ಸಾರ್ವಜನಿಕವಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ’- ಉಡುಪಿ ಜಿಲ್ಲಾಧಿಕಾರಿ

 “ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ” ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಈ ಕುರಿತು ವೀಡಿಯೊವೊಂದರಲ್ಲಿ ಮಾಹಿತಿ ನೀಡಿದ ಅವರು “ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ” ಎಂದರು.

ಇನ್ನು “ಈ ಸಮಯದಲ್ಲಿ ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು ಯಾವುದೇ ವಿಶೇಷ ಕೊಡುಗೆಗಳನ್ನು ಸಾರ್ವಜನಿಕರಿಗೆ ನೀಡಲು ಅನುಮತಿಸಲಾಗುವುದಿಲ್ಲ. ಇತರ ದಿನಗಳಲ್ಲಿ ಹೇಗೆ ಸೇವೆ ಸಲ್ಲಿಸುತ್ತಾರೋ ಹಾಗೆ ಮಾತ್ರ ಅವರಿಗೆ ಸೇವೆ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷವನ್ನು ಆಚರಿಸುವುದನ್ನು ಕೂಡ ಈ ಸಮಯದಲ್ಲಿ ನಿಷೇಢಿಸಲಾಗಿದೆ. ಹೊಸ ವರ್ಷದ ಆಚರಣೆಯನ್ನು ಸಾರ್ವಜನಿಕರು ತಮ್ಮ ಮನೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಯಾರಾದರೂ ಪಟಾಕಿಗಳನ್ನು ಬಳಸಲು ಬಯಸಿದರೆ ಅವರು ಹಸಿರು ಪಟಾಕಿಗಳನ್ನು ಮಾತ್ರ ಬಳಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಆಚರಣೆಯ ಸಮಯದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವು ಬಹಳ ಮುಖ್ಯವಾಗಿದೆ” ಎಂದು ಹೇಳಿದ್ದಾರೆ.

ಡಿಸೆಂಬರ್27, ಭಾನುವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ವಾರ: ಭಾನುವಾರ,
ತಿಥಿ: ತ್ರಯೋದಶಿ, ನಕ್ಷತ್ರ: ಕೃತಿಕಾ,
ರಾಹುಕಾಲ: 4.41 ರಿಂದ 6.06
ಗುಳಿಕಕಾಲ: 3.15 ರಿಂದ 4.41
ಯಮಗಂಡಕಾಲ: 12.24 ರಿಂದ 1.49

ಮೇಷ ರಾಶಿ.

. ಇಂದಿನ ದಿನ ಇಂದು ನಿಮ್ಮ ಕೆಲಸದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ನಿಮ್ಮ ದೈಹಿಕ ಮತ್ತು ಲೌಕಿಕ ದೃಷ್ಟಿಕೋನವು ಇಂದು ಕೂಡ ಬದಲಾಗಬಹುದು. ಅದೇ ಕೆಲಸವನ್ನು ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ, ಅದು ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ನೀವು ಇಂದು ಉತ್ತಮ ಸಮಾಜವನ್ನು ಸೃಷ್ಟಿಸುವ ಕೆಲಸವನ್ನು ಪಡೆಯುತ್ತೀರಿ. ಇದು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ.

ವೃಷಭ ರಾಶಿ.

. ಇಂದಿನ ದಿನ ಇಂದು, ಗ್ರಹಗಳ ಶುಭ ಮೊತ್ತವು ನಿಮಗೆ ಗೌರವ ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ಇಂದು ನಿಮಗೆ ಪ್ರತಿಷ್ಠೆಯನ್ನು ನೀಡುತ್ತದೆ ಮತ್ತು ಉತ್ತಮ ರೀತಿಯ ಸಂಪತ್ತು ಪ್ರಯೋಜನಕಾರಿಯಾಗಿದೆ. ಸಂತೋಷದ ಹೂವುಗಳು ಮನಸ್ಸಿನಲ್ಲಿ ಅರಳುತ್ತವೆ ಮತ್ತು ಅದೃಷ್ಟ ಇಂದು ಹೊಳೆಯುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಪಾಲುದಾರರನ್ನು ಕಾಣಬಹುದು. ನೀವು ಹೂಡಿಕೆಯಿಂದ ಲಾಭ ಪಡೆಯುವ ನಿರೀಕ್ಷೆಯಿದೆ.

ಮಿಥುನ ರಾಶಿ..

ಇಂದಿನ ದಿನ ಗ್ರಹಗಳ ಸ್ಥಾನವು ಇಂದು ನೀವು ದಿನವನ್ನು ಓಡಾಟ ಮತ್ತು ವಿಶೇಷ ಕಾಳಜಿಯಲ್ಲಿ ಕಳೆಯುತ್ತೀರಿ ಎಂದು ಹೇಳಲಾಗಿದೆ. ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ ಇರಬಹುದು. ಅತಿಥಿಗಳು ಮತ್ತು ಸ್ನೇಹಿತರು ನಿಮ್ಮ ಮನೆಗೆ ಭೇಟಿ ನೀಡಬಹುದು. ನಿಮಗೆ ಸಂತೋಷವನ್ನುಂಟುಮಾಡುವ ಮತ್ತು ಖ್ಯಾತಿಯನ್ನು ಪಡೆಯುವ ಕೆಲವು ವಿಷಯಗಳಲ್ಲಿ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ಖರ್ಚಿನತ್ತ ಹೆಚ್ಚಿನ ಗಮನವಿರಲಿ

ಕಟಕ ರಾಶಿ

.. ಇಂದಿನ ದಿನ ನೀವು ಇಂದು ಅದೃಷ್ಟಶಾಲಿಯಾಗುತ್ತಿದ್ದೀರಿ ಮತ್ತು ಉತ್ತಮ ಆಸ್ತಿ ಪಡೆಯುವ ಲಕ್ಷಣಗಳಿವೆ. ಇಂದು ನೀವು ಕೆಲವು ವಿಷಯಗಳಿಗೆ ಖರ್ಚು ಮಾಡಬೇಕಾಗಬಹುದು ಮತ್ತು ಇದರಲ್ಲಿ ನಿಮಗೆ ಗೌರವ ಸಿಗುತ್ತದೆ. ಮಗುವಿನ ಕಡೆಯಿಂದ ಸಂತೋಷಕರ ಸುದ್ದಿ ಇರುತ್ತದೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನೀವು ಬಹಳ ಸಮಯದಿಂದ ಕಾಯುತ್ತಿದ್ದ ಕೆಲಸವನ್ನು ಮಾಡಲು ಪ್ರಯತ್ನಿಸಿದರೆ, ಈ ಸಮಯದಲ್ಲಿ ನೀವು ಶುಭ ಕಾಕತಾಳೀಯವಾಗಿ ಆ ಕೆಲಸವನ್ನು ಪೂರ್ಣಗೊಳಿಸುತ್ತೀರಿ.

