ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಧುರೀಣ, ಬಿಜೆಪಿ ಹಿರಿಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಸೋಮಶೇಖರ ಭಟ್ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿಯವರ ನಿಕಟವರ್ತಿ ಹಾಗೂ ಮಾಜಿ ಸಚಿವ ದಿ. ಡಾ! ವಿ.ಎಸ್. ಆಚಾರ್ಯ ಅವರ ಮಾರ್ಗದರ್ಶಕರಾಗಿದ್ದ ಸೋಮಶೇಖರ ಭಟ್ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸ, ಅಯೋಧ್ಯೆ ಶ್ರೀ ರಾಮ ಮಂದಿರದ ಕರೆಸೇವಕರಾಗಿ ಮುಂಚೂಣಿಯಲ್ಲಿ ಸೇವೆ, ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನದ ನೇತೃತ್ವ ಮುಂತಾದ ಐತಿಹಾಸಿಕ ಸಾಧನೆಗಳ ಸರದಾರ, ಸಾವಿರಾರು ಕಾರ್ಯಕರ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಸೋಮಶೇಖರ್ ಭಟ್ ಅವರ ಅಗಲುವಿಕೆ ಭಾರತೀಯ ಜನತಾ ಪಾರ್ಟಿಗೆ ತುಂಬಲಾರದ ನಷ್ಟವೆನಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಪಕ್ಷದ ನಾಳೆಯ ಎಲ್ಲಾ ಕಾರ್ಯಕ್ರಮಗಳು ರದ್ದು:
ನಾಳೆ ನಿಗದಿಯಾಗಿರುವ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಹಿರಿಯ ಚೇತನ ಸೋಮಶೇಖರ್ ಭಟ್ ಅವರ ಗೌರವಾರ್ಥ ರದ್ದುಪಡಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮ್ ಚಲೋ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಕಾಪು ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಚಾಲನೆ ನೀಡಿದರು. ಜಿಲ್ಲಾ ಸಹಸಂಚಾಲಕರಾದ ವಿಜಯ್ ಕುಮಾರ್ ಉದ್ಯಾವರ ಪ್ರಸ್ತಾವನೆಗೈದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ ಗ್ರಾಮ್ ಚಲೋ ಕಾರ್ಯಕ್ರಮದ ರೂಪುರೇಶೆಗಳನ್ನು ವಿವರಿಸಿದರು. ಕಾಪು ಮಂಡಲ ಸಂಚಾಲಕರಾದ ಮುರಳೀದರ್ ಪೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಸಂಚಾಲಕರಾಗಿ ಆಯ್ಕೆಯಾದ ಕುತ್ಯಾರು ನವೀನ್ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಂಡಲ ಸಹಸಂಚಾಲಕರಾದ ನವೀನ್ ಎಸ್ ಕೆ ಮತ್ತಿತರರು ಉಪಸ್ಥಿತರಿದ್ದರು.
ಅಂದು ಅಧಿಕಾರದ ದುರಾಸೆಯಿಂದ ದೇಶವನ್ನು ಒಡೆಯುವ ಕುಕೃತ್ಯಕ್ಕೆ ನೆಹರೂ-ಜಿನ್ನಾ ನಾoದಿ ಹಾಡಿದ್ದು ಕರಾಳ ಇತಿಹಾಸ. ಇಂದು ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರದ ಕಲ್ಪನೆಯನ್ನು ತೇಲಿಬಿಟ್ಟಿರುವುದು ದೇಶದ್ರೋಹದ ಸಂಕೇತವಾಗಿದೆ ಎಂದು ನಿಳಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಜನತೆ ಕಾಂಗ್ರೆಸ್ಸಿನ ಆಡಳಿತ ವೈಫಲ್ಯ ಮತ್ತು ವಿಭಜನಕಾರಿ ಧೋರಣೆಯನ್ನು ಕೂಲಂಕುಷವಾಗಿ ಗಮನಿಸುತ್ತಿರುವುದು ವಾಸ್ತವ.
