧರಿಸಿ

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರುContinue reading “ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಂದ 27000 ರೂ.ದಂಡ ಸಂಗ್ರಹ:ನೀವು ಜಾಗರೂಕರಾಗಿರಿ ಮಾಸ್ಕ್ ಧರಿಸಿ”

ಜೂನ್ 19,2020 ; ಇಂದಿನ ರಾಶಿಫಲ

ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ತ್ರಯೋದಶಿ ತಿಥಿ,ಮಧ್ಯಾಹ್ನ 11:03 ನಂತರ ಚುರ್ತುದಶಿ,ಶುಕ್ರವಾರ, ಕೃತ್ತಿಕಾ ನಕ್ಷತ್ರಬೆಳಗ್ಗೆ 10:31 ನಂತರ ರೋಹಿಣಿ ನಕ್ಷತ್ರ ರಾಹುಕಾಲ: ಬೆಳಗ್ಗೆ 10:48 ರಿಂದ 12:24ಗುಳಿಕಕಾಲ: ಬೆಳಗ್ಗೆ 7:36 ರಿಂದ 9:12ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13 ಮೇಷ: ಸ್ತ್ರೀಯರಿಂದ ಅದೃಷ್ಟ ಒಲಿಯುವುದು, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮನಃಸ್ತಾಪ, ವ್ಯವಹಾರದಲ್ಲಿ ಅನುಕೂಲ ಸಾಧ್ಯತೆ. ವೃಷಭ: ಕಲಾವಿದರಿಗೆ ಉತ್ತಮ ಅವಕಾಶ, ಮಾನಸಿಕ ನೆಮ್ಮದಿ ಪ್ರಾಪ್ತಿ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳು ಪ್ರಯಾಣ ಮಾಡುವರು, ಸಹೋದ್ಯೋಗಿಗಳಿಂದContinue reading “ಜೂನ್ 19,2020 ; ಇಂದಿನ ರಾಶಿಫಲ”

ವಟವೃಕ್ಷ ಯಾ ಆಲದಮರದ ಔಷಧೀಯ ಗುಣಗಳು

ವಟ ವೃಕ್ಷ ರಕ್ತಫಲ ಕ್ಷೀರೀ ಬಹುಪಾದ ವನಸ್ಪತಿ ಯಕ್ಷವಾಸ ಪದಾರೋಹೀ ನ್ಯಗ್ರೋಧ ಸ್ಕಂಧಜ ಧ್ರುವ ಆಲದ ಮರ ಮರ್ರಿ ಚೆಟ್ಟು(ಮಾನು) ಆಲ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಬೃಹದ್ಧಕಾರವಾಗಿ ಬೆಳೆದಿರುತ್ತವೆ.ಭಾರತ ದೇಶದಲ್ಲಿ ಆಲದ ಮರವಿಲ್ಲದ ಗ್ರಾಮವೇ ಇಲ್ಲಾ….! ಪ್ರತಿಯೊಂದು ಹಳ್ಳಿಯಲ್ಲೂ ಆಲದ ಮರ ಇದ್ದೆ ಇರುತ್ತೆ. “ಯಕ್ಷವಾಸ” ಎಂಬ ಹೆಸರು ಆಲದ ಮರದ ಶ್ರೇಷ್ಠತೆ,ವಿಶಿಷ್ಟತೆಗಳನ್ನು ಸ್ಪಷ್ಟ ಪಡಿಸುತ್ತದೆ.ಈ ವೃಕ್ಷ ದಲ್ಲಿ ಆಶ್ರಯ ಪಡೆಯತಕ್ಕವರು, ಅತ್ಯುತ್ತಮವಾದಆರೋಗ್ಯ,ಹಾಗೂ ಅಪರಿಮಿತವಾದ ತೇಜಸ್ಸನ್ನು ಪಡೆದು ದೇವತಾ ಸ್ವರೂಪದಿಂದContinue reading “ವಟವೃಕ್ಷ ಯಾ ಆಲದಮರದ ಔಷಧೀಯ ಗುಣಗಳು”

