ಡಿಸೆಂಬರ್ 14,ಸೋಮವಾರ;2020 :ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ,
ಕೃಷ್ಣಪಕ್ಷ. ವಾರ:ಸೋಮವಾರ,
ತಿಥಿ :ಅಮಾವಾಸ್ಯೆ, ನಕ್ಷತ್ರ:ಜೇಷ್ಠ,
ರಾಹುಕಾಲ:8.00 ರಿಂದ 9.26
ಗುಳಿಕಕಾಲ:1.43 ರಿಂದ 3.09
ಯಮಗಂಡಕಾಲ:10.52 ರಿಂದ 12.18

ಮೇಷ

ಮಧ್ಯವರ್ತಿಗಳಿಗೆ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಪ್ರಗತಿಯ ಬಗೆಗೆ ಮಾನಸಿಕ ದುಗುಡ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರಿಳಿತ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು.

ವೃಷಭ

ಸೈನಿಕರು, ಆರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಸಂತೋಷದ ದಿನ. ಜೀವನದಲ್ಲಿ ಸಾಧನೆಯ ಆತ್ಮತೃಪ್ತಿಯನ್ನು ಹೊಂದಲಿದ್ದೀರಿ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ.

ಮಿಥುನ

ಆರ್ಥಿಕ ಲಾಭವನ್ನು ಹೊಂದುವ ದಿನ. ಶುಭಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿ ಮಾಡುವ ಅಥವಾ ಲಾಭವಾಗುವ ಸಾಧ್ಯತೆ. ಮಾನಸಿಕವಾಗಿ ತೊಳಲಾಟ.

ಕಟಕ

ಕಲಾವಿದರಿಗೆ ಸಮಾಧಾನಕರ ದಿನ. ಸಾಮಾಜಿಕ ಗೌರವ ಪ್ರಾಪ್ತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಸಾಂಸಾರಿಕವಾಗಿ ಸಮಾಧಾನ. ದೇವತಾ ದರ್ಶನ ಭಾಗ್ಯ.

ಸಿಂಹ

ಕಾರ್ಯ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳತೆ ಮೂಡಿಬರಲಿದೆ. ಮಿತ್ರ ವೃಂದದವರಿಂದ ಶುಭವಾರ್ತೆ ಕೇಳಿಬರಲಿದೆ. ಮಿತವ್ಯಯ ಮಾಡುವಿರಿ. ಆರ್ಥಿಕವಾಗಿ ಸಬಲರಾಗುವಿರಿ.

ಕನ್ಯಾ

ಮನಸ್ಸಿನಲ್ಲಿ ಗೊಂದಲಕರ ವಾತಾವರಣ. ಸಮಾಧಾನಕರ ನಡವಳಿಕೆಯಿಂದಾಗಿ ಸಂಸಾರದಲ್ಲಿ ಸಂತಸ. ಮಕ್ಕಳಿಂದ ಸಂತೋಷ ಸುದ್ದಿಯನ್ನು ಕೇಳಲಿದ್ದೀರಿ. ದೃಢ ನಿರ್ಧಾರವಿರಲಿ.

ತುಲಾ

ವಿವಾಹಾಪೇಕ್ಷಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳು ಶ್ರಮವಹಿಸುವುದು ಅಗತ್ಯ. ಸಾಲದಿಂದ ಮುಕ್ತಿ. ಹೆಣ್ಣುಮಕ್ಕಳಿಗೆ ಮಾನಸಿಕ ಗೊಂದಲದ ದಿನವಾಗಲಿದೆ.

ವೃಶ್ಚಿಕ

ಹಮ್ಮಿಕೊಂಡ ಮಹತ್ತರ ಕೆಲಸದಲ್ಲಿ ಪ್ರಯತ್ನಪೂರಕವಾದ ಸಫಲತೆ ಸಿಗುವುದು. ಕಾರ್ಖಾನೆ ಕೆಲಸಗಾರರಿಗೆ ಸಮಾಧಾನಕರ ದಿನ. ತಂದೆತಾಯಿಗಳಿಂದ ಪ್ರೋತ್ಸಾಹ.

ಧನು

ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ. ತೈಲ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಸಕಾಲಿಕ ನೆರವಿನಿಂದಾಗಿ ಸಂತೋಷದ ವಾತಾವರಣ.

ಮಕರ

ರಾಜಕಾರಣಿಗಳಿಗೆ ಒತ್ತಡದ ದಿನ. ಉನ್ನತ ಸ್ಥಾನಕ್ಕಾಗಿ ಸೆಣಸಾಟದ ಬದುಕು. ಪ್ರಭಾವಿಗಳ ಸಂಪರ್ಕಕ್ಕಾಗಿ ವಿಪರೀತ ಅಲೆದಾಟ. ಸಾರ್ವಜನಿಕ ರಂಗದಲ್ಲಿ ಪುರಸ್ಕಾರ. ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ.

ಕುಂಭ

ಔಷಧ ತಯಾರಿಕೆ, ವೈದ್ಯಕೀಯ ಉದ್ಯೋಗದಲ್ಲಿ ರಂಗದಲ್ಲಿರುವವರಿಗೆ ಯಶಸ್ಸು. ಬಹುದಿನಗಳ ನಂತರ ಬಂಧುಗಳೊಬ್ಬರ ಭೇಟಿ ಸಾಧ್ಯತೆ. ಕುಟುಂಬ ಸಂಬಂಧ ಕಲಹದಿಂದ ಮುಕ್ತಿ.

ಮೀನ

ಮಹಿಳೆಯರ ಆಕಾಂಕ್ಷೆಗಳಿಗೆ ಪ್ರೋತ್ಸಾಹ ದೊರಕಲಿದೆ. ಕಾರ್ಯನೈಪುಣ್ಯತೆಯಿಂದಾಗಿ ಸ್ನೇಹಿತರ ನಡುವೆ ಗೌರವಕ್ಕೆ ಪಾತ್ರರಾಗಲಿದ್ದೀರಿ. ಉದ್ಯೋಗ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ.