ಸಿಂಹ ರಾಶಿ..

ಇಂದಿನ ದಿನ ಇಂದು ನಿಮಗೆ ಹೆಚ್ಚುತ್ತಿರುವ ಅದೃಷ್ಟ ಮತ್ತು ಸಹಾಯಕವಾಗಿದೆಯೆಂದು ತೋರುತ್ತದೆ. ಕೆಲಸದ ಸ್ಥಳದಲ್ಲಿ ಸ್ಥಳಾಂತರಗೊಳ್ಳುವ ಮೂಲಕ ನೀವು ವೃತ್ತಿಜೀವನದ ದೊಡ್ಡ ಲಾಭವನ್ನು ಪಡೆಯಬಹುದು. ವ್ಯವಹಾರದಲ್ಲಿ ನಿಕಟವರ್ತಿಯೊಂದಿಗೆ ಉತ್ತಮ ನಡವಳಿಕೆಯಿಂದ ನೀವು ಲಾಭ ಪಡೆಯಬಹುದು. ಸುಮಧುರ ಧ್ವನಿಯನ್ನು ಇಟ್ಟುಕೊಂಡು ನೀವು ಜನರ ಹೃದಯವನ್ನು ಗೆಲ್ಲಬಹುದು ಮತ್ತು ಅದೇ ವಿಷಯವು ನಿಮ್ಮನ್ನು ಬೆಂಬಲಿಸುತ್ತದೆ.

ಕನ್ಯಾ ರಾಶಿ.

. ಇಂದಿನ ದಿನ ಇಂದು ಲೋಕೋಪಕಾರದ ಕೆಲಸಗಳಲ್ಲಿ ನಿಮ್ಮ ದಿನವನ್ನು ಕಳೆಯುವಿರಿ. ಮತ್ತು ಅದೃಷ್ಟದ ಸಂಪೂರ್ಣ ಬೆಂಬಲವನ್ನೂ ನೀವು ಪಡೆಯುತ್ತೀರಿ. ನೀವು ಎಲ್ಲರನ್ನು ಗೌರವಿಸುವಿರಿ ಮತ್ತು ಪ್ರತಿಯಾಗಿ ನಿಮಗೆ ಪೂರ್ಣ ಗೌರವವೂ ಸಿಗುತ್ತದೆ. ನೀವಿಂದು ಹಾಯ ಮಾಡಿದ ಜನರು ಮುಂದೊಂದು ದಿನ ನಿಮ್ಮ ಕೆಲಸಕ್ಕೆ ಬರುತ್ತಾರೆ. ಉದ್ಯೋಗ ಅಥವಾ ಕೆಲಸದ ವ್ಯವಹಾರ ಕ್ಷೇತ್ರದಲ್ಲಿ ಮೌನವಾಗಿರುವುದು ಇಂದು ಪ್ರಯೋಜನಕಾರಿಯಾಗಿದೆ. ವಾದಗಳನ್ನು ಮತ್ತು ಮುಖಾಮುಖಿಗಳನ್ನು ತಪ್ಪಿಸಿ ಮತ್ತು ನಿಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಳ್ಳುವ ಮೂಲಕ ನಿಮ್ಮೆಲ್ಲಾ ಕೆಲಸಗಳು ಅದ್ಯತೆಯ ಮೂಲಕ ಪೂರ್ಣಗೊಳ್ಳುವುದು

ತುಲಾ ರಾಶಿ..

ಇಂದಿನ ದಿನ ರಾಶಿಚಕ್ರದಲ್ಲಿನ ಗ್ರಹಗಳ ಸ್ಥಾನವು ಇಂದು ನಿಮ್ಮ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ ಮತ್ತು ಮನಸ್ಸಿನಲ್ಲಿ ತೃಪ್ತಿ ಇರುತ್ತದೆ ಎಂದು ಗ್ರಹಗಳು ಹೇಳುತ್ತದೆ. ಇಂದು ಆನಂದದಾಯಕ ದಿನವಾಗಿರುತ್ತದೆ. ಆಪ್ತ ಸ್ನೇಹಿತನ ಸಲಹೆ ಮತ್ತು ಬೆಂಬಲದೊಂದಿಗೆ, ನೀವು ನಿಮ್ಮ ಕೆಟ್ಟ ಕೆಲಸಗಳನ್ನು ಸರಿಯಾಗಿ ಮಾಡಬಹುದು, ಸಮಯದ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಮುಂದುವರಿಯಬಹುದು. ಈ ದಿನ, ಮಕ್ಕಳು ಮತ್ತು ಹೆಂಡತಿಯು ಸಹ ಉತ್ತಮ ಸಂತೋಷವನ್ನು ನಿಮ್ಮಿಂದ ಪಡೆಯುತ್ತಾರೆ ಮತ್ತು ಮನಸ್ಸಿನಲ್ಲಿ ಸಂತೋಷ ಇರುತ್ತದೆ.

ವೃಶ್ಚಿಕ ರಾಶಿ.

. ಇಂದಿನ ದಿನ ಇಂದು ನಿಮಗೆ ಶುಭ ದಿನವಾಗಲಿದೆ ಮತ್ತು ನೀವು ಪೂರ್ಣವಾಗಿ ಅದೃಷ್ಟದ ಆನಂದವನ್ನು ಪಡೆಯುತ್ತೀರಿ. ನಿಮ್ಮ ಹಾನಿಗೊಳಗಾದ ವಸ್ತುಗಳನ್ನು ಸುಧಾರಿಸುವಲ್ಲಿ ಇಂದಿನ ದಿನವು ವಿಶೇಷ ಕೊಡುಗೆ ನೀಡುತ್ತಿದೆ. ತಜ್ಞರ ಸಲಹೆಯು ನಿಮಗೆ ನಂತರ ಉಪಯುಕ್ತವೆಂದು ಮನಸ್ಸಿಗೆ ಬರುತ್ತದೆ. ನಿಮ್ಮ ಮೋಜಿನ ದಿನಗಳು ಇಂದಿನಿಂದ ಆರಂಭವಾಗಲಿದೆ. ಮತ್ತು ನೀವು ಶೀಘ್ರದಲ್ಲೇ ಎಲ್ಲಾ ರೀತಿಯ ಕಾಯಿಲೆಗಳನ್ನು ತೊಡೆದುಹಾಕಲಿದ್ದೀರಿ. ನಿಮ್ಮ ಆರೋಗ್ಯದ ಸಮಸ್ಯೆಗಳು ಆದಷ್ಟು ಬೇಗ ದೂರಾಗುವುದು.

