ಭಾರತದ ಮೊದಲ ಅಧಿಕೃತ social media app ‘ಎಲಿಮೆಂಟ್ಸ್’ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

image

ಭಾರತದ ಮೊದಲ ಅಧಿಕೃತ ಸಾ’ಮಾಜಿಕ ಮಾಧ್ಯಮ ಸೂಪರ್ ಅ’ಪ್ಲಿಕೇಶನ್ ಎಂದು ಹೇಳಿಕೊಳ್ಳುವ ಎ’ಲಿಮೆಂಟ್ಸ್ ಆ್ಯಪ್ ಅನ್ನು ಭಾರತದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಬಿಡುಗಡೆ ಮಾಡಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನ ಸ್ವ’ಯಂಸೇವಕರಾಗಿರುವ ಸಾ’ವಿರಕ್ಕೂ ಹೆಚ್ಚು ಐಟಿ ವೃತ್ತಿಪರರು ಈ ಅಪ್ಲಿಕೇಶನ್ ಅನ್ನು ನಿ’ರ್ಮಿಸಿದ್ದಾರೆ, 
ಆ್ಯಪ್ ಬಿಡುಗಡೆ ಮಾಡಿ ಮಾ’ತನಾಡಿದ ಉಪ ರಾ’ಷ್ಟ್ರಪತಿ ವೆಂಕಯ್ಯ ನಾಯ್ಡು.ಭಾ’ರತವು ಐಟಿ ಶಕ್ತಿ ಕೇಂ’ದ್ರವಾಗಿದೆ ಮತ್ತು ಈ ಕ್ಷೇತ್ರದಲ್ಲಿ ವಿಶ್ವದ ಕೆಲವು ಪ್ರಸಿದ್ಧ ಹೆ’ಸರುಗಳನ್ನು ನಾವು ಹೊಂದಿದ್ದು,   ಭ’ವಿಷ್ಯದಲ್ಲಿ ಇನ್ನೂ ಅನೇಕ ಹೊಸ ಆ’ವಿಷ್ಕಾರಗಳು ಬರಲಿವೆ  ಎಂದು ನಾನು ಭಾ’ವಿಸುತ್ತೇನೆ ಅಂತ ಹೇಳಿದರು. 

image

ಸೋಷಿಯಲ್ ಮೀ’ಡಿಯಾ ಜಗತ್ತಿನಲ್ಲಿ, ಆ್ಯಪ್ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌’ಸ್ಟಾಗ್ರಾಮ್‌ನಂತಹವರೊಂದಿಗೆ ಈ  ಎಲಿಮೆಂಟ್ಸ್ ಆ್ಯಪ್  ಸ್ಪ’ರ್ಧಿಸಲಿದೆ.ಎಂಟು ಭಾಷೆಗಳಲ್ಲಿ ಲಭ್ಯವಿರುವ ಅ’ಪ್ಲಿಕೇಶನ್ ಈಗಾಗಲೇ ಗೂ’ಗಲ್ ಪ್ಲೇ ಸ್ಟೋರ್‌ನಲ್ಲಿ 100,000 ಕ್ಕೂ ಹೆಚ್ಚು ಡೌ’ನ್‌ಲೋಡ್‌ಗಳನ್ನು  ಮಾ’ಡಿಕೊಳ್ಳಲಾಗಿದೆ.  ಅ’ಪ್ಲಿಕೇಶನ್‌ ಮೂಲಕ ಬ’ಳಕೆದಾರರು “ಸ್ನೇ’ಹಿತರೊಂದಿಗೆ ಸಂಪರ್ಕ ಸಾ’ಧಿಸಬಹುದು ಮತ್ತು ಸಂ’ಭಾಷಿಸಬಹುದು, ನ’ವೀಕರಣಗಳನ್ನು ಹಂ’ಚಿಕೊಳ್ಳಬಹುದು, ಸ’ಮಾನ ಮನಸ್ಕ ಜ’ನರೊಂದಿಗೆ ನೆಟ್‌ವರ್ಕ್ ಮಾ’ಡಬಹುದು, ಆಸಕ್ತಿಗಳನ್ನು ಕಂ’ಡುಕೊಳ್ಳಬಹುದು, ತಡೆರಹಿತ ಧ್ವನಿ ಮತ್ತು ವೀ’ಡಿಯೊ ಕರೆಗಳನ್ನು ಇದರ ಮೂಲಕ ಮಾ’ಡಬಹುದಾಗಿದೆ.ಇದು ಗೌಪ್ಯತೆಗೆ ಪ್ರಾ’ಮುಖ್ಯತೆ ನೀಡಿದ್ದು, ಮತ್ತು ದತ್ತಾಂಶ ಸಂ’ಗ್ರಹಕ್ಕಾಗಿ ಇದರ ಎಲ್ಲಾ ಸರ್ವರ್‌ಗಳನ್ನು ಭಾ’ರತದೊಳಗೆ ಹೋಸ್ಟ್ ಮಾಡಲಾಗಿದೆ ಎಂದು ಅ’ಪ್ಲಿಕೇಶನ್ ಹೇಳುತ್ತದೆ.ಪ್ರಧಾನಿ ಮೋದಿ ನಿನ್ನೆ  ‘ಆತ್ಮನಿರ್ಭರ್ ಭಾರತ್ ಆಪ್ ಇ’ನ್ನೋವೇಶನ್ ಚಾಲೆಂಜ್” ಎನ್ನುವ ಕಾ’ರ್ಯಕ್ರಮವನ್ನು ಚಾಲನೆ ನೀಡಿದ್ದರು,ಭಾ’ರತೀಯ ಅಪ್ಲಿಕೇಶನ್ ಅನ್ನು ಬೆಂಬಲಿಸಲು ಮತ್ತು ಅ’ದಕ್ಕಾಗಿ ಬಲವಾದ ಇ’ಕೋಸಿಸ್ಟಮ್ ನಿರ್ಮಿಸಲು, ಮೆಯಿಟಿ, ಅಟಲ್ ಇ’ನೋವೇಷನ್ ಮಿಷನ್-ನೀತಿ ಆಯೋಗದ ಸ’ಹಭಾಗಿತ್ವದಲ್ಲಿ ಭಾರತೀಯ ತಂ’ತ್ರಜ್ಞಾನ ವಲಯದ ಉ’ದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಗಳಿಗಾಗಿ ಡಿಜಿಟಲ್ ಇಂಡಿಯಾ ಸ್ವಾ’ವಲಂಬಿ ಭಾರತ ಆಪ್ ಇ’ನೋವೇಷನ್  ಚಾಲೆಂಜ್ ಆ’ರಂಭಿಸಿದೆ.

ರಾ’ಜ್ಯದಲ್ಲಿ ಮತ್ತೆ ಲಾ’ಕ್‌ಡೌನ್‌ ಮಾಡಲ್ಲ, ಬೆಂ’ಗಳೂರಿನಿಂದ ವಾಪಾಸ್‌ ಹೋ’ಗಬೇಡಿ: ಬೊಮ್ಮಾಯಿ ಮನವಿ

ರಾಜ್ಯದಲ್ಲಿ ಮತ್ತೆ ಲಾ’ಕ್‌ಡೌನ್‌ ಮಾಡುವುದಿಲ್ಲ ಜನರು ಆತಂಕಕ್ಕೆ ಒಳಗಾಗಿ ಬೆಂ’ಗಳೂರಿನಿಂದ ಊರಿಗೆ ವಾಪಾಸ್‌ ಹೋಗಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಮಾ’ಧ್ಯಮದೊಂದಿಗೆ ಮಾ’ತನಾಡಿದ ಅವರು, ಕೊ’ರೊನಾ ಪರಿಸ್ಥಿತಿ ರಾ’ಜ್ಯದಲ್ಲಿ ಸಂ’ಪೂರ್ಣವಾಗಿ ನಿ’ಯಂತ್ರಣದಲ್ಲಿದೆ. ಜನರು ಭಯ ಪಡಬೇಡಿ. ಬೆಂ’ಗಳೂರು ಬಿಟ್ಟು ಬೇರೆ ಕಡೆ ತೆ’ರಳಿದರೆ ನಿಮ್ಮ ಜಿಲ್ಲೆಯಲ್ಲಿ ಕೊ’ರೊನಾ ಸೋಂಕಿನ ಆತಂಕ ಅ’ಧಿಕವಾಗುತ್ತದೆ. ಹಾಗಾಗಿ ಬೆಂ’ಗಳೂರಿನಲ್ಲೇ ಸುರ’ಕ್ಷಿತವಾಗಿ ಇರಿ ಎಂದು ಹೇ’ಳಿದ್ದಾರೆ.ನಾಲ್ಕು ವಾರಗಳಲ್ಲಿ ಪ್ರತಿ ಭಾ’ನುವಾರ ಮಾ’ಡಲಾಗುವ ಲಾ’ಕ್‌ಡೌನ್‌ ಇಂದು ಯ’ಶಸ್ವಿಯಾಗಿದೆ. ಜನರೇ ಸ್ವ’ಯಂಪ್ರೇರಿತವಾಗಿ ಬಂದ್‌ ಮಾ’ಡಿದ್ದಾರೆ. ಜನರು ಅನಗ’ತ್ಯವಾಗಿ ಹೊರಗಡೆ ತಿರು’ಗಾಡಿಲ್ಲ. ಸಂ’ಜೆಯವರೆಗೂ ಎಲ್ಲರೂ ಕಟ್ಟುನಿಟ್ಟಾಗಿ ಲಾ’ಕ್‌ಡೌನ್‌ ನಿಯಮ ಪಾಲಿಸಿ ಎಂದು ವಿ’ನಂತಿಸಿದರು.

