ಜನವರಿ 24, ಭಾನುವಾರ, 2021: ಇಂದಿನ ರಾಶಿಭವಿಷ್ಯ

  ಪಂಚಾಂಗ :ಭಾನುವಾರ, 24.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.02.28 / ಚಂದ್ರ ಅಸ್ತ ಮ.03.37
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ಏಕಾದಶಿ (ರಾ.09.50) ನಕ್ಷತ್ರ: ರೋಹಿಣಿ(ರಾ.12.01)
ಯೋಗ: ಬ್ರಹ್ಮ (ರಾ.10.28) ಕರಣ: ವಣಿಜ್-ಭದ್ರೆ(ಬೆ.10.01-ರಾ.10.58)
ಮಳೆ ನಕ್ಷತ್ರ: ಶ್ರವಣ  ಮಾಸ: ಮಕರ ತೇದಿ: 11

ಮೇಷ

ಬಂಧುಮಿತ್ರರಿಗೆ ಉತ್ತಮ ಸಹಾಯ ಸಹಕಾರಗಳು ದೊರಯಲಿದೆ. ಉದ್ವೇಗಗೊಳ್ಳದೇ ಶಾಂತರೀತಿಯಿAದ ವ್ಯವಹರಿಸಿದಲ್ಲಿ ಕೆಲಸ ಕಾರ್ಯಗಳು ಸುಗಮಗೊಳ್ಳುವವು. ಮನೆ ಜನರ ಸಹಕಾರದಿಂದಾಗಿ ನೆಮ್ಮದಿಯ ವಾತಾವರಣ ಮೂಡಲಿದೆ.

ವೃಷಭ

ಯಾವುದೇ ನಿರ್ದಾರ ತೆಗೆದುಕೊಳ್ಳುವ ಮೊದಲು ಆತ್ಮೀಯರಲ್ಲಿ ಚರ್ಚಿಸಿ, ಮತ್ತೊಮ್ಮೆ ಯೋಚಿಸುವುದು ಉತ್ತಮ. ಸಾರಿಗೆ ಉದ್ಯೋಗಿಗಳಿಗೆ ಪ್ರಗತಿಯೊಂದಿಗೆ ಲಾಭದಲ್ಲಿ ಹೆಚ್ಚಳ ಕಂಡುಬರುವುದು. ಹೊಸ ಮನೆಗೆ ಪ್ರವೇಶ ಮಾಡುವ ಸಾಧ್ಯತೆ.

ಮಿಥುನ

ರಿಯಲ್ ಎಷ್ಟೇಟ್ ನಂತಹ ಭೂ ಸಂಬAಧಿ ವ್ಯವಹಾರಗಳಲ್ಲಿ ತೊಡಗಿರುವವರ ವ್ಯವಹಾರದಲ್ಲಿ ಚುರುಕುತನ ಕಂಡುಬರುವುದು. ಕಾರ್ಖಾನೆ ಯ ಕೆಲಸದಲ್ಲಿರುವವರಿಗೆ ಪ್ರಗತಿಯನ್ನು ಕಾಣಬಹುದು. ಮನೆಯವರ ಒತ್ತಾಯದಿಂದಾಗಿ ವಾಹನ ಖರೀದಿ ಸಾಧ್ಯತೆ.

ಕಟಕ

ಗಮನವಿಟ್ಟು ಕೆಲಸ ಮಾಡಬೇಕಾಗುವುದು. ನಿಮ್ಮ ಎಲ್ಲಾ ವ್ಯವಹಾರಗಳ ಬಗ್ಗೆ ಹೆಚ್ಚಿನ ಜಾಗರೂಕತೆ ಅವಶ್ಯ. ಜಾಮೀನು ವಿಷಯಗಳಿಗೆ ಸಂಬAಧಿಸಿದAತೆ ನೆರೆಯವರಲ್ಲಿ ಮಾತುಕತೆ ನಡೆಯುವ ಸಾಧ್ಯತೆ. ವ್ಯವಹಾರ ಚತುರತೆಯಿಂದಾಗಿ ಆರ್ಥಿಕ ಲಾಭ. ಮಾನಸಿಕ ನೆಮ್ಮದಿ.

ಸಿಂಹ

ವಾಹನಗಳ ವ್ಯವಹಾರದಿಂದಾಗಿ ಅಧಿಕ ಲಾಭವನ್ನು ನಿರೀಕ್ಷಿಸಬಹುದು. ನ್ಯಾಯಾಲಯದ ವಿಚಾರಗಳಿಗಾಗಿ ನಡೆಸುವ ಅಲೆದಾಟ ಕಡಿಮೆಯಾಗುವುದು. ಹೊಸ ಹೊಸ ಕೆಲಸ ಕಾರ್ಯಗಳನ್ನ ಪ್ರಾರಂಭಿಸಲು ಅತ್ಯುತ್ತಮ ದಿನವಾಗಿರುವುದು.

ಕನ್ಯಾ

ದೊಡ್ಡ ವ್ಯವಹಾರವೊಂದರ ಬಗ್ಗೆ ಯೋಚನೆ ರೂಪಿಸುವ ಸಾಧ್ಯತೆ. ಉದ್ಯೋಗಿಗಳಿಗೆ ಕಛೇರಿಯಲ್ಲಿ ಹೊಸ ಸಹೋದ್ಯೋಗಿಯೊಬ್ಬರ ಪರಿಚಯವಾಗುವುದು. ಸಕುಟುಂಬ ದೇವಾಲಯ ದರ್ಶನ ಸಾಧ್ಯತೆ. ದೂರದ ಪ್ರಯಾಣ ಯೋಜನೆ.

ತುಲಾ

ನೀವು ತೆಗೆದುಕೊಂಡ ನಿರ್ಧಾರಗಳಿಗೆ ಯಾವುದೇ ಚ್ಯುತಿ ಬಾರದೆ ಸರಿಯಾದ ಮಾರ್ಗದಲ್ಲಿ ಸಾಗುವವು. ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ. ಮಕ್ಕಳಿಗೆ ಉದ್ಯೋಗ ದೊರೆಯುವ ವಾ ಬದಲಾವಣೆಯ ಸಾಧ್ಯತೆ ಕಂಡುಬರುವುದು.

ವೃಶ್ಚಿಕ

ನಿರುದ್ಯೋಗಿಗಳಿಗೆ ಒಳ್ಳೆಯ ಜನರ ಪರಿಚಯದಿಂದಾಗಿ ಉದ್ಯೋಗ ಲಭ್ಯವಾಗುವುದು. ಉದ್ಯೋಗ ಅರ್ಜಿಯ ಅನುಮೋದನೆ ಒಂದು ಪತ್ರವು ನಿಮ್ಮ ಕೈ ಸೇರುವ ಸಾಧ್ಯತೆ ಇರುವುದು. ಧಾನ್ಯ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು.

