‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಜನರು ಎನ್ -95 ಮಾಸ್ಕ್‌ಗಳನ್ನು ಬಳಸುವುದರ ವಿರುದ್ಧವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” ಎಂದು ತಿಳಿಸಿದೆ.

ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್‌ನ “ಅನುಚಿತ ಬಳಕೆ”ಯ ಬಗ್ಗೆ ಗಮನಿಸಲಾಗಿದೆ. ನಿಗದಿ ಪಡಿಸಿದ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಸಾರ್ವಜನಿಕರು ಕೂಡಾ ಈ ಮಾಸ್ಕ್‌ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದು ಮನೆಯಲ್ಲೇ ರಕ್ಷಣಾತ್ಮಕ ಮಾಸ್ಕ್‌ ತಯಾರಿಕೆಯ ಬಗ್ಗೆ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಲಹೆಗಳನ್ನು ಉಲ್ಲೇಖಿಸಿದೆ.

ವಿಶೇಷವಾಗಿ ರಂಧ್ರ ಉಸಿರಾಟಕಾರಕಗಳನ್ನು ಅಳವಡಿಸಿರುವ ಎನ್ -95 ಮಾಸ್ಕ್ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಿಗೆ ವಿರುದ್ಧವಾಗಿದೆ. ಏಕೆಂದರೆ ಈ ಮಾಸ್ಕ್ ನಿಂದ ವೈರಸ್ ಹೊರಬರುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಮಾಸ್ಕ್‌ಗಳ ಅನುಚಿತ ಬಳಕೆಯನ್ನು ತಡೆಯಲು ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡಬೇಕು ಎಂದು ಡಿಜಿಹೆಚ್ಎಸ್ ರಾಜೀವ್ ಗರ್ಗ್ ಪತ್ರದಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಸರ್ಕಾರವು ಮನೆಯಲ್ಲಿಯೇ ಮಾಸ್ಕ್‌ ತಯಾರಿಸುವ ಬಗ್ಗೆ ಸಲಹೆಯನ್ನು ನೀಡಿತ್ತು. ಸೂಚನೆಯ ಪ್ರಕಾರ ಅದನ್ನು ಪ್ರತಿ ದಿನ ತೊಳೆದು ಮರು ಬಳಕೆ ಮಾಡಬೇಕಾಗಿದೆ. ಹಾಗೆಯೇ ಈ ಮಾಸ್ಕ್‌ಗಳನ್ನು ಯಾರೊಂದಿಗೂ ಹಂಚಿಕೊಂಡು ಬಳಸಬಾರದು ಎಂದು ತಿಳಿಸಿತ್ತು.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ

ಉಡುಪಿ , ಜು.21:  ಕೃಷ್ಣ ನಗರಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ. ಇಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೂ ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದೆ. ಸದ್ಯ ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ವಾಮೀಜಿಯ ಜೊತೆ ಸಂಪರ್ಕ ಹೊಂದಿದವರನ್ನ ಕ್ವಾರಂಟೈನ್‌ನಲ್ಲಿ ಇಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನು ಸ್ವಾಮೀಜಿಗಳು ಶೀಘ್ರ ಗುಣಮುಖರಾಗುವಂತೆ ಭಕ್ತರು ಮಠದಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ.

ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:41 ರಿಂದ 5:17
ಗುಳಿಕಕಾಲ: ಮಧ್ಯಾಹ್ನ 12:30 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:54

ಮೇಷ

ಉದ್ಯೋಗ ವ್ಯವಹಾರಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೊಸ ವಸ್ತುಗಳ ಖರೀದಿಯನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಕೆಲಸದ ನಿಮಿತ್ತ ಅಲೆದಾಟ ಮಾಡಬೇಕಾದೀತು.

ವೃಷಭ

ಪ್ರಯಾಣದಲ್ಲಿ ಸಂಕಟ ತಲೆದೋರಬಹುದು. ಭೂ ವ್ಯವಹಾರದಿಂದ ಧನ ಲಾಭವಾಗುವ ಸಾಧ್ಯತೆ ಕಂಡುಬರುತ್ತಿದೆ. ಉದರ ಸಂಬಂಧಿ ವ್ಯಾಧಿಗಳು ತಲೆದೋರಬಹುದು. ಅನಿರೀಕ್ಷಿತ ವ್ಯಕ್ತಿಗಳ ಆಗಮನದಿಂದ ಸಂತಸ ಮೂಡಲಿದೆ.

ಮಿಥುನ

ಹೂಡಿಕೆಯಿಂದ ಧನಲಾಭವಾಗಲಿದೆ. ಮನೆಯಲ್ಲಿ ಸಂತೋಷ ಸಂಭ್ರಮದ ಕಾರ್ಯಕ್ರಮಗಳು ಜರುಗಲಿವೆ. ಅಪರಿಚಿತ ಸ್ತಿçÃಯೊಂದಿಗೆ ಜಗಳ ಉಂಟಾಗುವ ಸಾಧ್ಯತೆ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅವಶ್ಯಕವಾಗಿದೆ.

ಕಟಕ

ಹಿರಿಯ ಅಧಿಕಾರಿಗಳಿಂದ ಕಿರಿ ಕಿರಿ ಅನುಭವಿಸಬೇಕಾದೀತು. ಲೋಕೋಪಯೋಗಿ ಇಲಾಖಾ ನೌಕರರು ವೃತ್ತಿಯಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಕೈಗಾರಕೋದ್ಯಮಿಗಳಿಗೆ ಪ್ರಶಂಸೆಯ ಮಾತುಗಳು ಕೇಳಿಬರಲಿವೆ. ಸಾಹಿತಿಗಳಿಗೆ ಶುಭದ ದಿನ

ಸಿಂಹ

ಗೃಹ ನಿರ್ಮಾಣ, ಬಾವಿ ನಿರ್ಮಾಣದಂತಹ ಕೆಲಸಗಳಿಗೆ ಚಾಲನೆ ನೀಡುವ ಸಾಧ್ಯತೆಯೊಂದಿಗೆ ಯಶಸ್ಸನ್ನು ಸಾಧಿಸುವಿರಿ. ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಆರ್ಥಿಕ ಅನುಕೂಲತೆ ಕೂಡಿಬರಲಿದೆ. ಹತ್ತಿ ಬಟ್ಟೆ ವ್ಯಾಪಾರದಲ್ಲಿ ವ್ಯತ್ಯಯದ ಸಾಧ್ಯತೆ.

ಕನ್ಯಾ

ಸಾಮಾಜಿಕ ಗೌರವಕ್ಕೆ ಪಾತ್ರರಾಗಲಿದ್ದೀರಿ. ಕೋರ್ಟ್ ವ್ಯವಹಾರಗಳಲ್ಲಿ ಜಯವು ನಿಮ್ಮ ಪಾಲಿಗೆ ಒದಗಿ ಬರಲಿದೆ. ಕುಟುಂಬದ ಸದಸ್ಯರೊಂದಿಗೆ ವಿನಾ ನಿಷ್ಟೂರದ ಮಾತುಗಳನ್ನು ಆಡದಿರುವುದು ಉತ್ತಮ. ಮೂತ್ರ ಸಂಬAಧಿ ರೋಗಗಳು ತಲೆದೋರುವ ಸಾಧ್ಯತೆ.