ಧನಸ್ಸು ರಾಶಿ.

. ಇಂದಿನ ದಿನ ಇಂದು, ನಿಮ್ಮ ರಾಶಿಚಕ್ರದ ಮಾಲೀಕರ ಶುಭ ಸ್ಥಾನವು ಇಂದು ಇದ್ದಕ್ಕಿದ್ದಂತೆ ನೀವು ಎಲ್ಲಿಂದಲಾದರೂ ಸಾಕಷ್ಟು ಹಣವನ್ನು ಪಡೆಯುವ ಮೂಲಕ ದೊಡ್ಡ ಮೊತ್ತದ ಹಣವನ್ನು ಸಂಪಾದಿಸುವ ಲಕ್ಷಣವನ್ನು ಸೂಚಿಸುತ್ತಿದೆ. ನಿಮ್ಮ ಸಮಸ್ಯೆಗಳನ್ನು ನಿಮ್ಮದೇ ಆದ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸಿ. ಇದು ಕೆಲವು ಶಾಶ್ವತ ಯಶಸ್ಸಿಗೆ ಕಾರಣವಾಗುತ್ತದೆ. ನಿಮ್ಮ ಕೆಲಸಕ್ಕಾಗಿ ನೀವು ಇತರರನ್ನು ಅವಲಂಬಿಸಬಾರದು. ನಿಮ್ಮ ಕೆಲಸವನ್ನು ಆದಷ್ಟು ನೀವೇ ಪೂರ್ಣಗೊಳಿಸಲು ಪ್ರಯತ್ನಿಸಿ.

ಮಕರ ರಾಶಿ..

ಇಂದಿನ ದಿನ ಇಂದು ಅದೃಷ್ಟವು ಹೆಚ್ಚು ಕಾರ್ಯನಿರತತೆಯನ್ನು ಸೂಚಿಸುತ್ತದೆ. ನಿಮ್ಮ ಆದ್ಯತೆಯು ವ್ಯಾಪಾರ ವ್ಯವಹಾರಕ್ಕೆ ಗಮನ ಕೊಡುವುದಾಗಿರುತ್ತದೆ. ಈ ದಿನ ಮಧ್ಯಾಹ್ನದ ಒಳಗೆ ನಿಮ್ಮ ಚದುರಿದ ವ್ಯವಹಾರವನ್ನು ನೀವು ಕ್ರೋಢೀಕರಿಸಬೇಕು. ನಿಮ್ಮ ಕೆಲಸದ ಸಂಪೂರ್ಣ ಖಾತೆಯನ್ನು ನೀವು ಸರಿಯಾಗಿ ಇಟ್ಟುಕೊಳ್ಳುವುದು ಉತ್ತಮ, ಇಲ್ಲದಿದ್ದರೆ ನಿಮಗೆ ನಂತರ ಸಮಸ್ಯೆಗಳಿರಬಹುದು. ಯಾರಿಗೂ ಕೂಡ ನಿಮ್ಮ ಕೆಲಸದ ಖಾತೆಯನ್ನು ಅಥವಾ ಲಾಭವನ್ನು ಬಹಿರಂಗಗೊಳಿಸದಿರಿ.

ಕುಂಭ ರಾಶಿ..

ಇಂದಿನ ದಿನ ಇಂದು ನೀವು ಪೂರ್ಣ ಅದೃಷ್ಟವನ್ನು ಪಡೆಯುತ್ತೀರಿ ಮತ್ತು ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಶತ್ರುಗಳ ಚಿಂತೆಗಳನ್ನು ನಿಗ್ರಹಿಸಲಾಗುತ್ತದೆ ಮತ್ತು ಬಲವಾದ ಎದುರಾಳಿಗಳು ಪ್ರಬಲವಾಗಿದ್ದರೂ ಗೆಲುವು ನಿಮ್ಮದಾಗಿರುತ್ತದೆ. ಯಶಸ್ಸನ್ನು ಸಾಧಿಸಲಾಗುತ್ತದೆ ಮತ್ತು ಸಂತೋಷವು ಇರುತ್ತದೆ. ಇಂದು ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ. ಎಲ್ಲೋ ಸ್ಥಗಿತಗೊಂಡ ಹಣವನ್ನು ನೀವು ಎಲ್ಲಿಂದಲಾದರೂ ಪಡೆಯಬಹುದು. ಕೆಲವು ಕೆಲಸಗಳಲ್ಲಿ ಲಾಭ ಇರುತ್ತದೆ.

ಮೀನ ರಾಶಿ..

ಇಂದಿನ ದಿನ ಮಗುವಿನ ಕಡೆಯಿಂದ ಸಂತೋಷಕರ ಸುದ್ದಿಗಳನ್ನು ಸ್ವೀಕರಿಸುವುದರಿಂದ ನಿಮ್ಮ ಹೃದಯವು ಸಂತೋಷವಾಗುತ್ತದೆ. ಯುವಕರಿಗೆ ಇಂದು ಕಚೇರಿಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗಲಿದೆ. ನಿಮ್ಮ ಪ್ರಭಾವದ ಕ್ಷೇತ್ರವು ವಿಸ್ತರಿಸುತ್ತದೆ ಮತ್ತು ಪ್ರಮುಖ ನಿರ್ಧಾರಗಳು ಸಹ ಪ್ರಗತಿಯತ್ತ ಸಾಗುತ್ತದೆ. ಹೊಸ ಒಪ್ಪಂದವು ಪರಿಚಯಸ್ಥರ ಮೂಲಕ ವ್ಯವಹಾರದಲ್ಲಿ ಅಂತಿಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಗುರುಗಳ ಮತ್ತು ಸಹಪಾಠಿಗಳ ಬೆಂಬಲ ಸಿಗುತ್ತದೆ. ಕುಟುಂಬದ ನಿರೀಕ್ಷೆಗಳನ್ನು ಪೂರೈಸುವಿರಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನು ಮೀಸಲಿಡುವಿರಿ. ಯಾವುದೇ ಕಾರ್ಯದಲ್ಲಿ ಆತುರಪಡಬೇಡಿ, ಮಿತವಾಗಿರಿ. ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ಗ್ರಾ.ಪಂ. ಚುನಾವಣಾ ಸೋಲಿನ ಭಯದಿಂದ ಮಾಜಿ ಸಚಿವ ಸೊರಕೆ ಅಪಪ್ರಚಾರ: ಜಿಲ್ಲಾ ಬಿಜೆಪಿ ಖಂಡನೆ

