ಬಿಜೆಪಿ ಉದ್ಯಾವರ ಮಹಾಶಕ್ತಿಕೇಂದ್ರ ನಾಮಫಲಕ ಸಮಾವೇಶ

ಉದ್ಯಾವರ ಬಿಜೆಪಿ ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶವು ಇಂದು ಉದ್ಯಾವರ ಸೌಂದರ್ಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ರವಿ ಕೋಟ್ಯಾನ್ ರವರು ವಹಿಸಿದ್ದರು. ಕಾಪು ಕ್ಷೇತ್ರಧ್ಯಕ್ಷರಾದ ಶ್ರೀಕಾಂತ್ ನಾಯಕ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬೂತ್ ಅಧ್ಯಕ್ಷರ ಜವಾಬ್ದಾರಿ ಮತ್ತು ಪಕ್ಷ ಸಂಘಟನೆಯ ಬಗ್ಗೆ ಹೆಚ್ಚಿನ ಒತ್ತುಕೊಡುವಂತೆ ತಿಳಿಸಿದರು.ರಾಜ್ಯಕಾರ್ಯಕಾರಿಣಿಯ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆಯವರು ಎಲ್ಲಾ ಬೂತ್ ಅಧ್ಯಕ್ಷರುಗಳಿಗೆ ನಾಮಫಲಕವನ್ನು ನೀಡಿ ಶುಭ ಹಾರೈಸಿದರು. ಸಭೆಯಲ್ಲಿ ಇಂದು ನಿಧನರಾದ ರಾಜ್ಯ ಸಭಾ ಸದಸ್ಯರಾದ ಮಾನ್ಯ ಓಸ್ಕರ್ ಫೆರ್ನಾಂಡಿಸ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆಯಾದ ನಯನ ಗಣೇಶ್,ಉದ್ಯಾವರ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಶ್ರೀಯಾನ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ,ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಅಲೆವೂರು,ಕಾಪು ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ರಾಜೇಶ್ ಕುಂದರ್,ಜಿಲ್ಲಾ ಪ್ರಕೋಷ್ಠ ಸಂಚಾಲಕರಾದ ವಿಜಯ್ ಕುಮಾರ್, ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠ ಸಂಚಾಲಕರಾದ ಸಂತೋಷ್ ಸುವರ್ಣ ಬೊಳ್ಜೆ,ಕಾಪು ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ಪಿತ್ರೋಡಿ,ಜಿಲ್ಲಾ ಯುವಮೋರ್ಚ ಉಪಾಧ್ಯಕ್ಷರಾದ ಸಚಿನ್ ಬೊಳ್ಜೆ,ಜಿಲ್ಲಾ ಯುವಮೋರ್ಚ ಕಾರ್ಯದರ್ಶಿ ಸತೀಶ್ ಬೀರಪ್ಪಾಡಿ,ಬಿಜೆಪಿಯ ಪ್ರಮುಖರಾದ ಜಿತೇಂದ್ರ ಶೆಟ್ಟಿ,ರಮಾನಂದ ಶೇರಿಗಾರ್,ಚೇತನ್ ಪಿತ್ರೋಡಿ,ದಿನೇಶ್ ಕರ್ಕೇರ,ಹೇಮಂತ್ ಉದ್ಯಾವರ ಮತ್ತು ಮಹಾಶಕ್ತಿಕೇಂದ್ರ ವ್ಯಾಪ್ತಿಯ ಎಲ್ಲ ಬೂತಿನ ಬೂತ್ ಅಧ್ಯಕ್ಷರು,ಶಕ್ತಿಕೇಂದ್ರ ಪ್ರಮುಖರು,ಪಂಚಾಯತ್ ಸದಸ್ಯರುಗಳು,ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

ಆಸ್ಕರ್ ನಿಧನಕ್ಕೆ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಸಂತಾಪ

ಕಾಂಗ್ರೆಸ್ ನಾಯಕ ಸರಳ ಸಜ್ಜನ ರಾಜಕಾರಣಿ ಮಾಜಿ ಕೇಂದ್ರ ಸಚಿವರಾಗಿರುವ ಒಸ್ಕರ್ ಫೆರ್ನಾಂಡಿಸ್ ಅವರು ಇಂದು ವಿಧಿವಶರಾದರು.ಅವರ ಆತ್ಮಕ್ಕೆ ಚಿರಶಾಂತಿ ಸದ್ಗತಿ ದೊರೆಯಲೆಂದು ಬಿಜೆಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಅದ್ಯಕ್ಷ ಶ್ರೀಕಾಂತ್ ನಾಯಕ್ .ಸುರೇಶ್ ಶೆಟ್ಟಿ ಗುರ್ಮೆ ,ಶಿಲ್ಪಾ ಜಿ ಸುವರ್ಣ, ನಯನ ಗಣೇಶ್ ,ರಾಧಾಕೃಷ್ಣ ಬೋಳ್ಜೆ,ವಿಜಯ ಕುಮಾರ್ ಉದ್ಯಾವರ,ರವಿ ಕೋಟ್ಯಾನ್ ಪಡುಕರೆ,ರಾಜೇಶ್ ಕುಂದರ್,ಸಚಿನ್ ಪೀತ್ರೋಡಿ, ಸಚಿನ್ ಬೊಳ್ಜೆ,ಸತೀಶ್ ಬಿರಪಾಡಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು,ಹಾಗು ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಕುಯಿಲಾಡಿ ಸಂತಾಪ

ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ರವರ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯೋಗಾಭ್ಯಾಸದಲ್ಲಿ ವಿಶೇಷ ಪರಿಜ್ಞಾನ ಹೊಂದಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆಸ್ಕರ್ ಫೆರ್ನಾಂಡಿಸ್ ರವರು ಸ್ನೇಹಜೀವಿಯಾಗಿದ್ದರು.

ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯ, ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ನಿಧನ


ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ಯೋಗ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. , ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು

ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಪಕ್ಷಬೇಧ ಮರೆತು ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ್ದರು. ಕೇಂದ್ರದ ಮಾಜಿ ಸಚಿವರಾದ ಎಂ ವೀರಪ್ಪ ಮೊಯ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸಮಾಜ ಕಲ್ಯಾಣ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಇಲ್ಲವೇ ಅವರ ಕುಟುಂಬಸ್ಥರಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.

ಪೆರ್ಣಂಕಿಲದಲ್ಲಿ ಜನಜಾಗ್ರತಿ‌ ಸಮಿತಿ ಉದ್ಘಾಟನೆ

ಸಂಘಟನೆ ಮುಖಾಂತರ ಜಾಗ್ರತ ಸಮಾಜ – ಶ್ರೀಕಾಂತ ನಾಯಕ್

ಪೆರ್ಣಂಕಿಲದಲ್ಲಿ ನೂತನವಾಗಿ ಜನಜಾಗ್ರತಿ‌ ಸಮಿತಿ ಉದ್ಘಾಟನಾ ಕಾರ್ಯಕ್ರಮ‌ ನಡೆಯಿತು. ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹಾಗೂ ಕೊಡಿಬೆಟ್ಟು ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪ್ರಭು ಜಂಟಿಯಾಗಿ‌ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶ್ರೀಕಾಂತ ನಾಯಕ್, ಗ್ರಾಮೀಣ ಪ್ರದೇಶಗಳಲ್ಲಿ ಜಾಗ್ರತ ಸಮಾಜ ನಿರ್ಮಾಣಕ್ಕೆ ಇಂತಹ ಸಂಸ್ಥೆಗಳ ಅಗತ್ಯವಿದೆ, ಸಮಾಜದ ಎಲ್ಲ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ಊರಿನ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು. ಪ್ರಸ್ತಾವನೆ ಮಾಡಿದ ಸದಾನಂದ ಪ್ರಭು ಸಮಿತಿಯ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರಾದ ರಾಮ ನಾಯ್ಕ್, ಆತ್ರಾಡಿ‌ ಪಂಚಾಯತ್ ಮಾಜಿ ಅಧ್ಯಕ್ಷರಾದ ಗುರುನಂದನ್ ನಾಯಕ್, ಸ್ಥಳೀಯ‌ ಪ್ರಮುಖರಾದ ಸತೀಶ್ ಗೌಡ, ರಾಜೇಂದ್ರ ಪ್ರಭು, ಬೋವಿ ಸಮಾಜದ ತಾಲೂಕು ಅಧ್ಯಕ್ಷರಾದ ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇಂದ್ರಾಳಿಯಲ್ಲಿ ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಶನ್ ಇದರ ನೂತನ ತರಬೇತಿ ಕೇಂದ್ರ ಉದ್ಘಾಟನೆ

ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ಇದರ ನೂತನ ತರಬೇತಿ ಕೇಂದ್ರವು ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.

ಬುಡೊಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕ ರೆಂಷಿ ವಾಮನ್ ಪಾಲನ್ ಸಂಸ್ಥೆಯ ಪರಿಚಯವನ್ನು ನೀಡಿ ಕರಾಟೆ ಕಲೆಯ ಮಹತ್ವವನ್ನು ವಿವರಿಸಿದರು.

