Design a site like this with WordPress.com
Get started

ಜೂನ್ 21, 2020;ಆದಿತ್ಯವಾರ: ಇಂದಿನ ರಾಶಿ ಫಲ

ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಭಾನುವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಸಂಜೆ 5:13 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01
ದಿನ ವಿಶೇಷ: ಸೂಯಗ್ರಹಣ

ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ನಿಂದನೆ, ಶತ್ರುಗಳ ಬಾಧೆ, ನಂಬಿಕಸ್ಥರಿಂದ ದ್ರೋಹ, ಮಹಿಳೆಯರಿಗೆ ತೊಂದರೆ, ಶೀತ ಸಂಬಂಧಿತ ರೋಗ.

ವೃಷಭ: ಹಿರಿಯರಿಂದ ಬೆಂಬಲ, ಹಣಕಾಸು ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ.

ಮಿಥುನ: ಮಾನಸಿಕ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಹಿನ್ನಡೆ, ಕೆಟ್ಟ ದೃಷ್ಠಿ ಬೀಳುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯರ್ಥ ತಿರುಗಾಟ, ಅತಿಯಾದ ಭಯ, ಸ್ಥಳ ಬದಲಾವಣೆ.

ಕಟಕ: ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಸಾಧಾರಣ ಲಾಭ, ಆರೋಗ್ಯದಲ್ಲಿ ಸಮಸ್ಯೆ, ಋಣ ಬಾಧೆ, ಯತ್ನ ಕಾರ್ಯದಲ್ಲಿ ವಿಘ್ನ, ಮಿತ್ರರಲ್ಲಿ ದ್ವೇಷ, ಸಾಲ ಬಾಧೆ, ಶತ್ರುಬಾಧೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಸಂತಸದ ವಾತಾವರಣ, ಆತ್ಮೀಯರಿಂದ ಸಹಾಯ ಲಭಿಸುವುದು, ಪರಿಶ್ರಮಕ್ಕೆ ತಕ್ಕ ಪಲ, ವಿವಾದಗಳಿಗೆ ಅಸ್ಪಾದಕೊಡಬೇಡಿ, ವ್ಯವಹಾರದಲ್ಲಿ ಉತ್ತಮ.

ಕನ್ಯಾ: ಪ್ರೀತಿ ಪಾತ್ರರ ಭೇಟಿ, ಅಧಿಕವಾದ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸಣ್ಣ ಮಾತಿನಿಂದ ಕಲಹ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ.

ತುಲಾ: ದುಂದು ವೆಚ್ಚಗಳಿಗೆ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಕೃಷಿಯಲ್ಲಿ ಲಾಭ, ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭ್ಯ, ಜಮೀನು ವಿವಾದ ಇತ್ಯರ್ಥ, ಮನಸ್ಸಿಗೆ ಕಿರಿಕಿರಿ.

ವೃಶ್ಚಿಕ: ಹೊಸ ಅವಕಾಶಗಳು ಕೈ ತಪ್ಪುವುದು, ಬಂಧು ಮಿತ್ರಿಂದ ಅಪನಿಂದನೆ, ಸಾಧಾರಣ ಪ್ರಗತಿ, ಆದಾಯಕ್ಕಿಂತ ಖರ್ಚು ಹೆಚ್ಚು, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ಅಮೂಲ್ಯ ವಸ್ತುಗಳ ಖರೀದಿಗೆ ಹಣವ್ಯಯ.

ಧನಸ್ಸು: ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿಪರೀತ ಹಣವ್ಯಯ, ಮಾತಿನ ಮೇಲೆ ಹಿಡಿತ ಅಗತ್ಯ, ಎಲ್ಲರ ಮನಸ್ಸು ಗೆಲ್ಲುವಿರಿ, ಆಲಸ್ಯ ಮನೋಭಾವ.

ಮಕರ: ಹಿತ ಶತ್ರುಗಳ ಬಾಧೆ, ಆರೋಗ್ಯದಲ್ಲಿ ಚೇತರಿಕೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಸ್ನೇಹಿತರಿಂದ ಉತ್ತಮ ಸಲಹೆ, ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ವ್ಯಥೆ.

ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಚೋರ ಭಯ, ಆಕಸ್ಮಿಕ ನಷ್ಟ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ವಿದ್ಯಾರ್ಥಿಗಳಿಗೆ ಅನುಕೂಲ, ಶತ್ರುಗಳ ಬಾಧೆ, ತಾಳ್ಮೆ ಅತ್ಯಗತ್ಯ.

ಮೀನ: ಪರರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಮಿತ್ರರಲ್ಲಿ ದ್ವೇಷ, ವ್ಯಾಸಂಗಕ್ಕೆ ತೊಂದರೆ.

ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಜ್ವರ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ:ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 20 : ಜಿಲ್ಲೆಯಲ್ಲಿ ಈಗಾಗಲೇ ಮಹಾರಾಷ್ಟç ಹಾಗೂ ಇತರ ಸ್ಥಳಗಳಿಂದ ಆಗಮಿಸಿದ ಅನೇಕರಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು ಎಲ್ಲರನ್ನೂ ಚಿಕಿತ್ಸೆಗೊಳಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 13 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಕೋವಿಡ್ 19 ಲಕ್ಷಣಗಳಿರುವ ಯಾವುದೇ ವ್ಯಕ್ತಿಯನ್ನು ಪರೀಕ್ಷಿಸಿ ಸೋಂಕು ಇದ್ದಲ್ಲಿ ತಕ್ಷಣವೇ ಗುರುತಿಸಿ ಚಿಕಿತ್ಸೆಗೊಳಪಡಿಸುವುದು ಮೂಖ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸರ್ವೆಲೈನ್ಸ್ ಚುರುಕುಗೊಳಿಸಿದ್ದು ಯಾವುದೇ ಸಂಶಯಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಖಿನ್ನ ವ್ಯಕ್ತಿಗಳನ್ನು ಗುರುತಿಸಿ ಸೋಂಕು ತಗಲದಂತೆ ನೋಡಿಕೊಳ್ಳಲು ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ತಂಡ ರಚಿಸಲಾಗಿದೆ. ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳನ್ನು ವೈದ್ಯಕೀಯವಾಗಿ ಪರೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಈಗಾಗಲೇ 10 ಜ್ವರ ತಪಾಸಣೆ ಕ್ಲಿನಿಕ್ ಗಳನ್ನು, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಸರ್ಕಾರಿ ಆಸ್ಪತ್ರೆ ಕುಂದಾಪುರ, ಸಮುದಾಯ ಆರೋಗ್ಯ ಕೇಂದ್ರ ಕೋಟ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಜಿಲ್ಲಾ ಆಸ್ವತ್ರೆ ಉಡುಪಿ,ಕೆ.ಎಂ.ಸಿ ಮಣಿಪಾಲ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಮತ್ತು ತಾಲೂಕು ಆಸ್ಪತ್ರೆ ಕಾರ್ಕಳ ಇಲ್ಲಿ ಸ್ಥಾಪಿಸಲಾಗಿದೆ. ಜ್ವರ ತಪಾಸಣೆ ಕ್ಲಿನಿಕ್ ಗಳಲ್ಲಿ ಕೋವಿಡ್ 19 ಸಂಶಯಾತ್ಮಕ ಪ್ರಕರಣಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಗಂಟಲು ಮಾದರಿ ಸಂಗ್ರಹಿಸುವ ಹಾಗೂ ಕೋವಿಡ್ ಅಲ್ಲದ ಇತರ ಜ್ವರ ಪ್ರಕರಣಗಳನ್ನು ಯೋಗ್ಯವಾಗಿ ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ದೊಡ್ಡ ಖಾಸಗಿ ಆಸ್ವತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಪ್ರತ್ಯೇಕ ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಇದರಿಂದ ಉಳಿದ ರೋಗಿಗಳಿಗೆ ಮತ್ತು ಆಸ್ವತ್ರೆ ಸಿಬ್ಬಂದಿಗಳಿಗೆ ಸೋಂಕು ಹರಡುವುದು ತಪ್ಪಿಸಬಹುದಾಗಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಒಳ ಪ್ರದೇಶಗಳಿಂದ ಬರುವ ರೋಗಿಗಳಿಗಾಗಿ ಪ್ರತ್ಯೇಕ ತಪಾಸಣೆ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ದಾಪುರದಲ್ಲಿ ಜ್ವರ ತಪಾಸಣ ಕೇಂದ್ರ ಸ್ಥಾಪಿಸಲು ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲಿ ಆರಂಭಗೊಳ್ಳಲಿದೆ.

ಕೋವಿಡ್-19 ಸೋಂಕು ಜನಸಾಮಾನ್ಯರಲ್ಲಿ ಯಾರಿಗೂ ಸಹ ಹರಡಬಹುದಾಗಿದ್ದು, ಶೀಘ್ರ ಪತ್ತೆ/ ತ್ವರಿತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗಬಹುದಾಗಿದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಯಾವುದೇ ಜ್ವರ /ಕೆಮ್ಮು/ಉಸಿರಾಟದ ತೊಂದರೆ ಮುಂತಾದ ಕೋವಿಡ್ ಲಕ್ಷಣಗಳು ಬಂದಲ್ಲಿ ಹತ್ತಿರದ ಜ್ಬರ ತಪಾಸಣಾ ಕೇಂದ್ರಕ್ಕೆ ಹೋಗಿ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸದಾಪುಷ್ಪ ಅಥವಾ ಕಾಶಿ ಕಣಗಿಲೆ :ಔಷಧೀಯ ಗುಣಗಳು

ಕೆಂಪುಕಾಶಿಕಣಗಿಲೆ ಗಿಡ ಒಂತರಾ #ದಿವ್ಯಔಷದ ಎನ್ನಬಹುದು. ಈ ಹೂವನ್ನು ನಿತ್ಯ ಮಲ್ಲಿಗೆ ಅಥವಾ ಬಟ್ಟಲ ಹೂ ಎಂದೂ ಸಹಾ ಕರೆಯಲಾಗುತ್ತದೆ. ಹಿಂದಿಯಲ್ಲಿ ಸದಾ ಬಾಹಾರ್ ಎಂತಲೂ ಇಂಗ್ಲಿಷ್ನಲ್ಲಿ ಮಡವಾಸ್ಕರ ಪೇರಿವಿಂಕಲ್ ಎಂದೂ ಕರೆಯಲಾಗುತ್ತದೆ.