ಕಾಂಗ್ರೆಸ್ಸಿಗರಿಗೆ ಉತ್ತಮ ಆಡಳಿತಕ್ಕಿಂತ ದೇಶವನ್ನು ಒಡೆಯುವ ಕೃತ್ಯವೇ ಮುಖ್ಯ ಎನಿಸಿದೆ. ಇದು ಕಾಂಗ್ರೆಸ್ಸಿನ ಮೂಲ ಸಿದ್ದಾಂತದ ಇನ್ನೊಂದು ಭಾಗವಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಭಾರತ್ ಜೋಡೋ ಎಂದು ಬೊಗಳೆ ಬಿಡುತ್ತಿರುವ ಕಾಂಗ್ರೆಸ್ಸಿನ ನೈಜ ವಿಭಜನಕಾರಿ ಮನಸ್ಥಿತಿ ಮಗದೊಮ್ಮೆ ಬಟ್ಟಾಬಯಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ‘ಭಾರತ್ ಜೋಡೋ ಯಾತ್ರೆ’ ಎಂದು ಹೆಸರಿಟ್ಟುಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ’ದ ಹೇಳಿಕೆಯಿಂದ ಸಾಬೀತಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಧ್ಯೇಯ ವಾಕ್ಯದಡಿ 2047ಕ್ಕೆ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಅಮೃತ ಕಾಲಘಟ್ಟದಲ್ಲಿ ಕಾಂಗ್ರೆಸ್ ನಾಯಕರ ದೇಶ ವಿರೋಧಿ ಹೇಳಿಕೆ ಅತ್ಯಂತ ಖಂಡನೀಯ.
ಸಂಸದ ಡಿ.ಕೆ. ಸುರೇಶ್ ಅವರ ಉದ್ದಟತನದ ಹೇಳಿಕೆಯ ಕುರಿತು ಪಕ್ಷದ ನಿಲುವೇನು ಎಂಬುದನ್ನು ಕಾಂಗ್ರೆಸ್ ಸಮಸ್ತ ಭಾರತೀಯರ ಮುಂದೆ ಸ್ಪಷ್ಟಪಡಿಸಬೇಕಾಗಿದೆ.
ದೇಶದ ಸಮಗ್ರತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ದಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ದೇಶಭಕ್ತ ದೇಶವಾಸಿಗಳು ಸಹಿಸಲಾರರು. ಜಾತಿ, ಧರ್ಮಗಳ ಮಧ್ಯೆ ಒಡಕು ಸೃಷ್ಟಿಸಿ ಕೇವಲ ಅಧಿಕಾರಕ್ಕಾಗಿ ಹೆಣಗಾಡುವ ಕಾಂಗ್ರೆಸ್ಸಿನಿಂದ ಮಾತ್ರವೇ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯ. ಕಾಂಗ್ರೆಸ್ಸಿನ ಯಾವುದೇ ದೇಶ ವಿರೋಧಿ ಕುಕೃತ್ಯಗಳು ಎಂದೂ ಕಾರ್ಯಗತವಾಗಲಾರದು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ಮಂಡಿಸಿದ ಕೇoದ್ರ ಬಜೆಟ್ ನೀರಸ ಜಗತ್ತಿಗೆ ‘ಭಾರತ ಒಂದೇ ಭರವಸೆ’ ಎಂಬ ಮಾತಿನಂತೆ ಉತ್ತರದಾಯಿಯಾಗಿ ಮೂಡಿ ಬಂದಿದೆ. ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದ ‘ಅಭಿವೃದ್ಧಿ ಒಂದೇ ಮಂತ್ರ’ ಎಂಬ ದೂರದೃಷ್ಠಿಯ ಬಜೆಟ್ ಇದಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಫೆಡರಲ್ ಸಿಸ್ಟಮ್‌ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಬಜೆಟ್ ಮಂಡಿಸಲು ನಿಖರವಾದ ದೂರದೃಷ್ಟಿ ಇಟ್ಟುಕೊಂಡ ಸದೃಢ ಸರಕಾರದಿಂದ ಮಾತ್ರ ಸಾಧ್ಯ. 2028-29ನೇ ವರ್ಷಕ್ಕೆ ಪ್ರಪಂಚದ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಬೇಕೆಂದು ಪಣತೊಟ್ಟು, ಆತ್ಮ ನಿರ್ಭರ ಪರಿಕಲ್ಪನೆಯೊoದಿಗೆ ದೇಶದ ರೈತರು, ಸಣ್ಣ ಉದ್ದಿಮೆದಾರರು ಮತ್ತು ಬಡ ಮಧ್ಯಮ ವರ್ಗದವರನ್ನು ಮೇಲೆತ್ತುವ ಉದಾತ್ತ ಯೋಜನೆಯೊಂದಿಗೆ ಮoಡಿಸಿರುವ ಸಂಪೂರ್ಣ ಸ್ವಾವಲಂಬಿ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಆರ್ಥಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಕೆ. ಇವರು ಕೇoದ್ರ ಬಜೆಟನ್ನು ವಿಶ್ಲೇಷಿಸಿ ಮಾಹಿತಿ ನೀಡಿದರು.
*ಬಜೆಟ್ ವಿಶೇಷತೆಗಳು*:
1. ಹೊಸ ಪಾರ್ಲಿಮೆಂಟ್ ಕಟ್ಟಡದಲ್ಲಿ ಮಂಡಿಸಿರುವ ಪ್ರಥಮ ಬಜೆಟ್.
2. ಮೋದಿ ಸರಕಾರದ 2ನೇ ಅವದಿಯ ಕೊನೆಯ ಬಜೆಟ್.
3. ಬಜೆಟ್ ಗಾತ್ರ ರೂ.47.66 ಲಕ್ಷ ಕೋಟಿ.
4. ಈ ಬಜೆಟ್‌ನಲ್ಲಿ ವಿತ್ತೀಯ ಕೊರತೆ 5.1% ಮಾತ್ರ.
5. 2023-24 ವರ್ಷದ ಬಜೆಟ್ ಗೆ ಹೋಲಿಸಿದರೆ 9% ಪ್ರಗತಿ.
6. ನಾಲ್ಕು ಪ್ರಮುಖ ಸ್ತರದ ಜನತೆಯನ್ನು ಕೇಂದ್ರೀಕರಿಸಲಾಗಿದೆ:
7. ಒಟ್ಟಾರೆ ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದೆ ನೇರವಾಗಿ ದೇಶವನ್ನು ಮೇಲೆತ್ತುವ ಬಜೆಟ್.
*ಬಜೆಟ್‌ಗೆ ಪೂರಕ ಮತ್ತು ಉತ್ತೇಜಿತ ಅಂಶಗಳು*:
ಬಿಜೆಪಿ ಸರಕಾರದ 9 1/2 ವರ್ಷದ ಸಾಧನೆಗಳೇ ಈ ಬಜೆಟ್ ಮಂಡನೆಗೆ ದಾರಿದೀಪ ಮತ್ತು ಮಾನದಂಡ.
1. ದೇಶದ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯೇ ಜರಗುತ್ತಿದೆ. 2023ನೇ ವರ್ಷದಲ್ಲಿ ರೂ.11.760 ಕೋಟಿ ಅಂದರೆ ರೂ.117.60 ಬಿಲಿಯನ್ ಡಿಜಿಟಲ್ ವ್ಯವಹಾರ ಆಗಿದೆ. ಅದೇ 2022ಕ್ಕೆ ರೂ.74 ಬಿಲಿಯನ್ ಇತ್ತು.
2. ಐಎಮ್ಎಫ್ ವರದಿಯಂತೆ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಪ್ರಪಂಚದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮಾತ್ರವಲ್ಲದೆ 2025ನೇ ವರ್ಷಕ್ಕೂ ಅದು ಮುಂದುವರಿಯುತ್ತದೆ.
