ಡಿಸೆಂಬರ್ 31, ಗುರುವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ,ಪ್ರಥಮ / ದ್ವಿತೀಯ,
ಗುರುವಾರ, ಪುನರ್ವಸು ನಕ್ಷತ್ರ.
ರಾಹುಕಾಲ: 01:51 ರಿಂದ 03:17
ಗುಳಿಕಕಾಲ: 9:34 ರಿಂದ 11:00
ಯಮಗಂಡಕಾಲ: 06:43 ರಿಂದ 08 :08

ಮೇಷ

ನಿಮ್ಮ ಕಾರ್ಯಚಟುವಟಿಕೆಗಳನ್ನು ಇತರರು ಆಡಿಕೊಳ್ಳುವ ಸಾಧ್ಯತೆ ಇದ್ದು ಇದರಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ನಶೆಯ ಬೆನ್ನು ಹತ್ತದಂತೆ ಎಚ್ಚರಿಕೆ ವಹಿಸುವುದು ಉತ್ತಮ. ದೃಢಸಂಕಲ್ಪದಿಂದ ಯಶಸ್ಸು.

ವೃಷಭ

ಷೇರು ವ್ಯವಹಾರದಲ್ಲಿ ಹಾನಿಯ ಸಾಧ್ಯತೆ ಇದ್ದು ಸರಿಯಾದ ಮಾರ್ಗದರ್ಶನ ಪಡೆದು ವ್ಯವಹರಿಸಿ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉತ್ತಮ ಮಾರ್ಗದರ್ಶನ ದೊರೆತು ಉತ್ತಮ ಫಲಿತಾಂಶ ಸಿಗಲಿದೆ.

ಮಿಥುನ

ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು ಪ್ರಶಸ್ತಿ, ಪುರಸ್ಕಾರಗಳು ನಿಮ್ಮದಾಗಲಿವೆ. ಉತ್ತಮ ಅವಕಾಶಗಳು ಒದಗಿ ಬರಲಿವೆ. ಆಹಾರ ವ್ಯತ್ಯಯದಿಂದ ಉದರ ನೋವಿನ ಸಮಸ್ಯೆ ತಲೆದೋರಬಹುದು.

ಕಟಕ

ಸಾಮಾಜಿಕ ಕಾರ್ಯಗಳ ವಿಷಯದಲ್ಲಿ ಒರಟುತನದಿಂದಾಗಿ ಇತರರ ತಿರಸ್ಕಾರಕ್ಕೆ ಒಳಗಾಗುವ ಸಾಧ್ಯತೆ. ಕೌಟುಂಬಿಕ ವಿಷಯದಲ್ಲಿ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಸಿಂಹ

ರಾಜಕಾರಣಿಗಳಿಗೆ ಶ್ರೇಯಸ್ಸು. ಉತ್ತಮ ಹುದ್ದೆ ದೊರಕುವ ಸಾಧ್ಯತೆ. ಸ್ನೇಹಿತರ ನಡುವೆ ನಡೆನುಡಿಗಳ ಮೇಲೆ ಹಿಡಿತವಿರಲಿ. ಪತ್ರಿಕೋದ್ಯಮ ಮತ್ತು ಪ್ರಚಾರ ಮಾಧ್ಯಮಗಳ ವ್ಯವಹಾರಗಳಲ್ಲಿರುವವರಿಗೆ ಉತ್ತಮ ಪ್ರಗತಿ.

ಕನ್ಯಾ

ನಿಮ್ಮ ಯೋಜನೆಗಳಿಂದ ಇತರರಿಗೆ ಹೆಚ್ಚಿನ ಅನುಕೂಲತೆಯನ್ನು ತರುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಸಾಮಾಜಿಕ ಕಾರ್ಯಕರ್ತರಿಗೆ ಉತ್ತಮ ದಿನ.

ತುಲಾ

ದೂರಪ್ರಯಾಣ ಮಾಡದಿರುವುದು ಒಳ್ಳೆಯದು. ಗೃಹಿಣಿಯರ ಅಭಿಲಾಷೆಗಳನ್ನು ಪೂರೈಸುವುದು ಉತ್ತಮ. ಮನೆಯವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಮಕ್ಕಳ ನಡವಳಿಕೆಯ ಬಗ್ಗೆ ಗಮನ ಅಗತ್ಯ.‌

ವೃಶ್ಚಿಕ

ನಿಮ್ಮ ಮಾತುಗಳಿಂದಾಗಿಯೇ ವೃಥಾ ಆರೋಪ ಎದುರಿಸುವ ಸಾಧ್ಯತೆ. ಮಾತಿನ ಮೇಲೆ ಹಿಡಿತವಿರಲಿ. ನಿಷ್ಕಲ್ಮಷ ಮನಸ್ಸಿನಿಂದ ವ್ಯವಹರಿಸಿ. ಅತಿಯಾದ ಸಂತೋಷ ಮೈಮರೆಸುವ ಸಾಧ್ಯತೆ.

ಧನು

ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ. ನೌಕರರಿಗೆ ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗುವ ಸಾಧ್ಯತೆ. ಕೆಲಸ–ಕಾರ್ಯಗಳಲ್ಲಿ ಅಸಡ್ಡೆ ತೋರುವುದು ಸಲ್ಲ. ದಿನದ ಅಂತ್ಯದಲ್ಲಿ ವೆಚ್ಚ ಭರಿಸಲಾಗದೆ ಸಂಕಷ್ಟ.

ಮಕರ

ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಾಧ್ಯತೆ. ಆಹಾರ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉತ್ತಮಕಾರ್ಯವೊಂದನ್ನು ಹಮ್ಮಿಕೊಂಡಿದ್ದಲ್ಲಿ ಹಿರಿಯರ ಆಶೀರ್ವಾದದಿಂದ ಯಶಸ್ವಿಯಾಗುವಿರಿ. ಬಂಧುಗಳ ಆಗಮನ ಸಾಧ್ಯತೆ.

ಕುಂಭ

ನಿಮ್ಮ ಯೋಜನೆಗಳನ್ನು ಕೈಬಿಡದೇ ಮುನ್ನಡೆಸಲು ಸಕಾಲ. ಸಂತೋಷಕೂಟದಲ್ಲಿ ಭಾಗವಹಿಸುವ ಸಾಧ್ಯತೆ. ಅನುಕೂಲತೆಗಳು ಒದಗಿ ಬರಲಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ದೊರೆತು ಆತ್ಮವಿಶ್ವಾಸಕ್ಕೆ ನಾಂದಿ.