ಇಂದ್ರಾಳಿಯ ನೂತನ ಕರಾಟೆ ತರಗತಿ ಕೇಂದ್ರವನ್ನು ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ, ಪ್ರಸಕ್ತ ದಿನಗಳಲ್ಲಿ ಕರಾಟೆ ಕಲೆಯನ್ನು ಕರಗತ ಮಾಡಿಕೊಳ್ಳುವ ಔಚಿತ್ಯವನ್ನು ಒತ್ತಿ ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಶ್ರೀಧರ್ ಭಟ್, ವ್ಯವಸ್ಥಾಪಕರು, ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ, ಇಂದ್ರಾಳಿ ಹಾಗೂ ಅಶೋಕ್ ನಾಯ್ಕ್, ನಗರಸಭಾ ಸದಸ್ಯರು ಸಭೆಯನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರತ್ನಾಕರ ಎಸ್. ಇಂದ್ರಾಳಿ, ಉದ್ಯಮಿ ಮತ್ತು ಸಾಮಾಜಿಕ ಮುಂದಾಳು ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ನೂತನ ಕರಾಟೆ ಕೇಂದ್ರಕ್ಕೆ ಶುಭ ಹಾರೈಸಿದರು.

ಬುಡೋಕಾನ್‌ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕ ಹಾಗೂ ‌ಮುಖ್ಯ ಪರೀಕ್ಷಕ ರೆಂಷಿ ವಾಮನ್ ಪಾಲನ್, ಇಂದ್ರಾಳಿ ಕರಾಟೆ ತರಗತಿಯ ಶಿಕ್ಷಕ ನಿಶಾಂತ್ ಉಪಸ್ಥಿತರಿದ್ದರು.

ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಷನ್ ಸದಸ್ಯರಾದ ರಿ ಪ್ರಾರ್ಥನೆ ಹಾಡಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸದಸ್ಯರಾದ ಮಹಮ್ಮದ್ ರಾಹಿಲ್ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೆಂಶೈ ಮೇಘ ವಂದನಾರ್ಪಣೆಗೈದರು.

ಕಾಪು ಕ್ಷೇತ್ರ ಕಟಪಾಡಿ ಬೂತ್ ನಂಬರ್ 91 ರ ಅಧ್ಯಕ್ಷರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ನಾಮಫಲಕ ಅನಾವರಣ

ಕಾಪು ಕ್ಷೇತ್ರದ ಕಟಪಾಡಿ ಪಂಚಾಯತ್ ಮೂಡಬೆಟ್ಟು ಶಕ್ತಿಕೇಂದ್ರ ವ್ಯಾಪ್ತಿಯ 91 ನೇ ಬೂತ್ ಅಧ್ಯಕ್ಷರಾದ ಕರುಣಾಕರ ಪೂಜಾರಿ‌ ಇವರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಂದ ನಾಮಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು.

ಆಗಮಿಸುತ್ತಿದ್ದಂತೆ ರಾಜ್ಯಾಧ್ಯಕ್ಷರನ್ನು ಬೂತ್ ಅಧ್ಯಕ್ಷರು ಹಾರಾರ್ಪಣೆ ಮಾಡಿ ಸ್ವಾಗತಿಸಿದರೆ, ಮಹಿಳೆಯರಿಂದ ಆರತಿ‌ಬೆಳಗಿಸಿ ಚಂಡೆ ಹಾಗೂ ಪೂರ್ಣಕುಂಭದೊಡನೆ ಮನೆ ತನಕ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ನಾಮಫಲಕ ಅಳವಡಿಸುವ ಮೊದಲು ಗೋಪೂಜೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ವಿಭಾಗ ಪ್ರಭಾರಿಗಳಾದ ಉದಯಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಣ ಸದಸ್ಯರುಗಳಾದ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ‌ ಸುವರ್ಣ, ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖ್ ನಿತಿನ್ ಸೇರಿಗಾರ್, ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ವಿಶ್ವನಾಥ ಕುರ್ಕಾಲು, ವಿಭಾಗ ಸಂಘಟನಾ ಪ್ರಧಾನ‌ ಕಾರ್ಯದರ್ಶಿ ಪ್ರಸಾದ್ ಮಂಗಳೂರು, ಜಿಲ್ಲಾ ಪ್ರಧಾನ‌ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ‌ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ರಾಜ್ಯ ಎಸ್ ಸಿ‌ ಮೋರ್ಚ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಪಕ್ಷದ ಪ್ರಮುಖರಾದ ಜಗದೀಶ್ ಅಧಿಕಾರಿ ಮೂಡಬಿದ್ರೆ, ಮತ್ತಿತರರು ಉಪಸ್ಥಿತರಿದ್ದರು.

