ಜು.25: ಕಾರ್ಕಳ ತಾಲೂಕಿನ ಬೈಲೂರು-ಉಮಿಕ್ಕಳ ಬೆಟ್ಡದ ಮೇಲಿನ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಬಗ್ಗೆ ಅಪಪ್ರಚಾರ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಂತೆ ಬಿಜೆಪಿ ಕಾರ್ಕಳ ಮಂಡಲದಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸದರಿ ಯೋಜನೆ ಸಂಬಂಧ ಒಂದು ವರ್ಷದ ಬಳಿಕ ಯೋಜನೆಯ ಅನುಷ್ಠಾನ ಅಧಿಕಾರಿ ಎಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿರುವ ಜಿಲ್ಲಾಡಳಿತ ಕ್ರಮ ಸ್ವಾಗತಾರ್ಹವಾಗಿದೆ. ಮೊದಲ ದಿನದಿಂದಲೂ ಜಿಲ್ಲಾಡಳಿತ ಇಂತಹ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ ಪ್ರವಾಸಿ ಯೋಜನೆಯೊಂದು ಇಷ್ಟೊಂದು ಅಪಪ್ರಚಾರಗಳಿಗೆ ಒಳಗಾಗುತ್ತಿರಲಿಲ್ಲ. ತನಿಖೆ ನಡೆದು ಕಾಮಗಾರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು, ತಡವಾಗಿ ಜಿಲ್ಲಾಡಳಿತ ಎಚ್ಚರಗೊಂಡಿದೆ.
ಜಿಲ್ಲಾಧಿಕಾರಿಗಳ ಈ ಕ್ರಮ ಇಷ್ಟಕ್ಕೇ ಸೀಮಿತವಾಗಿರದೆ ಯೋಜನೆ ಕುರಿತು ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಸಭೆಗಳಲ್ಲಿ, ಮೀಡಿಯಾಗಳಲ್ಲಿ ಭ್ರಷ್ಟಾಚಾರ ನಡೆದಿದೆ, ನಕಲಿ ಮೂರ್ತಿ ಎಂದು ಸಾಕಷ್ಟು ಅಪಪ್ರಚಾರ ನಡೆಸಿದವರ ವಿರುದ್ಧವೂ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಥೀಮ್ ಪಾರ್ಕ್‌ಗೆ ಸಾರ್ವಜನಿಕ ಪ್ರವೇಶ ನಿಷೇಧ ಇದ್ದರೂ, ನಿಷೇಧವನ್ನು ಉಲ್ಲಂಘಿಸಿ ಒಳ ಪ್ರವೇಶ ಮಾಡಿ ಸಾರ್ವಜನಿಕ ಸ್ವತ್ತನ್ನು ಹಾನಿ ಮಾಡಿ, ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧವೂ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಉಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಕಾಮಗಾರಿ ಮುಂದುವರಿಸಲು ಅನುವು ಮಾಡಿಕೊಟ್ಟಾಗ ದಿನಾಂಕ 02.05.2024ರಂದು ರಾತ್ರಿ ಪರಶುರಾಮ ಥೀಂ ಪಾರ್ಕ್ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ರಸ್ತೆ ತಡೆ ಮಾಡಿ, ಕಾಮಗಾರಿಗೆ ಅಡ್ಡಿ ಪಡಿಸಿದವರ ವಿರುದ್ಧವೂ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಗೆ ಸಂಬಂಧಿಸಿದಂತೆ ಸುಳ್ಳು ಅಪಪ್ರಚಾರ, ಕಾಮಗಾರಿಗೆ ಅಡ್ಡಿಪಡಿಸಿದ, ಕಾನೂನು ಬಾಹಿರವಾಗಿ ಪ್ರವೇಶ ಮಾಡಿ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದವರ ವಿರುದ್ಧ ಜಿಲ್ಲಾಡಳಿತ ಕೂಡಲೇ ಅಗತ್ಯ ಕಾನೂನು ಕ್ರಮವನ್ನು ಕೈಕೊಳ್ಳಬೇಕು ಹಾಗೂ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಬಿಜೆಪಿ ನಿಯೋಗ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ನೀಡಿದೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಬೋಳ ಜಯರಾಮ್ ಸಾಲ್ಯಾನ್, ಜಿಲ್ಲಾ ಕಾರ್ಯದರ್ಶಿ ಉದಯ್ ಎಸ್. ಕೋಟ್ಯಾನ್, ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ಕಾರ್ಕಳ ನಗರಾಧ್ಯಕ್ಷ ನಿರಂಜನ್ ಜೈನ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಬೆಟ್ಟು, ವಿಘ್ನೇಶ್ ರಾವ್ ಬಂಗ್ಲೆಗುಡ್ಡೆ, ಬಿಜೆಪಿ ಪ್ರಮುಖರಾದ ರವೀಂದ್ರ ಕುಮಾರ್, ಸೂರ್ಯಕಾಂತ್ ಶೆಟ್ಟಿ ಕೆದಿಂಜೆ, ದೇವೇಂದ್ರ ಶೆಟ್ಟಿ ಬೆಳ್ಮಣ್, ಶಂಕರ್ ಕುಂದರ್ ಸೂಡ, ಯುವ ಮೋರ್ಚಾದ ರಜತ್ ರಾಮ್ ಮೋಹನ್, ರೈತ ಮೋರ್ಚಾದ ಮೋಹನ್ ಶೆಟ್ಟಿ ಬೋಳ, ಸುನಿಲ್ ಪೂಜಾರಿ ಚಾರಾ, ಹೆಬ್ರಿ ತಾಲೂಕು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ಜನ ಸಾಮಾನ್ಯರ ಧ್ವನಿಯಾಗಿ ಶಾಸಕರು ಉಸ್ತುವಾರಿ ಸಚಿವರ ನಡೆಯನ್ನು ಪ್ರಶ್ನಿಸುವುದೇ ತಪ್ಪೇ? ಉಡುಪಿ ಜಿಲ್ಲೆಯಾದ್ಯಂತ ಬೀಕರ ಪ್ರವಾಹದಿಂದ ಆಸ್ತಿ ಪಾಸ್ತಿ ನಷ್ಟ, ಬೆಳೆ ಹಾನಿ ಸಂಭವಿಸಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅತ್ಯಂತ ನಿರ್ಲಕ್ಷ್ಯತೆ ವಹಿಸಿ ನೆರೆ ಬಂದು ಇಳಿಮುಖವಾದ ಬಳಿಕ ‘ನಾಮ್ ಕೇ ವಾಸ್ತೆ’ ಮಾಡಿರುವ ಜಿಲ್ಲಾ ಬೇಟಿ ‘ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ’ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲಾ ಬೇಟಿ ಕಾರ್ಯಕ್ರಮವನ್ನು ಜಿಲ್ಲೆಯ ಯಾವುದೇ ಶಾಸಕರ ಗಮನಕ್ಕೆ ತಾರದೇ ಇರುವುದು, ಉಡುಪಿ ಜಿಲ್ಲೆಯಲ್ಲಿ ಐದೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ತೋರಿದ ಸರ್ವಾಧಿಕಾರಿ ಧೋರಣೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲೆಯ ಬಗ್ಗೆ ನಿರಂತರ ನಿರ್ಲಕ್ಷ್ಯತೆ ವಹಿಸುತ್ತಾ ಸ್ವಯಂ ಕಾಂಗ್ರೆಸ್ ಕಾರ್ಯಕರ್ತರ ‘ಗೋ ಬ್ಯಾಕ್ ಅಭಿಯಾನ’ಕ್ಕೆ ಬೆದರಿ ಓಡೋಡಿ ಬಂದು ಕಾಟಾಚಾರಕ್ಕೆ ಪ್ರಾಕೃತಿಕ ವಿಕೋಪದ ಪರಿಶೀಲನೆ ನಡೆಸಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆಯನ್ನು ಖಂಡಿಸಿರುವ ಉಡುಪಿ ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ಕ್ಷುಲ್ಲಕ ಮತ್ತು ಹತಾಶ ಹೇಳಿಕೆ ನೀಡುತ್ತಿರುವುದು ಖಂಡನೀಯ. ಶಾಸಕರ ಸಾಮಾಜಿಕ ಕಳಕಳಿಯ ಕಾರ್ಯವೈಖರಿ ಹಾಗೂ ತತ್ವ ಸಿದ್ಧಾಂತಗಳ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿಯನ್ನು ಪ್ರಶ್ನಿಸಿದ ಶಾಸಕರಿಗೆ, ಮಹಿಳೆಯರ ಗೌರವದ ಬಗ್ಗೆ ಸಂಸ್ಕಾರದ ಪಾಠ ಮಾಡಲು ಮುಂದಾಗುವ ಕಾಂಗ್ರೆಸ್ ಮಹಿಳಾ ಮುಖಂಡರು, ತಮ್ಮದೇ ಪಕ್ಷದ ಉಸ್ತುವಾರಿ ಸಚಿವೆಗೆ ಅವರ ಜವಾಬ್ದಾರಿಯನ್ನು ಸಕಾಲದಲ್ಲಿ ನೆನಪಿಸಲು ಮರೆತಿರುವುದು ದುರದೃಷ್ಟಕರ.
ಬೈಂದೂರು-ಸೋಮೇಶ್ವರ ಗುಡ್ಡ ಕುಸಿತ ವೀಕ್ಷಣೆಯ ಸಂದರ್ಭದಲ್ಲಿ ಸಾರ್ವಜನಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದನ್ನು ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳುವುದು ಉತ್ತಮ.