ತುಲಾ

ವಿಪರೀತ ಕೆಲಸದಿಂದಾಗಿ ದೇಹಾಲಸ್ಯ ಉಂಟಾದೀತು. ಮಾನಸಿಕ ಒತ್ತಡ, ಮಾತೃವರ್ಗದವರಿಗೆ ಆರೋಗ್ಯದಲ್ಲಿ ವ್ಯತ್ಯಯದ ಸಾಧ್ಯತೆ ಕಂಡುಬರುತ್ತಿದೆ. ಮಿತ್ರರ ಸಹಾನುಭೂತಿಯೊಂದಿಗೆ ಆಪತ್ಕಾಲದ ಸಹಾಯವೂ ದೊರಕಲಿದೆ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಪ್ರಾಪ್ತಿಯಾಗಲಿದೆ.

ವೃಶ್ಚಿಕ

ಯೋಧರು, ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುವವರಿಗೂ ಯಶಸ್ಸಿನೊಂದಿಗೆ ಭಡ್ತಿಯ ಅವಕಾಶಗಳು ಕಂಡುಬರುತ್ತಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆಯ ಗರಿ ಮುಡಿಗೇರಲಿದೆ. ರಾಜಕಾರಣಿಗಳಿಗೆ ವಿದೇಶ ಯಾತ್ರೆಯ ಸಂಭವ ಕಂಡುಬರುತ್ತಿದೆ.

ಧನು

ವ್ಯವಹಾರದಲ್ಲಿ ವಿಶೇಷ ಧನಲಾಭವನ್ನು ಕಾಣುವಿರಿ. ಶುಭ ವಾರ್ತೆಯೊಂದಿಗೆ ಗೌರವ ಸನ್ಮಾನಗಳು ನಿಮ್ಮನ್ನು ಅರಸಿ ಬರಲಿವೆ. ಮೇಲಾಧಿಕಾರಿಗಳ ನೆರವಿನಿಂದಾಗಿ ವ್ಯವಹಾರ ಸುಗಮವಾಗಲಿದೆ. ಶೃಂಗಾರ ಸಾಧನಗಳ ವ್ಯವಹಾರದಿಂದ ವಿಶೇಷ ಲಾಭವನ್ನು ಪಡೆಯಲಿದ್ದೀರಿ.

ಮಕರ

ಶೇರು ವ್ಯವಹಾರದಿಂದಾಗಿ ಧನ ಲಾಭದ ಲಕ್ಷಣಗಳು ತೋರುತ್ತಿದೆ. ಅನಾವಶ್ಯಕ ಓಡಾಟ ಮಾಡಬೇಕಾದೀತು. ಕುಟುಂಬ ಸದಸ್ಯರೊಂದಿಗೆ ತಾಳ್ಮೆಯ ಅವಶ್ಯಕತೆ ಕಂಡುಬರುತ್ತಿದೆ. ವ್ಯಕ್ತಿಯೊಬ್ಬರ ಸಹಕಾರದಿಂದಾಗಿ ಕೆಲಸ ಕರ‍್ಯಗಳಲ್ಲಿ ಸಾಫಲ್ಯತೆ ಕಾಣಲಿದ್ದೀರಿ.

ಕುಂಭ

ಅನವಶ್ಯಕ ವಿಚಾರದಿಂದಾಗಿ ಮನೆಯಲ್ಲಿ ಮನಸ್ತಾಪ ಉಂಟಾಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸುವುದು ಒಳ್ಳೆಯದು. ಕೋರ್ಟ್, ಕಛೇರಿಗಳಲ್ಲಿನ ವಿವಾದಗಳು ಪರಿಹಾರವಾಗಿ ಯಶಸ್ಸನ್ನು ಸಾಧಿಸಲಿದ್ದೀರಿ.

ಮೀನ

ಹಣಕಾಸಿನ ಅನುಕೂಲತೆಗಳು ಕೂಡಿಬರುವುದಲ್ಲದೆ ಹೊಸ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಅಧ್ಯನ ನಿಮಿತ್ತ ದೂರದ ಊರುಗಳಿಗೆ ಪ್ರವಾಸ ಮಾಡಬೇಕಾದೀತು. ಮಂಗಳ ಕಾರ್ಯ ನಿಮಿತ್ತ ಓಡಾಟ ಮಾಡಲಿದ್ದೀರಿ.

ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು …

ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ ಸೇರಲು ಹೊರಟಿದೆ ಶ್ರೀಕೃಷ್ಣ ನಗರಿ ರಜತಪೀಠಪುರದ ಪವಿತ್ರ ಮೃತ್ತಿಕೆ!

ಅಯೋಧ್ಯೆಯ ಸಂಕಲ್ಪಿತ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು , ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆಯನ್ನು ಸೇರಿಸಲು ವಿಶ್ವಹಿಂದುಪರಿಷತ್ ನಿರ್ಧರಿಸಿದೆ .
ಅದರಂತೆ ಕೃಷ್ಣ ನಗರಿ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಗಂಧ ಪ್ರಸಾದ , ನಿರ್ಮಾಲ್ಯವಿಟ್ಟು ಮಂಗಳಾರತಿ ಬೆಳಗಿ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಅತ್ಯಂತ ಯಶಸ್ವಿಯಾಗಿ ನಡೆದು ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ವಿಹಿಂಪ ದ ಉಡುಪಿಯ ಪ್ರಮುಖರಿಗೆ ಸೋಮವಾರ ಹಸ್ತಾಂತರಿಸಿದರು .

ವಿಹಿಂಪ‌ಜಿಲ್ಲಾಧ್ಯಕ್ಷ ಪಿ ವಿಷ್ಣುಮೂರ್ತಿ ಆಚಾರ್ಯ , ಕಾರ್ಯದರ್ಶಿ ದಿನೇಶ್ ಮೆಂಡನ್ ಬಜರಂಗದಳ ಪ್ರಾಂತ ಸಹಸಂಚಾಲಕ ಸುನಿಲ್ ಕೆ ಆರ್ , ಮಠದ ವ್ಯವಸ್ಥಾಪಕ ಗೋವಿಂದರಾಜ್ , ವಿದ್ವಾನ್ ರಾಮನಾಥ ಆಚಾರ್ಯ , ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು .

ಸ್ವಾಮೀಜಿಯವರಿಂದ ಮೃತ್ತಿಕೆಯನ್ನು ಸ್ವೀಕರಿಸಿದ ಬಳಿಕ ಕಾರ್ಯಕರ್ತರು ರಥಬೀದಿಯಲ್ಲಿ ರಾಮನಾಮ ಸ್ಮರಣೆಯೊಂದಿಗೆ ಪ್ರದಕ್ಷಿಣೆ ಬಂದು ಶ್ರೀ ಮದನಂತೇಶ್ವರ ದೇವಳಕ್ಕೆ ತೆರಳಿ ಅಲ್ಲಿ ಶ್ರೀ ದೇವರ ಪ್ರಸಾದವನ್ನೂ ಸೇರಿಸಿ , ಅರ್ಚಕರ ಮೂಲಕ ಪ್ರಾರ್ಥನೆ ಸಲ್ಲಿಸಿದರು .ಬಳಿಕ ಹಿತ್ತಾಳೆಯ ಕರಂಡಕದಲ್ಲಿ ಮೃತ್ತಿಕೆಯನ್ನು ತುಂಬಿಸಿ ಕಳಿಸಿಕೊಟ್ಟರು

ಮೋದಿಯವರಿಂದ ಅಯೋಧ್ಯೆಯ ಭೂಮಿ ಸೇರಲಿದೆ
ಉಡುಪಿ ಮಾತ್ರವಲ್ಲದೆ ದಕ್ಷಿಣ ಭಾರತದ ಅನೇಕ ಕ್ಷೇತ್ರಗಳ ಹಾಗೂ ನದಿಗಳ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ . ಇವೆಲ್ಲವನ್ನೂ ಆಗಸ್ಟ್ 5 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಮಂದಿರದ ಜಾಗದಲ್ಲಿ ಭೂಮಿಗೆ ಅರ್ಪಿಸಲಿದ್ದಾರೆ .