ಈ ಹೂವಿನ ಗಿಡ ವಿಶೇಷವಾದ ಔಷಧೀಯ ಗುಣಗಳನ್ನು ಹೊಂದಿದೆ ಈ ಗಿಡದ ಎಲೆಗಳು ಹೂ ಬೇರು ಎಲ್ಲವೂ ಔಷಧೀಯೇ, ಇವು ಇವು ಕ್ಯಾನ್ಸರ್ ಮಧುಮೇಹ ರೋಗಗಳಿಗೆ ಮುಕ್ತಿ ಸಿಗುವಂತೆ ಮಾಡುತ್ತದೆ ಅಲಂಕಾರಿಕ ಸಸ್ಯವಾಗಿ ಬೇಳಸಲ್ಪಡುವ ಈ ಹೂವಿನಲ್ಲಿ ಎರಡು ವಿಧಗಳಿವೆ ಒಂದು ಜಾತಿಯ ಗಿಡ ಬಿಳಿ ಹೂವು ಬಿಡುತ್ತೆ ಇನ್ನೊಂದು ನಸು ಗೆಂಪು ಹೂವನ್ನು ಬಿಡುತ್ತದೆ. ಇನ್ನು ಇದು ಕ್ಯಾನ್ಸರ್ ಗೆ ಸೂಕ್ತ ನಿವರಣೆಯನ್ನು ಒದಗಿಸಬಲ್ಲದು ಅಷ್ಟೆ ಅಲ್ಲದೆ ಮಧುಮೇಹವನ್ನು ನಿಯಂತ್ರಣ ಮಾಡುತ್ತೆ ಮಹಿಳೆಯರಿಗೆ ಮುಖ್ಯವಾಗಿ ಕಾಡುವ ಋತು ಸಮಸ್ಯೆಗೆ ಇದು ಸೂಕ್ತ ಮನೆ ಮದ್ದು ಇನ್ನು ದೇಹದ ಅಧಿಕ ರಕ್ತದೊತ್ತಡ ಮೂಗು ಮತ್ತು ಬಾಯಿಯಲ್ಲಿ ರಕ್ತ ಸ್ರಾವ ಆಗುವುದು
ಬಾಯಿಯಲ್ಲಿ ಇರುವ ಹುಣ್ಣು
ಯಾವುದೇ ರೀತಿಯ ಹುಳುಗಳ ಕಡಿತ ಡಿಪ್ರೆಶನ್ ಆತಂಕ ಮತ್ತು ಗಾಯಗಳು ಹುಣ್ಣುಗಳು ಹೀಗೆ ಅನೇಕ ಆರೋಗ್ಯಕರ ಸಮಸ್ಯೆಗಳಿಗೆ ಇದು ಸೂಕ್ತ ಮನೆ ಮದ್ದು. ಹಾಗಾಗಿ ನೀವು ನಿತ್ಯವೂ ಕೆಂಪು ಕಾಶಿ ಕಣಗಿಲೆ ಹೂವನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ATM ಬಳಕೆದಾರರಿಗೆ ದೊಡ್ಡ ಆಘಾತ: 5 ಸಾವಿರ ರೂ. ಮೇಲ್ಪಟ್ಟ ವಹಿವಾಟಿಗೆ ಭಾರೀ ಶುಲ್ಕ ಹೇರಿಕೆಗೆ ಚಿಂತನೆ

ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು.

ಹೀಗಾಗಿ ಬ್ಯಾಂಕ್ ಗ್ರಾಹಕರು ಯಾವುದೇ ಎಟಿಎಂಗಳಲ್ಲಿ ಹಣ ಹಿಂಪಡೆದರೂ ಸಹ ಶುಲ್ಕ ಕಡಿತವಾಗುತ್ತಿರಲಿಲ್ಲ. ಆದರೆ ಇದೀಗ 5000 ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಹಿಂಪಡೆದ ವೇಳೆ ಗ್ರಾಹಕರಿಗೆ 24 ರೂಪಾಯಿ ಶುಲ್ಕ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿದ್ದ ಸಮಿತಿ ಈ ಶಿಫಾರಸ್ಸನ್ನು ಮಾಡಿದ್ದು, ಜೊತೆಗೆ ಜನಸಂಖ್ಯೆ ಆಧಾರಿತವಾಗಿ ಎಟಿಎಂ ಇಂಟರ್ಚೇಂಜ್ ಶುಲ್ಕ ವಿಧಿಸಲು ತಿಳಿಸಿದೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಶಿಫಾರಸ್ಸನ್ನು ಅಂಗೀಕರಿಸಿದರೆ ಎಟಿಎಂ ವಹಿವಾಟುಗಳಿಗೆ ಗ್ರಾಹಕರು ಶುಲ್ಕ ಭರಿಸಬೇಕಾಗುತ್ತದೆ.

ಎಲ್ಲಿದ್ದೇ ಇಲ್ಲೀ ತನಕ…

ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಸೈನ್ಯದ ಬಗ್ಗೆ ತೋರಿಸುತ್ತಿರುವ ಕಾಳಜಿಯನ್ನು ಕಂಡು ಆಘಾತವಾಗುವಷ್ಟು ಆಶ್ಚರ್ಯವಾಗುತ್ತಿದೆ. ಸೈನದ ಕಾರ್ಯಾಚರಣೆಗಳಿಗೆ ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಹೀಗೆ ಏಕ್ದಂ ನಮ್ಮ ಸೈನಿಕರ ಬಗ್ಗೆ ಮೊಸಳೆ ಕಣ್ಣೀರು ಹರಿಸುತ್ತಿದ್ದಾರಲ್ಲಾ ಏನು ಹೇಳೋದು. 1962 ರ ಚೀನಾದೊಂದಿಗೆ ನಡೆದ ಯುದ್ಧದ ಹೀನಾಯ ಸೋಲು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಈಗಲೂ ಚುಚ್ಚುತ್ತಿದೆ. ನೆಹರೂ ಮತ್ತು ಕೃಷ್ಣ ಮೆನೆನ್ನರ ಅಹಂಕಾರದ ನಡೆ ಮತ್ತು ರಾಜಕೀಯ ಹುಂಬತನಕ್ಕೆ ಬಲಿಪಶುವಾಯಿತು ಭಾರತೀಯ ಸೈನ್ಯ ಮತ್ತು ಸೈನಿಕರು.