ಧನು

ಈ ದಿನದ ಕೆಲಸಕಾರ್ಯಗಳಲ್ಲಿ ಹಿಂದೆ ಇದ್ದ ಅಡಚಣೆಗಳು ಹಾಗೂ ಭಿನ್ನಾಭಿಪ್ರಾಯಗಳು ದೂರವಾಗುವವು. ಮಾನಸಿಕ ಸಮತೋಲದಿಂದಾಗಿ ನೆಮ್ಮದಿ ದೊರಕುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವ ಅವಕಾಶ ದೊರೆಯುವುದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ.

ಮಕರ

ಎಂದಿನ ಕೆಲಸಗಳನ್ನು ಸಲೀಸಾಗಿ ಮುಂದುವರಿಸಿಕೊAಡು ಹೋಗಲು ಬಯಸುವಿರಿ. ನೀವು ದೂರ ಮಡುತ್ತಿರುವ ವಿಷಯಗಳ ಬಗ್ಗೆ ಈಗ ಗಮನ ಹರಿಸಬೇಕಾದೀತು. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಅವಶ್ಯ.

ಕುಂಭ

ಸಮಸ್ಯೆಗಳನ್ನು ಯಥೋಚಿತವಾಗಿ ಬಗೆಹರಿಸಿಕೊಳ್ಳುವ ಅವಕಾಶಗಳು ಲಭಿಸಲಿದ್ದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಕಳೆದು ಹೋಗಬಹುದಾದ ಹಳೆಯ ಸಂಬAಧ – ವ್ಯವಹಾರಗಳನ್ನು ಕಳಚಿಕೊಳ್ಳದೇ ನವಿರಾಗಿ ಮುಂದುವರಿಸಿಕೊಳ್ಳುವುದು ಉತ್ತಮ.

ಮೀನ

ನಿರ್ಮಾಣದ ಕೆಲಸಗಳಿಗಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಬೇಕಾದೀತು. ಸಾಮಾಜಿಕ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಸಾಧ್ಯತೆ. ನಿರುದ್ಯೋಗಿಗಳಿಗೆ ಫೈನಾನ್ಸ್ ಮುಂತಾದ ಹಣಕಾಸು ಸಂಸ್ಥೆಗಳಲ್ಲಿ ಅವಕಾಶ ಒದಗಿಬರಲಿದೆ.

ಜನವರಿ 23, ಶನಿವಾರ ; 2021 : ಇಂದಿನ ರಾಶಿಭವಿಷ್ಯ

#  ಪಂಚಾಂಗ :ಶನಿವಾರ, 23.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ರಾ.01.44 / ಚಂದ್ರ ಅಸ್ತ ಮ.02.45
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ದಶಮಿ (ರಾ.08.57)ನಕ್ಷತ್ರ: ಕೃತ್ತಿಕಾ(ರಾ.09.33)
ಯೋಗ: ಶುಕ್ಲ (ರಾ.10.03)ಕರಣ: ತೈತಿಲ-ಗರಜೆ (ಬೆ.07.46-ರಾ.08.57)
ಮಳೆ ನಕ್ಷತ್ರ: ಶ್ರವಣ  (ಪ್ರ.ರಾ.03.59) ಮಾಸ: ಮಕರ, ತೇದಿ: 10

ಮೇಷ ರಾಶಿ
ಸಂಗಾತಿಯ ಮನಸ್ಸಿನಲ್ಲಿರುವ ಗೊಂದಲಗಳನ್ನು ಸರಿಪಡಿಸುವ ಕಾರ್ಯ ನಿಮ್ಮಿಂದ ಆಗಲಿದೆ. ಕೆಲಸದಲ್ಲಿ ನೀವು ಉನ್ನತವಾದುದನ್ನು ಸಾಧಿಸುವ ಹಂಬಲ ಇರಲಿದೆ. ಮೇಲಾಧಿಕಾರಿ ವರ್ಗದಿಂದ ಪ್ರಶಂಸೆಗಳು ಸಿಗುವುದು ನಿಶ್ಚಿತ. ಸ್ಥಳ ಬದಲಾವಣೆಯ ಚಿಂತನೆಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಮುಂಭಡ್ತಿ ಆಗುವ ಸಾಧ್ಯತೆಗಳು ಕಾಣಬಹುದು.

ವೃಷಭ ರಾಶಿ
ನಿಮ್ಮಲ್ಲಿನ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಳ್ಳಿ. ಪರರ ಮಾತುಗಳನ್ನು ಕೇಳಿ ಹಳ್ಳಕ್ಕೆ ಬೀಳುವ ಮನಸ್ಥಿತಿಯನ್ನು ತೆಗೆದಿಡಿ. ತಾಳ್ಮೆಯಿಂದ ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಳ್ಳಲು ಮುಂದಾಗಿ. ನೀವು ಹಮ್ಮಿಕೊಂಡಿರುವ ಕಾರ್ಯಗಳು ನಿಮ್ಮ ಜೀವನದ ಗತಿಯನ್ನು ಬದಲಿಸುತ್ತದೆ, ಅವುಗಳಿಂದ ಧನಸಂಪತ್ತು ಆಗುವ ಎಲ್ಲಾ ಲಕ್ಷಣಗಳು ಕಂಡು ಬರಲಿದೆ.

ಮಿಥುನ ರಾಶಿ
ಕುಟುಂಬಸ್ಥರು ನಿಮ್ಮ ಮಾತಿಗೆ ಮರುಮಾತನಾಡದೆ ನಿಮ್ಮ ಕೆಲಸಗಳಿಗೆ ಸಮ್ಮತಿಸುತ್ತಾರೆ. ಎಲ್ಲವೂ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಆದಷ್ಟು ತೆಗೆದಿಡಿ, ಎಲ್ಲರ ಅಭಿಪ್ರಾಯಗಳನ್ನು ಕೇಳಿ ಉತ್ತಮ ಜೀವನ ರೂಪಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ.

ಕರ್ಕಾಟಕ ರಾಶಿ
ಹಲವಾರು ಕೆಲಸಗಳನ್ನು ಮಾಡಲು ಹೋಗಿ ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಕಂಡು ಬರಲಿದೆ, ತಾಳ್ಮೆ ಎಂಬುದು ಅತ್ಯವಶ್ಯಕ ಎಂಬುದನ್ನ ಮರೆಯದಿರಿ. ಒಪ್ಪಿಕೊಂಡಿರುವ ಕಾರ್ಯವನ್ನು ಸಮಯದ ಒಳಗೆ ಮುಗಿಸಲು ಪ್ರಯತ್ನಿಸಿ. ಮಾತುಗಳನ್ನು ಅಸ್ಪಷ್ಟವಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಚ್ಚರವಹಿಸಿ. ಕೆಲವು ಯೋಜನೆಗಳು ನಿಮಗೆ ನಷ್ಟ ತಂದೊಡ್ಡಬಹುದು.

