ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಪಡುಬಿದ್ರೆ ಮಹಾಶಕ್ತಿಕೇಂದ್ರದ ಫಲಾನುಭವಿಗಳ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ‌

ಕಾಪು : ಮೋದೀಜಿ ಆಡಳಿತಡ ಎಂಟನೆ ವರ್ಷದ ಆಚರಣೆ ಪ್ರಯುಕ್ತ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಪಡುಬಿದ್ರೆ ಮಹಾಶಕ್ತಿಕೇಂದ್ರದ ಫಲಾನುಭವಿಗಳ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ‌ ನಡೆಯಿತು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮೋದೀಜಿ ಸರಕಾರದ ಎಂಟು ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿ‌ ಸರಕಾರದ ಎಂಟು ವರ್ಷಗಳ ಸಾಧನೆ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮಗಳ‌ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ವಹಿಸಿದ್ದರು. ಫಲಾನುಭವಿಗಳ ಕಾರ್ಯಕ್ರಮದ ಜಿಲ್ಲಾ ಬಿಜೆಪಿ ಸಂಚಾಲಕರಾದ ಶಿಲ್ಪಾ ಜಿ‌ ಸುವರ್ಣ, ಮಂಡಲ ಸಂಚಾಲಕರಾದ ಮುರಳೀಧರ ಪೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ,ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಸಾಧಕರ ಗೌರವಾರ್ಪಣೆ ಮಂಡಲ ಸಂಚಾಲಕರಾದ ಗುರುಕ್ರಪಾ ರಾವ್, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರೆ, ಪಡುಬಿದ್ರೆ ಪಂಚಾಯತ್ ಅಧ್ಯಕ್ಷರಾದ ರವಿ‌ಶೆಟ್ಟಿ, ಹೆಜಮಾಡಿ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಪವಿತ್ರ ಗಿರೀಶ್, ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ಪಲಿಮಾರು ಕಾರ್ಯಕ್ರಮ ನಿರೂಪಿಸಿದರು.

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಇಂದು ಉಚ್ಚಿಲ ಮಹಾಶಕ್ತಿಕೇಂದ್ರದ ಫಲಾನುಭವಿಗಳ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ‌

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ* ಕಾರ್ಯಕ್ರಮದಡಿ ಇಂದು ಉಚ್ಚಿಲ ಮಹಾಶಕ್ತಿಕೇಂದ್ರದ ಫಲಾನುಭವಿಗಳ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ‌ ನಡೆಯಿತು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮೋದೀಜಿ ಸರಕಾರದ ಎಂಟು ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿ‌ ಸರಕಾರದ ಎಂಟು ವರ್ಷಗಳ ಸಾಧನೆ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮಗಳ‌ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಚಂದ್ರಶೇಖರ್ ಕೋಟ್ಯನ್ ವಹಿಸಿದ್ದರು. ಫಲಾನುಭವಿಗಳ ಕಾರ್ಯಕ್ರಮದ ಜಿಲ್ಲಾ ಬಿಜೆಪಿ ಸಂಚಾಲಕರಾದ ಶಿಲ್ಪಾ ಜಿ‌ ಸುವರ್ಣ, ಮಂಡಲ ಸಂಚಾಲಕರಾದ ಮುರಳೀಧರ ಪೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೇಸರಿ ಯುವರಾಜ್, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷರಾದ ಸುರೇಂದ್ರ ಪಣಿಯೂರು, ಸಾಧಕರ ಗೌರವಾರ್ಪಣೆ ಮಂಡಲ ಸಂಚಾಲಕರಾದ ಗುರುಕ್ರಪಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು. ಶಕುಂತಳಾ ಧನ್ಯವಾದ ಸಮರ್ಪಿಸಿದರು.

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಇಂದು 80 ಬಡಗುಬೆಟ್ಟು ಹಾಗೂ ಹಿರಿಯಡ್ಕ‌ ಮಹಾಶಕ್ತಿಕೇಂದ್ರ ಗಳ ಫಲಾನುಭವಿಗಳ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ‌

