ಜನವರಿ 10, ಭಾನುವಾರ, 2021: ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ.
ವಾರ: ಭಾನುವಾರ, ತಿಥಿ: ದ್ವಾದಶಿ,
ನಕ್ಷತ್ರ: ಅನುರಾಧ,
ರಾಹುಕಾಲ:4.48 ರಿಂದ 6.14
ಗುಳಿಕ ಕಾಲ:3.22 ರಿಂದ 4.48
ಯಮಗಂಡಕಾಲ:12.30 ರಿಂದ 1.56

ಮೇಷ

ವಿದೇಶ ಪ್ರಯಾಣದ ಅವಕಾಶವು ಕಂಡುಬರುತ್ತಿದೆ. ದೂರದಲ್ಲಿನ ಸಂಬಂಧಿಗಳಿಂದ ಸಂತಸದ ಸುದ್ದಿಯೊಂದನ್ನು ಕೇಳಲಿದ್ದೀರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯಿಂದ ಉತ್ತಮ ಸಹಕಾರ ದೊರಕಲಿದೆ. ಸಂತಸದ ದಿನವಾಗುವುದು.

ವೃಷಭ

ಸ್ನೇಹಿತರ ಬೆಂಬಲದಿಂದಾಗಿ ಎದುರಾದ ಸಂಕಷ್ಟ ಚಿಂತೆ ಪರಿಹಾರ ಕಾಣುವುದು. ಮನೆಯವರ ಸಹಕಾರವೂ ದೊರಕಲಿದೆ. ವಿಶೇಷವಾದ ಕಾರ್ಯವೊಂದಕ್ಕೆ ಮುನ್ನುಡಿ ಹಾಡಲಿದ್ದೀರಿ. ನೆರೆಹೊರೆಯವರೊಡನೆ ವಿವಾದಕ್ಕೆ ಆಸ್ಪದ ಮಾಡಿಕೊಳ್ಳಬೇಡಿ.

ಮಿಥುನ

ನಿಧಾನವಾಗಿ ಚಿಂತಿಸಿ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು ಖಂಡಿತ. ಗಡಿಬಿಡಿಯಿಂದಾಗಿ ತೊಂದರೆ ಎದುರಿಸಬೇಕಾದೀತು. ಯೋಜನೆಯೊಂದನ್ನು ನಿರೂಪಿಸಿ ಕಾರ್ಯರೂಪಕ್ಕೆ ತರಲು ಉತ್ತಮ ದಿನವಾಗಿದೆ. ಹೊಸ ವಾಹನ ಖರೀದಿ ಸೂಕ್ತವಲ್ಲ.

ಕಟಕ

ಜನಪ್ರತಿನಿಧಿಗಳಿಗೆ ಅಚ್ಚರಿಯೊಂದು ಕಾದಿದೆ. ಅನಿರೀಕ್ಷಿತ ಬೆಳವಣಿಗೆಯಿಂದ ಉತ್ತಮ ಅವಕಾಶವೊಂದು ತೆರೆದುಕೊಳ್ಳಲಿದೆ. ಚಿನ್ನ ಬೆಳ್ಳಿ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ ಕಂಡುಬರುವುದು. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು.

ಸಿಂಹ

ಸ್ನೇಹಿರತ ಸಹಕಾರದಿಂದ ಕಾರ್ಯದಲ್ಲಿ ಯಶಸ್ಸು. ಮನಸ್ಸಿನ ಅಭಿಲಾಷೆಗಳು ಪೂರ್ಣಗೊಂಡು ಸಂತಸದ ದಿನವಾಗಲಿದೆ. ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಳ್ಳುವಿರಿ. ಪ್ರವಾಸ ಕೈಗೊಳ್ಳುವ ಸಾಧ್ಯತೆಯೂ ಕಂಡುಬರುತ್ತಿದೆ.

ಕನ್ಯಾ

ಏಕಾಗ್ರತೆಯಿಂದ ಕಾರ್ಯ ಸಾಧನೆಯಾಗಲಿದೆ. ಅನ್ಯ ವಿಚಾರಗಳಿಗೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿಸಿ ಯಶಸ್ಸು ನಿಮ್ಮದಾಗಲಿದೆ. ವಾಹನ ಚಾಲನೆ, ವಸ್ತುಗಳ ಸಾಗಾಣಿಕೆ ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ. ಉತ್ತಮ ಆರೋಗ್ಯ ದೊರಕುವುದು.

ತುಲಾ

ನಿಮ್ಮ ಕೆಲಸಕಾರ್ಯಗಳು ಅತ್ಯಂತ ನಾಜೂಕಾಗಿ ಯೋಗ್ಯರೀತಿಯಲ್ಲಿ ನೆರವೇರಲಿವೆ. ವಂಚಕರ ಹಿತಶತೃಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಉದ್ವೇಗಕ್ಕೆ ಆಸ್ಪದ ವಿಲ್ಲದ ನಡವಳಿಕೆ ಅವಶ್ಯ.

ವೃಶ್ಚಿಕ

ಬಹಳ ದಿನಗಳ ಕನಸೊಂದು ನನಸಾಗುವ ಸಾಧ್ಯತೆ ಕಂಡುಬರುತ್ತಿದೆ. ಹೊಸ ಉದ್ಯಮಕ್ಕೆ ಕೈ ಹಾಕುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳಿತು. ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ. ಹಣಕಾಸಿನ ಅನುಕೂಲ ಕೂಡಿಬರಲಿದೆ.

ಧನು

ಅನೇಕ ತೊಂದರೆಗಳ ನಡುವೆಯೂ ನಿಮ್ಮ ಕಾರ್ಯಕ್ಷಮತೆಯಿಂದ ಯಶಸ್ಸನ್ನು ಗಳಿಸುವಿರಿ. ಉತ್ಸಾಹ ಇಮ್ಮಡಿಗೊಂಡು ಕಾರ್ಯದಲ್ಲಿ ತೊಡಗುವಿರಿ. ನೌಕರರು ಮೇಲಾಧಿಕಾರಿಗಳು ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗುವಿರಿ.

ಮಕರ

ಒತ್ತಡಗಳ ನಡುವೆಯೂ ಕಾರ್ಯಸಿದ್ಧಿಯಾಗುವುದು. ನಿಮ್ಮ ಉನ್ನತ ಚಿಂತನೆಯಿಂದಾಗಿ ಸಾಮಾಜಿಕ ಮನ್ನಣೆಗೆ ಪಾತ್ರವಾಗುವುದರೊಂದಿಗೆ ಪ್ರಭಾವಿಗಳೊಂದಿಗೆ ಸ್ನೇಹ ಸಂಬಂಧಗಳು ಕೂಡಿಬರಲಿದೆ. ಮನೆಯವರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.

ಕುಂಭ

ಹೊಸ ಉದ್ಯಮ/ ಕಾಮಗಾರಿಯನ್ನು ಕೈಗೊಳ್ಳಲು ಉತ್ತಮ ಕಾಲವಾಗಿದ್ದು, ಹಣಕಾಸಿನ ಅನುಕೂಲತೆಗಳು ಒದಗಿಬರುವವು. ಬಂಧು ಬಾಂಧವರಿಂದ ಸಕಾಲಿಕ ಸಲಹೆ ಸಹಕಾರಗಳು ದೊರಕಲಿದೆ. ನೌಕರರಿಗೆ ಅತಿಯಾದ ಕಾರ್ಯ ಬಾಹುಳ್ಯದಿಂದಾಗಿ ಆಯಾಸ ತಲೆದೋರೀತು.

ಮೀನ

ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಚರ್ಚೆ ಚಿಂತನೆ ನಡೆಸುವುದು ಉತ್ತಮ. ದುಡುಕುತನದಿಂದಾಗಿ ಕಾರ್ಯ ವಿಘ್ನ ತಲೆತೋರೀತು. ಸಕಾಲಿಕ ನೆರವು ದೊರೆಯದೇ ಕೆಲವು ಕಾರ್ಯಗಳನ್ನು ಮುಂದೂಡುವ ಸಾಧ್ಯತೆ.

ಜನವರಿ 09, ಶನಿವಾರ; 2020 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ, ಏಕಾದಶಿ, ಶನಿವಾರ,
ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರ
ರಾಹುಕಾಲ: 09:38 ರಿಂದ 11:04
ಗುಳಿಕಕಾಲ: 06:46 ರಿಂದ 8 :12
ಯಮಗಂಡಕಾಲ: 01:56 ರಿಂದ 03:22

ಮೇಷ

ಉದ್ಯೋಗದಲ್ಲಿರುವವರಿಗೆ ಸಣ್ಣಪುಟ್ಟ ಅಡೆತಡೆಗಳು ಉಂಟಾಗುವ ಸಾಧ್ಯತೆ. ಅತಿಯಾದ ಖರ್ಚಿನಿಂದಾಗಿ ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿ ಕಷ್ಟಪಡಬೇಕಾದೀತು. ಗುರು ಆರಾಧನೆ ಶ್ರೇಯಸ್ಸನ್ನು ತರಲಿದೆ.

ವೃಷಭ

ನವ ದಂಪತಿಗಳಿಗೆ ಸಂತಾನ ಭಾಗ್ಯ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ದೊರೆತು ಉತ್ತಮ ಫಲಿತಾಂಶ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಸಣ್ಣ ಪುಟ್ಟ ಅಡೆತಡೆಗಳು ಕಂಡುಬರುತ್ತಿದೆ.