ಸಿಂಹ ರಾಶಿ
ಬೇಕು ಬೇಡಗಳನ್ನು ವಿಚಾರ ಮಾಡಿಕೊಂಡು ಕೆಲಸಗಳಲ್ಲಿ ಪಾಲ್ಗೊಳ್ಳಿ. ಆರ್ಥಿಕ ಸಮತೋಲನವನ್ನು ಮನದಲ್ಲಿಟ್ಟುಕೊಂಡು ಬಂಡವಾಳ ಹೂಡಿ. ಅನಿರೀಕ್ಷಿತವಾಗಿ ಕೆಲಸದಲ್ಲಿ ಸಮಸ್ಯೆ ಉದ್ಬವವಾಗಬಹುದು ಎಚ್ಚರವಿರಲಿ. ಯೋಜನೆಗಳಲ್ಲಿ ಪರರ ಹಸ್ತಕ್ಷೇಪವನ್ನು ತಡೆಗಟ್ಟಿ. ಕುಟುಂಬದಲ್ಲಿ ಪ್ರೀತಿಯ ವಾತಾವರಣ ತುಂಬಿರಲಿದೆ.

ಕನ್ಯಾ ರಾಶಿ
ಅತಿಯಾದ ಮಾತುಗಳಿಂದ ಸಮಯ ಹಾಳು, ಕೆಲಸದಲ್ಲಿ ನಿಷ್ಠೆ ಹಾಗೂ ಶ್ರದ್ಧೆ ಬೆಳೆಸಿಕೊಳ್ಳಿ. ಪಿತ್ರಾರ್ಜಿತ ಆಸ್ತಿ ಗಳಲ್ಲಿ ಸಮಸ್ಯೆ ಹೆಚ್ಚಾಗಬಹುದಾದ ಸಾಧ್ಯತೆ ಕಂಡುಬರುತ್ತದೆ, ನಿಮ್ಮ ನೆರೆಹೊರೆಯವರನ್ನು, ಬಂಧು ಬಳಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಒದಗಿಸಲು ಮುಂದಾಗಿರಿ. ಸಂಗಾತಿ ನಿಮ್ಮ ವಿಚಾರಗಳಲ್ಲಿ ಆಸ್ಪದ ವ್ಯಕ್ತಪಡಿಸುತ್ತಾರೆ ಅವರಿಗೆ ತಿಳಿ ಹೇಳುವುದು ನಿಮ್ಮ ಕರ್ತವ್ಯ. ಮಕ್ಕಳಿಂದ ಶೈಕ್ಷಣಿಕ ಸಾಧನೆ ಆಗಲಿದೆ. ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ.

ತುಲಾ ರಾಶಿ
ವಿಷಯದ ಆಯ್ಕೆಯನ್ನು ಸೂಕ್ತ ವಿಚಾರಗಳಿಂದ ಮಾಡುವುದು ಉತ್ತಮ. ಕುಟುಂಬದಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ನಿಮ್ಮ ಯೋಜನೆಗಳಲ್ಲಿ ಅಡೆತಡೆ ಇಂದು ಹೆಚ್ಚು ಆವರಿಸುತ್ತದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು

ವೃಶ್ಚಿಕ ರಾಶಿ
ನಿಮ್ಮ ವ್ಯವಹಾರಗಳಲ್ಲಿ ಹೆಚ್ಚಿನದಾಗಿ ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಬರಬಹುದು ಇವುಗಳಿಂದ ವಿಚಲಿತರಾಗದೆ ನಿಮ್ಮ ಪ್ರಯತ್ನವನ್ನು ಮುಂದುವರಿಸುವುದು ಒಳಿತು. ಸಹವಾಸದೋಷ ಒಳ್ಳೆಯದಾಗಿರಲಿ ಇದು ನಿಮಗೆ ಒಳಿತನ್ನೇ ತರಬಹುದು. ಅನಗತ್ಯವಾಗಿ ಇಬ್ಬರ ಜಗಳದಲ್ಲಿ ಮಧ್ಯಸ್ಥಿಕೆಯ ವಹಿಸಿಕೊಳ್ಳಬಹುದು ಸರಿಯಲ್ಲ, ಇದು ನಿಮ್ಮ ವರ್ಚಸ್ಸಿಗೆ ಕುಂದು ತರಬಹುದು.

ಧನಸ್ಸು ರಾಶಿ
ಆರ್ಥಿಕ ವ್ಯವಹಾರ ಮಧ್ಯಮ ಗತಿಯಲ್ಲಿ ನಡೆಯಲಿದೆ. ಬಂಧುಗಳಿಂದ ನಿಮಗೆ ಅಹಿತಕರವಾದ ಪ್ರಸ್ತಾಪಗಳು ಬರಬಹುದು. ಇಷ್ಟವಿಲ್ಲದ ಕಾರ್ಯವನ್ನು ಸಾರಾಸಗಟಾಗಿ ತಳ್ಳಿ ಹಾಕಿ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆಗಳು ಕಂಡುಬರಲಿವೆ.

ಮಕರ ರಾಶಿ
ಶತ್ರು ವರ್ಗದಿಂದ ಉಪಟಳ ಹೆಚ್ಚಾಗಲಿದೆ ಆದಷ್ಟು ಸೂಕ್ಷ್ಮರೀತಿಯಿಂದ ವರ್ತಿಸುವುದು ಒಳಿತು. ಯೋಜನೆಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ವ್ಯವಹಾರಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭ ತಂದು ಕೊಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ಪ್ರಶ್ನೆಗಳು ಉದ್ಭವಿಸಲಿದೆ ಉತ್ತರ ನೀಡುವುದು ಒಳಿತು. ಆತ್ಮೀಯ ಗೆಳೆಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ.

ಕುಂಭ ರಾಶಿ
ಕುಟುಂಬದಲ್ಲಿ ಶುಭಸುದ್ದಿ ಹಾಗೂ ಸಂತೋಷದ ವಾತಾವರಣ ಕೂಡಿರುತ್ತದೆ. ಹಿರಿಯರು ನಿಮಗೆ ಮುಂದಿನ ಭವಿಷ್ಯಕ್ಕೆ ಏಳಿಗೆಗಾಗಿ ಸಹಕಾರ ನೀಡುವರು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಾಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ.

ಮೀನಾ ರಾಶಿ
ಆಕಸ್ಮಿಕವಾಗಿ ಎದುರಾಗುವ ಕೆಲವು ಸಂಕಷ್ಟಗಳಿಂದ ಮನಸ್ಸು ವಿಚಲಿತವಾಗುತ್ತದೆ. ಕುಟುಂಬದ ಆರೋಗ್ಯದ ಬಗ್ಗೆ ಆದಷ್ಟು ನಿಗಾ ಇಡಿ. ಅನಗತ್ಯ ಖರ್ಚು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಮನೆ ದೇವರ ದರ್ಶನ ಭಾಗ್ಯ ನಿಮಗೆ ಸಿಗಲಿದೆ. ಯೋಜನೆಗಳನ್ನು ಪರಿಣಾತ್ಮಕವಾಗಿ ಬೆಳೆಸಲು ನಿಮ್ಮ ಬದ್ಧತೆ ಪ್ರಮುಖವಾಗಿದೆ. ಹಿರಿಯರ ಮತ್ತು ಸ್ನೇಹಿತರ ಸಹಾಯ ಪಡೆದು ಮುನ್ನುಗ್ಗಿ.