ಇನ್ನು ಇಂದಿರಾಗಾಂಧಿಯ ವಿಷಯಕ್ಕೆ ಬಂದರೆ ಅವರೂ ಏನು ಕಡಿಮೆ ಇಲ್ಲ. 1971 ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಅಭೂತಪೂರ್ವ ಜಯದಿಂದ ವಿಶ್ವಮಟ್ಟದಲ್ಲಿ ದೊಡ್ಡ ನಾಯಕಿಯಾಗಿ ಬಿಂಬಿಸಿಕೊಳ್ಳುವ ತುರಾತುರಿಯಲ್ಲಿ ಯುದ್ಧದ ಅಸಲಿ ಹೀರೊ ಫೀಲ್ಡ್ ಮಾರ್ಷಲ್ ಮಾಣಿಕ್ ಷಾರವರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಬಿಟ್ಟಿದ್ದರು. ದಿನೇದಿನೇ ಹೆಚ್ಚುತ್ತಿದ್ದ ಸ್ಯಾಮ್ ಮಾಣಿಕ್ ಷಾರವರ ಜನಪ್ರಿಯತೆ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಪಾಪಿ ಪಾಕಿಸ್ತಾನವನ್ನು ತುಂಡರಿಸಿ, ಬಾಂಗ್ಲಾದೇಶವನ್ನು ಸೃಷ್ಟಿಸಿ, 93000 ಪಾಕಿಸ್ತಾನದ ಯುದ್ಧಕೈದಿಗಳನ್ನು ಹಿಡಿದಿಟ್ಟಿದ್ದ ಭಾರತೀಯ ಸೈನ್ಯದ ಸಾಹಸ ಎಲ್ಲೆಡೆ ಹೆಮ್ಮೆಯ ಮಾತಾಗಿತ್ತು. ಸ್ಯಾಮ್ ಮಾಣಿಕ್ ಷಾರವರನ್ನು ಕಡೆಗಣಿಸಿ ಸಿಮ್ಲಾ ಸಂಧಾನಕ್ಕೆ ಹೊರಟರು ಇಂದಿರಾಗಾಂಧಿ. ಇವರು ಕರೆದುಕೊಂಡು ಹೋದ ಬಾಬುಗಳ ತಂಡಕ್ಕೆ ಸಂಧಾನದ ಮಾತುಗಳನ್ನು ಯಾವ ಮಟ್ಟದಲ್ಲಿ ನಡೆಸಬೇಕೆಂಬ ಸಾಮಾನ್ಯ ಜ್ಞಾನವೂ ಇರಲಿಲ್ಲ. 93000 ಸೈನಿಕರ ಬಿಡುಗಡೆಗೆ ಒಂದೇ ಏಟಿಗೆ POK ಮತ್ತು ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಲು ದೊರೆತ ಅವಕಾಶ ಕೈಜಾರಿ ಹೋಯಿತು.
ಸಿಮ್ಲಾ ಸಂಧಾನ ಮುಗಿಸಿಕೊಂಡು ಬಂದ ಇಂದಿರಾಗಾಂಧಿ ಸ್ಯಾಮ್ ಮಾಣಿಕ್ ಷಾರವರಿಗೆ ಕರೆಮಾಡಿ ಸಂಧಾನದ ವಿವರಗಳನ್ನು ತಿಳಿಸಿ ಅವರ ಅಭಿಪ್ರಾಯವನ್ನು ಕೇಳುತ್ತಾರೆ. ಅದಕ್ಕೆ ಕಡ್ಡಿತುಂಡರಿಸಿದಂತೆ ಸ್ಯಾಮ್ ಹೇಳುತ್ತಾರೆ;

‘Pakistanis and your staff have made a monkey of you’

ಮೊದಲಿಂದಲೂ ಎಡರುತೊಡರಾಗಿದ್ದ ಅವರ ಸಂಬಂಧ ಅಲ್ಲಿಗೆ ಮುಗಿದೇ ಹೋಯಿತು ಎನ್ನಬಹುದು. ಮುಂದೆ ಸ್ಯಾಮ್ ಮಾಣಿಕ್ ಷಾರವರಿಗೆ ಫೀಲ್ಡ್ ಮಾರ್ಷಲ್ ಆಗಿ ಪ್ರಮೋಶನ್ ಸಿಕ್ಕಾಗ ಆ ಹುದ್ದೆಗೆ ಸಿಗಬೇಕಾದ ಗೌರವ ಮನ್ನಣೆಗಳು ಸಿಗಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಫೀಲ್ಡ್ ಮಾರ್ಷಲ್ ರವರಿಗೆ ಸಿಗಬೇಕಾದ ಸಂಬಳವೂ ಸಿಗಲಿಲ್ಲ. ಮುಂದೆ 2007 ರಲ್ಲಿ ಮಾಣಿಕ್ ಷಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರು ಇವರ ಆರೋಗ್ಯ ವಿಚಾರಿಸಲು ಬಂದಾಗ ಕಲಾಮ್ ರವರೊಂದಿಗೆ ಸಿಗಬೇಕಾಗಿರುವ ತಮ್ಮ ಸಂಬಳದ ಬಗ್ಗೆ ತಿಳಿಸುತ್ತಾರೆ. ನ್ಯಾಯವಾಗಿ ಭಾರತ ರತ್ನ ಪ್ರಶಸ್ತಿಗೆ ಅರ್ಹನಾದ ವ್ಯಕ್ತಿಗೆ ಸಂಬಳ ಸಿಗುತ್ತಿಲ್ಲವೇ! ಅದೇ ಆಘಾತದಿಂದ ದೆಹಲಿಗೆ ಮರಳಿದ ಕಲಾಮ್ ರವರು ಶೀಘ್ರವೇ ಕಾರ್ಯಗತರಾಗುತ್ತಾರೆ.
ಜೂನ್ 2007 ಮೊದಲ ವಾರ, ದೆಹಲಿಯಿಂದ ರಾಷ್ಟ್ರಪತಿಯವರ ಕಾರ್ಯಾಲಯದಿಂದ ಒಬ್ಬ ಸಿಬ್ಬಂದಿ ಮಾಣಿಕ್ ಷಾರವರು ಇದ್ದ ಆಸ್ಪತ್ರೆಗೆ ಹೋಗಿ ಒಂದು ಚೆಕ್ ಕೊಡುತ್ತಾರೆ. 34 ವರ್ಷಗಳ ಬರಬೇಕಾಗಿದ್ದ ಸಂಬಳದ ಬಾಬತ್ತು ಬರೋಬ್ಬರಿ ಒಂದು ಕೋಟಿ ಹದಿನಾರು ಲಕ್ಷದಷ್ಟು ಮೊತ್ತದ ಚೆಕ್ ಅದು. ಆದರೆ ದುರ್ದೈವ 27 ಜೂನ್ 2007 ರಂದು ಮಾಣಿಕ್ ಷಾರವರು ವಿಧಿವಶರಾದರು, ಬಹುಶಃ ಆ ಚೆಕ್ ಅವರ ಹಾಸಿಗೆ ಪಕ್ಕದ ಲಾಕರಿನಲ್ಲಿತ್ತೇನೋ.