ಮೀನ

ಎಂಜಿನಿಯರ್ ಮತ್ತು ಗೃಹ, ವಸ್ತ್ರವಿನ್ಯಾಸಕರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ. ಗೃಹಾಲಂಕಾರ ವಸ್ತುಗಳ ಖರೀದಿ ಸಾಧ್ಯತೆ. ಅನಗತ್ಯ ವೆಚ್ಚದ ಮೇಲೆ ಹಿಡಿತವಿರಲಿ. ಸಂಗಾತಿಯ ಮಾತಿಗೆ ಮನ್ನಣೆ ಇರಲಿ.

ಉಡುಪಿ ತಾಲೂಕು: 16 ಗ್ರಾ.ಪಂ.ನಲ್ಲಿ ಗೆಲುವು ಸಾಧಿಸಿದವರ ಸಂಪೂರ್ಣ ವಿವರ

ಉಡುಪಿ:(ಉಡುಪಿ ಟೈಮ್ಸ್ ವರದಿ)ತಾಲೂಕಿನಲ್ಲಿ ನಡೆದ 16 ಗ್ರಾ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರು.

ಅಂಬಲಪಾಡಿ (19)ಕುಸುಮಾ, ಭಾರತಿ, ರಾಜೇಶ್ ಸುವರ್ಣ, ಸೋಮನಾಥ್ ಬಿ.ಕೆ., ಸುರೇಶ್ ಪೂಜಾರಿ, ಲಕ್ಷ್ಮಣ, ಸುಜಾತಾ ಶೆಟ್ಟಿ, ಶಶಿಧರ್, ಸಬಿತಾ, ಸುಜಾತಾ ಎಸ್., ಉಷಾ ಜೆ. ಶೆಟ್ಟಿ, ಸುಂದರ, ಪ್ರಮೋದ್, ರೋಹಿಣಿ ಎಸ್. ಪೂಜಾರಿ, ಹರೀಶ್ ಎನ್. ಪಾಲನ್, ಶಕುಂತಲಾ ಶೆಟ್ಟಿ, ಸುನೀಲ್ ಕುಮಾರ್, ಸುಮಂಗಳಾ. 

ಕಡೇಕಾರು (21)ಪ್ರವೀಣ್ ಎಸ್. ಮೆಂಡನ್, ವಸಂತ್ ಕುಂದರ್, ವೇದಾವತಿ ರವಿ ಸುವರ್ಣ, ತಾರಾನಾಥ ಆರ್. ಸುವರ್ಣ, ಲೀಲಾವತಿ ಜಿ. ಕುಂದರ್, ಸುಕನ್ಯಾ ರಾಘವ ಪೂಜಾರಿ, ಇಂದಿರಾ ಪಿ. ಶೆಟ್ಟಿ, ರಮೇಶ್ ಕೋಟ್ಯಾನ್, ನವೀನ್ ಶೆಟ್ಟಿ, ನಿರ್ಮಲಾ, ರಂಜಿತಾ, ಜಯಕರ, ಸರಸ್ವತಿ, ಪ್ರಶಾಂತ್ ಸಾಲ್ಯಾನ್ ಕುತ್ಪಾಡಿ, ರಾಘವೇಂದ್ರ, ಸುಲೋಚನಾ ಸೋಮಯ್ಯ, ದಿನೇಶ್ ಜತ್ತನ್, ಸತೀಶ್ ಆರ್. ಕೋಟ್ಯಾನ್, ವಿನೋದಿನಿ, ಸವಿತಾ ಹರೀಶ್.

ಉದ್ಯಾವರ (30)ರಾಧಾಕೃಷ್ಣ, ಸರೋಜಾ ಸುಧಾಕರ, ಆಶಾ ಸುರೇಶ್, ಜುಡಿತ್ ಪಿರೇರಾ, ರಿಯಾಝ್ ಇಸ್ಮಾಯಿಲ್ ಪಳ್ಳಿ, ಫ್ರೀಡಾ ಜೆನ್ನಿರ್ ಡಿಸೋಜ, ರಮಾನಂದ ಸೇರಿಗಾರ್, ಆಶಾ ವಾಸು, ಪಣಿಯಾಡಿ ಅಬಿದ್ ಆಲಿ, ನಿತಿನ್ ಜೆ. ಸಾಲ್ಯಾನ್, ಶಶಿಕಲಾ, ನಿತೇಶ್ ಪೂಜಾರಿ, ಸುಮತಿ, ದಿವಾಕರ ಪೂಜಾರಿ, ಪೂರ್ಣಿಮಾ ಗಣೇಶ್, ಜಿತೇಂದ್ರ ಶೆಟ್ಟಿ, ಸರಿತಾ, ಮಧುಲತಾ, ಲಾರೆನ್ಸ್ ಡೆಸಾ, ಸಚಿನ್ ಕುಮಾರ್, ಯೋಗೀಶ್ ಎಸ್. ಕೋಟ್ಯಾನ್, ವೀಣಾ ಶ್ರೀಧರ ಪೂಜಾರಿ, ಗಿರೀಶ್ ವಿ. ಸುವರ್ಣ, ಚೇತನ್, ಮಾಲತಿ ಸಾಲ್ಯಾನ್, ಪ್ರಮೀಳಾ ಪೂಜಾರಿ, ರಾಜೇಶ್ ಜೆ. ಕುಂದರ್, ರೇಖಾ ಶಂಕರ್, ರಾಜೇಶ್, ವನಿತಾ ಶೆಟ್ಟಿ.