ಕಾಪು: ಮೋದೀಜಿ ಆಡಳಿತದ ಎಂಟನೇ ವರ್ಷದ ಆಚರಣೆ ಪ್ರಯುಕ್ತ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಇಂದು 80 ಬಡಗುಬೆಟ್ಟು ಹಾಗೂ ಹಿರಿಯಡ್ಕ‌ ಮಹಾಶಕ್ತಿಕೇಂದ್ರ ಗಳ ಫಲಾನುಭವಿಗಳ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ‌ ನಡೆಯಿತು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮೋದೀಜಿ ಸರಕಾರದ ಎಂಟು ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿ‌ ಸರಕಾರದ ಎಂಟು ವರ್ಷಗಳ ಸಾಧನೆ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮಗಳ‌ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಹಿರಿಯಡ್ಕ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ ವಹಿಸಿದ್ದರು. ಫಲಾನುಭವಿಗಳ ಕಾರ್ಯಕ್ರಮದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಸಂಚಾಲಕರಾದ ಶಿಲ್ಪಾ ಜಿ‌ ಸುವರ್ಣ, ಮಂಡಲ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ, ಬಡಗುಬೆಟ್ಟು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ಸಂಧ್ಯಾ ಕಾಮತ್, ಜಿಲ್ಲಾ ಕಾರ್ಯದರ್ಶಿ ಸುನೀತ ನಾಯ್ಕ್, ಪಕ್ಷದ ಪ್ರಮುಖರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ನೀರಜಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಚೇರಿ ಕಾರ್ಯದರ್ಶಿ ಸತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರೆ ಕೊಡಿಬೆಟ್ಟು ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪ್ರಭು‌ ಸ್ವಾಗತಿಸಿದರು.

ಬಿಜೆಪಿ ಮಹಿಳಾಮೋರ್ಚ ಕಾಪು ಮಂಡಲ ಹಾಗೂ ಅಲೆವೂರು ಬಿಜೆಪಿ ಮಹಿಳಾಮೋರ್ಚ ಇದರ ವತಿಯಿಂದ ಕೊರಂಗ್ರಪಾಡಿ ಮತ್ತು ಮಾರ್ಪಳ್ಳಿ ಅಂಗನವಾಡಿ ಸ್ಬಚ್ಚತಾ ಕಾರ್ಯಕ್ರಮ


ಮೋದೀಜಿ ಆಡಳಿತದ ಎಂಟು ವರ್ಷದ ವಾರ್ಷಿಕೊತ್ಸವ ಅಂಗವಾಗಿ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಕಾಪು ಮಹಿಳಾ ಮೋರ್ಚಾದ ವತಿಯಿಂದ ಇಂದು ಅಲೆವೂರು ಪಂಚಾಯತ್ ವ್ಯಾಪ್ತಿಯ 2 ಅಂಗನವಾಡಿಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು

ಕಾಪು ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಚಾಲನೆ ನೀಡಿದರೆ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಅಲೆವೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯರಾದ ಬೇಬಿ ರಾಜೇಶ್, ಪಂಚಾಯತ್ ಸದಸ್ಯರುಗಳಾದ ರೇಣುಕಾ ಶೆಟ್ಟಿ, ಸೌಮ್ಯ ನಾಯಕ್, ಪುಷ್ಪಲತಾ ಮಾರ್ಪಳ್ಳಿ, ಶಾಂತ ನಾಯ್ಕ್, ಗೀತಾ ಶೆಟ್ಟಿಗಾರ್, ಮಾಜಿ ಸದಸ್ಯರಾದ ಪ್ರೇಮ ಕೊರಂಗ್ರಪಾಡಿ, ಯುವಮೋರ್ಚ ಮಂಡಲ ಕಾರ್ಯಕಾರಿಣಿ ಸದಸ್ಯರಾದ ಅರುಣ್ ಆಚಾರ್ಯ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಧನ್ಯವಾದ ಅರ್ಪಿಸಿದರು. ಮಕ್ಕಳಿಗೆ ಸಿಹಿ ತಿಂಡಿ ನೀಡಲಾಯಿತು.

ಯಶ್ ಪಾಲ್ ಸುವರ್ಣ ಕೇವಲ‌ ಬಿಜೆಪಿಯವರಲ್ಲ ಹಿಂದೂ ಸಮಾಜದ ಆಸ್ತಿ :ಶ್ರೀಕಾಂತ ನಾಯಕ್

ಕಾಪು: ಯಶ್ ಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ. ಸಮಾಜಘಾತುಕ ಶಕ್ತಿಗಳು ಹಿಂದುತ್ವ ಹಾಗೂ ಬಿಜೆಪಿ ಗಾಗಿ‌ ಕೆಲಸ ಮಾಡುವವರನ್ನು ಈ ರೀತಿ ಬೆದರಿಸುವುದು ಅವರ ಶಂಡತನ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಪೋಲಿಸ್ ಇಲಾಖೆ ಕೂಡಲೇ ಮಟ್ಟ ಹಾಕಬೇಕು. ಇಂತಹ ಬೆದರಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ.