ಶಿವಮೊಗ್ಗ: ಜಿಲೆಟಿನ್ ಸ್ಪೋಟ ದುರಂತ ಗುತ್ತಿಗೆದಾರ ಸುಧಾಕರ್ ಜಿಲೆಟಿನ್ ಪೂರೈಕೆದಾರ ನರಸಿಂಹ ಬಂಧನ…!

ಶಿವಮೊಗ್ಗ: ಜಿಲೆಟಿನ್ ಸ್ಪೋಟ ದುರಂತ ಗುತ್ತಿಗೆದಾರ ಸುಧಾಕರ್ ಜಿಲೆಟಿನ್ ಪೂರೈಕೆದಾರ ನರಸಿಂಹ ಬಂಧನ…!

ಶಿವಮೊಗ್ಗ ಜಿಲ್ಲೆಯ ಅಬ್ಬಲಗೇರಿ ಹತ್ತಿರ ರೈಲ್ವೇ ಕ್ರಷರ್ ನಲ್ಲಿ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿ ಪೊಲೀಸರು ಇದೀಗ ಕಲ್ಲು ಗಣಿಗಾರಿಕೆಯ ಗುತ್ತಿಗೆದಾರ ಸುಧಾಕರ್, ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಎಂಬುವರನ್ನು ಪೋಲಿಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಅಬ್ಬಲಗೆರೆ–ಹುಣಸೋಡು ನಡುವೆ ಇರುವ ಜಲ್ಲಿ ಕ್ರಷರ್‌ ಬಳಿಯಲ್ಲಿ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಡೈನಾಮೈಟ್‌ ನಿನ್ನೆ ರಾತ್ರಿ ಸ್ಫೋಟಿಸಿ, ಇಲ್ಲಿವರೆಗೆ ಸುಮಾರು 8 ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು,

ಸ್ಫೋಟದ ತೀವ್ರತೆಗೆ ಮೃತ ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ ಎಂದು ತಿಳಿದು ಬಂದಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ತನಿಖೆಗೆ ಆದೇಶ ನೀಡಿದ್ದಾರೆ.

ಜನವರಿ 21, ಗುರುವಾರ; 2021: ಇಂದಿನ ರಾಶಿಭವಿಷ್ಯ

21-1-2021 ಗುರುವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 7 ಸಲುವ ಪೌಷ ಶುದ್ಧ ಅಷ್ಟಮಿ 22| ಗಳಿಗೆದಿನ ವಿಶೇಷ :ಉಜಿರೆ, ಕದ್ರಿ, ವಿಟ್ಲ ಕಾಂತಾವರ ರಥನಿತ್ಯ ನಕ್ಷತ್ರ :ಅಶ್ವಿ‌ನಿ 21|| ಗಳಿಗೆಮಹಾ ನಕ್ಷತ್ರ :ಉತ್ತರಾಷಾಢಾಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.24 ಗಂಟೆಸೂರ್ಯೋದಯ :7.00 ಗಂಟೆ

ಮೇಷ

ಕಟ್ಟಡ ಸಾಮಗ್ರಿಗಳನ್ನು ಖರೀದಿ ಮಾಡುವ ಸಾಧ್ಯತೆ. ಆಭರಣ ವ್ಯಾಪಾರದಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉದ್ಯೋಗರಂಗದಲ್ಲಿ ಅತ್ಯಂತ ಯಶಸ್ವಿ ದಿನವಾಗಿ ಪರಿಣಮಿಸಲಿದೆ.

ವೃಷಭ

ಅತಿಯಾದ ಮಾತುಗಳಿಂದ ದಿನದ ಮಟ್ಟಿಗೆ ಮೌನ ವಹಿಸುವುದೇ ಲೇಸು. ಆಸ್ತಿ ವಿಚಾರದಲ್ಲಿ ಅಭಿಪ್ರಾಯಗಳನ್ನು ನೀಡುವಾಗ ಅತ್ಯಂತ ಜಾಗರೂಕರಾಗಿರುವುದು ಉತ್ತಮ. ಆರ್ಥಿಕ ವಿಷಯದಲ್ಲಿ ಉತ್ತಮ ಅವಕಾಶ ಲಭಿಸಲಿದೆ.

ಮಿಥುನ

ನಿಶ್ಚಿತ ಗುರಿ ಸಾಧನೆಗಾಗಿ ಶ್ರಮ ವಹಿಸಬೇಕಾದೀತು. ಖಾದ್ಯತೈಲ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳದಿಂದಾಗಿ ವಿಶೇಷ ಲಾಭ. ಮಿಶ್ರ ಭಾವನೆಯ ದಿನವಾಗಲಿದೆ. ಪತ್ನಿಯಿಂದ ಸಂಪೂರ್ಣ ಸಹಕಾರ ದೊರಕಿ ನೆಮ್ಮದಿ.

ಕಟಕ

ವೃತ್ತಿಯಲ್ಲಿ ಹೆಚ್ಚಿನ ಪೈಪೋಟಿಯನ್ನು ಎದುರಿಸಬೇಕಾದೀತು. ಪ್ರಬಲ ಪ್ರತಿಸ್ಪರ್ಧೆಯ ನಡುವೆಯೂ ಪ್ರಯತ್ನದಿಂದಾಗಿ ಗೆಲುವು ನಿಮ್ಮದಾಗಲಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ.

ಸಿಂಹ

ರಾಜಕೀಯ ವ್ಯಕ್ತಿಗಳೊಂದಿಗೆ ಬಿರುಸಿನ ಒಡನಾಟದಲ್ಲಿ ಭಾಗಿಯಾಗಬೇಕಾದೀತು. ಆಪ್ತ ವ್ಯಕ್ತಿಗಳ ಕೆಲಸವೊಂದನ್ನು ನೆರವೇರಿಸಲು ಜವಾಬ್ದಾರಿ ವಹಿಸಬೇಕಾದೀತು. ಮನೆಯವರ ಆಸೆಗಳ ಬಗ್ಗೆ ನಿರಾಸಕ್ತಿ ತೋರಿಸಬೇಡಿ.

ಕನ್ಯಾ

ಪ್ರಮುಖ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಣ್ಣಪುಟ್ಟ ತೊಡಕುಗಳು ಎದುರಾಗಬಹುದು. ಸ್ವ ಪ್ರಯತ್ನದಿಂದ ತೊಡಕುಗಳು ನಿವಾರಣೆಯಾಗಿ ಕೆಲಸಗಳು ನೆರವೇರುವವು.