ರಾಜ್ಯ ಸರಕಾರದ ದುರಾಡಳಿತದಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹಳ್ಳ ಹಿಡಿದಿದ್ದು, ಲೂಟಿ ಮತ್ತು ಹಗರಣಗಳ ಸರಮಾಲೆಯ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ದಿವಾಳಿಯ ಅಂಚಿನಲ್ಲಿರುವುದು ಜಗಜ್ಜಾಹೀರಾಗಿದೆ. ರಾಜ್ಯ ಸರಕಾರ ಯಾವುದೇ ಯೋಜನೆಗಳಿಗೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಚಿಕ್ಕಾಸನ್ನೂ ನೀಡಲು ಅಸಮರ್ಥವಾಗಿದ್ದರೂ, ಉಡುಪಿಗೆ ಯಾವ ಯೋಜನೆ ತಂದಿದ್ದೀರಿ ಎಂದು ಕಾಂಗ್ರೆಸ್ ನಾಯಕರು ಶಾಸಕರನ್ನು ಪ್ರಶ್ನಿಸುತ್ತಿರುವುದು ಅತ್ಯಂತ ಹಾಸ್ಯಾಸ್ಪದವೆನಿಸಿದೆ.
ಉಡುಪಿ ಶಾಸಕರು ಮಹಿಳೆಯ ಗೌರವ, ಹಿಂದುತ್ವ ಪಾಲನೆ, ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಪಕ್ಷ ನಿಷ್ಠೆ ಮತ್ತು ಸತತ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದು ಓರ್ವ ಮಾದರಿ ಶಾಸಕರಾಗಿ ಜನತೆಯ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ತನ್ನ ಜವಾಬ್ದಾರಿಯನ್ನು ನಿಷ್ಠೆ ಮತ್ತು ಬದ್ಧತೆಯಿಂದ ನಿರ್ವಹಿಸುತ್ತಿದ್ದಾರೆ. ಉಡುಪಿಯ ಪ್ರಜ್ಞಾವಂತ ಜನತೆ ಕಳೆದ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ಹಾಗೂ ಉಡುಪಿ ನಗರಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಪಕ್ಷ ಮತ್ತು ಶಾಸಕರ ಕಾರ್ಯ ಕ್ಷಮತೆಯನ್ನು ಬೆಂಬಲಿಸಿ ಆಶೀರ್ವದಿಸಿದ್ದಾರೆ.
ಚುನಾವಣೆಗಳ ಸರಣಿ ಸೋಲಿನ ಮೂಲಕ ಕಂಗೆಟ್ಟಿರುವ ಉಡುಪಿ ಕಾಂಗ್ರೆಸ್ ಮುಖಂಡರು ಶಾಸಕರ ವಿರುದ್ಧ ಅಸಂಬದ್ಧ ಹಾಗೂ ಹತಾಶ ಹೇಳಿಕೆಗಳನ್ನು ನೀಡುತ್ತಾ ಅಸ್ತಿತ್ವಕ್ಕಾಗಿ ಪುಕ್ಕಟೆ ಪ್ರಚಾರ ಗಿಟ್ಟಿಸಲು ವಿಫಲ ಯತ್ನ ನಡೆಸುತ್ತಿರುವುದು ಶೋಚನೀಯ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ವಾಲ್ಮೀಕಿ ನಿಗಮ ಹಗರಣ, ಮುಡಾ ಸೈಟು ಹಗರಣ, ಎಸ್.ಸಿ. ಎಸ್.ಟಿ. ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ದುರುಪಯೋಗ, ಕಾರ್ಮಿಕ ಇಲಾಖೆ ಹಗರಣ, ಡಿಸಿಸಿ ಬ್ಯಾಂಕ್ ಹಗರಣ, ಅಲ್ಪಸಂಖ್ಯಾತ ಇಲಾಖೆ ಹಗರಣ, ಪ್ರವಾಸೋದ್ಯಮ ಇಲಾಖೆ ಹಗರಣ ಇವೇ ಮುಂತಾದ ಹಗರಣಗಳ ಸರಮಾಲೆಯಿಂದ ಕಂಗೆಟ್ಟ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮಾಜಿ ಸಚಿವರ ಮೇಲೆ ಮಾಡುತ್ತಿರುವ ಆರೋಪ, ತಮ್ಮ ಭ್ರಷ್ಟಾಚಾರವನ್ನು ಮಚ್ಚಿಹಾಕಲು ಮಾಡುತ್ತಿರುವ ಕುತಂತ್ರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ತೆಲಂಗಾಣಕ್ಕೆ ಕಳುಹಿಸಿ ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿರುವ ಜೊತೆಗೆ ಮುಡಾ ಹಗರಣದಡಿಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಪತ್ನಿಯ ಹೆಸರಿನಲ್ಲಿ ಆಕ್ರಮವಾಗಿ ಸೈಟುಗಳನ್ನು ಪಡೆದಿರುವುದು ಜಗಜ್ಜಾಹೀರಾಗಿದೆ. ಈ ಎರಡೂ ಪ್ರಮುಖ ಹಗರಣಗಳು ಸೇರಿದಂತೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 70 ಹಗರಣಗಳ ವಿವರಗಳನ್ನೊಳಗೊಂಡಿರುವ ಪುಸ್ತಕವನ್ನೇ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದ್ದು, ಸುಮಾರು 35,000 ಕೋಟಿ ರೂಪಾಯಿಗಳ ಹಗರಣದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕಾಗಿದೆ.
ಈ ಎಲ್ಲಾ ಹಗರಣಗಳ ಸರದಾರ ಎನಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಹುಳುಕನ್ನು ಮುಚ್ಚಿಡುವ ವಿಫಲ ಯತ್ನದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿ.ಸುನಿಲ್ ಕುಮಾರ್ ಅವರ ವಿರುದ್ಧ ಯಾವುದೇ ಸಾಕ್ಷ್ಷ್ಯಾಧಾರವಿಲ್ಲದೇ ವೃಥಾ ಸುಳ್ಳು ಆರೋಪದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಮಂಡಲದಲ್ಲಿ ತನ್ನ ವಿರುದ್ಧ ಮಾಡಿರುವ ಆರೋಪವನ್ನು ಹಿಂಪಡೆಯಬೇಕು, ಇಲ್ಲವೇ ಸದ್ರಿ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು, ತಪ್ಪಿದಲ್ಲಿ ವಿಧಾನ ಸೌಧದ ಅವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲೆಸೆದಿದ್ದಾರೆ.
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಧಾನಸಭಾ ಕಲಾಪದಲ್ಲಿ ಆರೋಪ ಮಾಡಿರುವ ಸಿ.ಎಂ. ಸಿದ್ದರಾಮಯ್ಯ ದಮ್ಮು, ತಾಕತ್ತು ಇದ್ದರೆ ಈ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೋ ವಹಿಸಬೇಕು, ಸುಮ್ಮನೆ ಅಪಪ್ರಚಾರ ನಡೆಸಿದರೆ ತಿರುಗೇಟು ತಾಳುವುದಕ್ಕೂ ಸಿದ್ದರಾಗಿ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಕೂಡಾ ಸವಾಲೆಸೆದಿದ್ದಾರೆ.
‘ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್’ ಎನ್ನುವಂತೆ ಸ್ವಯಂ ಭ್ರಷ್ಟಾಚಾರ, ಹಗರಣಗಳ ಕೂಪದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತೆ ಬಿಜೆಪಿ ವಿರುದ್ಧ ಹುರುಳಿಲ್ಲದ ಆರೋಪದಲ್ಲಿ ತೊಡಗಿದ್ದರೂ ಯಾವುದೇ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿರುವುದು ನಾಚಿಕೆಗೇಡು. ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ನೀಡಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಮುಖಭಂಗ ಅನುಭವಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿನ ಕೀಳು ಮಟ್ಟದ ಕುತಂತ್ರ ರಾಜಕಾರಣದ ಬಗ್ಗೆ ರಾಜ್ಯದ ಪ್ರಬುದ್ಧ ಜನತೆಗೆ ಚೆನ್ನಾಗಿಯೇ ಅರಿತಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ, ಜನ ವಿರೋಧಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ನೇತೃತ್ವದಲ್ಲಿ ಜು.18, ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ, ಪಾದಯಾತ್ರೆ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯಿಂದ 1,000 ಮಂದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಈಗಾಗಲೇ ಸಿಬಿಐ, ಇಡಿ ಹಾಗೂ ಎಸ್ಐಟಿ ತನಿಖೆ ಪ್ರಗತಿಯಲ್ಲಿದ್ದು, ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣವನ್ನು ಶೀಘ್ರ ಬೇಧಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ತನಿಖೆಯನ್ನು ತೀವ್ರ ಗೊಳಿಸುವಂತೆ ಒತ್ತಾಯಿಸುವ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸುವ ಈ ಮಹತ್ವದ ಪ್ರತಿಭಟನೆ, ಪಾದಯಾತ್ರೆ ಮತ್ತು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳಿಂದ ಪಕ್ಷದ ಮುಖಂಡರು, ಎಸ್.ಸಿ. ಮೋರ್ಚಾ ಮತ್ತು ಎಸ್.ಟಿ. ಮೋರ್ಚಾ ಸಹಿತ ಜಿಲ್ಲಾ, ಮೋರ್ಚಾ, ಮಂಡಲಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಿನಕರ ಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಉಡುಪಿ ನಗರದ ಅಂಬಲಪಾಡಿ ನಿವಾಸಿ, ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ನಗರ ಅಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಈ ಹಿಂದೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿ, ಪ್ರಸಕ್ತ ಉಡುಪಿ ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅಶ್ವಿನಿ ಆರ್. ಶೆಟ್ಟಿ ಅವರ ಅಗಲುವಿಕೆ ಪಕ್ಷ ಹಾಗೂ ಮಹಿಳಾ ಮೋರ್ಚಾ ತಂಡಕ್ಕೆ ತುಂಬಲಾರದ ನಷ್ಟವೆನಿಸಿದೆ.
ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಮಕ್ಕಳು ಮತ್ತು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಅಧಿಕೃತ ಕಚೇರಿಯನ್ನು ಮಣಿಪಾಲದ ‘ರಜತ್ರಾದ್ರಿ’ಯ ‘ಸಿ’ ಬ್ಲಾಕ್ ನಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಸಂಸದ ಕೋಟ, ಜನಪರ ಕೆಲಸ ಕಾರ್ಯಗಳನ್ನು ಮಾಡಲು, ಸಾರ್ವಜನಿಕರ ಬೇಡಿಕೆ, ಕುಂದು ಕೊರತೆಗಳನ್ನು ಆಲಿಸಲು ಲೋಕಸಭಾ ಕ್ಷೇತ್ರದ ಸಂಸದರ ಅಧಿಕೃತ ಕಛೇರಿಯನ್ನು ಪ್ರಾರಂಭಿಸಲಾಗಿದೆ. ಸಂಘಟನೆಯ ಹಿರಿಯರಾದ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ದೀಪ ಬೆಳಗಿಸಿ ಸಂಸದರ ಕಛೇರಿಗೆ ಚಾಲನೆ ನೀಡಿ ಇದು ಜನರ, ದುರ್ಬಲರ, ಸಾರ್ವಜನಿಕರ, ಜನ ಸಾಮಾನ್ಯರ ಕೆಲಸ ಮಾಡಲಿ ಎಂದು ಶುಭ ಹಾರೈಸಿದ್ದಾರೆ. ನಾನು ಮತ್ತು ಸಿಬ್ಬಂದಿಗಳು ಒಟ್ಟಾಗಿ ಜನ ಸಾಮಾನ್ಯರ ಸೇವೆ ಮಾಡಲು ದುಡಿಯುವ ಮೂಲಕ ಜನರ ಸಮಸ್ಯೆಗಳನ್ನು ಪರಿಹಾರ ಮಾಡಲು ಬದ್ಧತೆಯಿಂದ ಪ್ರಯತ್ನಿಸುತ್ತೇವೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಸದರ ಕಛೇರಿ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀಶ ನಾಯಕ್ ಪೆರಣoಕಿಲ, ಸದಾನಂದ ಉಪ್ಪಿನಕುದ್ರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಜಯರಾಮ ಸಾಲ್ಯಾನ್, ಸುರೇಶ್ ಶೆಟ್ಟಿ ಕಡೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಟ್ಠಲ ಪೂಜಾರಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ರಾಜೇಶ್ ಕಾವೇರಿ, ಶ್ಯಾಮಲಾ ಎಸ್. ಕುಂದರ್, ಬಿ.ಎನ್. ಶಂಕರ ಪೂಜಾರಿ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆೆ, ಗೀತಾoಜಲಿ ಸುವರ್ಣ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಜಗದೀಶ್ ಆಚಾರ್ಯ ಕಪ್ಪೆೆಟ್ಟು, ದೀಪಕ್ ಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸದಾನಂದ ಬಳ್ಕೂರು, ರಾಘವೇಂದ್ರ ಕುಂದರ್, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಅನಿತಾ ಶ್ರೀಧರ್, ಶ್ರೀಕಾಂತ್ ನಾಯಕ್, ವೀಣಾ ಎಸ್. ಶೆಟ್ಟಿ, ರಶ್ಮಿತಾ ಬಿ. ಶೆಟ್ಟಿ, ಸಚಿನ್ ಪೂಜಾರಿ, ಜಿತೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ಶರಣ್ ಮಟ್ಟು, ಗಿರೀಶ್ ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ರಾಜೀವ್ ಕುಲಾಲ್, ವಿಜಯ ಕೊಡವೂರು, ಕನ್ನಾರು ಕಮಲಾಕ್ಷ ಹೆಬ್ಬಾರ್, ಚಂದ್ರ ಪಂಚವಟಿ, ಶ್ರೀಕಾಂತ್ ಕಾಮತ್, ಗೋಪಾಲಕೃಷ್ಣರಾವ್ ಮಟ್ಟು, ರವಿ ಅಮೀನ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶಂಕರ ಅಂಕದಕಟ್ಟೆೆ, ರಾಘವೇಂದ್ರ ಉಪ್ಪೂರು, ನವೀನ್ ನಾಯ್ಕ್, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಸಚಿನ್ ಪಿತ್ರೋಡಿ, ನಳಿನಿ ಪ್ರದೀಪ್ ರಾವ್, ಚಿನ್ಮಯಮೂರ್ತಿ, ಸೌರಭಿ ಪೈ, ರಮ್ಯಾ ರಾವ್ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ನಗರಸಭಾ ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಮಧುಸೂದನ ಬಾಯಿರಿ ಕೋಟ ಇವರ ಪೌರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ಸಂಸದ ಕೋಟ ಅವರ ಪತ್ನಿ ಶಾಂತ, ಪುತ್ರ ಶಶಿಧರ್, ಪುತ್ರಿಯರಾದ ಸ್ವಾತಿ ಮತ್ತು ಶೃತಿ ಹಾಗೂ ಸಂಸದರ ಆಪ್ತ ಸಹಾಯಕರು ಮತ್ತು ಸಿಬ್ಬಂಧಿ ವರ್ಗ ಪೂಜಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬಂಧಿಸಿ ಪ್ರತಿಭಟನೆಯ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ಯುವ ಮೋರ್ಚಾ ಸಹಯೋಗದೊಂದಿಗೆ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಬಿಜೆಪಿ ಮಂಗಳೂರು ವಿಭಾಗ ಪ್ರಬಾರಿ ಕೆ.ಉದಯಕುಮಾರ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಮುಡ ಭೂ ಹಗರಣ, ವಾಲ್ಮೀಕಿ ನಿಗಮ ಹಗರಣ ಮುಂತಾದ ಹಗರಣಗಳ ಸರಮಾಲೆಯನ್ನು ಹೊತ್ತಿರುವ ಲೂಟಿಕೋರ ರಾಜ್ಯ ಕಾಂಗ್ರೆಸ್ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಿ, ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆಯನ್ನು ಸಲ್ಲಿಸಿ ಹಗರಣಗಳ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರುಗಳಾದ ಮಟ್ಟಾರ್ ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪೆರಣಂಕಿಲ ಶ್ರೀಶ ನಾಯಕ್, ಕಿರಣ್ ಕುಮಾರ್ ಬೈಲೂರು, ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಅನಿತಾ ಶ್ರೀಧರ್, ಶ್ರೀಕಾಂತ್ ನಾಯಕ್, ರಾಘವೇಂದ್ರ ಕುಂದರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕನ್ನಾರು ಕಮಲಾಕ್ಷ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಮತ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣರಾವ್ ಮಟ್ಟು, ಶರಣ್ ಮಟ್ಟು, ಉಡುಪಿ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್, ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ಪ್ರಮುಖರಾದ ಶ್ಯಾಮಲಾ ಎಸ್. ಕುಂದರ್, ವೀಣಾ ಎಸ್. ಶೆಟ್ಟಿ, ನೀರಜಾ ಶೆಟ್ಟಿ, ಹರೀಶ್ ಶೆಟ್ಟಿ ಚೇರ್ಕಾಡಿ, ನೀತಾ ಪ್ರಭು, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಸೋನು ಪಾಂಗಾಳ, ಅಕ್ಷಿತ್ ಶೆಟ್ಟಿ ಹೆರ್ಗ, ಶ್ರೀವತ್ಸ, ನಿತಿನ್ ಪೈ, ಲಕ್ಷ್ಮೀಶ ಬಂಗೇರ, ಮೋಹನ್ ರಾವ್, ದಾವೂದ್ ಅಬೂಬಕರ್, ಸುಭಾಷಿತ್, ಚಿನ್ಮಯಮೂರ್ತಿ, ಕೃಷ್ಣಮೂರ್ತಿ ರಾವ್ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ: ರಾಜ್ಯದಲ್ಲದೆ ಕೋಲಾಹಲ ಎಬ್ಬಿಸಿರುವ ಮುಡ ಭೂ ಹಗರಣ ರಾಜ್ಯದ ಮುಖ್ಯಮಂತ್ರಿ ಅವರ ಕುಟುಂಬದ ಸುತ್ತ ಗಿರಕಿ ಹೊಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮುಡ ಹಗರಣದ ಕುರಿತು ಈ ಕೆಳಗಿನ ಪ್ರಮುಖ ಅಂಶಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದಿಟ್ಟರು:
ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಮಾಡಿ ವರದಿ ನೀಡಲು ಸರಕಾರವೇ ಸೂಚಿಸಬೇಕು.