ಯಶ್ ಪಾಲ್ ಸುವರ್ಣ ಕೇವಲ ಬಿಜೆಪಿಯ ಆಸ್ತಿಯಲ್ಲ. ಅವರು ಹಿಂದೂ ಸಮಾಜದ ಆಸ್ತಿ. ಅವರಿಗೆ ನಮ್ಮಂತಹ ಲಕ್ಷಾಂತರ ಹಿಂದೂಗಳ ಆಶೀರ್ವಾದವಿದೆ ಬೆಂಬಲವಿದೆ. ಭಾರತೀಯ ಜನತಾ ಪಾರ್ಟಿ ಅವರ ಜೊತೆಗಿದೆ. ಅದರೊಂದಿಗೆ ಪಕ್ಷಾತೀತವಾಗಿ ಹಿಂದು ಸಮಾಜ ಅವರೊಂದಿಗೆ ಇದೆ. ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದರೆ ಪರಿಣಾಮ ಗಂಭೀರವಾದೀತು ಎಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಮಹಿಳಾಮೋರ್ಚ ಕಾಪು ಮಂಡಲ ಇದರ ವತಿಯಿಂದ ಅಂಗನವಾಡಿ ಸ್ಬಚ್ಚತಾ ಕಾರ್ಯಕ್ರಮ


ಕಾಪು: ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಕಾಪು ಮಹಿಳಾ ಮೋರ್ಚಾದ ವತಿಯಿಂದ ಇಂದು *ಕುಕ್ಕೆಹಳ್ಳಿ ಪಂಚಾಯತ್ ವ್ಯಾಪ್ತಿಯ 2 ಅಂಗನವಾಡಿಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು* ಬಳಿಕ ಅಂಗನವಾಡಿಯಲ್ಲಿ ಕೇಂದ್ರಸರಕಾರದ ಸಾಧನೆಗಳನ್ನು ವಿವರಿಸಲಾಯಿತು.

ಬಳಿಕ ಪೆರ್ಡೂರು ಹಾಗೂ ಭೈರಂಪಳ್ಳಿ ಅಂಗನವಾಡಿಗಳಿಗೆ ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿದೆವು. ಬಳಿಕ ಬೊಮ್ಮರಬೆಟ್ಟು ಒಂದು ಅಂಗನವಾಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಒಟ್ಟು 6 ಅಂಗನವಾಡಿಗಳಲ್ಲಿ ವಿವಿಧ ಕಾರ್ಯಕ್ರಮ‌ ನಡೆಸಲಾಯಿತು.

ಜಿಲ್ಲಾಧ್ಯಕ್ಷರು ಮಾಹಿತಿ ಶಿಬಿರವನ್ನು ಉಧ್ಘಟಿಸಿದರೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಕೇಂದ್ರ ಸರಕಾರದ ವಿವಿಧ ಯೋಜನೆಗಳ‌ ಮಾಹಿತಿ ನೀಡಿದರು. ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಉಪಾಧ್ಯಕ್ಷರಾದ ಸಂಧ್ಯಾ ಕಾಮತ್, ಮಂಡಲ ಕಾರ್ಯದರ್ಶಿ ಶಂಕರ್ ಸಾಲ್ಯನ್, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸಾಲ್ಯನ್, ಪಂಚಾಯತ್ ಅಧ್ಯಕ್ಷರಾದ ಪುರಂದರ ಕೋಟ್ಯನ್, ಜಿಲ್ಲಾ ಮಹಿಳಾಮೋರ್ಚ ಕಾರ್ಯದರ್ಶಿ ನೀರಜಾ ಶೆಟ್ಟಿ, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಹಲವೆಡೆ ಅಂಗನವಾಡಿ ಮಕ್ಕಳಿಗೆ ಸಿಹಿ ಹಂಚಲಾಯಿತು.