ದೇಶದೆಲ್ಲೆಡೆ ನಡೆಯುತ್ತಿರುವ ಹಲವಾರು ಚುನಾವಣೆಗಳ ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಗ್ರಾಮ ಪಂಚಾಯತ್ ಚುನಾವಣಾ ಸೋಲಿನ ಭಯದಿಂದ ಬಿಜೆಪಿ ವಿರುದ್ಧ ಅಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದೆ. ಚುನಾವಣಾ ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕಾಂಗ್ರೆಸಿಗರಿಗೆ ಅಪಪ್ರಚಾರವೇ ಜೀವಾಳ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗದೇ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ಮೇಲೆ ಗೂಬೆ ಕೂರಿಸುವ ನಿಟ್ಟಿನಲ್ಲಿ ನೀಡಿರುವ ಹತಾಶ ಮನೋಭಾವದ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.

ಬಿಜೆಪಿ ಎಂದಿಗೂ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಂಡು ಬಂದಿರುವ ರಾಜಕೀಯ ಪಕ್ಷ. ಚುನಾವಣಾ ಅಕ್ರಮಗಳೇನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೇ ಸೀಮಿತ. ಪ್ರಸಕ್ತ ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಮಂಜುನಾಥ ಪೂಜಾರಿ ಎಂಬವರ ಮನೆಗೆ ಆಕ್ರಮವಾಗಿ ಪ್ರವೇಶಿಸಿ ಅಭ್ಯರ್ಥಿ ಹಾಗೂ ಅವರ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ವರ್ತನೆ ಕಾಂಗ್ರೆಸ್ ನ ಚುನಾವಣಾ ಅಕ್ರಮಕ್ಕೆ ಜ್ವಲಂತ ಉದಾಹರಣೆಯಾಗಿದೆ.

ಮತದಾನದ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಪ್ರಯತ್ನದ ಇಂತಹ ಹೇಯ ಕೃತ್ಯಗಳಿಂದ ಕಾಂಗ್ರೆಸ್ ಗೆ ನೇರವಾಗಿ ಚುನಾವಣೆಯನ್ನು ಎದುರಿಸುವ ನೈತಿಕತೆ ಇಲ್ಲ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ನ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಸಕ್ತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್26, ಶನಿವಾರ; 2020: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ,ಭರಣಿ ನಕ್ಷತ್ರ/ಕೃತಿಕ ನಕ್ಷತ್ರ,
ರಾಹುಕಾಲ : 09:32 ರಿಂದ 10:58
ಗುಳಿಕಕಾಲ : 06:41 ರಿಂದ 08:06
ಯಮಗಂಡಕಾಲ : 01:49 ರಿಂದ 3.15

ಮೇಷ

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಒತ್ತಡಗಳನ್ನು ಎದುರಿಸಬೇಕಾದೀತು. ಮಿತ್ರರ ಸಹಕಾರ ದೊರೆತು ಧೈರ್ಯದಿಂದ ಎದುರಿಸಿ ಉತ್ತಮ ಫಲಗಳನ್ನು ಪಡೆಯುವಿರಿ. ದಿನವಿಡೀ ಒತ್ತಡಗಳು ಕಾಣಿಸಿಕೊಳ್ಳುವವು.

ವೃಷಭ

ದೊಡ್ಡ ದೊಡ್ಡ ಯೋಜನೆಗಳನ್ನು ಯೋಚಿಸುವಿರಿ. ಸಾಕಾರಗೊಳಿಸುವಲ್ಲಿ ನಿಮ್ಮ ನಿರ್ಲಕ್ಷ್ಯ ಸಲ್ಲದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಗಣಪತಿ ಆರಾಧನೆ ಸೂಕ್ತ.

ಮಿಥುನ

ಬರುವ ಎಲ್ಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ. ಸನ್ನಿಹಿತವಾದ ಬದಲಾವಣೆಗಳಿಗೆ ನಿಮ್ಮನ್ನು ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುವುದು ಅತ್ಯವಶ್ಯ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ.

ಕಟಕ

ವಿದ್ಯಾರ್ಥಿಗಳಿಗೆ, ತಾಂತ್ರಿಕ ತರಬೇತಿ ಪಡೆಯುತ್ತಿರುವವರಿಗೆ ಅತ್ಯಂತ ಮಹತ್ವದ ಕಾಲ. ಕಚೇರಿ ಕೆಲಸಗಳಲ್ಲಿ ಹೆಚ್ಚಿನ ನೈಪುಣ್ಯತೆ ಗಳಿಸುವ ಅವಕಾಶ ನಿಮ್ಮದಾಗಲಿದೆ. ಮೇಲಧಿಕಾರಿಗಳನ್ನು ಗೌರವದಿಂದ ಕಾಣಿರಿ.

ಸಿಂಹ

ಅವಸರದಿಂದ ಅವಘಡಗಳನ್ನು ತಂದುಕೊಳ್ಳುವ ಸಾಧ್ಯತೆ. ವ್ಯವಧಾನವಿರಲಿ. ವಾರಾಂತ್ಯದ ಸಂತೋಷಕೂಟಗಳಲ್ಲಿ ಭಾಗವಹಿಸುವಿರಿ. ವಾಹನ ಚಲಾವಣೆಯಲ್ಲಿ ಜಾಗೃತೆಯಿಂದಿರಿ. ಶನಿಯ ಕೃಪೆಗಾಗಿ ಎಣ್ಣೆ ದೀಪ ಹಚ್ಚಿ.

ಕನ್ಯಾ

ಏಕಕಾಲದಲ್ಲಿ ಅನೇಕ ಕಾರ್ಯಗಳಲ್ಲಿ ಮಗ್ನರಾಗಲು ಯೋಚಿಸಬೇಡಿ. ಸಂಪನ್ಮೂಲಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ವ್ಯಾಪಾರಿಗಳಿಗೆ ಅತ್ಯುತ್ತಮವಾದ ಅವಕಾಶಗಳು ಒದಗಿಬರಲಿದೆ.

ತುಲಾ

ಅಪೇಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ನೇರ ಹಾಗೂ ದಿಟ್ಟ ನಡವಳಿಕೆಯ ಅಗತ್ಯ ಕಂಡುಬರುತ್ತಿದೆ. ಹೊಸ ಹೊಸ ಮಾರ್ಗಗಳ ಮೂಲಕ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ.