ಮಿಥುನ

ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಾಧ್ಯತೆ. ಪುಣ್ಯಕ್ಷೇತ್ರಗಳ ಪ್ರವಾಸದಿಂದ ನೆಮ್ಮದಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ.

ಕಟಕ

ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಹಾಗೆಯೇ ಮನೆಯ ಖರ್ಚುವೆಚ್ಚದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆ. ಕುಲದೇವತಾರಾಧನೆಯಿಂದ ನೆಮ್ಮದಿ ನಿಮ್ಮದಾಗಲಿದೆ.

ಸಿಂಹ

ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆ. ಮನೆಯವರೊಂದಿಗೆ ಸಂತಸದ ದಿನವನ್ನು ಅನುಭವಿಸಲಿದ್ದೀರಿ. ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಯ ಜೊತೆಗೆ ಮೆಚ್ಚುಗೆಯ ಮಾತುಗಳೂ ಲಭ್ಯವಾಗಲಿದೆ.

ಕನ್ಯಾ

ಬಹುದಿನಗಳಿಂದ ವಿಳಂಬವಾಗುತ್ತಿದ್ದ ಕೆಲಸ–ಕಾರ್ಯಗಳು ಅನುಕೂಲಕರವಾಗಿ ಪೂರ್ಣಗೊಳ್ಳಲಿದೆ. ವಾತಪಿತ್ತಗಳಿಂದಾಗಿ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಬಂಧು–ಬಾಂಧವರ ಆಗಮನ ಸಾಧ್ಯತೆ.

ತುಲಾ

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ತೆರೆಯುವ ಸಾಧ್ಯತೆ. ಉದ್ಯೋಗಿಗಳಿಗೆ ಬಡ್ತಿ ವಗೈರೆಯಿಂದಾಗಿ ಕಾರ್ಯಬಾಹುಳ್ಯ ಹೆಚ್ಚಾಗಲಿದೆ. ಕಲಾವಿದರಿಗೆ ಪ್ರತಿಭೆ ಮೆರೆಯುವ ಅವಕಾಶಗಳು ಹೆಚ್ಚಾಗಿವೆ.

ವೃಶ್ಚಿಕ

ಅನೇಕ ದಿನಗಳಿಂದ ಕಾಯ್ದುಕೊಂಡ ಬಂದ ಗುಪ್ತ ವಿಚಾರದಿಂದಾಗಿ ಸ್ವಲ್ಪಮಟ್ಟಿನ ತೊಂದರೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ. ತಾಳ್ಮೆ-ಸಹನೆಗಳಿಂದಾಗಿ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು.

ಧನು

ಆಸ್ತಿಗೆ ಸಂಬಂಧಿಸಿದಂತಹ ವ್ಯವಹಾರಗಳ ಬಗ್ಗೆ ಜಾಗೃತೆ ವಹಿಸುವುದು ಉತ್ತಮ. ವಸ್ತು ಒಡವೆಗಳನ್ನು ಖರೀದಿಸುವ ಸಾಧ್ಯತೆ. ಸಾಂಸಾರಿಕ ಸುಖ, ಸಂತೋಷಗಳು ನಿಮ್ಮದಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಕರ

ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಆದಾಯ. ಆಕಸ್ಮಿಕ ಧನಲಾಭವೂ ಸಾಧ್ಯತೆ. ಕೈಗೊಂಡ ಕಾರ್ಯಗಳ ಬಗ್ಗೆ ಎಚ್ಚರಿಕೆಯ ನಡೆ ಅವಶ್ಯ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ.

ಕುಂಭ

ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಉಂಟಾದರೂ ಎದೆಗುಂದಬೇಕಿಲ್ಲ. ನಿಧಾನವಾದರೂ ಕಾರ್ಯ ಯಶ ಕಾಣಲಿದೆ. ವಿದ್ಯಾರ್ಥಿಗಳಲ್ಲಿ ಆಲಸ್ಯದ ಮನೋಭಾವ. ಕಾರ್ಮಿಕರು, ನೌಕರರಿಗೆ ಬಡ್ತಿ.

ಮೀನ

ಮಹಿಳೆಯರಲ್ಲಿ ವಿನಾಕಾರಣ ಚಿಂತೆಗಳು ತಲೆದೋರುವ ಸಾಧ್ಯತೆ. ಬೇಡದ ವಿಷಯಗಳ ಬಗ್ಗೆ ತಲೆ ಹಾಕದಿರುವುದು ಒಳಿತು. ಆರ್ಥಿಕ ವಿಚಾರದಲ್ಲಿ ಉತ್ತಮ ಪ್ರಗತಿಯನ್ನು ನಿರೀಕ್ಷಿಸಿ.

ಜನವರಿ 08,ಶುಕ್ರವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ಶುಕ್ರವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ
ರಾಹುಕಾಲ: 11:03 ರಿಂದ 12:29
ಗುಳಿಕಕಾಲ: 8:11 ರಿಂದ 09:37
ಯಮಗಂಡಕಾಲ: 3: 21ರಿಂದ 4.47

ಮೇಷ

ಬಹುದಿನಗಳಿಂದ ಬಾಕಿ ಇದ್ದು ಬರಬೇಕಾದ ಹಣ ನಿಮ್ಮ ಕೈ ಸೇರುವ ಲಕ್ಷಣಗಳು ಕಂಡುಬರುತ್ತಿದೆ. ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಜೊತೆಗೆ ಮಕ್ಕಳ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಮನೆಯಲ್ಲಿ ಸಂತೋಷ ಮೂಡುವುದು.

ವೃಷಭ

ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಹಾನಿ ಸಂಭವಿಸಲಾರದು. ನಿಮ್ಮ ಬಂಧು ಬಾಂಧವರಿಂದ ಒಳ್ಳೆಯ ಅನುಕೂಲ ದೊರೆಯಲಿದೆ. ಉತ್ತಮ ಆರ್ಥಿಕ ಬಲವನ್ನು ರೂಪಿಸಿಕೊಳ್ಳಿ.

ಮಿಥುನ

ಮಾನಸಿಕ ಗೊಂದಲ, ದುಗುಡಗಳಿಂದಾಗಿ ಭಯಪಡುವ ಸಾಧ್ಯತೆ ಕಂಡುಬರುತ್ತಿದ್ದು ಮನಸ್ಸಿಗೆ ಹಿತನೀಡುವ ಸಂಗೀತ, ಧ್ಯಾನಗಳಲ್ಲಿ ಆಸಕ್ತಿ ವಹಿಸಿ. ಸಂಗಾತಿಯ ಮಾತುಗಳಿಗೆ ಮನ್ನಣೆ ನೀಡಿ. ದೇವರ ದರ್ಶನದಿಂದ ನೆಮ್ಮದಿ.

ಕಟಕ

ಸಹನೆ ಕಳೆದುಕೊಂಡು ಮನಸ್ಸಿಗೆ ಕಿರಿಕಿರಿಯನ್ನು ಮಾಡಿಕೊಳ್ಳುವ ಸಾಧ್ಯತೆ. ಬೇರೆಯವರೊಂದಿಗೆ ವ್ಯವಹರಿಸುವಾಗ ವಿವೇಕವನ್ನು ಕಳೆದುಕೊಳ್ಳಬೇಡಿ. ಜಂಟಿ ವ್ಯವಹಾರದಿಂದ ದಿನದಮಟ್ಟಿಗೆ ದೂರವಿರಿ.

ಸಿಂಹ

ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಆರ್ಥಿಕ ಸುಧಾರಣೆಯನ್ನು ಕಾಣುವಿರಿ. ಸ್ವಂತ ಉದ್ಯಮಿಗಳಿಗೆ ಹೆಚ್ಚಿನ ಆದಾಯ ಬರುವ ಲಕ್ಷಣಗಳು ಹೆಚ್ಚಾಗಿವೆ. ವಿವಾಹ ಮುಂತಾದ ಶುಭ ಸಮಾರಂಬದ ಬಗ್ಗೆ ಚರ್ಚಿಸಲಿದ್ದೀರಿ.

ಕನ್ಯಾ

ಸ್ವಲ್ಪಮಟ್ಟಿನ ಉದರ ಬಾಧೆ ಅಥವಾ ಉಸಿರಾಟದ ತೊಂದರೆ ಸಾಧ್ಯತೆ. ವಾಹನ ಖರೀದಿ ಮತ್ತು ಚಾಲನೆಯಲ್ಲಿ ಚಿಕ್ಕಪುಟ್ಟ ತೊಂದರೆ. ಹಣಕಾಸಿನ ಯಾವುದೇ ತೊಂದರೆ ಇಲ್ಲದೆ ಉಳಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು.

ತುಲಾ

ಇಂದು ನಿಮ್ಮ ಅದೃಷ್ಟವು ಚೆನ್ನಾಗಿದ್ದು ಉದ್ದೇಶಿತ ಕಾರ್ಯಗಳು ಸುಸೂತ್ರವಾಗಿ ನಡೆಯುವುದಲ್ಲದೇ ಉತ್ತಮ ಫಲಿತಾಂಶ ನೀಡಲಿವೆ. ಹೆಚ್ಚು ಮಾತನಾಡದೇ ಕೆಲವೇ ಹಿತಮಿತವಾದ ಮಾತುಗಳಿಂದ ಜನರ ಮನ ಗೆಲ್ಲುವಿರಿ.