3. ದೇಶದಲ್ಲಿ ಉಜ್ವಲ ಯೋಜನೆಯಡಿ ಸುಮಾರು 10.15 ಕೋಟಿ ಉಚಿತ ಗ್ಯಾಸ್ ಸಂಪರ್ಕ ಆಗಿದೆ.
4. ದೇಶದಲ್ಲಿ 11.75 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
5. ಸುಮಾರು 48 ಕೋಟಿ ಜನ್‌ಧನ್ ಬ್ಯಾಂಕ್ ಖಾತೆ ತೆರೆಯಲಾಗಿದೆ.
6. ಸುಮಾರು 45 ಕೋಟಿ ಜನತೆಗೆ ಆಯುಷ್ಮಾನ್ ಭಾರತ್ ವಿಮೆ ಪಾವತಿಸಲಾಗಿದೆ.
7. ಪ್ರಪಂಚವೇ ಮೆಚ್ಚುವ ರೀತಿಯಲ್ಲಿ ಜಿ20 ಸಮ್ಮೇಳನ ನಡೆಸಲಾಗಿದೆ.
8. 80 ಕೋಟಿ ಜನರಿಗೆ ಅನ್ನ ಯೋಜನೆಯಡಿ ಉಚಿತ ಅಕ್ಕಿ ವಿತರಣೆ ಮುಂದುವರಿಸಲಾಗಿದೆ.
9. ಐಎಮ್ಎಫ್ ವರದಿಯಂತೆ ದೇಶದಲ್ಲಿ 23 ಕೋಟಿ ಜನ ಕಡುಬಡತನದ ರೇಖೆಗಿಂತ ಹೊರಬಂದಿದ್ದಾರೆ.
10. ಜಿಎಸ್ಟಿ ಸಂಗ್ರಹ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಿದೆ.
*ಬಜೆಟ್ ಗುರಿ*: ನಾಲ್ಕು ಮುಖ್ಯ ಸ್ತರದ ಜನರನ್ನು ಕೇಂದ್ರಿಕರಿಸಿ ಈ ಬಜೆಟ್ ಮಂಡಿಸಲಾಗಿದೆ.
• 78 ಲಕ್ಷ ಮಂದಿ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ಕೊಟ್ಟಿದ್ದು, ಅದನ್ನು ಮುಂದುವರಿಸುವುದು.
• ವಿಶ್ವಕರ್ಮ ಸಾಲ ಯೋಜನೆ ಮುಂದುವರಿಸುವುದು.
• ದಿವ್ಯಾಂಗರಿಗೆ ಸಾಲ ಯೋಜನೆ ಮುಂದುವರಿಸುವುದು.
• ತೃತೀಯ ಲಿoಗಿಗಳಿಗೆ ಸಾಲ ಯೋಜನೆ ಮುಂದುವರಿಸುವುದು.
*ಮಹಿಳೆಯರಿಗೆ*:
• ರೂ.30 ಕೋಟಿ ಮುದ್ರಾ ಸಾಲ ಮಹಿಳೆಯರಿಗೆ ಮೀಸಲು.
• ಲಕ್ಷಪತಿ ಮಹಿಳೆ ಯೋಜನೆ. 1 ಕೋಟಿ ಮಹಿಳೆಯರು ಲಕ್ಷಪತಿಗಳಾಗಿದ್ದಾರೆ.
• 1 ವರ್ಷದ ಒಳಗೆ ಬಡತನ ರೇಖೆಗಿಂತ ಕಡಿಮೆ ಇರುವ 3 ಲಕ್ಷ ಮಹಿಳೆಯರನ್ನು ಲಕ್ಷಪತಿ ಮಾಡುವ ಗುರಿ.
• ಹಳ್ಳಿ ವಸತಿ ಯೋಜನೆಯಲ್ಲಿ 70% ಮಹಿಳೆಯರಿಗೆ ಮೀಸಲು.