ಶಿಲಾನ್ಯಾಸ ಸಮಾರಂಭಕ್ಕೆ ಪೇಜಾವರ ಶ್ರೀ ಗೈರು
ಚಾತುರ್ಮಾಸ್ಯ ವ್ರತದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಆ .5 ರಂದು ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಭಾಗವಹಿಸುತ್ತಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.

ಇಂದಿನ ಔಷಧೀಯ ಸಸ್ಯ ಪರಿಚಯ: ಬೋರೆ ,ಬುಗರಿ ಹಣ್ಣಿನ ಮರ

ಬದರೀ ಕೊಲ,ಬೇರ್, ಇಲ್ಲಂದೈ,ಗಂಗರೇಣುಬಾದರಂ,ಬೋರೆ,ಎಲಚಿ,,ಇಲಂಜಿ,ಕುರ್ಕುoದ,ಪರಿಕಕಾಯಿ,ರೇಗಿ ಪೊಂಡಲು,ಕುವರಿ,ಅಜಪ್ರಿಯ,ಗುಡಫಲ,ಸೌಬೀರ,
ಬಾಲಿಷ್ಠ ಎಂಬ ಹೆಸರುಗಳಿಂದ ಕರೆಯುತ್ತಾರೆ
ಬೋರೆ ವೃಕ್ಷಗಳು ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ನೈಸರ್ಗಿಕವಾಗಿ ಬೆಳೆಯುತ್ತವೆ.ಇದರ ಹಣ್ಣಿಗಾಗಿ ಅನೇಕ ಕಡೆ ತೋಟ,ಹೊಲಗಳಲ್ಲಿಯೂ ಸಹ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.ಈ ವೃಕ್ಷ ಸುಮಾರು 25 ರಿಂದ 45 ಅಡಿಗಳ ಎತ್ತರ ಬೆಳೆಯುತ್ತದೆ.ಇದು ಬಹು ಉಪಯೋಗಿ ಹಾಗೂ ಗಟ್ಟಿಯಾದ ವೃಕ್ಷವಾಗಿದ್ದು,ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾಗಿರುವ ನಾನಾ ವಿಧವಾದ ಉಪಕರಣಗಳನ್ನು ಇದರಲ್ಲಿ ತಯಾರಿಸಿಕೊಳ್ಳುತ್ತಾರೆ.
ಬೋರೆ ಗಿಡದಲ್ಲಿ ಅನೇಕ ಪ್ರಭೇದಗಳಿದ್ದು,ಕೃಷಿ ಇಲಾಖೆಯವರು,ಇದರಲ್ಲಿ ಹೆಚ್ಚು ಸ್ವಾದಿಷ್ಟ ಹಾಗೂ ದೊಡ್ಡ ದೊಡ್ಡ ಹಣ್ಣು ಬಿಡುವ ಅನೇಕ ಹೊಸ ಹೊಸ ತಳಿಗಳನ್ನು ಪರಿಚಯಿಸಿದ್ದಾರೆ.
ಸಂಕ್ರಾಂತಿಯ ಬೋಗಿ ಹಬ್ಬದಂದು,ಬೋರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸಿ,ಬೋಗ ಭಾಗ್ಯಗಳು ದೊರೆಯಲಿ ಎಂದು ಪೂಜಿಸುತ್ತಾರೆ.
ಬೋರೆ ಹಣ್ಣುಗಳನ್ನು ಮಕ್ಕಳು ಹಿರಿಯರೆನ್ನದೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.ಈ ಹಣ್ಣುಗಳು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.ಇದರಲ್ಲಿ ವಿಟಮಿನ್ A ಹಾಗೂ C ಅಧಿಕವಾಗಿದ್ದು ಅನೇಕ ವ್ಯಾಧಿಗಿಂದ ರಕ್ಷಣೆ ದೊರೆಯುತ್ತದೆ.
ದೇಹದಲ್ಲಿ ಆಲಸ್ಯ ಇದ್ದಾಗ (ಕೆಲಸದ ಒತ್ತಡದಿಂದ) ಬೋರೆ ಹಣ್ಣುಗಳನ್ನು ತಿನ್ನುವುದರಿಂದ ತಕ್ಷಣ ದೇಹಕ್ಕೆ ಶಕ್ತಿಯನ್ನು ದೊರಕಿಸಿ,ಆಲಸ್ಯವನ್ನು ದೂರ ಮಾಡುವ ಏಕೈಕ ಹಣ್ಣು “ಬೋರೆ ಹಣ್ಣು” ಜೀರ್ಣಕ್ರಿಯೆ ಹೆಚ್ಚಿಸುವುದರಲ್ಲಿ ಬೋರೆ ಹಣ್ಣನ್ನು ಮಿಂಚಿದ್ದು ಮತ್ತೊಂದಿಲ್ಲ.ದೇಹದ ತೂಕವನ್ನು ಇಳಿಸಲು ಸಹಾ ಈ ಹಣ್ಣು ಸಹಾಯ ಮಾಡುತ್ತೆ.
ದಿನವು ಐದಾರು ಬೋರೆ ಹಣ್ಣುಗಳನ್ನು ತಿನ್ನುವುದರಿಂದ ದೇಹದ ತೂಕ ಏರುಪೇರು
ಆಗದಂತೆ ಕಾಪಾಡುತ್ತೆ.ವಸಡುಗಳು ದೃಢವಾಗಿ, ದಂತಪಂಕ್ತಿ ಗಟ್ಟಿಯಾಗುತ್ತೆ.ಮಾಂಸ ಖಂಡಗಳಿಗೆ
ಬಲ ಬರುತ್ತೆ.
ಬೋರೆ ಹಣ್ಣು ದಿನವು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಚರ್ಮ ಸುಕ್ಕು ಗಟ್ಟುವುದಿಲ್ಲ.ಚರ್ಮವು ನವ ಯೌವನದಂತೆ ಕಾಣಲು ಸಹಾಯ ಮಾಡುತ್ತೆ.ಚರ್ಮದ ಸೌಂದರ್ಯ ಕಾಪಾಡುವುದರಲ್ಲಿ ತುಂಬಾ ಸಹಾಯ ಮಾಡುತ್ತೆ.
ಬೋರೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಶುದ್ಧಿಯಾಗುವುದಲ್ಲದೆ, ಅಧಿಕ ರಕ್ತದೊತ್ತಡವನ್ನು ಅತೋಟಿಯಲ್ಲಿಡುತ್ತೆ.
ಬೋರೆ ಹಣ್ಣುಗಳನ್ನು ತಿಂದರೆ, ಚಳಿಗಾಲದಲ್ಲಿ ಬರುವ ಕೆಮ್ಮು, ಗಂಟಲು ನೋವು, ಶ್ವಾಸಕೋಶ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
ಬೋರೆ ಹಣ್ಣುಗಳಲ್ಲಿ ನಾರಿನಾಂಶ ಅಧಿಕವಿದ್ದು ಮಲಬದ್ಧತೆ ದೂರವಾಗುತ್ತೆ. ಇದರಲ್ಲಿರುವ ಕ್ಯಾಲ್ಸಿಯಂ ದೇಹದಲ್ಲಿನ ಮೂಳೆಗಳನ್ನು ಗಟ್ಟಿಗೊಳಿಸುತ್ತೆ.
ಬೋರೆ ಹಣ್ಣುಗಳನ್ನು ಸೇವಿಸುವುದರಿಂದ ಸ್ತ್ರೀಯರಲ್ಲಿ ಋತಸ್ರಾವ ಸಮಸ್ಯೆಗಳು ದೂರವಾವುತ್ತೆ.
ಬೋರೆ ಹಣ್ಣಿನ ಜ್ಯುಸ್ ಸೇವಿಸುವುದರಿಂದ ಹೃದ್ರೋಗ ಸಮಸ್ಯೆಗಳು ದೂರವಾಗುತ್ತೆ.ದಡೂತಿ ದೇಹದವರಲ್ಲಿ ಕೆಟ್ಟ ಕೊಬ್ಬನ್ನು ಕರಗಿಸಿ ತೂಕ ಕಡಿಮೆಯಾಗಲು ಸಹಾಯ ಮಾಡುತ್ತೆ.ಚರ್ಮಕ್ಕೆ
ರಕ್ಷಣೆ ದೊರೆಯುತ್ತದೆ.ಮಾನಸಿಕ ಒತ್ತಡ ಕಡಿಮೆಯಾಗುತ್ತೆ.ದೇಹದಲ್ಲಿ ರಕ್ತ ಕಣಗಳ ಸಂಖ್ಯೆ ಬೆಳೆಯುತ್ತೆ.
ದಿನವು ಮಕ್ಕಳಿಗೆ 2-3 ಬೋರೆ ಎಲೆಗಳನ್ನು ತಿನ್ನಿಸುವುದರಿಂದ ಅನಾರೋಗ್ಯ ದೂರವಾಗುತ್ತೆ.
ಎಲೆಗಳ ಕಷಾಯ ಸೇವಿಸಿದರೆ ಕೆಮ್ಮು ದಮ್ಮು, ಅಸ್ತಮಾ,ಗಂಟಲು ನೋವು,ಹೊಟ್ಟೆಯಲ್ಲಿ ಉರಿ, ಶಮನವಾಗುತ್ತೆ.
ಬೀಜದ ಚೂರ್ಣವನ್ನು ಎಳ್ಳೆಣ್ಣೆಯಲ್ಲಿ ಕಲಸಿ ಲೇಪನ ಮಾಡಿದರೆ ಕೀಲುನೋವು ಗುಣವಾಗುತ್ತೆ.
ಬೋರೆ ಮರದ ತೊಗಟೆ ಕಷಾಯ ಮಾಡಿ ಬೆಳಿಗ್ಗೆ ಸಂಜೆ ಸೇವಿಸಿದರೆ ಅತಿಸಾರ ಭೇದಿ ನಿಲ್ಲುತ್ತೆ.
ಮಲಬದ್ಧತೆಯನ್ನು ದೂರ ಮಾಡುತ್ತೆ.
ಒಂದು ಹಿಡಿಯಷ್ಟು ಬೋರೆ ಹಣ್ಣುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸೋಸಿ ಅದಕ್ಕೆ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಕಲಸಿ ಸೇವಿಸಿದರೆ, ದೇಹದ ಆರೋಗ್ಯ ಕಾಪಾಡಿ, ಮೆದಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಾಯ ಮಾಡುತ್ತೆ.
ಬೋರೆ ವೃಕ್ಷದಲ್ಲಿ ಅಪಾರವಾದ ಔಷಧೀಯ ಗುಣಗಳಿದ್ದು,ಈ ವೃಕ್ಷ ಮನೆಯ ಪಕ್ಕ ಇದ್ದರೆ ಒಬ್ಬ ವೈದ್ಯ ಮನೆಯಲ್ಲಿ ಇದ್ದಂತೆ. ಗೆಳೆಯರೆ ವಂದನೆಗಳು

