ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಇಲ್ಲಿವೆ ಕಾಯ್ದೆಯಲ್ಲಿರುವ 25 ಅಂಶಗಳು

ಬೆಂಗಳೂರು, (ಡಿ.09): ಭಾರೀ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಇಂದು (ಬುಧವಾರ) ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ. 

ಇನ್ನು ಈ ವಿಧೇಯಕದಲ್ಲಿ ಕಠಿಣ ನಿಯಮಗಳನ್ನು ಅಡಕ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ. 

ಬಳಿಕ ಗೋ ಹತ್ಯೆ, ಗೋಮಾಂಸ ಮಾರಾಟ ಕ್ರಿಮಿನಲ್ ಅಪರಾಧವಾಗಲಿದ್ದು, ದಂಡ ಸಹಿತ ಜೈಲು ಶಿಕ್ಷೆ ಗ್ಯಾರಂಟಿ. ಇನ್ನು ಈ  ಗೋ ಹತ್ಯೆ ನಿಷೇಧ  ಕಾಯ್ದೆಯಲ್ಲಿ 25 ಕಠಿಣ ನಿಯಮಗಳಿದ್ದು, ಅವು ಈ ಕೆಳಗಿನಂತಿವೆ ನೋಡಿ.

ಪ್ರಸ್ತಾವಿತ ಕಾಯ್ದೆಯಲ್ಲಿರುವ  ಅಂಶಗಳು
1. ಗೋ ಹತ್ಯೆ ಮಾಡಿದರೆ 3 ವರ್ಷಗಳಿಂದ 7 ವರ್ಷಗಳವರೆಗೆ ಕಾರಾಗೃಹವಾಸ
2. ಮೊದಲ ಬಾರಿ ಜಾನುವಾರು ಹತ್ಯೆ ಮಾಡಿದರೆ 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ
3. ಎರಡು ಅಥವಾ ಹೆಚ್ಚಿನ ಬಾರಿಯ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂ.ದಂಡ ಮತ್ತು ಏಳು ವರ್ಷ ಕಾರಾಗೃಹ ಶಿಕ್ಷೆ
4. ಹಸುಗಳ ಸಾಗಣೆ ಮತ್ತು ಶುಲ್ಕ ವಿಧಿಸಲು, ನಿಯಮ ರಚಿಸಲು, ಅನುಮತಿ ನೀಡಲು ಅಧಿಕಾರ
5. ಉಪವಿಧಿ 2 ಮತ್ತು ನಿಯಮ 18ರ ಪ್ರಕಾರ ಗೋ ವಧಾಗಾರಗಳಲ್ಲಿ ವಿಲೇವಾರಿ ಮಾಡಲು ನಿಯಮ
6. ಸ್ಥಳೀಯ ಆಡಳಿತಕ್ಕೆ ಗೋ ಶಾಲೆ ನಿರ್ವಹಣೆ ಮಾಡುವ ವಿಧಾನಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ
7. ರಕ್ಷಣೆಗೆ ಸಂಬಂಧಪಟ್ಟಂತೆ ಲೆವಿ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಅವಕಾಶ
8. ಸಬ್ ಇನ್‌ಸ್ಪೆಕ್ಟರ್ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ
9. ದಾಳಿ ಮಾಡುವುದು, ಪರಿಶೀಲನೆ ಮತ್ತು ವಶಕ್ಕೆ ಪಡೆವ ಅಧಿಕಾರ ಸಬ್ ಇನ್‌ಸ್ಪೆಕ್ಟರ್‌ಗಳಿಗೆ
10. ಗೋವನ್ನು ಅನುಮಾನಾಸ್ಪದವಾಗಿ ಕಟ್ಟಿಕೊಂಡಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದಾಗ ತನಿಖಾಧಿಕಾರಿಗೆ ಸಹಕಾರ ನೀಡಬೇಕು
11. ವಶಕ್ಕೆ ಪಡೆದ ವಿಚಾರವನ್ನು ತಕ್ಷಣ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟರ್‌ಗಳಿಗೆ ತಿಳಿಸಿ ಅಲ್ಲಿಂದ ಮುಟ್ಟುಗೋಲು ಹಾಕಿಕೊಳ್ಳುವುದು
12. ಗೋ ಮಾಂಸ ವಶಕ್ಕೆ ಪಡೆದಿದ್ದರೆ ಮನುಷ್ಯನ ಉಪ ಭೋಗಕ್ಕೆ ಉಪಯೋಗವಲ್ಲ ಎಂದು ಪರಿಗಣಿಸಿ ನಾಶಪಡಿಸಬಹುದು
13. ವಶಪಡಿಸಿಕೊಂಡ ಹಸುಗಳನ್ನು ಸಾರ್ವಜನಿಕ ಹರಾಜು ಮಾಡಲು ಅವಕಾಶ
14. ಸೆಕ್ಷನ್ 19ರ ಪ್ರಕಾರ ಯಾವುದೇ ಸಂದರ್ಭದಲ್ಲಿ ವಶಕ್ಕೆ ಪಡೆದ ಹಸುಗಳನ್ನು ಆರೋಪಿತರಿಗೆ ಹಿಂದಿರುಗಿಸುವಂತಿಲ್ಲ
15. ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ
16. ಆರೋಪಿತರನ್ನು ವಶಕ್ಕೆ ಪಡೆಯುವುದು, ಪ್ರಕರಣ ವಿಲೇವಾರಿ ಸೆಷನ್ ಜಡ್ಜ್ ಹಂತದಲ್ಲೇ ನಡೆಯಬೇಕು
17. ಪ್ರಕರಣ ಮುಗಿದ ಬಳಿಕ ಆರೋಪ ಸಾಬೀತಾದಲ್ಲಿ ಹಸು, ಸಾಗಣೆ, ವಾಹನ, ಸ್ಥಳ ಮುಟ್ಟುಗೋಲು ಹಾಕಿಕೊಳ್ಳಬಹುದು. 18. ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ
19. ಯಾವುದೇ ಲಸಿಕೆ, ಪ್ರಯೋಗಕ್ಕಾಗಿ ಸರ್ಕಾರ ಸ್ಥಾಪನೆ ಮಾಡಿರುವ ಪ್ರಯೋಗಾಲಯಕ್ಕೆ ಈ ನಿಯಮ ಅನ್ವಯವಾಗಲ್ಲ
20. ಸಾರ್ವಜನಿಕ ಹಿತಕ್ಕಾಗಿ ಪ್ರಾಣಿಯನ್ನು ಕೊಲ್ಲಲೇಬೇಕೆಂದು ಸರ್ಕಾರದಿಂದ ಪ್ರಮಾಣಿತವಾಗಿದ್ದರೆ ಅನ್ವಯವಾಗಲ್ಲ
21. ಸಾಂಕ್ರಾಮಿಕ ರೋಗಗಳ ಜಾನುವಾರುಗಳನ್ನು ಕೊಲ್ಲುವುದಕ್ಕೆ ತೊಂದರೆ ಇಲ್ಲ, ಆದರೆ, ಪಶುವೈದ್ಯಾಧಿಕಾರಿ ಪ್ರಮಾಣಪತ್ರ ಅಗತ್ಯ
22. ಗುಣವಾಗದ ಕಾಯಿಲೆ ಹೊಂದಿದ ಹಸು ಕೊಲ್ಲಲು ಅವಕಾಶವಿದೆ, ಆದರೆ, ಪ್ರಮಾಣ ಪತ್ರ ಅಗತ್ಯ
23. ಹದಿಮೂರು ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣ ಸೂಕ್ತ ಪ್ರಾಧಿಕಾರದ ಪರವಾನಗಿಯೊಂದಿಗೆ ವಧಿಸಬಹುದು
24. ವಧೆಗೆ ಪಶು ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಕಡ್ಡಾಯ
25. ಕರ್ನಾಟಕ ಸೊಸೈಟಿ ಆಕ್ಟ್ ಪ್ರಕಾರ ನೊಂದಾಯಿತ ಸಂಸ್ಥೆಗಳಿಗೆ ಮಾತ್ರ ಗೋ ಶಾಲೆ ನಡೆಸಲು ಅಧಿಕಾರ

ಡಿಸೆಂಬರ್ 10,ಗುರುವಾರ ;2020 :ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕಮಾಸ,
ಕೃಷ್ಣಪಕ್ಷ, ದಶಮಿ ಏಕಾದಶಿ,
ಗುರುವಾರ,
ಹಸ್ತ ನಕ್ಷತ್ರ / ಚಿತ್ತಾ ನಕ್ಷತ್ರ,
ರಾಹುಕಾಲ : 01:42 ರಿಂದ 03:08
ಗುಳಿಕಕಾಲ : 09:24 ರಿಂದ 10:50
ಯಮಗಂಡಕಾಲ : 6:33 ರಿಂದ 07:58

ಮೇಷ

ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಸರಳ ವಿವಾಹದ ನಿಶ್ಚಯದಿಂದಾಗಿ ಮನೆಯಲ್ಲಿ ಸಂತಸ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ.

ವೃಷಭ

ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಶ್ರಮವಹಿಸಿ ಮಾಡಿದ ಉತ್ತಮ ಸಾಧನೆಯ ಸಂತಸವನ್ನು ಮನೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಪದೋನ್ನತಿಯಿಂದಾಗಿ ಉತ್ತಮ ಆದಾಯ.

ಮಿಥುನ

ಸ್ನೇಹಿತರು ಮತ್ತು ಬಂಧುಗಳೊಂದಿಗಿನ ಸಂಬಂಧಗಳು ಗಟ್ಟಿಗೊಳ್ಳುವ ಸಾಧ್ಯತೆ. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಮನೆಯವರ ಮನ ಮೆಚ್ಚಿಸಲು ಅನ್ಯ ಮಾರ್ಗ ಸರಿಯಾಗಲಾರದು.

ಕಟಕ

ವೃತ್ತಿ ನೈಪುಣ್ಯತೆಯಿಂದಾಗಿ ನೌಕರಸ್ಥರಿಗೆ ವಿಶೇಷ ಸ್ಥಾನಮಾನ ದೊರಕಲಿದೆ. ಪದೋನ್ನತಿಯಿಂದಾಗಿ ಆರ್ಥಿಕ ಸುಧಾರಣೆ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೆಗೆ ಹೊಸ ಸದಸ್ಯರ ಸೇರ್ಪಡೆಯ ಸಂಭ್ರಮ.

ಸಿಂಹ

ಅನಗತ್ಯ ಮಾತು ಕತೆ, ಚರ್ಚೆಗಳಲ್ಲಿ ಭಾಗವಹಿಸದಿರುವುದೇ ಉತ್ತಮ. ವಕೀಲ ವೃತ್ತಿಯಲ್ಲಿರುವವರಿಗೆ ಬಿಡುವಿನ ದಿನ. ಪ್ರಯಾಣ ಪ್ರವಾಸಗಳಿಗೆ ಶುಭದಿನವಾಗಲಿದೆ. ಚಿನ್ನಾಭರಣ ವ್ಯಾಪಾರಿಗಳಿಗೆ ವಿಶೇಷ ಲಾಭ.

ಕನ್ಯಾ

ವೃತ್ತಿ ಜೀವನದಲ್ಲಿ ಬದಲಾವಣೆ ಸಾಧ್ಯತೆ. ಆದಾಯದಲ್ಲಿ ಹೆಚ್ಚಳದ ನಿರೀಕ್ಷೆ. ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆಯನ್ನು ಗಮನಿಸಿ ಸಾಮಾಜಿಕ ಗೌರವ ಪ್ರಾಪ್ತವಾಗಲಿದೆ. ಸಂಗಾತಿಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ.