*ಯುವಕರಿಗೆ*:
• ಪ್ರಧಾನಮಂತ್ರಿ ಯುವ ಶಾಲೆಗಳು.
• ಯುವಕರಿಗೆ ಸ್ಕಿಲ್ ಇಂಡಿಯಾ ಮಿಷನ್.
. 3000 ಐಟಿಐ ಸ್ಥಾಪಿಸುವ ಗುರಿ.
. 390 ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಗುರಿ.
• ಹಿಂದೆ 20 ರಷ್ಟಿದ್ದ ಚೆಸ್ ಗ್ರಾಂಡ್ ಮಾಸ್ಟರ್ ಈಗ 80ಕ್ಕೆ ಏರಿಕೆ ಆಗಿದೆ.
• ಏಷಿಯನ್ ಗೇಮ್ಸ್ ಮತ್ತು ಒಲಿಂಪಿಕ್ ಗೇಮ್‌ಗೆ ಉತ್ತೇಜನ.
*ಅನ್ನದಾತರಿಗೆ*:
• 11.80 ಕೋಟಿ ಮಂದಿ ರೈತರಿಗೆ ಕೃಷಿ ಸಮ್ಮಾನ್ ಯೋಜನೆಯ ವಾರ್ಷಿಕ ರೂ.6,000 ಮುಂದುವರಿಕೆ.
• ಧವಸ ಧಾನ್ಯದಲ್ಲಿ ಆತ್ಮ ನಿರ್ಭರತೆ.
• ನ್ಯಾನೊ ಯೂರಿಯಾದ ಹಾಗೆ ನ್ಯಾನೊ ಡಿಎಪಿ.
• ಹಾಲಿನ ಉತ್ಪತ್ತಿ ಹೆಚ್ಚಿಸಲು ಹಸು ಸಂರಕ್ಷಣೆ ಮಿಸನ್.
ರೈತರ ಉತ್ಪನ್ನದ ಎಮ್ಎಸ್ಪಿ ಹೆಚ್ಚಳ. ಬೆಳೆ ವಿಮೆ ಏರಿಕೆ.
*ಇತರ ಮುಖ್ಯಾಂಶಗಳು*:
1. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಪಿಎಮ್ಎವೈ ಗ್ರಾಮೀಣ ಯೋಜನೆಯಡಿ 3 ಕೋಟಿ ಮನೆಗಳನ್ನು ಕಟ್ಟಿಸಿಕೊಡುವುದು.
2. 1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್ ತಯಾರಿ ಘಟಕ ಅಳವಡಿಸಿ ತಿಂಗಳಿಗೆ ಉಚಿತ 300 ಯೂನಿಟ್ ವಿದ್ಯುತ್.
3. ಈ ಯೋಜನೆಯಿಂದ ಬಡ ಕುಟುಂಬಕ್ಕೆ ವಾರ್ಷಿಕ ರೂ.15,000 ದಿಂದ ರೂ.18,000 ಉಳಿತಾಯ ಆಗುವಂತೆ ಮಾಡುವುದು.
4. ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಹಣಕಾಸು.
5. ಇನ್ನೂ ಹೆಚ್ಚಿನ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಮಿತಿ ರಚನೆ.
6. 9ರಿಂದ 14 ವರ್ಷದ ಬಾಲಕಿಯರಿಗೆ ಕ್ಯಾನ್ಸರ್ ರೋಗದ ಔಷಧಿ ಉಚಿತ.
7. ಆಯುಷ್ಮಾನ್ ಭಾರತ್ ಯೋಜನೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆರಿಗೆ ವಿಸ್ತರಣೆ.
8. ರಾಷ್ಟ್ರೀಯ ಮತ್ಸ್ಯ ಸಂಪದ ಯೋಜನೆಯಡಿ ರಫ್ತು ಇಮ್ಮಡಿಗೊಳಿಸುವ ಗುರಿ.
9. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್.