ಜಿಲ್ಲಾಧಿಕಾರಿಗಳಿಂದ ಮುಡ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ ಶಿಫಾರಸ್ಸು.
ಸರ್ಕಾರವೇ ಜಿಲ್ಲಾಧಿಕಾರಿಗಳ ವರದಿಯನ್ನು ಕಸದ ಬುಟ್ಟಿಗೆ ಹಾಕಿತು.
2022ರಲ್ಲಿಯೇ ಮುಡ ಅಕ್ರಮದ ಬಗ್ಗೆ ದೂರುಗಳು ಬಂದಿದ್ದವು.
2022ರಲ್ಲಿ ಬಿಜೆಪಿ ಸರ್ಕಾರದ ಜುಲೈ 2 ರಂದು ಅಕ್ರಮಗಳ ತನಿಖೆಗೆಂದು ತಾಂತ್ರಿಕ ಸಮಿತಿಯನ್ನು ರಚಿಸಿತು.
2023 ನವೆಂಬರ್ 3 ರಂದು ಸರ್ಕಾರಕ್ಕೆ ವರದಿ ನೀಡಿದರು ಒಟ್ಟು 3 ಸಂಪುಟದಲ್ಲಿ ವರದಿ ನೀಡಿದರು. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ
ಸಮಿತಿಯಲ್ಲಿರುವವರು:
ನಗರಾಭಿವೃದ್ಧಿ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನೆ ಹೆಚ್ಚುವರಿ ನಿರ್ದೇಶಕ ಟಿ.ವಿ. ಮುರಳಿ ಅಧ್ಯಕ್ಷತೆಯಲ್ಲಿ ಸದಸ್ಯರಾದ 1) ಬಿ.ಆರ್. ಕಲ್ಪಿನಾಥ್ 2) ನರ್ಸುಕಳಂತೆ ಇವರನ್ನು ಒಳಗೊಂಡ ವರದಿ ಸರ್ಕಾರಕ್ಕೆ ಸಲ್ಲಿಸಿತ್ತು.
ವರದಿಯಲ್ಲಿ ಹತ್ತು ವರ್ಷಗಳಿಂದ ಬಡಾವಣೆಗಳಿಗೆ ಜಮೀನು ನೀಡಿದ ಭೂಸಂತ್ರಸ್ತರಿಗೆ ಮುಡಾದಿಂದ ಪರಿಹಾರ ನೀಡಿದ ಮಾಹಿತಿ ಇಲ್ಲವೆಂದು ಅಧಿಕಾರಿಗಳು ಟಿಪ್ಪಣಿ ಮಾಡಿ ಬದಲಿ ನಿವೇಶನ ಮಂಜೂರಾತಿಗಳಿಗೆ ನಿಯಮ ಬಾಹಿರವಾಗಿ ಶಿಫಾರಸ್ಸು ಮಾಡುತ್ತಿದ್ದಾರೆ. ಭೂ ಸಂತ್ರಸ್ತರ ಹೆಸರಿನಲ್ಲಿ ಅನ್ಯ ಬಡಾವಣೆಗಳಲ್ಲಿ ಅಕ್ರಮವಾಗಿ ಬದಲಿ ನಿವೇಶನ ಹಂಚಲಾಗುತ್ತಿದೆ ಸರ್ಕಾರ ಇದನ್ನು ಸ್ಥಗಿತಗೊಳಿಸಬೇಕು.
2009 ರಲ್ಲಿ ಸುಪ್ರೀಂಕೋರ್ಟಿನ ಆದೇಶದಂತೆ ಅರ್ಕಾವತಿ ಬಡಾವಣೆಗೆ ಸಂಬಂಧಪಟ್ಟ ಕೇಸ್‌ನಲ್ಲಿ, ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ, ಅಭಿವೃದ್ಧಿ ಮಾಡಿರುವ ನಿವೇಶನ ಲೆಕ್ಕದಲ್ಲಿ 40:60 ಅನುಪಾತದ ಅಡಿ ಖಾಲಿ ನಿವೇಶನಗಳ ಅದೇ ಬಡಾವಣೆ ಅಥವಾ ಅದರ ಮೌಲ್ಯಕ್ಕೆ ಸರಿಸಮಾನವಾದ ಬಡಾವಣೆಗಳಲ್ಲಿ ಮಾತ್ರ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿತ್ತು.
ಅದನ್ನು ಮುಂದೆ 50:50 ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದ್ದು. ಅಂದರೆ ಗರಿಷ್ಠ ಮತ ಭೂ ಮಾಲೀಕನಿಗೆ ದೊರಕಬೇಕಾಗಿರುವ ಅಭಿವೃದ್ಧಿ ಕೊಂಡ ನಿವೇಶನಗಳು 50%ಗೆ ಮೀರಿರಬಾರದು.
ಸರ್ವೋಚ್ಚ ನ್ಯಾಯಾಲಯ ಅರ್ಕಾವತಿ ಬಡಾವಣೆಗೆ ಮಾತ್ರ ಹಿಂದೆ ಆದಂತಹ ಭೂ ಸ್ವಾಧೀನ ಪ್ರಕ್ರಿಯೆಯನ್ನು ಒಳಗೊಂಡಿರುವಂತೆ ಮತ್ತು ಮುಂದೆ ಆಗಬಹುದಾದಂತ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಎಂದು ಸ್ಪಷ್ಟಪಡಿಸಿತ್ತು. ಆದರೆ ಮುಡ ದಲ್ಲಿ ನಡೆದಂತಹ ಹಗರಣ, ಭೂ ಸ್ವಾಧೀನ ಪ್ರಕ್ರಿಯೆ 2009 ಹಿಂದೆ ಆಗಿರುವ ಬಡಾವಣೆಗಳಿಗೂ ಒಳಪಡುವಂತೆ ಮಾಡಿಕೊಂಡಿರುವುದು ಹಗರಣದ ಒಂದು ರೂಪ,
ಇಂದಿನ ಮುಖ್ಯಮಂತ್ರಿಗಳಾಗಿದ್ದಂತ ಸಿದ್ದರಾಮಯ್ಯನವರು 3 ಎಕ್ರೆ 16 ಗುಂಟೆ ಜಮೀನನ್ನು ತಮ್ಮ ಪತ್ನಿಯ ಅವರ ಹೆಸರಿನಲ್ಲಿ, ಪಾರ್ವತಮ್ಮನವರ ತಮ್ಮನಾದವರು ಅರಿಶಿನ ಕುಂಕುಮ ಕೇಂದ್ರ ನೀಡಿದ್ದಾರೆ ಎಂದು ಘೋಷಣೆ ಮಾಡಿಕೊಳ್ಳುತ್ತಾರೆ, ಕೆಸರೆ ಗ್ರಾಮ ಸರ್ವೆ ನಂಬ್ರ 464. ಇದನ್ನು ಅವರು ಬಳುವಳಿಯಾಗಿ ಪಡೆದಿದ್ದು 2006-07, ಅದರ ಬಡಾವಣೆ ಅಭಿವೃದ್ಧಿಗೊಂಡಿದ್ದು ಅದೇ ಸಾಲಿನಲ್ಲಿ.
ಆದರೆ, ಮುಖ್ಯಮಂತ್ರಿಗಳು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದುಕೊಳ್ಳಲು, ತಾವು
ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 2017 ಮುಡ ದಲ್ಲಿ ತಮಗೆ ಹೊಸ ನಿಯಮದ ಪ್ರಕಾರ ನಿವೇಶನವನ್ನು ಕೊಡಿ ಎಂದು ಆದೇಶ ಮಾಡುತ್ತಾರೆ. ಸರ್ಕಾರ ಮಾಟ್ಟದಲ್ಲೂ ಸಹ ಪ್ರಸ್ತಾವನೆ ಒಪ್ಪಿಕೊಳ್ಳಲಾಗುತ್ತದೆ.
• 2020ರಲ್ಲಿ ಅವರಿಗೆ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ, ಇದು ಅಂದಿನ ಮುಡ ಅಧಿಕಾರಿಗಳ ನೇತೃತ್ವದಲ್ಲಿ ಆಗಿದೆ, ಇದು ಸರ್ಕಾರಕ್ಕೆ ಪ್ರಸ್ತಾವನೆ ಬಂದಿರಲಿಲ್ಲ ಎನ್ನುವ ವಿಚಾರ, ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ತಮ್ಮ ಪತ್ರದಲ್ಲಿ ಅನುಮೋದನೆ ಮಾಡಿರುತ್ತಾರೆ.