ತುಲಾ

ನಿಮ್ಮ ರಾಜಕೀಯ ವಿಷಯದಲ್ಲಿ ಬದಲಾವಣೆ ಕಾಣಲಿದ್ದೀರಿ. ನಿಮ್ಮ ಪ್ರಭಾವದಿಂದಾಗಿ ನೆರೆಹೊರೆಯವರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ‌.

ವೃಶ್ಚಿಕ

ಬಂಧುಗಳ ಮನೆಯಲ್ಲಿ ಸಂಜೆಯವರೆಗೂ ವಿಶೇಷ ಸಮಾರಂಭಗಳಲ್ಲಿ ಸಾಧ್ಯತೆ. ಮನೆಯವರ ವಿಷಯದಲ್ಲಿ ಉದಾಸೀನ ಸಲ್ಲದು. ವ್ಯವಹಾರಗಳು ಎಂದಿನಂತೆ ನಡೆಯಲಿವೆ.

ಧನು

ಆಭರಣ ತಯಾರಿಕೆ, ಗೃಹಾಲಂಕಾರ ಸಾಮಗ್ರಿ ಮುಂತಾದ ಕರಕುಶಲ ವೃತ್ತಿಗಳಲ್ಲಿ ತೊಡಗಿದವರಿಗೆ ಹೆಚ್ಚಿನ ವರಮಾನ. ನೆನೆಗುದಿಗೆ ಬಿದ್ದಿರುವ ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಲು ಚುರುಕು ಪಡೆದುಕೊಳ್ಳುವವು.

ಮಕರ

ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಮಾಜಕಲ್ಯಾಣ ಕಾರ್ಯಕ್ಕಾಗಿ ನಿಮ್ಮ ಸಲಹೆ ಸಹಕಾರಗಳನ್ನು ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು.

ಕುಂಭ

ಕೆಲಸ–ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸುವುದರಿಂದ ನೆಮ್ಮದಿ. ಮನೆಯ ಜವಾಬ್ದಾರಿಯನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸಿ ಪ್ರಶಂಸೆಗೆ ಪಾತ್ರರಾಗುವಿರಿ.

ಮೀನ

ಸಲಹೆಗಾರರಾಗಿ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿದೆ. ಗುಪ್ತ ಆಸ್ತಿ ಖರೀದಿಯ ಸಾಧ್ಯತೆ. ತುರ್ತು ವಿಷಯಗಳ ಬಗ್ಗೆ ಗಮನ ಹರಿಸುವಿರಿ. ದೂರದಲ್ಲಿರುವ ಗೆಳೆಯರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ.

ಡಿಸೆಂಬರ್09, ಬುಧವಾರ; 2020 :ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣಪಕ್ಷ
ವಾರ: ಬುಧವಾರ, ತಿಥಿ: ನವಮಿ,
ನಕ್ಷತ್ರ: ಉತ್ತರ,
ರಾಹು ಕಾಲ: 12.16 ರಿಂದ 1.42
ಗುಳಿಕ ಕಾಲ: 10.50 ರಿಂದ 12.16
ಯಮಗಂಡ ಕಾಲ: 7.58 ರಿಂದ 9.24.

ಮೇಷ

ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ಕುದುರುವುದರಿಂದ ಆದಾಯ ಹೆಚ್ಚಲಿದೆ. ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರಕುವ ಸಾಧ್ಯತೆ. ವಿವಾಹ ನಿಶ್ಚಯ ಮುಂತಾದ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.

ವೃಷಭ

ನೂಲು ತೆಗೆಯುವ, ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಕರುಗಳಿಗೆ ವಿಶೇಷ ಬೇಡಿಕೆಯಿಂದಾಗಿ ಉತ್ತಮ ಲಾಭ. ಸ್ವಂತ ಉದ್ಯಮ, ಕಾರ್ಖಾನೆಗಳನ್ನು ನಡೆಸುತ್ತಿರುವವರಿಗೆ ಉತ್ತಮ ಆದಾಯ.

ಮಿಥುನ

ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ. ವಾಹನ ಮಾರಾಟದಿಂದ ಉತ್ತಮ ಲಾಭ. ಕಾರ್ಯಕ್ರಮಗಳ ಒತ್ತಡ – ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ. ಸಮಾಧಾನಚಿತ್ತರಾಗಿ ವ್ಯವಹರಿಸಿ.

ಕಟಕ

ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಸರ್ಕಾರದ ಕಾಮಗಾರಿಗಳು ದೊರೆತು ಸಂತಸ. ಮಂಗಳಕಾರ್ಯಗಳಿಗಾಗಿ ಮಕ್ಕಳೊಂದಿಗೆ ಚರ್ಚಿಸುವ ಸಾಧ್ಯತೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ.

ಸಿಂಹ

ಸರ್ಕಾರಿ ಕೆಲಸಗಳಲ್ಲಿರುವವರಿಗೆ ಬಡ್ತಿ ಅಥವಾ ಸ್ಥಳ ಬದಲಾವಣೆಯ ಸಾಧ್ಯತೆ. ಹೊಸ ನಿವೇಶನ ಖರೀದಿ ಅಥವಾ ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಒತ್ತಡ ಹೆಚ್ಚಲಿದೆ.

ಕನ್ಯಾ

ಕೈಗೊಂಡ ಕೆಲಸ–ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನವ ದಂಪತಿಗಳಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡುವ ಸಾಧ್ಯತೆ.

ತುಲಾ

ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟದಿಂದಾಗಿ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳಲಿದ್ದೀರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಅವಕಾಶ. ಶುಭಕಾರ್ಯಗಳನ್ನು ನಡೆಸುವ ಬಗ್ಗೆ ಚಿಂತನೆ.

ವೃಶ್ಚಿಕ

ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಗಳಿಂದ ಅಧಿಕ ವರಮಾನ. ಹೊಸ ಗೃಹನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸಮಾಧಾನಕರವಾಗಿ ಕೆಲಸಗಳನ್ನು ನಿರ್ವಹಿಸಿ ತೊಂದರೆಯಿಂದ ಪಾರಾಗಲಿದ್ದೀರಿ.

ಧನು

ಕೃಷಿಕರಿಗೆ ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕುವುದರಿಂದಾಗಿ ಕೃಷಿ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ. ಹೊಸ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ.

ಮಕರ

ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಸಿದ್ಧತೆ ನಡೆಸಲು ಸಕಾಲ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲೂ ವಿಸ್ತರಿಸಲು ಅನುಮತಿಯನ್ನು ಪಡೆಯಲಿದ್ದೀರಿ. ಮಕ್ಕಳ ವಿಶೇಷ ಸಾಧನೆಯ ಸಾಧ್ಯತೆ ಇದ್ದು ಸಂತಸ.

ಕುಂಭ

ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ ದೊರಕಲಿದೆ. ಹೊಸ ಕೆಲಸಗಳಿಗೆ ಮಾಡುವ ಪ್ರಯತ್ನಕ್ಕೆ ಸ್ನೇಹಿತರಿಂದ ಸಹಾಯ ದೊರೆಯಲಿದೆ. ಯಂತ್ರೋಪಕರಣಗಳ ವ್ಯವಹಾರದಿಂದಾಗಿ ಉತ್ತಮ ಲಾಭ.

ಮೀನ

ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದಾಗಿ ಹೇರಳ ಲಾಭ. ಮಂಗಳಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ.

ವಾಹನ ಸವಾರರಿಗೆ ಗುಡ್ ನ್ಯೂಸ್ : ಕೊರೋನಾ ಕಾಲದಲ್ಲಿ ‘ಬಳಕೆಗೆ ತಕ್ಕಂತೆ ವಾಹನ ವಿಮೆ ಪಾವತಿ’ ಸೌಲಭ್ಯ

ಸ್ಪೆಷಲ್ ಡೆಸ್ಕ್ : ಕೋವಿಡ್‍-19 ಸಂಕಷ್ಟದ ಈ ಕಾಲಘಟ್ಟದಲ್ಲಿ ಬಹುತೇಕ ಕಂಪನಿಗಳು ವರ್ಕ್‍ ಫ್ರಂ ಹೋಮ್ ನೀತಿಯನ್ನು ಅಳವಡಿಸಿಕೊಂಡಿರುವ ಕಾರಣ, ರಾಷ್ಟ್ರವ್ಯಾಪಿ ನಾವೆಲ್ಲ ವಾಹನ ಚಲಾಯಿಸುವ ಪ್ರಮಾಣ ಕಿಲೋಮೀಟರ್‍ ಲೆಕ್ಕದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ ಮಧ್ಯಭಾಗದಿಂದ ಜೂನ್‍ ಮೊದಲ ವಾರದ ತನಕದ ಅವಧಿಯಲ್ಲಿ ದೇಶಾದ್ಯಂತ ವಾಹನ ಸಂಚಾರ ಬಹುತೇಕ ಶೇಕಡ 50 ಕಡಿಮೆಯಾಗಿದೆ. ಇದು ನಿಜವಾಗಿಯೂ ಸ್ವಲ್ಪ ವಿಚಿತ್ರವಾದ ಕಾಲಘಟ್ಟವಾಗಿದ್ದು, ನಮ್ಮ ಬದುಕಿನ ಎಲ್ಲ ಆಯಾಮಗಳಲ್ಲಿ ಅಸಾಧಾರಣ ಬದಲಾವಣೆಗಳು ಸಾಮಾನ್ಯವಾಗತೊಡಗಿವೆ. ರಾಷ್ಟ್ರವ್ಯಾಪಿ ಉದ್ಯೋಗಿಗಳನ್ನು (ವರ್ಕ್‍ ಫ್ರಂ ಹೋಮ್) ಮನೆಯಿಂದಲೇ ಕೆಲಸ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಬಹುತೇಕ ಶಾಪಿಂಗ್‍ ಈಗ ಆನ್‍ಲೈನ್‍ ಮೂಲಕವೇ ಆಗುತ್ತಿದೆ. ಅಲ್ಲದೆ, ನಾವು ಇದಕ್ಕೂ ಮೊದಲು ಬಳಸುತ್ತಿದ್ದ ಅನೇಕ ಸಂಗತಿಗಳ ಬಳಕೆಯ ವಿಧಾನವೂ ಬದಲಾಗಲಿವೆ. ಪ್ರತಿಯೊಂದು ಕಡೆಯೂ ಬದಲಾವಣೆಯಾಗುತ್ತಿರಬೇಕಾದರೆ ವಿಮೆಯೂ ಯಾಕೆ ಅದರಿಂದ ಹೊರಗೆ ಉಳಿಯುತ್ತದೆ?