ತುಲಾ

ಇತರರಿಗೆ ನೆರವಾಗುವ ಮೂಲಕ ಅವ್ಯಕ್ತ ಆನಂದವನ್ನು ಅನುಭವಿಸುವಿರಿ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಆದಾಯ. ಆರ್ಥಿಕ ಸಂಕಷ್ಟಗಳು ದೂರವಾಗಿ ನೆಮ್ಮದಿ. ವಿದ್ಯಾರ್ಥಿಗಳಿಗೆ ಸಾಧನೆಯ ದಿನ.

ವೃಶ್ಚಿಕ

ಕಚೇರಿಯ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಯಶಸ್ವಿಯಾಗಿ ಮಾಡಿ ಪೂರೈಸುವ ಸುಯೋಗ. ಸಾರಿಗೆ ಉದ್ಯಮವನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಆದಾಯ. ವಿಮಾ ಏಜೆಂಟರಿಂದ ಉಪಯುಕ್ತ ಸಲಹೆ ದೊರೆಯಲಿದೆ.

ಧನು

ವಿದೇಶದಿಂದ ಪಡೆದ ಮಾಹಿತಿ ಅನುಭವಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ. ಪ್ರಪಂಚದ ಕಡೆಗಿನ ನಿಮ್ಮ ದೃಷ್ಟಿ ಬದಲಾಗಲಿದೆ. ಹೊಸ ಯೋಜನೆಗಳನ್ನು ರೂಪಿಸಲು ಅನುಕೂಲಕರ ವಾತಾವರಣ.

ಮಕರ

ವಾಣಿಜ್ಯ ವ್ಯವಹಾರಗಳು ಕೈಗೂಡಿ ಹೆಚ್ಚಿನ ಆದಾಯ. ಶುಭಸಮಾರಂಭಗಳಿಗಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ದಿನವಾಗಲಿದೆ.

ಕುಂಭ

ಹೆಮ್ಮೆ ಪಡುವಂತಹ ಕೆಲಸಗಳನ್ನು ಯಶಸ್ವಿಯಾಗಿ ನೆರವೇರಿಸುವಿರಿ. ವಿದ್ಯಾರ್ಥಿಗಳಿಗೆ ಅಮೋಘ ಸಾಧನೆಯ ಸಂಭ್ರಮ. ಗೃಹ ಸೌಖ್ಯ. ಸಂಗಾತಿಯೊಂದಿಗೆ ಕುಶಲದಿಂದ ಮಾತನಾಡಿ ಮನ ಗೆಲ್ಲುವ ಅವಕಾಶ.

ಮೀನ

ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ. ಆಭರಣ ಖರೀದಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆ.

ಜನವರಿ 20, ಬುಧವಾರ ; 2021 : ಇಂದಿನ. ರಾಶಿಭವಿಷ್ಯ

20-1-2021 ಬುಧವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 6 ಸಲುವ ಪೌಷ ಶುದ್ಧ ಸಪ್ತಮ 15|| ಗಳಿಗೆದಿನ ವಿಶೇಷ :ಗುರು ಅಸ್ತನಿತ್ಯ ನಕ್ಷತ್ರ :ರೇವತಿ 14 ಗಳಿಗೆಮಹಾ ನಕ್ಷತ್ರ :ಉತ್ತರಾಷಾಢಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.24 ಗಂಟೆಸೂರ್ಯೋದಯ :7.00 ಗಂಟೆ

ಮೇಷ

ಬರವಣಿಗೆ ಮತ್ತು ಮುದ್ರಣ ಕ್ಷೇತ್ರಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶ ಸಿಗಲಿದೆ. ರಂಗಭೂಮಿ ಹಾಗೂ ಚಲನಚಿತ್ರರಂಗದ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಗೌರವಾದರಗಳು ದೊರಕಲಿದೆ.

ವೃಷಭ

ಕನಸುಗಳನ್ನು ನನಸು ಮಾಡಲು ಶ್ರಮ ವಹಿಸಬೇಕಾಗುವುದು. ಬೇಳೆಕಾಳು ಮುಂತಾದ ದ್ವಿದಳ ಧಾನ್ಯಗಳ ಸಗಟು ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ. ಮಕ್ಕಳ ಉದ್ಯೋಗಕ್ಕಾಗಿ ಶ್ರಮ ವಹಿಸಬೇಕಾದೀತು.

ಮಿಥುನ

ವೈಯಕ್ತಿಕ ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸು. ನೌಕರಿಯಲ್ಲಿರುವವರಿಗೆ ಪದೋನ್ನತಿ ಅಥವಾ ಉದ್ಯೋಗ ಬದಲಾವಣೆಯ ಸಾಧ್ಯತೆ. ರಾಜಕೀಯ ವ್ಯಕ್ತಿಗಳೊಂದಿಗೆ ವಿಶೇಷ ಸಮಾಲೋಚನೆ ಮಾಡುವಿರಿ.

ಕಟಕ

ಮಹಿಳಾ ರಾಜಕಾರಣಿಗಳಿಗೆ ಪಕ್ಷ ರಾಜಕಾರಣದಲ್ಲಿ ಎಲ್ಲಿಲ್ಲದ ಘನತೆ ಗೌರವಗಳು ಪ್ರಾಪ್ತವಾಗುವವು. ಮನೆಯವರ ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.

ಸಿಂಹ

ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಯಶಸ್ಸು. ಕಾರ್ಮಿಕವರ್ಗದವರಿಗೆ ಕೆಲಸದ ಒತ್ತಡದಿಂದಾಗಿ ದೇಹಾಯಾಸ ಉಂಟಾಗಲಿದೆ. ಸರ್ಕಾರಿ ಕೆಲಸಗಳಿಗಾಗಿ ಅಲೆದಾಡುವ ಸಾಧ್ಯತೆ ಕಂಡುಬರುವುದು.

ಕನ್ಯಾ

ಕಚೇರಿಯಲ್ಲಿ ಸಾಧನೆಯ ಕೆಲಸಗಳನ್ನು ಮಾಡುವಿರಿ. ಕೆಲಸ ಕಾರ್ಯಗಳನ್ನು ಚುರುಕು ಮಾಡಬೇಕಾಗುವುದು. ಕುಟುಂಬದ ವಿಷಯಗಳ ಬಗ್ಗೆ ಹಿರಿಯರೊಂದಿಗೆ ಮಾತುಕತೆ ಸಾಧ್ಯತೆ.

ತುಲಾ

ಅತಿಯಾದ ಉತ್ಸಾಹದಿಂದ ನಿಮ್ಮ ವೃತ್ತಿಜೀವನದಲ್ಲಿ ಹೊಸ ತಿರುವು ಪಡೆಯುವಿರಿ. ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವ. ದೇವತಾ ದರ್ಶನ ಭಾಗ್ಯವಿದೆ.