ಇಷ್ಟೇ ಅಲ್ಲಾ, ನಮ್ಮ ಸೈನಿಕರಿಗೆ ಕಾಂಗ್ರೆಸ್ ಸರ್ಕಾರದ ಇನ್ನೊಂದು ಪಾರಿತೋಷತಕ ಸದ್ಯದಲ್ಲೇ ಸಿಗಲಿತ್ತು. 1973 ರಲ್ಲಿ ಘೋಷಿಸಿದ ವೇತನ ಆಯೋಗದಲ್ಲಿ ಸೈನಿಕರ ಪಿಂಚಣಿಯನ್ನು ಇಪ್ಪತ್ತರಿಂದ ನಲವತ್ತು ಪ್ರತಿಶತದಷ್ಟು ಕಡಿತಗೊಳಿಸಲಾಗಿತ್ತು ಮತ್ತು civilian ಸಿಬ್ಬಂದಿಯ ಪಿಂಚಣಿಯನ್ನು ಏರಿಸಲಾಗಿತ್ತು. ಒಬ್ಬ ಸೈನ್ಯದ ತರಬೇತಿ ಪಡೆದ ಸಿಬ್ಬಂದಿಯನ್ನು ದಿನಗೂಲಿ ನೌಕರರ ಶ್ರೇಣಿಗೆ ಸೇರಿಸಲಾಗಿತ್ತು.

ಭಲೇ ಸರ್ಕಾರವೇ ಸೈನ್ಯಕ್ಕೆ ಮತ್ತು ಸೈನಿಕರಿಗೆ ನೀವು ಕೊಟ್ಟ ಕೊಡುಗೆ ಅಪಾರ ಎಂದು ಇಡೀ ಸೈನ್ಯಕ್ಕೆ ಸೈನ್ಯವೇ ಅಂದಿನ ಸರ್ಕಾರವನ್ನು ಕೊಂಡಾಡಿತು.
ಈಗ ಅದೆಲ್ಲಿಂದ ಬಂತೋ ಏನೋ ಸೈನಿಕರ ಬಗ್ಗೆ ಕಾಳಜಿ, ಕನಿಕರ ಈ ರಾಹುಲನ ಗ್ಯಾಂಗಿಗೆ.
“ಎಲ್ಲಿದ್ದೆ ಇಲ್ಲೀ ತನಕ… ಈಗ್ಯಾಕೆ ಬಂದ್ಯಯ್ಯ..”
ಅಂತಾ ಹಾಡಬೇಕು ಎನಿಸುತ್ತದೆ.

ದಿನ ಭವಿಷ್ಯ: 20-06-2020,ಶನಿವಾರ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಬೆಳಗ್ಗೆ 11:54 ನಂತರ ಅಮಾವಾಸ್ಯೆ,
ಶನಿವಾರ, ರೋಹಿಣಿ ನಕ್ಷತ್ರ
ಮಧ್ಯಾಹ್ನ 12:02 ನಂತರ ಮೃಗಶಿರ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:12 ರಿಂದ 10:48
ಗುಳಿಕಕಾಲ: ಬೆಳಗ್ಗೆ 5:59 ರಿಂದ 7:36
ಯಮಗಂಡಕಾಲ: ಮಧ್ಯಾಹ್ನ 2:01 ರಿಂದ 3:37

ಮೇಷ: ಎಲೆಕ್ಟ್ರಾನಿಕ್, ಯಂತ್ರೋಪಕರಣ ಮಾರಾಟಗಾರಿಗೆ ಲಾಭ, ವ್ಯಾಪಾರದಲ್ಲಿ ಅಧಿಕ ಧನಾಗಮನ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ದೇಹದಲ್ಲಿ ಆಲಸ್ಯ, ಅವಕಾಶ ಕಳೆದುಕೊಳ್ಳುವಿರಿ.

ವೃಷಭ: ವಾಹನ-ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ಕಲಹ, ಮನೆ ವಾತಾವರಣ ಅಶಾಂತಿ, ಮಿತ್ರರೇ ದೂರಾಗುವರು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಉದ್ಯೋಗ-ಗೃಹ ಬದಲಾವಣೆಯಿಂದ ಸಮಸ್ಯೆ.

ಮಿಥುನ: ಬಂಧುಗಳಿಂದ ಪಡೆದ ಸಾಲದ ಚಿಂತೆ, ನಾನಾ ಚಿಂತೆಯಿಂದ ನಿದ್ರಾಭಂಗ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಸಹೋದ್ಯೋಗಿಗಳ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.

ಕಟಕ: ಮಕ್ಕಳಿಂದ ಧನ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಪ್ರಾಪ್ತಿ, ಭವಿಷ್ಯದ ಬಗ್ಗೆ ಚಿಂತನೆ, ಉತ್ತಮ ಗೌರವ ಸಂಪಾದನೆಗೆ ಹಂಬಲ, ಶುಭ ಫಲ ಯೋಗ.

ಸಿಂಹ: ಉದ್ಯೋಗ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ-ವಾಹನ ಖರೀದಿಗೆ ಅನುಕೂಲ, ಸಾಲದ ಸಹಾಯ ಲಭಿಸುವುದು, ಉದ್ಯೋಗ ಸ್ಥಳದಲ್ಲಿ ಮಂದಗತಿ, ಕೆಲಸ ಕಾರ್ಯದಲ್ಲಿ ಪ್ರಗತಿ.

ಕನ್ಯಾ: ತಂದೆಯಿಂದ ಅದೃಷ್ಟ ಬದಲಾಗುವುದು, ಮಿತ್ರರಿಂದ ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದ ವಾತಾವರಣ, ಸಾಲದ ಸಹಾಯ ಲಭಿಸುವುದು.

ತುಲಾ: ಮಿತ್ರರೊಂದಿಗೆ ವಾಗ್ವಾದ, ಕುಟುಂಬದಲ್ಲಿ ವೈಮನಸ್ಸು, ಅನಿರೀಕ್ಷಿತ ಉದ್ಯೋಗ ನಷ್ಟ, ಸಂಗಾತಿಯಿಂದ ಲಾಭ.

ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಗೌರವಕ್ಕೆ ಧಕ್ಕೆ, ತಂದೆಯ ಆರೋಗ್ಯದಲ್ಲಿ ಸಮಸ್ಯೆ.

ಧನಸ್ಸು: ಮಿತ್ರರಿಗಾಗಿ ಅಧಿಕ ಖರ್ಚು, ಅನಿರೀಕ್ಷಿತ ಬೆಳವಣಿಗೆ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ, ಕೋರ್ಟ್ ಕೇಸ್‍ಗಳಿಗೆ ಓಡಾಟ.

ಮಕರ: ದಾಂಪತ್ಯದಲ್ಲಿ ಅಶಾಂತಿ, ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರಿಂದ ತೊಂದರೆ, ಆಕಸ್ಮಿಕ ಅನುಕೂಲ, ಸೇವಾ ವೃತ್ತಿಯ ಉದ್ಯೋಗ ಲಭಿಸುವುದು.

ಕುಂಭ: ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯವುದು, ಉದ್ಯೋಗದಲ್ಲಿ ಸಮಸ್ಯೆ, ಕೆಲಸದಲ್ಲಿ ಗೊಂದಲಗಳು ನಿವಾರಣೆ.

ಮೀನ: ಪ್ರಯಾಣದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆ, ಯಶಸ್ಸು ಲಭಿಸುವುದು, ಅಧಿಕವಾದ ಉಷ್ಣ ಬಾಧೆ, ಅಜೀರ್ಣ, ಹೊಟ್ಟೆ ನೋವು

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಎರಡನೇ ಬಲಿ

ಸಾಂದರ್ಭಿಕ ಚಿತ್ರ

ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 54 ವರ್ಷ ವಯಸ್ಸಿನ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ದಿಢೀರ್ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ನಿವಾಸಿಯಾಗಿರುವ ಇವರು, ಗುರುವಾರ ಮಧ್ಯಾಹ್ನ ಮಹಾರಾಷ್ಟ್ರ ದಿಂದ ಕುಂದಾಪುರಕ್ಕೆ ಬಂದಿದ್ದರು. ಇವರೊಂದಿಗೆ ಇತರ ನಾಲ್ಕು ಮಂದಿ ಮಹಾರಾಷ್ಟ್ರದಿಂದ ಬಂದಿದ್ದರು. ನಿಯಮದಂತೆ ಇವರೆಲ್ಲ ಮನೆಯಲ್ಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಉಡುಪಿಗೆ ಬಂದಾಗ ಇವರನ್ನು ಸಂಪೂರ್ಣ ತಪಾಸಣೆ ಮಾಡಿದ್ದೆವು. ಇವರಲ್ಲಿ ಕೊರೋನದ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಇವರು ದಿಢೀರ್ ಆಗಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಮರಣಕ್ಕೆ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ. ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ

ಶಾಂತಿ ಕಾಯಿ ಮರ :ಔಷಧೀಯ ಗುಣಗಳು

ವಿಭೀತಕೀ ತಾರೆಮರ ಶಾಂತಿಮರ ತಾನಿಕಾಯಿ ಚೆಟ್ಟು (ಮಾನು) ಬಿಭೀತ ಬಹೆಡಾ ತಾಡಿ ಅಕ್ಕಮ್ ತೊಡೀಕೈ ತನ್ರಿ ಬೈಡಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ ಮಾತ್ರ ಕಂಡು ಬರುವ ತಾರೆ ಮರ, ಸಾಂಪ್ರದಾಯಿಕವಾಗಿ ಪೂಜನೀಯ ಸ್ಥಾನ ಹೊಂದಿರುವ ತಾರೆಮರವನ್ನು ಶನಿದೇವರ ಪ್ರತಿನಿಧಿ ಎಂದು ಭಾವಿಸಲಾಗಿದ್ದು, ಹಲವಾರು ಶನೇಶ್ವರ ದೇವಾಲಯಗಲ್ಲಿ ಬೆಳೆಸಿರುತ್ತಾರೆ. ಸುಮಾರು 55 ರಿಂದ 90 ಅಡಿವರಿಗೂ ಎತ್ತರ ಬೆಳೆಯುತ್ತೆ. ಆಯುರ್ವೇದ, ಯುನಾನಿ, ಸಾಂಪ್ರದಾಯಿಕ ಚಿಕಿತ್ಸ ಪದ್ಧತಿಯಲ್ಲಿ, ಬೀಜ,ತೊಗಟೆ,ಕಾಯಿಯ ಸಿಪ್ಪೆಯನ್ನು ಔಷಧೀಯ ಉದ್ದೇಶಕ್ಕಾಗಿ ಬಳಸುತ್ತಾರೆ. ತಾರೆಕಾಯಿಯ ಚೂರ್ಣವನ್ನು ಬಿಸಿ ನೀರಿನಲ್ಲಿ ಕಲಸಿ, ಚರ್ಮದ ಅಲರ್ಜಿ, ಗುಳ್ಳೆಗಳು, ಮುಖದ ಮೇಲಿನ ಮೊಡವೆಗಳಿಗೆ ಲೇಪನ ಮಾಡುವುದರಿಂದ ಅದ್ಭುತವಾದ ಫಲಿತಾಂಶ ಕಾಣಬಹುದು. ತಾರೆಕಾಯಿ ಚೂರ್ಣ, ಮಧುಮೇಹ, ಮಲಬದ್ದತೆಗೆ, ಉತ್ತುಮವಾದ ಔಷಧಿಯಾಗಿದ್ದು, ಕೆಮ್ಮು, ಗಂಟಲು ಕೆರತ, ಬಾಯಿ ಹುಣ್ಣು, ಬಾಯಿ ದುರ್ಗಂಧ, ರುಚಿ ಇಲ್ಲದೆ ಇರುವುಕೆಯ ಸಮಸ್ಯೆ ಇದ್ದಾಗ, ತಾರೆಕಾಯಿಯ ಸಿಪ್ಪೆಯನ್ನು ನೆರಳಲ್ಲಿ ಒಣಗಿಸಿ, ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುತ್ತಿದ್ದರೆ, ಇವೆಕ್ಕೆಲ್ಲ ಮುಕ್ತಿಕಾಣಬಹು. ಗಂಟಲು ನೋವು,ಕಫ,ಇದ್ದಾಗ ತಾರೆಕಾಯಿ ಚೂರ್ಣಕ್ಕೆ ಹಿಪ್ಪಲಿ ಚೂರ್ಣ ಸಮನಾಗಿ ತೆಗೆದುಕೊಂಡು, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕುತ್ತಾ ಬಂದರೆ ಶೀಘ್ರ ಗುಣ ಕಾಣಬಹುದು. ತಾರೆಕಾಯಿ ಚೂರ್ಣ, ಲವಂಗದ ಚೂರ್ಣ ಸಮವಾಗಿ ತೆಗೆದುಕೊಂಡು, ಜೇನುತುಪ್ಪದಲ್ಲಿ ಕಲಸಿ, ಊಟಕ್ಕೆ ಮೊದಲು ಸೇವಿಸಿದರೆ, ಎಂತಹ ಕೆಮ್ಮು ಇದ್ದರೂ ಗುಣವಾಗುತ್ತೆ. ಅಳಲೆಕಾಯಿ ಹಾಗೂ ತಾರೆಕಾಯಿ ಸಿಪ್ಪೆಯ ಚೂರ್ಣವನ್ನು ಸಮನಾಗಿ, ಬೆಳಿಗ್ಗೆ ಸಂಜೆ ಬಿಸಿನೀರಿನಲ್ಲಿ ಕಲಸಿ ಸೇವಿಸಿದರೆ, ಶರೀರದಲ್ಲಿನ ವಾತ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು. ತಾರೆಕಾಯಿ ಚೂರ್ಣ ಹೃದ್ರೋಗಗಳಿಗೆ ಟಾನಿಕ್ ನಂತೆ ಕೆಲಸ ಮಾಡುತ್ತೆ.ತಾರೆಕಾಯಿ ಚೂರ್ಣಕ್ಕೆ ಸಮ ಪ್ರಮಾಣದಲ್ಲಿ ಬೆಲ್ಲವನ್ನು ಕಲಸಿ, ಹಸುವಿನ ತುಪ್ಪದಲ್ಲಿ ಕಲಸಿ ಸೇವಿಸಿದರೆ, ಹೃದಯಕ್ಕೆ ಬಲಬಂದು, ಹೃದ್ರೋಗ ಸಮಸ್ಯೆಗಳು ದೂರವಾಗುತ್ತವೆ. ಬೆಟ್ಟದ ನೆಲ್ಲಿಕಾಯಿ ಚೂರ್ಣ, ತಾರೆಕಾಯಿ ಚೂರ್ಣ ಸಮನಾಗಿ ತೆಗೆದುಕೊಂಡು ಬಿಸಿನೀರಿನಲ್ಲಿ ಕಲಸಿ ತೆಗೆದುಕೊಳ್ಳುತ್ತಾ ಬಂದರೆ, ರಕ್ತ ಪ್ರದರ, ಶ್ವೇತ ಪ್ರದರ ವ್ಯಾಧಿಗೆ ಅದ್ಭುತವಾಗಿ ಕೆಲಸ ಮಾಡುತ್ತೆ. ತಾರೆಕಾಯಿ, ಬೆಟ್ಟದ ನೆಲ್ಲಿಕಾಯಿ, ಅಳಲೆಕಾಯಿ ಸಮನಾಗಿ ತೆಗೆದುಕೊಂಡು, ಬೀಜಗಳನ್ನು ತೆಗೆದು, ನೆರಳಲ್ಲಿ ಒಣಗಿಸಿ, ಒರಳಲ್ಲಿ ಹಾಕಿ ಚೆನ್ನಾಗಿ ಕುಟ್ಟಿ, ಶುಭ್ರವಾದ ಬಟ್ಟೆಯಲ್ಲಿ ಸೋಸಿದರೆ "ತ್ರಿಫಲ" ಚೂರ್ಣ ಸಿದ್ಧವಾಗುತ್ತೆ. ನೂರು ವ್ಯಾಧಿಗಳಿಗೆ ಒಂದೇ ಔಷಧಿ "ತ್ರಿಫಲ"

ಚೂರ್ಣ.ಸರ್ವ ವ್ಯಾಧಿ ಹರಣ ತ್ರಿಫಲ ಚೂರ್ಣ.ಪ್ರತಿಯೊಬ್ಬರು ದಿನವು 5 ಗ್ರಾಂ ನಂತೆ ರಾತ್ರಿ ಹೊತ್ತಿನಲ್ಲಿ ಹಾಲು ಅಥವಾ ಜೇನುತುಪ್ಪದೊಡನೆ ತೆಗೆದುಕೊಳ್ಳಬಹುದು.
ಸೂಚನೆ:- ಗರ್ಭಿಣಿಯರು, ಮೊಲೆ ಹಾಲು ಉಣಿಸುತ್ತಿರುವವರು, ತುಂಬಾ ಸಣ್ಣಗಿರುವವರು ಸೇವಿಸಬಾರದು.ಆಯುರ್ವೇದ ಪಂಡಿತರ ಸಲಹೆ ಇಲ್ಲದೆ ಸೇವಿಸಬಾರದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು

ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಂದ 27000 ರೂ.ದಂಡ ಸಂಗ್ರಹ:ನೀವು ಜಾಗರೂಕರಾಗಿರಿ ಮಾಸ್ಕ್ ಧರಿಸಿ

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊರೋನಾ ವಿರುದ್ಧ ನಿರಂತರ ಹೋರಾಟ ಅಗತ್ಯವಾಗಿದೆ. ಈ ಹೋರಾಟ ಮುಗಿಯುವುದಿಲ್ಲ. ಈ ಹೋರಾಟದಲ್ಲಿ ಬಹಳ ಮುಖ್ಯವಾದ ಅಸ್ತ್ರ ಮಾಸ್ಕ್.