ಹಾಗಾಗಿ, ನಾವು ಈಗ ಕೊನೆಗೂ ಭಾರತದಲ್ಲಿ ಬಳಕೆ ಆಧಾರಿತ ಮೋಟಾರು ವಿಮೆಯನ್ನು ಹೊಂದಿದ್ದೇವೆ. ಇದರಂತೆ, ಹೊಸ ಮಾದರಿಯ ಕಾರು ವಿಮಾ ಪಾಲಿಸಿಗಳನ್ನು ವಿವಿಧ ವಿಮಾ ಕಂಪನಿಗಳು ಬಿಡುಗಡೆ ಮಾಡಿದೆ. ಇದರಲ್ಲಿ, ಒಂದು ಪೂರ್ಣ ವರ್ಷಕ್ಕೆ ವಿಮೆಯ ಪ್ರೀಮಿಯಂ ಪಾವತಿಸುವ ಬದಲು ಇನ್ನು ಕಾರು ಮಾಲೀಕರು ಅವರ ವಾಹನವನ್ನು ಎಷ್ಟು ಕಿಲೋಮೀಟರ್ ಚಲಾಯಿಸಲು ಬಯಸುತ್ತಾರೋ ಅಷ್ಟಕ್ಕೆ ವಿಮೆಯ ಪ್ರೀಮಿಯಂ ಪಾವತಿಸಿದರೆ ಸಾಕು.  ನಿಜವಾಗಿ ಎಷ್ಟು ಡ್ರೈವ್ ಮಾಡುತ್ತೀರೋ ಅಷ್ಟನ್ನು ಆಧರಿಸಿದ ಬೆಲೆಯ ಕಾರು ವಿಮೆಯ ಹುಡುಕಾಟದಲ್ಲಿ ಇರುವವರಿಗೆ ಬಹುಶಃ “ನಿಮ್ಮ ಬಳಕೆಗೆ ತಕ್ಕಂತೆ ವಿಮೆ(pay-as-you-use insurance)” ಉತ್ತರವಾಗಿರಲಿದೆ. ಕಳೆದ ಕೆಲವು ವಾರಗಳಲ್ಲಿ, ಬಹಳಷ್ಟು ವಿಮಾ ಕಂಪನಿಗಳು ನಿಮ್ಮ ಬಳಕೆಗೆ ತಕ್ಕಂತೆ ವಿಮೆಯನ್ನು ಶುರುಮಾಡಿವೆ.  ಹೆಚ್ಚಾಗಿ ಸಂಚಾರದಲ್ಲೇ ಇರುವ ಚಾಲಕರಿಗೆ ಈ ವಿಮಾ ಯೋಜನೆಗಳು ಅವರ ಕಾರು ವಿಮೆಯ ವೆಚ್ಚವನ್ನು ತಗ್ಗಿಸುವ ಅವಕಾಶವನ್ನು ನೀಡಲಿವೆ.

ಎಡೆಲ್‍ವೈಸ್‍ ಜನರಲ್ ಇನ್ಶೂರೆನ್ಸ್‍ (ಇಜಿಐ)- ಎಡೆಲ್‍ವೈಸ್‍ ಸ್ವಿಚ್‍

ದ ಎಡೆಲ್‍ವೈಸ್ ಜನರಲ್ ಇನ್ಶೂರೆನ್ಸ್‍ (ಇಜಿಐ)- ಎಡೆಲ್‍ವೈಸ್ ಸ್ವಿಚ್‍ ಎಂಬುದು ಚಾಲಕ ಆಧಾರಿತ ಮೋಟಾರು ವಿಮಾ ಪಾಲಿಸಿಯಾಗಿದ್ದು, ವಾಹನ ಮಾಲೀಕರು ಅವರ ವಾಹನ ವಿಮೆಯನ್ನು ಬಳಕೆಗೆ ಅನುಗುಣವಾಗಿ ಆನ್ ಮತ್ತು ಆಫ್ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದೆ. ಅಲ್ಲದೆ, ಫ್ಲೋಟರ್ ಪಾಲಿಸಿಯಂತೆ ಇದು ಒಂದೇ ಪಾಲಿಸಿಯಲ್ಲಿ ಅನೇಕ ವಾಹನಗಳ ವಿಮೆಯನ್ನು ಕೂಡ ಕವರ್ ಮಾಡುತ್ತದೆ.  ಸಾಮಾನ್ಯ ಮೋಟಾರ್‍ ವೋನ್ ಡ್ಯಾಮೇಜ್ ಪಾಲಿಸಿಗಿಂತ ಭಿನ್ನವಾಗಿ ಎಡೆಲ್‍ವೈಸ್ ಸ್ವಿಚ್‍ ವಿಮೆಯ ಪ್ರೀಮಿಯಂ ಅನ್ನು ಚಾಲಕನ ವಯಸ್ಸು ಮತ್ತು ಚಾಲನಾ ಅನುಭವದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಪಾಲಿಸಿಯು ಗ್ರಾಹಕರಿಗೆ ಗಣನೀಯವಾಗಿ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಅನುಕೂಲಕರವಾಗಿಯೂ ಇದೆ. ಯಾಕೆಂದರೆ, ಎಡೆಲ್‍ವೈಸ್‍ ಸ್ವಿಚ್‍ ಮಾದರಿಯ ಬಳಕೆಗೆ ತಕ್ಕಂತೆ ಪಾವತಿಯ ವಿಮೆಯು ಗ್ರಾಹಕರಿಗೆ ಅವರು ವಾಹನ ಬಳಸಿದಾಗಷ್ಟೆ ವಿಮೆಯ ಪ್ರೀಮಿಯಂ ಪಾವತಿಸಿದರೆ ಸಾಕು. ಆದಾಗ್ಯೂ, ಅಪಘಾತದಿಂದ ಆಗಿರುವ ಹಾನಿಯ ಕ್ಲೇಮ್‍ ಅನ್ನು ಈ ಪಾಲಿಸಿಯಲ್ಲಿ ಮಾಡಬೇಕೆಂದರೆ ಆ ಸಂದರ್ಭದಲ್ಲಿ ವಿಮೆಯ ಸ್ವಿಚ್ ಆನ್ ಆಗಿರಬೇಕು. ಇನ್ನು ಕಳವು, ಅಗ್ನಿ ಅವಘಡದ ವಿರುದ್ಧದ ವಿಮಾ ರಕ್ಷಣೆ ವಾಹನ ಚಲಾವಣೆಯಲ್ಲಿ ಇಲ್ಲದೇ ಇದ್ದಾಗಲೂ 24/7/365 ದಿನವೂ ಲಭ್ಯವಿರಲಿದೆ. ನಿಮ್ಮ ಬಳಕೆಗೆ ತಕ್ಕಂತೆ ವಿಮೆ ಮಾದರಿಯು ಮೋಟಾರು ವಿಮೆಯ ಪ್ರೀಮಿಯಂ ಅನ್ನು ನಿರ್ಧರಿಸುವ ಮಾನದಂಡದಲ್ಲಿ ಬದಲಾವಣೆಯನ್ನು ತರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ವಾಹನ ಮಾಲೀಕರ ಬಳಕೆ ಮತ್ತು ಚಾಲನಾ ಅನುಭವವೂ ಪರಿಗಣಿಸಲ್ಪಡಲಿದೆ.

ಭಾರ್ತಿ ಎಎಕ್‍ಎ ಜನರಲ್ ಇನ್ಶೂರೆನ್ಸ್ – ಪೇ-ಆ್ಯಸ್-ಯೂ-ಡ್ರೈವ್null

ಐಆರ್‍ಡಿಎಯ ಸ್ಯಾಂಡ್‍ಬಾಕ್ಸ್ ಪ್ರಾಜೆಕ್ಟ್ ಪ್ರಕಾರ, ಖಾಸಗಿ ವಾಹನ ಮಾಲೀಕರಿಗೆ ಭಾರ್ತಿ ಎಎಕ್ಸ್‍ಎ ಜನರಲ್ ಇನ್ಶೂರೆನ್ಸ್ ಈಗ ಬಳಕೆ ಆಧಾರಿತ ಮೋಟಾರು ವಿಮೆ ಪಾಲಿಸಿಗಳನ್ನು ಈಗ ಕೊಡತೊಡಗಿದೆ. “ಪೇ-ಆ್ಯಸ್‍-ಯೂ-ಡ್ರೈವ್‍” ಇನ್ಶೂರೆನ್ಸ್ ಪ್ರಾಡಕ್ಟ್‍ ವೋನ್ ಡ್ಯಾಮೇಜ್ ಮತ್ತು ಥರ್ಡ್‍ ಪಾರ್ಟಿ ಡ್ಯಾಮೇಜ್‍ ಪಾಲಿಸಿಗಳ ಕಾಂಬಿನೇಷನ್ ಆಗಿದೆ. ಇದರಲ್ಲಿ ಥರ್ಡ್‍ ಪಾರ್ಟಿ ಪ್ರೀಮಿಯಂ ಅನ್ನು ಐಆರ್‍ಡಿಎ ನಿಯಮ ಪ್ರಕಾರ ನಿರ್ಧಾರವಾಗಲಿದೆ. ಅದೇ ರೀತಿ, ಸಮಗ್ರ ವೋನ್ ಡ್ಯಾಮೇಜ್ ಪ್ರೀಮಿಯಂ ಅನ್ನು ನಿಗದಿತ ಕಾಲಾವಧಿಯಲ್ಲಿ ನಿಮ್ಮ ಕಾರನ್ನು ನೀವು ಎಷ್ಟು ಕಿಲೋಮೀಟರ್ ಚಲಾಯಿಸಲಿದ್ದೀರಿ ಎಂಬ ಲೆಕ್ಕಾಚಾರವನ್ನು ಆಧರಿಸಿ ನಿರ್ಧಾರವಾಗಲಿದೆ. ಪ್ರಸ್ತುತ, 2,500 ಕಿ.ಮೀ., 5,000 ಕಿ.ಮೀ. ಮತ್ತು 7,500 ಕಿ.ಮೀ. ಒಳಗಿನ ಸಂಚಾರ ಎಂಬ ಮೂರು ಸ್ಲ್ಯಾಬ್‍ಗಳಲ್ಲಿ. “ಪೇ-ಆ್ಯಸ್‍-ಯೂ-ಡ್ರೈವ್‍” ಮೋಟಾರು ವಿಮಾ ಪಾಲಿಸಿಯನ್ನು ಕಂಪನಿ ನೀಡುತ್ತಿದೆ. ಆದಾಗ್ಯೂ, ವಿಮಾ ಅವಧಿಯ ನಡುವೆ ಗ್ರಾಹಕರಿಗೆ ತಮ್ಮ ಕಾರು 2,500 ಕಿ.ಮೀ. ಅಥವಾ 5,000 ಕಿ.ಮೀ. ಗಿಂತಲೂ ಹೆಚ್ಚು ಸಂಚರಿಸುತ್ತದೆ ಎಂಬ ಅರಿವು ಆದರೆ ಅವರು ಹೆಚ್ಚಿನ ಸ್ಲ್ಯಾಬ್‍ಗೆ ವಿಮೆಯನ್ನು ವಿಸ್ತರಿಸಬಹುದು. ಅಥವಾ ಸಾಮಾನ್ಯ ವಿಮಾ ಪಾಲಿಸಿಗೆ ವರ್ಗವಾಗಿ ಅನಿಯಮಿತ ಕಿಲೋಮೀಟರ್‍ ಗಳ ಸಂಚಾರಕ್ಕೆ ವಿಮೆಯ ಕವರೇಜ್ ಪಡೆದುಕೊಳ್ಳಬಹುದು. ಎರಡೂ ಸನ್ನಿವೇಶಗಳಲ್ಲಿ ಗ್ರಾಹಕರು ಹೆಚ್ಚುವರಿ ಪ್ರೀಮಿಯಂ ಏನಿರಲಿದೆಯೋ ಅದನ್ನು ಪಾವತಿಸಬೇಕಾಗುತ್ತದೆ. ಒಂದೊಮ್ಮೆ ಗ್ರಾಹಕರು ಖರೀದಿಸಿದ. “ಪೇ-ಆ್ಯಸ್‍-ಯೂ-ಡ್ರೈವ್‍” ವಿಮೆಯಲ್ಲಿ ನಿಗದಿಪಡಿಸಿದ ಕಿ.ಮೀ.ಗೂ ಮೀರಿ ಕಾರು ಚಲಾಯಿಸಿದರೆ ಅಂತಹ ಸಂದರ್ಭದಲ್ಲಿ ಥರ್ಡ್‍ ಪಾರ್ಟಿ ವಿಮಾ ರಕ್ಷಣೆ ಚಾಲ್ತಿಯಲ್ಲಿ ಇರುತ್ತದೆ. ಆದರೆ, ವೋನ್ ಡ್ಯಾಮೇಜ್‍ ವಿಮಾ ರಕ್ಷಣೆ ಇಲ್ಲದಿರುವ ಕಾರಣ ಇದನ್ನು ಕ್ಲೇಮು ಮಾಡಲಾಗದು. ಪಾಲಿಸಿ ಅವಧಿಯನ್ನು ಪರಿಗಣಿಸಿ ಸದ್ಯ ಚಾಲ್ತಿಯಲ್ಲಿರುವ ಲೈಯಬಿಲಿಟಿ ಕ್ಲೇಮ್ಸ್ ಅಭ್ಯಾಸಗಳ ಪ್ರಕಾರ ಥರ್ಡ್‍ ಪಾರ್ಟಿ ಕ್ಲೇಮು ಮಾತ್ರ ಅಂಗೀಕರಿಸಲ್ಪಡುತ್ತದೆ.

ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ – ಆಟೋಸೇಫ್

ಖಾಸಗಿ ಕಾರು ಮಾಲೀಕರಿಗೆ ಅವರ ವಾಹನದ ಒಟ್ಟಾರೆ ವಿಮಾ ವೆಚ್ಚವನ್ನು ತಗ್ಗಿಸುವ ಬಳಕೆ ಆಧಾರಿತ ವಿಮಾ ರಕ್ಷಣೆ ಒದಗಿಸುವ ಕೆಲವೇ ಕೆಲವು ಇನ್ಶೂರೆನ್ಸ್ ಕಂಪನಿಗಳ ಪಟ್ಟಿಯಲ್ಲಿ ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಎಂಬುದು ಇನ್ನೊಂದು ಪ್ರಮುಖ ವಿಮಾ ಕಂಪನಿಯಾಗಿದೆ. ಈ ಕಂಪನಿ ಪರಿಚಯಿಸಿರುವ ಪಾಲಿಸಿ ಹೆಸರು “ಆಟೋ ಸೇಫ್‍”. ಇದು ಪ್ರೀಮಿಯಂ ನಿರ್ಧರಿಸುವುದಕ್ಕೆ ಮತ್ತು ಕಾರಿನ ಬಳಕೆಯನ್ನು ಟ್ರ್ಯಾಕ್ ಮಾಡುವುದಕ್ಕೆ ಟೆಲಿಮ್ಯಾಟಿಕ್ಸ್ ಆಧಾರಿತ ನೆಕ್ಸ್ಟ್‍- ಜೆನ್ ಅಪ್ಲಿಕೇಶನ್ ಇರುವ ಉಪಕರಣವನ್ನು ಬಳಸುತ್ತಿದೆ. ಈ ಆ್ಯಪ್‍ ಕಾರು ಸಂಚರಿಸಿದ ಕಿಲೋ ಮೀಟರ್ ಆಯ್ಕೆ ಮಾಡಿಕೊಂಡು ಪಾಲಿಸಿದಾರರಿಗೆ ಪ್ರೀಮಿಯಂನಲ್ಲಿ ಉಳಿತಾಯಮಾಡಿಕೊಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಅದರಲ್ಲಿ ಜಿಪಿಎಸ್‍ ಟ್ರ್ಯಾಕಿಂಗ್ ಸೌಲಭ್ಯ ಇರುವ ಕಾರಣ ಕಳವು ನಿರೋಧಕ ಉಪಕರಣವಾಗಿಯೂ ಬಳಕೆಯಾಗುತ್ತದೆ. ವಿಮಾ ಪಾಲಿಸಿ ಚಾಲ್ತಿಗೆ ಬರುತ್ತಿದ್ದಂತೆ ಈ ಟೆಲಿಮ್ಯಾಟಿಕ್ಸ್ ಉಪಕರಣವನ್ನು ಕಾರಿಗೆ ಫಿಟ್ ಮಾಡಲಾಗುತ್ತದೆ ಅಥವಾ ಕಾರಿಗೆ ಲಿಂಕ್ ಮಾಡಲಾಗುತ್ತದೆ. ಇದನ್ನು ಪಾಲಿಸಿ ಚಾಲ್ತಿಯಲ್ಲಿ ಇರುವಷ್ಟು ಕಾಲವೂ ಸಕ್ರಿಯವಾಗಿ ಇರಿಸಬೇಕಾದ್ದು ಪಾಲಿಸಿದಾರರ ಹೊಣೆಗಾರಿಕೆಯಾಗಿರುತ್ತದೆ. ಈ ಪಾಲಿಸಿಯಲ್ಲೂ ಗ್ರಾಹಕರಿಗೆ 2,500 ಕಿ.ಮೀ., 5,000 ಕಿ.ಮೀ. 7,500 ಕಿ.ಮೀ, 10,000 ಕಿ.ಮೀ., 15,000 ಕಿ.ಮೀ. ಮತ್ತು 20,000 ಕಿ.ಮೀ.ಗಳ ಆಯ್ಕೆಯ ಅವಕಾಶವನ್ನು ನೀಡಲಾಗಿದೆ. ಪಾಲಿಸಿಯ ಅವಧಿಯಲ್ಲಿ ಅವರ ಆಯ್ಕೆಯ ಕಿಲೋಮೀಟರ್‍ ಪೂರ್ಣಗೊಂಡರೆ ಟಾಪ್ – ಅಪ್ ಕಿ.ಮೀ. ಆಯ್ಕೆ ಮಾಡುವ ಅವಕಾಶವೂ ಇದೆ. ಎಲ್ಲದಕ್ಕೂ ಮಿಗಿಲಾಗಿ, ಸುರಕ್ಷಿತ ಚಾಲನೆಯನ್ನು ಉತ್ತೇಜಿಸಲು ಪಾಲಿಸಿ ರಿನೀವಲ್ ಮಾಡುವ ವೇಳೆ ಉತ್ತಮ ಚಾಲನಾ ನಡವಳಿಕೆಗೆ ಬೋನಸ್ ಕಿ.ಮೀ. ಕೂಡ ಪಾಲಿಸಿದಾರರಿಗೆ ಸಿಗಲಿದೆ. ಟೆಲಿಮ್ಯಾಟಿಕ್ ಉಪಕರಣವು ಮೊಬೈಲ್ ಆ್ಯಪ್‍ಗೆ ಲಿಂಕ್ ಆಗಿದ್ದು, ಎಷ್ಟು ದೂರು ಸಂಚರಿಸಿದೆ, ವಾಹನದ ಆರೋಗ್ಯ ಸ್ಥಿತಿ ಅಥವಾ ಪಾಲಿಸಿದಾರ ವಾಹನ ಚಲಾಯಿಸುವ ರೀತಿ ಸೇರಿ  ಎಲ್ಲ ಮಾಹಿತಿಗಳನ್ನೂ ಅದು ದಾಖಲಿಸುತ್ತ ಹೋಗುತ್ತದೆ. ಆದ್ದರಿಂದ ನೀವು ಕಡಿಮೆ ವಾಹನ ಚಲಾಯಿಸಿದರೆ, ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು.

ಗಮನಿಸಿ

ಬಳಕೆಗೆ ತಕ್ಕಂತೆ ಪಾವತಿಸುವ ವಿಮೆಯನ್ನು ಪರಿಚಯಿಸುವುದರೊಂದಿಗೆ ಮೋಟಾರು ವಿಮೆ ಬಹಳ ವಿಕಸನಗೊಳ್ಳಲಿದ್ದು, ಗ್ರಾಹಕರ ಅಗತ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಲಿದೆ. ಈ ಅನಿಶ್ಚಿತ ಕಾಲಘಟ್ಟದಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಅನಗತ್ಯ ಪ್ರಯಾಣಗಳನ್ನು ತಳ್ಳಿಹಾಕುತ್ತಿರುವಾಗ ಮತ್ತು ಉದ್ಯೋಗಿಗಳೂ ವರ್ಕ್ ಫ್ರಂ ಹೋಮ್‍ನ ಪ್ರಯೋಜನಗಳನ್ನು ಅನ್ವೇಷಿಸುತ್ತಿರಬೇಖಾದರೆ ವಿಮಾ ಕ್ಷೇತ್ರದ ಈ ಬದಲಾವಣೆ ಅರ್ಥಪೂರ್ಣವಾಗಿದೆ. ಯಾರು ಹೆಚ್ಚು ವಾಹನ ಚಲಾಯಿಸುವುದಿಲ್ಲವೋ ಅವರು ಪೇ-ಆ್ಯಸ್-ಯೂ-ಯೂಸ್‍ ಕಾರು ಇನ್ಶೂರೆನ್ಸ್‍ ಪಾಲಿಸಿ ಆಯ್ಕೆ ಮಾಡಿಕೊಂಡು ಹಣ ಉಳಿತಾಯ ಮಾಡಬಹುದು. ಆದಾಗ್ಯೂ, ನೀವು ನಿಮ್ಮ ಪ್ರಯಾಣದ ದೂರವನ್ನು ಅಂದಾಜಿಸುವಾಗ ಟ್ರಾಫಿಕ್‍ನಲ್ಲಿ ಕಳೆಯುವ ಕಾಲವನ್ನು ತಪ್ಪಾಗಿ ಪರಿಗಣಿಸಬೇಡಿ. ಇದು ಬಹಳ ಮುಖ್ಯವಾದುದು. ಈ ಪಾಲಿಸಿಯಲ್ಲಿ ನೀವು ಎಷ್ಟು ಹೊತ್ತು ಕಾರಿನಲ್ಲಿ ಕುಳಿತಿರುತ್ತೀರಿ ಎಂಬುದನ್ನು ಪರಿಗಣಿಸಲಾಗುವುದಿಲ್ಲ. ನೀವು ಎಷ್ಟು ದೂರ ಸಂಚರಿಸುತ್ತೀರಿ ಎಂಬುದನ್ನು ಇಲ್ಲಿ ಪರಿಗಣಿಸುತ್ತಾರೆ. ಮೋಟಾರು ವಾಹನ ವಿಮಾ ಕ್ಷೇತ್ರದಲ್ಲಿ “ಪೇ ಆಸ್ಯ ಯೂ ಡ್ರೈವ್ ಮೋಡೆಲ್‍” ಹೆಚ್ಚು ಹೆಚ್ಚು ವಾಹನಗಳನ್ನು ವಿಮಾ ರಕ್ಷಣೆಯ ವ್ಯಾಪ್ತಿಗೆ ಸೇರಿಸುತ್ತ ನಿಸ್ಸಂದೇಹವಾಗಿ ಇನ್ಶೂರೆನ್ಸ್ ಖರೀದಿಸುವವರ ಸಂಖ್ಯೆಯನ್ನು ಹೆಚ್ಚಿಸಲಿದೆ.

ಲೇಖಕರು – ಸಜ್ಜನ್ ಪ್ರವೀಣ್, ಮೋಟಾರ್ ಇನ್ಸೂರೆನ್ಸ್ ಹೆಡ್Policybazaar.com

ಜುಲೈ 29,2020; ಬುಧವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:55 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:20

ಮೇಷ

ಅನಾವಶ್ಯಕ ಖರ್ಚು ಸಂಭವಿಸಬಹುದು. ಮಾನಸಿಕ ಉದ್ವೇಗದಿಂದ ಉದ್ಯೋಗದಲ್ಲಿ ತೊಡಕು. ಅಜೀರ್ಣ ಮುಂತಾದ ತೊಂದರೆ ಬಂದೊದಗಬಹುದು. ನೀರು ಆಹಾರದ ವಿಷಯದಲ್ಲಿ ಜಾಗೃತೆ ಅಗತ್ಯ.

ವೃಷಭ

ಮದುವೆ ಮಂಗಳಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ನೌಕರಸ್ಥರಿಗೆ ಬಡ್ತಿಯೊಂದಿಗೆ ಉದ್ಯೋಗದಲ್ಲಿ ಬದಲಾವಣೆ. ಆರ್ಥಿಕ ಅನುಕೂಲತೆ ಒದಗಿಬರುವುದು. ಬಂಧುಗಳಿಂದ ಅಶುಭ ಸಮಾಚಾರ ಸಿಗಲಿದೆ.