ಔಷಧೀಯ ಸಸ್ಯ ಪರಿಚಯ : ಆಡುಮುಟ್ಟದ ಸೊಪ್ಪು

ಹೊಟ್ಟೆಯೊಳಗೆ ವಿಷ ಸೇರಿದರೆ ಆಡುಮುಟ್ಟದ ಬಳ್ಳಿ ( ಅಜದ್ವೇಷಿ ) ಸೇವಿಸಿ ಮೇಕೆ ಭೂಮಿಯಲ್ಲಿ ಬೆಳೆಯುವ ಎಲ್ಲಾ ರೀತಿಯ ಗಿಡದ ಸೊಪ್ಪನ್ನು ಮೇಯುತ್ತೆ, ಆದರೆ ಈ ಗಿಡದ ಸೊಪ್ಪನ್ನು ಮಾತ್ರ ತಿನ್ನೋದಿಲ್ಲ. ಅದಕ್ಕೆ ಇದನ್ನು ಆಡು ಮುಟ್ಟದ ಬಳ್ಳಿ ಎಂದು ಕರೆಯುತ್ತಾರೆ. ಇದರ ಸಮೂಲದ ಯಾವುದೇ ಭಾಗವನ್ನು ಮಾನವರಾಗಲಿ, ಪ್ರಾಣಿಗಳಾಗಲಿ ಸೇವಿಸಿದರೆ ತಕ್ಷಣ ವಾಂತಿಯಾಗುತ್ತೆ.
ಲತಾಕ್ಷೀರಿ, ಅಂತಮೂಲ್, ಅನಂತಮೂಲ, ವಳ್ಳಿಪಾರಿ, ಜಂಗ್ಲಿ ಪಿಕ್ವಮ್, ಪಿತ್ಕಾರಿ, ಕಿರಮಂಜಿ, ವೆರ್ರಿಪಾಲ, ಕುಕ್ಕಪಾಲ, ವೆಟ್ಟಿಪಾಲ,ಮೇಕ ಮೇಯಿನಿ ಆಕು, ಶ್ವಾಸಘ್ನಿ, ನಂಜರೊಪ್ಪನ್, ನೇಪಾಳದಬೇರು, ನಾಯಿಹಾಲೆ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಆಡು ಮುಟ್ಟದ ಬಳ್ಳಿ ತನ್ನೊಳಗೆ ಅದ್ಭುತವಾದ ಔಷಧೀಯ ಗುಣಗಳನ್ನು ತುಂಬಿಕೊಂಡಿದ್ದು, ಅನೇಕ ವ್ಯಾಧಿಗಳನ್ನು ಗುಣಪಡಿಸಲು ‘ರಾಮಬಾಣ’ದಂತೆ ಕೆಲಸ ಮಾಡುತ್ತೆ. ಪುರಾತನ ಕಾಲದಿಂದಲೂ ಭಾರತೀಯ ಆಯುರ್ವೇದ, ಸಿದ್ಧ, ಯುನಾನಿ, ಪಾರಂಪರಿಕ ವೈದ್ಯ ಪದ್ಧತಿಗಳಲ್ಲಿ ಬಳಸುತ್ತಾ ಬಂದಿದ್ದಾರೆ.ವಿಷಪೂರಿತ ಆಹಾರ ಅಥವಾ ವಿಷ ಪದಾರ್ಥಗಳು ಹೊಟ್ಟೆಗೆ ಸೇರಿದಾಗ ಅದನ್ನು ಹೊರಹಾಕಲು, ಆಡು ಮುಟ್ಟದ ಬಳ್ಳಿಯ ಬೇರಿನ ಕಷಾಯ ಅಥವಾ ಎಲೆಗಳನ್ನು ಜಜ್ಜಿ ರಸವನ್ನು ತೆಗೆದು ಕುಡಿಸುವ ರೂಢಿ ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿದೆ. ಇದನ್ನು ಕುಡಿದ ತಕ್ಷಣ ವಾಂತಿ ಆಗಲೇಬೇಕು. ಅಂತಹ ತೀಕ್ಷ್ಣವಾದ ವಾಕರಿಕೆ ಗುಣ ಈ ಗಿಡದಲ್ಲಿದೆ.

  • ಅನೇಕ ಕಡೆ ಚೇಳು, ವಿಷಕ್ರಿಮಿಗಳು, ವಿಷಪೂರಿತ ಹಾವುಗಳು ಕಡಿದು ನಂಜೇರಿದಾಗ, ವಾಂತಿ ಮಾಡಿಸಲು ನಾಟಿವೈದ್ಯರು ಈಗಲು ಬಳಸುತ್ತಾರೆ.
  • ದೇಹದಲ್ಲಿ ರಕ್ತಕೆಟ್ಟು ಕೀವು ತುಂಬಿದ ವ್ರಣಗಳು, ಗಾಯ, ಬೊಬ್ಬೆಗಳು, ನಂಜಾಗದಂತೆ, ಒಡೆಯಲು ಆಡು ಮುಟ್ಟದ ಬಳ್ಳಿಯ ಎಲೆಗಳನ್ನು ಕೆಂಡದಮೇಲೆ ಹಾಕಿ ಬಿಸಿಮಾಡಿ, ಮೇಲೆ ಹಾಕಿ ಕಟ್ಟು ಕಟ್ಟುತ್ತಾರೆ. ಇದರಲ್ಲಿ ಪ್ರಬಲ ವಿಷನಿವಾರಕ ಗುಣವಿದೆ ಎಂದು ಸಂಶೋಧನೆಗಳಿಂದ ರುಜುವತ್ತಾಗಿದೆ.
  • ಶ್ವಾಸಕೋಶ, ಶ್ವಾಸನಾಳದಲ್ಲಿನ ಕಲ್ಮಶಗಳನ್ನು ಹೊರಹಾಕಿ, ಉಸಿರಾಟ ಸರಾಗವಾಗಲು ಸಹ ಇದನ್ನು ಬಳಸುತ್ತಾರೆ.
  • ಅಸ್ತಮಾವ್ಯಾಧಿ ಇರುವವರು ವಿಧವಿಧವಾದ ತೊಂದರೆಗಳಿಂದ ಬಳಲುತ್ತಿರುತ್ತಾರೆ. ಅಂತವರು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೊಂದು ಎಲೆಯನ್ನು ಜಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಇರುವುದೆಲ್ಲ ವಾಂತಿಯಾಗುವುದಲ್ಲದೇ, ಶ್ವಾಸಕೋಶ, ಶ್ವಾಸನಾಳದಲ್ಲಿನ ಕಫವು ಕರಗಿ, ವಾಂತಿಯಾಗಿ ಹೊರಬಂದು ಶ್ವಾಸಕೋಶ ಶುದ್ಧಿಯಾಗುತ್ತೆ

ಸಾರಿಗೆ ಸಂಧಾನ ಸಭೆ ಸಕ್ಸಸ್, ಮೂರು ದಿನಗಳ ಮುಷ್ಕರ ವಾಪಸ್ , ಇಂದು ರಾತ್ರಿಯಿಂದಲೇ ಬಸ್‌ ಸಂಚಾರ ಆರಂಭ

ಬೆಂಗಳೂರು: ಧರಣಿ ನಿರತ ಸಾರಿಗೆ ನೌಕರರ ಜೊತೆಗೆ ಇಂದು ನಡೆದ ಸಭೆ ಯಶಸ್ಸು ಕಂಡಿದ್ದು, ಕಳೆದ ಮೂರು ದಿವಸದಿಂದ ನಡೆಸುತ್ತಿದ್ದ ರಾಜ್ಯ ವ್ಯಾಪ್ತಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ. ಈ ನಡುವೆ ಇಂದು ಸಂಜೆಯಿಂದಲೇ ಬಸ್‌ ಸಂಚಾರ ಶುರುವಾಗಲಿದೆ ಎನ್ನಲಾಗಿದೆ.