80ಬಡಗಬೆಟ್ಟು (24)ಉಷಾ ಮಂಜುನಾಥ್ ನಾಯಕ್, ರೂಪಾ ನಾಯಕ್, ಶುಭಕರ ಶೆಟ್ಟಿ, ಸಂದೀಪ್ ಪೂಜಾರಿ, ಗಣಪತಿ ಕಾಮತ್, ಲಕ್ಷ್ಮೀ ಶೆಟ್ಟಿ, ಎ. ರವೀಂದ್ರ ಕಾಮತ್, ಶಾಂತಾ ನಾಯಕ್, ಶ್ರೀದೇವಿ, ಕೇಶವ ಕೋಟ್ಯಾನ್, ಜ್ಯೋತಿ ಡಿ. ಪ್ರಭು, ಮಾಧವಿ ಎಸ್. ಆಚಾರ್ಯ, ಶಾಂತಾ ಪೂಜಾರಿ, ಶ್ರೀನಿವಾಸ ಮರಾಠೆ, ಸತೀಶ್ ಪೂಜಾರಿ, ಸಂತೋಷ್ ನಾಯ್ಕ, ನಿರುಪಮಾ ಎಸ್. ಹೆಗ್ಡೆ, ಶ್ರೀದೇವಿ, ಉಪೇಂದ್ರ ನಾಯಕ್, ಸುಧೀರ್, ಪ್ಲೋಸಿ ಮಾರ್ಗರೇಟ್ ೆರ್ನಾಂಡಿಸ್, ಕೆ. ಶಾಂತಾ ರಾಮ್ ಶೆಟ್ಟಿ, ಸುನೀತಾ, ಎಂ. ನೋಯಲ್ ಜೆ. ವಾಸ್. 

ಆತ್ರಾಡಿ (14)ಗಂಗಾಧರ ಪ್ರಭು ಜೆಡ್ಡು, ಶಾರದಾ ಎಸ್., ಹರಿಣಿ ಶೆಟ್ಟಿ, ಇಸ್ಮಾಯಿಲ್, ಪ್ರತಿಮಾ ಕರುಣಾಕರ ನಾಯ್ಕ, ರತ್ನಾಕರ ಶೆಟ್ಟಿ, ರೂಪಾ ಶೆಟ್ಟಿ, ವಿನಂತಿ ನಾಯ್ಕ, ಹರೀಶ್ ಶೆಟ್ಟಿ, ಸುಧೀರ್ ಕುಮಾರ್, ಸುರೇಶ್ ನಾಯ್ಕ, ಕವಿತಾ, ಯತೀಶ್ ಶೆಟ್ಟಿ, ಸುಮಾ ವಿ. ಪೂಜಾರಿ. 

ಕುಕ್ಕೆಹಳ್ಳಿ (14)ಉಷಾ, ಜಯಾನಂದ ನಾಯ್ಕ್, ಪುರಂದರ ಕೋಟ್ಯಾನ್, ಪ್ರೇಮಾ, ಸೌಮ್ಯ ಜೆ. ಶೆಟ್ಟಿ, ಹರೀಶ್, ಶಂಕರ, ಸುನೀತಾ, ಹೇಮಲತಾ, ಜಯಶ್ರೀಘಿ, ಸುಧಾಕರ, ಶಾಂತಾರಾಮ ಶೆಟ್ಟಿ, ಜಯಶ್ರೀಘಿ, ಕಿರಣ್‌ಕುಮಾರ್ ಹೆಗ್ಡೆ.

ಬೈರಂಪಳ್ಳಿ (16)ಅನಂತ ಕುಲಾಲ್, ಪ್ರಸಾದ್ ಮಲ್ಯ, ಮಾಲಿನಿ ಜಯಾನಂದ ಪೂಜಾರಿ, ಅಮ್ಮಣ್ಣಿ ಶೆಟ್ಟಿ, ದಯಾನಂದ ಕುಲಾಲ್, ಎಸ್. ಜಿಯಾನಂದ ಹೆಗ್ಡೆ, ಬೇಬಿ, ಸಚೇತಾ, ಸುಜಾತ ಸತೀಶ್ ಕುಲಾಲ್, ರಾಧಿಕಾ ಸತೀಶ್ ಭಟ್, ಸುಮಿತ್ರಾ ವಿಶ್ವನಾಥ ಆಚಾರ್ಯ, ಹರ್ಷಿತ್ ಕುಮಾರ್ ಪೂಜಾರಿ, ಸತೀಶ್  ಶೆಟ್ಟಿ, ಸುಮಿತಾ, ವಿಜಯಕುಮಾರ್, ಸಂತೋಷ್ ಕುಮಾರ್ ಬೈರಂಪಳ್ಳಿ.  

ತೋನ್ಸೆ (21)ಧೀರೇಂದ್ರಘಿ, ಲೋಕೇಶ್, ಪ್ರತಿಭಾ, ಆಶಾ, ನಿತ್ಯಾನಂದ ಕೆಮ್ಮಣ್ಣು, ಅರುಣ್ ೆರ್ನಾಂಡಿಸ್, ಯಶೋದಾ, ಪ್ರಶಾಂತ್ ಕೆಮ್ಮಣ್ಣು, ಸರೋಜ ಕರ್ಕೇರ, ಕುಸುಮಾ, ಜಮಿಲಾ ಸಾದಿದ, ಮಹಮ್ಮದ್ ಇದ್ರಿಸ್, ೌಜಿಯಾ, ಹೈದರ್ ಆಲಿ, ಲತಾ, ವತ್ಸಲಾ ವಿನೋದ್, ಪುರಂದರ ಟಿ. ಕುಂದರ್, ಮಹಮ್ಮದ್ ಹಿಂ ಅಬ್ದುಲ್ಲಾ, ಸುಜನ್ ಡಿಸೋಜ, ಮಮ್ತಾಝ್, ವಿಜಯ.

ಮಣಿಪುರ (16)ಪ್ರಜ್ವಲ್ ಹೆಗ್ಡೆ, ವಾಣಿ, ಸುರೇಖಾ ನಾಯ್ಕ, ಚೈತ್ರಾ, ಪದ್ಮನಾಭ ನಾಯಕ್, ಸುನಂದ, ಪ್ರಭಾತ್ ಕುಮಾರ್, ಗುಲಾಬಿ, ವಿನಯ ಶೆಟ್ಟಿ, ಹಸನ್ ಶೇಖ್ ಮಹಮ್ಮದ್, ಉಮೇಶ್, ವಿನ್ನ್ರಿೆಡ್ ಡಿಸೋಜ, ಜಾನ್ ಸಿಕ್ವೇರ, ಆಶಾ ಶೇಖರ್, ಡೆನ್ಸಿಲ್ ಡಿಸೋಜ, ಸಂತೋಷ್ ಶೆಟ್ಟಿ. 