ಜುಲೈ 05,2020 ; ಭಾನುವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ,
ಭಾನುವಾರ

ರಾಹುಕಾಲ: ಸಂಜೆ 5:13 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01

ಮೇಷ

ಹಣಕಾಸಿನ ವ್ಯವಹಾರದಿಂದ ಸಂಭವಿಸಿರುವ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿ ವ್ಯವಹಾರಗಳು ಸುಗಮಗೊಳ್ಳುವವು. ನೀವು ಮಾಡಿದ ಪುಣ್ಯ ಕರ್ಮಗಳು ಉತ್ತಮ ಪ್ರತಿಫಲ ದೊರಕಿಸಿಕೊಡಲಿವೆ.

ವೃಷಭ

ಲೇವಾದೇವಿ ವ್ಯವಹಾರಗಳನ್ನು ದಿನದಮಟ್ಟಿಗೆ ಕಡಿಮೆಗೊಳಿಸುವುದು ಉತ್ತಮ. ಸಂಬಂಧಿಕರ ಜೊತೆಗಿನ ಬಾಂಧವ್ಯ ಗಟ್ಟಿಗೊಳ್ಳಲಿದೆ. ಗಣ್ಯರಿಂದ ಸಹಾಯ ಸಹಕಾರಗಳು ದೊರೆತು ಹಿತಕರ ವಾತಾವರಣ ಮೂಡುವುದು.

ಮಿಥುನ

ಹೊಸ ಕಾರ್ಯದ ಬಗ್ಗೆ ಮನಸ್ಸಿನಲ್ಲಿ ಚಿಂತನೆ ನಡೆಸಲಿದ್ದೀರಿ. ಉದ್ಯಮಕ್ಕೆ ಸಂಬಧಿಸಿದ ವ್ಯವಹಾರದಲ್ಲಿ ಸಂಗಾತಿಯ ಸಹಕಾರ ಪಡೆದುಕೊಳ್ಳಲಿದ್ದೀರಿ. ವಾಹನ ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ.

ಕಟಕ

ಆರ್ಥಿಕ ಅಭಿವೃದ್ಧಿಗಾಗಿ ಕೈಗೊಂಡ ಕೆಲಸ ಕಾರ್ಯಗಳು ಉತ್ತಮ ವಾಗಿ ಸಾಗುವವು. ಕಲೆ, ಕ್ರೀಡೆಗಳಲ್ಲಿ ತೊಡಗಿದವರಿಗೆ ಅತ್ಯಂತ ಉತ್ಸಾಹದಿಂದ ಮುನ್ನುಗ್ಗುವ ದಿನ. ಆಹಾರ ವ್ಯತ್ಯಯದಿಂದ ಆರೋಗ್ಯ ಹದಗೆಡಬಹುದು.

ಸಿಂಹ

ಖರ್ಚುವೆಚ್ಚಗಳಲ್ಲಿ ನಿಯಂತ್ರಣ ಸಾಧಿಸಿ ನೆಮ್ಮದಿ ಕಾಣುವಿರಿ. ಉದರದ ಸ್ವಾಸ್ಥಕ್ಕಾಗಿ ಊಟೋಪಹಾರದಲ್ಲಿ ಕಾಳಜಿ ಅಗತ್ಯ. ಕೆಲಸ ಕಾರ್ಯಗಳಲ್ಲಿ ಆಲಸ್ಯ ಉಂಟಾಗಿ ಹಿನ್ನಡೆ ಉಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ಕನ್ಯಾ

ನಿಮ್ಮ ಹೋರಾಟದಲ್ಲಿ ಗೆಲುವನ್ನು ಸಾಧಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಕಂಡುಬರಲಿದೆ. ವಿಪರೀತ ಶ್ರಮದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಕಂಡುಬರುತ್ತಿದೆ.

ತುಲಾ

ಸ್ವಂತ ಉದ್ಯೋಗಿಗಳು, ನೌಕರ ವರ್ಗದವರಿಗೆ ಅತ್ಯಂತ ಕಾರ್ಯಬಾಹುಳ್ಯ ಕಡಿಮೆಯಾಗಿ ಸಂತಸದ ದಿನವಾಗಲಿದೆ. . ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿ ಪ್ರಗತಿಗೆ ದಾರಿಯಾಗುವುದು.

ವೃಶ್ಚಿಕ

ದಿನದ ಆರಂಭದಲ್ಲಿ ಒತ್ತಡದಿಂದಾಗಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಕೊನೆಯಲ್ಲಿ ಎಲ್ಲವೂ ನಿರಾಳವಾಗಿ ಶಾಂತಿ ನೆಲೆಸುವುದು. ಭೂ ವ್ಯವಹಾರದಲ್ಲಿ ಮನಸ್ತಾಪ ನಿವಾರಣೆಯಾಗಲಿದೆ.

ಧನು

ಸುಗಮ ಕೆಲಸ ಕಾರ್ಯಗಳಿಂದಾಗಿ ನೆಮ್ಮದಿ ಹೊಂದುವಿರಿ. ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುವುದು. ಅನಾವಶ್ಯಕ ಖರ್ಚು ತಲೆದೋರುವ ಸಾಧ್ಯತೆ.

ಮಕರ

ನಿರೀಕ್ಷೆಯಂತೆ ಕೆಲಸಕಾರ್ಯಗಳು ನಡೆದು ಮಾನಸಿಕ ನೆಮ್ಮದಿ ದೊರಕುವುದು. ಪ್ರೀತಿಪಾತ್ರರೊಂದಿಗೆ ಸಮಾಲೋಚನೆ. ಒಪ್ಪಂದದ ಹಣಕಾಸು ವ್ಯವಹಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ.

ಕುಂಭ

ವಿರೋಧಿಗಳ ಒತ್ತಡವಿದ್ದರೂ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ವ್ಯವಹಾರಗಳಲ್ಲಿ ಲಾಭದ ನಿರೀಕ್ಷೆ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆ.

ಮೀನ

ಕೆಲಸಕಾರ್ಯಗಳಲ್ಲಿ ತೋರುವ ಆಲಸ್ಯದಿಂದಾಗಿ ವೈಫಲ್ಯ ಅನುಭವಿಸುವಿರಿ. ಗ್ರಾಹಕರೊಂದಿಗೆ ಮನಸ್ತಾಪದ ಸಾಧ್ಯತೆ ಇರುವುದರಿಂದ ಸಂಯಮವನ್ನು ರೂಢಿಸಿಕೊಳ್ಳಿ.