ಇಂದು ಸಾರಿಗೆ ಸಚಿವ ಸವದಿ, ಕಂದಾಯ ಸಚಿವ ಆಶೋಕ್‌, ಬಸವರಾಜ್‌ ಬೊಮ್ಮಾಯಿವರಿದ್ದ ಸಭೆಯಲ್ಲಿ ನೌಕರರ ಮುಖಂಡರು ಮುಷ್ಕರ ವಾಪಸ್​ ಪಡೆಯಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನು ಮಾಡಬೇಕು ಎನ್ನುವ ಬೇಡಿಕೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಬೇಡಿಕೆಯನ್ನು ಈಡೇರಿಸಲಾಗಿದೆ ಎನ್ನಲಾಗಿದೆ.ಇನ್ನೂ ನೌಕರರ ವೇತನದ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದು, ರಾಜ್ಯ ಸರ್ಕಾರದ ಅರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಅಂತ ಸಭೆಯಲ್ಲಿ ತಿಳಿಸಲಾಗಿದೆ

ಡಿಸೆಂಬರ್13,ಭಾನುವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ.
ವಾರ : ಭಾನುವಾರ, ತಿಥಿ : ಚತುರ್ದಶಿ,
ನಕ್ಷತ್ರ : ಅನುರಾಧ,
ರಾಹುಕಾಲ: 4.35 ರಿಂದ 6.00
ಗುಳಿಕಕಾಲ: 3.09 ರಿಂದ 4.35
ಯಮಗಂಡಕಾಲ: 12.18 ರಿಂದ 1.43

ಮೇಷ

ಅನಿರೀಕ್ಷಿತ ಧನಾಗಮನದ ಸಾಧ್ಯತೆಯು ಕಂಡುಬರುತ್ತಿದೆ. ಮಕ್ಕಳಿಂದ ಶುಭಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಮಾನಸಿಕ ನೆಮ್ಮದಿಯು ನಿಮ್ಮದಾಗಲಿದೆ.

ವೃಷಭ

ಕೆಲಸದಲ್ಲಿ ಗೌರವ, ಮನ್ನಣೆಯನ್ನು ಹೊಂದಲಿದ್ದೀರಿ. ನಿಂತುಹೋಗಿರುವ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಆಪ್ತರೊಬ್ಬರ ಭೇಟಿಯ ಸಾಧ್ಯತೆ ಕಂಡುಬರುವುದು. ಸಂತಸದ ವಾತಾವರಣ ನೆಲೆಸಲಿದೆ.

ಮಿಥುನ

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರಕಲಿದೆ. ನೆನೆದ ಕಾರ್ಯಗಳು ಸಿದ್ಧಿಯಾಗುವ ದಿನವಾಗಿದೆ. ಸಹೋದರರಿಗೆ ಅಪಘಾತದ ಬಗ್ಗೆ ಎಚ್ಚರಿಕೆ ಅಗತ್ಯ. ದೇವತಾರಾಧನೆಯಿಂದಾಗಿ ಸ್ವಾಭಿಮಾನ ಕಾಪಾಡಿಕೊಳ್ಳಬಹುದು.

ಕಟಕ

ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಿ ಪರಿಣಮಿಸಲಿದೆ. ಮಕ್ಕಳ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ. ಆರ್ಥಿಕ ಸ್ಥಿತಿ ಎಂದಿನಂತೆ ಮುಂದುವರಿಯಲಿದೆ. ದೇಹಾಲಸ್ಯದಿಂದಾಗಿ ಕೆಲಸಗಳಲ್ಲಿ ನಿರುತ್ಸಾಹ

ಸಿಂಹ

ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದಾದರೂ ವಿಷ ಜಂತುಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಒಳಿತು. ವಿನಾಕಾರಣ ಅಧಿಕ ಖರ್ಚು ಸಂಭವಿಸುವ ಸಾಧ್ಯತೆ ಕಂಡುಬರುವುದು. ವ್ಯಯದ ಮೇಲೆ ಹಿಡಿತವಿರಲಿ.

ಕನ್ಯಾ

ಕೆಲಸದಲ್ಲಿ ಕಿರಿಕಿರಿಯುಂಟಾಗಲಿದೆ. ಯಾರಮೇಲೂ ಅತಿಯಾದ ನಂಬಿಕೆ ಸಲ್ಲದು. ಹಿರಿಯರ ಮಾರ್ಗದರ್ಶನದಿಂದ ಸಂಕಷ್ಟಗಳು ಪರಿಹಾರ ವಾಗಲಿವೆ. ಮನೆ ಮಂದಿಯೊAದಿಗೆ ದೂರದ ಬಂಧುಗಳ ದರ್ಶನ ಯೋಗ ಕಂಡುಬರುತ್ತಿದೆ.

ತುಲಾ

ಸಾಹಿತಿ, ಬರಹಗಾರರಿಗೆ ಶುಭದಾಯಕವಾದ ದಿನವಾಗಿರುವುದು. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಗೊಂದಲ ಉಂಟಾಗಬಹುದು. ಆಯ್ಕೆಯ ಮೂಲಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡಲ್ಲಿ ಸಫಲತೆ ಕಾಣುವಿರಿ.

ವೃಶ್ಚಿಕ

ಹೊಸ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಕಂಡುಬರಲಿದೆ.

ಧನು

ಕೋರ್ಟ್ ಕಛೇರಿಗೆ ಸಂಬAಧಿಸಿದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಅನಾರೋಗ್ಯ ಪೀಡಿತರು ಆರೋಗ್ಯದಲ್ಲಿ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕ ವಾತಾವರಣ ಮೂಡಿಬರಲಿದೆ. ನೆಮ್ಮದಿಯನ್ನು ಕಾಣುವಿರಿ.

ಮಕರ

ಆರಕ್ಷಕರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳು, ಉಪನ್ಯಾಸಕ ವೃತ್ತಿಯಲ್ಲಿರುವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ. ಉತ್ತಮ ಆರೋಗ್ಯ ಭಾಗ್ಯ. ನವವಿವಾಹಿತರಿಗೆ ಅತಿಯಾದ ಪ್ರವಾಸದಿಂದಾಗಿ ಆಯಾಸ.

ಕುಂಭ

ಮನೆಯ ನಿರ್ಮಾಣ ಹಾಗೂ ಇತರ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ವಾಹನ ಖರೀದಿಗಾಗಿ ಪ್ರಶಸ್ಥದಿನವಾಗಿರುವುದು. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಬಿರುಕು ವಾ ತೊಂದರೆಗಳು ತಲೆದೋರುವ ಸಾಧ್ಯತೆ.

ಮೀನ

ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬAದರೂ ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ ಮೂಡಲಿದೆ. ಕಾರ್ಯಬಾಹುಳ್ಯದಿಂದಾಗಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇರುವುದು. ಸಂಗಾತಿಯ ಸಾಂತ್ವನದ ಮಾತುಗಳಿಂದಾಗಿ ಸಮಾಧಾನ ನೆಲೆಸಲಿದೆ.