ವೃಶ್ಚಿಕ

ಇಂದು ನಿಮಗೆ ಅತ್ಯಂತ ಲಾಭದಾಯಕ ದಿನ. ಹಣಕಾಸಿನ ವಿಚಾರದಲ್ಲಿ ಉತ್ತಮ ಸಂಪಾದನೆ ನಿಮ್ಮದಾಗಲಿದೆ. ಮಕ್ಕಳಿಂದ ಉತ್ತಮ ಪ್ರಗತಿಯನ್ನು ನಿರೀಕ್ಷಿಸಬಹುದು. ಕೌಟುಂಬಿಕ ಶಾಂತಿ ನೆಲೆಸಲಿದೆ.

ಧನು

ಇಂದು ಹೆಚ್ಚಿನ ಆದಾಯವನ್ನು ನಿರೀಕ್ಷಿಸುವುದರ ಜೊತೆಗೆ ಉತ್ತಮ ಆರೋಗ್ಯವನ್ನೂ ಹೊಂದುವಿರಿ. ಕೋರ್ಟ್‌ ಕಚೇರಿಗಳಲ್ಲಿನ ಕಟ್ಟಳೆಗಳು ನಿಮಗೆ ಉತ್ತಮ ಫಲಿತಾಂಶ ತಂದುಕೊಡಲಿವೆ.

ಮಕರ

ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲಗಳು ಕೂಡಿಬಂದು ಉತ್ತಮ ಆದಾಯ ತರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಕುಂಭ

ಯಾವುದೇ ವೈಮನಸ್ಸುಗಳು ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿ. ಬೇರೆಯವರ ವ್ಯವಹಾರಗಳಲ್ಲಿ ಆಸಕ್ತಿ ವಹಿಸದೇ ಇರುವುದು ಒಳ್ಳೆಯದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.

ಮೀನ

ಬೇರೆಯವರ ಹಣಕಾಸಿನ ವಿಚಾರದಲ್ಲಿ ಜಾಮೀನು ಹಾಕುವುದು, ಮಧ್ಯಸ್ಥಿಕೆ ವಹಿಸುವುದು ಅಷ್ಟೊಂದು ಶ್ರೇಯಸ್ಸಲ್ಲ. ಕೆಲಸ–ಕಾರ್ಯಗಳಲ್ಲಿ ಅಡಚಣೆಗಳು ಕಂಡುಬಂದು ನಿಧಾನಗತಿಯಲ್ಲಿ ಸಾಗುವವು.

ಬಿಜೆಪಿ ಜಿಲ್ಲಾ ಮಟ್ಟದ “ಜನ ಸೇವಕ ಸಮಾವೇಶ” ದ ಪೂರ್ವಭಾವಿ ಸಭೆ

ಜನವರಿ 12, 2021ರಂದು ರಾಜ್ಯ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ “ಜನ ಸೇವಕ ಸಮಾವೇಶ”ದ ಪೂರ್ವಭಾವಿ ಸಭೆಯು ಉಡುಪಿ ನಗರ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ನಗರ ಬಿಜೆಪಿ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸಮಾವೇಶದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಉದಯಕುಮಾರ್ ಶೆಟ್ಟಿ, ನಗರ ಬಿಜೆಪಿ ಉಪಾಧ್ಯಕ್ಷ ಕೃಷ್ಣಪ್ಪ ಜತ್ತನ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಕೊಳ ಹಾಗೂ ಬಿಜೆಪಿ ಉಡುಪಿ ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ ಮೀನುಗಾರ ಪ್ರಕೋಷ್ಠದ ಸಂಚಾಲಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಸ್ವಾಗತಿಸಿದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ನಿರೂಪಿಸಿದರು. 

ಜನವರಿ 07, ಗುರುವಾರ ;2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ನವಮಿ, ಗುರುವಾರ,
ಚಿತ್ತಾ ನಕ್ಷತ್ರ / ಸ್ವಾತಿ ನಕ್ಷತ್ರ,
ರಾಹುಕಾಲ: 1 :55 ರಿಂದ 03:21
ಗುಳಿಕಕಾಲ: 9:30 ರಿಂದ 11:03
ಯಮಗಂಡಕಾಲ: 06:46 ರಿಂದ 08:11

ಮೇಷ

ಮಾಡುವ ಕೆಲಸವನ್ನು ಸರಿಯಾಗಿ ಯೋಚಿಸಿ ಮಾಡುವುದು ಉತ್ತಮ. ಉದ್ಯೋಗಸ್ಥರಿಗೆ ನಷ್ಟ ಸಂಭವ. ಸಂತಾನ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ವಾಹನ ಚಾಲನೆಯಲ್ಲಿ ಅತ್ಯಂತ ಜಾಗರೂಕರಾಗಿರುವುದು ಉತ್ತಮ.

ವೃಷಭ

ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ವಿರೋಧವನ್ನು ಎದುರಿಸಬೇಕಾದೀತು. ಕೆಟ್ಟ ಮಾತುಗಳಿಗೆ ಕಿವಿಗೊಡದೆ ಸಮಾಧಾನಚಿತ್ತರಾಗಿರಿ. ಸಂಗೀತ, ಧಾರ್ಮಿಕ ಗ್ರಂಥ ಪಠಣದಿಂದ ನೆಮ್ಮದಿ.

ಮಿಥುನ

ವಿದೇಶ ಪ್ರಯಾಣ ಯೋಗ ನಿಮ್ಮದಾಗುವ ಸಾಧ್ಯತೆ. ಅನುಚಿತ ಮಾರ್ಗದಿಂದ ಹಣ ಸಂಪಾದನೆಗೆ ಮನಸ್ಸು ಮಾಡದಿರುವುದು ಒಳಿತು. ಜನಪ್ರತಿನಿಧಿಗಳಿಗೆ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ.

ಕಟಕ

ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಸ್ವಲ್ಪಮಟ್ಟಿನ ಕಿರಿಕಿರಿಯಾದರೂ, ಸಹೋದ್ಯೋಗಿಗಳ ಸಕಾಲಿಕ ನೆರವಿನಿಂದ ನೆಮ್ಮದಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಸಿಂಹ

ಅತಿಯಾದ ಕೋಪದಿಂದಾಗಿ ಆರೋಗ್ಯ ಕೆಡುವ ಸಾಧ್ಯತೆ. ವಿವಾಹ ಸಂಬಂಧಗಳು ಕೂಡಿಬರಲಿದೆ. ಇಂದಿನ ಪ್ರಯಾಣವು ಸುಖ ನೆಮ್ಮದಿಯನ್ನು ನೀಡಲಿದೆ. ಕೌಟುಂಬಿಕ ಗೌರವಕ್ಕೆ ಪಾತ್ರರಾಗುವಿರಿ.

ಕನ್ಯಾ

ಉತ್ತಮ ಕೆಲಸಗಳನ್ನು ಕೈಗೊಳ್ಳುವಿರಿ. ಸಾಕಷ್ಟು ಯೋಚಿಸಿ ಮುಂದಡಿ ಇಡುವುದರಿಂದ ಹೆಚ್ಚಿನ ಪ್ರಗತಿ. ಚಿನ್ನ ವಜ್ರಾಭರಣಗಳ ವ್ಯಾಪಾರಿಗಳಿಗೆ ವಿಶೇಷ ಲಾಭದ ನಿರೀಕ್ಷೆ. ದೇವಾಲಯ ದರ್ಶನಕ್ಕಾಗಿ ಪ್ರಯಾಣ ಮಾಡಲಿದ್ದೀರಿ.

ತುಲಾ

ಸರ್ಕಾರಿ ನೌಕರರಿಗೆ ಸ್ವಲ್ಪಮಟ್ಟಿನ ಕಿರಿಕಿರಿ. ಬೇಡದ ಸಮಸ್ಯೆಯಿಂದಾಗಿ ದಿನವಿಡೀ ಚಿಂತೆ. ಬಟ್ಟೆ, ನೂಲು ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಸಂಗಾತಿಯಿಂದ ಧೈರ್ಯ ತುಂಬಿದ ನೆಮ್ಮದಿಯ ಮಾತುಗಳು.

ವೃಶ್ಚಿಕ

ಕಲಾವಿದರಿಗೆ ಉತ್ತಮವಾದ ದಿನವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸುವ ಸಾಧ್ಯತೆ. ಬಂಧುಗಳ ಸಹಕಾರದಿಂದ ಹೊಸ ಉದ್ಯಮವೊಂದಕ್ಕೆ ಯೋಜನೆ ಸಿದ್ಧಪಡಿಸಲಿದ್ದೀರಿ. ಹೊಸ ಮನೆ ಖರೀದಿಸುವ ಸಾಧ್ಯತೆ.

ಧನು

ಸಂತಾನ ಭಾಗ್ಯವು ನಿಮ್ಮದಾಗಲಿದೆ. ದೂರದ ಸಂಬಂಧಿಗಳ ನೆರವಿನಿಂದಾಗಿ ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧ ಕೂಡಿಬರಲಿದೆ. ಹೊಸ ಯೋಜನೆಗೆ ನಾಂದಿ ಹಾಡಲಿದ್ದೀರಿ. ವಸ್ತ್ರಾಭರಣ ಖರೀದಿ ಸಾಧ್ಯತೆ.