ಪೆರ್ಡೂರು (28 ಸದಸ್ಯರು)ರಮೇಶ್ ಪೂಜಾರಿ, ಲಕ್ಷ್ಮೀಘಿ, ಸಂತೋಷ್ ಕುಲಾಲ್, ಜಯಶ್ರೀ, ದೇವು ಪೂಜಾರಿ, ನವೀನ, ಶಿವರಾಮ ಶೆಟ್ಟಿ, ಶೋಭಾ ಜಿ. ಗಾಂಸ್, ಗಾಯತ್ರಿ, ಚೇತನಾ ಶೆಟ್ಟಿ, ಉದಯ ಕುಲಾಲ್, ಸತೀಶ್ ನಾಯ್ಕ, ತುಕರಾಮ, ಭವಾನಿ ಕುಲಾಲ್ತಿ, ಮಂಜುಳಾ, ದಿನೇಶ್ ಪೂಜಾರಿ, ಶಾಂತಾ ರೈ, ರೇವತಿ ನಾಯ್ಕ, ಭಾರತಿ, ದಯಾನಂದ ಶೆಟ್ಟಿ, ರಾಘವೇಂದ್ರ ಟೈಲರ್, ಲತಾ, ಸಚಿನ್ ಪೂಜಾರಿ,

ಕಲ್ಯಾಣಪುರ (20)ಜಾನ್ಸನ್ ಪೌಲ್ ಡಿಸೋಜ, ಜ್ಯೋತಿ ಡಿಸೋಜ, ಪ್ರಶಾಂತ್ ಆಚಾರ್ಯ, ಅನಿತಾ ಎಸ್. ನಾಯ್ಕ, ರತ್ನ ಕೆ. ಉಚ್ಚಿಲ, ವಿಶುಕುಮಾರ್ ವಿ. ಸುವರ್ಣ, ಉದಯ ಪೂಜಾರಿ, ಕವಿತಾ ಗಣೇಶ್ ಮೇಸ್ತ, ಪ್ರೇಮ ಲತಾ ಕಿಶೋರ್, ಬೆನಡಿಕ್ತ್ ಜೆ. ಮೆನೆಜಸ್, ರೋಸಿ ಕ್ರಾಸ್ತಾ, ವಿಠಲ ಪೂಜಾರಿ, ಸುನೀತಾ, ಸತೀಶ್, ನಾಗರಾಜ, ಪುಷ್ಪಲತಾ ರಾಘವ್, ಬ್ಯಾಪ್ಟಿಸ್ಟ್ ಡಯಾಸ್,  

ತೆಂಕನಿಡಿಯೂರು (26)ಗಾಯತ್ರಿ, ಪ್ರಖ್ಯಾತ್ ಶೆಟ್ಟಿ, ಶಾಲಿನಿ ಆರ್. ಆಚಾರ್ಯ, ಅನುಷಾ ಆಚಾರ್ಯ, ಸುರೇಶ್ ನಾಯಕ್, ಮೀನಾ ಲೋರಿನಾ ಪಿಂಟೋ, ಸತೀಶ್ ನಾಯಕ್, ಅರುಣ್ ಜತ್ತನ್ನ, ವಿಖಿತಾ ಸುರೇಶ್, ಸತೀಶ್ ಆರ್. ಪೂಜಾರಿ, ಗೀತಾ ಶೆಟ್ಟಿ, ನಿರ್ಮಲಾ ಜೆ. ಕೋಟ್ಯಾನ್, ಪ್ರಶಾಂತ್ ಹೆಬ್ಬಾರ್, ವೆಂಕಟೇಶ್ ಕುಲಾಲ್, ಪುಷ್ಪಾ ಉಮೇಶ್, ರವಿರಾಜ್, ಶರತ್ ಕುಮಾರ್ ಶೆಟ್ಟಿ, ಕೆ. ಪೃಧ್ವಿರಾಜ್ ಶೆಟ್ಟಿ, ರೇಖಾ ಪ್ರಕಾಶ್ ಗಾಣಿಗ, ಶೋಭಾ ದಾಮೋದರ ಗಾಣಿಗ, ವಿನೋದ್ ಸುವರ್ಣ, ಸಿಂಪ್ರಿಯನ್ ರೋಡ್ರಿಗಸ್, 

ಬಡಾನಿಡಿಯೂರು (11)ಆಶಾ, ಪ್ರವೀಣ್ ಕಾಂಚನ್, ಉಮೇಶ್ ಪೂಜಾರಿ, ಯಶೋದಾ, ಶಶಿಕಲಾ, ಶೀಲಾ ಎಸ್. ಅಮೀನ್, ಜೋಸ್‌ೆ ಪಿಂಟೋ, ದೀಪಾ, 

ಕೊಡಿಬೆಟ್ಟು (19)ಯಶೋದಾ, ವಿನಯ, ಇಂದಿರಾ ಪೂಜಾರಿ, ಸಂದೀಪ್ ಕುಮಾರ್, ಲಕ್ಷ್ಮೀ ನಾರಾಯಣ ಪ್ರಭು, ವಸಂತಿ ಯಾನೆ ಶ್ಯಾಮಲಾ, ಗಣಪತಿ ಪ್ರಭು, ಜಯಶ್ರೀ, ವಿಜಯಲಕ್ಷ್ಮೀ ಆರ್. ನಾಯಕ್, ಸಂದೀಪ ಮಡಿವಾಳ, 

ಬೊಮ್ಮರಬೆಟ್ಟು (21)ಪ್ರಭಾಕರ ನಾಯ್ಕಘಿ, ಪ್ರೇಮಾ, ನಾಲೋಡಿ ಮೀರಾ ನಾಯಕ್, ರಾಕೇಶ್ ಶೆಟ್ಟಿ, ಚಂದ್ರಶೇಖರ್, ಜ್ಯೋತಿ ಹರೀಶ್ ಶೆಟ್ಟಿ, ವಿನೋದ ನಾಯ್ಕ, ಲತಾ, ಮುಂಡುಜೆ ಸುರೇಶ್ ನಾಯಕ್, ಗೀತಾ ದಯಾನಂದ, ನಾರಾಯಣ ಪೂಜಾರಿ, ಸಂಧ್ಯಾ ನಾಯಕ್, ಸಂಗೀತಾ, ರಾಘವೇಂದ್ರ ನಾಯಕ್, ಹರೀಶ್ ಸಾಲ್ಯಾನ್ ಪಡ್ಡಂ, ಅರುಣಾ ಉಮೇಶ್ ಶೆಟ್ಟಿ, 