ಕೌನ್‌‌ಬನೇಗಾ ಕರೋಡ್‌‌‌ಪತಿಗೆ ಆಯ್ಕೆಯಾದ ಉಡುಪಿಯ ಅನಾಮಯ ಯೋಗೇಶ್‌‌‌‌ ದಿವಾಕರ್

ಉಡುಪಿ, ಡಿ.12 : ಇಲ್ಲಿನ ವಿದ್ಯೋದಯ ಪಬ್ಲಿಕ್‌‌ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್‌‌‌‌ ದಿವಾಕರ್‌‌ ಕೌನ್‌ ಬನೇಗಾ ಕರೋಡ್‌‌‌‌ಪತಿಯ ವಿಶೇಷ ಸಂಚಿಕೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ಕೆಬಿಸಿಯ ಸ್ಟುಡೆಂಟ್‌ ಸ್ಪೆಷಲ್‌‌‌ ಸಪ್ತಾಹಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ವೇದಾಂತ ಆನ್‌‌ಲೈನ್‌‌‌ ಲರ್ನಿಂಗ್‌‌‌ ಆಪ್‌‌‌ ಅ.5 ರಿಂದ 25ರವರೆಗೆ ಕ್ವಿಝ್‌‌‌‌ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು.

ಈ ಕ್ವಿಝ್‌ನಲ್ಲಿ ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಎಂಟು ಮಂದಿ ಫೈನಲಿಸ್ಟ್‌ ವಿದ್ಯಾರ್ಥಿಗಳಲ್ಲಿ ಉಡುಪಿಯ ಅನಾಮಯ ಯೋಗೇಶ್‌ ದಿವಾಕರ್‌ ಕೂಡಾ ಒಬ್ಬರು.

ಆಯುರ್ವೇದ ಸಸ್ಯ ಪರಿಚಯ: ದರ್ಭೆ ಹುಲ್ಲು

ಚಿತ್ರ ಕೃಪೆ: Google ಸಂಗ್ರಹದಿಂದ

ಕುಶಂ (ದರ್ಭೆ) ನಲ, ರಂದ್ರಿ, ಪುಷ್ಪ, ಮೃತ್ಯ, ದಮನ, ನರ್ತಕ, ಅಗ್ನಿಗರ್ಭಮ್, ದರ್ಭಗಡ್ಡಿ, ದರ್ಭೆಪಿಲ್ಲಿ, ಕುಸೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ನದಿಪಾತ್ರ ಭೂಮಿಯಲ್ಲಿ, ಹುಲ್ಲುಗಾವಲು ಅರಣ್ಯ, ಕೆರೆಕಟ್ಟೆ, ಕುಂಟೆಗಳಸುತ್ತ, ಹುತ್ತಗಳಮೇಲೆ ಬೆಳೆಯುವ ಒಂದು ರೀತಿಯ ಪವಿತ್ರವಾದ ಹುಲ್ಲು. ಕೆಲವು ಹಳೆಯ ಗ್ರಂಥಗಳಲ್ಲಿ 7 ರೀತಿಯ ಪ್ರಭೇಧಗಳಿವೆ ಎಂದು ಉಲ್ಲೇಖವಾಗಿದ್ದರೆ, ಮತ್ತೆ ಕೆಲವು ಗ್ರಂಥಗಳಲ್ಲಿ 9 ಪ್ರಭೇದಗಳಿವೆ ಎಂದು ಉಲ್ಲೇಖವಿದೆ. ಅವುಗಳಲ್ಲಿ ಉದ್ದವಾಗಿ ಬೆಳೆಯುವ "ವಿಶಾಮಿತ್ರ" ಹಾಗು ಗಿಡ್ಡದಾಗಿ ಬೆಳೆಯುವ "ವಶಿಷ್ಠ" ತುಂಬಾ ಶ್ರೇಷ್ಠವಾದದ್ದು ಎಂದು ಉಲ್ಲೇಖಿಸಿದ್ದಾರೆ. ನವಗ್ರಹಗಳಲ್ಲಿ ಒಂದಾದ ಕೇತುಗ್ರಹವನ್ನು ಪ್ರತಿನಿಧಿಸುವ ದರ್ಭೆಹುಲ್ಲು, ಹೋಮ,ಯಜ್ಞ, ಯಾಗಾದಿಗಳನ್ನು ಆಚರಿಸುವಾಗ ಇರಲೇಬೇಕು. ಹೋಮ, ಯಜ್ಞ, ಯಾಗಾದಿಗಳನ್ನು ಮಾಡಲು ಸಿದ್ಧವಾಗುವಾಗ, ಯಜ್ಞದೀಕ್ಷೆ ಪಡೆಯಲು ಉಂಗುರದ ಬೆರಳಿಗೆ ದರ್ಭೆಯನ್ನು ಉಂಗುರದಂತೆ ಧರಿಸುತ್ತಾರೆ. ಇದಕ್ಕೆ "ಪವಿತ್ರ" ಎಂದು ಕರೆಯುತ್ತಾರೆ. ದರ್ಭೆಯನ್ನು ಶುಭ ಅಶುಭ ಕಾರ್ಯಗಳೆರಡಕ್ಕೂ ಪುರಾತನ ಕಾಲದಿಂದಲೂ ಹಿಂದೂ ಸಂಪ್ರಾಯದಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ಇದನ್ನ ತುಂಬಾ ಪರಮಪವಿತ್ರವೆಂದು ಭಾವಿಸುತ್ತಾರೆ. ರಾಮಾಯಣ ಮಹಾಭಾರತ ಕಾಲದಲ್ಲೂ, ದರ್ಭೆಯ ಪ್ರಸ್ತಾಪ ಇರುವುದು ಪುರಾಣ ಗ್ರಂಥಗಳಲ್ಲಿ ಉಲ್ಲೇಖ ಇರುವುದನ್ನು ಕಾಣಬಹುದು. ಋಷಿಮುನಿಗಳು ಆಶ್ರಮ ನಿರ್ಮಿಸಲು ದರ್ಭೆ ಹುಲ್ಲನ್ನು, ಜಪತಪ ಮಾಡಲು ದರ್ಭಾಸನಗಳನ್ನು ಉಪಯೋಗಿಸುತ್ತಿದ್ದರು.