ಮಕರ

ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ದೊರೆತು ಗೌರವಾದರಗಳನ್ನು ಸಂಪಾದಿಸುವ ಅವಕಾಶ ದೊರಕುತ್ತಿದೆ. ನೌಕರವರ್ಗದವರಿಗೆ ಸ್ಥಳ ಬದಲಾವಣೆಯ ಸೂಚನೆ.

ಕುಂಭ

ರೈತಾಪಿವರ್ಗದವರಿಗೆ ಬಿಡುವಿನ ದಿನ. ವಿಶೇಷವಾಗಿ ಮಕ್ಕಳ ನಡವಳಿಕೆಯ ಬಗ್ಗೆ ಗಮನ ವಹಿಸುವುದು ಸೂಕ್ತ. ವ್ಯವಹಾರದಲ್ಲಿ ಬಂಧುಗಳ ಅದರಲ್ಲೂ ಸೋದರ ಸಂಬಂಧಿಗಳಿಂದ ಉತ್ತಮ ಸಹಾಯ ಸಹಕಾರ.

ಮೀನ

ವಿದೇಶ ಪ್ರಯಾಣದ ಯೋಗ. ವ್ಯವಹಾರದಲ್ಲಿ ತೊಡಗಿದವರಿಗೆ ಮೋಸದ ಅನುಭವವಾದೀತು. ಎಚ್ಚರಿಕೆಯ ನಡೆಯಿಂದಾಗಿ ಕಾರ್ಯಸಿದ್ಧಿ. ಮಕ್ಕಳ ಪ್ರಗತಿ ನೆಮ್ಮದಿ ತರಲಿದೆ. ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ.

ಜನವರಿ 06, ಬುಧವಾರ, 2021 ; ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣಪಕ್ಷ.
ವಾರ: ಬುಧವಾರ, ತಿಥಿ: ಅಷ್ಟಮಿ
ನಕ್ಷತ್ರ: ಹಸ್ತ
ರಾಹುಕಾಲ: 12.29 ರಿಂದ 1.54
ಗುಳಿಕ ಕಾಲ: 11.03 ರಿಂದ 12.29
ಯಮಗಂಡಕಾಲ: 8.11 ರಿಂದ 9.37

ಮೇಷ

ಸಾರ್ವಜನಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕವಾದ ಕೆಲಸಗಳಲ್ಲಿ ಅನಾಸಕ್ತಿ ತೋರುವ ಸಾಧ್ಯತೆ. ಮನೆಯವರ ಅವಕೃಪೆಗೆ ಪಾತ್ರರಾಗುವ ಸಂಭವ. ದೂರ ಪ್ರಯಾಣ ಮಾಡಲಿದ್ದೀರಿ.

ವೃಷಭ

ಮಂಗಳಕಾರ್ಯದ ಬಗ್ಗೆ ಬಂಧುಗಳೊಂದಿಗೆ ಚರ್ಚಿಸಲಿದ್ದೀರಿ. ದ್ರವರೂಪದ ವಸ್ತುಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಮಹಿಳೆಯರಿಗೆ ಸ್ವಲ್ಪಮಟ್ಟಿನ ಅನಾರೋಗ್ಯದ ಲಕ್ಷಣಗಳು ಕಾಣುತ್ತಿವೆ.

ಮಿಥುನ

ಸರ್ಕಾರಿ ನೌಕರರಿಗೆ ಬಿಡುವಿಲ್ಲದ ದಿನ. ಹೆಚ್ಚಿನ ವರಮಾನವನ್ನು ನಿರೀಕ್ಷಿಸಬಹುದಾಗಿದೆ. ಹೊಸ ಯೋಜನೆಯೊಂದನ್ನು ಕೈಗೊಳ್ಳುವ ಸಾಧ್ಯತೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಕಾಳಜಿ ಇರಲಿ.

ಕಟಕ

ಹೊಸ ಸಂಬಂಧವೊಂದನ್ನು ಹೊಂದಿಸಿಕೊಳ್ಳುವ ಸಾಧ್ಯತೆ. ಮಕ್ಕಳ ವಿವಾಹದ ಚಿಂತೆ ನಿವಾರಣೆಯಾಗುವ ಸಾಧ್ಯತೆ. ಬಂಧುಗಳ ಸಹಕಾರದಿಂದ ಕಾರ್ಯಸಿದ್ಧಿಯನ್ನು ಕಾಣುವಿರಿ. ಆರೋಗ್ಯದ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ.

ಸಿಂಹ

ಸಂಭ್ರಮದ ದಿನವನ್ನಾಗಿ ಆಚರಿಸುವ ಸಾಧ್ಯತೆ. ವಿಶೇಷವಾಗಿ ಬಂಧು ಬಾಂಧವರೊಂದಿಗೆ ಭೋಜನಕೂಟಗಳಲ್ಲಿ ಭಾಗವಹಿಸುವಿರಿ. ಸಂಜೆಯ ವೇಳೆಗೆ ಸ್ವಲ್ಪಮಟ್ಟಿನ ಆಯಾಸ. ಸಂಗಾತಿಯ ಸಕಾಲಿಕ ನೆರವು.

ಕನ್ಯಾ

ಅವಿವಾಹಿತರಿಗೆ ವಿವಾಹ ಕಾಲ ಕೂಡಿಬರುವ ಸಾಧ್ಯತೆ. ನೆನೆಗುದಿಗೆ ಬಿದ್ದ ಅನೇಕ ಕೆಲಸಗಳು ಕೈಗೂಡುವ ಲಕ್ಷಣಗಳು ಗೋಚರಿಸುತ್ತಿದೆ. ಹೊಸ ವ್ಯವಹಾರದಲ್ಲಿ ತೊಡಗುವುದಕ್ಕೂ ಸಕಾಲವಾಗಿ.

ತುಲಾ

ಆಸ್ತಿ ಖರೀದಿಯ ಬಗ್ಗೆ ಅಥವಾ ಹೊಸ ಉದ್ಯಮವೊಂದನ್ನು ಆರಂಭಿಸುವ ಬಗ್ಗೆ ಉತ್ಸಾಹದಿಂದ ತೊಡಗಿಕೊಳ್ಳುವಿರಿ. ದೇವತಾರಾಧನೆಯನ್ನು ನೆರವೇರಿಸುವ ಸಾಧ್ಯತೆ. ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ.

ವೃಶ್ಚಿಕ

ಇಂದು ನಿಮಗೆ ಶುಭಶಕುನಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಅಪಕೀರ್ತಿ ತರುವ ಘಟನೆಗಳು ನಡೆಯುವ ಸಾಧ್ಯತೆ. ಎಚ್ಚರಿಕೆಯ ನಡೆ ಅವಶ್ಯ.

ಧನು

ರಾಜಕಾರಣಿಗಳಿಗೆ ಇಬ್ಬಂದಿತನ ಕಾಡುತ್ತದೆ. ನಿರ್ಧಾರಕ್ಕೆ ಬರುವಲ್ಲಿ ಆತುರತೆ ಬೇಡ. ತಾಳ್ಮೆಯ ನಡೆ ಉತ್ತಮ ನಡೆಯಾಗಲಿದೆ. ಹೊಸ ವಸ್ತ್ರ, ಒಡವೆಗಳ ಖರೀದಿ ಯೋಗ. ಆರ್ಥಿಕ ಅನುಕೂಲತೆಗಳು ಒದಗಿಬರಲಿವೆ.

ಮಕರ

ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿದವರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಅಪರೂಪದ ಸ್ನೇಹಿತರೊಂದಿಗೆ ಸಂಭ್ರಮಿಸಲಿದ್ದೀರಿ.

ಕುಂಭ

ಬಿಡುವಿಲ್ಲದ ಕಾರ್ಯಬಾಹುಳ್ಯವನ್ನು ನಿರ್ವಹಿಸಬೇಕಾದೀತು. ದೂರದ ಪ್ರಯಾಣ ಯೋಜನೆಯು ಮುಂದಕ್ಕೆ ಹಾಕಲ್ಪಡಬಹುದು. ಅನಿರೀಕ್ಷಿತ ಆದಾಯವನ್ನು ಪಡೆದುಕೊಳ್ಳುವಿರಿ.

ಮೀನ

ಇಂದು ವಾಹನ, ಯಂತ್ರೋಪಕರಣ ಮುಂತಾದ ಚಲನಶೀಲ ಆಸ್ತಿಯನ್ನು ಖರೀದಿಸುವ ಸಾಧ್ಯತೆ. ರೈತಾಪಿ ವರ್ಗದವರಿಗೆ ಸ್ವಲ್ಪಮಟ್ಟಿನ ಆತಂಕದ ದಿನ. ಇಷ್ಟದೇವತಾ ದರ್ಶನಕ್ಕೆ ಮನ ಮಾಡಲಿದ್ದೀರಿ.