• ನಿವೇಶನ ಹಂಚಿಕೆಯಲ್ಲಿ ಬಿಡಿ ನಿವೇಶನ ಹಂಚಿಕೆ ಮಾಡಿರುವುದು ಕಾನೂನು ಬಾಹಿರವಾಗಿರುವ ವಿಚಾರ, KTCP ಆಕ್ಟ್ ಅಡಿಯಲ್ಲಿ ಬಿಡಿ ನಿವೇಶನಗಳನ್ನು ಕೊಡಲು 75% ಹರಾಜು ಹಾಕಬೇಕು, 25% ಸಾಧಕರಿಗೆ ಮತ್ತು ಅತ್ಯಂತ ವಿಶೇಷ ರಾಷ್ಟ್ರ ಸೇವಕರಿಗೆ ಕೊಡಬೇಕೆನ್ನುವ ಸ್ಪಷ್ಟ ನಿಯಮಗಳಿವೆ ಆದರೆ ಪಾರ್ವತಮ್ಮ ಸಿದ್ದರಾಮಯ್ಯನವರು ಯಾವುದೇ ರೀತಿಯ ದೇಶ ಸೇವೆಯ ಪಟ್ಟಿಗಳನ್ನು ಕೊಡದೆ ಬಿಡಿ ನಿವೇಶನವನ್ನು ಮೈಸೂರಿನ ವಿಜಯನಗರದಲ್ಲಿ ಪಡೆದುಕೊಂಡಿರುವುದು ಕಾನೂನು ಬಾಹಿರವಾಗಿರುವ ವಿಚಾರ. 19820 ಅಭಿವೃದ್ಧಿಗೊಂಡಿರುವ ಬಡಾವಣೆಯಲ್ಲಿ 2006-08ರಲ್ಲಿ ಬಡಾವಣೆಯ ಭೂಸ್ವಾಧೀನ ಆಗಿರುವ ಬದಲಿ ನಿವೇಶನ ನೈತಿಕತೆಯ ಮತ್ತು ಕಾನೂನಾತ್ಮಕವಾದ ಸಮಾಜವಾದಿ ಸಿದ್ದರಾಮಯ್ಯ ಅವರನ್ನು ಮಜಾವಾದಿ ಎಂದು ಘೋಷಣೆ ಮಾಡುವ ಅಂಶ.
ಇತರ ಮೂರು ಪ್ರಕರಣಗಳು 2022ರವರೆಗೂ ನಡೆದಿತ್ತು, ಈ ಪ್ರಕರಣಗಳನ್ನು ಸರಿಯಾಗಿ
ಪತ್ತೆ ಹಚ್ಚಿ ಕಾನೂನಿನ ಕ್ರಮ ಕೈಗೊಳ್ಳಲು ಅಂದಿನ ಬಿಜೆಪಿ ಸರ್ಕಾರ TV Murali Additional Director Town Planning ಇವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಇವರು ತಮ್ಮ ವರದಿಯಲ್ಲಿ 11 ವಂಶಗಳನ್ನು ವಿಚಾರಣೆ ಮಾಡಬೇಕೆಂದು ಸರ್ಕಾರ ಕೋರಿಕೊಂಡದ್ದು, ಅದರಂತೆ ಅಧಿಕಾರಿಗಳು ವಿಸ್ತ್ರತ ವರದಿಯನ್ನು ಎಲ್ಲಾ ರೀತಿ ಪತ್ತೆ ಹಚ್ಚುವ ಕೆಲಸಗಳನ್ನು ಮಾಡಿರುತ್ತಾರೆ.
ಅವರ ವಿಪರ್ಯಾಸಕ್ಕೆ ಸರಿ ಎನ್ನುವಂತೆ 2023 ಮೇ ನಂತರ ಅಕ್ರಮ ಅತಿ ಹೆಚ್ಚಾಗಿ ಕಂಡುಬರುತ್ತದೆ. ಅದರ ವಿಚಾರವಾಗಿ ಅನೇಕ ಅಕ್ರಮಗಳು ಆಗಿವೆ ಅಕ್ರಮಗಳ ಪೈಕಿ.
KTCP ಆಕ್ಟ್ ಉಲ್ಲಂಘನೆ ಆಗಿರುವ ವಿಚಾರ (ಬಿಡಿ ಸೈಟುಗಳ ವಿತರಣೆ ಆಗಿರುವುದು)
2009 ಹಿಂದೆ ಆಗಿದ್ದಂತಹ ಭೂ ಸ್ವಾಧೀಕರ ಪ್ರಕ್ರಿಯೆಗಳಿಗೆ 50:50 ಅನುಪಾತದಲ್ಲಿ ನಿವೇಶನಗಳನ್ನು ನೀಡಿರುವುದು.
• ಮುಡ ಬಡಾವಣೆಗಳ ಪಕ್ಕ ಖಾಸಗಿ ಬಡಾವಣೆಗಳ ನಿರ್ಮಾಣಗೊಂಡಿದ್ದರೆ ನಿರ್ಮಾಣಗೊಂಡಂತಹ ಬಡಾವಣೆಗಳಲ್ಲಿ ಉದ್ಯಾನವನ ಮತ್ತು ರಸ್ತೆಗಳನ್ನು ಮುಡ ಸಣ್ಣಪುಟ್ಟ ಕಾರ್ಯಗಳನ್ನು ಮಾಡಿಸಿಕೊಂಡಂತಹ ಖಾಸಗಿ ಅವರು, ಮುಡ ದವರು ತಮ್ಮ ರಸ್ತೆಗಳನ್ನು ಮತ್ತು ಉದ್ಯಾನವನಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದಿದ್ದಾರೆ.
ಅಕ್ರಮವಾಗಿ ಆಗಿರುವ ಬಡಾವಣೆಗಳ ಪೈಕಿಯೂ ಸಹ, ರಸ್ತೆ ನಿರ್ಮಾಣವನ್ನು ಮುಡ ಕೈಯಲ್ಲಿ ಮಾಡಿಸಿ, ಅದಕ್ಕೂ ಸಹ 50:50 ಅನುಪಾತದಲ್ಲಿ ನಿವೇಶನ ಪಡೆದಿರುವುದು ಕಂಡು ಬ೦ದಿದೆ.
1968 ರಲ್ಲಿ ಒಂದು ಒಡಂಬಡಿಕೆ ಪತ್ರದ ಮೂಲಕ ರೈತರ ಜಮೀನಿಗಳನ್ನು ಪಡೆದುಕೊಂಡು ನಿವೇಶನಗಳನ್ನು ಮಾಡಿದ್ದಂತಹ ಡೆವಲಪರ್ಗಳು, ಈ ಭೂಮಿ ಮುಡ ದಲ್ಲಿ ಬರುತ್ತದೆ ಎಂದು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದಿರುವುದು ಗಮನಹರವಾದಂತಹ ವಿಚಾರ.
STP ನಿರ್ಮಾಣ ಮಾಡಬೇಕಾದರೆ ಕೆರೆಯ ಜಾಗದಲ್ಲೇ ಮಾಡಿರುವುದು ಸಹ ಒಂದು ಅಕ್ರಮ.
• ಹೀಗೆ ಅಕ್ರಮಗಳು ಸಿರಿಮಳೆ ಆಗಿದೆ ವಿಶೇಷವಾಗಿ 2023 ಮೇ ನಂತರ ಎಂದು ತಾಂತ್ರಿಕ ಸಮಿತಿ ವರದಿಯನ್ನು ಕೊಟ್ಟಿದೆ. ಇದನ್ನು ಅಕ್ಟೋಬರ್ 2023ರಲ್ಲಿ ತಾಂತ್ರಿಕ ಸಮಿತಿ ಸಂಪೂರ್ಣ ವರದಿಯನ್ನು ಸಲ್ಲಿಸಿರುತ್ತದೆ.
ಇದಕ್ಕೆ ಸಾಕ್ಷಿಯಾದಂತೆ ಜಿಲ್ಲಾಧಿಕಾರಿಗಳು ಸಹ 14 ಪತ್ರವನ್ನು ರಾಜ್ಯ ಸರ್ಕಾರಕ್ಕೆ ಬರೆದಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
• ಸರ್ಕಾರವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದು ಗಮನಾರ್ಹ ವಿಚಾರ
ನಾಲ್ಕು ಸಾವಿರ ಕೋಟಿಗೂ ಮೀರಿದ ಹಗರಣ ಮುಡ ದಲ್ಲಿ ನಡೆದಿದೆ.
ಇದಕ್ಕೆ ಅಡಿಪಾಯ ಹಾಕಿದವರೇ ಸಿದ್ದರಾಮಯ್ಯನವರು, ಅವರು ಭೂಮಿಯನ್ನು ಪಡೆಯುವ ಕಾರಣದಿಂದಾಗಿ 2006ರಲ್ಲಿ ಅಭಿವೃದ್ಧಿ ಗೊಂಡಿರುವ ಬಡಾವಣೆಗೆ 50:50 ಅನುಪಾತದಲ್ಲಿ ಬಿಡಿ ನಿವೇಶನಗಳನ್ನು ಪಡೆದಿದ್ದು ಅದಕ್ಕೆ ಮುನ್ನುಡಿ ಮಾಡಿದ ಕಾನೂನು ಬಹಿರವಾದ ವಿಚಾರ.
ಇದಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ತನಿಖೆ ಮಾಡಲು ನೇಮಿಸಿ ಕಣ್ಣು ಒರೆಸುವ ಕೆಲಸ ಮಾಡುವ ಹಾದಿಯಲ್ಲಿ ಸಿದ್ದರಾಮಯ್ಯ ಅವರು ಹೊರಟಿದ್ದಾರೆ. ಯಾರೇ ತಪ್ಪೇ ಮಾಡಿದ್ದರು ಪಕ್ಷಾತೀತವಾಗಿ ಹೊರಗೆ ಬರಬೇಕೆಂದರೆ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿಸಿ ನಿಷ್ಪಕ್ಷಪಾತವಾಗಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು.
ಮುಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ, ಕಾನೂನು ಬಾಹಿರ ಚಟುವಟಿಕೆ.