ಮಿಥುನ

ಹಿರಿಯರೊಂದಿಗೆ ಶಾಂತತೆಯಿಂದ ವ್ಯವಹರಿಸುವುದು ಉತ್ತಮ. ವೃಥಾ ಖರ್ಚು. ಸಾಮಾಜಿಕ ಕಾರ್ಯಗಳಲ್ಲಿ ಹೊಂದಾಣಿಕೆ ಅವಶ್ಯ. ಕಿವಿ, ಗಂಟಲು ನೋವುಗಳು ನಿಮ್ಮನ್ನು ಪೀಡಿಸುವ ಸಾಧ್ಯತೆ.

ಕಟಕ

ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯಿಂದಾಗಿ ಉತ್ತಮ ಆದಾಯ. ಪ್ರತಿಯೊಂದು ವಿಷಯದಲ್ಲೂ ನೀವು ತೆಗೆದುಕೊಳ್ಳುವ ನಿರ್ಧಾರವೇ ಸರಿಯಾಗಿರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ.

ಸಿಂಹ

ಆರ್ಥಿಕ ಪ್ರಗತಿ ಉತ್ತಮಗೊಂಡು ಸಂತೋಷ ಮೂಡುವುದು. ಶತ್ರುಗಳ ವಿರುದ್ಧ ಜಯ. ಬಹಳ ದಿನಗಳ ಸಮಸ್ಯೆಗಳು ಪರಿಹಾರವಾಗಿ ನಿರಾಳತೆ ತಲೆದೋರುವುದು. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ.

ಕನ್ಯಾ

ಸಂಕಷ್ಟಗಳು ಪರಿಹಾರವಾಗಲಿವೆ. ಹಿಂದಿನ ಕೆಲಸಗಳಿಗೆ ಪುನಃ ಚಾಲನೆ ದೊರೆತು ಪ್ರಗತಿ ಪಥದಲ್ಲಿ ಸಾಗುವವು. ದುಡುಕುತನದಿಂದಾಗಿ ಉದ್ವೇಗಗೊಳ್ಳುವುದರಿಂದ ಸಮಸ್ಯೆಗಳು ತಲೆದೋರಬಹುದು. ದುರ್ಗಾಸ್ತೋತ್ರ ಪಠಿಸಿ.

ತುಲಾ

ಕೆಲಸ–ಕಾರ್ಯಗಳಲ್ಲಿ ಮಂದಗತಿ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಬೇಡ. ಅಪವಾದಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಧೃತಿಗೆಡಬೇಕಾಗಿಲ್ಲ.

ವೃಶ್ಚಿಕ

ಕಣ್ಣು ಅಥವಾ ತಲೆನೋವು ತೀವ್ರವಾಗಿ ಕಾಡುವ ಸಾಧ್ಯತೆ. ವೃಥಾ ವಾದವಿವಾದದಿಂದಾಗಿ ಅನಗತ್ಯ ವೈರತ್ವ ಉಂಟಾಗಬಹುದು. ಅಯೋಗ್ಯರೊಂದಿಗೆ ಯಾವುದೇ ಕಾರಣಕ್ಕೂ ವ್ಯವಹಾರ ಬೇಡ.

ಧನು

ಆರ್ಥಿಕ ಸುಧಾರಣೆ. ಧಾರ್ಮಿಕ ಕಾರ್ಯಗಳಿಗೆ ಖರ್ಚುಮಾಡುವ ಸಾಧ್ಯತೆ ಇದ್ದು ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಾಧಿಸಿ ಕೀರ್ತಿ ಸಂಪಾದನೆ. ಧೈರ್ಯದಿಂದ ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಮಕರ

ಸ್ವಂತ ಉದ್ಯೋಗಿಗಳು ಹಾಗೂ ನೌಕರಿಯಲ್ಲಿರುವವರು ತಮ್ಮ ನಡೆ ನುಡಿ, ಕೆಲಸಗಳ ಬಗ್ಗೆ ಜಾಗ್ರತೆಯಿಂದಿರುವುದು ಸೂಕ್ತ. ಚಿಕ್ಕ ತಪ್ಪಿಗೂ ಮಹತ್ತರ ದಂಡ ತೆರಬೇಕಾದೀತು. ಉತ್ತಮ ಅವಕಾಶಗಳು ಬಂದೊದಗುವವು.

ಕುಂಭ

ಅಶುಭ ಸ್ವಪ್ನಗಳಿಂದಾಗಿ ಮಾನಸಿಕ ಚಂಚಲತೆ. ನಿರಾಸೆಯಿಂದಾಗಿ ದುಃಖದ ಅನುಭವ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಬೇರೆಯವರ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆ. ಈಶ್ವರನ ಆರಾಧನೆ ಮಾಡಿ.

ಮೀನ

ಆದಾಯ ಮತ್ತು ಉಳಿಕೆಗಳಲ್ಲಿ ಪ್ರಗತಿಯಿರುವುದು. ಆರೋಗ್ಯದಲ್ಲಿ ಸುಧಾರಣೆ. ಸಂಬಂಧಿಗಳಲ್ಲಿ ವಂಶವೃದ್ಧಿಯ ಶುಭ ಸಂದೇಶ ಕೇಳಲಿದ್ದೀರಿ. ನಿಂತುಹೋದ ಕೆಲಸಗಳಿಗೆ ಮರುಚಾಲನೆ ದೊರೆಯುವ ಸಾಧ್ಯತೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಗಾಗಿ ಶೇ.50 ಬೆಡ್ ಮೀಸಲು ಕಡ್ಡಾಯ : ಜಿಲ್ಲಾಧಿಕಾರಿ ಜ.ಜಗದೀಶ್

ಉಡುಪಿ ಜುಲೈ 28 : ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತರ ಚಿಕಿತ್ಸೆಗಾಗಿ ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿಕೊAಡಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ 50 ಶೇಕಡಾ ಬೆಡ್ ಗಳನ್ನು ಕಡ್ಡಾಯವಾಗಿ ಮೀಸಲಿಡುವಂತೆ ಸೂಚಿಸಿ, ಬೆಡ್ ಗಳನ್ನು ಮೀಸಲಿಡದ ಆಸ್ಪತ್ರೆಗಳ ನೊಂದಣಿಯನ್ನು ಕೆಪಿಎಂಇ ಕಾಯ್ದೆಯಡಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.ಅವರು ಮಂಗಳವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿಕೊAಡಿರುವ 20 ಆಸ್ಪತ್ರೆಗಳು ಮಾತ್ರವಲ್ಲದೇ ಇತರೆ ಖಾಸಗಿ ಆಸ್ಪತ್ರೆಗಳೂ ಸಹ ಎಬಿಆರ್‌ಕೆ ಯೋಜನೆಯಡಿ ನೊಂದಾಯಿಸಿಕೊಳ್ಳುವAತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ನೊಂದಾಯಿಸಿರುವ ಆಸ್ಪತ್ರೆಗಳಲ್ಲಿ ನಾಳೆಯಿಂದಲೇ ಬೆಡ್ ಗಳ ವ್ಯವಸ್ಥೆ ಸಿದ್ದಪಡಿಸಿಟ್ಟುಕೊಂಡಿದ್ದು, ಜಿಲ್ಲಾಡಳಿತ ಕಳುಹಿಸುವ ಕೋವಿಡ್-19 ರೋಗಿಗಳನ್ನು ತಕ್ಷಣದಲ್ಲೇ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು.ಯಾವುದೇ ಸಂದರ್ಭದಲ್ಲೂ ರೋಗಿಗೆ ಬೆಡ್ ಇಲ್ಲ ಎಂದು ನಿರಾಕರಿಸುವಂತಿಲ್ಲ , ನಿರಾಕರಿಸಿದ್ದಲ್ಲಿ ನೊಂದಣಿ ರದ್ದುಪಡಿಸುವುದರೊಂದಿಗೆ ಎಪಿಡಮಿಕ್ ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ಕೋವಿಡ್ ಚಿಕಿತ್ಸೆಗೆ ನೊಂದಾಯಿಸಿರುವ ಆಸ್ಪತ್ರೆಗಳು , ಕೋವಿಡ್-19 ಚಿಕಿತ್ಸೆ ಮಾತ್ರವಲ್ಲದೇ ಮಹಿಳೆ ಮತ್ತು ಮಕ್ಕಳ ಚಿಕಿತ್ಸೆಗೆ ಸಹ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್-19 ನಿಂದ ಹೆಚ್ಚಿನ ಮರಣ ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಅವಿರತ ಪ್ರಯತ್ನ ಮಾಡುತ್ತಿದ್ದು, ಜಿಲ್ಲೆಯ ಮರಣ ಪ್ರಮಾಣ ರಾಜ್ಯದಲ್ಲೇ ಅತ್ಯಂತ ಕನಿಷ್ಠವಾಗಿದೆ, ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಯುವಲ್ಲಿ ಸಹ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಕ್ವಾರಂಟೈನ್ ಉಲ್ಲಂಘಿಸಿದ 69 ಜನರ ವಿರುದ್ದ ಈಗಾಗಲೇ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿರುವವರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದ್ದು, ಸೂಕ್ಕೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಎಲ್ಲಾ ಆಸ್ಪತೆಗಳು ತಮ್ಮಲ್ಲಿರುವ ಬೆಡ್ ಗಳು ಮತ್ತು ಲಭ್ಯ ಸೌಲಭ್ಯಗಳ ಕುರಿತ ಸಂಖ್ಯೆಯನ್ನು ಬೆಡ್ ಮೆನೆಜ್‌ಮಂಟ್ ನಲ್ಲಿ ದಾಖಲಿಸುವಂತೆ ಈಗಾಗಲೇ ಸೂಚಿಸಿದ್ದು, ದಾಖಲಿಸದವರ ವಿರುದ್ದ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ -19 ನ ಪ್ರಕರಣಗಳಲ್ಲಿ ರೋಗ ಲಕ್ಷಣ ಗಳಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕಳೆದ ವಾರದಿಂದ ಪ್ರತಿದಿನ ಸರಾಸರಿ 700 ಜನರ ಪರೀಕ್ಷೆ ನಡೆಸುತ್ತಿದ್ದು, ಪಾಸಿಟಿವ್ ಪ್ರಮಾಣ ಅಧಿಕವಾಗುತ್ತಿದೆ, ಸೋಂಕಿತರ ಪ್ರಾಥಮಿಕ ಸಂಪರ್ಕ , ಐಎಲ್‌ಐ ಮತ್ತು ಸಾರಿ ಯಲ್ಲಿ ಹೆಚ್ಚು ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಕೋವಿಡ್ 19 ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್ ಮಾತನಾಡಿ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ, ಬಳಸಲಾಗಿರುವ ಸಂಖ್ಯೆ , ಖಾಲಿ ಇರುವ ಸಂಖ್ಯೆ , ಮೀಸಲಿಟ್ಟಿರುವ ಸಂಖ್ಯೆ ಹಾಗೂ ವೆಂಟಿಲೇಟರ್, ಐಸಿಯು ಗಳ ಸಂಖ್ಯೆಯನ್ನು ನೀಡುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ವಿವಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಇಂದಿನ ಔಷಧೀಯ ವೃಕ್ಷದ ಪರಿಚಯ: ಅಶ್ವಥ ವೃಕ್ಷ