ಜನವರಿ 04,ಸೋಮವಾರ,2021; ಇಂದಿನ ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ. ವಾರ : ಸೋಮವಾರ,
ತಿಥಿ : ಪಂಚಮಿ, ನಕ್ಷತ್ರ : ಪುಬ್ಬ,

ರಾಹುಕಾಲ: 8.10 ರಿಂದ 9.36
ಗುಳಿಕಕಾಲ: 1.54 ರಿಂದ 3.20
ಯಮಗಂಡಕಾಲ: 11.02 ರಿಂದ 12.28

ಮೇಷ

ವಿವಾದ, ತಗಾದೆಗಳಿಂದ ಮುಕ್ತರಾಗಿ ನಿರಾಳರಾಗುವಿರಿ. ಹಿರಿಯರಿಗೆ ಆರೋಗ್ಯದಲ್ಲಿ ಕಿರಿಕಿರಿ ಸಂಭವ. ವೈದ್ಯರ ಸಲಹೆಯಂತೆ ನಡೆಯುವುದು ಉತ್ತಮ. ನೆಮ್ಮದಿಗಾಗಿ ಕುಲದೇವತಾ ಆರಾಧನೆ ಮಾಡಿ.

ವೃಷಭ

ಕುಟುಂಬದಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ. ಮಕ್ಕಳು ತರುವ ಸಿಹಿಸುದ್ದಿಯಿಂದಾಗಿ ನೆಮ್ಮದಿ ನೆಲೆಸುವುದು. ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ತೊಂದರೆ, ತೊಡಕುಗಳು ಎದುರಾಗುವ ಸಾಧ್ಯತೆ.

ಮಿಥುನ

ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖ ದಿನವಾಗಿದ್ದು, ಅಧ್ಯಯನದಲ್ಲಿ ಆಸಕ್ತಿ ಉಂಟಾಗುವುದು. ಸಹೋದರರಿಂದ ಸಹಕಾರದ ನಿರೀಕ್ಷೆ. ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸುವ ಸಾಧ್ಯತೆ.

ಕಟಕ

ಸ್ವಜನರಿಂದಲೇ ಮೋಸ ಹೋಗುವ ಸಾಧ್ಯತೆಗಳು ಕಂಡುಬರುತ್ತಿದೆ ಎಚ್ಚರಿಕೆ ಅಗತ್ಯ. ಸಹೋದರ–ಸಹೋದರಿಯರ ಸಹಕಾರ ದೊರೆತು ಬಾಂಧವ್ಯ ವೃದ್ಧಿಯಾಗಲಿದೆ. ಸಂತೃಪ್ತ ದಾಂಪತ್ಯ ಜೀವನ ನಿಮ್ಮದಾಗಲಿದೆ.

ಸಿಂಹ

ಆತ್ಮೀಯರ ಭೇಟಿಯಾಗುವ ಯೋಗವಿದೆ. ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ಸಾಹ, ಲವಲವಿಕೆಗಳಿಂದ ಕಳೆಯುವಿರಿ. ಒತ್ತಡದ ನಿವಾರಣೆಗೆ ಗುರು ಆರಾಧನೆ ಮಾಡುವುದು ಸೂಕ್ತ.

ಕನ್ಯಾ

ನಿಮ್ಮ ಬೇಜವಾಬ್ದಾರಿತನದಿಂದಾಗಿ ನಷ್ಟ ಅನುಭವಿಸುವ ಸಾಧ್ಯತೆಯಿದ್ದು ಆಲಸ್ಯ ಸಲ್ಲ. ಅಹಂಭಾವವನ್ನು ತೊಡೆದು ಎಲ್ಲರೊಂದಿಗೆ ಬೆರೆತು ಸಂತಸದ ದಿನವನ್ನಾಗಿಸಿಕೊಳ್ಳಿ. ಉತ್ತಮ ನಡತೆಯಿಂದಾಗಿ ಗೌರವ.

ತುಲಾ

ನೆರೆಹೊರೆಯವರೊಂದಿಗೆ ಹೊಂದಾಣಿಕೆಯಿಂದಿರುವುದು ಉತ್ತಮ. ತಾಳ್ಮೆಯಿಂದಾಗಿ ವಿನಾಕಾರಣ ಎದುರಾಗುವ ವೈಷಮ್ಯ ನಿವಾರಣೆ. ಪ್ರಯಾಣದಲ್ಲಿ ತೊಂದರೆ. ಉದ್ಯೋಗದಲ್ಲಿನ ತೊಡಕುಗಳು ನಿವಾರಣೆ. ‌

ವೃಶ್ಚಿಕ

ನಿಮ್ಮವರೇ ನಿಮಗೆ ದ್ರೋಹ ಮಾಡುವ ಸಾಧ್ಯತೆ ಇದೆ. ಕುಟುಂಬದವರ ಸಹಕಾರ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಇಷ್ಟದೇವರ ಆರಾಧನೆ ಮಾಡಿ.

ಧನು

ಅನ್ಯರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಸಂಕಷ್ಟಗಳ ಉತ್ತಮ ನಿರ್ವಹಣೆಯಿಂದಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸ ಹೊಸ ವಿಚಾರಗಳನ್ನು ಕಲೆ ಹಾಕುವುದರಿಂದ ಸಂತೃಪ್ತಿ.

ಮಕರ

ಸಮಾಧಾನದ ವರ್ತನೆಯಿಂದಾಗಿ ಒದಗಬಹುದಾದ ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರಗಳಲ್ಲಿನ ತೊಂದರೆಗಳಿಂದ ಮುಕ್ತರಾಗುವಿರಿ. ವಿಶೇಷ ಮನ್ನಣೆಗೆ ಪಾತ್ರರಾಗುವಿರಿ.

ಕುಂಭ

ಅನ್ಯಮಾರ್ಗದ ದುಡಿಮೆಯ ಕಡೆಗೆ ಮುಖ ಮಾಡಬೇಡಿ. ನ್ಯಾಯಮಾರ್ಗದ ದುಡಿಮೆ ಶ್ರೇಯಸ್ಸನ್ನು ತರಲಿದೆ. ನ್ಯಾಯಾಲಯದ ಕಾಗದ, ಪತ್ರಗಳು ಇತ್ಯಾದಿ ಅಮೂಲ್ಯ ಆಸ್ತಿಯ ಬಗ್ಗೆ ಕಾಳಜಿ ಅಗತ್ಯ.

ಮೀನ

ಸ್ವಯಂ ಉದ್ಯೋಗಿಗಳಿಗೆ ಶುಭ ದಿನ. ಉತ್ತಮ ಆದಾಯದಿಂದಾಗಿ ಭದ್ರತೆ, ನೆಮ್ಮದಿಯು ನಿಮ್ಮ ಪಾಲಿಗೆ ದೊರಕಲಿದೆ. ಹೊಸ ಸಂಬಂಧಗಳು ನಿಮ್ಮನ್ನರಸಿ ಬರಬಹುದು. ಹೊಸ ಯೋಜನೆ ಕೈಗೊಳ್ಳಲು ಸೂಕ್ತ ಕಾಲ.

ಜನವರಿ 03, ಭಾನುವಾರ 2021 ; ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ.
ವಾರ: ಭಾನುವಾರ, ತಿಥಿ: ಚತುರ್ಥಿ,
ನಕ್ಷತ್ರ: ಮಖ,
ರಾಹುಕಾಲ: 4.45 ರಿಂದ 6.10
ಗುಳಿಕಕಾಲ: 3.19 ರಿಂದ 4.45
ಯಮಗಂಡಕಾಲ: 12.28 ರಿಂದ 1.53

ಮೇಷ

ಬದುಕಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅತಿ ಮಹತ್ವದ ತೀರ್ಮಾನ ಕೈಗೊಳ್ಳುವಿರಿ. ಅಪೇಕ್ಷಿತರ ಭೇಟಿಯ ಸಾಧ್ಯತೆ. ಒಪ್ಪಂದ ವಿಚಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.

ವೃಷಭ

ಹೊಸ ಹೊಸ ಆದಾಯದ ದಾರಿಯಿಂದಾಗಿ ಮಾನಸಿಕ ನೆಮ್ಮದಿ. ರಾಜಕೀಯದಲ್ಲಿ ಹೊಸ ಮಾರ್ಗ ಗೋಚರವಾಗಲಿದೆ. ಹೊಸ ಹೊಸ ಯೋಜನೆಗಳ ರೂಪುರೇಷೆಗಳನ್ನು ರಚಿಸಲು ಉತ್ತಮ ಕಾಲ.

ಮಿಥುನ

ಗುರಿಸಾಧನೆಗಾಗಿ ತಾಳ್ಮೆ ವಹಿಸುವುದು ಉತ್ತಮ. ವೃತ್ತಿ ಜೀವನದಲ್ಲಿನ ತೊಡಕಿನ ನಿವಾರಣೆಗಾಗಿ ಸಹಾಯ ಪಡೆಯುವ ಸಾಧ್ಯತೆ. ತೊಡಕಿನ ನಿವಾರಣೆಗಾಗಿ ಯೋಗ್ಯ ನಿರ್ಣಯ ಕೈಗೊಳ್ಳುವ ಸಾಧ್ಯತೆ.

ಕಟಕ

ಹುಚ್ಚು ಓಟದಿಂದ ಕೂಡಿದ ವ್ಯಾಪಾರ ವ್ಯವಹಾರಗಳು ಒಂದು ಹಂತಕ್ಕೆ ಬರಲಿವೆ. ಜವಾಬ್ದಾರಿಯ ಸ್ಥಾನವೊಂದನ್ನು ಅಲಂಕರಿಸಬೇಕಾದೀತು. ಆತ್ಮವಿಶ್ವಾಸದಿಂದಾಗಿ ಜೀವನದ ದಿಕ್ಕು ಬದಲಾವಣೆ.