ಕೋವಿಡ್ – 19 ಗುಣಮುಖ ಉಡುಪಿ ಮೊದಲ ಸ್ಥಾನ ಶಾಸಕ ಕೆ. ರಘುಪತಿ ಭಟ್

ಕೋವಿಡ್ – 19 ಸೋಂಕಿತರ ಸಂಖ್ಯೆಯಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿ ಇದ್ದರೂ ಕೋವಿಡ್ – 19 ನಿಂದ ಗುಣಮುಖರಾದವರಲ್ಲಿಯೂ ಉಡುಪಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾಡಳಿತದ ಜವಾಬ್ದಾರಿಯುತ ಕಾರ್ಯವೈಖರಿ ಹಾಗೂ ಉಡುಪಿಯ ಜನರ ಜಾಗೃತಿಯಿಂದ ಕೋವಿಡ್ – 19 ನಿಯಂತ್ರಣದಲ್ಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಜನರಲ್ಲಿ ಕೋವಿಡ್ – 19 ವಿರುದ್ಧ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿ. 18-06-2020 ರಂದು ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಮಾಸ್ಕ್ ದಿನ ಆಚರಣೆಯ ಜನ ಜಾಗೃತಿContinue reading “ಕೋವಿಡ್ – 19 ಗುಣಮುಖ ಉಡುಪಿ ಮೊದಲ ಸ್ಥಾನ ಶಾಸಕ ಕೆ. ರಘುಪತಿ ಭಟ್”

ಜೂನ್ 18,2020;ಗುರುವಾರ ಇಂದಿನ ರಾಶಿ ಫಲ

ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ದ್ವಾದಶಿ ತಿಥಿ,ಬೆಳಗ್ಗೆ 9:41 ನಂತರ ತ್ರಯೋದಶಿ ತಿಥಿ,ಗುರುವಾರ, ಭರಣಿ ನಕ್ಷತ್ರಬೆಳಗ್ಗೆ 8:30 ನಂತರ ಕೃತ್ತಿಕಾ ನಕ್ಷತ್ರ ದಿನ ವಿಶೇಷ: ಪ್ರದೋಷ ರಾಹುಕಾಲ: ಮಧ್ಯಾಹ್ನ 2:01 ರಿಂದ 3:37ಗುಳಿಕಕಾಲ: ಬೆಳಗ್ಗೆ 9:12 ರಿಂದ 10:48ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:36 ಮೇಷ: ಉದ್ಯೋಗ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ, ಅನಗತ್ಯ ಕಲಹ ಬಗೆಹರಿಯವುದು. ವೃಷಭ: ಭಾವನೆಗಳಿಗೆ ಮನ್ನಣೆ, ಕಾರ್ಯ ನಿಮಿತ್ತ ಓಡಾಟ, ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ನೆರೆಹೊರೆಯವರಿಂದ ಪ್ರಯಾಣ, ಮಿಥುನ: ಪಿತ್ರಾರ್ಜಿತContinue reading “ಜೂನ್ 18,2020;ಗುರುವಾರ ಇಂದಿನ ರಾಶಿ ಫಲ”

ಜೂನ್ 18 :ಮಾಸ್ಕ್ ದಿನಾಚರಣೆ

ಕೋವಿಡ್-19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮುಖಗವಸು(ಮಾಸ್ಕ್) ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾದ ವೈದ್ಯಕಿಯೇತರ ಪಾಲನೆಯಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ. ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಸರಕಾರವು ಜೂ.18ರಂದು ‘ಮಾಸ್ಕ್ ದಿನ’ವನ್ನಾಗಿ ಘೋಷಿಸಲು ನಿರ್ಧರಿಸಿದೆ. ಈ ದಿನ ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು,Continue reading “ಜೂನ್ 18 :ಮಾಸ್ಕ್ ದಿನಾಚರಣೆ”

ಕೆಂಪು ದೈತ್ಯ ಚೀನಾ ಒಡೆದು ಚೂರಾಗಿಹೋಗಲಿದೆಯೇ???