ವೃಶ್ಚಿಕ

ಬಯಕೆಗಳು ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಕಷ್ಟವಾಗಬಹುದು. ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಗುರುವಿನ ಆರಾಧನೆಯಿಂದ ಯಶಸ್ಸು.

ಧನು

ಕಾರ್ಯವೈಫಲ್ಯಗಳು ಕಂಡರೂ ಧೃತಿಗೆಡಬೇಕಾಗಿಲ್ಲ. ಕಾರಣಗಳನ್ನು ಹುಡುಕಿ ಮುನ್ನಡೆದಲ್ಲಿ ಯಶಸ್ಸನ್ನು ಕಾಣುವಿರಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಉತ್ತಮ.

ಮಕರ

ಹಣಕಾಸಿನ ವಿಚಾರದಲ್ಲಿ ನೀವು ಹೆಚ್ಚಿನ ಚಿಂತನೆ ನಡೆಸುವಿರಿ. ನಿವೃತ್ತರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ಅಧ್ಯಾತ್ಮದತ್ತ ಒಲವು ತೋರುವಿರಿ.

ಕುಂಭ

ಅವಿವಾಹಿತರಿಗೆ ಉತ್ತಮ ಅವಕಾಶ ದೊರೆಯಲಿದೆ. ಪ್ರೇಮಿಗಳ ವಿಚಾರದಲ್ಲಿ ಹಿರಿಯರ ಸಮ್ಮತಿ ದೊರಕುವುದು. ಬಂಧುಬಾಂಧವರ ಸಹಕಾರದಿಂದ ಉತ್ತಮ ಫಲ ದೊರಕಲಿದೆ.

ಮೀನ

ಸೃಜನಶೀಲಕಾರ್ಯಗಳಲ್ಲಿ ಮಗ್ನರಾಗಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಕ್ಷಮತೆಯಿಂದ ಒತ್ತಡಗಳು ದೂರವಾಗಲಿವೆ. ಉನ್ನತ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.

ಡಿಸೆಂಬರ್ 25,ಶುಕ್ರವಾರ;2020: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲಪಕ್ಷ, ಏಕಾದಶಿ,
ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ,
ರಾಹುಕಾಲ: 10:57 ರಿಂದ 12: 23
ಗುಳಿಕಕಾಲ: 08 :06 ರಿಂದ 09:32
ಯಮಗಂಡಕಾಲ: 03:14ರಿಂದ 04:39

ಮೇಷ

ನಿಮ್ಮನ್ನು ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವುದರಿಂದ ಎಚ್ಚರಿಕೆ ಅಗತ್ಯ. ಹಿತಶತ್ರುಗಳನ್ನು ನಯವಾಗಿಯೇ ದೂರ ಇರಿಸುವುದು ಉತ್ತಮ. ಹಿರಿಯರ ಸಹಕಾರದಿಂದ ಎಲ್ಲ ಆಪತ್ತುಗಳಿಂದ ಹೊರಬರಲಿದ್ದೀರಿ.

ವೃಷಭ

ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸುತ್ತಿದ್ದಾರೆ. ಇನ್ನೊಬ್ಬರ ಪ್ರತಿ ನಡೆಯಲ್ಲಿಯೂ ತಪ್ಪನ್ನು ಹುಡುಕಲು ಹೋಗಿ ನಿಮ್ಮ ಮೇಲಿಟ್ಟಿರುವ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ.

ಮಿಥುನ

ಹಿರಿಯರ ಬೆಂಬಲದಿಂದ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರಕಲಿವೆ. ಸಿಕ್ಕಿದ ಅವಕಾಶ ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಜಾಣ್ಮೆಗೆ ಹಿಡಿದ ಕನ್ನಡಿಯಾಗಲಿದೆ.

ಕಟಕ

ದುಗುಡದಿಂದ ಅವಮಾನವನ್ನು ಎದುರಿಸಬೇಕಾದೀತು. ಸಹೋದರರೊಡನೆ ಮನಸ್ತಾಪ ಎದುರಾಗುವ ಸಾಧ್ಯತೆ. ಉತ್ತಮ ವಿಚಾರ ಮತ್ತು ತಾಳ್ಮೆಯಿಂದ ಮಾತ್ರ ನಿಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಲ್ಲಿರಿ.

ಸಿಂಹ

ನಿಮ್ಮ ಶ್ರೇಯಸ್ಸಿಗಾಗಿ ಬಾಳಸಂಗಾತಿಯ ಸಲಹೆಗಳನ್ನು ಗೌರವಿಸುವುದು ಉತ್ತಮ. ಬಹುದಿನಗಳ ನಿಮ್ಮ ಕನಸು ನನಸಾಗುವ ಸಾಧ್ಯತೆ. ಎಲ್ಲದಕ್ಕೂ ದೈವಾನುಗ್ರಹಕ್ಕಾಗಿ ಪ್ರಾರ್ಥಿಸಿ ಉತ್ತಮ ಫಲ ನಿಮ್ಮದಾಗಲಿದೆ.

ಕನ್ಯಾ

ಅನ್ಯರ ಕುಹಕಗಳಿಗೆ ಬೆಲೆ ಕೊಡದೆ ತಾಳ್ಮೆಯಿಂದ ವ್ಯವಹರಿಸಿದಲ್ಲಿ ಜಯ ನಿಮ್ಮದಾಗಲಿದೆ. ಧೈರ್ಯದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನೆಮ್ಮದಿ. ಗಣೇಶನ ಕೃಪೆ ನಿಮ್ಮ ಮೇಲಿದೆ.

ತುಲಾ

ದೂರದ ಊರಿನ ಪ್ರವಾಸಗಳನ್ನು ಕೈ ಬಿಡುವುದೇ ಒಳ್ಳೆಯದು. ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ. ಹಣಕಾಸಿನ ಪರಿಸ್ಥಿತಿ ದಿನೇ ದಿನೇ ಉತ್ತಮ ಸ್ಥಿತಿಗೆ ಹೋಗುವುದರಲ್ಲಿ ಸಂಶಯವಿಲ್ಲ.

ವೃಶ್ಚಿಕ

ಉನ್ನತಾಧಿಕಾರದಲ್ಲಿ ಇರುವವರೊಂದಿಗೆ ಮನಸ್ತಾಪ ಬೇಡ. ನಿಮ್ಮ ತಪ್ಪು ನಿರ್ಧಾರಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಂಭವ. ಬೇರೆಯವರ ವಿಚಾರದಲ್ಲಿ ತಲೆ ಹಾಕದೆ ನಿಮ್ಮ ಕಾರ್ಯ ಮುಂದುವರಿಸಿ.