ಸಿಂಹ

ಕೈಗೊಂಡ ದೊಡ್ಡ ದೊಡ್ಡ ಯೋಜನೆಗಳಿಗೆ ವಿಘ್ನಗಳುಂಟಾಗದಂತೆ ಎಚ್ಚರಿಕೆ ಅಗತ್ಯ. ಗಂಭೀರ ನಡವಳಿಕೆಯಿಂದ ಉನ್ನತ ವ್ಯಕ್ತಿತ್ವದ ನಿರ್ಮಾಣ. ಅಧಿಕಾರ ಗೌರವ ಲಾಭವು ಉಂಟಾಗಲಿದೆ.

ಕನ್ಯಾ

ಇಚ್ಛಾಶಕ್ತಿಯ ಬಲದಿಂದಾಗಿ ಕೈಗೊಂಡ ಯೋಜನೆಗಳು ಉತ್ತಮ ಹಂತವನ್ನು ತಲುಪಿ ಹೆಚ್ಚಿನ ಸಮಾಧಾನ ದೊರೆಯಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ವೃದ್ಧಿ. ಸೂರ್ಯನ ಆರಾಧನೆಯಿಂದ ಹೆಚ್ಚಿನ ಯಶಸ್ಸು.

ತುಲಾ

ಚುರುಕಿನಿಂದ ಕಾರ್ಯಪ್ರವೃತ್ತರಾಗಿ ಯಶಸ್ಸನ್ನು ಗಳಿಸುವಿರಿ. ಉದಾಸೀನತೆ ಯಾವುದೇ ಕಾರಣಕ್ಕೂ ಸಲ್ಲದು. ಸಕಾಲದಲ್ಲಿ ಆದಾಯದಲ್ಲಿ ವೃದ್ಧಿಯಾಗಿ ತೃಪ್ತಿಯ ಹಿತಾನುಭವ ಅನುಭವಿಸುವಿರಿ.

ವೃಶ್ಚಿಕ

ಜಾಣ್ಮೆಯಿಂದ ಕಷ್ಟಸಾಧ್ಯವಾದುದರ ಸಾಧನೆ. ಅಧಿಕಾರ ಪ್ರಾಪ್ತಿಯ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ ತೃಪ್ತಿ ಹೊಂದುವಿರಿ. ಆಸೆ ಆಕಾಂಕ್ಷೆಗಳು ನೆರವೇರಿದ ಸಂಭ್ರಮ. ಮನೆಯಲ್ಲಿ ಸಂತೋಷದ ವಾತಾವರಣ.

ಧನು

ಅತ್ಯಂತ ಶುಭದಿನವಾಗಿದ್ದು, ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಹಿಂಜರಿಕೆಯಿಲ್ಲದೆ ಮುನ್ನಡೆ ಅನುಭವಿಸುವಿರಿ. ಮೃದುವಾದ ಮಾತುಗಳ ಮೂಲಕ ಮುಕ್ತ ಚರ್ಚೆಗಳಲ್ಲಿ ಭಾಗವಹಿಸುವಿರಿ.

ಮಕರ

ವಿರೋಧಿಗಳ ಸಂಚು ಫಲಿಸದು. ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ಇಮ್ಮಡಿ ಉತ್ಸಾಹದಿಂದ ಮುನ್ನುಗ್ಗಿ. ನಿರಾಶರಾಗದೆ ಆಶಾವಾದ ಬೆಳೆಸಿಕೊಳ್ಳುವುದು ಉತ್ತಮ. ಹಿರಿಯರ ಹಿತವಚನಗಳನ್ನು ಗೌರವಿಸಿ.

ಕುಂಭ

ವೃತ್ತಿಯಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬರಬಹುದು. ಆಸೆಪಟ್ಟು ನಿರ್ವಹಿಸಿದ ಕೆಲಸಕಾರ್ಯಗಳು ಸುಗಮವಾಗಿ ನೆರವೇರುವುದು. ಅನಗತ್ಯ ಭಯದಿಂದ ಮುಕ್ತರಾಗಿ ನಿರಾಳತೆ ಕಂಡುಬರುವುದು.

ಮೀನ

ಸಹೋದ್ಯೋಗಿಗಳ ಇಚ್ಛೆ ಪೂರೈಕೆಗಾಗಿ ಶಕ್ತಿಮೀರಿ ಶ್ರಮ ವಹಿಸುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡ ವಿಲ್ಲದ ನಿರಾಳತೆ. ದೂರಾಲೋಚನೆಯಿಂದಾಗಿ ಸಂಭವಿಸಬಹುದಾದ ಅವಘಡಗಳಿಂದ ಪಾರಾಗುವಿರಿ.

ಜನವರಿ 02, ಶನಿವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಕೃಷ್ಣಪಕ್ಷ,
ತೃತೀಯ / ಚತುರ್ಥಿ,
ಶನಿವಾರ “ಆಶ್ಲೇಷ ನಕ್ಷತ್ರ”

ರಾಹುಕಾಲ: 9:35 ರಿಂದ 11:01
ಗುಳಿಕಕಾಲ: 06:44 ರಿಂದ 08:09
ಯಮಗಂಡಕಾಲ: 01:52 ರಿಂದ 3:18

ಮೇಷ

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಸಹೋದ್ಯೋಗಿಗಳಿಂದ ಕೊಂಕು ಮಾತನ್ನು ಎದುರಿಸಬೇಕಾದೀತು.

ವೃಷಭ

ಧಾರ್ಮಿಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯ ಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ ಪ್ರಾರಂಭವಾಗುವುದು. ಅಧ್ಯಯನಶೀಲರಿಗೆ ಯಶಸ್ಸಿನ ಗರಿ.

ಮಿಥುನ

ಕೆಲಸದ ಒತ್ತಡಕ್ಕೆ ಹೆದರಿ ವಿಮುಖರಾಗದಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ನೌಕರಿಗೆ ರಾಜೀನಾಮೆಯಂತಹ ಪರಿಸ್ಥಿತಿ ತಲೆದೋರಬಹುದು. ದುಡುಕದೇ ಧೈರ್ಯವಾಗಿ ಮುನ್ನುಗ್ಗಿ. ಯಶಸ್ಸು ನಿಮ್ಮದಾಗಲಿದೆ.

ಕಟಕ

ನೀವು ಯೋಜಿಸಿದ ಮಹತ್ತರ ಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಉತ್ತಮ ಸಲಹೆ, ಸಹಕಾರಗಳು ದೊರೆತು ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಗಣಪತಿಯ ಧ್ಯಾನ ಮಾಡಿ.

ಸಿಂಹ

ಪ್ರೀತಿ, ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ದೂರದ ಪ್ರಯಾಣದಿಂದಾಗಿ ಬೇಸರ ಉಂಟಾಗುವ ಸಾಧ್ಯತೆ.

ಕನ್ಯಾ

ಸಂಕೋಚ ಸ್ವಭಾವದಿಂದ ಹೊರಬಂದು ಕಾರ್ಯಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ತಗಾದೆಯ ಸಾಧ್ಯತೆ.

ತುಲಾ

ಕೌಟುಂಬಿಕ ಕಿರಿಕಿರಿಯ ಸಾಧ್ಯತೆ ಕಂಡುಬರುವುದು. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಗುರುವಿನ ಆರಾಧನೆಯಿಂದ ಉತ್ತಮ ಫಲ ದೊರೆಯುವುದು.

ವೃಶ್ಚಿಕ

ಒಂಟಿತನದಿಂದ ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ. ಜೀವನಕ್ಕೊಂದು ಹೊಸ ತಿರುವು ಬರುವ ನಿರೀಕ್ಷೆ.

ಧನು

ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಮನೆಯವರ ಸಲಹೆಗೆ ಮನ್ನಣೆ ನೀಡಿ. ಕುಲದೇವತಾ ಪ್ರಾರ್ಥನೆ ಒಳಿತನ್ನುಂಟು ಮಾಡುವುದು.

ಮಕರ

ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಮುದಗೊಳಿಸುವಿರಿ. ನಿಮ್ಮ ನಿರ್ಧಾರಗಳು ಸಮರ್ಪಕವಾಗಿದ್ದು ಬಹುಜನರ ಪ್ರಶಂಸೆಗೆ ಪಾತ್ರವಾಗುವುದು. ಯಶಸ್ಸಿನ ಅಮಲು ಉಚಿತವಲ್ಲ.

ಕುಂಭ

ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲೈಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತಾನುಭವ. ಸ್ನೇಹಿತರ ಬಂಧುವರ್ಗದವರ ಅನಿರೀಕ್ಷಿತ ಭೇಟಿಯ ಸಾಧ್ಯತೆ. ಶುಭಾಷಯ ವಿನಿಮಯ.

ಮೀನ

ಮಹತ್ವದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬೆನ್ನು ನೋವು, ಮಂಡಿನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆ.