ದರ್ಭೆಯನ್ನು ಬೆರಳಿಗೆ ಧಾರಣೆಮಾಡುವುದರಿಂದ ಶರೀರದ ಎಲ್ಲಾ ಭಾಗಗಳಿಗೂ ಒಂದು ವಿಧವಾದ ಆಯಾಸ್ಕಾಂತ ಶಕ್ತಿಯು ಪಸರಿಸುವುದು. ಇದರಿಂದ ಮನೋವಿಕಲ್ಪಗಳು ದೂರವಾಗಿ ಜಿತೇಂದ್ರಯತ್ವ ಲಭಿಸುವುದು. ಮನಸ್ಸಿನ ಮೇಲೆ ಹತೋಟಿ ಸಾಧಿಸಿದ ನಂತರ ಲೋಕಕಲ್ಯಾಣಾರ್ಥ ಕಾರ್ಯಗಳಾದ, ಹೋಮ, ಯಜ್ಞ, ಯಾಗಾದಿಗಳನ್ನು ಮಾಡುವಾಗ ಇರಬೇಕಾದದ್ದು ಅತ್ಯಗತ್ಯವೆ. “ಪವಿತ್ರ” ಜ್ಞಾನವಾಹಿನಿ, ಮತ್ತು ಕ್ರಿಯವಾಹಿನಿ, ನರಗಳ ಮೂಲಕ ಮಹಾಮಸ್ತಿಷ್ಕ, ಹಾಗೂ ಅನು ಮಸ್ತಿಷ್ಕಗಳಿಗೆ ನೇರವಾದ ಸಂಪರ್ಕವನ್ನು ಉಂಟುಮಾಡುವುದರಿಂದ ಇಂತಹ ಅದ್ಭುತ ಪರಿಣಾಮ ಉಂಟಾಗುವುದು.
ದರ್ಭೆಯ ಸ್ಪರ್ಶ ಮಾತ್ರದಿಂದಲೇ ಎಲ್ಲಾ ವಿದಧ ಚರ್ಮ ವ್ಯಾಧಿಗಳು ದೂರವಾಗುವುವು. ಅಷ್ಟೇ ಅಲ್ಲದೇ ಮೂತ್ರದಲ್ಲಿ ಉರಿ, ರಕ್ತ ದೋಷ, ರಕ್ತ ಪಿತ್ತ, ಕಫ ಮುಂತಾದ ರೋಗಗಳು ದೂರವಾಗುವುವು. ಶರೀರ ಶುದ್ಧಿಯನ್ನು ಸಹ ಉಂಟು ಮಾಡಲು ಶಕ್ತವಾಗಿದೆ.
ದರ್ಭೆಯೊಡನೆ ಸಂಪರ್ಕಕ್ಕೆ ಬಂದ ನೀರನ್ನು ಕುಡಿಯುವುದರಿಂದ ಮುಖದಲ್ಲಿ ವಿಶಿಷ್ಟವಾದ ತೇಜಸ್ಸು ಓಜಸ್ಸು ಮೂಡುವುದು, ರಕ್ತದ ಏರೊತ್ತಡ ಉಂಟಾಗುವುದಿಲ್ಲ. ಆದ್ದರಿಂದಲೇ ತಾಮ್ರದ ಹೋಮ ಪಾತ್ರೆಯ ಮೇಲೆ ದರ್ಭೆಯನ್ನು ಇಡುತ್ತಾರೆ.
ದರ್ಭೆಯು ದಗ್ದವಾಗಿ ಬರುವ ಹೋಮ ಧೂಮವು ಕಣ್ಣಿನ ಕಾಂತಿಯನ್ನು ವೃದ್ಧಿಸಿ, ಕಣ್ಣಿನ ವ್ಯಾಧಿಗಳನ್ನು ದೂರಮಾಡಬಲ್ಲದು.
ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ, ನೀರು, ಆಹಾರ ವಸ್ತುಗಳನ್ನು ಭದ್ರ ಪಡಿಸಿರುವ, ಅಂಡೆ, ಕೊಳಗ, ಡಬ್ಬಿಗಳ ಮೇಲೆ ದರ್ಭೆಯನ್ನು ಇಡುವರು. ಗ್ರಹಣ ಸಂಭವಿಸುವ ಪ್ರದೇಶದ ಸುತ್ತಲೂ ಒಂದು ವಿಧವಾದ “ವಿಷವರ್ತುಲ”ವು ರೂಪಗೊಳ್ಳುತ್ತದೆ. ದರ್ಭೆ ಇಡುವಕಡೆ ಒಂದು ಮೀಟರ್ ಪ್ರದೇಶದಷ್ಟು ದೂರ ವಿಷವರ್ತುಲವನ್ನು ತಡೆದು, ನೀರು, ಆಹಾರ ಪಾದರ್ಥಗಳ ಮೇಲುಂಟಾಗುವ ದುಷ್ಪರಿಣಾಮವನ್ನು ಭೇದಿಸಿ ರಕ್ಷಿಸುವ ಶಕ್ತಿ ದರ್ಭೆಯಲ್ಲಿದೆ.
ದರ್ಭೆ ಬೇರಿನ ಕಷಾಯ ಸೇವನೆಯಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ, ದೇಹ ತಂಪಾಗುತ್ತೆ, ಮೂತ್ರ ಸಮಸ್ಯೆಗಳಾದ, ಮೂತ್ರಬಂಧ, ಮೂತ್ರದಲ್ಲಿ ಉರಿ, ಮೂತ್ರದಲ್ಲಿ ರಕ್ತ ಬೀಳುವುದು ದೂರವಾಗುತ್ತೆ. ಅತಿಸಾರ ಭೇದಿ ನಿವಾರಣೆಯಾಗುತ್ತೆ.
ಬೇರನ್ನು ಜಜ್ಜಿ ಹಸುವಿನ ಹಾಲಲ್ಲಿ ಹಾಕಿ ಕುದಿಸಿ, ಕಲ್ಲುಸಕ್ಕರೆ ಬೆರಸಿ ಕುಡಿಯುತ್ತಾ ಬಂದರೆ, ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚೆಚ್ಚು ಉತ್ಪತ್ತಿಯಾಗುತ್ತೆ.
ಗರಿಯ ರಸ ಅಥವಾ ಕಷಾಯ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹತೋಟಿಗೆ ಬರುತ್ತೆ. ಮೂಲವ್ಯಾಧಿ ವಾಸಿಯಾಗುತ್ತೆ.
ದಿನವು ದರ್ಭಾಸನದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ದೇಹವು ತಂಪಾಗುತ್ತೆ. ಮೆದಳು ಚುರುಕಾಗುತ್ತೆ. ಜ್ಞಾನಶಕ್ತಿ, ಜ್ಞಾಪಕಶಕ್ತಿ ಹೆಚ್ಚುತ್ತೆ.
ಬೇರಿನ ಕಷಾಯ ನಿಯಮಿತವಾಗಿ ಸೇವಿಸುತ್ತಾ ಬಂದರೆ, ಸ್ತ್ರೀಯರಲ್ಲಿನ ಅತಿ ಋತುಸ್ರಾವ ಸಮಸ್ಯೆ ನಿವಾರಣೆಯಾಗುತ್ತೆ.
ಎಳ್ಳೆಣ್ಣೆಯಲ್ಲಿ ದರ್ಭೆಯನ್ನು ಹಾಕಿ ಚೆನ್ನಾಗಿ ಕುದಿಸಿ, ಚರ್ಮ ರೋಗಗಳಾದ, ಬಿಳಿಮಚ್ಚೆ(ತೊನ್ನು) ಕುಷ್ಠದ ಮೇಲೆ ಲೇಪಿಸುತ್ತಾರೆ. ದದ್ದು, ನವೆ, ಕಜ್ಜಿ, ಹುಳುಕಡ್ಡಿ ಸಹ ನಿವಾರಣೆಯಾಗುತ್ತೆ.
ಚೇಳು, ವಿಷಜಂತುಗಳು ಕಚ್ಚಿದಾಗ, ಬೇರಿನ ರಸಕ್ಕೆ ಕಾಳುಮೆಣಸಿನ ಚೂರ್ಣ ಬೆರಸಿ ಕುಡಿಸಿದರೆ, ವಿಷ ನಿವಾರಣೆಯಾಗುತ್ತೆ.
ದರ್ಭೆ ಬೇರನ್ನು ಜಜ್ಜಿ ರಸ ತೆಗೆದು, ಅಕ್ಕಿ ತೊಳೆದ ನೀರಲ್ಲಿ ಕಲಸಿ 3-4 ದಿನ ಕುಡಿದರೆ, ಸ್ತ್ರೀಯರಲ್ಲಿನ ಶ್ವೇತಪ್ರದರ, ರಕ್ತಪ್ರದರ ವ್ಯಾಧಿಗಳು ಗುಣವಾಗುತ್ತೆ.
ದೇಹದಲ್ಲಿ ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ, ದರ್ಭೆ ಬೇರನ್ನು ಜಜ್ಜಿ ಗಾಯದ ಮೇಲಿಟ್ಟರೆ, ತಕ್ಷಣ ರಕ್ತಸ್ರಾವ ನಿಂತು, ಗಾಯ ಬೇಗನೆ ಗುಣವಾಗುತ್ತೆ.
ಬೇರನ್ನು ಜಜ್ಜಿ ರಸ ತೆಗೆದು, ಮಜ್ಜಿಗೆಯಲ್ಲಿ ಕಲಸಿ ಕುಡಿಯುತ್ತಾ ಬಂದು, ಬೇರಿನ ಗಂಧವನ್ನು ಲೇಪಿಸುತ್ತಾ ಬಂದರೆ ಮೂಲವ್ಯಾಧಿ, ರಕ್ತ ಮೂಲವ್ಯಾಧಿ ನಿವಾರಣೆಯಾಗುತ್ತೆ.
ಪುರಾತನ ಕಾಲದಿಂದಲೂ ದರ್ಭೆಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ, ಇದನ್ನ ವೈದಿಕ ಸಂಪ್ರದಾಯದಲ್ಲಿ ತುಂಬಾ ಪವಿತ್ರವಾಗಿ ಭಾವಿಸುತ್ತಾರೆ. ದೇವತಕಾರ್ಯ, ಮದುವೆ, ಉಪನಯನ ಮುಂತಾದ ಕಾರ್ಯಗಳಲ್ಲಿ ದರ್ಭೆಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಪಿತೃಕಾರ್ಯದಲ್ಲೂ ಸಹ ಉಪಯೋಗಿಸುತ್ತಾರೆ. ಮೊದಲೇ ಹೇಳಿದಂತೆ ದರ್ಭೆಗೆ ಶುಭ ಅಶುಭ ಕಾರ್ಯಗಳೆರಡರಲ್ಲೂ ಸ್ಥಾನ ನೀಡಲಾಗಿದೆ. ಗೆಳೆಯರೆ ವಂದನೆಗಳು