ಧನು

ಸಂಕಷ್ಟಗಳ ನಡುವೆಯೂ ಕಟ್ಟ ಕಡೆಗೆ ಜಯದ ಪತಾಕೆಯನ್ನು ಹಾರಿಸಲಿದ್ದೀರಿ. ಕೋರ್ಟು ಕಚೇರಿಯಲ್ಲಿನ ಕೆಲಸಗಳಲ್ಲಿ ಯಶಸ್ಸು. ಹಿರಿಯರ ಆಶೀರ್ವಾದದಿಂದಾಗಿ ನಿಮ್ಮ ಶತ್ರುಗಳು ದೂರಾಗಲಿದ್ದಾರೆ.

ಮಕರ

ಕೈಗೂಡದೇ ಇದ್ದ ಹಳೆಯ ಒಡಂಬಡಿಕೆಗಳಿಗೆ ಪುನಃ ಚಾಲನೆ ಸಿಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವ ಆಶಾಭಾವನೆ ನಿಮ್ಮದಾಗುವುದು. ಪ್ರಯಾಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ

ಸ್ಥಿರಾಸ್ತಿ ಖರೀದಿಯ ಬಗ್ಗೆ ಹಣಕಾಸು ಸಂಸ್ಥೆಗಳ ನೆರವನ್ನು ಕೋರಿ ಅನುಮತಿಯನ್ನು ಪಡೆದುಕೊಳ್ಳುವಿರಿ. ಯಾವುದಕ್ಕೂ ಗಡಿಬಿಡಿ ಮಾಡದೆ ಇರುವುದು ಉತ್ತಮ.

ಮೀನ

ನಿಮ್ಮ ಚಾಣಾಕ್ಷತನವನ್ನು ಸರಿಯಾಗಿ ಬಳಸಿಕೊಂಡು ಹಣಕಾಸಿನ ಸುಧಾರಣೆಗಾಗಿ ಯತ್ನಿಸಿದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ದೂರಾಲೋಚನೆಗೆ ಮಕ್ಕಳಿಂದ ಸಣ್ಣ ಪ್ರಮಾಣದ ವಿರೋಧ ಎದುರಾಗುವ ಸಾಧ್ಯತೆ.

ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಬೆಂಗಳೂರು: ಇತ್ತೀಚಿಗೆ ಭಾರಿ ಸುದ್ದಿಯಾದ ರೂಪಾಂತರ ಕೊರೋನಾ 2ನೇ ಅಲೆ ವೈರಸ್ ಇದೀಗ ಬ್ರಿಟನ್ ನಿಂದ ವಿಶ್ವದ ಬೇರೆ ಬೇರೆ ದೇಶಗಳಿಗೂ ಆತಂಕವನ್ನುಂಟು ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಗೆ ರಾಜ್ಯ ಸರ್ಕಾರ ಅಸ್ತು ಎಂದಿತು ಇದೀಗ ರಾಜ್ಯ ಸರ್ಕಾರದ ನೈಟ್ ನೈಟ್ ಕರ್ಫ್ಯೂ ಚಿಂತನೆ ವಿಫಲವಾಗಿದ್ದು, ಹಲವೆಡೆ ಈ ವಿಚಾರವಾಗಿ ಪರವಿರೋಧ ಚರ್ಚೆಗಳು ನಡೆದು ಜನಾಕ್ರೋಶಕ್ಕೆ ಕಾರಣವಾಗಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಿ ಇಂದಿನಿಂದ ನಡೆಯಬೇಕಾಗಿದ್ದ ನೈಟ್ ಕರ್ಫ್ಯೂ ಹಿಂಪಡೆದಿದೆ.

ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು,  ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು  ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಲು ಕೋರಿದೆ.

ಡಿಸೆಂಬರ್24 ,ಗುರುವಾರ ; 2020 :ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ, ದಶಮಿ, ಗುರವಾರ, ”ಅಶ್ವಿನಿ ನಕ್ಷತ್ರ”,
ರಾಹುಕಾಲ 01:48 ರಿಂದ 03:14
ಗುಳಿಕಕಾಲ 09:31 ರಿಂದ 10:57
ಯಮಗಂಡಕಾಲ 6:40 ರಿಂದ 08:05

ಮೇಷ

ಆರ್ಥಿಕಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೂ ದುಡುಕುತನದಿಂದ ನಷ್ಟವಾಗಬಹುದು. ಯಾವುದೇ ವಿಚಾರಕ್ಕೂ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಗಣಪತಿ ಆರಾಧನೆಯಿಂದ ಕಾರ್ಯದಲ್ಲಿ ಯಶಸ್ಸು.

ವೃಷಭ

ವೈದ್ಯವೃತ್ತಿಯವರಿಗೆ ಅಧಿಕ ಶ್ರಮವಾಗಿ ವಿಪರೀತ ಆಯಾಸ. ಸ್ತ್ರೀಯರಿಗೆ ಅನುಕೂಲಕರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿ ದಾಳವನ್ನಾಡಿಸುವ ಸಾಧ್ಯತೆ. ಮನೋವ್ಯಾಧಿಗಳು ದೂರವಾಗಲಿವೆ.

ಮಿಥುನ

ನಿಮ್ಮ ಮೇಲಿನ ಹೆಚ್ಚಿನ ಜವಾಬ್ದಾರಿ ನಿಭಾಯಿಸಿಕೊಳ್ಳುವಲ್ಲಿ ಯಶಸ್ಸು. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳಲಿದ್ದೀರಿ. ವಿನ್ಯಾಸಕಾರರಿಗೆ ಉತ್ತಮ ಆರ್ಥಿಕ ಲಾಭ. ರಾಜಕೀಯ ಬದುಕು ಮಸುಕಾಗುವ ಸಾಧ್ಯತೆ.

ಕಟಕ

ದೂರಪ್ರಯಾಣದಿಂದ ಉಂಟಾದ ಆಯಾಸದಿಂದಾಗಿ ಚೇತರಿಸಿಕೊಳ್ಳಲಿದ್ದೀರಿ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ದೇವತಾ ದರ್ಶನದಿಂದ ನೆಮ್ಮದಿ. ಉದ್ಯೋಗದಲ್ಲಿ ಆಸಕ್ತಿ. ಆರೋಗ್ಯದಲ್ಲಿ ಸ್ಥಿರತೆ.