ಜನವರಿ 01,ಶುಕ್ರವಾರ ;2021 : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಕೃಷ್ಣಪಕ್ಷ, ದ್ವಿತೀಯ (ಬೆಳಗ್ಗೆ 09:35)
ತೃತೀಯ”, ಶುಕ್ರವಾರ, “ಪುಷ್ಯ ನಕ್ಷತ್ರ”

ರಾಹುಕಾಲ: 11: 1ರಿಂದ 12: 27
ಗುಳಿಕಕಾಲ: 08 :09 ರಿಂದ 09:35
ಯಮಗಂಡಕಾಲ: 3:18 ರಿಂದ 04:44

ಮೇಷ

ಮನೆ ಮಂದಿ ಎಲ್ಲರೂ ಸಂಭ್ರಮ, ಸಡಗರದಲ್ಲಿದ್ದರೂ ನಿಮಗೆ ದಿನವಿಡೀ ಆಲಸ್ಯದ ದಿನವಾಗಿ ಪರಿಣಮಿಸಲಿದೆ. ಕೆಲಸ–ಕಾರ್ಯಗಳಲ್ಲಿ ನಿರಾಸಕ್ತಿ ಕಂಡುಬರುವುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ.

ವೃಷಭ

ವ್ಯವಹಾರಗಳಲ್ಲಿ ಉತ್ತಮಫಲವನ್ನು ನಿರೀಕ್ಷಿಸಬಹುದು. ಹೋಟೆಲ್ ಮುಂತಾದ ಉದ್ಯಮಿಗಳಿಗೆ ಉತ್ತಮ ಆದಾಯ ಕಂಡುಬರುವುದು. ನವೋಲ್ಲಾಸದ ಅನುಭವ ನಿಮ್ಮದಾಗಲಿದೆ.

ಮಿಥುನ

ವ್ಯಾಪಾರಸ್ಥರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬಂದರೂ ಆತಂಕಕ್ಕೆ ಕಾರಣವಿಲ್ಲ. ಹೊಸ ಉದ್ಯಮದ ಸ್ಥಾಪನೆಯ ಬಗ್ಗೆಯೂ ಚಿಂತನೆ ನಡೆಸಲಿದ್ದೀರಿ. ಹಣಕಾಸಿನ ಅನುಕೂಲತೆಗಳು ಕಂಡುಬರುವವು.

ಕಟಕ

ರಕ್ಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಗೆ ಅತ್ಯಂತ ಆತಂಕದ ದಿನವಾಗಲಿದೆ. ಸರ್ಕಾರಿ ನೌಕರರಿಗೆ ಪ್ರಭುತ್ವದಿಂದ ಸಿಹಿ ಸುದ್ದಿಯ ನಿರೀಕ್ಷೆ. ಮಕ್ಕಳ ನಡವಳಿಕೆ ಬಗ್ಗೆ ವಿಶೇಷ ಗಮನ ಅಗತ್ಯ.

ಸಿಂಹಬಹುದಿನಗಳ ನಿಮ್ಮ ಬಯಕೆಗಳು ಈಡೇರುವ ಸಾಧ್ಯತೆ. ಬಂಧುಗಳ ಆಗಮನದಿಂದಾಗಿ ಸಂಭ್ರಮದ ದಿನವಾಗಲಿದೆ. ಗೃಹಿಣಿಯರಿಗೆ ಅತ್ಯಂತ ಹೆಚ್ಚಿನ ಕಾರ್ಯ ಬಾಹುಳ್ಯ ಉಂಟಾಗಲಿದೆ.

ಕನ್ಯಾ

ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಉದರ ಸಂಬಂಧಿ ತೊಂದರೆಗಳು ಕಂಡುಬರಲಿದೆ. ಮಕ್ಕಳ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ ಕಂಡುಬರುತ್ತಿದೆ.

ತುಲಾ

ಅತಿಯಾದ ಆತ್ಮವಿಶ್ವಾಸದಿಂದಾಗಿ ಎಡವಿ ಬೀಳುವ ಸಾಧ್ಯತೆ. ಹಿತೈಷಿಗಳ ಸಲಹೆ ಅನುಕೂಲಕರವಾಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ

ಕೃಷಿ ಕೆಲಸ–ಕಾರ್ಯಗಳು ನಿಧಾನವಾಗಲಿವೆ. ಆತುರದ ನಿರ್ಧಾರದಿಂದಾಗಿ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ.

ಧನು

ಹೊಸ ಯೋಜನೆಯೊಂದರ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಲಿದ್ದೀರಿ. ಸಂತೋಷಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುತ್ತಿದೆ. ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯವಾಗಿದೆ.

ಮಕರ

ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಿದೇಶೀ ವ್ಯವಹಾರ ನಡೆಸುವವರಿಗೆ ಉತ್ತಮ ಆದಾಯ ತರಲಿದೆ. ಕೃಷಿ ಕಾರ್ಯಗಳಲ್ಲಿ ಹಿನ್ನಡೆ ಕಂಡುಬರುತ್ತಿದೆ. ಹಣ್ಣು, ತರಕಾರಿ ವ್ಯಾಪಾರಸ್ಥರಿಗೆ ಉತ್ತಮ ಲಾಭ.

ಕುಂಭ

ವ್ಯವಹಾರದ ಬಗ್ಗೆ ವಿಶೇಷ ಗಮನ ಅಗತ್ಯ. ದೂರದ ಪ್ರಯಾಣ ದಿನದ ಮಟ್ಟಿಗೆ ಮಾಡದಿರುವುದೇ ಸೂಕ್ತ. ಕುಟುಂಬದೊಂದಿಗೆ ದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ಮೀನ

ಲೋಹದ ವ್ಯಾಪಾರಿಗಳಿಗೆ ನಷ್ಟದ ಸಾಧ್ಯತೆ. ಹಣಕಾಸು ವ್ಯವಹಾರದಲ್ಲಿ ಹಿನ್ನಡೆ ಕಂಡುಬರುತ್ತಿದೆ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಕಂಡುಬರಲಿದೆ. ದಿನಾಂತ್ಯದಲ್ಲಿ ಶುಭ ಸಮಾಚಾರ ಕೇಳಲಿದ್ದೀರಿ.

ಮೇಷ ರಾಶಿ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಇಂದ ಭಾದೆ ಮೋಸ, ಉದ್ಯೋಗದಲ್ಲಿ ಪ್ರಗತಿ ಆದರೆ ಒತ್ತಡಗಳು ಮೇಲಧಿಕಾರಿಗಳಿಂದ ಸಮಸ್ಯೆ, ಸಂಸಾರದಲ್ಲಿ ನಿರಾಸಕ್ತಿ, ಸಂಗಾತಿ ಆರೋಗ್ಯ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಉತ್ತಮ ಹೆಸರು ಗರ್ಭದೋಷ ಗುಪ್ತ ವ್ಯಾಧಿಗಳು
ಪರಿಹಾರ: ಸುಬ್ರಹ್ಮಣ್ಯ ಆರಾಧನೆ ಮಾಡಿ

ವೃಷಭ ರಾಶಿ: ಆರ್ಥಿಕ ಚೇತರಿಕೆ ಒತ್ತಡಗಳಿಂದ ನಿದ್ರಾಭಂಗ, ಸ್ವಯಂಕೃತ ಅಪರಾಧ, ಉಡಾಫೆ ಸೋಮಾರಿತನ ನಿರಾಸಕ್ತಿ, ಮೊಂಡತನ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಾಟ ಮಂತ್ರ ತಂತ್ರ ಭಾದೆಗಳು ತಂದೆ-ತಾಯಿಯೊಂದಿಗೆ ಮನಸ್ಥಾಪ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಸುಸ್ತು ಬೆನ್ನು ಸೆಳೆತ ನರದೌರ್ಬಲ್ಯ
ಪರಿಹಾರ: ಪ್ರತಿ ಶುಕ್ರವಾರ ತುಪ್ಪದ ದೀಪವನ್ನು ಹಚ್ಚಿ

ಮಿಥುನ ರಾಶಿ: ಯಂತ್ರೋಪಕರಣ ಭೂಮಿ ವಾಹನಗಳಿಂದ ಅನುಕೂಲ, ವರ್ಷಾಂತ್ಯದಲ್ಲಿ ಆರ್ಥಿಕ ಚೇತರಿಕೆ, ಶುಭ ಕಾರ್ಯದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮ ಭಾವನೆಗಳಿಗೆ ಪೆಟ್ಟು, ಅಹಂಭಾವ ಅಧಿಕ ಕೋಪ, ದುಃಸ್ವಪ್ನಗಳು, ಶತ್ರು ಕಾಟ, ಸಾಲಬಾಧೆಯಿಂದ ನಿದ್ರಾಭಂಗ, ಉದ್ಯೋಗ ನಷ,್ಟ ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ವಂತ ಉದ್ಯಮ ವ್ಯವಹಾರದಲ್ಲಿ ಅವಕಾಶ ತಪ್ಪುವುದು, ಅಧಿಕ ಉಷ್ಣ, ಹೊಟ್ಟೆ ನೋವು ಕಿಡ್ನಿ ಸಮಸ್ಯೆ, ಪಿತ್ತ ದೋಷ, ಮೊಣಕಾಲಿಗೆ ಪೆಟ್ಟು
ಪರಿಹಾರ: ಮೃತ್ಯುಂಜಯ ಜಪ ಮಾಡಿ