1. ಸರ್ವೋಚ್ಚ ನ್ಯಾಯಾಲಯ ತೀರ್ಪಿನ ಮೂಲಕ 2009 ನಂತರ ಭೂಸ್ವಾಧೀನ ಪಡಿಸುಕೊಂಡಂತಹ ಬಡಾವಣೆಗಳಿಗೆ ಮಾತ್ರ 50:50 ಅನುಪಾತದ ಅಡಿಯಲ್ಲಿ, ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ನಿವೇಶನ ನೀಡಲು ಅವಕಾಶವಿರುತ್ತದೆ.
2. ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಮ್ಮನಿಗೆ ಬಂದಿರುವ ಅರಿಶಿಣ ಕುಂಕುಮದ ರೂಪದ ಕೆಸರೇಗದ್ದೆ ಸರ್ವೆ ನಂಬರ್ 464, 3 ಎಕರೆ 16 ಗುಂಟೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು 1992, ಬಡಾವಣೆ ಅಭಿವೃದ್ಧಿ ಕೊಂಡಂತಹ ಸಮಯ 2006-07.
3. ಸರ್ವೋಚ್ಚ ನ್ಯಾಯಾಲಯ ಅರ್ಕಾವತಿ ಬಡಾವಣೆಯ ತೀರ್ಪು ನೀಡಿದ ಸಂದರ್ಭದಲ್ಲಿ, ಸ್ಪಷ್ಟವಾಗಿ ಇನ್ನು ಮುಂದೆ ಹೊಸ ಪಡಿಸಿಕೊಳ್ಳುವ ಭೂಮಿ ಸ್ವಾಧೀನದ ಪ್ರಕ್ರಿಯೆಗೆ ಮಾತ್ರ 50:50 ಅನುಪಾತ ಎನ್ನುವ ಸ್ಪಷ್ಟಮಾನದಂಡನೆ ಶರತ್ತು ಬದ್ಧವಾಗಿ ವಿಧಿಸುತ್ತದೆ.
ಕೇವಲ ಬೆಂಗಳೂರಿನ ಆರ್ಕಾವತಿ ಬಡಾವಣೆಗೆ ಮಾತ್ರ ಈ ವಿಶೇಷವಾದಂತಹ ಸೌಲಭ್ಯವನ್ನು 2002 ಭೂ ಸ್ವಾದಿನ ಪ್ರೇಸಿಕೊಂಡಂತ ಭೂಮಿಗೆ ಒದಗಿಸಿಕೊಡಲಾಗಿತ್ತು.
4. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ, 2017ರಲ್ಲೇ ಅಂದಿನ ಅಧಿಕಾರಿಗಳು ಅಂದಿನ ಮುಖ್ಯಮಂತ್ರಿ ಅವರ ನಿರ್ದೇಶನದ ಮೂಲಕ, ಪ್ರಸ್ತಾವವನ್ನು ಮಾಡಿ ಅಂದು ಸರ್ಕಾರಕ್ಕೆ ಕಳಿಸಿ ಕೊಡುತ್ತಾರೆ, ಸರ್ಕಾರ ತನ್ನ ಒಪ್ಪಿಗೆಯನ್ನು ಸೂಚಿಸಿ 2017 ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಸ್ತಾವಕ್ಕೆ ಸರಿ ಎಂದು ಮಂಜೂರು ಮಾಡುತ್ತಾರೆ.
5. ಆದರೆ ಅಂದಿನ ಮುಡ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ಮುಂದುವರಿಸಲು ಧೈರ್ಯ ಮಾಡುವುದಿಲ್ಲ.
6. ಆದರೆ 2020 ರಲ್ಲಿ ಅಂದಿನ ಮುಡ ಕಮಿಷನರ್ ತಮ್ಮ ಸ್ವಯಂ ನಿರ್ಧಾರವನ್ನು ತೆಗೆದುಕೊಂಡು, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆಯೇ, ತಮ್ಮ ನೇತೃತ್ವದಲ್ಲಿ ಪಾರ್ವತಮ್ಮ ಸಿದ್ದರಾಮಯ್ಯನವರಿಗೆ 50:50 ಅನುಪಾತದಲ್ಲಿ ನಿವೇಶನ ನೀಡಲು ಮಂಜೂರು ಮಾಡುತ್ತಾರೆ.
7. ಸರ್ವೋಚ್ಚ ನ್ಯಾಯಾಲಯ 2009ರ ಆದೇಶದ ಮೂಲಕ, 50:50 ಅನುಪಾತದಲ್ಲಿ ಪರಿಹಾರ ನೀಡಬೇಕಿದ್ದರೆ, ಅದೇ ಬಡಾವಣೆಯಲ್ಲಿ ಅಥವಾ ಅದೇ ಸಮಯದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆಗಳು ಅಥವಾ ಥಂಧಾ ನಂತರ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಮಾತ್ರ ನಿವೇಶನ ನೀಡಬೇಕೆಂದು ಸ್ಪಷ್ಟ ನಿಯಮಾವಳಿಗಳನ್ನು ಸೂಚಿಸಿತ್ತು.
8. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, 1980 ರಲ್ಲಿ ಅಭಿವೃದ್ಧಿಪಡಿಸಿರುವ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತದ ಬಡಾವಣೆಯಲ್ಲಿ 14 ವಿಶೇಷವಾಗಿ ಬಿಡಿ (Stray Sites) ನಿವೇಶನಗಳು ನೀಡಲಾಗಿದೆ.
Stray sites ಬಿಡಿ ನಿವೇಶನಗಳು (ಯಾವುದೇ ಬಡಾವಣೆಗಳಲ್ಲಿ ಹಂಚಿಕೆಯಾಗಿ ಉಳಿದುಕೊಂಡಿರುವ ನಿವೇಶನಗಳು, ಹಂಚಿಕೆಯಾಗಿ ಸರಿಯಾದ ಮೊತ್ತವನ್ನು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿಯಮಾವಳಿಗಳ ಪ್ರಕಾರ ಕಟ್ಟದಿದ್ದಲ್ಲಿ ಉಳಿದುಕೊಂಡಿರುವ ನಿವೇಶನಗಳು)
9. 1962 KTCP ಆಕ್ಟ್ ನಿಯಮಾವಳಿಗಳ ಪ್ರಕಾರ, ಬಿಡಿ ನಿವೇಶನಗಳನ್ನು ನೀಡಲು ಎರಡು ಶರತ್ತುಗಳಿವೆ.
ಬಿಡಿ ನಿವೇಶನಗಳ ಪೈಕಿ 75% ಹರಾಜಿನ ಮೂಲಕ ಮಾತ್ರ ನೀಡಬೇಕು, 25% ವಿಶೇಷವಾದಂತಹ ಸಾಧಕರಿಗೆ ಅಂದರೆ (ಕ್ರೀಡಾ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನ, ಯುದ್ಧದಲ್ಲಿ ಮಡಿದ ಮಡದಿಯರಿಗೆ, ಭಾರತವನ್ನು ಗಡಿ ಪ್ರದೇಶಗಳಲ್ಲಿ ಸಂರಕ್ಷಿಸಿ ಪ್ರಾಣ ತ್ಯಜಿಸಿದಂತಹ ಮಹಾಯುದ್ಧರಿಗೆ, ಹೀಗೆ ಸ್ಪಷ್ಟವಾದಂತ ನಿಯಮಾವಳಿಗಳು ಇರುತ್ತವೆ)
10. ಪಾರ್ವತಮ್ಮ ಸಿದ್ದರಾಮಯ್ಯನವರು ಯಾವ ವಿಶೇಷವಾದ ಸಾಧನೆಯನ್ನು ಅಥವಾ ಕರ್ನಾಟಕದಲ್ಲಿ, ಯಾವುದಾದರೂ ವಿಶೇಷವಾದಂತಹ ಸ್ಥಾನಮಾನಗಳನ್ನು ಪಡೆದಿದ್ದಾರೆಯೇ, ಅದು ಗೊತ್ತಿಲ್ಲದ ವಿಚಾರ, ಇಲ್ಲಿಯವರೆಗೂ ಯಾವ ಸಾಧನೆಯನ್ನು ಎಳ್ಳು ಸಹ ಪಾರ್ವತಮ್ಮ ಸಿದ್ದರಾಮಯ್ಯನವರು ಹೇಳಿಕೊಂಡಿಲ್ಲ.
ಆದರೆ ಮುಡ ಅಧಿಕಾರಿಗಳು ಮಾತ್ರ ಅವರಿಗೆ ಬಿಡಿ ನಿವೇಶನವನ್ನು ಅವರ ಸ್ವಂತ ಧೈರ್ಯದ ಮೇಲೆ ಕೊಟ್ಟಿದ್ದಾರೆ.
11. ಸಮಾಜವಾದಿ ಸಿದ್ದರಾಮಯ್ಯನವರು, ಮಜಾ ಅನ್ಡಿಫೈನೈಡ್ ವಾದಿಯಾಗಿರುವುದಕ್ಕೆ ಇದು ಒಂದು ಸ್ಪಷ್ಟ ನಿರ್ದೇಶನ.