ಅಲೆವೂರು (29)ಪ್ರಶಾಂತ ಆಚಾರ್ಯ, ಶ್ರೀಕಾಂತ್, ಶ್ರೀಮತಿ ಎಸ್. ಶೆಟ್ಟಿ, ಸೌಮ್ಯ, ಜಲೇಶ್ ಎಸ್. ಶೆಟ್ಟಿ, ದುಂಡಪ್ಪ ಬಿ. ಬಿದರಿ, ಲಲಿತಾ ನಾಯ್ಕಘಿ, ಮಮತಾ ಶೆಟ್ಟಿಗಾರ್, ಯತೀಶ್, ಶಶಿ ಕೆ. ಶೆಟ್ಟಿ, ಶಾಂತಾ ನಾಯಕ್, ಆಶಿಶ್ ಕುಮಾರ್ ಶೆಟ್ಟಿ, ರಂಜಿತಾ, ಮನಮೋಹನ್, ಶ್ಯಾಮಲಾ ಸುಧಾಕರ್, ಗೀತಾ, ಪ್ರವೀಣ್, ರೇಣುಕಾ ಶೆಟ್ಟಿ, ಅವಿನಾಶ ಶೆಟ್ಟಿಗಾರ್, ಸುಧಾಕರ ಪೂಜಾರಿ, ಪುಷ್ಪಲತಾ, ಶ್ರೀಲತಾ, ಅಲೆವೂರು ರೂಪೇಶ್ ದೇವಾಡಿಗ,

ರಾಜ್ಯದಲ್ಲಿ ‘ಬ್ರಿಟನ್ ವೈರಸ್’ ಹೆಚ್ಚಳ ಹಿನ್ನಲೆ : ವೈರಸ್ ಹೆಚ್ಚಿರುವ ಜಿಲ್ಲೆಗಳಲ್ಲಿ ‘ಮತ್ತೆ ಲಾಕ್ ಡೌನ್’ ಸುಳಿವು ನೀಡಿದ ಸಚಿವರು

ಬೆಂಗಳೂರು : ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚು ಹೆಚ್ಚು ಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಕರ್ಪ್ಯೂ ಜಾರಿಗೊಳಿಸುವಂತ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಇದರ ಮಧ್ಯೆ ಕಂದಾಯ ಸಚಿವ ಆರ್.ಅಶೋಕ್ ಅವರು, ಬ್ರಿಟನ್ ರೂಪಾಂತರ ವೈರಸ್ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದರಿಂದ ಸಂಪೂರ್ಣ ಲಾಕ್ ಡೌನ್ ಜಾರಿಯ ಅಗತ್ಯವಿಲ್ಲ. ಆದ್ರೇ, ಸೋಂಕಿನ ಪ್ರಕರಣಗಳು ಪತ್ತೆಯಾಗಿರುವಂತ ಜಿಲ್ಲೆಗಳಲ್ಲಿ ಮಾತ್ರವೇ ಲಾಕ್ ಡೌನ್ ಜಾರಿಗೊಳಿಸಿದ್ರೆ ಉತ್ತಮ ಎನ್ನಲಾಗುತ್ತಿದೆ. ಆ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿನ ಪ್ರಕರಣಗಳು ಪತ್ತಯಾಗಿರುವಂತ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯ ಸುಳಿವನ್ನು ನೀಡಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಂದಾಯ ಸಚಿವ ಆರ್.ಅಶೋಕ್ ಅವರು, ಬ್ರಿಟನ್ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ ಮಾಡಬೇಕಾ ಬೇಡವಾ ಎನ್ನುವ ಬಗ್ಗೆ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಎಲ್ಲಾ ಸಚಿವರು, ಶಾಸಕರ ಅಭಿಪ್ರಾಯ ಕೋರಿದ್ದಾರೆ. ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಇನ್ನೂ ಗೊಂದಲವಿದೆ. ಪೋಷಕರು ಮಕ್ಕಳನ್ನು ಕಳಿಸೋಕೆ ಹಿಂದೇಟು ಹಾಕಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಅಂತಿಮವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಇದುವರೆಗೆ ರಾಜ್ಯದಲ್ಲಿ 11 ಜನರಿಗೆ ಬ್ರಿಟನ್ ರೂಪಾಂತರ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ರೂಪಾಂತರ ವೈರಸ್ ಸೋಂಕು ಪತ್ತೆಯಾದ ನಂತ್ರ ಇಡೀ ರಾಜ್ಯದಲ್ಲೇ ಲಾಕ್ ಡೌನ್ ಮಾಡುವ ಅಗತ್ಯ ಕಂಡು ಬರುತ್ತಿಲ್ಲ. ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವಂತ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಮಾಡಬಹುದಾಗಿದೆ. ಆ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬ್ರಿಟನ್ ವೈರಸ್ ಹಿನ್ನಲೆಯಲ್ಲಿ ಪ್ರಕರಣಗಳು ಪತ್ತೆಯಾಗಿರುವಂತ ಜಿಲ್ಲೆಗಳಲ್ಲಿ ಮತ್ತೆ ಲಾಕ್ ಡೌನ್ ನಿಯಮ ಜಾರಿಗೊಳ್ಳಲಿದೆ ಎನ್ನುವಂತ ಸುಳಿವು ನೀಡಿದ್ದಾರೆ.

ಡಿಸೆಂಬರ್ 30, ಬುಧವಾರ ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ಹುಣ್ಣಿಮೆ,
ನಕ್ಷತ್ರ: ಆರಿದ್ರ,
ರಾಹುಕಾಲ: 12.30 ರಿಂದ 1.50
ಗುಳಿಕಕಾಲ: 11.10 ರಿಂದ 12.30
ಯಮಗಂಡಕಾಲ: 8.29 ರಿಂದ 9.49

ಮೇಷ

ಬಹುದಿನಗಳಿಂದ ಬಾಕಿ ಇರುವ ಹಣ ಹಿಂದಿರುಗಿ ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುವುದು. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ಅಂದುಕೊಂಡ ಕೆಲಸ–ಕಾರ್ಯಗಳು ನಿರ್ವಿಘ್ನವಾಗಿ ನಡೆಯುವವು.

ವೃಷಭ

ಆರ್ಥಿಕ ಹಿನ್ನಡೆಯ ನಡುವೆಯೂ ಮನೆಯಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡಲಿದೆ. ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಖರ್ಚು.