ಇಂದಿನ ಔಷಧೀಯ ಸಸ್ಯದ ಪರಿಚಯ : ಬಿಲ್ವ ವೃಕ್ಷ

ಮಹಾವೃಕ್ಷ(ಬಿಲ್ವ ವೃಕ್ಷ) ಶಿವಧೃಮ ಅತಿ ಮಂಗಲ ಲಕ್ಷ್ಮಿ ಫಲ ಸತ್ಯ ಫಲ ಸದಾ ಫಲ ಶ್ರೀ ಫಲ ಬಿಲ್ವ ವಿಲ್ವಂ ಬಿಲ್ವಮು ಮಾರೆಡು ಚೆಟ್ಟು ಬಿಲ್ವ ನಿಲಯ ಶಾಂಡಿಲ್ಯ ಎಂಬ ಹೆಸರುಗಳಿಂದ ಕರೆಯುತ್ತಾರೆ. ಮಹಾ ಶಿವನಿಗೆ ತುಂಬಾ ಇಷ್ಟವಾದದ್ದು ಬಿಲ್ವ ಪತ್ರೆ.ಇದರ ಮೂರು ಎಲೆಗಳು ಶಿವನ ಮೂರು ಕಣ್ಣುಗಳೆಂದು ಭಕ್ತರ ನಂಬಿಕೆ.ಧಾರ್ಮಿಕರ ದೃಷ್ಟಿಯಲ್ಲಿ ಬಿಲ್ವಕ್ಕೆ ಪರಮ ಪವಿತ್ರವಾದ ಸ್ಥಾನವಿದೆ.ದೇಶಾದಂತ್ಯ ಇರುವ ಎಲ್ಲಾ ಶಿವಾಲಯಗಳಲ್ಲಿ ಬಿಲ್ವ ವೃಕ್ಷ ಇರುವುದನ್ನು ಕಾಣಬಹುದು....! ಮಹಾ ಶಿವನನ್ನು ಎಷ್ಟು ಶ್ರದ್ಧ ಭಕ್ತಿಯಿಂದ ಪೂಜಿಸುತ್ತಾರೋ, ಅಷ್ಟೇ ಭಕ್ತಿಯಿಂದ ಬಿಲ್ವ ವೃಕ್ಷವನ್ನು ಆರಾಧಿಸುತ್ತಾರೆ. ಭಾರತೀಯ ಆಯುರ್ವೇದ ಪಾರಂಪರಿಕ ವೈದ್ಯ ಶಾಸ್ತ್ರದಲ್ಲಿಯೂ ಬಿಲ್ವ ವೃಕ್ಷ, ಅಪೂರ್ವವಾದ ಔಷಧೀಯ ಗುಣಗಳನ್ನು ಹೊಂದಿರುವ ವೃಕ್ಷವೆಂದು ಪರಿಗಣಿಸಲ್ಪಟ್ಟಿದೆ.ಅದರಿಂದಲೇ ಪಂಡಿತರು ಇದನ್ನು ಮಹಾ ವೃಕ್ಷವೆಂದು ಕರೆದಿದ್ದಾರೆ. ಬಿಲ್ವ ವೃಕ್ಷವು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ನ್ನು ತ್ವರಿತ ಗತಿಯಲ್ಲಿ ಹೀರಿಕೊಂಡು,ಅಷ್ಟೇ ತ್ವರಿತವಾಗಿ ಎರಡು ಪಟ್ಟು ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತೆ. ಪುರಾತನ ಶಿವನ ದೇವಾಲಯಗಳ ಗರ್ಭ ಗುಡಿಗಳಲ್ಲಿ ಕಿಟಕಿಯಾಗಲಿ,ಗವಾಕ್ಷಿಯಾಗಲಿ ನಿರ್ಮಿಸದೆ ಇರುವುದನ್ನು ನಾವು ಈಗಲೂ ಕಾಣಬಹುದು....! ಅಲ್ಲಿ ಗಾಳಿ ಬೆಳಕಿನ ಕೊರತೆ ಬಹಳಷ್ಟು ಇದ್ದು, ಅದನ್ನ ಬಿಲ್ವ ಪತ್ರೆ ನೀಗಿಸುತ್ತೆ ಅಂದರೆ ಅಚ್ಚರಿ ಅಲ್ಲವೇ....! ಮಹಾದೇವನಿಗೆ ಅರ್ಚನೆ ಮಾಡಿ ಅರ್ಪಿಸಿದ ಬಿಲ್ವ ಪತ್ರೆ ಎಲೆಗಳು ಐದಾರು ದಿನಗಳಾದರೂ ತಾಜಾತನದಿಂದ ಕೂಡಿರುತ್ತವೆ....! ಬೇರೆ ಯಾವ ಪಾತ್ರೆಯು ಇಷ್ಟು ದಿನಗಳ ಕಾಲ ತಾಜಾತನದಿಂದ ಇರುವುದಿಲ್ಲ.ಅದುವೇ ಬಿಲ್ವ ಪತ್ರೆಯ ವಿಶೇಷ....! ಬಿಲ್ವ ವೃಕ್ಷದ ಎಲೆ ಹೂವು ಕಾಂಡ ಕಾಯಿ ಹಣ್ಣು ಬೇರು ಎಲ್ಲವೂ ಔಷಧೀಯ ಗುಣಗಳಿಂದ ಕೂಡಿದ್ದು ಎಲ್ಲವೂ ಮಾನವರಿಗೆ ಶ್ರೇಯಸ್ಸುನ್ನು ಉಂಟು ಮಾಡಬಲ್ಲದು ಎಂಬುದನ್ನು ಪ್ರಾಯೋಗಿಕವಾಗಿ ಅರಿತುಕೊಂಡಿದ್ದ ಋಷಿಗಳು ಇದನ್ನು "ಸರ್ವತೋಭದ್ರ"ಎಂದು ಕರೆದಿದ್ದಾರೆ.ಆದ್ದರಿಂದಲೇ ಅನೇಕರು ಪ್ರಮುಖ ಧಾರ್ಮಿಕ ಕಾರ್ಯಗಳಲ್ಲಿ ಬಿಲ್ವದ ಬಳಕೆಯಾಗಲೇ ಬೇಕು ಎಂದಿದ್ದಾರೆ.ಮಹಾ ರುದ್ರನ ಪೂಜೆಯಲ್ಲಿ ಬಿಲ್ವ ಪತ್ರೆಗಿರುವ ಪ್ರಾಮುಖ್ಯತೆ ಇದಕ್ಕೊಂದು ಉದಾಹರಣೆ.ಶಿವನಿಗೂ ಬಿಲ್ವ ಪತ್ರೆಗೂ ಒಂದು ರೀತಿಯ ಅವಿನಾಭಾವ ಸಂಭಂದವನ್ನು ರೂಪಿಸಿದ್ದಾರೆ.ಬಿಲ್ವ ಪತ್ರಾರ್ಚನೆಯಿಂದ ಶಿವಾನುಗ್ರಹ ಪ್ರಾಪ್ತಿಯಾಗುವುದು ಎಂಬುವುದು ಪ್ರಚಲಿತ ಗಾಢ ನಂಬಿಕೆ ಭಕ್ತರಲ್ಲಿ....! ಇದರ ಎಲೆಗಳು ಸುವಾಸನೆಯಿಂದ ಕೂಡಿದ್ದು,ಇದರ ಕಷಾಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಲ್ಲದೆ, ದೇಹವನ್ನು ತಂಪಾಗಿಸುತ್ತೆ. ಬಿಲ್ವದ ಹಣ್ಣನ್ನು ಬೆಂಬೂದಿಯಲ್ಲಿ(ಬೆಂಕಿ ಆರಿದ ಬಿಸಿ ಬೂದಿ) ಮುಚ್ಚಿಟ್ಟಿದ್ದು, ಕೆಲ ಸಮಯದ ನಂತರ ತೆಗೆದು, ಹಣ್ಣಿನ ಒಳ ಭಾಗದ ತಿರುಳನ್ನು ನುಣ್ಣಗೆ ಅರೆದು ತಲೆಗೆ ಲೇಪನ ಮಾಡಿಕೊಂಡರೆ, ಅದರಲ್ಲಿನ ಹೆಚ್ಚಿನ "ಪೆನಿಸಿಲಿನ್" ಅಂಶದ ಕಾರಣದಿಂದ ಮುನುಷ್ಯನ ದೇಹದಲ್ಲಿ ಅವರಿಗರಿವಿಲ್ಲದಯೇ ಮನೆ ಮಾಡಿಕೊಂಡಿರುಬಹುದಾದ ಅನೇಕ ಕಾಯಿಲೆಗಳು ನಿವಾರಣೆಯಾಗುವುವು.ಈ ರೀತಿಯಾಗಿ ನಿತ್ಯವೂ ತಲೆಗೆ ಲೇಪನ ಮಾಡಿಕೊಳ್ಳುವುದು ಸರ್ವೋತ್ಕೃಷ್ಟವಾಗಿದೆ.ಇದರಿಂದ ಕಣ್ಣುಗಳ ದೃಷ್ಠಿ ಉತ್ತಮಗೊಳ್ಳುವುದು, ಮುಖ ವಿಶಿಷ್ಟ ತೇಜಸ್ಸಿನಿಂದ ಕಂಗೊಳಿಸುವುದು.ಮತ್ತು ಮಾನಸಿಕ ಶಕ್ತಿಯು ವಿಶೇಷವಾಗಿ ಅಭಿವೃದ್ಧಿ ಹೊಂದುವುದು.ಇಷ್ಟೇ ಅಲ್ಲದೆ ಶರೀರವು ರೋಗ ರಹಿತವಾಗುವುದು....! ಆದುದ್ದರಿಂದಲೇ ಬಿಲ್ವದ ಹಣ್ಣನ್ನು " ಸರ್ವ ರೋಗ ನಿವಾರಿಣಿ" ಎನ್ನಲಾಗಿದೆ.ಇದು ಮಾನವರ ಪಾಲಿಗಂತೂ ಪ್ರಾಣಾಧಾರವಾದದ್ದು. ಬಿಲ್ವದ ಎಲೆಗಳ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಜ್ವರ ವಾಸಿಯಾಗುತ್ತೆ ಹಾಗೂ ಕರಳು ಹಾಗೂ ಹೊಟ್ಟೆಯಲ್ಲಿನ ಹುಣ್ಣನ್ನು ಗುಣಪಡಿಸುತ್ತೆ. ಬಿಲ್ವದ ಕಾಯಿಯ ತಿರಳನ್ನು ಮಜ್ಜಿಗೆಯಲ್ಲಿ ಕಲಸಿ ಸೇವಿಸಿದರೆ ಪೈಲ್ಸ್ ನಿವಾರಣೆಯಾಗುತ್ತೆ.ಹಣ್ಣನ್ನು ಸೇವಿಸಿದರೆ ಮಲಬದ್ಧತೆ ಸಹಾ ನಿವಾರಣೆಯಾಗುತ್ತೆ. ಬಿಲ್ವದ ಎಲೆಗಳ ಕಷಾಯ ಬಾಯಲ್ಲಿ ಕುಪ್ಪಳಿಸುತ್ತಿದ್ದರೆ ಬಾಯಿ ಹುಣ್ಣು ವಾಸಿಯಾಗುತ್ತೆ, ದುರ್ವಾಸನೆ ದೂರವಾಗುತ್ತೆ. ದಿನವು ಬೆಳಿಗ್ಗೆ ಸಂಜೆ 1 ಚಮಚದಂತೆ ಎಲೆಯ ರಸ ಸೇವಿಸುತ್ತಿದ್ದರೆ ಮಧುಮೇಹ ಶೀಘ್ರ ಅತೋಟಿಗೆ ಬರುತ್ತೆ. (ಆಯುರ್ವೇದ ಪಂಡಿತರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ.) ಬಿಲ್ವದ ಬಗ್ಗೆ ಹೇಳಲು ಪದ ಭಂಡಾರವೇ ಸಾಕಾಗುವುದಿಲ್ಲ....! ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ.ವಂದನೆಗಳು