ಜುಲೈ 20, 2020; ಸೋಮವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಸೋಮವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಬೆಳಗ್ಗೆ 7:42 ರಿಂದ 9:18
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:41
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:30

ದಿನ ವಿಶೇಷ: ಆಷಾಡ ಅಮವಾಸ್ಯೆ/ ಭೀಮನ ಅಮಾವಾಸ್ಯೆ

ಮೇಷ

ವ್ಯವಹಾರದಲ್ಲಿ ಉತ್ತಮ ಧನಪ್ರಾಪ್ತಿ. ಕೌಟುಂಬಿಕ ನೆಮ್ಮದಿ. ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ. ದೂರದ ಪ್ರಯಾಣ ಅಷ್ಟೊಂದು ಶ್ರೇಯಸಲ್ಲ. ದೈನಂದಿನ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ.

ವೃಷಭ

ವೈಯಕ್ತಿಕ ಜೀವನದಲ್ಲಿ ಸಾಧನೆಯೊಂದನ್ನು ಮಾಡಿದ ತೃಪ್ತಿ ನಿಮ್ಮದಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕಬ್ಬಿಣ, ಸಿಮೆಂಟ್‌ ಮುಂತಾದ ಕಟ್ಟಡ ಸಾಮಗ್ರಿಗಳ ವ್ಯಾಪಾರದಲ್ಲಿ ಉತ್ತಮ ಲಾಭ.

ಮಿಥುನ

ಮಂಗಳಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದೀರಿ. ಬಂಧು–ಬಾಂಧವರ ಭೇಟಿಯಿಂದಾಗಿ ಸಂಭ್ರಮ. ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ದೊರಕಲಿದೆ.

ಕಟಕ

ಹೊಸ ಮನೆಯ ಕನಸು ನನಸಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶದ ಬಾಗಿಲು ತೆರೆಯುವ ಸಾಧ್ಯತೆ. ವಾಹನಗಳ ವಿಷಯದಲ್ಲಿ ಸ್ವಲ್ಪ ಮಟ್ಟಿನ ಎಚ್ಚರಿಕೆ ಅಗತ್ಯ. ಸಂಗಾತಿಯ ಸಹಕಾರದಿಂದ ಸಂತಸ.

ಸಿಂಹ

ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ತೋರಿಸುವ ಎಲ್ಲ ಅವಕಾಶಗಳು ಕಂಡುಬರುತ್ತಿದೆ. ನೂತನ ಕಾರ್ಯಯೋಜನೆಗಳಲ್ಲಿ ತಲ್ಲೀನರಾಗುವಿರಿ. ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ.

ಕನ್ಯಾ

ಬಹಳ ಪ್ರಯತ್ನದಿಂದ ಮಾಡಿದ ಕೆಲಸಗಳಲ್ಲಿ ಉತ್ತಮ ಫಲ. ಮಕ್ಕಳಿಂದ ಮನೆಯಲ್ಲಿ ಸಂತೋಷದ ವಾತಾವರಣ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ. ವೃಥಾ ಖರ್ಚು ಸಂಭವ.