ವೃಶ್ಚಿಕ

ನಿಮ್ಮ ವೃತ್ತಿಕೌಶಲ ಹಾಗೂ ಜಾಣ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಹಣ ಹೂಡಿಕೆಯಲ್ಲಿ ತೊಡಗಲು ಅತ್ಯಂತ ಪ್ರಶಸ್ತ ಕಾಲ. ವ್ಯಾಪಾರ ವಹಿವಾಟಿನಿಂದಾಗಿ ಉತ್ತಮ ಲಾಭ ದೊರಕುವ ಸಾಧ್ಯತೆ.

ಧನು

ಈ ದಿನ ಬಹಳ ಶಾಂತತೆಯಿಂದ ಕೂಡಿದ ನೆಮ್ಮದಿಯ ದಿನವಾಗಿರುವುದು. ಹೊಸ ಯೋಜನೆಯನ್ನು ರೂಪಿಸಲು ಸಕಾಲ. ಆಸಕ್ತಿ ವಿಷಯಗಳಿಂದಾಗಿ ಗೌರವಾನ್ವಿತ ಹುದ್ದೆ ಲಭಿಸುವ ಸಾಧ್ಯತೆ ಕಂಡುಬರುವುದು.

ಮಕರ

ನಿಜವಾದ ಭಾವನೆಗಳಿಂದ ಪ್ರಾಮಾಣಿಕವಾಗಿರಲು ಸಾಧ್ಯ. ಅನಿರೀಕ್ಷಿತ ಬೆಳವಣಿಗೆಯಿಂದ ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ. ನ್ಯಾಯಾಲಯದಲ್ಲಿನ ವ್ಯವಹಾರಗಳಲ್ಲಿ ನಿಮ್ಮ ಬಗ್ಗೆ ಸಕಾರಾತ್ಮಕ ನಿರ್ಣಯ ಹೊರಬೀಳುವುದು.

ಕುಂಭ

ಎಲ್ಲಾ ತರಹದಲ್ಲೂ ಶುಭದಿನ. ತರಕಾರಿ ಮುಂತಾದ ಹಸಿರು ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ಲಾಭ ದೊರಕಲಿದೆ. ಮಕ್ಕಳೊಂದಿಗೆ ಸಂತಸದ ದಿನ. ಬಂಧುಮಿತ್ರರ ಆಗಮನ ಸಾಧ್ಯತೆ.

ಮೀನ

ಹಳೆಯ ಸಮಸ್ಯೆಗಳನ್ನು ಕೆದಕುವ ಬದಲು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವಿರಿ. ವೃತ್ತಿಜೀವನದ ಬಗ್ಗೆ ಅಪಾರವಾದ ವಿಶ್ವಾಸವಿದೆ. ಮೇಲಧಿಕಾರಿಗಳಿಂದ ಕಿರಿಕಿರಿಯ ಸಾಧ್ಯತೆ ಇದ್ದು, ದಿನದಾಂತ್ಯಕ್ಕೆ ತಿಳಿಗೊಳ್ಳುವುದು.

ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರಿಂದ ಶಂಕುಸ್ಥಾಪನೆ

ಹೆಜಮಾಡಿ ಕೋಡಿಯಲ್ಲಿ ಇಂದು ದಿನಾಂಕ 19-01-2021 ರಂದು ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಇದರ ಶಂಕುಸ್ಥಾಪನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ರವರು ನೆರವೇರಿಸಿದರು. .

ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮೀನುಗಾರಿಕೆ ಇಲಾಖೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು , ಮೂಡುಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾ ಶೆಟ್ಟಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಮಂಗಳೂರು ಇದರ ಅಧ್ಯಕ್ಷರಾದ ನಿತಿನ್ ಕುಮಾರ್, ಸರ್ಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿಗಳಾದ ಡಾ. ಜಿ ಕಲ್ಪನಾ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸಂಸ್ಥಾಪಕರಾದ ಡಾ. ಜಿ. ಶಂಕರ್ ಹಾಗೂ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನವೀನ್ ಭಟ್ ವೈ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಜನವರಿ 19, ಮಂಗಳವಾರ ; 2021 : ಇಂದಿನ ರಾಶಿಭವಿಷ್ಯ

19-1-2021 ಮಂಗಳವಾರ ಶಾರ್ವರಿ ಸಂ|ರದ ಮಕರ ಮಾಸ‌ ದಿನ 5 ಸಲುವ ಪೌಷ ಶುದ್ಧ ಷಷ್ಠಿ 10 ಗಳಿಗೆ. ದಿನ ವಿಶೇಷ :ಕಿರು ಷಷ್ಠಿ ಬೆಳ್ಳಿಪ್ಪಾಡಿ ಉತ್ಸವ ನಿತ್ಯ ನಕ್ಷತ್ರ :ಉತ್ತರಾಭಾದ್ರಾ 7||ಗಳಿಗೆ. ಮಹಾ ನಕ್ಷತ್ರ :ಉತ್ತರಾಷಾಢಾ. ಋತು :ಹೇಮಂತ ರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.23 ಗಂಟೆ ಸೂರ್ಯೋದಯ :7.00 ಗಂಟೆ

ಮೇಷ

ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯ ವೇಳೆಗೆ ಮಾನಸಿಕ ಕಿರಿ ಕಿರಿ ಎದುರಾದೀತು.

ವೃಷಭ

ಆದಾಯದ ಹೊಸ ಹೊಸ ಮೂಲಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದ್ದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಎಲ್ಲ ಆಸೆ ಆಕಾಂಕ್ಷೆಗಳು ನೆರವೇರಲಿವೆ. ಬಹುದಿನಗಳಿಂದ ಕಂಡ ಕನಸುಗಳು ನನಸಾಗುವ ಸಾಧ್ಯತೆ ಕಂಡುಬರುತ್ತಿದೆ.

ಮಿಥುನ

ಉದ್ಯೋಗದಲ್ಲಿ ಚಾಣಾಕ್ಷತೆಯನ್ನು ಮೆರೆದು ಯಶಸ್ಸನ್ನು ನಿಮ್ಮದಾಗಿಸಿಕೊಳ್ಳುವಿರಿ. ಮುಂದಾಲೋಚನೆಯಿAದಾಗಿ ಕೈಗೊಂಡ ಕಾರ್ಯಗಳು ಸುಗಮವಾಗಲಿವೆ. ಸಮಸ್ಯೆಗಳಿಂದ ದೂರವಿರುವ ಪ್ರಯತ್ನದಲ್ಲಿ ಯಶಸ್ಸು. ಸಂತಸದ ದಿನ

ಕಟಕ

ಮಾನಸಿಕ ಕಿರಿಕಿರಿಗಳು ದೂರವಾಗಿ ನೆಮ್ಮದಿ ಯನ್ನು ಕಾಣಲಿದ್ದೀರಿ. ಆರ್ಥಿಕವಾದ ಚೇತರಿಕೆ ನಿಮ್ಮದಾಗಲಿದೆ. ಕನ್ಯಾಪಿತೃಗಳಿಗೆ ಸಂತಸದ ಸುದ್ದಿ ಕೇಳುವಿರಿ. ಆರ್ಥಿಕ ಸುಧಾರಣೆಯ ಹೊಸ ಮಾರ್ಗವನ್ನು ಕಂಡುಕೊಳ್ಳುವಿರಿ.