ಮಿಥುನ

ಆರ್ಥಿಕ ಸಮತೋಲನ ಕಂಡುಬರುವುದು. ನಿಮ್ಮ ಮೇಲಿನ ಆಪಾದನೆಗಳಿಂದ ಮುಕ್ತರಾಗಿ ಗೌರವಕ್ಕೆ ಪಾತ್ರರಾಗಲಿದ್ದೀರಿ. ಕೆಲಸ–ಕಾರ್ಯಗಳಲ್ಲಿ ಉತ್ಸಾಹ. ದೇವಿ ಸನ್ನಿಧಿಯಲ್ಲಿ ತುಪ್ಪದ ದೀಪ ಹಚ್ಚಿ.

ಕಟಕ

ಸಹೋದ್ಯೋಗಿಗಳಿಂದ ಸಕಾರಾತ್ಮಕ ಸಹಾಯ ದೊರಕಲಿದೆ. ಸಮಾಜದಲ್ಲಿ ನಿಮ್ಮ ಪರಿಶ್ರಮದ ಫಲವನ್ನು ಬೇರೆಯವರು ಸವಿಯುವ ಸಾಧ್ಯತೆ. ಕಾಲಕ್ರಮದಲ್ಲಿ ನಿಮ್ಮ ಶ್ರಮದ ಅರಿವಾಗಿ ಗೌರವ ಸಿಗಲಿದೆ.

ಸಿಂಹ

ವಿಪರೀತ ಕಾರ್ಯಬಾಹುಳ್ಯದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ. ಸಮಾಧಾನದಿಂದ ವರ್ತಿಸುವುದು ಉತ್ತಮ. ಚುರುಕಿನ ಕಾರ್ಯ ಕ್ಷಮತೆಯಿಂದ ಕೆಲಸ ಪೂರೈಸಿ ಮನಸ್ಸಿಗೆ ನಿರಾಳವಾಗಿ ನೆಮ್ಮದಿ ದೊರಕಲಿದೆ.

ಕನ್ಯಾ

ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ವೈದ್ಯ ವೃತ್ತಿಯಲ್ಲಿರುವವರಿಗೆ ಆದಾಯದಲ್ಲಿ ಹೆಚ್ಚಳ. ಅತಿಯಾದ ಮಾತಿನಿಂದಾಗಿ ವೃಥಾ ವೈಮನಸ್ಸು ಉಂಟಾಗುವ ಸಾಧ್ಯತೆ. ಶಾರದೆಯ ಆರಾಧನೆ ಯಶಸ್ಸನ್ನು ನೀಡುವುದು.

ತುಲಾ

ಬೇರೆಯವರ ವ್ಯವಹಾರದಿಂದ ಮೋಸ ಹೋಗುವ ಸಾಧ್ಯತೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಸಮಾಧಾನದಿಂದ ಮುಂದುವರೆಯುವುದು ಸೂಕ್ತ. ಬೇರೆಯವರ ಟೀಕೆಗಳಿಗೆ ಕಿವಿಗೊಡಬೇಡಿ.

ವೃಶ್ಚಿಕ

ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ. ತಜ್ಞರಿಂದ ಸೂಕ್ತ ಸಲಹೆ, ಸಹಾಯಗಳನ್ನು ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಸುಖನುಭವ ಉಂಟಾಗಲಿದೆ.

ಧನು

ವಾಹನ, ಆಸ್ತಿ ಖರೀದಿಯ ಸಾಧ್ಯತೆ. ಗುರುಹಿರಿಯರ ಆಶೀರ್ವಾದ ದೊರೆಯಲಿದೆ. ಬಹುದಿನಗಳ ಬಯಕೆ ಈಡೇರುವ ಸಾಧ್ಯತೆ. ಪತ್ನಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ದೂರದ ಪ್ರಯಾಣದ ಸಾಧ್ಯತೆ.

ಮಕರ

ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸಮಯವಾಗಿದೆ. ನಿಮ್ಮ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದು ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ. ವ್ಯವಹಾರದ ಭರದಲ್ಲಿ ಕುಟುಂಬ ಕಡೆಗಣನೆ ಸರಿಯಲ್ಲ.

ಕುಂಭ

ಕುಟುಂಬದವರೊಡನೆ ಧಾರ್ಮಿಕಕ್ಷೇತ್ರ ದರ್ಶನ ಲಭ್ಯವಾಗಲಿದೆ. ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗುವ ಕಾಲ. ದೈನಂದಿನ ವ್ಯವಹಾರಗಳಲ್ಲಿ ಉತ್ಸಾಹ ಮೂಡಿ ಆದಾಯ. ಗೃಹನಿರ್ಮಾಣ ಯೋಜನೆ ಸಿದ್ಧವಾಗುವ ಸಾಧ್ಯತೆ.

ಮೀನ

ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಲಿದೆ. ಅಲಂಕಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕುಟುಂಬಕ್ಕೊಂದು ವಿಶೇಷ ಗೌರವ ತಂದುಕೊಡಲಿದ್ದಾರೆ.

ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೇಗೌಡರವರ ನಿಧನಕ್ಕೆ ಜಿಲ್ಲಾ ಬಿಜೆಪಿ ಸಂತಾಪ

ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೇಗೌಡರವರು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಧೀಮಂತ ನಾಯಕರು. ಗ್ರಾಮ ಪಂಚಾಯತ್ ಮಟ್ಟದಿಂದ ಮೊದಲ್ಗೊಂಡು ಸಹಕಾರಿ ಕ್ಷೇತ್ರ ಸಹಿತ ರಾಜಕೀಯ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಪಕ್ಷ ನಿಷ್ಠೆ ಮತ್ತು ಬದ್ಧತೆಯಿಂದ ಜನಸೇವೆಗೈದು ಯಶಸ್ಸಿನ ಉತ್ತುಂಗಕ್ಕೇರಿದ ಜನ ನಾಯಕರು.

ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೆಗೌಡರವರ ಅಕಾಲಿಕ ಅಗಲುವಿಕೆಯು ರಾಜ್ಯಕ್ಕೆ ತುಂಬಲಾರದ ನಷ್ಟವೆನಿಸಿದೆ. ಅವರ ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಉಡುಪಿ ಜಿಲ್ಲಾ ಬಿಜೆಪಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಧಾನಿಗೆ ಕಾಲಿಟ್ಟ `ರೂಪಾಂತರಿ’ ಕೊರೊನಾ ವೈರಸ್ : ಬೆಂಗಳೂರಿನ ‘ಮೂವರಿಗೆ ಸೋಂಕು’ ದೃಢ

ಬೆಂಗಳೂರು: ತೀವ್ರ ಆತಂಕಕ್ಕೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹೈದರಾಬಾದ್ ನ ಇಬ್ಬರು, ಪುಣೆಯ ಒಬ್ಬರು ಹಾಗೂ ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರಿನ ಉತ್ತರಹಳ್ಳಿ ಹಾಗೂ ರಾಜಾಜಿನಗರದ ಒಟ್ಟು ಮೂವರಿಗೆ ಸೋಂಕು ದೃಢಪಟ್ಟಿದೆ. ಇನ್ನು ಇವರಲ್ಲಿ ಇಬ್ಬರು ತಾಯಿ ಮಗಳು ಅಂತಾ ಹೇಳಲಾಗುತ್ತಿದೆ.