ತುಲಾ

ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ವೆಚ್ಚದ ಮೇಲೆ ಹಿಡಿತವಿರಲಿ. ನೆರೆಹೊರೆಯವರೊಂದಿಗೆ ವಿನಾಕಾರಣ ದ್ವೇಷ ಉಂಟಾದೀತು. ಶಾರದಾ ದೇವಿಯ ಆರಾಧನೆ ಮಾಡಿ. ದೂರದ ಪ್ರಯಾಣ ಸಾಧ್ಯತೆ.

ವೃಶ್ಚಿಕ

ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಸೇರ್ಪಡೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ವಿದ್ಯಾ ಸಂಪನ್ನರಿಗೆ ಗೌರವ ದೊರೆಯಲಿದೆ. ಸಂಗಾತಿಯ ಆಶೋತ್ತರಗಳನ್ನು ಈಡೇರಿಸಲಿದ್ದೀರಿ.

ಧನು

ಹಣಕಾಸಿನ ವ್ಯವಹಾರದಲ್ಲಿ ಮುಲಾಜಿಗೆ ಒಳಗಾಗುವ ಸಾಧ್ಯತೆ. ಹಿತಮಿತವಾದ ಮಾತಿನಿಂದ ಬಾಂಧವ್ಯ ವೃದ್ಧಿ. ಆತ್ಮೀಯರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ.

ಮಕರ

ಆರ್ಥಿಕ ಅನುಕೂಲತೆಗಳು ಕೂಡಿಬರಲಿವೆ. ವಿವಾಹಾಕಾಂಕ್ಷಿಗಳಿಗೆ ಸರಿಯಾದ ಸಂಬಂಧಗಳು ಕೂಡಿಬರುವ ಲಕ್ಷಣವಿದೆ. ಸ್ವಯಂ ಉದ್ಯೋಗಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ. ಬಹುದಿನಗಳ ಆಸೆ ಈಡೇರಲಿದೆ.‌

ಕುಂಭ

ಭೂಮಿ ಮಾರಾಟ, ಖರೀದಿಗಳಲ್ಲಿ ತೊಡಗಿರುವವರಿಗೆ ಅಧಿಕ ಲಾಭ. ಸರ್ಕಾರದ ಕಾನೂನಿನ ಅನ್ವಯ ತೊಂದರೆಗಳು ಎದುರಾಗುವ ಸಾಧ್ಯತೆ. ಮನೆಯಲ್ಲಿ ಹರ್ಷ ಮೂಡುವುದು.

ಮೀನ

ಹಿಂದಿನ ಬಾಕಿ ವ್ಯವಹಾರಗಳು ಪೂರ್ಣ ಚುಕ್ತಗೊಂಡು ಋಣ ಬಾಧೆಯಿಂದ ಮುಕ್ತರಾಗುವಿರಿ. ಮನೆಯವರೊಂದಿಗೆ ಸಮಾರಂಭ ವೊಂದರಲ್ಲಿ ಭಾಗಿಯಾಗುವ ಸಾಧ್ಯತೆ. ಹಿರಿಯರ ಸಲಹೆಗಳಿಗೆ ಗೌರವವಿರಲಿ.

ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ

ಮಂಜಿಷ್ಠಾ ಮಂಜಿಸ್ಟ್,ಇಷ್ಟ ಮಧುಕ,ಮಂಜಿಷ್ಠಾ ಬಳ್ಳಿ,ಶಿರಗತ್ತಿ,ರಕ್ತಾoಗಿ, ರಕ್ತಯಷ್ಟಿ,ವಸ್ತ್ರರಂಜನಿ,ವಸ್ತ್ರ ಭೂಷಣ,ಜ್ವರಹಂತ್ರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ಮಾತ್ರ ಕಾಣುವ,ಬಳ್ಳಿಯಂತೆ ಹಬ್ಬುವ ಅಪರೂಪದ ಔಷಧೀಯ ಸಸ್ಯವಿದು.ಇದರ ಬೇರನ್ನು ಮಾತ್ರ ಔಷಧಿಗಾಗಿ ಹೆಚ್ಚಿಗೆ ಉಪಯೋಗಿಸುತ್ತಾರೆ. ಕರ್ನಾಟಕದ ಮಲೆನಾಡಿನ ಕಾಡುಗಳಲ್ಲಿ, ಅಲ್ಲಲ್ಲಿ ಅಪರೂಪವಾಗಿ ಕಾಣಿಸುತ್ತೆ. ಮುಖದ ಮೇಲಿನ ಕಪ್ಪು ಹಾಗೂ ಬಿಳಿ ಮಚ್ಚೆಗಳು, ಮೊಡವೆಗಳು, ಮೊಡವೆಯಿಂದಾದ ಕಲೆಗಳಿಂದ ಮುಖದ ಅಂದವೇ ಕೆಡುತ್ತೆ.ಇದರಿಂದ ರಕ್ಷಿಸಿಕೊಳ್ಳಲು, 1.ಚಮಚ ಮಂಜಿಷ್ಠಾ ಬೇರಿನ ಚೂರ್ಣ 1 ಚಮಚ ಜೇನುತುಪ್ಪ ಕಲಸಿ ಪೇಸ್ಟ್ ಮಾಡಿಕೊಂಡು ಮಚ್ಚೆ,ಮೊಡವೆ,ಕಲೆಗಳ ಮೇಲೆ ಲೇಪನ ಮಾಡಿ 2 ಗಂಟೆ ನಂತರ ಉಗರು ಬೆಚ್ಚಗಿನ ನೀರಲ್ಲಿ ತೊಳೆಯಬೇಕು. 2.ಮಂಜಿಷ್ಠಾ ಚೂರ್ಣ 1 ಚಮಚ, ಕಸ್ತೂರಿ ಅರಸಿಣದ ಚೂರ್ಣ 1/2 ಚಮಚ, ಹಸುವಿನ ಹಾಲು 3 ರಿಂದ 4 ಚಮಚ ಹಾಕಿ ಕಲಸಿ, ಪೇಸ್ಟ್ ಮಾಡಿಕೊಂಡು,ಮುಖಕ್ಕೆ ಲೇಪನ ಮಾಡಿ 2 ಗಂಟೆಯ ನಂತರ, ಉಗರು ಬೆಚ್ಚಗಿನ ನೀರಲ್ಲಿ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಮುಖದ ಚರ್ಮವು ಕಾಂತಿಯಿಂದ ಹೊಳೆಯುವುದಲ್ಲದೆ, ಸೌಂದರ್ಯವು ಹಿಮ್ಮಡಿಗೊಳ್ಳುತ್ತದೆ. 3.ಮಂಜಿಷ್ಠಾ ಚೂರ್ಣ 1ಚಮಚ, ಬೇವಿನ ಎಲೆಯ ಪೇಸ್ಟ್ 1/2 ಚಮಚ, ಕಸ್ತೂರಿ ಅರಸಿಣ 1/2 ಚಮಚ, ಈ ಮೂರನ್ನು ಒಂದು ತಟ್ಟೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ಒಂದರಿಂದ ಎರಡು

