
“ಸೌಹಾರ್ದ”ವೋ? ರಾಜಕೀಯ ಷಡ್ಯಂತ್ರವೋ? –
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್, ಸಹಬಾಳ್ವೆ, ಮಾನವ ಬಂಧುತ್ವ, ಮಹಿಳಾ ಬಂಧುತ್ವ, ಇತ್ಯಾದಿ ಸಂಘಟನೆಗಳ ಆಶ್ರಯದಲ್ಲಿ ಜುಲೈ 6ರಂದು ಕುಂಜಾಲು-ನೀಲಾವರ ಕ್ರಾಸ್ ಮಾರ್ಗದಲ್ಲಿ ನಡೆಯಲಿರುವ “ಸಾಮರಸ್ಯ ನಡಿಗೆ ಮತ್ತು ಸೌಹಾರ್ದ ಸಭೆ” ಎಂಬ ಕಾರ್ಯಕ್ರಮ ನಿಜಕ್ಕೂ ಒಳ್ಳೆಯ ಉದ್ದೇಶದಿಂದ ಆಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಇದೊಂದು ನಿಗೂಢ ರಾಜಕೀಯ ಪಿತೂರಿಯ ಭಾಗವಲ್ಲವೆ ಎಂಬ ಗಂಭೀರ ಅನುಮಾನಕ್ಕೂ ಕಾರಣವಾಗಿದೆ.
ಉಡುಪಿ ಶಾಸಕರ ನೇತೃತ್ವದಲ್ಲಿ ನಡೆದ ಹೋರಾಟ ಹಾಗೂ ಪೋಲಿಸ್ ಇಲಾಖೆಯ ತ್ವರಿತ ಕ್ರಮದಿಂದಾಗಿ:
ಕುಂಜಾಲು ಪ್ರದೇಶದಲ್ಲಿ ನಡೆದ ಗೋಹತ್ಯೆ ಪ್ರಕರಣದಲ್ಲಿ ಶೀಘ್ರದಲ್ಲಿಯೇ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದು, ಜನತೆ ಶಾಂತಿಯುತವಾಗಿ ನ್ಯಾಯದ ಆಶಯದೊಂದಿಗೆ ನಡೆದುಕೊಂಡಿದ್ದಾರೆ. ಯಾವುದೇ ರೀತಿಯ ಕೋಮು ಸಂಘರ್ಷ, ಗಲಭೆ, ಅಹಿತಕರ ಘಟನೆ ಇಲ್ಲದಿರುವ ಈ ಸಂದರ್ಭದಲ್ಲೂ “ಸಾಮರಸ್ಯ ನಡಿಗೆ” ಎತ್ತಿ ಹಿಡಿಯುವುದು ಎಲ್ಲಿ ಸೌಹಾರ್ದತೆ ಇಲ್ಲವೋ ಅಲ್ಲಿಗೆ ಸೌಹಾರ್ದತೆ ತರುವ ಕೆಲಸವಲ್ಲ, ಈ ಸಭೆಯ ಹಿಂದಿರುವ ಕಾಂಗ್ರೆಸ್ ಉದ್ದೇಶವನ್ನು ಪ್ರಶ್ನಿಸಲೇಬೇಕು:
ಕುಂಜಾಲು ನೀಲಾವರ ಭಾಗದಲ್ಲಿ ಕೋಮು ಸಂಬಂಧಿತ ಉದ್ವಿಗ್ನತೆ ಇಲ್ಲಿಯವರೆಗೂ ಇಲ್ಲದಿರುವಾಗ “ಸೌಹಾರ್ದದ” ಹೆಸರಿನಲ್ಲಿ ನಡೆಯುವ ಈ ಕಾರ್ಯಕ್ರಮದ ಆವಶ್ಯಕತೆ ಯಾರಿಗಾಗಿ….?
ಜಾತಿ-ಧರ್ಮದ ಬಣ್ಣದ ಕಣ್ಣುಗಳಿಂದ ಜನತೆ ನಡುವಿನ ಭಿನ್ನತೆ ತೆಗೆಯಲು ಈ ನಡಿಗೆ ಯತ್ನಿಸುತ್ತಿದೆಯೋ ಅಥವಾ ರಾಜಕೀಯ ಲಾಭಕ್ಕಾಗಿ ಮಾನವತೆಯ ಬಣ್ಣ ಹಚ್ಚಿದ ತಂತ್ರವೋ….?
ಇತ್ತೀಚಿನ ಗೋಹತ್ಯೆ ಪ್ರಕರಣದ ಆರೋಪಿ ನಂಬರ 7 ಇನ್ನೂ ಬಂಧಿತನಾಗಿಲ್ಲ. ಈ ಬಗ್ಗೆ “ಮಾನವತಾವಾದಿ” ಸಂಘಟನೆಗಳು ಏಕೆ ಬಾಯಿಮುಚ್ಚಿಕೊಂಡಿವೆ?
ಗೋಮಾಂಸ ಸಾಗಣೆ ಬಗ್ಗೆ ಸತ್ಯಾಸತ್ಯತೆ ಬಹಿರಂಗಗೊಳಿಸಬೇಕಾದಾಗ – ಕಾಂಗ್ರೆಸ್ ಮಾತ್ರ ಮುಕ್ತಾಯವಿಲ್ಲದ ಕಾರ್ಯಕ್ರಮಗಳ ಮೂಲಕ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿರುವುದು ಖೇದಕರ.
“ಮನುಜಕುಲಂ ತಾನೊಂದೆ ವಲಂ” ಎಂಬ ಘೋಷಣೆ ಬಳಸುವ ಮುನ್ನ – ಮನುಜತ್ವವನ್ನು ಬೆಳೆಸಿದ್ರು ಗೋಪೂಜೆ ಮಾಡುವ ನಾಡಿನಲ್ಲಿ ಗೋಹತ್ಯೆ ಪ್ರಕರಣವನ್ನೆ ತಮಗೆ ತಕ್ಕಂತೆ ಮೌನದಿಂದ ಕಡೆಗಣಿಸುವ ಅವರ ನೈತಿಕ ಸ್ಥಿತಿ ಏನು?
ಬಿಜೆಪಿ ಈ ಕಾರ್ಯಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ.
> ಶಾಂತಿಯುತ ಸಮಾಜದಲ್ಲಿ ಕೋಮು ಲೇಪ ಹಚ್ಚುವ ಧಿಕ್ಕಾರಾರ್ಹ ಪ್ರಯತ್ನವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಯಾವುದೇ ಸತ್ಯಹಿತದ ಪರಮಾರ್ಥವಲ್ಲ. ಇದು ಕಾಂಗ್ರೆಸ್ ನ ಮೋಸಪೂರಿತ “ಸಾಮರಸ್ಯ ಡ್ರಾಮಾ” ಆಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ಜೆ.ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