ಜುಲೈ 04, 2020; ಶನಿವಾರ :ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಬೆಳಗ್ಗೆ 11:36 ನಂತರ ಪೌರ್ಣಿಮೆ,
ಶನಿವಾರ, ಮೂಲಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:15 ರಿಂದ 10:51
ಗುಳಿಕಕಾಲ: ಬೆಳಗ್ಗೆ 6:03 ರಿಂದ 7:39
ಯಮಗಂಡಕಾಲ: ಮಧ್ಯಾಹ್ನ 2:01 ರಿಂದ 3:39

ಮೇಷ

ಸ್ವಲ್ಪಮಟ್ಟಿನ ಕಿರಿಕಿರಿಯಾದರೂ ಕೆಲಸಗಳಲ್ಲಿ ಯಶಸ್ಸು. ಕಚೇರಿ ಕೆಲಸಗಳಲ್ಲಿ ಪ್ರಗತಿ. ಸ್ಥಿರ ಆಸ್ತಿ, ಆಭರಣಾದಿಗಳನ್ನು ಕೊಳ್ಳಲು ಅನುಕೂಲ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯ ತಲೆದೋರಬಹುದು.

ವೃಷಭ

ಲವಲವಿಕೆಯ ದಿನವಾಗಿದೆ. ಸಂತಸ ಮನೆಮಾಡಲಿದೆ. ಕುಟುಂಬ ಸಮೇತ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಮಂಗಳಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಆದಾಯದ ಮೂಲವನ್ನು ಕಂಡುಕೊಳ್ಳುವಿರಿ.

ಮಿಥುನ

ಸರ್ಕಾರಿ ಅಧಿಕಾರಿಗಳಿಗೆ ಇಂದು ಬಿಡುವಿಲ್ಲದ ದಿನವಾಗಿದೆ. ಇಡೀ ದಿನ ದಣಿವರಿಯದ ಕೆಲಸ ಎದುರಾಗಲಿದೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಕೃಷಿ ಕಾರ್ಯಗಳಲ್ಲಿ ಪ್ರಗತಿ ಕಾಣುವಿರಿ.

ಕಟಕ

ಸಹೋದ್ಯೋಗಿಗಳೊಂದಿಗೆ ಹಿತ ಮಿತವಾಗಿ ಮಾತನಾಡುವುದು ಒಳಿತು. ಮಾತಿನಿಂದಾಗಿ ವಿರಸ ಕಟ್ಟಿಕೊಳ್ಳುವ ಸಾಧ್ಯತೆ. ಕೆಲಸಗಳಲ್ಲಿ ಯಶಸ್ಸು. ಸಂಜೆಯ ವೇಳೆಗೆ ದೇಹಾಲಸ್ಯ ಉಂಟಾಗುವ ಲಕ್ಷಣಗಳು.

ಸಿಂಹ

ಮಿತ್ರರಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆ. ದಿನವಿಡಿ ಒತ್ತಡದಿಂದಲೇ ಕೆಲಸ ಕಾರ್ಯಗಳನ್ನು ನಿಭಾಯಿಸಬೇಕಾದೀತು. ಮಕ್ಕಳ ಪ್ರಗತಿಯಿಂದಾಗಿ ಸಂತಸ. ಪ್ರಶಂಸೆಯ ಮಾತುಗಳನ್ನು ಕೇಳುವಿರಿ.

ಕನ್ಯಾ

ಲೇವಾದೇವಿ ವ್ಯಾಪಾರಿಗಳಿಗೆ/ ಭೂ ವ್ಯವಹಾರ ನಡೆಸುವವರಿಗೆ ಅತ್ಯಂತ ಲಾಭ ತರುವ ದಿನ. ಪಾಲುಗಾರಿಕೆ ವ್ಯವಹಾರದಲ್ಲಿ ವಿರಸ ಕಂಡುಬರಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ.

ತುಲಾ

ಹೊಸ ಆಸ್ತಿ ಖರೀದಿಗೆ ಮುಂದಾಗುವಿರಿ. ಹೊಸ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯೂ ಕಂಡುಬರುತ್ತಿದೆ. ಜನಪ್ರತಿನಿಧಿಗಳಿಗೆ ಮುಖಭಂಗವಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.

ವೃಶ್ಚಿಕ

ಕೃಷಿ ಉತ್ಪನ್ನಗಳಿಂದ ಉತ್ತಮ ಲಾಭ ಗಳಿಸುವಿರಿ. ಬೇರೆಯವರ ಸಹಕಾರದಿಂದ ಅನುಭವಿಸುತ್ತಿರುವ ತೊಂದರೆ ನಿವಾರಣೆಯಿಂದಾಗಿ ನೆಮ್ಮದಿ ಹೊಂದಲಿದ್ದೀರಿ. ದೂರದ ಪ್ರಯಾಣ ಮಾಡದಿರುವುದು ಉತ್ತಮ.

ಧನು

ಮನೆಯವರ ಆರೋಗ್ಯದಲ್ಲಿ ವ್ಯತ್ಯಯ. ಉತ್ತಮ ಕಾರ್ಯಗಳಿಂದಾಗಿ ಅಪರೂಪದ ವ್ಯಕ್ತಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಮಂಗಳ ಕಾರ್ಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವಿರಿ.

ಮಕರ

ವ್ಯಾಪಾರಿಗಳು ಗಣನೀಯ ಪ್ರಮಾಣದಲ್ಲಿ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಕೃಷಿಕರು, ಕೃಷಿ ಕಾರ್ಮಿಕರಿಗೆ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಸಂಬಂಧಿಕರಿಂದ ಸಂತಸದ ಸಂದೇಶ ಕೇಳಲಿದ್ದೀರಿ.

ಕುಂಭ

ಕೌಟುಂಬಿಕ ಸಾಮರಸ್ಯಕ್ಕಾಗಿ ಚಿಂತಿತರಾಗುವ ಸಾಧ್ಯತೆ. ಸಕಾಲದಲ್ಲಿ ಮಿತ್ರರ ಸಹಕಾರದಿಂದಾಗಿ ನೆಮ್ಮದಿ ಮೂಡಿಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗವು ದೊರಕಿ ಭದ್ರತೆ ಮೂಡಿಬರಲಿದೆ.

ಮೀನ

ನಿವೇಶನ ಖರೀದಿ ಸಾಧ್ಯತೆ. ವಸ್ತ್ರ ವ್ಯಾಪಾರಿಗಳಿಗೆ ವಿಶೇಷ ಲಾಭ. ಬಡ್ಡಿ ವ್ಯವಹಾರದಿಂದಾಗಿ ಮಾನ ಹಾನಿ. ಅಧಿಕಾರಿಗಳಿಂದ ಕಿರಿಕಿರಿ. ಗುರು ಆರಾಧನೆಯಿಂದ ಬಂದ ತೊಂದರೆಗಳು ನಿವಾರಣೆಯಾದೀತು.