ಚಮಚ ಶುದ್ಧ ಮೊಸರು ಕಲಸಿ,ಮುಖ ತೊಳೆದು, ತಯಾರಿಸಿಕೊಂಡಿರುವ ಪೇಸ್ಟನ್ನು ಮುಖಕ್ಕೆ ಲೇಪನ ಮಾಡಿ, 2 ಗಂಟೆಯ ನಂತರ ಮುಖ ತೊಳೆಯಿರಿ.
ಈಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು, ಮಚ್ಚೆಗಳು,ಮೊಡವೆಗಳು ದೂರವಾಗಿ, ಮುಖದ ಚರ್ಮ ಮೃದುವಾಗಿ, ಕಾಂತಿಯಿಂದ ಹೊಳೆಯುತ್ತೆ.ಮುಖದ ಸೌಂದರ್ಯ ಹಿಮ್ಮುಡಿಗೊಳ್ಳುತ್ತೆ.
ಮಂಜಿಷ್ಠಾ ಬೇರಿನ ಚೂರ್ಣ 25 ಗ್ರಾಂ, ಲಾವಂಚ ಬೇರಿನ ಚೂರ್ಣ 25 ಗ್ರಾಂ, ಸುಗಂಧ ಪಾಲ ಬೇರಿನ ಚೂರ್ಣ 25 ಗ್ರಾಂ,ಶ್ರೀಗಂಧದ ಚೂರ್ಣ 25 ಗ್ರಾಂ,ಕೆಂಪು ಕಲ್ಲು ಸಕ್ಕರೆ 50 ಗ್ರಾಂ, ಚೆನ್ನಾಗಿ ಕಲಸಿದ ಮಿಶ್ರಣವನ್ನು ಒಂದು ಗಾಜಿನ ಬಾಟ್ಲಿಯಲ್ಲಿ ಭದ್ರಪಡಿಸಿ 1ಲೋಟ ಉಗರು ಬೆಚ್ಚಗಿನ ನೀರಲ್ಲಿ ಬೆಳಿಗ್ಗೆ ಸಂಜೆ 1 ಚಮಚ ಕಲಸಿ ಸೇವಿಸುತ್ತಾ ಬಂದರೆ, ದೇಹದಲ್ಲಿನ ರಕ್ತಶುದ್ಧಿಯಾಗುತ್ತೆ.ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ.ಪಿತ್ತ ದೋಷಗಳು ದೂರವಾವುತ್ತೆ.
ಸ್ತ್ರೀಯರಲ್ಲಿ ಋತಸ್ರಾವ ಸಮಸ್ಯೆಇದ್ದಾಗ, ಒಂದು ಪಾತ್ರೆಯಲ್ಲಿ 200ml ನೀರಿಗೆ 1 ಚಮಚ ಮಂಜಿಷ್ಠಾ ಚೂರ್ಣ ಕಲಸಿ ಒಲೆಯ ಮೇಲಿಟ್ಟು ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ,ಉಗರು ಬೆಚ್ಚಗಾದಾಗ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು (ಋತುಸ್ರಾವದ ಸಮಯದಲ್ಲಿ ಮಾತ್ರ ನಾಲ್ಕು ದಿನ ತೆಗೆದುಕೊಳ್ಳಬೇಕು) ಐದಾರು ತಿಂಗಳು ತೆಗೆದುಕೊಂಡರೆ ಋತುಸ್ರಾವ ಕ್ರಮಬದ್ದವಾಗುತ್ತೆ.
ಮಂಜಿಷ್ಠಾ ಚೂರ್ಣ 50 ಗ್ರಾಂ, ನೆಗ್ಗಿಲು ಗಿಡದ ಕಾಯಿಯ ಚೂರ್ಣ 50 ಗ್ರಾಂ ಚೆನ್ನಾಗಿ ಕಲಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು, 200ml ನೀರಿಗೆ 1 ಚಮಚ ಚೂರ್ಣವನ್ನು ಹಾಕಿ ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ ಅದ್ಕಕೆ ಹುರಳಿಕಾಳಿನ ಚೂರ್ಣ 1/2 ಚಮಚ ಕಲಸಿ ಬೆಳಿಗ್ಗೆ ಸಂಜೆ 50ml ನಂತೆ ಸೇವಿಸುತ್ತಾ ಬಂದರೆ ಮೂತ್ರಪಿಂಡದಲ್ಲಿನ ಕಲ್ಲು ಕರಗಿ ಮೂತ್ರದಲ್ಲಿ ಹೊರ ಬರುತ್ತೆ.
ಮಂಜಿಷ್ಠಾ ಚೂರ್ಣ 50 ಗ್ರಾಂ, ಕರಿ ಮೆಣಸಿನ ಪುಡಿ 50 ಗ್ರಾಂ, ಪುದಿನಾ ಚೂರ್ಣ 50 ಗ್ರಾಂ ಕಲಸಿಟ್ಟುಕೊಂಡು, ಸ್ವಲ್ಪ ನೀರಿಗೆ 1 ಚಮಚ ಚೂರ್ಣ ಹಾಕಿ ಚೆನ್ನಾಗಿ ಕುದಿಸಿ, ಸೋಸಿ 1ಲೋಟ ಹಾಲಿನಲ್ಲಿ ಕಷಾಯ ಹಾಗೂ ಕಲ್ಲು ಸಕ್ಕರೆ 1ಚಮಚ ಕಲಸಿ ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತ ಶುದ್ಧಿಯಾಗಿ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ.

ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಗಿಡವನ್ನ ಪರಿಚಯ ಮಾಡಿಕೊಳ್ಳೋಣ. ವಂದನೆಗಳು

“ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅಭಿವೃದ್ದಿ ಮಾದರಿ ಚಿಂತಣೆಗಳನ್ನು” ವಿಕ್ಷೀಸಲು ಇಲ್ಲಿ ಭೇಟಿ ನೀಡಿ

“ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅಭಿವೃದ್ದಿ ಮಾದರಿ ಚಿಂತಣೆಗಳನ್ನು” ವಿಕ್ಷೀಸಲು ಇಲ್ಲಿ ಭೇಟಿ ನೀಡಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ. ವಿ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಸಮಗ್ರ ಗ್ರಾಮಾಭಿವೃದ್ಧಿ ಎಂಬ ಪರಿಕಲ್ಪನೆ ಯಲ್ಲಿ ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಹಾಗೂ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಆಡಿಯೋ ನಾಟಕ “ದೀವಿಗೆ ಬಾಳದಾರಿಗೆ” ವಿಕ್ಷೀಸಿ

ಬ್ಲಡ್ ಗ್ರೂಪ್ ಗೂ ನಿಮ್ಮ ಗುಣಕ್ಕೂ ಇದೆ ಅದ್ಭುತ ನಂಟು..!

ರಾಶಿ, ಜನ್ಮ ದಿನಾಂಕ ಮಾತ್ರವಲ್ಲ ನಿಮ್ಮ ರಕ್ತದ ಗುಂಪು ಕೂಡ ನಿಮ್ಮ ಗುಣ, ಸ್ವಭಾವವನ್ನು ತಿಳಿಸುತ್ತೆ! ಎ, ಬಿ, ಎಬಿ, ಒ ರಕ್ತದ ಗುಂಪುಗಳ ವ್ಯಕ್ತಿಗಳ ಗುಣ, ಸ್ವಭಾವ ಹೇಗಿರುತ್ತೆ. ನೀವೇ ಓದಿ.