ಶಾಕಿಂಗ್‌ ನ್ಯೂಸ್‌! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ..!

ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ನಡೆದ ಎಳೆದಾಟ, ನೂಕಾಟ ಪ್ರಕರಣದಿಂದ ಸಾಕಷ್ಟು ಮನನೊಂದಿದ್ದ ವಿಧಾನಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಎಸ್‌ಎಲ್‌ ಧರ್ಮೇಗೌಡ ಅವರು ಸೋಮವಾರ ಸಂಜೆ ಮನೆಯಿಂದ ತಮ್ಮ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್‌ ಬಾರದ ಕಾರಣ ಗನ್‌ಮ್ಯಾನ್‌, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ನಂತರ ಅವರ ಮೃತದೇಹ ಕಡೂರು ತಾಲೂಕಿನ ಗುಣಸಾಗರದ ಮಂಕೇನಹಳ್ಳಿ ರೈಲ್ವೇ ಟ್ರ್ಯಾಕ್‌ ಬಳಿ ಪತ್ತೆಯಾಗಿದೆ. ಸಂಜೆ ಸುಮಾರು 6.30ರ ಸುಮಾರಿಗೆ ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಗುಣಸಾಗರಕ್ಕೆ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್‌ ಬಳಿ ಕಾರನ್ನು ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ್ದಾರೆ. ಬಳಿಕ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತಾ ಡ್ರೈವರ್‌ನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿಕೊಂಡಿದ್ದಾರೆ. ಅಷ್ಟೊತ್ತಿಗಾಗಲೇ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಹಳೇ ಕಾರಿನಲ್ಲಿ ಒಬ್ಬರೇ ತೆರಳಿದ್ದ ಧರ್ಮೇಗೌಡ ಅವರು ರಾತ್ರಿ ಸುಮಾರು 11-12ಗಂಟೆ ಅವಧಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ತಲೆ ದೇಹದಿಂದ ಛಿದ್ರಗೊಂಡಿದೆ. ದೇಹ ಸಿಕ್ಕ ಸ್ವಲ್ಪ ದೂರದಲ್ಲಿ ಅವರ ತಲೆ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಸ್ಥಳಕ್ಕೆ ಶಾಸಕ ಸಿ.ಟಿ.ರವಿ, ಸೋದರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮತ್ತಿತರರು ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

‘2020 ಹೀಗಿತ್ತು ನೋಡಿ’: ಆನಂದ್ ಮಹಿಂದ್ರಾ ಶೇರ್‌ ಮಾಡಿದ ವಿಡಿಯೋ ವೈರಲ್

2020ರ ಕಠಿಣ ವರ್ಷವನ್ನು ಅದು ಹೇಗೆ ಕಳೆದಿದ್ದೇವೆ ಎಂದು ಸೂಚ್ಯವಾಗಿ ತೋರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ ವೈರಲ್ ಆಗಿದ್ದು ಲಕ್ಷಕ್ಕೂ ಹೆಚ್ಚು ವೀವ್ಸ್‌ ಸಿಕ್ಕಿವೆ.

ಬಹಳ ಕಿರಿದಾದ ಸುರಂಗವೊಂದರಲ್ಲಿ ಬಸ್ಸನ್ನು ತೂರಿಸಿದ ಚಾಲಕ, ಬಲೇ ಪ್ರಯಾಸಪಟ್ಟು ಅದನ್ನು ಸುರಂಗದಿಂದ ಹೊರಗೆ ಬರುವ ಈ ವಿಡಿಯೋ 2020ರ ವರ್ಷ ಹೇಗಿದೆ ಎಂದು ತೋರಿದಂತೆ ಇದೆ.

“2020ರ ವರ್ಷದ ಮೂಲಕ ಹಾದು ಹೋಗಿದ್ದು ಅದೆಷ್ಟು ಕಷ್ಟವಿತ್ತು ಎಂದು ಇದಕ್ಕಿಂದ ಚೆನ್ನಾಗಿ ಯಾವ ವಿಡಿಯೋ ಸಹ ತೋರಲಾರದು!” ಎಂದು ಮಹಿಂದ್ರಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ

ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ ನವ ದಂಪತಿಗಳಿಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೌರವಾರ್ಪಣೆ.

ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ ಪಡೆದ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿರುವ ನವ ದಂಪತಿ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ರವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಉಡುಪಿ ಅಜ್ಜರಕಾಡು ನಿವಾಸದಲ್ಲಿ ಬೇಟಿಯಾಗಿ ಆಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಫಲಾನುಭವಿಗಳ ಪ್ರಕೋಷ್ಠ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ, ಉಡುಪಿ ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ನ್ಯಾಯವಾದಿ ಉಮೇಶ್ ಶೆಟ್ಟಿ, ಜಗದೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಡಿಸೆಂಬರ್ 28,ಸೋಮವಾರ ; 2020 : ಇಂದಿನ ರಾಶಿಭವಿಷ್ಯ

27-12-2020 ಭಾನುವಾರ ಶಾರ್ವರಿ ಸಂ|ರದ ಧನುರ್ಮಾಸ ದಿನ 12 ಸಲುವ ಮಾರ್ಗಶಿರ ಶುದ್ಧ ತ್ರಯೋದಶಿ 58||| ಗಳಿಗೆ

ದಿನ ವಿಶೇಷ :ಪ್ರದೋಷ, ಹನೂಮದ್ವ್ರತನಿತ್ಯ ನಕ್ಷತ್ರ :ಕೃತ್ತಿಕಾ 16 ಗಳಿಗೆಮಹಾ ನಕ್ಷತ್ರ :ಮೂಲಾಋತು :ಹೇಮಂತರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆ

ಸೂರ್ಯಾಸ್ತ :6.10 ಗಂಟೆ ಸೂರ್ಯೋದಯ :6.53 ಗಂಟೆ

ಮೇಷ

ಅನಾರೋಗ್ಯದ ಬಗ್ಗೆ ಎಚ್ಚರದಿಂದಿರಿ. ಪ್ರತಿಸ್ಪರ್ಧಿಗಳ ಸವಾಲು. ಯೋಚಿಸಿ ಕಾರ್ಯಪ್ರವೃತ್ತರಾಗುವುದು ನಿಮ್ಮ ಯಶಸ್ಸಿನ ಗುಟ್ಟಾಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅನ್ಯರಲ್ಲಿ ಚರ್ಚೆ. ಚಾಲನೆಯಲ್ಲಿ ಎಚ್ಚರವಿರಲಿ.