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಕುಕ್ಕೆಹಳ್ಳಿಯಲ್ಲಿ ಫಲಾನುಭವಿಗಳ ಸಮಾವೇಶ

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ* ಕಾರ್ಯಕ್ರಮದಡಿ ಇಂದು ಕುಕ್ಕೆಹಳ್ಳಿಯಲ್ಲಿ *ಫಲಾನುಭವಿಗಳ ಸಮಾವೇಶ* ನಡೆಯಿತು. ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಬಳಿಕ‌ ಮಾತನಾಡಿದ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿ ಆಡಳಿತದ ಎಂಟು ವರ್ಷಗಳ ಸಾಧನೆಯನ್ನು ವಿವರಿಸಿ ನಿರಂತರವಾಗಿ ಮೋದೀಜಿಯವರಿಗೆ ಬೆಂಬಲ‌ ನೀಡಲು ಮನವಿ‌ಮಾಡಿದರು. ಕಾಪು ಶಾಸಕರಾದ ಲಾಲಾಜಿಯವರು ಮಾತನಾಡಿ ತಮ್ಮ ಅವಧಿಯಲ್ಲಿ ಆದ ಅಭಿವ್ಯಕ್ತಿ ಕಾರ್ಯಕ್ರಮಗಳನ್ನು ವಿವರಿಸಿದರು. ಫಲಾನುಭವಿಗಳ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಶಿಲ್ಪಾ ಜಿ ಸುವರ್ಣ, ಮಂಡಲ ಸಂಚಾಲಕರಾದ ಮುರಳೀಧರ ಪೈ, ಮಂಡಲ ಪ್ರಧಾನ‌ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಂಡಲ ಉಪಾಧ್ಯಕ್ಷರಾದ ಸಂಧ್ಯಾ ಕಾಮತ್ ಸುಭಾಶ್ ನಾಯಕ್, ಮಂಡಲ ಕಾರ್ಯದರ್ಶಿ ಶಂಕರ ಸಾಲ್ಯನ್, ಪಂಚಾಯತ್ ಅಧ್ಯಕ್ಷರಾದ ಪುರಂದರ ಕೋಟ್ಯನ್, ಪಂಚಾಯತ್ ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರವೀಣ್ ಪ್ರಭು ಪ್ರಸ್ತಾವನೆಗೈದರೆ ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸಾಲ್ಯನ್ ಕಾರ್ಯಕ್ರಮ ನಿರೂಪಿಸಿದರು. ನೂರಾರು ಫಲಾನುಭವಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಎಸ್ ಟಿ ಮೋರ್ಚಾದ ವತಿಯಿಂದ ಇಂದು ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ

ಕಾಪು: ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಎಸ್ ಟಿ ಮೋರ್ಚಾದ ವತಿಯಿಂದ ಇಂದು ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರವು ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಡ ಶಾಲೆಯಲ್ಲಿ ನಡೆಯಿತು*

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮೋದೀಜಿ ಆಡಳಿತದ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕರಾದ ಉಮೇಶ್ ನಾಯ್ಕ್ ಚೇರ್ಕಾಡಿ, ಜಿಲಾ ಎಸ್ ಟಿ ಮೋರ್ಚ ಅಧ್ಯಕ್ಷರಾದ ನಿತ್ಯಾನಂದ ನಾಯ್ಕ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಶಕ್ತಿಕೇಂದ್ರ ಪ್ರಮುಖ್ ದಯಾನಂದ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಲ ಉಪಾಧ್ಯಕ್ಷರುಗಳಾದ ಸಂಧ್ಯಾ ಕಾಮತ್, ಸುಭಾಸ್ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಸುನೀತ ನಾಯ್ಕ್ ಉಪಸ್ಥಿತರಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ *ನಯನ ಗಣೇಶ್* ಭೇಟಿ ನೀಡಿ ಶುಭಹಾರೈಸಿದರು. ಮಂಡಲ ಎಸ್ ಟಿ ಮೋರ್ಚ ಪ್ರಧಾನ ಕಾರ್ಯದರ್ಶಿ ಮಾಲತಿ ನಾಯ್ಕ್ ಕಾರ್ಯಕ್ರಮ‌ ನಿರೂಪಿಸಿ ಧನ್ಯವಾದಗೈದರು.