‘ಒ’ :
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.38ರಷ್ಟು ಒ+ ಹಾಗೂ ಶೇ.6 ರಷ್ಟು ಒ- ರಕ್ತದ ಗುಂಪಿನವರಿದ್ದಾರೆ.
ಗುಣ ಲಕ್ಷಣಗಳು : ವಿಶ್ವಾಸರ್ಹರು, ಬಲವಾದ ಆತ್ಮಸ್ಥೈರ್ಯ ಉಳ್ಳವರು, ಹೆಮ್ಮೆ ಪಡುವಂತಹ ವ್ಯಕ್ತಿತ್ವದವರು, ಎಲ್ಲರ ಜೊತೆ ಬೆರೆಯುವವರು, ಶಕ್ತಿಶಾಲಿ, ವಾಸ್ತವದಲ್ಲಿ ಯೋಚಿಸುವವರು, ಸವಾಲುಗಳನ್ನು ಇಷ್ಟಪಡುವವರು, ರಿಸ್ಕ್ ತೆಗೆದುಕೊಳ್ಳುವವರು, ಸ್ವಾವಲಂಭಿಗಳು, ಮಹಾತ್ವಾಕಾಂಕ್ಷಿಗಳು, ಹಠಮಾರಿಗಳಾಗಿರುತ್ತಾರೆ.
ಈ ಗುಂಪಿನವರು ಬೇಗನೆ ಸ್ನೇಹವನ್ನು ಸಂಪಾದಿಸುತ್ತಾರೆ. ಅವರೊಡನೆ ಮುಂದುವರೆಯುತ್ತಾರೆ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ತಾರೆ. ಯೋಜನೆಯನ್ನು ಬೇಗನೆ ಆರಂಭಿಸುತ್ತಾರೆ. ಹೊಸ ಕಲ್ಪನೆಗಳನ್ನು ತಕ್ಷಣ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾರೆ. ಸಂಘಟನಾ ಚಟುವಟಿಕೆಗಳನ್ನು ಸುಲಭದಲ್ಲಿ ಮಾಡುತ್ತಾರೆ. ಭಾವನೆಗಳಿಗೆ ಹೆಚ್ಚು ಬೆಲೆ ನೀಡುತ್ತಾರೆ, ಜೊತೆಗೆ ತಮ್ಮ ಭಾವನೆಗಳನ್ನು ಬೇಗನೆ ಹೊರ ಹಾಕುತ್ತಾರೆ. ಎಂತಹ ಸನ್ನಿವೇಶಗಳಿಗೂ ಹೊಂದಿಕೊಳ್ಳುತ್ತಾರೆ. ಆಕರ್ಷಕ ವ್ಯಕ್ತಿತ್ವ ಇವರದ್ದು.

`ಎ’
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.34ರಷ್ಟು ಎ+ ಹಾಗೂ ಶೇ.6ರಷ್ಟು ಎ- ರಕ್ತದ ಗುಂಪಿನವರಿದ್ದಾರೆ.
ಗುಣ ಲಕ್ಷಣಗಳು
ವಿಧೇಯತೆ, ಸಹಾನುಭೂತಿ, ಸ್ವಯಂ ತ್ಯಾಗ ಮನೋಭಾವ, ಪ್ರಾಮಾಣಿಕತೆ, ನಿಷ್ಠಾವಂತ, ಭಾವನಾತ್ಮಕ, ಅಂತರ್ಮುಖಿಗಳು, ಶಾಂತ ಹಾಗೂ ಮೃದು ಸ್ವಭಾವದವರು. ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡುವವರು. ಸಹಕಾರಿ ಮನೋಭಾವದವರು, ಸೂಕ್ಷ್ಮ ಮನಸ್ಸಿನವರು, ಬುದ್ಧಿವಂತರು, ಚಿಂತನಶೀಲರು. ಇವರಿಗೆ ಕೋಪ ಹೆಚ್ಚು, ತಾಳ್ಮೆ ಕಡಿಮೆ


`ಬಿ’
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.9ರಷ್ಟು ಬಿ+ ಹಾಗೂ ಶೇ.2 ರಷ್ಟು ಬಿ- ರಕ್ತದ ಗುಂಪಿನವರಿದ್ದಾರೆ.
ಗುಣಲಕ್ಷಣಗಳು
ಈ ರಕ್ತದ ಗುಂಪಿನವರು ಚಿಂತನಶೀಲರು, ಮಹತ್ವಾಕಾಂಕ್ಷೆಯುಳ್ಳವರು, ಬಹುತೇಕ ಸಂದರ್ಭಗಳಲ್ಲಿ ಸವಾಲು ಎದುರಿಸಲು ಹಿಂಜರಿಯುವವರು ಆಗಿರುತ್ತಾರೆ. ಹರ್ಷಚಿತ್ತರು, ಆಶಾವಾದಿಗಳು, ಯಾವುದೇ ಕೆಲಸ, ಚಟುವಟಿಕೆಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವವರು, ಸಂವೇಧನಾಶೀಲರು ಆಗಿರುತ್ತಾರೆ. ಗುರಿ ತಲುಪುತ್ತಾರೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡ್ತಾರೆ. ಆದರೆ ಇವರು ಒಳ್ಳೆಯ ಟೀಂ ಪ್ಲೇಯರ್ ಅಲ್ಲ. ವ್ಯಕ್ತಿಗತವಾಗಿರುವವರು. ತನ್ನ ದಾರಿಯೇ ಬೇರೆ ಎಂದು ಸಾಗುವವರಾಗಿರುತ್ತಾರೆ.

`ಎಬಿ’
ಪ್ರಪಂಚದ ಜನಸಂಖ್ಯೆಯಲ್ಲಿ ಶೇ.4ರಷ್ಟು ಎಬಿ+ ಹಾಗೂ ಶೇ.2 ರಷ್ಟು ಎಬಿ- ರಕ್ತದ ಗುಂಪಿನವರಿದ್ದಾರೆ.
ಗುಣಲಕ್ಷಣಗಳು
ಸಾಮಾಜಿಕ ವ್ಯಕ್ತಿತ್ವ ಇವರದ್ದು, ಬೆರೆಯುತ್ತಾರೆ. ಸಹಾನುಭೂತಿ ಉಳ್ಳವರು. ಸೃಜನಶೀಲರು, ಕಲಾತ್ಮಕರು, ಮೂಡಿ, ಒಂಥರಾ ಪ್ರವಾಹಕ್ಕೆ ವಿರುದ್ಧವಾಗಿ ಈಜುವವರು. ಕೆಲವೊಂದು ವಿಚಾರದಲ್ಲಿ ನಾಚಿಕೆ, ಮತ್ತೆ ಕೆಲವೊಂದಿಷ್ಟು ವಿಚಾರದಲ್ಲಿ ಬೋಲ್ಡ್ ಆಗಿರುವವರು. ಸಮಸ್ಯೆಗಳನ್ನು ಪತ್ತೆ ಹಚ್ಚಿ ಸುಲಭದಲ್ಲಿ ಅದನ್ನು ಬಗೆಹರಿಸುವ ಚಾಕಚಕ್ಯತೆ ಇರುವವರು. ಮಾಡಿದ್ರಾಯ್ತು, ಆದ್ರಾಯ್ತು, ಹೋದ್ರೋಯ್ತು ಎನ್ನುವವರಲ್ಲ. ಯಾವುದನ್ನೂ ಲಘುವಾಗಿ ಪರಿಗಣಿಸುವವರಲ್ಲ. ಸಮಾಜದ ಸಾಮಾರಸ್ಯ ಇಷ್ಟಪಡುವವರು ಹಾಗೂ ಅದನ್ನು ಸಾಧಿಸಲು ಪ್ರಯತ್ನಿಸುವವರು.
ಸದೃಢರು, ಗುರಿಯತ್ತ ಛಲದಿಂದ ಮುನ್ನುಗ್ಗುವವರು, ಶ್ರಮಜೀವಿಗಳು, ಸ್ನೇಹಶೀಲರು, ಉತ್ತಮ ಮನರಂಜನೆ ನೀಡುವವರು, ಪ್ರಕೃತಿ ಪ್ರಿಯರು ಆಗಿರುತ್ತಾರೆ. ತಮ್ಮದೇ ದಾರಿಯಲ್ಲಿ ಮುನ್ನುಗ್ಗಿ ಹೋಗುವ ವ್ಯಕ್ತಿ ಎ ಗುಂಪಿನವರದ್ದು.
ಹೀಗೆ ಒಂದೊಂದು ರಕ್ತದ ಗುಂಪಿನವರು ಒಂದೊಂದು ರೀತಿಯ ಗುಣ-ಸ್ವಭಾವ ಹೊಂದಿರ್ತಾರೆ.