ವೃಷಭ

ನಿಮ್ಮ ಗೌರವ ಹೆಚ್ಚಾಗಲಿದೆ. ಇಷ್ಟಮಿತ್ರರ ಆಗಮನದ ಜೊತೆಗೆ ಮನೆಯಲ್ಲಿ ಹಬ್ಬದ ವಾತಾವರಣ. ವಾಹನ ಚಲಾವಣೆಯಲ್ಲಿ ನಿಗಾ ಇರಲಿ. ಚಿಲ್ಲರೆ ವ್ಯಾಪಾರಿಗಳಿಗೆ ಶುಭದಿನ.

ಮಿಥುನ

ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ಲಾಭ ದೊರಕಲಿದೆ. ರತ್ನ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಹೆಣ್ಣುಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಆತ್ಮೀಯರಿಂದ ಸಿಹಿ ಸುದ್ದಿ.

ಕಟಕ

ಕುಟುಂಬದೊಂದಿಗೆ ದೂರ ಪ್ರಯಾಣ. ನಿಶ್ಚಿತ ಕಾರ್ಯದಲ್ಲಿ ಗೆಲುವು. ಗೌರವಾನ್ವಿತರ ದರ್ಶನವಾಗುವ ಸಾಧ್ಯತೆ. ಹಿಂದಿನ ಸಾಲ ವಸೂಲಾತಿ. ದಿನದ ಕೊನೆಯಲ್ಲಿ ನೆಮ್ಮದಿ.

ಸಿಂಹ

ಈ ದಿನದ ಪ್ರಗತಿ ಉತ್ತಮವಾಗಿದೆ. ದೂರ ಪ್ರದೇಶಗಳಿಗೆ ಪ್ರಯಾಣ ಮಾಡಲಿದ್ದೀರಿ. ದಾಂಪತ್ಯದಲ್ಲಿ ಅತ್ಯಂತ ಸರಸದ ದಿನ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಸಂತೋಷಮಯ ಬದುಕು.

ಕನ್ಯಾ

ಉದ್ಯೋಗದಲ್ಲಿ ಪದೋನ್ನತಿಯನ್ನು ಹೊಂದಲಿದ್ದೀರಿ. ಸಹೋದರಿಯರ ಆಗಮನ ನಿರೀಕ್ಷೆ. ಬಂಗಾರಕ್ಕೆ ಸಂಬಂಧಿಸಿದಂತೆ ಕಲಹ. ತಾಳ್ಮೆಯಿಂದ ನೆಮ್ಮದಿ. ವಾಹನ ಖರೀದಿಗೆ ಸುಸಂದರ್ಭ.

ತುಲಾ

ಮಕ್ಕಳ ಬಗ್ಗೆ ಚಿಂತೆ ಇದೆ. ಗುರುಗಳ ಪ್ರಶಂಸೆಯ ಬಲದಿಂದ ಕಾರ್ಯದಲ್ಲಿ ಉನ್ನತಿ. ಆರೋಗ್ಯದಲ್ಲಿ ಚೇತರಿಕೆ. ಹಿರಿಯರ ಮಾರ್ಗದರ್ಶನದಿಂದ ಸಂತೋಷ. ಇಷ್ಟದೇವರ ಆರಾಧನೆ ಮಾಡಿ.

ವೃಶ್ಚಿಕ

ಈಶ್ವರಾರಾಧನೆಯನ್ನು ಮಾಡುವುದರಿಂದ ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಮನಸ್ಸಿನ ನೋವು ನಿವಾರಣೆಯಾಗಲಿದೆ. ಪತ್ರಿಕಾ ವರದಿಗಾರರು ಎಚ್ಚರಿಕೆಯಿಂದಿರಿ. ಅತಿಯಾದ ಸಂತಸ ದುಃಖವನ್ನೂ ತಂದೀತು ಎಚ್ಚರಿಕೆ.

ಧನು

ತುಂಬಾ ಶ್ರಮವಹಿಸಿದ ನಿಮ್ಮ ಕಾರ್ಯಗಳಲ್ಲಿ ಶೀಘ್ರಗತಿಯಲ್ಲಿ ಯಶಸ್ಸು ಕಾಣುವಿರಿ. ಮನಸ್ಸಿಗೆ ಸಂಬಂಧಿಸಿದ ವ್ಯವಹಾರಗಳು ನೆರವೇರಲಿವೆ. ಮರು ಪ್ರಯತ್ನದಿಂದ ಕಾರ್ಯ ಸಾಧನೆ.

ಮಕರ

ಧನಾಗಮನಕ್ಕಿಂತ ವ್ಯಯವೇ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ದೇವತಾಕಾರ್ಯಗಳಿಗೆ ಆದ್ಯತೆ ನೀಡಲಿದ್ದೀರಿ. ಯಶಸ್ಸಿಗಾಗಿ ಗೋ ಸೇವೆ ಮಾಡಿ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ

ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ. ಅನೇಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ ಕಂಡುಬರುತ್ತಿದೆ. ಹಿರಿಯರನ್ನು ಗೌರವಿಸಿ.

ಮೀನ

ಕುಲದೇವತಾ ದರ್ಶನ ಭಾಗ್ಯ ಸಿಗಲಿದೆ. ಬೆನ್ನುನೋವು ಜಾಸ್ತಿಯಾಗುವ ಸಾಧ್ಯತೆ. ಅನಿವಾರ್ಯ ಕಾರಣಗಳಿಂದಾಗಿ ನಡೆಯಬೇಕಾದ ಕಾರ್ಯ ಮುಂದೂಡುವಿರಿ. ಸಂತೋಷ ಇಮ್ಮಡಿಗೊಳ್ಳಲಿದೆ.

Design a site like this with WordPress.com
Get started