ಸಂಗ್ರಹ :ಪಾರ್ಥಸಾರಥಿ ಕ್ಷತ್ರಿಯ

ಅಂಬಲಪಾಡಿ: ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ

ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳು, ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಜನಪರ ಆಡಳಿತ ಮತ್ತು ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ದಾಖಲೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಅಂಬಲಪಾಡಿ ಪರಿಸರದ ಕಾಂಗ್ರೆಸ್ ನಾಯಕರಾದ ಶಿವಾಜಿ ಸನಿಲ್ ಬಂಕೇರ್ಕಟ್ಟ ಮತ್ತು ಸುಮಂತ್ ಪ.ಜಾ. ಕಾಲನಿ ಇವರು ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪಕ್ಷದ ಧ್ವಜವನ್ನು ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್ ಬನ್ನಂಜೆ, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಅಂಬಲಪಾಡಿ ಗ್ರಾ.ಪಂ. ಚುನಾವಣಾ ಉಸ್ತುವಾರಿ ಗಿರೀಶ್ ಎಮ್. ಅಂಚನ್, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ ಅಂಬಲಪಾಡಿ, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ಬಿಜೆಪಿ ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯ ಅನಿಲ್ ರಾಜ್ ಅಂಚನ್ ಅಂಬಲಪಾಡಿ, ಗ್ರಾ.ಪಂ. ಚುನಾವಣಾ ಸಹ ಉಸ್ತುವಾರಿ ರೋಷನ್ ಶೆಟ್ಟಿ, ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ್ ಕರ್ಕೇರ, ಬೂತ್ ಅಧ್ಯಕ್ಷರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್ ಹಾಗೂ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಡಿಸೆಂಬರ್ 12, ಶನಿವಾರ;2020 : ಇಂದಿನ ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಕೃಷ್ಣಪಕ್ಷ,ದ್ವಾದಶಿ/ತ್ರಯೋದಶಿ,
ಶನಿವಾರ,ವಿಶಾಖ ನಕ್ಷತ್ರ,
ರಾಹುಕಾಲ: 09 :25ರಿಂದ 10:51
ಗುಳಿಕಕಾಲ: 06:34 ರಿಂದ 07:59
ಯಮಗಂಡಕಾಲ: 01:42 ರಿಂದ 03:08

ಮೇಷ

ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಗಾಢವಾಗಿ ಕಂಡುಬರುತ್ತಿದೆ. ನೌಕರವರ್ಗಕ್ಕೆ ಕೆಲಸಗಳಿಂದ ವಿರಾಮ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು.

ವೃಷಭ

ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ–ಕಾರ್ಯಗಳಿಂದಾಗಿ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು.

ಮಿಥುನ

ಗೃಹನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮವಾದ ಕಾಲ. ಮನಸ್ಸಿಟ್ಟು ಕೆಲಸವನ್ನು ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಭೂ ಖರೀದಿ ವ್ಯವಹಾರವನ್ನು ಮಾಡಲು ಸಕಾಲ.

ಕಟಕ

ಕೆಲಸ–ಕಾರ್ಯಗಳಲ್ಲಿ ಅನುಕೂಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಿಶ್ವಾಸದಿಂದ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಲಾಭ.

ಸಿಂಹ

ಉನ್ನತ ಅಧ್ಯಯನಕ್ಕೆ ಉತ್ತೇಜನ ದೊರೆತು ವಿದೇಶಕ್ಕೆ ಪ್ರಯಾಣ ಮಾಡುವ ಸಾಧ್ಯತೆ. ಸಾರಾಸಾರ ವಿವೇಚನೆಯಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ. ವಿಶೇಷ ಭೋಜನ ಕೂಟದಲ್ಲಿ ಭಾಗಿಯಾಗುವ ಸಾಧ್ಯತೆ.

ಕನ್ಯಾ

ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ. ಅವಶ್ಯಕತೆಗಿಂತ ಹೆಚ್ಚಾಗಿ ಹಣಕಾಸಿನ ನೆರವು ದೊರೆಯಲಿದೆ. ಶೀಘ್ರದಲ್ಲೇ ಸಂತೋಷಕರ ಸುದ್ದಿಯೊಂದನ್ನು ಆಲಿಸಲಿದ್ದೀರಿ.