ಸಿಂಹ

ಕೋರ್ಟು ಕಛೇರಿಗಳಲ್ಲಿನ ಕಲಹಗಳು ಇತ್ಯಾರ್ಥವಾಗುವ ಸಾಧ್ಯತೆ. ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಿ. ದಿನವಿಡೀ ಲವಲವಿಕೆಯಿಂದ ಕಾರ್ಯ ನಿರ್ವಹಿಸಲಿದ್ದೀರಿ. ಸಂಗಾತಿಯೊAದಿಗೆ ಸಂತಸದ ಕ್ಷಣ.

ಕನ್ಯಾ

ಮುಂದಿನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಪೂರ್ವ ಸಿದ್ಧತೆಯನ್ನು ನಡೆಸುವಿರಿ. ವಯುಕ್ತಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಸರ್ಕಾರಿ ಸೇವೆಯಲ್ಲಿರುವವರಿಗೆ ಸ್ವಲ್ಪಮಟ್ಟಿನ ಅಡಚಣೆ ಕಂಡುಬರಲಿದೆ.

ತುಲಾ

ಹಿರಿಯ ಅಧಿಕಾರಿಗಳೊಂದಿಗೆ ದಿನವಿಡೀ ಕಾಲವ್ಯಾಪನ ಮಾಡುವ ಸಾಧ್ಯತೆ. ಉತ್ತಮ ಸೇವೆಯಿಂದಾಗಿ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನೂ ಪಡೆಯಲಿದ್ದೀರಿ. ತಡೆಯುಂಟಾಗಿದ್ದ ಕೆಲಸಗಳು ನೆರವೇರಿ ಸಂತಸ ನೀಡಲಿದೆ.

ವೃಶ್ಚಿಕ

ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಕಾರ್ಯಬಾಹುಳ್ಯ ಹೆಚ್ಚಲಿದೆ. ವಿವೇಚನಾತ್ಮಕ ನಡೆಯಿಂದಾಗಿ ಎದುರಾಗಲಿದ್ದ ಗಂಡಾAತರ ದೂರವಾಗಲಿದೆ. ವಾಹನ ಚಾಲನೆಯಲ್ಲಿ ಸ್ವಲ್ಪಮಟ್ಟಿನ ಎಚ್ಚರಿಕೆ ಅಗತ್ಯ.

ಧನು

ಕೆಲಸಕಾರ್ಯಗಳಲ್ಲಿ ಅತಿಯಾದ ಆತುರತೆ ಸಲ್ಲದು. ಕಾರ್ಯದಲ್ಲಿನ ಯಶಸ್ಸಿನಿಂದಾಗಿ ಅತ್ಯಂತ ಸಂತೋಷವನ್ನು ಅನುಭವಿಸುವಿರಿ. ಶಿಕ್ಷಕ ವೃತ್ತಿಯಲ್ಲಿರುವವರು ಸಣ್ಣಪುಟ್ಟ ಅಪವಾದ ಎದುರಿಸುವ ಸಾಧ್ಯತೆ. ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ.

ಮಕರ

ಉದ್ಯೋಗ, ವ್ಯವಹಾರಗಳ ಅವಕಾಶಗಳು ಹೆಚ್ಚಾಗಿ ದೊರೆತು ಯಶಸ್ಸನ್ನುಕಾಣಲಿದ್ದೀರಿ. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಆಯಾಸವನ್ನು ಅನುಭವಿಸುವಿರಿ. ಹಿತೈಷಿಗಳ ದರ್ಶನದಿಂದ ಸಾಂತ್ವನವನ್ನು ಹೊಂದುವಿರಿ.

ಕುಂಭ

ನಿಮ್ಮ ಕಾರ್ಯದಲ್ಲಿ ಅತ್ಯಂತ ಜವಾಬ್ದಾರಿ ಮತ್ತು ದಕ್ಷತೆಯನ್ನು ಮೆರೆಯುವಿರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣದಿಂದ ಉತ್ಸಾಹ ಇಮ್ಮಡಿಗೊಳ್ಳಲಿದೆ.

ಮೀನ

ಧಾರ್ಮಿಕ/ ಸಾಮಾಜಿಕ ಕೆಲಸಗಳಲ್ಲಿ ಒಲವನ್ನು ತೋರಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಹೊಸ ಹೊಸ ವಿಷಯಗಳನ್ನು ಕಲೆಹಾಕಿ ಜ್ಞಾನ ಸಂಪಾದನೆ ನಿಮ್ಮದಾಗಲಿದೆ. ಜೀವನದ ಉತ್ಸಾಹವನ್ನು ಹೆಚ್ಚಿಸಿಕೊಳ್ಳುವಿರಿ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ

ಇಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರನ್ನು ಸ್ವಾಗತಿಸಲಾಯಿತು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬೂಬಕರ್ ರವರ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರಾದ ರುಡಾಲ್ಫ್ ಡಿಸೋಜರವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ರಾಜ್ಯ ಅ.ಸಂ.ಮೋ. ಕಾರ್ಯದರ್ಶಿಯವರಾದ ಸಲೀಂ ಅಂಬಾಗಿಲುರವರು ಅಲ್ಪಸಂಖ್ಯಾತರ ಯೋಜನೆಗಳ ಬಗ್ಗೆ ಮಾತನಾಡಿದರು.
ಜಿಲ್ಲಾ ಮಹಿಳಾ ಮೋರ್ಚಾ ದ ಅಧ್ಯಕ್ಷೆಯವರಾದ ವೀಣಾ ಶೆಟ್ಟಿ ಯವರು ಉಡುಪಿ ಜಿಲ್ಲೆ ಕರಾವಳಿ ಭಾಗದಲ್ಲಿ ಈ ಬಾರಿಯ ಅಲ್ಪಸಂಖ್ಯಾತ ಮೋರ್ಚಾ ತಂಡ ಬಿಜೆಪಿ ಪಕ್ಷದಲ್ಲಿ ವ್ಯವಸ್ಥಿತವಾಗಿ ಚೆನ್ನಾಗಿ ಕೆಲಸ ಮಾಡುವ ರೀತಿಯನ್ನು ವಿವರಿಸಿದರು.

ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಭಾರಿಯವರಾದ ನಯನಾ ಗಣೇಶ್ ಸಭೆಯಲ್ಲಿ ಹಾಜರಿದ್ದರು.