ಮಾಸ್ಕ್ ಬಳಕೆಯಿಂದ ಶೇ.50ರಷ್ಟು ಸೋಂಕನ್ನು ಹರಡದಂತೆ ತಡೆಗಟ್ಟಬಹುದು. ಈ ಪ್ರಯೋಗ ಇತರ ರಾಷ್ಟ್ರಗಳಲ್ಲಿಯೂ ಯಶಸ್ವಿಯಾಗಿದೆ. ಆದುದರಿಂದ ಪ್ರತಿ ಯೊಬ್ಬರು ಹೊರಗಡೆ ಮಾಸ್ಕ್ ಇಲ್ಲದೆ ಬರಬಾರದು. ಮಾಸ್ಕ್ ಧರಿಸದೇ ಬಂದಲ್ಲಿ ನಿಮಗೂ ಮತ್ತು ಇತರರಿಗೂ ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 19,2020 ; ಇಂದಿನ ರಾಶಿಫಲ

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮಧ್ಯಾಹ್ನ 11:03 ನಂತರ ಚುರ್ತುದಶಿ,
ಶುಕ್ರವಾರ, ಕೃತ್ತಿಕಾ ನಕ್ಷತ್ರ
ಬೆಳಗ್ಗೆ 10:31 ನಂತರ ರೋಹಿಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:48 ರಿಂದ 12:24
ಗುಳಿಕಕಾಲ: ಬೆಳಗ್ಗೆ 7:36 ರಿಂದ 9:12
ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13

ಮೇಷ: ಸ್ತ್ರೀಯರಿಂದ ಅದೃಷ್ಟ ಒಲಿಯುವುದು, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮನಃಸ್ತಾಪ, ವ್ಯವಹಾರದಲ್ಲಿ ಅನುಕೂಲ ಸಾಧ್ಯತೆ.

ವೃಷಭ: ಕಲಾವಿದರಿಗೆ ಉತ್ತಮ ಅವಕಾಶ, ಮಾನಸಿಕ ನೆಮ್ಮದಿ ಪ್ರಾಪ್ತಿ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳು ಪ್ರಯಾಣ ಮಾಡುವರು, ಸಹೋದ್ಯೋಗಿಗಳಿಂದ ನಷ್ಟ.

ಮಿಥುನ: ಸಹೋದರಿಯಿಂದ ಧನಾಗಮನ, ಅಧಿಕ ಸಾಲ ಬಾಧೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ತೊಂದರೆ.

ಕಟಕ: ಶ್ರಮಕ್ಕೆ ತಕ್ಕ ಪ್ರತಿಫಲ, ಸ್ವಯಂ ಸಾಮಥ್ರ್ಯದಿಂದ ಸಂಪಾದನೆ ಮಾಡುವಿರಿ, ಮನೆಯಲ್ಲಿ ಅಹಿತಕರ ವಾತಾವರಣ, ಅಹಂಭಾವದ ಮಾತುಗಳನ್ನಾಡುವಿರಿ.

ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕವಾಗುವರು, ದಾಂಪತ್ಯದಲ್ಲಿ ಮನಃಸ್ತಾಪ, ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ.

ಕನ್ಯಾ: ಕುಟುಂಬ ನಿರ್ವಹಣೆಗೆ ಸಾಲ, ಹಣಕಾಸು ವಿಚಾರದಲ್ಲಿ ಕಿರಿಕಿರಿ, ಕೌಟುಂಬಿಕ ಕಲಹ, ಮಕ್ಕಳಿಂದ ನಷ್ಟ ಅಧಿಕವಾಗುವುದು, ಸ್ಥಿರಾಸ್ತಿ ಸಮಸ್ಯೆ ಬಗೆಹರಿಯುವ ಸಾಧ್ಯತೆ.

ತುಲಾ: ಆಕಸ್ಮಿಕ ಉದ್ಯೋಗ ಬಡ್ತಿ, ಮಕ್ಕಳ ಪ್ರೇಮ ವಿಚಾರದಲ್ಲಿ ಅಶಾಂತಿ, ದಾಂಪತ್ಯದಲ್ಲಿ ಕಲಹ, ಪಿತ್ರಾರ್ಜಿತ ಆಸ್ತಿ ತಗಾದೆ, ಬಂಧುಗಳ ವಿರುದ್ಧ ಜಯ.

ವೃಶ್ಚಿಕ: ಮಕ್ಕಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಉದ್ಯೋಗ ನಿಮಿತ್ತ ಪ್ರಯಾಣ, ಮನಸಿಗೆ ಕೆಟ್ಟಾಲೋಚನೆ, ಮಾನಸಿಕ ನೆಮ್ಮದಿ ಹಾಳು.

ಧನಸ್ಸು: ತಂದೆಯ ಸಾಲ ಬಾಧೆ, ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಂದಿಗೆ ಕಲಹ, ಸರ್ಕಾರಿ ಕೆಲಸಗಳಲ್ಲಿ ಜಯ, ಅಧಿಕಾರಿಗಳಿಂದ ಅನುಕೂಲ.

ಮಕರ: ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಆತ್ಮ ವಿಶ್ವಾಸದ ಅಧಿಕವಾಗುವುದು, ಹೆಣ್ಣು ಮಕ್ಕಳಿಂದ ಅನುಕೂಲ, ಸೈಟ್ ಖರೀದಿಗೆ ಸಹಕಾರ.

ಕುಂಭ: ಸ್ನೇಹಿತರೇ ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ಥಿರಾಸ್ತಿ-ವಾಹನ ಖರೀದಿಗೆ ಸಹಾಯ, ನೆಮ್ಮದಿಯ ವಾತಾವರಣಕ್ಕೆ ಧಕ್ಕೆ.

ಮೀನ: ಪಡೆದ ಸಾಲ ಮರುಪಾವತಿಸುವಿರಿ, ಸ್ವಯಂಕೃತ್ಯಗಳಿಂದ ತೊಂದರೆ, ಶತ್ರುಗಳು ಅಧಿಕವಾಗುವರು, ವಿಪರೀತ ನಷ್ಟ, ಮಕ್ಕಳಿಂದ