ದೇಶಭಕ್ತ ಸಂಘಟನೆ ಆರ್.ಎಸ್.ಎಸ್.‌‌ ಭಯೋತ್ಪಾದಕರು ಎಂದ ಸಿದ್ಧರಾಮಯ್ಯ ನೈಜ ಭಯೋತ್ಪಾದಕ; ಸಿದ್ಧು ಮಾನಸಿಕ ಚಿಕಿತ್ಸೆಯ ವೆಚ್ಚ ಭರಿಸಲು ಜಿಲ್ಲಾ ಬಿಜೆಪಿ ಸಿದ್ದ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ದೇಶಭಕ್ತ ಸೇವಾ ಸಂಘಟನೆ ಆರ್.ಎಸ್.ಎಸ್. ಭಯೋತ್ಪಾದಕರು ಎಂದಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ಹೇಳಿಕೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ತನ್ನ ಆಡಳಿತಾವಧಿಯಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಮಾರಣ ಹೋಮ ನಡೆದರೂ‌ ಸುಮ್ಮನಿದ್ದು,‌ ಪಿ.ಎಫ್.ಐ., ಎಸ್.ಡಿ.ಪಿ.ಐ.‌ ನಂತಹ ದೇಶ ವಿರೋಧಿ ಸಂಘಟನೆಗಳ‌ ಕಾರ್ಯಕರ್ತರ‌ ಪ್ರಕರಣಗಳನ್ನು ಹಿಂಪಡೆದು, ರಾಜ್ಯಾದ್ಯಂತ ವ್ಯವಸ್ಥಿತ ಪಿತೂರಿಯೊಂದಿಗೆ ಗಲಭೆ ಸೃಷ್ಠಿಸಲು ಮೂಲ ಕಾರಣರಾಗಿರುವ‌ ಸಿದ್ಧರಾಮಯ್ಯ ಓರ್ವ‌ ನೈಜ ಭಯೋತ್ಪಾದಕ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಿರಂತರ ಸೋಲಿನಿಂದ ಕಂಗೆಟ್ಟು, ಡಿಕೆಶಿ‌ ಜೊತೆಗಿನ ಒಳ ಜಗಳದಿಂದ ಮೂಲೆ ಗುಂಪಾಗುವ ಭಯದಿಂದ ಹತಾಶೆಗೊಂಡು‌ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ಧುಗೆ‌ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದು, ಅದರ ವೆಚ್ಚವನ್ನು ಭರಿಸಲು ಜಿಲ್ಲಾ ಬಿಜೆಪಿ ಸಿದ್ದವಿದೆ ಎಂದಿರುವ ಕುಯಿಲಾಡಿ, ಕೇಸರಿ ಕಂಡರೆ ಮಾರುದ್ದ ಓಡುವ ಹಿಂದೂ ವಿರೋಧಿ ಸಿದ್ಧರಾಮಯ್ಯ‌ಗೆ ಆರ್.ಎಸ್.ಎಸ್. ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಸಿದ್ಧರಾಮಯ್ಯ ಹೆಸರಿಗೆ ಮಾತ್ರ ಸಮಾಜವಾದಿ, ಆಚರಣೆಯಲ್ಲಿ ಬರೇ ಮಜಾವಾದಿ. ನನ್ನ ಹೆಸರಲ್ಲೂ ರಾಮನಿದ್ದಾನೆ ಎಂಬ‌ ಬೂಟಾಟಿಕೆಯ ಮಾತನ್ನಾಡುವ ಸಿದ್ಧರಾಮಯ್ಯ ವಾಸ್ತವಿಕವಾಗಿ ಹಿಂದುವೇ ಅಲ್ಲ. ಬೇಲ್ ಮೇಲೆ ತಿರುಗಾಡುತ್ತಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಗರಣಗಳ ಸರಮಾಲೆಯಲ್ಲಿ ಸಿಲುಕಿ ಕಾನೂನಾತ್ಮಕ ಇ.ಡಿ. ವಿಚಾರಣೆಯನ್ನು‌ ಎದುರಿಸುತ್ತಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತೆನಿಸಿದೆ. ಸಿದ್ದರಾಮಯ್ಯ ವರ್ತನೆಯು ಅವಕಾಶದ ಸದುಪಯೋಗವನ್ನು ಪಡೆದು‌ ಕಾಂಗ್ರೆಸ್‌ ಪಕ್ಷವನ್ನು ಮುಗಿಸಿಯೇ ತೀರುತ್ತೇನೆ ಎಂಬಂತಿದೆ.