12. ಅದೇ ಸಮಯದಲ್ಲಿ ಭೂಸ್ವಾಧೀನ ಆಗಿರುವಂತಹ ಅನೇಕ ಬಡಾವಣೆಗಳಲ್ಲಿ ತಮ್ಮ ಭೂಮಿಯನ್ನು ಕಳೆದುಕೊಂಡಂತಹ ಸಿದ್ದರಾಮಯ್ಯನವರು ಕೊಟ್ಟಿಲ್ಲ ? ರೈತರಿಗೆ ಪರಿವಾರವನ್ನು ಇಂಥ
13. ಅರ್ಕಾವತಿಯಲ್ಲಿ ಭೂಮಿಯನ್ನು ಕಳೆದುಕೊಂಡಂತಹ ಒಬ್ಬ ರೈತ, ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು BDA ಎಲ್ಲಿ ದಿನ ಸುತ್ತ ಆಡುತ್ತಾ ಪರಿಹಾರವನ್ನು ಪಡೆದುಕೊಳ್ಳಲು ಆಗದೆ, ಕೊನೆಗೆ 2002ರ ಭೂ ಸ್ವಾಧೀನ ಅಧಿನಿಯಮದ ಪ್ರಕಾರ ಜಕ್ಕೂರಿನ ಅರ್ಥ ಎಕರೆ ಭೂಮಿಗೆ ಕೇವಲ 11 ಲಕ್ಷ ಮೊತ್ತವನ್ನು ಪಡೆದು ತನ್ನ ಮಗಳನ್ನು ಉಳಿಸಿಕೊಳ್ಳಲಾಗದೆ ಇಂದು ಹುಲಿ ಕೆಲಸ ಮಾಡುತ್ತಿದ್ದಾನೆ.
ಇಂತಹ ರೈತರ ಕಣ್ಣೀರು, ಸಿದ್ದರಾಮಯ್ಯನವರು ವರಿಸುತ್ತಾರೆ ಎಂದರೆ ತಮ್ಮ ಮನೆಯ ಭೂಮಿ ಒಡೆತನವನ್ನು ಮಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾರೆ ವರೆತು ಭೂಮಿಯನ್ನು ಕಳೆದುಕೊಂಡಂತಹ ರೈತರಿಗೆ ಪರಿಹಾರವನ್ನು ಕೊಟ್ಟಿಲ್ಲ.
14. ಮುಡ ನಾಲ್ಕು ಸಾವಿರ ಕೋಟಿಗೂ ಮೇಲಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೈಲಿಗೆ ಬಂದಿದೆ, ಇದಕ್ಕೆ ಮೊದಲು ಅಡಿಪಾಯ ಆಗಿರುವುದೇ ಸಿದ್ದರಾಮಯ್ಯನವರು.
15. ನಗರಾಭಿವೃದ್ಧಿಯ ಆಕಾರ ಚಕಾರ ತಿಳಿಯದಿರುವ ತಮ್ಮ ಬಲಕೈ ಬಂಟ ಬೈರತಿ ಸುರೇಶ್ ಅವರಿಗೆ ನಗರಾಭಿವೃದ್ಧಿ ಇಲಾಖೆಯನ್ನು ಕೊಡಿಸಿ, ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಾಡಲು ಸೂಚನೆ ಕೊಟ್ಟಿರುವುದೇ ಸಿದ್ದರಾಮಯ್ಯನವರು.
16. 2023 ಮೇ ನಂತರ ಆಗಿರುವ ಮುಡ ಹಗರಣಕ್ಕೆ ನಾಲ್ಕು ಮಾನದಂಡಗಳು.
16a. ಮುಡ ಪಕ್ಕದಲ್ಲಿ ಬಂದು ಕೊಂಡಿರುವ ಅಕ್ರಮವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಅಧಿಕಾರಿಗಳ ಸ್ನೇಹವನ್ನು ಬೆಳೆಸಿಕೊಂಡು ಮುಡ ದಿಂದ ರಸ್ತೆ ಮತ್ತು ಒಳಚರಂಡಿಗಳನ್ನು ಅಭಿವೃದ್ಧಿಪಡಿಸಿ ನಮ್ಮ ರಸ್ತೆಯನ್ನು ಮುಡ ಭೂಸ್ವಾಧೀನ ಪಡಿಸಿಕೊಂಡಿದೆ ಎಂದು 50:50 ಅನುಪಾತದಲ್ಲಿ ಪರಿಹಾರವನ್ನು ಪಡೆದಿದ್ದಾರೆ.
16b. ಮುಡ ಪಕ್ಕದಲ್ಲಿ ಇರುವ ಮಾನ್ಯತೆ ಪಡೆದಿರುವ ಬಡಾವಣೆಗಳಲ್ಲೂ ರಸ್ತೆ ಮತ್ತು ಉದ್ಯಾನವನವನ್ನು, ಮುಡ ಅಭಿವೃದ್ಧಿ ಪಡಿಸಿದ್ದಾರೆ ಅಂದರೆ ನಮ್ಮ ಮಾಲೀಕತ್ವದ ಭೂಮಿಯನ್ನು ಮುಡ ಪಡೆದಿದ್ದಾರೆ ಎಂದು 50:50 ಅನುಪಾತದಲ್ಲಿ ನಿವೇಶನಗಳನ್ನು ಪಡೆದಿದ್ದಾರೆ.
16c. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ 2009ರ ನಂತರ ಭೂಸ್ವಾಧೀನ ಪಡೆಸಿಕೊಂಡಿದ್ದರೆ ಮಾತ್ರ 50:50 ನಿವೇಶನಗಳನ್ನು ನೀಡಬೇಕೆಂದಿದ್ದರೆ, 1962-68 ಈ ಸಮಯದಲ್ಲೂ ಒಡಂಬಡಿಕೆಗಳನ್ನು ಮಾಡಿಕೊಂಡು ನಿವೇಶನ ನಿರ್ಮಾಣ ಮಾಡಿರುವ. ಭೂಮಾಲೀಕರುಗಳಿಗೂ ನಿವೇಶನಗಳನ್ನು ನೀಡಲಾಗಿದೆ.
16d. ಬಿಡಿ ನಿವೇಶನಗಳ ಬಗ್ಗೆ KTCP ನಿಯಮಾವಳಿಗಳು ಇದ್ದರೂ ಸಹ, ಸಂಪೂರ್ಣವಾಗಿ ಗಾಳಿಗೆ ತೂರಿ 50:50 ಅನುಪಾತದಲ್ಲಿ ಬರುವ ಪ್ರಮುಖ ನಾಯಕರಗಳು ಎಂದು ಗುರುತಿಸಲ್ಪಡುವ ಕೆಲವರಿಗೆ ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ.
17. ಬೈರತಿ ಸುರೇಶ್ ಅವರು ನಗರ ಅಭಿವೃದ್ಧಿ ಸಚಿವರಾದ ಮೇಲೆ ಹಳೇ ಭೂ ಪಾಣಿದಾರರನ್ನು ಹುಡುಕಿ ಅವರಿಗೆ 50:50 ಅನುಪಾತದಲ್ಲಿ ನಿಮಗೆ ನಿವೇಶನಗಳನ್ನು ಕೊಡುತ್ತೇವೆ ಅದರಲ್ಲಿ 80% ಬೈರತಿ ಸುರೇಶ್ ಕಡೆಯವರಿಗೆ, 20% ಆ ಪಾಣಿದಾರನಿಗೆ ಎನ್ನುವ ಅಲ್ಲಿಕಿತ ನಿಯಮಾವಳಿ ಒಗಆಂ ಕಳೆದ 13 ತಿಂಗಳು ನಡೆದುಕೊಂಡು ಬಂದಿದೆ.
18. ಬಿಜೆಪಿ ಸರ್ಕಾರ ಇದ್ದಾಗಲೇ ನಿಯಮಾವಳಿಗಳನ್ನು ಮೀರಿ ಕೆಲವು ಕಾರ್ಯಗಳು ನಡೆಯುತ್ತಿದೆ ಎಂದಾಗ, 2022 ನವೆಂಬರ್ ನಲ್ಲಿ ಹಿರಿಯ ಅಧಿಕಾರಿಗಳ ಒಂದು ತನಿಕಾ ತಂಡವನ್ನು ರಚಿಸಿ, ವರದಿಯನ್ನು ಸಲ್ಲಿಸುವಂತೆ ಕೋರಿತ್ತು.
18a. 2023 ಅಕ್ಟೋಬರ್ ನಲ್ಲಿ ತನಿಕಾ ತಂಡ ತನ್ನ ಸ್ಪಷ್ಟವರಿದಿಯನ್ನು ನೀಡಿದೆ, ಬದಲಿ ನಿವೇಶನಗಳು, ಇಡೀ ನಿವೇಶನಗಳು, 50:50 ಅನುಪಾತದಲ್ಲಿ ನಡೆಯುತ್ತಿರುವ ಅಕ್ರಮಗಳು ಏನೆಂದು ಸ್ಪಷ್ಟವಾಗಿ ಉಲ್ಲೇಖಿಸಿವೆ.
18b. ಜಿಲ್ಲಾಧಿಕಾರಿಗಳು ಕರ್ನಾಟಕ ಸರ್ಕಾರಕ್ಕೆ 14 ಪತ್ರಗಳನ್ನು ಬರೆದಿದ್ದರೂ, ತನಿಖಾ ತಂಡ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಪತ್ರಗಳನ್ನು ಕಸದ ತೊಟ್ಟಿಗೆ ಎಸೆದಂತಿತ್ತು.
4,000 ಕೋಟಿಗೂ ಮೀರಿದ ಬ್ರಹ್ಮಾಂಡ ಭ್ರಷ್ಟಾಚಾರ, ಸಿದ್ದರಾಮಯ್ಯನವರು ಹಾಕಿರುವ ಅಡಿಪಾಯದಲ್ಲಿ ಬೈರತಿ ಸುರೇಶ್ ಅವರು ನಿರ್ಮಿಸಿರುವ ಕಟ್ಟಡದ ಅಡಿಯಲ್ಲಿ ಕರ್ನಾಟಕದ ಸಾಮಾನ್ಯ ರೈತ ತತ್ತರಿಸಿದ್ದಾನೆ.