ಮತಾಂತರ ಮತ್ತು ಆಕ್ರಮ ಗೋ ಕಳ್ಳತನ, ಗೋ ಸಾಗಾಟವನ್ನು ಹಿಂದೂ ಸಮಾಜ ಸಹಿಸದು: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ :ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆಲವೊಂದು ಭಾಗಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಮತಾಂತರ ಪ್ರಕ್ರಿಯೆ, ಹಾಗೂ ಜಿಲ್ಲೆಯಾದ್ಯಂತ ನಡೆಯುತ್ತಿರುವ ಗೋ ಕಳ್ಳತನ ಮತ್ತು ಆಕ್ರಮ ಗೋ ಸಾಗಾಟನ್ನು ಸಹಿಸಲಾಗುವುದಿಲ್ಲ. ಜಿಲ್ಲಾಡಳಿತ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿದಾಗ ತಡ ಮಾಡದೇ ತಕ್ಷಣ ಕಾರ್ಯಾಚರಣೆ ಕೈಗೊಂಡಲ್ಲಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ರಮ ಮತಾಂತರ ಮತ್ತು ಗೋ ಕಳ್ಳತನ, ಆಕ್ರಮ ಗೋ ಸಾಗಾಟವನ್ನು ಬಿಜೆಪಿ ಅಥವಾ ಹಿಂದೂ ಸಂಘಟನೆಗಳು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಗೋ ಹಂತಕರು ಮತ್ತು ಮತಾಂತರವನ್ನೇ ಕಾಯಕವನ್ನಾಗಿಸಿಕೊಂಡಿರುವ ಸಮಾಜ ಘಾತುಕ ಶಕ್ತಿಗಳು ಎಚ್ಚರ ವಹಿಸುವುದು ಒಳಿತು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್‌ ರಾಜೀನಾಮೆ

Breaking News :

ಗಾಂಧೀನಗರ: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಂಗತಿಯನ್ನು ಘೋಷಿಸಿದರು. ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.


ಐದು ವರ್ಷಗಳ ಕಾಲ ರಾಜ್ಯದ ಸೇವೆ ಮಾಡಲು ಪಕ್ಷ ನನಗೆ ಅವಕಾಶ ನೀಡಲಾಗಿದೆ. ನನ್ನ ಪಕ್ಷ ಏನು ಹೇಳಿದರೂ ಅದನ್ನು ನಾನು ಮಾಡುತ್ತೇನೆ ಎಂದು ರೂಪಾನಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. 65 ವರ್ಷದ ರೂಪಾನಿ ಅವರು 2016ರ ಆಗಸ್ಟ್‌7ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಶಿರ್ವ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮ ಫಲಕ ಸಮಾವೇಶ

ಕಾಪು: ಇಂದು ಶಿರ್ವ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮ ಫಲಕ ಸಮಾವೇಶ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸಂದೀಪ್ ಮಜೂರು ಇವರ ಅಧ್ಯಕ್ಷತೆಯಲ್ಲಿ ಕಳತ್ತೂರು ಗುರ್ಮೆ ಸುರೇಶ್ ಶೆಟ್ಟಿ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಮಹಾಶಕ್ತಿಕೇಂದ್ರದ ಎಲ್ಲಾ ಬೂತ್ ಅಧ್ಯಕ್ಷರುಗಳಿಗೆ ನಾಮಫಲಕ ನೀಡಲಾಯಿತು. ಕಾಪು ಮಂಡಲದ ಕಾರ್ಯದರ್ಶಿ, ಕುತ್ಯಾರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲತಾ ಅಚಾರ್ಯ ಸ್ವಾಗತಿಸಿದರು .ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿ ಬೂತ್ ಅಧ್ಯಕ್ಷರ ಜವಾಬ್ದಾರಿ ಹಾಗೂ ಪಕ್ಷದ ಚಟುವಟಿಕೆಗಳನ್ನು ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಸರಕಾರದ ಮಾನ್ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಬೂತ್ ಅಧ್ಯಕ್ಷರ ಜವಾಬ್ದಾರಿ ಮತ್ತು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು .ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ,ಬಿಜೆಪಿ ಜಿಲ್ಲಾಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಕಾರ್ಯಕಾರಣಿ ಸದಸ್ಯರು ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಬಿಜೆಪಿ ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಕ್ಷೇತ್ರದ ನಿಕಟ ಪೂರ್ವ ಅಧ್ಯಕ್ಷರು ಪ್ರಕಾಶ್ ಶೆಟ್ಟಿ,ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಪ್ರವೀಣ್ ಗುರ್ಮೆ ,ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಶಿರ್ವ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ನಿರೂಪಣೆ ಮಾಡಿದರು . ಸಭೆಯಲ್ಲಿ ಬೂತ್ ಅಧ್ಯಕ್ಷರುಗಳು ,ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Design a site like this with WordPress.com
Get started