ಜನರ ತೆರಿಗೆ ಹಣದಿಂದ ಒಂದೇ ವರ್ಗದ ಓಲೈಕೆಗಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿ, ಖಜಾನೆಯನ್ನು ಬರಿದಾಗಿಸಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ‌ಕುಖ್ಯಾತಿಗೆ ಪಾತ್ರವಾಗಿರುವ ಸಿದ್ಧರಾಮಯ್ಯ ಒಡೆದು ಆಳುವ ನೀತಿಯಲ್ಲೂ ನಿಸ್ಸೀಮರು. ಸದಾ ಧರ್ಮ ಜಾತಿಗಳನ್ನು ಒಡೆಯುವ ಹುನ್ನಾರದಲ್ಲಿ ನಿರತರಾಗಿರುವ ಸಿದ್ಧರಾಮಯ್ಯ‌ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬಾದಾಮಿಯಲ್ಲಿ ಬೆರಳೆಣಿಕೆ ಮತಗಳಿಂದ ಗೆದ್ದು ಕೊಂಚ ಮರ್ಯಾದೆ ಉಳಿಸಿಕೊಂಡಿದ್ದರೂ ತನ್ನ ಅಧಿಕ ಪ್ರಸಂಗಿತನದಿಂದಾಗಿ‌ ಶಾಶ್ವತವಾಗಿ ಮೂಲೆಗುಂಪಾಗುವ ದಿನ ದೂರವಿಲ್ಲ.

ಆನೆ ನಡೆದಾಡುವಾಗ ಶ್ವಾನಗಳು ಬೊಗಳುತ್ತಾ ದಿಕ್ಕೆಟ್ಟು ಓಡಿದಂತೆ ಆರ್.ಎಸ್.ಎಸ್ ಎಂಬ ಬೃಹತ್ ಸೇವಾ ಸಂಘಟನೆಯ ಬಗ್ಗೆ ಕ್ಷುಲ್ಲಕ ಮಾತನ್ನಾಡುವುದು‌ ಬೌದ್ಧಿಕ ದಿವಾಳಿತನದ ಪರಮಾವಧಿಯಲ್ಲದೆ ಮತ್ತೇನಿಲ್ಲ. ಇದೆಲ್ಲದರ ಅರಿವಿದ್ದರೂ ಕೇವಲ ವೋಟ್ ಬ್ಯಾಂಕಿನ ದುರಾಸೆಯಿಂದ ಒಂದೇ ವರ್ಗದ ಓಲೈಕೆ ರಾಜಕಾರಣದ ಅಪೀಮನ್ನು ತಲೆಯೊಳಗೆ ತುಂಬಿಕೊಂಡಿರುವ ಸಿದ್ಧರಾಮಯ್ಯ ಭವಿಷ್ಯದಲ್ಲಿ ಚಡ್ಡಿ ಲಂಗೋಟಿ ಸುಡುವ ಕಾಯಕವನ್ನು ಆಯ್ದುಕೊಂಡಿರುವುದು ಹಾಸ್ಯಾಸ್ಪದ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಕಾಪು ಮಂಡಲದಲ್ಲಿ ಚಾಲನೆ



ಕಾಪು: ಕಾಪು ಬಿಜೆಪಿ ಮಹಿಳಾಮೋರ್ಚ ತಂಡದಿಂದ ಇಂದು ಮೋದೀಜಿ ಸರಕಾರದ 8 ನೇ ವಾರ್ಷಿಕೋತ್ಸವದ ಅಂಗವಾಗಿ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಸ್ವಚ್ಚತಾ ಕಾರ್ಯಕ್ರಮ‌ ನಡೆಸುವ ಮೂಲಕ ಸೇವಾ ಚಟುವಟಿಕಗಳಿಗೆ ಚಾಲನೆ ನೀಡಲಾಯಿತು. ಹೆಜಮಾಡಿ, ಪಡುಬಿದ್ರೆ ಹಾಗೂ ಪಲಿಮಾರು ಪಂಚಾಯತ್ ಗಳ ವ್ಯಾಪ್ತಿಯಲ್ಲಿ ತಲಾ ಒಂದು ಅಂಗನವಾಡಿ ಆವರಣ ಸ್ಬಚ್ಚತಾ ಸೇವೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಪು‌ ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಮಹಿಳಾಮೋರ್ಚ ಪ್ರಧಾನ‌ ಕಾರ್ಯದರ್ಶಿ ನೀತಾ ಗುರುರಾಜ್, ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಮಹಿಳಾಮೋರ್ಚ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಗಾಯತ್ರಿ ಪ್ರಭು, ಪಡುಬಿದ್ರೆ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ,  ಮಹಿಳಾಮೋರ್ಚ ಪದಾಧಿಕಾರಿಗಳು, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು‌ ಉಪಸ್ಥಿತರಿದ್ದರು.

Design a site like this with WordPress.com
Get started