ಅಶ್ವತ್ಥ ವೃಕ್ಷ ,ಅರಳಿ ಮರ ರಾವಿ ಚೆಟ್ಟು ಅರಸ ಮರಂ ರಾಜ ವೃಕ್ಷ ರಾಜ ಮೂಲಿಕೆ ಬೋದಿ ವೃಕ್ಷ ಪೀಪಲ್ ಟ್ರೀ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ,ರಸ್ತೆ ಪಕ್ಕಾ ಸಾಲು ಮರಗಳಾಗಿಯೂಬೆಳೆಸುತ್ತಾರೆ.ಹಳ್ಳಿ ಪಟ್ಟಣ್ಣಗಳೆನ್ನದೇ ಅಶ್ವತ್ಥ ಕಟ್ಟೆಗಳನ್ನು ನಿರ್ಮಿಸಿ,ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವುದನ್ನು ನಾವು ಎಲ್ಲಾ
ಕಡೆ ಕಾಣಬಹುದು.ಸುಮಾರು 50 ರಿಂದ 100 ಅಡಿಗಿಂತಲೂ ಹೆಚ್ಚಿಗೆ ಬೃಹದ್ಧಕಾರದಲ್ಲಿ ಬೆಳೆದು
ಸಾವಿರಾರು ವರ್ಷಗಳ ಕಾಲ ದೀರ್ಘಾಯುಷಿಯಾಗಿ ಜೀವಿಸಿ….! ಅತಿ ಹೆಚ್ಚು ಪ್ರಾಣ ವಾಯು ಉತ್ಪಾದಕ ಮರ ಎಂದು ಕ್ಯಾತಿ ಪಡೆದಿರುವ ಈ ವೃಕ್ಷಗಳನ್ನು ಸಾಮ್ರಾಟ್ ಅಶೋಕನು ದೇಶದಲ್ಲೆಲ್ಲಾ ಬಹು ದೊಡ್ಡ
ಪ್ರಮಾಣದಲ್ಲಿ ಬೆಳಸಿದನೆಂಬ ಉಲ್ಲೇಖವಿದೆ.
ಈ ಮರದ ಕೆಳಗೆ ಕುಳಿತಾಗಲೇ ಗೌತಮ ಬುದ್ಧನಿಗೆ ಜ್ಞಾನೋದಯವಾದದ್ದು ಎಂದು ಬೌದ್ಧರು ಭೋದಿ ವೃಕ್ಷವನ್ನು ಬಹುಪೂಜ್ಯ ಭಾವನೆಯಿಂದ ಕಾಣುವರು.
“ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ ಅಗ್ರತೋ ಶಿವರೂಪಾಯ ವೃಕ್ಷ ರಾಜಾಯತೇ ನಮಃ”
ತ್ರಿಮೂರ್ತಿಗಳು ಈ ವೃಕ್ಷ ರಾಜನಲ್ಲಿ ನೆಲೆಸಿರುವರೆಂದು,ಪರಮ ಪವಿತ್ರವೆಂದು ಪೂಜಿಸುವ ಸಂಪ್ರದಾಯವಿದೆ.ಅಶ್ವತ್ಥ: ಸರ್ವ ವೃಕ್ಷಾಣಾಂ ಸಕಲ ವೃಕ್ಷಗಳೊಳಗೆ ಅಶ್ವತ್ಥ ವೃಕ್ಷವಾಗಿರುತ್ತೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸುವನು.
ಅಶ್ವತ್ಥದ ಕಡ್ಡಿಗಳಿಗೆ “ಸಮಿತ್ತು” ಎಂದು ಕರೆಯುತ್ತಾರೆ.ಋಷಿಗಳ ದೈನಂದಿನ ಕ್ರಿಯೆಗಳ ಪೈಕಿ ಬಹಳಷ್ಟು ಸಮಯ ಆಪೇಕ್ಷಿಸುತ್ತಿದ್ದ ಪವಿತ್ರ ಕಾರ್ಯವಾದ ಹೋಮವನ್ನು ಮಾಡಲು ಸಮಿತ್ತು ಇರಲೇಬೇಕಿತ್ತು.ಅಶ್ವತ್ಥ ವೃಕ್ಷದ ಯಾವುದಾದರೂ ಒಂದು ಭಾಗವನ್ನು ದಿನವೂ ಸ್ಪರ್ಶಿಸುವುದೇ ಆರೋಗ್ಯಕರ.
48 ದಿನಗಳ ಕಾಲ ” ಮಂಡಲ ಪೂಜೆ” ಎಂಬ ಹೆಸರಲ್ಲಿ ಅಶ್ವತ್ಥ ವೃಕ್ಷವನ್ನು ಮುಟ್ಟಿ, ಪ್ರದಕ್ಷಿಣೆ ಮಾಡಿ,ನಮಸ್ಕರಿಸುವ ಪದ್ಧತಿ ಇದ್ದು, ಇದರ ಆಚರಣೆಯಿಂದ ರಕ್ತದ ಏರೊತ್ತಡ, ಅಧಿಕ ಕೋಪ, ಉನ್ಮಾದ, ಇತ್ಯಾದಿಗಳು ದೂರವಾಗುತ್ತವೆ….! ಸಾಮಾನ್ಯವಾಗಿ
ಸಂತಾನ ಹೀನರಿಗೆ ಈ ಪೂಜೆಯನ್ನು ಮಾಡಲು ಹೇಳಲಾಗುತ್ತದೆ.ಸಕಲ ರೋಗ ನಿವಾರಣೆಯಾದ ಅಶ್ವತ್ಥ ವೃಕ್ಷವನ್ನು ಸತತವಾಗಿ 48 ದಿನಗಳ ಕಾಲ
ಸ್ಪರ್ಶಿಸುತ್ತಾ, ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತಾ ಇದ್ದಲ್ಲಿಅವರಿಗರಿವಿಲ್ಲದಯೇ, ಅವರು ರೋಗಮುಕ್ತರಾಗುವರು….! ಆರೋಗ್ಯವಂತವಾದ ದೇಹದಲ್ಲಿ ಸಕ್ರಮವಾಗಿ ಅಂಡೋತ್ಪತ್ತಿ ಹಾಗೂ ವಿಶೇಷವಾದ ಗುಣಗಳುಳ್ಳ, ಶಕ್ತಿವಂತವಾದ ಉತ್ಪತ್ತಿಯಾಗುತ್ತದೆ. ಕ್ರಮೇಣ ಈ ಸತ್ಪರಿಣಾಮವೇ ಆರೋಗ್ಯವಂತವಾದ ಸಂತಾನದ ಪ್ರಾಪ್ತಿಗೆ ಕಾರಣವಾಗಬಲ್ಲದು.
ಮತ್ತೊಂದು ನಂಬಲೇ ಬೇಕಾದ ವಿಶೇಷವೆಂದರೆ
ಅಶ್ವತ್ಥ ವೃಕ್ಷವನ್ನು ಸ್ಪರ್ಶಿಸುವ, ಪೂಜಿಸುವ ಹಾಗೂ ನಮಸ್ಕರಿಸುವ ಆಪೇಕ್ಷೆ ಉಂಟಾಗುವುದು ಸಾತ್ವಿಕ ಮನೋಭಾವದ ಜನರಿಗೆ ಮಾತ್ರ….! ಮನಸ್ಸು ಶುದ್ಧವಾಗಿರದವರಿಗೆ ಈ ವೃಕ್ಷದ ಬಳಿಗೆ ಹೋಗುವ ಮನಸ್ಸೇ ಆಗದು….! ಕೇವಲ ಮಾನವರೇ ಅಲ್ಲದೆ ಪ್ರಾಣಿ, ಪಕ್ಷಿಗಳ ವಿಷಯದಲ್ಲೂ ಅಶ್ವತ್ಥದ ಆಯ್ಕೆ ವೈಶಿಷ್ಟ್ಯಪೂರ್ಣವಾದದ್ದು.ಗಿಳಿ, ಕೋಗಿಲೆ, ಮೈನಾದಂತಹ ಸುಮಧುರ ಕಂಠದ ಈ ವೃಕ್ಷವನ್ನು ಆಶ್ರಯಿಸುತ್ತವೆ.ಕಾಗೆಯಂತ ಪಕ್ಷಿಗಳು ಈ ಮರದಲ್ಲಿಗೂಡನ್ನು ಕಟ್ಟುವುದಿಲ್ಲ….!
ಅಶ್ವತ್ಥ ವೃಕ್ಷದ ಎಲೆಗಳನ್ನು ನಾಟಿ ಹಸುವಿನ ಹಾಲಿನಲ್ಲಿ ಹಾಕಿ ಕುದಿಸಿ ಕೆಂಪು ಕಲ್ಲು ಸಕ್ಕರೆ ಹಾಕಿಬೆಳಿಗ್ಗೆ ಸಂಜೆ ಕೆಲವು ದಿನ ಸೇವಿಸಿದರೆ ಶೀತ ಕೆಮ್ಮುಗುಣಾಗುತ್ತೇ.ಎಲೆಗಳ ರಸಕ್ಕೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಕಾಮಾಲೆ ರೋಗ ವಾಸಿಯಾಗುತ್ತೆ.ಅರಳಿ ಮರದ ತೊಗಟೆಯ ಚೂರ್ಣದಿಂದ ಹಲ್ಲುಜ್ಜುವುದರಿಂದ ದವಡೆಗಳು,ಹಲ್ಲುಗಳು ಗಟ್ಟಿಯಾಗಿ, ಹೊಳೆಯುತ್ತವೆ.ಹಲ್ಲು ನೋವು ಸಹಾ ನಿವಾರಣೆಯಾಗುತ್ತೆ.ಈ 1 ಚಮಚ ಚೂರ್ಣವನ್ನು 1 ಲೋಟ ಹಾಲಿನಲ್ಲಿ ಹಾಕಿ ಸೇವಿಸುತ್ತಾ ಬಂದರೆ ಅಸ್ತಮಾ ಸಹಾ ಗುಣವಾಗುತ್ತೆ.
ಅರಳಿ ಮರದ ಎಲೆಗಳನ್ನು 2 ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ 1 ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಬೆಳಿಗ್ಗೆ ಸಂಜೆ
ಸೇವಿಸುತ್ತಿದ್ದರೆ ಹೃದಯ ಸಂಬಂಧಿ ರೋಗಗಳು
ಗುಣವಾಗುತ್ತೆ.
ಅರಳಿ ಮರದ ಹಣ್ಣುಗಳನ್ನು ನೆರಳಲ್ಲಿ ಒಣಗಿಸಿ
ಚೂರ್ಣ ಮಾಡಿಟ್ಟುಕೊಂಡು ಬೆಳಿಗ್ಗೆ ಸಂಜೆ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ 1 ಚಮಚದಂತೆ ಸೇವಿಸಿದರೆ (ವಯಸ್ಸಿನ ಮಿತಿ ಇಲ್ಲದೆ ಯಾರಾದ್ರೂ ಸೇವಿಸಬಹುದು)ತುಂಬಾ ಆರೋಗ್ಯದಾಯಕ.ಇದು ತುಂಬಾ ಪೌಷ್ಠಿಕತೆಯಿಂದ ಕೂಡಿದ್ದು, ಶರೀರಿಕ ಕ್ಷಮತೆ ಜೊತೆಗೆ ವೀರ್ಯಾಣು ವೃದ್ಧಿಗೆ ಸಹಕಾರಿಯಾಗಿದೆ.
ಸಂತಾನ ಇಲ್ಲದ ಸ್ತ್ರೀಯರು ದಿನವು ಹಸುವಿನ ಹಾಲಿನಲ್ಲಿ 1 ಚಮಚದಂತೆ ಸೇವಿಸುತ್ತಿದ್ದರೆ ಸಂತಾನ ಪ್ರಾಪ್ತಿಯಾಗುತ್ತೆ ಎಂದು ಆಯುರ್ವೇದ ಗ್ರಂಥಗಳಲ್ಲಿ
ಹೇಳಲಾಗಿದೆ.
ತಿಂಗಳ ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವದಿಂದ ನರಳುತ್ತಿರುವ ಸ್ತ್ರೀಯರು, ಅರಳಿ ಎಲೆಗಳನ್ನು ಜಜ್ಜಿ ಅದರಿಂದ ರಸ ತೆಗೆದು 4 ರಿಂದ 5 ಚಮಚ ಸೇವಿಸಿದರೆ ಅತೋಟಿಗೆ ಬರುತ್ತೆ.ಬೇಕಾದ್ರೆ ರಸಕ್ಕೆ 1 ಚಮಚ ಜೇನುತುಪ್ಪ ಸಹಾ ಸೇರಿಸಿ ಸೇವಿಸಬಹುದು.
ಅರಳಿ ಮರದ ಚಿಗುರಿನ ಕುಡಿಗಳು ತಂದು ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು ಬೆಳಿಗ್ಗೆ ಸಂಜೆ 1 ಚಮಚ ಹಸುವಿನ ಹಾಲಿನಲ್ಲಿ ಅಥವಾ ಬಿಸಿನೀರಿನಲ್ಲಿ ಕಲಸಿ ಸೇವಿಸಿವುದರಿಂದ ದೈಹಿಕ ಸದೃಢತೆ ಜೊತೆಗೆ ಎಲ್ಲಾ ರೀತಿಯ ಧಾತು ವಿಕಾರಗಳು ಹಾಗೂ
ಲೈಂಗಿಕ ಸಮಸ್ಯೆಗಳಿಗೆ ಅದ್ಭುತವಾದ ಔಷಧಿಯಾಗಿಕೆಲಸ ಮಾಡುತ್ತೆ.ಇದೆ ಚೂರ್ಣ ಸೇವಿಸಿದರೆ ಕರುಳಿನ ವ್ಯಾಧಿಗಳು ಗುಣವಾಗುತ್ತೆ.ಇದರಲ್ಲಿ ಕಷಾಯ ಮಾಡಿ
ಸೇವಿಸುತ್ತಾ ಬಂದರೆ ಹೃದ್ರೋಗಗಳಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.

ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ.ವಂದನೆಗಳು

ಜುಲೈ 26, 2020; ಭಾನುವಾರ; ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಭಾನುವಾರ ಹಸ್ತ ನಕ್ಷತ್ರ,

ರಾಹುಕಾಲ: ಸಂಜೆ 5:09 ರಿಂದ 6:44
ಗುಳಿಕಕಾಲ: ಮಧ್ಯಾಹ್ನ 3:35 ರಿಂದ 5:09
ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 2:00

ಮೇಷ

ವ್ಯವಹಾರಗಳು ಅಡೆತಡೆ ಇಲ್ಲದೆ ನಡೆಯುವುದು. ಮಧ್ಯವರ್ತಿಗಳ ಸಹಾಯದಿಂದ ವಿವಾಹ ಸಂಬಂಧ ಕೆಲಸ ಕಾರ್ಯಗಳು ಸಸೂತ್ರವಾಗಿ ನೆರವೇರುವವು. ಬಂಧುಗಳ ಆಗಮನ ಸಾಧ್ಯತೆ.

ವೃಷಭ

ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು. ಹೊಸ ಉದ್ಯಮ ಸ್ಥಾಪನೆಗೆ ಸಕಾಲವಿದು. ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಗೊಂದಲ ಸೃಷ್ಟಿಯಾಗುವುದು.

ಮಿಥುನ

ಕಾರ್ಯ ನೈಪುಣ್ಯತೆಯಿಂದ ಪ್ರಶಂಸೆಗೆ ಭಾಜನರಾಗುವಿರಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ. ಆರೋಗ್ಯದಲ್ಲಿ ತೊಂದರೆ. ಸಹೋದ್ಯೋಗಿಗಳಿಂದ ನಿಂದನೆಗೊಳಗಾಗುವ ಸಾಧ್ಯತೆ. ಗಣಪತಿಯ ಆರಾಧನೆ ಮಾಡಿ.

ಕಟಕ

ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಾಣುವಿರಿ. ಕಳೆದುಹೋದುದನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಸೌಜನ್ಯದಿಂದ ಘನತೆ ಗೌರವಗಳನ್ನು ಪಡೆಯುವಿರಿ. ಸಂಗಾತಿಯ ಸಹಕಾರ ದೊರೆಯಲಿದೆ.

ಸಿಂಹ

ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ನಿರ್ಲಕ್ಷಿಸದೆ ಶ್ರದ್ಧೆಯಿಂದ ನಿರ್ವಹಿಸಿ. ಅನುಭವಿಗಳಿಂದ ಸಹಾಯ ದೊರಕಲಿದೆ. ಸೋಗಲಾಡಿತನದಿಂದಾಗಿ ಇಕ್ಕಟ್ಟಿಕೆ ಸಿಲುಕುವ ಸಾಧ್ಯತೆ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ.

ಕನ್ಯಾ

ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ವಿಶೇಷ ಸಾಧನೆ ಮಾಡುವ ಸಾಧ್ಯತೆ ಕಂಡುಬರುತ್ತದೆ. ಸಂಶೋಧಕರು, ವಿಜ್ಞಾನಿಗಳಿಗೆ ಹೊಸ ವಿಷಯದ ಬಗ್ಗೆ ಹೊಳವು ದೊರಕುವ ಸಾಧ್ಯತೆಗಳು ಇವೆ.

ತುಲಾ

ಗಂಭೀರ ವಿಷಯಗಳಲ್ಲಿ ಜಾಗರೂಕರಾಗಿ ವ್ಯವಹರಿಸಿ. ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನಿಮ್ಮ ನೈಪುಣ್ಯತೆಯನ್ನು ಉಪಯೋಗಿಸಿ. ಕಾರ್ಯನಿಮಿತ್ತ ದೂರ ಪ್ರಯಾಣದ ಸಾಧ್ಯತೆ.

ವೃಶ್ಚಿಕ

ವದಂತಿಗಳಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲ ಆಪಾದನೆಗಳಿಂದ ಮುಕ್ತರಾಗುವಿರಿ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಸಕಾಲಿಕ ಸಲಹೆಗಳು ದೊರೆಯುವವು. ಮಕ್ಕಳ ಬಗ್ಗೆ ಕಾಳಜಿ ಅವಶ್ಯಕ.

ಧನು

ನಿಮ್ಮ ನೈತಿಕ ಬಲದಿಂದಾಗಿ ಸುತ್ತಮುತ್ತಲೂ ಉತ್ತಮ ವಾತಾವರಣ ಸೃಷ್ಟಿ ಮಾಡುವಿರಿ. ಸಾರ್ವಜನಿಕವಾಗಿ ಪ್ರಶಂಸೆಗಳು ಕೇಳಿಬರಲಿವೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಮೂಡುವುದು.

ಮಕರ

ಎಣ್ಣೆ, ಹಾಲು ಮುಂತಾದ ದ್ರವ ವ್ಯಾಪಾರಿಗಳಿಗೆ ಲಾಭದ ನಿರೀಕ್ಷೆ. ಸಮಚಿತ್ತದಿಂದ ವರ್ತಮಾನದ ವಿಷಯಗಳನ್ನು ಅವಲೋಕಿಸಿ. ಹಣಕಾಸಿನ ಸಹಾಯ ದೊರಕುವುದು. ಪರರಿಂದ ಸಹಾಯ ದೊರಕುವುದು.

ಕುಂಭ

ಕಲಾವಿದರಿಗೆ ಉತ್ತಮ ಪ್ರಶಂಸೆ. ಅರ್ಥಪೂರ್ಣ ವಿಚಾರ ವಿನಿಮಯಗಳಲ್ಲಿ ಭಾಗಿಯಾಗುವಿರಿ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಮ್ಮಡಿಗೊಂಡು ಯಶಸ್ಸನ್ನು ಸಾಧಿಸುವಿರಿ. ಹೆರವರ ಕಷ್ಟಗಳಲ್ಲಿ ಭಾಗಿಯಾಗುವ ಸಾಧ್ಯತೆ.

ಮೀನ

ಎಚ್ಚರಿಕೆಯ ವ್ಯವಹಾರದಿಂದಾಗಿ ಉತ್ತಮ ಲಾಭ ಪಡೆಯುವಿರಿ. ಜಾಣ್ಮೆಯಿಂದ ಕೂಡಿದ ದಕ್ಷತೆಯಿಂದಾಗಿ ಕೆಲಸ ಕಾರ್ಯಗಳು ಸುಗಮವಾಗುವವು. ಆಪ್ತರಿಂದ ಸಮಾಧಾನ.