ಸಿಂಹ

ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿರುವಿರಿ. ಗ್ರಹಬಲಗಳು ಕೂಡಿಬರಲಿವೆ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯ. ಮಕ್ಕಳ ಪ್ರಗತಿ ಕಂಡು ಸಂತಸ. ಉನ್ನತ ಹುದ್ದೆಯೊಂದನ್ನು ಅಲಂಕರಿಸುವ ಸಾಧ್ಯತೆ.

ಕನ್ಯಾ

ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಅನಿರೀಕ್ಷಿತವಾದ ತಲೆನೋವಿನ ಸಂಗತಿ ಎದುರಾಗಲಿದೆ. ನಿಗದಿತ ಕಾರ್ಯಗಳಲ್ಲಿ ಯಶಸ್ಸು. ಧನಾಗಮನದ ಸಾಧ್ಯತೆ.

ತುಲಾ

ಸಂತೋಷ ನೀಡುವ ವಿಚಾರದಲ್ಲಿ ಕುಟುಂಬದಿಂದ ಸಹಕಾರ. ಅನಿರೀಕ್ಷಿತ ಬೆಳವಣಿಗೆಯಿಂದ ಸಾಮಾಜಿಕ ಗೌರವ ಹೊಂದುವಿರಿ. ಸಮಾಜ ಸೇವಕರಿಗೆ ಸಾಫಲ್ಯತೆಯ ನೆಮ್ಮದಿ.

ವೃಶ್ಚಿಕ

ಮನೆಯಲ್ಲಿ ದೇವತಾಯಾಗ ನಿರ್ಧಾರವಾಗಲಿದೆ. ಸತ್ಪುರುಷರ ದರ್ಶನ ಮಾಡಲಿದ್ದೀರಿ. ವ್ಯವಹಾರದಲ್ಲಿ ಉನ್ನತಿಯಾಗಿ ಮನ್ನಣೆ ಪಡೆಯುವಿರಿ. ದಾಂಪತ್ಯದಲ್ಲಿ ಸರಸ. ಚಿನ್ನಾಭರಣ ಖರೀದಿ ಸಾಧ್ಯತೆ.

ಧನು

ನೀವು ಮಾಡುವ ಯಾವುದೇ ಕಾರ್ಯದಲ್ಲೂ ಬದಲಾವಣೆಯಾದರೂ ಸಕಾರಾತ್ಮಕವಾಗಲಿದೆ. ಯಶಸ್ಸು ನಿಮ್ಮ ಪಾಲಿಗೆ ಬರಲಿದ್ದು ಸಂತೋಷ ತರಲಿದೆ. ವನಪಾಲಕರಿಗೆ ನೆಮ್ಮದಿ.

ಮಕರ

ಕಠಿಣ ಪರಿಶ್ರಮದಿಂದಾಗಿ ಕಾರ್ಯದಲ್ಲಿ ಯಶಸ್ಸು. ಎದುರಾಳಿಗಳ ದಾಳಿಯಿಂದಾಗಿ ತತ್ತರಿಸುವ ಸಾಧ್ಯತೆ. ಚಿಂತೆಗೆ ಅವಕಾಶವಿಲ್ಲ. ಶನೀಶ್ವರ ದೇವರಿಗೆ ಎಳ್ಳೆಣ್ಣೆ ಸಮರ್ಪಿಸಿ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿ.

ಕುಂಭ

ವಿದೇಶಗಳಿಂದ ಬಂಧುಗಳ ಆಗಮನದ ಸಾಧ್ಯತೆ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನದ ಮಾತುಗಳನ್ನು ಕೇಳಲಿದ್ದೀರಿ. ಅತಿಯಾದ ಉಲ್ಲಾಸದಿಂದ ಮೈ ಮರೆಯುವ ಸಾಧ್ಯತೆ ಉದ್ಯೋಗರಂಗದಲ್ಲಿ ಚೇತರಿಕೆ.

ಮೀನ

ಬಂಧುಮಿತ್ರರ ಆಗಮನದಿಂದ ಮನಸ್ಸಿಗೆ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಯೋಗಾಭ್ಯಾಸದ ಮೊರೆ ಹೋಗಬೇಕಾದೀತು. ದೀನರಿಗೆ ಸಹಾಯ ನೀಡಿ. ಪಶು ಪಕ್ಷಿಗಳಿಗೆ ಆಹಾರ ನೀಡಿ.

ರೂಪಾಂತರಿತ ಕೊರೋನಾ ಎಫೆಕ್ಟ್: ನಾಳೆಯಿಂದ ರಾತ್ರಿ ಪ್ರತಿಬಂಧಕಾಜ್ಞೆ ಜಾರಿ

ಬೆಂಗಳೂರು: ಬ್ರಿಟನ್ ಮೂಲದಿಂದ ಮತ್ತೆ ವೈರಸ್ ಹರಡುವ ಬೀತಿಯಿಂದ ದೇಶದ ಕೆಲವು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೂ ನೈಟ್ ಕರ್ಫ್ಯೂ ಮಾಡಲು ಮುಂದಾಗಿದ್ದು ಈ ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ರಾತ್ರಿ 11ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಫ್ಯೂ ಮಾಡಲು ಸರಕಾರ ತೀರ್ಮಾನ ಮಾಡಿದ್ದು ಈ ನೀತಿಯು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಹಗಲಲ್ಲಿ ಬಹಳಷ್ಟು ಜನಸಂಚಾರ ಇರುವುದರಿಂದ ಈ ವ್ಯವಸ್ಥೆಯು ದಾರಿ ತಪ್ಪುವ ಸಾಧ್ಯತೆ ಇದೆ.

ನೈಟ್ ಕರ್ಫ್ಯೂ ಇದ್ದರು ಬಸ್ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು ಆಟೋ ಸಂಚಾರವು ಇದೆ ಎಂಬುದಾದರೆ ನಿರ್ಬಂಧ ಯಾವುದಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಆತುರದಲ್ಲಿ ನೈಟ್ ಕರ್ಫ್ಯೂ ಘೋಷಿಸಿದ ಸರಕಾರ ನಿಲುವೇನು?