ಚೈನಾ! ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ರಾಷ್ಟ್ರ. ಭೂವಿಸ್ತಾರ, ಪ್ರಾಕೃತಿಕ ಸಂಪತ್ತು, ಜನಸಂಖ್ಯೆ, ಉತ್ಪಾದನೆ, ಅಭಿವೃದ್ಧಿ ಎಲ್ಲದರಲ್ಲೂ ಜಗತ್ತಿನ ಮುಂಚೂಣಿಯಲ್ಲಿರುವ ರಾಷ್ಟ್ರ. ಕಳೆದ ಹತ್ತು ಹದಿನೈದು ವರ್ಷಗಳ ಚಿಕ್ಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ವಿಶ್ವದ ಉಳಿದೆಲ್ಲ ರಾಷ್ಟ್ರಗಳನ್ನು ಹಿಂದೆ ಹಾಕಿ ದೊಡ್ಡದೊಂದು ನೆಗೆತ ನೆಗೆದ ಸಾಹಸಿ ರಾಷ್ಟ್ರ. ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಮಿಲಿಟರಿ ಕ್ಷೇತ್ರದಲ್ಲೂ ಅಮೆರಿಕಾದಂತ ಅಮೇರಿಕಾಕ್ಕೆ ಸಡ್ಡು ಹೊಡೆದು ನಿಂತಿರುವ ಏಷ್ಯಾದ ದೈತ್ಯ ರಾಷ್ಟ್ರ. ಇಂತಹಾ ರಾಷ್ಟ್ರ ಕಳೆದ ಕೆಲವುContinue reading “ಕೆಂಪು ದೈತ್ಯ ಚೀನಾ ಒಡೆದು ಚೂರಾಗಿಹೋಗಲಿದೆಯೇ???”

ದೇಶದ ಸಂಕಷ್ಟದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡುವ ಸೇವೆ ಇತರರಿಗೆ ಮಾದರಿ – ಶಾಸಕ ಕೆ ರಘುಪತಿ ಭಟ್

ಕೋವಿಡ್ – 19 ಮಹಾಮಾರಿಯಿಂದ ದೇಶದಲ್ಲಿ ಲಾಕ್ ಡೌನ್ ಹೇರಿದಾಗ ಜನಸಾಮಾನ್ಯರ ಸಂಕಷ್ಟಗಳಿಗೆ ನೆರವಾಗುವಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳಲ್ಲಿ ಸ್ವ-ಇಚ್ಛೆಯಿಂದ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ. ರಘುಪತಿ ಭಟ್ ಹೇಳಿದರು. ಕೊಕ್ಕರ್ಣೆ ಶಿವಗಿರಿ ನಾರಾಯಣಗುರು ಸಭಾಭವನದಲ್ಲಿ ದಿ 17-06-2020 ರಂದು ನಡೆದ ಬಿಜೆಪಿ ಗ್ರಾಮಾಂತರ ಭಾಗದ ಕೊಕ್ಕರ್ಣೆ ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು. ಒಂದೆಡೆ ಕೊರೋನಾ ಭೀತಿ ಆವರಿಸಿದ್ದರು ಯಾವುದಕ್ಕೂ ಹೆದರದೆ ಸ್ವ-ಇಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆContinue reading “ದೇಶದ ಸಂಕಷ್ಟದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡುವ ಸೇವೆ ಇತರರಿಗೆ ಮಾದರಿ – ಶಾಸಕ ಕೆ ರಘುಪತಿ ಭಟ್”

ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿಗೆ 8 ಬಲಿ

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬುಧವಾರ ಮತ್ತೆ 8 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ ನಿಂದಾಗಿ ಬುಧವಾರದಂದು ಬೆಂಗಳೂರಿನಲ್ಲಿ ಐವರು, ಶಿವಮೊಗ್ಗ, ಬಳ್ಳಾರಿ ಹಾಗೂ ಬೀದರ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹಿತಿ ನೀಡಿದೆ.