ಇಂದಿನ ಔಷಧೀಯ ಸಸ್ಯದ ಪರಿಚಯ : ಭೃಂಗರಾಜ

ಭೃಂಗರಾಜ
ಕೇ’ಶರಾಜ್ ಕೇಶರಂ’ಜನ್ ಭಂಗ್ರ ಪಿವಳಾ ಭಾಂಗ್ರಾ ಗ’ರುಗದ ಸೊಪ್ಪು ಕಾಡಿಗೆ ಸೊಪ್ಪು ಗುಂ’ಟಗಲಗರ ಆಕು ಕಾ’ಟುಕ ಆಕು ಕರಿಸಾಲೈ ಕ’ರಿಯಸಾಲೈ ಕರಿಕಾ ಕ’ರ್ಪತಳೆ ಎಂಬ ಹೆ’ಸರುಗಳಿಂದ ಕರೆಯುತ್ತಾರೆ.
ಈ ಗಿಡವು ಸದಾ ನೀರು ಹರಿಯುವ ಕಾಲುವೆಗಳು ತೋಟ ಗದ್ದೆಗಳ ಬದಿಗಳ ಮೇಲೆ ತೇವಾಂಶ ಇರುವ ಭೂಮಿಯಲ್ಲಿ ಕೆರೆ ಕುಂಟೆಗಳ ಪಕ್ಕ ಬೆಳೆಯುತ್ತೆ. ಇದರಲ್ಲಿ ಬಿಳಿ ಹೂ ಹಾಗೂ ಅರಸಿಣ ಹೂ ಬಿಡುವ ಎರಡು ಪ್ರಭೇದಗಳಿವೆ. ಬಿಳಿ ಹೂ ಬಿಡುವ ಗಿಡಗಳು ಹೆಚ್ಚಾಗಿ ಕಂಡರೆ ಅರಸಿಣ ಹೂ ಬಿಡುವ ಗಿಡಗಳು ಅಪರೂಪವಾಗಿ ಕಾಣುತ್ತವೆ.
ಈ ಸಸ್ಯವನ್ನು ತಲೆ ಕೂದಲಿಗೆ ಹಾಕುವ ಬಣ್ಣಗಳ ತಯಾರಿಸಲು ವಿಶೇಷವಾಗಿ ಬಳಕೆ ಮಾಡುವುದರಿಂದ, ಈ ಗಿಡವು ಬಾರಿ ಬೇಡಿಕೆ ಪಡಿದುಕೊಂಡಿದೆ.
ಈ ಗಿಡದ ಎಲೆಗಳನ್ನು ಅಂಗೈಗೆ ತಿಕ್ಕಿದ ಕೂಡಲೆ ಅಂಗೈ ಕಪ್ಪಾಗುತ್ತಾದೆ.ಪೂರ್ವಿಕರು ಈ ಗಿಡದಿಂದ ಕಣ್ಣಿಗೆ ಹಚ್ಚುವ ಕಾಡಿಗೆ ತಯಾರಿಸುತ್ತಿದ್ದರು ಆದ್ದರಿಂದ ಇದನ್ನು ಕಾಡಿಗೆ ಗಿಡ ಎಂತಲೂ ಕರೆಯುತ್ತಿದ್ದರು.
ಒಂದು ಕಪ್ಪು ಗರುಗದ ಸೊಪ್ಪಿಗೆ ಮೂರು ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಲಾಬತ್ತಿನಲ್ಲಿ ನುಣ್ಣಿಗೆ ಅರೆದು ಸಣ್ಣಸಣ್ಣ ಗೋಲಿಗಳಂತೆ ಮಾಡಿ ನೆರಳಲ್ಲಿ ಒಣಗಿಸಿಟ್ಟುಕೊಂಡು ಬೆಳಿಗ್ಗೆ ಸಂಜೆ ಹೊಟ್ಟೆಗೆ ತೆಗೆದುಕೊಂಡರೆ, ಪಾಂಡುರೋಗ ಕಾಮಾಲೆ ಕಫ ಕೆಮ್ಮು ನೆಗಡಿ ವಾತ ಪಿತ್ತ ಚಳಿ ಜ್ವರ ವಾಸಿಯಾಗುತ್ತೆ.ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ಅಜೀರ್ಣಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಧಿಗಳು ಗುಣವಾಗುತ್ತೆ.
ತಲೆನೋವು ಇದ್ದಾಗ ಇದರ ಎಳೆಗಳ ರಸವನ್ನು ಮೂರ್ನಾಲ್ಕು ತೊಟ್ಟು ಮೂಗಿಗೆ ಬಿಟ್ಟರೆ ಶಮನವಾಗುತ್ತೆ.ಸದಾ ಮೂಗಿನಲ್ಲಿ ನೀರು ಸುರಿಯುತ್ತಿದ್ದರೆ ಹಿಂದಿಂದೆ ತುಮ್ಮುಗಳು ಬರುತ್ತಿದ್ದರೆ ಮೇಲಿನ ರೀತಿ ಮಾಡಿದರೆ ವಾಸಿಯಾಗುತ್ತೆ.
ಒಂದು ಲೋಟ ನೀರಿಗೆ ಒಂದು ಹಿಡಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ ಉಗರು ಬೆಚ್ಚಗಾದಾಗ ಮೂರು ಚಮಚ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ಕಫದ ಸಮಸ್ಯೆ ದೂರವಾಗುತ್ತೆ.ಎರಡು ಚಮಚ ರಸಕ್ಕೆ ಚಿಟಿಕೆ ಉಪ್ಪು ಸೇರಿಸಿ ಸೇವಿಸಿದರೆ ಹೊಟ್ಟೆನೋವು ವಾಸಿಯಾಗುತ್ತೆ.
ಒಂದು ಲೋಟ ಹಸುವಿನ ಹಾಲಿನಲ್ಲಿ ಎರಡು ಚಮಚ ಎಲೆಗಳ ರಸ ಕಲಸಿ ಸೇವಿಸುತ್ತಾ ಬಂದರೆ ಶ್ವಾಸಕೋಶಕ್ಕೆ ಬಲ ಬರುತ್ತೆ, ಹೆಂಗಸರಿಗೆ ಗರ್ಭಶ್ರಾವವಾಗದಂತೆ ತಡೆಯುತ್ತೆ.
ಬಾಯಿ ಹುಣ್ಣಾದಾಗ ಇದರ ನಾಲ್ಕೈದು ಎಲೆಗಳನ್ನು ಜಗೆದು ನುಂಗಿದರೆ ಶೀಘ್ರ ಗುಣ ಕಾಣುತ್ತೆ.ಚರ್ಮ ವ್ಯಾಧಿಗಳು ಸಹ ವಾಸಿಯಾಗುತ್ತೆ. ಭೃಂಗರಾಜ ಹೇರಾಯಿಲ್ ತಯಾರಿಸುವ ವಿಧಾನ

ಗರುಗದ ಸೊಪ್ಪು1ಕಪ್ಪು
ಕರಿಬೇವು 1/2 ಕಪ್ಪು
ಒಳ್ಳೆ ಬೇವಿನ ಸೊಪ್ಪು 1/4 ಕಪ್ಪು
ಕಲಬಂಧ (ಅಲೋವೆರಾ) 3/4 ಕಪ್ಪು
ಸಣ್ಣ ಈರುಳ್ಳಿ 10 ರಿಂದ 12
ಬೀಜ ತೆಗೆದ ಬೆಟ್ಟದ ನೆಲ್ಲಿ 6 ರಿಂದ 8
ಮೊಳಕೆ ಕಟ್ಟಿದ ಮೆಂತ್ಯ 1/4 ಕಪ್ಪು
ಬಿಳಿ ಅಥವಾ ಕೆಂಪು ದಾಸವಾಳದ ಹೂವುಗಳು 5
(ಪರಾಗ ಬಿಟ್ಟು ದಳಗಳು ಮಾತ್ರ)
ಎಲ್ಲವನ್ನು ತರಿತರಿಯಾಗಿ ಅರೆದು ಆಮೇಲೆ ಸ್ವಲ್ಪ ಮದರಂಗಿ (ಗೋರಂಟಿ) ಎಲೆಗಳು ಸೇರಿಸಿ ಅರೆದು ಒಂದು ಬಾಂಡ್ಲಿಯಲ್ಲಿ ಹಾಕಿ ಒಂದು ಲೀಟರ್ ಶುದ್ಧವಾದ ಕೊಬ್ಬರಿ ಎಣ್ಣೆ ಸುರಿದು ಚೆನ್ನಾಗಿ ಕಲಸಿ 6 ಲವಂಗ ಸೇರಿಸಿ ಒಲೆಯ ಮೇಲಿಟ್ಟು ಮಂದದುರಿಯಲ್ಲಿ 15 ರಿಂದ 20 ನಿಮಿಷ ಕುದಿಸಬೇಕು.(ಮಿಶ್ರಣ ಚೆನ್ನಾಗಿ ಬೆಂದು ಎಣ್ಣೆ ಪಕ್ವವಾಗಿದ್ದರೆ ಒಂದು ತೊಟ್ಟು ತಣ್ಣೀರು ಬಿಡುತ್ತಲೆ ಚಿಟಪಟ ಅನ್ನುತ್ತೆ, ಆಗ ಕೆಳಗಿಳಿಸಿ ಉಗರು ಬೆಚ್ಚಗಾದಾಗ ಎರಡು ಬಾರಿ ಸೋಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡರೆ ಒಂದು ವರ್ಷ ಕಾಲ ಕೆಡದೆ ಇರುತ್ತೆ)