ವಿವಿಧ ಆಯಾಮಗಳಲ್ಲಿ ಅವಲೋಕಿಸಿದಾಗ ನೈಟ್ ಕರ್ಫ್ಯೂ ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ. ಜನ ಸಂಚಾರ ಇಲ್ಲದ ಹೊತ್ತಲ್ಲಿ ಕರ್ಫ್ಯೂ ಘೋಷಿಸಿ ಏನು ಪ್ರಯೋಜನ ಎಂದು ಜನರಾಡಿಕೊಳ್ಳುತ್ತಿದ್ದು ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೈಗಾರಿಕೆ, ನೈಟ್ ಶಿಫ್ಟ್ ಆಧರಿತ ಕಂಪೆನಿಗಳಿಗೆ ಶೇ.50 ರಷ್ಡು ನೌಕರರ ಮೂಲಕ ಕಾರ್ಯಾಚರಣೆಗೆ ಅನುಮತಿ. ನೌಕರರು ಕಂಪನಿ, ಕೈಗಾರಿಕೆಗಳ ಐಡಿಕಾರ್ಡ್ ತೋರಿಸಿ ಹೋಗಬೇಕು. ಕೈಗಾರಿಕೆಗಳಿಗೆ 24/7 ಕಾರ್ಯನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ.

ದೂರದ ಪ್ರಯಾಣದ ಬಸ್ ಮತ್ತು ರೈಲ್ವೇಗಳಿಗೆ ಅನುಮತಿ!

ಪಿಕಪ್ ಮತ್ತು ಡ್ರಾಪ್ ಗೆ ಮಾತ್ರ ಓಲಾ, ಉಬರ್, ಆಟೋಗಳ ಸಂಚಾರಕ್ಕೆ ಅವಕಾಶ!

ಬಸ್‍ನಿಲ್ದಾಣ, ರೈಲು ಸ್ಟೇಶನ್, ಏರ್ ಪೋರ್ಟ್ ಗಳಿಂದ ಪಿಕಪ್, ಡ್ರಾಪ್ ಗೆ ಮಾತ್ರ ಅವಕಾಶವಿದ್ದು, ಅಧಿಕಾರಿಗಳು ಕೇಳಿದಾಗ ಟಿಕೆಟ್ ತೋರಿಸಬೇಕು.

ಕೋವಿಡ್19 ‘ತಾಂತ್ರಿಕ ಸಲಹಾ ಸಮಿತಿ’ ಸಭೆ ಮುಕ್ತಾಯ : ರಾಜ್ಯದಲ್ಲಿ ಮತ್ತೆ ‘ರಾತ್ರಿ ಕರ್ಫ್ಯೂ’ ಜಾರಿಯಾಗಲಿದೆಯೇ?

ಬೆಂಗಳೂರು : ಯುಕೆ ಕೋವಿಡ್ ರೂಪಾಂತರ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ, ಇಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಇಂತಹ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಕ್ಕೆ ಬರಲಾಗಿದ್ದು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವಂತ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಾಗುತ್ತಾ ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ, ರಾಜ್ಯದಲ್ಲಿ ಕೋವಿಡ್ ರೂಪಾಂತರದ ಎಫೆಕ್ಟ್ ಇಲ್ಲ. ಯಾರೂ ಹೆದರುವುದು ಬೇಡ. ಮುಂಜಾಗ್ರತಾ ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ಅಲ್ಲದೇ ಮತ್ತೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸುವ ಅಗತ್ಯವಿಲ್ಲವೆಂಬುದಾಗಿಯೂ ಸ್ಪಷ್ಟ ಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆಯಿತು.

ಇಂದಿನ ಸಭೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸೋದು ಸೇರಿದಂತೆ, ಕೋವಿಡ್ ಹೊಸ ರೂಪಾಂತರದ ವೈರಸ್ ಬಗ್ಗೆ ಕೈಗೊಳ್ಳಬಹುದಾದಂತ ತುರ್ತು ಕ್ರಮಗಳ ಕುರಿತೂ ಚರ್ಚೆ ನಡೆಸಲಾಯಿತು. ಸಭೆ ಅಂತ್ಯಗೊಂಡ ನಂತ್ರ ಸಮಿತಿಯ ಶಿಫಾರಸ್ಸುಗಳೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತೆರಳಿರುವಂತ ಆರೋಗ್ಯ, ವೈದ್ಯಕೀಯ ಸಚಿವರು, ನೈಟ್ ಕರ್ಪ್ಯೂ ಕೂಡ ಜಾರಿಯ ಶಿಫಾರಸ್ಸು ಮಾಡಲಿದ್ದಾರೆ ಎನ್ನಲಾಗಿದೆ. ಇಂತಹ ತಾಂತ್ರಿಕ ಸಮಿತಿಯ ಸಲಹೆಯನ್ನು ಸಿಎಂ ಒಪ್ಪುತ್ತಾರಾ..? ರಾಜ್ಯದಲ್ಲಿ ಮತ್ತೆ ನೈಟ್ ಕರ್ಪ್ಯೂ ಜಾರಿಯಾಗುತ್ತಾ ಎನ್ನುವ ಬಗ್ಗೆ ಕಾದುನೋಡಬೇಕಿದೆ.

ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನಿಷೇಧಿಸಿದ ರಾಜ್ಯಸರಕಾರ!

ಬೆಂಗಳೂರು: ಕೋವಿಡ್‌-19ರ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಗ ಲಕ್ಷಣ ರಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್‌-19ರ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮಾರುಕಟ್ಟೆ ಮತ್ತು ಅಂಗಡಿ ಮಳಿಗೆಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಗರಿಷ್ಠ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.



ಆಹಾರ ಮತ್ತು ಮಾದಕವಸ್ತು ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಮಧ್ಯಪ್ರದೇಶ ಸರ್ಕಾರದ ನಿರ್ಧಾರ!
ಅಂಗಡಿ ಮಳಿಗೆಗಳ ಪ್ರವೇಶ ದ್ವಾರದಲ್ಲೇ ಎಲ್ಲ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಥರ್ಮಲ್‌ ಸ್ಕ್ಯಾನ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮುಖಗವಸು ಅಥವಾ ಫೇಸ್‌ ಕವರ್‌ ಧರಿಸಿರಲೇಬೇಕು. ಆರು ಅಡಿ ಅಂತರದ ಪಾಲನೆ ಆಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆನ್‌ಲೈನ್‌ ವ್ಯವಹಾರಕ್ಕೆ ಉತ್ತೇಜನ ನೀಡಬೇಕು. ಪಾಳಿಯಂತೆ ಅಂಗಡಿ ಮುಂಗಟ್ಟು ತೆರೆಯುವುದು ಮತ್ತು ಅಂಗಡಿಗಳು ತೆರೆಯುವ ಅವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಲೋಚಿಸಬೇಕು. ಅನಧಿಕೃತ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು. ಜನ ಸಂದಣಿಯಾಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Design a site like this with WordPress.com
Get started