10. ರಾಜ್ಯಗಳಿಗೆ 50 ವರ್ಷ ಅವಧಿಯ ಬಡ್ಡಿ ರಹಿತ ಸಾಲ.
11. ಮೂಲ ಸೌಲಭ್ಯಗಳಿಗೆ ರೂ.11,11,111 ಕೋಟಿ ಹಣ ಹೂಡಿಕೆ. ಇದು ಹಿಂದಿನ ವರ್ಷಕ್ಕಿಂತ 11.1% ಹೆಚ್ಚು.
12. ರೈಲ್ವೆಯಲ್ಲಿ 3 ಹೊಸ ಕಾರಿಡಾರ್‌ಗಳ ಸ್ಥಾಪನೆ.
13. 40,000 ರೈಲು ಭೋಗಿಗಳನ್ನು ‘ವಂದೇ ಭಾರತ್’ ರೈಲು ಭೋಗಿಗಳಾಗಿ ಪರಿವರ್ತನೆ ಗುರಿ.
14. 149 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಯ ಗುರಿ.
15. 517 ಹೊಸ ವಿಮಾನ ದಾರಿಗಳು.
16. 1,000 ಹೊಸ ವಿಮಾನಗಳ ಚಾಲನೆಯ ಗುರಿ.
17. ರಾಜ್ಯಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ.
18. ಲಕ್ಷದ್ವೀಪ ಸಹಿತ ಎಲ್ಲಾ ಪ್ರವಾಸೋದ್ಯಮ ಕೇoದ್ರಗಳ ಅಭಿವೃದ್ಧಿ.
19. ವಿದೇಶಿ ನೇರ ಹೂಡಿಕೆಗೆ ‘ಫಸ್ಟ್ ಡೆವಲಪ್ ಇಂಡಿಯಾ’ ಯೋಜನೆ. ‘ಅಮೃತ ಕಾಲ’ದಿಂದ ‘ಕರ್ತವ್ಯ ಕಾಲ’ ಯೋಜನೆ.
20. ಆದಾಯ ತೆರಿಗೆ ದರ ಹಾಗೂ ಆದಾಯ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
21. 2009-10ರ ವರೆಗೆ ರೂ.25,000/- ವರೆಗಿನ ಆದಾಯ ತೆರಿಗೆ ಬಾಕಿ ಇದ್ದರೆ ಅದನ್ನು ಹಿಂಪಡೆಯಲಾಗುವುದು ಮತ್ತು 2014-15ರವರೆಗೆ ರೂ.10,000 ವರೆಗಿನ ಆದಾಯ ತೆರಿಗೆ ಬಾಕಿ ಇದ್ದರೆ ಅದನ್ನು ಹಿಂಪಡೆಯಲಾಗುವುದು.
ಒಟ್ಟಾರೆಯಾಗಿ ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದೆ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿರುವ ದೂರದರ್ಶಿತ್ವದ ಬಜೆಟ್ ಇದಾಗಿದೆ ಎಂದು ದಿವಾಕರ ಶೆಟ್ಟಿ ಕೆ. ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರಣಂಕಿಲ ಶ್ರೀಶ ನಾಯಕ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಬಿಜೆಪಿ ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.
ಉಡುಪಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂದು ಮಂಡನೆ ಮಾಡಿದ ಕೇoದ್ರ ಬಜೆಟ್ ನಿಂದ ದೇಶದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ, ಸಣ್ಣ ನಗರಗಳಿಗೆ ಮೆಟ್ರೋ ವಿಸ್ತರಣೆ, ಭಾರತೀಯ ರೈಲ್ವೆಗೆ ಹೆಚ್ಚಿನ ಅನುದಾನ, ಹೊಸ ರೈಲ್ವೆ ಕಾರಿಡಾರ್ ನಿರ್ಮಾಣ, ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಮತ್ತು ಬಡವರಿಗೆ 3 ಲಕ್ಷ ಮನೆ ನಿರ್ಮಾಣದಂತಹ ಯೋಜನೆಯಿಂದ ದೇಶದ ಜನತೆಯ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಉನ್ನತೀಕರಣವಾಗಲಿದೆ ಎಂದು ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ ವಿತ್ತ ಸಚಿವರು ಮಂಡಿಸಿದ ಕೇoದ್ರ ಬಜೆಟ್ ಸ್ಪಷ್ಟ, ದೂರಗಾಮಿ ಪರಿಣಾಮವುಳ್ಳ ಅತ್ಯುತ್ತಮ ಬಜೆಟ್ ಆಗಿದೆ. ಕೊಟ್ಟ ಮಾತಿನಂತೆ ನಡೆದುಕೊಂಡು ದೇಶವನ್ನು ಮುನ್ನಡೆಸಲು, ದೇಶದ ಆರ್ಥಿಕತೆಯನ್ನು ಪ್ರಪಂಚದ 3ನೇ ಅತಿ ದೊಡ್ಡ ಆರ್ಥಿಕತೆ ಮಾಡಲು ಇಂತಹ ಬಜೆಟ್ ಅತಿ ಮುಖ್ಯವಾಗಿದೆ. ಹತ್ತಿರದಲ್ಲೇ ಚುನಾವಣೆ ಇದ್ದರೂ ಯಾವುದೇ ಜನ ಮರುಳು ಕಾರ್ಯಕ್ರಮ ಮಂಡಿಸದೆ, ಯಾವುದೇ ಪ್ರಾದೇಶಿಕ ಪ್ರಾಮುಖ್ಯತೆ ನೀಡದೇ ದೇಶದ ಅಭಿವೃದ್ಧಿ ಒಂದೇ ಮೂಲ ಮಂತ್ರ ಎಂಬ ಧ್ಯೇಯ ವಾಕ್ಯದೊಂದಿಗೆ ಬಜೆಟ್ ಮಂಡಿಸಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ನಾಲ್ಕು ಮುಖ್ಯ ಸ್ತರದ ಜನತೆಯನ್ನು ಅಂದರೆ ಬಡವರು, ಮಹಿಳೆಯರು, ಯುವ ಜನಾಂಗ ಮತ್ತು ಅನ್ನದಾತರನ್ನು ಗುರಿಯಾಗಿರಿಸಿ ಹಣ ಮೀಸಲಿಟ್ಟು, ಉತ್ತಮ ಯೋಜನೆಯೊಂದಿಗೆ ಬಜೆಟ್ ಮಂಡಿಸಲಾಗಿದೆ. ಡಿಜಿಟಲ್ ಕ್ರಾಂತಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ಅಭಿವೃದ್ಧಿ, ವಿಮಾನ ನಿಲ್ದಾಣ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಬಜೆಟ್ ನ ಒಟ್ಟು ಗಾತ್ರ ರೂ.47.66 ಲಕ್ಷ ಕೋಟಿಯಾಗಿದ್ದು ಒಟ್ಟಾರೆಯಾಗಿ ಅತ್ಯುತ್ತಮ ಪ್ರಗತಿಪರ ಬಜೆಟ್ ಇದಾಗಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಉಡುಪಿ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರು ಇಂದು ಕಾಫು ಬಿಜೆಪಿ ಕಚೇರಿಗೆ ಪ್ರಥಮ ಭೇಟಿ ನೀಡಿದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಸ್ತಾವನೆ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭಹಾರೈಸಿದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್ ನೂತನ ಅಧ್ಯಕ್ಷರಿಗೆ ಅಭಿನಂದನಾ ಮಾತುಗಳನ್ನಾಡಿ ಶುಭಹಾರೈಸಿದರು. ನಂತರದಲ್ಲಿ ನೂತನ ಅಧ್ಯಕ್ಷರಿಗೆ ಗೌರವಾರ್ಪಣೆ ಮಾಡಲಾಯಿತು. ಹಾಗೂ ಈ ಸಂದರ್ಭದಲ್ಲಿ ರಾಜ್ಯ ಮಹಿಳಾಮೋರ್ಚದ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾದ ಶಿಲ್ಪಾ ಜಿ ಸುವರ್ಣ ಇವರಿಗೂ ಅಭಿನಂದನೆ ಗೌರವಾರ್ಪಣೆ ಸಲ್ಲಿಸಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದ.ಕ. ಜಿಲ್ಲಾ ಸಹ ಪ್ರಭಾರಿಗಳಾದ ರಾಜೇಶ್ ಕಾವೇರಿ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷರಾದ ಸುರೇಂದ್ರ ಪಣಿಯೂರು, ಮಂಡಲ ಮೋರ್ಚಗಳ ಅಧ್ಯಕ್ಷರುಗಳಾದ ಸಚಿನ್ ಸುವರ್ಣ, ಮಹಿಳಾ ಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ರೈತ ಮೋರ್ಚ ಅಧ್ಯಕ್ಷರಾದ ಗುರುನಂದನ್, ಮಂಡಲ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಅನ್ಯಾನ್ಯ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು ಕಾರ್ಯಕರ್ತರು, ಜನಪ್ರತಿನಿಧಿಗಳು, ಪುರಸಭಾ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ಮುಂಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕರಾಗಿ ನೇಮಕಗೊಂಡಿರುವ ಕುತ್ಯಾರು ನವೀನ್ ಶೆಟ್ಟಿಯವರು ಬಿಜೆಪಿ ಜಿಲ್ಲಾ ಕಛೇರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಸಂಘದ ಸ್ವಯಂಸೇವಕರಾಗಿ, ಭಾರತೀಯ ಜನತಾ ಪಾರ್ಟಿಯಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿರುವ ಕುತ್ಯಾರು ನವೀನ್ ಶೆಟ್ಟಿಯವರು ಬಿಜೆಪಿ ಕಾಪು ಮಂಡಲ ಯುವ ಮೋರ್ಚಾ ಅಧ್ಯಕ್ಷರಾಗಿ 2 ಬಾರಿ, ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ 2 ಬಾರಿ ಮತ್ತು ಕಾಪು ಕ್ಷೇತ್ರಾಧ್ಯಕ್ಷರಾಗಿ 1 ಅವಧಿಗೆ ಸೇವೆ ಸಲ್ಲಿಸಿ, ಪ್ರಸಕ್ತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸತತ ಮೂರು ಅವಧಿಗೆ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ವಿವಿಧ ಸ್ತರದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಗಿರೀಶ್ ಎಮ್. ಅಂಚನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ದಿನಕರ ಪೂಜಾರಿ, ರಾಘವೇಂದ್ರ ಕುತ್ಪಾಡಿ ಸಹಿತ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ 75ನೇ ಗಣರಾಜ್ಯೋತ್ಸವವನ್ನು ಜಿಲ್ಲಾ ಕಛೇರಿಯ ಬಳಿ ಆಚರಿಸಲಾಯಿತು.
ಬಿಜೆಪಿ ಮಂಗಳೂರು ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಧ್ವಜಾರೋಹಣವನ್ನು ನೆರವೇರಿಸಿ ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿ ಪಕ್ಷದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಶುಭಾಶಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿಸೋಜ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಸುಭಾಷಿತ್ ಕುಮಾರ್, ಚಿನ್ಮಯ್ ಗೋಪಾಲಪುರ, ಬಿಜೆಪಿ ಜಿಲ್ಲಾ ಕಾರ್ಯಾಲಯ ಪ್ರಮುಖರಾದ ಚಂದ್ರಶೇಖರ ಪ್ರಭು, ಶಿವರಾಮ್ ಕಾಡಿಮಾರ್, ಕವಿತಾ ಮತ್ತು ನಗರ ಕಾರ್ಯಾಲಯದ ವಿಗ್ನೇಶ್ ಕಾಮತ್, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.