ಕಟಕ ರಾಶಿ: ಉತ್ತಮ ಹೆಸರು ಗಳಿಸುವ ಸಂದರ್ಭಗಳು, ಶತ್ರು ದಮನ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಲಾಭ ಸಾಲಬಾಧೆಯಿಂದ ಮುಕ್ತಿ, ದಾಂಪತ್ಯದಲ್ಲಿ ಕಲಹ, ಅಸಮಾಧಾನ, ಮನೆ ಖರೀದಿಯಿಂದ ತೊಂದರೆಗಳು, ಹೆಣ್ಣುಮಕ್ಕಳಿಂದ ಅಪವಾದ, ತಾಯಿಯ ಆರೋಗ್ಯ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ನಿಧಾನದ ಪ್ರಗತಿ
ಪರಿಹಾರ: ಪ್ರತಿ ಶನಿವಾರ ಹನುಮಂತನ ದರ್ಶನ

ಸಿಂಹ ರಾಶಿ: ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಮಕ್ಕಳೊಂದಿಗೆ ಮನಸ್ತಾಪ, ಬಂಧುಗಳು ದೂರ ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಕೈಗಾರಿಕೆಯವರಿಗೆ ಅನುಕೂಲ, ಭಾವನಾತ್ಮಕ ತೀರ್ಮಾನಗಳು, ಮಿತ್ರರು ದೂರ, ಆರ್ಥಿಕ ನಷ್ಟಗಳು, ಸಾಲ ಮಾಡುವ ಪರಿಸ್ಥಿತಿ
ಪರಿಹಾರ: ಇಷ್ಟ ಗುರುವನ್ನ ಆರಾಧನೆ ಮಾಡಿ

ಕನ್ಯಾ ರಾಶಿ: ಸ್ಥಿರಾಸ್ತಿಯಲ್ಲಿ ಅನುಕೂಲ, ಖರ್ಚುಗಳು ಜಾಸ್ತಿ, ಮಕ್ಕಳಿಂದ ನಷ್ಟ, ಮಕ್ಕಳೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ವಂತ ವ್ಯವಹಾರದಲ್ಲಿ ಅನುಕೂಲ, ಆರ್ಥಿಕವಾಗಿ ಬೇಜವಾಬ್ದಾರಿತನ, ವಿಚ್ಛೇದನ ಕೇಸುಗಳಲ್ಲಿ ಜಯ, ಮಿತ್ರರಿಂದ ಅನುಕೂಲ, ಬಡ್ತಿಯಲ್ಲಿ ಪ್ರಗತಿ, ಅಪಘಾತಗಳು, ಭಾವನಾತ್ಮಕ ಸೋಲು, ಕೃಷಿಕರಿಗೆ ಅನುಕೂಲ, ಕುಟುಂಬದಲ್ಲಿ ಊಹೆಗೆ ನಿಲುಕದ ದುರ್ಘಟನೆಗಳು
ಪರಿಹಾರ: ಗಣಪತಿಯ ಆರಾಧನೆ ಮಾಡಿ

ತುಲಾ ರಾಶಿ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆಗಳು, ಸೋಮಾರಿತನ ನಿರಾಸಕ್ತಿಗಳು, ಕೆಲಸಕಾರ್ಯಗಳ ಮುಂದೂಡಿಕೆ, ಪಿತ್ರಾರ್ಜಿತ ಆಸ್ತಿ ಜಯ, ವಿಪರೀತ ಕೋಪ ತಾಪಗಳು, ಯಂತ್ರೋಪಕರಣಗಳಿಂದ ಬೆಂಕಿಯಿಂದ ವಾಹನಗಳಿಂದ ತೊಂದರೆ, ಉದ್ಯೋಗದಲ್ಲಿ ಶತ್ರು ಕಾಟಗಳು, ಬಂಧುಗಳಿಂದ ಭಾದೆ, ಸಂಗಾತಿಯಿಂದ ಧನಸಹಾಯ, ಸಾಲ ದೊರೆಯುವುದು, ಆಕಸ್ಮಿಕ ಭೂಮಿ ಯೋಗ
ಪರಿಹಾರ: ದುರ್ಗಾಸಪ್ತಶತಿ ಯನ್ನು ಪಾರಾಯಣ ಮಾಡಿ

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಪ್ರಗತಿ, ಅದೃಷ್ಟದ ವರ್ಷ, ಆರ್ಥಿಕ ಚೇತರಿಕೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸಾಲ ದೊರೆಯುವುದು, ಆರೋಗ್ಯದಲ್ಲಿ ತೊಂದರೆಗಳು, ಶತ್ರು ದಮನ ಸಂಗಾತಿಯಿಂದ ಕುಟುಂಬದಲ್ಲಿ ತೊಂದರೆಗಳು, ದುಸ್ವಪ್ನಗಳು, ಮೋಜು ಮಸ್ತಿಯಿಂದ ಜೈಲುವಾಸ, ಮೇಲಾಧಿಕಾರಿಗಳಿಂದ ಪ್ರಶಂಸೆ
ಪರಿಹಾರ: ಶಿವನಿಗೆ 11 ಸೋಮವಾರ ರುದ್ರಾಭಿಷೇಕ ಮಾಡಿಸಿ

ಧನಸ್ಸು ರಾಶಿ: ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳು, ಸಾಲಗಾರರಿಂದ ನಿದ್ರಾಭಂಗ, ಗುಪ್ತ ಶತ್ರು ಕಾಟ, ಆರ್ಥಿಕವಾಗಿ ನಿಧಾನದ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಯುಷ್ಯದ ಭೀತಿ ನಿವಾರಣೆ, ಉದ್ಯೋಗದಲ್ಲಿ ತೊಂದರೆಗಳು, ಶುಭಕಾರ್ಯದಲ್ಲಿ ಮುಂದೂಡಿಕೆ, ಲಾಭದ ಪ್ರಮಾಣ ಕುಂಠಿತ, ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು
ಪರಿಹಾರ: ಕುಲದೇವತಾ ದರ್ಶನಮಾಡಿ ಅನ್ನದಾನ ಮಾಡಿ

ಮಕರ ರಾಶಿ: ಭೂಮಿ ವಾಹನ ಸ್ಥಿರಾಸ್ತಿ ಯಂತ್ರೋಪಕರಣಗಳಿಂದ ಅನುಕೂಲ, ಶುಭಕಾರ್ಯ, ಪ್ರಯತ್ನ ಪಾಲುದಾರಿಕೆಯಲ್ಲಿ ಅನುಕೂಲ, ಆಯುಷ್ಯದ, ಬೀದಿ ಅನಾರೋಗ್ಯ ಸಮಸ್ಯೆಗಳಿಂದ ನಿದ್ರಾಭಂಗ, ಪ್ರೀತಿ-ಪ್ರೇಮದಲ್ಲಿ ಬಿರುಕು, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ತೊಂದರೆಗಳು, ಕೋರ್ಟ್ ಕೇಸ್ ಅಲೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರ್ಥಿಕ ಎಡವಟ್ಟುಗಳು
ಪರಿಹಾರ: ಶ್ರೀರಾಮ ನಾಮಜಪ ಮಾಡಿ

ಕುಂಭ ರಾಶಿ: ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದು, ಸಂಗಾತಿಯಿಂದ ಸಹಕಾರ ಮತ್ತು ಅನುಕೂಲ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ದಾಯಾದಿ ಕಲಹಗಳು, ಆರ್ಥಿಕ ಹಿನ್ನಡೆ, ಪ್ರಗತಿ ಕುಂಠಿತ, ಆಹಾರ ವ್ಯತ್ಯಾಸದ ಅನಾರೋಗ್ಯ, ಮಿತ್ರರು ದೂರ, ತಂದೆಯಿಂದ ಬಾದೆ, ಸಹೋದರಿಯೊಂದಿಗೆ ಮನಸ್ತಾಪ, ಯಂತ್ರೋಪಕರಣಗಳಿಂದ ಅನುಕೂಲ, ಭೂಮಿ ವ್ಯವಹಾರಗಳು, ಅಭಿವೃದ್ಧಿ ಸಾಧಿಸುವ
ಪರಿಹಾರ: ಪ್ರತಿ ಸೋಮವಾರ ಓಂ ನಮಃ ಶಿವಾಯ ಮಂತ್ರ ಜಪಿಸಿ

ಮೀನ ರಾಶಿ: ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಹೆಸರು ಆರ್ಥಿಕವಾಗಿ ಚೇತರಿಕೆ, ಬಂಧುಗಳಿಂದ ಭೂಮಿ ಒಲಿಯುವುದು ವಾಹನ ಸ್ಥಿರಾಸ್ತಿ ಯೋಗ ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ ಫಲಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಾರ್ಮೋನ್ ವ್ಯತ್ಯಾಸ ಹೃದಯ ಸಂಬಂಧಿ ಕಾಯಿಲೆಗಳು, ಶತ್ರುಗಳಿಂದ ಹಿಂಸೆ ಮೇಲಧಿಕಾರಿಗಳಿಂದ ದಂಡನೆ, ದೃಷ್ಟಿ ದೋಷಗಳು ಅಹಂಭಾವ ಮತ್ತು ಸ್ವಯಂಕೃತ ಅಪರಾಧ
ಪರಿಹಾರ: ಶಿವನಿಗೆ ಬಿಲ್ವಾ ಅಷ್ಟೋತ್ತರ ಮಾಡಿಸಿ

Design a site like this with WordPress.com
Get started