ತುಲಾ

ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗಾವಕಾಶ ದೊರಕಲಿದೆ. ವಿದೇಶಿ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ತಿರುವು. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಶ್ಚಿಕ

ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆ. ಸಾಮಾಜಿಕೆ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತೋಷವನ್ನು ಅನುಭವಿಸಲಿದ್ದೀರಿ. ಮಕ್ಕಳಿಂದ ಆರ್ಥಿಕ ಸಹಕಾರ ದೊರೆಯುವ ಸಾಧ್ಯತೆ.

ಧನು

ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸ. ಶಾರೀರಿಕ ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ.

ಮಕರ

ದೇವತಾನುಗ್ರಹದಿಂದ ಶುಭಕಾರ್ಯಗಳು ನಿಮ್ಮ ಮನದಿಚ್ಛೆಯಂತೆ ನೆರವೇರುವುದರಿಂದ ನೆಮ್ಮದಿ. ಧೈರ್ಯ ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲದಿಂದಾಗಿ ಕಾರ್ಯಾನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.

ಕುಂಭ

ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನುಕೂಲತೆ ಕೂಡಿಬರಲಿದೆ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ ಹೆಚ್ಛಳವಾಗಲಿದೆ.

ಮೀನ

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳುವ ಸಾಧ್ಯತೆ. ನ್ಯಾಯಾಲಯದಲ್ಲಿನ ಕಟ್ಟಳೆಗಳಿಗೆ ಚಾಲನೆ ದೊರಕಲಿದೆ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ.

ಡಿಸೆಂಬರ್ 11, ಶುಕ್ರವಾರ; 2020: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕಮಾಸ, ಕೃಷ್ಣಪಕ್ಷ,
ಏಕಾದಶಿ / ದ್ವಾದಶಿ, ಶುಕ್ರವಾರ,
ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ,
ರಾಹುಕಾಲ 10 :50ರಿಂದ 12 :16
ಗುಳಿಕಕಾಲ 07:58 ರಿಂದ 09:24
ಯಮಗಂಡಕಾಲ 03:08 ರಿಂದ 04:34

ಮೇಷ

ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಮನೆಮಂದಿಯೊಂದಿಗೆ ದೇವತಾ ದರ್ಶನ ಭಾಗ್ಯ.

ವೃಷಭ

ಕಳೆದುಹೋದ ವಸ್ತು ಅಥವಾ ಬಹುದಿನಗಳಿಂದ ಬರಬೇಕಾಗಿದ್ದ ವಸ್ತುಗಳನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಚರ ಆಸ್ತಿಗಳ ಖರೀದಿ ಮಾಡಲಿದ್ದೀರಿ. ದೇವತಾಕಾರ್ಯಗಳಲ್ಲಿ ತೊಡಗಿಸಿಕೊಂಡು ನೆಮ್ಮದಿ.

ಮಿಥುನ

ಆಸ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆ. ವಾಹನ ರಿಪೇರಿ, ಮಾರಾಟಗಾರರಿಗೆ ಉತ್ತಮ ವ್ಯವಹಾರ ನಡೆದು ಹೆಚ್ಚಿನ ಆದಾಯ. ಕಾನೂನಿಗೆ ಸಂಬಂಧಿಸಿದ ವಿಷಯದಲ್ಲಿ ಸೂಕ್ತ ಸಲಹೆ ಪಡೆದು ಮುಂದಡಿ ಇಡಿ.

ಕಟಕ

ನಿತ್ಯದ ಕೆಲಸಗಳಲ್ಲದೇ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ನೆಮ್ಮದಿಯ ವಾತಾವರಣಕ್ಕೆ ಕಾರಣರಾಗಲಿದ್ದೀರಿ. ಮನೆಯವರೊಂದಿಗೆ ಆತುರದ ವ್ಯವಹಾರ ತೋರುವುದು ತರವಲ್ಲ.

ಸಿಂಹ

ಕ್ರೀಡಾಪಟುಗಳಿಗೆ ಉತ್ತೇಜನ ದೊರಕುವ ಸಂಭವವಿದ್ದು ಉತ್ತಮ ಸಾಧನೆ ತೋರಲಿದ್ದೀರಿ. ವಿಪರೀತ ಅನಾವಶ್ಯಕ ಮಾತುಗಳಿಂದಾಗಿ ಕೆಲಸ ಕೆಡುವ ಸಾಧ್ಯತೆ. ವಾಹನ ವ್ಯವಹಾರಗಳಿಂದ ವಿಶೇಷ ಲಾಭ ಗಳಿಸಲಿದ್ದೀರಿ.

ಕನ್ಯಾ

ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನಿಮ್ಮದಾಗಲಿದೆ. ವಿವಾಹಾದಿ ಶುಭಕಾರ್ಯಗಳಲ್ಲಿ ಮನೆಯವರೊಂದಿಗೆ ಸಕ್ರಿಯ ಭಾಗಿಯಾಗುವಿರಿ.

ತುಲಾ

ವರಮಾನದಲ್ಲಿ ಗಣನೀಯ ಸುಧಾರಣೆ. ವಿದೇಶದಿಂದ ಮಕ್ಕಳ ಅಥವಾ ಸಮೀಪ ಬಂಧುಗಳ ಆಗಮನಕ್ಕಾಗಿ ಎದುರು ನೋಡುವಿರಿ. ಗೃಹಾಲಂಕಾರ ವಸ್ತುಗಳ ಖರೀದಿ ಅಥವಾ ನವೀಕರಣ ಸಾಧ್ಯತೆ.

ವೃಶ್ಚಿಕ

ಬರವಣಿಗೆ ಸಾಹಿತ್ಯ ಅಥವಾ ಅನುವಾದಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಮನೆಯ ಕೆಲಸ–ಕಾರ್ಯಗಳ ಜವಾಬ್ದಾರಿಯಿಂದ ಮುಕ್ತರಾಗಿ ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವಿರಿ.

ಧನು

ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ. ಶ್ರೀಮಂತ ಜೀವನದ ಶೈಲಿಗಾಗಿ ವೆಚ್ಚ ಭರಿಸಲಿದ್ದೀರಿ. ಸೋದರಿಯರ ವಿಚಾರದಲ್ಲಿ ಧಾರಾಳತನ ತೋರಲಿದ್ದೀರಿ.

ಮಕರ

ಸಾಹಿತ್ಯ, ಸಂಗೀತ, ಕಲಾ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳೊಡನಾಟ ದಿನವಿಡೀ ದೊರಕುವ ಸಾಧ್ಯತೆ. ರಿಯಲ್ ಎಸ್ಟೇಟ್‌ನಂತಹ ಭೂ ಸಂಬಂಧಿ ವ್ಯವಹಾರಗಳಲ್ಲಿ ಅಧಿಕ ಲಾಭ. ಕೆಲಸಗಾರರ ಬಗ್ಗೆ ವಿಶ್ವಾಸವಿರಲಿ.

ಕುಂಭ

ಮನೆಯಲ್ಲಿ ಸಂತೋಷದ ವಾತಾವರಣ. ಆದಾಯದಲ್ಲಿ ಹೆಚ್ಚಳ. ದಾಂಪತ್ಯ ಜೀವನ ಸುಖಕರವಾಗಿರುವುದು. ಸರ್ಕಾರಿ ನೌಕರರಿಗೆ ಬಿಡುವಿನ ದಿನವಾಗಿದ್ದರೂ, ಉನ್ನತ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ.