ಜಿಲ್ಲಾ ಅ.ಸಂ. ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿ’ಸೋಜರವರು ಅಲ್ಪಸಂಖ್ಯಾತರಿಗಿರುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಪ್ರತೀ ಮಂಡಲಗಳಲ್ಲಿ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಅಧ್ಯಕ್ಷರಾದ ದಾವುದ್ ಅಬೂಬಕರ್ ನೇತೃತ್ವದಲ್ಲಿ ಮತ್ತು ಜಿಲ್ಲಾಡಳಿತ, ಅಲ್ಪಸಂಖ್ಯಾತರ ಕಲ್ಯಾಣಇಲಾಖೆಯ ಅಧಿಕಾರಿಗಳನ್ನು ಸೇರಿಸಿ ಜಂಟಿ ಸಭೆ ನಡೆಸಿ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ಪ್ರಧಾನ ಕಾರ್ಯದರ್ಶಿ ಆಸೀಪ್ ಶೇಕ್ ಕಟಪಾಡಿಯವರು ವೇದಿಕೆಯ ಲ್ಲಿ ಉಪಸ್ಥಿತರಿದ್ದವರಿಗೆ ಬಿಜೆಪಿ ಶಾಲು ಹೊದಿಸಿ ಸನ್ಮಾನಿಸಿದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಲ್ಪಸಂಖ್ಯಾತ ಪ್ರತಿನಿಧಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಮಂಡಲಗಳ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಗಳು, ಕಾರ್ಯಕಾರಿಣಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವಿ ಅಮೀನ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯವರಾದ ಮಂಜುನಾಥ್ ಮಣಿಪಾಲ, ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

ಜಿಲ್ಲಾ ಅಲ್ಪಸಂಖ್ಯಾತ ಕಚೇರಿ ಕಾರ್ಯದರ್ಶಿ ಮೈಕೆಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರ

ರಘುಪತಿ ಭಟ್ ಮನವಿ ಮೇರೆಗೆ ಕರಂಬಳ್ಳಿಯಲ್ಲಿ ಡಾll ವಿ. ಎಸ್. ಆಚಾರ್ಯ ಸ್ಮರಣಾರ್ಥ ಸಭಾಭವನ – ಅನ್ನಛತ್ರ ನಿರ್ಮಿಸಲು ರೂ. 4.00 ಕೋಟಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ

ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಇಂದು ದಿನಾಂಕ 18-01-2021ರಂದು ನಡೆದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಾ ಶಾಸಕ ಕೆ. ರಘುಪತಿ ಭಟ್ ಅವರು ಮನವಿ ಮಾಡಿರುವಂತೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಡಾll ವಿ. ಎಸ್. ಆಚಾರ್ಯ ಸ್ಮರಣಾರ್ಥ ಸಭಾಭವನ ಹಾಗೂ ಅನ್ನಛತ್ರ ನಿರ್ಮಾಣಕ್ಕೆ ಸರ್ಕಾರದಿಂದ ರೂ. 4.00 ಕೋಟಿ ನೀಡುವುದಾಗಿ ಘೋಷಣೆ ಮಾಡಿದರು.

ಶ್ರೀ ವೆಂಕಟರಮಣ ದೇವಸ್ಥಾನ ಕರಂಬಳ್ಳಿ ಇಲ್ಲಿನ ಆಡಳಿತ ಮೊಕ್ತೇಸರರಾದ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಮಾತನಾಡಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಇದರ ವತಿಯಿಂದ ಲಕ್ಷಾಂತರ ಮಂದಿಗೆ ರಾತ್ರಿಯ ಊಟ ನೀಡಲಾಗಿತ್ತು. ಅಲ್ಲದೆ ದೇವಳದ ವಠಾರದಲ್ಲಿ ಈ ನಾಡಿನ ಧಾರ್ಮಿಕ ಪರಂಪರೆಯನ್ನು, ಸಾಂಸ್ಕೃತಿಕ ಹಿನ್ನಲೆಯನ್ನು ಉಳಿಸಿ ಬೆಳೆಸುವಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಈ ಭಾಗದಲ್ಲಿ ನಿರಂತರ ಅನ್ನದಾನ ಸೇವೆ ನೀಡುವುದು ಹಾಗೂ ಇತರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಾll ವಿ. ಎಸ್. ಆಚಾರ್ಯ ಅವರ ಸ್ಮರಣಾರ್ಥವಾಗಿ ರೂ. 4.00 ಕೋಟಿ ವೆಚ್ಚದಲ್ಲಿ ಸಭಾಭವನ ಹಾಗೂ ಅನ್ನಛತ್ರ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರಕಾರದಿಂದ ನೆರವು ನೀಡುವಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಕಾಗೇರಿ ವಿಶ್ವೇಶ್ವರ ಹೆಗಡೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮೀನುಗಾರಿಕೆ ಇಲಾಖೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ದೇವಳದ ತಂತ್ರಿಗಳಾದ ಪಾಡಿಗಾರು ಶ್ರೀ ವಾಸುದೇವ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಮತ್ತು ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ಕರಂಬಳ್ಳಿ ಗೋಪಾಲ ಶೆಟ್ಟಿ, ಶೇಖರ ಜತ್ತನ್, ಕೆ ಲಕ್ಷ್ಮಣ ಸೇರಿಗಾರ್, ಸುಂದರ ಅಮೀನ್, ಲಕ್ಷ್ಮೀನಾರಾಯಣ ಬಿ ಆಚಾರ್ಯ, ಶೈಲಶ್ರೀ ದಿವಾಕರ ಶೆಟ್ಟಿ, ಕೆ. ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.

ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ

ಕರ್ನಾಟಕ ಪುರಸಭೆ ಕಾಯ್ದೆ – 1964ರ ಪ್ರಕರಣ11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಉಡುಪಿ ನಗರಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದೆ.

ಶ್ರೀ ವಿಜಯ ಕುಂದರ್, ವಡಬಾಂಡೇಶ್ವರ ಮಲ್ಪೆ, ಶ್ರೀ ದೇವದಾಸ್ ವಿ ಶೆಟ್ಟಿಗಾರ್, ಕಿನ್ನಿಮುಲ್ಕಿ, ಶ್ರೀ ದಿನೇಶ್ ಪೈ, ಸುಬ್ರಹ್ಮಣ್ಯನಗರ ಪುತ್ತೂರು, ಶ್ರೀಮತಿ ಸುಬೇದಾ ಪುತ್ತೂರು, ಶ್ರೀಮತಿ ಅರುಣಾ ಎಸ್. ಪೂಜಾರಿ ಶಿವಳ್ಳಿ ಇವರನ್ನು ಉಡುಪಿ ನಗರಸಭೆಗೆ ಸರ್ಕಾರವು ನಾಮನಿರ್ದೇಶನ ಮಾಡಿರುತ್ತದೆ ನಗರ ಸಭೆಗೆ ಸದಸ್ಯರ ನಾಮನಿರ್ದೇಶನ ಮಾಡಿರುವ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಶಾಸಕ ರಘುಪತಿ ಭಟ್ ಕತಜ್ಞತೆ ಸಲ್ಲಿಸಿರುತ್ತಾರೆ.

Design a site like this with WordPress.com
Get started