ಎಣ್ಣೆಯ ಉಪಯೋಗಗಳು:-
ತಲೆ ಹೊಟ್ಟು(ಡ್ಯಾಂಡ್ರಫ್) ನವೆ ದೂರವಾಗುತ್ತೆ.ತಲೆಯ ನರಗಳಲ್ಲಿ ರಕ್ತ ಸಂಚಲನ ಸುಗುಮವಾಗಿ ಕೂದಲಿಗೆ ಪೌಷ್ಟಿಕಾಂಶ ಸಿಕ್ಕಿ ಆರೋಗ್ಯದಾಯಕ ಕೂದಲು ಕಪ್ಪಾಗಿ ಉದ್ದವಾಗಿ ಬೆಳೆಯುತ್ತೆ.ನೆರೆ ಕೂದಲು ಕಡಿಮೆಯಾಗುತ್ತದೆ.ಉದರಿದ ಕೂದಲು ಮತ್ತೆ ಮೊಳಕೆಯೊಡಿಯುತ್ತೆ.ನಿದ್ರಾಹೀನತೆ ದೂರವಾಗಿ ಸುಖನಿದ್ರೆ ಬರುತ್ತೆ.ಕಣ್ಣಿಗೆ ದೇಹಕ್ಕೆ ತಂಪು ನೀಡುತ್ತೆ.ಕೂದಲು ಬೆಳವಣಿಗೆಗೆ ಸಹಕಾರಿಯಾಗುತ್ತೆ.ಇದರಿಂದ ಬಾಡಿ ಮಸಾಜ್ ಮಾಡಿಕೊಂಡರೆ ಅನೇಕ ರೀತಿಯ ಚರ್ಮ ವ್ಯಾಧಿಗಳು ಗುಣವಾಗುತ್ತೆ.

ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು

ಜುಲೈ 03,2020; ಶುಕ್ರವಾರ : ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಧ್ಯಾಹ್ನ 1:18 ನಂತರ ಚರ್ತುದಶಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:51 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:39 ರಿಂದ 9:15
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:15

ಮೇಷ

ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಉತ್ತಮ ಲಾಭ. ದೇಹಾರೋಗ್ಯದ ಬಗ್ಗೆ ಸಂಗಾತಿಯ ಅತೀವ ಕಾಳಜಿಯಿಂದಾಗಿ ನೆಮ್ಮದಿ. ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ಕಾರ್ಯಸಿದ್ಧಿ.

ವೃಷಭ

ಕೆಲಸದಲ್ಲಿ ನೆಮ್ಮದಿ. ಆರ್ಥಿಕ ವಿಚಾರದಲ್ಲಿ ಏಕತಾನತೆ ಮೂಡಲಿದೆ. ಮಕ್ಕಳಲ್ಲಿ ವಿನಾಕಾರಣ ವಾದ ವಿವಾದಗಳು ಉಂಟಾಗುವ ಸಾಧ್ಯತೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.

ಮಿಥುನ

ಸಾಮಾಜಿಕ ಕ್ಷೇತ್ರಗಳಲ್ಲಿ ವಿಶೇಷ ಮನ್ನಣೆಯೊಂದಿಗೆ ಸನ್ಮಾನಗಳು ಪ್ರಾಪ್ತವಾಗಲಿವೆ. ಕೆಲಸದಲ್ಲಿನ ಅತಿಯಾದ ಒತ್ತಡ ನಿವಾರಣೆಯಾಗಿ ಬಿಡುವು ದೊರೆಯಲಿದೆ. ಗ್ರಂಥ ಪಠಣಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.

ಕಟಕ

ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಅವಕಾಶದೊಂದಿಗೆ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಸಹೋದರರೊಂದಿಗೆ ಹೊಸ ವ್ಯಾಪಾರ ಆರಂಭಿಸುವುದರಿಂದ ಯಶಸ್ಸು.

ಸಿಂಹ

ಹಿರಿಯ ಉದ್ಯೋಗಿಗಳಾಗಿರುವವರು ದೇಹಾಲಸ್ಯದಿಂದಾಗಿ ಕಾರ್ಯಬಾಹುಳ್ಯವನ್ನು ಬೇರೆಯವರಿಗೆ ವರ್ಗಾಯಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವಿನಿಯೋಗ ಮಾಡಲಿದ್ದೀರಿ.

ಕನ್ಯಾ

ಪುಷ್ಪೋದ್ಯಮದಲ್ಲಿ ತೊಡಗಿದವರಿಗೆ ವಿಶೇಷ ಬೇಡಿಕೆಯಿಂದಾಗಿ ಅಧಿಕ ಆದಾಯ. ಕೃಷಿ ಕಾರ್ಯಗಳಿಗಾಗಿ ಹೆಚ್ಚಿನ ಹಣ ಮತ್ತು ಸಮಯ ವಿನಿಯೋಗಿಸಲಿದ್ದೀರಿ. ಕಲಾತ್ಮಕ ವಿನ್ಯಾಸಗಾರರಿಗೆ ಮನ್ನಣೆ ದೊರಕಲಿದೆ.

ತುಲಾ

ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದರಿಂದ ನಿರ್ವಿಘ್ನವಾಗಿ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ.

ವೃಶ್ಚಿಕ

ಮಕ್ಕಳ ಶ್ರೇಯಸ್ಸಿಗಾಗಿ ಅಧಿಕಾರಿಗಳ ಮೊರೆ ಹೋಗಬೇಕಾದೀತು. ಗುತ್ತಿಗೆ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ. ಉದ್ಯೋಗ ಬದಲಾವಣೆಯ ಸಾಧ್ಯತೆ. ಮನೆಯಲ್ಲಿ ನೆಮ್ಮದಿ ಮೂಡಲಿದೆ.‌

ಧನು

ರಂಗ ಕಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಕೂಡಿಬರಲಿವೆ. ಕಾರ್ಯಕ್ರಮವೊಂದರ ನಿರೂಪಕರಾಗಿ ಕಾರ್ಯ ನಿರ್ವಹಿಸುವ ಅವಕಾಶ. ಮಿತ್ರರ ಸಹಕಾರವನ್ನು ಮರೆಯದಿರಿ.

ಮಕರ

ನಿರುದ್ಯೋಗಿಗಳಿಗೆ ಜಾಹೀರಾತು ಕಂಪನಿಗಳಲ್ಲಿ ಉತ್ತಮ ಅವಕಾಶ ದೊರಕಲಿದೆ. ದರ್ಜಿ, ಚಿನ್ನದ ಬೆಳ್ಳಿ ಕೆಲಸದಲ್ಲಿರುವವರು ಹೊಸ ವಿನ್ಯಾಸ ತಯಾರಿಕೆಯಿಂದಾಗಿ ಉತ್ತಮ ಲಾಭ ಗಳಿಸಲಿದ್ದೀರಿ.

ಕುಂಭ

ಕೆಲಸ–ಕಾರ್ಯಗಳು ಯಶಸ್ವಿಯಾಗಿ ನೆರವೇರಲಿವೆ. ವಾಹನ ಖರೀದಿಸುವ ಸಾಧ್ಯತೆ. ತಂತ್ರಜ್ಞಾನ ಬಳಕೆಯಿಂದ ಮತ್ತು ವ್ಯವಹಾರದಿಂದಾಗಿ ಅಧಿಕ ಲಾಭ ಗಳಿಸುವಿರಿ. ವಿಶೇಷ ವ್ಯಕ್ತಿಯೊಬ್ಬರ ಸಂಪರ್ಕವಾಗಲಿದೆ.

ಮೀನ

ಪೂಜೆ ಪುನಸ್ಕಾರಗಳನ್ನು ಮಾಡಲಿದ್ದೀರಿ. ಹಣ ಹೂಡಿಕೆಯ ವಿಷಯದಲ್ಲಿ ಸ್ನೇಹಿತ ಒತ್ತಾಯ ಎದುರಿಸಬೇಕಾದಿತು. ಹೆಣ್ಣುಮಕ್ಕಳು ತವರು ಮನೆಯವರಿಂದ ಉಡುಗೊರೆಗಳನ್ನು ಪಡೆದು ಸಂಭ್ರಮಿಸುವ ಸಾಧ್ಯತೆ.