ಮೀನ

ಮನೆಯಲ್ಲಿ ಮೃದುಭಾಷಿಯಾಗಿ ವ್ಯವಹರಿಸಿ. ಕೆಲಸಗಳು ನಿಧಾನಗತಿಯಲ್ಲಿದ್ದರೂ ಮನಸ್ಸಿನಲ್ಲಿನ ದುಗುಡವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ದೂರದ ಸಂಬಂಧಿಕರೊಬ್ಬರ ಆಗಮನ ಸಾಧ್ಯತೆ.

ಸಮಗ್ರ ಗ್ರಾಮಾಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ: ಕೆ.ರಘುಪತಿ ಭಟ್

ಉಡುಪಿ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ. ಇಂದು ಗ್ರಾಮ ಪಂಚಾಯತ್ ಸಹಿತ ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಅಭಿವೃದ್ಧಿ ಪರ ಆಡಳಿತವಿದೆ. ಈ ಪರ್ವ ಕಾಲದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಗೆಲ್ಲಿಸಿಕೊಡುವ ಮೂಲಕ ಜನತೆ ಗ್ರ್ರಾಮಾಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅವರು ಪಂದುಬೆಟ್ಟುನಲ್ಲಿ ನಡೆದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು, ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಅಭಿವೃದ್ಧಿಗೆ ಇನ್ನೊಂದು ಹೆಸರು ಬಿಜೆಪಿ ಎಂಬ ರೀತಿಯಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರಗಳು ವಿನೂತನ ಜನಪರ ಯೋಜನೆಗಳ ಅನುಷ್ಠಾನ ಮತ್ತು ವಿಶಿಷ್ಟ ಕಾರ್ಯ ಸಾಧನೆಗಳ ಮೂಲಕ ಸರ್ವಸ್ಪರ್ಶಿ ಸರ್ವ ವ್ಯಾಪಿಯಾಗಿ ದಾಖಲೆಯ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ. ಉಜ್ವಲ ಉಚಿತ ಗ್ಯಾಸ್ ವಿತರಣೆ, ಕೃಷಿ ಸಮ್ಮಾನ್ ಯೋಜನೆ, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಸಹಾಯ ಹಸ್ತ, ಆರ್ಥಿಕ ಪುನಶ್ಚೇತನಕ್ಕೆ ಸಹಾಯ ಧನ, ಸ್ವೋಉದ್ಯೋಗ ಸೃಷ್ಠಿಸುವ ಆತ್ಮನಿರ್ಬರ ಭಾರತ ಯೋಜನೆ, ರೈತ ಸ್ನೇಹಿಯಾಗಿರುವ ನೂತನ ಕೇಂದ್ರ ಕೃಷಿ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಮಸೂದೆ, ಗ್ರಾಮಾಂತರ ರಸ್ತೆಗಳ ಉನ್ನತೀಕರಣ ಇವೇ ಮುಂತಾದ ಜನಪರ, ಅಭಿವೃದ್ಧಿ ಪರ ನಡೆ ಜನಮಾನಸದಲ್ಲಿ ಬಿಜೆಪಿ ನೇತೃತ್ವದ ಆಡಳಿತದಲ್ಲಿ ಭರವಸೆ ಮೂಡಿಸಿವೆ ಎಂದರು.

ಗ್ರಾಮ ಪಂಚಾಯತ್ ಚುನಾವಣೆ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಚುನಾವಣೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿಯ ಶಖೆ ಆರಂಭಗೊಂಡಿದೆ. ಕಡೆಕಾರು-ಅಂಬಲಪಾಡಿ ಪ್ರದೇಶದಲ್ಲಿ ರೂ.5 ಕೋಟಿ ಅನುದಾನದಲ್ಲಿ ನದಿದಂಡೆ ರಚನೆ ಕಾಮಗಾರಿಗೆ ಟೆಂಡರ್ ಮಂಜೂರಾತಿಗೊಂಡು ಕಾಮಗಾರಿ ಪ್ರಾರಂಭಗೊಂಡಿದೆ. ವಾರಾಹಿ ಕುಡಿಯುವ ನೀರಿನ ಯೋಜನೆಯು 2022 ಮಾರ್ಚ್‌ನಲ್ಲಿ ಸಂಪೂರ್ಣಗೊಳ್ಳಲಿದ್ದು ಉಡುಪಿ ನಗರದಿಂದ ಅಂಬಲಪಾಡಿ ಗ್ರಾ.ಪಂ. ಸಹಿತ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗೂ ನಿರಂತರ ಶುದ್ಧ ನೀರು ಪೂರೈಕೆಗೆ ಸುವ್ಯವಸ್ಥೆ ಮಾಡಲಾಗುವುದು.

ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಕಸ ನಿರ್ವಹಣೆಯನ್ನು ಉಡುಪಿ ನಗರಸಭೆಯ ಮಾದರಿಯಲ್ಲೇ ಕರ್ವಾಲು ಘಟಕದ ಮೂಲಕ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಅಂಬಲಪಾಡಿ ಗ್ರಾ.ಪಂ.ಗೆ ಸಂಪರ್ಕ ಕೊಂಡಿಯಾಗಿರುವ ಆದಿವುಡುಪಿ-ಮಲ್ಪೆ ರಾಜ್ಯ ಹೆದ್ದಾರಿಯನ್ನು 100 ಫೀಟ್ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ರೂ. 91 ಕೋಟಿ ಅನುದಾನ ಮಂಜೂರಾಗಿದ್ದು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಎಲ್ಲ ಸ್ತರದ ಜನಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿವೆ. ಅಭಿವೃದ್ಧಿಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿರುವ ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳ ಅಂತರದ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಶಾಸಕ ಭಟ್ ಕರೆ ನೀಡಿದರು.

ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಸಭೆಯ ಅಧ್ಯಕ್ಷತೆ ವಹಿಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಮತ್ತು ಅಂಬಲಪಾಡಿ ಗ್ರಾ.ಪಂ. ಚುನಾವಣಾ ಉಸ್ತುವಾರಿ ಗಿರೀಶ್ ಎಮ್. ಅಂಚನ್ ಚುನಾವಣಾ ಪ್ರಚಾರ ಹಾಗೂ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ಚುನಾವಣಾ ಸಹ ಉಸ್ತುವಾರಿ ರೋಷನ್ ಶೆಟ್ಟಿ, ಬಿಜೆಪಿ ಅಂಬಲಪಾಡಿ-ಕಡೆಕಾರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸಹ ಸಂಚಾಲಕ ಉಮೇಶ್ ಪೂಜಾರಿ ಕುತ್ಪಾಡಿ, ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗರಾಜ್ ಕರ್ಕೇರ ಕಿದಿಯೂರು, ವಿಜಯ ಶೆಟ್ಟಿ ಕಪ್ಪೆಟ್ಟು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಮಾಜಿ ಗ್ರಾ.ಪಂ. ಸದಸ್ಯರು, ಗ್ರಾ.ಪಂ. ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Design a site like this with WordPress.com
Get started