ಇದೆಲ್ಲದಕ್ಕೂ ತೇಪೆ ಹಾಕುವಂತೆ, ಇಬ್ಬರು ಅಧಿಕಾರಿಗಳನ್ನು ತನಿಖಾ ಅಧಿಕಾರಿಗಳನ್ನಾಗಿ ನೇಮಿಸಿ, ಜನರ ಕಣ್ಣಿಗೆ ಮಂಕು ಬೂದಿ ಎರಚಲು ಹೊರಟಿದ್ದಾರೆ.
ಸರಿಯಾದ ಸತ್ಯ ಅವರಿಗೆ ಬರಬೇಕೆಂದರೆ ಒಬ್ಬ ನಿಷ್ಪಕ್ಷಪಾತವಾಗಿರುವ ಹಿರಿಯ ನ್ಯಾಯಾಧೀಶರ ಅಡಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸಿಬಿಐ ತನಿಖೆಯನ್ನು ನಡೆಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅಗ್ರಹಿಸಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ವಕ್ತಾರರಾದ ಗೀತಾಂಜಲಿ ಎಮ್. ಸುವರ್ಣ, ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ನೆರೆ ಹಾವಳಿ, ಕಡಲ್ಕೊರೆತ, ಆಸ್ತಿ-ಪಾಸ್ತಿ ನಷ್ಟ, ಬೆಳೆ ಹಾನಿ ಸಹಿತ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲೆಯಲ್ಲಿ ಎಲ್ಲಿಯೂ ಕಾಣಲು ಸಿಗದೇ ನಾಪತ್ತೆಯಾಗಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂಬ ಕಾರಣಕ್ಕೆ ಉಡುಪಿ ಜಿಲ್ಲೆಯನ್ನು ತಾವು ಯಾವಾಗಲೂ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದೀರಾ ಎಂಬುದನ್ನು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.
ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸರಕಾರದ ಆದಾಯ ಹೆಚ್ಚಿಸಲು ಉಡುಪಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸೂಚನೆ ನೀಡುತ್ತಿದ್ದಾರೆ ವಿನಃ ನೆರೆ ಹಾವಳಿಯಿಂದ ಜಿಲ್ಲೆಯ ಅನೇಕ ಮುಖ್ಯ ರಸ್ತೆಗಳು ಹೊಳೆಯಂತೆ ಮಾರ್ಪಾಡಾಗಿ ಕೃತಕ ಈಜು ಕೊಳ ನಿರ್ಮಾಣವಾಗಿರುವ ಕುರಿತು ದಿವ್ಯ ಮೌನ ವಹಿಸಿರುವುದು ಶೋಚನೀಯವಾಗಿದೆ ಎಂದು ಸಂಧ್ಯಾ ರಮೇಶ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸುದೀರ್ಘ ಅವಧಿಗೆ ಜಿಲ್ಲೆಗೆ ಆಗಮಿಸದೇ ಇದ್ದ ಕಾರಣಕ್ಕೆ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿರುವುದು ಇತಿಹಾಸ.
ಉಡುಪಿ ಪರಿಸರದಲ್ಲಿ ರಕ್ಷಣಾ ಸಿಬ್ಬಂದಿಗಳ ಸಹಿತ ಮಾದರಿ ಜನಪ್ರತಿನಿಧಿಗಳು ಜೀವದ ಹಂಗು ತೊರೆದು ನೆರೆ ಹಾವಳಿಯಿಂದ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಜೊತೆಗೆ ಸಮಾಜ ಸೇವಕರು ಸಹಾಯ ಹಸ್ತ ಚಾಚುತ್ತಿರುವ ದೃಶ್ಯ ಜನ ಮೆಚ್ಚುಗೆ ಪಡೆದರೆ, ಜಿಲ್ಲೆಗೆ ಉಸ್ತುವಾರಿ ಸಚಿವೆಯೊಬ್ಬರು ಇದ್ದಾರೆಯೇ ಎಂಬುದನ್ನು ಜನಸಾಮಾನ್ಯರೂ ಪ್ರಶ್ನಿಸುವಂತಾಗಿದೆ.
ದಿನ ಬೆಳಗಾದರೆ ಸಂವಿಧಾನದ ಬಗ್ಗೆ ಪುಂಖಾನುಪುಂಖ ಬೊಗಳೆ ಬಿಡುವ ಕಾಂಗ್ರೆಸಿಗರು ಜಿಲ್ಲೆಯ ಉಸ್ತುವಾರಿ ಸಚಿವೆಯ ನಾಪತ್ತೆ ಬಗ್ಗೆ ಯಾಕೆ ಸೊಲ್ಲೆತ್ತುತ್ತಿಲ್ಲ ಎಂಬುದು ನಿಗೂಢವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ನೆರೆ ಹಾವಳಿ, ಆಸ್ತಿ-ಪಾಸ್ತಿ ನಷ್ಟ, ಬೆಳೆ ಹಾನಿ ಕುರಿತು ತುರ್ತು ಸಭೆ ನಡೆಸಿ, ಅಗತ್ಯ ಪರಿಹಾರ ಮಾರ್ಗೋಪಾಯಗಳ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ಕೇವಲ ಅಧಿಕಾರದ ಲಾಲಸೆಯಿಂದ ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿ ನಕಲಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರದ ಗದ್ದುಗೆಯೇರಿ ಎಸ್.ಸಿ., ಎಸ್.ಟಿ. ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಸೀಮೆಯ ಅಹಿಂದ ನಾಯಕ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಮಾತ್ರ ಬಳಸಬೇಕೆಂಬ ನಿಯಮವಿದೆ. ಆದರೆ ಆನೆ ನಡೆದದ್ದೇ ದಾರಿ ಎಂಬಂತೆ ವಿತoಡ ವಾದದೊಂದಿಗೆ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸದ್ರಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿ ತಾನೆಂತಹ ದಲಿತ ವಿರೋಧಿ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ.
ಈ ಹಿಂದೆ ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಗೆ ಮೀಸಲಿಟ್ಟ 11,000 ಕೋಟಿ ರೂಪಾಯಿ ಹಣವನ್ನು ಉಚಿತ ಗ್ಯಾರಂಟಿಗಳಿಗೆ ಬಳಸಿದ್ದ ಸಿ.ಎಂ. ಸಿದ್ದರಾಮಯ್ಯ ಪ್ರಸಕ್ತ ವರ್ಷದಲ್ಲಿ ಸುಮಾರು 15,000 ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿಗಳ ಉದ್ದೇಶಕ್ಕೆ ಬಳಸುವ ಯೋಜನೆಯನ್ನು ಹಾಕಿಕೊಂಡಿರುವುದು ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ತನ್ನನ್ನು ತಾನು ಮಹಾನ್ ಆರ್ಥಿಕ ತಜ್ಞ ಎಂದು ಬಿಂಬಿಸುತ್ತಾ, ರಾಜ್ಯದ ಅಭಿವೃದ್ಧಿಗೆ ಚಿಕ್ಕಾಸನ್ನೂ ನೀಡದೆ, ಉಚಿತ ಗ್ಯಾರಂಟಿಗಳಿಗೂ ಹಣ ಹೊಂದಿಸಲು ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿ ಜನತೆಗೆ ವಿಪರೀತ ಬೆಲೆ ಏರಿಕೆ, ತೆರಿಗೆ ಹೆಚ್ಚಳದ ಬರೆಯನ್ನು ಹಾಕಿರುವ ಜೊತೆಗೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡುವ ಹೀನ ಕೃತ್ಯಕ್ಕೆ ಮುoದಾಗಿರುವುದು ಅತ್ಯಂತ ಶೋಚನೀಯ.
ಮಾತೆತ್ತಿದರೆ ದಲಿತರ ಕಲ್ಯಾಣ ಎಂದು ಬೊಗಳೆ ಬಿಡುವ ಸಿ.ಎಂ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ನಕಲಿ ಗ್ಯಾರಂಟಿಗಳಿಗಾಗಿ ದಲಿತ ಸಮುದಾಯದ ಹಿತವನ್ನು ಬಲಿಕೊಟ್ಟಿರುವುದು ನಾಚಿಕೆಗೇಡು. ನಕಲಿ ಗ್ಯಾರಂಟಿಗಳಿಂದ ತಾನು ಕೈಸುಟ್ಟುಕೊಂಡಿದ್ದರೂ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೂಡಾ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಎಂದು ಪುಕ್ಕಟೆ ಸಲಹೆ ನೀಡಿರುವ ಸಿದ್ದರಾಮಯ್ಯ ವರ್ತನೆ ತೀರಾ ಹಾಸ್ಯಾಸ್ಪದವಾಗಿದೆ. ಜನರ ತೆರಿಗೆ ಹಣದಲ್ಲೇ ಉಚಿತ, ಖಚಿತ, ನಿಶ್ಚಿತ, ಖಂಡಿತ ಎನ್ನುವ ಘೋಷ ವಾಕ್ಯದೊಂದಿಗೆ ಮಂಕುಬೂದಿ ಎರಚುತ್ತಿರುವ ಜೊತೆಗೆ ಸಾಲು ಸಾಲು ಹಗರಣಗಳಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆ.ಉದಯ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.