ಇಂದಿನ ಔಷಧೀಯ ಸಸ್ಯ ಪರಿಚಯ: ಮುಟ್ಟಿದರೆ ಮುನಿ

ನಿದ್ರಾಭಂಗಿ (ಲಜ್ಜಾಕು) ಮುಟ್ಟಿದರೆ ಮುನಿ ಒಳಮುಚ್ಚುಗ ಮುಡಗುಧಾಮರೆ ನಾಚಿಕೆ ಗಿಡ ಅತ್ತಿಪತ್ತಿ ಚೆಟ್ಟು ಸಿಗ್ಗಾಕು ಸಿಗ್ಗುಸಿಟಿಕಾ ಲಜ್ಜಾಲು ತೊಟ್ಟಾಲ್ ಸಿನುಂಗಿ ಕಾಮವರ್ಧಿನಿ ನಮಸ್ಕಾರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ಒಳಮುಚ್ಚುಗ, ಹೊರಮುಚ್ಚುಗ, ಎಂಬ ಎರಡು ಪ್ರಭೇದಗಳಿವೆ.ಒಳಮುಚ್ಚುಗ ಎಲ್ಲೆಂದರಲ್ಲಿ ಕಳೆಯಂತೆ ಬೆಳೆದರೆ, ಹೊರಮುಚ್ಚುಗ ನೀರು ಹರಿಯುವ ಪ್ರದೇಶಗಳಲ್ಲಿ ಕಾಣಸಿಗುತ್ತೆ. ಒಳಮುಚ್ಚುಗ ಎಂದು ಕರೆಯುವ ಮುಟ್ಟಿದರೆ ಮುನಿ ಗಿಡವು ಮೈಯಲ್ಲ ಮುಳ್ಳುಗಳನ್ನು ತುಂಬಿಕೊಂಡಿರುವ ಸಸ್ಯ,ಮುಟ್ಟಿದರೆ ಎಲೆಗಳು ಮುದರಿಕೊಳ್ಳುತ್ತವೆ.ಭಾರತೀಯ ಆಯುರ್ವೇದ ಹಾಗೂ ಸಂಪ್ರದಾಯಾ ವೈದ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಔಷಧಿಯಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಮುಟ್ಟಿದಮುನಿ ಗಿಡದ ಸಮೂಲ ಚೂರ್ಣವನ್ನು ಬೆಳಿಗ್ಗೆ ಸಂಜೆ ಎರಡು ಚಿಟಿಕೆ ನೀರಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ. ಈ ಗಿಡದ ಕಷಾಯವನ್ನು ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣು ವಾಸಿಯಾಗಿ,ಬಾಯಿಂದ ಬರುವ ದುರುವಾಸನೆ ದೂರವಾಗುತ್ತೆ. ಒಂದು ಮಂಡಲ ಕಾಲ (48 ದಿನಗಳು) ಇದರ ಚೂರ್ಣ ಅಥವಾ ಕಷಾಯ ಸೇವಿಸುತ್ತಾ ಬಂದರೆ ಮನೋಶಕ್ತಿ ಹೆಚ್ಚುತ್ತೆ ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ. ಮುಟ್ಟಿದಮುನಿ ಗಿಡವನ್ನು ಸಮೂಲ ಸಹಿತ ತಂದು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕುದಿಸಿದ ನೀರನ್ನು ಸ್ನಾನ ಮಾಡುವ ನೀರಿನಲ್ಲಿ ಕಳಸಿ ಸ್ನಾನ ಮಾಡಿದರೆ ಮೈಕೈ ನೋವು ಸೊಂಟ ನೋವು ಕೀಲು ನೋವುಗಳು ವಾಸಿಯಾಗುತ್ತೆ. ವಯಸ್ಸಾದ ಹೆಂಗಸರಲ್ಲಿ ಗರ್ಭಕೋಶ ಜಾರಿಕೆ ಉಂಟಾದಾಗ, ಅಂದರೆ ಗರ್ಭಕೋಶದ ಮಾಂಸಖಂಡಗಳು ಶಕ್ತಿ ಕಳೆದುಕೊಂಡು, ಗರ್ಭಕೋಶ ದೇಹದಿಂದ ಹೊರಗಡೆ ಜಾರಿಕೆಉಂಟಾಗುತ್ತದೆ.ಅಂತಹ ಸಮಯದಲ್ಲಿ 2 ಲೋಟ ಹಾಲಿಗೆ ನಾಲ್ಕೈದು ರೆಕ್ಕೆ ಮುಟ್ಟಿದಮುನಿ ಎಲೆಗಳನ್ನು ಹಾಕಿ ಕುದಿಸಿ 1 ಲೋಟದಷ್ಟು ಆದಾಗ ಕೆಳಗಿಳಿಸಿ ಅದಕ್ಕೆ ಒಂದು ಸಣ್ಣ ಗೋಲಿಯಷ್ಟು ತಾಟಿಬೆಲ್ಲ ಅಥವಾ ಬೆಲ್ಲ ಸೇರಿಸಿ ಬೆಳಿಗ್ಗೆ ಸಂಜೆ ಕುಡಿಯುತ್ತಾ ಬಂದರೆ ಮಾಂಸಖಂಡಗಳು ಬಲಗೊಂಡು ಗರ್ಭಕೋಶ ಹೊರಗಡೆ ಬರುವುದನ್ನು ತಡೆಯುತ್ತದೆ. ಮಲ ವಿಸರ್ಜನೆ ಮಾಡುವಾಗ ಗುದುದ್ವಾರದ ಕರುಳಿನ ಕೊನೆಯ ಭಾಗ ಹೊರಗಡೆ ಬರುವುದನ್ನು ಶಸ್ತ್ರ ಚಿಕಿತ್ಸೆ ಇಲ್ಲದೆ ತಡೆಗಟ್ಟಲು,ಎರಡು ಲೋಟ ನೀರಿಗೆ ಮುಟ್ಟಿದಮುನಿ ಸಸ್ಯದ ಸಮೂಲವನ್ನು ಕುಟ್ಟಿ ಹಾಕಿ ಚೆನ್ನಾಗಿ ಕುದಿಸಿ ಒಂದು ಲೋಟ ಆದಾಗ ಕೆಳಗಿಳಿಸಿ ಬೆಲ್ಲ ಅಥವಾ ತಾಟಿಬೆಲ್ಲ ಒಂದು ಚಮಚ ಹಾಕಿ ಸೇವಿಸುತ್ತಾ ಬಂದರೆ, ಗುದುದ್ವಾರದ ಮಾಂಸಖಂಡಗಳು ಬಲಗೊಂಡು ಕರುಳಿನ ಭಾಗ ಹೊರಗಡೆ ಬರದಂತೆ ತಡೆಯುತ್ತದೆ. ಎಳ್ಳೆಣ್ಣೆ ಅಥವಾ ಕೊಬರಿ ಎಣ್ಣೆಗೆ ಮುಟ್ಟಿದಮುನಿ ಸಸ್ಯವನ್ನು ಸಮೂಲ ಸಹಿತ ಹಾಕಿ ಕುದಿಸಿ ಆ ಎಣ್ಣೆಯನ್ನು ಹಚ್ಚಿದರೆ ಮೊಣಕಾಲು ನೋವು ಗುಣವಾಗುತ್ತೆ. 1ಲೀಟರ್ ಎಳ್ಳೆಣ್ಣೆಗೆ 1ಹಿಡಿ ಮುಟ್ಟಿದಮುನಿ ಸಸ್ಯದ ಸಮೂಲ ಹಾಕಿ ಚೆನ್ನಾಗಿ ಕುದಿಸಿ ಸೋಸಿ ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು ದಿನವು ಮೈಗೆಲ್ಲ ಮಸಾಜ್ ಮಾಡಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುತ್ತಿದ್ದರೆ ಚರ್ಮ ಗಟ್ಟಿಯಾಗುತ್ತೆ, ಚರ್ಮ ಸುಕ್ಕಾಗುವುದಿಲ್ಲ, ಜಗ್ಗುವುದಿಲ್ಲ. ಮುಟ್ಟಿದಮುನಿ ಗಿಡದ ಕಾಯಿಗಳ ಚೂರ್ಣವನ್ನು ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುತ್ತೆ.ವೀರ್ಯಾಣು ವೃದ್ಧಿಗೊಂಡು ನಪುಂಷಕತ್ವ ದೂರವಾಗುತ್ತೆ. ಅತಿ ಮೂತ್ರ ರೋಗದವರು ಇದರ ಎಲೆಗಳ ಜೊತೆ ತಾಟಿಬೆಲ್ಲ ಸೇರಿಸಿ ಜಗಿದು ಸೇವಿಸಿದರೆ ಅತೋಟಿಗೆ ಬರುತ್ತೆ.ಮುಟ್ಟಿದಮುನಿ ಗಿಡದ ಉಪಯೋಗಗಳು ಅಪಾರ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು

ಜುಲೈ 25′ 2020; ಶನಿವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಮಧ್ಯಾಹ್ನ 12:0 ನಂತರ ಷಷ್ಠಿ ತಿಥಿ,
ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ
ಮಧ್ಯಾಹ್ನ 2:19 ನಂರ ಹಸ್ತ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:19 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:08 ರಿಂದ 7:44
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:40

ಮೇಷ

ಚೋರ ಭಯದ ನಿಮಿತ್ತ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮಿತ್ರರೊಂದಿಗೆ ಮನಸ್ತಾಪ ಸಾಧ್ಯತೆ. ಸಂಗಾತಿಯಿಂದ ವಿಶೇಷ ಕೊಡುಗೆ ಪ್ರಾಪ್ತಿ. ಬಂಧುಗಳ ಆಗಮನದಿಂದ ಸಂತಸದ ವಾತಾವರಣ.

ವೃಷಭ

ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಬಂಧು ವರ್ಗದವರಿಂದ ಸಂತಸದ ಸುದ್ದಿ ನಿರೀಕ್ಷಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬದಲಾವಣೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ

ದಿನದ ಮಟ್ಟಿಗೆ ಎಲ್ಲ ವಿಧಗಳಲ್ಲೂ ಸ್ವಲ್ಪಮಟ್ಟಿನ ಕಷ್ಟ ನಷ್ಟ ಅನುಭವಿಸುವ ಸಾಧ್ಯತೆ. ಅಪಾಯಕಾರಿ ಕೆಲಸ ಮತ್ತು ವಾಹನಗಳಿಂದ ದೂರವಿರುವುದು ಒಳಿತು. ಗುರು ಗಣಪತಿಯ ಆರಾಧನೆಯಿಂದ ಅನುಕೂಲ.

ಕಟಕ

ನಿಮ್ಮ ಎಲ್ಲ ಕೆಲಸ–ಕಾರ್ಯಗಳು ಸುಗಮವಾಗಿ ಕೈಗೂಡಲಿವೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮವಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರುವುದು. ವ್ಯಾಪಾರಸ್ಥರಿಗೆ ಉತ್ತಮ ಲಾಭ ಗಳಿಕೆ.

ಸಿಂಹ

ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ. ವಿದ್ಯಾರ್ಥಿಗಳಿಗೆ ನಿರಾಳತೆ. ದಿನಸಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ನಷ್ಟ. ವಕೀಲ ವೃತ್ತಿಯಲ್ಲಿರುವವರಿಗೆ ಆರ್ಥಿಕಾಭಿವೃದ್ದಿ. ವಾಹನ ಖರೀದಿ ಯೋಗ.

ಕನ್ಯಾ

ಹಿರಿಯರಿಂದ ಬಳುವಳಿಯಾಗಿ ಸಂಪತ್ತು ಸಿಗಲಿದೆ. ಹಿರಿಯರ ಆಶೀರ್ವಾದದಿಂದಾಗಿ ಆದಾಯದ ಮೂಲಗಳು ಗೋಚರವಾಗಲಿವೆ. ಕುಟುಂಬವರ್ಗದವರಿಂದ ಸ್ಥಾನಮಾನಗಳು ಲಭ್ಯವಾಗುವವು.

ತುಲಾ

ಸ್ಥಿರಾಸ್ತಿ ಪ್ರಾಪ್ತವಾಗುವ ಸಾಧ್ಯತೆಯಿದ್ದು, ಭೂ ಖರೀದಿಗೆ ಯೋಗ್ಯ ದಿನ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆ. ಹೊಸ ಮನೆ, ಸಂತಾನ ಭಾಗ್ಯ ಮುಂತಾದವುಗಳು ದೊರಕಿ ಸಂತಸ.

ವೃಶ್ಚಿಕ

ಭೂ ವ್ಯವಹಾರದಲ್ಲಿ ಅಧಿಕ ಲಾಭದ ನಿರೀಕ್ಷೆ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಹುದ್ದೆ ಪ್ರಾಪ್ತವಾಗುವ ಸಾಧ್ಯತೆ. ನೀಡಿದ ಸಾಲಗಳು ಮರುಪಾವತಿಯಾಗುವವು.

ಧನು

ಕೋರ್ಟ್, ಕಚೇರಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ. ಹೊಸ ಮನೆ, ಜಮೀನು ಪ್ರಾಪ್ತವಾಗುವ ಯೋಗ. ಸಾಂಸಾರಿಕ ಸುಖ ಅನುಭವಿಸಲಿದ್ದೀರಿ. ಕೃಷಿ ಬದುಕಿನವರಿಗೆ ಸ್ವಲ್ಪ ಮಟ್ಟಿನ ಬಿಡುವು ದೊರೆಯುವುದು.

ಮಕರ

ಭೂ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಗೊಂದಲಮಯ ಪರಿಸ್ಥಿತಿ ನಿರ್ಮಾಣ. ಸಕಾಲಿಕ ಚಿಂತನೆಯಿಂದಾಗಿ ಮಾನಸಿಕ ಶಾಂತಿ. ಸಂಗಾತಿಯಿಂದ ಸಿಹಿ ಸುದ್ದಿ.

ಕುಂಭ

ಸಂದುನೋವು, ಬೆನ್ನುನೋವಿನಿಂದ ಬಳಲುವ ಸಾಧ್ಯತೆ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಬರಲಿರುವ ಅವಘಡವನ್ನು ತಪ್ಪಿಸಿಕೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರುವುದು.

ಮೀನ

ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರ ವಾತಾವರಣ. ಮದುವೆ ಮುಂಜಿ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಬಂಧು ಬಾಂಧವರ ಸಮಾಗಮ. ನವ ಚೈತನ್ಯ ಧುಮ್ಮಿಕ್ಕಲಿದೆ. ಮಕ್ಕಳ ವಿಷಯದಲ್ಲಿ ಗಮನವಿರಲಿ.

Design a site like this with WordPress.com
Get started