ಜುಲೈ 19, 2020;ಆದಿತ್ಯವಾರ: ಇಂದಿನ ರಾಶಿ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಭಾನುವಾರ, ಆರಿದ್ರಾ ನಕ್ಷತ್ರ

ರಾಹುಕಾಲ: ಸಂಜೆ 5:17 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:41 ರಿಂದ 5:17
ಯಮಗಂಡಕಾಲ: ಮಧ್ಯಾಹ್ನ 12:30 ರಿಂದ 2:05

ಮೇಷ

ಅಪೇಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಎಲ್ಲ ಪ್ರಯತ್ನಗಳಿಗೂ ಫಲ ದೊರಕಲಿದೆ. ಉದ್ಯೋಗದ ಅವಕಾಶಗಳು ತೆರೆಯಲಿವೆ. ಹಿರಿಯರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ.

ವೃಷಭ

ವಿನಾಕಾರಣ ವಾದ ವಿವಾದಗಳನ್ನು ನಡೆಸದಿರುವುದು ಒಳಿತು. ಹಿರಿಯರ ಸಲಹೆಗಳನ್ನು ಉಪೇಕ್ಷಿಸುವುದು ಸರಿಯಲ್ಲ. ವ್ಯವಹಾರದಲ್ಲಿ ಸಾಮಾನ್ಯ ಆದಾಯವನ್ನು ನಿರೀಕ್ಷಿಸಬಹುದು.

ಮಿಥುನ

ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳು ಶೀಘ್ರವಾಗಿ ನೆರವೇರಲಿದೆ. ಹಣಕಾಸಿನ ಅನುಕೂಲತೆಗಳು ಕೂಡಿಬರುವುದರಿಂದಾಗಿ ಹೊಸ ಯೋಜನೆಗಳಿಗೆ ಧೈರ್ಯವಾಗಿ ಮುನ್ನುಡಿ ಇಡುವಿರಿ.

ಕಟಕ

ನಿಮ್ಮ ವ್ಯವಹಾರದ ಬಗ್ಗೆ ಸಂಗಾತಿಯೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೀರಿ. ಹಿರಿಯರ ಯೋಗಕ್ಷೇಮ ನೋಡಲಿದ್ದೀರಿ. ವಿವಾದಿತ ವಿಷಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ.

ಸಿಂಹ

ಪಾಲುಗಾರಿಕೆ ವ್ಯವಹಾರ ಹೊಸ ತಿರುವು ಪಡೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಉತ್ತಮ ಅವಕಾಶ ನಿಮಗೆ ದೊರಕಲಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು.

ಕನ್ಯಾ

ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡದಿರುವುದು ಒಳಿತು. ಮಾನಸಿಕ ಸಮತೋಲನಕ್ಕಾಗಿ ಸಮಾಧಾನದಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಅನುಕೂಲವಾಗಲಿದೆ.

ತುಲಾ

ಅಪೇಕ್ಷಿತ ಕೆಲಸ ಕಾರ್ಯಗಳಿಗೆ ಉತ್ತಮ ಸಹಕಾರ ದೊರಕಲಿದೆ. ಹಿರಿಯರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಾಗಿ ಬದುಕಿಗೊಂದು ಹೊಸ ಆಯಾಮ ಮೂಡಿಬರಲಿದೆ. ದೂರದ ಪ್ರಯಾಣ ಬೆಳೆಸಲಿದ್ದೀರಿ.

ವೃಶ್ಚಿಕ

ನಿಮ್ಮ ಕ್ರೀಡಾ – ಸಾಹಸಿ ಮನೋಭಾವದಿಂದಾಗಿ ಉತ್ತಮ ವರಮಾನ ಪಡೆಯಲಿದ್ದೀರಿ. ಯೋಗ್ಯ ವಿಚಾರಗಳಲ್ಲಿ ನಿಮ್ಮ ಬುದ್ಧಿ ಚಾತುರ್ಯದಿಂದಾಗಿ ಉತ್ತಮ ನಿರ್ಣಯ ಕೈಗೊಳ್ಳಲಿದ್ದೀರಿ. ಹೊಸ ಜವಾಬ್ದಾರಿ ವಹಿಸಬೇಕಾದೀತು.

ಧನು

ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಿ ಸಹಕಾರ ಹಸ್ತ ನೀಡಲಿದ್ದೀರಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಬಗೆಹರಿಯದ ಸಮಸ್ಯೆಗಳ ವಿಚಾರದಲ್ಲಿ ಸಂಗಾತಿಯೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ.

ಮಕರ

ನಿಮ್ಮ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಮಹತ್ವದ ವಿಷಯದ ಕುರಿತು ಚಿಂತನ ಮಂಥನ ನಡೆಸಲಿದ್ದೀರಿ. ಆರ್ಥಿಕ ಅನುಕೂಲ ದೊರಕಲಿದೆ.

ಕುಂಭ

ಸಮಾಜದ ನಾಯಕತ್ವವನ್ನು ವಹಿಸುವ ಅಪೂರ್ವ ಅವಕಾಶ ನಿಮಗೆ ದೊರಕಲಿದೆ. ಅತಿಯಾದ ಆತ್ಮ ವಿಶ್ವಾಸವು ನಿಮ್ಮನ್ನು ನಗೆಪಾಟಲಿಗೆ ದೂಡುವ ಸಾಧ್ಯತೆ ಕಂಡುಬರುತ್ತಿದೆ. ವ್ಯವಹಾರದಲ್ಲಿ ಅನುಕೂಲಕರ ವಾತಾವರಣ.

ಮೀನ

ವೃತ್ತಿಯಲ್ಲಿ ಭಿನ್ನವಾಗಿ ಯೋಚಿಸುವ ಮೂಲಕ ಮುನ್ನಡೆಯನ್ನು ಸಾಧಿಸಲಿದ್ದೀರಿ. ಸಂಗಾತಿಯ ಸಹಕಾರದಿಂದ ಸಂತಸ ಹಾಗೂ ವಿಶ್ವಾಸ ಮೂಡಿಬರಲಿದೆ. ಹೊಸ ಯೋಜನೆಗೆ ಚಾಲನೆ ನೀಡಲಿದ್ದೀರಿ.

Design a site like this with WordPress.com
Get started