ಇಂದಿನ ಔಷಧೀಯ ಸಸ್ಯದ ಪರಿಚಯ: ಅಂಜೂರ

ಫಲ್ಗು (ಅಂಜೂರ್) ಅಂಜೂರ ಹಣ್ಣಿನ ಗಿಡ,ಅಂಜೀರ್,ಅಂಜೂರಮು, ಅಂಜುರಂ,ಧೂಮರ್,ಅಂಜಿರ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅಂಜೂರದ ಗಿಡಗಳನ್ನು ಅನೇಕ ಕಡೆ ವಾಣಿಜ್ಯ ಬೆಳೆಯಾಗಿ ಬೆಳೆದು,ಅಧಿಕ ಲಾಭ ಗಳಿಸುತ್ತಿದ್ದಾರೆ. ಕೆಂಪು ಮಣ್ಣು ಅಂಜೂರ ಕೃಷಿಗೆ ಹೇಳಿ ಮಾಡಿಸಿದ

ಭೂಮಿ.ಹೊಲ ತೋಟಗಳ ಬದಿಗಳ ಮೇಲೆ ಸಹಾ ಬೆಳೆಸುವುದಲ್ಲದೆ,ಹಳ್ಳಿಗಳಲ್ಲಿ ಹಣ್ಣಿಗಾಗಿ ಮನೆಯ ಹಿತ್ತಲಲ್ಲೂ ಬೆಳೆಸುತ್ತಾರೆ.
ಅಂಜೂರವನ್ನು ನಮ್ಮ ಭಾರತ ದೇಶವಲ್ಲದೆ, ಆಫ್ಘಾನಿಸ್ತಾನ್,ನೇಪಾಳ,ಮಲೇಷಿಯಾ,ಇಂಡೋನೇಷಿಯಾ,ಬರ್ಮಾ,ಶ್ರೀಲಂಕಾ ದೇಶಗಳಲ್ಲೂ ಹೇರಳವಾಗಿ ಬೆಳೆಯುತ್ತಾರೆ.
ಅಂಜೂರದಲ್ಲಿ ಅಧಿಕವಾಗಿ ಕ್ಯಾಲರಿ,ಪ್ರೊಟೀನ್,ಪೊಟಾಸಿಯಂ,ಕ್ಯಾಲ್ಸಿಯಂ, ತಾಮ್ರ,ಕಬ್ಬಿಣಾಂಶ,ವಿಟಮಿನ್ ಗಳು,ಪೋಷಕಾಂಶ
ಗಳಿಂದ ಕೂಡಿದ್ದು,ಔಷಧಿಗಳ ಭಂಡಾರವೆ ತುಂಬಿದೆ.
ಅಂಜೂರ ಹಣ್ಣು ದೇಹಕ್ಕೆ ತುಂಬಾ ತಂಪು ನೀಡುತ್ತೆ.ಇದರ ಸೇವನೆಯಿಂದ, ಕಫ ಹಾಗೂ ರಕ್ತಪಿತ್ತವನ್ನು ದೂರ ಮಾಡುವುದಲ್ಲದೆ,
ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು
ಕರಗಿಸಿ ಹೊರ ಬರುವಂತೆ ಮಾಡುತ್ತೆ.
ಅಂಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಕೋಶದಲ್ಲಿನ ಕಲ್ಲು ಕರಗುತ್ತೆ.ದೇಹದಲ್ಲಿ ರಕ್ತ ಶುದ್ಧಿಯಾಗುವುದಲ್ಲದೆ
ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತೆ.
ಅಂಜೂರದ ಹಣ್ಣಿನ ಕಷಾಯ ಮಾಡಿ ಬಾಯಿ
ಮುಕ್ಕಳಿಸುತ್ತಿದ್ದರೆ, ಗಂಟಲು ನೋವು, ಬಾಯಿ ಹುಣ್ಣು, ಬಾಯಿ ದುರ್ವಾಸನೆ,ವಸಡು ನೋವು ನಿವಾರಣೆಯಾಗುತ್ತೆ.
ಅಂಜೂರದ ಎಲೆಗಳನ್ನು ತಂದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಸಂಜೆ ಸೇವಿಸುತ್ತಿದ್ದರೆ,
ಮಧುಮೇಹ ಅತೋಟಿಗೆ ಬರುವುದಲ್ಲದೆ .ಮೂತ್ರ ಕೋಶದಲ್ಲಿನ ಕಲ್ಲನ್ನು ಸಹಾ ಕರಗಿಸುತ್ತದೆ.ಕೆಮ್ಮು, ಅಸ್ತಮಾ ಗುಣವಾಗುತ್ತದೆ.ಕಣ್ಣಿನ ದೃಷ್ಟಿ ಹೆಚ್ಚುತ್ತೆ.ದೇಹದಲ್ಲಿನ ಮೂಳೆಗಳು
ಬಲಿಷ್ಠವಾಗುತ್ತವೆ. ಸಂತಾನವಿಲ್ಲದ ದಂಪತಿಗಳು ಅಂಜೂರದ ಹಣ್ಣನ್ನು ಸೇವಿಸುತ್ತಿದ್ದರೆ ಸಂತಾನ ಪ್ರಾಪ್ತಿಯಾಗುತ್ತೆ.

.ಎರಡು ಅಥವಾ ಮೂರು ಒಣಗಿದ ಅಂಜೂರವನ್ನು ರಾತ್ರಿ ನೀರಲ್ಲಿ ನೆನಸಿಟ್ಟು,ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು,ಒಂದು ಲೋಟ ಹಸುವಿನ ಹಾಲು ಕುಡಿದರೆ
ಲೈಂಗಿಕ ಬಲಹೀನತೆ ದೂರವಾಗುತ್ತೆ.
ಮೂರ್ನಾಲ್ಕು ಅಂಜೂರದ ಹಣ್ಣು,50 ಗ್ರಾಂ ಒಣದ್ರಾಕ್ಷಿ ಹಸುವಿನ ಹಾಲಿನಲ್ಲಿ ಚೆನ್ನಾಗಿ ಬೇಯಿಸಿ
ಸೇವಿಸುವುದರಿಂದ, ದೇಹದಲ್ಲಿ ರಕ್ತಶುದ್ದಿಯಾಗಿ,
ರಕ್ತ ವೃದ್ಧಿಯಾಗುತ್ತೆ.ಹೃದಯವನ್ನು ಆರೋಗ್ಯ
ವಾಗಿಡುತ್ತೆ.
ಅಂಜೂರದಲ್ಲಿ ನಾರಿನಾಂಶ ಹೇರಳವಾಗಿದ್ದು, ನಿಯಮಿತವಾಗಿ ಸೇವಿಸುತ್ತಿದ್ದರೆ,ಮಲಬದ್ಧತೆ ನಿವಾರಣೆಯಾಗುತ್ತೆ.
ಅಂಜೂರದ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳು ದೂರವಾಗಿ, ದೇಹಕ್ಕೆ ಹೊಸ
ಚೈತನ್ಯ ನೀಡುತ್ತೆ.ಥೈರಾಯ್ಡ್ ಸಮಸ್ಯೆ ಸಹಾ
ದೂರವಾಗುತ್ತೆ.ಮುಖದಲ್ಲಿ ಮೊಡವೆಗಳು ನಿವಾರಣೆಯಾಗಿ, ಮುಖದಲ್ಲಿ ಕಾಂತಿ ಹೆಚ್ಚಾಗುತ್ತೆ.
ಅಂಜೂರದ ಹಣ್ಣುಗಳು ನಿಯಮಿತವಾಗಿ
ಸೇವಿಸುತ್ತಿದ್ದರೆ ರಕ್ತಹೀನತೆ ದೂರವಾಗಿ,ಸ್ತ್ರೀಯರಲ್ಲಿ
ಅಂಡಾಣು,ಪುರುಷರಲ್ಲಿ ವೀರ್ಯಾಣು ವೃದ್ಧಿಸಿ ಸಂತಾನ ಪ್ರಾಪ್ತಿಯಾಗುತ್ತೆ.
ಅಂಜೂರ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ ಮಧುಮೇಹ ಅತೋಟಿಗೆ
ಬರುತ್ತೆ.ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಿಸುತ್ತದೆ.
ಅಂಜೂರವನ್ನು ಪೌಷ್ಠಿಕಾಂಶಗಳ ಗಣಿ ಅಂದರೆ ತಪ್ಪಾಗಲಾರದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು

ರಸ್ತೆ ಅ’ಪಘಾತದಲ್ಲಿ ಸಂ’ತ್ರಸ್ಥರಾದವರಿಗಾಗಿ ಹೊಸ ಯೋಜನೆ

ಪ್ರತಿ ವರ್ಷ ರಸ್ತೆ ಅ’ಪಘಾತದಲ್ಲಿ ಸುಮಾರು ಒಂ’ದೂವರೆ ಲಕ್ಷ ಜನರು ತಮ್ಮ ಪ್ರಾಣ ಕ’ಳೆದುಕೊಳ್ಳುತ್ತಾರೆ ಹಾಗೂ ಮೂರು ಲಕ್ಷಕ್ಕೂ ಅಧಿಕ ಮಂದಿ ಕೈ ಕಾಲು ಕ’ಳೆದುಕೊಳ್ಳುತ್ತಿದ್ದಾರೆ. ಇಂತವರಿಗೊಂದು ಮಹತ್ವದ ಯೋ’ಜನೆಯನ್ನು ಜಾ’ರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ.

ಹೌದು, ಶೀ^ಘ್ರದಲ್ಲಿಯೇ ನಗದು ರಹಿತ ಚಿಕಿತ್ಸಾ ಸೌಲಭ್ಯ ಆ’ರಂಭಿಸಲು ಸರ್ಕಾರ ಮುಂದಾಗಿದೆ. ನಗದು ರಹಿತ ಚಿಕಿತ್ಸೆಗಾಗಿ ಮೋ’ಟಾರು ವಾಹನ ಅ’ಪಘಾತ ನಿಧಿಯನ್ನು ರಚನೆ ಮಾಡಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸ’ಚಿವಾಲಯ ತಿಳಿಸಿದೆ.

ರಸ್ತೆ ಅ’ಪಘಾತಕ್ಕೆ ಒ’ಳಗಾದವರಿಗೆ ಆಘಾತ ಮತ್ತು ಆರೋಗ್ಯ ಸೇವೆಗಳಿಗೆ ಬ್ಯಾಂಕ್ ಖಾ’ತೆಯ ಮೂಲಕ ಹ’ಣಕಾಸು ಸಹಾಯ ಮಾಡಲಾಗುತ್ತದೆ. ಈ ಯೋ’ಜನೆಯಡಿಯಲ್ಲಿ ಗರಿಷ್ಟ 2.5 ಲಕ್ಷ ರೂಪಾಯಿ ಚಿಕಿತ್ಸೆ ಪ’ಡೆಯಬಹುದಾಗಿದೆ. ಇದನ್ನು MORTH ಅಡಿಯಲ್ಲಿ ಅ’ನುಷ್ಠಾನ ಮಾಡಲಾಗುವುದು ಎಂದು ತಿಳಿಸಿದೆ.

ಜುಲೈ 02,2020 ;ಗುರುವಾರ: ಇಂದಿನ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಮಧ್ಯಾಹ್ನ 3:17 ನಂತರ ತ್ರಯೋದಶಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:03 ರಿಂದ 3:39
ಗುಳಿಕಕಾಲ: ಬೆಳಗ್ಗೆ 9:15 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:02 ರಿಂದ 7:39

ಮೇಷ

ಬಾಲ್ಯ ಸ್ನೇಹಿತರಿಂದಾಗುವ ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ.

ವೃಷಭ

ಅಪರೂಪದ ವ್ಯಕ್ತಿಯೊಬ್ಬರ ಭೇಟಿಯಿಂದ ಮಹತ್ತರ ಬದಲಾವಣೆ ಸಾಧ್ಯವಾಗಲಿದೆ. ಪುತ್ರರ ಸಹಕಾರದಿಂದಾಗಿ ಮಂಗಳಕಾರ್ಯಗಳನ್ನು ನಡೆಸಲಿದ್ದೀರಿ. ವಾಹನ ವ್ಯಾಪಾರಿಗಳಿಗೆ ವಿಶೇಷ ಲಾಭದ ಸಾಧ್ಯತೆ.

ಮಿಥುನ

ಹಿರಿಯರ ಆಶೀರ್ವಾದದಿಂದಾಗಿ ಬಯಸಿದ ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ಅವಕಾಶ ದೊರಕಲಿದೆ. ಸ್ಪರ್ಧಾಳುಗಳಿಗೆ ಯಶಸ್ಸಿನ ಗರಿ ಮುಡಿಗೇರಲಿದೆ.

ಕಟಕ

ಮನೆಯಲ್ಲಿ ಪರಿಸ್ಥಿತಿ ತಿಳಿಗೊಳ್ಳುವುದು. ಎಂಜಿನಿಯರ್‌ಗಳಿಗೆ, ವಿನ್ಯಾಸಗಾರರಿಗೆ ಒಳ್ಳೆಯ ಸುದ್ದಿಯೊಂದು ಕೇಳಿಬರಲಿದೆ. ಸೈನಿಕರು ಹಾಗೂ ಆರಕ್ಷಕರುಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಾದ ಪ್ರಸಂಗ ಎದುರಾಗಲಿದೆ.

ಸಿಂಹ

ಹೊಸ ಮನೆ ನಿರ್ಮಾಣಕ್ಕೆ ಚಾಲನೆ ದೊರೆಯುವುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನೇಕಾರರಿಗೆ ದರ್ಜಿಗಳಿಗೆ ಉತ್ತಮ ಆದಾಯ. ಹೊರಗುತ್ತಿಗೆ ಕೆಲಸಗಳಿಂದ ಉತ್ತಮ ಆದಾಯ.

ಕನ್ಯಾ

ಉನ್ನತ ಪರೀಕ್ಷೆಗಳಲ್ಲಿ ನಿರೀಕ್ಷೆಯಂತೆ ಉತ್ತಮ ಫಲಿತಾಂಶ ಹೊಂದಲಿದ್ದೀರಿ. ಮಕ್ಕಳ ಮುಂದಿನ ವ್ಯಾಸಂಗಕ್ಕಾಗಿ ಹಣಕಾಸಿನ ಹೊಂದಾಣಿಕೆಯಾಗಲಿದೆ. ಮಕ್ಕಳ ಪ್ರಗತಿಯಿಂದಾಗಿ ಮನೆಯಲ್ಲಿ ಸಂಭ್ರಮ.

ತುಲಾ

ರಾಜಕೀಯ ರಂಗಕ್ಕೆ ಇಳಿಯುವ ಸುದಿನ. ಸಾಮಾಜಿಕ ಸೇವೆಯಲ್ಲಿ ನಿಮಗಿದ್ದ ಕಾಳಜಿಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಅದೃಷ್ಟ ಖುಲಾಯಿಸಿ ಉತ್ತಮ ಸ್ಥಾನವನ್ನು ಹೊಂದುವ ಅವಕಾಶ.

ವೃಶ್ಚಿಕ

ನಿಮ್ಮ ಕೈಬಿಟ್ಟು ಹೋಗಿದ್ದ ಆಸ್ತಿಯು ಇಂದು ಗುರುಹಿರಿಯರ ಆಶೀರ್ವಾದದಿಂದಾಗಿ ನಿಮ್ಮ ಕೈಸೇರಲಿದೆ. ಆರೋಗ್ಯ ಉತ್ತಮಗೊಳ್ಳಲಿದೆ. ಸಣ್ಣಪುಟ್ಟ ತೊಂದರೆ ಎದುರಾದರೂ ಹೆಚ್ಚಿನ ಪರಿಣಾಮ ಬೀರದು.

ಧನು

ವಿದೇಶದಿಂದ ಬಂಧುಗಳ ಆಗಮನ. ಹೊಸ ವರಮಾನದ ಮಾರ್ಗವೊಂದು ಗೋಚರವಾಗಲಿದೆ. ಕೆಲಸದಲ್ಲಿ ಪ್ರಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬರಲಿದೆ. ಶುಭ ಸಮಾರಂಭಕ್ಕೆ ಚಿಂತನೆ ನಡೆಸಲಿದ್ದೀರಿ.

ಮಕರ

ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ. ಚಿನ್ನಾಭರಣ ಮಾರಾಟಗಾರರಿಗೆ ಶುಭ ದಿನವಾಗಿದೆ. ಮದುವೆ ವಿಷಯ ಪ್ರಸ್ತಾಪ ಮಾಡಲಿದ್ದೀರಿ. ಆಸ್ಪತ್ರೆ ಸಿಬ್ಬಂದಿಗೆ ಸೌಲಭ್ಯಗಳು ದೊರಕುವ ಸಾಧ್ಯತೆ.

ಕುಂಭ

ದಿನವಿಡೀ ಉತ್ಸಾಹ ಉಲ್ಲಾಸದಿಂದ ಕಾರ್ಯನಿರ್ವಹಿಸಲಿದ್ದೀರಿ. ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ. ಹವ್ಯಾಸಿ ಬರಹಗಾರರು, ಪತ್ರಕರ್ತರಿಗೆ ಶುಭ ಸಮಾಚಾರ ಕೇಳಿಬರಲಿದೆ.

ಮೀನ

ನಿಮ್ಮ ಕನಸುಗಳು ನನಸಾಗುವ ದಿನವಾಗಿದೆ. ಹಿರಿಯರಿಂದ ಸಹಾಯ ಸಹಕಾರಗಳು ದೊರಕಲಿವೆ. ದೂರದ ಊರಿಗೆ ಪ್ರಯಾಣ ಸಾಧ್ಯತೆ. ಅಪರೂಪದ ಸಂಬಂಧಿಕರ ಭೇಟಿ. ಶುಭ ಕಾರ್ಯಗಳಿಗಾಗಿ ಖರ್ಚು.

Design a site like this with WordPress.com
Get started